ಪ್ರತಿಯೊಬ್ಬರಿಗೂ ಕೂಡ ಸಂಕ್ರಾಂತಿ ಹಬ್ಬ ಬಹಳ ವಿಶೇಷ ಎಂದೇ ಹೇಳಬಹುದು. ಹೌದು ಜೀವನದಲ್ಲಿ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತ ನಾಡಬೇಕು ಎನ್ನುವ ಮಹತ್ವ ಅಡಗಿರುವುದು ಈ ಹಬ್ಬದಲ್ಲಿ. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.
ಆದರೆ ಹೆಚ್ಚಿನ ಜನಕ್ಕೆ ಸಂಕ್ರಾಂತಿ ಹಬ್ಬವನ್ನು ಮತ್ತು ಭೋಗಿ ಹಬ್ಬವನ್ನು ಯಾವ ರೀತಿಯಾಗಿ ಮಾಡಬೇಕು ಎನ್ನುವಂತಹ ವಿಷಯ ತಿಳಿದಿಲ್ಲ ಹಾಗಾದರೆ ಈ ದಿನ ಸಂಕ್ರಾಂತಿ ಹಬ್ಬ ಮತ್ತು ಭೋಗಿ ಹಬ್ಬದ ದಿನ ಯಾವ ಕೆಲಸಗಳನ್ನು ಮಾಡಬೇಕು ಯಾವ ಕೆಲಸಗಳನ್ನು ಮಾಡಬಾರದು ಹಾಗೇನಾದರೂ ಈ ಕೆಲಸ ನೀವು ಮಾಡಿದರೆ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ.
ಮಕರ ಸಂಕ್ರಾಂತಿ ಈ ಸಮಯ ಮಹಾಪುಣ್ಯ ಕಾಲ ಮತ್ತೆ ಬರಲ್ಲ.! ಸೂರ್ಯನ ಎದುರಿಗೆ ನಿಂತು ಈ 7 ಅಕ್ಷರ ಹೇಳಿ.!
ಈ ಎಲ್ಲ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಕೆಲವೊಂದು ಕಡೆ ಸಂಕ್ರಾಂತಿ ಹಬ್ಬ ಮತ್ತು ಭೋಗಿ ಹಬ್ಬ ಈ ಎರಡನ್ನು ಕೂಡ ಬಹಳ ಸಂಭ್ರಮದಿಂದ ಆಚ ರಣೆ ಮಾಡುತ್ತಾರೆ ಆದರೆ ಕೆಲವೊಂದಷ್ಟು ಜನ ಸಂಕ್ರಾಂತಿ ಹಬ್ಬವನ್ನು ಮಾತ್ರ ಆಚರಣೆ ಮಾಡುತ್ತಾರೆ.
ಅದರಲ್ಲೂ ಬಹಳ ಮುಖ್ಯವಾಗಿ 14ನೇ ತಾರೀಖಿನಂದು ಭೋಗಿ ಹಬ್ಬ ಇರುವಂತದ್ದು ಹಾಗೂ 15ನೇ ತಾರೀಖು ಸಂಕ್ರಾಂತಿ ಹಬ್ಬ ಇರುವಂತದ್ದು. ಮೊದಲನೆಯದಾಗಿ ಭೋಗಿ ಹಬ್ಬವನ್ನು ಯಾವ ರೀತಿಯಾಗಿ ಆಚರಣೆ ಮಾಡಬೇಕು ಎಂದು ನೋಡುವುದಾದರೆ ಅಂದಿನ ದಿನ ಸೂರ್ಯೋದಯಕ್ಕೂ ಮುಂಚೆ ಎದ್ದು ಎಲ್ಲೆಣ್ಣೆಯನ್ನು ಮೈಗೆಲ್ಲ ಹಚ್ಚಿ ಆ ನಂತರ ಕಪ್ಪು ಎಳ್ಳನ್ನು ಪುಡಿ ಮಾಡಿ ಅದನ್ನು ಕೂಡ ಮೈ ಗೆ ಹಚ್ಚಿ ಸ್ನಾನ ಮಾಡಬೇಕು.
ಸಂತಾನ ಫಲಕ್ಕಾಗಿ ರಾಯರ ಅದ್ಭುತವಾದ ಅನುಷ್ಠಾನ.!
ಎಳ್ಳೆಣ್ಣೆ ಹಚ್ಚಿ ಏಕೆ ಸ್ನಾನ ಮಾಡಬೇಕು ಎಂದರೆ ಎಳ್ಳೆಣ್ಣೆ ಎಂದರೆ ಶನೇಶ್ವರನಿಗೆ ತುಂಬಾ ಇಷ್ಟ. ಹಾಗಾಗಿ ಮನೆಯಲ್ಲಿರುವ ಪ್ರತಿಯೊಬ್ಬರು ಕೂಡ ಎಳ್ಳೆಣ್ಣೆ ಹಚ್ಚಿ ತಲೆ ಸ್ನಾನ ಮಾಡಬೇಕು. ತದನಂತರ ಮಡಿ ಬಟ್ಟೆ ತೊಟ್ಟು ಹಣೆಗೆ ವಿಭೂತಿಗಂಧ ಇಟ್ಟು ಮುಖ್ಯವಾಗಿ ನಿಮ್ಮ ಮನೆ ದೇವರ ಪೂಜೆ ಆರಾಧನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ ಏಕೆಂದರೆ ಈ ಹಬ್ಬ ದಕ್ಷಿಣಾಯಕ್ಕೆ ಕೊನೆಯ ಹಬ್ಬ
ಹೌದು ಮನುಷ್ಯರಿಗೆ ಹೇಗೆ ವರ್ಷಕ್ಕೆ 365 ದಿನ ಇರುತ್ತದೆಯೋ ಅದೇ ರೀತಿ ದೇವತೆಗಳಿಗೆ ವರ್ಷಕ್ಕೆ ಆರು ತಿಂಗಳು ಉತ್ತರಾಯಣ ಹಾಗೂ ಆರು ತಿಂಗಳು ದಕ್ಷಿಣಾಯಣ ಇರುತ್ತದೆ. ತದನಂತರ ನಿಮ್ಮ ಹತ್ತಿರದಲ್ಲಿರುವ ಯಾವುದಾದರೂ ವಿಷ್ಣು ದೇವಾಲಯಕ್ಕೆ ಹೋಗಿ ದೇವರ ದರ್ಶನ ಮಾಡುವುದು ತುಂಬಾ ಒಳ್ಳೆಯದು.
ಹಟ್ಟಿಯಂಗಡಿಯ ಈ ಶನೇಶ್ವರ ಪವಾಡ ಅಷ್ಟಿಷ್ಟಲ್ಲ.! ಜೀವನದಲ್ಲಿ ಏನೇ ಕಷ್ಟ ಇರಲಿ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ ಪರಿಹಾರ ಸಿಗುತ್ತೆ.!
ಆನಂತರ ಮನೆಯ ಮುಂಭಾಗದಲ್ಲಿ ನಿಮ್ಮ ಮನೆಯಲ್ಲಿರುವ ಯಾವುದಾದರೂ ಹಳೆಯ ವಸ್ತುಗಳಿರಬಹುದು ಅವೆಲ್ಲವನ್ನು ಸಹ ಮನೆ ಮುಂದೆ ಇಟ್ಟು ಅದನ್ನು ಸುಡುವುದರಿಂದ ನಿಮ್ಮ ಮನೆಯ ಮೇಲೆ ಇರುವಂತಹ ದೃಷ್ಟಿ ದೋಷ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಇದ್ದರೂ ಕೂಡ ಹೋಗುತ್ತದೆ.
ಹಾಗಾಗಿ ಈ ಒಂದು ರೀತಿಯ ಪದ್ಧತಿಯನ್ನು ಕೆಲವೊಂದು ಭಾಗಗಳಲ್ಲಿ ಮಾಡಲಾಗುತ್ತದೆ ಆದರೆ ಪ್ರತಿಯೊಬ್ಬರೂ ಇದೇ ರೀತಿಯಾಗಿ ಮಾಡಬೇಕು ಎನ್ನುವ ನಿಯಮ ಇಲ್ಲ ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಪೂಜೆಗಳನ್ನು ಮಾಡುವುದು ಒಳಿತು. ಜೊತೆಗೆ ಈ ಭೋಗಿ ಹಬ್ಬದ ದಿನ ಎಳ್ಳುoಡೆಯನ್ನು ನೀವು ಬೇರೆಯವರಿಗೆ ಕೊಟ್ಟರೆ ತುಂಬಾ ಒಳ್ಳೆಯದು ಹೌದು ಎಳ್ಳುಂಡೆ ಶನೇಶ್ವರನಿಗೆ ಬಹಳ ಪ್ರಿಯವಾದದ್ದು ಆದ್ದರಿಂದ ಇದನ್ನು ಭೋಗಿ ಹಬ್ಬದ ದಿನ ಕೊಡುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.