Home Blog Page 101

ನರಗಳ ವೀಕ್ನೆಸ್, ಮಂಡಿ ನೋವು, ಜಾಯಿಂಟ್ ಪೈನ್, ಸೊಂಟ ನೋವು, ಗ್ಯಾಸ್ 100ಕ್ಕೂ ಹೆಚ್ಚು ರೋಗ ತಕ್ಷಣ ಕಡಿಮೆಯಾಗುತ್ತೆ.!

 

ಈಗಿನ ಕಾಲದಲ್ಲಿ ನಾವು ಅನಾರೋಗ್ಯಕರವಾದ ಆಹಾರ ಪದ್ಧತಿಯನ್ನು ರೂಢಿಸಿಕೊಂಡಿದ್ದೇವೆ ಮತ್ತು ನಮ್ಮ ಜೀವನ ಶೈಲಿಯೂ ಕೂಡ ರೂಢಿ ತ’ಪ್ಪಿ ಹೋಗಿದೆ. ಇದೇ ಕಾರಣಕ್ಕೆ ನಾವು ನೂರಾರು ಕಾಯಿಲೆಗಳಿಗೆ ತ್ತುತ್ತಾಗುತ್ತಿದ್ದೇವೆ. ನಮ್ಮ ದೇಹದ ಹಲವಾರು ಸಮಸ್ಯೆಗೆ ದೇಹದಲ್ಲಿ ಉಂಟಾಗಿರುವ ಅಜೀರ್ಣತೆ ಮತ್ತು ಮಲಬದ್ದತೆಯೇ ಮುಖ್ಯ ಕಾರಣ.

ಈ ಎರಡು ಕಾರಣದಿಂದಾಗಿ ನಾವು ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಮತ್ತು ಅದು ಹೊರ ಹೋಗದೆ ಟಾಕ್ಸಿನ್ ಆಗುತ್ತದೆ. ಆ ಟಾಕ್ಸಿನ್ ಮೂಲಕ ದೇಹಕ್ಕೆ ಹಲವಾರು ರೀತಿಯ ವಿಷಾಂಶಗಳು ಸೇರಿ ರಕ್ತ ಕಲುಷಿತವಾಗಿ ಆ ಮೂಲಕ ಅಂಗಾಂಗಗಳಿಗೆಲ್ಲ ಸಮಸ್ಯೆ ಆಗುತ್ತಿದೆ. ಮತ್ತು ನಾವು ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಇರುವುದರಿಂದ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ ಇದರಿಂದಲೂ ಕೂಡ ನಾವು ಅನೇಕ ರೋಗಗಳನ್ನು ಎದುರಿಸಬೇಕಾಗಿ ಬರುತ್ತದೆ.

ಈ ಎಲ್ಲ ಸಮಸ್ಯೆಗಳಿಂದ ಪರಿಹಾರ ಪಡೆಯಬೇಕು ಎಂದರೆ ಮೊದಲು ನಮ್ಮ ಜೀವನ ಕ್ರಮವನ್ನು ಸರಿಯಾಗಿ ಮಾಡಿಕೊಳ್ಳಬೇಕು. ತಡವಾಗಿ ಮಲಗುವುದು ತಡವಾಗಿ ಏಳುವುದು ಈ ದುರಭ್ಯಾಸವನ್ನು ಬಿಟ್ಟುಬಿಡಬೇಕು ಮತ್ತು ಧೂಮಪಾನ ಮಧ್ಯಪಾನ ತಂಬಾಕು ಗುಟ್ಕ ಇಂತಹ ದು’ಶ್ಚ’ಟಗಳಿಂದ ದೂರ ಇರಬೇಕು.

ಅವೈಜ್ಞಾನಿಕವಾಗಿ ತಯಾರಾದ ಆಹಾರ ಪದಾರ್ಥಗಳಾದ ಫಾಸ್ಟ್ ಫುಡ್ ಜಂಕ್ ಫುಡ್ ಇವುಗಳ ಸೇವನೆಯನ್ನು ನಿಲ್ಲಿಸಿ ಪೋಷಕಾಂಶಯುಕ್ತ ಹಣ್ಣುಗಳು ತರಕಾರಿಗಳು ಹಸಿರು ಸೊಪ್ಪುಗಳು ಸಿರಿಧಾನ್ಯಗಳು ಇವುಗಳನ್ನು ಆಹಾರವಾಗಿ ಸೇವಿಸಬೇಕು. ಅತಿ ಹೆಚ್ಚು ನೀರನ್ನು ಕುಡಿಯಬೇಕು ದೇಹಕ್ಕೆ ಯಾವುದೇ ರೀತಿಯ ಪೋಷಕಾಂಶಗಳ ಕೊರತೆ ಬಾರದಂತೆ ನೋಡಿಕೊಳ್ಳಬೇಕು.

ಮತ್ತು ನಿಯಮಿತವಾಗಿ ವ್ಯಾಯಾಮ ಅಥವಾ ವಾಕಿಂಗ್ ಅಥವಾ ಯೋಗ ರೂಢಿಸಿಕೊಂಡು ಮನಸ್ಸನ್ನು ಶಾಂತಿಯಾಗಿ ಇಟ್ಟುಕೊಳ್ಳಬೇಕು. ಈ ರೀತಿ ಮಾಡಿದರೆ ನಮ್ಮ ದೇಹದ 75% ಕಾಯಿಲೆಗಳು ಗುಣವಾಗುತ್ತವೆ ಮತ್ತು ಕಾಯಿಲೆಗಳು ನಮಗೆ ಬರುವುದು ಕಡಿಮೆಯಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಒಂದು ವೇಳೆ ನೀವು ಈಗಾಗಲೇ ದೇಹ ಕೆಲ ಸಮಸ್ಯೆಗಳಿಗೆ ಗುರಿಯಾಗಿದ್ದರೆ ಅದರಲ್ಲೂ ಕ್ಯಾಲ್ಸಿಯಂ ವಿಟಮಿನ್ ಮುಂತಾದ ಪೋಷಕಾಂಶಗಳ ಹಾಗೂ ಲವಣಾಂಶಗಳ ಕೊರತೆಯಿಂದಾಗಿ ಮಂಡಿ ನೋವು, ಸೊಂಟ ನೋವು ಬೆನ್ನು ನೋವು ನರದೌರ್ಬಲ್ಯ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ನಿಮ್ಮ ದೇಹದ ಚೇತನವು ಹೆಚ್ಚಾಗಲು …

ಈಗ ನಾವು ಹೇಳುವ ಈ ಸುಲಭ ಮನೆಮದ್ದನ್ನು ಮಾಡಿ ಯಾವುದೇ ದುಬಾರಿ ವಸ್ತುಗಳನ್ನು ಖರೀದಿಸದೆ ಮನೆಯಲ್ಲಿ ಇರುವ ಅಡುಗೆ ಮನೆಯ ಮಸಾಲೆ ಪದಾರ್ಥಗಳನ್ನು ಉಪಯೋಗಿಸಿಕೊಂಡು ಈ ಮನೆಮದ್ದನ್ನು ಮಾಡಬಹುದು.

ಜೀರಿಗೆ, ಓಂ ಕಾಳು ಹಾಗೂ ಸೋಂಪು ಕಾಳು ಈ ಮೂರನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ ನುಣ್ಣಗೆ ಗ್ರೈಂಡ್ ಮಾಡಿ ಇಟ್ಟುಕೊಳ್ಳಿ. ಈ ಪುಡಿಯನ್ನು ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಹಾಗೂ ರಾತ್ರಿ ಊಟ ಆದ ಮೇಲೆ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಮಚ ಈ ಪುಡಿ ಮಿಕ್ಸ್ ಮಾಡಿ ಸೇವಿಸಿ.

ಈ ರೀತಿ ಮಾಡುವುದರಿಂದ ದೇಹದಲ್ಲಿರುವ ಟಾಕ್ಸಿನ್ ಅಂಶಗಳು ಹೊರಹೋಗುತ್ತವೆ ಮತ್ತು ದೇಹಕ್ಕೆ ಕೊರತೆ ಉಂಟಾಗಿರುವ ಕ್ಯಾಲ್ಸಿಯಂ ಜಿಂಕ್ ಮೆಗ್ನೀಷಿಯಂ ಮುಂತಾದ ಅಂಶಗಳು ದೇಹಕ್ಕೆ ದೊರೆಯುತ್ತದೆ ಮಲಬದ್ಧತೆ ಸಮಸ್ಯೆ ಸರಿ ಹೋಗುತ್ತದೆ, ನಿಶಕ್ತಿ ಕಡಿಮೆ ಆಗುತ್ತದೆ. ನೀವು ಇದನ್ನು ನೀರಿನ ಬದಲು ಹಾಲಿನಲ್ಲಿ ಕೂಡ ಮಿಕ್ಸ್ ಮಾಡಿ ಸೇವಿಸಬಹುದು. ರಾತ್ರಿ ಹೊತ್ತು ಬೇಕಾದರೆ ಇದೇ ಪುಡಿಯನ್ನು ಒಂದು ಲೋಟ ಹಾಲಿಗೆ ಒಂದು ಚಮಚ ಮಿಕ್ಸ್ ಮಾಡಿ ತೆಗೆದುಕೊಳ್ಳಿ ಬಹಳ ಪರಿಣಾಮಕಾರಿಯಾಗಿ ಇದು ವರ್ಕ್ ಆಗುತ್ತದೆ.

ನಾವು ಹೋಗುವ ಮನೆಯಲ್ಲಿ ಸಿರಿ ಸಂಪತ್ತು ವೃದ್ಧಿಸಬೇಕೇಂದರೆ, ಗೃಹ ಪ್ರವೇಶದ ಸಮಯದಲ್ಲಿ ಈ ವಸ್ತುಗಳನ್ನು ಮೊದಲು ಮನೆಗೆ ತನ್ನಿ.!

ಮನೆ ಎನ್ನುವುದು ಅದೆಷ್ಟೋ ಜನರ ಕನಸು. ಬೆಳಿಗ್ಗೆಯಿಂದ ಸಂಜೆಯವರೆಗೆ ನಾವು ಯಾವುದೇ ಕಚೇರಿಗಳಲ್ಲಿ ಅಲೆದಾಡಿದರು ಯಾವುದೇ ಪ್ರದೇಶಗಳಿಗೆ ಹೋದರೂ ಅಥವಾ ವಾರಗಟ್ಟಲೆ ತಿಂಗಳುಗಟ್ಟಲೆ ಕೆಲಸ ಅಥವಾ ಇನ್ನಿತರ ಉದ್ದೇಶಗಳಿಂದ ದೂರದ ಪ್ರಯಾಣ ಮಾಡಬೇಕಾದರೂ ಮನಸ್ಸು ಯಾವಾಗಲೂ ಮನೆಯ ಕಡೆ ಯೋಚಿಸುತ್ತಾ ಇರುತ್ತದೆ.

ಕೊನೆಗೆ ಯಾವಾಗ ನಾವು ನಮ್ಮ ಮನೆಗೆ ಹೋಗಿ ನೆಮ್ಮದಿಯಾಗಿ ಕುಳಿತುಕೊಳ್ಳುತ್ತೇವೆ ಎಂದು ಪದೇಪದೇ ಅನಿಸುತ್ತಿರುತ್ತದೆ. ಇದರಿಂದಲೇ ಮನೆ ಎನ್ನುವುದು ಎಷ್ಟು ಮುಖ್ಯವಾದ ಸ್ಥಳ ಎನ್ನುವುದು ಅರಿವಾಗುತ್ತದೆ. ಯಾಕೆಂದರೆ ಮನೆ ನಮಗೆ ಸುಖ ಶಾಂತಿ ನೆಮ್ಮದಿಯನ್ನು ಕೊಡುವ ಸ್ಥಳವಾಗಿದೆ, ಇಂತಹ ಮನೆ ಅದೃಷ್ಟದ ಸಂಕೇತವು ಹೌದು.

ಮನೆಗೆ ಗೃಹಪ್ರವೇಶ ಮಾಡಿ ಮಂಗಳಕರವಾಗಿ ಮನೆಗೆ ಹೋದಾಗ ಆ ಮನೆಯ ಮೂಲಕವೇ ಎಲ್ಲ ರೀತಿಯ ಕಷ್ಟ ಕಾರ್ಪಣ್ಯಗಳು ಕಳೆದು ಅದೃಷ್ಟವೂ ಬರಲು ಆರಂಭವಾಗುತ್ತದೆ. ಹಾಗಾಗಿ ಹೊಸ ಮನೆ ಕಟ್ಟಿ ಮನೆಗೆ ಹೋಗುವ ಗೃಹಪ್ರವೇಶದ ಸಂದರ್ಭದಲ್ಲಿ ಕೆಲ ವಿಷಯಗಳನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು ಮನೆ ಕಟ್ಟಿಸುವಾಗ ವಾಸ್ತು ಪ್ರಕಾರ ಕಟ್ಟಿಸುವಂತೆ ಮತ್ತು ಮನೆಯ ಯಜಮಾನನಿಗೆ ಹೊಂದಿಕೆ ಆಗುವಂತೆ ಶಾಸ್ತ್ರ ನೋಡಿ ಕಟ್ಟಿಸುವಂತೆ ಮನೆ ಗೃಹಪ್ರವೇಶ ಮಾಡುವಾಗಲು ಕೂಡ ಕೆಲ ಪದ್ದತಿಯನ್ನು ಪಾಲಿಸಬೇಕು.

ಈ ಪ್ರಕಾರವಾಗಿ ಸೋಮವಾರ ಮಂಗಳವಾರ ಗುರುವಾರ ಶುಕ್ರವಾರ ಮತ್ತು ಭಾನುವಾರದಂದು ಬ್ರಾಹ್ಮಿ ಮುಹೂರ್ತಗಳಲ್ಲಿ ಮನೆಯ ಗ್ರಹಪ್ರವೇಶ ಮಾಡಬೇಕು ಮನೆಯ ಗೃಹಪ್ರವೇಶ ಮಾಡಿ ಹಾಲು ಉಕ್ಕಿಸಬೇಕು ಈ ಸಂದರ್ಭದಲ್ಲಿ ಮನೆಯ ಸದಸ್ಯರು ಮತ್ತು ಆತ್ಮೀಯರಷ್ಟೇ ಇದ್ದರೆ ಸಾಕು ಇಷ್ಟಾದ ಮೇಲೆ ಬಂಧು-ಬಳಗದವರನ್ನು ಕರೆಸಿ ಶಕ್ತಿ ಅನುಸಾರ ಅವರ ಉಪಚಾರ ಮಾಡಿ.

ಹೀಗೆ ಮನೆಯ ಪ್ರವೇಶ ಮಾಡಬೇಕಾದಾಗ ಮೊದಲು ಮನೆಗೆ ಗೋವನ್ನು ಕರೆದುಕೊಂಡು ಪ್ರವೇಶ ಮಾಡಿಸಬೇಕು ಗೋವು ಬಹಳ ಸಾಧು ಪ್ರಾಣಿ ಮತ್ತು ಐಶ್ವರ್ಯದ ಸಂಕೇತವಾಗಿದೆ. ಕೋಟ್ಯಾನು ಕೋಟಿ ದೇವತೆಗಳು ಕೂಡ ಗೋವಿನಲ್ಲಿ ನೆಲೆಸುತ್ತಾರೆ ಮತ್ತು ಇದು ಹಿಂದೂಗಳ ಬಾಗಿಲಿಗೆ ಪವಿತ್ರವಾದ ಭಾವನೆಯಾಗಿದೆ. ಗೋವಿನ ಪ್ರವೇಶ ಮಾಡಿದ ಮೇಲೆ ಮನೆಯ ಒಡತಿಯು ಮನೆ ಪ್ರವೇಶ ಮಾಡಬೇಕು.

ಆಕೆ ತುಂಬಿದ ಕೊಡದೊಂದಿಗೆ ಸಕಾರಾತ್ಮಕವಾಗಿ ಭಗವಂತನನ್ನು ಪ್ರಾರ್ಥಿಸುತ್ತಾ ಮನೆ ಒಳಗೆ ಹೋಗಬೇಕು, ನಂತರ ಆಕೆಯ ಪತಿ ಗಣಪತಿಯನ್ನು ಹಿಡಿದುಕೊಂಡು ಆಕೆಯನ್ನು ಹಿಂಬಾಲಿಸಬೇಕು ಮತ್ತು ಮಕ್ಕಳು ಐಶ್ವರ್ಯ ಸೂಚಿಸುವ ದ್ರವ್ಯಗಳನ್ನು ತೆಗೆದುಕೊಂಡು ಮನೆಗೆ ಪ್ರವೇಶ ಮಾಡಬೇಕು. ಕೊನೆಯಲ್ಲಿ ಬಂಧುಗಳು ಹಾಗೂ ಸ್ನೇಹಿತರು ಮನೆಯ ಪ್ರವೇಶ ಮಾಡಬೇಕು.

ಮನೆ ಪ್ರವೇಶದ ವೇಳೆ ಮನೆಯ ಒಡೆಯ ಹಾಗೂ ಒಡತಿ ತೆಂಗಿನ ಕಾಯಿ, ಅರಿಶಿಣ, ಬೆಲ್ಲ, ಅಕ್ಕಿ, ಹಾಲನ್ನು ತಮ್ಮೊಂದಿಗೆ ತೆಗೆದುಕೊಂಡು ಮನೆ ಪ್ರವೇಶ ಮಾಡಬೇಕು. ಈ ರೀತಿ ಗೃಹಪ್ರವೇಶ  ಮಾಡಿದಾಗ ಅವರು ಅಂದುಕೊಂಡಂತೆ ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಮತ್ತು ಅಷ್ಟೈಶ್ವರ್ಯಗಳನ್ನು ಪಡೆದು ಬದುಕುತ್ತಾರೆ ಆ ಮನೆಗೆ ಎಂತಹ ಕ’ಷ್ಟಗಳು ಬರುವುದಿಲ್ಲ, ಧನ ಧಾನ್ಯ ಐಶ್ವರ್ಯಗಳು ಸಮೃದ್ಧಿ ಆಗುತ್ತದೆ.

ಸ್ವಂತ ಮನೆ ಮಾತ್ರವಲ್ಲದೆ ಬಾಡಿಗೆ ಮನೆಗೆ ಹೋಗುವವರು ಕೂಡ ಬಾಡಿಗೆ ಮನೆಗೆ ಹೋಗುವ ಮುನ್ನ ಮನೆಯಲ್ಲಿ ಹಾಲು ಉಕ್ಕಿಸುತ್ತಾರೆ. ಅವರು ಸಹಾ ಶುಭದಿನವನ್ನು ನೋಡಿ ಶುಭ ಮುಹೂರ್ತದಲ್ಲಿ ಸಾಧ್ಯವಾಗದೇ ಇದ್ದರೆ ಬ್ರಾಹ್ಮಿ ಮುಹೂರ್ತದಲ್ಲಿ ಹಾಲು ಉಕ್ಕಿಸಿ ನಂತರ ಅವರ ಸಾಮಗ್ರಿಗಳನ್ನು ಶಿಫ್ಟ್ ಮಾಡಿಕೊಳ್ಳಬೇಕು. ಮತ್ತು ಈ ರೀತಿ ಬಾಡಿಗೆ ಮನೆಗೆ ಹೋಗುವಾಗ ಹೊಸ ಪೊರಕೆ, ಉಪ್ಪು, ಬೇಳೆಕಾಳು, ಅರಿಶಿಣ ಮತ್ತು ಕುಂಕುಮ ಮುಂತಾದವುಗಳನ್ನು ಖರೀದಿಸಿ ತೆಗೆದುಕೊಂಡು ಹೋಗಬೇಕು.

ಮದುವೆಗೆ ಬಹಳಷ್ಟು ಅಡೆತಡೆ, ವಿಳಂಬ ಆಗುತ್ತಿದೆಯೇ? ಇದೊಂದು ಮಂತ್ರ ಹೇಳಿ ಸಾಕು ಕೆಲವೇ ದಿನಗಳಲ್ಲಿ ಮದುವೆ ಫಿಕ್ಸ್ ಆಗುತ್ತದೆ.;

 

ಮದುವೆ ಎನ್ನುವುದು ಮನುಷ್ಯನ ಜೀವನಕ್ಕೆ ಬಹಳ ಮುಖ್ಯವಾದದ್ದು. ಒಬ್ಬ ವ್ಯಕ್ತಿಯು ಬೆಳೆದು ಪ್ರೌಢಾವಸ್ಥೆಗೆ ಬಂದ ನಂತರ ಗೃಹಸ್ಥಾಶ್ರಮಕ್ಕೆ ಕಾಲಿಟ್ಟು ಸತ್ಸಂತಾನ ಗಳನ್ನು ಪಡೆದು, ವಂಶೋದ್ಧಾರ ಮಾಡುತ್ತಾ ಮುಂದಿನ ಜೀವನವನ್ನು ಅರ್ಥಪೂರ್ಣವಾಗಿ ಕಳೆಯಬೇಕು ಎಂದರೆ ಮದುವೆ ಬೇಕೆ ಬೇಕು. ಆಗ ಬದುಕು ಒಂದು ವ್ಯವಸ್ಥೆತವಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಸಮಾಧಾನ ಸಿಗುತ್ತದೆ ಹಾಗೂ ಪ್ರಪಂಚ ಕೂಡ ಹೀಗೆ ಬದುಕುತ್ತಿದೆ.

ಪ್ರಪಂಚದ ಯಾವುದೇ ಮೂಲೆಗೆ ಹೋದರು ಕೂಡ ವಿವಾಹದ ಮೂಲಕವೇ ಎರಡು ಜೋಡಿಗಳು ಒಂದಾಗಿ ಒಟ್ಟಿಗೆ ಬದುಕುವುದು. ಅದರಲ್ಲೂ ನಮ್ಮ ದೇಶದಲ್ಲಿ ವಿವಾಹ ಬಂಧನಕ್ಕೆ ಬಹಳ ಪವಿತ್ರವಾದ ಸ್ಥಾನವನ್ನು ಕೊಡಲಾಗಿದೆ ಮತ್ತು ನಾವು ಮದುವೆ ಎನ್ನುವುದು ಸ್ವರ್ಗದಲ್ಲಿಗೆ ನಿಶ್ಚಯ ಆಗಿರುತ್ತದೆ. ಯಾವ ವರನಿಗೆ ಯಾವ ವಧು ಜೊತೆಯಾಗಬೇಕು ಎಂದು ಈಗಾಗಲೇ ಬ್ರಹ್ಮ ಲಿಖಿತದಲ್ಲಿ ದಾಖಲಾಗಿದೆ ಎನ್ನುವುದನ್ನು ಕೂಡ ನಂಬಿ ಅದೇ ರೀತಿಯಾಗಿ ಬದುಕುತ್ತಿದ್ದೇವೆ.

ಆದರೆ ಕೆಲವರಿಗೆ ಮದುವೆ ಆಗುವುದೇ ಇಲ್ಲ ಆಗ ಅವರ ಯೋಗದಲ್ಲಿ ಬರೆದಿದ್ದ ಕಂಕಣ ಭಾಗ್ಯ ಮುಗಿದಿದೆ ಹಾಗಾಗಿ ಅವರಿಗೆ ಕಾಡಿಸುತ್ತದೆ ಎಂದು ಮಾತನಾಡುವುದನ್ನು ಕೂಡ ನಾವು ಕೇಳಿರುತ್ತೇವೆ. ಹಾಗಾಗಿ ಕಂಕಣ ಭಾಗ್ಯ ಕೂಡಿ ಬಂದಾಗ ತಡ ಮಾಡದೆ ಮದುವೆ ಆಗಿ ಬಿಡಬೇಕು.

ಆದರೆ ಕೆಲವೊಮ್ಮೆ ನಾವೇ ಎಷ್ಟೇ ಸಂಬಂಧಗಳನ್ನು ನೋಡಿದರು ಒಪ್ಪಿಗೆ ಆಗುವುದಿಲ್ಲ, ಕೆಲವೊಂದು ನಿಶ್ಚಿತಾರ್ಥದ ಹಂತಕ್ಕೆ ಹೋಗಿ ಮುರಿದುಬಿಡುತ್ತದೆ, ಈ ರೀತಿ ಪದೇ ಪದೇ ಆಗುತ್ತಿದ್ದರೆ ಮದುವೆ ಬಗ್ಗೆ ಉತ್ಸಾಹವೆ ಹೋಗಿಬಿಡುತ್ತದೆ. ನಿಮಗೂ ಕೂಡ ಈ ರೀತಿ ಮದುವೆಯಲ್ಲಿ ವಿಷಯದಲ್ಲಿ ಬಹಳ ಅಡೆತಡೆಗಳು ಆಗುತ್ತಿತ್ತು ಮದುವೆ ವಿಡಂಬ ಆಗುತ್ತಿದ್ದರೆ ನೀವು ಕೆಲ ವಿಷಯಗಳ ಬಗ್ಗೆ ಗಮನ ಹರಿಸಲೇಬೇಕು.

ಮೊದಲಿಗೆ ನಿಮ್ಮ ಪ್ರಯತ್ನವು ನೂರಕ್ಕೆ ನೂರಷ್ಟಿದ್ದು ನಿಮಗೆ ತಕ್ಕನಾದ ಪ್ರತಿಫಲ ಸಿಗುತ್ತಿಲ್ಲ ಮತ್ತು ಬಹಳ ನಕರಾತ್ಮಕವಾದ ಪರಿಣಾಮಗಳನ್ನು ಪಡೆಯುತ್ತಿದ್ದೀರ ಅಂದರೆ ಸೂಕ್ತ ಜೋತಿಷ್ಯ ಶಾಸ್ತ್ರಜ್ಞರ ಬಳಿ ಹೋಗಿ ನಿಮ್ಮ ಜಾತಕದ ವಿಮರ್ಶೆ ಮಾಡಿಸಬೇಕು. ನಿಮಗೆ ಕಂಕಣ ಯೋಗ ಯಾವಾಗ ಇದೆ ಎಂದು ಕೇಳಿ ತಿಳಿದುಕೊಳ್ಳಬೇಕು ಮತ್ತು ನಿಮ್ಮ ಜಾತಕದಲ್ಲಿ ಗುರುಬಲ ಬಲವಾಗಿದೆಯೇ ಎಂದು ತಿಳಿದುಕೊಳ್ಳಬೇಕು,

ಗುರುಬಲ ಇಲ್ಲದೆ ಇಲ್ಲದಿದ್ದರೆ ಮದುವೆ ಆಗುವುದು ಕ’ಷ್ಟ ಹಾಗೆಯೇ ಜಾತಕದಲ್ಲಿ ಮಂಗಳ ಸ್ಥಾನ ಎಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಮಂಗಳನ ಸ್ಥಾನ ನೀಚವಾಗಿದ್ದಾಗ ಕೂಡ ಮದುವೆಗಳು ಮುರಿದು ಬಿಡುತ್ತವೆ. ಕುಜ ದೋಷಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಇದ್ದರೆ ಅವುಗಳನ್ನು ಪರಿಹಾರ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮಗೆ ಮದುವೆಗೆ ಸಂಬಂಧಪಟ್ಟ ಹಾಗೆ ಇರುವ ಅಡೆತಡೆಗಳು ನಿವಾರಣೆಯಾಗಿ ಆದಷ್ಟು ಬೇಗ ವಿವಾಹ ಯೋಗ ಕೂಡಿಬರುತ್ತದೆ.

ಉಮಾ ಮಹೇಶ್ವರನ ಆರಾಧನೆ ಮಾಡುವುದರಿಂದ ಕೂಡ ಅನೇಕರಿಗೆ ಮದುವೆಗೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರ ಆಗುತ್ತದೆ. ಗಿರಿಜಾ ಕಲ್ಯಾಣ, ಶ್ರೀನಿವಾಸ ಕಲ್ಯಾಣ ಪಾರಾಯಣ ಮಾಡುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ರೀತಿ ವಿವಾಹ ವಿಳಂಬ ಸಮಸ್ಯೆಗಳನ್ನು ಪರಿಹರಿಸಲಾಗಿ ಏರ್ಪಡಿಸಲಾಗುವ ಸಾಮೂಹಿಕ ಯಾಗ ಯಜ್ಞಗಳಲ್ಲಿ ಭಾಗಿಯಾಗುವುದು,

ಸಾಧ್ಯವಾದರೆ ಶಕ್ತಿಯನುಸಾರ ಹೋಮ ಹವನಗಳನ್ನು ಮಾಡಿಸುವುದು ಇವುಗಳಿಂದ ಕೂಡ ನಿಮ್ಮ ಮದುವೆಗೆ ಇರುವ ಸಮಸ್ಯೆಗೆ ಪರಿಹಾರ ಆಗಿ ಒಳ್ಳೆಯ ಜೋಡಿ ಸಿಗುತ್ತಾರೆ. ಹಿರಿಯರ ಹಾಗೂ ಗುರುಗಳ ಸಲಹೆಯಂತೆ ಮುಂದುವರೆಯಿರಿ ಒಳ್ಳೆಯದಾಗುತ್ತದೆ.

ಶುಕ್ರವಾರ ಹೀಗೆ ಮಾಡಿದರೆ ಬೇಡ ಎಂದರು ಅದೃಷ್ಟ ಒಲಿದು ಬರುತ್ತದೆ, ಪ್ರತಿಯೊಬ್ಬರು ತಪ್ಪದೆ ಪಾಲಿಸಿ.!

 

ಶುಕ್ರವಾರ ಎನ್ನುವುದು ಲಕ್ಷ್ಮಿಯ ವಾರ. ನಮಗೆ ಹಣ ಆಸ್ತಿ ಸಂಪತ್ತು ಒಲಿದು ಬರಬೇಕು ಎಂದರೆ ತಾಯಿ ಮಹಾಲಕ್ಷ್ಮಿಯ ಅನುಗ್ರಹ ಕೃಪಾಕಟಾಕ್ಷ ಬೇಕೇ ಬೇಕು. ಹಾಗಾಗಿ ಶುಕ್ರವಾರ ತಾಯಿ ಮಹಾಲಕ್ಷ್ಮಿಯ ಇಷ್ಟವಾದ ವಾರ ಕೂಡ ಆಗಿರುವುದರಿಂದ ಆ ದಿನ ಭಯ ಭಕ್ತಿಯಿಂದ ಮಹಾಲಕ್ಷ್ಮಿ ಆರಾಧನೆಯನ್ನು ಮಾಡಿದರೆ, ತಾಯಿ ಪ್ರಸನ್ನರಾಗಿ ಸುಖ ಸಮೃದ್ಧಿ ಸಂಪತ್ತು ಕರುಣಿಸುತ್ತಾಳೆ.

ಲಕ್ಷ್ಮಿ ದೇವಿ ಆಶೀರ್ವಾದ ದೊರಕಿದವರಿಗೆ ಅವರ ದು’ರಾ’ದೃ’ಷ್ಟ’ವೆ’ಲ್ಲಾ ಅದೃಷ್ಟವಾಗಿ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗೇ ಈ ಶುಕ್ರವಾರಗಳಂದು ಮಹಾಲಕ್ಷ್ಮಿಗೆ ಮೆಚ್ಚುಗೆ ಆಗುವ ರೀತಿ ನಡೆದುಕೊಂಡು ಆಕೆಯ ಅನುಗ್ರಹ ಪಡೆದು ಅನೇಕರು ತಮ್ಮ ಬದಲು ಬದಲಾಯಿಸಿಕೊಂಡಿರುವ ಉದಾಹರಣೆಗಳು ಕೂಡ ಇವೆ. ಹಾಗಾಗಿ ನೀವು ಸಹ ಜೀವನದಲ್ಲಿ ಯಶಸ್ಸು ಹೊಂದಬೇಕು ಹಣಕಾಸಿನ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರೆ ಶುಕ್ರವಾರದ ದಿನದಂದು ತಪ್ಪದೆ ಈ ಕೆಲಸಗಳನ್ನು ಮಾಡಿ.

* ಶುಕ್ರವಾರದ ದಿನದಂದು ಮಾತ್ರವಲ್ಲದೆ ಪ್ರತಿದಿನ ಕೂಡ ಈ ಒಂದು ಆಚರಣೆ ಮಾಡಿದರೆ ಬಹಳ ಶುಭ ಫಲಗಳು ಸಿಗುತ್ತವೆ. ಅದರಿಂದ ಬೆಳಗ್ಗೆ ಹಾಗೂ ರಾತ್ರಿ ಮನೆಯಲ್ಲಿ ದೀಪ ಹಚ್ಚಿ ಪೂಜೆ ಮಾಡಬೇಕು ಮತ್ತು ವಿಶೇಷವಾಗಿ ಶುಕ್ರವಾರದಂದು ತುಳಸಿ ಗಿಡದ ಬಳಿ ತುಪ್ಪದ ದೀಪ ಹಚ್ಚಿ ಇಟ್ಟು ಶ್ರೀ ವಾಸುದೇವಾಯ ನಮಃ ಎನ್ನುವ ಮಂತ್ರವನ್ನು ಎರಡು ಬಾರಿ ಹೇಳಬೇಕು ಹೀಗೆ ಹೇಳುವುದರಿಂದ ಮಹಾವಿಷ್ಣು ಹಾಗೂ ತಾಯಿ ಮಹಾಲಕ್ಷ್ಮಿ ಇಬ್ಬರ ಆಶೀರ್ವಾದ ಕೂಡ ದೊರಕುತ್ತದೆ.

* ಮನೆಯಲ್ಲಿ ಶ್ರೀ ಕೃಷ್ಣ ವಿಗ್ರಹ ಇದ್ದರೆ ಇದಕ್ಕೆ ದಕ್ಷಿಣಾವರ್ತಿ ಶಂಖದಿಂದ ಅಭಿಷೇಕ ಮಾಡಿ, ಇದರಿಂದ ಮನೆಯ ಸದಸ್ಯರಿಗೆ ಯಾವುದೇ ರೋಗದ ರುಜಿನಗಳಿದ್ದರೂ ಗುಣವಾಗುತ್ತದೆ ಮತ್ತು ಶ್ರೀ ಮಹಾಲಕ್ಷ್ಮಿಯ ಆಶೀರ್ವಾದ ಅಖಂಡವಾಗಿ ದೊರೆಯುತ್ತದೆ.

* ಶುಕ್ರವಾರದಂದು ಪೂಜೆ ಮಾಡುವ ಹಿಂದಿನ ದಿನ ಗುರುವಾರ ಮಾಮೂಲಿಯಂತೆ ಪೂಜೆ ಮಾಡಿ ಹಳದಿ ಧಾನ್ಯಗಳನ್ನು ದಾನ ಮಾಡಿದರೆ ಆಗಲು ಕೂಡ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

* ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಅಥವಾ ಹೆಚ್ಚು ಹಣಕಾಸಿನ ಆಕರ್ಷಣೆ ಮಾಡಲು ಬಯಸುವವರು ಶುಕ್ರವಾರ ಮಧ್ಯರಾತ್ರಿ ಕೆಂಪುವಸ್ತ್ರ ಧರಿಸಿ ಏಕಾಂಗಿಯಾಗಿ ಕುಳಿತು ಎದುರುಗಡೆ 10 ದೀಪಗಳನ್ನು ಹಚ್ಚಿ 10 ಕವಡೆಯನ್ನು ತೆಗೆದುಕೊಂಡು ಪ್ರತಿ ಕವಡೆಗೂ ಅರಿಶಿಣ ಕುಂಕುಮ ಹಚ್ಚಿ ಕಮಲದ ಬೀಜಗಳ ಮಾಲೆಗಳನ್ನು ಹಿಡಿದು ಓಂ ಹ್ರೀಂ ಶ್ರೀಂ ಶ್ರೀ ಐಂ ಫಟ್ ಮಂತ್ರವನ್ನು ಐದು ಬಾರಿ ಭಕ್ತಿಯಿಂದ ಪಠಿಸಿ ನಂತರ ಪೂಜೆಗೆ ಇಡಲಾಗಿದ್ದ ಕವಡೆಗಳನ್ನು ತೆಗೆದುಕೊಂಡು ನೀವು ಹಣ ಇಡುವ ಡಬ್ಬದಲ್ಲಿ ಹಾಕಿ ಇಡಿ. ಆಶ್ಚರ್ಯಕರ ರೀತಿಯಲ್ಲಿ ನಿಮ್ಮ ಹಣಕಾಸಿನ ಸಮಸ್ಯೆಗಳು ಬಗ್ಗೆ ಹರಿದು ಆರ್ಥಿಕವಾಗಿ ಸದೃಢರಾಗುತ್ತೀರಿ.

* ಎಷ್ಟು ದುಡಿದರೂ ಹಣ ಉಳಿಯುತ್ತಿಲ್ಲ ಎನ್ನುವವರು ಶುಕ್ರವಾರದಂದು ಪೂಜೆ ಮಾಡುವಾಗ ಸ್ವಲ್ಪ ಹಣವನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡಿ ನಂತರ ಆ ಹಣವನ್ನು ತೆಗೆದುಕೊಂಡು ಹಣ ಇಟ್ಟುಕೊಂಡು ಡಬ್ಬದಲ್ಲಿ ಅಥವಾ ನಿಮ್ಮ ಪರ್ಸ್ ಗಗಳಲ್ಲಿ ಇಟ್ಟುಕೊಳ್ಳಿ. ಈ ಹಣದಿಂದ ಹಣದ ಆರ್ಕರ್ಷಣೆ ಹೆಚ್ಚಾಗುತ್ತದೆ ಹಾಗೂ ಹಣ ನಿಮ್ಮ ಬಳಿ ಹೆಚ್ಚು ದಿನ ಉಳಿಯುವಂತಾಗುತ್ತದೆ.

* ಅದೃಷ್ಟವನ್ನು ಹೆಚ್ಚಿಸಿಕೊಳ್ಳಲು ಬಯಸುವವರು ಪ್ರತಿದಿನ ಈ ಒಂದು ಮಂತ್ರವನ್ನು ಭಕ್ತಿಯಿಂದ 51 ಬಾರಿ ಜಪಿಸಿ ಈ ಮಂತ್ರ ಹೀಗಿದೆ.
ಮಂತ್ರ: ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀ ಕೃಷ್ಣಾಯ ಗೋವಿಂದಾಯ ಗೋಪಿಜನಾ ವಲ್ಲಭಾಯ ಶ್ರೀಂ ಶ್ರೀಂ ಶ್ರೀ.

ನರುಳ್ಳಿ, ಸ್ಕಿನ್ ಟ್ಯಾಗ್ ಗುಣಮಾಡುವ ಅದ್ಭುತ ಮನೆಮದ್ದು ಇದು.!

0

 

ಕೆಲವರಿಗೆ ಚರ್ಮದ ಮೇಲೆ ಗಂಟುಗಂಟಾಗಿರುತ್ತದೆ ಇದನ್ನು ಆಡು ಭಾಷೆಯಲ್ಲಿ ನರಹುಲಿ, ನರುಳ್ಳಿ ಎಂದು ಕರೆಯುತ್ತಾರೆ. ಸ್ಕಿನ್ ಟ್ಯಾಗ್ ಎಂದೂ ಕರೆಯಲಾಗುವ ಇದು, ಒಂದು ರೀತಿಯ ಚರ್ಮ ಸಮಸ್ಯೆ. ಯಾಕೆಂದರೆ ಚರ್ಮದ ಮೇಲೆ ಇರುವ ಹೆಚ್ಚಿನ ಜೀವಕೋಶಗಳ ರಚನೆಯಂತೆ ಇದು ಚರ್ಮಕ್ಕೆ ಅಂಟಿಕೊಂಡಿರುತ್ತದೆ.

ಈ ರೀತಿ ನರುಳ್ಳಿ ಆಗುವುದರಿಂದ ಅವರ ಮುಖ ಹಾಳಾಗುತ್ತದೆ ಕೆಲವರಿಗೆ ಮುಖದ ಮೇಲೆ ಕೆಲವರಿಗೆ ಹೊಟ್ಟೆ ಭಾಗದಲ್ಲಿ ಇನ್ನು ಕೆಲವರಿಗೆ ಅತಿ ಹೆಚ್ಚಾಗಿ ಕುತ್ತಿಗೆಯ ಭಾಗದಲ್ಲಿ ಕೈಕಾಲುಗಳಲ್ಲಿ ಹೀಗೆ ಎಲ್ಲಾ ಭಾಗದಲ್ಲೂ ಕೂಡ ನರುಳ್ಳಿಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಕೆಲವರು ಲೇಸರ್ ಚಿಕಿತ್ಸೆ ಮೂಲಕ ಗುಣಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಆದರೆ ಒಂದು ಅಥವಾ ಎರಡು ಇದ್ದರೆ ಇದನ್ನು ಸುಲಭವಾಗಿ ಗುಣ ಮಾಡಬಹುದು ಕೆಲವರಿಗೆ ಮೈ ಪೂರ್ತಿ ಇದೇ ರೀತಿ ಆಗಿರುವುದರಿಂದ ಅದಕ್ಕೆ ಲೇಸರ್ ಚಿಕಿತ್ಸೆ ಮಾಡಿಸಲು ಆಗುವುದಿಲ್ಲ ಮತ್ತು ಭವಿಷ್ಯದಲ್ಲಿ ಈ ರೀತಿಯ ಸಮಸ್ಯೆಗಳಿಗೆ ಲೇಸರ್ ಚಿಕಿತ್ಸೆಗೆ ಒಳಗಾದವರಲ್ಲಿ ಚರ್ಮ ಸಮಸ್ಯೆಗಳು ಮತ್ತು ಇನ್ನಿತರ ಸೈಡ್ ಎಫೆಕ್ಟ್ ಉಂಟಾಗುವ ಸಾಧ್ಯತೆಗಳು ಕೂಡ ಇರುತ್ತವೆ.

ಅದಕ್ಕಾಗಿ ಸ್ಕಿನ್ ಟ್ಯಾಗ್ ಇರುವವರು ಈಗ ನಾವು ಹೇಳುವ ಈ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ ನೋಡಿ ನೀವೇ ಆಶ್ಚರ್ಯ ಪಡುವ ರೀತಿಯಲ್ಲಿ ಕೇವಲ ಒಂದೇ ವಾರದಲ್ಲಿ ಇದು ಸಂಪೂರ್ಣ ಗುಣವಾಗಿ ಹೋಗಿರುತ್ತದೆ. ಯಾವುದೇ ಕಾಯಿಲೆ ಆಗಿದ್ದರೂ ಕೂಡ ಈ ರೀತಿ ಆಗಲು ಕಾರಣ ಏನು ಎನ್ನುವುದನ್ನು ಅರಿತುಕೊಂಡರೆ ಆ ಕಾಯಿಲೆ ಅರ್ಧ ಗುಣವಾತಂತೆ.

ಈ ರೀತಿ ಉಂಟಾಗಲು ಕಾರಣ ದೇಹದಲ್ಲಿನ ಅಜೀರ್ಣತೆ ಹಾಗೂ ಮಲಬದ್ಧತೆ ಕಾರಣ ಎಂದು ಹೇಳಬಹುದು. ದೇಹದಲ್ಲಿ ಅಜೀರ್ಣತೆ ಹಾಗೂ ಮಲಬದ್ಧತೆ ಆದಾಗ ಟಾಕ್ಸಿನ್ ಅಂಶಗಳು ಹೆಚ್ಚಾಗುತ್ತದೆ, ದೇಹವು ಆ ಟಾಕ್ಸಿನ್ ಅಂಶವನ್ನು ಹೊರಹಾಕಲು ಈ ರೀತಿ ಸ್ಕಿನ್ ಟ್ಯಾಗ್ ಉಂಟಾಗುವ ಸಾಧ್ಯತೆಗಳು ಇರುತ್ತವೆ.

ಇವುಗಳು ಸ’ತ್ತಿರುವ ಜೀವಕೋಶಗಳು ಆಗಿರುತ್ತವೆ, ಆದರೆ ಚರ್ಮಕ್ಕೆ ಹೊಂದಿಕೊಂಡಿರುವುದರಿಂದ ಸುಲಭವಾಗಿ ಉದುರಿ ಹೋಗುವುದಿಲ್ಲ. ಕೆಲವೊಮ್ಮೆ ಕಣ್ಣುಗಳ ಮೇಲೆ ಈ ರೀತಿ ಸೂಕ್ಷ್ಮವಾದ ಜಾಗಗಳಲ್ಲೂ ಕೂಡ ಈ ಸ್ಕಿನ್ ಟ್ಯಾಗ್ ಉಂಟಾಗಿರುತ್ತದೆ ಇದರಿಂದ ಕಣ್ಣುಗಳಿಗೂ ಬಹಳ ಡಿಸ್ಟರ್ಬ್ ಆಗುತ್ತಿರುತ್ತದೆ.

ಕಣ್ಣಿನ ಪ್ರದೇಶಕ್ಕೆ ಮನೆ ಮದ್ದು ಹಾಕಲು ಅಥವಾ ಚಿಕಿತ್ಸೆಗೆ ಒಳಗಾಗಲು ಖಂಡಿತವಾಗಿಯೂ ಭ’ಯ ಇದ್ದೇ ಇರುತ್ತದೆ. ಈ ಬಗ್ಗೆ ಬಹಳ ಎಚ್ಚರಿಕೆವಹಿಸಿ ನ್ಯಾಚುರಲ್ ಆಗಿ ಇವುಗಳನ್ನು ಗುಣಪಡಿಸಿಕೊಳ್ಳಲು ಪ್ರಯತ್ನಿಸಬೇಕು, ಅದಕ್ಕಾಗಿ ಒಂದು ಅದ್ಭುತ ಮನೆ ಮದ್ದಿನ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಸುಣ್ಣ, ಅಡಿಗೆ ಸೋಡಾ, ಪಟ್ಟಕ ಹಾಗೂ ನಿಂಬೆರಸ ಈ ನಾಲ್ಕನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪೇಸ್ಟ್ ಮಾಡಿ ಅದನ್ನು ನರುಳ್ಳಿ ಮೇಲೆ ಅಪ್ಲೈ ಮಾಡುತ್ತಾ ಬರಬೇಕು. ಯಾವುದೇ ಕಾರಣಕ್ಕೂ ಇದನ್ನು ಚರ್ಮದ ಇತರ ಭಾಗದಲ್ಲಿ ಹಾಕಬಾರದು ಏಕೆಂದರೆ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ ಮತ್ತು ಕಣ್ಣಿನ ಭಾಗಕ್ಕೆ ಖಂಡಿತವಾಗಿಯೂ ಇದನ್ನು ಹಾಕಬಾರದು.

ಇದನ್ನು ಹೊರತುಪಡಿಸಿ ದೇಹದ ಯಾವುದೇ ಭಾಗದಲ್ಲಿ ನರಳ್ಳಿ ಆಗಿದ್ದರು ಅದರ ಮೇಲೆ ದಿನದಲ್ಲಿ ಎರಡು ಬಾರಿ ಈ ಔಷಧಿ ಹಾಕಿ ನೋಡಿ ಒಂದೇ ವಾರದಲ್ಲಿ ಇದು ತಾನಾಗೆ ಉದುರಿ ಹೋಗುತ್ತದೆ. ಒಂದು ವೇಳೆ ಇದನ್ನು ಮಾಡಲು ತಿಳಿಯದವರು ಆಯುರ್ವೇದ ಅಂಗಗಳಲ್ಲಿ ಸಿಗುವ ನರುಳ್ಳಿ ಲೇಪನವನ್ನು ಕೂಡ ತೆಗೆದುಕೊಂಡು ಹಾಕಬಹುದು ಅದು ಕೂಡ ಅಷ್ಟೇ ಪರಿಣಾಮಕಾರಿಯಾಗಿ ರಿಸಲ್ಟ್ ನೀಡುತ್ತದೆ.

ಗ್ಯಾ್ಸ್ಟ್ರಿಕ್ ಶಾಶ್ವತವಾಗಿ ಗುಣ ಮಾಡಿಕೊಳ್ಳಲು ಈ ಐದು ಮನೆ ಮದ್ದುಗಳನ್ನು ಪಾಲಿಸಿ…

 

ಗ್ಯಾಸ್ಟಿಕ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕಾಮನ್ ಆಗಿಬಿಟ್ಟಿದೆ. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರಿಗೆ ಎದೆ ಉರಿ, ಹುಳಿತೇಗು, ಹೊಟ್ಟೆ ಉಬ್ಬರ, ಹೊಟ್ಟೆ ನೋವು ಸ್ವಲ್ಪ ಮಸಾಲೆ ಪದಾರ್ಥಗಳನ್ನು ತಿಂದರೂ ಕೂಡ ರಿಯಾಕ್ಟ್ ಆಗುವುದು ಇನ್ನೂ ಮುಂತಾದ ಅನೇಕ ಲಕ್ಷಣಗಳು ಇರುತ್ತವೆ. ಈ ಗ್ಯಾಸ್ಟಿಕ್ ಎನ್ನುವುದು ಮನುಷ್ಯನಿಗೆ ಬಹಳಷ್ಟು ಕಾಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರಿಗೆ ಇತರ ಹಿಂದೆಯೇ BP, ಶುಗರ್, ಥೈರಾಯಿಡ್ ಮುಂತಾದ ಡಿಸ್ ಆರ್ಡರ್ ಗಳು ಕೂಡ ಭಾವಿಸುತ್ತವೆ. ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾತ್ರೆಗಳನ್ನು ಅಥವಾ ರಾಸಾಯನಿಕಯುಕ್ತ ಔಷಧಿಗಳನ್ನು ಸೇವಿಸುವುದರಿಂದ ಕಿಡ್ನಿ, ಲಿವರ್, ಹಾರ್ಟ್, ಬ್ರೈನ್ ಎಲ್ಲದಕ್ಕೂ ಕೂಡ ಅದು ಡ್ಯಾಮೇಜ್ ಮಾಡುತ್ತದೆ. ಅದರ ಬದಲು ನ್ಯಾಚುರಲ್ ಆಗಿ ಗುಣಪಡಿಸಿಕೊಳ್ಳಲು ನೋಡಬೇಕು. ಹಾಗಾಗಿ ಗ್ಯಾಸ್ಟಿಕ್ ಸಮಸ್ಯೆ ಆಗದಂತೆ ತಡೆಯಲು ಅಥವಾ ಈಗಾಗಲೇ ಗ್ಯಾಸ್ಟಿಕ್ ನಿಂದ ಬಳಲುತ್ತಿದ್ದರೆ ಅವುಗಳನ್ನು ಶೀಘ್ರವಾಗಿ ಗುಣ ಮಾಡಿಕೊಳ್ಳಲು ಈಗ ನಾವು ಹೇಳುವ ಈ ಮನೆಮದ್ದುಗಳನ್ನು ಪಾಲಿಸಿ.

* ಗ್ಯಾಸ್ಟ್ರಿಕ್ ಸಮಸ್ಯೆಯಾಗಲು ಮುಖ್ಯ ಕಾರಣ ಜಂಕ್ ಫುಡ್, ಫಾಸ್ಟ್ ಫುಡ್ ಗಳ ಸೇವನೆ, ಬೇಕರಿ ಪದಾರ್ಥಗಳ ಸೇವನೆ, ಅತಿ ಮಸಾಲೆಯುಕ್ತ ಆಹಾರ ಪದಾರ್ಥಗಳು ಸೇವನೆ ಇವುಗಳನ್ನು ಬಿಡಬೇಕು. ಅತಿ ಹೆಚ್ಚು ಮಾಂಸಹಾರ ಸೇವನೆ ಮಾಡುವುದು, ಕಾಫಿ ಹಾಗೂ ಚಹಾ ಸೇವನೆ, ಧೂಮಪಾನ ಮಧ್ಯಪಾನಂದ ಸಾರಾಯಿ ಗುಟ್ಕಾ ಈ ದು’ಶ್ಚ’ಟಗಳ ಅಭ್ಯಾಸ ಕೂಡ ಗ್ಯಾಸ್ಟಿಕ್ ಬರಲು ಕಾರಣವಾಗುತ್ತದೆ. ಇವುಗಳನ್ನು ಬಿಟ್ಟುಬಿಡಬೇಕು ಜೊತೆಗೆ ತಡವಾಗಿ ಮಲಗುವುದು ಮತ್ತು ತಡವಾಗಿ ಏಳುವುದು, ತಡವಾಗಿ ಆಹಾರ ಸೇವಿಸುವುದು ಕೂಡ ಗ್ಯಾಸ್ಟ್ರಿಕ್ ಸಮಸ್ಯೆಗೆ ಮುಖ್ಯ ಕಾರಣ ಇದನ್ನು ತಪ್ಪಿಸಿ ಸರಿಯಾದ ಆಹಾರ ಪದ್ಧತಿ ಮತ್ತು ಜೀವನ ಕ್ರಮವನ್ನು ರೂಢಿಸಿಕೊಳ್ಳಬೇಕು.

* ಹಸಿರು ಸೊಪ್ಪು ತರಕಾರಿಗಳು, ಹಣ್ಣುಗಳು ಇವುಗಳು ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರಬೇಕು ಆದಷ್ಟು ಕಡಿಮೆ ಎಣ್ಣೆ ಬಳಕೆ ಹಾಗೂ ಕಡಿಮೆ ಮಸಾಲೆ ಪದಾರ್ಥಗಳ ಬಳಕೆ ಗ್ಯಾಸ್ಟ್ರಿಕ್ ‌ಬರದಂತೆ ತಡೆಯುತ್ತದೆ.

* ನೀವೇನಾದರೂ ಈಗಾಗಲೇ ಗ್ಯಾಸ್ಟ್ರಿಕ್ ಗೆ ತುತ್ತಾಗಿ ಬಹಳ ಕ’ಷ್ಟ ಪಡುತ್ತಿದ್ದರೆ ಬೆಳಗ್ಗೆ ಎದ್ದ ಕೂಡಲೇ ಈ ಒಂದು ಮನೆ ಮದ್ದನ್ನು ಸೇವಿಸಿ. 3-4 ಬೆಟ್ಟದ ನೆಲ್ಲಿಕಾಯಿ ತೆಗೆದು ಕೊಂಡು ಅದನ್ನು ಜ್ಯೂಸ್ ಮಾಡಿ ಒಂದು ಲೋಟ ಆಗುವಷ್ಟು ನೀರು ಮಿಕ್ಸ್ ಮಾಡಿ ಇದಕ್ಕೆ ಪುದೀನವನ್ನು ಚಚ್ಚಿ ಅರ್ಧ ಚಮಚದಷ್ಟು ಪುದೀನ ರಸ ಹಾಗೂ ಒಂದು ಚಮಚದಷ್ಟು ಶುಂಠಿ ರಸವನ್ನು ಸೇರಿಸಿ, 4-5 ಚಿಟಕಿ ಸೈಂಧವ ಲವಣ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ, ಈ ರೀತಿ ಮಾಡುವುದರಿಂದ ಗ್ಯಾಸ್ಟಿಕ್ ಕಂಟ್ರೋಲ್ ಗೆ ಬರುತ್ತದೆ.

* ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಮಧ್ಯಾಹ್ನದ ಸಮಯ ದಾಳಿಂಬೆ ಹಣ್ಣಿನ ರಸ ಅಥವಾ ಕಪ್ಪು ದ್ರಾಕ್ಷಿ ಹಣ್ಣಿನ ರಸವನ್ನು ಸೇವಿಸುತ್ತಾ ಬರುವುದರಿಂದ ಕಂಟ್ರೋಲ್ ಆಗುತ್ತದೆ ಆದರೆ ಇದಕ್ಕೂ ಕೂಡ ಒಂದು ಚಮಚ ಶುಂಠಿ ರಸ ಹಾಗೂ ಚಿಟಿಕೆ ಸೈಂಧವ ಲವಣ ಹಾಕಿಯೇ ಸೇವಿಸಬೇಕು.

* ರಾತ್ರಿ ಸಮಯ 10 ಬಿಲ್ಪತ್ರೆಯ 30 ದಳಗಳನ್ನು ತೆಗೆದುಕೊಂಡು ಅದನ್ನು ನುಣ್ಣಗೆ ಪೇಸ್ಟ್ ಮಾಡಿ ಇದಕ್ಕೆ ಒಂದು ಲೋಟ ನೀರು ಹಾಕಿ ಜ್ಯೂಸ್ ತಯಾರಿಸಿಕೊಳ್ಳಿ, ಇದನ್ನು ರಾತ್ರಿ ಮಲಗುವಾಗ ತಪ್ಪದೆ ಸೇವಿಸಿ ಅಥವಾ ಇದರ ಬದಲು ಗರಿಕೆಯ ಜ್ಯೂಸ್ ಕೂಡ ಸೇರಿಸಬಹುದು. ಹೀಗೆ ಮಾಡುವುದರಿಂದ ಕೂಡ ಗ್ಯಾಸ್ಟ್ರಿಕ್ ಬಹಳ ಬೇಗ ಗುಣವಾಗುತ್ತದೆ.

https://youtu.be/FtrTI9BCgeA?si=R0h3FBFTXI0trC_d

ಮದುವೆ ಮಾಡುವಾಗ ಹೆಣ್ಣಿಗಿಂತ ಗಂಡಿನ ವಯಸ್ಸು ಹೆಚ್ಚು ಇರಬೇಕು ಅನ್ನೋದು ಯಾಕೆ ಗೊತ್ತ.? ಇಲ್ಲದೆ ನೋಡಿ ನಿಮಗೆ ತಿಳಿಯದ ನಿಜವಾದ ವೈಜ್ಞಾನಿಕ ಕಾರಣ.!

 

ನಮ್ಮ ಭಾರತೀಯ ಸಂಸ್ಕೃತಿ ಪ್ರಕಾರ ಆಗುವ ಮದುವೆಗಳನ್ನು ನೋಡಿದಾಗ ಸಾಮಾನ್ಯವಾಗಿ ಹೆಣ್ಣಿನ ವಯಸ್ಸಿಗಿಂತ ಗಂಡಿನ ವಯಸ್ಸು ಹೆಚ್ಚಿಗೆ ಇರುತ್ತದೆ. ಮದುವೆಯಾಗಲು ಗಂಡಿನ ಕನಿಷ್ಠ ವಯಸ್ಸು ಗಂಡು ಮಕ್ಕಳಿಗೆ 21 ವರ್ಷಗಳಿದ್ದರೆ ಹೆಣ್ಣು ಮಕ್ಕಳಿಗೆ 18 ವರ್ಷವನ್ನು ನಿಗಧಿಪಡಿಸಲಾಗಿದೆ.

ಪುರಾತನ ಕಾಲದಿಂದಲೂ ಕೂಡ ಮದುವೆ ಸಂದರ್ಭದಲ್ಲಿ ಹೆಣ್ಣುಗಂಡಿಗಿಂತ ಚಿಕ್ಕವನಾಗಿರುವ ಉದಾಹರಣೆಗಳನ್ನೇ ನಾವು ಹೆಚ್ಚಾಗಿ ಕೇಳಿದ್ದೇವೆ ನೋಡಿದ್ದೇವೆ. ಯಾವಾಗಲೂ ಯಾಕೆ ಗಂಡು ಮಕ್ಕಳು ಹೆಣ್ಣುಮಕ್ಕಳಿಗಿಂತ ದೊಡ್ಡವರಾಗಿರಬೇಕು ಎನ್ನುವ ಪ್ರಶ್ನೆ ಮೂಡದೆ ಇರದು ಇದಕ್ಕೆ ವಿರುದ್ಧವಾಗಿ ಹೆಣ್ಣು ಮಕ್ಕಳು 2 ರಿಂದ 5 ವರ್ಷ ದೊಡ್ಡವರಾಗಿ ಕೂಡ ಮದುವೆ ಆಗಿರುವ ಉದಾಹರಣೆಗಳು ಕೂಡ ಇವೆ.

ಆದರೆ ಶೇಕಡವಾರು ತೆಗೆದುಕೊಂಡಾಗ ಯಾವಾಗಲೂ ಮದುವೆಗಳಲ್ಲಿ ಗಂಡು ಮಕ್ಕಳೇ ಹೆಣ್ಣುಮಕ್ಕಳಿಗಿಂತ ದೊಡ್ಡವರಾಗಿರುತ್ತಾರೆ. ಇವರಿಬ್ಬರ ನಡುವೆ ಅತಿ ಹೆಚ್ಚು ಅಂತರವಿರುವ ಉದಾಹರಣೆಗಳು ಇವೆ. ವೈಜ್ಞಾನಿಕ ಹಾಗೂ ಸಾಮಾಜಿಕವಾಗಿ ಇದರ ಹಿಂದಿನ ಕಾರಣ ಏನಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಇದ್ದರೆ ಈ ಅಂಕಣವನ್ನು ಕೊನೆಯವರೆಗೂ ಓದಿ.

ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಬಹಳ ಬೇಗ ಮೆಚ್ರುರ್ಡ್ ಆಗುತ್ತಾರೆ. ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಕೂಡ ತಮ್ಮ ವಯಸ್ಸಿನ ಗಂಡು ಮಕ್ಕಳಿಗಿಂತ 3-4 ವರ್ಷ ದೊಡ್ಡವರಂತೆ ಹೆಣ್ಣು ಮಕ್ಕಳು ಯಾವಾಗಲೂ ವರ್ತಿಸುತ್ತಾರೆ ಹಾಗೂ ನಡೆದುಕೊಳ್ಳುತ್ತಾರೆ.

ಪ್ರಾಕೃತಿಕವಾಗಿ ಈ ರೀತಿ ಅವರು ಸ್ಪಂದಿಸುವುದರಿಂದ ಅವರಿಗಿಂತ 2 ರಿಂದ 7 ವರ್ಷ ಹಿರಿಯರೊಂದಿಗೆ ಮದುವೆ ಮಾಡಿದಾಗ ಅವರ ಮನಸ್ಥಿತಿಗಳು ಸರಿಯಾಗಿ ಹೊಂದಿಕೊಳ್ಳುತ್ತದೆ, ಇಬ್ಬರಲ್ಲೂ ಹೊಂದಾಣಿಕೆ ಇರುತ್ತದೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಷಯದಲ್ಲಿ like mind peoples ರೀತಿ ಆಗದೆ right mind peoples ರೀತಿ ಸ್ಪಂದಿಸುತ್ತಾರೆ ಎನ್ನುವ ದೃಷ್ಟಿಕೋನದಿಂದ ಯೋಚಿಸಿ ಈ ರೀತಿಯಾಗಿ ಮದುವೆಗಳನ್ನು ಮಾಡುತ್ತಿದ್ದರು ಎಂದು ಒಪ್ಪಿಕೊಳ್ಳ ಬಹುದು.

ವೃದ್ಯಾಪದಲ್ಲಿ ಆರೈಕೆ ಹಾಗೂ ಅವಲಂಬನೆಯ ದೃಷ್ಟಿಕೋನದಿಂದ ಕೂಡ ಗಂಡು ಮಕ್ಕಳ ವಯಸ್ಸಿಗಿಂತ ಹೆಣ್ಣು ಮಕ್ಕಳ ವಯಸ್ಸು ಕಡಿಮೆ ಇರುವಂತೆ ಮದುವೆ ಮಾಡಲಾಗುತ್ತದೆ. ವೃದ್ಯಾಪದಲ್ಲಿ ಅನಾರೋಗ್ಯಗಳು ಆದಾಗ ಅಥವಾ ವಯಸ್ಸಾದ ಸಂದರ್ಭದಲ್ಲಿ ಅವರ ಶುಶ್ರೂಷೆ ಮಾಡಲು ಹೆಂಡತಿ ಅವರಿಗಿಂತ ಕಿರಿಯ ವಯಸ್ಸಿನವರಿಗಿದ್ದಾಗ ಅನುಕೂಲವಾಗುತ್ತದೆ.

ಇಬ್ಬರು ಸಮಾನ ವಯಸ್ಕರಾಗಿದ್ದಾಗ ಇಬ್ಬರು ಒಟ್ಟಿಗೆ ವೃದ್ಯಾಪಕ್ಕೆ ಹೋದರೆ ಇಬ್ಬರಿಗೂ ಮತ್ತೊಬ್ಬರ ಮೇಲೆ ಅವಲಂಬನೆಯಾಗುವ ಅಥವಾ ಯಾರು ಇಲ್ಲದೆ ಇಬ್ಬರೇ ಕ’ಷ್ಟ ಪಡುವ ಸಂದರ್ಭ ಬರಬಹುದು ಎನ್ನುವ ಉದ್ದೇಶದಿಂದಲೂ ಈ ರೀತಿ ಮಾಡುತ್ತಿದ್ದರು. ಇನ್ನು ವೈಜ್ಞಾನಿಕವಾದ ಕಾರಣಗಳನ್ನು ಹೇಳುವುದಾದರೆ ಹೆಣ್ಣು ಮಕ್ಕಳಲ್ಲಿ ಬಹಳಷ್ಟು ಹಾರ್ಮೋನ್ಸ್ ವೇರಿಯೇಷನ್ ಆಗುತ್ತಿರುತ್ತದೆ.

ಆದರೆ ಹೆಣ್ಣು ಮಕ್ಕಳ ವಯಸ್ಸಿನಲ್ಲಿ ಅದೇ ವಯಸ್ಸಿನ ಗಂಡು ಮಕ್ಕಳಲ್ಲಿ ಆ ರೀತಿಯ ಬೆಳವಣಿಗೆ ಆಗಿರುವುದಿಲ್ಲ. ಅವರಿಗಿಂತ ಮೂರ್ನಾಲ್ಕು ವರ್ಷಗಳಾದ ನಂತರ ಗಂಡು ಮಕ್ಕಳಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಈ ಉದ್ದೇಶದಿಂದ ಕೂಡ ಇಬ್ಬರಿಗೂ ಸರಿಹೊಂದುತ್ತದೆ ಎಂದು ವಯಸ್ಸಿಗಿಂತ ಹಿರಿಯರ ಜೊತೆಗೆ ಮದುವೆ ಮಾಡಲಾಗುತ್ತಿದೆ.

ಇಬ್ಬರು ಸಮಾನ ವಯಸ್ಕರಾಗಿದ್ದಾಗ ಇಬ್ಬರ ಮನಸ್ಥಿತಿ ಒಂದೇ ರೀತಿ ಇದ್ದು ಒಬ್ಬರ ನಿರ್ಧಾರ ಮತ್ತೊಬ್ಬರಿಗೆ ಆಕ್ಷೇಪಣೆ ಇಲ್ಲದೆ ಹೋಗಬಹುದು ಆಗ ತಪ್ಪು ನಿರ್ಧಾರಗಳಾಗುವ ಸಾಧ್ಯತೆ ಇರುತ್ತದೆ ಅಥವಾ ಇಬ್ಬರು ಒಂದೇ ವಯಸ್ಸಿನವರು ಆಗಿರುವುದರಿಂದ ಅತಿಯಾದ ಸಲಿಗೆ ಮುಂದಿನ ದಿನಗಳಲ್ಲಿ ಸಂಬಂಧ ಹಾಳಾಗುವ ಹಂತಕ್ಕೆ ತಲುಪುವ ಅ’ಪಾ’ಯಗಳು ಕೂಡ ಇರುತ್ತವೆ. ಈ ಎಲ್ಲಾ ಉದ್ದೇಶದಿಂದ ಹಿರಿಯರು ಈ ರೀತಿ ನಿರ್ಧಾರ ಮಾಡಿ ಲೆಕ್ಕಚಾರ ಹಾಕಿ ಮದುವೆಗಳನ್ನು ಏರ್ಪಡಿಸುತ್ತಿದ್ದರು.

 

ಹಲ್ಲಿ ಮೈ ಮೇಲೆ ಬಿದ್ದರೆ ಕೆಟ್ಟದಾಗುತ್ತದಾ.? ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿದ್ದರೆ ಒಳ್ಳೆಯದು ನೋಡಿ.!

 

ಹಲ್ಲಿ ಎನ್ನುವುದು ನಮ್ಮ ಹಿಂದುಗಳ ಪಾಲಿಗೆ ಗೋಡೆಯ ಮೇಲೆ ಇರುವ ಜೀವಿ ಮಾತ್ರ ಅಲ್ಲ, ಮನುಷ್ಯನಿಗೆ ಮುಂದೆ ಆಗಬಹುದಾದ ಅಪಾಯಗಳ ಅಥವಾ ಒಳಿತುಗಳ ಸೂಚನೆಯನ್ನು ಮೊದಲೇ ಕೊಟ್ಟು ಶಕುನ ಹೇಳುವ ಪ್ರಾಣಿ ಎಂದೇ ಭಾವಿಸಲಾಗಿದೆ.

ಈಗಲೂ ನಮ್ಮ ಮನೆಯಲ್ಲಿ ಹಿರಿಯರು ಹಲ್ಲಿ ಕಂಡರೆ ಮೈ ಮೇಲೆ ಬೀಳುತ್ತದೆ ಎಂದು ಭ’ಯ ಪಡುತ್ತಾರೆ ಜೊತೆಗೆ ಮಾತನಾಡುವಾಗ ಹಲ್ಲಿ ಲೊಚಗುಟ್ಟುವ ಶಬ್ದ ಕೇಳಿದಾಗ ಅದನ್ನು ಮುಂದುವರಿಸಬೇಕಾ ಬೇಡವ ಎನ್ನುವುದನ್ನು ನಿರ್ಧರಿಸುತ್ತಾರೆ ಎಂದರೆ ನಾವು ಎಷ್ಟು ಅದಕ್ಕೆ ಮಹತ್ವವಾದ ಸ್ಥಾನ ಕೊಟ್ಟಿದ್ದೇವೆ ಎನ್ನುವುದು ಅರ್ಥವಾಗುತ್ತದೆ.

ಯಾವುದಾದರೂ ಶುಭ ಸುದ್ದಿ ಬಗ್ಗೆ ಅಥವಾ ಮುಂದೆ ಮಾಡಬೇಕಾದ ಶುಭ ಕಾರ್ಯಗಳ ಮಧ್ಯೆ ಮಾತನಾಡಿದಾಗ ಹಲ್ಲಿ ಶಬ್ದ ಮಾಡಿದರೆ ಆ ಕಾರ್ಯ ಮಾಡುವುದು ಒಳ್ಳೆಯದು ಎಂದರ್ಥ ಇಷ್ಟು ಮಾತ್ರವಲ್ಲದೆ ಹಲ್ಲಿಯೂ ಯಾರ ಮೈ ಮೇಲೆಯೂ ಸುಮ್ಮನೆ ಬೀಳುವುದಿಲ್ಲ. ಒಂದು ವೇಳೆ ಅಕಸ್ಮಾತ್ ಆಗಿ ನಿಮ್ಮ ಮೈ ಮೇಲೆ ಹಲ್ಲಿ ಬಿದ್ದಿದೆ ಎಂದರೆ ಅದಕ್ಕೂ ಕೂಡ ಒಂದು ಅರ್ಥ ಇರುತ್ತದೆ, ಅದು ಸಹ ಶಕುನ ಎಂದು ಹೇಳಲಾಗುತ್ತದೆ.

ಇದನ್ನು ಎಲ್ಲ ಪಂಚಾಂಗಗಳಲ್ಲೂ ಕೂಡ ತಿಳಿಸಲಾಗಿದ್ದು ಗೌಳಿ ಶಾಸ್ತ್ರದಲ್ಲಿ ಹಲ್ಲಿ ಬಿದ್ದರೆ ಏನು ಶುಭ ಹಾಗು ಅಶುಭ ಫಲಗಳಿವೆ ದೇಹದ ಯಾವ ಭಾಗಕ್ಕೆ ಬಿದ್ದರೆ ಅದು ಯಾವುದರ ಸೂಚನೆ ಮತ್ತು ಹಲ್ಲಿ ಮೈ ಮೇಲೆ ಬಿದ್ದಾಗ ಅದರ ಪರಿಹಾರಕ್ಕಾಗಿ ಏನು ಮಾಡಬೇಕು ಎನ್ನುವುದನ್ನು ತಿಳಿಸಲಾಗಿದೆ. ಇದೇ ಮಾಹಿತಿಯನ್ನು ನಾವು ಇಂದು ಈ ಅಂಕಣದಲ್ಲೂ ಕೂಡ ಹಂಚಿಕೊಳ್ಳುತ್ತಿದ್ದೇವೆ.

ಹಲ್ಲಿ ಏನಾದರೂ ನಿಮ್ಮ ತಲೆಯ ಮೇಲೆ ಬಿದ್ದರೆ ನಿಮಗೆ ಪ್ರಾ’ಣಾ’ಪಾ’ಯ ಇದೆ ಎಂದು ಅರ್ಥ, ನೀವು ಬಹಳ ಎಚ್ಚರಿಕೆಯಿಂದ ಇರಬೇಕು. ನಿಮಗೆ ಅಪಘಾತ ಆಗಬಹುದು ಅಥವಾ ಇನ್ಯಾವುದೇ ರೀತಿಯಲ್ಲಿ ಪ್ರಾಣಕ್ಕೆ ಕಂಟಕ ಬರಬಹುದು. ಒಂದು ವೇಳೆ ಪಲ್ಲಿ ನಿಮ್ಮ ಮುಖದ ಮೇಲೆ ಬಿದ್ದರೆ ನಿಮಗೆ ಯಾವುದಾದರು ಒಂದು ದ್ರವ್ಯ ಒಲಿದು ಬರುತ್ತಿದೆ ಎಂದು ಅರ್ಥ.

ನೀವೇನಾದ್ರೂ ಮಲಗಿರುವಾಗ ಹಲ್ಲಿ ನಿಮ್ಮ ಕಣ್ಣುಗಳ ಮೇಲೆ ಬಿದ್ದು ಓಡಿ ಹೋಗಿದೆ ಎಂದರೆ ನೀವು ಇನ್ನೆಂದು ಕಾಣದ ಐಶ್ವರ್ಯವನ್ನು ಕಾಣುತ್ತೀರಿ, ಅದೃಷ್ಟ ದಿನಗಳು ಆರಂಭವಾಗುವುದರ ಸೂಚನೆ, ನಿಮ್ಮ ತೇಜಸ್ಸು ಹೆಚ್ಚಾಗಿ ನಿಮಗೆ ಎಲ್ಲೆಡೆ ಮಾನ್ಯತೆ ಸಿಗುತ್ತದೆ ಎನ್ನುವುದರ ಸೂಚನೆ ಆದರೆ ಒಂದು ವೇಳೆ ಹಲ್ಲಿಗಳು ನಿಮ್ಮ ತುಟಿಗಳ ಮೇಲೆ ಬಿದ್ದು ಓಡಿ ಹೋದರೆ ಅದು ಅಶುಭ ಫಲ ನೀವು ಕೂಡಿಟ್ಟ ಹಣವು ವ್ಯಯಿಸಿ ಹೋಗುತ್ತದೆ ಎನ್ನುವುದನ್ನು ಸೂಚಿಸುತ್ತದೆ.

ಬಲ ಭುಜದ ಮೇಲೆ ಹಲ್ಲಿ ಬಿದ್ದರೆ ಕಳ್ಳ ಕಾಕರಿಂದ ಕೆಡುಕಾಗಬಹುದು, ಅಮೂಲ್ಯವಾದ ವಸ್ತು ಒಂದನ್ನು ಕಳೆದುಕೊಳ್ಳುವ ಭ’ಯ’ದ ಪರಿಸ್ಥಿತಿ ಉಂಟಾಗುತ್ತದೆ. ಎದೆ ಮೇಲೆ ಬಿದ್ದರೂ ಕೂಡ ಯಶಸ್ಸು ಕೀರ್ತಿ ಲಾಭದ ಫಲ ಪ್ರಾಪ್ತಿಯಾಗುವ ಶುಭದ ಸೂಚನೆ. ಹೊಟ್ಟೆಯ ಮೇಲೆ ಬಿದ್ದರೆ ಧಾನ್ಯ ಲಾಭ, ಹೊಕ್ಕಳಿನ ಮೇಲೆ ಬಿದ್ದರೆ ತೀರ್ಥಯಾತ್ರೆ, ದೂರ ಪ್ರಯಾಣದ ಫಲ ಎಡದ ಮೊಣಕಾಲು ಕಾರ್ಯಸಿದ್ಧಿ ಕೈ ಕಾಲುಗಳ ಮೇಲೆ ಬಿದ್ದರೆ ದೂರ ಪ್ರಯಾಣದ ಸೂಚನೆಯಾಗಿದೆ.

ಇದರ ಕುರಿತ ವಿಶೇಷ ಸೂಚನೆ ಏನೆಂದರೆ ಹಲ್ಲಿಯೂ ದೇಹದ ಯಾವುದೇ ಭಾಗದ ಮೇಲೆ ಬಿದ್ದರೂ ಮೊದಲು ಶುದ್ಧವಾಗಿ ಸ್ಥಾನ ಮಾಡಬೇಕು ತಪ್ಪದೇ ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ. ಒಂದು ವೇಳೆ ಅಶುಭ ಫಲಗಳಾಗಿದ್ದರೆ ಶನೇಶ್ವರನ ದೇವಸ್ಥಾನಕ್ಕೆ ಹೋಗಿ ತಿಲತೈಲಾಭೀಷೇಕ ಪೂಜೆ ಮಾಡಿಸಿ ಅಥವಾ ಎಳ್ಳೆಣ್ಣೆ ಅರ್ಪಿಸಿ ದೀಪ ಹಚ್ಚಿ, ಮತ್ತು ಸಾಧ್ಯವಾದರೆ ಬೆಳ್ಳಿ ಚಿನ್ನ ಅಥವಾ ಪಂಚಲೋಹದಿಂದ ಹಲ್ಲಿ ವಿಗ್ರಹ ಮಾಡಿಸಿ ಫಲ ತಾಂಬೂಲ ಸಹಿತ ಅರ್ಹರಿಗೆ ದಾನ ಮಾಡಿ.

ರಕ್ತಹೀನತೆ ಇರುವವರಿಗೆ ದಿವ್ಯ ಔಷಧ ಇದು, ಎಷ್ಟು ಬೇಗ ರಕ್ತ ವೃದ್ಧಿಯಾಗುತ್ತದೆ ಗೊತ್ತಾ.?

 

ಸರ್ವೆಯೊಂದರ ಪ್ರಕಾರ ನಮ್ಮ ಭಾರತದಲ್ಲಿ 90%ರಷ್ಟು ಮಹಿಳೆಯರು ಅನಿಮಿಯಾಗಿ ತುತ್ತಾಗಿದ್ದಾರೆ. ಅನಿಮಿಯಾ ಎಂದರೆ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಆಗಿದೆ ಎಂದರ್ಥ, ಇದನ್ನು ರಕ್ತಹೀನತೆ ಎಂದು ಕೂಡ ಕರೆಯುತ್ತಾರೆ. ರಕ್ತಹೀನತೆಗೆ ತುತ್ತಾದವರಿಗೆ ಇದ್ದಕ್ಕಿದ್ದಂತೆ ದೇಹದ ತೂಕ ಹೆಚ್ಚಾಗುತ್ತದೆ, ಮುಖ ಊದಿಕೊಳ್ಳುತ್ತದೆ,

ಯಾವುದರಲ್ಲೂ ಆಸಕ್ತಿ ಇರುವುದಿಲ್ಲ, ಸದಾ ಮಂಕಾಗಿರುತ್ತಾರೆ ಕಣ್ಣಿನಲ್ಲಿ ಕಾಂತಿ ಇರುವುದಿಲ್ಲ, ಸ್ವಲ್ಪ ಕೆಲಸ ಮಾಡಿದರು ಸುಸ್ತಾಗುತ್ತದೆ, ಯಾವಾಗಲೂ ಮಲಗಿರಬೇಕು ಎನಿಸುತ್ತದೆ. ಆದರಲ್ಲೂ ಹೆಣ್ಣು ಮಕ್ಕಳು ಈ ಸಮಸ್ಯೆಗೆ ಹೆಚ್ಚು ಗುರಿಯಾಗುತ್ತಾರೆ. ಗಂಡು ಮಕ್ಕಳಿಗೂ ಕೂಡ ಇದು ಇರುವುದಿಲ್ಲ ಎಂದು ಹೇಳಲಾಗುವುದಿಲ್ಲ ಈಗಿನ ಕಾಲದಲ್ಲಿ ಗಂಡು ಮಕ್ಕಳಿಗೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ನೀವೇನಾದರೂ ಇಂತಹ ಸಮಸ್ಯೆಯಲ್ಲಿ ಸಿಲುಕಿದರೆ ರಕ್ತದ ಪ್ರಮಾಣ ಹೆಚ್ಚಾಗಬೇಕು ಅದರಲ್ಲೂ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗಬೇಕು ಎಂದರೆ ಈಗ ನಾವು ಹೇಳುವ ಈ ಟಿಪ್ ಗಳನ್ನು ಫಾಲೋ ಮಾಡಿ. ಕಬ್ಬಿಣಾಂಶ ಹೆಚ್ಚಿಗೆ ಇರುವ ಆಹಾರ ಪದಾರ್ಥಗಳನ್ನು ಸೇವಿಸಿದಾಗ ರಕ್ತ ಹೆಚ್ಚಾಗುತ್ತದೆ ಮತ್ತು ಶುದ್ಧವಾಗುತ್ತದೆ.

ಆ ಮೂಲಕ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಸಮತೋಲನಕ್ಕೆ ಬರುತ್ತದೆ. ಕಬ್ಬಿಣಾಂಶ ಹೆಚ್ಚಿಗೆ ಇರುವುದು ನುಗ್ಗೆ ಸೊಪ್ಪಿನಲ್ಲಿ ನುಗ್ಗೆಸೊಪ್ಪಿನನ್ನ ಜ್ಯೂಸ್ ಅಥವಾ ನುಗ್ಗೆ ಸೊಪ್ಪಿನಿಂದ ಮಾಡಿದ ಆಹಾರ ಪದಾರ್ಥಗಳನ್ನು ಯಥೇಚ್ಛವಾಗಿ ಸೇವಿಸಬೇಕು. ಇದರ ಜೊತೆಗೆ ದಾಳಿಂಬೆ ಹಣ್ಣು ಹಾಗೂ ಸೇಬಿನ ಹಣ್ಣಿನ ನಿಯಮಿತವಾದ ಸೇವನೆ ಕೂಡ ರಕ್ತ ಹೀನತೆಗೆ ಪರಿಹಾರವಾಗುತ್ತದೆ.

ಬೆಲ್ಲ ಹಾಗೂ ಬೇಳೆಕಾಳುಗಳು ಕೂಡ ರಕ್ತಹೀನತೆ ಪರಿಹರಿಸುತ್ತದೆ, ಬೀಟ್ರೂಟ್ ಜ್ಯೂಸ್ ಸೇವಿಸುವುದರಿಂದ ಮತ್ತು ಆಹಾರದಲ್ಲಿ ಬೀಟ್ರೂಟ್ ತಪ್ಪದೆ ಬಳಸುವುದರಿಂದ ಕೂಡ ರಕ್ತ ಹೆಚ್ಚಾಗುತ್ತದೆ ಇವುಗಳ ಜೊತೆಗೆ ಮತ್ತೊಂದು ಶೀಘ್ರ ಪರಿಣಾಮ ಕೊಡುವ ಆಹಾರ ಹೀಗಿದೆ ನೋಡಿ.

ಡ್ರೈ ಫ್ರೂಟ್ಸ್ ತಿನ್ನುವುದರಿಂದ ದೇಹಕ್ಕೆ ಶಕ್ತಿ ಬರುತ್ತದೆ, ಸುಸ್ತು ಕಡಿಮೆ ಆಗುತ್ತದೆ. ಆಕ್ಟಿವ್ ಆಗುತ್ತಾರೆ ಮತ್ತು ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಎನ್ನುವುದು ನಿಜ. ಅದೇ ರೀತಿಯಾಗಿ ಒಣ ದ್ರಾಕ್ಷಿಯನ್ನು ತಿನ್ನುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಸಮತೋಲನಕ್ಕೆ ಬರುತ್ತದೆ.

ಆದರೆ ಇದನ್ನು ಸೇವಿಸುವುದಕ್ಕೆ ಒಂದು ವಿಧಾನ ಇದೆ. ನೀವು ರಾತ್ರಿ ಹೊತ್ತು 10 ರಿಂದ 15 ಒಣ ದ್ರಾಕ್ಷಿ ತೆಗೆದುಕೊಂಡು ಅದನ್ನು ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು ಮತ್ತು ರಾತ್ರಿ ಪೂರ್ತಿ ಅದನ್ನು ಹಾಗೆ ಬಿಡಬೇಕು. ಮರುದಿನ ಬೆಳಿಗ್ಗೆ ಆ ನೀರನ್ನು ಶೋಧಿಸಿಕೊಂಡು ಕುಡಿಯಬೇಕು ಮತ್ತು ಆ ದ್ರಾಕ್ಷಿಯನ್ನು ಕೂಡ ತಿನ್ನಬೇಕು, .ಈ ರೀತಿ ಕೇವಲ ಒಂದು ತಿಂಗಳು ಮಾಡಿದರೆ ಸಾಕು ಬಹಳ ಉತ್ತಮ ರಿಸಲ್ಟ್ ಕಾಣುತ್ತೀರಿ.

ನಿಮಗೇನಾದರೂ ಈ ಮೇಲೆ ನಾವು ತಿಳಿಸಿದ ಲಕ್ಷಣಗಳು ಕಾಣಿಸಿಕೊಂಡರೆ ತಪ್ಪದೇ ಸೂಕ್ತ ವೈದ್ಯರನ್ನು ಭೇಟಿಯಾಗಿ ಅವರು ನಿಮ್ಮ ರಕ್ತ ಪರೀಕ್ಷೆ ಮಾಡಿ Hb level ಹೇಗಿದೆ ಎಂದು ಹೇಳುತ್ತಾರೆ. ಮತ್ತು ಕಬ್ಬಿಣಾಂಶ ಯುಕ್ತ ಮಾತ್ರೆಗಳನ್ನು ಕೂಡ ನೀಡುತ್ತಾರೆ. ಹೆಣ್ಣು ಮಕ್ಕಳಿಗೆ ರಕ್ತಹೀನತೆ ಉಂಟಾಗಬಾರದು.

ಆದ್ದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಿ ಮತ್ತು ಪೋಷಕಾಂಶಯುಕ್ತ ಆಹಾರ ಪದಾರ್ಥಗಳ ಸೇವನೆ ಮಾಡಿ ಜಂಕ್ ಫುಡ್ ಗಳಿಂದ ಹಾಗೂ ದು’ಶ್ಚ’ಟಗಳಿಂದ ದೂರ ಇದ್ದು ಆರೋಗ್ಯ ರಕ್ಷಿಸಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರೂ ಹಾಗ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.

ಲಕ್ಷ್ಮಿ ದೇವಿ ಮನೆಯಲ್ಲಿ ಸ್ಥಿರವಾಗಿ ಉಳಿಯಬೇಕು ಎಂದರೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ರಾತ್ರಿಹೊತ್ತು ಉಪ್ಪಿನಿಂದ ಈ ಒಂದು ಕೆಲಸ ಮಾಡಿ.!

 

ಉಪ್ಪಿಲ್ಲದೆ ರುಚಿ ಇಲ್ಲ, ಉಪ್ಪು ಕೇವಲ ರುಚಿಗೆ ಮಾತ್ರವಲ್ಲದೆ ಮನುಷ್ಯನಿಗೆ ಅನೇಕ ವಿಷಯದಲ್ಲಿ ಬಹಳ ಸಹಕಾರಿಯಾಗಿದೆ. ದೃಷ್ಟಿ ದೋಷ ನಿವಾಳಿಸುವುದಕ್ಕೆ, ಗೃಹ ದೋಷಕ್ಕೆ ವಾಸ್ತುದೋಷ ಪರಿಹಾರ ಮಾಡುವುದಕ್ಕೆ, ನರ ದೃಷ್ಟಿ ದೋಷ ತೆಗೆಯೋದಕ್ಕೆ ಹೀಗೆ ನ’ಕಾ’ರಾ’ತ್ಮ’ಕ ಶಕ್ತಿಗಳಿಂದ ಉಂಟಾಗಿರುವ ಕೆ’ಟ್ಟ ಪರಿಣಾಮಗಳನ್ನು ಹೋಗಿಸುವುದಕ್ಕೆ ಉಪ್ಪು ಬಹಳ ಬಳಕೆ ಆಗುತ್ತದೆ.

ಇದು ಮಾತ್ರ ಅಲ್ಲದೆ ಉಪ್ಪಿನಿಂದ ಧನಾಕರ್ಷಣೆ ಕೂಡ ಮಾಡಬಹುದು. ಯಾಕೆಂದರೆ ಉಪ್ಪು ತಾಯಿ ಮಹಾಲಕ್ಷ್ಮಿಯ ಸಂಕೇತ ಎಂದು ಹೇಳಲಾಗುತ್ತದೆ. ಮಹಾಲಕ್ಷ್ಮಿಯು ಸಮುದ್ರದಲ್ಲಿ ಉದ್ಭವಿಸುವುದರಿಂದ ಸಮುದ್ರದಲ್ಲಿ ಹುಟ್ಟುವ ಈ ಉಪ್ಪನ್ನು ಕೂಡ ಲಕ್ಷ್ಮಿಗೆ ಹೋಲಿಸಲಾಗುತ್ತದೆ, ಉಪ್ಪಿನಿಂದ ಮಾಡುವ ಕೆಲಸಗಳಿಂದ ತಾಯಿ ಅನುಗ್ರಹ ಪಡೆಯಬಹುದು ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

ಮನೆಯಲ್ಲಿ ಯಾವುದೇ ರೀತಿಯ ನೆ’ಗೆ’ಟಿ’ವ್ ವೈಬ್ರೇಶನ್ಸ್ ಇದ್ದರೆ ಆ ದೋಷಗಳನ್ನು ನಿವಾರಿಸಲು ಮನೆಯನ್ನು ಒರೆಸುವಾಗ ಹಿಡಿ ಉಪ್ಪನ್ನು ಹಾಕಿ ಮನೆ ಸಾರಿಸಬೇಕು. ಹಾಗೆ ಉಪ್ಪಿಗೆ ಯಾವಾಗಲು ಗೌರವ ಕೊಡಬೇಕು ಆ ಗೌರವ ತೋರಿ ಮಾತನಾಡುವುದು, ಬೇಕಾಬಿಟ್ಟಿ ಚೆಲ್ಲುವುದು, ಸಂಜೆ ಸಮಯ ಉಪ್ಪನ್ನು ಬೇರೆಯವರಿಗೆ ಕೊಡುವುದು, ಮಂಗಳವಾರ ಶುಕ್ರವಾರ ಉಪ್ಪು ಕೊಡುವುದು ಇಂತಹ ತಪ್ಪನ್ನು ಮಾಡಬಾರದು.

ಬದಲಿಗೆ ಮಂಗಳವಾರ ಹಾಗೂ ಶುಕ್ರವಾರ ಉಪ್ಪನ್ನು ಮನೆಗೆ ತಂದರೆ ಒಳ್ಳೆಯದು ನೀವು ಎಷ್ಟೇ ಕ’ಷ್ಟ ಪಟ್ಟು ದುಡಿಯುತ್ತಿದ್ದರು ನಿಮ್ಮ ಕೈಲಿ ಹಣ ಉಳಿಯುತ್ತಿಲ್ಲ ಎಂದರೆ ಅಥವಾ ನಿಮ್ಮ ಯಾವುದೇ ರೀತಿ ಹಣಕಾಸಿನ ಸಮಸ್ಯೆಗಳು ಪರಿಹಾರ ಆಗಬೇಕು ಎಂದರೆ ಉಪ್ಪಿನಿಂದ ಈಗ ನಾವು ಹೇಳುವ ಈ ಒಂದು ತಂತ್ರ ಮಾಡಿ ಸಾಕು.

ಇದನ್ನು ಮಂಗಳವಾರದಂದು ಮಾಡಿದರೆ ಬಹಳ ಒಳ್ಳೆಯದು ಮಂಗಳವಾರದ ರಾತ್ರಿ ಹೊತ್ತು ಒಂದು ಗಾಜಿನ ಅಥವಾ ಮಣ್ಣಿನ ಬಟ್ಟಲಿನಲ್ಲಿ ಎರಡು ಹಿಡಿ ಕಲ್ಲುಪ್ಪು ಹಾಕಿ ಉಪ್ಪಿನ ಬಟ್ಟಲನ್ನು ಮನೆಯ ತುಂಬಾ ಹಿಡಿದು ಓಡಾಡಿ. ಹೀಗೆ ಮಾಡುವಾಗ ಮನಸ್ಸಿನಲ್ಲಿ ನಮ್ಮ ಹಣಕಾಸಿನ ಪರಿಸ್ಥಿತಿಗೆ ಉಂಟಾಗಿರುವ ತೊಂದರೆಗಳೆಲ್ಲ ನಿವಾರಣೆ ಆಗಬೇಕು.

ನಮ್ಮ ಸಮಸ್ಯೆಗಳೆಲ್ಲ ಪರಿಹಾರ ಆಗಬೇಕು, ದೃಷ್ಟಿ ದೋಷ ಬಿದ್ದಿದ್ದರು ಅದೆಲ್ಲ ಕಳೆಯಬೇಕು ಹೀಗೆ ಹೇಳಿಕೊಳ್ಳುತ್ತಾ ಇಂದು ಈ ತಂತ್ರವನ್ನು ಮಾಡಿದ್ದೇನೆ ಈ ಉಪ್ಪಿನಲ್ಲಿ ಎಲ್ಲಾ ನೆ’ಗೆ’ಟಿ’ವ್ ಅಂಶಗಳು ಅಟ್ರಾಕ್ಟ್ ಆಗಿರುತ್ತೆ. ಇದನ್ನು ಹೊರ ಹಾಕಿದಾಗ ನಮ್ಮ ನೆ’ಗೆ’ಟಿ’ವಿ’ಟಿ ಕೂಡ ದೂರ ಹೋಗುತ್ತದೆ ಇನ್ನು ಮುಂದೆ ನಾವು ಚೆನ್ನಾಗಿ ಆಗುತ್ತೇವೆ ಎಂದು ಪಾಸಿಟಿವ್ ಆಗಿ ಹೇಳಿಕೊಳ್ಳಬೇಕು.

ನಂತರ ಅದನ್ನು ಯಾರಿಗೂ ಕಾಣದ ರೀತಿ ಒಂದು ಜಾಗದಲ್ಲಿ ಇಟ್ಟು ಮರುದಿನ ಬೆಳಿಗ್ಗೆ ನೀರಿಗೆ ಹಾಕಿ ನಂತರ ಗಿಡಗಳಿಗೆ ಹಾಕಬೇಕು ಇಲ್ಲವಾದಲ್ಲಿ ಮಂಗಳವಾರ ದಿನ ಕೆಂಪು ವಸ್ತ್ರದಲ್ಲಿ ಎರಡು ಹಿಡಿ ಉಪ್ಪನ್ನು ತೆಗೆದುಕೊಂಡು ಮನೆಯ ದೃಷ್ಟಿ ನಿವಾಳಿಸಿ ಮನೆ ಮುಂಭಾಗಕ್ಕೆ ಕಟ್ಟಬೇಕು.

ಈ ರೀತಿ ಮಾಡುವುದರಿಂದ ನಮಗೆ ಸುತ್ತಮುತ್ತ ಓಡಾಡುವ ನೆ’ಗೆ’ಟಿ’ವ್ ಎನರ್ಜಿ ಅಥವಾ ಮನೆ ಒಳಗೆ ಇದ್ದ ನೆ’ಗೆ’ಟಿ’ವ್ ಎನರ್ಜಿಗಳು ಸೆಳೆಯಲ್ಪಡುತ್ತವೆ. ಮರುದಿನ ಅದನ್ನು ಬಿಚ್ಚಿ ನೀರಿಗೆ ಹಾಕಿ ಕರಗಿದ ಮೇಲೆ ಗಿಡಕ್ಕೆ ಹಾಕಬೇಕು. ಹೀಗೆ ಮಾಡುವುದರಿಂದ ಕೂಡ ಉತ್ತಮ ಫಲಿತಾಂಶವನ್ನು ತಿಳಿಯಬಹುದು.

ಕೆಲವರು ನೀರಿಗೆ ನಿಂಬೆಹಣ್ಣನ್ನು ಹಾಕಿ ಮನೆಯಲ್ಲಿ ಇಡುತ್ತಾರೆ ಅದರಿಂದ ಮನೆ ಮೇಲೆ ದೃಷ್ಟಿ ದೋಷ ಆಗಿದೆಯೋ ಅಥವಾ ತಮ್ಮ ಏಳಿಗೆ ಮೇಲೆ ಕೆಟ್ಟ ದೃಷ್ಟಿ ಬಿದ್ದಿದೆಯೋ ಎನ್ನುವುದನ್ನು ಪರೀಕ್ಷಿಸಿಕೊಳ್ಳುತ್ತಾರೆ. ಇದನ್ನು ಮಾಡಲು ಉಪ್ಪಿನಿಂದ ಕೂಡ ಪರೀಕ್ಷೆ ಮಾಡಬಹುದು.

ಒಂದು ಬಟ್ಟಲಿನಲ್ಲಿ ಉಪ್ಪು ಹಾಕಿ ಅದಕ್ಕೆ ಚಿಟಿಕೆ ಅರಿಶಿನ ಮತ್ತು ಕುಂಕುಮ ಇಟ್ಟು ನೀವು ಹಣ ಇಡುವ ಬೀರುವಿನ ಕೆಳಗೆ ಇಟ್ಟು ಒಂದು ವಾರ ಬಿಡಿ, ಉಪ್ಪಿನ ಬಣ್ಣ ಕಪ್ಪು ಅಥವಾ ಕಂದು ಬಣ್ಣ ಆಗಿದ್ದರೆ ನಿಮ್ಮ ಮೇಲೆ ಕೆ’ಟ್ಟ ದೃಷ್ಟಿಗಳು ಬಿದ್ದಿದೆ ಎಂದು ಅರ್ಥ ಅದನ್ನು ನಿವಾರಿಸಿಕೊಳ್ಳುವ ಕಡೆ ಗಮನ ಕೊಡಬೇಕು.

ಈ ಮೇಲೆ ನಾವು ತಿಳಿಸಿದ ಕ್ರಮಗಳ ಮೂಲಕ ಪರೀಕ್ಷೆ ಮಾಡಿಕೊಂಡು ನಂತರ ಪರಿಹಾರ ಮಾಡಿಕೊಂಡು ನಿಮ್ಮ ಜೀವನವನ್ನು ಬದಲಾಯಿಸಿಕೊಂಡು ಜೀವನದಲ್ಲಿ ಬಹಳ ಯಶಸ್ಸು ಕಾಣಲಿ ಎನ್ನುವುದಷ್ಟೇ ಈ ಅಂಕಣದ ಆಶಯ.