Home Blog Page 193

ನಾಳೆ ಜೂನ್ 15 ರಂದು ಮಹಾಪ್ರದೋಷ, ಈ ಐದು ರಾಶಿಯವರಿಗೆ ಶುರುವಾಗಲಿದೆ ಶುಕ್ರದೆಶೆ.! ಅಂದುಕೊಂಡ ಕೆಲಸದಲ್ಲಿ ಜಯ, ಆರ್ಥಿಕ ಲಾಭ, ಕುಟುಂಬದಲ್ಲಿ ಸಂತೋಷ

 

ನಮ್ಮ ಹಿಂದೂ ಪಂಚಾಂಗದ ಪ್ರಕಾರ ನೋಡುವುದಾದರೆ ಪ್ರತಿಯೊಂದು ದಿನವೂ ಕೂಡ ಇಲ್ಲಿ ವಿಶೇಷವೇ. ಇಲ್ಲಿ ಪ್ರತಿಯೊಂದು ದಿನವು ಆಗುವ ಗ್ರಹಗಳ ಚಲನೆ, ಅವುಗಳ ರಾಶಿ ಸಂಚಾರ ಇವುಗಳ ಆಧಾರದ ಮೇಲೆ ರಾಜ್ಯಗಳ ಭವಿಷ್ಯವನ್ನು ಲೆಕ್ಕ ಹಾಕಲಾಗುತ್ತದೆ. ಅದೇ ರೀತಿ ಕೆಲ ರಾಶಿಗಳಿಗೆ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಮುಂಚೆಯೇ ಸೂಚನೆಯನ್ನು ಕೂಡ ಕೊಡಲಾಗುತ್ತದೆ.

ಅಂತಹದೇ ಒಂದು ವಿಶೇಷತೆಯ ದಿನ ಇನ್ನೇನು ಸಮೀಪವಿದೆ. ಇದು ಮಹಾಪ್ರದೋಷದ ದಿನವಾಗಿದೆ. ಈ ಬಾರಿ ಪ್ರದೋಷ ಗುರುವಾರ ಬಿದ್ದಿದೆ. ಆದರೂ ಕೂಡ ಗುರುವಾರ ಇದ್ದರೂ ಈ ಮಹಾಪ್ರದೋಷದ ದಿನ ಬಹಳ ಶುಭಕರವಾದ ಫಲಗಳನ್ನು ನೀಡುತ್ತಿದೆ. ಮಹಾದೇವ ಹಾಗೂ ಪಾರ್ವತಿ ತಾಯಿಯ ಸಂಪೂರ್ಣ ಅನುಗ್ರಹವು ಈ ದಿನ ಅವರನ್ನು ಪೂಜೆ ಮಾಡುವವರಿಗೆ ಲಭಿಸುತ್ತದೆ.

ಪ್ರದೋಷದ ದಿನದಂದು ಶಿವಲಿಂಗ ಪೂಜೆಗೆ ವಿಶೇಷ ಸ್ಥಾನ. ತ್ರಿಜನ್ಮ ಪಾಪಸಂಹಾರ ಏಕಭಿಲ್ವಂ ಶಿವಾಾರ್ಪಣಂ ಎನ್ನುವ ಶ್ಲೋಕವೇ ಹೇಳುವಂತೆ ಈ ಒಂದು ದಿನ ಬಿಲ್ವಾರ್ಚನೆಯಿಂದ ಶಿವಲಿಂಗವನ್ನು ಪೂಜೆ ಮಾಡಿದರೆ ಸಾಕು ಸರ್ವ ಪಾಪಗಳು ಕೂಡ ಪರಿಹಾರ ಆಗುತ್ತವೆ. ಅವರಿಗೆ ಪುಣ್ಯ ಪ್ರಾಪ್ತಿ ಆಗುತ್ತದೆ ಏನೇ ಬೇಡಿಕೆಗಳು ಇದ್ದರೂ, ಕೋರಿಕೆಗಳು ಇದ್ದರು ಈ ದಿನ ಭಕ್ತಿಯಿಂದ ಪರಶಿವನನ್ನು ಪ್ರಾರ್ಥಿಸಿ, ಪಾರ್ವತಿ ತಾಯಿಯನ್ನು ಆರಾಧಿಸಿದರೆ ಸಾಕು ಅವು ಪ್ರಾಪ್ತಿ ಆಗುತ್ತದೆ.

ಸಂಕಟಗಳ ನಿವಾರಣೆಗೆ ಸಂಕಷ್ಟಗಳ ನಿವಾರಣೆಗೆ ಮತ್ತು ಇಷ್ಟಾರ್ಥಸಿದ್ದಿಗೆ ಈ ದಿನದ ಪೂಜೆ ವಿಶೇಷ. ಈ ದಿನದಂದು ಶಿವ ಹಾಗೂ ಪಾರ್ವತಿ ಆರಾಧನೆ ಮಾಡುವುದರಿಂದ ಉದ್ಯೋಗ, ವಿದ್ಯಾಭ್ಯಾಸ, ಹಣಕಾಸಿನ ವ್ಯವಹಾರ, ಆರೋಗ್ಯ, ಸಂತಾನ, ಕುಟುಂಬ ಇನ್ನು ಮುಂತಾದ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಪರಿಹಾರಕ್ಕಾಗಿ ಅಥವಾ ಒಳಿತಿಗಾಗಿ ಪ್ರಾರ್ಥಿಸಿದರು ಕೂಡ ಅದು ಬಹಳ ಬೇಗ ಫಲವನ್ನು ಕೊಡುತ್ತದೆ.

ಈ ಬಾರಿ ಜೂನ್ 15ನೇ ತಾರೀಕಿನಂದು ಮಹಾ ಪ್ರದೋಷವಿದ್ದು, ದ್ವಾದಶ ರಾಶಿಗಳಲ್ಲಿ 5 ರಾಶಿಯವರಿಗೆ ವಿಶೇಷ ಫಲವನ್ನು ಕೊಡುತ್ತಿದೆ. ಈ ಐದು ರಾಶಿಯವರಿಗೆ ಇಂದು ತಮ್ಮ ಕನಸು ನನಸಾಗುವ ಕಾಲ ಆಗಿರುತ್ತದೆ. ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿಯ ಜೊತೆಗೆ ಆರೋಗ್ಯ ಸಮಸ್ಯೆ ಇದ್ದಾಗ ಅವುಗಳು ಕೂಡ ಪರಿಹಾರ ಆಗುತ್ತದೆ. ವಿದ್ಯಾಭ್ಯಾಸದ ವಿಷಯದಲ್ಲಿ ಕೂಡ ಆಸಕ್ತಿ ಹೆಚ್ಚಾಗುತ್ತದೆ.

ಮಕ್ಕಳಿಗೆ ಓದಿನಲ್ಲಿ ಏಕಾಗ್ರತೆ ಬರುತ್ತದೆ ಹಾಗೆ ಕೆಲಸ ಕಾರ್ಯಗಳು ಕೂಡ ಸರಾಗವಾಗಿ ಸಾಗುತ್ತವೆ. ಹಣಕಾಸಿನ ಸಮಸ್ಯೆಗಳು ಪರಿಹಾರ ಆಗಿ ಮುಟ್ಟಿದ್ದೆಲ್ಲಾ ಬಂಗಾರವಾಗುವಂತಹ ಸುಸಮಯ ಇದಾಗಿದೆ. ಇಂತಹ ಒಂದು ವಿಶೇಷ ಅನುಗ್ರಹವು ಬಹಳ ಅಪರೂಪವಾಗಿ ಲಭಿಸುತ್ತದೆ. ಅಂತಹ ಗಜಕೇಸರಿ ಯೋಗವನ್ನು ಪಡೆದ ಐದು ರಾಶಿಗಳು ಇವೇ ಆಗಿವೆ.

ಮೇಷ ರಾಶಿ, ಮಿಥುನ ರಾಶಿ, ಕರ್ಕಾಟಕ ರಾಶಿ, ಕನ್ಯಾ ರಾಶಿ ಮತ್ತು ತುಲಾ ರಾಶಿಯವರಿಗೆ ಈ ಪ್ರದೋಷ ಅದೃಷ್ಟ ತರಲಿದೆ. ಈ ಮಹಾಪ್ರದೋಷದ ಸಮಯವೂ ಇವರ ಬದುಕಿನ್ನು ಒಳ್ಳೆಯ ರೀತಿಯಲ್ಲಿ ಬದಲಾಯಿಸಲಿದೆ. ನಿರೀಕ್ಷೆಗೂ ಮೀರಿದ ಘಟನೆಗಳು ಜರಗಿ ಬದುಕು ಬಂಗಾರವಾಗುತ್ತದೆ.

ನಿಮ್ಮ ಕುಟುಂಬದಲ್ಲಿ ಅಥವಾ ಸ್ನೇಹಿತರ ಬಳಗದಲ್ಲಿ ಯಾರಾದರೂ ಈ ರಾಶಿಯವರು ಇದ್ದರೆ ಅವರಿಗೆ ಈ ಶುಭ ಸುದ್ದಿಯನ್ನು ಹಂಚಿಕೊಳ್ಳಿ. ಯಾವುದಾದರೂ ಕಾರ್ಯಕ್ಕಾಗಿ ಶುಭ ಸಮಯವನ್ನು ಕಾಯುತ್ತಿದ್ದರೆ ಈ ಸಮಯ ಬಹಳ ಒಳಿತಾಗಿದೆ ಈ ಶುಭಕಾಲದ ಉಪಯೋಗವನ್ನು ಐದು ರಾಶಿಯ ಎಲ್ಲರೂ ಕೂಡ ಪಡೆದುಕೊಳ್ಳಿ.

ವೆಂಕಟೇಶ್ವರ ಸ್ವಾಮಿಗೆ ಈ ರೀತಿ ಮುಡುಪು ಕಟ್ಟಿದರೆ 48 ದಿನದ ಒಳಗೆ ಅಂದುಕೊಂಡ ಕೆಲಸ ಆಗುತ್ತದೆ. ಕಷ್ಟಗಳು ಕಳೆದು ದೈವಬಲ ಸಿದ್ಧಿಯಾಗುತ್ತದೆ.!

 

ಪ್ರತಿಯೊಬ್ಬರೂ ಕೂಡ ತಮಗೆ ಕಷ್ಟಗಳು ಬಂದಾಗ ಅಥವಾ ಯಾವುದಾದರೂ ಕೋರಿಕೆಗಳು ನೆರವೇರಬೇಕು ಎಂದಾಗ ಅವರ ಮನೆ ದೇವರಿಗೆ ಮುಡುಪನ್ನು ಕಟ್ಟಿಕೊಳ್ಳುತ್ತಾರೆ ಅಥವಾ ಇಷ್ಟ ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ವೆಂಕಟೇಶ್ವರನಿಗೆ ಒಂದು ವಿಶೇಷವಾದ ವಿಧಾನದ ಮೂಲಕ ಈ ರೀತಿ ಮುಡುಪು ಕಟ್ಟಿಕೊಂಡರೆ ಎಂತಹ ಸಮಸ್ಯೆ ಇದ್ದರೂ ಕೂಡ ಅದು ಶೀಘ್ರವಾಗಿ ಪರಿಹಾರ ಆಗುತ್ತದೆ, ಈ ರೀತಿ ಮುಡುಪು ಕಟ್ಟಿಕೊಂಡ ನಲವತ್ತೆಂಟು ದಿನಗಳಾದ ಒಳಗೆ ಆಗುತ್ತದೆ ಎನ್ನುವುದು ನಂಬಿಕೆ.

ಯಾಕೆಂದರೆ ಕಲಿಯುಗದ ದೈವ ಎಂದು ಕರೆಸಿಕೊಂಡಿರುವ ಶ್ರೀ ವೆಂಕಟೇಶ್ವರ ಸ್ವಾಮಿ ಸಂಕಟಗಳನ್ನು ಪರಿಹಾರ ಮಾಡುವ ಸ್ವಾಮಿ ಹಾಗೂ ಹಣಕಾಸಿನ ತೊಂದರೆಗಳನ್ನು ನಿವಾರಣೆ ಮಾಡುವ ದೇವರು ಎಂದೇ ಹೆಸರುವಾಸಿ ಆಗಿರುವುದರಿಂದ ಆರೋಗ್ಯ ಅಷ್ಟೈಶ್ವರ್ಯ ಮತ್ತು ನೆಮ್ಮದಿಗಾಗಿ ಎಲ್ಲರೂ ವೆಂಕಟೇಶ್ವರ ಸ್ವಾಮಿಯನ್ನು ಬೇಡುತ್ತಾರೆ.

ವೆಂಕಟೇಶ್ವರ ಸ್ವಾಮಿಗೆ ಮುಡುಪನ್ನು ಕಟ್ಟಿಕೊಳ್ಳಬೇಕು ಎಂದರೆ ಈ ರೀತಿ ಮಾಡಬೇಕು ಮನೆಯನ್ನು ಶುದ್ಧ ಮಾಡಿ, ಮಡಿಯುಟ್ಟು ಮನೆಯಲ್ಲಿ ಮೊದಲಿಗೆ ಗಣಪತಿಯನ್ನು ಆರಾಧನೆ ಮಾಡಿ ಗಣಪತಿ ಮುಂದೆ ಐದು ಬತ್ತಿಗಳನ್ನು ಇಟ್ಟು ಕೊಬ್ಬರಿ ಎಣ್ಣೆಯಿಂದ ದೀಪಾರಾಧನೆ ಮಾಡಬೇಕು. ಓಂ ಗಣಪತಿಯೇ ನಮಃ ಎಂದು 21 ಬಾರಿ ಮಂತ್ರ ಹೇಳಿ ಗಣಪತಿ ಬಳಿ ವೆಂಕಟೇಶ್ವರ ಸ್ವಾಮಿಗೆ ಮಡುಪನ್ನು ಕಟ್ಟಿಕೊಳ್ಳುತ್ತೇವೆ ಇದು ನೆರವೇರಂತೆ ಮಾಡು ಎಂದು ಕೋರಿಕೊಳ್ಳಬೇಕು.

ಈ ರೀತಿ ಮಾಡಿದರೆ ಅದು ಶೀಘ್ರವಾಗಿ ನೆರವೇರುತ್ತದೆ ಎನ್ನುವ ನಂಬಿಕೆ ಇದೆ. ನಂತರ ಒಂದು ಬಿಳಿ ಬಟ್ಟೆಯನ್ನು ಅರಿಶಿಣದ ನೀರಿನಲ್ಲಿ ಅದ್ದಿ ಒಣಗಿಸಬೇಕು ನಂತರ ಹಳದಿ ವಸ್ತ್ರಕ್ಕೆ ನಾಲ್ಕು ಮೂಲೆಗಳನ್ನು ಕೂಡ ಕುಂಕುಮವನ್ನು ಹಚ್ಚಬೇಕು ನಂತರ ನಿಮ್ಮ ಶಕ್ತಿ ಅನುಸಾರ 11 ಅಥವಾ 21 ರೂಪಾಯಿ ಅಥವಾ 54 ರೂಪಾಯಿ ಅಥವಾ 108 ರೂಪಾಯಿಯನ್ನು ಹಾಕಿ ಮೂರು ಗಂಟುಗಳನ್ನು ಹಾಕಬೇಕು.

ಪ್ರತಿಯೊಂದು ಗಂಟುಗಳನ್ನು ಹಾಕುವಾಗಲು ಕೂಡ ನೀವು ನಿಮ್ಮ ಸಮಸ್ಯೆ ಅಥವಾ ಕೋರಿಕೆ ಏನು ಯಾವ ಕಾರಣಕ್ಕಾಗಿ ಈ ರೀತಿ ಮುಡುಪು ಕಟ್ಟುತ್ತಿದ್ದೀರಾ ಎನ್ನುವುದನ್ನು ಹೇಳಿಕೊಂಡು ಮುಡುಪನ್ನು ಕಟ್ಟಬೇಕು. ಈ ರೀತಿ ಕೇಳಿಕೊಂಡ ಮೇಲೆ ಪ್ರತಿ ಶನಿವಾರ ಸಾಧ್ಯವಾದರೆ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಪಡೆದು 21 ಬಾರಿ ಓಂ ಗೋವಿಂದಾಯ ನಮಃ ಎಂದು ಪಠಿಸುತ್ತಾ ಪ್ರದಕ್ಷಿಣೆಯನ್ನು ಹಾಕಬೇಕು.

ಈ ರೀತಿ ಮಾಡಿದರೆ ಇನ್ನೂ ಶೀಘ್ರವಾಗಿ ವೆಂಕಟೇಶ್ವರ ಸ್ವಾಮಿಯ ಅನುಗ್ರಹ ನಿಮಗೆ ಸಿಗುತ್ತದೆ ಮತ್ತು ದೈವಬಲ ನಿಮ್ಮ ಎಲ್ಲಾ ಕಾರ್ಯಗಳಿಗೆ ಜೊತೆಗಿರುತ್ತದೆ. ನಿಮ್ಮ ಕೋರಿಕೆಗಳು ನೆರವೇರಿದ ಬಳಿಕ ಆ ಮುಡುಪನ್ನು ಏನು ಮಾಡಬೇಕು ಎನ್ನುವುದು ಅನೇಕರ ಗೊಂದಲ.

ನಿಮ್ಮ ಇಷ್ಟಾರ್ಥ ಸಿದ್ಧಿಯಾದ ಬಳಿಕ ಅಥವಾ ಸಂಕಷ್ಟ ಪರಿಹಾರ ಆದ ಬಳಿಕ ನೀವು ಯಾವ ಉದ್ದೇಶಕ್ಕಾಗಿ ಮುಡುಪನ್ನು ಕಟ್ಟಿಕೊಂಡಿದ್ದೀರಾ ಅದು ಪೂರ್ತಿ ಆದ ಬಳಿಕ ಆ ಮುಡುಪು ಕಟ್ಟಿದ್ದ ಹಣವನ್ನು ನೀವು ತಪ್ಪದೆ ತಿರುಪತಿಯಲ್ಲಿರುವ ವೆಂಕಟೇಶ್ವರ ಸ್ವಾಮಿಯ ಹುಂಡಿಯಲ್ಲಿ ಹಾಕಬೇಕು. ಹೀಗೆ ಹಾಕುವಾಗ ಸ್ವಲ್ಪ ಹಣವನ್ನು ಹೆಚ್ಚಿಗೆ ಹಾಕಬೇಕು.

ಆಗ ನೀವು ವೆಂಕಟೇಶ್ವರರ ಬಳಿ ಹಣವನ್ನು ನಿಮ್ಮ ಹಣಕ್ಕೆ ಬಡ್ಡಿ ರೂಪದಲ್ಲಿ ಕೊಡುತ್ತಿದ್ದೇನೆ ಎಂದು ಹೇಳಿಕೊಂಡು ಹಾಕಬೇಕು. ಈ ರೀತಿಯ ವಿಧಿ ವಿಧಾನಗಳಿಂದ ವೆಂಕಟೇಶ್ವರ ಸ್ವಾಮಿಗೆ ಮುಡುಪು ಕಟ್ಟಿಕೊಂಡು ಹೇಳಿಕೊಂಡರೆ ಅದು ಶೀಘ್ರವಾಗಿ ಫಲ ಕೊಡುತ್ತದೆ. ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

ಮುಸ್ಲಿಂ ಯುವಕನ ಜೊತೆ ಓಡಿ ಹೋದ ಮಗಳು, ಬದುಕಿದ್ದಾಗಲೇ ಆಕೆಯ ತಿಥಿ ಕಾರ್ಯ ಮಾಡಿ ಪಿಂಡ ಬಿಟ್ಟ ಪೋಷಕರು.!

 

ಮಗಳು ಬದುಕಿರುವಾಗಲೇ ಆಕೆಗೆ ಶ್ರದ್ಧಾಂಜಲಿ ಸಲ್ಲಿಸಿ ತಿಥಿ ಕಾರ್ಡ್ ಹಂಚಿ ತಿಥಿ ಊಟ ಹಾಕಿಸಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಬಜಲ್ಪುರದಲ್ಲಿ ನಡೆದಿದೆ. ಈ ಘಟನೆಯ ಹಿನ್ನೆಲೆ ನೋಡುವುದಾದರೆ ಮಗಳು ಅನ್ಯ ಧರ್ಮೀಯ ಯುವಕನನ್ನು ಮದುವೆ ಆಗಿರುವುದೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕಳೆದೆರಡು ದಿನಗಳಿಂದ ಈ ವಿಷಯ ಬಾರಿ ಚರ್ಚೆ ಆಗುತ್ತಿದೆ.

ಮಧ್ಯಪ್ರದೇಶದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕುಟುಂಬ ನರ್ಮದ ನದಿಯ ಗ್ವಾರಿಘಾಟ್ ಅಲ್ಲಿ ಅಂತ್ಯಸಂಸ್ಕಾರದ ನಂತರದ ಕಾರ್ಯಗಳನ್ನು ಮುಗಿಸಿ ಮಗಳು ಜೀವಂತ ಇರುವಾಗಲೇ ಅವಳ ಹೆಸರಿನಲ್ಲಿ ಪಿಂಡ ಕೂಡ ಇಟ್ಟಿದ್ದಾರೆ. ಜೊತೆಗೆ ಇವರು ಮಗಳ ತಿಥಿ ಕಾರ್ಡ್ ಎಂದು ಪ್ರಿಂಟ್ ಮಾಡಿದ್ದ ಆ ಪತ್ರಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ತಿಥಿ ಕಾರ್ಡ್ ಅಲ್ಲಿ ಮಗಳನ್ನು ಕುಪುತ್ರಿ ಮತ್ತು ನರಕವಾಸಿ ಎಂದೆಲ್ಲಾ ಅವರು ಕರೆದಿದ್ದಾರೆ. ಜೊತೆಗೆ ಇದನ್ನು ಎಲ್ಲೆಡೆ ಹಂಚಿ ಆಕೆಯ ಆತ್ಮಕ್ಕೆ ಶಾಂತಿ ಕೋರುವಂತೆ ಕೇಳಿದ್ದಾರೆ. ಅನಾಮಿಕ ದುಬೆ ಎನ್ನುವ ಹೆಸರಿನ ದುರ್ದೈವಿ ಬದುಕಿರುವಾಗಲೇ ಪೋಷಕರಿಂದ ತಿಥಿ ಮಾಡಿಸಿಕೊಂಡಿರುವ ಮಗಳು. ಜನವರಿ 2ರಂದು ಮನೆ ಬಿಟ್ಟು ಹೋಗಿದ್ದ ಏಕೆ ಜನವರಿ 4ರಂದು ಮುಸ್ಲಿಂ ಯುವಕನೋರ್ವನನ್ನು ವಿವಾಹ ಆಗಿದ್ದರು.

ಈ ವಿಷಯ ತಿಳಿದ ಪೋಷಕರು ಬಜಲ್ಪುರದ ಎಸ್ ಪಿ ಕಚೇರಿ ಮುಂದೆ ಗಲಾಟೆ ಮಾಡಿದ್ದರು. ಹಿಂದೂ ಸಂಘಟನೆಗಳು ಕೂಡ ಇದಕ್ಕೆ ಸಾಥ್ ನೀಡಿದ್ದವು. ಆದರೆ ಪೋಷಕರ ಒಪ್ಪಿಗೆ ಜೊತೆಗೆ ಮದುವೆ ಆಗಿದೆ ಜೊತೆಗೆ ಪೋಷಕರ ಕಡೆಯಿಂದ ಉಡುಗೊರೆಗಳು ಬಂದಿವೆ ಎನ್ನುವ ರೀತಿಯ ಸಾಕ್ಷಿಗಳು ಇವೆ ಎನ್ನುವುದು ಪೊಲೀಸರಿಂದ ತಿಳಿದ ಬಳಿಕ ಪೋಷಕರು ಕಂಗಲಾಗಿದ್ದರು.

ಸ್ಥಳದಲ್ಲಿಯೇ ತಾಯಿ ಅನ್ನಪೂರ್ಣ ದುಬೆ ಅವರು ಮಗಳು ಮೋಸ ಮಾಡಿದ್ದಾಳೆ, ಅವಳು ಮದುವೆ ಆಗುವ ಬಗ್ಗೆ ನಮಗೆ ಯಾವ ಸುಳಿವು ಕೊಟ್ಟಿಲ್ಲ ಎಂದು ಆರೋಪಿಸಿದ್ದರು. ಇದಾದ ಕೆಲ ತಿಂಗಳುಗಳ ಬಳಿಕ ಯುವಕನ ಕುಟುಂಬದವರು ಒಂದು ರಿಸೆಪ್ಶನ್ ಪಾರ್ಟಿಯನ್ನು ಅರೇಂಜ್ ಮಾಡಿದ್ದರು. ಅದಕ್ಕೆ ಆಹ್ವಾನ ಪತ್ರಿಕೆಯನ್ನು ಕೂಡ ಪ್ರಿಂಟ್ ಮಾಡಿಸಿ ಪೋಷಕರ ಕಡೆಗೂ ತಲುಪಿಸಿದರು.

ಅದರಲ್ಲಿ ಹಿಂದೂ ಯುವತಿಯು ಮುಸ್ಲಿಂ ಆಗಿ ಬದಲಾಗಿದ್ದಾಳೆ ಎಂದು ಬರೆಯಲಾಗಿತ್ತು ಹಾಗೂ ಅನಾಮಿಕ ದುಬೆ ಹೆಸರನ್ನು ಫಾತಿಮಾ ಎಂದು ಬದಲಾಯಿಸಲಾಗಿತ್ತು. ಇದು ಲವ್ ಜಿಹಾದ್ ಎಂದು ಆರೋಪಿಸುತ್ತಿರುವ ಪೋಷಕರು ಮಗಳು ಲವ್ ಮ್ಯಾರೇಜ್ ಆಗಿದ್ದರೆ ಧರ್ಮವನ್ನು ಯಾಕೆ ಅವರು ಬದಲಾಯಿಸಬೇಕಾಗಿತ್ತು ಎಂದು ಆರೋಪ ಮಾಡಿದ್ದಾರೆ. ಜೊತೆಗೆ ಮಗಳ ಬಗ್ಗೆ ಕುಪಿತರಾದ ಪೋಷಕರು ಮಗಳು ಜೂನ್ 2ರಂದು ಸ.ತ್ತ ವಿಷಯ ಗೊತ್ತಾಗಿದೆ, ಅದಕ್ಕಾಗಿ ಜೂನ್ 11ನೇ ತಾರೀಕಿನಂದು ಆಕೆಗೆ ಶ್ರದ್ದಾ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳಿ ಮತ್ತೊಂದು ಆಹ್ವಾನ ಪತ್ರಿಕೆಯನ್ನು ಹೊರಡಿಸಿ ಎಲ್ಲರಿಗೂ ಹಂಚಿದ್ದಾರೆ.

ಅದೇ ರೀತಿ ಗ್ವಾಲಿಘಾಟ್ ಪ್ರದೇಶದಲ್ಲಿ ಸತ್ತ ಬಳಿಕ ಮಾಡುವ ಎಲ್ಲಾ ಅಂತಿಮ ವಿಧಿ ವಿಧಾನಗಳನ್ನು ಕೂಡ ಮಗಳ ಹೆಸರಿನಲ್ಲಿ ಮಾಡಿ ಮುಗಿಸಿ ತಿಥಿ ಊಟವನ್ನು ಕೂಡ ಹಾಕಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೋಗಳು ವಿಡಿಯೋಗಳು ಮತ್ತು ಈ ವಿಷಯವು ಈಗ ಎಲ್ಲೆಡೆ ಚರ್ಚೆ ಆಗುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುತ್ತಿರುವ ಎಲ್ಲರೂ ಜೂನ್ 15ನೇ ತಾರೀಖಿನ ಒಳಗೆ ಈ ಕೆಲಸ ಮಾಡುವುದು ಕಡ್ಡಾಯ.! ಇಲ್ಲದಿದ್ದರೆ ಪಿಂಚಣಿ ಬಂದ್ ಆಗುತ್ತೆ ಎಚ್ಚರ.!

ಕರ್ನಾಟಕದ ಕಂದಾಯ ಇಲಾಖೆಯಿಂದ ರಾಜ್ಯದಾದ್ಯಂತ ಇರುವ ಎಲ್ಲಾ ಸಾರ್ವಜನಿಕರ ಗಮನಕ್ಕೆ. ಪ್ರತಿ ತಿಂಗಳು ವೃದ್ಧಾಪ್ಯ ವೇತನ ಅಂದರೆ 60 ವರ್ಷ ಮೇಲ್ಪಟ್ಟ ಅಜ್ಜ ಹಾಗೂ ಅಜ್ಜಿಯರು ಪ್ರತಿ ತಿಂಗಳು ಪಿಂಚಣಿ ಹಣ ಪಡೆಯುತ್ತಿದ್ದರೆ ಅಥವಾ ಅಂಗವಿಕಲ ವೇತನ ಪಡೆಯುತ್ತಿದ್ದರೆ ಅಥವಾ ವಿಧವಾ ವೇತನ ಪಡೆಯುತ್ತಿದ್ದರೆ, ಸಂಧ್ಯಾ ಸುರಕ್ಷ ಯೋಜನೆ ಸೇರಿದಂತೆ ಮನಸ್ವಿನಿ ಹಾಗೂ ಮೈತ್ರಿ ಮತ್ತು ಇತರೆ ಯಾವುದೇ ಹಣವನ್ನು ಕರ್ನಾಟಕದ ಕಂದಾಯ ಇಲಾಖೆಯ ಮೂಲಕ ಪ್ರತಿ ತಿಂಗಳು ಸರ್ಕಾರದಿಂದ ನಿಮಗೆ ಹಣ ಬರುತ್ತಿದ್ದರೆ ಇದೇ ತಿಂಗಳು ಅಂದರೆ ಜೂನ್ 15ನೇ ತಾರೀಖಿನ ಒಳಗಾಗಿ.

ಕಡ್ಡಾಯವಾಗಿ ಈ ಒಂದು ಕೆಲಸವನ್ನು ಮಾಡುವಂತದ್ದು ಇಲ್ಲವಾದರೆ ಮುಂದಿನ ತಿಂಗಳಿನಿಂದ ನಿಮ್ಮ ಖಾತೆಗೆ ಹಣ ಜಮೆ ಆಗುವುದಿಲ್ಲ. ಈ ಹೊಸ ನಿಯಮವು ಹಾಗೂ ಈ ಕೆಲಸವನ್ನು ಪ್ರತಿಯೊಬ್ಬರೂ ಪ್ರತಿ ತಿಂಗಳು ಹಣ ಪಡೆದುಕೊಳ್ಳುತ್ತಿರುವಂತಹ ಪ್ರತಿಯೊಬ್ಬರಿಗೂ ಕೂಡ ಅನ್ವಯಿಸಲಿದೆ. ಕರ್ನಾಟಕ ಕಂದಾಯ ಇಲಾಖೆಯಿಂದ ಅಧಿಕೃತವಾಗಿ ಈ ಒಂದು ಆದೇಶವನ್ನು ಜಾರಿಗೊಳಿಸಲಾಗಿದ್ದು ಕಡ್ಡಾಯವಾಗಿ ಮನೆ ಯಲ್ಲಿ ಯಾರಾದರೂ ಸರ್ಕಾರದ ಹಣವನ್ನು ಪಡೆದುಕೊಳ್ಳುತ್ತಿದ್ದರೆ.

ಈ ಮಾಹಿತಿಯನ್ನು ಅವರು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿ ರುತ್ತದೆ ಹಾಗೂ ಇಲ್ಲಿ ಹೇಳುವಂತಹ ಎಲ್ಲಾ ಮಾಹಿತಿಗಳನ್ನು ಅವರು ಅನುಸರಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಇಲ್ಲವಾದರೆ ಅವರು ಯಾವುದೇ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಅವರಿಗೆ ಅನುಕೂಲವಾಗುವಂತೆ ಈ ಮಾಹಿತಿಯನ್ನು ಹೊರಡಿಸಿದ್ದು ಪ್ರತಿಯೊಬ್ಬರು ಈ ಮಾಹಿತಿಗಳನ್ನು ಉಪಯೋಗಿಸಿ ಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಯಾವ ನಿಯಮಗಳನ್ನು ಅವರು ಅನುಸರಿಸಬೇಕಾಗುತ್ತದೆ ಯಾವೆಲ್ಲ ದಾಖಲಾತಿಗಳನ್ನು ಅವರು ಪರಿಶೀಲಿಸಿಕೊಳ್ಳಬೇಕಾಗುತ್ತದೆ ಹೀಗೆ ಈ ಎಲ್ಲಾ ಮಾಹಿತಿಗೆ ಸಂಬಂಧಿಸಿದಂತೆ ಹಲವಾರು ಮಾಹಿತಿಗ ಳನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಕರ್ನಾಟಕದ ರೆವಿನ್ಯೂ ಡಿಪಾರ್ಟ್ಮೆಂಟ್ ನಿಂದ ಅಧಿಕೃತವಾಗಿ ಹೊಸ ಆದೇಶವನ್ನು ಬಿಡುಗಡೆ ಮಾಡಿದ್ದು ಪ್ರತಿ ತಿಂಗಳು ಪಿಂಚಣಿ ಹಣವನ್ನು ಪಡೆದುಕೊಳ್ಳುತ್ತಿರು ವಂತಹ ಪ್ರತಿಯೊಬ್ಬರಿಗೂ ಕೂಡ ಈ ನಿಯಮ ಕಡ್ಡಾಯವಾಗಿ ಅನ್ವಯಿ ಸುತ್ತದೆ ಎಂದೇ ಹೇಳಬಹುದು.

ಹಾಗಾಗಿ ನಿಮ್ಮ ಕುಟುಂಬದಲ್ಲಿ ಹಾಗೂ ನಿಮ್ಮ ಸುತ್ತಮುತ್ತ ಯಾರಾದರೂ ಇಂಥವರು ಇದ್ದರೆ ಅವರಿಗೆ ಈ ಆದೇಶವನ್ನು ತಲುಪಿಸುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಅವರಿಗೆ ಯಾವುದೇ ಮಾಹಿತಿ ತಿಳಿಯುವುದಿಲ್ಲ ಬದಲಿಗೆ ಅವರಿಗೆ ಈ ನಿಯಮವನ್ನು ಅನುಸರಿಸದೇ ಇದ್ದರೆ ಅವರಿಗೆ ಪ್ರತಿ ತಿಂಗಳು ಹಣ ಬರುವುದೇ ಇಲ್ಲ.

ಹಾಗಾದರೆ ಅವರು ಯಾವುದೆಲ್ಲ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬೇ ಕಾಗುತ್ತದೆ ಎಂದರೆ. ಕೆಲವೊಂದು ತಾಂತ್ರಿಕ ಕಾರಣಗಳಿಂದ ನೀವು ಸರ್ಕಾರದಿಂದ ವೃದ್ಧಾಪ್ಯ, ಅಂಗವಿಕಲ, ವಿಧವಾ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ, ಇತರೆ ಪಿಂಚಣಿ ಹಣವನ್ನು ಪಡೆಯುತ್ತಿದ್ದರೆ. ನಿಮ್ಮ ಆಧಾರ್ ಕಾರ್ಡ್ ಹಾಗೂ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿಲ್ಲದೆ ಇರುವಂತಹ ಫಲಾನುಭವಿಗಳ ಪಟ್ಟಿ. ನಿಮ್ಮ ಪಿಂಚಣಿ ಜಮಾ ಆಗುವ ಬ್ಯಾಂಕ್ ಖಾತೆ ಅಥವಾ ಪೋಸ್ಟ್ ಆಫೀಸ್ ನಲ್ಲಿ ಸಿಗುತ್ತದೆ.

ಮತ್ತು ನಿಮ್ಮ ಗ್ರಾಮ ಗ್ರಾಮದ ಆಡಳಿತಾಧಿಕಾರಿಗಳ ಬಳಿ ಸಿಗುತ್ತದೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಮತ್ತು ಎನ್ ಪಿ ಸಿ ಐ ಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಆಗಿಲ್ಲ ಹಾಗೂ ಆಧಾರ್ ಕಾರ್ಡ್ ಚಾಲ್ತಿಯಲ್ಲಿಲ್ಲ ಎನ್ನುವ ಮೂರು ಪಟ್ಟಿ ಇರುತ್ತದೆ. ಆದ್ದರಿಂದ ಪ್ರತಿಯೊ ಬ್ಬರು ನಿಮ್ಮ ಪಿಂಚಣಿ ಹಣ ಬರುವಂತಹ ಬ್ಯಾಂಕ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕಾಗುತ್ತದೆ.

ಸದ್ದಿಲ್ಲದೆ ಸಿಂಪಲ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್, ಹುಡುಗಿ ಯಾರು ಗೊತ್ತಾ.?

 

ಒಳ್ಳೆ ಹುಡುಗ ಎಂದು ತನ್ನನ್ನು ತಾನು ಕಳೆದುಕೊಂಡಿರುವ ಬಿಗ್ ಬಾಸ್ ಸೀಸನ್ 4ರ ವಿನ್ನರ್ ಪ್ರಥಮ್ ಕರ್ನಾಟಕದಾದ್ಯಂತ ವರ್ಡ್ ಫೇಮಸ್. ಸಿನಿಮಾಗಳಿಗೆ ಸಂಬಂಧಪಟ್ಟ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುವ ಪ್ರಥಮ್ ಅವರು ಈಗ ವೈಯಕ್ತಿಕ ಜೀವನದ ಮುಖ್ಯವಾದ ವಿಷಯವನ್ನು ಕನ್ನಡ ಜನತೆಯೊಂದಿಗೆ ಹಂಚಿಕೊಂಡಿದ್ದಾರೆ. ಮಾತಿನ ಮಲ್ಲ ಎಂದೇ ಬಿರುದು ಪಡೆದಿರುವ ಪ್ರಥಮ್ ಸಿನಿಮಾ ರಂಗದಲ್ಲಿ ಅನೇಕರಿಗೆ ಆತ್ಮೀಯರು.

ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟ ಪ್ರತಿ ಘಟನೆಯಲ್ಲೂ ಮೊದಲಿಗೆ ಮಾತಿಗೆ ಇಳಿಯುವ ಇವರು ಸಿನಿಮಾ ರಂಗದ ವಿಚಾರವಾಗಿ ಹೆಚ್ಚು ಪರಿಚಿತರು. ಬಿಗ್ ಬಾಸ್ ಸೀಸನ್ ನಾಲ್ಕರಲ್ಲಿ ಮನೆ ಮಂದಿಗೆಲ್ಲ ಟಫ್ ಕಾಂಪಿಟೇಟರ್ ಆಗಿದ್ದ ಇವರು ಕರ್ನಾಟಕದ ಜನತೆಗೆ ಮಸ್ತ್ ಎಂಟರ್ಟೈನ್ಮೆಂಟ್ ಕೊಟ್ಟಿದ್ದ ಲಾರ್ಡ್ ಗವರ್ನರ್.

ಇದಾದ ಬಳಿಕ ಪದೇಪದೇ ಫೇಸ್ಬುಕ್ ಲೈವ್ ಗಳನ್ನು ಮಾಡುವ ಮೂಲಕ ಸ್ನೇಹಿತರು ಮತ್ತು ಕುಟುಂಬದವರ ಜೊತೆಗಿನ ಜಗಳದ ವಿಚಾರವಾಗಿ ಸುದ್ದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಥಮ್ ಅವರು ಹಲವು ಸಿನಿಮಾಗಳಲ್ಲಿ ಕೂಡ ನಾಯಕನಟನಾಗಿ ಅಭಿನಯಿಸಿದ್ದರು. ದೇವರಂತ ಮನುಷ್ಯ, MLA ಮುಂತಾದ ಚಿತ್ರಗಳಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿದ್ದ ಇವರು ಕೆಲವು ತಿಂಗಳುಗಳ ಹಿಂದೆ ಬಿಡುಗಡೆ ಆದ ನಟ ಭಯಂಕರ ಸಿನಿಮಾದಲ್ಲಿಯೂ ಹೀರೋ ಆಗಿದ್ದರು.

ಇವರು ಅಭಿನಯಿಸಿದ ಸಿನಿಮಾಗಳು ಕೈ ಹಿಡಿಯದೆ ಹೋದರು ಕೂಡ ಸಿನಿಮಾ ರಂಗದ ಕುರಿತಾಗಿ ಪ್ರಥಮ್ ಆಡುವ ಮಾತುಗಳು ಮತ್ತು ಸಿನಿಮಾ ರಂಗದ ಜೊತೆ ಅವರ ಹೊಂದಿರುವ ನಂಟಿನ ಕಾರಣದಿಂದಾಗಿ ಸದಾ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಕಿರುತೆರೆಯಲ್ಲೂ ಕೂಡ ಹಲವು ರಿಯಾಲಿಟಿ ಶೋ ಗಳಲ್ಲಿ ಅತಿಥಿಯಾಗಿ ಪ್ರಥಮ್ ಕಾಣಿಸಿಕೊಂಡು ಕರ್ನಾಟಕದ ಮನೆಮನೆಗೂ ಕೂಡ ಹತ್ತಿರವಾಗಿದ್ದಾರೆ.

ನೋಡಿದ ತಕ್ಷಣ ಪಕ್ಕದ ಮನೆಯ ಹುಡುಗ, ಪರಿಚಯಸ್ಥ ಎನಿಸುವಂಥಿರುವ ಪ್ರಥಮ್ ಅವರು ಮೂಲತಃ ಕೊಳ್ಳೇಗಾಲದವರು. ಕರ್ನಾಟಕವೇ ತನ್ನ ಕುಟುಂಬ, ಇಲ್ಲಿರುವ ಎಲ್ಲರೂ ಕೂಡ ತನಗೆ ಆತ್ಮೀಯರು ಸಂಬಂಧಿಕರು ಎಂದು ಪ್ರತಿ ಬಾರಿ ಕೂಡ ಪ್ರೀತಿ ತೋರುವ ಪ್ರಥಮ್ ಅವರು ಈಗ ಅಧಿಕೃತವಾಗಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.

ಇತ್ತೀಚೆಗಷ್ಟೇ ಯಾರಿಗೂ ತಿಳಿಸದೆ ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡಿರುವ ಅವರು ಇದೀಗ ತಮ್ಮ ಎಂಗೇಜ್ಮೆಂಟ್ ಫೋಟೋಗಳ ಸಮೇತ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಎಂಗೇಜ್ಮೆಂಟ್ ಮತ್ತು ಮದುವೆಯ ಬಗ್ಗೆ ಕೆಲ ಬರಹವನ್ನು ಕೂಡ ಬರೆದಿದ್ದಾರೆ. ಪ್ರತಿಯೊಂದು ವಿಷಯವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದ ಇವರು ಯಾರಿಗೂ ತಿಳಿಸದೆ ಎಂಗೇಜ್ಮೆಂಟ್ ಆಗಿರುವ ವಿಷಯ ಅನೇಕರಿಗೆ ಬೇಸರವನ್ನುಂಟು ಮಾಡಿದೆ ಮತ್ತು ಆಶ್ಚರ್ಯವನ್ನು ತಂದಿದೆ.

ಆದರೆ ಇದಕ್ಕೆ ಬಹಳ ಸರಳವಾಗಿ ಎಂಗೇಜ್ಮೆಂಟ್ ಮುಗಿಯಿತು ಮದುವೆಯನ್ನೂ ಕೂಡ ಹೀಗೆ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಆಗಲು ನಿರ್ಧರಿಸಿರುವುದರಿಂದ ವಿಷಯ ಹಂಚಿಕೊಳ್ಳಲು ಬಯಸಲಿಲ್ಲ ಎಂದು ಸಬೂಬು ಕೊಡುವ ಇವರು ಮದುವೆ ಎಷ್ಟು ಗ್ರಾಂಡ್ ಆಗುತ್ತೇವೆ ಎನ್ನುವುದು ಮುಖ್ಯವಲ್ಲ ಬದುಕು ಹೀಗೆ ಕಟ್ಟಿಕೊಳ್ಳುತ್ತೇವೆ ಎನ್ನುವುದು ಮುಖ್ಯ, ನನ್ನ ಹಿತ ಬಯಸುವವರು ಎಲ್ಲಿದ್ದರೂ ಕೂಡ ಅಲ್ಲಿಂದಲೇ ನಮಗೆ ಹಾರೈಸಿ ಎಂದು ಕೋರಿಕೊಂಡಿದ್ದಾರೆ.

ಕುಟುಂಬದವರು ನೋಡಿ ಮೆಚ್ಚಿಕೊಂಡಿರುವ ಮಂಡ್ಯ ಮೂಲದ ಹಳ್ಳಿಯದ ಹುಡುಗಿಯನ್ನು ಪ್ರಥಮ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಡಿಗ್ರಿ ಕಂಪ್ಲೀಟ್ ಮಾಡಿರುವ ಈಕೆ ಮಾಸ್ಟರ್ ಡಿಗ್ರಿ ಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಈ ನಡುವೆ ಪ್ರಥಮ್ ಅವರನ್ನು ಒಪ್ಪಿಕೊಂಡು ಅವರು ಒಟ್ಟಿಗೆ ಜೀವನ ಸಾಗಿಸುವುದಕ್ಕೆ ಮುಂದಾಗಿದ್ದಾರೆ. ಒಳ್ಳೆ ಹುಡುಗ ಪ್ರಥಮ್ ಅವರು ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದು ಕನ್ನಡಿಗರಿಗೆಲ್ಲ ಖುಷಿಯ ವಿಚಾರವೇ ಹಾಗಾಗಿ ನಾವು ಕೂಡ ಅವರಿಗೆ ಶುಭ ಹಾರೈಸೋಣ.

ಕೇವಲ 2 ಲಕ್ಷದಲ್ಲಿ ಕಟ್ಟಿಸಿರುವ ಮನೆ ಇದು.! ಮಧ್ಯಮ & ಬಡ ವರ್ಗದ ಜನರಿಗೆ ಹೇಳಿ ಮಾಡಿಸಿದ ಮನೆ, ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಇದನ್ನೊಮ್ಮೆ ನೋಡಿ.!

 

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆ ಮಾತು ಇರುವಂತೆ ಈಗಿನ ಕಾಲದ ಬೆಲೆಗಳಲ್ಲಿ ಮನೆ ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ಆದರೆ ಮನೆ ಅಥವಾ ವಸತಿ ಎನ್ನುವುದು ಮನುಷ್ಯನೊಬ್ಬನ ಮೂಲಭೂತ ಅವಶ್ಯಕತೆ. ಈ ರೀತಿ ಸ್ವಂತ ಮನೆ ಇಲ್ಲದೆ ಹೋದರೆ ಬಾಡಿಗೆ ಮನೆಗಳಲ್ಲಿ ವಾಸಿಸಲು ಪ್ರತಿ ತಿಂಗಳು ಕೂಡ ಸಂಬಳದ ಭಾಗದಲ್ಲಿ ಅತಿ ದೊಡ್ಡ ಮೊತ್ತವನ್ನು ಅದಕ್ಕಾಗಿ ಮೀಸಲಿಡಬೇಕು.

ಹಾಗಾಗಿ ಪ್ರತಿಯೊಬ್ಬರೂ ಸಹ ಜೀವನದಲ್ಲಿ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಅಥವಾ ಕನಸಿನ ಮನೆಯನ್ನು ಕಟ್ಟುವ ಆಸೆಯನ್ನು ಹೊಂದಿರುತ್ತಾರೆ. ಕೆಲವರಿಗೆ ಇರುವ ಹಣದಲ್ಲಿಯೇ ಅಚ್ಚುಕಟ್ಟಾಗಿ ವಾಸಿಸಲು ಯೋಗ್ಯವಾದ ಎಲ್ಲ ಸೌಕರ್ಯಗಳನ್ನು ಒಳಗೊಂಡ ಮನೆ ಕಟ್ಟಿಕೊಂಡರೆ ಸಾಕು ಎನಿಸಿದರೆ ಕೆಲವರಿಗೆ ಇತರರಿಗಿಂತ ಭಿನ್ನವಾಗಿ ಮನೆ ಕಟ್ಟಿ ಹೊಗಳಿಸಿಕೊಳ್ಳಬೇಕು ಎನ್ನುವ ಆಸೆ.

ಈಗಿನ ಕಾಲದಲ್ಲಿ ಸಿಮೆಂಟು, ಜಲ್ಲಿಕಲ್ಲು, ಕಬ್ಬಿಣ ಸಮೇತ ಮನೆಗೆ ಬೇಕಾದ ಎಲ್ಲಾ ಕಚ್ಚಾ ವಸ್ತುಗಳ ಬೆಲೆಯು ಕೂಡ ಏರಿಕೆ ಆಗಿದೆ. ಹಾಗಾಗಿ ಬಡವರು ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಮನೆಗಳನ್ನು ಕಟ್ಟಿಸಿಕೊಳ್ಳಲು ಇಚ್ಛೆ ಪಡುತ್ತಾರೆ ಅಥವಾ ಮಧ್ಯಮ ವರ್ಗದವರು ತಾವು ಮನೆ ಕಟ್ಟಿಕೊಂಡು ಅದರ ಜೊತೆಗೆ ತಮ್ಮ ಮನೆ ಮೇಲೆ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟಿಸಿ ಇತರರಿಗೆ ಬಾಡಿಗೆ ಕೊಟ್ಟು ಹಣ ಪಡೆಯುವ ಉದ್ದೇಶ ಹೊಂದಿರುತ್ತಾರೆ.

ಈಗಾಗಲೇ ಗ್ರೌಂಡ್ ಫ್ಲೋರಲ್ಲಿ ಮನೆ ಹೊಂದಿದ್ದು ಅದರ ಮೇಲೆ ಮನೆ ಕಟ್ಟಿ ಬಾಡಿಗೆ ಕೊಡಬೇಕು ಎನ್ನುವ ಯೋಚನೆ ಹೊಂದಿದ್ದರೆ ಅಥವಾ ನಿಮ್ಮ ಮನೆಯಲ್ಲಿಯೇ ಸದಸ್ಯರು ಹೆಚ್ಚಾದಾಗ ಮೇಲೆ ಮತ್ತೊಂದು ಕುಟುಂಬ ವಾಸಿಸಲು ಅನುಕೂಲವಾಗುತ್ತದೆ ಎನ್ನುವ ಮುಂದಾಲೋಚನೆ ಇದ್ದರೆ ಕಡಿಮೆ ಹಣ ಉಪಯೋಗಿಸಿ ಮನೆಯನ್ನು ನಿರ್ಮಿಸಿ.

ಒಂದು ಸಿಂಪಲ್ ಆದ ಅಡುಗೆ ಮನೆ ಹಾಲ್ ಮತ್ತು ಬೆಡ್ರೂಮ್ ಹಾಗೂ ಬಾತ್ರೂಮ್ ಒಳಗೊಂಡ ಚಿಕ್ಕದಾದ ಚೊಕ್ಕದಾದ ಮನೆಯನ್ನು ಮನೆಯ ಮೇಲೆ ನಿರ್ಮಾಣ ಮಾಡಬಹುದು. ಅದರಲ್ಲಿ ಗಂಡ ಹೆಂಡತಿ ಇಬ್ಬರು ಮಕ್ಕಳು ಅನುಕೂಲತೆಯಿಂದ ವಾಸಿಸಬಹುದು ಅಥವಾ ಬಾಡಿಗೆ ಕೊಟ್ಟರೂ ಕೂಡ ಕನಿಷ್ಠ 4,000 – 5,000 ಬಾಡಿಗೆ ಸಿಗುತ್ತದೆ. ಈ ಮನೆ ನಿರ್ಮಾಣ ಮಾಡಬೇಕು ಎಂದರೆ ಹೆಚ್ಚು ಖರ್ಚಾಗುತ್ತದೆ ಎನ್ನುವ ಚಿಂತೆಯು ಬೇಡ.

ಕಡಿಮೆ ಖರ್ಚಿನಲ್ಲಿ ಮನೆ ಆದರೆ ಸಾಕು ಎಂದುಕೊಳ್ಳುವವರು ಸಿಂಪಲ್ ಟ್ರಿಕ್ ಗಳನ್ನು ಉಪಯೋಗಿಸಿ ಪಿರ್ಮಾಣ ಮಾಡಬಹುದು. ಮನೆಗೆ ಕಡಿಮೆ ಬೆಲೆಯ ಟೈಲ್ಸ್ ಗಳನ್ನು ಉಪಯೋಗಿಸಿದರೆ ಖರ್ಚು ಕಡಿಮೆ ಆಗುತ್ತದೆ. ಕಿಚನ್ ಮತ್ತು ವಾಶ್ ರೂಂ ಗಳ ಗೋಡೆಗಳನ್ನು ಕೂಡ ಟೈಲ್ಸ್ ಇಂದಲೇ ನಿರ್ಮಾಣ ಮಾಡಿದರೆ ಆಗಲು ಸಹ ಹೆಚ್ಚು ಖರ್ಚಾಗುವುದು ತಪ್ಪುತ್ತದೆ. ಜೊತೆಗೆ ಮನೆಗೆ ಬಳಸುವ ಕಿಟಕಿಗಳನ್ನು ಮರದ ಕಿಟಕಿ ಗಳ ಬದಲು ಕಬ್ಬಿಣದ ಕಿಟಕಿಗಳನ್ನು ಬಳಸಿದರೆ ಆಗಲು ಕೂಡ ಖರ್ಚು ಕಡಿಮೆಯಾಗುತ್ತದೆ.

ಉಳಿದ ಗೋಡೆಗಳಿಗೆ ಪ್ಲಾಸ್ಟಿಂಗ್ ಮಾಡಿಸುವುದು ಬೇಡ ಅನಿಸಿದರೆ ಸಿಂಪಲ್ ಆಗಿ ಕವರ್ ಮಾಡಿ ಅದಕ್ಕೆ ಇಟ್ಟಿಗೆ ಬಣ್ಣ ಹಾಗೂ ಜಾಯ್ಟಿಂಗ್ ಅಲ್ಲಿ ಬಿಳಿ ಬಣ್ಣ ಬಳಸಿ ಡೆಕೋರೇಟ್ ಮಾಡಿದರೆ ಅದು ಕೂಡ ಲುಕ್ ಆಗಿ ಹೊಸ ಡಿಸೈನ್ ರೀತಿ ಕಾಣುತ್ತದೆ ಮತ್ತು ಖರ್ಚು ಕೂಡ ಉಳಿಯುತ್ತದೆ. ಯಾವ ರೀತಿಯಲ್ಲಿ ಇದನ್ನು ಮಾಡಬೇಕು ಎನ್ನುವುದನ್ನು ವಿವರವಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

ಪೋಷಕರಿಗೆ ಗುಡ್ ನ್ಯೂಸ್ ನಿಮ್ಮ ಮಕ್ಕಳ ಹೆಸರಿನಲ್ಲಿ ಇದೊಂದು ಕೆಲಸವನ್ನು ಮಾಡಿದ್ರೆ ಸಾಕು ಸರ್ಕಾರವೇ ಅವರಿಗೆ 1.5 ಲಕ್ಷ ಹಣವನ್ನು ನೀಡಲಿದೆ..!

 

ಈ ಬರಹದಲ್ಲಿ ಸರ್ಕಾರವು ಹೊತ್ತು ತಂದಿರುವ ಹೊಸ ಯೋಜನೆಯ ಬಗ್ಗೆ ತಿಳಿಸಲಿದ್ದೇವೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಮಕ್ಕಳ ಆಸೆ ಕನಸುಗಳು ನನಸಾಗಬೇಕು. ಮಕ್ಕಳ ಅಭಿವೃದ್ಧಿಯು ದೇಶದ ಅಭಿವೃದ್ಧಿ ಕಾರ್ಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅದಕ್ಕಾಗಿಯೇ ಸರ್ಕಾರವು ಪಿಪಿಎಫ್ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇದನ್ನು ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ಎಂದು ಕರೆಯಲಾಗುತ್ತದೆ.

ಈಗಾಗಲೇ ಕರ್ನಾಟಕ ರಾಜ್ಯದ ಜನರು ಗೃಹಲಕ್ಷ್ಮಿ ಯೋಜನೆ ಹಾಗೂ ಉಚಿತ ಬಸ್ ಪ್ರಯಾಣ ಯೋಜನೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಾಸಿಕ 2000 ರೂಪಾಯಿಗಳನ್ನು ಕುಟುಂಬದ ಯಜಮಾನಿಯು ಪಡೆಯುತ್ತಾಳೆ. ಅಂತೆಯೇ ವಿದ್ಯಾರ್ಥಿಗಳಿಂದ ಹಿಡಿದು ಎಲ್ಲಾ ವರ್ಗದ ಮಹಿಳೆಯರಿಗಾಗಿ ರಾಜ್ಯದ ನಾಲ್ಕು ಸಾರಿಗೆ ವ್ಯವಸ್ಥೆಯಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಒದಗಿಸಲಾಗಿದೆ.

ಈಗ ತಿಳಿಸುತ್ತಿರುವ ಯೋಜನೆಯಿಂದ ಮಕ್ಕಳ ಭವಿಷ್ಯಕ್ಕೆ ಸಹಾಯವಾಗಲಿದೆ. ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಿಂದ ಲಾಭ ಪಡೆದುಕೊಳ್ಳಲು ಮೊದಲು ನೀವು ಈ ಕೆಲಸವನ್ನು ತಪ್ಪದೆ ಮಾಡಬೇಕು. ಅದೇನೆಂದರೆ ನಿಮ್ಮ ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯಬೇಕು. ಈ ಲೇಖನದಲ್ಲಿ ಪಿಪಿಎಫ್ ಯೋಜನೆಯ ಮೂಲಕ ಲಾಭವನ್ನು ಪಡೆಯುವುದು ಹೇಗೆ?

ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ವಿಧಾನವು ಯಾವುದು? ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲಾತಿಗಳು ಯಾವುವು? ಈ ಎಲ್ಲಾ ವಿಷಯಗಳ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ. ತಪ್ಪದೇ ಓದಿ ಮತ್ತು ಅತಿ ಹೆಚ್ಚು ಜನರಿಗೆ ಶೇರ್ ಮಾಡಿ.

ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ಭಾರತದಾದ್ಯಂತ ಜನಪ್ರಿಯಗೊಂಡಿದೆ. ಉಳಿತಾಯದ ಬಗ್ಗೆ ಅರಿವಿರುವ ಮತ್ತು ಅತ್ಯಂತ ಸೂಕ್ಷ್ಮವಾದ ಹೆಜ್ಜೆ ಇಡುವವರು, ಈ ಯೋಜನೆಯ ಬಗ್ಗೆ ಈಗಾಗಲೇ ತಿಳಿದುಕೊಂಡಿದ್ದಾರೆ ಮತ್ತು ಖಾತೆಯನ್ನು ಮಕ್ಕಳ ಹೆಸರಿನಲ್ಲಿ ತೆರೆದಿದ್ದಾರೆ.

ಈ ಯೋಜನೆಯ ವ್ಯಾಪ್ತಿಯು ವ್ಯಾಪಕವಾಗಿ ವಿಸ್ತರಿಸಲು ಪ್ರಮುಖ ಕಾರಣಗಳೆಂದರೆ ಇದರ ಸುರಕ್ಷತೆ, ಉತ್ತಮ ಆದಾಯ ಮತ್ತು ತೆರಿಗೆ ವಿನಾಯತಿ. ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಲು ಅತಿ ಹೆಚ್ಚು ಜನರು ಮುಂದಾಗಲು ಇನ್ನೊಂದು ಪ್ರಮುಖ ಕಾರಣವೆಂದರೆ ಈ ಯೋಜನೆಯ ಆಕರ್ಷಕ ಬಡ್ಡಿದರ. ಮಕ್ಕಳ ಹೆಸರಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆದರೆ ವಾರ್ಷಿಕ ಬಡ್ಡಿ ಶೇಕಡ 7.1 ರಷ್ಟು ದೊರೆಯಲಿದೆ.

ಹೊಸ ಯೋಜನೆಯು ಹೇಗೆ ಲಾಭದಾಯಕ??
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಉದ್ಯೋಗಿಗಳ ಭವಿಷ್ಯ ನಿಧಿ ನಿಯಮಗಳ ಪ್ರಕಾರ ವ್ಯಕ್ತಿಯು ಒಂದು ಪಿಪಿಎಫ್ ಖಾತೆಯನ್ನು ತೆರೆಯಬಹುದಾಗಿದೆ.ಆದರೆ ಇಪಿಎಫ್ಒ ಒಂದು ಮಗುವಿನ ಹೆಸರಿನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಇನ್ನು ಇಬ್ಬರು ಮಕ್ಕಳನ್ನು ಪಾಲಕರು ಹೊಂದಿದ್ದರೆ ತಂದೆಯು ಒಂದು ಮಗುವಿನ ಹೆಸರಿನಲ್ಲಿ ಮೈನರ್ ಪಿಪಿಎಫ್ ಖಾತೆಯನ್ನು ಮತ್ತು ತಾಯಿಯು ಒಂದು ಮಗುವಿನ ಹೆಸರಿನಲ್ಲಿ ಮೈನರ್ ಪಿಪಿಎಫ್ ಖಾತೆಯನ್ನು ತೆರೆಯಬಹುದು.

ಆದರೆ ಇಬ್ಬರೂ ಒಂದೇ ಮಗುವಿನ ಹೆಸರಿನಲ್ಲಿ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ಅಡಿಯಲ್ಲಿ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ. ಈ ಯೋಜನೆಯ ಮೇಲೆ ಹೂಡಿಕೆ ಮಾಡುವವರು ವಾರ್ಷಿಕ ರೂಪಾಯಿ 500 ರಿಂದ 1.50 ಲಕ್ಷ ರೂಪಾಯಿಗಳವರೆಗೆ ಉಳಿತಾಯ ಖಾತೆಯಲ್ಲಿ ಇಡಬಹುದು. ಪಿಪಿಎಫ್ ನ ಮ್ಯಾಚುರಿಟಿ 15 ವರ್ಷದ ಅವಧಿಯನ್ನು ಹೊಂದಿದೆ. ಅಲ್ಲದೆ ಐದು ವರ್ಷಗಳ ಅವಧಿಗೆ ವಿಸ್ತರಿಸಬಹುದು. ಸೆಕ್ಷನ್ 80 ಸಿ ಅಡಿಯಲ್ಲಿ, ಮಕ್ಕಳ ಹೆಸರಿನಲ್ಲಿ ಉಳಿತಾಯ ಖಾತೆಯನ್ನು ತೆರೆದವರಿಗೆ 1. 50 ಲಕ್ಷ ರೂಪಾಯಿಗಳು ಲಭ್ಯವಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಖಾತೆಯನ್ನು ತೆರೆಯಲು ಇಚ್ಚಿಸುವ ಬ್ಯಾಂಕ್ನಿಂದ ಅಥವಾ ಪೋಸ್ಟ್ ಆಫೀಸ್ ನಿಂದ ಪಿಪಿಎಫ್ ಖಾತೆಗಾಗಿ ನೀಡುವ ಅರ್ಜಿ ನಮೂನೆಯನ್ನು ಪಡೆದು ಬಳಿಕ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ದಾಖಲಾತಿಗಳೊಂದಿಗೆ ಸಲ್ಲಿಸಬೇಕು.

ಅಗತ್ಯ ದಾಖಲಾತಿಗಳು :
ಮಗುವಿನ ಪೋಷಕರ ಪಾಸ್ಪೋರ್ಟ್ ಸೈಜ್ ಛಾಯಾಚಿತ್ರಗಳು, KYC ದಾಖಲೆ ಮತ್ತು ಮಗುವಿನ ವಯಸ್ಸಿನ ಪ್ರಮಾಣ ಪತ್ರ..

ಹಲವಾರು ಬ್ಯಾಂಕ್ಗಳಿಂದ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ಅಡಿಯಲ್ಲಿ ಮಕ್ಕಳ ಹೆಸರಿನಲ್ಲಿ ಆನ್ಲೈನ್ ನಲ್ಲಿಯೇ ಉಳಿತಾಯ ಖಾತೆ ತೆರೆಯಲು ಸೌಲಭ್ಯವನ್ನು ಒದಗಿಸಲಾಗಿದೆಯಂತೆ.

ಜೀವನದಲ್ಲಿ ಏನೇ ಕಷ್ಟ ಬಂದರೂ ಆಂಜನೇಯನ ಈ ಬೀಜಾಕ್ಷರವನ್ನು ಈ ರೀತಿ ಪಠಣೆ ಮಾಡಿ ಸಾಕು ಕಷ್ಟಗಳೆಲ್ಲ ನಿವಾರಣೆಯಾಗಿ ಹೋಗುತ್ತೆ. ಒಮ್ಮೆ ಪಠಿಸಿ ನೋಡಿ ಫಲಿತಾಂಶ ಸಿಕ್ಕೆ ಸಿಗುತ್ತೆ.!

 

ಆಂಜನೇಯರು ಶ್ರೀ ರಾಮನ ಪರಮ ಭಕ್ತರು. ಭಕ್ತಿ, ಶಕ್ತಿ, ಯುಕ್ತಿಗೆ ಹೆಸರಾದ ಇವರು ಯಾವುದೇ ಸ್ವಾರ್ಥವಿಲ್ಲದೆ ಶ್ರೀರಾಮನ ಸೇವೆ ಮಾಡಿ ಶ್ರೀರಾಮನ ಪ್ರೀತಿಯ ಭಂಟರಾದವರು. ಹಾಗಾಗಿ ಇಂದಿಗೂ ಸಹ ಈ ಕಲಿಯುಗದಲ್ಲೂ ಜನ ಶ್ರೀರಾಮನನ್ನು ಎಷ್ಟು ಪೂಜಿಸುತ್ತಾರೋ ಆಂಜನೇಯನಿಗೂ ಕೂಡ ಅಷ್ಟೇ ನಮಿಸುತ್ತಾರೆ. ಈ ಭಾರತದಲ್ಲಿ ಶ್ರೀರಾಮನ ದೇವಸ್ಥಾನ ಇರುವ ಪ್ರತಿಯೊಂದು ಕಡೆಗೂ ಕೂಡ ಆಂಜನೇಯರಿಗೂ ಸಹ ಅಲ್ಲಿ ಪುಟ್ಟದೊಂದು ಗುಡಿ ಇದ್ದೇ ಇರುತ್ತದೆ.

ಆಂಜನೇಯ ಇಲ್ಲದೆ ಇದ್ದರೆ ರಾಮಾಯಣವನ್ನು ಊಹಿಸಲು ಕೂಡ ಅಸಾಧ್ಯ. ಇಷ್ಟು ಪ್ರಮುಖ ಪಾತ್ರ ವಹಿಸಿ ಲಂಕೆಯಲ್ಲಿದ್ದ ಸೀತಾಮಾತೆಯನ್ನು ಮರಳಿ ಅಯೋಧ್ಯಕ್ಕೆ ತರಲು ಶ್ರೀರಾಮ ಕೈಗೊಂಡ ಕಾರ್ಯದಲ್ಲಿ ಜೊತೆಗೆ ನಿಂತು ಹೋರಾಡಿದ ಆಂಜನೇಯನು ಕಲಿಯುಗದಲ್ಲೂ ಕೂಡ ಅಷ್ಟೇ ಪ್ರಭಾವಶಾಲಿ.

ಮಾರುತಿ, ಆಂಜನೇಯ, ಹನುಮಂತ, ಅಂಜನಿಪುತ್ರ, ಬಜರಂಗಬಲಿ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಆಂಜನೇಯನು ನಮ್ಮ ಕರ್ನಾಟಕದವರು, ಅವರ ಮೂಲ ಕರ್ನಾಟಕ. ಅಂಜನಾದ್ರಿ ಬೆಟ್ಟದಲ್ಲಿ ಜನ್ಮ ತಾಳಿದ ಆಂಜನೇಯ ಇಂದು ಭಾರತದಾತ್ಯಂತ ಪೂಜಿಸಿಕೊಳ್ಳುವ ದೇವರಾಗಿದ್ದಾರೆ. ಮನುಷ್ಯರು ಬೇಡಿದರೆ ಮೊದಲು ಒಲಿಯುವಂತಹ ದೈವ ಆಂಜನೇಯ ಮನುಷ್ಯನಿಗೂ ಆಂಜನೇಯನಿಗೂ ಅವಿನಾಶಭಾವ ಸಂಬಂಧ ಇದೆ.

ಹಾಗಾಗಿ ಮನುಷ್ಯನ ಕಷ್ಟ ಸುಖಗಳು ಆಂಜನೇಯನಿಗೆ ಬೇಗ ತಿಳಿಯುತ್ತದೆ ಎನ್ನುವುದನ್ನು ಭಕ್ತಾದಿಗಳು ನಂಬುತ್ತಾರೆ. ಮನುಷ್ಯನಿಗೆ ಅಧೈರ್ಯ ಉಂಟಾದಾಗ ಅಥವಾ ಚಂಚಲತೆ ಉಂಟಾದಾಗ ಏಕಾಗ್ರತೆಗಾಗಿ ಶಿಸ್ತಿಗಾಗಿ ಮತ್ತು ಮನಶಾಂತಿಗಾಗಿ ಭಕ್ತಿಯಿಂದ ಆಂಜನೇಯನನ್ನು ಪೂಜಿಸುತ್ತಾರೆ. ಆಂಜನೇಯನಿಗೆ ಮಂಗಳವಾರ ಹಾಗೂ ಶನಿವಾರ ಬಹಳ ವಿಶೇಷ. ಈ ದಿನಗಳಂದು ಆಂಜನೇಯನನ್ನು ಪೂಜಿಸಿದರೆ ಫಲ ಹೆಚ್ಚಾಗಿ ದೊರೆಯುತ್ತದೆ.

ನಾವು ಆಂಜನೇಯನ ದೇವಸ್ಥಾನದಲ್ಲಿ ಆಂಜನೇಯನಿಗೆ ಬೆಣ್ಣೆ ಅಲಂಕಾರ ಮಾಡಿರುವುದು ವೀಳ್ಯದೆಲೆ ಅಲಂಕಾರ ಮಾಡಿರುವುದು ಇವುಗಳನ್ನು ನೋಡಿದ್ದೇವೆ. ಈ ರೀತಿ ಅಲಂಕಾರ ಮಾಡಿ ಭಕ್ತಿಯಿಂದ ಆಂಜನೇಯನು ಪ್ರಾರ್ಥಿಸಿದರೆ ಎಷ್ಟು ಫಲ ದೊರೆಯುತ್ತದೆ ಹಾಗೆಯೇ ಒಳ್ಳೆ ಮನಸ್ಸಿನಿಂದ ನಿಸ್ವಾರ್ಥ ಭಾವನೆಯಿಂದ ಒಳ್ಳೆ ವಿಷಯಗಳಿಗಾಗಿ ಬೇಡಿಕೊಂಡರೆ ಆಗಲು ಸಹ ಆಂಜನೇಯರು ಆ ಕೋರಿಕೆಗಳನ್ನು ಈಡೇರಿಸುತ್ತಾರೆ.

ಆಂಜನೇಯನಿಗೆ ಪ್ರಾಮಾಣಿಕತೆ ಇಂದ ಇರುವವರು ಸತ್ಯವನ್ನು ಹೇಳುವವರು ಹಾಗೂ ಎಲ್ಲರಿಗೂ ಒಳ್ಳೆಯದನ್ನೇ ಬಯಸುವವರನ್ನು ಕಂಡರೆ ಬಹಳ ಇಷ್ಟ. ಇದರ ಜೊತೆಗೆ ಬೀಜಾಕ್ಷರಗಳಿಂದ ಪಠಿಸಿದರೆ ಇನ್ನು ಹೆಚ್ಚಿನ ಆಶೀರ್ವಾದ ಸಿಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಕೂಡ ಹನುಮಾನ್ ಚಾಲೀಸವನ್ನು ಹೇಳಿ ಅವರ ಭಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ ಮತ್ತು ಆಂಜನೇಯ ಅನುಗ್ರಹವನ್ನು ಸಿದ್ದಿಸಿಕೊಳ್ಳುತ್ತಾರೆ ಮತ್ತು ಅವರಿಗಿರುವ ಸಂಕಷ್ಟದಿಂದ ಹೊರ ಬರುತ್ತಾರೆ, ಧೈರ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ.

ಇದೇ ರೀತಿಯಾಗಿ ಈ ಬೀಜಾಕ್ಷರವನ್ನು ಕೂಡ 11 ಬಾರಿ ಅಥವಾ ನಿಮಗೆ ಎಷ್ಟು ಬಾರಿ ಸಾಧ್ಯ ಅಷ್ಟು ಬಾರಿ ಪ್ರತಿದಿನ ಭಕ್ತಿಯಿಂದ ಪಠಿಸಿದರೆ ನಿಮಗೆ ಆರೋಗ್ಯ ಹಣಕಾಸು ಉದ್ಯೋಗ ವಿದ್ಯಾಭ್ಯಾಸ ಮದುವೆ ಸಂತಾನ ಮುಂತಾದ ಯಾವುದೇ ತರದ ಸಮಸ್ಯೆ ಇದ್ದರೂ ಕೂಡ ಎಲ್ಲವೂ ನಿವಾರಣೆ ಆಗುತ್ತದೆ ಆದರೆ ಪ್ರತಿದಿನವೂ ಕೂಡ ತಪ್ಪದೆ ಈ ಮಂತ್ರವನ್ನು ಭಕ್ತಿಯಿಂದ ಪಠಿಸಬೇಕು.

ನಂಬಿಕೆಯನ್ನು ಇಟ್ಟುಕೊಂಡು ಆಂಜನೇಯನಿಗೆ ಇಷ್ಟವಾಗುವ ಮಾರ್ಗದಲ್ಲಿ ನಡೆದು ಈ ಮಂತ್ರವನ್ನು ಪಠಿಸಬೇಕು. ಓಂ ಏಂ ಬ್ರೀಂ ಹನುಮತೆ ಶ್ರೀರಾಮದೂತಾಯ ನಮಃ ಈ ಶಕ್ತಿಶಾಲಿ ಮಂತ್ರವನ್ನು ಇನ್ನು ಮುಂದೆ ಯಾವುದೇ ಕಷ್ಟ ಬಂದಾಗಲೂ ಭಕ್ತಿಯಿಂದ ಪಠಿಸಿ ಸಾಕು ಮತ್ತು ಈ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

200 ಯೂನಿಟ್ ವಿದ್ಯುತ್ ಉಚಿತವಾಗಿ ಪಡೆಯಲು ಈ ಅನ್ನು ಡೌನ್ಲೋಡ್ ಮಾಡಿಕೊಳ್ಳಿ…

 

ಕಾಂಗ್ರೆಸ್ ಪಕ್ಷವು 2023ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಮುಖ್ಯವಾಗಿ 5 ಯೋಜನೆಗಳನ್ನು ಗ್ಯಾರಂಟಿಯಾಗಿ ಜಾರಿಗೆ ತರುತ್ತೇವೆ ಎಂದು ಹೇಳಿ ಮತಯಾಚನೆ ಮಾಡಿದ್ದರು. ಅಂತಿಮವಾಗಿ ಕಾಂಗ್ರೆಸ್ ಪಕ್ಷವೇ ಗೆದ್ದು ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನು ಸ್ಥಾಪಿಸಿದೆ. ಈಗ ಜನತೆಗೆ ಕೊಟ್ಟಿದ್ದ ವಚನದಂತೆ ನುಡಿದಂತೆ ನಡೆದು ಆ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಮುಖ್ಯಮಂತ್ರಿಗಳು ತಮ್ಮ ಕ್ಯಾಬಿನೆಟ್ ಜೊತೆ ಪ್ರತಿಬಾರಿ ಈ ವಿಚಾರಗಳಾಗಿ ಚರ್ಚಿಸಿ ಇದಕ್ಕೆ ಸಂಬಂಧಿಸಿದಂತೆ ಆದೇಶ ಪತ್ರಗಳನ್ನು ಕೂಡ ಹೊರಡಿಸುತ್ತಿದ್ದಾರೆ. ಜೊತೆಗೆ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳು ಕೂಡ ಈ ಯೋಜನೆಗಳಿಗೆ ಸಂಬಂಧಪಟ್ಟ ಹಾಗೆ ಮೂಲಗಳನ್ನು ಹುಡುಕಿ ಮಾಹಿತಿಯನ್ನು ಹಂಚುತ್ತಿವೆ. ಅದೇ ರೀತಿ ಗೃಹಜ್ಯೋತಿ ಯೋಜನೆ ಕುರಿತು ಸಾಕಷ್ಟು ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿವೆ.

ಕಾಂಗ್ರೆಸ್ ಪಕ್ಷದ ಮೊದಲ ಗ್ಯಾರಂಟಿಯೇ ಗೃಹಜ್ಯೋತಿ ಯೋಜನೆ ಆಗಿತ್ತು. ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಉದ್ದೇಶವನ್ನು ಹೊಂದಿದ್ದ ಈ ಗೃಹ ಜ್ಯೋತಿ ಯೋಜನೆಯ ಮೂಲಕ ಕರ್ನಾಟಕದ ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಕೊಡುತ್ತೇವೆ ಎಂದು ಕಾಂಗ್ರೆಸ್ ಪಕ್ಷವು ಮಾತು ಕೊಟ್ಟಿತ್ತು. ಈಗ ಇದರಲ್ಲಿ ಕೆಲವು ಮಾರ್ಪಾಡುಗಳನ್ನು ಮತ್ತು ಕಂಡಿಶನ್ ಗಳನ್ನು ಹಾಕಿ ಈ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದೆ.

ಜೊತೆಗೆ ಇಂಧನ ಇಲಾಖೆ ಜೊತೆ ಚರ್ಚೆ ಮಾಡಿ ಇಂಧನ ಸಚಿವರಾದ ಜಾರ್ಜ್ ಅವರು ಕೂಡ ಸರ್ಕಾರ ಈ ಯೋಜನೆ ಅನುಷ್ಠಾನಕ್ಕೆ ಬಂದರೆ ಆಗಬಹುದಾದ ಸಾಧಕ ಬಾಧಕಗಳು ಏನು ಎನ್ನುವುದರ ವರದಿಯನ್ನು ಒಪ್ಪಿಸಿದ್ದಾರೆ. ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಈ ಯೋಜನೆ ಅನಿಷ್ಠಾನಕ್ಕೆ ಬೇಕಾದ ಮಾರ್ಗಸೂಚಿ ಸಿದ್ಧವಾಗುತ್ತಿದೆ.

ಮುಖ್ಯವಾಗಿ ಈಗ ಸರ್ಕಾರದ ಹೊರಡಿರುವ ಆದೇಶದ ಪ್ರಕಾರ ವಿದ್ಯುತ್ ಖಾತೆ ಸಂಖ್ಯೆಗೆ ಅಥವಾ ಕಸ್ಟಮರ್ ಐಡಿ ಸಂಖ್ಯೆಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡುವುದು ಕಡ್ಡಾಯ. ಪ್ರತಿ ಕುಟುಂಬದ ಮಾಲೀಕನು ಕೂಡ ಆತನ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯನ್ನು ಇವುಗಳಿಗೆ ಲಿಂಕ್ ಮಾಡಬೇಕು ಎನ್ನುವುದನ್ನು ಹೇಳಲಾಗುತ್ತಿದೆ ಜೊತೆಗೆ ಬಾಡಿಗೆ ಮನೆಯಲ್ಲಿ ಇರುವವರೆಗೂ ಕೂಡ ಗೃಹಜ್ಯೋತಿ ಯೋಜನೆಯನ್ನು ನೀಡುವ ಉದ್ದೇಶದಿಂದ ಅವುಗಳಿಗೆ ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಚರ್ಚೆಯು ನಡೆಯುತ್ತಿದೆ.

ಹಾಗೆಯೇ ಈ ಯೋಜನೆಯ ಫಲಾನುಭವಿಗಳಾಗಲು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು ಎನ್ನುವುದನ್ನು ಸರ್ಕಾರವೇ ಸ್ಪಷ್ಟವಾಗಿ ತಿಳಿಸಿದೆ ಇದರ ಜೊತೆ ಇಂಧನ ಇಲಾಖೆಯ ಮೂಲದಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಅದೇನೆಂದರೆ ಇಂಧನ ಇಲಾಖೆ ವತಿಯಿಂದ ಆಪ್ ಒಂದು ಬಿಡುಗಡೆ ಆಗುತ್ತಿದ್ದು, ಆಂಡ್ರಾಯ್ಡ್ ಫೋನ್ ಹಾಗೂ ಸ್ಮಾರ್ಟ್ಫೋನ್ ಹೊಂದಿರುವವರು ಪ್ಲೇ ಸ್ಟೋರ್ ಗಳ ಮೂಲಕ ಅವುಗಳನ್ನು ಡೌನ್ಲೋಡ್ ಮಾಡಿಕೊಂಡು ಅದರ ಮೂಲಕ ಈ ಯೋಜನೆಗೆ ರಿಜಿಸ್ಟರ್ ಆಗಬಹುದು ಎನ್ನುವುದನ್ನು ಹೇಳಲಾಗುತ್ತಿದೆ.

ಇದಕ್ಕೆ ಸಂಬಂಧಪಟ್ಟ ತಾಂತ್ರಿಕ ಕೆಲಸಗಳಿಗೆ ಸರ್ಕಾರ ಸಿದ್ಧತೆ ನಡೆಸಿಕೊಳ್ಳುತ್ತಿದೆ ಜೂನ್ 15ರಿಂದ ಇದನ್ನು ಬಿಡುಗಡೆ ಮಾಡಿ ಅವಕಾಶ ನೀಡಲಾಗುತ್ತದೆ ಎನ್ನುವ ಮಾಹಿತಿ ಇದೆ. ಹಾಗಾಗಿ CSC ಕೇಂದ್ರಗಳು ಮಾತ್ರವಲ್ಲದೆ ಮೊಬೈಲ್ ಗಳ ಮೂಲಕವೂ ಕೂಡ ಈ ರೀತಿ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಪಡೆದುಕೊಳ್ಳಲು ಅರ್ಜಿ ಹಾಕಬಹುದು. ಸರ್ಕಾರದಿಂದಲೇ ಅಧಿಕೃತವಾಗಿ ಈ ಬಗ್ಗೆ ಘೋಷಣೆ ಆಗಲಿದೆ.

ಮಗನನ್ನು ಕಳೆದುಕೊಂಡಿದ್ದ ಪ್ರಭುದೇವ ಬಾಳಿನಲ್ಲಿ ಹೊಸ ಬೆಳಕು, 50ನೇ ವಯಸ್ಸಿಗೆ ಹೆಣ್ಣು ಮಗುವಿನ ತಂದೆಯಾದ ಡ್ಯಾನ್ಸಿಂಗ್ ಸ್ಟಾರ್

ಮೂಲತಃ ಕರ್ನಾಟಕದವರಾಗಿ ಈಗ ಭಾರತದಾದ್ಯಂತ ಇಂಡಿಯನ್ ಮೈಕಲ್ ಜಾಕ್ಸನ್ ಎಂದು ಕರೆಸಿಕೊಂಡಿರುವ ಪ್ರಭುದೇವ ಅವರು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ವೈವಾಹಿಕ ಜೀವನದ ಕುರಿತು ಸದಾ ವಿವಾದದಲ್ಲಿ ಇದ್ದ ಡ್ಯಾನ್ಸಿಂಗ್ ಸ್ಟಾರ್ ಈಗ ತಮ್ಮ ಕುಟುಂಬದ ಸಂಭ್ರಮದ ಸಂತಸವನ್ನು ಹಂಚಿಕೊಂಡಿದ್ದಾರೆ. ಕೆಲವೇ ವರ್ಷಗಳ ಹಿಂದೆ ಎರಡನೇ ಮದುವೆ ಆಗಿದ್ದ ಪ್ರಭುದೇವ ಈಗ ಹೆಣ್ಣು ಮಗುವಿನ ತಂದೆ ಆಗಿದ್ದಾರೆ.

ಮನೆಗೆ ಮಹಾಲಕ್ಷ್ಮಿಯನ್ನು ಆಗಮನ ಮಾಡಿಕೊಂಡಿರುವ ಪ್ರಭುದೇವ ಅವರ ಬದುಕಿನ ಈ ಸುದ್ದಿಯನ್ನು ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಪ್ರಭುದೇವ ಅವರು ಈ ಹಿಂದೆ ತಮ್ಮ ಮುದ್ದಿನ ಮಗನನ್ನು ಕಳೆದುಕೊಂಡಿದ್ದರು. ಬಹಳ ವರ್ಷಗಳ ನಂತರ ಮಗಳ ಆಗಮನ ಆ ನೋವನ್ನು ಮರೆಸುವಂತಿದೆ.

ಪ್ರಭುದೇವ್ ಅವರು ದಕ್ಷಿಣ ಭಾರತದ ಹೆಸರಾಂತ ಡ್ಯಾನ್ಸಿಂಗ್ ಮಾಸ್ಟರ್ ಮೂಗೂರು ಸುಂದರ್ ಮಾಸ್ಟರ್ ಅವರ ಹಿರಿಯ ಮಗ. ಮೈಸೂರು ಬಳಿಯ ಟಿ ನರಸೀಪುರದಲ್ಲಿ ಬೆಳೆದಂತಹ ಪ್ರಭುದೇವ ಇಂದು ನ್ಯಾಷನಲ್ ಸ್ಟಾರ್ ಆಗಿದ್ದಾರೆ. ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಇವರು ನಿರ್ಮಾಪಕನಾಗಿ ನಿರ್ದೇಶಕನಾಗಿ ಕೊರಿಯೋಗ್ರಾಫರ್ ಆಗಿ ಹೀರೋ ಆಗಿ ಮಿಂಚಿದ್ದಾರೆ.

ಬಹುಮುಖ ಪ್ರತಿಭೆ ಎಂದು ಕರೆಸಿಕೊಂಡಿರುವ ಪ್ರಭುದೇವ ಅವರು ಡ್ಯಾನ್ಸಿಂಗ್ ವಿಷಯದಲ್ಲಿ ವಿಪರೀತ ಒಲವು ಹೊಂದಿದ್ದ ಕಾರಣ ಇಂದು ಭಾರತದಲ್ಲಿ ಈ ಕ್ಷೇತ್ರದಲ್ಲಿ ನಂಬರ್ ವನ್ ಆಗಿದ್ದಾರೆ. ಇತ್ತೀಚೆಗಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ವೀಕೆಂಡ್ ವಿತ್ ರಮೇಶ್ ಎನ್ನುವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಪ್ರಭುದೇವ್ ಅವರು ಬಹುತೇಕ ಅವರ ಬದುಕಿನ ಎಲ್ಲಾ ವಿಷಯವನ್ನು ಕೂಡ ಕನ್ನಡಿಗರ ಎದುರು ತೆರೆದಿಟ್ಟಿದ್ದರು.

ಪ್ರಭುದೇವ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ರಮ್ಲತ್ ಎನ್ನುವ ಮುಸ್ಲಿಂ ಯುವತಿಯನ್ನು ಪ್ರಭುದೇವ್ ಅವರು ಪ್ರೇಮ ವಿವಾಹ ಆಗಿದ್ದರು. ಮದುವೆಯಾದ ಬಳಿಕ ಅವರು ಹಿಂದು ಆಗಿ ರಮಲತಾ ಎಂದು ಹೆಸರನ್ನು ಬದಲಾಯಿಸಿಕೊಂಡು ಪ್ರಭುದೇವ ಅವರ ಜೊತೆ ಸಂತೋಷದಿಂದ ಇದ್ದರು. ಇವರಿಗೆ ಮೂರು ಜನ ಗಂಡು ಮಕ್ಕಳು ಇದ್ದರು.

ಆದರೆ ಮೊದಲನೇ ಮಗ ಕ್ಯಾನ್ಸರ್ ಕಾಯಿಲೆಯಿಂದ ಮ.ರಣ ಹೊಂದಿದ್ದರು. ಆ ನೋವಿನಿಂದ ಮನೆಯಿಂದ ಹೊರಗೊಳಿಯುತ್ತಿದ್ದ ಪ್ರಭುದೇವ ಅವರು ದಿನಕಳೆದಂತೆ ನಟಿ ನಯನತಾರ ಜೊತೆ ಲಿವಿಂಗ್ ಇನ್ ರಿಲೇಶನ್ಶಿಪ್ ಅಲ್ಲಿ ಇದ್ದರು. ಇದೇ ವಿಚಾರಕ್ಕೆ ರಮಲತಾ ಅವರ ಜೊತೆ ವೈಮನಸ್ಸು ಏರ್ಪಟ್ಟು ಇಬ್ಬರು ವಿ.ಚ್ಛೇದನ ಪಡೆದುಕೊಂಡರು. ಇದೇ ಕಾರಣದಿಂದ ನಯನತಾರ ಕೂಡ ಪ್ರಭುದೇವ ಅವರ ಬದುಕನಿಂದ ದೂರ ಹೋದರು.

ಹಲವು ವರ್ಷಗಳವರೆಗೆ ಒಬ್ಬಂಟಿಯಾಗಿದ್ದ ಪ್ರಭುದೇವ ಅವರು ಕೊರೊನ ಲಾಕ್ ಡೌನ್ ವೇಳೆಯಲ್ಲಿ ಎರಡನೇ ವಿವಾಹ ಆಗಿದ್ದರು. ಇವರ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯಯನ್ನೇ ಪ್ರೀತಿಸಿ ವಿವಾಹವಾದರು. ಈಗ ಈ ಜೋಡಿಗೆ ಹೆಣ್ಣು ಮಗುವಾಗಿದೆ. ಇವರ ಎರಡನೇ ಪತ್ನಿ ಹೆಸರು ಹಿಮಾನಿ ಸಿಂಗ್ ವೃತ್ತಿಯಲ್ಲಿ ವೈದ್ಯ ಆಗಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆಕ್ಟಿವ್ ಆಗಿರುವುದಿಲ್ಲ.

ಜೊತೆಗೆ ಕ್ಯಾಮರಗಳ ಎದುರು ಕೂಡ ಕಾಣಿಸಿಕೊಳ್ಳುವುದಿಲ್ಲ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಅವರು ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದು ಅದರಲ್ಲೂ ಸಹ ಕಾರ್ಯಕ್ರಮಕ್ಕೆ ಬಾರದೆ ವಿಟಿ ಕಳುಹಿಸಿದ್ದರು. ಸಂಸಾರದ ವಿಷಯ ಹೊರತುಪಡಿಸಿ ಸಾಧನೆಯಲ್ಲಿ ಸಾಗರವಾಗಿರುವ ಪ್ರಭುದೇವ ಅವರು ಇನ್ನಷ್ಟು ವರ್ಷ ಕುಟುಂಬದ ಜೊತೆ ಸಂತೋಷದಿಂದಿರಲಿ ಎಂದು ಹಾರೈಸೋಣ.