Home Blog Page 109

ಗೃಹಿಣಿಯರಿಗೆ ಉಪಯುಕ್ತವಾಗುವ ಅಡುಗೆ ಮನೆಯ ಕೆಲ ಟಿಪ್ಸ್ ಗಳು.!

ಗೃಹಿಣಿಯರು ಮನೆಯಲ್ಲೇ ಇದ್ದರೂ ಅವರ ಕೆಲಸ ಮುಗಿಯದಷ್ಟು ಇರುತ್ತದೆ. ಅಡುಗೆ, ಕ್ಲೀನಿಂಗ್, ಶಾಪಿಂಗ್ ಇತ್ಯಾದಿ ಇತ್ಯಾದಿ ಜವಾಬ್ದಾರಿಗಳೆಲ್ಲ ಅವರದ್ದೇ ಆಗಿರುತ್ತದೆ. ಈ ಒತ್ತಡದಲ್ಲಿ ಅವರು ಕೆಲವು ಹೆಚ್ಚು ಕಡಿಮೆ ಮಾಡುವುದು ಉಂಟು. ಅವರ ಟೆನ್ಶನ್ ಕಡಿಮೆ ಮಾಡುವ ಸಲುವಾಗಿ ಮನೆಗೆ ಸಂಬಂಧಿಸಿದಂತೆ ಅವರಿಗೆ ಉಪಯುಕ್ತವಾಗುವ ಕೆಲವು ಟಿಪ್ಸ್ ಗಳನ್ನು ಹೇಳುತ್ತಿದ್ದೇವೆ.

* ಒಂದು ಚಮಚ ಎಣ್ಣೆಯಲ್ಲಿ ಕಡಲೆಕಾಯಿ ಬೀಜವನ್ನು ಹುರಿದರೆ ಸಿಪ್ಪೆ ಬೇಗ ಬಿಡುತ್ತದೆ ಮತ್ತು ಸೀದು ಹೋಗುವುದಿಲ್ಲ.
* ತಕ್ಷಣ ಅವಲಕ್ಕಿಯನ್ನು ಒಗ್ಗರಣೆ ಮಾಡಬೇಕಾದರೆ ಬೇಗ ಅವಲಕ್ಕಿ ನೆನೆಯಬೇಕು ಎಂದರೆ ಬೆಚ್ಚಗಿನ ನೀರಿನಲ್ಲಿ ತೊಳೆದು ನೆನೆ ಹಾಕಬೇಕು, ಆಗ ಬೇಗ ಅವಲಕ್ಕಿ ಮೆತ್ತಗಾಗುತ್ತದೆ.
* ಈರುಳ್ಳಿ ಸಿಪ್ಪೆಯನ್ನು ಸುಲಿಯಬೇಕಾದಾಗ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಇದ್ದರೆ ಈ ಕೆಲಸವನ್ನು ಬೇಗ ಮುಗಿಸಲು ಈರುಳ್ಳಿಯ ಮಧ್ಯದಲ್ಲಿ ರಂಧ್ರವನ್ನು ಮಾಡಿ ಸ್ವಲ್ಪ ಬೇಯಿಸಿ, ಅವುಗಳು ಚೂರಾಗದೇ ಇಡಿಯಾಗಿ ಉಳಿಯುತ್ತವೆ.

* ಒಗ್ಗರಣೆ ಹಾಕುವಾಗ ಸಾಸಿವೆ ಹೆಚ್ಚು ಸೀದು ಹೋಗುತ್ತದೆ ಅಥವಾ ಸಿಡಿದು ಅಕ್ಕಪಕ್ಕ ಹರಡಿ ಬಿಡುತ್ತದೆ. ಇದನ್ನು ತಪ್ಪಿಸಲು ಎಣ್ಣೆಯನ್ನು ಬಿಸಿ ಮಾಡಲು ಇಡಿ ಅದು ಬಿಸಿಯಾದ ಬಳಿಕ ಕೆಳಗಡೆಗೆ ಇಟ್ಟುಕೊಂಡು ಸಾಸಿವೆ ಹಾಕಿ ಸಿಡಿದ ಮೇಲೆ ಮತ್ತೆ ಒಲೆಯ ಮೇಲೆ ಇಡಿ.
* ಯಾವುದೇ ಅಡುಗೆಗೆ ಉಪ್ಪು ಹಾಕಲು ಮರೆತಿದ್ದರೆ ಪುಡಿ ಉಪ್ಪನ್ನು ಸ್ವಲ್ಪ ನೀರಿಗೆ ಹಾಕಿ ಕರಗಿಸಿ ನಂತರ ಆಹಾರಕ್ಕೆ ಹಾಕಿ ಮಿಕ್ಸ್ ಮಾಡಿ ಇದರಿಂದ ಎಲ್ಲಾ ಕಡೆ ಉಪ್ಪು ಒಂದೇ ರೀತಿ ಹರಡುತ್ತದೆ

* ಯಾವುದಾದರೂ ಅಡುಗೆ ಹೆಚ್ಚು ಹುಳಿ ಆಗಿದ್ದರೆ ಅದನ್ನು ಬ್ಯಾಲೆನ್ಸ್ ಮಾಡಲು ಚೂರು ಬೆಲ್ಲ ಹಾಕಿ ಆಗ ಸರಿಯಾಗುತ್ತದೆ.
* ಖಾರವಾದ ಅಡುಗೆ ಮಾಡುವಾಗ ಚೂರೇ ಚೂರು ಬೆಲ್ಲ ಅಥವಾ ಸಕ್ಕರೆ ಹಾಕಿದರೆ ರುಚಿ ಇನ್ನು ಹೆಚ್ಚಾಗುತ್ತದೆ
* ಬಿಸಿನೀರಿಗೆ ಯಾವುದೇ ಹಿಟ್ಟು ಹಾಕಿದರೂ ಅದು ಗಂಟಾಗುತ್ತದೆ ಹಾಗಾಗಿ ಹಿಟ್ಟನ್ನು ತಣ್ಣೀರಿನಲ್ಲಿ ಕಲಸಿಕೊಂಡು ಪೇಸ್ಟ್ ಮಾಡಿ ನಂತರ ಬಿಸಿ ದ್ರಾವಣಕ್ಕೆ ಹಾಕಿದರೆ ಗಂಟಾಗುವುದಿಲ್ಲ.

* ಮಾಡಿರುವ ಅಡುಗೆಗೆ ಖಾರ ಜಾಸ್ತಿಯಾಗಿದ್ದರೆ ಸ್ವಲ್ಪ ಎಣ್ಣೆ ಟೊಮೆಟೊ ರಸ ಅಥವಾ ಹುಣಸೆ ರಸ ಅಥವಾ ನಿಂಬೆ ರಸ ಸೇರಿಸಿ ಆಗ ಸರಿ ಹೋಗುತ್ತದೆ.
* ಒಂದು ಬಟ್ಟಲು ಗುಲಾಬಿ ದಳಕ್ಕೆ, ಒಂದು ಬಟ್ಟಲು ಜೇನುತುಪ್ಪ ಹಾಗೂ ಒಂದು ಬಟ್ಟಲು ಸಕ್ಕರೆ ಹಾಕಿ ಇಟ್ಟರೆ ಒಂದು ವಾರದಲ್ಲಿ ಗುಲ್ಕನ್ ತಯಾರಾಗುತ್ತದೆ.
* ಸಕ್ಕರೆ ಪಾಕವು ಗಟ್ಟಿಯಾಗಿ ಮತ್ತೆ ಸಕ್ಕರೆ ಹರಳು ಹರಳಂತೆ ಆಗಬಾರದು ಎಂದರೆ ಸಕ್ಕರೆ ಪಾಕ ಮಾಡುವಾಗ ಸ್ವಲ್ಪ ನಿಂಬೆರಸ ಹಾಕಬೇಕು.

* ಪಲ್ಯ, ಹುಳಿ ಅಥವಾ ಸಾರು ತುಂಬಾ ತೆಳುವಾಗಿದ್ದರೆ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಹುರಿದು ಪುಡಿ ಮಾಡಿ ಅದನ್ನು ನೀರಿನ ಜೊತೆ ಪೇಸ್ಟ್ ರೀತಿ ಮಾಡಿ ಸೇರಿಸಬಹುದು ಅಥವಾ ಉರಿಗಡಲೆಯನ್ನು ಪುಡಿ ಮಾಡಿ ನೀರಿನ ಜೊತೆ ಮಿಕ್ಸ್ ಮಾಡಿ ಸೇರಿಸಬಹುದು ಅಥವಾ ಕಡಲೆ ಹಿಟ್ಟನ್ನು ನೀರಿನ ಜೊತೆ ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಹಾಕಬಹುದು ಆಗ ಗಟ್ಟಿಯಾಗುತ್ತದೆ ಹಾಗೂ ರುಚಿ ಕೂಡ ಚೆನ್ನಾಗಿರುತ್ತದೆ.

* ನೆಲದ ಮೇಲೆ ಎಣ್ಣೆ ಅಥವಾ ಎಣ್ಣೆ ಜಿಡ್ಡು ಆಗಿದ್ದರೆ ಅದನ್ನು ತೆಗೆಯಲು ಹಿಟ್ಟು ಅಥವಾ ಹೊಟ್ಟನ್ನು ಹಾಕಿ ಉಜ್ಜಬೇಕು ಆಗ ನೀಟಾಗಿ ಕ್ಲೀನ್ ಆಗುತ್ತದೆ.
* ಶಾವಿಗೆಯನ್ನು ಬೇಯಿಸುವಾಗ ನೀರಿಗೆ ಸ್ವಲ್ಪ ಎಣ್ಣೆ ಹಾಗೂ ಉಪ್ಪು ಹಾಕುವುದರಿಂದ ಅವು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ ಮತ್ತು ಶಾವಿಗೆ ಹೊಳಪಿನಿಂದ ಕೂಡಿರುತ್ತದೆ
* ಕರ್ಪೂರದ ಭರಣಿಯಲ್ಲಿ ನಾಲ್ಕೈದು ಕರಿ ಮೆಣಸಿನಕಾಳು ಇಡುವುದರಿಂದ ಕರ್ಪೂರ ಕರಗುವುದಿಲ್ಲ

* ನಿಂಬೆಹಣ್ಣಿನ ಪಾನಕ ಮಾಡುವಾಗ ಸಕ್ಕರೆ ಇಲ್ಲದಿದ್ದರೆ ಬೆಲ್ಲವನ್ನೇ ಹಾಕಿ ರುಚಿ ಚೆನ್ನಾಗಿರುತ್ತದೆ. ಕಬ್ಬಿನ ಹಾಲಿನ ಟೇಸ್ಟ್ ಬರುತ್ತದೆ.
* ಓವೆನ್ ನಲ್ಲಿ ಇಡ್ಲಿ ಹಿಟ್ಟು, ದೋಸೆ ಹಿಟ್ಟು ಈ ರೀತಿ ಉಕಾಕುವ ಪದಾರ್ಥಗಳನ್ನು ಇಡುವ ಮೊದಲು ಅದರ ಕೆಳಗಡೆ ಒಂದು ಪೇಪರ್ ಇಡಿ, ಅದು ಉಕ್ಕಿದರೆ ಕ್ಲೀನ್ ಮಾಡಲು ಸುಲಭವಾಗುತ್ತದೆ.

ಕರ್ನಾಟಕ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಗ್ಯಾರಂಟಿ, ಯಾವುದೇ ಶ್ಯೂರಿಟಿ ಇಲ್ಲದೆ ಉದ್ಯೋಗಿನಿ ಯೋಜನೆಯಡಿ ಸಿಗುತ್ತಿದೆ ಮೂರು ಲಕ್ಷದವರೆಗೆ ಸಬ್ಸಿಡಿ ಸಹಿತ ಸಾಲ.!

 

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು (Government Schemes for Womans) ಜಾರಿಗೆ ತಂದಿದ್ದಾರೆ. ಇತ್ತೀಚಿಗೆ ಲೋಕಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿ ನಾರಿ ಶಕ್ತಿ ವಂದನ್ ಕಾಯ್ದೆ ಜಾರಿ ಮಾಡಲಾಯಿತು. ದೇಶದ ಸಾಮಾನ್ಯ ಮಹಿಳೆಯರೆಲ್ಲರಿಗೂ ಅನುಕೂಲವಾಗುವಂತಹ ಯೋಜನೆಗಳ ಉದಾಹರಣೆಯೂ ಸಾಕಷ್ಟಿದೆ.

ಮಾತೃಶ್ರೀ, ಮಾತೃ ವಂದನ ವಿಶೇಷವಾಗಿ ಇತ್ತೀಚೆಗೆ ಕರ್ನಾಟಕ ಸರ್ಕಾರವು ಜಾರಿಗೆ ತಂದ ಗ್ಯಾರೆಂಟಿ ಯೋಜನೆಗಳನ್ನು ಉದಾಹರಿಸಬಹುದು. ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಗಳು ಮಹಿಳೆಯರಿಗಾಗಿ ಮೀಸಲಾಗಿವೆ. ಇದರೊಂದಿಗೆ ಗ್ಯಾರಂಟಿಯೇತರವಾಗಿ ಮತ್ತೊಂದು ಹೊಸ ಯೋಜನೆ ಘೋಷಿಸಿದೆ.

ಉದ್ಯೋಗಿನಿ ಯೋಜನೆ (Udyogini Scheme) ಎನ್ನುವ ನೂತನ ಯೋಜನೆಯಡಿ ಕನಿಷ್ಠ 3 ಲಕ್ಷದವರೆಗೆ ಸಬ್ಸಿಡಿ ಸಹಿತ ಸಾಲ ಸೌಲಭ್ಯ ನೀಡುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಉದ್ಯೋಗಿನಿ ಯೋಜನೆಯಡಿ ಈ ಸೌಲಭ್ಯ ನೀಡಲಾಗುತ್ತಿತ್ತು, ಈ ಕುರಿತ ಅಧಿಕೃತ ಪ್ರಕಟಣೆಯು ಕೂಡ ಸರ್ಕಾರದಿಂದ ಹೊರ ಬಿದ್ದಿದೆ.

ಸ್ವಾವಲಂಬಿಯಾಗಿ ಬದುಕಲು ಇಚ್ಚಿಸುವ ಮಹಿಳೆಯರು ಉದ್ಯೋಗಿನಿ ಯೋಜನೆ ಮೂಲಕ ನೆರವು ಪಡೆದು ಆದಾಯೋತ್ಪನ್ನ ಚಟುವಟಿಕೆಗಳಿಗೆ ಇದನ್ನು ವಿನಿಯೋಗಿಸಿಕೊಳ್ಳಬಹುದು. ಉದ್ಯೋಗಿನಿ ಯೋಜನೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು? ಏನೆಲ್ಲ ದಾಖಲೆಗಳನ್ನು ನೀಡಬೇಕು? ಮತ್ತು ಇದಕ್ಕೆ ವಿಧಿಸಿರುವ ಮನದಂಡಗಳೇನು? ಎನ್ನುವುದರ ಪೂರ್ತಿ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ರಾಜ್ಯದ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಅನುಕೂಲತೆ ಪಡೆಯಬಹುದಾಗಿದೆ ಹಾಗಾಗೀ ತಪ್ಪದೆ ಈ ಮಾಹಿತಿಯನ್ನು ಎಲ್ಲಾ ಮಹಿಳೆಯರಿಗೂ ಶೇರ್ ಮಾಡಿ.

ಯೋಜನೆ ಹೆಸರು: ಉದ್ಯೋಗಿನಿ ಯೋಜನೆ…

ಅರ್ಜಿ ಸಲ್ಲಿಸಲು ಕಂಡೀಷನ್ ಗಳು:-
* ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರುವ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
* ಮಹಿಳೆಯ ವಯಸ್ಸು 18 ರಿಂದ 55 ವರ್ಷದ ಒಳಗಿರಬೇಕು * ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಇಚ್ಚಿಸುವ ಮಹಿಳೆಯರು ಈ ಉದ್ಯೋಗಿನಿ ಯೋಜನೆಯಡಿ ಬ್ಯಾಂಕುಗಳ ಮೂಲಕ ಸಾಲ ಮತ್ತು ನಿಗಮಗಳ ಮೂಲಕ ಸಹಾಯಧನ ಪಡೆಯಬಹುದು.

* ಈ ಯೋಜನೆಯ ಸಹಾಯಧನ dbt ಮೂಲಕವೇ ಫಲಾನುಭವಿಗಳ ಖಾತೆಗೆ ವರ್ಗಾವಣೆಯಿಗುವುದು, ಹಾಗಾಗಿ ಅರ್ಜಿದಾರರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಮಾಡಿಸಿರಬೇಕು, ಖಾತೆ ಆಕ್ಟಿವ್ ಆಗಿರಬೇಕು.
* ಉದ್ಯೋಗಿನಿ ಯೋಜನೆಯ SCSP/TSP ಬಳಕೆಯಾಗದ ಅನುದಾನದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಅರ್ಜಿದಾರರು ಸಹ ಸೇವಾ ಸಿಂಧು ಪೋರ್ಟನಲ್ಲಿಯೇ ಅರ್ಜಿ ಸಲ್ಲಿಸಬೇಕು.

* ಸರ್ಕಾರದ ಕೋಟ ಮತ್ತು ನಿಗಮದ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾನುಭವಿಗಳು ಮಾನ್ಯ ಸಚಿವರು / ಮಾನ್ಯ ಶಾಸಕರು / ಕರ್ನಾಟಕ ಸರ್ಕಾರದ ಮಾನ್ಯ ಅಧ್ಯಕ್ಷರು /ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರ ಶಿಫಾರಸ್ಸು ಪತ್ರ ಪಡೆದು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು.
* SC/ST ಫಲಾನುಭವಿಗಳಿಗೆ ಆದಾಯದ ಮಿತಿ 2 ಲಕ್ಷ.
* ಸಾಮಾನ್ಯ ವರ್ಗದ ಮಹಿಳೆಯರಿಗೆ ಆದಾಯದ ಮಿತಿ 1.5 ಲಕ್ಷ.

ಸಿಗುವ ಸಹಾಯಧನ:-
* SC/ST ಫಲಾನುಭವಿಗಳಿಗೆ ಘಟಕ ವೆಚ್ಚ 1 ಲಕ್ಷದಿಂದ ಗರಿಷ್ಠ 3 ಲಕ್ಷದವರೆಗೆ ಸಾಲ ಲಭ್ಯವಿರುತ್ತದೆ. ಈ ಸಾಲಕ್ಕೆ ನಿಗಮದ ವತಿಯಿಂದ 50%ರಷ್ಟು ಸಹಾಯಧನ ಸಿಗಲಿದ್ದು, ಉದ್ಯೋಗಿನಿ ಯೋಜನೆಗೆ ನಿಗಮದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಪಡೆದುಕೊಳ್ಳಬಹುದು.
* ಸಾಮಾನ್ಯ ವರ್ಗದ ಮಹಿಳೆಯರಿಗೆ ಘಟಕ ವೆಚ್ಚ 3 ಲಕ್ಷದವರೆಗೂ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ ಸಿಗಲಿದೆ, ಉದ್ಯೋಗಿನಿ ಯೋಜನೆ ಸಹಾಯಧನ ಕೋರಿ ನಿಗಮಕ್ಕೆ ಅರ್ಜಿ ಸಲ್ಲಿಸಿ 30%ರಷ್ಟು ಸಹಾಯಧನ ಪಡೆಯಬಹುದು.

ಅರ್ಜಿ ಸಲ್ಲಿಸುವ ವಿಧಾನ:-
* ಹತ್ತಿರದ ಬಾಪೂಜಿ ಸೇವಾ ಕೇಂದ್ರ / ಗ್ರಾಮ ಒನ್ / ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ:-
https://sevasindhu.karnataka.gov.in

ಹೆಚ್ಚಿನ ಮಾಹಿತಿಗಾಗಿ:-
* ನಿಮ್ಮ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ಕೊಡಿ ಅಥವಾ ಅಂಗನವಾಡಿ ಕಾರ್ಯಕರ್ತೆಯರ ಬಳಿ ಮಾಹಿತಿ ಪಡೆಯಿರಿ

ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 22.11.2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 22.12.2023.

ಅರಿಶಿಣದ ಮಹತ್ವ.!

 

ಪ್ರತಿಯೊಂದು ಮನೆಯಲ್ಲೂ ಕೂಡ ಅರಿಶಿಣ ಇದ್ದೇ ಇರುತ್ತದೆ. ಅರಿಶಿಣ ಇಲ್ಲದ ಅಡುಗೆ ಮನೆ ಇಲ್ಲ, ಒಟ್ಟಿನಲ್ಲಿ ಅರಿಶಿಣ ಬಳಸದ ಮನೆಗೆ ಇಲ್ಲ ಎನ್ನಬಹುದು. ಅರಿಶಿಣವನ್ನು ಅಡುಗೆಗೆ ಮಾತ್ರವಲ್ಲದೆ ಪೂಜೆ ಮಾಡುವಾಗ ಕೂಡ ಬಳಸುತ್ತೇವೆ. ಯಾವುದೇ ಶುಭ ಸಮಾರಂಭಗಳು ಅರಿಶಿನ ಕುಂಕುಮ ಮನೆಗೆ ತರದೆ ಆಗುವುದೇ ಇಲ್ಲ ಧಾರ್ಮಿಕವಾಗಿ ಅರಿಶಿಣಕ್ಕೆ ಬಹಳ ಮಹತ್ವದ ಸ್ಥಾನವಿದೆ.

ಅರಿಶಿಣವನ್ನು ಒಂದರ್ಥದಲ್ಲಿ ಬಂಗಾರಕ್ಕೆ ಕೂಡ ಹೋಲಿಕೆ ಮಾಡಲಾಗುತ್ತದೆ. ಒಂದು ಅರಿಶಿಣದ ಎಳೆಯನ್ನು ಕುತ್ತಿಗೆಗೆ ಕಟ್ಟಿದರೆ ಮಾಂಗಲ್ಯ ಕಟ್ಟಿದಷ್ಟೇ ಅದಕ್ಕೆ ಬೆಲೆ ಇದೆ. ಅಷ್ಟು ಪೂಜ್ಯನೀಯ ಸ್ಥಾನದಲ್ಲಿ ಈ ಅರಿಶಿಣವನ್ನು ನೋಡಲಾಗುತ್ತದೆ. ಬಂಗಾರದ ಬಣ್ಣದಲ್ಲಿ ಹೊಳೆಯುವ ಈ ಪದಾರ್ಥ ಹೆಣ್ಣಿನ ಸೌಂದರ್ಯ ಸಾಧನವೂ ಕೂಡ ಹೌದು.

ಆರೋಗ್ಯದ ವಿಚಾರದಲ್ಲಂತೂ ಅರಿಶಿಣದ ಉಪಕಾರ ಅಷ್ಟಿಷ್ಟಲ್ಲ. ಅರಿಶಿಣವನ್ನು ಆಂಟಿ ಬಯೋಟಿಕ್ ಕೂಡ. ಮಾಡುವ ಅಡುಗೆಗೆ ಚಿಟಿಕೆ ಅರಿಶಿಣ ಹಾಕಿದರೆ ಅದರ ರುಚಿ ಬಣ್ಣ ಎಲ್ಲವೂ ಬದಲಾಗುತ್ತದೆ ಮತ್ತು ಅಡುಗೆ ಶುದ್ಧವಾಗುತ್ತದೆ, ಅರಿಶಿಣದ ಬಳಕೆ ರೋಗನಿರೋಧಕ ಶಕ್ತಿಯು ಹೆಚ್ಚಿಸುತ್ತದೆ. ಬಿದ್ದು ಗಾಯವಾದಾಗ, ಕೈ ಕುಯ್ದುಕೊಂಡಾಗ ತಕ್ಷಣಕ್ಕೆ ಸಿಗುವುದೇ ಆರಿಶಿಣ, ಹರಿವ ರಕ್ತವನ್ನು ತಟಕ್ಕನೆ ನಿಲ್ಲಿಸುವ ಸಾಮರ್ಥ್ಯವನ್ನು ಅರಿಶಿಣ ಹೊಂದಿದೆ.

ಹಾಗಾಗಿ ಆಯುರ್ವೇದದಲ್ಲಿ ಇದಕ್ಕೆ ಬಹಳ ಮಹತ್ವದ ಸ್ಥಾನ ನೀಡಲಾಗಿದೆ. ಹಾಗೆಯೇ ವಾಸ್ತು ಶಾಸ್ತ್ರದಲ್ಲೂ ಕೂಡ ಇದಕ್ಕೆ ಪೂಜ್ಯನೀಯ ಸ್ಥಾನವಿದೆ. ಮನೆಯಲ್ಲಿ ಯಾವುದೇ ನಕಾರತ್ಮಕ ಶಕ್ತಿ ಇದ್ದರೂ ಕೂಡ ಮನೆ ಒರೆಸುವಾಗ ಚಿಟಿಕೆ ಅರಿಶಿಣ ಮತ್ತು ಉಪ್ಪು ಹಾಕಿ ಒರೆಸಿದರೆ ಯಾವ ದುಷ್ಟ ಶಕ್ತಿಯು ಕೂಡ ಮನೆ ಪ್ರವೇಶಿಸುವುದಿಲ್ಲ.

ಅಲ್ಲದೆ ಹೊಸಲಿಗೆ ಅರಿಶಿಣ ಹಚ್ಚಿ ಪೂಜಿಸುವುದರಿಂದ ತಾಯಿ ಮಹಾಲಕ್ಷ್ಮಿ ಪ್ರಸನ್ನರಾಗುತ್ತಾರೆ. ಹೀಗೆ ಅರಿಶಿನದ ಮಹತ್ವವನ್ನು ಹೇಳುತ್ತಾ ಹೋದರೆ ಅದು ತೀರದ ಪಟ್ಟಿ. ಅದರಲ್ಲಿ ಕೆಳ ಪ್ರಮುಖವಾದ ಮಾಹಿತಿಯನ್ನು ಎಲ್ಲರೂ ತಿಳಿದುಕೊಂಡಿರಬೇಕು ಅಂತವುಗಳ ಬಗ್ಗೆ ವಿಷಯ ಹಂಚಿಕೊಳ್ಳುತ್ತಿದ್ದೇವೆ.

* ಅರಿಶಿಣವು ಗುರು ಗ್ರಹಕ್ಕೆ ಸಂಬಂಧಿಸಿದೆ, ಪೂಜೆಯ ಸಮಯದಲ್ಲಿ ಕೈ ಮಣಿಕಟ್ಟಿಗೆ ಅಥವಾ ಕುತ್ತಿಗೆಗೆ ಅರಿಶಿಣದ ಬೊಟ್ಟು ಇಡುವುದರಿಂದ ಗುರು ಗ್ರಹವು ಜಾತಕದಲ್ಲಿ ಬಲಗೊಳ್ಳುತ್ತದೆ. ವ್ಯಕ್ತಿಯು ಉನ್ನತ ಸ್ಥಾನದಲ್ಲಿರುತ್ತಾನೆ.

* ಅರಿಶಿನದ ದಾನ ಮಾಡುವುದು ಬಹಳ ಶ್ರೇಷ್ಠ ಅರಿಶಿಣ ದಾನ ಮಾಡುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರ ಆಗುತ್ತವೆ ಎನ್ನುವುದು ಹಿರಿಯರ ನಂಬಿಕೆ ಗುರು ಗ್ರಹದಲ್ಲಿ ದೋಷಗಳಿದ್ದಾಗಲೂ ಅರಿಶಿನದ ದಾನ ಮಾಡಲು ಹೇಳಲಾಗುತ್ತದೆ.

* ವಿವಾಹ ಸಂಬಂಧದಲ್ಲಿ ಅಡೆತಡೆಗಳು ಎದುರಾಗುತ್ತಿದ್ದರೆ ಹಣೆಗೆ ಅರಿಶಿಣದ ತಿಲಕವನ್ನು ಇಡಬೇಕು ಇದು ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ
* ವಿವಾಹ ವಿಳಂಬ ಅಥವಾ ಕಂಕಣ ಭಾಗ್ಯ ಕೂಡಿ ಬರಲು ಏನೇ ಅಡೆ-ತಡೆಗಳಾಗುತ್ತಿದ್ದರು ಇದರ ಪರಿಹಾರಕ್ಕಾಗಿ ಗಣೇಶನ ದೇವಸ್ಥಾನದಲ್ಲಿ ಪ್ರತಿ ಗುರುವಾರ ಅರಿಶಿಣ ಅರ್ಪಿಸಬೇಕು ಶೀಘ್ರವಾಗಿ ಸಮಸ್ಯೆ ಪರಿಹಾರವಾಗುತ್ತದೆ.

* ಮನೆಯ ಮುಖ್ಯದ್ವಾರದಲ್ಲಿ ಅರಿಶಿಣದಲ್ಲಿ ಸ್ವಸ್ತಿಕ್ ಚಿನ್ಹೆಯನ್ನು ಬರೆಯಬೇಕು. ಮನೆಯನ್ನು ಪ್ರವೇಶಿಸುವ ಜಾಗದಲ್ಲಿ, ಮನೆಯಲ್ಲಿ ಗೋಡೆಗಳ ಸುತ್ತ ಅರಿಶಿನದ ರೇಖೆಯನ್ನು ಹಾಕುವುದರಿಂದ ಯಾವುದೇ ನಕರಾತ್ಮಕ ಶಕ್ತಿ ಮನೆ ಒಳಗೆ ಪ್ರವೇಶಿಸುವುದಿಲ್ಲ.
* ಸ್ನಾನ ಮಾಡುವ ನೀರಿಗೆ ಚಿಟಿಕೆ ಅರಿಶಿಣ ಹಾಕಿ ನಂತರ ಸ್ನಾನ ಮಾಡಿದರೆ ದೈಹಿಕ ಹಾಗೂ ಮಾನಸಿಕ ಒತ್ತಡಗಳು ಕಡಿಮೆ ಆಗುತ್ತದೆ, ಬಹಳ ಹಗುರವಾದ ಅನುಭವವನ್ನು ಪಡೆಯುತ್ತೀರಿ ಮನಸ್ಸು ಪ್ರಶಾಂತವಾಗಿರುತ್ತದೆ.

* ಅರಿಶಿಣದ ಕೊಂಬಿಗೆ ಮೋಲಿ ದಾರವನ್ನು ಸುತ್ತಿ ರಾತ್ರಿ ಹೊತ್ತು ಮಲಗುವಾಗ ತಲೆದಿಂಬಿನ ಕೆಳಗೆ ಇಟ್ಟುಕೊಂಡರೆ ನಕಾರಾತ್ಮಕ ಶಕ್ತಿಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ ಕೆಟ್ಟ ಕನಸುಗಳು ಬೀಳುವುದಿಲ್ಲ.
* ಸೂರ್ಯನಿಗೆ ಅರಿಶಿನ ಬೆರೆಸಿದ ನೀರನ್ನು ಅರ್ಘ್ಯ ನೀಡಿದರೆ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
* ಅರಿಶಿಣದ ಜಪಮಾಲೆಯೊಂದಿಗೆ ಯಾವುದೇ ಮಂತ್ರ ಜಪಿಸಿದರು ಅಚಲವಾದ ಬುದ್ಧಿಶಕ್ತಿ ಪಡೆಯಬಹುದು, ಇದರಿಂದ ಏಕಾಗ್ರತೆ ಹೆಚ್ಚಾಗುತ್ತದೆ.

* ಹಣಕಾಸಿನ ಸಮಸ್ಯೆ ಎದುರಿಸುತ್ತಿರುವವರು ಅಥವಾ ಅನಾವಶ್ಯಕವಾಗಿ ಹಣ ಪೋಲಾಗುತ್ತಿದ್ದರೆ ಕೆಂಪು ಅಥವಾ ಹಳದಿ ವಸ್ತ್ರದಲ್ಲಿ ಅರಿಶಿಣದ ಕೊಂಬನ್ನು ಕಟ್ಟಿ ನೀವು ಹಣ ಇಡುವ ಡಬ್ಬದಲ್ಲಿ ಇಡಬೇಕು ಮತ್ತು ಆ ಡಬ್ಬವನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು ಇದರಿಂದ ಹಣಕಾಸಿನ ವಿಚಾರದಲ್ಲಿ ಬಹಳ ಉತ್ತಮವಾದ ಬದಲಾವಣೆಯಾಗುತ್ತದೆ.
* ಯಾವುದೇ ಕಾರಣಕ್ಕೂ ಅಡುಗೆಗೆ ಬಳಸುವ ಅರಿಶಿನವನ್ನು ಪೂಜೆಗೆ ಬಳಸಬಾರದು, ಪೂಜೆ ಹಾಗೂ ಅಡುಗೆಗೆ ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು.

ಮಹಿಳೆಯರಿಗೆ ಹೊಸ ಯೋಜನೆ ಜಾರಿ, ಧನಶ್ರೀ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರಿಗೆ ರೂ.30,000 ಉಚಿತ, ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!

 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಜ್ಯದ ಮಹಿಳೆಯರಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಗ್ಯಾರೆಂಟಿ ಯೋಚನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಕೂಡ ಇಲಾಖೆ ಜವಾಬ್ದಾರಿಯಾಗಿದೆ. ಇದರ ಜೊತೆಗೆ 2023-24ನೇ ಸಾಲಿನ ವಿವಿಧ ಯೋಜನೆಗಳನ್ನು ಘೋಷಿಸಿದ್ದು, ಅರ್ಹರು ಅರ್ಜಿ ಸಲ್ಲಿಸುವಂತೆ ಯೋಜನೆ ಬಗ್ಗೆ ವಿಸ್ತಾರವಾದ ವರದಿ ಒಳಗೊಂಡಿರುವ ಅಧಿಕೃತ ಪ್ರಕಟಣೆ ಕೂಡ ಹೊರಡಿಸಿದೆ.

ಯಾವೆಲ್ಲ ಯೋಜನೆಗಳ ಸೌಲಭ್ಯಗಳಿವೆ? ಈ ಯೋಜನೆಗಳಿಂದ ಸಿಗುತ್ತಿರುವ ಅನುಕೂಲತೆಗಳೇನು? ಯಾರು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸುವುದು ಹೇಗೆ? ಇದಕ್ಕೆ ಕೊನೆಯ ದಿನಾಂಕ ಎಂದು? ಎನ್ನುವುದರ ವಿವರ ಹೀಗಿದೆ ನೋಡಿ.

1. ಉದ್ಯೋಗಿನಿ ಯೋಜನೆ:-
ಕರ್ನಾಟಕ ರಾಜ್ಯದ 18 ರಿಂದ 55 ವರ್ಷದ ಒಳಗಿನ ವಯೋಮಾನದ ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಇಚ್ಚಿಸುವ ಮಹಿಳೆಯರು ಈ ಯೋಜನೆಯಡಿ ಬ್ಯಾಂಕುಗಳ ಮೂಲಕ ಸಾಲ ಮತ್ತು ನಿಗಮಗಳ ಮೂಲಕ ಸಹಾಯಧನ ಪಡೆಯಬಹುದು.

* ಆದಾಯದ ಮಿತಿ 2 ಲಕ್ಷದ ಒಳಗಿರುವ SC/ST ಫಲಾನುಭವಿಗಳಿಗೆ ಘಟಕ ವೆಚ್ಚ 1 ಲಕ್ಷದಿಂದ ಗರಿಷ್ಠ 3 ಲಕ್ಷದವರೆಗೆ ಸಾಲ ಲಭ್ಯವಿರುತ್ತದೆ. ಈ ಸಾಲಕ್ಕೆ ನಿಗಮದ ವತಿಯಿಂದ 50%ರಷ್ಟು ಸಹಾಯಧನ ಸಿಗಲಿದ್ದು, ಉದ್ಯೋಗಿನಿ ಯೋಜನೆಗೆ ನಿಗಮದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಪಡೆದುಕೊಳ್ಳಬಹುದು.

* ಆದಾಯದ ಮಿತಿ 1.5 ಲಕ್ಷದ ಒಳಗಿರುವ ಸಾಮಾನ್ಯ ವರ್ಗದ ಮಹಿಳೆಯರಿಗೆ ಘಟಕ ವೆಚ್ಚ 3 ಲಕ್ಷದವರೆಗೂ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ ಸಿಗಲಿದೆ, ಉದ್ಯೋಗಿನಿ ಯೋಜನೆ ಸಹಾಯಧನ ಕೋರಿ ನಿಗಮಕ್ಕೆ ಅರ್ಜಿ ಸಲ್ಲಿಸಿ 30%ರಷ್ಟು ಸಹಾಯಧನ ಪಡೆಯಬಹುದು.

2. ಚೇತನ ಯೋಜನೆ:-
18 ವರ್ಷ ಮೇಲ್ಪಟ್ಟ ರಾಜ್ಯದ ದಮನಿತ ಮಹಿಳೆಯರು ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳಲು ಇಚ್ಚಿಸಿದರೆ ಚೇತನ ಯೋಜನೆಯಡಿ ರೂ.30,000 ಗಳ ಪ್ರೋತ್ಸಾಹ ಧನ ಸಿಗುತ್ತದೆ.

3. ಧನಶ್ರೀ ಯೋಜನೆ:-
ಕರ್ನಾಟಕ ರಾಜ್ಯದ 18 ವರ್ಷ ಮೇಲ್ಪಟ್ಟ 60 ವರ್ಷ ಒಳಗಿನ ವಯಸ್ಸಿನ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಚಿಸಿದರೆ ಧನಶ್ರೀ ಯೋಜನೆ ಅಡಿ ರೂ. 30,000 ಗಳ ಪ್ರೋತ್ಸಾಹ ಧನ ಪಡೆಯಬಹುದು.

4. ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ:-
ಈ ಯೋಜನೆಯಡಿ 18 ವರ್ಷ ಮೇಲ್ಪಟ್ಟ ರಾಜ್ಯದ ಮಹಿಳೆಯರು ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ. 30,000 ಗಳ ಪ್ರೋತ್ಸಾಹ ಧನ ಪಡೆಯಲು ಅರ್ಜಿ ಸಲ್ಲಿಸಬಹುದು.

5. ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ:-
1993-94 ಮತ್ತು 2007-08 ರ ಸಮೀಕ್ಷೆಯಲ್ಲಿ ಗುರುತಿಸಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಯೋಜನೆ ಜಾರಿ ಮಾಡಲಾಗಿದೆ. ಮಾಜಿ ದೇವದಾಸಿ ಮಹಿಳೆಯರು ಆದಾಯ ಉತ್ಪನ್ನ ಚಟುವಟಿಕೆ ಕೈಗೊಳ್ಳಲು ಇಚ್ಚಿಸಿದರೆ ರೂ.30,000 ಗಳ ವರೆಗೆ ನಿಗಮದಿಂದ ಪ್ರೋತ್ಸಾಹ ಧನ ಸಿಗುತ್ತದೆ.

ನಿಯಮ ಹಾಗೂ ನಿಬಂಧನೆಗಳು:-
* ಈ ಯೋಜನೆಯ ಸಹಾಯಧನ ಅಥವಾ ಪ್ರೋತ್ಸಾಹ ಧನ dbt ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗುತ್ತದೆ. ಆದ ಕಾರಣ ಅರ್ಜಿದಾರರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು.

* ಉದ್ಯೋಗಿನಿ ಯೋಜನೆಯ SCSP/TSP ಬಳಕೆಯಾಗದ ಅನುದಾನದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಅರ್ಜಿದಾರರು ಸಹ ಸೇವಾ ಸಿಂಧು ಪೋರ್ಟನಲ್ಲಿಯೇ ಅರ್ಜಿ ಸಲ್ಲಿಸಬೇಕು.
* ಸರ್ಕಾರದ ಕೋಟ ಮತ್ತು ನಿಗಮದ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾನುಭವಿಗಳು ಮಾನ್ಯ ಸಚಿವರು / ಮಾನ್ಯ ಶಾಸಕರು / ಕರ್ನಾಟಕ ಸರ್ಕಾರದ ಮಾನ್ಯ ಅಧ್ಯಕ್ಷರು /ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರ ಶಿಫಾರಸ್ಸು ಪತ್ರ ಪಡೆದು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ:-
* ಈ ಮೇಲೆ ತಿಳಿಸಿದ ಯಾವುದೇ ಯೋಜನೆಗಾದರೂ ಆನ್ಲೈನ್ ನಲ್ಲಿಯೇ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
* ಅರ್ಜಿದಾರರು ಹತ್ತಿರದ ಬಾಪೂಜಿ ಸೇವಾ ಕೇಂದ್ರ / ಗ್ರಾಮ ಒನ್ / ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.

ವೆಬ್ ಸೈಟ್ ವಿಳಾಸ:-
ಅರ್ಜಿ ಸಲ್ಲಿಸಲು:
https://sevasindhu.karnataka.gov.in
ಹೆಚ್ಚಿನ ಮಾಹಿತಿಗಾಗಿ:
https://kswdc.karnataka.gov.in

ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 22.11.2023
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 22.12.2023

ಅಕ್ಕಿ ತೊಳೆದ ನೀರಿನಿಂದ ಆರೋಗ್ಯಕ್ಕೆ ಎಷ್ಟು ಅನುಕೂಲ ನೋಡಿ.!

 

ನಮ್ಮ ಪ್ರತಿನಿತ್ಯದ ಆಹಾರದಲ್ಲಿ ಅನ್ನದ ಅಂಶ ಹೆಚ್ಚಿರುತ್ತದೆ. ನಾವು ಮಾಡುವ ಹೆಚ್ಚಿನ ಪ್ರಮಾಣದ ಅಡುಗೆಗಳು ಅಕ್ಕಿಯನ್ನೇ ಬಳಸುತ್ತೇವೆ. ಅನ್ನ, ಚಿತ್ರಾನ್ನ, ಪಲಾವ್, ಟೊಮೆಟೊ ಬಾತ್, ಗೀ ರೈಸ್ ಹೀಗೆ ಯಾವುದೇ ಅಡುಗೆ ಮಾಡಿದರು ಅಕ್ಕಿಯದ್ದೇ ಹೆಚ್ಚಿನ ಪ್ರಮಾಣ. ಈ ಅಕ್ಕಿ ಬಳಸಿ ಅನ್ನ ಮಾಡುವ ಮುನ್ನ ಅಕ್ಕಿಯನ್ನು ಚೆನ್ನಾಗಿ ತೊಳೆಯುತ್ತೇವೆ, ಅಕ್ಕಿ ತೊಳೆದು ಅದನ್ನು ನೆನೆಸಿಟ್ಟು ಅನ್ನ ಮಾಡುತ್ತೇವೆ.

ಆದರೆ ಆ ನೀರನ್ನು ಮಾತ್ರ ವೇಸ್ಟ್ ಎಂದು ಚೆಲ್ಲಿ ಬಿಡುತ್ತೇವೆ, ಆದರೆ ಇದರಲ್ಲೂ ಕೂಡ ಸಾಕಷ್ಟು ಸತ್ವವಿದೆ. ಇದು ಚರ್ಮ ಹಾಗೂ ಕೂದಲ ಆರೋಗ್ಯಕ್ಕೆ ಅತ್ಯುತ್ತಮ ಔಷಧಿಯಾಗಿದೆ. ಯಾವ ರೀತಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎನ್ನುವುದರ ವಿವರ ಹೀಗಿದೆ ಯಾವಾಗಲೂ ಊಟಕ್ಕೆ ಕೆಂಪಕ್ಕಿಯನ್ನು ಬಳಸುವುದು ಒಳ್ಳೆಯದು.

ಅನ್ನ ಮಾಡುವ ಮುನ್ನ ಮೊದಲು ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಧೂಳು, ಕಲ್ಮಶ ಹೊರಹೋಗುವಂತೆ ಮಾಡಬೇಕು, ನಂತರ ಮತ್ತೊಮ್ಮೆ ಶುದ್ಧವಾದ ನೀರನ್ನು ಹಾಕಿ ಐದರಿಂದ ಹತ್ತು ನಿಮಿಷ ನೆನೆಸಿ ಆಮೇಲೆ ಅಕ್ಕಿ ತೆಗೆದು ಅಡುಗೆಗೆ ಬಳಸಬೇಕು. ಆದರೆ ನೆನೆಸಿಟ್ಟ ನೀರನ್ನು ವೇಸ್ಟ್ ಮಾಡಬೇಡಿ ಮತ್ತೊಂದು ಬಿಳಿ ಬಣ್ಣದ ಕಾಟನ್ ಬಟ್ಟೆಯಲ್ಲಿ ಅದನ್ನು ಶೋಧಿಸಿ ಅರ್ಧ ಗಂಟೆ ಹಾಗೆ ಬಿಡಿ ಪಾತ್ರೆಯ ತಳದಲ್ಲಿ ಬಿಳಿ ಬಣ್ಣದ ಪೇಸ್ಟ್ ಇರುತ್ತದೆ ಅದನ್ನು ಈ ರೀತಿ ಉಪಯೋಗಿಸಿಕೊಳ್ಳಿ.

* ಈ ಪೇಸ್ಟ್ ಜೊತೆ ಸ್ವಲ್ಪ ಅರಿಶಿನ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಚರ್ಮ ಸಾಫ್ಟ್ ಆಗುತ್ತದೆ ಮುಖಕ್ಕೆ ಗ್ಲೋ ಬರುತ್ತದೆ.
* ಈ ಬಿಳಿ ಬಣ್ಣದ ಪೇಸ್ಟ್ ನ್ನು ಹತ್ತಿಯ ಸಹಾಯದಿಂದ ತೆಗೆದುಕೊಂಡು ಕಣ್ಣು ರೆಪ್ಪೆಗಳ ಮೇಲೆ ಇಟ್ಟುಕೊಂಡು ಮಲಗಿಕೊಂಡರೆ ಚೆನ್ನಾಗಿ ನಿದ್ದೆ ಬರುತ್ತದೆ.
* ಈ ಪೇಸ್ಟ್ ಅನ್ನು ಸುಟ್ಟ ಕಾಯದ ಮೇಲೆ ಹಾಕಿದರೆ ಗಾಯಕ್ಕೆ ಬೊಬ್ಬೆ ಬರುವುದಿಲ್ಲ, ಸುಟ್ಟ ಗಾಯ ಬೇಗ ವಾಸಿಯಾಗುತ್ತದೆ.

* ಬಿಳಿ ಮುಟ್ಟಿನ ಸಮಸ್ಯೆ ಇದ್ದರೆ ಅಕ್ಕಿ ತೊಳೆದ ನೀರನ್ನು ನಿಯಮಿತವಾಗಿ ಬಳಸಿದರೆ ಕ್ರಮೇಣ ಕಡಿಮೆಯಾಗುತ್ತದೆ,
ಋತುಸ್ತ್ರಾವದ ಸಮಯದಲ್ಲಿ ಅಕ್ಕಿ ತೊಳೆದ ನೀರಿಗೆ ಬೆಲ್ಲ ಹಾಗೂ ಚಿಟಿಕೆ ಉಪ್ಪು ಹಾಕಿ ಕುಡಿಯುವುದರಿಂದ ಹೊಟ್ಟೆ ನೋವು ಕಡಿಮೆ ಆಗುತ್ತದೆ.
* ಅಕ್ಕಿ ತೊಳೆದ ನೀರನ್ನು ನಿಂಬೆ ರಸದ ಜೊತೆ ಮಿಕ್ಸ್ ಮಾಡಿ ಸ್ನಾನ ಮಾಡುವ ಮುನ್ನ ತಲೆಕೂದಲಕ್ಕೆ ಹಚ್ಚಿ ಅರ್ಧ ಗಂಟೆ ಒಣಗಿಸಿ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

* ಒಡೆದ ಹಿಮ್ಮಡಿ ಗಳಿಗೆ ಈ ನೀರನ್ನು ಬಳಸಿ ಮಸಾಜ್ ಮಾಡುವುದರಿಂದ ಒಡೆದಿರುವುದು ಗುಣವಾಗುತ್ತದೆ ಮತ್ತು ಮೃದುವಾಗುತ್ತದೆ.
* ಅಕ್ಕಿ ತೊಳೆದ ನೀರಿಗೆ ಕೆಂಪು ಕಲ್ಲುಸಕ್ಕರೆ, ಚೂರು ಏಲಕ್ಕಿ ಪುಡಿ ಮತ್ತು ಅಗತ್ಯವಿದ್ದಷ್ಟು ನೀರು ಹಾಕಿ ಜ್ಯೂಸ್ ಮಾಡಿ ಕುಡಿದರೆ ಕ್ಯಾಲ್ಸಿಯಂ ಹೆಚ್ಚಾಗುತ್ತದೆ ದೇಹ ತಂಪಾಗುತ್ತದೆ.
* ಈ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಶಕ್ತಿ ಹೆಚ್ಚಾಗುತ್ತದೆ ಮಕ್ಕಳಿಗೆ ಕೊಡುವುದು ಕೂಡ ಬಹಳ ಒಳ್ಳೆಯದು.

* ಅಕ್ಕಿ ತೊಳೆದ ನೀರಿನ ಜೊತೆ ಹುತ್ತದ ಮಣ್ಣನ್ನು ಮಿಕ್ಸ್ ಮಾಡಿ ಕಾಲಿಗೆ ಮಸಾಜ್ ಮಾಡುವುದರಿಂದ ಮಕ್ಕಳ ಕಾಲುಗಳು ಗಟ್ಟಿಯಾಗುತ್ತವೆ ಮತ್ತು ಬೇಗ ನಡೆಯಲು ಕಲಿಯುತ್ತಾರೆ.
* ಅರ್ಧ ಕಪ್ ಅಕ್ಕಿ ನೀರಿಗೆ ಅಲೋವೆರಾ ಸೇರಿಸಿ ಮುಖಕ್ಕೆ ಹಚ್ಚಿ 15 ನಿಮಿಷಗಳು ಆದ ಬಳಿಕ ಮುಖವನ್ನು ತೊಳೆಯಬೇಕು.
ಇದರಿಂದ ಮುಖದಲ್ಲಿರುವ ಮೊಡವೆಗಳು ಮಾಯವಾಗುತ್ತವೆ.
* ಅಕ್ಕಿ ತೊಳೆದ ನೀರಿಗೆ ನಿಂಬೆರಸ ಸೇರಿಸಿ ಮುಖಕ್ಕೆ ಹಚ್ಚಿ 15 ನಿಮಿಷಗಳು ಆದ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆದರೆ ಮುಖ ಕಾಂತಿಯುತವಾಗುತ್ತದೆ.

* ಈ ನೀರಿಗೆ ಅಡುಗೆ ಸೋಡಾ ಹಾಗೂ ಉಪ್ಪನ್ನು ಸೇರಿಸಿ ಮನೆ ಕಿಟಕಿ ಗಾಜುಗಳನ್ನು ಒರೆಸಲು ಬಳಸಬಹುದು
* ಚರ್ಮದ ತುರಿಕೆ, ಉರಿಯೂತ, ಕಿರಿಕಿರಿ ಇದ್ದರೆ ಈ ನೀರನ್ನು ಸೇರಿಸಿ ಸ್ನಾನ ಮಾಡಿದರೆ ಚರ್ಮದ ಸಮಸ್ಯೆಗಳು ದೂರವಾಗುತ್ತವೆ.
* ಅಕ್ಕಿ ತೊಳೆದ ನೀರು ಬಹಳ ತಂಪು ಶೀತ ಕೆಮ್ಮು ಇರುವವರು ಆರೋಗ್ಯ ದೃಷ್ಟಿಯಿಂದ ಕಡಿಮೆ ಬಳಸಿ.

ಮನೆಯಲ್ಲಿ ಈ ಲಕ್ಷಣಗಳು ಕಂಡರೆ, ನಿಮ್ಮ ಕೆಟ್ಟ ಟೈಮ್ ಸ್ಟಾರ್ಟ್ ಆಗಿದೆ ಎಂದು ಅರ್ಥ ಎಚ್ಚರ.!

ಮನುಷ್ಯ ಎಂದ ಮೇಲೆ ಹತ್ತಾರು ರೀತಿಯ ತಾ’ಪ’ತ್ರ’ಯಗಳು ಬರುತ್ತವೆ. ಕೆಲಸದ ಒತ್ತಡ, ವ್ಯಾಪಾರ ವ್ಯವಹಾರ ಇದ್ದಕಿದ್ದಂತೆ ಕುಸಿದು ಹೋಗುವುದು, ಮನೆಯ ಸದಸ್ಯರ ಆರೋಗ್ಯ ಗಂಭೀರವಾಗಿ ಕೆಡುವುದು, ಅ’ಪ’ಘಾ’ತವಾಗಿ ಬಿಡುವುದು, ಮನೆಯಲ್ಲಿ ಸದಸ್ಯರ ನಡುವಿನ ಆತ್ಮೀಯತೆ ನೋಡು ನೋಡುತ್ತಿದ್ದಂತೆ ಕ’ಲ’ಹ’ವಾಗಿ ಬದಲಾಗಿ ಮನಸ್ತಾಪ, ಮಕ್ಕಳು ಓದಿನಲ್ಲಿ ಮಂಕಾಗುವುದು ಸೇರಿದಂತೆ ಬಹಳ ದೊಡ್ಡ ಮಟ್ಟದ ಊಹಿಸಲು ಅಸಾಧ್ಯ ಕ’ಷ್ಟಗಳು ಕೂಡ ಬರುತ್ತವೆ.

ಆದರೆ ಇದೆಲ್ಲವೂ ಆಗುವ ಮುನ್ನ ಕೆಲ ಮುನ್ಸೂಚನೆ ಕೂಡ ಸಿಗುತ್ತದೆ. ಇದನ್ನು ಸೂಕ್ಷ್ಮವಾಗಿ ಅರಿತರೆ ಮುಂದಾಗುವ ದುರ್ಘಟನೆಗೆ ಮಾನಸಿಕವಾಗಿ ತಯಾರಾಗಿ ಎದುರಿಸಬಹುದು ಅಥವಾ ಆ ಘಟನೆಯ ಪರಿಣಾಮ ಉತ್ತಮವಾಗುವಂತೆ ಮಾಡಬಹುದು. ಅದಕ್ಕಾಗಿ ಮನೆಗೆ ಕೆ’ಡ’ಕಾ’ಗು’ತ್ತ’ದೆ ಎನ್ನುವುದನ್ನು ಸೂಚಿಸುವ ಕೆಲ ಸೂಚನೆಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.

* ಪ್ರತಿಯೊಂದು ಮನೆ ಮುಂದೆ ತುಳಸಿ ಗಿಡವನ್ನು ನೆಡುತ್ತಾರೆ. ಮನೆಗೆ ಏನಾದರೂ ಕೆ’ಟ್ಟ ದೃಷ್ಟಿ ಬಿದ್ದರೆ ಅಥವಾ ಮಾಟ ಮಂತ್ರ ಮುಂತಾದ ನಕಾರಾತ್ಮಕ ಪ್ರಯೋಗ ಆಗಿದ್ದರೆ ಮೊದಲಿಗೆ ತುಳಸಿ ಗಿಡದ ಮೇಲೆ ಪ್ರಭಾವ ಬೀರುತ್ತದೆ. ತುಳಸಿ ಗಿಡವು ಮನೆಯವರನ್ನು ರಕ್ಷಿಸಿ ತಾನು ಒಣಗಲಾರಂಭಿಸುತ್ತದೆ.

ಈ ರೀತಿ ತುಳಸಿ ಗಿಡ ಒಣಗುತ್ತಿದ್ದರೆ ನೀವು ಎಚ್ಚೆತ್ತುಕೊಳ್ಳಬೇಕು. ತಕ್ಷಣ ಆ ತುಳಸಿ ಗಿಡವನ್ನು ತೆಗೆದು ಬೇರೆ ತುಳಸಿ ಗಿಡವನ್ನು ನೆಟ್ಟು ಮಹಾಲಕ್ಷ್ಮಿ ಹಾಗೂ ಮಹಾ ವಿಷ್ಣುವನ್ನು ಪೂಜಿಸಬೇಕು ಆಗಲು ಕೂಡ ಎರಡನೇ ದಿನಗಳಲ್ಲಿ ನೀವು ನೆಟ್ಟ ತುಳಸಿ ಗಿಡ ಒಣಗುತ್ತಿದ್ದರೆ ಅದು ಪಿತೃದೋಷದ ಕಾರಣದಿಂದ ಇರಬಹುದು. ಪಿತೃದೋಷದ ಕಾರಣದಿಂದಾಗಿ ಮನೆಗಳಲ್ಲಿ ಕ’ಲ’ಹ’ಗಳು ಆಗುತ್ತದೆ ಹಾಗಾಗಿ ಇದನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು.

* ಗಾಜಿನ ವಸ್ತುಗಳು ಬಿದ್ದ ತಕ್ಷಣವೇ ಒಡೆದು ಹೋಗುತ್ತದೆ. ಅಥವಾ ಗಟ್ಟಿಯಾಗಿ ತಾಗಿದರು ಹೊಡೆದು ಹೋಗುತ್ತವೆ. ನಿಮ್ಮ ಮನೆಯಲ್ಲಿರುವ ಕನ್ನಡಿ, ಫೋಟೋ ಅಥವಾ ಗಾಜಿನ ಸಾಮಾನುಗಳು ಕೂಡ ಇದೇ ರೀತಿ ಒಡೆದು ಹೋಗುತ್ತಿದ್ದರೆ ಅದು ಕೂಡ ಮುಂದೆ ಹಾಕುವ ಅಶುಭವನ್ನು ಸೂಚಿಸುವ ಸಂಕೇತ ಆಗಿರುತ್ತದೆ. ಹಾಗಾಗಿ ಈ ಶಕುನದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಹಾಗೆ ಒಡೆದ ಗಾಜಿನ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಟ್ಟು ಕೊಳ್ಳಬಾರದು

* ಮನೆಯಲ್ಲಿ ಚಿನ್ನದ ವಸ್ತುಗಳು ಕಳೆದು ಹೋಗಿದ್ದರೆ ಎಷ್ಟೇ ಹುಡುಕಿದರೂ ಅದು ಮತ್ತೆ ಸಿಗದೇ ಇದ್ದರೆ ಮುಂದೆ ಉಂಟಾಗಬಹುದಾದ ಹಣಕಾಸು ನಷ್ಟದ ಮುನ್ಸೂಚನೆಯನ್ನು ಕೊಡುತ್ತಿದೆ ಎಂದು ಅರ್ಥ.

* ಇದ್ದಕ್ಕಿದ್ದಂತೆ ನಿಮ್ಮ ಮನೆ ಬೆಕ್ಕು ಅಥವಾ ಮನೆಯ ಅಕ್ಕ-ಪಕ್ಕ ಯಾವುದೇ ಬೆಕ್ಕು ಕೂಗುತ್ತಿದ್ದರೆ ಅಹಿತಕರ ಘಟನೆಗಳು ನಡೆಯಬಹುದು ಎನ್ನುವುದರ ಸೂಚನೆ. ಧರ್ಮಶಾಸ್ತ್ರಗಳಲ್ಲಿ ಬೆಕ್ಕು ಕೂಗುವುದು ಕೆಟ್ಟ ಶಕುನವೆಂದು ಹೇಳಲಾಗಿದೆ. ಈ ರೀತಿ ಬೆಕ್ಕು ಕೂಗುವ ಮನೆಗಳು ಏಳಿಗೆ ಆಗುವುದಿಲ್ಲ ಎಂದು ಹೇಳುತ್ತಾರೆ.

* ಬಾವಲಿಗಳು ಮನೆಯ ಸುತ್ತಮುತ್ತ ಸಂಚರಿಸುತ್ತಿದ್ದರೆ ಅಥವಾ ಮನೆಗೆ ಪ್ರವೇಶ ಮಾಡಿದರೆ ಅದು ಕೂಡ ಕೆಟ್ಟ ಶಕುನವಾಗಿದೆ ಅದು ಮುಂದೆ ಬರುವ ಅಪಾಯವನ್ನು ಸೂಚಿಸುತ್ತಿದೆ ಎಂದು ಅರ್ಥ
* ಮನೆಯಲ್ಲಿ ದೇವರ ಹೆಸರು ಹೇಳಿ ದೀಪ ಹಚ್ಚಿದ ಮೇಲೆ ಜಾಗರೂಕರಾಗಿರಬೇಕು. ದೇವರಿಗೆ ದೀಪ ಹಚ್ಚಿರುವುದು ಪದೇ ಪದೇ ಆರಿ ಹೋಗುತ್ತಿದ್ದರೆ ದೇವಾನುದೇವತೆಗಳಿಗೂ ಕೋ’ಪ ಬರುತ್ತದೆ ಮತ್ತು ಈ ರೀತಿ ಮನೆಯಲ್ಲಿ ದೀಪ ಪದೇಪದೇ ಆರಿ ಹೋಗುತ್ತಿದ್ದರೆ ಅದು ಕೂಡ ಕೆಟ್ಟ ಶಕುನ, ಅಶುಭದ ಸಂಕೇತ ಎಂದು ಹೇಳಲಾಗುತ್ತದೆ.

ಇವರು ಹೇಳುವ ನಾಡಿ ಭವಿಷ್ಯ ನೂರಕ್ಕೆ ನೂರರಷ್ಟು ನಿಜ ಆಗುತ್ತದೆ, ತೀರ್ಥ ಸ್ಥಾನ ಮಾಡಿಸುವ ಬೆಂಗಳೂರಿನ ಏಕೈಕ ದೇವಸ್ಥಾನ ಇದು.!

 

ಐಟಿ ಹಬ್ ಬೆಂಗಳೂರಿನಲ್ಲೊಂದು ಐತಿಹಾಸಿಕ ದೇವಸ್ಥಾನವಿದೆ. ದಿನದ 24 ಗಂಟೆಗಳ ಕಾಲ ಸದ್ದು ಗದ್ದಲದ ನಡುವೆ ಕಳೆದು ಹೋಗಿರುವ ಮಂದಿಗೆ ಪುರಾಣ ಪ್ರಸಿದ್ಧವಾದ ಈ ಪುಣ್ಯಕ್ಷೇತ್ರಕ್ಕೆ ಭೇಟಿ ಕೊಟ್ಟವರು ಬೇರೊಂದು ಲೋಕಕ್ಕೆ ಹೋದ ಅನುಭವವನ್ನು ಪಡೆಯುತ್ತಾರೆ. ಅಲ್ಲದೆ ಈ ದೇವಸ್ಥಾನದಲ್ಲಿ ಬಹಳ ವಿಶೇಷಗಳಿವೆ.

ಬೆಂಗಳೂರಿನಲ್ಲಿ ತೀರ್ಥ ಸ್ಥಾನ ಮಾಡಿಸುವ ಏಕೈಕ ದೇವಸ್ಥಾನ ಇದಾಗಿದ್ದು ಈ ದೇವಸ್ಥಾನದಲ್ಲಿ ಮನುಷ್ಯನ ಸರ್ವೇ ಸಾಮಾನ್ಯ ಸಮಸ್ಯೆಗಳಾದ ವಿವಾಹ ವಿಳಂಬ, ಸಂತಾನ ವಿಳಂಬ, ವ್ಯಾಪಾರ ವ್ಯವಹಾರದಲ್ಲಿ ತೊಂದರೆಗಳು ಇನ್ನು ಮುಂತಾದ ಎಲ್ಲಾ ರೀತಿಯ ಸಮಸ್ಯೆಗಳಿಗೂ ಸರ್ವ ಅನಿಷ್ಠಗಳಿಗೂ ಪರಿಹಾರ ಪೂಜೆಗಳು ಇವೆ ಮತ್ತು ಇಲ್ಲಿ ಹೇಳುವಂತಹ ನಾಡಿ ಭವಿಷ್ಯ ಬಹಳ ವಿಶೇಷವಾಗಿದ್ದು.

ಇದನ್ನು ಕೇಳಿ ಪರಿಹಾರ ಮಾಡಿಕೊಂಡ ಎಲ್ಲರೂ ಕೂಡ ಅವರ ಇಷ್ಟಾರ್ಥಗಳನ್ನು ಪಡೆದುಕೊಂಡಿದ್ದಾರೆ ಎನ್ನುವ ಅನೇಕ ಉದಾಹರಣೆಗಳು ಇವೆ. ಯಲಹಂಕ ಬಳಿ ಇರುವ ಅಟ್ಟೂರಿನ ಶ್ರೀ ಕಾಶಿ ವಿಶ್ವನಾಥ ಸ್ವಾಮಿ ಸನ್ನಿಧಿ ಇದಾಗಿದ್ದು ಇಲ್ಲಿರುವ ಶಿವಲಿಂಗ ದ್ವಾಪರ ಯುಗದಲ್ಲಿ ಪ್ರತಿಷ್ಠಾಪನೆಯಾಗಿತ್ತು ಎಂದು ಪುರಾಣ ಮೂಲಗಳು ತಿಳಿಸುತ್ತವೆ.

ಮೂರು ಬಾರಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮಾಡಲಾಗಿದ್ದು ಚೋಳರ ಕಾಲದಲ್ಲಿ ರಾಜ ರಾಜ ಚೋಳ, ರಾಜೇಂದ್ರ ಚೋಳ, ಕರಿಕಾಳ ಚೋಳರು ಒಮ್ಮೆ ನಂತರ ನಾಡಪ್ರಭು ಕೆಂಪೇಗೌಡ ಅವರು ಯಲಹಂಕದ ಆಡಳಿತ ವಹಿಸಿಕೊಂಡಿದ್ದ ಸಮಯದಲ್ಲಿ ಮತ್ತೊಮ್ಮೆ ಇತ್ತೀಚೆಗೆ ಊರಿನ ಗ್ರಾಮಸ್ಥರಲ್ಲಿ ಸೇರಿ ಶಿಥಿಲಾವಸ್ಥೆಗೆ ಸೇರಿದ್ದ ದೇವಸ್ಥಾನಕ್ಕೆ ಮರು ಜೀವ ತುಂಬಿದ್ದಾರೆ.

ಇಂದು ಈ ದೇವಸ್ಥಾನದ ಖ್ಯಾತಿ ಎಷ್ಟು ಬೆಳಗಿದೆ ಎಂದರೆ ಬೆಂಗಳೂರಿಗರು ಮಾತ್ರವಲ್ಲದೆ ನಾಡಿನ ಮೂಲೆ ಮೂಲೆಗಳಿಂದ ದೇವಸ್ಥಾನಕ್ಕೆ ಭಕ್ತಾದಿಗಳು ಬರುತ್ತಿದ್ದಾರೆ. ವಿವಾಹ ಕಾರ್ಯ ಕೂಡಿ ಬರದೆ ಇದ್ದವರಿಗೆ ಇಲ್ಲಿ ಅರ್ಧನಾರೀಶ್ವರ ಅಭಿಷೇಕ ಮಾಡಿ ಕಂಕಣ ಕಟ್ಟಲಾಗುತ್ತದೆ. ಈ ರೀತಿ ಮಾಡಿಸಿಕೊಂಡು ಹೋದ ಕೆಲವೇ ದಿನಗಳಲ್ಲಿ ಲಗ್ನ ಕೂಡಿಬಂದಿರುವ ಉದಾಹರಣೆಗಳು ನೂರಾರಿದೆ.

ಅದೇ ರೀತಿ ಮಕ್ಕಳಾಗದೆ ಇದ್ದವರಿಗೆ ಅನ್ನದಾನದ ವಿಶೇಷ ಪೂಜೆ ಹೇಳಲಾಗುತ್ತದೆ. ಇದಿಷ್ಟೇ ಅಲ್ಲದೆ ಅನಾರೋಗ್ಯ ಹಣ ಆಸ್ತಿ ಸಮಸ್ಯೆ ಉದ್ಯೋಗದಲ್ಲಿ ತೊಂದರೆ ಮಾನಸಿಕ ಕಾಯಿಲೆಗಳು ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ಕೂಡ ಈ ದೇವಸ್ಥಾನಕ್ಕೆ 9 ಸೋಮವಾರದಂದು ಅಥವಾ 5 ತ್ರಯೋದಶಿಗಳಂದು ಪ್ರದೋಷ ಸಮಯದಲ್ಲಿ ಬಂದು ತೀರ್ಥ ಸ್ನಾನ ಮಾಡಿ ದೇವಸ್ಥಾನದ ಸುತ್ತ 21 ಪ್ರದರ್ಶನ ಹಾಕಿ ತಮ್ಮ ಕೈಲಾದ ಹರಕೆ ಕಟ್ಟಿಕೊಂಡು ಹೋದರೆ ಆ ಕಾರ್ಯ ನೂರಕ್ಕೆ ನೂರರಷ್ಟು ಜರಗುತ್ತದೆ ಎನ್ನುವುದು ಇಲ್ಲಿಗೆ ನಡೆದುಕೊಳ್ಳುವ ಭಕ್ತಾದಿಗಳ ನಂಬಿಕೆ.

ಇಲ್ಲಿನ ಮತ್ತೊಂದು ವಿಶೇಷ ಸಂಗತಿಯೇನೆಂದರೆ, ನಾಡಿಯನ್ನು ನೋಡಿ ಇಲ್ಲಿ ಶಾಸ್ತ್ರ ಹೇಳಲಾಗುತ್ತದೆ. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರದಂದು ಬೆಳಗ್ಗೆ 8.00 ರಿಂದ ಮಧ್ಯಾಹ್ನ 2.00 ರವರೆಗೆ ಈ ದೇವಸ್ಥಾನದ ಆವರಣದಲ್ಲಿ ಪಾರಂಪರ‌ಗತವಾಗಿ ನಡೆಸಿಕೊಂಡು ಬಂದಿರುವ ಪುರೋಹಿತರ ಕುಟುಂಬದವರು ನಾಡಿ ನೋಡಿ ಶಾಸ್ತ್ರ ಹೇಳುತ್ತಾರೆ ತಮಗೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ಇಲ್ಲಿ ಮುಕ್ತವಾಗಿ ಹೇಳಿಕೊಳ್ಳಬಹುದು.

ಆ ಕಾರ್ಯ ಆಗುತ್ತಿದೋ ಇಲ್ಲವೋ ಅಥವಾ ಏನು ವಿಜ್ಞಗಳಿವೆ ಏನನ್ನು ಮಾಡಿದರೆ ಆ ಕಾರ್ಯ ಈಡೇರುತ್ತದೆ ಅಥವಾ ಪ್ರಯತ್ನ ಪಡಬೇಕೋ ಬೇಡವೋ ಎನ್ನುವುದನ್ನು ನಾಡಿ ಪರೀಕ್ಷಿಸಿಯೇ ಹೇಳಲಾಗುತ್ತದೆ. ಈ ದೇವಸ್ಥಾನದ ಕುರಿತು ಇನ್ನಷ್ಟು ರೋಚಕ ವಿಷಯಗಳನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ತಪ್ಪದೆ ಒಮ್ಮೆಯಾದರೂ ಈ ದೇವಸ್ಥಾನಕ್ಕೆ ಭೇಟಿಕೊಟ್ಟು ಶ್ರೀ ಕಾಶಿ ವಿಶ್ವನಾಥನ ದರ್ಶನ ಪಡೆದ ಪಾವನರಾಗಿ.

ಇಂಥವರಿಗೆ ಇನ್ಮುಂದೆ ಪ್ರತಿ ತಿಂಗಳು 5000 ಪಿಂಚಣಿ ಸಿಗಲಿದೆ ಕೇಂದ್ರ ಸರ್ಕಾರದ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ…

 

ಅಭಿವೃದ್ಧಿಶೀಲ ರಾಷ್ಟ್ರವಾಗಿರುವ ಭಾರತದಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಜೀವನವನ್ನು ಸರಾಗಗೊಳಿಸಲು ಸರ್ಕಾರಗಳು (Government) ಅನೇಕ ಕ್ರಮಗಳನ್ನು ಕೈಗೊಂಡಿವೆ. ಇವರ ಮೂಲಭೂತ ಅಗತ್ಯಗಳ ಪೂರೈಕೆಗೆ ಸದಾ ಹೊಸ ಹೊಸ ಯೋಜನೆಗಳನ್ನು ಪರಿಚಿಸುವ ಸರ್ಕಾರವು ದುಡಿಯುವ ವರ್ಗದ ಜನರ ವಿದ್ಯಾಭ್ಯಾಸದ ಜೀವನ ನಿರ್ವಹಣೆ ಬಗ್ಗೆ ಕೂಡ ಯೋಚಿಸಿದೆ.

ಅದಕ್ಕಾಗಿ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತಹ ಹಿರಿಯ ನಾಗರಿಕದ ಪಿಂಚಣಿ ಯೋಜನೆ, ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ವ್ಯವಸ್ಥೆ ಇನ್ನಿತರ ಅನುಕೂಲತೆಯನ್ನು ಮಾಡಿ ಕೊಟ್ಟಿದೆ. ಇದರೊಂದಿಗೆ ಮಾಸಿಕವಾಗಿ 5000 ವರೆಗೂ ಪಿಂಚಣಿ ಪಡೆಯಬಹುದಾದ ಮತ್ತೊಂದು ಯೋಜನೆಯನ್ನು ಪರಿಚಯಿಸಿದೆ.

ಅಟಲ್ ಪಿಂಚಣಿ ಯೋಜನೆ (Atal Pension Scheme) ಎನ್ನುವ ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರು 60 ವರ್ಷವಾದ ಬಳಿಕ ಗರಿಷ್ಠ 5000 ವರೆಗೂ ಕೂಡ ಪಿಂಚಣಿ ಪಡೆಯಬಹುದು. ಹಾಗಾದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಏನೆಲ್ಲಾ, ನಿಯಮಗಳಿವೆ ಬೇಕಾಗುವ ದಾಖಲೆಗಳೇನು? ಯಾವ ವಯಸಿನಲ್ಲಿ ಹೂಡಿಕೆ ಮಾಡಿದರೆ ಎಷ್ಟು ಪೆನ್ಷನ್ ಸಿಗುತ್ತದೆ ಎನ್ನುವುದರ ಕುರಿತು ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇವೆ.

* ಭಾರತೀಯ ನಾಗರಿಕರು ಮಾತ್ರ ಅಟಲ್ ಪಿಂಚಣಿ ಯೋಜನೆ ಹೂಡಿಕೆ ಮಾಡಬಹುದು
* ಇದೊಂದು ಪಿಂಚಣಿ ಯೋಜನೆಯಾಗಿತ್ತು, ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರು 60 ವರ್ಷವಾದ ಬಳಿಕ ಪಿಂಚಣಿ ಪಡೆಯಬಹುದು. 22 ವರ್ಷಗಳ ಕಾಲ ಹೂಡಿಕೆ ಮಾಡಿರಬೇಕು,
18 ವರ್ಷ ಮೇಲ್ಪಟ್ಟ 42 ವರ್ಷದ ವಯಸ್ಸಿನ ಒಳಗಿರುವವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು

* ಗರಿಷ್ಠ 5000 ವರೆಗೆ ಕೂಡ ಪಿಂಚಣಿ ಪಡೆಯಬಹುದು
* ಈ ಯೋಜನೆಯಡಿ ದಂಪತಿಗಳಿಬ್ಬರೂ ಕೂಡ ಪಿಂಚಣಿ ಪಡೆದುಕೊಳ್ಳುವ ಅನುಕೂಲತೆ ಮಾಡಿಕೊಡಲಾಗಿದೆ.
ಉದಾಹರಣೆಗೆ ಒಬ್ಬ ವ್ಯಕ್ತಿಯು ಅಟಲ್ ಪಿಂಚಣಿ ಯೋಜನೆಗೆ ಹೂಡಿಕೆ ಮಾಡುತ್ತಾ ಪಿಂಚಣಿ ಪಡೆಯುವ ಸಮಯದಲ್ಲಿ ಮೃ’ತಪಟ್ಟಿದ್ದರೆ ಆತನ ಮಡದಿಗೂ ಕೂಡ ಅಷ್ಟೇ ಪಿಂಚಣಿ ಬರುತ್ತದೆ.

ಆಕೆಯ ಮ’ರ’ಣ’ದ ನಂತರ ನಾಮಿನಿಗೆ ಹಣ ಹೋಗುತ್ತದೆ. ಒಂದು ವೇಳೆ ವ್ಯಕ್ತಿಯು ಈ ಯೋಚನೆಯಡಿ ಹೂಡಿಕೆ ಮಾಡಿ 60 ವರ್ಷಕ್ಕೂ ಮೊದಲೇ ಮೃ’ತಪಟ್ಟ ಸಮಯದಲ್ಲಿ ಪಕ್ಷದಲ್ಲಿ ಹೆಂಡತಿ ಅದನ್ನು ಮುಂದುವರಿಸಿಕೊಂಡು ಹೋಗಲು ಇಚ್ಚಿಸಿದರೆ 60 ವರ್ಷದವರೆಗೂ ಪೂರೈಸಿಕೊಂಡು ಹೋಗಿ 60 ವರ್ಷದ ನಂತರ ಪಿಂಚಣಿ ಪಡೆಯಬಹುದು. ಇಲ್ಲವಾದಲ್ಲಿ ಆ ಸಮಯದಲ್ಲಿ ಅದನ್ನು ರ’ದ್ದುಪಡಿಸಿ ಹೂಡಿಕೆ ಮೊತ್ತ ಹಿಂಪಡೆಯಬಹುದು.

* ಬೇರೆ ಯಾವ ಕಾರಣದಿಂದಲೂ ಕೂಡ ಒಮ್ಮೆ ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡ ಮೇಲೆ ಮುರಿಯಲು ಅವಕಾಶವಿಲ್ಲ.
* ಈ ಯೋಜನೆಯಡಿ ಹೂಡಿಕೆ ಮಾಡಲು ಅಂಚೆ ಕಚೇರಿ ಅಥವಾ ಯಾವುದಾದರೂ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ ಸಾಕು. * ಯೋಜನೆಗೆ ನೋಂದಾಯಿಸಿಕೊಂಡ ನಂತರ ಪ್ರತಿ ತಿಂಗಳು ಆಟೋಮೆಟಿಕ್ ಆಗಿ ನಿಮ್ಮ ಖಾತೆಯಿಂದ ಯೋಜನೆಗೆ ಹಣ ಕಡಿತಗೊಳ್ಳುತ್ತದೆ.

* ಆನ್ಲೈನ್ ಆಫ್ಲೈನ್ ಎರಡು ವಿಧಾನದ ಮೂಲಕವಾಗಿ ಕೂಡ ಯೋಜನೆಯನ್ನು ಖರೀದಿಸಲು ಅವಕಾಶವಿದೆ. ಆನ್ಲೈನಲ್ಲಿ ಬ್ಯಾಂಕ್ ಆಪ್ ಮೂಲಕ ಅಥವಾ ಆಫ್ಲೈನ್ ನಲ್ಲಿ ನೇರವಾಗಿ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ಕೊಡುವ ಮೂಲಕ ಯೋಜನೆ ಖರೀದಿಸಬಹುದು. ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಸರ್ಕಾರದ ಅಧಿಕೃತ ವೆಬ್ಸೈಟ್ ಗಳಲ್ಲಿ ಮಾಹಿತಿ ಪಡೆಯಿರಿ ಅಥವಾ ನಿಮ್ಮ ಹತ್ತಿರದ ಅಂಚೆ ಕಛೇರಿ ಮತ್ತು ಬ್ಯಾಂಕ್ ಗಳಲ್ಲಿ ವಿಚಾರಿಸಿ.

ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.!

 

ಬ್ರಹ್ಮಿ ಎಂದರೆ ಬ್ರಹ್ಮ ದೇವರು, ಮುಹೂರ್ತ ಎಂದರೆ ಸಮಯ ಈ ಶಬ್ಧದ ಅರ್ಥವೇ ಹೇಳುವುದಂತೆ ಇದನ್ನು ದೇವಾನುದೇವತೆಗಳ ಸಂಚರಿಸುವ ಕಾಲ ಎಂದು ಪುರಾಣಗಳಲ್ಲಿ ಧರ್ಮ ಗ್ರಂಥಗಳಲ್ಲಿ ಹೇಳಿದ್ದಾರೆ. ಬ್ರಹ್ಮನು ಹಣೆಬರಹ ಬರೆಯುವಂತೆ ಈ ಸಮಯದಲ್ಲಿ ಏಳುವವರು ಬದುಕನ್ನು ಅವರ ಇಚ್ಛೆಯಂತೆಯೇ ಬರೆದುಕೊಳ್ಳಬಹುದು.

ಈ ಭೂಮಿಯಲ್ಲಿರುವ ಸಕಲ ಜೀವರಾಶಿಗಳು ಕೂಡ ಪ್ರಕೃತಿಗೆ ತಕ್ಕಹಾಗೆ ಸೂರ್ಯೋದಯದ ಸಮಯದಲ್ಲಿ ಏಳುತ್ತವೆ ಆದರೆ ಮನುಷ್ಯ ಮಾತ್ರ ತನಗೆ ಇಷ್ಟ ಬಂದ ಸಮಯಕ್ಕೆ ಏಳುತ್ತಾನೆ. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ, ಒಂದು ಬಾರಿ ನಿಮಗೆ ಇದು ಅಭ್ಯಾಸವಾಗಿ ಹೋದರೆ ಇನ್ನೂ ಜನ್ಮ ಪೂರ್ತಿ ನೀವು ಜೀವನದಲ್ಲಿ ಲೇಟಾಗಿ ಏಳುವುದಿಲ್ಲ.

ಬೆಳಗ್ಗೆ 4 ರಿಂದ 5.30 ರ ಸಮಯವನ್ನು ಬ್ರಾಹ್ಮಿ ಮುಹೂರ್ತ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ದೇವಾನುದೇವತೆಗಳು ಮನೆಗೆ ಬರುತ್ತಾರೆ ಎಂದು ಸಹ ನಂಬಲಾಗುತ್ತದೆ. ಈ ಸಮಯದಲ್ಲಿ ಏಳುವುದರಿಂದ ದೇಹಕ್ಕೆ ಮನಸ್ಸಿಗೆ ಹಾಗೂ ಬದುಕಿಗೆ ಕೂಡ ಒಳ್ಳೆಯದು.

ಈ ಸಮಯದಲ್ಲಿ ಮಾಡುವ ಧ್ಯಾನವೂ ಬ್ರಹ್ಮ ಜ್ಞಾನವಾಗಿರುತ್ತದೆ, ವಿದ್ಯಾರ್ಥಿಗಳು ಎದ್ದು ಓದಿನಲ್ಲಿ ತೊಡಗಿಕೊಂಡರೆ ಏಕಾಗ್ರತೆ ಹೆಚ್ಚುತ್ತದೆ ಹಾಗೂ ಓದಿದ ವಿಚಾರಗಳು ಬಹಳ ಬೇಗ ಮನಸ್ಸಿಗೆ ಇಳಿಯುತ್ತವೆ ಮತ್ತು ಅದು ಜೀವನ ಪರ್ಯಂತ ನೆನಪಿನಲ್ಲಿ ಇರುತ್ತದೆ ಹಾಗಾಗಿ ಅಭ್ಯಾಸ ಮಾಡುವವರಿಗೆ ಇದು ಉತ್ತಮ ಸಮಯ. ಯಾವುದೇ ದೇವಾಲಯಗಳಾದರೂ ಕೂಡ ಬ್ರಾಹ್ಮಿ ಮುಹೂರ್ತದಲ್ಲಿ ತೆರೆದಿರುತ್ತದೆ.

ಯಾಕೆಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವ ಯಾವುದೇ ಪೂಜೆಗಳಿಗೆ ಯಾವುದೇ ಶುಭ ಸಮಯ ನೋಡಬೇಕಾದ ಅವಶ್ಯಕತೆ ಇರುವುದಿಲ್ಲ. ಈ ಸಮಯದಲ್ಲಿ ಎಲ್ಲಾ ಶುಭ ಮುಹೂರ್ತವೇ ಆಗಿರುವುದರಿಂದ ದೇವರನ್ನು ಪೂಜೆ ಮಾಡುವುದಕ್ಕೆ ಈ ಸಮಯ ಒಳ್ಳೆಯದು ಮತ್ತು ಈ ‌‌ ಬ್ರಾಹ್ಮಿ ಮುಹೂರ್ತದಲ್ಲಿ ಮಾಡಿದ ಪ್ರಾರ್ಥನೆ ಬಹಳ ಬೇಗ ದೇವರನ್ನು ತಲುಪುತ್ತದೆ ಎಂದು ಸಹ ಹೇಳಲಾಗುತ್ತದೆ.

ವ್ಯಾಪಾರ ವ್ಯವಹಾರ ಉದ್ಯಮದಲ್ಲಿ ಗೆದ್ದಿರುವವರನ್ನು ಅಥವಾ ದೊಡ್ಡ ದೊಡ್ಡ ಬಿಸಿನೆಸ್ ಮ್ಯಾನ್ ಗಳು ಅಥವಾ ಸಿನಿಮಾ ಸ್ಟಾರ್ಗಳನ್ನು ಕೂಡ ಕೇಳಿದರು ಅವರೆಲ್ಲ ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತಾರೆ. ಯಾಕೆಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ನಮ್ಮ ಇಚ್ಛೆಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಾಗ ಅದರಿಂದ ಯಶಸ್ಸು ಖಂಡಿತವಾಗಿ ದೊರೆಯುತ್ತದೆ.

ಯಾರು ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತಾರೋ ಮತ್ತು ಎದ್ದು ಸಮಯ ವ್ಯರ್ಥ ಮಾಡದೆ ಅವರ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ಸಮಯದಲ್ಲಿ ಯೋಗ ವ್ಯಾಯಾಮ ದೇವರ ಧ್ಯಾನ ಮುಂತಾದ ಕಾರ್ಯಗಳಿಗೆ ಹೆಚ್ಚು ಸಮಯ ಮೀಸಲಿಡಲಾಗುತ್ತದ, ಆ ಕಾರಣದಿಂದಾಗಿ ಅವನ ಇಡೀ ದಿನ ಚೆನ್ನಾಗಿ ಇರುತ್ತದೆ.

ಪ್ರತಿದಿನ 8.00 ಗಂಟೆಗೆ ಏಳುತ್ತಿದ್ದ ವ್ಯಕ್ತಿ 5:00 ಗಂಟೆಗೆ ಏಳಲು ಶುರು ಮಾಡಿದರೆ ಒಂದು ದಿನದಲ್ಲಿ ಅವನು ಮೂರು ತಾಸು ಹೆಚ್ಚಿಗೆ ಪಡೆದಂತೆ ಹಾಗಾದರೆ ಒಂದು ತಿಂಗಳಿಗೆ 90 ದಿನಗಳನ್ನು ಹೆಚ್ಚಿಗೆ ಪಡೆದಂತೆ, ಒಂದು ತಿಂಗಳಲ್ಲಿ ನಾಲ್ಕರಿಂದ ಐದು ದಿನಗಳನ್ನು ಹೆಚ್ಚಿಗೆ ಪಡೆದಂತೆ ಇನ್ನು ವರ್ಷಕ್ಕೆ ಎರಡು ತಿಂಗಳಷ್ಟು ಸಮಯವನ್ನು ಹೆಚ್ಚಿಗೆ ಪಡೆದಂತೆ. ಈ ಕಾಲವನ್ನು ಸರಿಯಾಗಿ ವಿನಿಯೋಗಿಸಿಕೊಂಡರೆ ಖಂಡಿತವಾಗಿಯೂ ಆತನಿಗೆ ಸಮಯದ ಕೊರತೆ ಬರುವುದಿಲ್ಲ ಮತ್ತು ಆತ ಇಟ್ಟ ಗುರಿಯನ್ನು ಬಹಳ ಬೇಗ ತಲುಪುತ್ತಾನೆ.

ಈ ಸಮಯದಲ್ಲಿ ಏಳುವುದರಿಂದ ಸುತ್ತಮುತ್ತ ನಿಶಬ್ದವಾಗಿರುವುದರಿಂದ ಆಲೋಚನೆಗಳು ಸಕರಾತ್ಮಕವಾಗಿರುತ್ತದೆ ಇದರಿಂದ ಮಾನಸಿಕ ಒತ್ತಡಗಳು ಕೂಡ ಕಡಿಮೆ ಆಗುತ್ತದೆ.‌ ನೀವು ಹೆಚ್ಚು ಲವಲವಿಕೆಯಿಂದ ಇರುತ್ತೀರಿ. ಈ ರೀತಿ ದೇಹ ಮನಸ್ಸು ಆರೋಗ್ಯದ ಕಡೆ ಕಾಳಜಿ ಇರುವವರು ಜೀವನದಲ್ಲಿ ಯಾವುದೇ ವಿಷಯದಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿರುವವರು ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು ಒಳ್ಳೆಯದು.

ಬ್ರಹ್ಮಾಂಡದಲ್ಲಿ ಎಲ್ಲದಕ್ಕಿಂತ ಶಕ್ತಿಶಾಲಿ ಮಂತ್ರ ಇದು, ಕೇವಲ ಒಂದು ಬಾರಿ ಜಪ ಮಾಡಿ ಸಾಕು ನೀವು ಕೇಳಿದ್ದು ಸಿಗುತ್ತದೆ.!

 

ಆಗಿನ ಕಾಲದಲ್ಲಿ ಮಂತ್ರಗಳನ್ನು ಹೇಳಿದರೆ ಮಳೆಯೇ ಬರುತ್ತಿತ್ತು. ಮಂತ್ರಗಳಿಗೆ ಈ ರೀತಿ ಕೇಳಿದ್ದನ್ನು ಕೊಡುವ ಅಪಾರವಾದ ಶಕ್ತಿ ಇತ್ತು. ಈ ಮಂತ್ರ ಶಕ್ತಿ ಪ್ರಯೋಗದಿಂದ ಮಕ್ಕಳನ್ನು ಪಡೆದವರು, ಸಾಕ್ಷಾತ್ ಭಗವಂತನನ್ನೇ ಧರೆಗಿಳಿಸಿದ ತಪಸ್ವಿಗಳು, ಯುದ್ಧಗಳಲ್ಲಿ ಬಾಣ ಬಿಡುವ ಮುನ್ನ ಮಂತ್ರಗಳನ್ನು ಹೇಳಿ ಶತ್ರುಗಳನ್ನು ಸಂಹರಿಸಿದವರು ಇವರೆಲ್ಲರ ಕಥೆಗಳನ್ನು ಕೇಳಿದ್ದೇವೆ ಪುರಾತನ ಕಾಲದಲ್ಲಿ ಮಾತ್ರವಲ್ಲದೆ ಈಗಲೂ ಕೂಡ ಮಂತ್ರಗಳಿಗೆ ಅಷ್ಟೇ ಶಕ್ತಿ ಇದೆ.

ಆದರೆ ಕಲಿಯುಗದಲ್ಲಿ ಆಧುನಿಕತೆಯ ಭರದಲ್ಲಿ ಭಕ್ತಿ ನಂಬಿಕೆ ಇವುಗಳನ್ನು ಬಹಳ ನಿರ್ಲಕ್ಷ ಮಾಡುವುದರಿಂದ ಅವುಗಳು ಮಂತ್ರಗಳಿಗಿರುವ ಶಕ್ತಿಯ ಪರಿಚಯವಾಗುತ್ತಿಲ್ಲ. ಈಗಿನ ಕಾಲದಲ್ಲಿ ಸಹ ಭಕ್ತಿಯಿಂದ, ವಿನಮ್ರವಾಗಿ ಶ್ರದ್ಧೆಯಿಂದ ಪ್ರಾರ್ಥಿಸಿದರೆ ಖಂಡಿತವಾಗಿಯೂ ಭಗವಂತ ಒಲಿದು ಆ ಕಾರ್ಯ ಕೈಗೂಡುವಂತೆ ಮಾಡುತ್ತಾನೆ.

ಭಗವಂತನನ್ನು ಉಳಿಸಿಕೊಳ್ಳುವುದಕ್ಕೆ ಇರುವುದು ಒಂದೇ ಮಾರ್ಗ ಅದು ಭಕ್ತಿ ಮಾರ್ಗ. ಈ ಭಕ್ತಿ ಮಾರ್ಗವನ್ನು ಹಲವರು ತಮ್ಮದೇ ಆದ ರೀತಿಯಲ್ಲಿ ಕಂಡುಕೊಂಡಿದ್ದಾರೆ. ಕೆಲವರು ಪೂಜೆ ಮಾಡಿದರೆ, ಕೆಲವರು ಉಪವಾಸ ವ್ರತ-ತಪಗಳನ್ನು ಮಾಡುತ್ತಾರೆ ಇನ್ನು ಕೆಲವರು ದೇವರಿಗೆ ಅಲಂಕಾರ ಮಾಡಿ ಪ್ರಸನ್ನರಾಗಿಸುತ್ತಾರೆ.

ಇನ್ನು ಕೆಲವರು ಮಂತ್ರಗಳ ಉಚ್ಚಾರಣೆ ಮೂಲಕವೇ ಒಲಿಸಿಕೊಳ್ಳುತ್ತಾರೆ ಹಾಗಾದರೆ ಭಗವಂತನ ಕೃಪಾಕಟಾಕ್ಷ ನಮ್ಮ ಮೇಲೆ ಆಗಿ, ನಮ್ಮ ಕಾರ್ಯಗಳು ಕೈಗೂಡಬೇಕು ಎಂದರೆ ಯಾವ ರೀತಿ ಮಂತ್ರಗಳನ್ನು ಹೇಳಬೇಕು ಮತ್ತು ಯಾವ ಮಂತ್ರಕ್ಕೆ ಬಹಳ ಬೇಗ ವರ ಕೊಡುವ ಶಕ್ತಿ ಇದೆ, ಕಲಿಯುಗದಲ್ಲೂ ಕೂಡ ಯಾವ ಮಂತ್ರ ಇಷ್ಟು ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.

ಯಾವುದೇ ಕಾಲದಲ್ಲಿ ಆದರೂ ಭಕ್ತರ ಬೇಡಿಕೆಗೆ ತಕ್ಷಣ ಒಲಿಯುವ ದೇವರು ಎಂದರೆ ಅದು ಸಾಂಬಸದ ಶಿವಶಂಕರ. ಶಿವನು ಈ ಬ್ರಹ್ಮಾಂಡದ ಅಧಿನಾಯಕ, ಸತ್ಯದರ್ಶಕ, ಸತ್ಯ ಪೂರ್ಣ, ಆದಿ ಅಂತ್ಯ ಎಲ್ಲವೂ ಆಗಿರುವ ಶಿವನನ್ನು ಒಲಿಸಿಕೊಳ್ಳುವುದು ಕೂಡ ಬಹಳ ಸುಲಭ. ಯಾಕೆಂದರೆ ಈತ ಸರಳಾತಿ ಸರಳವಾಗಿ ಬದುಕುವವನು.

ಯಾವುದೇ ಅಲಂಕಾರ ಬಯಸದ ಈತ ಅಭಿಷೇಕ ಪ್ರಿಯ ಶಿವನನ್ನು ಧ್ಯಾನಿಸುತ್ತಾ ಸಾಧ್ಯವಾದರೆ ಶಿವಲಿಂಗಕ್ಕೆ ಅಭಿಷೇಕ ಮಾಡಿ ಶಿವನ ಕುರಿತಾದ ಈ ಒಂದು ಮಂತ್ರವನ್ನು ಉಚ್ಚಾರ ಮಾಡಿದರೆ ಸಾಕು. ಶಿವ ಒಲಿದು ನಿಮ್ಮ ಮಾನವ ಸಹಜವಾದ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡುತ್ತಾನೆ ಅಥವಾ ನಿಮ್ಮ ಬೇಡಿಕೆಗಳಿಗೆ ವರಕರುಣಿಸುತ್ತಾನೆ ಎಂದು ನಂಬಲಾಗಿದೆ.

ಈಗಾಗಲೇ ಅನೇಕರು ಈ ಮಂತ್ರಗಳನ್ನು ಹೇಳಿ ಫಲ ಕೂಡ ಪಡೆದಿದ್ದಾರೆ ಹಾಗಾಗಿ ಈ ಮಂತ್ರಗಳ ಮೇಲಿರುವ ನಂಬಿಕೆ ಇಮ್ಮಡಿ ಆಗಿದೆ. ಅಷ್ಟಕ್ಕೂ ಈ ಮಂತ್ರ ಯಾವುದೆಂದರೆ “ನಮೋ ಸ್ತವನ ಅನಂತಾಯ, ಸಹಸ್ರ ಮೂರ್ತಯೇ | ಸಹಸ್ರ ಪಾದಾಕ್ಷಿ ಶಿರರು ವಾಹವೇ, ಸಹಸ್ರನಾಮೆ ಪುರುಷಾಯ ಶಾಶ್ವತೇ |
ಸಹಸ್ರ ಕೋಟಿ ಯುಗ ಧಾರಿಣಿ ನಮಃ” ||

ಈ ಮಂತ್ರದ ಉಚ್ಚರಣೆ ಮಾತ್ರವಲ್ಲದೆ ಈ ಮಂತ್ರಗಳನ್ನು ಕೇಳುವುದು ಕೂಡ ಅಷ್ಟೇ ಪ್ರಭಾವಕಾರಿಯಾಗಿ ಪರಿಣಾಮ ಬೀರುತ್ತದೆ. ಪ್ರತಿದಿನವೂ ಕೂಡ ನಿಮಗೆ ಸಾಧ್ಯವಾದಷ್ಟು ಬಾರಿ ಭಕ್ತಿಯಿಂದ ಮನಸ್ಸಿನಲ್ಲಿ ಶಿವನನ್ನೇ ಧ್ಯಾನಿಸುತ್ತಾ ಈ ಮಂತ್ರವನ್ನು ಹೇಳಿ.

ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ಏನು ಎನ್ನುವುದು ಯಾವುದಾದರೂ ರೂಪದಲ್ಲಿ ನಿಮ್ಮ ಕಣ್ಣ ಮುಂದೆ ಎದುರಾಗುತ್ತದೆ. ಭಗವಂತನನ್ನು ಸೂಕ್ಷ್ಮ ಮನಸ್ಸಿನಿಂದ ಕಾಣುವ ರೀತಿ ಭಗವಂತನ ಸಲಹೆ ಸಂಕೇತಗಳನ್ನು ಕೂಡ ಸೂಕ್ಷ್ಮ ಮನಸ್ಸಿನಿಂದ ಗಮನಿಸಿ ಅನುಸರಿಸಿ ಜೀವನವನ್ನು ಉತ್ತಮವಾಗಿ ಸಾಗಿಸಿ.