Home Blog Page 106

ಒಂದು ಚಮಚ ಧನಿಯಾ ನೀರು ನಿಮ್ಮ ದೇಹದಲ್ಲಿ ಎಷ್ಟೆಲ್ಲಾ ಬದಲಾವಣೆ ಮಾಡುತ್ತದೆ ಗೊತ್ತಾ.?

 

ನಮ್ಮ ಹಿರಿಯರು ಹಿಂದೆಲ್ಲಾ ಅಡುಗೆ ಮನೆ ಡಬಬಿ ಗಳಲ್ಲಿರುವ ಮಸಾಲೆ ಪದಾರ್ಥಗಳಿಂದಲೇ ಬಹುತೇಕ ಎಲ್ಲಾ ಖಾಯಿಲೆಗಳಿಗೂ ಔಷಧಿ ಮಾಡಿಕೊಳ್ಳುತ್ತಿದ್ದರು. ನಮ್ಮ ಆಯುರ್ವೇದ ಕೂಡ ಇದನ್ನೇ ಹೇಳುತ್ತದೆ. ಖಾಯಿಲೆ ಬಂದ ಮೇಲೆ ಚಿಕಿತ್ಸೆಗೆ ಒದ್ದಾಡುವುದಕ್ಕಿಂತ ನಮ್ಮ ದೇಹಕ್ಕೆ ಯಾವುದೇ ಪೋಷಕಾಂಶ, ವಿಟಮಿನ್ ಗಳು ಮತ್ತು ಇನ್ನಿತರ ನ್ಯೂಟ್ರಿಯೆಂಟ್ಸ್ ಗಳ ಕೊರತೆ ಆಗದಂತೆ ಸರಿಯಾದ ಆಹಾರ ಪದ್ಧತಿ ರೂಢಿಸಿಕೊಂಡರೆ ಒಳ್ಳೆಯದು.

ಆಗಿದ್ದು ಒಮ್ಮೊಮ್ಮೆ ಆರೋಗ್ಯ ವ್ಯತ್ಯಾಸ ಆದರೆ ನಮ್ಮ ಮನೆಯಲ್ಲಿರುವ ಪದಾರ್ಥಗಳಿಂದಲೇ ಅದನ್ನು ಗುಣಪಡಿಸಿಕೊಳ್ಳಬಹುದು. ಈ ರೀತಿರ ಪದಾರ್ಥಗಳಲ್ಲಿ ಧನಿಯಾ ಮಹತ್ವದ ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ಇದನ್ನು ಧನ್ಯ ಪದಾರ್ಥ ಎಂದು ಕೂಡ ಹೇಳುತ್ತಾರೆ. ಕೊತ್ತಂಬರಿ ಬೀಜ, ಹವೀಜಾ ಎಂದು ಕೂಡ ಕರೆಯಲಾಗುವ ಇದಕ್ಕೆ ಆಯುರ್ವೇದದಲ್ಲಿ ಬಹಳ ಮಹತ್ವದ ಸ್ಥಾನ ಇದೆ.

ಇದರಲ್ಲಿ ಮೆಗ್ನೀಷಿಯಂ ಕ್ರೋಮಿಯಂ ಝಿಂಕ್ ಮುಂತಾದ ಅನೇಕ ಜೀವಸತ್ವಗಳಿವೆ. ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹಕ್ಕೆ ಇಮ್ಯೂನಿಟಿ ಪವರ್ ಕೊಡುತ್ತದೆ. ಇದು ವಾತಾ ಪಿತ್ತ ಕಫ ಮುಂತಾದ ಎಲ್ಲಾ ದೋಷಗಳನ್ನು ಕೂಡ ಸರಿಪಡಿಸುತ್ತದೆ. ಅಡುಗೆಗೆ ಬಳಸುವುದರಿಂದ ಅಥವಾ ಪ್ರತಿನಿತ್ಯ ಒಂದು ಚಮಚ ದನಿಯಾವನ್ನು ಒಂದು ಲೋಟ ಬಿಸಿನೀರಿಗೆ ಹಾಕಿ ಕುದಿಸಿ ಆರಿಸಿ ಕುಡಿಯುವುದರಿಂದ ಅಥವಾ ಧನಿಯಾ ಕಷಾಯ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಬಹುದು ಅದರಲ್ಲಿ ಕೆಲ ವಿವರ ಹೀಗಿದೆ ನೋಡಿ.

* ನಿಯಮಿತವಾಗಿ ದನಿಯಾವನ್ನು ಆಹಾರದಲ್ಲಿ ಸೇವಿಸುವುದರಿಂದ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳು ಗುಣ ಆಗುತ್ತವೆ, ಕಿಡ್ನಿಯಲ್ಲಿರುವ ನ್ಯೂರಾನ್ ಗಳಿಗೆ ಕ್ರಿಯಾಶೀಲ ಗುಣ ಹೆಚ್ಚಾಗುತ್ತದೆ ಇದರ ಮೂಲಕ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತಾಗುತ್ತದೆ, ದೇಹದ ಟಾಕ್ಸಿನ್ ಅಂಶಗಳನ್ನು ಹೊರಹಾಕುವಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸುತ್ತದೆ.

* ಹೈಪರ್ ಥೈರಾಯ್ಡಿಸಂ ಮತ್ತು ಹೈಪೋ ಥೈರಾಯಿಡಿಸಂ ಈ ರೀತಿ ಥೈರೊಯ್ಡ್ ಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೂ ಕೂಡ ಪ್ರತಿದಿನ ಕೊತ್ತಂಬರಿ ಬೀಜವನ್ನು ಸೇವಿಸುವುದು ಒಳ್ಳೆಯದು.
* ಗಾಯಿಟರ್ ಎನ್ನುವ ಗಂಟಲಿಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆ ಬರುತ್ತದೆ ಇದಕ್ಕೂ ಕೂಡ ಕೊತ್ತಂಬರಿ ಬೀಜ ಹಾಕಿದ ನೀರು ಅಥವಾ ಕಷಾಯ ಬಹಳ ಒಳ್ಳೆಯದು.

* ಕೆಲವರಿಗೆ ದೇಹ ಬಹಳ ಕಂಟ್ರೋಲ್ ತಪ್ಪುತ್ತದ. ಅವರಿಗೆ ಉಷ್ಣ ಪದಾರ್ಥ ಸೇವಿಸಿದಾಗ ಶೀತವಾಗುವುದು, ಶೀತ ಪದಾರ್ಥಗಳನ್ನು ಸೇವಿಸಿದಾಗ ಉಷ್ಣವಾಗುವುದು ಈ ರೀತಿ ಸಮಸ್ಯೆ ಆಗುತ್ತಿರುತ್ತದೆ. ಈ ರೀತಿ ಕಫ ಪಿತ್ತ ವಾಯುವಿಕಾರವಾಗಿ ಸಮಸ್ಯೆ ಪಡುತ್ತಿರುವವರು ನಿಯಮಿತವಾಗಿ ದನಿಯಾ ಸೇವನೆ ಮಾಡುವುದರಿಂದ ಸಮಸ್ಯೆ ಕಂಟ್ರೋಲ್ ಆಗಿ ನಾರ್ಮಲ್ ಗೆ ಬರುತ್ತಾರೆ.

* ಚರ್ಮಕ್ಕೆ ಸಂಬಂಧಿಸಿದ ದೋಷಗಳು ಇರುವವರು ಕೂಡ ನಿಯಮಿತವಾಗಿ ದನಿಯಾ ಸೇವನೆ ಮಾಡುವುದರಿಂದ ಇದು ಗುಣವಾಗುತ್ತದೆ.
* ಲಿವರ್ ಗೆ ಸಂಬಂಧಿಸಿದ ತೊಂದರೆಗಳನ್ನು ಅನುಭವಿಸುತ್ತಾ ಇರುವವರು ಕೂಡ ನಿಯಮಿತವಾಗಿ ದನಿಯಾ ಸೇವನೆ ಮಾಡುವುದರಿಂದ ಲಿವರ್ ಕ್ಲೀನ್ ಆಗುತ್ತದೆ. ದನಿಯ ಕಷಾಯ ಕುಡಿಯುವುದರಿಂದ ಲಿವರ್ ಸಮಸ್ಯೆ ಬರುವುದಿಲ್ಲ.

* ಹೃದ್ಯಾ ಅಂದರೆ ಹೃದಯದ ಶಕ್ತಿಯನ್ನು ಹೆಚ್ಚಿಸುತ್ತದೆ, ಮೂತ್ರಲ ಎಂದರೆ ದೇಹದಿಂದ ಟಾಕ್ಸಿನ್ ಅಂಶಗಳನ್ನು ಮೂತ್ರದ ಮೂಲಕ ಹೊರ ಹಾಕುವುದು, ಚಕ್ಷುಷ್ಯ ಕಣ್ಣಿನ ಆರೋಗ್ಯವನ್ನು ಕಾಪಾಡುವುದು ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ.
* ಹೆಣ್ಣು ಮಕ್ಕಳಿಗೆ ಗರ್ಭಕೋಶಕ್ಕೆ ಸಂಬಂಧಿಸಿದ PCOD, PCOS ಮುಂತಾದ ಸಮಸ್ಯೆಗಳನ್ನು ಕೂಡ ನಿಯಂತ್ರಣಕ್ಕೆ ತರುತ್ತದೆ.

* ಮೇಧ್ಯ ಹಾಗೂ ಸ್ಥಿಗ್ದ್ನ ಗುಣ ಹೊಂದಿರುವುದರಿಂದ ಬಹಳ ಒಳ್ಳೆಯದು. ಜ್ಞಾಪಕ ಶಕ್ತಿ ಸ್ಮರಣಶಕ್ತಿ ಐ ಕ್ಯೂ ಲೆವಲ್ ಇವುಗಳನ್ನು ಇಂಪ್ರೂ ಮಾಡುತ್ತದೆ.
* ಕರುಳಿನ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ದನಿಯಾ ರಾಮಬಾಣ. ನರ ದೌರ್ಬಲ್ಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

https://youtu.be/9QEj7hr2T6w?si=7t_Mfh1SUebUbqgW

ವಿಶ್ವದ ಅತಿ ದೊಡ್ಡ ವಿವಾದ.! ಮಾಂಸಾಹಾರಿಗಳು ತಪ್ಪದೆ ನೋಡಿ.!

 

ಇದುವರೆಗೂ ಇದ್ದ ವಾದವೇನೆಂದರೆ ಕೋಳಿ ಮೊದಲಾ ಮೊಟ್ಟೆ ಮೊದಲಾ ಎಂದು ಆದರೆ ಈಗ ಟ್ರೆಂಡ್ ಬದಲಾಗಿದೆ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಇಂಟರೆಸ್ಟ್ ಕಡಿಮೆಯಾಗಿ ಯಾವ ಕೋಳಿ ಒಳ್ಳೆಯದು ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ಈ ಕೋಳಿ ತಿನ್ನುವ ಆಸೆಯಿಂದ ಹಿಡಿದು ಈ ಅಭ್ಯಾಸ ಶುರುವಾದ ನಾಗರಿಕತೆ ತನಕ ಮತ್ತು ಈಗ ಇರುವ ಫಾರಂ ಕೋಳಿಗಳು ಆರೋಗ್ಯಕ್ಕೆ ಎಷ್ಟು ಒಳ್ಳೆಯದು.?

ಮತ್ತು ಮೊಟ್ಟೆಯ ಮೇಲಿನ ಬಣ್ಣದಿಂದ ಅದರ ಗುಣಮಟ್ಟ ಅಳೆಯುವುದು ಸರಿಯೇ ಎನ್ನುವುದರ ವರೆಗೆ ಈ ಅಂಕಣದಲ್ಲಿ ಕೆಲ ಪ್ರಮುಖ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ. ಕೋಳಿ ತಿನ್ನುವವರು ಅಥವಾ ಮೊಟ್ಟೆ ತಿನ್ನುವವರು ಸಮಯ ಮಾಡಿಕೊಂಡು ಈ ಅಂಕಣವನ್ನು ಕೊನೆಯವರೆಗೂ ತಪ್ಪದೆ ಓದಿ.

ನಮಗೆ ಈಗ ಸಿಕ್ಕಿರುವ ಪುರಾವೆಗಳ ತನಕ ಸಿಂಧೂ ನಾಗರಿಕತೆಯಿಂದಲೂ ಕೂಡ ಮನುಷ್ಯರು ಕೋಳಿ ತಿನ್ನುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ. ಆದರೆ ನಮ್ಮ ದೇಶದಲ್ಲಿ ಕೋಳಿ ಸಾಕುವ ಅಭ್ಯಾಸ ಇರಲಿಲ್ಲ, ಕಾಡು ಕೋಳಿಗಳನ್ನು ಆಹಾರಕ್ಕಾಗಿ ಬೇಟೆಯಾಡುತ್ತಿದ್ದರು.

ಆದರೆ ಭಾರತದ ಐತಿಹಾಸಿಕ ವೃತ್ತಾಂತಗಳಲ್ಲಿ ಚಿಕನ್ ಬಗ್ಗೆ ಆಗಲಿ ಮೊಟ್ಟೆ ಬಗ್ಗೆ ಆಗಲಿ ಹೆಚ್ಚು ಪ್ರಸ್ತಾಪವಿಲ್ಲ. ದಕ್ಷಿಣ ಏಷ್ಯಾ ಹಾಗೂ ಚೀನಾದ ದಕ್ಷಿಣ ಭಾಗಗಳಲ್ಲಿ ಈ ರೀತಿ ಕೋಳಿ ಸಾಕಾಣಿಕೆ ಮಾಡುವುದು ರೂಢಿಯಲ್ಲಿತ್ತು ನಂತರ ಅದು ವಿಶ್ವದ ಎಲ್ಲಾ ಕಡೆ ಹಬ್ಬಿತು ಎಂದು ಕೆಲಸ ಸಂಶೋಧನೆಗಳು ಹೇಳುತ್ತವೆ. 1939 ರಿಂದ 1945ರ ವೇಳೆ ನಡೆದ ಎರಡನೇ ಮಹಾಯುದ್ಧದ ಸಂದರ್ಭ ಕೋಳಿ ಸಾಕಾಣಿಕೆಗೆ ಹೊಸ ಪರ್ವವನ್ನು ಬರೆಯಿತು ಎಂದರೆ ತಪ್ಪಾಗಲಾರದು.

ಯಾಕೆಂದರೆ ಅಲ್ಲಿಯವರೆಗೂ ದನ ಹಾಗೂ ಹಂದಿಯ ಮಾಂಸಗಳನ್ನು ಹೆಚ್ಚು ಮಾಂಸಹಾರಿಗಯಳು ಸೇವಿಸುತ್ತಿದ್ದರು. ಅದರಲ್ಲಿ ಒಂದು ವರ್ಗಕ್ಕೆ ಹಂದಿ ನಿಷಿದ್ಧವಾಗಿದ್ದರೆ ಮತ್ತೊಂದು ವರ್ಗ ದನದ ಮಾಂಸ ಸೇವಿಸುತ್ತಿರಲಿಲ್ಲ. ಹೀಗಾಗಿ ಕೋಳಿಯ ಮಾಂಸವು ಎಲ್ಲರೂ ಸೇವಿಸಬಹುದಾದ ಆಹಾರ ಆದ್ದರಿಂದ ಮತ್ತು ಕೋಳಿ ಮಾಂಸದ ರುಚಿ ನಾಲಿಗೆ ಹತ್ತಿದ್ದರಿಂದ ಕೋಳಿ ಮಾಂಸದ ಕಡೆಗೆ ಜನ ವಾಲಿದರು ಮತ್ತು ಇದನ್ನು ಫಾರಂಗಳಲ್ಲಿ ಬೆಳೆಸುವುದು ಕೂಡ ಬಹಳ ಸಲೀಸು ಎನಿಸತೊಡಗಿತ್ತು. ಆದರೆ ಭಾರತದಲ್ಲಿ ಹಲವು ವರ್ಷಗಳವರೆಗೆ ಆಹಾರಕ್ಕಾಗಿ ಮನೆಗಳಲ್ಲಿಯೇ ಕೋಳಿ ಸಾಕಾಣಿಕೆ ಮಾಡುತ್ತಿದ್ದರು ಈಗಲೂ ಹಳ್ಳಿಗಳ ಭಾಗದಲ್ಲಿ ಈ ಅಭ್ಯಾಸ ಇದೆ. ಈ ಕೋಳಿಗಳು ಮನೆಯಲ್ಲಿ ಹಾಕುವ ಧವಸ ಧಾನ್ಯಗಳನ್ನು ಮಾತ್ರವಲ್ಲದೆ ಅವುಗಳ ಅಕ್ಕಪಕ್ಕ ಜಾಗದಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಹುಳಹುಪ್ಪಟೆಗಳನ್ನು ಆಯ್ದುಕೊಂಡು ತಿಂದು ಬದುಕುತ್ತವೆ, ಹೀಗಾಗಿ ಈ ನಾಟಿ ಕೋಳಿಗಳು ಹೆಚ್ಚು ಪೋಷಕಾಂಶವನ್ನು ಹೊಂದಿರುತ್ತವೆ ಮತ್ತು ಇವುಗಳು ಯಾವಾಗಲೂ ಓಡಾಡುತ್ತಿರುವುದರಿಂದ ಇವುಗಳ ಮಾಂಸ ಆರೋಗ್ಯಕ್ಕೆ ಅಷ್ಟೊಂದು ಮಾರಕವಲ್ಲ ಎಂದು ಹೇಳಲಾಗುತ್ತದೆ.

ಆದರೆ ಫಾರಂಗಳಲ್ಲಿ ಕೋಳಿಗಳನ್ನು ಸಾಕಿ ಮಾರಾಟ ಮಾಡುವ ಬಿಸಿನೆಸ್ ಆರಂಭ ಆದಮೇಲೆ ಕೋಳಿಗಳನ್ನು ಬರಿ ಮಾಂಸದ ಉದ್ದೇಶಕ್ಕಾಗಿ ಬೆಳೆಯಲಾಯಿತು. ಅದಕ್ಕಾಗಿ ಕೋಳಿಗಳು ದಷ್ಟಪುಷ್ಟವಾಗಿ ಬೆಳೆಯಲಿ ಎನ್ನುವ ಕಾರಣಕ್ಕಾಗಿ ಅವುಗಳಿಗೆ ಹಲವು ಔಷಧಿಗಳನ್ನು ನೀಡಲಾಗುತ್ತಿದೆ ಮತ್ತು ಕೋಳಿ ಜ್ವರ ಬಂದರೆ ಒಂದರಿಂದ ಒಂದಕ್ಕೆ ಬಹಳ ಬೇಗ ಎಲ್ಲವೂ ಸಾವನಪ್ಪುವುದನ್ನು ತಪ್ಪಿಸಲು Colistin antibiotic ಡ್ರಗ್ ಗಳನ್ನು ನೀಡಲಾಗುತ್ತದೆ. ಇದು ಕೋಳಿ ಮೂಲಕ ಮಾನವನ ದೇಹಕ್ಕೂ ಸೇರುತ್ತದೆ ಎಂದು ಬ್ಯಾನ್ ಕೂಡ ಮಾಡಲಾಗಿದೆ, ಅವುಗಳಿಗೆ ನೀಡುವ antimicrobial resistance ದೇಹದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ ಆಗ ದೇಹವು ವೈರಸ್, ಬ್ಯಾಕ್ಟೀರಿಯಾ ಫಂಗಸ್ ವಿರುದ್ಧ ಹೋರಾಡುವ ಶಕ್ತಿಯನ್ನು ಕಳೆದುಕೊಳ್ಳುವುದರಿಂದ ಇವುಗಳಿಗೆ ಸಂಬಂಧಿಸಿದ ಇಂಫೆಕ್ಷನ್ ಗಳಿಗೆ ಒಳಗಾಗುತ್ತದೆ.ಆದರೂ ಕಣ್ತಪ್ಪಿಸಿ ಈ ವ್ಯವಹಾರ ನಡೆಯುತ್ತಲೇ ಇದೆ ಮತ್ತು ಫಾರಂ ಗಳಲ್ಲಿ ಸಾಕು ಕೋಳಿಯೂ ಜೈಲಿನಲ್ಲಿರುವುದರಿಂದ ಅವುಗಳ ಮಾಂಸ ಹೆಚ್ಚು ಆರೋಗ್ಯಕರವಲ್ಲ ಎಂದು ಹೇಳಲಾಗುತ್ತದೆ.

antibiotic free chicken ಕೂಡ ಕೆಲವು ಬ್ರಾಂಡ್ ಗಳಲ್ಲಿ ಸಿಗುತ್ತದೆ ಆದರೆ ಅದರ ರುಚಿ ಜನರಿಗೆ ಹಿಡಿಸಿದ ಕಾರಣ ಅವರು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ಕೋಳಿ ಮೊಟ್ಟೆಗಳ ಬಗ್ಗೆ ಹೇಳುವುದಾದರೆ Brown Shell ಹಾಗೂ White Shell ಮೊಟ್ಟೆಗಳನ್ನು ನೋಡುತ್ತೇವೆ. ಆದರೆ ಇದು ಅವುಗಳಲ್ಲಿರುವ ಪೋಷಕಾಂಶಗಳನ್ನು ಸೂಚಿಸುವುದಿಲ್ಲ ಬದಲಾಗಿ ಅದರ ತಳಿ ಹಾಗೂ ಕೋಳಿ ಬಣ್ಣದ ಆಧಾರದ ಮೇಲೆ ಇದು ನಿರ್ಧಾರವಾಗುತ್ತದ ಎರಡರಲ್ಲೂ ಒಂದೇ ರೀತಿಯ ಪೋಷಕಾಂಶಗಳಿರುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ.

ಸಕ್ಕರೆ ಫ್ಯಾಕ್ಟರಿಯಲ್ಲಿ ಹೇಗೆ ತಯಾರಾಗುತ್ತದೆ ನೋಡಿ.!

 

ಸಕ್ಕರೆಯನ್ನು ಬೆಳ್ಳಗಾಗಿಸಲು ಮತ್ತು ಅದಕ್ಕೆ ಕ್ರಿಸ್ಟಲ್ ರೂಪ ಕೊಡಲು ಬಳಸುವ ಕೆಮಿಕಲ್ ದೇಹಕ್ಕೆ ಎಷ್ಟು ಮಾರಕ ಗೊತ್ತಾ? ಪ್ರತಿಯೊಬ್ಬರೂ ತಪ್ಪದೆ ಈ ಮಾಹಿತಿ ನೋಡಿ ಸಕ್ಕರೆ ಎಂದ ತಕ್ಷಣ ಅನೇಕರಿಗೆ ಬಾಯಲ್ಲಿ ನೀರು ಬರುತ್ತದೆ. ಅದರ ಕ್ರಿಸ್ಟಲ್ ರೂಪ, ಬಿಳಿ ಬಣ್ಣ ಎಂತಹವರನ್ನಾದರೂ ಆಕರ್ಷಣೆ ಮಾಡುತ್ತದೆ.

ನಮಗೆ ಸಿಹಿ ಪದಾರ್ಥ ಎಂದರೆ ಸಕ್ಕರೆಯಿಂದ ಮಾಡಿದ್ದೆ ಆಗಬೇಕು ಎನ್ನುವ ಮಟ್ಟಕ್ಕೆ ನಮ್ಮ ಮನಸ್ಥಿತಿ ಬದಲಾಗಿದೆ ಆದರೆ ಇಷ್ಟು ಇಷ್ಟಪಟ್ಟು ಮಕ್ಕಳಿಂದ ವೃದ್ದರವರೆಗೆ ಎಲ್ಲರಿಗೂ ನೋಡಿದ ತಕ್ಷಣ ಒಂದು ಚಮಚ ಬಾಯಿಗೆ ಹಾಕಿಕೊಳ್ಳುವ ಈ ಸಕ್ಕರೆಯಿಂದ ನಮ್ಮ ದೇಹಕ್ಕೆ ಎಷ್ಟೊಂದು ರೀತಿಯ ಕಾಯಿಲೆಗಳು ಬರುತ್ತಿವೆ ಗೊತ್ತಾ?

ಸಕ್ಕರೆ ಪದಾರ್ಥ ಹೆಚ್ಚಿಗೆ ತಿನ್ನುವುದರಿಂದ ಶುಗರ್ ಬರುತ್ತದೆ ಎನ್ನುವುದು ಅನೇಕರಿಗೆ ಗೊತ್ತು ಇದಲ್ಲದೆ ಸಕ್ಕರೆ ರೂಪ ತಾಳುವುದಕ್ಕಾಗಿ ಅದಕ್ಕೆ ಹಾಕಿರುವ ಕೆಮಿಕಲ್ ಗಳಿಂದ ಇನ್ನೂ ಎಂತಹ ವ್ಯಾಧಿಗಳು ದೇಹವನ್ನು ಬಾಧಿಸಬಹುದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಸಕ್ಕರೆಯನ್ನು ಕಬ್ಬಿನಿಂದ ತಯಾರಿಸುತ್ತಾರೆ. ಕಬ್ಬನ್ನು ರಸ ತೆಗೆದು ಕುದಿಸಿದಾಗ ಅದು ಬಿಳಿ ಬಣ್ಣದ ಇರುವುದಿಲ್ಲ. ಬದಲಾಗಿ ಚಾಕಲೇಟ್ ಕಲರ್ ಇರುತ್ತದೆ. ಅದನ್ನು ಬಿಳಿ ಮಾಡಿ, ಸಣ್ಣ ಸಣ್ಣ ಚೂರುಗಳಾಗಿ ಮಾಡುವುದಕ್ಕೆ ಅನೇಕ ಕೆಮಿಕಲ್ ಗಳ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ಫ್ಯಾಕ್ಟರಿಗಳಲ್ಲಿ ಸಲ್ಫರ್ ಡೈ ಆಕ್ಸೈಡ್ ಪಾಸ್ಪರಿಕ್ ಆಸಿಡ್, ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಬಳಸಲೇಬೇಕು.

ಈ ಕೆಮಿಕಲ್ ಗಳಿಂದ ಆಗುವಂತಹ ದುಷ್ಪರಿಣಾಮ ಎಷ್ಟಿದೆ ಎನ್ನುವುದು ಗೊತ್ತಾದರೆ ಇನ್ನು ಮುಂದೆ ಬಹುತೇಕರು ಸಕ್ಕರೆ ತಿನ್ನುವುದನ್ನೇ ನಿಲ್ಲಿಸಿ ಬಿಡಬಹುದು. ನಿಧಾನ ವಿಷ ಎಂದು ಕರೆಯಲಾಗುವ ಈ ಸಕ್ಕರೆಗೆ ಹಾಕಿರುವ ಕೆಮಿಕಲ್ ಗಳಿಂದ ಶರೀರದಲ್ಲಿ ಬೇಡದ ಆಸಿಡ್ ಗಳು ಹೆಚ್ಚು ಉತ್ಪತ್ತಿ ಆಗುತ್ತವೆ. ಇವು ಪಿತ್ತ, ವಾತ, ಕಫ ವಿಕಾರಗಳಿಗೆ ಕಾರಣವಾಗುತ್ತದೆ.

ಶರೀರದ ‌PH value ಹಾಳಾಗುತ್ತದೆ. ಫ್ಯಾಟ್ ಮೆಟಬೋಲಿಸಂ ಸ್ಲೋ ಆಗುತ್ತದೆ. ಲಿವರ್ ,ಕಿಡ್ನಿ, ಕರುಳು, ಪಿತ್ತಕೋಶ, ಮೇದೋಜೀರಕ ಗ್ರಂಥಿ, ಜಠರ ಇವುಗಳು ನಿಶ್ಯಕ್ತಗೊಳ್ಳುತ್ತವೆ. ಪಾಸ್ಪರಿಕ್ ಆಸಿಡ್ ಹಾಗೂ ಸಲ್ಫರ್ ಆಕ್ಸೈಡ್ , ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ನಿಂದ ಶ್ವಾಸಕೋಶದ ಆರೋಗ್ಯ ಬಹಳ ಗಂಭೀರವಾಗುತ್ತದೆ.

ಶರೀರಕ್ಕೆ ಪ್ರಾಣಶಕ್ತಿ ಒದಗಿಸುವಂತಹ ಶ್ವಾಸಕೋಶ ಹಾಗೂ ನಾವು ತಿಂದ ಆಹಾರವನ್ನು ಜೀರ್ಣ ಮಾಡಿ ಶಕ್ತಿ ನೀಡುವ ಪೋಷಕಾಂಶಗಳನ್ನು ಕರಗಿಸುವ ಜೀರ್ಣಾಂಗವ್ಯೂಹದ ವಿವಿಧ ಅಂಗಗಳನ್ನು ಡ್ಯಾಮೇಜ್ ಮಾಡಿಕೊಳ್ಳುವುದರಿಂದ ದೇಹ ಬಹಳ ದುರ್ಬಲಗೊಳ್ಳುತ್ತದೆ. ಹಾಗಾಗಿ ಜನತೆ ಇದರ ಬಗ್ಗೆ ಎಚ್ಚೆತ್ತುಕೊಂಡು ಸಕ್ಕರೆ ಸೇವಿಸುವುದು ನಿಲ್ಲಿಸುವುದು ಬಹಳ ಒಳ್ಳೆಯದು. ಸಕ್ಕರೆ ಬದಲಿಗೆ ಬೆಲ್ಲವನ್ನು ಸೇವಿಸುವುದು ಬಹಳ ಬದಲಾವಣೆ.

ಶುದ್ಧವಾಗಿ ತಯಾರಾದ ಬೆಲ್ಲಗಳಲ್ಲಿ ದೇಹಕ್ಕೆ ಪೂರಕವಾದ ಅನೇಕ ಪೋಷಕಾಂಶಗಳು ಇರುತ್ತವೆ. ಕ್ಯಾಲ್ಸಿಯಂ ಹೇರಳವಾಗಿದ್ದು ರಕ್ತ ಹೀನತೆಗೆ ಬೆಲ್ಲ ಪರಿಹಾರ. ಜೊತೆಗೆ ಬೆಲ್ಲವನ್ನು ತಿನ್ನುವುದರಿಂದ ದೇಹದಲ್ಲಿ ಅನೇಕ ಉತ್ತಮ ರೀತಿಯ ಬದಲಾವಣೆಗಳು ಆಗುತ್ತದೆ.

ಬೆಲ್ಲ ತಯಾರಿಕೆಗೆ ಕೆಮಿಕಲ್ ಬಳಸುವುದು ಕೂಡ ಕಡಿಮೆ ಅದರಲ್ಲೂ ಬ್ರೌನ್ ಬಣ್ಣದ ಬೆಲ್ಲವನ್ನು ಖರೀದಿಸಿದರೆ ಉತ್ತಮ ‌ಬೆಲ್ಲವನ್ನು ಕೂಡ ಬ್ಲೀಚ್ ಮಾಡುತ್ತಾರೆ ಎನ್ನುವ ದೂರು ಇದೆ. ಬೆಲ್ಲವನ್ನು b cft ಎಚ್ಚರಿಕೆಯಿಂದ ಶುದ್ಧವಾದ ಬೆಲ್ಲವನ್ನು ಖರೀದಿಸಿ ಮತ್ತು ಸಕ್ಕರೆಯನ್ನು g r ಮಾಡಿ ಇದರಿಂದ ನಿಮ್ಮ ದೇಹದ ಆರೋಗ್ಯವನ್ನು ಕಾಯ್ದುಕೊಳ್ಳಬಹುದು.

https://youtu.be/8Kun2iORuIo?si=jVquOFoWLLAEvsuH

ಸದಾ ಆರೋಗ್ಯವಾಗಿರಲು ಬಯಸುವವರು ಹಿರಿಯರು ಹೇಳಿರುವ ಈ ಸಲಹೆಗಳನ್ನು ಪಾಲಿಸಿ.!

 

* ದ್ರಾಕ್ಷಿಯನ್ನು ತಿಂದ ತಕ್ಷಣ ನೀರು ಕುಡಿಯಬೇಡಿ ಇದು ಕಾಲರ ರೋಗಕ್ಕೆ ಕಾರಣವಾಗುತ್ತದೆ.
* ಕಾಲಿನ ಹೆಬ್ಬೆರಳುಗಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರ ಆಗುತ್ತವೆ.
* ಹಾಲು ಕುಡಿದ ತಕ್ಷಣ ಕರ್ಜೂರ ತಿನ್ನುವುದರಿಂದ ಮೆದುಳು ಚುರುಕಾಗುತ್ತದೆ.
* ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರುಗಳು ದುರ್ಬಲವಾಗುತ್ತವೆ.

* ತಣ್ಣೀರು ಕುಡಿದ ತಕ್ಷಣ ಟೀ, ಕಾಫಿ ಕುಡಿಯಬೇಡಿ
* ಬೆಳ್ಳುಳ್ಳಿ ಜಜ್ಜಿ ಆ ರಸದಿಂದ ಹೊಟ್ಟೆಯನ್ನು ಮಸಾಜ್ ಮಾಡಿದರೆ ಹೊಟ್ಟೆಯ ಭಾಗದ ಬೊಜ್ಜು ಕಡಿಮೆ ಆಗುತ್ತದೆ.
* ಮೈದಾ ಹಿಟ್ಟಿನ ಪದಾರ್ಥಗಳನ್ನು ಸೇವಿಸಿದಾಗ ಕೆಲವರಿಗೆ ಎದೆ ಉರಿ ಹಾಗೂ ಹೊಟ್ಟೆ ಉರಿ ಆಗುತ್ತದೆ ಅಂತಹ ಸಮಯದಲ್ಲಿ ಸೌತೆಕಾಯಿ ತಿನ್ನುವುದರಿಂದ ಕಡಿಮೆಯಾಗುತ್ತದೆ.
* ಊಟ ಮಾಡಿದ ನಂತರ ಸ್ನಾನ ಮಾಡಿದರೆ ದೇಹಕ್ಕೆ ಹಾನಿ.
* ಉಪವಾಸ ಮಾಡುವುದರಿಂದ ಹೊಟ್ಟೆಗೆ ಸಂಬಂಧಿಸಿದ ರೋಗಗಳು ಗುಣವಾಗುತ್ತವೆ.

* ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನರಳುತ್ತಿರುವವರು ಬಾಳೆಹಣ್ಣು ಸೇವಿಸಿದರೆ ಸಮಸ್ಯೆ ಕಡಿಮೆಯಾಗುತ್ತದೆ.
* ಹಾಗಲಕಾಯಿಯನ್ನು ಬೇಯಿಸಿದ ನೀರು ಅಥವಾ ಹಾಗಲಕಾಯಿಯಿಂದ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ಮುಖದ ಮೇಲಿರುವ ಕಲೆಗಳು ಮಾಯವಾಗುತ್ತವೆ, ದೇಹದಲ್ಲಿರುವ ಟಾಕ್ಸಿನ್ ಅಂಶ ಹೊರಹೋಗುತ್ತದೆ.
* ಸಣ್ಣ ಈರುಳ್ಳಿಯನ್ನು ಪೇಸ್ಟ್ ಮಾಡಿ ಅಥವಾ ಈರುಳ್ಳಿಯ ರಸದಿಂದ ಕೂದಲಿನ ಬುಡಕ್ಕೆ ಮಸಾಜ್ ಮಾಡಿ ಸ್ವಲ್ಪ ಹೊತ್ತು ಬಿಟ್ಟ ಬಳಿಕ ಬೆಚ್ಚಗಿನ ನೀರಿನಿಂದ ವಾಶ್ ಮಾಡಿದರೆ ಕೂದಲು ನೈಸ್ ಆಗುತ್ತದೆ, ಸೋಂಪಾಗಿ ಬೆಳೆಯುತ್ತದೆ.

* ಬಿಳಿ ಈರುಳ್ಳಿಯ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.
* ಬಾಯಿ ದುರ್ವಾಸನೆ ಹೊಂದಿದ್ದರೆ ಮಲಗುವ ಮುನ್ನ ರಾತ್ರಿ ಹೊತ್ತು ಒಂದು ಏಲಕ್ಕಿಯನ್ನು ಬಾಯಿಗೆ ಹಾಕಿಕೊಂಡು ಮಲಗಿಕೊಳ್ಳಿ.
* ಮೂಲವ್ಯಾಧಿ ಸಮಸ್ಯೆ ಇರುವವರು ಮೆಂತ್ಯೆ ಚಟ್ನಿಯನ್ನು ಸೇವಿಸಬೇಕು
* ಹೆಚ್ಚು ಕಪ್ಪು ಬಟ್ಟೆಗಳನ್ನು ಧರಿಸುವುದರಿಂದ ಮೂಢನಂಬಿಕೆಗಳನ್ನು ಹೆಚ್ಚಾಗಿ ನಂಬುವ ಮನಸ್ಥಿತಿ ಬರುತ್ತದೆ.

* ಎಳ್ಳು ತಿನ್ನುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ.
* ಜವೆ ಗೋಧಿ ಗಂಜಿ ಮಾಡಿ ತಿನ್ನುವುದರಿಂದ ಮಾನಸಿಕ ದೌರ್ಬಲ್ಯ ನಿರ್ಣಾಮವಾಗುತ್ತದೆ.
* ರಾತ್ರಿ ಹೊತ್ತು ಆದಷ್ಟು ಕಡಿಮೆ ಊಟ ಮಾಡಿ ಮತ್ತು ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಿ.
* ಅರಿಶಿಣವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ.

* ಕಬ್ಬಿನ ಹಾಲಿಗೆ ನಿಂಬೆರಸ ಸೇರಿಸಿ ಕುಡಿದರೆ ಶೀತ ಕಡಿಮೆ ಆಗುತ್ತದೆ.
* ಬೀಟ್ರೋಟ್ ರಸವನ್ನು ಪ್ರತಿದಿನ ಕುಡಿಯುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
* ನಿದ್ರೆ ಕೊರತೆ ಹೆಚ್ಚಾದಷ್ಟು ಬುದ್ಧಿವಂತಿಕೆ ಕಡಿಮೆ ಆಗುತ್ತದೆ.
* ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ದೇಹದ ದೌರ್ಬಲ್ಯತೆ ಕಡಿಮೆ ಆಗುತ್ತದೆ.
* ಆದಷ್ಟು ಬಿಸಿಯಾಗಿರುವಾಗಲೇ ಆಹಾರ ಸೇವಿಸುವುದು ಒಳ್ಳೆಯದು
* ಪ್ರತಿನಿತ್ಯ ಟಮೋಟೋ ಸೇವಿಸುವುದರಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ.

* ಮುಖಕ್ಕೆ ಮೊಸರು ಹಾಗೂ ಕಡ್ಲೆಹಿಟ್ಟಿನ ಮಸಾಜ್ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
* ನೆನೆಸಿದ ಬಾದಾಮಿ ಹಾಗೂ ಗೋಡಂಬಿಯನ್ನು ತಿನ್ನುವುದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ
* ತಕ್ಷಣವೇ ಬಿಕ್ಕಳಿಕೆ ನಿಲ್ಲಿಸಲು ನೀರಿನ ಜೊತೆ ಒಂದು ಲವಂಗ ತೆಗೆದುಕೊಳ್ಳಬೇಕು
* ಹಾಲಿನ ಕೆನೆಗೆ ನಿಂಬೆರಸ ಹಾಗೂ ಅರಿಶಿನ ಸೇರಿಸಿ ಹಚ್ಚುವುದರಿಂದ ಮುಖದ ಕಲೆಗಳು ಕಡಿಮೆ ಆಗುತ್ತದೆ, ಮುಖದ ಕಾಂತಿ ಹೆಚ್ಚಾಗುತ್ತದೆ.
* ಉಪ್ಪು ಹಾಗೂ ಜೇನುತುಪ್ಪದೊಂದಿಗೆ ಹಲ್ಲುಗಳನ್ನು ಬ್ರಷ್ ಮಾಡುವುದರಿಂದ ಹಾಲಿನ ಆರೋಗ್ಯಕ್ಕೆ ಒಳ್ಳೆಯದು ಮತ್ತು ಹಲ್ಲಿನ ಹೊಳಪು ಹೆಚ್ಚಾಗುತ್ತದೆ.

* ಸಿಹಿ ಮಾವು ತಿರುಳು ಅಥವಾ ಔಡಲ ಬೀಜದ ತಿರುಳು ಮತ್ತು ಬೇವಿನ ಎಲೆ ಜಗಿದು ತಿನ್ನುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
* ಕಣ್ಣುಗಳ ಕೆಳಗೆ ಉಂಟಾಗುವ ಕಪ್ಪು ಛಾಯೆಯನ್ನು ಹೋಗಲಾಡಿಸಲು ಜೇನುತುಪ್ಪದ ಜೊತೆ ನಿಂಬೆ ರಸ ಮಿಕ್ಸ್ ಮಾಡಿ ಹಚ್ಚಿಕೊಳ್ಳಿ.
* ನಿಂಬೆರಸ ಹಾಗೂ ತುಳಸಿ ರಸವನ್ನು ಮಿಕ್ಸ್ ಮಾಡಿ ಮೊಡವೆ ಆದಾಗ ಮುಖಕ್ಕೆ ಹಚ್ಚಿಕೊಳ್ಳಿ, ಕಲೆ ಇಲ್ಲದೆ ಮೊಡವೆ ಗುಣವಾಗುತ್ತದೆ.

ಬಿಸಿ ನೀರು ಕುಡಿಯಬೇಕಾ.? ತಣ್ಣೀರು ಕುಡಿಯಬೇಕಾ.? ದೇಹಕ್ಕೆ ಯಾವುದು ಒಳ್ಳೆದು ಅನ್ನೊದನ್ನ ತಿಳಿಸಿದ ವೈದ್ಯರು ತಪ್ಪದೆ ನೋಡಿ.!

ಮನುಷ್ಯನ ದೇಹಕ್ಕೆ ನೀರು ಅತ್ಯಗತ್ಯ. ಮನುಷ್ಯನ ಚಾಯಪಚಯ ಕ್ರಿಯೆಗಳು ಸರಿಯಾಗಿ ನಡೆದ ದೇಹದಿಂದ ಬೇಡವಾದ ಅಂಶಗಳು ಹೊರಗೆ ಬರಲು ರಕ್ತಶುದ್ಧಿಯಾಗಲು ದೇಹಕ್ಕೆ ನೀರಿನ ಅವಶ್ಯಕತೆ ಇದೆ. ಅಲ್ಲದೆ ಮಾನವನ ದೇಹದ ಶೇಕಡ 70% ಕ್ಕಿಂತಲೂ ಹೆಚ್ಚು ಭಾಗ ನೀರಿನಿಂದ ಆವೃತವಾಗಿದೆ ಹಾಗಾಗಿ ನಮ್ಮ ದೇಹ ದೀರ್ಘಕಾಲ ಆರೋಗ್ಯವಾಗಿ ಇರಬೇಕು ಎಂದರೆ ನಾವು ಕುಡಿಯುತ್ತಿರುವ ನೀರಿನ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಹಿಂದಿನ ಕಾಲದಲ್ಲಿ ಕೆರೆ ತೊರೆ ಹಳ್ಳಗಳ ನೀರು ಕುಡಿದು ಆರೋಗ್ಯವಾಗಿ ಇಳಿ ವಯಸಿನವರೆಗೂ ಬದುಕುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಸಂಸ್ಕರಿಸಿದ ನೀರು ಕುಡಿದರೂ ಕೂಡ ನೂರಾರು ಕಾಯಿಲೆಗಳಿಗೆ ಈಡಾಗುತ್ತಿದ್ದೇವೆ. ಹಾಗಾಗಿ ಯಾವ ನೀರು ಕುಡಿಯುವುದು ಶ್ರೇಷ್ಠ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಕೆಲ ಪ್ರಮುಖ ಮಾಹಿತಿಯನ್ನು ತಿಳಿಸುತ್ತಿದ್ದೇವೆ ಮತ್ತು ಮನೆಯಲ್ಲಿಯೇ ಅರ್ಯೋನೈಸ್ಡ್ ವಾಟರ್ (Ionized Water) ಹೇಗೆ ತಯಾರಿಸುವುದು ಎನ್ನುವುದರ ಬಗ್ಗೆ ಹೇಳುತ್ತಿದ್ದೇವೆ.

ಎಲ್ಲರೂ ನೀರು ಕುಡಿಯುತ್ತಾರೆ ಆದರೆ ಎಲ್ಲರೂ ಒಂದೇ ರೀತಿಯ ನೀರು ಕುಡಿಯುವುದಿಲ್ಲ. ಕೆಲವರು ಬಿಸಿ ನೀರು ಕುಡಿದರೆ ಒಳ್ಳೆಯದು ಎನ್ನುತ್ತಾರೆ, ಕೆಲವರಿಗೆ ಫ್ರಿಡ್ಜ್ ನಲ್ಲಿ ನೀರಿಟ್ಟು ತಣ್ಣಗೆ ಮಾಡಿ ಕುಡಿದು ಅಭ್ಯಾಸ, ಕೆಲವರ ಮನೆಯಲ್ಲಿ ಕ್ಯಾನ್ ವಾಟರ್ ಬಳಸಿದರೆ ಇನ್ನೂ ಕೆಲವರು RO ವಾಟರ್ ಬಳಸುತ್ತಾರೆ ಮತ್ತು ಅಯೋನೈಸ್ಡ್ ವಾಟರ್ ಎನ್ನುವ ಕಾನ್ಸೆಪ್ಟ್ ಕೂಡ ಇತ್ತೀಚೆಗೆ ಹೆಚ್ಚು ಬಳಕೆಯಲ್ಲಿದೆ ಹಾಗಾದರೆ ಯಾವ ನೀರು ಕುಡಿಯಬೇಕು?

ಹೇಗೆ ನೀರು ಕುಡಿಯಬೇಕು? ಯಾವುದು ಸರಿ ಎನ್ನುವ ಕನ್ಫ್ಯೂಷನ್ ಉಂಟಾಗದೇ ಇರದು. ಸರಳವಾಗಿ ಹೇಳಬೇಕು ಎಂದರೆ ಕಾಡು ಪ್ರದೇಶದ ಹತ್ತಿರ ವಾಸಿಸುತ್ತಿರುವ ಗ್ರಾಮದ ಜನರು ಬೆಟ್ಟದ ಮೇಲಿಂದ ಹರಿದು ಬರುವ ಜರಿಯ ನೀರನ್ನು ಕುಡಿಯುವುದು ಒಳ್ಳೆಯದು. ಯಾಕೆಂದರೆ ಅದು ವನಸ್ಪತಿ ಮೇಲೆ ಹರಿದು ಗಿಡಮೂಲಿಕೆಗಳ ಅಂಶಗಳನ್ನು ಹೊತ್ತು ತಂದಿರುತ್ತದೆ.

ಅದನ್ನು ಹೊರತುಪಡಿಸಿ ಬಾವಿ ನೀರು ಕುಡಿಯುವುದು ಅಷ್ಟೊಂದು ಒಳ್ಳೆಯದಲ್ಲ. ಯಾಕೆಂದರೆ ನೀರಿನ ಸೆಲೆ ಹರಿದು ಬರುವಾಗ ಜಮೀನುಗಳಲ್ಲಿ ಹಾಕುವ ಕೀಟನಾಶಕಗಳು, ಕ್ರಿಮಿನಾಶಕಗಳು ರಸಗೊಬ್ಬರಗಳ ಅಂಶಗಳನ್ನು ಹೊತ್ತು ತರುವುದರಿಂದ ಈಗ ಆ ನೀರು ಕೂಡ ಅಶುದ್ಧವಾಗಿದೆ.

ಯಾವಾಗಲೂ ಬಿಸಿ ನೀರು ಕುಡಿಯುವುದು ಒಳ್ಳೆಯದಲ್ಲ. ಯಾಕೆಂದರೆ ನಮ್ಮ ದೇಹವು 27 ಡಿಗ್ರಿ ಟೆಂಪರೇಚರ್ ಇದೆ ಎಂದರೆ ನೀವೇನಾದರೂ 32 ಡಿಗ್ರಿ ಟೆಂಪರೇಚರ್ ನೀರಿನ್ನು ಕುಡಿದರೆ ಆ 5 ಡಿಗ್ರಿ ಸಮತೋಲನ ಪಡಿಸಿಕೊಳ್ಳುವುದಕ್ಕೆ ದೇಹ ಕ’ಷ್ಟಪಡಬೇಕು. ಹಾಗೆ ಅತಿ ತಣ್ಣಗಿನ ನೀರು ಕುಡಿಯುವುದು ಒಳ್ಳೆಯದಲ್ಲ, ಫ್ರಿಡ್ಜ್ ನಲ್ಲಿ ಇಟ್ಟಿದ್ದ 10-12 ಡಿಗ್ರಿ ಟೆಂಪರೇಚರ್ ನ ನೀರನ್ನು ಬೇಸಿಗೆ ಸಮಯದಲ್ಲಿ ದೇಹ ತಂಪಾಗಲಿ ಎಂದು ಕುಡಿಯುತ್ತಾರೆ.

ಆದರೆ ಇದು ತಪ್ಪು, ದೇಹವು ಈಗಾಗಲೇ ಹೀಟ್ ನಲ್ಲಿ ಇರುವುದರಿಂದ ಬೇಸಿಗೆ ಕಾಲದಲ್ಲಿ ಬೆವರಿ ಟೆಂಪರೇಚರ್ ನಾರ್ಮಲ್ ಮಾಡಿಕೊಳ್ಳುವುದು ಪ್ರಯತ್ನ ಪಡುತ್ತದೆ. ಅಂತಹ ಸಮಯದಲ್ಲಿ ಫ್ರಿಡ್ಜ್ ನೀರನ್ನು ಕುಡಿಯುವುದರಿಂದ ಅದನ್ನು ದೇಹದ ಟೆಂಪರೇಚರ್ ಗೆ ಬದಲಾಯಿಸಿಕೊಳ್ಳಲು ಮತ್ತು ದೇಹ ಹೆಚ್ಚು ಕ್ರಿಯಾಶೀಲಗೊಳ್ಳಬೇಕು ಆಗ ದೇಹದಲ್ಲಿ ಮತ್ತೆ ಟೆಂಪರೇಚರ್ ಹೆಚ್ಚಾಗುತ್ತದೆ.

ಹಾಗ ಹೊರಗಿನ ಟೆಂಪರೇಚರ್ ಕೂಡ ಹೆಚ್ಚಿರುವುದರಿಂದ ಇದು ಇಂಬ್ಯಾಲೆನ್ಸ್ ಆಗಿ ಬೇಸಿಗೆಯಲ್ಲಿ ಉರಿಮೂತ್ರದಂತಹ ಸಮಸ್ಯೆಗಳು ಬರುತ್ತದೆ. RO ವಾಟರ್ ಗಳಲ್ಲಿ ಎಲ್ಲಾ ಲವಣಾಂಶಗಳನ್ನು ಕೂಡ ತೆಗೆಯಲಾಗಿರುತ್ತದೆ ಹಾಗಾಗಿ ನೂರಕ್ಕೆ ನೂರರಷ್ಟು ಇದು ಬೆಸ್ಟ್ ಎಂದು ಹೇಳಲು ಆಗುವುದಿಲ್ಲ.

ಆದರೆ ಅತಿ ಹೆಚ್ಚು ಉಪ್ಪಿನಾಂಶ ಹೊಂದಿರುವ ಅಥವಾ ಗಡಸಾದ ನೀರನ್ನು ಹೊಂದಿರುವವರು ಅದನ್ನು RO Water Purifier ಗಳಲ್ಲಿ ಸಂಸ್ಕರಿಸಿಕೊಳ್ಳುವುದರಿಂದ PH value ಕಡಿಮೆ ಇರುವ ನೀರು ದೇಹಕ್ಕೆ ಹೋಗುತ್ತದೆ. ಇದಕ್ಕಿಂತಲೂ ಬೆಸ್ಟ್ ಮೆಥಡ್ ಎಂದರೆ ನೀರನ್ನು ಚೆನ್ನಾಗಿ ಬಿಸಿ ಮಾಡಿ ಆರಿಸಿ ಕುಡಿಯಬೇಕು.

ಆಗ ಹೆವಿ ಮಾಲಿಕಲ್ಸ್ ಕೆಳಗೆ ಉಳಿಯುತ್ತದೆ, ಸುಲಭವಾಗಿ ಕರಗುವ ಜೀರ್ಣವಾಗುವ ಮಾಲಿಕಾಲ್ಸ್ ದೇಹ ಸೇರುತ್ತದೆ. Ionized Water ಕಾನ್ಸೆಪ್ಟ್ ಎನ್ನುವುದು ಈಗ ಬಹಳ ಟ್ರೆಂಡಿಂಗ್ ನಲ್ಲಿ ಇದೆ. ಆದರೆ ಇದಕ್ಕೆ ಲಕ್ಷಗಟ್ಟಲೆ ಹಣ ಸುರಿಯಬೇಕು ಅದರ ಬದಲು ಮನೆಯಲ್ಲಿ ಇದನ್ನು ಸುಲಭವಾಗಿ ಮಾಡಿಕೊಳ್ಳಬಹುದು.

ಹೇಗೆಂದರೆ 5ltr ನೀರನ್ನು ಒಂದು ಹದವಾಗಿ ಬೆಂದ ಮಡಿಕೆಗೆ ಹಾಕಿ ಈಗ 5 ltr ನೀರಿಗೆ 50 ಗ್ರಾಂ ನಷ್ಟು ತೂಕದ ಬೆಳ್ಳಿ ನಾಣ್ಯವನ್ನು ಒಲೆಯಲ್ಲಿ ಕೆಂಪು ಬಣ್ಣ ಬರುವವರೆಗೂ ಸುಟ್ಟು ಅಥವಾ ಗ್ಯಾಸ್ ಮೇಲೆ ಕಾಯಿಸಿ ಈಗ ಅದನ್ನು ನೀರಿಗೆ ಹಾಕಿ 10 15 ನಿಮಿಷ ಆದಮೇಲೆ ಅದನ್ನು ತೆಗೆಯಿರಿ ಇಷ್ಟು ಮಾಡಿದರೆ ನ್ಯಾಚುರಲ್ ಹಾಗೆ Ionized Water ತಯಾರಾಗುತ್ತದೆ.

ಮನೆಗೆ ಸಂತೋಷವನ್ನು ತರುವ ಸುಲಭ ಮಾರ್ಗಗಳು.! ಇದನ್ನ ಫಾಲೋ ಮಾಎಇದ್ರೆ ಸುಖ ಸಂಸಾರ.!

 

* ಈಗಿನ ಕಾಲದಲ್ಲಿ ಅನೇಕರಿಗೆ ಬೆಳಗ್ಗೆ ಎದ್ದ ಕೂಡಲೇ ಸೋಶಿಯಲ್ ಮೀಡಿಯಾಗಳನ್ನು ಚೆಕ್ ಮಾಡುವ ದುರಭ್ಯಾಸ ಇದೆ. ಅದಕ್ಕೆ ಸಂಬಂಧಪಟ್ಟ ಕೆಲಸ ಮಾಡುವವರನ್ನು ಹೊರತುಪಡಿಸಿ ಮತ್ಯಾರು ಬೆಳಬೆಳಗ್ಗೆ ಮೊಬೈಲ್ ಫೋನ್ ನೋಡುವ ಅವಶ್ಯಕತೆ ಇರುವುದಿಲ. ಲ ಎದ್ದ ಕೆಲಸ ಸಮಯ ಮನಸ್ಸು ಪ್ರಶಾಂತವಾಗಿದ್ದರೆ ಮನೆಯ ವಾತಾವರವೂ ಹಾಗೇ ಇರುತ್ತದೆ. ಹಾಗಾಗಿ ಸಾಧ್ಯವಾದಷ್ಟು ಬೆಳಗ್ಗೆ ಸಮಯ ಸ್ತೋತ್ರಗಳನ್ನು ಪಠಿಸಿ, ಸಾಧ್ಯವಾಗದೇ ಇದ್ದರೆ ಅದನ್ನು ಮೊಬೈಲ್ ನಲ್ಲಿ ಹಾಕಿಕೊಂಡು ಕೇಳಿಸಿಕೊಳ್ಳಿ.

* ನಮ್ಮ ದಿನನಿತ್ಯದ ಚಟುವಟಿಕೆ ಶುರು ಮಾಡುವ ಮೊದಲು ಮತ್ತೊಂದು ದಿನವನ್ನು ಬದುಕುವುದಕ್ಕೆ ಅವಕಾಶ ಮಾಡಿಕೊಟ್ಟ ಭಗವಂತನಿಗೆ ಧನ್ಯವಾದಗಳನ್ನು ಹೇಳುತ್ತಾ ಶುರು ಮಾಡಬೇಕು. ಹಾಗಾಗಿ ಬೆಳಗಿನ ಜಾವದ ಮೊದಲ ಎರಡು ಗಂಟೆಗಳನ್ನು ದೇವರಿಗೆ ಪೂಜೆ ಮಾಡಲು ಮೀಸಲಿಡಿ

* ಮನೆಯ ಈಶಾನ್ಯ ದಿಕ್ಕಿನಲ್ಲಿ ಯಾವಾಗಲೂ ನೀರು ತುಂಬಿದ ಚೊಂಬು ಇಡಬೇಕು ಸಾಧ್ಯವಾದರೆ ಅಲ್ಲಿಯೇ ಕಳಶ ಇಟ್ಟು ಪೂಜೆ ಮಾಡಿದರೆ ಬಹಳ ಒಳ್ಳೆಯದು. ಇದರಿಂದ ಮನೆಯ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ಶಾಂತಿ ನೆಮ್ಮದಿ ಆರೋಗ್ಯ ಸಿಗುತ್ತದೆ.

* ನಿಮ್ಮ ಮನೆಯಲ್ಲಿ ಹಿರಿಯರು ನಡೆಸಿಕೊಂಡಿರು ಬಂದಿರುವ ಯಾವುದೇ ಹಬ್ಬ ಹಾಗೂ ಆಚರಣೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ. ಅವರು ಮಾಡಿರುವ ಪದ್ಧತಿಯ ಪ್ರಕಾರ ನಡೆಸಿಕೊಂಡು ಹೋಗಿ ಇದರಿಂದ ಹಿರಿಯರ ಆತ್ಮಗಳಿಗೆ ಸಮಾಧಾನ ಸಿಗುತ್ತದೆ ಹಾಗೂ ಅವರ ಆಶೀರ್ವಾದವೂ ನಿಮಗೆ ಸಿಗುತ್ತದೆ, ನಿಮ್ಮ ಕುಲದೇವರ ಆಶೀರ್ವಾದ ಸಿಗುತ್ತದೆ.

* ಮನೆ ದೀಪ, ಆರತಿ ಇವುಗಳನ್ನು ಬಾಯಿಂದ ಊದಿ ಆರಿಸುವುದು ಮನೆಗೆ ದೋಷ ತರುತ್ತದೆ, ಇಂತಹ ತಪ್ಪುಗಳನ್ನು ಮಾಡಬೇಡಿ.
* ಹಾಸಿಗೆಯ ಮೇಲೆ ಕುಳಿತು ಆಹಾರ ಸೇವಿಸಬೇಡಿ ಈ ರೀತಿ ಮಾಡುವುದರಿಂದ ಕೆಟ್ಟ ಕನಸುಗಳು ಬೀಳುತ್ತವೆ.
* ದೇವರ ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಧೂಪ ದೀಪ, ಹವನಕುಂಡದ ವಸ್ತುಗಳನ್ನು ಇಡಿ

* ಮನೆಯ ಮುಖ್ಯ ದ್ವಾರದ ಬಲಭಾಗದಲ್ಲಿ ಅರಿಶಿಣದಿಂದ ಸ್ವಸ್ತಿಕ್ ಚಿಹ್ನೆಯನ್ನು ಬರೆಯಿರಿ, ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶ ಮಾಡಲು ಅವಕಾಶ ಆಗುವುದಿಲ. ಲ ಇದರಿಂದ ನಿಮ್ಮ ಮನೆಯ ವಾತಾವರಣ ಉತ್ತಮವಾಗಿರುತ್ತದೆ.
ವಾರಕ್ಕೆ ಒಮ್ಮೆ ಸಮುದ್ರದ ಉಪ್ಪು ಅಥವಾ ಕಲ್ಲು ಉಪ್ಪು ಜೊತೆಗೆ ಸ್ವಲ್ಪ ಗೋಮೂತ್ರ ಹಾಗೂ ಅರಿಶಿಣ ಹಾಕಿ ಮನೆಯನ್ನು ಸ್ವಚ್ಛಗೊಳಿಸಿ. ಇದರಿಂದ ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳು ಹೊರ ಹೋಗುತ್ತವೆ ಮನೆಯ ಮೇಲೆ ಕೆಟ್ಟ ದೃಷ್ಟಿ ಬಿದ್ದಿದ್ದರು ಅದು ನಿವಾರಣೆಯಾಗುತ್ತದೆ.

* ದೇವರ ಕೋಣೆಯಲ್ಲಿ ಮನೆಯ ಹಿರಿಯ ಸದಸ್ಯನ ಹೆಬ್ಬರಳಿಗಿಂತ ದೊಡ್ಡ ಗಾತ್ರದ ವಿಗ್ರಹಗಳು ಇದ್ದರೆ ಅದಕ್ಕೆ ಪ್ರತಿದಿನ ಪೂಜಾ ಹಾಗೂ ನೈವೇದ್ಯ ಆಗಬೇಕು. ಇದನ್ನು ತಪ್ಪಿಸುವುದರಿಂದ ನಿಮ್ಮ ಮನೆಗೆ ಗೃಹ ದೋಷಗಳು ಉಂಟಾಗುತ್ತವೆ ಆಗ ಮನೆಯಲ್ಲಿರುವ ಎಲ್ಲರೂ ಕ’ಷ್ಟವನ್ನು ಅನುಭವಿಸಬೇಕಾಗುತ್ತದೆ.

* ಮನೆ ಮುಂಭಾಗದಲ್ಲಿ ಶೂ ಮತ್ತು ಚಪ್ಪಲಿಗಳನ್ನು ಬಿಟ್ಟುಕೊಳ್ಳುವುದು ಮತ್ತು ಶೂ, ಚಾಪ್ಪಲಿಗಳನ್ನು ಅಸ್ತವ್ಯಸ್ತವಾಗಿ ಚೆಲ್ಲಾಡುವುದು ಈ ರೀತಿ ಮಾಡಬೇಡಿ ಇದರಿಂದಲೂ ಕೂಡ ಮನೆಯಲ್ಲಿ ಕ’ಲ’ಹಗಳು ಉಂಟಾಗುತ್ತವೆ, ಮನೆಯಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗುತ್ತದೆ. ಇವುಗಳನ್ನು ಇಡಲು ಪ್ರತ್ಯೇಕವಾದ ವ್ಯವಸ್ಥೆ ಮಾಡಿಕೊಂಡು ಅಲ್ಲಿ ನೀಟಾಗಿ ಜೋಡಿಸಿ.

* ಮನೆಯಲ್ಲಿ ಹಸು ಸಾಕಿದ್ದರೆ ಮೊದಲಿನ ರೊಟ್ಟಿಯನ್ನು ಹಸುವಿಗೆ ಮೀಸಲಿಡಿ, ಇದರೊಂದಿಗೆ ಮನೆಯ ಸಾಕು ಪ್ರಾಣಿಗಳನ್ನು ಬಹಳ ಪ್ರೀತಿಯನ್ನು ನೋಡಿಕೊಳ್ಳಿ ಮತ್ತು ಪಶು ಪಕ್ಷಿಗಳಿಗೆ, ಕೋತಿಗಳಿಗೆ, ಬೀದಿ ನಾಯಿಗಳಿಗೆ ಕೂಡ ಆಹಾರವನ್ನು ನೀರಿನ ವ್ಯವಸ್ಥೆಯನ್ನು ಮಾಡಿಕೊಡುವುದರಿಂದ ನಿಮ್ಮ ಮನೆ ಏಳಿಗೆ ಆಗುತ್ತದೆ.

ಔಷಧಿ ಇಲ್ಲದೆ ಹೈ BPಯನ್ನು ಹೇಗೆ ನಿಯಂತ್ರಗೊಳಿಸುವ ಸುಲಭ ವಿಧಾನ ವೈದ್ಯರು ನೀಡಿರುವ ಸಲಹೆ ನೋಡಿ ಒಮ್ಮೆ.!

0

 

ಹೈ BP ಎನ್ನುವುದು ಹಿಂದೆ ವಯೋಸಹಜ ಕಾಯಿಲೆ ಎನ್ನಲಾಗುತ್ತಿತ್ತು. ಆದರೆ ಈಗ 30ರ ಹರೆಯದವರಲ್ಲೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಖಂಡಿತವಾಗಿಯೂ ನಮ್ಮ ಆಹಾರ ಪದ್ಧತಿ ಬದಲಾಗಿರುವುದು ಮತ್ತು ನಮ್ಮ ಜೀವನ ಶೈಲಿಯು ಹದಗೆಟ್ಟಿರುವುದು ಕಾರಣ ಒಂದು ಕಡೆ ಆದರೆ, ಕೆಲವರಿಗೆ ಅನುವಂಶೀಯತೆಯಿಂದ ಎಂದರೆ ತಂದೆ ತಾಯಿಯಿಂದ ಬಳುವಳಿಯಾಗಿ ಬಂದಿರುತ್ತದೆ.

ಕುಟುಂಬದಲ್ಲಿ ಅಜ್ಜಿ-ತಾತನಿಗೆ ಯಾವುದಾದರು ಒಂದು ವಯಸ್ಸಿನಲ್ಲಿ BP ಶುರು ಆಗಿದ್ದರೆ ಅದು ತಂದೆಗೆ ವರ್ಗಾಯಿಸಿ, ತಂದೆಯಿಂದ ಮಕ್ಕಳಿಗೂ ಕೂಡ ಬರುತ್ತದೆ. ಈ ರೀತಿ ಅನುವಂಶಿಯಾಗಿ ಬರುವ BP ಯನ್ನು ತಡೆಯಲು ಸ್ವಲ್ಪ ಕ’ಷ್ಟ. ಆದರೆ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಬಹುದು.

ಆದರೆ ನಮ್ಮದೇ ಸ್ವಯಂಕೃತ್ಯ ಅಪರಾಧಗಳು ಎಂದು ಹೇಳಬಹುದಾದ ಕೆಲವು ಕಾರಣಗಳಿಂದ ಬರುವಂತಹ BP ಯನ್ನು ಕಂಟ್ರೋಲ್ ಮಾಡಲು ಅಥವಾ BP ಬರದೇ ಇರುವಂತೆ ನೋಡಿಕೊಳ್ಳಲು ಕೆಲವು ಟಿಪ್ ಗಳು ಇವೆ, ಅವುಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ. ಮೊದಲಿಗೆ ಯಾವ ಕಾರಣಗಳಿಂದ BP ಬರುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಅದನ್ನು ತಪ್ಪಿಸಿದಾಗ BP ಕಂಟ್ರೋಲ್ ಆಗುತ್ತದೆ.

ಈ ಹಂತದಲ್ಲಿ ನಮ್ಮ ಆಹಾರ ಪದ್ಧತಿ ಬದಲಾಗಿದ್ದಾಗ ಆ ವ್ಯತ್ಯಾಸದಿಂದ BP ಬರಬಹುದು ಅಥವಾ ನಾವು ನಿದ್ದೆ ಮಾಡೋದಕ್ಕೆ ಹಾಕಿಕೊಂಡಿದ್ದ ಪ್ಯಾಟರ್ನ್ ಹೆಚ್ಚು ಕಡಿಮೆ ಆದಾಗ ಆ ಬದಲಾವಣೆಯಿಂದಾಗಿ ಅಥವಾ ಇನ್ನಿತರ ಕಾರಣಗಳಿಂದಾಗಿ ನಿದ್ರೆ ಸಮಯಕ್ಕೆ ವ್ಯತ್ಯಾಸಗಳಾದಾಗ, ಅತಿಯಾದ ಕೆಲಸದ ಒತ್ತಡದಿಂದ ಕೂಡ ಸ್ಟ್ರೆಸ್ ಬರುತ್ತದೆ ಮತ್ತು ದೇಹಕ್ಕೆ ಕೆಲವು ಮೈಕ್ರೋ ನ್ಯೂಟ್ರಿಯೆಂಟ್ಸ್ ಗಳ ಅವಶ್ಯಕತೆ ಇರುತ್ತದೆ ಅವುಗಳ ಕೊರತೆಯಿಂದಲೂ BP ಬರುತ್ತದೆ.

ಪರಿಹಾರಗಳು:-

* ಈ ಮೇಲೆ ತಿಳಿಸಿದಂತೆ ದೇಹಕ್ಕೆ ಮೆಗ್ನೀಷಿಯಂ ಹಾಗೂ ಪೊಟ್ಯಾಶಿಯಂ ನಂತಹ ಮೈಕ್ರೋ ನ್ಯೂಟ್ರಿಯೆಂಟ್ಸ್ ಗಳ ಅವಶ್ಯಕತೆ ಇರುತ್ತದೆ. ಪ್ರತಿನಿತ್ಯ ಕನಿಷ್ಠ 8ಗ್ರಾಂ ನಷ್ಟು ಮೆಗ್ನೇಶಿಯಂ ಹಾಗೂ ಪೊಟ್ಯಾಶಿಯಂ ಸಪ್ಲಿಮೆಂಟ್ ಗಳನ್ನು ಆಹಾರದ ರೂಪದಲ್ಲಿ ತೆಗೆದುಕೊಳ್ಳಬೇಕು.

* ಎಲ್ಲರಿಗೂ ಗೊತ್ತಿದೆ, ಉಪ್ಪನ್ನು ಜಾಸ್ತಿ ಬಳಸುವುದರಿಂದ BP ಹೆಚ್ಚಾಗುತ್ತದೆ ಎಂದು WHO ಪ್ರಕಾರ ಒಬ್ಬ ವ್ಯಕ್ತಿ ಒಂದು ದಿನಕ್ಕೆ 5 ಗ್ರಾಂ ಉಪ್ಪು ಬಳಸಬೇಕು ಆದರೆ ನಾವು ಇಂದು ಅದರ ದುಪ್ಪಟ್ಟು ಹಾಗೂ ಅದಕ್ಕಿಂತ ಹೆಚ್ಚು ಬಳಸುತ್ತಿದ್ದೇವೆ. ಇದನ್ನು ಕಂಟ್ರೋಲ್ ಮಾಡುವುದು ಒಳ್ಳೆಯದು. ಜಂಕ್ ಫುಡ್ ಗಳಲ್ಲಿ ಅವುಗಳ ರುಚಿ ಹೆಚ್ಚಿಸಲು ಅತಿ ಹೆಚ್ಚು ಉಪ್ಪನ್ನು ಬಳಕೆ ಮಾಡಲಾಗಿರುತ್ತದೆ, ಹಾಗಾಗಿ ಅವುಗಳ ಲೇಬಲ್ ನೋಡಿ ಸೋಡಿಯಂ ಕ್ಲೋರೈಡ್ ಹೆಚ್ಚಾಗಿರುವ ಪ್ರಮಾಣದ ಜಂಕ್ ಫುಡ್ ಗಳನ್ನು ಅವಾಯ್ಡ್ ಮಾಡುವುದು ಬಹಳ ಉತ್ತಮ

* ಒತ್ತಡದ ಬದುಕಿನಿಂದ ಸ್ವಲ್ಪ ರಿಲ್ಯಾಕ್ಸ್ ಆಗಿ ನಿಟ್ಟುಸಿರು ಬಿಟ್ಟಾಗ ದೇಹ ಒಂದು ರೀತಿ ರಿಲಾಕ್ಸ್ ಆಗುತ್ತದೆ. ಆ ರೀತಿ ಯಾವುದೇ ಟೆನ್ಶನ್ ನಿಂದ ಒಂದಷ್ಟು ಹೊತ್ತು ಆಚೆ ಬಂದು ಖುಷಿಯಾಗಿ ಇರುವ ಅವಶ್ಯಕತೆ ಇರುತ್ತದೆ. ಅದನ್ನು ನಿಮ್ಮ ಆಸಕ್ತಿಗಳ ಕಡೆ ತೆಗೆದುಕೊಳ್ಳಿ. ಒತ್ತಡದ ಮನಸ್ಸಿನಿಂದ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಳ್ಳಿ, ಆಗ ಸ್ಟ್ರೆಸ್ ಕಡಿಮೆಯಾಗಿ BP ಬರುವ ಸಾಧ್ಯತೆ ಕಡಿಮೆ ಮತ್ತು BP ಇದ್ದರೆ ಕಂಟ್ರೋಲ್ ಆಗುತ್ತದೆ.

* ದೇಹಕ್ಕೆ ಅವಶ್ಯಕತೆ ಇರುವಷ್ಟು ನಿದ್ರೆಯನ್ನು ತಪ್ಪಿಸಬೇಡಿ, ನಿದ್ದೆ ಕೂಡ ಒಂದು ಔಷಧಿ
* ಇದರೊಂದಿಗೆ ಪ್ರತಿನಿತ್ಯ ಕನಿಷ್ಠ ವ್ಯಾಯಾಮ ಹಾಗೂ ಯೋಗ ಧ್ಯಾನ ದಂತಹ ಅಭ್ಯಾಸಗಳನ್ನು ರೂಡಿಸಿಕೊಳ್ಳಿ. ಇದರಿಂದಲೂ ಕೂಡ BP ಕಂಟ್ರೋಲ್ ಗೆ ಬರುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

 

ಗ್ಯಾಸ್ ಅಸಿಡಿಟಿ ಒಂದು ನಿಮಿಷದಲ್ಲಿ ಮಾಯವಾಗುತ್ತದೆ, ಈ ಮನೆಮದ್ದು ಸೇವಿಸುವುದರಿಂದ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.!

0

 

ಆರೋಗ್ಯವೇ ಭಾಗ್ಯ ಇದು ಜಗಜ್ಜನಿತವಾದ ಮಾತು. ಆರೋಗ್ಯ ಚೆನ್ನಾಗಿರಬೇಕು ಎಂದರೆ ನಾವು ತಿನ್ನುವ ಆಹಾರವು ಪೌಷ್ಟಿಕಾಂಶಯುಕ್ತವಾಗಿದ್ದು, ಉತ್ತಮವಾಗಿರಬೇಕು ಹಾಗೂ ನಮ್ಮ ಜೀವನ ಶೈಲಿಯು ಚಟುವಟಿಕೆಯುಕ್ತವಾಗಿರಬೇಕು. ಆಗ ತಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ ಇಲ್ಲವಾದಲ್ಲಿ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ನಾವು ತಿಂದ ಆಹಾರದಿಂದ ಅಥವಾ ನಮ್ಮ ದೇಹಕ್ಕೆ ಒಗ್ಗದ ಇನ್ನಿತರ ಆಹಾರಗಳನ್ನು ತಿಂದ ಕಾರಣಕ್ಕಾಗಿಯೋ ಅಥವಾ ನಾವು ಸೇವಿಸುತ್ತಿರುವ ಆಹಾರ ಪದ್ಧತಿ ಹಾಗೂ ಬದುಕುತ್ತಿರುವ ರೀತಿಯಿಂದಾಗಿಯೋ ಕೆಲವೊಮ್ಮೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಗ್ಯಾಸ್ಟ್ರಿಕ್, ಅಸಿಡಿಟಿ, ಮಲಬದ್ಧತೆ, ಹೊಟ್ಟೆ ಉರಿಕೊಳ್ಳುವುದು, ಊದಿಕೊಳ್ಳುವುದು, ಊಟ ಮಾಡಿದ ತಕ್ಷಣ ವಾಕರಿಕೆ ಬರುವುದು, ತಿಂದ ಆಹಾರ ಜೀರ್ಣ ಆಗದೆ ವಾಂತಿಯಾಗುವುದು ಅಥವಾ ಕಮರದೇಕು ಆಗುವುದು, ಅಜೀರ್ಣತೆ, ದೇಹ ಭಾರ ಎನಿಸುವುದು ಊಟ ಕಂಡರೆ ಬೇಡ ಎನಿಸುವುದು ಊಟ ಮಾಡಲು ಹಸಿವೆ ಆಗದೆ ಇರುವುದು ಇನ್ನು ಮುಂತಾದ ಇದೇ ರೀತಿಯ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಇವುಗಳನ್ನು ಮನೆಯಲ್ಲೇ ಸಿಗುವ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಮನೆ ಮದ್ದು ಮಾಡಿ ಕ್ಲಿಯರ್ ಮಾಡಿಕೊಳ್ಳಬಹುದು. ಈ ರೀತಿ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ ನಮ್ಮ ಹಿರಿಯರು ಹೇಳಿಕೊಟ್ಟಿರುವ ಕೆಲವು ಔಷಧಿಗಳು ಇವೆ ಯಾವುದೇ ಸೈಟ್ ಎಫೆಕ್ಟ್ ಇಲ್ಲದೆ ಈ ಎಲ್ಲ ಸಮಸ್ಯೆಯನ್ನು ಕ್ಲಿಯರ್ ಮಾಡುತ್ತದೆ.

ಅದರಲ್ಲಿ ಈಗ ನಾನು ಹೇಳುತ್ತಿರುವ ಈ ಮನೆ ಮುದ್ದು ಬಹಳ ಅದ್ಭುತವಾಗಿ ಕೆಲಸ ಮಾಡಿ ಶೀಘ್ರ ಫಲಿತಾಂಶವನ್ನು ಕೂಡ ನೀಡುತ್ತದೆ. ಹಾಗಾಗಿ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಬಂದಾಗಲೂ ಈ ಒಂದು ಮನೆ ಮದ್ದನ್ನು ಮಾಡಿ. ಇದನ್ನು ಮಾಡಲು ನಾಲ್ಕು ಚಮಚ ಅಜ್ವೈನ ಮತ್ತು ನಾಲ್ಕು ಚಮಚ ಮೆಂತ್ಯೆ ಕಾಳು ಬೇಕು. ಅಜ್ವೈನ ಮತ್ತು ಮೆಂತ್ಯೆ ಈ ಎರಡು ಪದಾರ್ಥಗಳು ನಮ್ಮ ಜೀರ್ಣಕ್ರಿಯೆ ಉತ್ತಮವಾಗುವಂತೆ ಮಾಡುತ್ತದೆ.

ಮೆಂತ್ಯ ಕಾಳು ಚ‌ಕೂದಲಿನ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು. ಈ ಎರಡರಲ್ಲೂ ಬಹಳ ಉತ್ತಮವಾದ ಔಷಧೀಯ ಗುಣಗಳಿದ್ದು ಇದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಸಮಸ್ಯೆ ಪರಿಹಾರ ಆಗುತ್ತದೆ. ಮೊದಲಿಗೆ ಸ್ವಲ್ಪ ತುಪ್ಪದಲ್ಲಿ ಮೆಂತೆಕಾಳು ಉರಿದುಕೊಳ್ಳಿ ನಂತರ ಅದೇ ಪಾತ್ರೆಯಲ್ಲಿ ಅಜ್ವೈನ್ ಕೂಡ ಹಾಕಿ ಉರಿದುಕೊಳ್ಳಿ.

ಮೊದಲು ಮಿಕ್ಸಿ ಜಾರಿಗೆ ಮೆಂತೆಕಾಳು ಹಾಕಿ ನುಣ್ಣಗೆ ಪುಡಿ ಮಾಡಿ ನಂತರ ಅಜ್ವೈನವನ್ನು ಹಾಕಿ ಗ್ರೈಂಡ್ ಮಾಡಿ ಕೊನೆಯಲ್ಲಿ ಇದಕ್ಕೆ ಅರ್ಧ ಚಮಚದಷ್ಟು ಇಂಗು ಹಾಕಿ ಮೂರು ಮಿಕ್ಸ್ ಆಗುವಂತೆ ಇನ್ನೂ ಎರಡು ಸುತ್ತು ಗ್ರೈಂಡ್ ಮಾಡಿ ಈಗ ಒಂದು ಗಾಜಿನ ಕಂಟೇನರ್ ನಲ್ಲಿ ಇದನ್ನು ಸ್ಟೋರ್ ಮಾಡಿ.

ಗ್ಯಾಸ್, ಅಸಿಡಿಟಿ, ಮಲಬದ್ಧತೆ ಅಥವಾ ಇದೇ ರೀತಿಯ ಈ ಮೇಲೆ ತಿಳಿಸಿದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಇರುವವರು, ಬೆಳಿಗ್ಗೆ ಟಿಫನ್ ಮಾಡುವಾಗ ಹಾಗೂ ರಾತ್ರಿ ಊಟ ಮಾಡುವಾಗ ಊಟದ ಮಧ್ಯದಲ್ಲಿ ಒಂದು ಚಮಚ ಈ ಪೌಡರ್ ಸೇವಿಸಬೇಕು ನಂತರ ನೀರು ಕುಡಿಯಬೇಕು ಆಮೇಲೆ ಊಟವನ್ನು ಮುಂದುವರಿಸಬೇಕು.

ಉದಾಹರಣೆಗೆ ಎರಡು ಚಪಾತಿ ತಿನ್ನುವವರು ಒಂದು ಚಪಾತಿ ತಿಂದ ನಂತರ ಈ ಪೌಡರ್ ಒಂದು ಚಮಚ ಸೇವಿಸಿ, ನೀರು ಕುಡಿದು ನಂತರ ಉಳಿದ ಒಂದು ಚಪಾತಿ ತಿನ್ನಬೇಕು. ಈ ರೀತಿ ಒಂದು ವಾರ ಮಾಡಿ ನೋಡಿ ಬಹಳ ಅದ್ಭುತವಾದ ಫಲಿತಾಂಶವನ್ನು ಕಾಣುತ್ತೀರಿ.

ಈ ಲಕ್ಷಣ ಪುರುಷರಲ್ಲಿ ಇದ್ದರೆ ಅವರು ಕೋಟ್ಯಾಧಿಪತಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.!

 

ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಮುದ್ರಿಕ ಶಾಸ್ತ್ರ ಎನ್ನುವ ವಿಭಾಗವಿದೆ. ಸಾಮುದ್ರಿಕ ಶಾಸ್ತ್ರದಲ್ಲಿ ಮುಖ ಹಾಗೂ ದೇಹದ ಅಂಗಗಳ ಲಕ್ಷಣಗಳನ್ನು ನೋಡಿ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಬಹುದು ಹಾಗೂ ಭವಿಷ್ಯವನ್ನು ಊಹಿಸಬಹುದು.

ನಮ್ಮ ಭಾರತ ದೇಶದಲ್ಲಿ ಬಹಳ ಹಿಂದಿನಿಂದಲೂ ಕೂಡ ಸಾಮುದ್ರಿಕ ಶಾಸ್ತ್ರಕ್ಕೆ ಹೆಚ್ಚು ಮಹತ್ವ ಕೊಡಲಾಗಿದ್ದು ಮುಖ್ಯವಾಗಿ ಮದುವೆ ಸಂದರ್ಭದಲ್ಲಿ ವಧು ಹಾಗೂ ವರುವಿನ ಆಯ್ಕೆ ಮಾಡುವಾಗ ಈ ರೀತಿ ಸಾಮೂಹಿಕ ಶಾಸ್ತ್ರದ ಕೆಲ ಲಕ್ಷಣಗಳನ್ನು ನೋಡಿ ಅಳೆಯುತ್ತಾರೆ ಹಾಗೂ ಮಕ್ಕಳಿಗೂ ಕೂಡ ಅವರ ಭವಿಷ್ಯವನ್ನು ಬೆಳೆಯುವಾಗ ಅವರ ದೇಹದ ರಚನೆಗಳನ್ನು ನೋಡಿ ಹೇಳುತ್ತಾರೆ.

ಆದರೆ ಇದುವರೆಗೂ ಕೂಡ ಹೆಣ್ಣು ಮಕ್ಕಳಿಗಷ್ಟೇ ಇದು ಅನ್ವಯಿಸುತ್ತದೆ ಎನ್ನುವ ರೀತಿ ಬಿಂಬಿಸಲಾಗಿತ್ತು ಆದರೆ ಸಾಮುದ್ರಿಕ ಶಾಸ್ತ್ರದ ಪ್ರಕಾರ ಪುರುಷರ ಕೆಲ ಲಕ್ಷಣಗಳು ಅವರು ಕೋಟ್ಯಾಧಿಪತಿಯಾಗುವ ಲಕ್ಷಣವನ್ನು, ಅವರು ಜೀವನದಲ್ಲಿ ಯಶಸ್ವಿಗಳಾಗುತ್ತಾರೆ ಎನ್ನುವುದನ್ನು ಹೇಳುತ್ತದೆ. ಅವುಗಳನ್ನು ಕೆಲವು ಪ್ರಮುಖ ಅಂಶಗಳು ಹೀಗಿವೆ.

1. ಯಾವ ಪುರುಷರ ಹಣೆ ಹೆಚ್ಚು ಅಗಲವಾಗಿರುತ್ತದೆ ನಾಲ್ಕು ಬೆರಳುಗಳು ಕೂಡ ಆ ವ್ಯಕ್ತಿಯ ಹಣೆಯಲ್ಲಿ ಇಡಬಹುದಾದಷ್ಟು ಅಗಲವಾಗಿರುತ್ತದೆ ಅಂತಹ ವ್ಯಕ್ತಿಗಳು ಜೀವನದಲ್ಲಿ ಯಶಸ್ವಿ ವ್ಯಕ್ತಿಗಳಾಗುತ್ತಾರೆ, ಅವರು ಬಹಳ ಅದೃಷ್ಟವನ್ನು ಹೊಂದಿರುತ್ತಾರೆ ಅವರು ಅಂದುಕೊಂಡ ಪ್ರಕಾರ ಅವರ ಭವಿಷ್ಯವನ್ನು ರೂಪಿಸಿಕೊಳ್ಳುವ ಸ್ಪಷ್ಟತೆಯನ್ನು ಹೊಂದಿ ಅದೇ ರೀತಿ ಪರಿಸ್ಥಿತಿಗಳ ಸಹಕಾರದಿಂದ ಯಶಸ್ವಿಯಾಗುತ್ತಾರೆ ಎಂದು ಸಾಮೂದ್ರಿಕ ಶಾಸ್ತ್ರ ಹೇಳುತ್ತದೆ. ಆದರೆ ಹಣೆಯು ಸ್ಪಷ್ಟವಾಗಿರಬೇಕು, ಹಣೆಯಲ್ಲಿ ಗಾಯದ ಗುರುತುಗಳಾಗಲಿ, ಗುಳ್ಳೆಗಳಾಗಲಿ, ವಿಕಾರವಾಗಲಿ ಇರಬಾರದು.

2. ಯಾವ ವ್ಯಕ್ತಿಯ ಎದೆ ಭಾಗದಲ್ಲಿ ದಟ್ಟವಾದ ಕೂದಲಗಳನ್ನು ಹೊಂದಿರುತ್ತಾರೆ ಅಂತಹ ವ್ಯಕ್ತಿಗಳು ಕೂಡ ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಆ ವ್ಯಕ್ತಿಯ ದೇಹವೂ ದುರ್ವಾಸನೆಯಿಂದ ಕೂಡಿರಬಾರದು, ದೇಹವನ್ನು ಆತ ಸ್ವಚ್ಛವಾಗಿಟ್ಟುಕೊಂಡು ಆಕರ್ಷಣೀಯವಾಗಿ ನೋಡಿಕೊಂಡರೆ ಅಂತಹ ವ್ಯಕ್ತಿಗಳು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದು ಸಾಮುದ್ರಿಕ ಶಾಸ್ತ್ರ ಹೇಳುತ್ತದೆ.

3. ಯಾವ ವ್ಯಕ್ತಿ ಧ್ವನಿ ಜೋರಾಗಿ ಇರುತ್ತದೆ ಹಾಗೂ ಆತ ಹೇಳುವ ಮಾತುಗಳು ಸ್ಪಷ್ಟವಾಗಿರುತ್ತವೆ. ಅಂತಹ ವ್ಯಕ್ತಿಗಳು ಕೂಡ ಜೀವನದಲ್ಲಿ ಬಹಳ ಬೇಗ ಮುಂದೆ ಬರುತ್ತಾರೆ ಮತ್ತು ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸುತ್ತಾರೆ. ಅವರು ಹಣಕಾಸಿನ ವಿಷಯದಲ್ಲಿ ತೊಂದರೆಗಳನ್ನು ಎದುರಿಸುವುದಿಲ್ಲ ಮತ್ತು ಕೊಟ್ಟ ಮಾತಿಗೆ ಬದ್ಧರಾಗಿದ್ದು ನಂಬಿಕೆಗಳಿಗೆ ಅರ್ಹವಾಗಿರುವಂತಹ ವ್ಯಕ್ತಿ ಆಗಿರುತ್ತಾರೆ ಅವರು ಜೀವನದ ಜವಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವಷ್ಟು ಸಮರ್ಥರಾಗಿರುತ್ತಾರೆ ಎಂದು ಸಾಮುದ್ರಿಕ ಶಾಸ್ತ್ರ ಹೇಳುತ್ತದೆ.

4. ಯಾವ ವ್ಯಕ್ತಿಯ ಕಣ್ಣುಗಳ ಗಾಢ ಕಪ್ಪಾಗಿದ್ದು, ಆಕರ್ಷಣೀಯವಾಗಿರುತ್ತವೆ ಮತ್ತು ಕಣ್ಣಿನ ಸುತ್ತ ಯಾವುದೇ ರೀತಿಯ ಕಲೆಗಳು ಇರುವುದಿಲ್ಲ ಅಂತಹ ವ್ಯಕ್ತಿಗಳು ಕೂಡ ಜೀವನದಲ್ಲಿ ಬಹಳ ಅದೃಷ್ಟ ಹೊಂದಿರುತ್ತಾರೆ ಎಂದು ಸಾಮುದ್ರಿಕ ಶಾಸ್ತ್ರ ಹೇಳುತ್ತದೆ.
5. ಯಾವ ವ್ಯಕ್ತಿಯ ನಗು ಮನಮೋಹಕವಾಗಿರುತ್ತದೆ, ಮನಸ್ಸಿನಿಂದ ಯಾವುದೇ ಕಲ್ಮಶವಿಲ್ಲದೆ ಮನಪೂರ್ವಕವಾಗಿ ನಗುತ್ತಾರೆ. ಅಂತಹ ವ್ಯಕ್ತಿಗಳಿಗೆ ತಾಯಿ ಮಹಾಲಕ್ಷ್ಮಿ ಅನುಗ್ರಹವಾಗುತ್ತದೆ ಎಂದು ಸಹ ಹೇಳಲಾಗುತ್ತದೆ.

6. ಯಾವ ಪುರುಷರು ಮಹಿಳೆಯರಿಗೆ ಹೆಚ್ಚು ಗೌರವ ಕೊಡುತ್ತಾರೆ ಮತ್ತು ಅವರನ್ನು ಪೂಜಾ ಸ್ಥಾನದಲ್ಲಿ ನೋಡುತ್ತಾರೆ ಅಂತಹವರ ಅದೃಷ್ಟ ಸಹ ಬಹಳ ಚೆನ್ನಾಗಿರುತ್ತದೆ, ಅವರಿಗೆ ದೇವಾನುದೇವತೆಗಳ ಆಶೀರ್ವಾದವಿರುತ್ತದೆ ಎಂದು ಸಾಮುದ್ರಿಕ ಶಾಸ್ತ್ರವು ಹೇಳುತ್ತದೆ.
7. ಯಾವ ವ್ಯಕ್ತಿಯ ನಡೆಯುವ ಶೈಲಿಯು ಸರಿಯಾಗಿ ಇರುವುದಿಲ್ಲ ಅಂತಹ ವ್ಯಕ್ತಿಗಳು ನಂಬಿಕೆಗೆ ಅರ್ಹರಾಗಿರುವುದಿಲ್ಲ.
8. ಪುರುಷರ ಕಾಲಿನ ಹೆಬ್ಬೆರಳಿನಿಂದ ಪಕ್ಕದ ಬೆರಳು ಉದ್ದವಾಗಿದ್ದರೆ ಅಂತಹ ವ್ಯಕ್ತಿಗಳು ಕೂಡ ಜೀವನದಲ್ಲಿ ಬಹಳ ಅದೃಷ್ಟಶಾಲಿಗಳಾಗಿರುತ್ತದೆ ಎಂದು ಹೇಳಲಾಗುತ್ತದೆ.

ಗುಪ್ತಚರ ಇಲಾಖೆಯಲ್ಲಿ ಹುದ್ದೆಗಳಿಗೆ ನೇಮಕಾತಿ ಆರಂಭ.! ಆಸಕ್ತರು ಅರ್ಜಿ ಸಲ್ಲಿಸಿ..

0

 

ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ಸರ್ಕಾರಿ ಹುದ್ದೆ ಗಿಟ್ಟಿಸಿಕೊಂಡರೆ ಇಡೀ ಕುಟುಂಬವೇ ಗೆದ್ದಂತೆ, ಅದು ಇಡೀ ಕುಟುಂಬದ ಕನಸಾಗಿರುತ್ತದೆ, ಗೆಲುವಾಗಿರುತ್ತದೆ. ಬಡ ಕುಟುಂಬದಲ್ಲಿ ಬೆಳೆದ ಸರ್ಕಾರಿ ಶಾಲೆಯಲ್ಲಿ ಓದಿದ ಸಾಮಾನ್ಯ ಹುಡುಗನೊಬ್ಬ ತನ್ನ ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಸಾಧಿಸಬಹುದಾದ ಅತ್ಯುನ್ನತ ಸಾಧನೆ ಎಂದರೆ ಸರ್ಕಾರಿ ಹುದ್ದೆ ಪಡೆಯುವುದು.

ಈ ಮೂಲಕ ಜೀವನವನ್ನು ಉನ್ನತ ಮಟ್ಟದಲ್ಲಿ ಉತ್ತಮ ರೀತಿಯಲ್ಲಿ ಜೀವನ ಕಳೆಯುವುದು ಹಾಗೂ ಇಡೀ ಕುಟುಂಬಕ್ಕೆ ಆಧಾರವಾಗುವುದು. ಹಾಗಾಗಿ ದೇಶದಲ್ಲಿ ಲಕ್ಷಾಂತರ ಅಭ್ಯರ್ಥಿಗಳು ಈ ರೀತಿ ಒಂದು ಸರ್ಕಾರಿ ಉದ್ಯೋಗ ಸಿಕ್ಕಿದರೆ ಸಾಕು ಎಂದು ಕನಸು ಕಾಣುತ್ತಿದ್ದಾರೆ.

ಅವರಿಗೆಲ್ಲ ಕೇಂದ್ರ ಸರ್ಕಾರದ ವ್ಯಕ್ತಿಯಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ, ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯ ನೇಮಕಾತಿ ಕುರಿತ ಸಂಪೂರ್ಣ ಮಾಹಿತಿ ಹೀಗಿದೆ ನೋಡಿ.

ನೇಮಕಾತಿ ಸಂಸ್ಥೆ:- ಕೇಂದ್ರ ಗುಪ್ತಚರ ಇಲಾಖೆ
ಹುದ್ದೆಯ ಹೆಸರು:- ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ ಗ್ರೇಡ್-2 / ಎಕ್ಸಿಕ್ಯೂಟಿವ್
ಒಟ್ಟು ಹುದ್ದೆಗಳು:- 995 ಹುದ್ದೆಗಳು

ವೇತನ ಶ್ರೇಣಿ:-
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. ‌44,900 ರಿಂದ ರೂ.1,42,400 ವೇತನ ಸಿಗುತ್ತದೆ.
ಉದ್ಯೋಗ ಸ್ಥಳ:- ಆಯ್ಕೆ ಆಗುವ ಅಭ್ಯರ್ಥಿಗಳು ಭಾರತದಾದ್ಯಂತ ವಿವಿಧ ಭಾಗಗಳಗಳಲ್ಲಿ ಹುದ್ದೆ ಮಾಡಲು ತಯಾರಾಗಿರಬೇಕು.

ಶೈಕ್ಷಣಿಕ ವಿದ್ಯಾರ್ಹತೆ:-
* ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಪದವಿ ಪಡೆದಿರಬೇಕು ಅಥವಾ ತತ್ಸಮಾನ ಶೈಕ್ಷಣಿಕ ವಿದ್ಯಾರ್ಹತೆ ಹೊಂದಿರಬೇಕು.
* ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಟ ವಯೋಮಿತಿ 18 ವರ್ಷ
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 27 ವರ್ಷಗಳು.

ವಯೋಮಿತಿ ಸಡಿಲಿಕೆ:-
* SC / ST ಅಭ್ಯರ್ಥಿಗಳಿಗೆ 05 ವರ್ಷ
* OBC ಅಭ್ಯರ್ಥಿಗಳಿಗೆ 03 ವರ್ಷ

ಅರ್ಜಿ ಸಲ್ಲಿಸುವ ವಿಧಾನ:-
* www.mha.gov.in ಅಥವಾ www.ncs.gov.in ಈ ಅಧಿಕೃತ ವೆಬ್ ಸೈಟ್ ಗೆ ಭೇಟಿಕೊಟ್ಟು ಅರ್ಜಿ ಫಾರಂ ಲಿಂಕ್ ಕ್ಲಿಕ್ ಮಾಡಿ ಕೇಳಲಾಗುವ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
* ಅರ್ಜಿ ಶುಲ್ಕ ಪಾವತಿ ಮಾಡಿರುವ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು ಮತ್ತು ಅರ್ಜಿ ಶುಲ್ಕ ಪಾವತಿ ಮಾಡಿದ ನಂತರ ಇ-ರಶೀತಿ ಹಾಗೂ ಅರ್ಜಿ ಸಲ್ಲಿಕೆ ಆದ ನಂತರ ಪ್ರಿಂಟ್ ಔಟ್ ಪಡೆದುಕೊಳ್ಳಬೇಕು.

ಅರ್ಜಿ ಶುಲ್ಕ:-
* ಪರೀಕ್ಷಾ ಶುಲ್ಕ ರೂ.100
* ನೇಮಕಾತಿ ಪ್ರಕ್ರಿಯೆ ಶುಲ್ಕ ರೂ.450
* ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿಶುಲ್ಕ ಪಾವತಿಸಬಹುದು.

ಆಯ್ಕೆ ವಿಧಾನ:-
* ಸ್ಪರ್ಧಾತ್ಮಕ ಪರೀಕ್ಷೆ
* ಕಂಪ್ಯೂಟರ್ ಸ್ಕಿಲ್ ಟೆಸ್ಟ್
* ಸಂದರ್ಶನ
* ದಾಖಲೆಗಳ ಪರಿಶೀಲನೆ

ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ನವೆಂಬರ್ 25, 2023
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಡಿಸೆಂಬರ್ 15, 2023

ಬೇಕಾಗುವ ದಾಖಲೆಗಳು:-
* ಇತ್ತೀಚಿನ ಭಾವಚಿತ್ರ ಮತ್ತು ಸಹಿ
* ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
* ಆಧಾರ್ ಕಾರ್ಡ್
* ಶೈಕ್ಷಣಿಕ ಅಂಕ ಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಇನ್ನಿತರ ಪ್ರಮುಖ ದಾಖಲೆಗಳು