ಇನ್ನೇನು ಹೊಸ ವರ್ಷ ಪ್ರಾರಂಭವಾಗಿದ್ದು ಪ್ರತಿಯೊಬ್ಬರೂ ಕೂಡ ತಮ್ಮ ಮನೆಗಳಿಗೆ ಹೊಸ ಕ್ಯಾಲೆಂಡರ್ ತರುತ್ತಾರೆ. ಹೌದು ನಾವು ವಾಸ್ತು ಶಾಸ್ತ್ರದ ಪ್ರಕಾರ ನೋಡುವುದಾದರೆ ಪ್ರತಿಯೊಂದು ವಸ್ತುವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಯಾವ ವಸ್ತುವನ್ನು ಯಾವ ದಿಕ್ಕಿನಲ್ಲಿ ಇದ್ದರೆ ಅದು ನಮಗೆ ಶುಭವನ್ನು ತಂದುಕೊಡುತ್ತದೆ ಅದು ನಮಗೆ ಹೆಚ್ಚು ಲಾಭದಾ ಯಕವಾಗುತ್ತದೆ ಎನ್ನುವಂತಹ ಮಾಹಿತಿ ಕೆಲವೊಂದಷ್ಟು ಜನಕ್ಕೆ ತಿಳಿದಿಲ್ಲ.
ಅದೇ ರೀತಿಯಾಗಿ ಕ್ಯಾಲೆಂಡರ್ ತಂದ ತಕ್ಷಣ ಅದನ್ನು ಸಿಕ್ಕ ಸಿಕ್ಕ ಕಡೆ ನೇತು ಹಾಕುವುದು ತಪ್ಪು. ಬದಲಿಗೆ ಈಗ ನಾವು ಹೇಳುವ ಈ ದಿಕ್ಕಿನಲ್ಲಿ ಹಾಕಿದರೆ ಅದು ನಿಮಗೆ ಹೆಚ್ಚು ಧನಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ ಎಂದೇ ಹೇಳಬಹುದು.
ಮನೆಯಲ್ಲಿ ಆಗಿರಬಹುದು ಕಚೇರಿಗಳಾಗಿರಬಹುದು ನೀವು ವ್ಯಾಪಾರ ವ್ಯವಹಾರ ಮಾಡುವಂತಹ ಸ್ಥಳಗಳಲ್ಲಿ ಆಗಿರಬಹುದು ಅದನ್ನು ಯಾವ ದಿಕ್ಕಿನಲ್ಲಿ ಹಾಕಿದರೆ ಅದು ನಮಗೆ ಹೆಚ್ಚು ಲಾಭದಾಯಕವಾಗುತ್ತದೆ ಹೆಚ್ಚು ಹಣ ಸಂಪಾದನೆ ಮಾಡಲು ಸಾಧ್ಯವಾಗುತ್ತದೆ ಎನ್ನುವುದನ್ನು ತಿಳಿದು ಕೊಂಡು ಆನಂತರ ಆ ಒಂದು ದಿಕ್ಕಿನಲ್ಲಿ ಕ್ಯಾಲೆಂಡರ್ ನೇತು ಹಾಕುವುದು ಒಳ್ಳೆಯದು.
ಭೋಗಿ ಮತ್ತು ಸಂಕ್ರಾಂತಿ ಹಬ್ಬ ಯಾವ ರೀತಿಯಾಗಿ ಆಚರಿಸಬೇಕು, ಎಲ್ಲರೂ ತಿಳಿದುಕೊಳ್ಳಿ.!
ಹಾಗಾದರೆ ಈ ದಿನ ಯಾವ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಿದರೆ ಒಳ್ಳೆಯದು ಹಾಗೂ ಅದರಿಂದ ನಮಗೆ ಹೆಚ್ಚು ಅನುಕೂಲವಾಗುತ್ತದೆ ಯಾವ ದಿಕ್ಕಿನಲ್ಲಿ ಹಾಕಬಾರದು ಅದರಿಂದ ಏನೆಲ್ಲ ತೊಂದರೆಗಳು ಉಂಟಾಗುತ್ತದೆ ಹೀಗೆ ಈ ವಿಚಾರಕ್ಕೆ ಸಂಬಂಧಿ ಸಿದ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ. ವಾಸ್ತು ಶಾಸ್ತ್ರದ ಪ್ರಕಾರ ಕ್ಯಾಲೆಂಡರ್ ಅನ್ನು ನಾವು ಉತ್ತರ ಅಥವಾ ಪಶ್ಚಿಮ ದಿಕ್ಕಲ್ಲಿ ಇಡುವುದು ಅತ್ಯಂತ ಶುಭಕರ ಎಂದು ತಿಳಿಸುತ್ತದೆ.
ಯಾಕೆ ಎಂದರೆ ಪಶ್ಚಿಮ ದಿಕ್ಕನ್ನು ನಾವು ಅರಿವಿನ ದಿಕ್ಕು ಹಾಗೆಯೇ ಉತ್ತರ ದಿಕ್ಕನ್ನು ನಾವು ಕುಬೇರ ದಿಕ್ಕು ಎಂದು ಕರೆಯುತ್ತೇವೆ. ಹಾಗಾಗಿ ಈ ದಿಕ್ಕಲಿ ಇಡುವುದರಿಂದ ನಮಗೆ ತುಂಬಾ ಅನುಕೂಲವಾಗುತ್ತದೆ ಹಾಗೇನಾದರೂ ವಿರುದ್ಧ ದಿಕ್ಕಿನಲ್ಲಿ ಕ್ಯಾಲೆಂಡರ್ ಇಟ್ಟರೆ ಅದು ನಮ್ಮ ಹಣಕಾಸಿನ ವಿಷಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಕೂಡ ಯಶಸ್ಸು ಎನ್ನುವುದು ಸಿಗುವುದಿಲ್ಲ.
ಆದ್ದರಿಂದ ಈ ದಿಕ್ಕಲ್ಲಿ ಕ್ಯಾಲೆಂಡರ್ ಹಾಕುವುದು ಒಳ್ಳೆ ಯದು. ಆದರೆ ಕೆಲವೊಂದಷ್ಟು ಜನ ಇದನ್ನು ಮೂಢನಂಬಿಕೆ ಇದೆಲ್ಲ ಸುಳ್ಳು ಎಂದು ಹೇಳುತ್ತಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಗಮನಿಸಬೇಕಾದಂತಹ ವಿಷಯ ಏನು ಎಂದರೆ.
ಮಕರ ಸಂಕ್ರಾಂತಿ ಈ ಸಮಯ ಮಹಾಪುಣ್ಯ ಕಾಲ ಮತ್ತೆ ಬರಲ್ಲ.! ಸೂರ್ಯನ ಎದುರಿಗೆ ನಿಂತು ಈ 7 ಅಕ್ಷರ ಹೇಳಿ.!
ನಮ್ಮ ಮನೆಯಲ್ಲಿ ಸದಾ ಕಾಲ ಒಂದೇ ರೀತಿಯಾದಂತಹ ವಾತಾವರಣ ಇರುವುದಿಲ್ಲ ಹೌದು ತಿಳಿದೋ ತಿಳಿಯದೆಯೋ ನಾವು ಮಾಡುವಂತ ಕೆಲವೊಂದಷ್ಟು ಸಣ್ಣಪುಟ್ಟ ತಪ್ಪುಗಳು ನಮ್ಮ ಮನೆಯಲ್ಲಿ ಹಲವಾರು ರೀತಿಯ ಬದಲಾವಣೆಗೆ ಕಾರಣವಾಗುತ್ತದೆ.
ಹೌದು ಸಣ್ಣ ಸಣ್ಣ ವಿಚಾರಕ್ಕೂ ಮನೆಯಲ್ಲಿ ಜಗಳ ಕಿರಿಕಿರಿ ಮನಸ್ತಾಪ ಉಂಟಾಗುವುದು ನಿಮ್ಮ ಮಾತುಗಳಲ್ಲಿ ಹಿಡಿತ ಇಲ್ಲದೆ ಇರುವಂತದ್ದು ನಿಮ್ಮ ಮಾತನ್ನು ಮನೆಯಲ್ಲಿ ಯಾರು ಕೇಳದೆ ಇರುವುದು ಹೀಗೆ ಇನ್ನೂ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂಥ ಚಿಕ್ಕಪುಟ್ಟ ವಿಷಯಗಳ ಬಗ್ಗೆಯೂ ಕೂಡ ತಿಳಿದುಕೊಂಡು ಅದನ್ನು ಅನುಸರಿಸುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ತಡೆಗಟ್ಟಬಹುದು. ಹಾಗೂ ನಮ್ಮ ಮನೆಯಲ್ಲಿ ದಕ್ಷಿಣ ದಿಕ್ಕಿಗೆ ಯಾವುದೇ ಕಾರಣಕ್ಕೂ ಕೂಡ ಕ್ಯಾಲೆಂಡರ್ ಹಾಕಬಾರದು. ಹಾಗೇನಾದರೂ ಈ ದಿಕ್ಕಿನಲ್ಲಿ ನೀವು ಕ್ಯಾಲೆಂಡರ್ ಹಾಕಿದರೆ ಮನೆಯ ಸದಸ್ಯರ ಆರೋಗ್ಯದ ಮೇಲೆ ಅದು ನೇರವಾಗಿ ಪರಿಣಾಮ ಬೀರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.