Home Blog Page 104

ಹೆಂಗಸರಿಗೆ ಸುಲಭವಾಗಿ ಪಾತ್ರೆ ಕ್ಲೀನ್ ಮಾಡಲು ಕೆಲವು ಉಪಯುಕ್ತ ಟಿಪ್ಸ್ ಗಳು.!

* ಫ್ಲಾಸ್ಕ್ ನ್ನು ಕ್ಲೀನ್ ಮಾಡುವುದು ಸ್ವಲ್ಪ ಕ’ಷ್ಟ’ಕ’ರ ಕೆಲಸ, ವಾಷಿಂಗ್ ಸೋಡಾ ಹಾಗೂ ಬಿಸಿ ನೀರನ್ನು ಫ್ಲಾಸ್ಕ್ ಅರ್ಥದ ವರೆಗೂ ಹಾಕಿ ಚೆನ್ನಾಗಿ ಕಲಕಿ ಹೊರಗೆ ಚೆಲ್ಲಿ ಮತ್ತೆ ಬಿಸಿ ನೀರನ್ನು ಹಾಕಿಕೊಂಡು ಮತ್ತೊಮ್ಮೆ ಅದೇ ತರ ಚೆನ್ನಾಗಿ ಬಾಟಲ್ ಶೇಕ್ ಮಾಡಿ ಸುರಿದು ಸ್ವಚ್ಛ ಮಾಡಿ ಬಿಸಿಲಿಗೆ ಇಡಿ

* ಫ್ಲಾಸ್ಕ್ ನ್ನು ಬಹು ದಿನಗಳವರೆಗೆ ಉಪಯೋಗಿಸದೆ ಹಾಗೆ ಇಟ್ಟಾಗ ಅದು ವಾಸನೆ ಬರುತ್ತದೆ. ಈ ವಾಸನೆಯನ್ನು ಹೋಗಿಸಲು ಮಜ್ಜಿಗೆ ಹಾಗೂ ಉಪ್ಪನ್ನು ಹಾಕಿ 10 ನಿಮಿಷ ಚೆನ್ನಾಗಿ ಶೇಕ್ ಮಾಡಿ ನಂತರ ಬಿಸಿನೀರಿನಿಂದ ತೊಳೆದು ಬಿಸಿಲಿಗೆ ಸ್ವಲ್ಪ ಹೊತ್ತು ಇಡಿ ವಾಸನೆ ಹೋಗುತ್ತದೆ.

* ಗುಂಜು, ನೈಲಾನ್ ಪ್ಯಾಡ್ ಅಥವಾ ಬ್ರಷ್ ಬಳಸಿ ಪಾತ್ರೆ ತೊಳೆದರೆ ಪಾತ್ರೆಗಳು ಗೀಜಾಗುವುದಿಲ್ಲ.
* ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳನ್ನು ಒಂದು ರಾತ್ರಿ ಪೂರ್ತಿ ಸೋಪಿನ ನೀರಿನಲ್ಲಿ ನೆನೆಸಿ, ಮರುದಿನ ಉಜ್ಜಿ ತೊಳೆದರೆ ಪಾತ್ರೆಗೆ ಹೊಸ ಹೊಳಪು ಬರುತ್ತದೆ.
* ಚಹಾಚರಟ, ವಿಮ್ ಜೆಲ್ ಅಥವಾ ಪಾತ್ರೆ ತೊಳೆಯುವ ಸೋಪು, ಸಬೀನಾ ಇವುಗಳಿಂದ ಪಾತ್ರೆಯನ್ನು ಉಜ್ಜಿ ತೊಳೆದರೆ ಪಾತ್ರೆ ನೀಟಾಗಿ ಕ್ಲೀನ್ ಆಗುತ್ತದೆ ಹಾಗೂ ಹೊಳಪು ಹಾಗೆ ಇರುತ್ತದೆ.

* ಕೆಲವೊಮ್ಮೆ ಹಸಿ ಈರುಳ್ಳಿಯನ್ನು ಪಾತ್ರೆಯಲ್ಲಿ ಇಟ್ಟಿದ್ದಾಗ ಹೇಗೆ ಕ್ಲೀನ್ ಮಾಡಿದರೂ ಅದರ ವಾಸನೆ ಹೋಗುವುದಿಲ್ಲ ಇಂತಹ ಸಮಯದಲ್ಲಿ ಉಪ್ಪು ನೀರಿನಿಂದ ಅಥವಾ ನಿಂಬೆಹಣ್ಣಿನ ಸಿಪ್ಪೆಯಿಂದ ಉಜ್ಜಿ ತೊಳೆದರೆ ವಾಸನೆ ಹೋಗುತ್ತದೆ.
* ಪ್ಲಾಸ್ಟಿಕ್ ಬಟ್ಟಳಿಗೆ ಸ್ವಲ್ಪ ಸಕ್ಕರೆ ಹಾಗೂ ಸೋಪಿನ ನೀರು ಹಾಕಿ ಶುಚಿ ಮಾಡುವ ಸಾಧನವನ್ನು ಯಾವಾಗಲೂ ಅದರಲ್ಲಿ ಮುಳುಗುವಂತೆ ಇಡಿ. ಇಂತಹ ದ್ರಾವಣಗಳಿಂದ ಪಾತ್ರೆಗಳನ್ನು ಚೆನ್ನಾಗಿ ಶುಚಿ ಮಾಡಬಹುದು.

* ಬೆಣ್ಣೆ ಕಾಯಿಸಿದ ಪಾತ್ರೆಯೂ ಬಹಳ ಜಿಡ್ಡಾಗಿರುತ್ತದೆ ಇದನ್ನು ಸುಲಭವಾಗಿ ಕ್ಲೀನ್ ಮಾಡಬೇಕು ಎಂದರೆ ಸಮ ಪ್ರಮಾಣದಲ್ಲಿ ವಾಷಿಂಗ್ ಸೋಡಾ ಹಾಗೂ ಉಪ್ಪನ್ನು ಹಾಕಿ ದ್ರಾವಣ ಮಾಡಿಕೊಂಡು ಅದನ್ನು ಬೆಣ್ಣೆ ಕಾಯಿಸಿದ ಪಾತ್ರೆಗೆ ಹಾಕಿ ಚೆನ್ನಾಗಿ ಕುದಿಸಿ ಐದು ನಿಮಿಷದಲ್ಲೇ ಕ್ಲೀನ್ ಆಗುತ್ತದೆ.

* ಅಲ್ಯುಮಿನಂ ಪಾತ್ರೆಗಳನ್ನು ಸೀಗೆಕಾಯಿ ಪುಡಿಯಿಂದ ತೊಳೆದರೆ ಹೊಳಪು ಬರುತ್ತದೆ. ವಿಮ್ ಜೆಲ್ ಹಾಗೂ ಸಾಬೂನು ಕೂಡ ಬಳಸಬಹುದು.
* ಒಂದೇ ಪಾತ್ರೆಯಲ್ಲಿ ಯಾವಾಗಲೂ ಬಿಸಿ ನೀರು ಕಾಯಿಸುತ್ತಿದ್ದಾಗ ಅದರ ಕೆಳಗೆ ಬಿಳಿ ಕಲೆಗಳು ಆಗುತ್ತವೆ. ಇದನ್ನು ಕ್ಲೀನ್ ಮಾಡಬೇಕು ಎಂದರೆ ಟೊಮೇಟೊವನ್ನು ಚೆನ್ನಾಗಿ ಬೇಯಿಸಿ ಅದರ ಸಿಪ್ಪೆಯನ್ನು ಒಂದು ರಾತ್ರಿ ಹಾಗೆ ಬಿಟ್ಟು ಬೆಳಗ್ಗೆ ತೊಳೆದರೆ ಬಿಳಿ ಕಲೆಗಳು ಹೋಗುತ್ತವೆ.

* ನಿಂಬೆ ಹಣ್ಣಿನ ರಸ ಅಥವಾ ನಿಂಬೆಹಣ್ಣಿನ ಸಿಪ್ಪೆಯಿಂದ ಪಾತ್ರೆಗಳನ್ನು ತೊಳೆದರೆ ಪಾತ್ರೆಯಲ್ಲಿರುವ ಕೀಟಾನುಗಳು ನಾ’ಶವಾಗುತ್ತದೆ ಹಾಗೂ ಪಾತ್ರೆಗಳಿಗೆ ಹೊಳಪು ಬರುತ್ತದೆ. ಆದರೆ ನೆನಪಿಡಿ ಕಲಾಯಿ ಮಾಡಿರುವ ಪಾತ್ರೆಗಳ ಹೊರಭಾಗದಲ್ಲಿ ಮಾತ್ರ ಈ ರೀತಿ ನಿಂಬೆಹಣ್ಣಿನ ಸಿಪ್ಪೆ ಅಥವಾ ಹುಣಸೆ ಹಣ್ಣಿನಿಂದ ಉಜ್ಜಬೇಕು, ಕಲಾಯಿ ಮಾಡಿರುವ ಭಾಗವನ್ನು ಉಜ್ಜಿದರೆ ಅದು ಹೊರಟು ಹೋಗುತ್ತದೆ.

* ಮಸಿಯಾದ ಭಾಗಕ್ಕೆ ಬಿಸಿ ನೀರನ್ನು ಹಾಕಿ ತಕ್ಷಣ ಬೂದಿಯಿಂದ ಉಜ್ಜಿದರೆ ಮಸಿ ಹೋಗುತ್ತದೆ.
* ಅಡುಗೆ ಮಾಡಿದರೆ ಪಾತ್ರೆಗಳ ಮಸಿ ಹೋಗಿಸಬೇಕು ಎಂದರೆ ಬಿಸಿಯಾದ ಉಪ್ಪು ನೀರಿನಲ್ಲಿ ಈರುಳ್ಳಿಯನ್ನು ನೆನೆಸಿ ಆ ಈರುಳ್ಳಿಯಿಂದ ಪಾತ್ರೆ ಉಜ್ಜಿರಿ.
* ಹುಣಸೆ ಎಲೆಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅದರಲ್ಲಿ ಕಬ್ಬಿಣದ ಪಾತ್ರೆಗಳನ್ನು ಕ್ಲೀನ್ ಮಾಡಿದರೆ ಹೆಚ್ಚು ಸ್ವಚ್ಛವಾಗುತ್ತದೆ.

* ಬೂದಿ, ಹುಣಸೆಹಣ್ಣು ಮತ್ತು ಚಹಾ ಚರಟವನ್ನು ಗೊಜ್ಜಿನಂತೆ ಮಾಡಿಕೊಂಡು ಕಬ್ಬಿಣದ ಸಾಮಾನುಗಳಿಗೆ ಬಳಿದು ಒಣಗಿಸಬೇಕು, ಅನಂತರ ಬೂದಿ ಹಾಗೂ ಒಣ ಮಣ್ಣನ್ನು ಹಾಕಿ ಉಜ್ಜಿದರೆ ಅವು ಉಕ್ಕಿನಂತೆ ಬೆಳ್ಳಗೆ ಹೊಳೆಯುತ್ತವೆ.

ಪ್ರತಿದಿನ ಜೀರಿಗೆ ನೀರು ಕುಡಿಯುವುದರಿಂದ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ನೋಡಿ.!

 

ಈ ಒಂದು ಜೀರಿಗೆ ನಮ್ಮ ದೇಹದ ವಾತ ಪಿತ್ತ ಕಫ ದೋಷಗಳನ್ನು ಸಮ ಪ್ರಮಾಣದಲ್ಲಿ ಇಡುವಂತಹ ಅದ್ಭುತವಾದ ಶಕ್ತಿಯನ್ನು ಹೊಂದಿದೆ. ಹಾಗೂ ಇದರ ಒಂದು ಗುಣ ಧರ್ಮ ನೋಡುವುದಾದರೆ ಇದು ಕಹಿ ಸ್ವಾದವನ್ನು ಹೊಂದಿರುವಂಥದ್ದು ಹಾಗೂ ಇದು ಉಷ್ಣವೀರ್ಯ ಗುಣಧರ್ಮವನ್ನು ಹೊಂದಿರುವಂಥದ್ದು.

ಇದು ವಾತ ಮತ್ತು ಕಫಜ ರೋಗಗಳಿಗೆ ಹೆಚ್ಚು ಲಾಭದಾಯಕವಾಗಿ ಕೆಲಸ ಮಾಡುವಂಥದ್ದು. ಹಾಗಾದರೆ ಈ ದಿನ ಜೀರಿಗೆಯನ್ನು ಯಾವ ವಿಧಾನದಲ್ಲಿ ಸೇವನೆ ಮಾಡುವುದರಿಂದ ಯಾವ ಯಾವ ರೋಗಗಳನ್ನು ದೂರ ಮಾಡಿಕೊಳ್ಳ ಬಹುದು ಹಾಗೂ ಯಾವ ಸಮಯದಲ್ಲಿ ಇದನ್ನು ಸೇವನೆ ಮಾಡಬೇಕು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು, ಹಾಗೂ ಯಾರು ಇದನ್ನು ಬಳಸಬಾರದು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಜೀರಿಗೆಯನ್ನು ಕಷಾಯದ ರೂಪದಲ್ಲಿ ಬಳಸಬಹುದು, ಹಾಗೂ ಜೀರಿಗೆಯನ್ನು ಪುಡಿಮಾಡಿ ಅದರ ರೂಪದಲ್ಲಿಯೂ ಬಳಸಬಹುದು, ಜೊತೆಗೆ ಜೀರಿಗೆಯನ್ನು ಅಗಿದು ಕೂಡ ಸೇವನೆ ಮಾಡಬಹುದು.
* ಜೀರಿಗೆಯನ್ನು ಅಗಿದು ಸೇವನೆ ಮಾಡಬೇಕು ಎಂದರೆ ಬೆಳಗ್ಗೆ ಹಾಗೂ ಸಂಜೆ ಒಂದು ಚಮಚ ಸೇವನೆ ಮಾಡಬಹುದು.
* ಹಾಗೂ ಜೀರಿಗೆಯನ್ನು ಕಷಾಯದ ರೂಪದಲ್ಲಿ ಸೇವನೆ ಮಾಡಬೇಕು ಎಂದರೆ ಎರಡು ಚಮಚ ಜೀರಿಗೆಯನ್ನು ಒಂದು ಲೀಟರ್ ನೀರಿಗೆ ಹಾಕಿ ಕುದಿಸಿ ಅದನ್ನು 200 Ml ಗೆ ಇಳಿಸಿ ಸೇವನೆ ಮಾಡಬಹುದು.

* ಹಾಗೂ ಪೌಡರ್ ರೂಪದಲ್ಲಿ ಒಂದು ಚಮಚ ಸೇವನೆ ಮಾಡಿ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವನೆ ಮಾಡಬೇಕು.
ಜೊತೆಗೆ ಜೀರಿಗೆಯನ್ನು ಆದಷ್ಟು ತಮ್ಮ ಅಡುಗೆಗಳಲ್ಲಿ ಹೆಚ್ಚಾಗಿ ಉಪಯೋಗಿಸುವುದರಿಂದಲೂ ಕೂಡ ಇದರ ಹೆಚ್ಚಿನ ಪ್ರಯೋಜನ ಪಡೆಯಬಹುದು ಹಾಗೂ ಯಾರು ಜೀರಿಗೆಯನ್ನು ಬಳಸಬಹುದು ಎಂದು ನೋಡುವುದಾದರೆ.

ಯಾರಿಗೆ ಹುಳಿ ತೇಗಿನ ಸಮಸ್ಯೆ ಇರುತ್ತದೆಯೋ ಅಂಥವರು, ಅಜೀರ್ಣದ ಸಮಸ್ಯೆ, ಆಮವಾತದ ಸಮಸ್ಯೆ, ಆಮ್ಲ ಪಿತ್ತದ ಸಮಸ್ಯೆ, ಮಲಬದ್ಧತೆಯ ಸಮಸ್ಯೆ, ಜೀರ್ಣಾಂಗದ ಸಮಸ್ಯೆ ಇಂತಹ ಯಾವುದೇ ಸಮಸ್ಯೆ ಇದ್ದರೂ ಕೂಡ ಅದನ್ನು ದೂರ ಮಾಡುವುದಕ್ಕೆ ನಾವು ಈ ಜೀರಿಗೆಯನ್ನು ಬಳಸಬಹುದು.

ಜೀರಿಗೆಯನ್ನು ಆಯುರ್ವೇದದಲ್ಲಿ ಜೀರಕ ಎಂದು ಕರೆಯುತ್ತಾರೆ. ಇದರ ಅರ್ಥ ಏನೆಂದರೆ ಜೀರ್ಣಿಸುವುದು ಎಂದರ್ಥ. ತಿಂದಂತಹ ಆಹಾರ ಕೆಟ್ಟ ಭಾಗವಾಗಿ ಹಾಗೂ ಸಾರಭಾಗವಾಗಿ ಪರಿವರ್ತನೆ ಆಯಿತು ಎಂದರೆ ಅಂದರೆ ಕೆಟ್ಟಭಾಗ ಮಲಮೂತ್ರದ ಮೂಲಕ ಆಚೆ ಹೋದರೆ ಸಾರ ಭಾಗ ನಮ್ಮ ದೇಹಕ್ಕೆ ಸೇರುತ್ತದೆ.

ಹಾಗಾದರೆ ಜೀರಿಗೆ ನೀರನ್ನು ಹೆಚ್ಚು ಸೇವಿಸುವುದರಿಂದ ಏನೆಲ್ಲಾ ತೊಂದರೆಗಳು ಆಗುತ್ತದೆ ಎಂದು ನೋಡುವುದಾದರೆ.

* ದಿನವಿಡೀ ಜೀರಿಗೆ ನೀರನ್ನು ಕುಡಿಯುವುದರಿಂದ ನಮ್ಮ ಲಿವರ್ ಹಾಗೂ ಕಿಡ್ನಿಗೆ ತೊಂದರೆ ಉಂಟಾಗುತ್ತದೆ.
* ಜೊತೆಗೆ ಗರ್ಭಿಣಿ ಸ್ತ್ರೀಯರು ಕೂಡ 8 ತಿಂಗಳ ತನಕ ಜೀರಿಗೆ ಹಾಗೂ ಜೀರಿಗೆ ಕಷಾಯವನ್ನು ಸೇವಿಸ ಬಾರದು.
* ಜೊತೆಗೆ ಜೀರಿಗೆ ಸೇವನೆ ಮಾಡುವುದರಿಂದ ದೇಹದಲ್ಲಿರುವಂತಹ ಕೊಬ್ಬು ಕರಗುತ್ತದೆ.

* ಹಾಗೂ ಜೀರಿಗೆ ಕಷಾಯವನ್ನು ಸೇವನೆ ಮಾಡುವುದರಿಂದ ಕಿಡ್ನಿ, ಬ್ರೈನ್, ಲಿವರ್, ಹೀಗೆ ಇನ್ನೂ ಹಲವಾರು ದೇಹದ ಅಂಗಾಂಗಗಳು ಸ್ವಚ್ಛವಾಗಿರುತ್ತದೆ. ಒಂದು ಮಾತಿನಲ್ಲಿ ಹೇಳಬೇಕು ಅಂದರೆ ದೇಹದ ಆಂತರಿಕ ಅಂಗಾಂಗಗಳನ್ನು ಸ್ವಚ್ಛ ಮಾಡುವಂತಹ ಒಂದು ಅದ್ಭುತವಾದ ಪದಾರ್ಥ ಎಂದರೆ ಅದು ಜೀರಿಗೆ.
ಆದ್ದರಿಂದ ಮೇಲೆ ಹೇಳಿದ ವಿಧಾನದಲ್ಲಿ ಜೀರಿಗೆಯನ್ನು ಉಪಯೋಗಿ ಸುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/ySjm0Om-WJA?si=Q4SfykBDVtdKrYVo

ಆರೋಗ್ಯದ ಸೂತ್ರ.!

 

* ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಏಳುವುದು ಎದ್ದು ಬಾಯಿ ತೊಳೆದು 2 ಲೋಟ ತಾಮ್ರದ ಪಾತ್ರೆಯಲ್ಲಿಯ ನೀರು ಸೇವನೆ ಕಡ್ಡಾಯ
* ಬೆಳಗಿನ ಪ್ರಾಥರ್ವಿಧಿ ಮುಗಿಸಿದ ನಂತರ ಒಂದು ಗಂಟೆ ವಯಸ್ಸಿಗೆ ಅನುಗುಣವಾದ ವ್ಯಾಯಾಮ, ನಡಿಗೆ, ಯೋಗ ಮತ್ತು ಪ್ರಾಣಾಯಾಮ ಮುದ್ರೆಗಳನ್ನು ತಜ್ಞರಿಂದ ತಿಳಿದು ಮಾಡುವುದು.

* ವ್ಯಾಯಾಮದ ನಂತರ ಸ್ನಾನ ಮಾಡುವುದು, ತಲೆ ಸ್ನಾನ ಕಡ್ಡಾಯ. ತಲೆಗೆ ಶೀಗೆಕಾಯಿ ಚೂರ್ಣ ಹಾಗೂ ಮೈಗೆ ಕಡಲೆ ಬೇಳೆ ಹಿಟ್ಟು, ಹೆಸರು ಹಿಟ್ಟು, ಅಕ್ಕಿಹಿಟ್ಟು ಉಪಯೋಗ ಒಳ್ಳೆಯದು. ಸ್ನಾನದ ಸಮಯದಲ್ಲಿ ತಣ್ಣೀರಿನಲ್ಲಿ ಕಣ್ಣುನ್ನು ಅದ್ದಿ ಪಿಳುಕಿಸಬೇಕು. (20 ಸೆಕೆಂಡ್) ವಾರಕ್ಕೆ 1 ಸಾರಿ ಎಣ್ಣೆ ಸ್ನಾನ ತುಂಬಾ ಒಳ್ಳೆಯದು.

* ಸ್ನಾನದ ನಂತರ ತಮ್ಮ ಪೂಜಾ, ಧ್ಯಾನ, ಓಂಕಾರ ಮುಂತಾದವು ಗಳನ್ನು ತಮ್ಮ ಉಪಸನಾ ಪದ್ಧತಿಯನ್ನು ನಡೆಸುವುದು ಒಳ್ಳೆಯದು.
* ಪ್ರತಿ ಊಟ ಅಥವಾ ಉಪಾಹಾರದ ನಂತರ ಕನಿಷ್ಠ ನೂರು ಹೆಜ್ಜೆ ಕಡ್ಡಾಯ ನಡಿಗೆ ಉತ್ತಮ ಮತ್ತು ದಿನದಲ್ಲಿ 2 ಕಿಲೋ ಮೀಟರ್ ನಡೆಯುವುದು ಅನಿವಾರ್ಯ ಹಾಗೂ ಊಟದ ನಂತರ 5 ನಿಮಿಷ ವಜ್ರಾಸನ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ.

* ದಿನಾಲು ಊಟವನ್ನು ಸಮಯಕ್ಕೆ ಸರಿಯಾಗಿ ಮಾಡುವುದು ತುಂಬಾ ಉತ್ತಮ. ವಾರದಲ್ಲಿ ಒಂದು ಹೊತ್ತಿನ ಉಪವಾಸ ಆರೋಗ್ಯಕ್ಕೆ ತುಂಬಾ ಸಹಕಾರಿ ಊಟದ ಒಂದು ಗಂಟೆ ನಂತರ ಹೆಚ್ಚು ನೀರು ಸೇವಿಸುವುದು ಜೀರ್ಣಕ್ಕೆ ಒಳ್ಳೆಯದು.
* ನಮಗೆ ಸಮಯ ಸಿಕ್ಕಾಗಲೆಲ್ಲಾ ಹಾಗೂ ಪ್ರವಾಸದಲ್ಲಿ ದೀರ್ಘ ಉಸಿರಾಟ ಮಾಡುವುದು ರಕ್ತ ಪರಿಚಲನೆಗೆ ಸಹಕಾರಿಯಾಗುತ್ತದೆ. ಹಾಗೇ ಯಾವುದಾದರೂ ಮುದ್ರೆ ಮಾಡುತ್ತಿರಬೇಕು.

* ವಾರದಲ್ಲಿ 2 ಸಲ ತಲೆ ಹಾಗೂ ದೇಹವನ್ನು ಎಣ್ಣೆಯಿಲ್ಲದೆ ಒಣದಾಗಿ ಉಜ್ಜಿಕೊಳ್ಳಬೇಕು.
* ಕನಿಷ್ಠ 10 ದಿನಕ್ಕೊಮ್ಮೆ ಉಗುರು ತೆಗೆಯಬೇಕು.
* ತಿಂಗಳಿಗೆ ಒಂದು ದಿನ ಬೆಳಿಗ್ಗೆ ಹೊಟ್ಟೆ ತುಂಬಾ ಬಿಸಿ ನೀರು ಸೇವಿಸಬೇಕು.
* ದಿನಾಲು ಜಲನೇತಿ ಮಾಡುವುದು ಒಳ್ಳೆಯದು.
* ದಿನಾಲು 1 ಸಾರಿಯಾದರೂ ನಗುವುದು ಒಳ್ಳೆಯದು.

* ದಿನಕ್ಕೆ 1 ಸಾರಿಯಾದರೂ ಪ್ರಕೃತಿಗೆ ಅನುಗುಣವಾಗಿ, ಎಳನೀರು, ಕಬ್ಬಿನ ಹಾಲು, ಹಸುವಿನ ಹಾಲು, ಹಣ್ಣಿನ ರಸ, ಮಜ್ಜಿಗೆ, ಕರಿಕೆ ರಸ, ಗೋದಿ ಹುಲ್ಲಿನ ರಸ, ಯಾವುದಾದರು ಒಂದನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.
* ದಿನಕ್ಕೆ 3 ರಿಂದ 4 ಲೀಟರ್ ನೀರು ಕಡ್ಡಾಯ ಸೇವಿಸುವುದು.
* ಮಾತನಾಡದೆ “ಮೌನ ಭೋಜನ” ಬಹಳ ಶ್ರೇಷ್ಠ. ದಿನದಲ್ಲಿ ಸ್ವಲ್ಪ ಸಮಯ ಅಥವಾ ವಾರದಲ್ಲಿ 4 ಗಂಟೆ ಮೌನ ಒಳ್ಳೆಯದು.
* ನಿಂತು ಮೂತ್ರ ವಿಸರ್ಜನೆ ಮಾಡುವುದರಿಂದ ಕಿಡ್ನಿಗೆ ತೊಂದರೆಯಾಗುತ್ತದೆ.
* ದಿನದಲ್ಲಿ ಬೆವರು ಬರುವಂತೆ ಪರಿಶ್ರಮಪಡಬೇಕು.

* ಹಗಲು ವಿಶ್ರಾಂತಿ ಪಡೆಯಬಹುದು, ಆದರೆ ನಿದ್ರೆ ಒಳ್ಳೆಯದಲ್ಲ.
ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ನಮ್ಮ ಆರೋಗ್ಯಕ್ಕೆ ಬಹಳ ಅನುಕೂಲವಾಗುವಂತಹ ವಿಧಾನಗಳಾಗಿದ್ದು ಪ್ರತಿಯೊಬ್ಬರೂ ಕೂಡ ಇದನ್ನು ಅನುಸರಿಸುವುದರಿಂದ ತಮ್ಮ ಜೀವನ ಪರ್ಯಂತ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳನ್ನು ಕೂಡ ಎದುರಿಸುವ ಅವಶ್ಯಕತೆ ಬರುವುದಿಲ್ಲ.

ಬದಲಿಗೆ ಯಾವುದೇ ರೀತಿಯ ಸಮಸ್ಯೆ ಬಾರ ದಂತೆ ನೀವೇ ನಿಮ್ಮ ಜೀವನಶೈಲಿ ಆಹಾರ ಶೈಲಿಯಿಂದ ದೂರ ಮಾಡಿ ಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಮೇಲೆ ಹೇಳಿದ ಈ ವಿಧಾನಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು.

ಆದರೆ ಹೆಚ್ಚಿನ ಜನ ಇಂತಹ ಯಾವುದೇ ವಿಚಾರದ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ ಬದಲಿಗೆ ವಿರುದ್ಧವಾದ ಆಹಾರ ಶೈಲಿ, ಜೀವನ ಶೈಲಿಯನ್ನು ಅನುಸರಿ ಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ತಂದುಕೊಳ್ಳು ತ್ತಾರೆ ಅದರ ಬದಲು ಈಗ ಮೇಲೆ ಹೇಳಿದ ಈ ಆರೋಗ್ಯ ಸೂತ್ರಗಳನ್ನು ಅನುಸರಿಸುವುದರಿಂದ ಉತ್ತಮವಾದಂತಹ ಆರೋಗ್ಯವನ್ನು ಪಡೆದು ಕೊಳ್ಳಬಹುದು.

ಅದೃಷ್ಟವಂತ ಹೆಣ್ಣು ಮಕ್ಕಳ ಗುಣಲಕ್ಷಣಗಳಿವು.!

 

ಕೇವಲ ಅಂಗೈನ ರೇಖೆಗಳನ್ನು ನೋಡುವ ಮೂಲಕ ವ್ಯಕ್ತಿಯ ಭವಿಷ್ಯವನ್ನು ಕಂಡು ಹಿಡಿಯುವ ವಿಧಾನವಿದೆ. ಇದೇ ರೀತಿ ಪಾದಗಳು ಕೈಗಳು ಬೆರಳುಗಳು ಮುಖದ ಲಕ್ಷಣಗಳನ್ನು ನೋಡಿ ಒಬ್ಬರ ಬಗ್ಗೆ ಬಹಳಷ್ಟು ವಿಷಯವನ್ನು ತಿಳಿದುಕೊಳ್ಳಬಹುದು.

ಅಷ್ಟೇ ಸಾಮಗ್ರಿಕ ಶಾಸ್ತ್ರದ ಪ್ರಕಾರ ಯಾವ ಗುಣಗಳನ್ನು ಹೊಂದಿರುವ ಮಹಿಳೆಯರನ್ನು ಅದೃಷ್ಟವಂತರೆಂದು ಪರಿಗಣಿಸಲಾಗಿದೆ ಎಂಬುವುದರ ಬಗ್ಗೆ ಈ ಕೆಳಗಿನಂತೆ ಸಂಪೂರ್ಣವಾಗಿ ತಿಳಿದು ಕೊಳ್ಳುತ್ತಾ ಹೋಗೋಣ.
ಹೆಣ್ಣನ್ನು ತಾಯಿ ಲಕ್ಷ್ಮಿ ಸ್ವರೂಪವೇ ಎಂದು ಹೇಳುತ್ತಾರೆ. ಪುರಾತನ ಕಾಲದಿಂದಲೂ ಹೆಣ್ಣನ್ನು ಲಕ್ಷ್ಮಿಯ ಸ್ವರೂಪವೆಂದರೆ ಕರೆಯುತ್ತಿದ್ದರು. ಹಾಗಾದರೆ ಮನೆಗೆ ಅದೃಷ್ಟವನ್ನು ತಂದುಕೊಡುವ ಹೆಣ್ಣಿನ ಲಕ್ಷಣವನ್ನು ತಿಳಿಯೋಣ.

* ಒಂದು ಹೆಣ್ಣು ಸದಾ ಯಾವಾಗಲೂ ನಗುಮುಖದಿಂದ ಇದ್ದರೆ ಮನೆ ಸದಾ ಸಮೃದ್ಧಿ ಹಾಗೂ ಸಂತೋಷದಿಂದ ಕೂಡಿರುತ್ತದೆ.
* ಸುಂದರ ಮೈಬಣ್ಣ ನಯವಾದ ಹಣೆ ಹಲ್ಲು ಮತ್ತು ಬಾಯಿ ಹೊಂದಿರು ವ ಮಹಿಳೆಯರನ್ನು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ ಅಂತಹ ಹೆಣ್ಣು ಮಕ್ಕಳು ತಮ್ಮ ಮನೆತನದ ಹೆಸರನ್ನು ಬೆಳಗಿಸುತ್ತಾರೆ.
* ಕಣ್ಣುಗಳ ಮೇಲಿನ ಭಾಗ ತಿಳಿ ಕೆಂಪಾಗಿದ್ದರೆ ಅಥವಾ ಕಣ್ಣಿನ ಬಳ್ಳಿ ಭಾಗವು ಹಸುವಿನ ಹಾಲಿನಂತೆ ಮತ್ತು ಹುಬ್ಬುಗಳು ಕಪ್ಪಾಗಿದ್ದರೆ ಅಂತಹ ಮಹಿಳೆಯರು ಅದೃಷ್ಟವಂತರು.

* ಸುಂದರ ಉದ್ದ ಮತ್ತು ದುಂಡವಾಗಿರುವ ಬೆರಳುಗಳ ಮಹಿಳೆಯರು ತಮ್ಮ ಜೀವನ ಸಂಗಾತಿಗೆ ಅದೃಷ್ಟವಂತರಾಗಿರುತ್ತಾರೆ.
* ಯಾವ ಹೆಣ್ಣಿನ ಮುಖವು ಚಂದ್ರನಂತೆ ದುಂಡಾಗಿರುತ್ತದೆ. ಸುಂದರ ಮೈ ಬಣ್ಣ ದೊಡ್ಡ ಕಣ್ಣುಗಳು ಮತ್ತು ತಿಳಿ ಕೆಂಪು ತುಟಿಗಳು ಅಂತಹ ಮಹಿಳೆ ತನ್ನ ಗಂಡನಿಗೆ ಪ್ರತಿಕ್ಷಣವೂ ಬೆಂಬಲ ನೀಡುತ್ತಾಳೆ ಇವರು ಜೀವನದಲ್ಲಿ ಎಲ್ಲ ಸಂತೋಷವನ್ನು ಅನುಭವಿಸುತ್ತಾರೆ.

* ಹೆಣ್ಣಿನ ಹಣೆಯ ಭಾಗವು ಅಗಲವಾಗಿದ್ದರೆ ಆ ಹೆಣ್ಣು ಮಗಳು ತನ್ನ ಗಂಡನ ಮನೆಗೆ ಹೋದಾಗ ಆ ಮನೆಯಲ್ಲಿ ಸುಖವಾಗಿರುತ್ತಾಳೆ.
* ಉದ್ದನೆಯ ಬೆರಳನ್ನು ಹೊಂದಿರುವ ಹೆಣ್ಣು ಮಗಳು ತನ್ನ ಗಂಡನ ಪಾಲಿಗೆ ಅದೃಷ್ಟ ದೇವತೆ ಇದ್ದಂತೆ.
* ದಪ್ಪವಾಗಿರುವ ಹೆಣ್ಣು ಮಗಳು ಆರ್ಥಿಕವಾಗಿ ಏನೇ ಕಷ್ಟ ಬಂದರೂ ಸದೃಢವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಮತ್ತು ನೋಡಲು ಆಕರ್ಷಕವಾಗಿದ್ದರೆ ಅವಳು ಮನೆಯಲ್ಲಿ ಸದಾ ಖುಷಿಯಿಂದ ಇರುತ್ತಾಳೆ.

ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ಅದೃಷ್ಟವಂತ ಹೆಣ್ಣು ಮಕ್ಕಳಲ್ಲಿ ಕಂಡುಬರುವಂತಹ ಗುಣಲಕ್ಷಣಗಳು ಎಂದೇ ಹೇಳಬಹುದು. ಆದರೆ ಕೆಲವೊಂದಷ್ಟು ಜನರಲ್ಲಿ ಇಂತಹ ಗುಣಲಕ್ಷಣಗಳು ಇದ್ದರೂ ಕೂಡ ಅವರು ತಮ್ಮ ಜೀವನದಲ್ಲಿ ಕೆಲವೊಂದಷ್ಟು ಸಮಸ್ಯೆಗಳನ್ನು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಎಂದು ಹೇಳಬಹುದು.

ಮೇಲೆ ಹೇಳಿದಂತೆ ಹಲವಾರು ವಿಧಾನಗಳನ್ನು ನೋಡುವುದರ ಮೂಲಕ ಶಾಸ್ತ್ರ ನೋಡುವುದರ ಮೂಲಕ ಅವರ ಗುಣ ಸ್ವಭಾವ ಹಾವಾ ಭಾವ ಹೀಗೆ ಹಲವಾರು ವಿಧಾನಗಳನ್ನು ಅನುಸರಿಸುವುದರ ಮೂಲಕ ಯಾವ ಹೆಣ್ಣು ಯಾವ ರೀತಿಯ ಗುಣಲಕ್ಷಣಗಳನ್ನು ಹೊಂದಿ ರುತ್ತಾಳೆ ಎಂದು ಹೇಳಬಹುದು.

ಆದರೆ ಅದು ಅವಳಲ್ಲಿ ಸದಾ ಕಾಲ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂದರೆ ಕೆಲವೊಂದು ಗುಣ ಲಕ್ಷಣಗಳು ಇದ್ದರೂ ಕೂಡ ಅದಕ್ಕೆ ತಕ್ಕಂತೆ ಗುಣಲಕ್ಷಣಗಳನ್ನು ಹೊಂದಿ ರುವುದಿಲ್ಲ. ಅದರ ವಿರುದ್ಧವಾಗಿ ಇರುತ್ತಾಳೆ. ಹಾಗಾಗಿ ಕೆಲವೊಂದಷ್ಟು ಜನ ಅದನ್ನು ನೋಡಿ ತಪ್ಪು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ನೋಡುವುದಾದರೆ ಈ ರೀತಿಯ ಗುಣಲಕ್ಷಣ ಹೊಂದಿರುವ ಮಹಿಳೆಯರು ಇದೇ ರೀತಿಯ ಅದೃಷ್ಟವನ್ನು ಹೊಂದಿರುತ್ತಾರೆ ಎಂದೇ ಕೆಲವೊಂದಷ್ಟು ಜನರಲ್ಲಿ ನಾವು ಕಾಣಬಹುದಾಗಿದೆ.

ದಿನಕ್ಕೊಂದು ಬೆಟ್ಟದ ನೆಲ್ಲಿಕಾಯಿ ಸೇವಿಸಿ ಸಾಕು.! 90% ರೋಗಗಳು ಬರುವುದಿಲ್ಲ.! ಬೆಟ್ಟದ ನೆಲ್ಲಿಕಾಯಿಯಲ್ಲಿ ಎಷ್ಟೊಂದು ಔಷಧಿ ಗುಣಗಳಿಗೆ ನೋಡಿ.!

 

ಬೆಟ್ಟದ ನೆಲ್ಲಿಕಾಯಿ ಇದನ್ನು ಆಯುರ್ವೇದದಲ್ಲಿ ಆಮ್ಲಕ್ಕಿ ಎಂದು ಕರೆಯುತ್ತಾರೆ. ಇದು ಸರ್ವೇ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಸುಲಭವಾಗಿ ಸಿಗುವಂತಹ ಪದಾರ್ಥವಾಗಿದ್ದು ಇದನ್ನು ಹೆಚ್ಚಿನ ಜನ ಸೇವನೆ ಮಾಡಿರುತ್ತಾರೆ ಹಾಗೂ ಕೆಲವೊಂದಷ್ಟು ಜನ ಇದನ್ನು ಸೇವನೆ ಮಾಡಲು ಇಷ್ಟಪಡುವುದಿಲ್ಲ.

ಏಕೆಂದರೆ ಇದು ಸ್ವಲ್ಪ ಪ್ರಮಾಣದ ಕಹಿ ಒಗರು ಅಂಶವನ್ನು ಹೊಂದಿದ್ದು ಇದು ತಿನ್ನಲು ಅಷ್ಟು ರುಚಿಯಾಗಿಲ್ಲ ಎನ್ನುವ ಉದ್ದೇಶದಿಂದ ಹೆಚ್ಚಿನ ಜನರು ಇದನ್ನು ತಿನ್ನಲು ಇಷ್ಟಪಡುವು ದಿಲ್ಲ. ಆದರೆ ಇದನ್ನು ಸೇವನೆ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದರೆ ನೀವೇ ಆಶ್ಚರ್ಯ ಪಡುತ್ತೀರಿ.

ಹೌದು ಬೆಟ್ಟದ ನೆಲ್ಲಿಕಾಯಿಯನ್ನು ಸೇವನೆ ಮಾಡುವುದ ರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ನಾವು ಪಡೆದು ಕೊಳ್ಳಬಹುದು ಹೌದು ಆಯುರ್ವೇದದಲ್ಲಿ ಬೆಟ್ಟದ ನೆಲ್ಲಿಕಾಯಿಗೆ ಬಹಳ ಮಹತ್ವವಾದ ಸ್ಥಾನ ಇದ್ದು. ಹಲವಾರು ರೀತಿಯ ಔಷಧಿಗಳ ತಯಾರಿಕೆಯಲ್ಲಿಯೂ ಕೂಡ ಇದನ್ನು ಯಥೇಚ್ಛವಾಗಿ ಬಳಸುತ್ತಾರೆ ಎಂದೇ ಹೇಳಬಹುದು.

ಆದರೆ ಹೆಚ್ಚಿನ ಜನಕ್ಕೆ ಈ ಮಾಹಿತಿ ತಿಳಿದಿಲ್ಲ ಆದ್ದರಿಂದ ಈ ದಿನ ಬೆಟ್ಟದ ನೆಲ್ಲಿಕಾಯಿಯನ್ನು ಸೇವನೆ ಮಾಡುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಯಾವ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಾವು ದೂರ ಮಾಡಿಕೊಳ್ಳಬಹುದು. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಈ ಒಂದು ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ B6, ಮೆಗ್ನೀಷಿಯಂ, ಪೊಟ್ಯಾಶಿಯಂ, ರೈಬೋಕ್ಲೋಮಿನ್, ಥಯಾಮಿನ್, ಆಂಟಿ ಆಕ್ಸಿಡೆಂಟ್ ನೈಟ್ರಿಕ್ ಆಕ್ಸೈಡ್ ಹಾಗೂ ಹೆಚ್ಚಾಗಿ ವಿಟಮಿನ್ ಸಿ ಅಂಶವನ್ನು ನಾವು ಇದರಲ್ಲಿ ಕಾಣಬಹುದು.

ಈ ಒಂದು ಬೆಟ್ಟದ ನೆಲ್ಲಿಕಾಯಿ ಯಾವ ರೀತಿಯ ಆಯುರ್ವೇದದ ರಸಗಳನ್ನು ಹೊಂದಿರುತ್ತದೆ ಎಂದು ನೋಡುವುದಾದರೆ ಐದು ರೀತಿಯ ರಸಗಳನ್ನು ಕಾಣಬಹುದು ಅವು ಯಾವುವೆಂದರೆ ಮಧುರ, ಆಮ್ಲ, ಕಟು, ತಿಕ್ತ, ಕಷಾಯ ಹಾಗಾದರೆ ಇದನ್ನು ಸೇವನೆ ಮಾಡುವುದರಿಂದ ಯಾವುದೆಲ್ಲ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ನೋಡುವುದಾದರೆ.

ಇದು ಕಣ್ಣಿಗೆ, ಹೃದಯಕ್ಕೆ, ನಮ್ಮ ಶರೀರಕ್ಕೆ ಹೊಸ ಚೈತನ್ಯವನ್ನು, ಹಾಗೂ ನಮ್ಮ ಶರೀರವನ್ನು ಶುದ್ಧೀಕರಣ ಮಾಡುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹಾಗಾದರೆ ನಾವು ಇದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದರೆ ಇದನ್ನು ಹೇಗೆ ಸೇವನೆ ಮಾಡಬೇಕು ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ.

* ಬೆಟ್ಟದ ನೆಲ್ಲಿಕಾಯಿಯನ್ನು ಚವನ್ ಪ್ರಾಶ್ ಮಾಡಿಕೊಂಡು ಕೂಡ ಸೇವನೆ ಮಾಡಬಹುದು. ಈ ರೀತಿ ಮಾಡಿಕೊಂಡು ಸೇವನೆ ಮಾಡುವುದ ರಿಂದ ಇದು ಶೀತ ವೀರ್ಯ ಗುಣ ಧರ್ಮವನ್ನು ಹೊಂದಿದ್ದರು ಕೂಡ ಕಫ ನಿವಾರಕವಾಗಿ ಕೆಲಸ ಮಾಡುತ್ತದೆ.

* ಇನ್ನು ಇದನ್ನು ಜ್ಯೂಸ್ ಮೂಲಕ ಸೇವನೆ ಮಾಡುವುದರಿಂದ ಪಿತ್ತಜನ್ಯ ವಾಗಿ ವಾತಜನ್ಯವಾಗಿ ಬರುವಂತಹ ರೋಗಗಳು ದೂರವಾಗುತ್ತದೆ. ವಾತ ಜನ್ಯವಾಗಿ ಬರುವಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳ ಬೇಕು ಎಂದರೆ ಇದರ ಜೊತೆ ಸ್ವಲ್ಪ ಪ್ರಮಾಣದ ಮೆಣಸನ್ನು ಸೇರಿಸಿ ಸೇವನೆ ಮಾಡುವುದು ಉತ್ತಮ.

* ಜೊತೆಗೆ ಯಾರು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದುಕೊಂಡಿರುತ್ತಾರೋ ಅಂದರೆ ದೇಹದ ಬೊಜ್ಜನ್ನು ದೂರ ಮಾಡಿ ಕೊಳ್ಳುವುದಕ್ಕೆ ಇದು ಬಹಳ ಅದ್ಭುತವಾದಂತಹ ಔಷಧಿ ಎಂದು ಹೇಳಬಹುದು.

* ಮೇಲೆ ಹೇಳಿದಂತೆ ಚವನ್ ಪ್ರಾಶ್ ಸೇವನೆ ಮಾಡುವುದರಿಂದ ರಕ್ತಹೀನತೆಯ ಸಮಸ್ಯೆಯನ್ನು ಕೂಡ ದೂರ ಮಾಡಿಕೊಳ್ಳಬಹುದು.
* ಹಾಗೂ ಯಾರಿಗೆ ಸಕ್ಕರೆ ಕಾಯಿಲೆ ಬಿಪಿ ಸಮಸ್ಯೆ ಇದೆ ಅಂಥವರು ಇದರ ಜ್ಯೂಸ್ ಅನ್ನು ಸೇವನೆ ಮಾಡುವುದರಿಂದ ಇವೆರಡು ಕೂಡ ನಿಯಂತ್ರಣಕ್ಕೆ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/-ml7MULeA_s?si=mUJaF4SBcrY6P1aL

ಡ್ರಿಂಕ್ಸ್ ಅಥವಾ ಕುಡಿತದ ಚಟ ಬಿಡಿಸುವ ಮನೆ ಮದ್ದು.!

 

ಇತ್ತೀಚಿನ ದಿನದಲ್ಲಿ ಅತಿ ಹೆಚ್ಚಿನ ಜನರು ಕುಡಿತದ ಚಟಕ್ಕೆ ಬಿದ್ದಿದ್ದು ಹೆಣ್ಣು ಮಕ್ಕಳು ಕೂಡ ಈ ಚಟವನ್ನು ಹೊಂದಿದ್ದಾರೆ ಹೌದು. ಪಟ್ಟಣ ಪ್ರದೇಶದಲ್ಲಿರುವಂತಹ ಅತಿ ಹೆಚ್ಚಿನ ಯುವಕ ಯುವತಿಯರು ಈ ಒಂದು ಕುಡಿತದ ಚಟವನ್ನು ಹೊಂದಿದ್ದು ಇದರಿಂದ ಅವರು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು. ಹೌದು ಇದು ತುಂಬಾ ಅಪಾಯಕಾರಿಯಾಗಿದ್ದು.

ಈ ಚಟವನ್ನು ಹೊಂದಿದ ಹೆಚ್ಚಿನ ಜನರು ಅತಿ ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು. ಅದರಲ್ಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕುಡಿದ ಚಟವನ್ನು ಹೊಂದಿದವರು ತಮ್ಮ ಕಿಡ್ನಿ ಲಿವರ್ ಶ್ವಾಸಕೋಶದ ಸಮಸ್ಯೆ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.

ಆದ್ದರಿಂದ ಈ ಒಂದು ಕುಡಿತದ ಚಟವನ್ನು ಪ್ರತಿಯೊಬ್ಬರೂ ನಿಲ್ಲಿಸು ವುದು ತುಂಬಾ ಅನುಕೂಲವಾಗಿದೆ. ಆದರೆ ಕೆಲವೊಂದಷ್ಟು ಜನ ಈ ಕುಡಿತದ ಚಟವನ್ನು ದೂರ ಮಾಡುವುದಕ್ಕೆ ಯಾವುದೇ ರೀತಿಯ ಔಷಧಿಯನ್ನು ಕೊಡಿಸಿದರು ಕೂಡ ಅವರು ಈ ಕುಡಿತದ ಚಟವನ್ನು ಬಿಡುವುದಿಲ್ಲ ಆದರೆ ಈ ದಿನ ನಾವು ಹೇಳುವಂತಹ ಈ ವಿಧಾನ ನೀವು ಮಾಡಿ ಅವರಿಗೆ ಕೊಡುವುದರಿಂದ ಅವರು ಕಡ್ಡಾಯವಾಗಿ ಅವರು

ತಮ್ಮ ಕುಡಿತದ ಚಟವನ್ನು ನಿಲ್ಲಿಸುತ್ತಾರೆ ಎಂದೇ ಹೇಳಬಹುದು. ಹಾಗಾದರೆ ಆ ಮನೆ ಮದ್ದುಗಳು ಯಾವುದು ಹಾಗೂ ಅದನ್ನು ಹೇಗೆ ಉಪಯೋಗಿಸಬೇಕು ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಹೀಗೆ ಈ ವಿಚಾರಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೇ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು.
ಬಜೆ ಬೇರು
ಸೋಂಪು
ಏಲಕ್ಕಿ
ಈ ಮೂರು ಪದಾರ್ಥವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣನೆಯ ಪುಡಿ ಮಾಡಿಕೊಳ್ಳಬೇಕು.

ನಂತರ ಒಂದು ಲೋಟ ನೀರಿಗೆ ಈ ಪುಡಿ ಒಂದು ಚಮಚ ತೆಗೆದು ಕೊಂಡು ಹಾಕಿ ಚೆನ್ನಾಗಿ ಕುದಿಸಬೇಕು ಒಂದು ಲೋಟ ನೀರು ಅರ್ಧ ಲೋಟ ಆಗುವ ತನಕ ಚೆನ್ನಾಗಿ ಕುದಿಸಬೇಕು ಇದನ್ನು ಪ್ರತಿದಿನ ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಕುಡಿದ ಚಟ ಹೊಂದಿರುವ ವ್ಯಕ್ತಿಗೆ ಕುಡಿಸ ಬೇಕು. ಈ ಒಂದು ವಿಧಾನವನ್ನು ನೀವು ಕಡ್ಡಾಯವಾಗಿ ಎರಡು ತಿಂಗಳು ಕೊಡಬೇಕು ಆಗ ಆ ವ್ಯಕ್ತಿ ಸಂಪೂರ್ಣವಾಗಿ ತನ್ನ ಕುಡಿದ ಚಟವನ್ನು ನಿಲ್ಲಿಸುತ್ತಾನೆ. ಈ ಒಂದು ಕಷಾಯ ಕುಡಿತದ ಚಟವನ್ನು ಅತಿ ಬೇಗನೆ ದೂರ ಮಾಡುವ ಒಂದು ಅದ್ಭುತವಾದ ವಿಧಾನ ಕಷಾಯ ಎಂದೇ ಹೇಳಬಹುದು.

ಎರಡನೇ ಮನೆಮದ್ದು ಮಾಡುವ ವಿಧಾನ :- ಸಾಮಾನ್ಯವಾಗಿ ಎಲ್ಲ ರಿಗೂ ಕೂಡ ಹರಳಿನ ಗಿಡ ತಿಳಿದೇ ಇದೆ. ಈ ಎಲೆಯನ್ನು ಚೆನ್ನಾಗಿ ಜಜ್ಜಿ ಅದರ ರಸವನ್ನು ತೆಗೆದುಕೊಳ್ಳಬೇಕು ಯಾವ ವ್ಯಕ್ತಿ ಆ ಸಮಯದಲ್ಲಿ ಕುಡಿದು ನಿದ್ರಾಹೀನನಾಗಿರುತ್ತಾನೋ ಅಂತಹ ಸಮಯದಲ್ಲಿ ಅವನ ಮೂಗಿನ ಹೊಳ್ಳೆಗೆ ಈ ಎಲೆಯ ರಸವನ್ನು ಎರಡರಿಂದ ಮೂರು ಹನಿ ಹಾಕಬೇಕು ಹಾಕಿದ ಅರ್ಧ ಗಂಟೆಗೆ ಆ ವ್ಯಕ್ತಿ ಸಂಪೂರ್ಣವಾಗಿ ವಾಂತಿ ಮಾಡಿಕೊಳ್ಳುತ್ತಾನೆ.

ಈ ರೀತಿ ಈ ವಿಧಾನವನ್ನು ನೀವು ಮೂರ್ನಾಲ್ಕು ಬಾರಿ ಮಾಡಿದರೆ ಆ ವ್ಯಕ್ತಿ ಜೀವನದಲ್ಲಿ ಎಂದಿಗೂ ಕೂಡ ಕುಡಿತದ ಚಟವನ್ನು ಮಾಡಲು ಸಾಧ್ಯವಾಗುವುದಿಲ್ಲ ಅದು ಅವನನ್ನು ದೂರ ಇಡುವಂತೆ ಕಾಪಾಡುತ್ತದೆ ಹೀಗೆ ಈ ವಿಧಾನಗಳನ್ನು ನೀವು ಅನುಸರಿಸು ವುದರಿಂದ ಕುಡಿತದ ಚಟ ಹೊಂದಿರುವ ವ್ಯಕ್ತಿಯನ್ನು ಅದರಿಂದ ಸಂಪೂರ್ಣವಾಗಿ ಆಚೆ ತರಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

https://youtu.be/NsbJeaOFEEo?si=57BbkCGiilTgXmMg

ಬಿಪಿ, ಶುಗರ್, ರಕ್ತಹೀನತೆ, ಮೊಣಕಾಲು ನೋವು ತಲೆಕೂದಲಿನ ಸಮಸ್ಯೆ ಎಲ್ಲಾ ಸಮಸ್ಯೆಗೂ ರಾಮಬಾಣ ಇಲ್ಲಿದೆ ನೋಡಿ.!

 

ಕ್ಯಾಲ್ಸಿಯಂ ‌, ಫೈಬರ್, ಪಾಸ್ಪರಸ್, ಮೈಕ್ರೋ ನ್ಯೂಟ್ರಿಯನ್ಸ್ ಆಂಟಿ ಆಕ್ಸಿಡೆಂಟ್ಸ್, ನೈಟ್ರಿಕ್ ಆಸಿಡ್ ನಂತಹ ಅಂಶಗಳು ಹೇರಳವಾಗಿರುವ ಪದಾರ್ಥವಾದ ಈ ನುಗ್ಗೆ ಸೊಪ್ಪು. ನುಗ್ಗೆಕಾಯಿ ಗಿಂತಲೂ ಕೂಡ ರಿಚೆಸ್ಟ್ ಆಹಾರ ಎನ್ನಬಹುದು. ಕ್ಯಾಲ್ಸಿಯಂ ಹಾಗೂ ಪಾಸ್ಪರಸ್ ಅಂಶವು ದೇಹದಲ್ಲಿ ಮೂಳೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹರಿಸುತ್ತದೆ.

ಮೂಳೆ ಹಾಗೂ ಮಾಂಸಗಳ ಆರೋಗ್ಯಕ್ಕೆ ಒಳ್ಳೆಯದು. ರಕ್ತ ಪರಿಚಲನೆಯ ಪ್ರಕ್ರಿಯೆಯು ಸರಾಗವಾಗಿ ನಡೆಯಬೇಕು ಎಂದರೆ ಈ ರಕ್ತಪರಿಚಲನ ವ್ಯೂಹಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗೆ ಕ್ಯಾಲ್ಸಿಯಂ ನ ಅವಶ್ಯಕತೆ ಹೆಚ್ಚಾಗಿರುತ್ತದೆ, ಕ್ಯಾಲ್ಸಿಯಂ ಇದಕ್ಕೆ ಪೂರಕವಾಗಿದೆ. ಕ್ಯಾಲ್ಸಿಯಂ ಹೇರಳವಾಗಿರುವ ನುಗ್ಗೆ ಸೊಪ್ಪಿನ ಸೇವನೆಯಿಂದ ರಕ್ತ ಶುದ್ದಿ ಆಗುತ್ತದೆ ಹಾಗೂ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗುತ್ತದೆ.

ಥೈರಾಯ್ಡ್ ‌, ಪಿಟ್ಯುಟರಿ, ಪಿನಲ್ ಗ್ರಂಥಿಗಳ ಸ್ರವಿಸುವಿಕೆಯಲ್ಲಿ ಇಂಬಾಲೆನ್ಸ್ ಆಗದಂತೆ ತಡೆಗಟ್ಟುವಲ್ಲಿ ನುಗ್ಗೆ ಸೊಪ್ಪಿನಲ್ಲಿರುವ ಅನೇಕ ಪೋಷಕಾಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ರೀತಿ ಹಾರ್ಮೋನ್ ಇಂಬುಲೆನ್ಸ್ ಆದವರಲ್ಲಿಯೂ ಕೂಡ ಮೂಳೆಗಳ ಹಾಗೂ ಮಾಂಸಖಂಡಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರುತ್ತವೆ, ಅದನ್ನು ಪರಿಹರಿಸುವಲ್ಲಿ ಕೂಡ ಸಹಕರಿಸುತ್ತದೆ.

ದೇಹಕ್ಕೆ ಶಕ್ತಿಯನ್ನು ಹಿಡಿದಿರುವ ಸೆಲ್ಯುಲಾರ್ ಗಳ ಸಾಮರ್ಥ್ಯ ವೃದ್ಧಿಗೆ ಕೂಡ ಪಾಸ್ಪರಸ್ ಅಂಶ ಅನುಕೂಲಕರವಾಗಿದೆ ಮ. ಇದರಿಂದ ಸುಸ್ತಾಗುವುದು, ನಿಶಕ್ತಿ ಕಡಿಮೆ ಆಗುತ್ತದೆ. ಬಹಳ ಜನರಿಗೆ ಗೊತ್ತಿಲ್ಲದ ಮಾಹಿತಿ ಏನೆಂದರೆ ನುಗ್ಗೆ ಸೊಪ್ಪಿನ ಸೇವನೆಯಿಂದ ಅಥವಾ ನುಗ್ಗೆ ಸೊಪ್ಪಿನ ಪ್ಯಾಕ್ ಹಾಕುವುದರಿಂದ ಕೂದಲಿನ ಆರೋಗ್ಯ ಕೂಡ ವೃದ್ಧಿಸುತ್ತದೆ ಎನ್ನುವುದು.

ಕೂದಲಿಗೆ ಸಂಬಂಧಪಟ್ಟ ಸಮಸ್ಯೆಗಳಾದ ಕೂದಲು ಉದುರುವುದು, ಕೂದಲು ಕಟ್ ಆಗುವುದು, ತಲೆ ಹೊಟ್ಟು ಅಥವಾ ಕೂದಲು ಬೇಗನೆ ಬೆಳ್ಳಗೆ ಆಗುತ್ತಿರುವುದು ಇಂತಹ ಯಾವುದೇ ಸಮಸ್ಯೆ ಇದ್ದರೂ ಕೂಡ ನುಗ್ಗೆ ಸೊಪ್ಪನ್ನು ಚೆನ್ನಾಗಿ ಪೇಸ್ಟ್ ಮಾಡಿ ತಲೆ ಕೂದಲಿಗೆ ಹಚ್ಚಬೇಕು. ಸ್ವಲ್ಪ ಹೊತ್ತು ಬಿಟ್ಟು ಸೀಗೆಕಾಯಿ ಅಥವಾ ಅಂಟವಾಳ ಕಾಯಿ ಬಳಸಿ ಕೂದಲು ಕ್ಲೀನ್ ಮಾಡಿಕೊಳ್ಳಬೇಕು.

ಈ ರೀತಿ ಮಾಡಿದಾಗ ಅದ್ಭುತ ರೀತಿಯ ಫಲಿತಾಂಶವನ್ನು ಇದು ಕಾಣುತ್ತೀರಿ ಇದರೊಂದಿಗೆ ದೇಹದ ದುರ್ಗಂಧ ಚರ್ಮದ ಇನ್ಫೆಕ್ಷನ್ ಗಳು ಇದ್ದರೂ ಈ ಪೇಸ್ಟನ್ನು ದೇಹಕ್ಕೂ ಕೂಡ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಕಡಲೆಹಿಟ್ಟಿನಿಂದ ಸ್ನಾನ ಮಾಡಿದರೆ ಸಮಸ್ಯೆ ಪರಿಹಾರ ಆಗುತ್ತದೆ, ಚರ್ಮದ ಕಾಂತಿ ಹೆಚ್ಚಾಗುತ್ತದೆ.

ಇದರಲ್ಲಿರುವ ಫೈಬರ್ ಅಂಶ ಮೂಳೆಗಳನ್ನು ಗಟ್ಟಿ ಮಾಡಿ ಸಂಧಿವಾತ ಆಮವಾದದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಫ್ಯಾಟ್ ಮೆಟಬಾಲಿಸಂನ್ನು ಕ್ರಿಯಾಶೀಲಗೊಳಿಸುವ ಮೂಲಕ ಬಿಪಿ ಶುಗರ್ ಕಂಟ್ರೋಲ್ ಮಾಡುವಲ್ಲಿ ಸಹಾಯಕಾರಿ ಹಲ್ಲುಗಳ ಆರೋಗ್ಯವು ಉತ್ತಮವಾಗಲು ಕ್ಯಾಲ್ಸಿಯಂ ಅವಶ್ಯಕತೆ ಇದೆ.

ಈ ಕ್ಯಾಲ್ಸಿಯಂ ನುಗ್ಗೆ ಸೊಪ್ಪಿನಲ್ಲಿ ಹೇರಳವಾಗಿ ಸಿಗುವುದರಿಂದ ನುಗ್ಗೆ ಸೊಪ್ಪಿನ ಸೇವನೆಯು ಹಲ್ಲುಗಳ ಆರೋಗ್ಯಕ್ಕೂ ಕೂಡ ಒಳ್ಳೆಯದು. ಅಜೀರ್ಣ, ಮಲಬದ್ಧತೆ ಮುಂತಾದ ಸಮಸ್ಯೆಗಳು ಕ್ಲಿಯರ್ ಆಗುತ್ತದೆ. ದೇಹದಲ್ಲಿ ವಾತ ವಿಕಾರಗಳು ಆಗಿದ್ದರೆ ಅದು ಕೂಡ ಕಂಟ್ರೋಲ್ ಗೆ ಬರುತ್ತದೆ.

ಕಣ್ಣಿನ ಆರೋಗ್ಯಕ್ಕೆ ನುಗ್ಗೆ ಸೊಪ್ಪು ಬಹಳ ಒಳ್ಳೆಯ ಆಹಾರ ಕಣ್ಣಿನ ದೃಷ್ಟಿ ವೃದ್ಧಿಸುತ್ತದೆ ಇಂತಹ ನೂರಾರು ಉಪಯೋಗಗಳು ನುಗ್ಗೆ ಸೊಪ್ಪಿನ ಸೇವನೆಯಿಂದ ಸಿಗುವುದರಿಂದ ನುಗ್ಗೆ ಸೊಪ್ಪಿಗೆ ಆಯುರ್ವೇದದಲ್ಲೂ ಮಹತ್ವದ ಸ್ಥಾನ ನೀಡಲಾಗಿದೆ. ಇಂದಿನಿಂದ ನೀವು ಕೊಟ್ಟ ನುಗ್ಗೆ ಸೊಪ್ಪಿನ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.

ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ.!

 

ರೇಷನ್ ಕಾರ್ಡ್ (ration card) ಈಗ ಎಷ್ಟು ಪ್ರಮುಖ ದಾಖಲೆಯಾಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕರ್ನಾಟಕದಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಷಯವಾದ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ (ration vard cumpulsory for guarantee Schemes) ಸಹಾಯಧನವನ್ನು ಪಡೆಯಲು ರೇಷನ್ ಕಾರ್ಡ್ ನಲ್ಲಿ ಹೆಸರಿರುವುದು ಬಹಳ ಮುಖ್ಯ.

ಆದರೆ ಈವರೆಗೂ ಅನೇಕರು ರೇಷನ್ ಕಾರ್ಡ್ ಅನ್ನು ಬಹಳ ತಾತ್ಸಾರ ಮಾಡಿದ್ದರು ಕೆಲವರ ಬಳಿ ರೇಷನ್ ಕಾರ್ಡ್ ಇಲ್ಲ, ಇನ್ನು ಕೆಲವರಿಗೆ ರೇಷನ್ ಕಾರ್ಡ್ ನಲ್ಲಿ ಇರುವ ಹೆಸರು ತಪ್ಪಾಗಿದೆ, ರೇಷನ್ ಕಾರ್ಡ್ ನಲ್ಲಿ ಕುಟುಂಬದ ಹೊಸ ಸದಸ್ಯರ ಹೆಸರು ಸೇರ್ಪಡೆ ಆಗಬೇಕಾಗಿದೆ, ಮ’ರ’ಣ ಹೊಂದಿರುವ ಸದಸ್ಯರ ಹೆಸರನ್ನು ತೆಗೆದು ಹಾಕಿಸಬೇಕಿದೆ, ಕುಟುಂಬದಲ್ಲಿ ಮುಖ್ಯಸ್ಥರ ಸ್ಥಾನ ಬದಲಾಯಿಸಬೇಕಾಗಿದೆ.

ಇನ್ನು ಮುಂತಾದ ಅನೇಕ ತಿದ್ದುಪಡಿಗಳಿವೆ ರೇಷನ್ ಕಾರ್ಡ್ ನ ಅಗತ್ಯತೆ ಅರಿವಾದ ಮೇಲೆ ಅನೇಕರು ರೇಷನ್ ಕಾರ್ಡ್ ತಿದ್ದುಪಡಿಗಾಗಿ ಕಾಯುತ್ತಿದ್ದಾರೆ. ರೇಷನ್ ಕಾರ್ಡ್ ನಲ್ಲಿ ಮಾಹಿತಿ ಸರಿಯಾಗಿ ಇಲ್ಲದೆ ಇದ್ದವರು ಮತ್ತು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿ ಇರುವ ರೀತಿ ರೇಷನ್ ಕಾರ್ಡ್ ನಲ್ಲಿ ಹೆಸರು ಇಲ್ಲದೆ ಇರುವವರು ಗ್ಯಾರಂಟಿ ಯೋಜನೆಯ ಹಣ ಪಡೆಯಲು ಸಾಧ್ಯವಾಗಲಿಲ್ಲ.

ಈ ಎಲ್ಲಾ ಕಾರಣಗಳಿಂದ ರೇಷನ್ ಕಾರ್ಡ್ ಪಡೆದುಕೊಳ್ಳಲು ಮತ್ತು ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಲು (new ration card amd correction application) ಕಾಯುತ್ತಿರುವವರ ಸಂಖ್ಯೆ ದುಪ್ಪಟ್ಟು ಹೆಚ್ಚಾಗಿದೆ. ಸರ್ಕಾರವು ಕೂಡ ಇವರ ಮನವಿಗಳಿಗೆ ಸ್ಪಂದಿಸಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಹಲವು ಬಾರಿ ಕಾಲಾವಕಾಶ ಮಾಡಿಕೊಟ್ಟಿದೆ.

ಆದರೆ ಪ್ರತಿ ಬಾರಿಯೂ ಸರ್ವರ್ ಸಮಸ್ಯೆ ಅಥವಾ ಹೆಚ್ಚಾದ ರಜ ದಿನಗಳು ಇತ್ಯಾದಿ ಕಾರಣಗಳಿಂದಾಗಿ ಸಂಪೂರ್ಣವಾಗಿ ಎಲ್ಲರಿಗೂ ತಿದ್ದುಪಡಿ ಮಾಡಿಸಿಕೊಳ್ಳಲು ಹಾಗೂ ಹೊಸ ಕಾಡಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಅಂತವರಿಗೆ ಮತ್ತೊಮ್ಮೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ (Food amd Civil supply department notification)

ಫಲಾನುಭವಿಗಳ ಮಾಹಿತಿ ತಿದ್ದುಪಡಿ ಮತ್ತು ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆಗೆ 29 & 30 ನವೆಂಬರ್, 2023ರ ಬೆಳಗ್ಗೆ 10:00 ರಿಂದ 12:00 ಗಂಟೆವರೆಗೆ ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರಿಗೆ 3 ಡಿಸೆಂಬರ್, 2023 ರಂದು ಬೆಳಗ್ಗೆ 11:00 ರಿಂದ ಮಧ್ಯಾಹ್ನ 2:00 ರವರೆಗೆ ಅರ್ಜಿ ಆಹ್ವಾನಿಸಲಾಗುವುದು. ಈ ಬಾರಿ ಪ್ರೈವೇಟ್ ಸೆಕ್ಟರ್ ನಲ್ಲಿ ಅವಕಾಶ ಇರುವುದಿಲ್ಲ.

ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಮಾತ್ರ ತಿಳಿಸಲಾದ ದಿನಾಂಕದಂದು ನೀಡಿರುವ ಸಮಯದ ಒಳಗಡೆ ಅರ್ಜಿ ಸಲ್ಲಿಸಿ ಬೇಕು ಎಂದು ಪ್ರಕಟಣೆ ಹೊರಡಿಸಿ ಘೋಷಿಸಲಾಗಿತ್ತು. ಆದರೆ ಈಗ ಅದರಲ್ಲಿ ಒಂದು ಪ್ರಮುಖ ಬದಲಾವಣೆ (update) ಆಗಿದೆ ಮತ್ತೊಮ್ಮೆ ಇಲಾಖೆ ವತಿಯಿಂದ ಈ ಕುರಿತಾದ ಪ್ರಕಟಣೆ ಹೊರಡಿಸಿ ನಾಗರಿಕರಿಗೆ ವಿಷಯ ತಿಳಿಸಲಾಗಿದೆ.

ಪ್ರಕಟಣೆಯಲ್ಲಿರುವ ವಿಷಯ ಏನೆಂದರೆ, ಈ ಮೇಲೆ ತಿಳಿಸಿದ ದಿನಗಳಂದು ತಾಂತ್ರಿಕ ದೋಷಗಳಿರುವ ಕಾರಣ ಸೇವೆಗಳು ಲಭ್ಯವಿಲ್ಲ (no service because of technical issues) ಆದರೆ ಈ ಸಮಸ್ಯೆಯನ್ನು ಸರಿಪಡಿಸಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಹೆಚ್ಚಿನ ಸಮಯಾವಕಾಶ ಕಲ್ಪಿಸಿ ಕೊಡಲಾಗುವುದು ಎಂದು ಸ್ಪಷ್ಟೀಕರಿಸಲಾಗಿದೆ.

ಇದರಿಂದ ಸಾಕಷ್ಟು ಜನರಿಗೆ ನಿರಾಸೆ ಆಗಿರುವುದಂತೂ ನಿಜ ಆದರೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಅವಕಾಶ ನೀಡಲಾಗುವುದು ಎನ್ನುವ ಭರವಸೆ ಇರುವುದರಿಂದ ಸಮಾಧಾನ ಪಟ್ಟುಕೊಳ್ಳೋಣ. ಬಹಳ ಜನರಿಗೆ ಉಪಯುಕ್ತವಾಗುವ ಮಾಹಿತಿ ಇದಾಗಿದ್ದು ತಪ್ಪದೆ ಇದನ್ನು ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

 

ದೇಹದ ಮೇಲಿರುವ ಗಾಯ ಮಾಯವಾಗಲು ಈ ಸಿಂಪಲ್ ಮನೆಮದ್ದು ಮಾಡಿ ಸಾಕು.!

 

ಈಗಿನ ಕಾಲದಲ್ಲಿ ಸೌಂದರ್ಯಕ್ಕೆ ಬೆಲೆ ಎಂದರೆ ಆ ಮಾತು ತಪ್ಪಾಗಲಾರದು. ನಿಧಾನವಾಗಿ ನಾವು ವ್ಯಕ್ತಿತ್ವಕ್ಕೆ ಮನಸೋತು ಗೌರವ ಕೊಟ್ಟರು ಕೂಡ ಮೊದಲ ಬಾರಿಗೆ ನೋಡಿದ ತಕ್ಷಣ ಆಕರ್ಷಣೆಯಾಗುವುದು ಅವರ ಸೌಂದರ್ಯದಿಂದಲ ಹೀಗಾಗಿ ಪ್ರತಿಯೊಬ್ಬರೂ ದೇಹದ ಸೌಂದರ್ಯದ ಬಗ್ಗೆ ಕಾಳಜಿ ಮಾಡುತ್ತಾರೆ.

ಈ ವಿಚಾರದಲ್ಲಿ ಹೆಣ್ಣು ಮಕ್ಕಳು ಮಾತ್ರ ಎಂದು ಹೇಳುವಂತಿಲ್ಲ ಇತ್ತೀಚಿನ ದಿನಗಳಲ್ಲಿ ಹುಡುಗರು ಕೂಡ ಹೆಚ್ಚು ಅಟ್ರಾಕ್ಟಿವ್ ಆಗಿರೋದು ಕಾನ್ಫಿಡೆನ್ಸ್ ಎಂದು ಭಾವಿಸಿದ್ದಾರೆ, ಹಾಗಾಗಿ ತಮ್ಮನ್ನು ಚೆನ್ನಾಗಿ ಪ್ರಸೆಂಟ್ ಮಾಡಿಕೊಳ್ಳುವುದಕ್ಕೆ ಬಯಸುತ್ತಾರೆ. ಈ ವಿಚಾರದಲ್ಲಿ ಎಲ್ಲರಿಗೂ ಸಮಸ್ಯೆ ಆಗುವುದು ಮುಖ ಹಾಗೂ ಕೈಕಾಲುಗಳಲ್ಲಿ ಇರುವ ಕಲೆಗಳು ಅದಕ್ಕೆ ಸಂಬಂಧಪಟ್ಟ ಹಾಗೆ ಒಂದು ಪರಿಹಾರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಮುಖ ಹಾಗೂ ಕೈಕಾಲುಗಳಿಗೆ ಕಲೆಗಳು ಆಗುತ್ತವೆ ಅದು ನಾವು ಗಾಯ ಮಾಡಿಕೊಂಡಿದ್ದ ಕಲೆಗಳು ಅಥವಾ ಚರ್ಮದ ಸಮಸ್ಯೆಗಳಾಗಿ ಕಲೆಗಳು ಅಥವಾ ಆಕ್ಸಿಡೆಂಟ್ ಕುರುಹುಗಳು ಇನ್ಯಾವುದೋ ಮಾರ್ಕ್ ಗಳು ಇರಬಹುದು. ಇದು ಮುಖಕ್ಕೆ ದೃಷ್ಟಿಬೋಟ್ಟು ಇದ್ದಂತಾಗಿ ಮುಖದ ಲಕ್ಷಣವನ್ನೇ ಕೆಡಿಸಿ ಬಿಡುತ್ತದೆ. ಕೈಕಾಲುಗಳಲ್ಲಿ ಇದ್ದರೂ ಕೂಡ ಅದನ್ನು ತೋರಿಸಿಕೊಳ್ಳುವುದಕ್ಕೆ ಒಂದು ರೀತಿಯ ಮುಜುಗರ ಆಗುತ್ತದೆ.

ಯಾವುದೇ ಮಾರ್ಕ್ ಗಳು ಮುಖದಲ್ಲಿ ಉಳಿಯದಂತೆ ಜೊತೆಗೆ ಅತಿ ಹೆಚ್ಚು ಬಿಸಿಲಿನಲ್ಲಿ ಓಡಾಡಿ ಸನ್ ಟ್ಯಾನ್ ಆಗಿದ್ದರು ಅಥವಾ ಬಿಸಿಲಿಗೆ ಹೋಗದೆ ಇರುವ ಕಾರಣಕ್ಕಾಗಿ ಮುಖದಲ್ಲೀ ಭಂಗು ರೀತಿಯ ಕಲೆಗಳು ಆಗಿದ್ದರು ಈಗ ನಾವು ಹೇಳುತ್ತಿರುವ ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ. ಎರಡು ಮೂರು ಬಾರಿ ಇದನ್ನು ಮಾಡಿದಾಗಲೇ ಅದ್ಭುತವಾದ ರಿಸಲ್ಟ್ ಕಾಣುತ್ತೀರಿ ಮತ್ತು ಯಾವುದೇ ಫೇಶಿಯಲ್ ಗಿಂತಲೂ ಕಡಿಮೆ ಇಲ್ಲದ ಲುಕ್ ಹಾಗು ರಿಲ್ಯಾಕ್ಸ್ ಅನ್ನು ನೀಡುತ್ತದೆ.

ನಿಮ್ಮ ಮನೆಯಲ್ಲಿ ಇರುವ ಪದಾರ್ಥಗಳಲ್ಲಿ ಉಪಯೋಗಿಸಿಕೊಂಡು ಅತಿ ಕಡಿಮೆ ಖರ್ಚಿನಲ್ಲಿ ಅದ್ಭುತವಾದ ರಿಸಲ್ಟ್ ಕೊಡುವ ಈ ಮನೆ ಮದ್ದು ಮಾಡಬಹುದು. ಇದನ್ನು ಮಾಡಲು ಬೇಕಾಗಿರುವುದು ನಿಂಬೆಹಣ್ಣಿನ ಸಿಪ್ಪೆ, ನಿಂಬೆಹಣ್ಣಿನ ರಸ, ಮುಲ್ತಾನ್ ಮಟ್ಟಿ, ರೋಜ್ ಪೆಟಲ್ಸ್, ಅಲೋವೆರಾ ಹಾಗೂ ಸ್ವಲ್ಪ ದಾಲ್ಚಿನ್ನಿ ಪೌಡರ್.

ಈಗ ನಾನು ಹೇಳಿದ ಈ ಎಲ್ಲಾ ವಸ್ತುಗಳನ್ನು ಕೂಡ ಒಂದು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಗ್ರೈಂಡ್ ಮಾಡಿಕೊಳ್ಳಿ ಈ ರೀತಿ ತಯಾರಾದ ಫೈನ್ ಪೇಸ್ಟ್ ಅನ್ನು ಮೊದಲು ಮುಖವನ್ನು ಚೆನ್ನಾಗಿ ವಾಶ್ ಮಾಡಿ ಮುಖಕ್ಕೆ ಅಪ್ಲೈ ಮಾಡಿ ಪ್ಯಾಕ್ ಹಾಕಿಕೊಳ್ಳಿ. ಒಂದು ವೇಳೆ ಕೈಕಾಲುಗಳಲ್ಲಿ ಈ ರೀತಿ ಕಲೆಗಳು ಇದ್ದರೆ ಕೈ ಕಾಲುಗಳಿಗೂ ಕೂಡ ಹಚ್ಚಬಹುದು.

ಇದನ್ನು ತಯಾರಿಸುವಾಗಲೇ ಮುಲ್ತಾನ್ ಮಟ್ಟಿ ಜಾಸ್ತಿಯಾಗಿ ಬಳಸಿ ಅದು ಉತ್ತಮ ರಿಸಲ್ಟ್ ಕೊಡುತ್ತದೆ. ಈ ರೀತಿ ಹಾಕಿದ ಮೇಲೆ ಅದು ಒಣಗುವರೆಗೂ ಬಿಟ್ಟು ನಿಧಾನವಾಗಿ ಅದನ್ನು ಸ್ಕ್ರಬ್ ಮಾಡಿ ತೆಗೆಯಿರಿ ಈಗ ಮುಖವನ್ನು ವಾಶ್ ಮಾಡಲು ಕಡಲೆ ಹಿಟ್ಟು ಅಥವಾ ಮುಲ್ತಾನ್ ಮಟ್ಟಿಯನ್ನೇ ಬಳಸಿ. ಈ ರೀತಿ ವಾರದಲ್ಲಿ ಎರಡು ದಿನ ಅಥವಾ ಮೂರು ದಿನ ಮಾಡಿ ಒಂದೇ ವಾರದಲ್ಲಿ ನಿಮಗೆ ಅದ್ಭುತವಾದ ರಿಸಲ್ಟ್ ತಿಳಿಯುತ್ತದೆ ಮತ್ತು ಇದರ ಫಲಿತಾಂಶವನ್ನು ನೀವು ಅರಿತ ಮೇಲೆ ತಪ್ಪದೆ ಈ ಸಿಂಪಲ್ ಟ್ರಿಕ್ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ.

 

ಮುಖದ ಮೇಲಿನ ಕಪ್ಪು ಕಲೆ / ಭಂಗು ಕ್ಲಿಯರ್ ಮಾಡಲು ಅದ್ಭುತವಾದ ಮನೆ ಮದ್ದು. ರಾತ್ರಿ ಹಚ್ಚಿ ಬೆಳಗ್ಗೆ ಮುಖ ತೊಳೆದರೆ ಸಾಕು .!

 

ಪ್ರತಿಯೊಬ್ಬರಿಗೂ ಕೂಡ ತಾವು ಚೆನ್ನಾಗಿ ಕಾಣಬೇಕು ಎನ್ನುವ ಆಸೆ ಇದೆ. ಅದರಲ್ಲಿ ಹೆಣ್ಣು ಮಕ್ಕಳಿಗಂತೂ ಅವರ ಸೌಂದರ್ಯದ್ದೇ ಚಿಂತೆ ಮ. ಈಗಷ್ಟೇ ಶಾಲೆಗೆ ಹೋಗುತ್ತಿರುವ ಹೆಣ್ಣು ಮಗುವಿನಿಂದ ಹಿಡಿದು ವಯಸ್ಸಾಗಿರುವವರ ವರೆಗೆ ಹೆಣ್ಣು ಮಕ್ಕಳು ತಾವು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂದು ಆಸೆ ಪಡುತ್ತಾರೆ. ಅದಕ್ಕಾಗಿ ಎಷ್ಟೆಷ್ಟೋ ಮೇಕಪ್ ಮಾಡುತ್ತಾರೆ ಆದರೆ ಮುಖದಲ್ಲಿ ಅದರ ಪ್ರಭಾವ ಕಾಣಲಿಲ್ಲ ಎಂದರೆ ಆಗುವ ನೋ’ವು ಅಸ್ತಿಷ್ಟಲ್ಲ.

ಇದಕ್ಕೆ ಕಾರಣ ನಮ್ಮ ಮುಖದಲ್ಲಿರುವ ಕಲೆಗಳು ನಾವು ಏನೇ ಹಾಕಿ ಇದನ್ನು ಕವರ್ ಮಾಡಲು ಹೋದರು ಅದು ನ್ಯಾಚುರಲ್ ಎನಿಸುವುದಿಲ್ಲ ಮುಖದಲ್ಲಿರುವ ಕಪ್ಪು ಕಲೆಗಳು, ಭಂಗು ಮುಖದ ಚೆಂದವನ್ನು ಹಾಳು ಮಾಡುತ್ತಿರುತ್ತದೆ. ಯಾವುದೇ ಸಮಸ್ಯೆ ಆದರೂ ಅದಕ್ಕೆ ಪರಿಹಾರ ಇದ್ದೇ ಇದೆ. ಆದರೆ ಅಡ್ಡ ಪರಿಣಾಮಗಳಿಲ್ಲದೆ ಸೂಕ್ಷ್ಮವಾಗಿ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು ಇದಕ್ಕೆ ಆಯುರ್ವೇದ ಬೆಸ್ಟ್.

ಯಾವುದೇ ದುಬಾರಿ ಬೆಲೆಯ ಔಷಧಿ ಅಲ್ಲ ಜೊತೆಗೆ ನೂರಕ್ಕೆ ನೂರರಷ್ಟು ಯಾವುದೇ ಅಡ್ಡ ಪರಿಣಾಮ ಇಲ್ಲ ನ್ಯಾಚುರಲ್ಲಾಗಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ನ್ಯಾಚುರಲ್ ಆಗಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು. ಅದರ ಬದಲು ದುಬಾರಿ ಬೆಳೆಯ ಕೆಮಿಕಲ್ ಯುಕ್ತ ಕ್ರೀಮ್ ಗಳನ್ನು ಬಳಸಿದರೆ ಚರ್ಮದ ಆರೋಗ್ಯ ಬಹಳ ಸೂಕ್ಷ್ಮವಾಗಿರುವುದರಿಂದ ಮುಂದಿನ ದಿನಗಳಲ್ಲಿ ಬೇರೆ ರೀತಿಯ ಸಮಸ್ಯೆ ಕಾಣಿಸಿಕೊಳ್ಳಬಹುದು.

ಕೆಲವರು ಲೇಸರ್ ಚಿಕಿತ್ಸೆ ಕಡೆ ಹೋಗುತ್ತಾರೆ ಇದು ಕೂಡ ಒಳ್ಳೆಯದಲ್ಲ ಯಾಕೆಂದರೆ ಮುಖದಲ್ಲಿ ಅತಿ ಸೂಕ್ಷ್ಮತೆ ಸೂಕ್ಷ್ಮ ನರಗಳು ಇರುವುದರಿಂದ ಇದಕ್ಕೆಲ್ಲ ಹಾನಿ ಆಗುತ್ತದೆ. ಇದರ ಬದಲು ನ್ಯಾಚುರಲ್ ಆಗಿ ಯಾವ ರೀತಿ ಮುಖದಲಾಗಿರುವ ಭಂಗು ಹಾಗೂ ಕಪ್ಪು ಕಲೆಗಳನ್ನು ಹೋಗಿಸಿಕೊಳ್ಳಬಹುದು ಎನ್ನುವ ಮನೆಮದ್ದುಗಳನ್ನು ತಿಳಿಸಿಕೊಡುತ್ತಿದ್ದೇವೆ ಇದನ್ನು ಪಾಲಿಸಿ ಪರಿಹಾರ ಪಡೆಯಿರಿ.

* ಮೊದಲಿಗೆ ಯಾವುದೇ ಸಮಸ್ಯೆಗೆ ಯಾವುದೇ ಸಮಸ್ಯೆಗೆ ಕಾರಣ ಕಂಡುಕೊಂಡರೆ ಪರಿಹಾರ ಬಹಳ ಸುಲಭ ಜೊತೆಗೆ ಅದನ್ನು ಮತ್ತೆ ಬಾರದಂತೆ ಮೂಲದಿಂದ ಗುಣ ಮಾಡುವುದು ಕೂಡ ಮುಖ್ಯ, ಹೀಗಾಗಬೇಕು ಎಂದರೆ ಮೊದಲು ನಿಮ್ಮ ಕರುಳು ಕ್ಲೀನ್ ಆಗಿ ಇರಬೇಕು.

ಅಜೀರ್ಣ ಮಲಬದ್ಧತೆ ಮತ್ತು ಪಿತ್ತ ವಿಕಾರಗಳಿಂದಾಗಿ ಕರುಳಿನಲ್ಲಿ ಟಾಕ್ಸಿನ್ ಅಂಶಗಳು ಸೇರಿಕೊಂಡು ಅದರ ಪರಿಣಾಮವಾಗಿ ಮುಖದಲ್ಲಿ ಈ ರೀತಿ ಕಲೆಗಳು ಉಂಟಾಗುತ್ತಿರುತ್ತವೆ. ನಮ್ಮ ಹೊಟ್ಟೆ ಕ್ಲೀನ್ ಆಗಲು ತುಪ್ಪದ ಸೇವನೆ ಅತ್ಯುತ್ತಮ ಔಷಧಿ ಪ್ರತಿದಿನ ಬೆಳಿಗ್ಗೆ ತಪ್ಪದೇ ಒಂದು ಚಮಚ ಶುದ್ಧ ಹಸುವಿನ ತುಪ್ಪ ಸೇವಿಸಿ.

* ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಸಾಧ್ಯವಾದಷ್ಟು ಕುಡಿಯುವುದರಿಂದ ಕೂಡ ಕರುಳು ಕ್ಲೀನ್ ಆಗುತ್ತದೆ ಈ ಮೂಲಕ ಮಲಬದ್ಧತೆ, ಅಸಿಡಿಟಿ ಹಾಗೂ ಅಜೀರ್ಣದಂತಹ ಸಮಸ್ಯೆಗಳು ಕ್ಲಿಯರ್ ಆಗುತ್ತವೆ.

* ಹೊರಗಿನಿಂದ ಕೂಡ ಔಷಧಿ ಹಾಕುವುದು ಮುಖ್ಯ. ಅದಕ್ಕಾಗಿ ಕಕ್ಕೆ ಮರ ಎನ್ನುವುದು ಹಳ್ಳಿಗಾಡಿನಲ್ಲಿರುವ ಎಲ್ಲರಿಗೂ ತಿಳಿದಿರುತ್ತದೆ. ಇದು ಸೀಸನ್ ನಲ್ಲಿ ವೃಕ್ಷ ಪೂರ್ತಿ ಹೂ ಬಿಡುತ್ತದೆ. ಹೂ ಹಳದಿ ಬಣ್ಣದಲ್ಲಿದ್ದು ಹೂ ಬಿಟ್ಟಾಗ ಇಡಿ ವೃಕ್ಷವೇ ಬಂಗಾರದ ವೃಕ್ಷದ ರೀತಿ ಕಾಣುತ್ತಿರುತ್ತದೆ.

ಆ ಸಮಯದಲ್ಲಿ ಹೂವನ್ನು ತಂದು ಚೆನ್ನಾಗಿ ಒಣಗಿಸಿ ಪುಡಿಮಾಡಿ ಇಟ್ಟುಕೊಳ್ಳಿ, ನಿಮಗೆ ಯಾವ ದಿನ ಹಚ್ಚಬೇಕು ಆ ದಿನ ಕೊಬ್ಬರಿ ಎಣ್ಣೆ ಜೊತೆಗೆ ಈ ಪುಡಿಯನ್ನು ಮಿಕ್ಸ್ ಮಾಡಿ ಭಂಗು ಅಥವಾ ಕಪ್ಪು ಕಲೆಗಳು ಇರುವ ಜಾಗಕ್ಕೆ ಹಾಕಿ ರಾತ್ರಿಪೂರ್ತಿ ಹಾಗೆ ಬಿಟ್ಟು ಮರುದಿನ ಬೆಳಿಗ್ಗೆ ಕಡಲೇಹಿಟ್ಟಿನಿಂದ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ ಅದ್ಭುತವಾದ ರಿಸಲ್ಟ್ ಕಾಣುತ್ತೀರಿ.

* ಒಂದು ವೇಳೆ ಇದನ್ನು ಮಾಡಲು ಸಾಧ್ಯವಾಗದೆ ಇದ್ದರೆ ಆಯುರ್ವೇದ ಅಂಗಡಿಗಳಲ್ಲಿ ಸೌಂದರ್ಯ ತೈಲ ಸಿಗುತ್ತದೆ ಅದನ್ನು ಕೂಡ ಬಳಸಬಹುದು.

https://youtu.be/zApUQkzmGpo?si=WRug_8K5nSjzMemz