Home Blog Page 192

ನಿಮ್ಮ ಹೆಸರಿನ ಮೊದಲ ಅಕ್ಷರ ನಿಮ್ಮ ಗುಣದ ಬಗ್ಗೆ ಹೇಳುತ್ತದೆ, ಜೀವನದ ಅದೇಷ್ಟೋ ಸತ್ಯ ನಿಮ್ಮ ಹೆಸರಿನಲ್ಲೆ ಅಡಗಿದೆ ಏನದು ಅಂತ ನೋಡಿ.!

 

ಹುಟ್ಟಿದ ಪ್ರತಿಯೊಬ್ಬರಿಗೂ ಕೂಡ ಅವರನ್ನು ಗುರುತಿಸುವ ಕಾರಣದಿಂದ ಒಂದು ಹೆಸರನ್ನು ಇಡುತ್ತಾರೆ. ಕೆಲವರು ತಮ್ಮ ಅಭಿಮಾನವನ್ನು ತೋರಿಸುವ ಇಚ್ಛೆಯಿಂದ ಅವರು ಯಾರ ಅಭಿಮಾನಿಗಳ ಆಗಿರುತ್ತಾರೆ ಅಂತ ಸ್ಟಾರ್ಗಳ ಹೆಸರು ಇಡುತ್ತಾರೆ. ಕೆಲವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅವರ ರಾಶಿ ನಕ್ಷತ್ರಗಳ ಅನುಗುಣವಾಗಿ ಹೆಸರು ಇಟ್ಟರೆ, ಕೆಲವರು ಯಾರು ಜೀವನದಲ್ಲಿ ಏಳಿಗೆ ಕಂಡಿರುತ್ತಾರೋ ಅವರಂತೆ ತಮ್ಮ ಮಕ್ಕಳಾಗಲಿ ಎಂದು ಹೆಸರು ಇಡುತ್ತಾರೆ.

ಈ ರೀತಿ ಇಟ್ಟ ಹೆಸರಿನಿಂದ ಅಥವಾ ಕರೆವ ಹೆಸರಲ್ಲೂ ವೈಬೇಷನ್ ಇರುತ್ತದೆ ಹಾಗಾಗಿಯೇ ಹೆಸರನ್ನು ಕೇಳಿ ಅಥವಾ ಯಾವ ಅಕ್ಷರದಿಂದ ಹೆಸರು ಆರಂಭ ಆಗುತ್ತದೆ ಎನ್ನುವುದರ ಮೇಲೆ ಅವರ ವ್ಯಕ್ತಿತ್ವವನ್ನು ಕೂಡ ತಿಳಿದುಕೊಳ್ಳಬಹುದು. ಈ ಅಂಕಣದಲ್ಲಿ ನಾವು ಎಲ್ಲಾ ಅಕ್ಷರಗಳ ಗುಣಲಕ್ಷಣಗಳ ಉದಾಹರಣೆಯನ್ನು ಕೊಡುತ್ತಿದ್ದೇವೆ. ನೀವು ಕೂಡ ನಿಮ್ಮ ಹೆಸರು ಹಾಗೂ ನಿಮ್ಮ ಗುಣದ ಬಗ್ಗೆ ತಾಳೆ ಮಾಡಿ ನೋಡಿ.

A ಹೆಸರಿನಿಂದ ಆರಂಭವಾಗುವ ಹೆಸರಿನಲ್ಲಿ ಹುಟ್ಟಿದವರಿಗೆ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ. ಇವರು ಧೈರ್ಯವಂತರು ಸಾಹಸವಂತರು ಮತ್ತು ಛಲಗಾರರಾಗಿರುತ್ತಾರೆ, ಇವರಿಗೆ ಆತ್ಮವಿಶ್ವಾಸ ಹೆಚ್ಚಾಗಿ ಇರುತ್ತದೆ.
B ಅಕ್ಷರದವರಿಗೆ ಭಾವನೆಗಳನ್ನು ಕಂಟ್ರೋಲ್ ಮಾಡಲು ಚೆನ್ನಾಗಿ ತಿಳಿದಿರುತ್ತದೆ, ಇವರು ಮತ್ತೊಬ್ಬರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಗುಣ ಹೊಂದಿರುತ್ತಾರೆ, ಆದರೆ ಸ್ವಾರ್ಥ ಬುದ್ಧಿ ಇರುತ್ತದೆ.

C ಅಕ್ಷರದವರು ಹೆಚ್ಚು ಪ್ರತಿಭಾವಂತರಾಗಿರುತ್ತಾರೆ ಮತ್ತು ಎಲ್ಲರೊಡನೆ ಬೇಗ ಹೊಂದಿಕೊಳ್ಳುತ್ತಾರೆ ಹೆಚ್ಚು ಮಾತನಾಡುವ ಗುಣ ಹೊಂದಿದ್ದರು ಪ್ರಾಮಾಣಿಕರಾಗಿರುತ್ತೀರಿ.
D ಅಕ್ಷರದವರು ಯಾವಾಗಲೂ ಸ್ಥಿತಪ್ರಜ್ಞರಾಗಿರುತ್ತಾರೆ. ಸಮತೋಲನ ಭದ್ರತೆ ಹಾಗೂ ಕಠಿಣ ಪರಿಶ್ರಮವನ್ನು ಪ್ರತಿನಿಧಿಸುತ್ತಾರೆ. ಸ್ವಚ್ಛತೆ ಹಾಗೂ ಜೋಡಣೆಗೆ ಹೆಚ್ಚು ಗಮನ ಕೊಡುತ್ತಾರೆ.

E ಅಕ್ಷರದಿಂದ ಹೆಸರು ಆರಂಭವಾಗುವವರು ಸ್ನೇಹ ಮತ್ತು ಪ್ರೀತಿಗೆ ಬದ್ಧರು. ಕಠಿಣ ಸಮಸ್ಯೆಯನ್ನು ಕೂಡ ಉಪಾಯದಿಂದ ಬಗೆಹರಿಸುವವರು. ದೊಡ್ಡ ಸ್ನೇಹ ಬಳಗವನ್ನು ಹೊಂದಿರುವವರು.
F ಅಕ್ಷರದವರು ಕುಟುಂಬಕ್ಕೆ ಹೆಚ್ಚು ಗಮನ ಕೊಡುತ್ತಾರೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ರೋಮ್ಯಾಂಟಿಕ್ ಹಾಗೂ ಚೈಲ್ಡೀಷ್ ಗುಣವನ್ನು ಹೊಂದಿರುತ್ತಾರೆ.

G ಅಕ್ಷರದವರು ಶಾಂತ ಸ್ವಭಾವ ಹಾಗೂ ದೃಢ ಮನಸ್ಸನ್ನು ಹೊಂದಿರುತ್ತಾರೆ. ಕೋಪವನ್ನು ಹೊರಗೆ ತೋರಿಸಿಕೊಳ್ಳದ ಇವರು ಜೀವನವನ್ನು ಅವರಿಷ್ಟದಂತೆ ಕಳೆಯಲು ಬಯಸುತ್ತಾರೆ.
I ಅಕ್ಷರದವರು ಶುದ್ದ ಮನಸ್ಸಿನವರ ಆದರೆ ಹೆಚ್ಚು ಅವಲಂಬಿತರು. ಯಾವಾಗಲೂ ಓವರ್ ಥಿಂಕ್ ಮಾಡುವಂತವರು. ಬೇರೆಯವರ ಕಷ್ಟಕ್ಕೆ ಬೇಗ ಮರಗುವ ಗುಣ ಇರುತ್ತದೆ.

J ಅಕ್ಷರದವರು ಜೀವನದಲ್ಲಿ ಮಹತ್ವಕಾಂಕ್ಷೆಯನ್ನು ಹೊಂದಿರುತ್ತಾರೆ. ಅಂದುಕೊಂಡಿದ್ದನ್ನು ಸಾಧಿಸುವ ಗುಣ ಇವರಲ್ಲಿ ಇರುತ್ತದೆ.
K ಅಕ್ಷರದವರು ನಾಚಿಕೆ ಸ್ವಭಾವದವರು. ತುಂಬಾ ಸೀಕ್ರೆಟ್ ಪರ್ಸನ್ ಆಗಿರುತ್ತಾರೆ ಬಹಳ ಬೇಗ ಎಲ್ಲರಿಗೂ ಅರ್ಥವಾಗುವುದಿಲ್ಲ.
L ಅಕ್ಷರದವರು ಜೀವನವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಾರೆ. ಸಂಗಾತಿಯನ್ನು ಬಹಳ ಇಷ್ಟಪಡುತ್ತಾರೆ.

M ಅಕ್ಷದವರು ಕಷ್ಟಪಟ್ಟು ಕೆಲಸ ಮಾಡುವ ಶ್ರಮಜೀವಿಗಳು. ಇವರು ಯಾರ ತಂಟೆಗೆ ಹೋಗುವುದಿಲ್ಲ, ಇವರ ತಂಟೆಗೆ ಯಾರಾದರೂ ಬಂದರೆ ಅವರನ್ನು ಬಿಡುವುದಿಲ್ಲ.
N ಅಕ್ಷರದವರು ನೇರ ನಡೆನುಡಿಯವರು, ಎಲ್ಲದರಲ್ಲೂ ಪರ್ಫೆಕ್ಷನ್ ಬಯಸುವವರು. ಬದುಕಿನಲ್ಲಿ ಅವರದ್ದೇ ಆದ ಸಿದ್ಧಾಂತಗಳನ್ನು ನಂಬಿ ಬದುಕುವವರು.
O ಅಕ್ಷರದವರು ಬಹಳ ಅಪರೂಪದ ಗುಣ ಹೊಂದಿರುವವರು ನಂಬಿಕಸ್ಥರು, ಎಲ್ಲರ ಮೇಲು ಪ್ರೀತಿ ಕರುಣೆ ತೋರುವವರು.

P ಅಕ್ಷರದವರು ಹಾಸ್ಯಪ್ರಜ್ಞೆ ಉಳ್ಳವರು ಸದಾ ಲವಲವಿಕೆಯಿಂದ ಇದ್ದು ಸುತ್ತಲಿನವರನ್ನು ಕೂಡ ಖುಷಿಯಾಗಿಡಿಯಲು ಪ್ರಯತ್ನಿಸುವವರು.
Q ಅಕ್ಷರದವರು ಸದಾ ನಿಗೂಢತೆ ಕಾಯ್ದುಕೊಂಡರು ನಂಬಿಕೆಗೆ ಅರ್ಹರು. ನಂಬಿದರೆ ಪ್ರಾಣ ಸ್ನೇಹಿತರು ಆಗಬಲ್ಲರು.
S ಅಕ್ಷರದವರು ಪ್ರೀತಿಗಾಗಿ ಏನು ಬೇಕಾದರೂ ಸಹಿಸಿಕೊಳ್ಳುವಂತವರು. ಹತ್ತಾರು ಜನರ ಮಧ್ಯೆ ಕೂಡ ಗಮನ ಸೆಳೆಯುವಂತಹ ವಿಶೇಷ ಕೂಡ ಉಳ್ಳವರು.

T ಅಕ್ಷರದವರು ಎಲ್ಲದಕ್ಕೂ ವಾದ ಮಾಡುತ್ತಾರೆ, ಯಾವುದೇ ವಿಷಯವಿದ್ದರೂ ಕೂಡ ಮಧ್ಯ ಪ್ರವೇಶಿಸಿ ಗೆಲ್ಲಬಲ್ಲ ಮಾತುಗಾರರು.
U ಅಕ್ಷರದವರು ಜೀವನದಲ್ಲಿ ಫೇಮಸ್ ಆಗಲು ಬಯಸುತ್ತಾರೆ. ಯಾವಾಗ ಏನು ಮಾಡಬೇಕು ಎನ್ನುವ ಕ್ಲಾರಿಟಿ ಜೊತೆಗೆ ಸದಾ ಹೊಸದಕ್ಕೆ ತುಡಿಯುತ್ತಿರುತ್ತಾರೆ.
V ಅಕ್ಷರದವರು ಸಣ್ಣ ಪುಟ್ಟ ವಿಷಯಗಳನ್ನು ಕೂಡ ಹೆಚ್ಚು ಗಮನಿಸುತ್ತಾರೆ ಮತ್ತು ಎಲ್ಲಾ ವಿಷಯಗಳನ್ನು ಕೂಡ ದೀರ್ಘಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಗುಣವನ್ನು ಹೊಂದಿರುತ್ತಾರೆ.

W ಅಕ್ಷರದವರು ಸುಲಭವಾಗಿ ಯಾರನ್ನು ನಂಬುವುದಿಲ್ಲ, ಯಾವುದೇ ವಿಷಯವಿದ್ದರೂ ಕೂಡ ಮುನ್ನುಗ್ಗುವ ಸ್ವಭಾವದವರು.
X ಅಕ್ಷರದವರು ಅಪರೂಪದಲ್ಲಿ ಅಪರೂಪದ ಗುಣದವರು. ಎಲ್ಲರಿಗಿಂತ ಬಹಳ ವಿಶೇಷ ಎಣಿಸುವವರು.
Y ಅಕ್ಷರದವರು ಜನರೊಂದಿಗೆ ಹೆಚ್ಚು ಬೆರೆಯುವುದಿಲ್ಲ ಸದಾ ಸ್ವಾತಂತ್ರ್ಯದಿಂದ ಇರಲು ಇಚ್ಛೆ ಪಡುತ್ತಾರೆ.
Z ಅಕ್ಷರದವರು ಅಂದುಕೊಂಡ ಗುರಿ ಸಾಧನೆಗಾಗಿ ಎಷ್ಟು ಬೇಕಾದರೂ ಕಷ್ಟ ಪಡುತ್ತಾರೆ ಜೀವನದಲ್ಲಿ ಉತ್ತಮ ಸ್ಥಾನಗಳಿಗೆ ಇವರು ತಲುಪುತ್ತಾರೆ.

ಕೊತ್ತಂಬರಿ ಸೊಪ್ಪು ತುಂಬಾ ದಿನ ಹಾಳಾಗದೆ ಇರಬೇಕು ಎಂದರೆ ಒಂದು ನೀರಿನ ಬಾಟಲಿ ಇಂದ ಈ ರೀತಿ ಮಾಡಿ ಸಾಕು.! ಸೊಪ್ಪು ಬೇಗ ಹಾಳಗಲ್ಲ

 

ಕೊತ್ತಂಬರಿ ಸೊಪ್ಪು ಬಹುಬೇಗ ಹಾಳಾಗುವ ಒಂದು ಪದಾರ್ಥ. ಫ್ರಿಡ್ಜ್ ಅಲ್ಲಿ ಇಟ್ಟರೂ ಕೂಡ ಕೊತ್ತಂಬರಿ ಸೊಪ್ಪು ಬಹಳ ಬೇಗ ಕೆಟ್ಟು ಹೋಗುತ್ತದೆ. ಆದರೆ ಕೊತ್ತಂಬರಿ ಸೊಪ್ಪನ್ನು ತಂದ ತಕ್ಷಣವೇ ಒಂದು ಟಿಪ್ಸ್ ಫಾಲೋ ಮಾಡುವುದರಿಂದ ಬಹಳ ದಿನಗಳವರೆಗೆ ಕೊತ್ತಂಬರಿ ಸೊಪ್ಪು ಬಾಳಿಕೆ ಬರುವ ಹಾಗೆ ಮಾಡಬಹುದು. ಯಾಕೆಂದರೆ ಕೆಲವೊಮ್ಮೆ ಕೊತ್ತಂಬರಿ ಸೊಪ್ಪಿಗೆ ವಿಪರೀತ ರೇಟ್ ಇರುತ್ತದೆ.

ಕೆಲವೊಮ್ಮೆ ಮಾರ್ಕೆಟ್ ಅಲ್ಲಿ ಕೊತ್ತಂಬರಿ ಸೊಪ್ಪು ಸಿಗುವುದಿಲ್ಲ ಇನ್ನು ಕೆಲವೊಮ್ಮೆ ಕಡಿಮೆ ರೇಟ್ ಕಡಿಮೆ ಇದೆ ಎಂದು ಹೆಚ್ಚು ತಂದಾಗ ಹೆಚ್ಚು ದಿನ ಅದು ಬಾಳಿಕೆ ಬರದೆ ಹಾಳಾದರೂ ಹಣ ವ್ಯರ್ಥ ಆದಂತೆ ಅನಿಸುತ್ತದೆ. ಹಾಗಾಗಿ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಹೆಚ್ಚು ದಿನ ಕೊತ್ತಂಬರಿ ಸೊಪ್ಪು ಬಾಳಿಕೆ ಬರುವ ಹಾಗೆ ಮಾಡಿ.

ನೀರಿನ ಬಾಟಲಿ ಎಲ್ಲರ ಮನೆಯಲ್ಲೂ ಕೂಡ ಇರುತ್ತದೆ ಈ ರೀತಿ ಬಿಸಿಲರಿ ಅಥವಾ ಯಾವುದೇ ವಾಟರ್ ಬಾಟಲ್ ಗಳನ್ನು ಬಿಸಾಡುವ ಬದಲು ಅದನ್ನೇ ಹಲವು ಕೆಲಸಗಳಿಗೆ ಬಳಸಿಕೊಳ್ಳಬಹುದು. ಅದೇ ರೀತಿ ಕೊತ್ತಂಬರಿ ಸೊಪ್ಪನ್ನು ಹಾಳಾಗದಂತೆ ನೋಡಿಕೊಳ್ಳುವ ಟ್ರಿಕ್ ಗೂ ಕೂಡ ಈ ಬಿಸಿಲಲ್ಲಿ ಬಾಟಲ್ ಅನುಕೂಲಕ್ಕೆ ಬರುತ್ತದೆ. ನೀರು ಖಾಲಿಯಾದ ಮೇಲೆ ಆ ಬಾಟಲನ್ನು ತೆಗೆದುಕೊಳ್ಳಿ.

ಅದನ್ನು ಅಳತೆ ನೋಡಿ ಕಾಲು ಭಾಗದಿಂದ ಕೆಳಗೆ ಮಧ್ಯಕ್ಕೆ ಸಿಝರ್ ಸಹಾಯದಿಂದ ಪೂರ್ತಿ ಕಟ್ ಮಾಡಿ ಮೇಲಿನ ಭಾಗಕ್ಕೆ ಪ್ರತಿ 1/2 ಇಂಚಿಗೂ ಸುತ್ತಲೂ ಕಟ್ ಮಾಡಿ ಈ ರೀತಿ ಆದ ಬಳಿಕ ಪಕ್ಕದಲ್ಲಿಟ್ಟು, ನೀವು ತಂದಿರುವ ಕೊತ್ತಂಬರಿ ಸೊಪ್ಪನ್ನು ಕ್ಲೀನ್ ಮಾಡಿಕೊಳ್ಳಿ.

ಬೇರುಗಳನ್ನು ತೆಗೆದು ಕೊಳಕಾಗಿರುವ ಅಥವಾ ಕೆಂಪಾಗಿರುವ ಕೊತ್ತಂಬರಿ ಸೊಪ್ಪನ್ನು ತೆಗೆದು ಕ್ಲೀನ್ ಆಗಿರುವ ಕೊತ್ತಂಬರಿ ಸೊಪ್ಪು ಅನ್ನು ಈ ಬಾಟಲಿಯಲ್ಲಿ ತುಂಬಿ ಮೇಲ್ಭಾಗವನ್ನು ಅರ್ಧ ಇಂಚಿಗೆ ಕಟ್ ಮಾಡಿಕೊಂಡು ಇಟ್ಟುಕೊಂಡ ಆ ಭಾಗವನ್ನು ಲಾಕ್ ಮಾಡಿ ಮುಚ್ಚುಳ ಹಾಕಿ. ಈ ರೀತಿ ಮಧ್ಯದಲ್ಲಿ ಕಟ್ ಮಾಡಿರುವುದರಿಂದ ಅದಕ್ಕೆ ಎಷ್ಟು ಗಾಳಿ ಬೇಕು ಅಷ್ಟು ಗಾಳಿ ಮಾತ್ರ ಒಳ ಹೋಗುತ್ತಿರುತ್ತದೆ ಇದರಿಂದ ಕೊತ್ತಂಬರಿ ಸೊಪ್ಪು ಕೊಳೆತು ಹೋಗುವುದಿಲ್ಲ.

ಈಗ ಇದನ್ನು ಫ್ರಿಡ್ಜ್ ಒಳಗೆ ಇಟ್ಟು ಎಷ್ಟು ದಿನ ಬೇಕಾದರೂ ನೀವು ಉಪಯೋಗಿಸಬಹುದು ಜೊತೆಗೆ ನೀವು ಉಪಯೋಗಿಸಿದ ಮೇಲೆ ಎಷ್ಟು ಕೊತ್ತಂಬರಿಸೊಪ್ಪು ಉಳಿದಿದೆ ಎನ್ನುವುದು ಕೂಡ ಟ್ರಾನ್ಸ್ಪರೆಂಟ್ ಆಗಿಯೇ ಕಾಣುತ್ತದೆ. ಈ ರೀತಿಯಾಗಿ ಕೊತ್ತಂಬರಿ ಸೊಪ್ಪಿನ ಕ್ವಾಂಟಿಟಿಗೆ ಅನುಗುಣವಾಗಿ ದೊಡ್ಡ ಬಾಟಲ್ ಅಥವಾ ಹೆಚ್ಚು ಬಾಟಲ್ ಗಳಲ್ಲಿ ಈ ರೀತಿ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು.

ಕೊತ್ತಂಬರಿ ಸೊಪ್ಪು ಮಾತ್ರ ಅಲ್ಲದೆ ಪುದಿನ ಸೊಪ್ಪು, ಕರಿಬೇವು ಸೊಪ್ಪು ಇವುಗಳಿಗೂ ಸಹ ಇದನ್ನೇ ಅಪ್ಲೈ ಮಾಡಬಹುದು. ಈ ರೀತಿಯಾಗಿ ಮನೆಯಲ್ಲಿ ಇರುವ ವಸ್ತುಗಳನ್ನು ವೇಸ್ಟ್ ಎಂದು ಬಿಸಾಕುವ ಬದಲು ಅವುಗಳನ್ನೇ ಸರಿಯಾಗಿ ಬಳಸಿಕೊಂಡು ಈ ರೀತಿ ಅವುಗಳಿಂದ ಉಪಯೋಗ ಪಡೆದುಕೊಳ್ಳಬಹುದು ಮತ್ತು ಮನೆಗೆ ಹಣ ಕೊಟ್ಟು ತರುವ ವಸ್ತುಗಳು ಹೆಚ್ಚು ದಿನ ಬಾಳಕೆ ಬರುವ ರೀತಿ ಸಹ ನೋಡಿಕೊಳ್ಳಬಹುದು. ಈ ಟ್ರಿಕ್ ಅನ್ನು ತಪ್ಪದೆ ಒಮ್ಮೆ ಟ್ರೈ ಮಾಡಿ ನೋಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ.? ಎಲ್ಲಾ ಮಹಿಳೆಯರೆಲ್ಲಾ ತಿಳಿದುಕೊಳ್ಳಬೇಕಾದ ವಿಷಯ ಇದು…

 

ಕಾಂಗ್ರೆಸ್ ಪಕ್ಷವು ಚುನಾವಣೆ ಮುಂಚೆ ನೀಡಿದ್ದ ಪಂಚಖಾತ್ರಿ ಭರವಸೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದು. ಎರಡನೇ ಗ್ಯಾರಂಟಿ ಕಾರ್ಡ್ ಯೋಜನೆ ಯಾಗಿ ಘೋಷಣೆಯಾಗಿದ್ದ ಗೃಹಲಕ್ಷ್ಮಿ ಯೋಜನೆ ಅಡಿ ಕಾಂಗ್ರೆಸ್ ಸರ್ಕಾರ ಸ್ಥಾಪನೆಯಾದರೆ ರಾಜ್ಯದ ಎಲ್ಲಾ ಕುಟುಂಬಗಳ ಯಜಮಾನಿಗೆ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗೆ ಸಹಾಯಧನ ನೀಡಿ ಅವರ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ಪಕ್ಷವು ಭರವಸೆ ನೀಡಿತ್ತು.

ಅಂತೆಯೇ ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆ 2023 ರಲ್ಲಿ ಗೆದ್ದ ಬಳಿಕ ಈ ಯೋಜನೆ ಅನುಷ್ಠಾನಕ್ಕೆ ಸಿದ್ಧಗೊಂಡಿದೆ. ಇದಕ್ಕಿರುವ ರೂಪುರೇಷೆಗಳ ಬಗ್ಗೆ ನಿಬಂಧನೆ ಮತ್ತು ಮಾರ್ಗಸೂಚಿಗಳ ಬಗ್ಗೆ ಆದೇಶ ಪತ್ರವೂ ಕೂಡ ಮುಖ್ಯಮಂತ್ರಿಗಳಿಂದ ಬಿಡುಗಡೆ ಆಗಿದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಕೂಡ ತಿಳಿಸಲಾಗಿತ್ತು.

ಆಗಸ್ಟ್ 15ರಂದು ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಈ ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆ ಖಾತೆಗೆ ಸಹಾಯಧನವನ್ನು ನೇರವಾಗಿ DBT ಮೂಲಕ ಜಮೆ ಮಾಡಲಾಗುವುದು. ಇದಕ್ಕೂ ಪೂರ್ವವಾಗಿ ಫಲಾನುಭವಿಗಳನ್ನು ಗುರುತಿಸುವುದಕ್ಕಾಗಿ ಜೂನ್ 15ರಿಂದ ಜುಲೈ 15 ರವರೆಗೆ ಅರ್ಜಿ ಆಹ್ವಾನ ಮಾಡಲಾಗುವುದು, ಜುಲೈ 15 ರಿಂದ ಆಗಸ್ಟ್ 15 ರವರೆಗೆ ಇವುಗಳ ಪರಿಶೀಲನೆ ಕಾರ್ಯ ನಡೆಯುತ್ತದೆ.

ನಂತರ ಆಗಸ್ಟ್ 15ರಂದು ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತದೆ ಎಂದು ಸರ್ಕಾರ ತಿಳಿಸಿತ್ತು. ಕರ್ನಾಟಕ ಒನ್ ಗ್ರಾಮ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಕುಟುಂಬದ ಯಜಮಾನಿ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು ಮತ್ತು ಆಫ್ಲೈನ್ ಅಲ್ಲೂ ಕೂಡ ಇದಕ್ಕೆ ಅವಕಾಶವಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಸಂಬಂಧ ಪಟ್ಟ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿತ್ತು. ಆದರೆ ಜೂನ್ 15 ರಂದು ಈ ಅರ್ಜಿ ಆಹ್ವಾನ ಕಾರ್ಯಕ್ರಮ ಆರಂಭವಾಗಿಲ್ಲ ಇನ್ನು ಸಹ ಯೋಜನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ತರಬೇತಿ ನೀಡಲು ಕಾಲಾವಕಾಶ ಬೇಕಾದ ಕಾರಣ ಒಂದು ದಿನ ವಿಳಂಬವಾಗಿ ಅಂದರೆ ಜೂನ್ 16ರಂದು ಈ ಪ್ರಕ್ರಿಯೆ ಆರಂಭಿಸಲಾಗುವುದು.

ಜೂನ್ 16ರ ಮಧ್ಯಾಹ್ನದಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೇ ಇದಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ ಎನ್ನುವ ಮಾಹಿತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಕೇಳಿ ಬಂದಿತ್ತು. ಆದರೆ ಈಗ ಕಾರಣಾಂತರಗಳಿಂದ ಇನ್ನು ಕೆಲವು ದಿನಗಳು ಇದು ಮುಂದೆ ಹೋಗಿದೆ. ಈಗ ಬಂದಿರುವ ಮಾಹಿತಿಯ ಪ್ರಕಾರ ಸರ್ಕಾರ ಇದಕ್ಕಾಗಿ ಆಪ್ ಒಂದನ್ನು ಸಿದ್ಧಗೊಳಿಸುತ್ತಿದೆಯಂತೆ.

ಆ ಆಪ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಾಗವಾಗುವ ಕಾರಣ ಇದನ್ನು ಸಿದ್ಧಪಡಿಸಲು ಉಂಟಾಗಿರುವ ತಾಂತ್ರಿಕ ದೋಷಗಳಿಂದಾಗಿ ಈ ಪ್ರಕ್ರಿಯೆ ವಿಳಂಬಗೊಳ್ಳುತ್ತಿದೆ. ಆದ್ದರಿಂದ ಇನ್ನೂ ಮೂರ್ನಾಲ್ಕು ದಿನಗಳು ಹೆಚ್ಚಿನ ಕಾಲಾವಕಾಶ ಬೇಕಾಗಬಹುದು ಎನ್ನುವ ಮಾಹಿತಿ ಸರ್ಕಾರದಿಂದ ತಿಳಿದು ಬಂದಿದೆ.

ಸದ್ಯಕ್ಕೆ ಈಗ ಸೇವಾ ಸಿಂಧು ಪೋರ್ಟಲ್ ಅಲ್ಲಿ ಸರ್ಚ್ ಮಾಡಿ ನೋಡಿದರೂ ಕೂಡ ಗೃಹಲಕ್ಷ್ಮಿ ಯೋಜನೆಯ ಸೇವೆಗಳ ಬಗ್ಗೆ ಮಾಹಿತಿ ಸಿಗುವುದಿಲ್ಲ ಮತ್ತು ಅದಕ್ಕೆ ಅರ್ಜಿ ಹಾಕಲು ಕೂಡ ಸಾಧ್ಯವಾಗುವುದಿಲ್ಲ. ಈ ಬಗ್ಗೆ ಗೊಂದಲಕ್ಕೆ ಒಳಗಾಗುವುದು ಬೇಡ ಶೀಘ್ರದಲ್ಲಿಯೇ ಈ ಯೋಜನೆಯನ್ನು ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭಿಸಲಾಗುವುದು ಎನ್ನುವ ಭರವಸೆಯನ್ನು ಸರ್ಕಾರ ನೀಡಿದೆ.

ಲೋನ್ ಕಟ್ಟಿಲ್ಲ ಅಂತ ನಿಮ್ಮ ಗಾಡಿ ಸೀಝ್ ಮಾಡ್ತಿದ್ದಾರ.? ಈ ಕಾನೂನಿನ ಬಗ್ಗೆ ತಿಳಿದುಕೊಳ್ಳಿ ಸಾಕು ಯಾರು ನಿಮ್ಮ ಗಾಡಿ ಮುಟ್ಟಲ್ಲ.!

 

ವೆಹಿಕಲ್ ಲೋನ್ ಗಳನ್ನು ಪಡೆದಿರುವವರು ಈ ಒಂದು ಸಾಮಾನ್ಯ ಸಮಸ್ಯೆಯನ್ನು ಯಾವಾಗ ಅನುಭವಿಸುತ್ತಾ ಇರುತ್ತಾರೆ. ಡೌನ್ ಪೇಮೆಂಟ್ ಕಟ್ಟಿ EMI ಕಟ್ಟುತ್ತಾ ಸಾಲದ ಮೇಲೆ ಗಾಡಿಗಳನ್ನು ಪಡೆದವರು ಒಂದು ಅಥವಾ ಎರಡು ಕಂತುಗಳನ್ನು ಉಳಿಸಿಕೊಂಡಿದ್ದರು ಕೂಡ ಅದು ಕಟ್ಟುವುದು ವಿಳಂಬವಾದಾಗ ಸಾಲ ಕೊಟ್ಟ ಬ್ಯಾಂಕ್ ಗಳು ರಿಕವರಿ ಏಜೆಂಟ್ ಗಳಿಂದ ವಾಹನಗಳನ್ನು ಸೀಝ್ ಮಾಡಿಸುತ್ತಾರೆ.

ಜೊತೆಗೆ ಸೀಝ್ ಮಾಡಿಕೊಂಡ ವಾಹನವನ್ನು ಮಾಲೀಕನಿಗೆ ಒಂದು ಮಾತು ತಿಳಿಸದೆ ಸೇಲ್ ಮಾಡಿಬಿಡುತ್ತಾರೆ. ಸೇಲ್ ಆದಮೇಲೆ ಕೂಡ ಕಡಿಮೆ ಮೊತ್ತಕ್ಕೆ ಸೇಲ್ ಆಯ್ತು ಎಂದು ಸಬೂಬು ಕೊಟ್ಟು ಇನ್ನಷ್ಟು ಹಣವನ್ನು ವಾಹನ ಮಾಲೀಕನಿಂದಲೇ ಕಿತ್ತುಕೊಳ್ಳುತ್ತಾರೆ. ಈ ರೀತಿ ರಸ್ತೆ ಮಧ್ಯದಲ್ಲೇ ಸೀಝರ್ ಗಳು ಹೆದರಿಸಿ, ಬೆದರಿಕೆ ಹಾಕಿ ವೆಹಿಕಲ್ ಗಳನ್ನು ಕಸಿದುಕೊಂಡು ಹೋಗುವುದನ್ನು ನಾವು ಕಣ್ಣಾರೆ ಕಂಡಿರುತ್ತೇವೆ.

ಅಥವಾ ಕುಟುಂಬದಲ್ಲಿ ಈ ರೀತಿ ಪರಿಸ್ಥಿತಿಯನ್ನು ಯಾರಾದರೂ ಅನುಭವಿಸಿ ಆ ದುಃಖ ಹಂಚಿಕೊಳ್ಳುವುದನ್ನು ಕೇಳಿರುತ್ತೇವೆ. ಆದರೆ ಈ ರೀತಿ ಡೌನ್ ಪೇಮೆಂಟ್ ಕಟ್ಟಿ EMI ಕಟ್ಟಿಕೊಂಡು ಹೋಗುವವರ ವೆಹಿಕಲ್ ಅನ್ನು ಯಾವುದೇ ಸೀಝರ್ ಏಕಾಏಕಿ ಕಸಿದುಕೊಂಡು ಹೋಗುವಂತಿಲ್ಲ. ಈ ವಿಷಯದಲ್ಲಿ ವಾಹನದ ಮಾಲೀಕನಿಗೂ ಆತನದ್ದೇ ಆದ ಹಕ್ಕುಗಳಿವೆ. ಅವುಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

● ಈ ರೀತಿ ವಾಹನಗಳನ್ನು ಸೀಝ್ ಮಾಡಿಕೊಂಡು ಹೋಗುವ ವ್ಯಕ್ತಿಗಳು ಗೂಂಡಾಗಳ ರೀತಿ ವರ್ತಿಸುತ್ತಿರುತ್ತಾರೆ, ಆದರೆ ಅವರಿಗೆ ಆ ಹಕ್ಕು ಇರುವುದಿಲ್ಲ. ಬ್ಯಾಂಕ್ ಗಳು ಅವರನ್ನು ರಿಕವರಿ ಏಜೆಂಟ್ ಗಳಾಗಿ ನೇಮಿಸಿಕೊಂಡಿದ್ದರು ಕೂಡ ಅವರು RBI ಗೈಡ್ ಲೈನ್ಸ್ ಗಳನ್ನು ಅರಿತು ತರಬೇತಿಗಳನ್ನು ಪಡೆದು DRA ಪರೀಕ್ಷೆಗಳನ್ನು ಪಾಸ್ ಮಾಡಿರುವ ಸ್ಟಾಫ್ ಆಗಿರಬೇಕು. ಜೊತೆಗೆ ಅವರ ಜೊತೆಯಲ್ಲಿ ತಾವು DRA ಎನ್ನುವುದಕ್ಕೆ ಐಡಿ ಕಾರ್ಡ್ ಹೊಂದಿರಬೇಕು. ನಿಮ್ಮ ವಾಹನಗಳನ್ನು ಅವರು ಕಿತ್ತುಕೊಂಡು ಹೋಗಲು ಬಂದಾಗ ನೀವು ಅವರನ್ನು ದಬಾಯಿಸಿ ಅವರ ಐ.ಡಿ ಕಾರ್ಡ್ ಕೇಳಬಹುದು.

● ನೀವು ಕೆಲಸಕ್ಕೆ ಹೋಗುವ ಸಮಯದಲ್ಲಿ ಅಥವಾ ಕೆಲಸ ಮಾಡುತ್ತಿರುವಾಗ ಎಲ್ಲೆಂದರಲ್ಲಿ ರಸ್ತೆಗಳಲ್ಲಿ ಅಡ್ಡಗಟ್ಟಿ ನಿಮ್ಮ ವಾಹನಗಳನ್ನು ಸೀಝ್ ಮಾಡುವಂತಿಲ್ಲ. ಆದರೆ ಇತ್ತೀಚೆಗೆ ಇದೇ ರೀತಿ ಸೀಝ್ ಮಾಡುವ ಕೇಸ್ ಗಳು ಹೆಚ್ಚಾಗುತ್ತಿವೆ. ಈ ರೀತಿ ವಾಹನಗಳ ಲೋನ್ ಕಟ್ಟುವುದು ವಿಳಂಬವಾದಾಗ ಅವರು ವಾಹನವನ್ನು ಸೀಝ್ ಮಾಡಲೇಬೇಕು ಎಂದರೆ ಅವು ಮನೆಗಳಲ್ಲಿ ಇರುವಾಗ ಮಾತ್ರ ಸೀಝ್ ಮಾಡಬೇಕು.

● ನಿಮ್ಮ ವಾಹನಗಳನ್ನು ಸೀಝ್ ಮಾಡಲು ಬರುವವರು ಕೋರ್ಟ್ ಇಂದ ಸೀಝ್ ಮಾಡಲು ಆರ್ಡರ್ ತೆಗೆದುಕೊಂಡು ಬಂದು ಅದನ್ನು ನಿಮಗೆ ಕೊಟ್ಟು ನಂತರ ಸೀಝ್ ಮಾಡಬೇಕು. ಏಕಾಏಕಿ ನಿಮ್ಮಿಂದ ವಾಹನಗಳನ್ನು ಕಸಿದುಕೊಳ್ಳಲು ಬ್ಯಾಂಕ್ ಸಿಬ್ಬಂದಿಗೆ ಆಗಲಿ ರಿಕವರಿ ಏಜೆಂಟ್ ಗಳಿಗೆ ಆಗಲಿ ಹಕ್ಕು ಇರುವುದಿಲ್ಲ. ಯಾಕೆಂದರೆ ಆ ವಾಹನಗಳಿಗೆ ನೀವು ಸಹ ಹಣ ಕಟ್ಟಿರುತ್ತೀರಾ ಅದು ನಿಮ್ಮ ವಾಹನವೇ ಆಗಿರುತ್ತದೆ.

● ರಿಕವರಿ ಏಜೆಂಟ್ ಗಳು ಸಾಲ ಪಡೆದವರು ನೀವಾಗಿದ್ದರೆ ನಿಮ್ಮ ಹೆಸರಿನಲ್ಲಿ ಲೋನ್ ಇದ್ದರೆ ನಿಮ್ಮನ್ನು ಮಾತ್ರ ಸಂಪರ್ಕ ಮಾಡಿ ಮಾತನಾಡಬೇಕು. ನಿಮ್ಮ ಪೋಷಕರ ಮನೆಗೆ ಆಗಲಿ ಅಥವಾ ನಿಮ್ಮ ಸಂಗಾತಿಯ ಆಫೀಸ್ ಗಳಲ್ಲಿ ಹೋಗಿ ಗಲಾಟೆ ಮಾಡುವಂತಿಲ್ಲ. ಆ ಸಮಯಗಳಲ್ಲಿ ಅವರು ಪ್ರಶ್ನೆ ಮಾಡಿ ಅವರನ್ನು ರಕ್ಷಿಸಿಕೊಳ್ಳಬಹುದು.

● RBI ಸಾಲ ಕೊಡುವ ಬ್ಯಾಂಕ್ಗಳಿಗೆ ಸಾಲ ವಸೂಲಿ ಮಾಡುವಾಗಲು ಕೂಡ ಅದೇ ರೀತಿ ಚೌಕಟ್ಟಿನೊಳಗೆ ಸಾಲವಸೂಲಿ ಮಾಡಬೇಕು ಎನ್ನುವ ನಿಯಮಗಳನ್ನು ಹಾಕಿಕೊಟ್ಟಿದೆ. ಇದನ್ನು ಮೀರಿ ಯಾವುದೇ ಹಣಕಾಸಿನ ಸಂಸ್ಥೆ ವರ್ತಿಸುವಂತಿಲ್ಲ. ಒಬ್ಬ ಬ್ಯಾಂಕ್ ಗ್ರಾಹಕನಾಗಿ ಮತ್ತು ವಾಹಕನದ ಮಾಲೀಕನಾಗಿ ನೀವು ನಿಮ್ಮ ಹಕ್ಕುಗಳ ರಕ್ಷಣೆಗೆ ಹೋರಾಡಬಹುದು. ಆದರೆ ನೀವು ತೆಗೆದುಕೊಂಡಿರುವ ಲೋನ್ ಕಟ್ಟುವುದಿಲ್ಲ ಎಂದು ಹೇಳುವಂತಿಲ್ಲ.

ಅದಕ್ಕೆ ಸಕಾರಣಗಳನ್ನು ಕೊಟ್ಟು ಆದಷ್ಟು ಬೇಗ ಸಾಲ ತೀರಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು. ಈ ರೀತಿ ಕಾನೂನು ಮೂಲಕ ಇನ್ನಷ್ಟು ಅನುಕೂಲತೆಗಳು ವಾಹನಗಳ ಗ್ರಾಹಕನಿಗೆ ಸಿಗುತ್ತದೆ ಅವುಗಳ ಪೂರ್ತಿ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರು ತಪ್ಪದೆ ಇದನ್ನು ನೋಡಿ

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆಯೇ ಪಂಚಖಾತ್ರಿ ಯೋಜನೆಗಳನ್ನು ಜಾರಿಗೆ ತರಲು ಪಣತೊಟ್ಟಿದೆ. ಇವುಗಳ ಪೈಕಿ 5 ಗ್ಯಾರಂಟಿ ಕಾರ್ಡ್ ಗಳಲ್ಲಿ ಎರಡನೇ ಗ್ಯಾರೆಂಟಿ ಆಗಿದ್ದ ಗೃಹಲಕ್ಷ್ಮಿ ಯೋಜನೆಗೆ ಲಾಂಚಿಂಗ್ ಡೇಟ್, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿ ಬೇಕಾದ ದಾಖಲೆಗಳು, ಯಾರೆಲ್ಲ ಅರ್ಜಿ ಸಲ್ಲಿಸಬಹುದು ಮತ್ತು ಯಾರು ಯೋಜನೆಗಳಿಗೆ ಫಲಾನುಭವಿಗಳಾಗಲು ಸಾಧ್ಯವಿಲ್ಲ.

ಮತ್ತು ಅರ್ಜಿ ಸಲ್ಲಿಸಲು ಆಫ್ಲೈನ್ ಮೂಲಕ ಆನ್ಲೈನ್ ಅಥವಾ ಆನ್ಲೈನ್ ಮೂಲಕ ಯಾವ ವ್ಯವಸ್ಥೆ ಮಾಡಲಾಗಿದೆ ಎನ್ನುವ ಎಲ್ಲಾ ವಿವರಗಳನ್ನು ಒಳಗೊಂಡ ಆದೇಶ ಪತ್ರವನ್ನು ಹೊರಡಿಸಿದೆ. ಅದರ ಪ್ರಕಾರ ಜೂನ್ 15ರಂದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ ಆಗಬೇಕಿತ್ತು, ಆದರೆ ಒಂದು ದಿನದ ಮಟ್ಟಿಗೆ ಅದನ್ನು ಮುಂದೂಡಲಾಯಿತು.

ಈ ಯೋಜನೆಗೆ ಅಧಿಕಾರಿಗಳು ಸಿಬ್ಬಂದಿಗಳನ್ನು ತರಬೇತಿಗೊಳಿಸಲಾಗುತ್ತಿದೆ. ಒಂದು ದಿನ ಹೆಚ್ಚಿನ ಕಾಲಾವಕಾಶ ಬೇಕಾದ ಕಾರಣ ಜೂನ್ 16ರಂದು ಈ ಯೋಜನೆಗೆ ಚಾಲನೆ ಸಿಗಲಿದೆ. ಜೂನ್ 16ರ ಮಧ್ಯಾಹ್ನ 1:30 ಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೇ ಸಾಂಕೇತಿಕವಾಗಿ ಈ ಆಹ್ವಾನ ಪ್ರಕ್ರಿಯೆಗೆ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ ಎನ್ನುವ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹೊರಹಾಕಿತ್ತು.

ಆದರೆ ಗುರುವಾರ ಸಂಜೆ ನಡೆದ ಕ್ಯಾಬಿನೆಟ್ ಮೀಟಿಂಗ್ ಅಲ್ಲಿ ಕೆಲ ಮಾರ್ಪಾಡು ಆಗಿ ಈಗ ಇನ್ನು 3-4 ದಿನ ಈ ಯೋಜನೆಗೆ ಅರ್ಜಿ ಆಹ್ವಾನ ಮಾಡುವ ಪ್ರಕ್ರಿಯೆ ಮುಂದೆ ಹೋಗುತ್ತದೆ ಎನ್ನುವ ಮಾಹಿತಿಯನ್ನು ಇಲಾಖೆ ತಿಳಿಸಿದೆ. ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಈ ಯೋಜನೆಗೆ ಅರ್ಹ ಮಹಿಳಾ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು ಅಥವಾ ಆಫ್ಲೈನ್ ಅಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಛೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಆದೇಶ ಪತ್ರದಲ್ಲಿ ತಿಳಿಸಿತ್ತು.

ಈಗ ಬಲವಾದ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಸರ್ಕಾರ ಇದಕ್ಕಾಗಿ ಆಪ್ ಒಂದನ್ನು ಸಿದ್ಧಗೊಳಿಸುತ್ತಿದೆಯಂತೆ. ಇದರ ರಚನೆಗೆ ಸಂಬಂಧ ಪಟ್ಟ ಹಾಗೆ ತಾಂತ್ರಿಕ ಸಮಸ್ಯೆ ಆಗಿರುವುದರಿಂದ ಇನ್ನೂ ಮೂರು ನಾಲ್ಕು ದಿನಗಳ ಕಾಲ ಅರ್ಜಿ ಆಹ್ವಾನ ಪ್ರಕ್ರಿಯೆಯನ್ನು ಮುಂದೂಡಲಾಗಿದೆಯಂತೆ. ಈ ಆಪ್ ಮೂಲಕ ಕುಟುಂಬದ ಯಜಮಾನಿಯು ಸರಳವಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

ಸದ್ಯಕ್ಕೀಗ ಸೇವಾ ಸಿಂಧು ಪೋರ್ಟಲ್ ನಲ್ಲಿ ಗೃಹಲಕ್ಷ್ಮಿ ಯೋಜನೆ ಕುರಿತು ಯಾವುದೇ ಸೇವೆಗಳು ಲಭ್ಯವಿಲ್ಲ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಅರ್ಜಿ ಆಹ್ವಾನ ಪತ್ರಿಕೆಯು ಆರಂಭ ಆಗಲಿದೆ ಅಲ್ಲಿಯವರೆಗೂ ಕೂಡ ಮಹಿಳೆಯರು ಇದಕ್ಕೆ ಬೇಕಾದ ಪ್ರಮುಖ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳಲು ತಿಳಿಸಲಾಗಿದೆ.

ಈ ಯೋಜನೆ ಅಡಿ ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬಗಳ ಯಜಮಾನಿ ಮಹಿಳೆಖಾತೆಗೆ 2,000 ಸಹಾಯಧನವು ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ಜಮೆ ಆಗಲಿದೆ. ಆದರೆ ಮಹಿಳೆ ಅಥವಾ ಮಹಿಳೆಯ ಪತಿ ಸರ್ಕಾರಿ ಉದ್ಯೋಗ ಮಾಡುತ್ತಿದ್ದರೆ ಅಥವಾ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ಅವರು ಈ ಯೋಜನೆಗೆ ಫಲಾನುಭವಿಗಳು ಆಗಲು ಸಾಧ್ಯವಿಲ್ಲ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆ ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ವಿವರದ ಜೊತೆ ಪತಿ ಅಥವಾ ಮಗ ಟ್ಯಾಕ್ಸ್ ಕಟ್ಟುತ್ತಿಲ್ಲ ಎನ್ನುವುದಕ್ಕೆ ಒಂದು ಸರ್ಟಿಫಿಕೇಟ್ ಅನ್ನು ಅಗತ್ಯ ದಾಖಲೆಯಾಗಿ ನೀಡಬೇಕು ಎನ್ನುವ ಮಾಹಿತಿ ಕೇಳಿ ಬರುತ್ತಿದೆ. ಮೂರ್ನಾಲ್ಕು ದಿನಗಳ ನಂತರ ಯೋಜನೆಗೆ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭಗೊಳ್ಳಲಿದೆ ಅಲ್ಲಿಯವರೆಗೂ ಕಾದುನೋಡೋಣ.

ಅಪ್ಪ ಮಗುಳು ಇಬ್ಬರಿಗೂ ಕ್ಯಾನ್ಸರ್, ನನ್ನಿಂದಲೇ ಮಗಳಿಗೂ ಕ್ಯಾನ್ಸರ್ ಬಂತು ಎಂದು ಮನನೊಂದು ನೇಣಿಗೆ ಶರಣಾದ ಪೊಲೀಸ್, ಬೆಂಗಳೂರಿನಲ್ಲಿ ನಡೆಯಿತೊಂದು ಹೃದಯವಿದ್ರಾವಕ ಘಟನೆ…

 

ಇತ್ತೀಚಿನ ದಿನಗಳಲ್ಲಿ ಸಂಬಂಧಗಳ ಮೌಲ್ಯವೇ ಹೊರಟು ಹೋಗಿದೆ ಎನ್ನುವ ರೀತಿ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಸಾಕಷ್ಟು ಸಿಗುತ್ತಿವೆ. ಹೆತ್ತ ಮಕ್ಕಳು ಹಾಗೂ ಪೋಷಕರ ನಡುವೆ ಅಂತದ್ದೊಂದು ಭಾವನಾತ್ಮಕ ಸಂಬಂಧ ಕಳೆದು ಹೋಗಿ ಒಬ್ಬರಿಗೊಬ್ಬರು ಶತ್ರುಗಳ ರೀತಿ ವರ್ತಿಸಿರುವ ಉದಾಹರಣೆಗಳನ್ನು ಕಂಡಿದ್ದೇವೆ. ಇದೆಲ್ಲದರ ನಡುವೆ ಬೆಂಗಳೂರಿನಲ್ಲಿ ನಡೆದ ಒಂದು ಘಟನೆ ಎಲ್ಲರೂ ಇಂದು ಈ ತಂದೆ ಮಗಳ ಸಂಬಂಧದ ಬಗ್ಗೆ ಮಾತನಾಡುವ ರೀತಿ ಮಾಡಿದೆ.

ಬೆಂಗಳೂರಿನಲ್ಲಿ ಒಬ್ಬ ಪೊಲೀಸ್ ಹೆಡ್ ಕಾನ್ಸ್ಟೇಬಲ್ ತಮ್ಮಿಂದ ಮಗಳಿಗೆ ಕ್ಯಾನ್ಸರ್ ಬಂದಿದೆ ಅವಳು ಆರೋಗ್ಯವಾಗಿರಬೇಕು ಎಂದರೆ ತಾವು ಸಾ’ಯಬೇಕು ಎಂದುಕೊಂಡು ನೇ’ಣಿ’ಗೆ ಶರಣಾಗಿ ಹೋಗಿದ್ದಾರೆ. ಈ ಘಟನೆಯ ವಿವರವನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ಧಾರವಾಡ ಜಿಲ್ಲೆಯ ಚೆನ್ನಗಿರಿ ಮೂಲದ ಕುಮಾರ್ ಎನ್ನುವ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಬೆಂಗಳೂರಿನ ಡೈರಿ ಸರ್ಕಲ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈಗ ಹೆಡ್ ಕಾನ್ಸೇಬಲ್ ಆಗಿ ಕೂಡ ಬಡ್ತಿ ಪಡೆದಿದ್ದ ಇವರು ಡೈರಿ ಸರ್ಕಲ್ ಬಳಿ ಇರುವ ಪೊಲೀಸ್ ಕ್ವಾರ್ಟರ್ಸ್ ಅಲ್ಲಿಯೇ ಕುಟುಂಬದ ಜೊತೆ ವಾಸ್ತವ್ಯ ಹೂಡಿದ್ದರು. ಹಲವು ದಿನಗಳಿಂದ ಇವರನ್ನು ಕ್ಯಾನ್ಸರ್ ಎನ್ನುವ ಮಾ’ರ’ಣಾಂ’ತಿ’ಕ ಕಾಯಿಲೆ ಕಾಡುತ್ತಿತ್ತು. ಇದರ ಚಿಕಿತ್ಸೆಗಾಗಿ ಹಲವು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯ ನಡುವೆ ಕರ್ತವ್ಯವನ್ನು ಕೂಡ ಪಾಲಿಸುತ್ತಿದ್ದ ಇವರಿಗೆ ಕ್ಯಾನ್ಸರ್ ಎನ್ನುವ ಮಹಾಮಾರಿ ಮಾನಸಿಕವಾಗಿ ಕುಗ್ಗಿಸಿತ್ತು.

ಆದರೂ ಕೂಡ ಕುಟುಂಬಕ್ಕಾಗಿ ಚೇತರಿಸಿಕೊಂಡು ಬದುಕಬೇಕು ಎನ್ನುವ ಆಸೆ ಹೊಂದಿದ್ದ ಇವರಿಗೆ ಮತ್ತೊಂದು ರೀತಿಯ ಶಾ’ಕ್ ಎದುರಾಯಿತು. ಅದೇನೆಂದರೆ, ಇವರ ಮಗಳಿಗೂ ಕೂಡ ಕ್ಯಾನ್ಸರ್ ಇರುವುದು ಪತ್ತೆ ಆಯಿತು. ಇವರ ಮಗಳಿಗೆ ಕ್ಯಾನ್ಸರ್ ಸ್ಟಾರ್ಟಿಂಗ್ ಸ್ಟೇಜ್ ಅಲ್ಲಿ ಇತ್ತು ಅದಕ್ಕೂ ಕೂಡ ಚಿಕಿತ್ಸೆ ಕೊಡಿಸುತ್ತಿದ್ದರು. ಮಗಳು ಚಿಕಿತ್ಸೆಗೆ ಉತ್ತಮವಾಗಿಯೇ ಸ್ಪಂದಿಸುತ್ತಿದ್ದರು.

ಆದರೆ ಮೊದಲೇ ಕ್ಯಾನ್ಸರ್ ಕಾಯಿಲೆಯಿಂದ ಹೈರಣಾಗಿ ಹೋಗಿದ್ದ ಇವರು ತಮ್ಮಿಂದಲೇ ತಮ್ಮ ಮಗಳಿಗೆ ಕ್ಯಾನ್ಸರ್ ಬಂದಿದೆ ಎಂದು ತಪ್ಪು ಭಾವಿಸಿದ್ದಾರೆ. ಕ್ಯಾನ್ಸರ್ ಎನ್ನುವುದು ಒಬ್ಬರಿಗಿಂದ ಒಬ್ಬರಿಗೆ ಹರಡುವ ಕಾಯಿಲೆ ಅಲ್ಲ ಆದರೆ ಇದು ಹೆರಿಡಿಟಿ ಕಾಯಿಲೆ ಆಗಿದೆ. ಅಂದರೆ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದರೆ ಅವರ ಮುಂದಿನ ಪೀಳಿಗೆಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.

ಆದರೂ ಕೂಡ ಕುಮಾರ್ ಅವರ ಮಕ್ಕಳಿಗೆ ಚಾಟಿಂಗ್ ಸ್ಟೇಜ್ ಇದ್ದ ಕಾರಣ ಚಿಕಿತ್ಸೆ ತೆಗೆದುಕೊಂಡು ಇದರಿಂದ ಹೊರ ಬರಬಹುದಿತ್ತು. ಆದರೆ ಅವರ ಮನದಲ್ಲಿ ಮೂಡಿದ ಒಂದು ತಪ್ಪು ಕಲ್ಪನೆ ಇಂದು ಅವರು ಇಹಲೋಕವನ್ನು ಬಿಟ್ಟು, ಮುದ್ದು ಮಗಳನ್ನು ಬಿಟ್ಟು ಹೋಗುವಂತೆ ಮಾಡಿದೆ. ನನ್ನಿಂದಲೇ ನನ್ನ ಮಗಳಿಗೆ ಕ್ಯಾನ್ಸರ್ ಬಂದಿದೆ ಈಗ ನನ್ನ ಮಗಳು ಗುಣವಾಗುತ್ತಿದ್ದಾಳೆ ಅವಳು ಚೆನ್ನಾಗಿರಬೇಕು ಎಂದರೆ ಕ್ಯಾನ್ಸರ್ ಇಂದ ಬಳಲುತ್ತಿರುವ ನಾನು ಅವಳ ಎದುರಿಗೆ ಇರಬಾರದು ಆದ್ದರಿಂದ ಎಲ್ಲರೂ ಬಿಟ್ಟು ಹೋಗುತ್ತಿದ್ದೇನೆ ಎಂದು ನೇಣಿಗೆ ಶರಣಾಗಿ ಕುಟುಂಬದಿಂದ ಶಾಶ್ವತವಾಗಿ ದೂರವಾಗಿದ್ದಾರೆ ಕುಮಾರ್ ಅವರು.

ಪ್ರತಿನಿತ್ಯ ಕೂಡ ಸಂಬಂಧಗಳ ಬಗ್ಗೆ ಹಳಸಿದ ಸುದ್ದಿಯನ್ನು ಕೇಳಿ ಬೇಸರಿಸಿಕೊಂಡಿದ್ದ ಜನತೆ ಈ ತಂದೆ ಮಗಳ ಬಾಂಧವ್ಯ ನೋಡಿ ಕಣ್ಣೀರಿಟ್ಟಿದ್ದಾರೆ. ಸಾ.ವಿನಲ್ಲೂ ಕೂಡ ಸಾರ್ಥಕತೆ ಮೆರೆಯಲು ಬಯಸಿದ್ದ ಇವರು ತಮ್ಮ ಕಣ್ಣುಗಳನ್ನು ದಾನ ಮಾಡಬೇಕು ಎಂದು ಮೊದಲೇ ಸೂಚಿಸಿದ್ದ ಕಾರಣ ಕುಟುಂಬ ಇವರ ಕಣ್ಣುಗಳನ್ನು ದಾನ ಮಾಡಿದೆ. ಆದರೆ ಒಂದು ತಪ್ಪು ಆಲೋಚನೆಯಿಂದ ಬಾರದ ಲೋಕಕ್ಕೆ ಕುಮಾರ್ ಅವರು ಹೊರಟು ಬಿಟ್ಟಿದ್ದಾರೆ.

ಒಂದು ಶಿವಲಿಂಗದಲ್ಲಿ 350 ಮುಖಗಳು. ಈ ಅದ್ಭುತ ದೇವಲಾಯದ ಬಗ್ಗೆ ನೀವು ತಿಳಿಯಲೇಬೇಕು.!

 

ಭಾರತದಾತ್ಯಂತ ಅನೇಕ ವಿಶೇಷ ದೇವಾಲಯಗಳು ಇವೆ. ಕೆಲವು ಪುರಾಣ ಪ್ರಸಿದ್ಧ ದೇವಾಲಯಗಳಾಗಿದ್ದರೆ ಕೆಲವು ಇತಿಹಾಸದಲ್ಲಿ ಉಲ್ಲೇಖವಾಗಿರುವ ವಿಶೇಷ ದೇವಾಲಯಗಳಾಗಿವೆ. ಪ್ರತಿಯೊಂದು ದೇವಸ್ಥಾನದ ನಿರ್ಮಾಣದ ಹಿಂದೆ ಒಂದೊಂದು ವಿಶೇಷತೆ ಇದ್ದು, ಕೆಲವು ವಾಸ್ತುಶಿಲ್ಪ ಶೈಲಿಯಿಂದಲೇ ಗಮನ ಸೆಳೆಯುತ್ತದೆ. ಇನ್ನು ಕೆಲವು ದೇವಸ್ಥಾನಗಳು ಅಲ್ಲಿ ನಡೆಯುವ ಪವಾಡಗಳಿಂದ ಹೆಚ್ಚು ಹೆಸರುವಾಸಿಯಾಗಿ ಜನರನ್ನು ಆಕರ್ಷಿಸುತ್ತಿವೆ.

ಇಂತಹ ವಿಶೇಷತೆಗಳನ್ನು ಹೊಂದಿರುವ ದೇವಸ್ಥಾನಗಳು ಕರ್ನಾಟಕದಲ್ಲಿ ಸಾಕಷ್ಟು ಇವೆ. ಅದರಲ್ಲಿ ಶಿವನ ದೇವಸ್ಥಾನಗಳೇ ಅನೇಕ. ಕರ್ನಾಟಕದಲ್ಲಿರುವ ಒಂದು ಶಿವನ ದೇವಾಲಯದಲ್ಲಿ ಮಾತ್ರ 359 ಮುಖಗಳನ್ನು ಹೊಂದಿರುವ ಶಿವಲಿಂಗವನ್ನು ಕಾಣಬಹುದು ಮತ್ತು ಈ ದೇವಸ್ಥಾನವು ನಿರ್ಮಾಣವಾಗಿರುವ ಶೈಲಿಯಿಂದಲೇ ಹೆಚ್ಚು ಹೆಸರುವಾಸಿ ಆಗಿರುವ ದೇವಸ್ಥಾನವಾಗಿದೆ.

ಈ ದೇವಸ್ಥಾನ ಇರುವುದು ಕರ್ನಾಟಕ ಮತ್ತು ಮಹಾರಾಷ್ಟ್ರದ ಮಧ್ಯೆ. ಕರ್ನಾಟಕದ ವಿಜಯಪುರದಿಂದ 84 ಕಿಲೋಮೀಟರ್ ಪ್ರಯಾಣ ಮಾಡಿದರೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗ ಸಿಗುತ್ತದೆ. ಎರಡು ಗಡಿ ಭಾಗಕ್ಕೂ ಸೇರಿರುವ ಹತ್ತರ ಸಾಂಗ್ ಎಂಬ ಹಳ್ಳಿಯಲಿ ಈ ರೀತಿ ಪುರಾಣ ಪ್ರಸಿದ್ಧವಾದ ಶ್ರೀ ಹರಿಹರೇಶ್ವರ ದೇವಸ್ಥಾನವಿದೆ. ಕರ್ನಾಟಕದ ಹರಿಹರ ಎನ್ನುವ ಪ್ರದೇಶದಲ್ಲೂ ಕೂಡ ಶ್ರೀ ಹರಿಹರೇಶ್ವರ ಎನ್ನುವ ಪ್ರಖ್ಯಾತ ದೇವಾಲಯ ಇದೆ.

ಆದರೆ ಆ ದೇವಸ್ಥಾನಕ್ಕೂ ಮತ್ತು ಈ ದೇವಸ್ಥಾನಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದು ಈ ದೇವಸ್ಥಾನವು ಪಾಸ್ವರ್ಡ್ ದೇವಸ್ಥಾನ ಎಂದೇ ಪರಿಚಿತವಾಗಿದೆ. ಯಾಕೆಂದರೆ ಈ ದೇವಸ್ಥಾನದಲ್ಲಿ ಎಲ್ಲವೂ ಸೀಕ್ರೆಟ್ ಲಾಕ್ ಗಳ ರೀತಿ ಇರುತ್ತದೆ. ದೇವಸ್ಥಾನದ ಕಂಬಗಳು, ಕೆತ್ತನೆಗಳು, ಮೆಟ್ಟಿಲುಗಳು ಎಲ್ಲವನ್ನು ಕೂಡ ತಿರುಗಿಸಿ ಲಾಕ್ ಮಾಡಬಹುದಾಗಿದೆ. ಮೆಟ್ಟಿಲುಗಳನ್ನು ಮುಟ್ಟಿದರೆ ಶಿವಲಿಂಗವು ಅಲುಗಾಡುತ್ತದೆ, ಕಂಬಗಳನ್ನು ಮುಟ್ಟಿದರೆ ಶಿಲ್ಪಗಳು ತಿರುಗುತ್ತವೆ, ಇಂತಹ ವಿಸ್ಮಯವನ್ನು ಭಾರತದಲ್ಲಿ ಇಲ್ಲಿ ಮಾತ್ರ ಕಾಣಲು ಸಾಧ್ಯ.

ಈ ದೇವಸ್ಥಾನವನ್ನು 8000 ವರ್ಷಗಳ ಹಿಂದೆ ನಿರ್ಮಿಸಲಾಯಿತು ಎಂದು ಒಂದು ಪುರಾಣ ತಿಳಿಸಿದರೆ, 13,000ಕ್ಕೂ ಹೆಚ್ಚಿನ ಹಿಂದಿನದು ಎನ್ನುವುದಕ್ಕೆ ಮತ್ತೊಂದು ಪುರಾಣದ ಸಾಕ್ಷಿ ಇದೆ. ಪುರಾಣ ಕಥೆಗಳ ಪ್ರಕಾರ ಶಿವ ಮತ್ತು ವಿಷ್ಣುವಿನ ನಡುವೆ ವೈ ಮನಸು ಉಂಟಾಗಿ ಕಾಳಗ ನಡೆದಾಗ ವಿಷ್ಣು ತನ್ನ 350 ಮುಖಗಳನ್ನು ತೆರೆದು ಶಿವನ ಮೇಲೆ ದಾಳಿ ಮಾಡುತ್ತಾರೆ. ಆಗ ಶಿವನು ತನ್ನ ಮೂರನೇ ಕಣ್ಣಿನ ಪ್ರಭಾವದಿಂದ ಇದೆಲ್ಲವನ್ನು ಕೂಡ ಬಂಧಿಸಿದರು.

ಆಗಲೇ ಈ ಶಿವಲಿಂಗ ಸೃಷ್ಟಿಯಾಯಿತು ಹಾಗಾಗಿ ಇದನ್ನು ಯಾರು ಪ್ರತಿಷ್ಠಾಪಿಸಿಲ್ಲ ಸಾಕ್ಷಾತ್ ಶಿವನೇ ಈ ಶಿವಲಿಂಗವನ್ನು ಇಲ್ಲಿ ನೆಲೆಗೊಳಿಸಿದ್ದಾರೆ. ನಂತರ ಚಂದಗುಪ್ತ ಮೌರ್ಯನ ಕಾಲದಲ್ಲಿ ಇಲ್ಲಿ ದೇವಾಲಯ ನಿರ್ಮಿತವಾಗಿತ್ತು ಎನ್ನುವುದನ್ನು ಇತಿಹಾಸ ಹೇಳುತ್ತದೆ ಮತ್ತು ಚಂದ್ರ ಗೌಪ್ತ ಮೌರ್ಯನ ಮೊಮ್ಮಗ ಅಶೋಕನ ಕಿರಿಯ ಸಹೋದರ ವಿಟ ಅಶೋಕರು ಇದನ್ನು ಮಂತ್ರ ವಿದ್ಯೆಯಿಂದ ಇನ್ನಷ್ಟು ಜೀರ್ಣೋದ್ಧಾರಗೊಳಿಸಿದರು ಎಂದು ಕೆಲವು ಕಥೆಗಳು ತಿಳಿಸುತ್ತವೆ.

ಈ ಶಿವಲಿಂಗವು 4500 ಕೆಜಿ ತೂಕವನ್ನು ಹೊಂದಿವೆ. ಈ ಶಿವಾಲಯದಲ್ಲಿರುವ ಎರಡು ಗುಹೆಗಳು ಕಾಣದ ಲೋಕಕ್ಕೆ ದಾರಿ ತೋರಿಸುತ್ತವೆ, ಇನ್ನು ಸಹ ಆ ರಹಸ್ಯವನ್ನು ಬೇಧಿಸಲು ಯಾರಿಂದಲೂ ಕೂಡ ಸಾಧ್ಯವಾಗಿಲ್ಲ ಎನ್ನುವುದನ್ನು ಚರಿತ್ರೆಯ ಕಥೆಗಳು ಹೇಳುತ್ತವೆ. ಒಂದು ಗುಹೆಯೂ ನಾಗಲೋಕದ ದಾರಿಯನ್ನು ತೋರಿದರೆ ಮತ್ತೊಂದು ಲೋಕವು ಪಾತಾಳದ ಲೋಕದ ದಾರಿಯನ್ನು ತೋರುತ್ತದೆ ಎಂದು ನಂಬಲಾಗಿದೆ. ಇಂತಹ ಪ್ರಭಾವಶಾಲಿ ದೇವಸ್ಥಾನಕ್ಕೆ ಸಾಧ್ಯವಾದರೆ ನೀವು ಸಹ ನಿಮ್ಮ ಕುಟುಂಬದೊಡನೆ ಒಮ್ಮೆ ಭೇಟಿ ಕೊಡಿ.

ಭಾಗ್ಯಲಕ್ಷ್ಮಿ ಯೋಜನೆಯ ಒಂದು ಲಕ್ಷ ರೂಪಾಯಿ ಪಡೆಯುವ ವಿಧಾನ, ಹೆಣ್ಣು ಮಕ್ಕಳಿರುವ ಪೋಷಕರು ಇದನ್ನು ತಿಳಿದುಕೊಂಡಿರಲೇಬೇಕು.!

 

ಹೆಣ್ಣು ಮಕ್ಕಳ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನವನ್ನು ಉತ್ತೇಜಿಸಲು 2006-07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಕರ್ನಾಟಕ ಸರ್ಕಾರವು ಬಾಗ್ಯಲಕ್ಷ್ಮಿ ಎನ್ನುವ ಈ ಹೊಸ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯ ಆರ್ಥಿಕ ಸೌಲಭ್ಯವಾಗಿ ಒಂದು ಲಕ್ಷ ರೂಪಾಯಿ ಹಣವನ್ನು ಹೆಣ್ಣು ಮಗುವಿಗೆ ಅದರ ತಾಯಿ /ತಂದೆ/ಪೋಷಕರ ಮೂಲಕ ಕೆಲವು ನಿಬಂಧನೆಗಳನ್ನು ಪೂರೈಸಿದ್ದಲ್ಲಿ ನೀಡಲಾಗುವುದು.

ಭಾಗ್ಯಲಕ್ಷ್ಮಿ ಯೋಜನೆಗೆ ಇರುವ ನಿಬಂಧನೆಗಳು:-
● ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ 31.03.2006 ರ ನಂತರ ಜನಿಸಿದ ಹೆಣ್ಣು ಮಕ್ಕಳು ಈ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳಲು ಅರ್ಹರಿರುತ್ತಾರೆ.
● ಮಗುಜನಿಸಿದ ಒಂದು ವರ್ಷದವರೆಗೂ ಜನನ ಪ್ರಮಾಣ ಪತ್ರವನ್ನು ನೀಡಿ ನೋಂದಾಯಿಸಲು ಅವಕಾಶವಿರುತ್ತದೆ.
● ಈ ಯೋಜನೆಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಇಬ್ಬರು ಹೆಣ್ಣು ಮಕ್ಕಳಿಗೆ ಸೀಮಿತಗೊಳಿಸಲಾಗಿದೆ.

● ಫಲಾನುಭವಿಗಳಾಗುವ ಹೆಣ್ಣು ಮಕ್ಕಳ ತಂದೆ ಅಥವಾ ತಾಯಿ ಶಾಶ್ವತ ಕುಟುಂಬ ಯೋಜನೆ ಅಳವಡಿಸಿಕೊಂಡಿರಬೇಕು, ಮನೆಯಲ್ಲಿ ಮಕ್ಕಳ ಸಂಖ್ಯೆ 2 ಕ್ಕಿಂತ ಹೆಚ್ಚಿರಬಾರದು.
● ಭಾಗ್ಯಲಕ್ಷ್ಮಿ ಯೋಜನೆಯಡಿ ನೋಂದಣಿಯಾದ ಕುಟುಂಬದಲ್ಲಿನ ಮೊದಲನೇ ಹೆಣ್ಣು ಮಗುವಿನ ಹೆಸರಿನಲ್ಲಿ 19,300 ಹಾಗೂ ಅದೇ ಕುಟುಂಬದಲ್ಲಿನ ಎರಡನೇ ಹೆಣ್ಣು ಮಗುವಿನ ಹೆಸರಿನಲ್ಲಿ 18,350 ರೂಗಳನ್ನು ಪಾಲುದಾರರ ಹಣಕಾಸು ಸಂಸ್ಥೆಯಲ್ಲಿ ಪ್ರಾರಂಭಿಕ ಠೇವಣಿ ಇಡಲಾಗುತ್ತದೆ.
● 18 ವರ್ಷ ಪೂರ್ಣಗೊಂಡ ನಂತರದಲ್ಲಿ ಹೆಣ್ಣು ಮಕ್ಕಳು ಒಂದು ಲಕ್ಷ ಪರಿಪಕ್ವ ಮೊತ್ತ ಪಡೆಯಲು ಅರ್ಹರಿರುತ್ತಾರೆ.

ಈ ಯೋಜನೆಯ ಉದ್ದೇಶಗಳು:-
● ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವ ಮತ್ತು ಆತ್ಮಸ್ಥೈರ್ಯ ತುಂಬುವುದು.
● ಬಾಲ ಕಾರ್ಮಿಕತೆ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ ಮತ್ತು ಹೆಣ್ಣು ಮಕ್ಕಳ ಮಾರಾಟ ಮುಂತಾದ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟುವುದು.
● ಆರೋಗ್ಯ, ಶಿಕ್ಷಣ, ಪೋಷಣೆ ಮತ್ತು ಪೌಷ್ಠಿಕತೆಯ ಮಟ್ಟವನ್ನು ಉತ್ತಮ ಪಡಿಸುವುದರ ಮೂಲಕ ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯನ್ನು ಉತ್ತಮಪಡಿಸುವುದು.
● ಹೆಣ್ಣು ಮಗುವಿಗೆ ಆರ್ಥಿಕ ನೆರವು ನೀಡುವುದರ ಮೂಲಕ ಅವರನ್ನು ಸಮಾಜದಲ್ಲಿ ಸದೃಢರನ್ನಾಗಿ ಮಾಡುವುದು.

ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಇರಬೇಕಾದ ಅರ್ಹತೆಗಳು:-
● ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗುರುತಿಸಿ ಶಾಶ್ವತ BPL ಕಾರ್ಡ್ ಅಥವಾ ಆದ್ಯತ ಕುಟುಂಬ ಪಡಿತರ ಚೀಟಿ ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಇಬ್ಬರು ಹೆಣ್ಣು ಮಕ್ಕಳು ಅರ್ಹರಿರುತ್ತಾರೆ.
● ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಎರಡನ್ನು ಮೀರಿರಬಾರದು, ಮೊದಲನೇ ಹೆರಿಗೆಯಲ್ಲೇ ಅಥವಾ ಎರಡನೇ ಹೆರಿಗೆಯಲ್ಲಿ ಅವಳಿ ಅಥವಾ ತ್ರಿವಳಿ ಹೆಣ್ಣು ಮಕ್ಕಳಾಗಿದ್ದಲ್ಲಿ ಎಲ್ಲಾ ಹೆಣ್ಣು ಮಕ್ಕಳು ಈ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.

● ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲೂ ಅನುಷ್ಠಾನಗೊಳಿಸಲಾಗುವುದು.
● ಅಂಗನವಾಡಿ ಕೇಂದ್ರಗಳಲ್ಲಿ ಪೋಷಕರು ಮೊದಲು ನೋಂದಾಯಿಸಬೇಕು, ಅಂಗನವಾಡಿ ಕೇಂದ್ರಗಳು ಇಲ್ಲದ ಸ್ಥಳದಲ್ಲಿ ಹತ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ನೋಂದಾಯಿಸಬಹುದು.
● ಮಗುವಿನ ಜನನ ಪ್ರಮಾಣ ಪತ್ರದ ದಾಖಲೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
● ಪರಿಪಕ್ವ ಮೊತ್ತವನ್ನು ಪಡೆಯಲು ಮಗು ಕಡ್ಡಾಯವಾಗಿ 8ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿರಲೇಬೇಕು.

● ವಿಕಲಚೇತನ ಮಕ್ಕಳಿಗೆ ಇದರಲ್ಲಿ ಸಡಿಲಿಕೆ ಇದೆ. ಜಿಲ್ಲಾಧಿಕಾರಿಗಳ ಅನುಮತಿ ಪಡೆದು 5ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದರು ಸಾಕು.
● 5ನೇ / 8ನೇ ತರಗತಿ ಉತ್ತೀರ್ಣರಾಗಿರುವ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಿಂದ ಧೃಡೀಕರಣ ಪತ್ರ ಸಲ್ಲಿಸಬೇಕು.
● ಬಾಲ ಕಾರ್ಮಿಕಳಾಗಿರತಕ್ಕದ್ದಲ್ಲ.
● 18 ವರ್ಷ ತುಂಬುವ ಮುನ್ನ ವಿವಾಹವಾಗುವಂತಿಲ್ಲ.
● ಈ ಮೇಲಿನ ಅರ್ಹತೆಗಳಲ್ಲಿ ಯಾವುದನ್ನು ಮೀರಿದರೂ ಕೂಡ ಈ ಸೌಲಭ್ಯವನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳುತ್ತದೆ.

ಇಂದಿನಿಂದ ಗೃಹಲಕ್ಷ್ಮಿ ಯೋಜನೆ ಮತ್ತು ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಅವಕಾಶ.! ಅಪ್ಲೈ ಮಾಡುವುದು ಹೇಗೆ ನೋಡಿ.!

 

ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಚುನಾವಣೋತ್ತರವಾಗಿ ನೀಡಿದ್ದ ಭರವಸೆಯಂತೆ 5 ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಕರ್ನಾಟಕದಲ್ಲಿ ಜಾರಿಗೆ ತಂದಿದ್ದಾರೆ. ಅದರಲ್ಲಿ ಮಹಿಳೆಯರಿಗಾಗಿಯೇ ಇರುವ ಎರಡು ವಿಶೇಷ ಯೋಜನೆಗಳು ಎಂದರೆ ಗೃಹಲಕ್ಷ್ಮಿ ಯೋಜನೆ ಮತ್ತು ಶಕ್ತಿ ಯೋಜನೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಕರ್ನಾಟಕದ ಪ್ರತಿ ಕುಟುಂಬದ ಮಹಿಳೆಗೂ ಕೂಡ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ 2000ರೂ. ಸಹಾಯಧನ ಸಿಗಲಿದೆ.

ಹಾಗೆಯೇ ಶಕ್ತಿ ಯೋಜನೆ ಅಡಿ ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕದ ಎಲ್ಲಾ ಮಹಿಳೆಯರು ಕೂಡ ಕರ್ನಾಟಕದ ಗಡಿ ಒಳಗೆ ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ಕರ್ನಾಟಕ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ ಗಳಲ್ಲಿ ಉಚಿತ ಪ್ರಯಾಣವನ್ನು ಮಾಡಬಹುದಾಗಿದೆ. ಇದಕ್ಕೆ ಸಂಬಂಧಪಟ್ಟ ಮಾರ್ಗಸೂಚಿ ಮತ್ತು ನಿಬಂಧನೆಗಳನ್ನು ಹೊಂದಿರುವ ಆದೇಶ ಪತ್ರವೂ ಕೂಡ ಸರ್ಕಾರದಿಂದ ಹೊರ ಬಿದ್ದಿದೆ.

ಇದರಲ್ಲಿ ತಿಳಿಸಿರುವ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಸಹಾಯಧನಕ್ಕೆ ಜೂನ್ 15ರಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಜೂನ್ 15ರಿಂದ ಜುಲೈ 15ರ ತನಕ ಮಹಿಳೆಯರು ಆನ್ಲೈನ್ ಮೂಲಕ ಅಥವಾ ಆಫ್ಲೈನ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವವರು ಹತ್ತಿರದಲ್ಲಿರುವ ನಾಡಕಚೇರಿಗೆ ಹೋಗಿ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಗಳಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಆನ್ಲೈನಲ್ಲಿ ಅರ್ಜಿ ಸಲ್ಲಿಸುವುದು ಕೂಡ ಬಹಳ ಸರಳವಾಗಿದ್ದು PC, ಮೊಬೈಲ್ ಅಥವಾ CSC ಸೈಬರ್ ಸೆಂಟರ್, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಹೋಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಗೃಹಲಕ್ಷ್ಮಿ ಯೋಜನೆಯ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದು.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರು ಪೂರಕ ದಾಖಲೆಗಳಾಗಿ ಕುಟುಂಬದ ರೇಷನ್ ಕಾರ್ಡ್, ಮಹಿಳೆಯ ಆಧಾರ್ ಕಾರ್ಡ್, ಮಹಿಳೆಯ ಪತಿಯ ಆಧಾರ್ ಕಾರ್ಡ್, ಮಹಿಳೆಯ ವೋಟರ್ ಐಡಿ ಮತ್ತು ಮಹಿಳೆಯ ಪತಿಯ ವೋಟರ್ ಐಡಿ ಇವುಗಳ ಪ್ರತಿಗಳನ್ನು ತಪ್ಪದೆ ತೆಗೆದುಕೊಂಡು ಹೋಗಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದರ ಜೊತೆಗೆ NPCI ಮ್ಯಾಪಿಂಗ್ ಆಗಿ ಆಧಾರ್ ಸೀಡಿಂಗ್ ಆಗಿರುವ ಮಹಿಳೆಯ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯನ್ನು ಕೂಡ ತೆಗೆದುಕೊಂಡು ಹೋಗಿ ಮೊಬೈಲ್ ಸಂಖ್ಯೆಯನ್ನು ಕೊಟ್ಟು ಅರ್ಜಿ ಸಲ್ಲಿಸಬೇಕು. ಜುಲೈ 15ರಿಂದ ಆಗಸ್ಟ್ 15 ರವರೆಗೆ ಅರ್ಜಿಗಳ ಪರಿಶೀಲನೆ ನಡೆದು ಆಗಸ್ಟ್ 15ರಂದು ಕರ್ನಾಟಕದ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಸಹಾಯಧನವನ್ನು ನೇರ ವರ್ಗಾವಣೆ ಮೂಲಕ ಜಮೆ ಮಾಡಲಿದ್ದೇವೆ ಎಂದು ಆದೇಶ ಪತ್ರದಲ್ಲಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಇದೇ ರೀತಿ ಶಕ್ತಿ ಯೋಜನೆಗೂ ಕೂಡ ಜೂನ್ 11 ರಿಂದಲೇ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದರು ಮೂರು ತಿಂಗಳ ಒಳಗೆ ಮಹಿಳೆಯರು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಬೇಕು ಎಂದು ತಿಳಿಸಲಾಗಿದೆ. ಸೇವಾ ಸಿಂಧು ಪೋರ್ಟಲ್ ಅಲ್ಲಿ ನೋಂದಾಯಿಸಿ ಫಲಾನುಭವಿಗಳು ಈ ಶಕ್ತಿ ಸ್ಮಾರ್ಟ್ ಕಾರ್ಡನ್ನು ಪಡೆದುಕೊಳ್ಳಬೇಕು.

ಆಧಾರ್ ಕಾರ್ಡ್, ವಿಳಾಸದ ಪುರಾವೆ ಹಾಗೂ ಮೊಬೈಲ್ ಸಂಖ್ಯೆ ಮತ್ತು ಭಾವಚಿತ್ರವನ್ನು ನೀಡಿ CSC ಸೆಂಟರ್ ಗಳಲ್ಲಿ ಅಥವಾ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ನೋಂದಾಯಿಸಿ ಈ ಶಕ್ತಿ ಸ್ಮಾರ್ಟ್ ಕಾರ್ಡನ್ನು ಪಡೆಯಬಹುದು. ಅಲ್ಲಿಯವರೆಗೂ ಕೂಡ ಮಹಿಳೆಯರು ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಆದರೆ ಮೂರು ತಿಂಗಳ ನಂತರ ಈ ಪ್ರಯೋಜನ ಪಡೆಯಲು ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯವಾಗಲಿದೆ. ಆದ್ದರಿಂದ ಈ ಕೂಡಲೇ ಅರ್ಜಿ ಸಲ್ಲಿಸಿ ಕಾರ್ಡ್ ಪಡೆದುಕೊಳ್ಳಿ.

ಹನುಮಂತನನ್ನು ಸಂಕಷ್ಟಹರ ಎಂದು ಏಕೆ ಕರೆಯುತ್ತಾರೆ ಗೊತ್ತಾ.? ಮಂಗಳವಾರ & ಶನಿವಾರ ಹನುಮಂತನನ್ನು ಆರಾಧಿಸಿದರೆ ಈ 10 ಸಮಸ್ಯೆಗಳು ನಿವಾರಣೆಯಾಗುತ್ತದೆ.!

 

ಲಕ್ಷ್ಮಣನನ್ನು ಬದುಕಿಸಲು ಸಂಜೀವಿನಿ ಪರ್ವತವನ್ನು ಅಂಗೈಯಲ್ಲಿ ತೆಗೆದು ಕೊಂಡು ಬಂದಂತಹ ಸಾಹಸವಂತ ಈ ಧೀರ ಆಂಜನೇಯ. ಸೀತಾ ಮಾತೆಯು ಲಂಕೆಯಲ್ಲಿ ಅಶೋಕವನದಲ್ಲಿ ಬಂದಿ ಆಗಿದ್ದಾಗ ಆಕೆಯನ್ನು ರಾವಣನ ಬಂಧನದಿಂದ ಬಿಡಿಸಲು ಶ್ರೀರಾಮನಿಗೆ ಯುದ್ಧದಲ್ಲಿ ಸಹಾಯ ಮಾಡಿದಂತ ಹನುಮಂತ. ಈ ರೀತಿ ದೇವಾನುದೇವತೆಗಳಿಗೆ ಅವರ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಈ ಅಂಜನಿಪುತ್ರ ಭಕ್ತಿಯಿಂದ ಕೈ ಮುಗಿದು ಬೇಡಿದರೆ ತಕ್ಷಣವೇ ಒಯ್ಯುವಂತಹ ಕಲಿಯುಗದ ಪ್ರತ್ಯಕ್ಷ ದೈವ.

ಹಾಗಾಗಿ ಈತನ ಪ್ರಭಾವವನ್ನು ಕಂಡಿರುವ ಅನುಭವಿಸಿರುವ ಈತನ ಭಕ್ತರು ಸಂಕಷ್ಟಕರ ಆಂಜನೇಯ ಎಂದು ಈತನನ್ನು ಸ್ಮರಿಸುತ್ತಾರೆ. ಮಂಗಳವಾರ ಮತ್ತು ಶನಿವಾರ ಬಹಳ ವಿಶೇಷ. ಈ ದಿನ ಭಕ್ತಿಯಿಂದ ಆಂಜನೇಯನಿಗೆ ಇಷ್ಟ ಆಗುವ ರೀತಿ ಪೂಜೆ ಮಾಡಿ ತಮ್ಮ ಕಷ್ಟಗಳನ್ನು ಕೇಳಿಕೊಂಡರೆ ಅಥವಾ ಇಷ್ಟಾರ್ಥಗಳಿಗಾಗಿ ಬೇಡಿಕೊಂಡರೆ ಅದು ಶೀಘ್ರವಾಗಿ ನೆರವೇರುತ್ತದೆ ಎನ್ನುವ ನಂಬಿಕೆ ಇದೆ.

ಪ್ರಮುಖವಾಗಿ ಮಂಗಳವಾರ ಮತ್ತು ಶನಿವಾರದಂದು ಆಂಜನೇಯನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಈ ಹತ್ತು ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು. ಅವುಗಳು ಯಾವುದೆಂದರೆ, ಆರೋಗ್ಯ ಸಮಸ್ಯೆಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದರು ಕಾಯಿಲೆ ಕಷ್ಟಗಳು ಬಂದಿದ್ದರು ಕೂಡ ಅವುಗಳು ಪರಿಣಾಮಕಾರಿಯಾಗಿ ಫಲ ಕೊಡಬೇಕು ಎಂದರೆ ಆಂಜನೇಯನನ್ನು ಭಕ್ತಿಯಿಂದ ಪ್ರಾರ್ಥಿಸಬೇಕು.

ಈ ರೀತಿ ಆಂಜನೇಯನ ಪೂಜೆ ಮಾಡುವವರ ಆರೋಗ್ಯ ವೃದ್ಧಿ ಆಗುತ್ತದೆ. ಯಾವುದೇ ರೀತಿಯ ಭಯ ಆತಂಕಗಳು ಇದ್ದರೂ ಕೂಡ ಆಂಜನೇಯನ ಸ್ಮರಣೆಯಿಂದ ದೂರ ಆಗುತ್ತದೆ. ದೆವ್ವ ಭೂತಗಳ ಕಾಟದಿಂದ ಹಿಡಿದು ಯಾವುದೇ ವಿಷಯಕ್ಕೆ ಭಯ ಪಡುತ್ತಿದ್ದರು ಕೂಡ ಆಂಜನೇಯನನ್ನು ಬಲವಾಗಿ ನಂಬಿದರೆ ಕ್ರಮೇಣವಾಗಿ ಈ ಭಯವು ಹೊರಟುಹೋಗುತ್ತದೆ.

ಕೆಲವರಿಗೆ ಜಾತಕದಲ್ಲಿ ಮಂಗಳ ದೋಷಗಳು ಇರುತ್ತವೆ. ರಾಹು ದೋಷ, ಶನಿ ದೋಷ, ಕೇತು ದೋಷ ಈ ರೀತಿ ಯಾವುದೇ ರೀತಿಯ ದೋಷಗಳು ಇದ್ದರೂ ಕೂಡ ಮಂಗಳವಾರ ಮತ್ತು ಶನಿವಾರದಂದು ಆಂಜನೇಯನನ್ನು ಪ್ರಾರ್ಥಿಸಿ ಹನುಮಾನ್ ಚಾಲೀಸ ಪಠಿಸಿದರೆ ಯಾವುದೇ ರೀತಿಯ ಸಂಕಷ್ಟಗಳು ಸಮಸ್ಯೆಗಳು ಇದ್ದರೂ ಕೂಡ ಅವುಗಳು ಪರಿಹಾರ ಆಗುತ್ತವೆ.

ಶತ್ರುಗಳ ಕಾಟ ಎದುರಿಸುತ್ತ ಇರುವವರು ಅದರ ಮುಕ್ತಿಗಾಗಿ ಆಂಜನೇಯನನ್ನು ಪ್ರಾರ್ಥಿಸಬಹುದು. ಯಾವುದೇ ಕಾರಣ ಇಲ್ಲದೆ ಶತ್ರುಗಳು ಉಂಟಾಗಬಹುದು ಅಥವಾ ಜೀವನದಲ್ಲಿ ನಾವಿರುವ ಸ್ಥಾನದಿಂದಲೆ ಶತ್ರುಗಳು ಸೃಷ್ಟಿ ಆಗಬಹುದು ಆ ಸಮಯದಲ್ಲಿ ಇವರನ್ನೆಲ್ಲಾ ಧೈರ್ಯವಾಗಿ ಎದುರಿಸಲು ಆಂಜನೇಯ ಸ್ವಾಮಿಯ ಕೃಪಾಕಟಾಕ್ಷ ಶಕ್ತಿಯಾಗುತ್ತದೆ. ಹಾಗೆಯೇ ಕೋರ್ಟು ಕೇಸು ಇವುಗಳಿಗೆ ಸಂಬಂಧಪಟ್ಟ ಸಮಸ್ಯೆಗಳಲ್ಲಿ ಸಿಲುಕಿಕೊಂಡಿರುವವರು ಕೂಡ ಆಂಜನೇಯನನ್ನು ಪ್ರಾರ್ಥಿಸಿದರೆ ಬೇಗ ಇದಕ್ಕೆಲ್ಲಾ ಪರಿಹಾರ ಸಿಗುತ್ತದೆ.

ರಸ್ತೆ ಅಪಘಾತ ಅಥವಾ ಇನ್ಯಾವುದೇ ಅಪಘಾತಗಳ ಭಯ ಪಡುತ್ತಿರುವವರು ಕೂಡ ಆಂಜನೇಯನನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಅವರಿಗೂ ಆ ಭಯವು ನಿವಾರಣೆ ಆಗುತ್ತದೆ. ಕೆಲಸ ಕಾರ್ಯಗಳನ್ನು ಆರಂಭಿಸುವಾಗ ವಿಜ್ಞಗಳು ಉಂಟಾಗುತ್ತಿದ್ದರೆ ಆ ವಿಜ್ಞಗಳ ಪರಿಹಾರಕ್ಕಾಗಿ ಕೂಡ ಆಂಜನೇಯನನ್ನು ಪ್ರಾರ್ಥಿಸುತ್ತಾರೆ.

ಗಣಪತಿಯನ್ನು ಮೊದಲು ಪ್ರಾರ್ಥಿಸಿ ನಂತಹ ಆಂಜನೇಯನನ್ನು ಕೂಡ ಪ್ರಾರ್ಥಿಸಿ, ಕೆಲಸ ಆರಂಭ ಮಾಡಿದರೆ ಅದು ನಿರ್ವಿಘ್ನವಾಗಿ ಸಾಗುತ್ತದೆ. ದುಷ್ಟ ಶಕ್ತಿಗಳ ಭಯವಿದ್ದರೂ ಕೂಡ ಆಂಜನೇಯನನ್ನು ಪೂಜಿಸಿದರೆ ಅದು ನಿವಾರಣೆ ಆಗುತ್ತದೆ ಈ ರೀತಿ ದೈನಂದಿಕ ಜೀವನದ ಎಲ್ಲಾ ಸಮಸ್ಯೆಗಳು ಕೂಡ ಆಂಜನೇಯನ ಸ್ಮರಣೆಯಿಂದ ಪರಿಹಾರವಾಗುತ್ತದೆ.