Home Blog Page 130

ಬೆಂಡೆಕಾಯಿ ಹೆಚ್ಚು ದಿನ ತಾಜಾ ಇರಲು ಹೀಗೆ ಮಾಡಿ ನೋಡಿ.!

 

ಸಾಮಾನ್ಯವಾಗಿ ಜನರು ಸಮಯ ಮತ್ತು ದುಡ್ಡು ಉಳಿಸಲು ತಾಜಾ ತರಕಾರಿಗಳನ್ನು ವಾರಕ್ಕಾಗುವಷ್ಟು ಕೊಳ್ಳುತ್ತಾರೆ. ಆದರೆ ಕೆಲವು ತರಕಾರಿಗಳು ಬೇಗನೆ ಒಣಗಿ, ಹಾಳಾಗುತ್ತವೆ. ಇಂಥ ತರಕಾರಿಗಳಲ್ಲಿ ಬೆಂಡೆಕಾಯಿಯೂ ಒಂದು ಹೌದು ಬೆಂಡೆಕಾಯಿಯನ್ನು ಸೇವನೆ ಮಾಡುವುದರಿಂದ ಪ್ರತಿಯೊಂದು ಆರೋಗ್ಯ ಸಮಸ್ಯೆಯೂ ಸಹ ದೂರವಾಗುತ್ತದೆ ಎಂದೇ ಹೇಳಬಹುದು.

ಇದರಲ್ಲಿ ಯಥೇಚ್ಛವಾದಂತಹ ಪೌಷ್ಟಿಕಾಂಶಗಳು ಇದ್ದು ಇದನ್ನು ನಮ್ಮ ಆಹಾರ ಕ್ರಮದಲ್ಲಿ ಅಳವಡಿಸಿ ಕೊಳ್ಳುವುದು ತುಂಬಾ ಒಳ್ಳೆಯದು. ವೈದ್ಯರು ನಮ್ಮ ಆಹಾರ ಕ್ರಮದಲ್ಲಿ ಇದನ್ನು ಅಳವಡಿಸಿಕೊಳ್ಳುವಂತೆ ಸೂಚನೆಯನ್ನು ಸಹ ನೀಡುತ್ತಾರೆ. ಅದರಂತೆಯೇ ಬೆಂಡೆಕಾಯಿಯನ್ನು ಹಸಿಯಾಗಿ ಕತ್ತರಿಸಿ ಅದನ್ನು ನೀರಿ ನಲ್ಲಿ ಹಾಕಿ ಇಟ್ಟು ಬೆಳಗಿನ ಸಮಯ ಆ ನೀರನ್ನು ಶೋಧಿಸಿ ಕುಡಿಯುವುದರಿಂದ ಹಲವಾರು ರೀತಿಯ ಸಮಸ್ಯೆಗಳು ದೂರವಾಗುತ್ತದೆ ಎಂದು ಸಹ ಹೇಳುತ್ತಾರೆ.

ಹೀಗೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವಂತಹ ಬೆಂಡೆಕಾಯಿಯನ್ನು ಹೆಚ್ಚು ದಿನಗಳ ಕಾಲ ತಾಜಾವಾಗಿಡಲು ಅನೇಕ ಉಪಾಯಗಳಿವೆ. ಹೌದು ಯಾವುದೇ ಫ್ರಿಡ್ಜ್ ಬಳಸದೆ ಅದನ್ನು ಹೇಗೆ ಹೆಚ್ಚು ದಿನಗಳ ಕಾಲ ಫ್ರೆಶ್ ಆಗಿರುವಂತೆ ಇಡಬಹುದು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದು ಕೊಳ್ಳುತ್ತಾ ಹೋಗೋಣ.

* ಮೃದುವಾಗಿರುವ ಮತ್ತು ಕಡಿಮೆ ಬೀಜಗಳಿರುವ ಬೆಂಡೆಕಾಯಿಗಳನ್ನು ಖರೀದಿಸಿ. ಬೆಂಡೆಕಾಯಿಯನ್ನು ಬೆರಳಲ್ಲಿ ಹಗುರವಾಗಿ ಒತ್ತಿದರೆ ಅದರ ಮೃದುತ್ವ ಗೊತ್ತಾಗುತ್ತದೆ. ಸಾಧ್ಯವಾದಷ್ಟು ಸಣ್ಣ ಗಾತ್ರದ ಮತ್ತು ದಟ್ಟ ಹಸಿರು ಬಣ್ಣದ ಬೆಂಡೆಕಾಯಿಗಳನ್ನು ಖರೀದಿಸಿ.
* ಮನೆಗೆ ತಂದ ನಂತರ ಅದನ್ನು ಹರಡಿಸಿ ನೀರಿನ ಪಸೆ ಹೋಗುವವರೆಗೆ ಸಂಪೂರ್ಣ ಒಣಗಿಸಿ. ಬಳಿಕ ಇದನ್ನು ಒಣ ಬಟ್ಟೆಯಲ್ಲಿ ಸುತ್ತಿ ಗಾಳಿಯಾಡದ ಕಂಟೇನರ್‌ನಲ್ಲಿಡಿ. ಬೆಂಡೆಕಾಯಿಯಲ್ಲಿ ಸ್ವಲ್ಪ ನೀರಿನ ಪಸೆಯಿದ್ದರೂ ಅದು ಬೇಗ ಹಾಳಾಗುತ್ತದೆ.

* ಬೆಂಡೆಕಾಯಿಯನ್ನು ಫ್ರಿಜ್‌ನಲ್ಲಿ ಇಡುವುದಾದರೆ ಪಾಲಿಥೀನ್ ಅಥವಾ ವೆಜಿಟೇಬಲ್ ಬ್ಯಾಗ್‌ನೊಳಗಿಟ್ಟು ಬ್ಯಾಗ್ ಗೆ ಎರಡು ತೂತು ಮಾಡಿ ಫ್ರಿಜ್‌ನಲ್ಲಿಡಿ.
* ಫ್ರಿಜ್‌ನ ವೆಜಿಟೇಬಲ್ ಬಾಸ್ಕೆಟ್‌ನಲ್ಲಿ ಇಡುವುದಾದರೆ ಅದಕ್ಕೆ ಪೇಪರ್ ಹರಡಿಸಿ, ಅದರಲ್ಲಿ ಬೆಂಡೆಕಾಯಿಯನ್ನು ಒಂದರ ಪಕ್ಕ ಒಂದರಂತೆ ಇಡಿ. ಇದರಿಂದಾಗಿ ಬೆಂಡೆಕಾಯಿಯಲ್ಲಿರುವ ನೀರನ್ನು ಪೇಪರ್ ಹೀರಿಕೊಂಡು ತರಕಾರಿ ಫ್ರೆಶ್ ಆಗಿರುತ್ತದೆ.

* ಬೆಂಡೆಕಾಯಿಯನ್ನು ತೇವಾಂಶವಿರುವ ತರಕಾರಿ ಅಥವಾ ಹಣ್ಣುಗಳ ಜತೆಗೆ ಇಡಬೇಡಿ. ಇದರಿಂದ ಅವೆರಡೂ ಬೇಗನೆ ಹಾಳಾಗುತ್ತವೆ. ಬೆಂಡೆಕಾಯಿಯನ್ನು ಆದಷ್ಟು ಬೇಗನೆ ಅಡುಗೆ ಮಾಡಿ ತಿನ್ನಿ. ಇದನ್ನು ತುಂಬಾ ದಿನಗಳ ಕಾಲ ಇಟ್ಟರೆ ಅದರ ತಾಜಾತನ ಪೋಷಕಾಂಶ ಮತ್ತು ಅದರಲ್ಲಿರುವಂತಹ ರುಚಿಯು ಸಂಪೂರ್ಣವಾಗಿ ಹೋಗುತ್ತದೆ. ಆದ್ದರಿಂದ ಆದಷ್ಟು ಬೆಂಡೆಕಾಯಿಯನ್ನು ತಂದ ಸ್ವಲ್ಪ ದಿನಗಳ ಒಳಗೆ ಉಪಯೋಗಿಸುವುದು ಉತ್ತಮ.

ಕೇವಲ ಬೆಂಡೆಕಾಯಿ ಮಾತ್ರವಲ್ಲದೆ ನಾವು ತರುವಂತಹ ಪ್ರತಿಯೊಂದು ತರಕಾರಿ ಹಣ್ಣುಗಳನ್ನು ಕೂಡ ತಂದ ಸ್ವಲ್ಪ ದಿನದಲ್ಲಿಯೇ ಉಪಯೋ ಗಿಸಿ ಆನಂತರ ಬೇರೆ ತಂದು ಉಪಯೋಗಿಸುವುದು ಒಳ್ಳೆಯದು. ಹೆಚ್ಚು ದಿನಗಳ ಕಾಲ ಎಲ್ಲಾ ತರಕಾರಿ ಹಣ್ಣುಗಳನ್ನು ಫ್ರಿಡ್ಜ್ ನಲ್ಲಿ ಇಡುವುದ ರಿಂದ ಅದರಲ್ಲಿ ಇರುವಂತಹ ಸತ್ವಗಳು ಅದರಲ್ಲಿ ಇರುವಂತಹ ಎಲ್ಲ ಪೋಷಕಾಂಶಗಳು ಕೂಡ ನಾಶವಾಗುತ್ತದೆ.

ಆದ್ದರಿಂದ ಯಾವುದು ಸಮಯಕ್ಕೆ ಸಿಗುವುದಿಲ್ಲವೋ ಅಂತಹ ಕೆಲವೊಂದಷ್ಟು ಪದಾರ್ಥಗ ಳನ್ನು ಮಾತ್ರ ನೀವು ಫ್ರಿಡ್ಜ್ ನಲ್ಲಿ ಇಟ್ಟು ಅದನ್ನು ಉಪಯೋಗಿಸುವುದು ಒಳ್ಳೆಯದು. ಹೀಗೆ ಮೇಲೆ ಹೇಳಿದಂತಹ ಇಷ್ಟು ವಿಧಾನಗಳನ್ನು ನೀವು ಅನುಸರಿಸಿ ಬೆಂಡೆಕಾಯಿಯನ್ನು ಉಪಯೋಗಿಸುವುದರಿಂದ ಹೆಚ್ಚು ದಿನಗಳ ಕಾಲ ಫ್ರೆಶ್ ಆಗಿ ಇರುವ ಹಾಗೆ ನೋಡಿಕೊಳ್ಳಬಹುದು.

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ನೋಡಿ.!

 

ಆಹಾರ ಸೇವನೆ ಮಾಡುವ ಪದ್ಧತಿಯನ್ನು ನಾವು ಬದಲಾವಣೆ ಮಾಡಿಕೊಂಡರೆ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ. ನಾವು ಈಗ ಆಹಾರ ಸೇವನೆ ಮಾಡುವಂತಹ ವಿಧಾನ ತುಂಬಾ ಬದಲಾವಣೆ ಆಗುತ್ತಿದೆ ಎಂದು ಹೇಳಬಹುದು. ಹೌದು ಅವರ ಅನುಕೂಲಕ್ಕೆ ತಕ್ಕಂತೆ ಅನುಗುಣವಾಗಿ ಎಲ್ಲವನ್ನು ಬದಲಾಯಿಸಿಕೊಂಡು ನಮ್ಮ ಜೀವನ ಶೈಲಿಯನ್ನು ನಡೆಸುತ್ತಿದ್ದೇವೆ.

ಉದಾಹರಣೆಗೆ ಕೆಲವೊಂದಷ್ಟು ಜನ ಬೆಳಗಿನ ತಿಂಡಿ ಮಧ್ಯಾಹ್ನದ ಊಟ ರಾತ್ರಿ ಊಟ ಇವೆಲ್ಲವನ್ನು ಕೂಡ ಓಡಾಡಿಕೊಂಡು ನಿಂತು ತಮ್ಮ ಆಹಾರ ಸೇವನೆಯನ್ನು ಮಾಡುತ್ತಿದ್ದಾರೆ ಎಂದೇ ಹೇಳಬಹುದು. ಅದರಲ್ಲೂ ನಮ್ಮ ಆಹಾರ ಸೇವನೆಯನ್ನು ಹೋಟೆಲ್ ಗಳಲ್ಲಿ ಸ್ನೇಹಿತರ ಜೊತೆ ಕುಂತಲ್ಲಿಯೇ ನಿಂತಲ್ಲಿಯೇ ಮಾತನಾಡುತ್ತಾ ನಮ್ಮ ಆಹಾರ ಸೇವನೆಯನ್ನು ಮಾಡುತ್ತಿದ್ದೇವೆ.

ಆದರೆ ಇದು ಎಷ್ಟು ದೊಡ್ಡ ಅಪಾಯಕಾರಿ ಎಂದು ಯಾರಿಗೂ ಕೂಡ ತಿಳಿದಿಲ್ಲ. ಹೌದು ಬಹಳ ಹಿಂದಿನ ದಿನದಲ್ಲಿ ನಾವೆಲ್ಲರೂ ಗಮನಿಸಿ ರುವಂತೆ ಮನೆಯಲ್ಲಿ ಯಾವುದೇ ಆಹಾರ ಪದಾರ್ಥವನ್ನು ಸೇವನೆ ಮಾಡಬೇಕು ಎಂದರೆ ಕೈಕಾಲು ಮುಖ ತೊಳೆದು ನೆಲದ ಮೇಲೆ ಕುಳಿತು ನಮ್ಮ ಪದ್ಧತಿಯಂತೆ ಆಹಾರ ಸೇವನೆಯನ್ನು ಮಾಡುತ್ತಿದ್ದೆವು.

ಅದರಲ್ಲೂ ಮನೆಯಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಒಟ್ಟಾರೆಯಾಗಿ ಒಂದು ಕಡೆ ಕುಳಿತು ಕೆಲವೊಂದಷ್ಟು ಸಂತೋಷಕರವಾದಂತಹ ಮಾತುಗಳನ್ನು ಹೇಳುತ್ತಾ. ಹೀಗೆ ಎಲ್ಲಾ ರೀತಿಯ ವಿಚಾರಗಳನ್ನು ಚರ್ಚೆ ಮಾಡುತ್ತಾ ನಮ್ಮ ಆಹಾರ ಕ್ರಮವನ್ನು ಮುಗಿಸುತ್ತಿದ್ದೆವು.

ಆದರೆ ಇತ್ತೀಚಿನ ದಿನದಲ್ಲಿ ಮನೆಯಲ್ಲಿ ಮೂರು ಜನ ಇದ್ದರೆ ಮೂರು ಜನರು ಒಂದೊಂದು ಸಮಯದಲ್ಲಿ ಆಹಾರ ಸೇವನೆಯನ್ನು ಮಾಡುವಂತಹ ಪರಿಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಹೌದು ಇದರಿಂದ ಮನೆಯಲ್ಲಿರುವಂತಹ ಸದಸ್ಯರಲ್ಲಿ ಯಾವುದೇ ರೀತಿಯ ಹೊಂದಾಣಿಕೆ ಇಲ್ಲದಿರಲು ಇದು ಬಹಳ ಪ್ರಮುಖವಾದ ಕಾರಣವಾಗಿದೆ ಎಂದು ಹೇಳಬಹುದು.

ಆದರೆ ಎಲ್ಲರೂ ಒಟ್ಟಾಗಿ ಒಗ್ಗಟ್ಟಿನಿಂದ ಕುಳಿತು ಊಟ ಮಾಡುವುದರಲ್ಲಿ ಇರುವಂತಹ ಖುಷಿ ಇನ್ಯಾವುದರಲ್ಲೂ ಇಲ್ಲ ಎಂದೇ ನಮ್ಮ ಶಾಸ್ತ್ರ ಸಂಪ್ರದಾಯಗಳು ತಿಳಿಸುತ್ತದೆ. ಆದ್ದರಿಂದ ಅಂತಹ ಕೆಲವೊಂದಷ್ಟು ವಿಧಾನಗಳನ್ನು ನಾವು ಅನುಸರಿಸುವುದು ಒಳ್ಳೆಯದು.
ಹಾಗಾದರೆ ಈದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಯಾವುದೆಲ್ಲ ಪ್ರಯೋಜನ ಪಡೆಯಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

* ನಾವು ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ.
* ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗಲು ಸಹಾಯ ಮಾಡುತ್ತದೆ.
* ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಮ್ಮ ಮನಸ್ಸು ಪ್ರಶಾಂತವಾಗಿರುತ್ತದೆ.
* ನಮ್ಮ ಮೊಣಕಾಲು ಹಾಗೂ ಮೊಣ ಕೈ ಆರೋಗ್ಯ ಸುಧಾರಿಸುತ್ತದೆ.
* ಕುಟುಂಬದ ಜನರೊಂದಿಗೆ ಸಮಯ ಕಳೆಯಲು ನೆರವಾಗುತ್ತದೆ.

* ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಮುಖ್ಯವಾಗಿ ತೂಕವನ್ನು ಇಳಿಸುವವರಿಗೆ ತುಂಬಾ ಸಹಾಯವಾಗುತ್ತದೆ.
* ನಮಗೆ ಹೆಚ್ಚು ಆರಾಮದಾಯಕವಾಗಿ ಊಟ ಮಾಡಲು ಆಗುತ್ತದೆ.
* ಪದ್ಮಾಸನದಲ್ಲಿ ಕುಳಿತು ಊಟ ಮಾಡುವುದರಿಂದ ಮೈ ಕೈ ನೋವು ಕೂಡ ಮಾಯಾವಾಗುತ್ತದೆ.
* ಮೂಳೆಗಳಿಗೆ, ಮಾಂಸಖಂಡಗಳಿಗೆ ಸಂಬಂಧ ಪಟ್ಟ ಸಮಸ್ಯೆಗೆ ಪರಿಹಾರ ಇದು.

* ಕಿಬ್ಬೊಟ್ಟೆಯ ಅರೋಗ್ಯವು ಹೆಚ್ಚುತ್ತದೆ.
* ಹೆಣ್ಣು ಮಕ್ಕಳು ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ತಿಂಗಳ ಮುಟ್ಟು ಸಹ ಸರಿಯಾಗಿ ಆಗುತ್ತದೆ.
* ನೆಲದ ಮೇಲೆ ಕುಳಿತುಕೊಂಡು ಊಟ ಮಾಡುವಾಗ ನಾವು ಬಾಗಿ, ಎದ್ದು ಊಟ ಮಾಡುತ್ತೇವೆ. ಇದು ಆಹಾರವನ್ನು ಜಠರಕ್ಕೆ ಜಾರಲು ಸಹಕರಿಸುತ್ತದೆ.
* ನೀವು ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಸೊಂಟದ ಭಾಗಕ್ಕೆ ವ್ಯಾಯಾಮ ಸಿಗುತ್ತದೆ.

ಐಸ್ ಕ್ಯೂಬ್ ಮಸಾಜ್ ನಿಂದ ಮುಖಕ್ಕೆ ಎಷ್ಟೆಲ್ಲ ಪ್ರಯೋಜನ ಗೊತ್ತಾ.?

 

ನಮ್ಮ ಮುಖದ ಕಾಂತಿಯನ್ನು ಹೆಚ್ಚು ಮಾಡುವಲ್ಲಿ ಐಸ್ ಕ್ಯೂಬ್ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ. ಹೌದು ನಮ್ಮ ಮುಖದ ಮೇಲಿರುವಂತಹ ಕಪ್ಪು ಕಲೆ, ರಂಧ್ರಗಳು ಇವೆಲ್ಲವನ್ನು ಸಹ ಐಸ್ ಕ್ಯೂಬ್ ದೂರ ಮಾಡುತ್ತದೆ. ಹಾಗಾಗಿ ವಾರದಲ್ಲಿ ಎರಡರಿಂದ ಮೂರು ದಿನ ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿಕೊಳ್ಳುವುದು ಉತ್ತಮ. ಇದು ನಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ನಮ್ಮ ತ್ವಚೆ ಯಾವುದೇ ರೀತಿಯ ತೊಂದರೆಯಲ್ಲಿ ಇದ್ದರು ಅದನ್ನು ದೂರ ಮಾಡುತ್ತದೆ.

ಹಾಗಾಗಿ ಇದು ಬಹಳ ಅತ್ಯುತ್ತಮವಾದ ವಿಧಾನವಾಗಿದೆ. ಹಾಗೂ ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿದರೆ ನಮ್ಮ ಮುಖದಲ್ಲಿ ಉತ್ಪತ್ತಿಯಾಗುವಂತಹ ಎಣ್ಣೆಯ ಅಂಶವನ್ನು ದೂರ ಮಾಡುತ್ತದೆ.
ಹೌದು ಕೆಲವೊಂದಷ್ಟು ಜನರಿಗೆ ಎಷ್ಟೇ ಮುಖ ತೊಳೆದರೂ, ಎಷ್ಟೇ ಮೇಕಪ್ ಮಾಡಿದರು ಸ್ವಲ್ಪ ಸಮಯದಲ್ಲಿಯೇ ಅವರ ಮುಖವೆಲ್ಲ ಎಣ್ಣೆ ಆಗಿರುವ ಹಾಗೆ ಕಾಣಿಸುತ್ತದೆ.

ಈ ಒಂದು ಸಮಸ್ಯೆ ಕೆಲವೊಂದಷ್ಟು ಜನರಲ್ಲಿ ಇರುತ್ತದೆ. ಅಂತವರು ತಮ್ಮ ಮುಖಕ್ಕೆ ಐಸ್ ಕ್ಯೂಬ್ ಬಳಸಿ ಮಸಾಜ್ ಮಾಡಿಕೊಳ್ಳುವುದ ರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ. ಹಾಗಾದರೆ ಈ ದಿನ ಐಸ್ ಕ್ಯೂಬ್ ಅನ್ನು ನಾವು ಯಾವ ರೀತಿಯಾಗಿ ಉಪಯೋಗಿಸ ಬಹುದು ಅಂದರೆ ಯಾವ ಸಮಯದಲ್ಲಿ ಯಾವ ರೀತಿಯಾಗಿ ಬಳಕೆ ಮಾಡಿಕೊಂಡರೆ ಅದರಿಂದ ನಮಗೆ ಯಾವುದೆಲ್ಲ ರೀತಿಯ ಪ್ರಯೋಜನಗಳು ಸಿಗುತ್ತದೆ. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ.

* ಐಸ್ ಕ್ಯೂಬ್ ನಿಂದ ಕಣ್ಣಿನ ಕೆಳಗಡೆ ಕಪ್ಪುಗಟ್ಟುವುದನ್ನು ಹೋಗಲಾ ಡಿಸಬಹುದು.
* ನಮಗೆ ಹಲ್ಲು ನೋವು ಇದ್ದರೆ ತಕ್ಷಣ ಚಿಕಿತ್ಸೆ ನೀಡುತ್ತದೆ.
* ವಯಸ್ಸಾಗುವಿಕೆಯನ್ನು ತಡೆಯಲು ಇದರಿಂದ ಮುಖದ ಚರ್ಮಕ್ಕೆ ಮಸಾಜ್ ಮಾಡಿ.
* ಮುಖದ ಮೇಲಿನ ಸುಕ್ಕುಗಳು, ರಂಧ್ರಗಳಿಂದ ಮುಕ್ತಿ ದೊರಕಿಸುವ ಕೆಲಸ ಐಸ್ ಕ್ಯೂಬ್ ಮಾಡುತ್ತದೆ.

* ಬಿಸಿಲಿನಿಂದ ಕಪ್ಪದ ಮುಖಕ್ಕೆ ಐಸ್ ಕ್ಯೂಬ್ ಮಸಾಜ್ ಮುಖಕ್ಕೆ ವಿಶ್ರಾಂತಿ ನೀಡಿ ಆ ಸಮಸ್ಯೆಯನ್ನು ನಿವಾರಿಸುತ್ತದೆ.
* ದದ್ದುಗಳು ಹಾಗೂ ಯಾವುದಾದರೂ ಕೀಟಗಳು ಕಡಿತದಿಂದ ಐಸ್ ಕ್ಯೂಬ್ ಮಸಾಜ್ ತಕ್ಷಣ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
* ಮುಖದ ಮೇಲಿನ ಎಣ್ಣೆಯ ಅಂಶವನ್ನು ತೆಗೆದು ಹಾಕಿ ಚರ್ಮಕ್ಕೆ ಹೊಳಪನ್ನು ನೀಡುತ್ತದೆ.
* ಐಸ್ ಕ್ಯೂಬ್ ಮಸಾಜ್ ಮಾಡುವುದರಿಂದ ಮುಖದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುತ್ತದೆ.

* ಮೊಡವೆಗಳಿಂದ ಹಾಗೂ ಮುಖದಲ್ಲಿನ ಕಪ್ಪು ಕಲೆಯನ್ನು ಹೋಗಲಾಡಿಸಲು ವಾರದಲ್ಲಿ 3 ದಿನ ಐಸ್ ಕ್ಯೂಬ್ ಮಸಾಜ್ ಮಾಡಿ.
* ನಾವು ಹಚ್ಚುವ ಮೇಕಪ್ ನಿಂದ ನಮ್ಮ ಚರ್ಮಕ್ಕೆ ಆಗುವ ಅಡ್ಡ ಪರಿಣಾಮಗಳನ್ನು ಐಸ್ ಕ್ಯೂಬ್ ಮಸಾಜ್ ತಡೆಯುತ್ತದೆ.

* ಮುಖದಲ್ಲಿನ ನೆರಿಗೆಗಳು ಕಾಣದಂತೆ ಮಾಡುತ್ತದೆ.
ಅದರಲ್ಲೂ ಪ್ರತಿಯೊಬ್ಬರ ತಿಳಿದುಕೊಳ್ಳಬೇಕಾದಂತಹ ಮಾಹಿತಿ ಏನು ಎಂದರೆ ಐಸ್ ಕ್ಯೂಬ್ ಬಳಸುವಂತಹ ಸಮಯದಲ್ಲಿ ಕೆಲವೊಂದು ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಉತ್ತಮ. ಹೌದು ಐಸ್ ಕ್ಯೂಬ್ ನಲ್ಲಿ ಇರುವಂತಹ ನೀರು ನಮ್ಮ ಕಣ್ಣಿನ ಒಳಗಡೆ ಹೋಗದ ಹಾಗೆ ಮುಖದಲ್ಲಿ ಮಸಾಜ್ ಮಾಡಬೇಕು.

* ಐಸ್‌ಕ್ಯೂಬ್ ಅನ್ನು ಕಣ್ಣಿನ ಸುತ್ತ ನಿಯಮಿತವಾಗಿ ಉಜ್ಜುವುದರಿಂದ ರಕ್ತದ ನಾಳಗಳಿಗೆ ವ್ಯಾಯಾಮ ದೊರಕಿ ಕಣ್ಣಿನ ಊತ ಕಡಿಮೆಯಾಗುತ್ತದೆ.
* ವಯಸ್ಸಾಗುವುದನ್ನು ತಡೆಯುವಲ್ಲಿ ಐಸ್‌ಕ್ಯೂಬ್ ಹೆಚ್ಚು ಪರಿಣಾಮ ಕಾರಿ. ಇದು ತ್ವಚೆಯನ್ನು ಬಿಗಿಗೊಳಿಸುತ್ತದೆ ಮತ್ತು ಕಣ್ಣಿನ ಸುತ್ತದ ಗೆರೆಗಳನ್ನು ನಿವಾರಿಸುತ್ತದೆ.

30 ವರ್ಷದ ನಂತರ ಪುರುಷರು ಹಾಗು ಮಹಿಳೆಯರು ತಪ್ಪದೇ ತಿನ್ನಲೇಬೇಕಾದ ಡ್ರೈ ಪ್ರೋಟ್ಸ್ ತಿನ್ನಿ

 

30 ವರ್ಷದ ನಂತರ ಪ್ರತಿಯೊಬ್ಬ ಮಹಿಳೆ ಹಾಗೂ ಪುರುಷ ವಯಸ್ಸಾದಂತೆ ಅವರ ಶಕ್ತಿಯು ಕುಂದುತ್ತಾ ಹೋಗುತ್ತದೆ. ಆದ್ದರಿಂದ 30 ವರ್ಷ ದಾಟಿದ ಪುರುಷ ಹಾಗೂ ಮಹಿಳೆಯರು ತಮ್ಮ ಆರೋಗ್ಯದ ವಿಚಾರವಾಗಿ ಕೆಲವೊಂದಷ್ಟು ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳುವುದು ಉತ್ತಮ.

ಅದರಲ್ಲೂ ಯಾವ ಆಹಾರಗಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ಹೆಚ್ಚು ದಿನಗಳವರೆಗೆ ಕಾಪಾಡಿಕೊಳ್ಳಬಹುದು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಒಂದಲ್ಲ ಒಂದು ಕಾರಣದಿಂದ ಆರೋಗ್ಯ ಸಮಸ್ಯೆ ಎದುರಾಗಿ ಮುಂದಿನ ದಿನದಲ್ಲಿ ಇನ್ನು ಹೆಚ್ಚಿನ ದೊಡ್ಡ ಪ್ರಮಾಣದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಆದ್ದರಿಂದ ಉತ್ತಮವಾದ ಆಹಾರ ಕ್ರಮವನ್ನು ಅನುಸರಿಸುವುದು ಒಳ್ಳೆಯದು ಹಾಗೂ ಉತ್ತಮವಾದ ಜೀವನಶೈಲಿಯನ್ನು ಕೂಡ ಅನುಸರಿಸುವುದು ಒಳ್ಳೆಯದು ಹಾಗಾದರೆ ಈ ದಿನ 30 ವರ್ಷ ದಾಟಿದ ಪುರುಷ ಹಾಗೂ ಮಹಿಳೆಯರು ಯಾವ ಕೆಲವೊಂದಷ್ಟು ಆಹಾರ ಕ್ರಮಗಳನ್ನು ಅನುಸರಿ ಸಬೇಕು ಹಾಗೂ ಯಾವ ಡ್ರೈ ಫ್ರೂಟ್ಸ್ ಗಳನ್ನು ತಿನ್ನಬೇಕು ಹಾಗೂ ಅದನ್ನು ತಿನ್ನುವುದರಿಂದ ಯಾವುದೆಲ್ಲ ರೀತಿಯ ಪೋಷಕಾಂಶಗಳು ನಮಗೆ ಸಿಗುತ್ತಾ ಹೋಗುತ್ತದೆ.

ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. 35 ರಿಂದ 40 ವರ್ಷದ ನಂತರ ಮೂಳೆಗಳು ದುರ್ಬಲಗೊಳ್ಳುತ್ತಾ ಬರುತ್ತದೆ. ಈ ಸಮಯದಲ್ಲಿ ಆರೋಗ್ಯಕರವಾದ ಆಹಾರಗಳು, ದಿನಕ್ಕೆ 30 ನಿಮಿಷಗಳ ವ್ಯಾಯಾಮ, ಉತ್ತಮ ಜೀವನಶೈಲಿಯ ಅಭ್ಯಾಸಗಳು ಅತಿ ಮುಖ್ಯವಾಗಿದೆ.

ಕೆಲವು ಆಹಾರಗಳು ನಿಮ್ಮ ಚರ್ಮ, ಮೂಳೆ ಹಾಗು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಗಳಾಗಿವೆ. ಬೇಕಾದಷ್ಟು ಪೋಷಕಾಂಶಗಳು ಹೊಂದಿರುವ ಒಣಹಣ್ಣುಗಳನ್ನು ನೀವು ಪ್ರತಿನಿತ್ಯ ಸೇವಿಸುವುದರಿಂದ ಅನೇಕ ಲಾಭಗಳನ್ನು ಪಡೆಯುತ್ತೀರಿ. 30 ರ ನಂತರ ನೀವು ಪ್ರತಿನಿತ್ಯ ಕುರುಕಲು ತಿಂಡಿಯಂತೆ ಒಣ ಹಣ್ಣುಗಳನ್ನು ಸೇವಿಸಲು ನಾವು ಸಲಹೆಯನ್ನು ನೀಡುತ್ತೇವೆ.

• ಒಣ ಅಂಜೂರ :- ಒಣ ಹಣ್ಣು ಅಥವಾ ಡ್ರೈ ಫ್ರೂಟ್ಸ್ ಗಳಲ್ಲಿಯೇ ಅತ್ಯಂತ ರುಚಿಕರವಾದ ಹಣ್ಣುಗಳಲ್ಲಿ ಒಣ ಅಂಜೂರ ಒಂದು. ಇದು ಹೆಚ್ಚು ಪೌಷ್ಟಿಕಾಂಶದ ಹಣ್ಣು ಎಂದು ಸಾಬೀತಾಗಿದೆ. ಇದರಲ್ಲಿ ಯಥೇಚ್ಚ ವಾದ ಫೈಬರ್, ಪೊಟ್ಯಾಸಿಯಮ್, ಉತ್ಕರ್ಷಣ ನಿರೋಧಕ ಅಂಶ ಹೊಂದಿದೆ. ದಿನಕ್ಕೆ 3 ರಿಂದ 4 ಒಣ ಅಂಜೂರ ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು, ಜೀರ್ಣಕ್ರಿಯೆ ಸುಧಾರಿಸಲು, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ನಿಮ್ಮ ಹೃದಯವನ್ನು ರಕ್ಷಿಸುತ್ತದೆ. ಬಲವಾದ ಕೀಲುಗಳನ್ನು ಬೆಂಬಲಿಸುವುದಲ್ಲದೆ ಮಲಬದ್ಧತೆಯನ್ನು ತಡೆಯುತ್ತದೆ.

• ಪಿಸ್ತಾ :- ಡ್ರೈ ಫ್ರೂಟ್ಸ್ ಗ ತಪ್ಪದೇ ಸೇವಿಸಲೇಬೇಕಾದ ಆಹಾರ ಗಳಲ್ಲಿ ಪಿಸ್ತಾ ಕೂಡ ಒಂದಾಗಿದೆ. ಇದು ನಿಮ್ಮ ಆಹಾರಕ್ಕೆ ಪೌಷ್ಟಿಕಾಂಶದ ಸೇರ್ಪಡೆಯಾಗಿದೆ. ಇದರಲ್ಲಿ ಪ್ರೋಟೀನ್‌ ಅತ್ಯುತ್ತಮ ಮೂಲವನ್ನು ಹೊಂದಿದೆ. ಕೆಲವು ಪಿಸ್ತಾ ಸೇವನೆಯು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರ ಮೂಲಕ ನೀವು ಸುಲಭವಾಗಿ ತೂಕವನ್ನು ಕಳೆದು ಕೊಳ್ಳಬಹುದು. ಜೊತೆಗೆ ಪಿಸ್ತಾವು ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋದಕಗಳನ್ನು ಹೊಂದಿದೆ.

• ವಾಲ್ನಟ್ :- ಪೋಷಕಾಂಶಗಳಿಂದ ತುಂಬಿದ ವಾಲ್ನಟ್ ಆರೋಗ್ಯಕರ ಕೊಬ್ಬನ್ನುಹೊಂದಿದೆ. ಇದು ಹೃದಯದ ತೊಂದರೆಯನ್ನು ತಡೆಯುತ್ತದೆ ಎನ್ನಲಾಗಿದೆ. ಇತ್ತೀಚೆಗೆ ಚಿಕ್ಕ ಚಿಕ್ಕ ವಯಸ್ಸಿನಲ್ಲಿಯೇ ಹೃದ್ರೋಗಗಳು ಹೆಚ್ಚಾಗುತ್ತಿದೆ. ಈ ತೊಂದರೆಯನ್ನು ವಾಲ್ನಟ್ ತಡೆಯುತ್ತದೆ. ವಾಲ್ನಟ್‌ ಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ, ಮೆದುಳಿನ ಆರೋಗ್ಯಕ್ಕೆ ಪ್ರಯೋಜನ ಉಂಟುಮಾಡುತ್ತದೆ. ಜೊತೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇದು ಬಹಳ ಉತ್ತಮವಾಗಿದೆ.

• ಬಾದಾಮಿ :- ಬಾದಾಮಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ವಾಸ್ತವವಾಗಿ, ಕೊಲೆಸ್ಟ್ರಾಲ್ ಪಾರ್ಶ್ವವಾಯು, ಹೃದ್ರೋಗವನ್ನು ತಡೆಯಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಕೆಲವು ಬಾದಾಮಿಗಳನ್ನು ಸೇವಿಸುವುದರಿಂದ ಹೃದಯಕ್ಕೆ ಒಳ್ಳೆಯದು. ಹಾಗೆಯೇ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ರಕ್ತದೊತ್ತಡದ ಮಟ್ಟ, ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಗೃಹಿಣಿಯರಿಗೆ ಸೂಪರ್ ಟಿಪ್ಸ್.!

 

ಮನೆಯಲ್ಲಿರುವಂತಹ ಗೃಹಿಣಿಯರು ಮನೆಯ ವಿಚಾರವಾಗಿ ಯಾವ ಕೆಲಸವನ್ನು ಹೇಗೆ ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಬಹುದು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ತುಂಬಾ ಒಳ್ಳೆ ಯದು. ಹೌದು ಸಮಯವನ್ನು ಉಳಿತಾಯ ಮಾಡುವ ಹಾಗೆ ನೀವು ಇಂತಹ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದು ಮುಖ್ಯ.

ಅದರಲ್ಲೂ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ಇಂತಹ ಕೆಲವೊಂದಷ್ಟು ಮಾಹಿತಿ ಹೇಳಿದರೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳ ಬಹುದು. ಇದರಿಂದ ಅವರು ಕೆಲಸವನ್ನು ಬೇಗನೆ ಮುಗಿಸಿ ಕೆಲಸಕ್ಕೆ ಹೊರಡಬಹುದು ಹಾಗೂ ಹಿಂದಿನ ದಿನ ಇಂತಹ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸಿದರೆ ಮಾರನೇ ದಿನ ಅವರಿಗೆ ಆ ಕೆಲಸ ಸುಲಭವಾಗಿ ಬೇಗನೇ ಮುಗಿಯುತ್ತದೆ ಎಂದೇ ಹೇಳಬಹುದು.

ಹಾಗಾದರೆ ಈ ದಿನ ಗೃಹಿಣಿಯರಿಗೆ ಯಾವ ಕೆಲವು ವಿಚಾರಗಳು ತುಂಬಾ ಅನುಕೂಲವಾಗುತ್ತದೆ ಎನ್ನುವಂತಹ ಮಾಹಿತಿಯ ಬಗ್ಗೆ ಈ ಕೆಳಗೆ ತಿಳಿಯೋಣ.

* ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರುತ್ತದೆ. ಇದರಿಂದ ತಪ್ಪಿಸಿ ಕೊಳ್ಳಲು ನೀವು ಈರುಳ್ಳಿ ಕತ್ತರಿಸುವ ಮುನ್ನ ಅದನ್ನು 15 ನಿಮಿಷ ಫ್ರಿಡ್ಜ್ ನಲ್ಲಿ ಇಟ್ಟು ನಂತರ ಕತ್ತರಿಸಿ. ಈ ರೀತಿ ಮಾಡುವುದರಿಂದ ಈರುಳ್ಳಿಯಲ್ಲಿ ರುವಂತಹ ಘಾಟಿನ ಅಂಶ ಸಂಪೂರ್ಣವಾಗಿ ಹೋಗುತ್ತದೆ ಆನಂತರ ಸುಲಭವಾಗಿ ನೀವು ಈರುಳ್ಳಿಯನ್ನು ಕತ್ತರಿಸಬಹುದು.

ಎಲ್ಲರ ಮನೆಯ ಲ್ಲಿಯೂ ಕೂಡ ಫ್ರಿಡ್ಜ್ ಇರುವುದಿಲ್ಲ ಅಂತವರು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದರ ಒಳಗಡೆ ಈರುಳ್ಳಿಯನ್ನು ಕತ್ತರಿಸಿ ಇಟ್ಟು ಆನಂತರ ನೀವು ಈರುಳ್ಳಿಯನ್ನು ಕತ್ತರಿಸುವುದರಿಂದಲೂ ಕೂಡ ಕಣ್ಣೀರು ಬರುವುದಿಲ್ಲ. ಈ ವಿಧಾನವನ್ನು ಪ್ರತಿಯೊಬ್ಬರೂ ಕೂಡ ಅನುಸರಿಸಬಹುದಾಗಿದೆ.

* ಅಡುಗೆ ಮಾಡುವಾಗ ಉಪ್ಪು ಜಾಸ್ತಿ ಆದರೆ ಆಲೂಗಡ್ಡೆಯನ್ನು ಕತ್ತರಿಸಿ ಸೇರಿಸಿ. ಇದರಿಂದ ಉಪ್ಪಿನ ಪ್ರಮಾಣ ಕಡಿಮೆ ಯಾಗುತ್ತದೆ. ಹಾಗೂ ಅದರ ರುಚಿಯು ಕೂಡ ಮತ್ತಷ್ಟು ಹೆಚ್ಚಾಗುತ್ತದೆ.
* ಚಪಾತಿ, ರೋಟಿ ಮೃದುವಾಗಿ ಬರಬೇಕಾದರೆ ಹಿಟ್ಟನ್ನು ಬೆರೆಸುವಾಗ, ಒಂದು ಚಮಚ ಎಣ್ಣೆ ಅಥವಾ ಹಾಲನ್ನು ಬೆರೆಸಿಕೊಳ್ಳಿ.

* ಗ್ರೇವಿ ತುಂಬಾ ಖಾರವಾಗಿದ್ದರೆ, ಅದಕ್ಕೆ ಸ್ವಲ್ಪ ಹಾಲನ್ನು ಸೇರಿಸ ಬಹುದು. ಇದು ಖಾರದ ಪ್ರಮಾಣವನ್ನು ಸರಿದೂಗಿಸುತ್ತದೆ.
* ಕುಕ್ಕರ್ ನಲ್ಲಿ ಅಡುಗೆ ಮಾಡುವಾಗ ಸೌಟಿನಿಂದ ಕುಕ್ಕರ್ ಗೆ ಬಡಿಯಬಾರದು. ಇದರಿಂದ ಕುಕ್ಕರ್ ಸವೆದು ಸರಿಯಾಗಿ ಕೆಲಸ ಮಾಡದೇ ಇರಬಹುದು.
* ಯಾವುದೇ ಅಡುಗೆ ಮಾಡುವಾಗ ಆಹಾರವನ್ನು ಅತಿಯಾಗಿ ಬೇಯಿಸ ಬಾರದು ಅದು ರುಚಿಯನ್ನು ಕಳೆದುಕೊಳ್ಳುತ್ತದೆ.

* ಯಾವುದೇ ಮಸಾಲಾ ಪದಾರ್ಥಗಳನ್ನು ಗಾಳಿಯಲ್ಲಿ ಇಟ್ಟರೆ ಹಾಳಾಗುತ್ತದೆ. ಆದ್ದರಿಂದ ಅದನ್ನು ಒಂದು ಡಬ್ಬಿಯಲ್ಲಿ ಹಾಕಿ ಟೈಟ್ ಆಗಿ ಮುಚ್ಚಿ ಇಡಿ.
* ಅಕ್ಕಿ ಬೇಗನೆ ಬೇಯಲು ಅದಕ್ಕೆ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ ಇದರಿಂದ ಬೇಗ ಬೇಯುವುದರ ಜೊತೆಗೆ ಅನ್ನ ಕೂಡ ಮೃದುವಾಗಿ ಬರುತ್ತದೆ.

* ಬೆಳ್ಳುಳ್ಳಿ ಯನ್ನು ಬಿಸಿ ನೀರಿನಲ್ಲಿ ಹಾಕಿ ಇಟ್ಟರೆ ನಂತರ ಸಿಪ್ಪೆ ಸುಲಿ ಯಲು ಸುಲಭವಾಗಿ ಬರುತ್ತದೆ.
* ಮಾವಿನ ಕಾಯಿ ಉಪ್ಪಿನಕಾಯಿ ರಸವೂ ದೀರ್ಘ ಕಾಲ ಕೆಂಪಾಗಿ ಇರಬೇಕು ಅಂದರೆ ಒಂದು ಚಿಟಿಕೆಯಷ್ಟು ಅಡುಗೆ ಸೋಡಾ ಹಾಕಬೇಕು.

* ಅಕ್ಕಿ ದೀರ್ಘ ಕಾಲ ಇಟ್ಟರೆ ಹಾಳಾಗುತ್ತದೆ. ಅದಕ್ಕೆ ಅದು ಕೆಡದೆ ಇರಲು ಅಕ್ಕಿ ಡಬ್ಬದೊಳಗೆ ಸ್ವಲ್ಪ ಕರಿಬೇವು ಹಾಕಿ ಇಡಿ. ಈ ರೀತಿ ಮಾಡುವುದರಿಂದ ಹಕ್ಕಿಯಲ್ಲಿ ಯಾವುದೇ ಹುಳ ಬರುವುದಿಲ್ಲ.
* ನಿಂಬೆ ಹಣ್ಣನ್ನು ನೆಲಕ್ಕೆ ತಿಕ್ಕಿ ನಂತರ ತೊಳೆದು ರಸ ಹಿಂಡಿದರೆ ಹೆಚ್ಚು ನಿಂಬೆ ರಸ ಬರುತ್ತದೆ.

ಬಾಯಿ ಬಿಟ್ಟರೆ ಸುಳ್ಳು ಹೇಳುವ ರಾಶಿಗಳಿವು.!

ರಾಶಿ ಚಕ್ರದಲ್ಲಿರುವಂತಹ 12 ರಾಶಿಗಳು ಕೂಡ ಒಂದೊಂದು ಗ್ರಹಕ್ಕೆ ಸಂಬಂಧಿಸಿದ ಒಂದೊಂದು ರೀತಿಯ ವಿಭಿನ್ನವಾದoತಹ ಗುಣ ಸ್ವಭಾವವನ್ನು ಹೊಂದಿರುತ್ತದೆ. ಹೌದು ಅದೇ ರೀತಿಯಾಗಿ 12 ರಾಶಿಗಳು ಕೂಡ ಒಂದೇ ರೀತಿಯ ಮನಸ್ಥಿತಿಯನ್ನು ಹೊಂದಿರುವುದಿಲ್ಲ. ಬದಲಿಗೆ ಗ್ರಹಗಳ ಆಧಾರದ ಮೇಲೆ ಅವುಗಳ ಸ್ಥಿತಿಗಳ ಆಧಾರದ ಮೇಲೆ ಕೆಲವೊಂದಷ್ಟು ವಿಚಾರಗಳನ್ನು ಒಳಗೊಂಡಿರುತ್ತವೆ.

ಅದೇ ರೀತಿಯಾಗಿ ಈ ರಾಶಿ ಹೊಂದಿರುವಂತಹ ಜನರು ಕೆಲವೊಂದು ಸಮಯದಲ್ಲಿ ಸತ್ಯದ ಬದಲು ಸುಳ್ಳನ್ನು ಹೇಳುತ್ತಾರೆ ಎಂದೇ ಹೇಳಬಹುದು. ಆ ವ್ಯಕ್ತಿ ಹುಟ್ಟಿದಂತಹ ದಿನ ಘಳಿಗೆ ಸಮಯ ಎಲ್ಲದರ ಆಧಾರದ ಮೇಲೆ ಆ ವ್ಯಕ್ತಿಯ ಗುಣ ಸ್ವಭಾವ ಆ ರಾಶಿಯವರ ಸಂಪೂರ್ಣ ವಾದಂತಹ ಮನಸ್ಥಿತಿ ಯಾವ ರೀತಿಯಾಗಿ ಇರುತ್ತದೆ ಎಂದು ಸೂಚಿಸುತ್ತದೆ.

ಹೌದು ಅದೇ ರೀತಿಯಾಗಿ ಈ ದಿನ ರಾಶಿ ಚಕ್ರದಲ್ಲಿರುವಂತಹ 12 ರಾಶಿಗಳಲ್ಲಿ ಯಾವ ರಾಶಿಯವರು ಅತಿ ಹೆಚ್ಚು ಸುಳ್ಳು ಹೇಳುತ್ತಾರೆ. ಹಾಗೂ ಅವರು ತಮ್ಮ ಜೀವನದಲ್ಲಿ ಯಾವ ಕೆಲವು ವಿಚಾರಗಳನ್ನು ಅವರು ಯಾರ ಬಳಿ ಹೇಳಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ ಯಾವ ವಿಚಾರವಾಗಿ ಪ್ರತಿಯೊಬ್ಬರಲ್ಲಿಯೂ ಸುಳ್ಳನ್ನು ಹೇಳುತ್ತಿರುತ್ತಾರೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

* ಕರ್ಕಾಟಕ ರಾಶಿ :- ಸುಳ್ಳು ಹೇಳುವುದರಲ್ಲಿ ಕರ್ಕಾಟಕ ರಾಶಿಯವರು ಮುಂದೆ ಇರುತ್ತಾರೆ. ಇವರು ತಮ್ಮ ತಪ್ಪುಗಳನ್ನು ಮುಚ್ಚಿಡಲು ಸುಳ್ಳು ಗಳನ್ನು ಆಯುಧದ ಹಾಗೆ ಬಳಸುತ್ತಾರೆ. ಇವರು ಯಾವುದಾದರೂ ವಿಷಯವನ್ನು ಅಂಕುಡೊಂಕಾಗಿ ಮಾತನಾಡುತ್ತಿದ್ದಾರೆ ಎಂದು ತಿಳಿದರೆ ಅವರು ಖಂಡಿತ ಸುಳ್ಳು ಹೇಳುತ್ತಿದ್ದಾರೆ ಎಂಬ ಅರ್ಥ ಮಾಡಿಕೊಳ್ಳಬೇಕು.

* ಸಿಂಹ ರಾಶಿ :- ಸಿಂಹ ರಾಶಿ ಇತರರನ್ನು ಆಕರ್ಷಿಸಲು ಸುಳ್ಳು ಹೇಳುತ್ತಾರೆ. ಇವರು ಇರೋದು ಇಲ್ಲದೆ ಇರೋದನ್ನು ಕಲ್ಪಿಸಿ ಸುಳ್ಳು ಹೇಳುತ್ತಾರೆ. ಆ ಸಮಯದಲ್ಲಿ ನಾನು ದೊಡ್ಡ ಕೆಲಸ ಮಾಡಿದ್ದೇನೆ ಎಂದು ಬಡಾಯಿ ಮಾತನ್ನು ಆಡುತ್ತಾರೆ. ಇವರು ಸುಳ್ಳು ಹೇಳುವಾಗ ಮುಂದೆ ಇರುವವರ ಕಣ್ಣು ನೋಡಿ ಮಾತನಾಡುವುದಿಲ್ಲ. ಎಲ್ಲಿ ನಾನು ಹೇಳುತ್ತಿರುವುದು ಸುಳ್ಳು ಎಂದು ಗೊತ್ತಾಗುತ್ತದೆಯೋ ಎಂದು ಮುಂದೆ ಇರುವವರ ಕಣ್ಣನ್ನು ನೋಡುವುದಿಲ್ಲ.

* ಮಿಥುನ ರಾಶಿ :- ಇವರು ಸುಳ್ಳು ಹೇಳುವುದರಲ್ಲಿ ಪ್ರತ್ಯೇಕವಾದ ಗುಣವನ್ನು ಹೊಂದಿರುತ್ತಾರೆ. ಹಾಗೂ ಮಿಥುನ ರಾಶಿಯವರು. ಇವರು ತಮ್ಮ ಗೌರವ ಎಲ್ಲಿ ಹೋಗುತ್ತೋ ಅನ್ನೋ ಭಯದಲ್ಲಿ ಸುಳ್ಳು ಹೇಳುತ್ತಾರೆ. ಇದು ಕೇಳೋದಕ್ಕೆ ವಿಚಿತ್ರವಾಗಿದ್ದರು. ಜ್ಯೋತಿಷ್ಯ ಶಾಸ್ತ್ರ ಇದನ್ನು ಸತ್ಯ ಎಂದು ಹೇಳುತ್ತದೆ.

* ವೃಶ್ಚಿಕ ರಾಶಿ :- ಈ ರಾಶಿಯವರು ಕೂಡ ತುಂಬಾ ಸುಲಭವಾಗಿ ಸುಳ್ಳು ಹೇಳುತ್ತಾರೆ. ಈ ರಾಶಿಯವರು ತಮ್ಮ ಕೆಲಸವನ್ನು ಸಾಧಿಸಲು ಎಂತಹ ಸುಳ್ಳು ಬೇಕಾದರೂ ಹೇಳುತ್ತಾರೆ. ಹಾಗೆ ಕಟ್ಟು ಕಥೆಗಳನ್ನು ಹೇಳಲು ಈ ರಾಶಿಯವರು ಮುಂದೆ ಇರುತ್ತಾರೆ.

* ತುಲಾ ರಾಶಿ :- ತುಲಾ ರಾಶಿ ಅವರು ಕೂಡ ಸುಳ್ಳು ಹೇಳುತ್ತಾರೆ. ಇವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸುಳ್ಳು ಹೇಳುತ್ತಾರೆ. ನಿಜವನ್ನು ಸುಳ್ಳಾಗಿ ಬದಲಿಸುವ ಸಾಮರ್ಥ್ಯ ಇವರಿಗಿರುತ್ತದೆ.

ಹೀಗೆ ಮೇಲೆ ಹೇಳಿದ ಇಷ್ಟು ರಾಶಿಯವರು ಕೂಡ ಕೆಲವೊಂದು ಸಮ ಯದಲ್ಲಿ ಕೆಲವೊಂದಷ್ಟು ವಿಚಾರವಾಗಿ ಕೆಲವೊಂದು ಸಂದರ್ಭದಲ್ಲಿ ಸುಳ್ಳನ್ನು ಹೇಳುತ್ತಾರೆ ಎಂದೇ ಹೇಳಬಹುದು. ಆದರೆ ಪ್ರತಿಯೊಂದರ ಲ್ಲಿಯೂ ಕೂಡ ಇವರು ಸುಳ್ಳನ್ನು ಹೇಳುತ್ತಾರೆ ಎಂಬ ಅರ್ಥ ಇದಲ್ಲ. ಸಮಯಕ್ಕೆ ಅನುಗುಣವಾಗಿ ಇವರು ಸುಳ್ಳನ್ನು ಹೇಳುವುದು ಸತ್ಯ.

ರಕ್ತದಲಿ ಸಕ್ಕರೆ ಮಟ್ಟ ಎಷ್ಟಿರಬೇಕು.! ಶುಗರ್ ಲೆವೆಲ್ ಎಷ್ಟಿದ್ದರೆ ನಿಮ್ಮ ಆರೋಗ್ಯ ಸೇಫ್ ಇರುತ್ತೆ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೈಲ್ಸ್.!

 

ಇತ್ತೀಚಿನ ದಿನದಲ್ಲಿ ರಕ್ತದಲ್ಲಿ ಸಕ್ಕರೆ ಮಟ್ಟ ಇರುವುದು ಹೆಚ್ಚಾಗುತ್ತಲೇ ಇದೆ ಎಂದೇ ಹೇಳಬಹುದು. ಅಂದರೆ ಪ್ರತಿಯೊಬ್ಬರಲ್ಲಿಯೂ ಕೂಡ ಡಯಾಬಿಟಿಸ್ ಸಮಸ್ಯೆ ಎನ್ನುವುದನ್ನು ನಾವು ಕಾಣುತ್ತಿದ್ದೇವೆ. ಅದ ರಲ್ಲೂ 30 ವರ್ಷ 40 ವರ್ಷ ದಾಟಿದರೆ ಸಾಕು ಈ ಒಂದು ಕಾಯಿಲೆ ಪ್ರತಿಯೊಬ್ಬರನ್ನು ಆವರಿಸಿಕೊಳ್ಳುತ್ತದೆ.

ಹಾಗಾದರೆ ಈ ದಿನ ಪ್ರತಿ ಯೊಬ್ಬರ ದೇಹದಲ್ಲಿ ಅಂದರೆ ಅವರ ರಕ್ತದಲ್ಲಿ ಎಷ್ಟು ಪ್ರಮಾಣದಲ್ಲಿ ಸಕ್ಕರೆ ಅಂಶ ಇರಬೇಕು ಹಾಗೂ ಎಷ್ಟಿದ್ದರೆ ಅದು ಯಾವುದೇ ರೀತಿಯ ಸಮಸ್ಯೆ ಇಲ್ಲ ಎಷ್ಟಿದ್ದರೆ ಯಾವ ಕೆಲವು ಸಮಸ್ಯೆಗಳು ಉಂಟಾಗುತ್ತದೆ ಹೀಗೆ ಈ ಎಲ್ಲ ವಿಚಾರ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಅದಕ್ಕೂ ಮೊದಲು ಈ ಡಯಾಬಿಟಿಸ್ ಸಮಸ್ಯೆ ಬರಲು ಪ್ರಧಾನವಾಗಿರುವಂತಹ ಕಾರಣಗಳೇನು ಎಂದು ನೋಡುವುದಾದರೆ.

* ನಾವು ನಮ್ಮ ಆಹಾರ ಶೈಲಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡಿ ರುವುದು. ಹೌದು ಸಿಕ್ಕಸಿಕ್ಕ ಎಲ್ಲ ಆಹಾರವನ್ನು ಸೇವನೆ ಮಾಡುವುದ ರಿಂದ ನಮ್ಮ ದೇಹಕ್ಕೆ ಸೇರಬೇಕಾಗಿರುವಂತಹ ಪೋಷಕಾಂಶಗಳು ಸೇರುತ್ತಿಲ್ಲ ಆದ್ದರಿಂದ ಕಾಯಿಲೆಗಳು ನಮ್ಮನ್ನು ಆವರಿಸುತ್ತಿದೆ ಆದ್ದರಿಂದ ಉತ್ತಮವಾದ ಆಹಾರ ಶೈಲಿಯನ್ನು ಅಂದರೆ ಹಸಿ ಸೊಪ್ಪು ತರಕಾರಿ ಕಾಳುಗಳು ಹೀಗೆ ಈ ರೀತಿಯ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು.

ಇವುಗಳಲ್ಲಿ ಯಥೇಚ್ಛವಾದಂತ ಪೋಷಕಾಂಶಗಳು ಇದ್ದು ಇದು ನಮ್ಮ ದೇಹದ ಆರೋಗ್ಯವನ್ನು ಹೆಚ್ಚಿಸುವುದಕ್ಕೆ ಸಹಾಯಮಾಡು ತ್ತದೆ ಬದಲಿಗೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರು ಮಾರುಕಟ್ಟೆಯಲ್ಲಿ ಸಿಗುವಂತಹ ರೆಡಿಮೇಡ್ ಆಹಾರ ಪದಾರ್ಥವನ್ನು ಸೇವನೆ ಮಾಡುತ್ತಿ ದ್ದಾರೆ ಹಾಗೂ ಎಣ್ಣೆಯಲ್ಲಿ ಕರಿದಂತಹ ಆಹಾರ ಪದಾರ್ಥಗಳು ಬೀದಿ ಬದಿಯಲ್ಲಿ ಮಾರುವ ಆಹಾರ ಪದಾರ್ಥಗಳು ಮೈದಾ ಹಿಟ್ಟಿನ ಪದಾರ್ಥ ಹೀಗೆ ಹತ್ತು ಹಲವಾರು ಅನಾರೋಗ್ಯಕರ ಆಹಾರಗಳನ್ನು ಸೇವಿಸುವುದರಿಂದ.

ಇಲ್ಲಸಲ್ಲದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ಇವೆಲ್ಲ ವನ್ನೂ ಕೂಡ ನೀವು ತಪ್ಪಿಸಿ ಉತ್ತಮವಾದಂತಹ ಆಹಾರ ಶೈಲಿಯನ್ನು ಜೀವನ ಶೈಲಿಯನ್ನು ಅನುಸರಿಸುವುದು ಒಳ್ಳೆಯದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರ ದೇಹದಲ್ಲಿ ಊಟದ ಮೊದಲು ನಮ್ಮ ರಕ್ತದಲ್ಲಿ ಎಷ್ಟು ಸಕ್ಕರೆ ಪ್ರಮಾಣ ಇರಬೇಕು ಹಾಗೂ ಊಟ ತಿಂಡಿ ಆದ ನಂತರ ಎಷ್ಟು ರಕ್ತದಲ್ಲಿ ಸಕ್ಕರೆ ಪ್ರಮಾಣ ಇರಬೇಕು ಹಾಗೂ ಎಷ್ಟಿದ್ದರೆ ಅದು ನಾರ್ಮ ಲ್ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಬ್ಲಡ್ ಟೆಸ್ಟ್ ಮಾಡಿಸುವುದಕ್ಕೆ ಬೆಳಗಿನ ಸಮಯ ಅಂದರೆ ತಿಂಡಿಗೂ ಮುಂಚೆ ಹೋಗಿ ರಕ್ತ ಕೊಟ್ಟು ಬರುತ್ತಾರೆ.
* ಆ ಸಮಯದಲ್ಲಿ ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟ ನೂರಕ್ಕಿಂತ ಒಳಗಡೆ ಇದ್ದರೆ ಅದು ನಾರ್ಮಲ್ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದರ್ಥ.
* ಅದೇ ರೀತಿಯಾಗಿ 100 ರಿಂದ 125 ಸಕ್ಕರೆ ಮಟ್ಟ ತೋರಿಸುತ್ತಿದ್ದರೆ. ಇದು ಸಕ್ಕರೆ ಕಾಯಿಲೆ ಬರುವ ಹಂತ ಎಂದು ಸೂಚಿಸುತ್ತದೆ.
* ಹಾಗೂ 126 ಕ್ಕಿಂತ ಹೆಚ್ಚು ಸಕ್ಕರೆ ಮಟ್ಟ ಬಂದರೆ ಇದು ನಿಮಗೆ ಸಕ್ಕರೆ ಕಾಯಿಲೆ ಇದೆ ಎಂದರ್ಥ.

* ಅದೇ ರೀತಿಯಾಗಿ ನೀವು ತಿಂಡಿ ಊಟ ಮಾಡಿ ಎರಡರಿಂದ ಮೂರು ತಾಸಿನ ನಂತರ ರಕ್ತದಲ್ಲಿ ಸಕ್ಕರೆ ಮಟ್ಟ ಎಷ್ಟಿರಬೇಕು ಎಂದು ನೋಡುವು ದಾದರೆ 140 ರ ಒಳಗೆ ಇರಬೇಕು. ಈ ರೀತಿ ಇದ್ದರೆ ನಾರ್ಮಲ್ ಎಂದರ್ಥ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ವೃದ್ಧಾಪ್ಯಕ್ಕೆ ಕಾರಣಗಳು.!

 

ಇಂದು ಬಹಳಷ್ಟು ಜನರು ಸಣ್ಣ ವಯಸ್ಸಿನಲ್ಲಿಯೇ ಮುದುಕರಂತೆ ಕಾಣುತ್ತಾರೆ. ದೇಹದಲ್ಲಿ ಶಕ್ತಿ ಕುಂದುವದು, ಕೂದಲು ಬೆಳ್ಳಗಾಗುವುದು ಹಲ್ಲುಗಳು ಹುಳುಕಾಗುವುದು ಇಲ್ಲವೆ ಬಿದ್ದುಹೋಗುವುದು ಮುಖ ಬೆಳಿಚಿಕೊಳ್ಳುವುದು, ಕೆನ್ನೆಗಳು ಚಪ್ಪಗಾಗುವುದು, ಊಟ ಸುಲಭವಾಗಿ ಜೀರ್ಣವಾಗದಿರುವುದು, ಕಣ್ಣುಗಳು ಮಂಜಾಗುವುದು ಇತ್ಯಾದಿ.

* ಬಹಳಷ್ಟು ನೀರು ಕುಡಿಯುವುದು ನೀರನ್ನು ಹೆಚ್ಚಾಗಿ ಕುಡಿಯುವುದ ರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ತುಂಬಾ ಜನ ತಿಳಿದಿದ್ದಾರೆ. ಆದರೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವ ಮಾತನ್ನು ನಾವು ನೆನಪಿನಲ್ಲಿಡಬೇಕು. ಅನಾವಶ್ಯಕವಾಗಿ ನೀರಡಿಕೆ ಇಲ್ಲದೆ ನಾವು ಹೆಚ್ಚು ಹೆಚ್ಚು ನೀರು ಕುಡಿಯುತ್ತಾ ಹೋದರೆ ಮೂತ್ರಪಿಂಡಗಳು ಬಹಳ ಕಷ್ಟಪಟ್ಟು ಕೆಲಸಮಾಡಬೇಕಾಗುತ್ತದೆ.

* ನಾವು ಅತಿಯಾಗಿ ನೀರು ಕುಡಿಯುವುದರಿಂದ ದೇಹದಲ್ಲಿನ ಲವಣಾಂಶವು ಏರುಪೇರಾಗಿ ತಲೆನೋವು ವಾಂತಿ ಸ್ನಾಯುಗಳಲ್ಲಿ ದುರ್ಬಲತೆ ಉಂಟಾಗುವ ಸಾಧ್ಯತೆಗಳಿವೆ.
* ಆಯುರ್ವೇದದ ಪ್ರಕಾರವೂ ಅತೀ ಹೆಚ್ಚು ನೀರು ಕುಡಿಯುವುದ ರಿಂದ ವ್ಯಕ್ತಿಯು ಬೇಗನೆ ವೃದ್ಧಾಪ್ಯಕ್ಕೆ ಒಳಗಾಗುತ್ತಾನೆ.

* ಹಗಲಿನಲ್ಲಿ ಮಲಗುವುದು ಮತ್ತು ರಾತ್ರಿಯಲ್ಲಿ ಏಳುವುದು ಪಕೃತಿಯು ನಮ್ಮ ದೇಹದಲ್ಲಿ ಜೈವಿಕ ಗಡಿಯಾರವನ್ನು ಅಳವಡಿಸಿದೆ. ಹಿಂದಿನ ಕಾಲದಲ್ಲಿ ಮನುಷ್ಯರು ಈ ಜೈವಿಕ ಗಡಿಯಾರದ ಪ್ರಕಾರ ಮಲಗುತ್ತಿ ದ್ದರು ಮತ್ತು ಬೆಳಿಗ್ಗೆ ಬೇಗನೆ ಏಳುತ್ತಿದ್ದರು. ಆದರೆ ಈಗಿನವರ ದಿನಚರಿ ಹಿಂದಿನಂತೆ ಇಲ್ಲ. ಕೆಲವರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ ದಿನವಿಡೀ ಮಲಗಿರುತ್ತಾರೆ.

ತಡರಾತ್ರಿಯವರೆಗೆ ಟಿವಿ ನೋಡುವುದು. ಮೋಜು ಮಸ್ತಿಗಳಲ್ಲಿ ದುರಭ್ಯಾಸಗಳಲ್ಲಿ ಮುಳುಗಿರುವುದು. ಇದಲ್ಲದೆ ಹಗಲು ರಾತ್ರಿ ಮಲಗುವ ಎಷ್ಟೋ ಜನರಿದ್ದಾರೆ. ಈ ಎಲಾ ಅಭ್ಯಾಸಗಳು ಅನೇಕ ರೋಗಗಳಿಗೆ ಕಾರಣವಾಗುತ್ತವೆ. ಸರಿಯಾದ ನಿದ್ದೆ ವಿಶ್ರಾಂತಿಯು ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

* ನಿದ್ರೆ ಕೊರತೆಯಿಂದ ಕಣ್ಣಿನ ಸುತ್ತ ಕಪ್ಪು ವರ್ತುಲಗಳಿಗೆ ಕಾರಣವಾಗು ತ್ತದೆ. ಮೆದುಳು ದುರ್ಬಲವಾಗುತ್ತದೆ ಮತ್ತು ಜೀರ್ಣಶಕ್ತಿ ಕಡಿಮೆಯಾಗಿ ಬೊಜ್ಜು ಬರಲು ಕಾರಣವಾಗುತ್ತದೆ.

* ಮಲ ಮತ್ತು ಮೂತ್ರ ಬಂದಾಗ ಮಾಡದಿರುವುದು ಕೆಲವರು ಅನಿವಾರ್ಯವಾಗಿ ಕೆಲಸದ ಜಾಗದಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದರಿಂದ ಅಥವಾ ಇನ್ನಾವುದೋ ಕಾರಣದಿಂದ ಮಲಮೂತ್ರಗಳನ್ನು ವಿಸರ್ಜಿಸಲು ಆಗುವುದಿಲ್ಲ. ಮಲ ಮತ್ತು ಮೂತ್ರ ಬಂದಾಗ ಅದನ್ನು ಬಹಳ ಹೊತ್ತಿನವರೆಗೆ ಹಿಡಿದಿಟ್ಟುಕೊಳ್ಳಬಾರದು. ಹಾಗೆ ಮಾಡುವುದರಿಂದ ಮೂತ್ರಪಿಂಡಗಳು ಮತ್ತು ಕರುಳಿನ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಶರೀರದಲ್ಲಿನ ಕಲ್ಮಶಗಳು ಬಹಳ ಹೊತ್ತಿನ ವರೆಗೆ ಉಳಿದರೆ ಕಾಯಿಲೆಗಳಿಗೆ ಕಾರಣವಾಗುತ್ತದೆ.

* ಮಾನಸಿಕ ಖಿನ್ನತೆಯು ಮನುಷ್ಯನನ್ನು ದೈಹಿಕವಾಗಿಯೂ ದುರ್ಬಲಗೊಳಿಸುತ್ತದೆ. ಮಾನಸಿಕ ಖಿನ್ನತೆಗೆ ಒಳಗಾದ ಮನುಷ್ಯ ಚಟುವಟಿಕೆಯಿಂದ ಕೆಲಸಮಾಡಲು ಆಗುವುದಿಲ್ಲ. ದೀರ್ಘ ಕಾಲದವರೆಗೆ ಮನುಷ್ಯನು ಮಾನಸಿಕ ಖಿನ್ನತೆಗೆ ಒಳಗಾದರೆ ದೇಹದ ಲ್ಲಿನ ಜೀವಕೋಶಗಳ ವಯಸ್ಸಾಗುವ ಪ್ರಕ್ರಿಯೆಯು ತೀವ್ರಗೊಳ್ಳುತ್ತದೆ. ಇದರಿಂದಾಗಿ ಖಿನ್ನತೆಗೆ ಒಳಗಾದವರು ಉಳಿದವರಿಗಿಂತ ಬೇಗನೆ ವಯಸ್ಸಾದಂತೆ ಆಗುತ್ತಾರೆ.

* ಅತಿಯಾಗಿ ಉಪ್ಪನ್ನು ತಿನ್ನುವುದು ಕೆಲವರು ಊಟದಲ್ಲಿ ಹೆಚ್ಚು ಉಪ್ಪನ್ನು ತಿನ್ನುತ್ತಾರೆ. ದಿನನಿತ್ಯ ಉಪ್ಪಿನಕಾಯಿ ಸೇವಿಸುತ್ತಾರೆ. ದೇಹದಲ್ಲಿ ಅತಿಯಾದ ಸೋಡಿಯಂ ಲವಣಾಂಶದಿಂದ ಜೀವಕೋಶಗಳ ಕೊಳೆಯುವಿಕೆ ಪ್ರಾರಂಭವಾಗುತ್ತದೆ. ಇವರು ರಕ್ತದೊತ್ತಡ ಮತ್ತು ಹೃದ್ರೋಗಕ್ಕೆ ಸಹ ಗುರಿಯಾಗಬಹುದು.

* ದುರಭ್ಯಾಸಗಳು ವಿವಿಧ ರೀತಿಯಲ್ಲಿ ತಂಬಾಕಿನ ಸೇವನೆ ಧೂಮಪಾನ ಮದ್ಯಪಾನ ಇತ್ಯಾದಿ ದುರಭ್ಯಾಸಗಳಿಂದಾಗಿ ಆರೋಗ್ಯವು ಕೆಡುತ್ತದೆ. ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಏರುಪೇರಾಗಿ ಹೃದಯ ಮತ್ತು ಮೆದುಳು ದುರ್ಬಲವಾಗುತ್ತವೆ. ಲಿವರ್ ನ ಆರೋಗ್ಯ ಕೆಡುತ್ತದೆ. ಸದಾ ತಂಬಾಕು ತೆಗೆಯುವ ವ್ಯಕ್ತಿಯ ಹಲ್ಲುಗಳು ನಾಲಿಗೆ ಹಾನಿಗೊಳಗಾಗು ತ್ತವೆ. ವ್ಯಕ್ತಿ ವಯಸ್ಸಾದಂತೆ ಕಾಣುತ್ತಾನೆ. ಮತ್ತು ಬಾಯಿಯ ಒಳಗೆ ಮತ್ತು ಹೊರಗಿನ ಚರ್ಮದ ಜೀವಕೋಶಗಳು ಹಾನಿಗೊಳಗಾಗುತ್ತದೆ.

* ಹೆಚ್ಚು ಚಟುವಟಿಕೆ ಇಲ್ಲದಿರುವುದು ಇಂದು ಬಹುತೇಕ ಜನರು ಯಾವುದೇ ಚಟುವಟಿಕೆಗಳಿಲ್ಲದೆ ಎಂಟು ಗಂಟೆಗಳ ಕಾಲ ಕಚೇರಿಗಳಲ್ಲಿ ಕುಳಿತುಕೊಂಡಿರುತ್ತಾರೆ. ಸ್ವಂತ ಉದ್ಯೋಗ ಮಾಡುವ ಕೆಲವರು ತಮ್ಮ ಅಂಗಡಿಗಳಲ್ಲಿ ಸುಮಾರು 10 ರಿಂದ 12 ಗಂಟೆಗಳ ಕಾಲ ಕುಳಿತು ಕೊಳ್ಳುವ ಅನಿವಾರ್ಯತೆ ಹೊಂದಿದ್ದಾರೆ. ದೀರ್ಘಕಾಲದವರೆಗಿನ ಈ ಅಭ್ಯಾಸವು ಬೊಜ್ಜು ಸಕ್ಕರೆ ಕಾಯಿಲೆ ಮೂತ್ರಪಿಂಡ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ನಿದ್ರೆ ಬರಲು 5 ನಿಮಿಷ ಸಾಕು..!

 

ಆಯುರ್ವೇದದ ಪ್ರಕಾರ ಪ್ರತಿಯೊಬ್ಬರೂ ಕೂಡ ಎಡಗಡೆ ತಿರಗಿ ಮಲಗುವುದು ಬಹಳ ಒಳ್ಳೆಯದು ಎಂದೇ ಹೇಳುತ್ತಾರೆ. ಹಾಗೂ ಎಡಗಡೆ ತಿರುಗಿ ಮಲಗುವುದರಿಂದ ಗಾಢವಾದ ನಿದ್ರೆ ಬರುತ್ತದೆ ಎಂದೇ ಹೇಳುತ್ತಾರೆ. ಅದೇ ರೀತಿಯಾಗಿ ನಾವು ಬಲಗಡೆ ತಿರುಗಿ ಮಲಗುವುದ ರಿಂದ ಅಸಿಡಿಟಿ ಡಿಪಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ಹೇಳು ತ್ತಾರೆ. ಆದ್ದರಿಂದ ಎಡಗಡೆ ತಿರುಗಿ ಮಲಗುವಂತಹ ಅಭ್ಯಾಸವನ್ನು ರೂಡಿಸಿಕೊಳ್ಳುವುದು ಉತ್ತಮ.

* ಎಡಗಡೆ ಭಾಗದಲ್ಲಿ ಮಲಗುವುದರಿಂದ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುವುದಕ್ಕೆ ಸಹಕಾರಿಯಾಗುತ್ತದೆ. ಹಾಗೂ ಬಹಳ ಮುಖ್ಯವಾಗಿ ಪ್ರತಿಯೊಬ್ಬರೂ ಕೂಡ ದಕ್ಷಿಣ ಭಾಗಕ್ಕೆ ಅಥವಾ ಪೂರ್ವ ಭಾಗಕ್ಕೆ ತಲೆಹಾಕಿ ಮಲಗಿಕೊಳ್ಳುವುದು ಒಳ್ಳೆಯದು ಎಂದು ಹೇಳುತ್ತಾರೆ ಅದರಲ್ಲೂ ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿನಲ್ಲಿ ತಲೆಹಾಕಿ ಮಲಗುವುದು ಅತ್ಯಂತ ಶ್ರೇಷ್ಠ ಎಂದೇ ಹೇಳುತ್ತಾರೆ.

* ಯಾವುದೇ ಕಾರಣಕ್ಕೂ ಉತ್ತರ ದಿಕ್ಕಿಗೆ ತಲೆ ಹಾಗೂ ದಕ್ಷಿಣ ದಿಕ್ಕಿಗೆ ಕಾಲನ್ನು ಹಾಕಿ ಮಲಗಬಾರದು ಹೌದು ಈ ರೀತಿ ಮಲಗುವುದರಿಂದ ಅದು ನಮ್ಮ ಮನಸ್ಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಯಾವುದೇ ಒಂದು ವಿಚಾರವಾಗಿರಬಹುದು ನಮ್ಮ ಮನಸ್ಸಿನ ಸ್ಥಿತಿ ತುಂಬ ವಕ್ರವಾಗಿ ಇರುತ್ತದೆ.

ಉದಾಹರಣೆಗೆ ನೀವು ಮ್ಯಾಗ್ನೆಟ್ ಅನ್ನು ಉತ್ತರ ಹಾಗೂ ಉತ್ತರ ದಿಕ್ಕಿಗೆ ಇಟ್ಟರೆ ಅವೆರಡು ಒಟ್ಟಿಗೆ ಸೇರುತ್ತದೆ. ಅಲ್ಲಿ ಒಂದು ರೀತಿಯ ಒತ್ತಡ ಎನ್ನುವುದು ಏರ್ಪಡುತ್ತದೆ. ಅದೇ ರೀತಿಯಾಗಿ ನಮ್ಮ ತಲೆ ಭಾಗವು ಉತ್ತರ ಆಗಿರುವುದರಿಂದ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಬದಲಿಗೆ ದಕ್ಷಿಣ ದಿಕ್ಕಿಗೆ ನಮ್ಮ ತಲೆಯನ್ನು ಹಾಕಿ ಉತ್ತರ ದಿಕ್ಕಿಗೆ ಕಾಲನ್ನು ಹಾಕಿ ಮಲಗುವುದು ಒಳ್ಳೆಯದು.

* ಹಾಗಾಗಿ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ನಮ್ಮ ದೇಹ ಸಂಪೂರ್ಣವಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತದೆ. ಬದಲಿಗೆ ಯಾವುದೇ ರೀತಿಯ ಒತ್ತಡ ಪದೇಪದೇ ಎಚ್ಚರ ಆಗುವುದು ಈ ರೀತಿಯ ಯಾವುದೇ ರೀತಿಯ ಪರಿಸ್ಥಿತಿಗಳು ಕೂಡ ಎದುರಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಹೆಚ್ಚಿನ ಒಳ್ಳೆಯ ಸುಖವಾದಂತಹ ನಿದ್ರೆಯನ್ನು ಮಾಡಬಹುದಾಗಿದೆ.

* ನಾವು ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಪ್ರತಿಯೊಂದು ಅಂಗಾಂಗಗಳು ಕೂಡ ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ. ಹೌದು ವಿರುದ್ಧ ದಿಕ್ಕಿನಲ್ಲಿ ನಾವು ಮಲಗಿದಾಗ ನಮ್ಮ ದೇಹವು ಯಾವುದೇ ರೀತಿಯ ಆಕರ್ಷಣೆಗೆ ಒಳಪಡುವುದಿಲ್ಲ ಬದಲಿಗೆ ಅವುಗಳ ಕೆಲಸ ಸರಾಗವಾಗಿ ನಡೆಯುತ್ತಿರುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ.

* ಅದೇ ರೀತಿಯಾಗಿ ನಾವು ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ನಮ್ಮ ಮೆದುಳಿಗೆ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ ಹಾಗೂ ರಾತ್ರಿ ಸಮಯ ಸ್ನಾನ ಮಾಡಿ ಮಲಗುವುದರಿಂದಲೂ ಕೂಡ ಗಾಢವಾದ ನಿದ್ದೆಯನ್ನು ಮಾಡಬಹುದು.
* ದಿನವಿಡೀ ನಮ್ಮ ದೇಹ ಹಲವಾರು ಕೆಲಸ ಕಾರ್ಯಗಳಲ್ಲಿ ತೊಡಗಿರು ತ್ತದೆ ಆಗ ದೇಹ ಹೆಚ್ಚು ಒತ್ತಡವನ್ನು ಅನುಭವಿಸಿರುತ್ತದೆ. ಆದ್ದರಿಂದ ರಾತ್ರಿ ಮಲಗುವ ಸಮಯದಲ್ಲಿ ಸ್ನಾನ ಮಾಡಿ ಮಲಗುವುದರಿಂದ ನಮ್ಮ ದೇಹಕ್ಕೆ ವಿಶ್ರಾಂತಿ ಸಿಗುವುದಷ್ಟೇ ಅಲ್ಲದೆ ಉತ್ತಮವಾದ ಆರೋಗ್ಯ ವನ್ನು ಸಹ ಪಡೆದುಕೊಳ್ಳುತ್ತದೆ.

* ಅದರಲ್ಲೂ ರಾತ್ರಿ ಸಮಯ ಮಲಗುವಾಗ ನಿಮ್ಮ ಅಕ್ಕ ಪಕ್ಕದಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಫೋನ್ ಇಟ್ಟುಕೊಳ್ಳಬೇಡಿ ಬದಲಿಗೆ ಬೇವಿನ ಎಣ್ಣೆಯ ದೀಪವನ್ನು ಹಚ್ಚಿ ಮಲಗುವುದರಿಂದ ಕಣ್ಣಿಗೆ ತಂಪಾದಂತಹ ಬೆಳಕು ಬೀಳುತ್ತದೆ ಹಾಗೂ ಸುಖವಾದ ನಿದ್ರೆ ಮಾಡಬಹುದು.

ಪೋಷಕರಿಗೆ ಕಿವಿ ಮಾತು.! ತಪ್ಪದೆ ಈ ಸಲಹೆ ಪಾಲಿಸಿ ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ.!

 

ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಹಲವಾರು ಮಾಹಿತಿಗಳನ್ನು ತಿಳಿದುಕೊಂಡಿರುವುದು ಒಳ್ಳೆಯದು ಎಂದರೆ ತಮ್ಮ ಮಕ್ಕಳನ್ನು ಯಾವ ರೀತಿಯಾಗಿ ಬೆಳೆಸಬೇಕು ಯಾವ ಗುಣಗಳನ್ನು ಹೇಳಿಕೊಡಬೇಕು. ಅವರು ಚಿಕ್ಕವರಾಗಿದ್ದಾಗಲೇ ಯಾವುದರ ಬಗ್ಗೆ ಹೆಚ್ಚು ಆಸಕ್ತಿ ಹೊಂದಬೇಕು ಹೀಗೆ ಅವರಿಗೆ ಅನುಕೂಲವಾಗುವಂತೆ ಕೆಲವೊಂದು ಮಾಹಿತಿಗಳನ್ನು ಹೇಳಿಕೊಡುವುದು ಒಳ್ಳೆಯದು.

ಹಾಗಾದರೆ ಈ ದಿನ ಪೋಷಕರು ತಮ್ಮ ಜೀವನದಲ್ಲಿ ಯಾವ ರೀತಿಯಾದಂತಹ ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡಿರಬೇಕು. ಹಾಗೇನಾ ದರೂ ನೀವು ತಿಳಿದು ಕೊಳ್ಳದೆ ಇದ್ದರೆ ಯಾವ ರೀತಿಯ ಸಮಸ್ಯೆಗಳು ಎದುರಾಗಬಹುದು. ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲ ವಾರು ಮಾಹಿತಿಗಳ ಬಗ್ಗೆ ತಿಳಿದು ಕೊಳ್ಳುತ್ತಾ ಹೋಗೋಣ. ಹಾಗಾದರೆ ಪೋಷಕರಿಗೆ ಯಾವ ಕೆಲವು ಕಿವಿ ಮಾತುಗಳು ಅನುಕೂಲವಾಗುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಯೋಣ.
.
* 3 ರಿಂದ 6 ವರ್ಷ ವಯಸ್ಸಿನ ಮಕ್ಕಳಿಗೆ ಮೆದುಳಿನ ಬೆಳವಣಿಗೆ ಆಗುತ್ತಿರುತ್ತದೆ. ಈ ಸಮಯದಲ್ಲಿ ಅವರು ಏನೆಲ್ಲ ಗ್ರಹಿಸುತ್ತಾರೋ ಅದನ್ನೇ ವಾಸ್ತವ ಎಂದು ತಿಳಿಯುತ್ತಾರೆ. ಇಂತಹ ಕಾಲ್ಪನಿಕ ಜೀವನದಿಂದ ದೂರವಿಡಲು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ.
* ಮನೆಯಲ್ಲಿ ಮಕ್ಕಳನ್ನು ಒಂಟಿಯಾಗಿ ಇರಲು ಬಿಡಬೇಡಿ. ಅವರ ಜೊತೆ ಇದ್ದು ಅವರಿಗೆ ಪ್ರೀತಿ ಕೊಡಿ.

* ಮಕ್ಕಳು ಖಾಲಿ ಪುಸ್ತಕ ಇದ್ದಂತೆ ಬೆಳವಣಿಗೆ ಆದಂತೆ ಒಳ್ಳೆಯದನ್ನು ಉಳಿಸಬೇಕು ಕೆಟ್ಟದನ್ನು ಅಳಿಸಬೇಕು ಇದು ಪೋಷಕರ ಮುಖ್ಯ ಕರ್ತವ್ಯ
* ಟಿವಿ, ಮೊಬೈಲ್, ಕಂಪ್ಯೂಟರ್ ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳ ಗೀಳು ಹತ್ತದಂತೆ ಎಚ್ಚರ ವಹಿಸಿ.
* ದೈಹಿಕ ಚಟುವಟಿಕೆಗೆ ಓಟ, ಸೈಕಲ್ ಸವಾರಿ ಹಾಗೂ ಗ್ರಾಮೀಣ ಕ್ರೀಡೆ ಆಡಿಸಿ.

* ಮಕ್ಕಳನ್ನು ಮನೆಯಲ್ಲಿ ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡುಗುವಂತೆ ಹೇಳಿ.
* ಮನೆಯ ಬಳಿಯೇ ವಾಕಿಂಗ್,ಯೋಗ, ಧ್ಯಾನ ವ್ಯಾಯಾಮ ಅಭ್ಯಾಸ ಮಾಡಿಸಿ.
* ಸಂಬಂಧಿಕರು ಹಾಗೂ ಮಕ್ಕಳ ಸ್ನೇಹಿತರ ಜತೆ ಆಗಾಗ್ಗೆ ಪೋನ್‌ನಲ್ಲಿ ಮಾತನಾಡಿಸುತ್ತಿರಿ.
* ತಾತ ಅಜ್ಜಿಯರ ಬಳಿ ಮಕ್ಕಳನ್ನು ಆಡಲು, ಮಾತನಾಡಲು ಬಿಡಿ.
* ತಾರಸಿ ಅಥವಾ ಮನೆ ಬಳಿ ಇರುವ ಜಾಗದಲ್ಲಿ, ತೋಟದಲ್ಲಿ ಗಿಡ ಬೆಳೆಸುವುದನ್ನು ಕಲಿಸಿ.

* ಜಂಕ್ ಫುಡ್‌ಗಳಿಂದ ದೂರವಿಟ್ಟು ಪೌಷ್ಟಿಕ, ಆರೋಗ್ಯಕರ ಆಹಾರದ ಅರಿವು ಮೂಡಿಸಿದರೆ ಒಳ್ಳೆಯದು.
* ಊಟದ ಮಹತ್ವ ತಿಳಿಸಿ. ಊಟವನ್ನು ವ್ಯರ್ಥ ಮಾಡಬಾರದು ಎಂದು ಮನವರಿಕೆ ಮಾಡಿ.
* ಮಕ್ಕಳಿಗೆ ಶುಚಿತ್ವದ ಅರಿವು ಮೂಡಿಸುವುದು ಒಳ್ಳೆಯದು. ಊಟಕ್ಕೆ ಮುಂಚೆ ಕೈ ತೊಳೆಯುವುದು, ಸ್ನಾನ ಮಾಡುವುದು ಇನ್ನೂ ಹಲವಾರು ವಿಷಯಗಳ ಬಗ್ಗೆ ಅರಿವು ಮೂಡಿಸಬೇಕು.
* ಮಕ್ಕಳ ಎದುರು ಜಗಳ ಆಡಬೇಡಿ, ಕೆಟ್ಟ ಶಬ್ದಗಳನ್ನು ಉಪಯೋಗಿಸ ಬೇಡಿ.

* ಅವರ ಮನಸ್ಸು ತುಂಬಾ ಸೂಕ್ಷ್ಮ, ಮುಂದೆ ಆ ಪದಗಳನ್ನು ಅವರು ಕಲಿಯುತ್ತಾರೆ.
* ಆರ್ಥಿಕ ಸಮಸ್ಯೆಗಳನ್ನು ಮಕ್ಕಳ ಮುಂದೆ ಚರ್ಚೆ ಮಾಡಬೇಡಿ.
* ಮಕ್ಕಳ ಮುಂದೆ ಸುಳ್ಳು ಹೇಳೋದು, ಕೋಪ ಮಾಡಿಕೊಳ್ಳೋದು ಮಾಡಬೇಡಿ. ನೀವು ಏನು ಮಾಡುತ್ತೀರಿ ಅದನ್ನೇ ಕಲಿಯುತ್ತಾರೆ.
* ಚಿಕ್ಕ ವಯಸ್ಸಿನಲ್ಲೇ ಜವಾಬ್ದಾರಿಯನ್ನು ಕಲಿಸಬೇಕು. ತಮ್ಮ ಕೆಲಸ ತಾವೇ ಮಾಡಿಕೊಳ್ಳುವಷ್ಟು ಬುದ್ದಿವಂತರನ್ನಾಗಿ ಮಾಡಬೇಕು.
* ಮಕ್ಕಳನ್ನು ಮತ್ತೊಂದು ಮಗುವಿಗೆ ಹೋಲಿಸಿ ಮಾತನಾಡುವುದು ಬಿಡಬೇಕು.

* ಮಕ್ಕಳಿಗೆ ತಪ್ಪು ಮಾಡಿದ ಕೂಡಲೇ ಹೊಡೆಯುವುದು ಅಥವಾ ಬಯ್ಯುವುದು ಇದನ್ನು ಮೊದಲು ಬಿಟ್ಟುಬಿಡಿ. ಈ ರೀತಿ ಮಾಡುವು ದರಿಂದ ಮಕ್ಕಳು ತಪ್ಪು ಮಾಡಿದರೆ ಹೊಡೆಯುತ್ತಾರೆ ಅಷ್ಟೇ ಎನ್ನುವ ಮನಸ್ಥಿತಿಯಲ್ಲಿ ಇರುತ್ತಾರೆ ಬದಲಿಗೆ ಒಳ್ಳೆಯ ಮಾತಿನಿಂದ ಅವರು ತಪ್ಪು ಮಾಡದೆ ಇರುವ ರೀತಿ ನೋಡಿಕೊಳ್ಳುವುದು ಉತ್ತಮ.
* ಪ್ರೀತಿ ಮತ್ತು ಹೊಗಳಿಕೆಯಿಂದ ಮಕ್ಕಳಲ್ಲಿ ಧನಾತ್ಮಕ ಭಾವನೆ ಹುಟ್ಟುವಂತೆ ಮಾಡಬೇಕು.