Home Blog Page 127

ಮುಖ ಬೆಳ್ಳಗೆ ಆಗಲು ಸಿಂಪಲ್ 15 ಟಿಪ್ಸ್.!

 

* ಹಸಿ ಹಾಲನ್ನು ತೆಗೆದುಕೊಂಡು ಒಂದು ಹತ್ತಿಯನ್ನು ಮುಳುಗಿಸಿ ದಿನ ನಿಮ್ಮ ಮುಖವನ್ನು ಒರೆಸಿಕೊಳ್ಳಿ ಇದರಿಂದ ನಿಮ್ಮ ಮುಖದಲ್ಲಿ ಇರುವ ಕೊಳೆ ಹೋಗಿ ಚರ್ಮ ಶುದ್ಧವಾಗುತ್ತದೆ.
* ಮುಖ ಎಣ್ಣೆಯುಕ್ತ ಆಗಿದ್ದಲ್ಲಿ ಕಡಲೆ ಹಿಟ್ಟು ಮತ್ತು ಅರಿಶಿನದ ಫೇಸ್ ಪ್ಯಾಕ್ ಮಾಡಿ ಹಚ್ಚಿರಿ.
* ನಿಂಬೆಯ ರಸ ಹಾಗೂ ಕಿತ್ತಳೆ ಹಣ್ಣಿನ ರಸವನ್ನು ನೀವು ಮುಖಕ್ಕೆ ಹಚ್ಚಿ ಕೊಂಡರೆ ಅದರಲ್ಲಿರುವ ವಿಟಮಿನ್ ಸಿ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

* ತೆಂಗಿನ ಎಣ್ಣೆ ಮತ್ತು ಬೀಟ್ ರೂಟ್ ಜ್ಯೂಸ್ ಇಂದ ತುಟಿಗಳಿಗೆ ಮಸಾಜ್ ಮಾಡುವುದರಿಂದ ತುಟಿಗಳು ನೈಸರ್ಗಿಕವಾಗಿ ಕೆಂಪಾಗಿ ಇರುತ್ತದೆ.
* ತುಳಸಿ ಎಲೆಗಳ ರಸ ತೆಗೆದು ಮುಖಕ್ಕೆ ಹಚ್ಚಿದರೆ ಅದು ಮುಖದಲ್ಲಿನ ಹಲವಾರು ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.
* ಅಲೋವೆರಾ ರಸವನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿನ ಮೊಡವೆ, ಕಪ್ಪು ಕಲೆಗಳು ದೂರವಾಗುತ್ತದೆ.

* ಆದಷ್ಟು ನೀರು ಕುಡಿಯುವುದು ಕೂಡ ಮುಖದ ಕಾಂತಿಗೆ ಕಾರಣ. ಆದ್ದರಿಂದ ಸರಿಯಾಗಿ ನೀರನ್ನು ಕುಡಿಯಿರಿ.
* ಮುಖವನ್ನು ಅತಿಯಾಗಿ ಯಾವಾಗಲೂ ತೊಳೆಯುತ್ತ ಇರುವ ಅಭ್ಯಾಸ ಇದ್ದರೆ ಅದನ್ನು ಬದಲಾಯಿಸಿಕೊಳ್ಳಿ. ದಿನಕ್ಕೆ ಸ್ವಚ್ಛ ನೀರಿನಿಂದ 3 ಬಾರಿ ತೊಳೆದರೆ ಸಾಕು.
* ಶ್ರೀಗಂಧವನ್ನು ಹಾಲಿನೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಮಾಡಿ ಎರಡು ವಾರಕ್ಕೊಮ್ಮೆ ಹಚ್ಚಿಕೊಂಡು ಮುಖವನ್ನು ತೊಳೆಯಿರಿ.

* ವಾರದಲ್ಲಿ 2 ರಿಂದ 3 ಬಾರಿ ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿ ಕೊಳ್ಳಿ.
* ಸ್ವಲ್ಪ ಜೇನು ತುಪ್ಪಕ್ಕೆ ಸಕ್ಕರೆಯನ್ನು ಸೇರಿಸಿ ವಾರದಲ್ಲಿ ಒಮ್ಮೆ ಸ್ಕ್ರಬ್ ಮಾಡಿಕೊಳ್ಳಿ.
* ಎರಡು ಚಮಚ ಸಕ್ಕರೆಗೆ ನಾಲ್ಕು ಚಮಚ ನಿಂಬೆ ರಸವನ್ನು ಹಾಕಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ ನಂತರ ಮುಖವನ್ನು ನೀರಿನಿಂದ ತೊಳೆಯಿರಿ. ಇದು ಮುಖದಲ್ಲಿನ ಕಪ್ಪು ಕೊಳೆಯನ್ನು ತೆಗೆದು ಹಾಕುತ್ತದೆ.

* ನಿಂಬೆ ಮತ್ತು ತುಳಸಿ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಂಡು ತೊಳೆ ಯುವುದರಿಂದ ಮುಖ ಕಾಂತಿಯುಕ್ತವಾಗುತ್ತದೆ.
* ಆಲೂಗಡ್ಡೆಯ ರಸವನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ತೊಳೆದರೆ ಮುಖದಲ್ಲಿನ ಟ್ಯಾನ್ ಕಡಿಮೆಯಾಗುತ್ತದೆ.
* ಸ್ವಲ್ಪ ಕಾಫಿ ಪುಡಿ, ಸಕ್ಕರೆ, ಅಲೋವೆರಾ ಜ್ಯೂಸ್ ಇವುಗಳನ್ನು ಮಿಕ್ಸಿ ಮಾಡಿ ಪೇಸ್ಟ್ ಮಾಡಿಕೊಂಡು ವಾರದಲ್ಲಿ ಒಮ್ಮೆ ಸ್ಕ್ರಬ್ ಮಾಡಿಕೊಳ್ಳಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.

ಈ ವಿಧಾನಗಳನ್ನು ನೀವು ಅನುಸರಿಸುವುದರಿಂದ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ಮೊದಲಿಗಿಂತ ನಂತರ ಇನ್ನು ಹೆಚ್ಚಿನ ಸೌಂದರ್ಯವನ್ನು ಪಡೆದು ಕೊಳ್ಳುತ್ತೀರಿ ಎಂದೇ ಹೇಳಬಹುದು. ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಮುಖದ ಸೌಂದರ್ಯ ವನ್ನು ಕಾಪಾಡಿಕೊಳ್ಳುವುದಕ್ಕೆ ಮಾರುಕಟ್ಟೆಗಳಲ್ಲಿ ಸಿಗುವಂತಹ ಹಲವಾರು ಪದಾರ್ಥಗಳನ್ನು ತಂದು ಉಪಯೋಗಿಸುತ್ತಾರೆ.

ಆದರೆ ಅವುಗಳನ್ನು ಹಚ್ಚುವುದರಿಂದ ಕೆಲವೊಂದಷ್ಟು ಜನರಿಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಹಾಗೂ ಕೆಲವೊಂದಷ್ಟು ಜನರಿಗೆ ಹಲವಾರು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ ಆದ್ದರಿಂದ ಈ ವಿಧಾನಗಳನ್ನು ಅನುಸರಿಸುವುದರ ಬದಲು ನೈಸರ್ಗಿಕ ವಾಗಿ ನಮಗೆ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ.

ಮನೆಯಲ್ಲಿ ಈ ವಿಧಾನ ಅನುಸರಿಸುವುದರಿಂದ ಆರೋಗ್ಯಕರ ವಾದ ಸುಲಭವಾದಂತಹ ವಿಧಾನವನ್ನು ಅನುಸರಿಸುವುದರ ಮೂಲಕ ನಿಮ್ಮ ತ್ವಚೆಯ ಆರೋಗ್ಯವನ್ನು ನೀವೇ ಕಾಪಾಡಿ ಕೊಳ್ಳಬಹುದು. ಯಾವುದೇ ರೀತಿಯ ಹಣಕಾಸಿನ ಖರ್ಚು ಕೂಡ ಇರುವುದಿಲ್ಲ. ಆದ್ದ ರಿಂದ ಮೇಲೆ ಹೇಳಿದ ಈ ವಿಧಾನಗಳನ್ನು ವಾರಕ್ಕೆ ಒಮ್ಮೆಯಾದರೂ ಪ್ರಯತ್ನಿಸುವುದು ಒಳ್ಳೆಯದು.

ಆರೋಗ್ಯ ಸಲಹೆಗಳು.!

 

* ದೊಡ್ಡಪತೆ ಎಲೆಯ ರಸದೊಂದಿಗೆ ಜೀರಿಗೆಯ ಪುಡಿಯನ್ನು ಸೇರಿಸಿ ಸೇವಿಸುವುದರ ಮೂಲಕ ಮತ್ತು ದೇಹದ ಮೇಲಿನ ಪಿತ್ತದ ಬೊಬ್ಬೆಗಳ ಮೇಲೆ ಹಚ್ಚುವುದರಿಂದ ಪಿತ್ತದ ಬೊಬ್ಬೆಗಳನ್ನು ಪೂರ್ತಿಯಾಗಿ ದೂರ ಮಾಡಬಹುದು.
* ಅರಿಶಿನದ ಪುಡಿಯನ್ನು ಬೆಣ್ಣೆಯೊಂದಿಗೆ ಸೇರಿಸಿ ಮುಲಾಮಿನಂತೆ ಮಾಡಿ ನವೆಯಾಗುವಂಥ ದದ್ದುಗಳ ಮೇಲೆ ಹಚ್ಚಿಕೊಂಡರೆ ನವೆ
ಕಡಿಮೆಯಾಗುತ್ತದೆ.

* ಈರುಳ್ಳಿಯ ತುಂಡುಗಳನ್ನು ತುಪ್ಪದಲ್ಲಿ ಹುರಿದು ಪ್ರತಿದಿನ ಸೇವಿಸುತ್ತ ಬಂದರೆ ಒಣ ಕೆಮ್ಮು ವಾಸಿಯಾಗುತ್ತದೆ.
* ಹುಳಿ ಮಾವಿನ ಹಣ್ಣಿನ ಸಿಪ್ಪೆಯನ್ನು ಸಣ್ಣ ತುಂಡುಗಳಾಗಿ ಮಾಡಿ, ತುಪ್ಪದಲ್ಲಿ ಹುರಿದು ಸಕ್ಕರೆ ಬೆರೆಸಿ ಸೇವಿಸಿದರೆ ಸ್ತ್ರೀಯಲ್ಲಿ ಕಂಡುಬರುವ ಋತು ಸ್ರಾವದಲ್ಲಿನ ಅತಿ ರಕ್ತಸ್ರಾವವು ನಿಲ್ಲುತ್ತದೆ.
* ಧನಿಯ ಪುಡಿ, ಜೀರಿಗೆ ಮತ್ತು ಮೆಣಸಿನ ಕಾಳುಗಳಿಂದ ತಯಾರಿಸಿದ ಕಷಾಯವನ್ನು ದಿನಕ್ಕೆ ಮೂರು ಬಾರಿಯಂತೆ ಸೇವಿಸುವುದರಿಂದ ಸಾಮಾನ್ಯ ಶೀತದಿಂದ ಬರುವ ತಲೆನೋವು, ಅಜೀರ್ಣ ಹಾಗೂ ಮಲಬದ್ಧತೆಯ ತೊಂದರೆ ಗಳು ನಿವಾರಣೆಯಾಗುತ್ತವೆ.

* ಹರಳು ಗಿಡದ ಬೇರಿನಿಂದ ತಯಾರಿಸಿದ ಕಷಾಯವನ್ನು ಶುಂಠಿ ರಸದೊಂದಿಗೆ ಸೇವಿಸುವುದರಿಂದ ಸೊಂಟನೋವು, ಪಕ್ಕೆನೋವು ಮತ್ತು ಹೃದಯದ ನೋವಿನ ನಿವಾರಣೆಯಾಗುತ್ತದೆ.
* ಸಾಮಾನ್ಯ ಜ್ವರ ಬಂದಾಗ ಬದನೆಯ ಬೇರು ಅಥವಾ ಎಲೆಯ ರಸಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ದಿನಕ್ಕೆ ಎರಡು ವೇಳೆಯಂತೆ ಸೇವಿಸುತ್ತಾ ಬಂದರೆ ಒಂದೆರಡು ದಿನಗಳಲ್ಲೇ ಜ್ವರವು ತಗ್ಗುತ್ತದೆ.
* ಬೆಟ್ಟದ ನೆಲ್ಲಿಕಾಯಿ ಬೀಜಗಳನ್ನು ತುಪ್ಪದಲ್ಲಿ ಹುರಿದು, ನಂತರ ಅನ್ನದ ಗಂಜಿಯಲ್ಲಿ ಅರೆದು ಹಣೆಗೆ ಪಟ್ಟು ಹಾಕುವುದರಿಂದ ಮೂಗಿನ ರಕ್ತ ಸ್ರಾವ ನಿಲ್ಲುತ್ತದೆ.

* ಹುಳಿ ಸೊಪ್ಪಿನ ಎಲೆಗಳನ್ನು ನುಣ್ಣಗೆ ಅರೆದು ಸ್ವಲ್ಪ ಬಿಸಿ ಮಾಡಿ ನೋವಿನಿಂದ ಕೂಡಿದ ಸ್ಥಳದ ಮೇಲೆ ಹಚ್ಚಿದರೆ, ಊತ ಮತ್ತು ನೋವು ಪರಿಹಾರವಾಗುತ್ತದೆ.
* ಗರ್ಭಕೋಶದ ತೊಂದರೆಯನ್ನು ಹೊಂದಿರುವವರು ಪ್ರತಿ ದಿನವೂ ತಪ್ಪದಂತೆ ಮಜ್ಜಿಗೆಯನ್ನು ಸೇವಿಸುವುದು ಒಳಿತು.
* ಮಹಿಳೆಯರು ಅಗತ್ಯವೆನಿಸಿದ ಪ್ರಮಾಣದ ಮೆಂತ್ಯವನ್ನು ತೆಗೆದುಕೊಂಡು ಕಷಾಯವನ್ನಾಗಿಸಿ ಸತತವಾಗಿ ಮೂರು ದಿನಗಳ ಕಾಲ ಸೇವಿಸಿದರೆ ವಿಳಂಬವಾದ ಋತುಚಕ್ರ ಮತ್ತು ಋತುಚಕ್ರದ ಅವಧಿ ಯಲ್ಲಿ ಉಂಟಾಗುವ ಹೊಟ್ಟೆನೋವು ಮರೆಯಾಗುತ್ತದೆ.

* ಋತುಚಕ್ರದಲ್ಲಿ ಸ್ವಲ್ಪ ವಿಳಂಬವಾಗಬೇಕೆಂದು ಬಯಸುವ ಸ್ತ್ರೀಯರು ಬಿಸಿನೀರಿಗೆ ಉಪ್ಪು ಬೆರಸಿ ಅದಕ್ಕೆ ನಿಂಬೆಹಣ್ಣಿನ ರಸವನ್ನು ಬೆರೆಸಿ ಕುಡಿಯ ಬೇಕು ಎಷ್ಟು ದಿನಗಳು ಹೀಗೆ ಕುಡಿಯುತ್ತಾ ಬರುತ್ತಾರೋ ಅಷ್ಟು ದಿನಗಳವರೆಗೆ ಋತುಚಕ್ರ ಮುಂದೂಡಲ್ಪಡುತ್ತದೆ.
* ಹೆರಿಗೆ ನೋವು ಕಾಣಿಸಿಕೊಳ್ಳುವ ಮೊದಲು ಗರ್ಭಿಣಿಯು ನಾಲ್ಕು ಚಮಚದಷ್ಟು ಶುದ್ಧವಾದ ಜೇನುತುಪ್ಪವನ್ನು ಕುಡಿದರೆ ಹೆರಿಗೆ ಹೆಚ್ಚಿನ ನೋವು ತೊಂದರೆಗಳಿಲ್ಲದೆ ಸುಖವಾಗಿ ಆಗುತ್ತದೆ.
ಹೀಗೆ ಇಷ್ಟೆಲ್ಲ ಮಾಹಿತಿ ಪ್ರತಿಯೊಬ್ಬರೂ ತಿಳಿದುಕೊಂಡಿದ್ದರೆ ಕೆಲವೊಂದು ಸಮಯದಲ್ಲಿ ಇದೆಲ್ಲವೂ ಕೂಡ ಅನುಕೂಲವಾಗುತ್ತದೆ ಎಂದೇ ಹೇಳಬಹುದು.

ಹೌದು ಮನೆಯಲ್ಲಿರುವಂತಹ ಮಹಿಳೆಯರು ಯಾವುದೇ ರೀತಿಯ ಆರೋಗ್ಯ ವಿಚಾರವಾಗಿರಬಹುದು ಮನೆಯವರ ಆರೋಗ್ಯದಲ್ಲಿ ಏನಾದರೂ ತೊಂದರೆ ಆಗಿದ್ದರೆ ಅದನ್ನು ಮನೆಯಲ್ಲಿ ಯಾವ ಕೆಲವು ಪದಾರ್ಥಗಳನ್ನು ಉಪಯೋಗಿಸಿ ಅದನ್ನು ಹೇಗೆ ದೂರ ಮಾಡಬಹುದು ಎನ್ನುವುದನ್ನು ತಿಳಿದುಕೊಂಡಿರುವುದು ಮುಖ್ಯ ಹೌದು, ಚಿಕ್ಕ ಪುಟ್ಟ ತೊಂದರೆ ಉಂಟಾದರೆ ಮನೆಯಲ್ಲಿಯೇ ಕೆಲವೊಂದು ಔಷಧಿ ಕೊಡುವುದರ ಮೂಲಕ ಆ ಸಮಸ್ಯೆಯನ್ನು ದೂರ ಮಾಡಬಹುದು ಹಾಗೇನಾದರೂ ಯಾವುದೇ ಮಾಹಿತಿ ತಿಳಿದಿಲ್ಲ ಎಂದರೆ ಪ್ರತಿಯೊಂದು ಕೂಡ ಆಸ್ಪತ್ರೆಗಳಿಗೆ ಹೋಗುವ ಅವಶ್ಯಕತೆ ಬರುತ್ತದೆ.

ನಾವು ಸಣ್ಣ ಪುಟ್ಟ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಹಣ ಖರ್ಚು ಮಾಡುವುದರ ಬದಲು ಇಂತಹ ಕೆಲವೊಂದಷ್ಟು ಮಾಹಿತಿಗಳನ್ನು ಗೊತ್ತಿರುವವರ ಬಳಿ ಕೇಳಿ ಹಾಗೂ ಕೆಲವೊಂದು ಕಡೆ ನೋಡಿ ತಿಳಿದುಕೊಂಡಿರುವುದು ತುಂಬಾ ಒಳ್ಳೆಯದು ಎಂದೇ ಹೇಳಬಹುದು.

ಕೆಟ್ಟ ಸ್ತ್ರೀಯರ ಲಕ್ಷಣಗಳು.!

 

ಪ್ರತಿಯೊಬ್ಬ ಸ್ತ್ರೀಯು ಕೂಡ ಒಂದೇ ರೀತಿಯ ಗುಣಗಳನ್ನು ಹೊಂದಿರು ತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ. ಹೌದು ಅವರವರ ಮನಸ್ಸಿನ ಆಧಾರದ ಮೇಲೆ ಅವರ ಗುಣ ಸ್ವಭಾವ ಅವರ ವ್ಯಕ್ತಿತ್ವ ಪ್ರತಿಯೊಂದು ಕೂಡ ನಿಂತಿರುತ್ತದೆ. ಹಾಗೆಂದ ಮಾತ್ರಕ್ಕೆ ಎಲ್ಲರೂ ಕೂಡ ಕೆಟ್ಟವರು ಎಂದು ಕೂಡ ಹೇಳಲು ಸಾಧ್ಯವಿಲ್ಲ.

ಹಾಗೆ ಎಲ್ಲರೂ ಒಳ್ಳೆಯವರು ಎಂದು ಕೂಡ ಹೇಳಲು ಸಾಧ್ಯವಿಲ್ಲ. ಹಾಗಾದರೆ ಈ ದಿನ ಯಾವ ಕೆಲವು ಗುಣಲಕ್ಷಣಗಳು ಇದ್ದರೆ ಅದು ಸ್ತ್ರೀಯ ಕೆಟ್ಟ ಲಕ್ಷಣಗಳು ಅಂದರೆ ಅದು ಒಳ್ಳೆಯದಲ್ಲ ಎಂದು ಹೇಗೆ ಹೇಳಬಹುದು. ಆ ಲಕ್ಷಣಗಳು ಯಾವುವು ಎನ್ನುವುದನ್ನು ಈ ದಿನ ತಿಳಿಯೋಣ ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದು ಕೊಳ್ಳಬೇಕಾದ ವಿಷಯ ಏನು ಎಂದರೆ.

ಪ್ರತಿಯೊಬ್ಬ ಹೆಣ್ಣು ಕೂಡ ಮನೆಯ ಕನ್ನಡಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಮನೆಯಲ್ಲಿ ಯಾವುದೇ ರೀತಿಯ ಕಷ್ಟ ಸುಖ ದುಃಖ ಏನೇ ಇರಲಿ ಅವೆಲ್ಲವನ್ನು ಸಹ ಸರಿಯಾಗಿ ಅಂದರೆ ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅವೆಲ್ಲವನ್ನು ಕೂಡ ನಿಭಾಯಿಸಿಕೊಂಡು ಹೋಗುವವಳೇ ಹೆಣ್ಣು ಎಂದು ಸಹ ಹೇಳುತ್ತಾರೆ.

ತ್ಯಾಗಮಯಿ ಕರುಣಾಮಯಿ ಎಂಬ ಅರ್ಥವೂ ಸಹ ಹೆಣ್ಣಿಗೆ ಇದೆ. ಹೀಗೆ ಇಷ್ಟೆಲ್ಲಾ ಗುಣಗಳನ್ನು ಹೊಂದಿದಂತಹ ಹೆಣ್ಣು ಕೆಲವೊಂದು ಸಂದರ್ಭದಲ್ಲಿ ಕೆಲವೊಂದಷ್ಟು ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಹಾಗೇನಾದರೂ ಅವಳು ಪ್ರತಿಯೊಂದು ಸಮಯದಲ್ಲಿಯೂ ಕೂಡ ಹಠ ಮಾಡಿದರೆ ಈ ಕೆಲಸ ಹೀಗೆ ಆಗಬೇಕು ನನಗೆ ಈ ವಸ್ತು ಬೇಕೇ ಬೇಕು ಹೀಗೆ ಎಲ್ಲವನ್ನು ಕೂಡ ಹಠ ಮಾಡಿ ಪಡೆದುಕೊಳ್ಳಬಾರದು.

ಹಾಗೇನಾದರು ನೀವು ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಹಠ ವನ್ನು ಮಾಡಿದರೆ ಆ ಮನೆಯಲ್ಲಿ ಅಭಿವೃದ್ಧಿ ಯಶಸ್ಸು ಎನ್ನುವುದು ಆಗುವುದಿಲ್ಲ ಬದಲಿಗೆ ನಿಮ್ಮ ಮನೆಯಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿ ಕೊಳ್ಳಲು ಪ್ರಾರಂಭವಾಗುತ್ತದೆ. ಅದೇ ರೀತಿಯಾಗಿ ಯಾವ ಕೆಲವು ಗುಣಲಕ್ಷಣಗಳು ಇದ್ದರೆ ಆ ಸ್ತ್ರೀಯ ಕೆಟ್ಟ ಲಕ್ಷಣಗಳು ಇದೆ ಎನ್ನುವುದು ಹೇಗೆ ತಿಳಿಯುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ.

* ಸ್ತ್ರೀ ತುಂಬ ಕುಳ್ಳಗೆ ಹಾಗೂ ತುಂಬಾ ಎತ್ತರ ಇರಬಾರದು.
* ಸ್ತ್ರೀಯು ಅತಿಯಾಗಿ ಅಲಂಕಾರ ಮಾಡಿ ಕೊಳ್ಳಬಾರದು.
* ದೊಡ್ಡ ಸ್ತನಗಳು ಇರಬಾರದು.
* ತಲೆ ಕೂದಲು ಬಿಡಿಸಿ ಹಾಕಿಕೊಂಡು ಎಲ್ಲೆಂದರಲ್ಲಿ ತಿರುಗಾಡಬಾರದು.
* ತಲೆ ಕೂದಲನ್ನು ಪದೇ ಪದೇ ಕಟ್ಟಿಕೊಳ್ಳುವುದು ಹಾಗೂ ತಲೆ ಬಾಚಿ ಕೊಳ್ಳುವುದು ಮತ್ತೆ ಒಡವೆ ಹಾಗೂ ಸೀರೆಯ ಸೆರಗನ್ನು ಪದೇಪದೇ ಸರಿ ಮಾಡಿ ಕೊಳ್ಳುವುದು ಮಾಡಬಾರದು.

* ಗಂಡನ ಮಾತಿಗೆ ಎದುರುತ್ತರ ಕೊಡುವ ಸ್ತ್ರೀ ಅತಿಯಾಗಿ ಆವೇಶ ಪಡುವ ಸ್ತ್ರೀಯರು ಅವರಿಗೆ ಸಂತೋಷ ಇರುವುದಿಲ್ಲ. ಅವರ ಜೊತೆಯಲ್ಲಿ ಸುತ್ತಮುತ್ತ ಇರುವವರಿಗೂ ಕೂಡ ಸಂತೋಷವಾಗಿ ಇರುವುದಕ್ಕೆ ಬಿಡುವುದಿಲ್ಲ.
* ಅತಿಯಾದ ಆವೇಶ ಹಾಗೂ ಅತಿಯಾದ ಕೋಪ ಖಂಡಿತವಾಗಿ ಕಷ್ಟದ ಪಾಲು ಮಾಡುತ್ತದೆ.

* ಸ್ತ್ರೀಗೆ ತಿನ್ನುವ ಯೋಗ ಇದ್ದರೆ ಮಾತ್ರ ಪುರುಷನು ಸಂಪಾದಿಸುತ್ತಾನೆ.
* ಸ್ತ್ರೀಯ ಪಾಪವು ಖಂಡಿತವಾಗಿ ಪುರುಷನನ್ನು ಬೇಟೆಯಾಡುತ್ತದೆ.
ಹೀಗೆ ಇಷ್ಟೆಲ್ಲಾ ಗುಣ ಹೊಂದಿರುವಂತಹ ಸ್ತ್ರೀ ಯನ್ನು ಕೆಟ್ಟ ಗುಣಲಕ್ಷಣ ಹೊಂದಿರುವಂತಹ ಸ್ತ್ರೀ ಎಂದು ಹೇಳಬಹುದು. ಹಾಗೇನಾದರೂ ಈಗ ತಿಳಿದು ನಂತರ ನೀವು ತಪ್ಪನ್ನು ಮಾಡುವುದರಿಂದ ಆ ಒಂದು ತಪ್ಪಿನ ಶಿಕ್ಷೆಯನ್ನು ನೀವು ಅನುಭವಿಸಬೇಕಾಗುತ್ತದೆ ಆದ್ದರಿಂದ ಇವೆಲ್ಲವನ್ನೂ ಕೂಡ ಈಗಲೇ ಸರಿಪಡಿಸಿಕೊಳ್ಳುವುದು ಉತ್ತಮ.

ಮಂಡಿ ಕೀಲು ಸೊಂಟ ನೋವುಗಳಿಗೆ ಈ ರಸವನ್ನು ಹಚ್ಚಿದರೆ 20 ದಿನದಲ್ಲಿ ವಾಸಿಯಾಗುತ್ತದೆ.!

 

ಇತ್ತೀಚಿನ ದಿನದಲ್ಲಿ ಮಂಡಿ ನೋವು ಕೀಲು ನೋವು ಸೊಂಟ ನೋವು ಹೀಗೆ ಕೆಳಗಡೆ ಕೂತರೆ ಮೇಲೆ ಏಳುವುದಕ್ಕೆ ಆಗುವುದಿಲ್ಲ ಹೀಗೆ ಹಲ ವಾರು ಸಮಸ್ಯೆಗಳನ್ನು ಕೆಲವೊಂದಷ್ಟು ಜನ ಅನುಭವಿಸುತ್ತಿರುತ್ತಾರೆ. ಆದರೆ ಅವರು ಈ ನೋವುಗಳನ್ನು ಗುಣಪಡಿಸಿಕೊಳ್ಳುವುದಕ್ಕೆ ಎಷ್ಟೆಲ್ಲ ಹಣವನ್ನು ಖರ್ಚು ಮಾಡಿದರು ಎಷ್ಟೇ ಯಾವುದೇ ರೀತಿಯ ಕ್ರೀಮ್ ಗಳನ್ನು ಹಚ್ಚಿದರು ಕೂಡ ಅದು ವಾಸಿಯಾಗುವುದಿಲ್ಲ ಎಂದೇ ತಿಳಿದುಕೊಂಡಿರುತ್ತಾರೆ.

ಆದರೆ ಈ ಒಂದು ಸಮಸ್ಯೆ ಈಗ ನಾವು ಹೇಳುವಂತಹ ಈ ಒಂದು ವಿಧಾನ ಅನುಸರಿಸುವುದರಿಂದ ಅಂದರೆ ಈ ಒಂದು ಮನೆ ಮದ್ದನ್ನು ಮಾಡಿ ಹಾಕುವುದರಿಂದ ನಿಮ್ಮ ಈ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ ಎಂದೇ ಹೇಳಬಹುದು. ಹೌದು ನಮ್ಮ ಆಯುರ್ವೇದ ಪದ್ಧತಿ ಎನ್ನುವುದೇ ಹಾಗೆ. ಆಯುರ್ವೇದ ದಲ್ಲಿ ತಿಳಿಸಿರುವಂತಹ ಕೆಲವೊಂದಷ್ಟು ಗಿಡಮೂಲಿಕೆಗಳು ನಮ್ಮ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದೇ ಹೇಳಬಹುದು.

ರಾಮಾಯಣ ಮಹಾಭಾರತದ ಕಾಲದಿಂದಲೂ ಕೂಡ ಈ ಒಂದು ಆಯುರ್ವೇದದ ಪದ್ಧತಿ ಎನ್ನುವುದು ಜಾರಿಯಲ್ಲಿ ಇದೆ. ಹಾಗಾ ದರೆ ಈ ದಿನ ಮೇಲೆ ಹೇಳಿದ ಸಮಸ್ಯೆಗಳನ್ನು ಯಾವ ಒಂದು ವಿಧಾನ ಗಳನ್ನು ಅನುಸರಿಸುವುದರ ಮೂಲಕ ಅದನ್ನು ದೂರ ಮಾಡಿಕೊಳ್ಳ ಬಹುದು. ಹಾಗೂ ಈ ಸಮಸ್ಯೆಗಳು ಇತ್ತೀಚಿನ ದಿನದಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಹಳ ಪ್ರಮುಖವಾದ ಕಾರಣಗಳು ಏನು ಹೀಗೆ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಅದಕ್ಕೂ ಮೊದಲು ಇತ್ತೀಚಿನ ದಿನದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವು ದಕ್ಕೆ ಕಾರಣಗಳು ಏನು ಎಂದು ತಿಳಿಯೋಣ.

* ಬಹಳ ಹಿಂದಿನ ಕಾಲದಲ್ಲಿ ಅವರ ಆಹಾರ ಪದ್ಧತಿಯಾಗಿರಬಹುದು, ಅವರ ಕೆಲಸ ಕಾರ್ಯದ ವೈಖರಿಯಾಗಿರಬಹುದು ಎಲ್ಲವೂ ಕೂಡ ಬಹಳ ಭಿನ್ನವಾಗಿದ್ದವು ಹೌದು ಅಷ್ಟೇ, ಶ್ರಮಪಟ್ಟು ಅವರು ಪ್ರತಿ ಕೆಲಸವನ್ನು ಮಾಡುತ್ತಿದ್ದರು. ಹಾಗೂ ಒಳ್ಳೆಯ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದರು ಆದ್ದರಿಂದ ಅವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಣಿಸುತ್ತಿರಲಿಲ್ಲ.

ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರ ಜೀವನಶೈಲಿ ಆಹಾರ ಶೈಲಿ ಎಲ್ಲವೂ ಕೂಡ ವಿಭಿನ್ನ ವಾಗಿದ್ದು. ಅವರ ಆಹಾರದಲ್ಲಿ ಯಾವುದೇ ರೀತಿಯ ಪೌಷ್ಟಿಕಾಂಶಗಳು ಒಳ್ಳೆಯ ಸತ್ವಗಳು ಇರುವುದಿಲ್ಲ. ಬದಲಿಗೆ ಬಾಯಿಗೆ ರುಚಿಯನ್ನು ಕೊಡುವುದಷ್ಟೇ ಆಗಿರುತ್ತದೆ. ಆದ್ದರಿಂದ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಿಗೂ ಕೂಡ ಕ್ಯಾಲ್ಸಿಯಂ ಕೊರತೆ ರಕ್ತ ಇಲ್ಲದೆ ಇರುವುದು ಹೀಗೆ ಹತ್ತು ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗಿದೆ.

ಹಾಗಾದರೆ ಈ ದಿನ ಈ ಎಲ್ಲಾ ಸಮಸ್ಯೆ ದೂರ ಮಾಡಿಕೊಳ್ಳುವುದಕ್ಕೆ ಯಾವ ಒಂದು ಔಷಧಿಯನ್ನು ಉಪಯೋಗಿಸಬೇಕು ಎಂದು ನೋಡುವುದಾದರೆ. ಸಾಮಾನ್ಯವಾಗಿ ಈ ಒಂದು ಗಿಡಮೂಲಿಕೆಯ ಹೆಸರು ಬಂದರಿಗೆ ಗಿಡ ಹೌದು, ಈ ಗಿಡದ ಎಲೆಗಳನ್ನು ಚೆನ್ನಾಗಿ ಎಳ್ಳೆಣ್ಣೆಯಲ್ಲಿ ಬಿಸಿ ಮಾಡಿ ಆ ಎಲೆಯನ್ನು ನೋವು ಇರುವಂತಹ ಜಾಗಕ್ಕೆ ಹಾಕಿ ಕಟ್ಟಿದರೆ ಯಾವುದೇ ರೀತಿಯ ಮಂಡಿ ನೋವು ಸೊಂಟ ನೋವು ಎಷ್ಟೇ ವರ್ಷದಿಂದ ಇದ್ದರೂ ಕೂಡ ಅದು ಕೇವಲ 20 ದಿನದಲ್ಲಿಯೇ ಗುಣವಾಗುತ್ತದೆ.

ಅದೇ ರೀತಿಯಾಗಿ ಕಗ್ಗಳಿ ಮರದ ಚಕ್ಕೆಯನ್ನು ಸಹ ತೆಗೆದುಕೊಳ್ಳಬೇಕು. ಕಗ್ಗಳಿ ಮರದ ಚಕ್ಕೆ ಹಾಗೂ ಬಂದರಿಕೆ ಗಿಡದ ಎಲೆಗಳು ಇಷ್ಟನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಎಳ್ಳೆಣ್ಣೆಯಲ್ಲಿ ಚೆನ್ನಾಗಿ ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಬೇಕು ಈ ರೀತಿ ಕುದ್ದಂತಹ ಎಳ್ಳೆಣ್ಣೆಯನ್ನು ಯಾವ ಜಾಗದಲ್ಲಿ ನೋವು ಇರುತ್ತದೆಯೋ ಅಲ್ಲಿ ಹಾಕಿ ಮಸಾಜ್ ಮಾಡುತ್ತಾ ಬರಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಎಷ್ಟೇ ದುಡಿಮೆ ಇದ್ದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂದರೆ ಅದಕ್ಕೆ ಮುಖ್ಯ ಕಾರಣ ಇದೇ ನೋಡಿ.!

 

ಎಷ್ಟೇ ದುಡಿಮೆಯಿದ್ದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂದರೆ ಈ ಅಭ್ಯಾಸಗಳನ್ನು ತಕ್ಷಣಕ್ಕೆ ಬಿಟ್ಟುಬಿಡಿ ಎನ್ನುತ್ತಾರೆ ಚಾಣಕ್ಯ ಈ ಜಗತ್ತಿನಲ್ಲಿ ಈಗ ಎಲ್ಲರೂ ನೋಡುವುದು ಹಣವನ್ನು. ಹಣ ಎಲ್ಲರಿಗೂ ಬೇಕು. ನಮ್ಮ ಬಳಿ ಹಣ ಇದೆಯೋ, ಇಲ್ಲವೋ ಎಂಬುದು ಬಹಳ ಮುಖ್ಯವಾಗುತ್ತದೆ. ಚಾಣಕ್ಯರ ಪ್ರಕಾರ ನಾವು ಈ ಕೆಲವು ಅಭ್ಯಾಸಗಳನ್ನು ರೂಢಿಸಿ ಕೊಂಡರೆ ಹಣ ಎಂದಿಗೂ ನಮ್ಮ ಕೈ ಬಿಟ್ಟು ಹೋಗುವುದಿಲ್ಲ.

ಈ ಜಗತ್ತಿನಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ಮನುಷ್ಯನಿಗೂ ಹಣ ಬೇಕು. ಎಲ್ಲರೂ ಊಟ, ಬಟ್ಟೆಗಾಗಿ ದುಡಿಯುತ್ತಾರೆ. ಆದರೆ ಕೆಲವರು ಎಷ್ಟೇ ಸಂಪಾದನೆ ಮಾಡಿದರೂ ಹಣ ಅವರ ಕೈಯಲ್ಲಿ ನಿಲ್ಲುವುದಿಲ್ಲ. ಸಂಪತ್ತು ಹೆಚ್ಚಾಗುವುದಿಲ್ಲ. ಚಾಣಕ್ಯ ಇದಕ್ಕೆ ಕೆಲವು ಕಾರಣಗಳನ್ನು ನೀಡುತ್ತಾರೆ. ಈ ಕೆಳಗಿನ ಅಭ್ಯಾಸಗಳನ್ನು ಹೊಂದಿರುವ ಜನರಿಗೆ ಸಂಪತ್ತು ಎಂದಿಗೂ ಒಲಿಯುವುದಿಲ್ಲ ಅವರು ತಮ್ಮ ಇಡೀ ಜೀವನವನ್ನು ಬಡತನದಲ್ಲಿ ಕಳೆಯುತ್ತಾರೆ.

ಹಾಗಾದರೆ ಬಡತನಕ್ಕೆ ಕಾರಣವಾಗುವ ಅಂಶಗಳು ಯಾವುವು ಎಂಬುದನ್ನು ಈಗ ತಿಳಿಯೋಣ.!

* ಸೂರ್ಯೋದಯದ ನಂತರ ಏಳುವ ಅಭ್ಯಾಸ: ಆಚಾರ್ಯ ಚಾಣಕ್ಯರ ಪ್ರಕಾರ, ಬೆಳಿಗ್ಗೆ ತಡವಾಗಿ ಏಳುವುದು ಲಕ್ಷ್ಮೀದೇವಿಗೆ ಕೋಪ ತರಿಸುತ್ತದೆ. ಸೂರ್ಯೋದಯದ ನಂತರವೂ ಹಾಸಿಗೆಯನ್ನು ಬಿಡದ ವ್ಯಕ್ತಿಯ ಬಳಿ ಹಣ ನಿಲ್ಲಲ್ಲು ಸಾಧ್ಯವೇ ಇಲ್ಲ. ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿದಂತೆ, ಬೆಳಿಗ್ಗೆ ತಡವಾಗಿ ಏಳುವ ಜನರು ಎಂದಿಗೂ ಸಿರಿತನದಲ್ಲಿ ಬದುಕುವುದಿಲ್ಲ ಮತ್ತು ತಾಯಿ ಲಕ್ಷ್ಮೀಯ ಅನುಗ್ರಹವನ್ನು ಎಂದಿಗೂ ಪಡೆಯುವುದಿಲ್ಲ.

* ಶಾರೀರಿಕ ಕೊಳಕು ಇರುವವರು:- ಶಾರೀರಿಕ ಸ್ವಚ್ಛತೆ ಇಲ್ಲದವರ ಜೊತೆ ನಾವೇ ನಿಲ್ಲುವುದಿಲ್ಲ, ಇನ್ನು ಸಂಪತ್ತಿನ ಅಧಿದೇವತೆ ಹೇಗೆ ನಿಲ್ಲುತ್ತಾಳೆ. ಕೊಳಕು ಬಟ್ಟೆ ಧರಿಸಿ, ಹಲ್ಲುಜ್ಜದೆ, ಸ್ವಚ್ಛವಾಗಿ ಇರದವರ ಜೊತೆ ಅಥವಾ ಅಂತಹವರ ಮನೆಯಲ್ಲಿ ಲಕ್ಷ್ಮೀದೇವಿ ಎಂದಿಗೂ ಇರುವುದಿಲ್ಲ ಎಂದು ಆಚಾರ್ಯ ಚಾಣಕ್ಯ ಹೇಳಿದ್ದರು. ಹಾಗಾಗಿ ಹಣ, ಸಂಪತ್ತು ಗಳಿಸಲು ಮೈ, ಮನಸ್ಸು ಎರಡೂ ಸ್ವಚ್ಛವಾಗಿರುವುದು ಬಹಳ ಮುಖ್ಯ.

* ಅಗತ್ಯಕ್ಕಿಂತಲೂ ಹೆಚ್ಚು ಆಹಾರ ಸೇವಿಸುವುದು:- ಚಾಣಕ್ಯರ ನೀತಿಶಾಸ್ತ್ರದ ಪ್ರಕಾರ, ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವುದು ಬಡತನಕ್ಕೆ ಕಾರಣವಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ತಿನ್ನುವವರ ಆರೋಗ್ಯ ಹದಗೆಡುತ್ತದೆ. ಆರೋಗ್ಯ ಹದಗೆಟ್ಟಲೆ ಆಸ್ಪತ್ರೆಗೆ ಹೋಗಬೇಕು. ನಾವು ಕಷ್ಟಪಟ್ಟು ದುಡಿದ ದುಡ್ಡನ್ನೆಲ್ಲಾ ಊಟ, ಆಸ್ಪತ್ರೆಗೆ ಖರ್ಚು ಮಾಡಿದರೆ ಆ ಹಣ ಎಲ್ಲಿಂದ ಬರುತ್ತೆ? ದೇಹಕ್ಕೆ ಬೇಕಾದಷ್ಟು ಆಹಾರವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

* ಕಠೋರವಾಗಿ ಮಾತನಾಡುವವರು:- ಮನುಷ್ಯ ಸದಾ ಮಧುರವಾಗಿ ಮಾತನಾಡಬೇಕು ಎಂದು ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಮಧುರವಾಗಿ ಮಾತನಾಡುವವರನ್ನು ಎಲ್ಲರೂ ಇಷ್ಟಪಡುತ್ತಾರೆ. ಸಮಾಜದಲ್ಲಿ ಸದಾ ಗೌರವ ಸಿಗುತ್ತದೆ. ಕಠಿಣ ಪದಗಳು ಜನ ರೊಂದಿಗಿನ ಸಂಬಂಧವನ್ನು ಹಾಳುಮಾಡುತ್ತವೆ. ನಿಮ್ಮ ಒರಟು ಮಾತುಗಳು ಇನ್ನೊಬ್ಬರ ಹೃದಯವನ್ನು ನೋಯಿಸಬಹುದು. ಅದರ ಪಾಪವು ನಿಮ್ಮ ಸಂಪತ್ತನ್ನು ಸುತ್ತಿಕೊಳ್ಳುತ್ತದೆ. ಅಂತಹ ಮನೆಯಲ್ಲಿ ಲಕ್ಷ್ಮೀ ಎಂದಿಗೂ ವಾಸಿಸುವುದಿಲ್ಲ ಎಂದು ಚಾಣಕ್ಯ ಹೇಳುತ್ತಾರೆ.

* ದುಂದುವೆಚ್ಚ ಮಾಡಬಾರದು:- ಹಣ ಸಂಪಾದಿಸುವುದು ಸುಲಭದ ಕೆಲಸವಲ್ಲ. ಯಶಸ್ವಿ ವ್ಯಕ್ತಿಯಾಗುವುದು ಕೂಡ ಸುಲಭವಲ್ಲ. ಯಶಸ್ವಿ ಯಾಗಲು, ಕುಟುಂಬ ಮತ್ತು ವೃತ್ತಿಪರ ಜೀವನವನ್ನು ಹೇಗೆ ನಿರ್ವಹಿಸ ಬೇಕು ಎಂಬುದನ್ನು ಸಹ ತಿಳಿದಿರಬೇಕು. ಹಣ ತಾನಾಗಿಯೇ ಬರುವುದಿಲ್ಲ. ಕಷ್ಟಪಟ್ಟು ದುಡಿಯಬೇಕು. ಹಣವನ್ನು ಹೇಗೆ ಇಟ್ಟುಕೊಳ್ಳ ಬೇಕೆಂದು ಸಹ ನೀವು ತಿಳಿದಿರಬೇಕು. ಯಾವುದೇ ದುಂದುವೆಚ್ಚಗಳನ್ನು ಮಾಡಬಾರದು. ದುಂದು ವೆಚ್ಚಗಳನ್ನು ಮಾಡುವವರ ಬಳಿ ಹಣ ಎಂದಿಗೂ ನಿಲ್ಲುವುದಿಲ್ಲ ಎಂದು ಚಾಣಕ್ಯ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಈ ರೀತಿ ಲಕ್ಷಣಗಳಿದ್ರೆ ಎಚ್ಚರ ಥೈರಾಯ್ಡ್ ಬರುತ್ತೆ.!

 

ಥೈರಾಯ್ಡ್ ಗ್ರಂಥಿಯು ಚಿಟ್ಟೆಯ ಆಕಾರದ ಗ್ರಂಥಿಯಾಗಿದ್ದು, ಇದು ಕುತ್ತಿಗೆಯಲ್ಲಿ ಇದೆ. ಮಾನವ ದೇಹದ ಚಯಾಪಚಯ ಪ್ರಕ್ರಿಯೆಗಳ ಪ್ರಮುಖ ಭಾಗವಾಗಿದೆ. ಆದ್ದರಿಂದ ಥೈರಾಯ್ಡ್ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಒಳ್ಳೆಯದು. ಪ್ರತಿಯೊಬ್ಬರೂ ಥೈರಾಯ್ ಗ್ರಂಥಿಯನ್ನು ಹೊಂದಿರುತ್ತಾರೆ.

ಇದು ಸರಿಯಾದ ಮಟ್ಟದಲ್ಲಿದ್ದರೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಹೆಚ್ಚು ಅಥವಾ ಕಡಿಮೆ ಆದರಷ್ಟೇ ತುಂಬಾ ಕಷ್ಟ. ಹೌದು ಇದು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ಅವರು ಪ್ರತಿನಿತ್ಯ ಪ್ರತಿಬಾರಿ ಮಾತ್ರೆಗಳನ್ನು ತೆಗೆದುಕೊಳ್ಳುವಂತಹ ಪರಿಸ್ಥಿತಿಗಳು ಕೂಡ ಬರುತ್ತದೆ.

ಆದ್ದರಿಂದ ಥೈರಾಯ್ಡ್ ಸಮಸ್ಯೆ ಇರುವಂತಹ ಜನರು ಅವರ ಆರೋಗ್ಯದ ವಿಚಾರವಾಗಿ ಯಾವ ಕೆಲವು ಆಹಾರ ಪದ್ಧತಿಯನ್ನು ಸೇವನೆ ಮಾಡಬೇಕು ಹಾಗೂ ಯಾವ ಆಹಾರ ಪದ್ಧತಿಯನ್ನು ಸೇವನೆ ಮಾಡಬಾರದು ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಒಳ್ಳೆಯದು.

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ 100 ರಲ್ಲಿ 80 ಜನಕ್ಕೆ ಇರುವುದು ಕಡ್ಡಾಯವಾಗಿದೆ ಎಂದು ಹೇಳಬಹುದು. ಹೌದು ಈ ಸಮಸ್ಯೆಯಿಂದ ಚಿಕ್ಕ ವಯಸ್ಸಿನವರು ಕೂಡ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಈ ಸಮಸ್ಯೆ ಉಂಟಾದಂತಹ ವ್ಯಕ್ತಿಗಳು ಕೆಲವೊಂದ ಷ್ಟು ಆಹಾರ ಪದ್ಧತಿಯನ್ನು ಬಿಡುವುದು ಒಳ್ಳೆಯದು ಹಾಗೇನಾದರೂ ಅದನ್ನು ಸೇವನೆ ಮಾಡಿದ್ದೆ ಆದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಹಾಗಾದರೆ ಈ ದಿನ ಥೈರಾಯಿಡ್ ಎನ್ನುವಂತಹ ಸಮಸ್ಯೆ ಯಾವ ಒಂದು ಕಾರಣಕ್ಕಾಗಿ ಬರುತ್ತದೆ.

ಹಾಗೂ ಥೈರಾಯ್ಡ್ ನಲ್ಲಿ ಯಾವ ವಿಧಗಳು ಇದೆ ಹಾಗೂ ಥೈರಾಯ್ಡ್ ಇದ್ದರೆ ಯಾವ ಕೆಲವು ಲಕ್ಷಣಗಳು ನಮಗೆ ತಿಳಿಯುತ್ತದೆ. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಮಾಹಿತಿಯನ್ನು ತಿಳಿಯೋಣ. ಮೊದಲನೆಯದಾಗಿ ಎಷ್ಟು ವಿಧವಾಗಿ ಥೈರಾಯ್ಡ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಹಾಗೂ ಅದರ ಲಕ್ಷಣಗಳು ಯಾವುದು ಎಂದು ಈ ಕೆಳಗೆ ಒಂದೊಂದಾಗಿ ತಿಳಿಯೋಣ.

* ಹೈಪೋಥೈರಾಯ್ಡ್ :- ಹೈಪೋಥೈರಾಯಿಡ್ ಇದ್ದರೆ ಯಾವ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದರೆ.
• ಜೀರ್ಣಕ್ರಿಯೆ ನಿಧಾನವಾಗುವುದು
• ಕೂದಲು ಉದುರುವುದು
• ತಲೆ ಸುತ್ತು
• ಇದ್ದಕಿದ್ದ ಹಾಗೆ ದೇಹದ ತೂಕ ಹೆಚ್ಚಾಗುವುದು
• ತಂಪಾದ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ
ಕೆಲವೊಂದಷ್ಟು ಸಮಸ್ಯೆ ಉಂಟಾಗುವುದು.
• ಮಲಬದ್ಧತೆ

• ಚರ್ಮದಲ್ಲಿ ಯಾವುದೇ ರೀತಿಯ ನೀರಿನ ಅಂಶ ಇಲ್ಲದೆ
ಒಣಗಿರುವ ಅನುಭವ ಉಂಟಾಗುವುದು
• ಆಯಾಸ ಮೈ ಕೈ ನೋವು ಉಂಟಾಗುವುದು
• ನಿದ್ದೆ ಮಾಡಲು ಕಷ್ಟ ಆಗುವುದು ಆದರೆ ನಿದ್ರಾಹೀನತೆಯ ಸಮಸ್ಯೆ
• ಹೃದಯದ ಬಡಿತ ಕಡಿಮೆಯಾಗುವುದು
• ಮುಟ್ಟಿನಲ್ಲಿ ವ್ಯತ್ಯಾಸ ಉಂಟಾಗುವುದು
• ಸ್ನಾಯುಗಳು ಬಲಹೀನವಾಗುವುದು
• ಉದ್ವೇಗ
• ಅನಿಯಮಿತ ಋತುಸ್ರಾವ

* ಹೈಪರ್ ಥೈರಾಯ್ಡ್ :- ಹೈಪರ್ ಥೈರಾಯ್ಡ್ ಇದ್ದರೆ ಯಾವ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದರೆ.
• ಬೇಗ ಹಸಿವಾಗುವುದು
• ತಲೆ ಸುತ್ತು
• ಮಾನಸಿಕ ಕಿರಿಕಿರಿ ಮತ್ತು ಆಯಾಸ
• ಹೃದಯ ಬಡಿತ ಹೆಚ್ಚಾಗುವುದು
• ಆಗಾಗ ಮಲವಿಸರ್ಜನೆಗೆ ಹೋಗುವುದು
• ಅತಿಯಾಗಿ ಬೆವರುವುದು
• ದೃಷ್ಟಿಯಲ್ಲಿ ಬದಲಾವಣೆ
• ತೂಕ ಇಳಿಕೆ ಆಗುವುದು

• ಕೂದಲು ಉದುರುವುದು
• ನಿದ್ರಾಹೀನತೆಯ ಸಮಸ್ಯೆ
• ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುವುದು
• ಖಿನ್ನತೆ ಮತ್ತು ಕೋಪ
• ಮುಟ್ಟಿನ ಸಮಯದಲ್ಲಿ ಅಧಿಕವಾಗಿ ರಕ್ತಸ್ರಾವ ಉಂಟಾಗುವುದು.

ಹೀಗೆ ಇನ್ನು ಹಲವಾರು ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಇಂತಹ ಸಮಸ್ಯೆಗಳು ಏನಾದರೂ ಇದ್ದರೆ ತಕ್ಷಣವೇ ನೀವು ಆಸ್ಪತ್ರೆಗಳಿಗೆ ಹೋಗಿ ಥೈರಾಯಿಡ್ ಟೆಸ್ಟ್ ಮಾಡಿಸಿಕೊಳ್ಳುವುದು ಉತ್ತ ಮ. ಹಾಗೇನಾದರೂ ಅತಿಯಾದ ಸಮಯದಲ್ಲಿ ನೀವು ತೋರಿಸಿದರೆ ಅದರಿಂದ ಹೆಚ್ಚಿನ ಸಮಸ್ಯೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಮೊದಲೇ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಒಳ್ಳೆಯದು.

ಮನೆಯಲ್ಲಿ ಫ್ರಿಡ್ಜ್ ಈ ದಿಕ್ಕಿಗೆ ಇದ್ದರೆ ಮನೆಗೆ ಒಳ್ಳೆಯದಲ್ಲ.!

 

ಪ್ರತಿಯೊಬ್ಬರಿಗೂ ಕೂಡ ಸ್ವಂತ ಮನೆ ಇರಬೇಕು ಎನ್ನುವ ಭಾವನೆ ಆಶಯ ಇದ್ದೇ ಇರುತ್ತದೆ. ನಮ್ಮದು ಅಂತ ಸ್ವಂತ ಮನೆ ಇದ್ದರೆ ಅದು ಎಷ್ಟೇ ಚಿಕ್ಕದಾದರೂ ಅದು ನಮಗೆ ಭದ್ರತೆಯ ಭಾವನೆಯನ್ನು ನೀಡುತ್ತದೆ ಹಾಗೆಯೇ ತುಂಬಾ ಜನ ಕಷ್ಟಪಟ್ಟು ತಮ್ಮದೇ ಆದ ಒಂದು ಸ್ವಂತ ಮನೆಯನ್ನು ಕಟ್ಟಿಕೊಳ್ಳುತ್ತಾರೆ. ಇದರ ಹೊರತಾಗಿ ಮನೆ ಎನ್ನುವುದು ಜೀವನದ ಮೇಲೆ ಪರಿಣಾಮ ಬೀರುವಂತಹ ಮುಖ್ಯ ಅಂಶವಾಗುತ್ತದೆ.

ಮನೆಯ ರಚನೆ ಮನೆಯಲ್ಲಿ ಜೋಡಿಸಲಾದ ವಸ್ತುಗಳ ಸ್ಥಳ ಇವೆಲ್ಲವೂ ಕೂಡ ಪ್ರಮುಖವಾಗುತ್ತದೆ. ಇನ್ನು ಮನೆ ನಿರ್ಮಾಣದಲ್ಲಿ ಏನಾದರೂ ದೋಷ ಇದೆ ಎನ್ನುವಂತಹ ಭಾವನೆ ಉದ್ಭವವಾದಾಗ ಮನೆ ಮಂದಿ ಜ್ಯೋತಿಷಿಗಳು ಹಾಗೂ ವಾಸ್ತು ತಜ್ಞರನ್ನು ಸಂಪರ್ಕಿಸುತ್ತಾರೆ. ಯಾಕೆಂದರೆ ಮನೆ ಕಟ್ಟುವಂತಹ ಸಮಯದಲ್ಲಿ ವಾಸ್ತು ಶಾಸ್ತ್ರದ ಅಂಶಗಳನ್ನು ಗಮನಿಸಬೇಕು ಇದು ನಮ್ಮ ಸಂತೋಷ ಸಮೃದ್ಧಿ ಸಂಪತ್ತು ಅದೃಷ್ಟಕ್ಕೆ ಸಂಬಂಧಿಸಿದ ವಿಷಯವಾಗಿರುತ್ತದೆ.

ಹಾಗಾಗಿ ಮನೆ ನಿರ್ಮಾಣಕ್ಕೆ ವಿಶೇಷ ಗಮನವನ್ನು ವಹಿಸಬೇಕು. ಇನ್ನು ಮನೆ ನಿರ್ಮಾಣದ ನಂತರ ಫ್ರಿಡ್ಜ್, ಸೋಫಾ, ಬೆಡ್ ಇತ್ಯಾದಿಗಳನ್ನು ಎಲ್ಲಿ ಇಟ್ಟರೆ ಒಳ್ಳೆಯದು ಎನ್ನುವುದನ್ನು ಸಹ ವಾಸ್ತುಶಾಸ್ತ್ರ ಹೇಳುತ್ತದೆ. ಹಾಗಾಗಿ ಇಂತಹ ವಸ್ತುಗಳನ್ನು ಇಡುವಂತಹ ಸ್ಥಳದ ಮಹತ್ವ ಏನು ಎನ್ನುವುದನ್ನು ಈಗ ನಾವು ತಿಳಿದುಕೊಳ್ಳೋಣ.

ಇಂದಿನ ಆಧುನಿಕ ಕಾಲದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ನಮ್ಮ ದೈನಂದಿನ ಜೀವನದಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತದೆ. ಟಿವಿ, ಫ್ರಿಡ್ಜ್ ನಾವು ನಿತ್ಯ ಬಳಸುವಂತಹ ವಸ್ತುಗಳು ಇವುಗಳನ್ನು ಇಡುವಂತಹ ದಿಕ್ಕುಗಳು ಕೂಡ ವಿದ್ಯುತ್ ಅನ್ನು ಉಳಿಸುವುದರ ಜೊತೆಗೆ ಮನೆಯ ಸಮೃದ್ಧಿಯನ್ನು ಸಹ ಕಾಪಾಡುತ್ತವೆ ಎನ್ನುವ ವಿಷಯ ನಿಮಗೆ ತಿಳಿದಿರಲಿ.

ಈ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ದೀರ್ಘಕಾಲ ಬಾಳಿಕೆಯು ಬರುತ್ತದೆ ಜೊತೆಗೆ ಸಂತೋಷವೂ ಹಾಗೂ ಮನೆ ಮಂದಿಯ ಆರೋಗ್ಯವು ಕೂಡ ವೃದ್ಧಿಯಾಗುತ್ತದೆ. ಹಾಗಾದರೆ ನಿಮ್ಮ ಮನೆಯ ವಾಸ್ತುವಿನ ಅನುಗುಣ ವಾಗಿ ರೆಫ್ರಿಜರೇಟರ್ ಹಾಗೂ ಟಿವಿಯನ್ನು ಯಾವ ದಿಕ್ಕಲಿ ಹಾಗೂ ಯಾವ ಸ್ಥಳದಲ್ಲಿ ಇಡಬೇಕು ಹಾಗೂ ಇದರಿಂದ ಆಗುವ ಪ್ರಯೋಜನ ಏನು ಎನ್ನುವುದನ್ನು ನೋಡೋಣ.

* ವಾಸ್ತು ಶಾಸ್ತ್ರದ ಪ್ರಕಾರ ಟಿವಿ ಮತ್ತು ಫ್ರಿಡ್ಜ್ ಯಾವಾಗಲೂ ಆಗ್ನೇಯ ವಾಗಿರಬೇಕು. ಈ ದಿಕ್ಕನ್ನು ಆಗ್ನೇಯ ದಿಕ್ಕು ಎಂದು ಪರಿಗಣಿಸಲಾಗು ತ್ತದೆ. ಎಲೆಕ್ಟ್ರಾನಿಕ್ ವಸ್ತುಗಳನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಬೇಗ ಹಾಳಾಗುವುದಿಲ್ಲ ಹಾಗೂ ಆ ಮನೆಯಲ್ಲಿ ಸಂತೋಷ ಸಮೃದ್ಧಿಯು ಸದಾ ಕಾಲ ನೆಲೆಸುತ್ತದೆ.

* ವಾಸ್ತುವಿನ ಪ್ರಕಾರ ಆಗ್ನೇಯ ದಿಕ್ಕಿನಲ್ಲಿ ಟಿವಿ ಮತ್ತು ಫ್ರಿಡ್ಜ್ ಅನ್ನು ಇಡುವುದಕ್ಕೆ ಜಾಗ ಇಲ್ಲದಿದ್ದರೆ ಉತ್ತರ ದಿಕ್ಕಿನಲ್ಲಿಯೂ ಸಹ ಇಡ ಬಹುದು. ಆದರೆ ಈಗ ನಾವು ಹೇಳುವಂತಹ ವಸ್ತುಗಳನ್ನು ಎಂದಿಗೂ ಈಶಾನ್ಯ ದಿಕ್ಕಿನಲ್ಲಿ ಇಡಬಾರದು. ಹಾಗೇನಾದರೂ ಇಟ್ಟರೆ ಕುಟುಂಬ ಸದಸ್ಯರ ಆರೋಗ್ಯದ ಮೇಲೆ ಅದು ನೇರವಾಗಿ ಪರಿಣಾಮ ಬೀರುತ್ತದೆ.

* ಹಾಗೆಯೇ ವಾಸ್ತು ಶಾಸ್ತ್ರದ ಪ್ರಕಾರ ರೆಫ್ರಿಜರೇಟರ್ ನ ಬಾಗಿಲು ಯಾವಾಗಲೂ ಪೂರ್ವದ ಕಡೆಗೆ ತೆಗೆಯುವಂತೆ ಇರಬೇಕು. ಇದಕ್ಕೆ ಕಾರಣ ಸೂರ್ಯನ ದಿಕ್ಕು ಪೂರ್ವ ದಿಕ್ಕು. ಹೀಗಾಗಿ ಸೂರ್ಯನಿಂದ ಬಿಡುಗಡೆಯಾಗುವಂತಹ ಸಕಾರಾತ್ಮಕ ಶಕ್ತಿ ರೆಫ್ರಿಜರೇಟರ್ ನಲ್ಲಿ ಇರುವಂತಹ ಆಹಾರವನ್ನು ಪ್ರವೇಶಿಸುವ ಮೂಲಕ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅದೇ ರೀತಿ ವಾಸ್ತುವಿನಲ್ಲಿ ಹೇಳುವ ಪ್ರಕಾರ ಮನೆಯ ದಕ್ಷಿಣ ದಿಕ್ಕಿನಲ್ಲಿ ಎಂದಿಗೂ ಫ್ರಿಡ್ಜ್ ಅನ್ನು ಇಡಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮನೆಯಲ್ಲಿ ಕನ್ನಡಿ ಈ ದಿಕ್ಕಿನಲ್ಲಿ ಹಾಕಿದ್ರೆ ಸರ್ವನಾಶ ಆಗೋದು ಖಚಿತ.!

 

ನಿಮ್ಮ ಮನೆಯಲ್ಲಿ ನೀವು ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಹಾಕಿದ್ದೀರಿ ಎನ್ನುವುದನ್ನು ಪರೀಕ್ಷಿಸಿ ನೋಡಿ. ಅದರ ಮೇಲೆ ನಿರ್ಧಾರವಾಗುತ್ತದೆ ನಿಮ್ಮ ಮನೆಯ ಶಾಂತಿ ನೆಮ್ಮದಿ ಸಂತೋಷ ಸಮೃದ್ಧಿ ಆದಾಯ ಎಲ್ಲವೂ. ಹೌದು ಒಂದು ಕನ್ನಡಿ ಇಡೀ ಬದುಕನ್ನೇ ಬದಲಾಯಿಸುತ್ತದೆ ಎಂದರೆ ನೀವು ನಂಬುತ್ತೀರಾ ಆದರೆ ನಂಬಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ.

ಒಂದು ಮಿರರ್ ಮಿರಾಕಲ್ ಮಾಡಿಬಿಡುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಹೌದು ನಿಮ್ಮ ಜೀವನದಲ್ಲಿ ಮಿರರ್ ಒಂದು ಮ್ಯಾಜಿಕ್ ಅನ್ನೇ ಮಾಡಿಬಿಡುತ್ತಂತೆ. ಹಾಗಾದರೆ ಈ ದಿನ ನಾವು ಹೇಳುವಂತಹ ಮಾಹಿತಿ ನಿಮಗೆ ತಿಳಿದರೆ ಅವರು ಇದು ನಿಜ ಎಂದು ನಿಮಗೆ ಮನವರಿಕೆಯಾಗುತ್ತದೆ. ಹಾಗಾದರೆ ಈಗಿನ ಮನೆಯಲ್ಲಿ ಎಂತಹ ಕನ್ನಡಿಯನ್ನು ಇಟ್ಟುಕೊಳ್ಳಬೇಕು?

ಇತ್ತೀಚಿನ ದಿನದಲ್ಲಿ ಮಿರರ್ ಎನ್ನುವುದು ಫ್ಯಾಷನ್ ಆಗಿ ಬದಲಾಗಿ ವಿವಿಧ ರೂಪದ ಮಿರರ್ ಗಳನ್ನು ನಾವು ನೋಡುತ್ತೇವೆ. ಹಾಗಾದರೆ ಮನೆಯಲ್ಲಿ ಯಾವ ರೀತಿಯಾಗಿ ಒಳ್ಳೆಯದಾಗುತ್ತದೆ ಎಂದರೆ ಎಂತಹ ಕನ್ನಡಿಯನ್ನು ಬಳಸಬೇಕು ಯಾವ ದಿಕ್ಕಿನಲ್ಲಿ ಈ ಕನ್ನಡಿಯನ್ನು ಇಟ್ಟರೆ ನಮ್ಮ ಮನೆಗೆ ಶುಭವಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

* ಸಾಮಾನ್ಯವಾಗಿ ಮನೆಯಲ್ಲಿ ಕನ್ನಡಿಯನ್ನು ಚೌಕಾಕಾರವಾಗಿ ಇರು ವಂತಹ ಕನ್ನಡಿಯನ್ನು ಇಟ್ಟುಕೊಳ್ಳುತ್ತೇವೆ ಆದರೆ ಇದು ತಪ್ಪು ಯಾವಾ ಗಲೂ ಉದ್ದನೆಯ ನಿಲುಗನ್ನಡಿಯನ್ನು ಯಾವಾಗಲೂ ಬಳಸಬೇಕು ಎಂದು ಹೇಳುತ್ತಾರೆ ವಾಸ್ತು ತಜ್ಞರು. ನೀವು ಮನೆಯಲ್ಲಿ ನಿಲುಗನ್ನಡಿ ಯನ್ನು ಇಟ್ಟು ನೋಡಿ ಮನೆಯಲ್ಲಿ ಆಗುವ ಶುಭ ಕಾರ್ಯಗಳು ನಿಮಗೆ ಅದರ ಸೂಚನೆಯನ್ನು ಹೇಳಿಬಿಡುತ್ತವೆ ಎನ್ನುತ್ತಾರೆ.

* ಯಾವಾಗಲೂ ಒಂದೇ ಶೇಪ್ ನ ಕನ್ನಡಿಯನ್ನು ಇಟ್ಟುಕೊಳ್ಳುವುದು ಕೂಡ ಶುಭ ಪ್ರಧವಲ್ಲ ಅಪ್ಪಿತಪ್ಪಿಯು ಉತ್ತರ ದಿಕ್ಕಿಗೆ ಚೌಕಕಾರದ ಕನ್ನಡಿಯನ್ನು ಇಡಲೇಬಾರದು. ಹಾಗೇನಾದರೂ ಆ ದಿಕ್ಕಿನಲ್ಲಿ ಇದ್ದರೆ ಎಂತಹ ಕಷ್ಟದ ಪರಿಸ್ಥಿತಿಗಳು ಎದುರಾಗುತ್ತದೆ ಎಂದು ನಿಮ್ಮ ಕಣ್ಣ ಮುಂದೆಯೇ ಗೊತ್ತಾಗುತ್ತದೆ.

* ಅದೇ ಉತ್ತರ ದಿಕ್ಕಿಗೆ ವೃತ್ತಾಕಾರವಾಗಿರುವ ಕನ್ನಡಿಯನ್ನು ಇಟ್ಟು ನೋಡಿ ಆಗ ಆಗುವ ಒಳ್ಳೆಯ ಕೆಲಸಗಳು ಕೂಡ ನಿಮ್ಮ ಗಮನಕ್ಕೆ ಬರುತ್ತದೆ. ಇದಕ್ಕೆ ಒಂದು ವಿಚಾರವಿದೆ ಮನೆಯಲ್ಲಿ ಪಂಚಭೂತಗಳು ಸಮನಾಗಿ ಇರುತ್ತದೆ. ಅಗ್ನಿ ಭೂಮಿ ಜಲ ವಾಯು ಆಕಾಶ ಹೀಗೆ ಒಂದೊಂದಕ್ಕೂ ಒಂದೊಂದು ಆಕಾರ ಇರುತ್ತದೆ.

ಅದಕ್ಕೆ ಹೇಳಿದ್ದು ವಾಸ್ತು ತಜ್ಞರು ಒಂದೊಂದು ದಿಕ್ಕಿಗೂ ಒಂದೊಂದು ಆಕಾರದ ಕನ್ನಡಿಯನ್ನು ಇಡಬೇಕು ಎಂದು ಹೌದು ನೀರು ಮತ್ತು ಸ್ಪೇಸ್ ಇವೆರಡು ತತ್ವಗಳ ಮಿಶ್ರಣವೇ ಕನ್ನಡಿ. ಕೆಲವೊಂದು ಮನೆಗಳಲ್ಲಿ ಈಶಾನ್ಯ ಭಾಗ ಕಡಿಮೆ ಇರಬಹುದು ಅದನ್ನು ಗೋಡೆ ಕನ್ನಡಿ ಹಾಕುವುದರಿಂದ ಜಾಸ್ತಿ ಮಾಡಬಹುದು.

* ಪೂರ್ವ ದಿಕ್ಕಿನಲ್ಲಿ ಕನ್ನಡಿಯನ್ನು ಹಾಕಬೇಕಾದರೆ ನೀವು ಖಂಡಿತವಾಗಿ ಯಾವುದೇ ಕಾರಣಕ್ಕೂ ಚೌಕಾಕಾರದ ಕನ್ನಡಿಯನ್ನು ಬಳಸಲೇಬೇಡಿ. ಬದಲಿಗೆ ಯಾವಾಗಲೂ ಉದ್ದವಾಗಿರುವ ನಿಲುಗನ್ನಡಿಯನ್ನೇ ಹಾಕಬೇಕು. ಆಗ ಮಾತ್ರ ಉತ್ತಮವಾದ ಫಲಿತಾಂಶ ನಿಮಗೆ ಸಿಗುತ್ತದೆ. ಧನಾಗಮನವೂ ಕೂಡ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತದೆ.

* ಹಾಗಾದರೆ ಚೌಕಾಕಾರವಾಗಿರುವಂತಹ ಕನ್ನಡಿಯನ್ನು ಯಾವ ದಿಕ್ಕಿ ನಲ್ಲಿ ಇಡಬೇಕು ಎಂದು ನೋಡುವುದಾದರೆ ಪಶ್ಚಿಮ ದಿಕ್ಕಿನಲ್ಲಿ ಇಡ ಬೇಕು. ಈ ದಿಕ್ಕಿನಲ್ಲಿ ಕನ್ನಡಿ ಹಾಕುವುದರಿಂದ ನಿಮಗೆ ಒಳ್ಳೆಯ ಶುಭ ಘಟನೆಗಳು ಜರಗುವುದಕ್ಕೆ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಮನೆಯಲ್ಲಿ ಬೀರುವನ್ನು ಈ ದಿಕ್ಕಿಗೆ ಇಟ್ಟರೆ ಅದೃಷ್ಟವೋ ಅದೃಷ್ಟ.!

ಹಣ ನಮ್ಮ ಅಗತ್ಯತೆಯನ್ನು ಪೂರೈಸುವಂತಹ ವಸ್ತು. ಹಣ ಎನ್ನುವ ವಸ್ತು ಇಲ್ಲದೆ ಯಾರು ಕೂಡ ನೆಮ್ಮದಿಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಹಣ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಅತ್ಯಗತ್ಯವಾಗಿದೆ ಹಣವಿಲ್ಲದೆ ಜೀವನದಲ್ಲಿ ಏನನ್ನು ಪಡೆದು ಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.

ಲಕ್ಷ್ಮಿ ದೇವಿಯ ಪ್ರತಿರೂಪವಾಗಿ ರುವಂತಹ ಹಣ ಹಾಗೂ ಹಣದ ಪೆಟ್ಟಿಗೆಯನ್ನು ಮನೆಯಲ್ಲಿ ವಿಶೇಷ ವಾದ ಸ್ಥಾನದಲ್ಲಿ ಇಟ್ಟು ಪೂಜಿಸಬೇಕು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಮನೆಯಲ್ಲಿ ಹಣವನ್ನು ಯಾವ ಸ್ಥಳದಲ್ಲಿ ಹಾಗೂ ಹಣವನ್ನು ಯಾವ ದಿಕ್ಕಿನಲ್ಲಿ ಇಡುತ್ತೇವೆ ಎನ್ನುವುದರ ಆಧಾರದ ಮೇಲೆ ಸಂತೋಷ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ.

ಜೀವನದಲ್ಲಿ ಎಂದಿಗೂ ಹಣಕಾಸಿನ ಕೊರತೆಯಾಗಬಾರದು ವ್ಯಾಪಾರ ವ್ಯವಹಾರಗಳಲ್ಲಿ ನಿರಂತರವಾಗಿ ಹಣದ ಹರಿವು ಇರಬೇಕು ಎಂದರೆ ಕೆಲವು ನಿಯಮಗಳನ್ನು ಅನುಸರಿಸಬೇಕು. ಹಾಗಾದರೆ ಆ ನಿಯಮ ಗಳು ಯಾವುದು ಎನ್ನುವುದನ್ನು ಈ ದಿನ ತಿಳಿದುಕೊಳ್ಳೋಣ. ಮನೆಯಲ್ಲಿ ಹಣ ಇಡುವಂತಹ ಸ್ಥಳ ಹಾಗೂ ಒಡವೆಗಳನ್ನು ಇಡುವಂತಹ ಬೀರು ಅಥವಾ ತಿಜೋರಿಗಳ ವಿಷಯದಲ್ಲಿಯೂ ವಾಸ್ತು ಶಾಸ್ತ್ರದ ಪಾಲನೆ ಬಹಳ ಮುಖ್ಯವಾಗಿರುತ್ತದೆ.

ಮನೆಯ ಯಾವುದಾದರೂ ಒಂದು ಕೋಣೆಯಲ್ಲಿ ಈ ಬೀರು ಇದ್ದರೆ ಆಯಿತು ಎಂದು ಉದಾ ಸೀನ ಮಾಡುವುದರಿಂದಲೇ ಆರ್ಥಿಕ ಸಂಕಷ್ಟ ಎದುರಾಗುವುದು. ಇದೇ ಕಾರಣಕ್ಕೆ ಮನೆಯ ಸಂಪತ್ತನ್ನು ಹೊಂದಿರುವಂತಹ ಈ ಬೀರುಗಳು ಸರಿಯಾದ ವಾಸ್ತು ದಿಕ್ಕಿನಲ್ಲಿ ಇರಬೇಕು ಅಂತ ಹೇಳಲಾಗುತ್ತದೆ. ಮನೆಯ ಕೊಠಡಿಯ ಉದ್ದಳತೆ ಹಾಗೂ ಕೆಲವು ವಸ್ತುಗಳನ್ನು ನಮಗೆ ಹೇಗೆ ಅನುಕೂಲವಾಗುತ್ತದೆಯೋ ಹಾಗೆ ವಸ್ತುಗಳನ್ನು ಜೋಡಿಸಿ ಕೊಳ್ಳುತ್ತೇವೆ.

ಆದರೆ ಹೀಗೆ ಮಾಡುವುದು ತಪ್ಪು ಇದರಿಂದ ನಮ್ಮ ಹಣದ ಹರಿವು ಐಶ್ವರ್ಯ ಕುಂಠಿತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಹಣವನ್ನು ಇಡುವಂತಹ ಪೆಟ್ಟಿಗೆ ಅಥವಾ ಬೀರುವನ್ನು ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಆಗ ಲಕ್ಷ್ಮಿ ದೇವಿ ಯು ಆಕರ್ಷಿಗಳಾಗುತ್ತಾಳೆ ಮತ್ತು ಮನೆಯಲ್ಲಿ ಯಾವುದೇ ಕುಂದು ಕೊರತೆ ಉಂಟಾಗುವುದಿಲ್ಲ ಹಾಗೂ ಅಗತ್ಯಕ್ಕೆ ಬೇಕಾಗಿರುವಂತಹ ಹಣಕಾಸು ನಿರಂತರವಾಗಿ ಹರಿದು ಬರುತ್ತದೆ.

ಹಣವನ್ನು ಇಡುವಂತಹ ಪೆಟ್ಟಿಗೆ ಅಥವಾ ಬೀರುವನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು ಹಾಗೇನಾ ದರೂ ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಹಣಕಾಸಿನ ಕೊರತೆಗಳು ಒಂದರ ಮೇಲೊಂದು ತಲೆದೂರುತ್ತಲೆ ಇರುತ್ತದೆ. ಹಣದ ಪೆಟ್ಟಿಗೆ ಅಥವಾ ಬೀರುವನ್ನು ತೆರೆಯುವ ದಿಕ್ಕು ಕೂಡ ಅತ್ಯಂತ ಪ್ರಮುಖ ಸ್ಥಾನವನ್ನು ವಹಿಸುತ್ತದೆ. ಬೀರುವನ್ನು ತೆಗೆಯುವಾಗ ಅದರ ಬಾಗಿಲು ದಕ್ಷಿಣ ಭಾಗಕ್ಕೆ ತೆಗೆದುಕೊಳ್ಳುವ ಹಾಗೆ ಇಡಬಾರದು.

ದಕ್ಷಿಣ ಭಾಗಕ್ಕೆ ಬಾಗಿಲು ತೆಗೆಯುವಂತಹ ಮನೆಯಲ್ಲಿ ಲಕ್ಷ್ಮಿ ದೇವಿ ವಾಸಿಸುವುದಿಲ್ಲ ಅಂಥವರ ಮನೆಯಲ್ಲಿ ಹಣಕಾಸಿನ ತೊಂದರೆಗಳು ಹೆಚ್ಚಾಗುತ್ತದೆ. ಹಾಗೂ ಹಣಕಾಸಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಎದು ರಿಸಬೇಕಾಗಬಹುದು. ಹಣವನ್ನು ಎಂದಿಗೂ ನೆಲದ ಮೇಲೆ ಇಡಬಾರದು ಮನೆಯ ಗೋಡೆಗೆ ಕಪಾಟುಗಳನ್ನು ಅಳವಡಿಸಿ ಅಲ್ಲಿ ಹಣವನ್ನು ಇಡಬಹುದು.

ಆದರೆ ನೆಲಕ್ಕೆ ತಾಕುವಂತೆ ನೇರವಾಗಿ ಹಣಕಾಸನ್ನು ಇಡಬಾರದು. ಹಣದ ಪೆಟ್ಟಿಗೆಯನ್ನು ಸಹ ನೆಲದ ಮೇಲೆ ನೇರವಾಗಿ ಇಡಬಾರದು ಯಾವುದಾದರೂ ಮರದ ಹಲಗೆ ಅಥವಾ ಬಟ್ಟೆಯನ್ನು ಹಾಕಿ ಅದರ ಮೇಲೆ ಇಡುವುದು ಸೂಕ್ತ. ಹಣದ ಪೆಟ್ಟಿಗೆಯನ್ನು ಸಾಕ್ಷಾತ್ ಲಕ್ಷ್ಮಿ ದೇವಿಯ ರೂಪ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ನೆಲದ ಮೇಲೆ ನೇರವಾಗಿ ಹಣವನ್ನು ಹಣದ ಪೆಟ್ಟಿಗೆಯನ್ನು ಇಟ್ಟರೆ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಕರಿಬೇವಿನ ಸೊಪ್ಪಿನ ಎಲೆಯಿಂದ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಗೊತ್ತ.!

 

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿಯೂ ಕೂಡ ಕರಿಬೇವು ಇದ್ದೇ ಇರುತ್ತದೆ ಇದನ್ನು ಕೇವಲ ಅಡುಗೆಗಷ್ಟೇ ಉಪಯೋಗಿಸುವುದಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳಿಗೂ ಕೂಡ ಇದನ್ನು ಯಥೇಚ್ಛವಾಗಿ ಉಪಯೋಗಿಸಬಹುದು ಎಂದು ಹೇಳಬಹುದು.

ಹೌದು ಕರಿ ಬೇವಿನ ಎಲೆಗಳು ನಮ್ಮ ಅಡುಗೆಯ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ನಮ್ಮ ಕೂದಲಿನ ಆರೋಗ್ಯವಾಗಿರಬಹುದು ನಮ್ಮ ದೇಹದ ಆರೋಗ್ಯಕ್ಕೆ ಹೀಗೆ ಹತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ಇದು ನಮಗೆ ಒದಗಿಸಿಕೊಡುತ್ತದೆ. ಹಾಗಾಗಿ ಇದರ ಒಂದು ಗುಣ ಒಟ್ಟಾರೆಯಾಗಿ ನಮ್ಮ ಎಲ್ಲಾ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ವನ್ನು ಬೀರುತ್ತದೆ ಎಂದೇ ಹೇಳಬಹುದು.

ಹಾಗಾದರೆ ಈ ದಿನ ಕರಿಬೇವಿನ ಎಲೆಯನ್ನು ಯಾವ ರೀತಿಯಾಗಿ ಉಪಯೋಗ ಮಾಡುವುದರಿಂದ ಯಾವುದೆಲ್ಲ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿಯೋಣ.

ಮೊದಲನೆಯದಾಗಿ ಕರಿಬೇವು ಯಾವ ಪೋಷಕಾಂಶಗಳನ್ನು ಹೊಂದಿದೆ ಎಂದು ನೋಡುವುದಾದರೆ ವಿಟಮಿನ್ ಸಿ, ಕ್ಯಾಲ್ಸಿಯಂ, ಐರನ್, ಥಯಾಮಿನ್, ಜಿಂಕ್, ಹಾಗೂ ಸ್ವಲ್ಪ ಪ್ರಮಾಣದ ಫೈಬರ್ ಅಂಶವನ್ನು ಸಹ ಇದು ಒಳಗೊಂಡಿರುತ್ತದೆ. ಈ ಎಲ್ಲ ಪೋಷಕ ತತ್ವ ಗುಣವನ್ನು ಹೊಂದಿರುವಂತಹ ಕರಿಬೇವು ಸರ್ವೇ ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲಿಯೂ ಕೂಡ ಸಿಗುತ್ತದೆ ಹಾಗೂ ಇದನ್ನು ಅಡುಗೆಗಳಲ್ಲಿ ಉಪಯೋಗಿಸುತ್ತಾರೆ ಎನ್ನಬಹುದು.

ಮೊದಲೇ ಹೇಳಿದಂತೆ ಕರಿಬೇವು ಪ್ರತಿಯೊಂದು ಆಹಾರ ಪದಾರ್ಥ ತಯಾರಿಸುವಲ್ಲಿಯೂ ಕೂಡ ಉಪಯೋಗಿಸುತ್ತಾರೆ. ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಹಾರ ಪದಾರ್ಥಗ ಳನ್ನು ತಯಾರಿಸುತ್ತಾರೆ. ಆದರೆ ಆ ಎಲ್ಲಾ ಆಹಾರ ಪದಾರ್ಥಗಳಲ್ಲಿಯೂ ಕೂಡ ಕರಿಬೇವಿನ ಎಲೆಗಳನ್ನು ಉಪಯೋಗಿಸುವುದು ಸಾಮಾನ್ಯ.

ಹಾಗಾದರೆ ಕರಿಬೇವಿನ ಎಲೆಗಳನ್ನು ಉಪಯೋಗ ಮಾಡುವುದರಿಂದ ಯಾವುದೆಲ್ಲ ಆರೋಗ್ಯ ಪ್ರಯೋಜನ ಉಂಟಾಗುತ್ತದೆ ಎಂದು ನೋಡುವುದಾದರೆ. ಮೊದಲನೆಯದಾಗಿ ಇದರಲ್ಲಿ ಇರುವಂತಹ ಕ್ಯಾಲ್ಸಿಯಂ ನಮ್ಮ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುವಲ್ಲಿ ಬಹಳ ಪ್ರಮುಖವಾದ ಕಾರ್ಯ ನಿರ್ವಹಿಸುತ್ತದೆ.

ಅಸ್ತಿ ಮಂಡಲದಲ್ಲಿ ಆರೋಗ್ಯ ಸಮಸ್ಯೆ ಉಂಟಾಯಿತು ಎಂದರೆ ಆ ಮನುಷ್ಯನಲ್ಲಿ ಸುಸ್ತು, ನಿಶಕ್ತಿ ಹೀಗೆ ಇನ್ನೂ ಹಲವಾರು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಯಥೇಚ್ಛವಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಕರಿಬೇವಿನ ಎಲೆಗಳನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು.

ಕರಿಬೇವಿನ ಸೊಪ್ಪಿನಲ್ಲಿ ಇರುವಂತಹ ಕ್ಯಾಲ್ಸಿಯಂ ಐರನ್ ಜಿಂಕ್ ಅಂಶವು ನಮ್ಮ ಮಾಂಸ ಖಂಡಗಳ ಆರೋಗ್ಯವನ್ನು ಕೂಡ ಹೆಚ್ಚಿಸು ತ್ತದೆ. ಮಾಂಸಖಂಡಗಳಿಗೆ ಬೇಕಾದ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ಪ್ರಮುಖವಾದದ್ದು. ಹಾಗೂ ಕರಿಬೇವಿನ ಎಲೆ ಸೇವನೆ ಮಾಡುವುದರಿಂದ ನಮ್ಮ ಕಣ್ಣಿನ ಆರೋಗ್ಯವು ಕೂಡ ಹೆಚ್ಚಾಗುತ್ತದೆ. ದೂರ ದೃಷ್ಟಿ ದೋಷ ಸಮೀಪ ದೃಷ್ಟಿ ದೋಷ ಹೀಗೆ ಕಣ್ಣಿಗೆ ಸಂಬಂಧಿಸಿದ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ಕೂಡ ಅವೆಲ್ಲವನ್ನು ಇದು ದೂರಮಾಡುತ್ತದೆ.

ಇದನ್ನು ಆಂಟಿ ಡಯಾಬಿಟೀಸ್ ಎಂದೇ ಹೇಳಬಹುದು. ಎರಡರಿಂದ ನಾಲ್ಕು ಕರಿಬೇವಿನ ಎಲೆಗಳನ್ನು ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ ನಮ್ಮ ರಕ್ತದಲ್ಲಿ ಇರುವಂತಹ ಗ್ಲುಕೋಸ್ ನ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಇದು ನಮ್ಮ ಪ್ಯಾಂಕ್ರಿಯಾಸ್ ಗ್ರಂಥಿಯನ್ನು ಕ್ರಿಯಾಶೀಲಗೊಳಿಸಿ ಬೀಟಾ ಜೀವಕೋಶಗಳನ್ನು ಕ್ರಿಯಾಶೀಲಗೊಳಿಸುವುದರೊಂದಿಗೆ ಇನ್ಸುಲಿನ್ ಮಟ್ಟವನ್ನು ಸಮತೋಲನದಲ್ಲಿರಿಸುವಂತಹ ಒಂದು ದಿವ್ಯ ಶಕ್ತಿಯಾಗಿ ಕೆಲಸ ಮಾಡುತ್ತದೆ ಹಾಗೂ ಇದು ನರನಾಡಿಗಳಲ್ಲಿ ಕಟ್ಟಿಕೊಂಡಿರುವಂತಹ ಬ್ಲಾಕೇಜಸ್ ಗಳನ್ನು ದೂರ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.