ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಟಿಯರು ಬಂದು ಹೋಗಿದ್ದಾರೆ ಆದರೆ ಕೆಲವೊಂದು ನಟಿಯರು ಮಾತ್ರ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೆಲವರು ಒಂದೆರಡು ಸಿನಿಮಾದಲ್ಲಿ ನಟಿಸಿ ಕಣ್ಮರೆಯಾದರೆ ಇನ್ನು ಕೆಲವರು ನಟಿಸಿದ್ದು ಕೆಲವೇ ಕೆಲವು ಸಿನಿಮಾಗಳಾದರೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದರೆ ಅಂತಹ ಸಾಲಿನಲ್ಲಿ ಖ್ಯಾತ ನಟಿ ರಮ್ಯಾ ಅವರು ಕೂಡ ಸೇರಿಕೊಂಡಿದ್ದಾರೆ ಅಂದರೆ ತಪ್ಪಾಗಲಾರದು. ಹೌದು ನಟಿ ರಮ್ಯಾ ಅವರು 2003ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ಅವರ ಅಭಿ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಪದಾರ್ಪಣೆ ಮಾಡಿದರು. ತದನಂತರ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದರು.
ಅಪ್ಪು, ದರ್ಶನ್, ಸುನೀಲ್, ಧ್ಯಾನ್, ಗಣೇಶ್, ಸುದೀಪ್, ಪ್ರೇಮ್, ಲೂಸ್ ಮಾದ ಯೋಗಿ, ಹೀಗೆ ಕನ್ನಡದ ದಿಗ್ಗಜ ನಾಯಕ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ ಸಾಲು ಸಾಲು ಸಿನಿಮಾದಲ್ಲಿ ನಟಿಸಿದ ರಮ್ಯ ಅವರು ಅದ್ಯಾಕೋ 2016ರಲ್ಲಿ ತೆರೆಕಂಡ ನಾಗರಹಾವು ಸಿನಿಮಾದ ನಂತರ ಎಲ್ಲಿಯೂ ಕೂಡ ಕಾಣಿಸಿಕೊಳ್ಳಲಿಲ್ಲ. ಚಿತ್ರರಂಗದಲ್ಲಿ ಸಂಪೂರ್ಣ ಆಸಕ್ತಿಯನ್ನು ಕಳೆದುಕೊಂಡರು ರಾಜಕೀಯ ದತ್ತ ಒಲವನ್ನು ತೋರಿದರು. ಆದರೆ ಸದ್ಯಕ್ಕೆ ರಾಜಕೀಯದಿಂದಲೂ ದೂರ ಉಳಿದು ಸಿನಿಮಾ ರಾಜಕೀಯ ಎರಡು ಬೇರೆ ಅಂತ ಒಂಟಿ ಜೀವನ ಸಾಗಿಸುತ್ತಿರುವುದನ್ನು ನಾವು ನೋಡಬಹುದು. ಈ ನಟಿ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಸಿ ಎಂಟು ವರ್ಷವಾದರೂ ಕೂಡ ಇವರಿಗೆ ಇರುವಂತಹ ಫ್ಯಾನ್ಸ್ ಫಾಲೋವರ್ಸ್ ಇನ್ನು ಕೂಡ ಕಡಿಮೆಯಾಗಿಲ್ಲ. ಹೌದು ಕಳೆದ ವರ್ಷವಷ್ಟೇ ರಮ್ಯಾ ಅವರ ಸೋಶಿಯಲ್ ಮೀಡಿಯಾ ಖಾತೆಗಳಿಗೆ ಅಭಿಮಾನಿಗಳು ಸಂದೇಶ ಕಳಿಸಿ ಮತ್ತೆ ಯಾವಾಗ ಸಿನಿಮಾ ರಂಗಕ್ಕೆ ಬರುತ್ತೀರಾ ಎಂದು ಕೇಳಿದರು. ಅದಕ್ಕೆ ರಮ್ಯಾ ಅವರು ಆದಷ್ಟು ಬೇಗ ಒಂದೊಳ್ಳೆ ಸಿನಿಮಾ ಮೂಲಕ ಮತ್ತೆ ನಾನು ಇಂಡಸ್ಟ್ರಿಗೆ ಬರುತ್ತೇನೆ ಎಂದು ಆಶ್ವಾಸನೆ ನೀಡಿದರು.
ಇದು ಒಂದು ಕಡೆಯಾದರೆ ಮತ್ತೊಂದು ಕಡೆ ರಮ್ಯಾ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿ ಹೊರ ಬಂದಿದೆ ಹೌದು ಅದೇನೆಂದರೆ ಒರ್ಮ್ಯಾಕ್ಸ್ ಮೀಡಿಯಾ ಸಂಸ್ಥೆಯೊಂದು ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಟಾಪ್ 5 ನಟಿಯರ ಹೆಸರನ್ನು ಆಯ್ಕೆ ಮಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ವೋಟಿಂಗ್ ಅನ್ನು ಮಾಡಲಾಗಿದ್ದು ಈ ವೋಟಿಂಗ್ ನಲ್ಲಿ ನಟಿ ರಮ್ಯಾ ಅವರು 4ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ರಶ್ಮಿಕ ಮಂದಣ್ಣ ಎರಡನೇ ಸ್ಥಾನದಲ್ಲಿ ರಚಿತಾ ರಾಮ್, ಮೂರನೇ ಸ್ಥಾನದಲ್ಲಿ ರಾಧಿಕಾ ಪಂಡಿತ್ 4ನೇ ಸ್ಥಾನದಲ್ಲಿ ರಮ್ಯಾ ಐದನೇ ಸ್ಥಾನದಲ್ಲಿ ಆಶಿಕಾ ರಂಗನಾಥ್ ಅವರು ಗುರುತಿಸಿಕೊಂಡಿದ್ದಾರೆ. ಈ ಸಂಸದ ವಿಚಾರವನ್ನು ಕೇಳಿದಂತಹ ರಮ್ಯ ಅವರು ತುಂಬಾನೇ ಎಕ್ಸೆಟ್ ಆಗಿದ್ದಾರೆ ಅಷ್ಟೇ ಅಲ್ಲದೆ ನಾನು ಸಿನಿಮಾದಲ್ಲಿ ನಟಿಸಿ ಎಂಟು ವರ್ಷವಾದರೂ ಕೂಡ ಇನ್ನು ನನ್ನನ್ನು ಅದೇ ಪ್ರೀತಿ ವಿಶ್ವಾಸದಿಂದ ಕಾಣುತ್ತಿರುವ ನನ್ನ ಅಭಿಮಾನಿಗಳಿಗೆ ನಾನು ಚಿರಋಣಿಯಾಗಿರುತ್ತೇನೆ.
ಐದು ಖ್ಯಾತ ನಾಯಕಿಯರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಸಿಕ್ಕಿರುವುದು ನನಗೆ ತುಂಬಾನೇ ಸಂತೋಷದಾಯಕವಾಗಿದೆ ಎಂದು ರಮ್ಯಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಸದ್ಯಕ್ಕೆ ರಮ್ಯಾ ಅವರು ಚಿತ್ರರಂಗದಲ್ಲಿ ಒಡನಾಟವನ್ನು ಬೆಳೆಸಿಕೊಳ್ಳುತ್ತಿದ್ದಾರೆ ಕಳೆದ ಅವರಷ್ಟೇ ಡಾಲಿ ಧನಂಜಯ್ ಅವರ ಹೊಯ್ಸಳ ಸಿನಿಮಾದ ಪ್ರಮೋಷನ್ ಕಾರ್ಯಕ್ಕೆ ಕೂಡ ಆಗಮಿಸಿದ್ದರು ಇವೆಲ್ಲವನ್ನು ನೋಡಿದರೆ ಶೀಘ್ರವೇ ಎಂಬುದು ತಿಳಿದು ಬಂದಿದೆ. ನಿಮ್ಮ ಪ್ರಕಾರ ರಮ್ಯಾ ಅವರು ಇಂಡಸ್ಟ್ರಿಗೆ ಬರುವುದು ಸೂಕ್ತನಾ ಅಥವಾ ಇಲ್ಲವಾ ಎಂಬುದನ್ನು ಕಾಮೆಂಟ್ ಮಾಡಿ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ನೆಟ್ಟಿಗರು ಮತ್ತೊಂದು ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ, ರಶ್ಮಿಕಾ ಮಂದಣ್ಣ ಅವರಿಗೆ ಮೊದಲನೆ ಸ್ಥಾನ ಸಿಗಬಾರದಿತ್ತು ಅವರು ಕನ್ನಡಕ್ಕಿಂತಲೂ ಪರ ಭಾಷೆಯಲ್ಲಿ ಹೆಚ್ಚು ನಟಿಸುತ್ತಿದ್ದಾರೆ ನಮ್ಮ ಕನ್ನಡ ಭಾಷೆಗೆ ಅವಮಾನ ಮಾಡುತ್ತಿರುವ ಈ ನಟಿಗೆ ಮೊದಲ ಸ್ಥಾನ ಏಕೆ ಎಂದು ತಮ್ಮ ಆ.ಕ್ರೋ.ಶ ಹೊರಹಾಕಿದ್ದಾರೆ.
That I even made it to the list considering I’ve been away from the industry for 8 years is humbling. @iamRashmika @RachitaRamDQ @AshikaRanganath #radhikapandit happy to share space with you all ♥️🤗 https://t.co/iiHXcH35RX
— Ramya/Divya Spandana (@divyaspandana) July 25, 2022