Home Blog Page 194

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಲಯದಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ವೇತನ 43,000

 

ಕರ್ನಾಟಕದಾದ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿಸುದ್ದಿ. ಕರ್ನಾಟಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಉದ್ಯೋಗಾವಕಾಶ ಇದ್ದು ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಈ ಹುದ್ದೆಗಳಿಗೆ ನೇರ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ. ಈ ಕುರಿತಂತೆ ಆರೋಗ್ಯ ಇಲಾಖೆಯಿಂದ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು ಆಸಕ್ತಿ ಇರುವ, ಅಧಿಸೂಚನೆಯಲ್ಲಿ ಕೇಳಿರುವ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯಸ್ಸಿನ ಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಅಂಕಣದಲ್ಲಿ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಮುಖ ಅಂಶಗಳಾದ ಒಟ್ಟು ಹುದ್ದೆಗಳ ಸಂಖ್ಯೆ, ಹುದ್ದೆಗಳ ವಿವರ, ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ವಿಧಾನ, ಪ್ರಮುಖ ದಿನಾಂಕಗಳು ಸೇರಿದಂತೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಸಿಕೊಡುತ್ತಿದ್ದೇವೆ.

ಇವುಗಳ ಬಗ್ಗೆ ತಿಳಿದುಕೊಳ್ಳಲು ಲೇಖನವನ್ನು ಪೂರ್ತಿಯಾಗಿ ಓದಿ. ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಈ ಹುದ್ದೆಗಳಿಗೆ ಕೇಳಿರುವ ಶೈಕ್ಷಣಿಕ ಅರ್ಹತೆ ಹೊಂದಿರುವ ಉದ್ಯೋಗ ಆಕಾಂಕ್ಷಿಗಳಿಗೆ ಈ ಮಾಹಿತಿಯು ತಲುಪುವಂತೆ ಮಾಡಿ.

ನೇಮಕಾತಿ ಸಂಸ್ಥೆ:- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ.

ಉದ್ಯೋಗ ಸ್ಥಳ:- ಕೋಲಾರ
ಒಟ್ಟು ಹುದ್ದೆಗಳ ಸಂಖ್ಯೆ:- 09

ಹುದ್ದೆಗಳ ವಿವರ:-
● MBBS ವೈದ್ಯರು
● ಪ್ರಯೋಗಶಾಲೆ ತಂತ್ರಜ್ಞರು
● ಶುಷ್ರೂಷಕ ಅಧಿಕಾರಿಗಳು

ವೇತನ ಶ್ರೇಣಿ:-
ಹುದ್ದೆಗಳಿಗೆ ಅನುಸಾರವಾಗಿ 12,000 ದಿಂದ 43,000 ವರೆಗೆ ಮಾಸಿಕ ವೇತನ ಸಿಗಲಿದೆ.

ವಯೋಮಿತಿ:-
● MBBS ವೈದ್ಯರು – ಗರಿಷ್ಠ 65 ವರ್ಷ
● ಪ್ರಯೋಗಶಾಲೆ ತಂತ್ರಜ್ಞರು – ಗರಿಷ್ಠ 40 ವರ್ಷ
● ಶುಷ್ರೂಷಕ ಅಧಿಕಾರಿಗಳು – ಗರಿಷ್ಠ 40 ವರ್ಷ

ಶೈಕ್ಷಣಿಕ ವಿದ್ಯಾರ್ಹತೆ:-
● MBBS ವೈದ್ಯರು – MBBS ಉತ್ತೀರ್ಣರಾಗಿ ಕಡ್ಡಾಯವಾಗಿ ಇಂಟರ್ನ್ಶಿಪ್ ಪೂರೈಸಿರಬೇಕು.
KMC ನೋಂದಣಿ ಹೊಂದಿರಬೇಕು.
● ಪ್ರಯೋಗಶಾಲೆ ತಂತ್ರಜ್ಞರು – SSLC / PUC ಮತ್ತು ಪ್ರಯೋಗಶಾಲಾ ತಂತ್ರಜ್ಞತೆಯ ಡಿಪ್ಲೋಮಾ ಉತ್ತೀರ್ಣ ಹೊಂದಿರಬೇಕು. ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯ ನೋಂದಣಿ ಮತ್ತು ಕಂಪ್ಯೂಟರ್ ಸಾಕ್ಷರತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
● ಶುಷ್ರೂಷಕ ಅಧಿಕಾರಿಗಳು – ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ B.Sc / GNM ನರ್ಸಿಂಗ್ ನಲ್ಲಿ ಕೆಎನ್ಸಿ ನೋಂದಣಿ ಹೊಂದಿರಬೇಕು. ಹಾಗೂ ಕಂಪ್ಯೂಟರ್ ಸಾಕ್ಷರತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.

ಆಯ್ಕೆ ವಿಧಾನ:-
● ನೇರ ಸಂದರ್ಶನದ ಮೂಲಕ
● ಅರ್ಹ ಆಸಕ್ತ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ಜೊತೆಗೆ ಒಂದು ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಗೆ ನೇರ ಸಂದರ್ಶನಕ್ಕೆ ಭಾಗಿಯಾಗಬೇಕು.

ಕಛೇರಿಯ ವಿಳಾಸ:-
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ,
ಕೆ.ಎನ್.ಟಿ.ಬಿ ಸ್ಯಾನಿಟೋರಿಯಂ ಆಸ್ಪತ್ರೆ ಆವರಣ,
ಬಂಗಾರಪೇಟೆ ರಸ್ತೆ, ಕೋಲಾರ.

ಪ್ರಮುಖ ದಿನಾಂಕ:-
13.06.2023 ರಂದು ಬೆಳಿಗ್ಗೆ 10:00 ರ ಒಳಗೆ ನೇರ ಸಂದರ್ಶನಕ್ಕೆ ಭೇಟಿ ಆಗಬೇಕು.

ಕೇಳಲಾಗುವ ಪ್ರಮುಖ ದಾಖಲೆಗಳು:-
● ಆಧಾರ್ ಕಾರ್ಡ್
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ಮೊಬೈಲ್ ಸಂಖ್ಯೆ
● ವಯಸ್ಸಿನ ದೃಢೀಕರಣಕ್ಕೆ ಸಂಬಂಧಪಟ್ಟ ದಾಖಲೆಗಳು
● ಇನ್ನಿತರ ಪ್ರಮುಖ ದಾಖಲೆಗಳು.

ನಿಜವಾದ ಶಿವನ ಕೈ ಇರುವ ಶಿವಲಿಂಗ ಇಂದಿಗೂ ಕೈ ಬೆರಳುಗಳು ಅಲಗಾಡುತ್ತೆ.! ಈ ಅದ್ಭುತ ದೃಶ್ಯವನ್ನು ನೀವೇ ನಿಮ್ಮ ಕಣ್ಣಾರೆ ನೋಡಿ.!

ಭಾರತ ದೇಶದಲ್ಲಿ ಲೆಕ್ಕ ಹಾಕಿದರೆ 12 ಲಕ್ಷದ 700 ಉದ್ಭವ ಗೊಂಡ ಶಿವಲಿಂಗವನ್ನು ನೋಡಬಹುದು. ಮತ್ತೊಂದು ಕಡೆ ಪ್ರತಿಷ್ಠಾಪನೆ ಮಾಡಿ ದಂತಹ ಶಿವಲಿಂಗವನ್ನು ಲೆಕ್ಕ ಹಾಕುವುದಕ್ಕೆ ಸಾಧ್ಯವಿಲ್ಲ ಅಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಇದೆ. ಒಂದು ಸರ್ವೆ ಹೇಳುತ್ತದೆ ಪ್ರತಿಷ್ಠಾಪನೆ ಮಾಡಿದಂತಹ ಶಿವಲಿಂಗವು ಪ್ರಪಂಚದಾದ್ಯಂತ ಕಂಡುಬರುತ್ತದೆ. ಭಾರತ ದೇಶದಲ್ಲಿ ಸುಮಾರು ಏಳು ಕೋಟಿಗೂ ಅಧಿಕ ಪ್ರತಿಷ್ಠಾಪನೆ ಗೊಂಡ ಶಿವಲಿಂಗಗಳು ಇದೆ ಎಂದು ಹೇಳಲಾಗಿದೆ.

ಆದರೆ ಈ ದಿನ ನಾವು ಹೇಳಲು ಹೊರಟಿರುವಂತಹ ಈ ಶಿವಲಿಂಗದ ಬಗ್ಗೆ ನೀವೇನಾ ದರೂ ತಿಳಿದರೆ ಈ ಶಿವಲಿಂಗಕ್ಕೆ ನೀವು ಕೂತಲ್ಲಿಯೇ ನಮಸ್ಕಾರವನ್ನು ಮಾಡುತ್ತೀರಿ. ಇದಕ್ಕೆ ಕಾರಣ ಏನು ಎಂದರೆ ಅಷ್ಟೊಂದು ವಿಸ್ಮಯ ಹಾಗೂ ನಿಗೂಢತೆಯಿಂದ ಕೂಡಿದೆ. ಈ ರೀತಿ ಕೈಗಳು ಇರುವಂತಹ ಶಿವಲಿಂಗವನ್ನು ನೀವು ಪ್ರಪಂಚದಾ ದ್ಯಂತ ಎಲ್ಲಿಯೂ ನೋಡಲು ಸಾಧ್ಯವೇ ಇಲ್ಲ.

ಬೆಂಗಳೂರಿನಲ್ಲಿ ನೆಲೆಸಿ ರುವಂತಹ ಪ್ರತಿಯೊಬ್ಬರಿಗೂ ಕೂಡ ಈ ಶಿವಲಿಂಗ ನೆಲೆಸಿರುವಂತಹ ಸ್ಥಳ ಸಮೀಪದಲ್ಲಿಯೇ ಇದೆ. ಹಾಗಾದರೆ ಈ ದೇವಸ್ಥಾನ ಇರುವುದಾ ದರೂ ಎಲ್ಲಿ? ಈ ದೇವಸ್ಥಾನದ ವಿಶೇಷತೆ ಏನು? ಹಾಗೂ ಇದರ ಸಂಪೂರ್ಣವಾದ ವಿಳಾಸ? ಹೀಗೆ ಈ ಎಲ್ಲಾ ಮಾಹಿತಿಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಈ ದಿನ ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಕರ್ನಾಟಕದ ನೆರೆರಾಜ್ಯವಾದ ತಮಿಳುನಾಡಿನಲ್ಲಿ ಇರುವ ಬೃಂದಾಚಲಂ ಎಂಬ ನಗರಕ್ಕೆ ಹೋಗಬೇಕು ಬಂದಾಚಲಂ ನಗರದಿಂದ ರಾಜ್ಯ ಹೆದ್ದಾರಿಯಲ್ಲಿ 74 ಕಿಲೋ ಮೀಟರ್ ಪಯಾಣ ಮಾಡಿದರೆ ತಿರುವಿ ದೈಮರಡು ಎಂಬ ನಗರ ಸಿಗುತ್ತೆ. ಈ ನಗರದಲ್ಲಿ ಶ್ರೀ ಶಂಕರಚಾರ್ಯರ ದೇವಸ್ಥಾನ ಮತ್ತು ಮಠ ಇದೆ ಈ ಮಠದ ಒಳಗಡೆ ಕೈ ಹೊಂದಿರುವ ಶಿವಲಿಂಗ ಉದ್ಭವ ಗೊಂಡಿದೆ. ಶನಿವಾರ ಹಾಗೂ ಭಾನುವಾರದ ದಿನದಂದು ಈ ದೇವಸ್ಥಾನಕ್ಕೆ ಬೆಂಗಳೂರಿನಿಂದ ಸಾಕಷ್ಟು ಜನ ಭಕ್ತರು ಬರುತ್ತಾರೆ.

ಬೆಂಗಳೂರಿನಿಂದ ಈ ದೇವಸ್ಥಾನಕ್ಕೆ ಸುಮಾರು 370 ಕಿಲೋಮೀಟರ್ ಪ್ರಯಾಣ ಮಾಡಬೇಕಾಗುತ್ತದೆ. ತಿರುವಿ ದೈಮರಡು ನಗರದಲ್ಲಿ ಐದು ದೊಡ್ಡ ದೊಡ್ಡ ಚೋಳ ಸಾಮ್ರಾಜ್ಯದವರು ನಿರ್ಮಿಸಿದಂತಹ ದೇವಸ್ಥಾನಗಳು ಕಂಡುಬರುತ್ತದೆ. ಈ ದೇವಸ್ಥಾನಗಳು ನೋಡುವುದಕ್ಕೆ ತುಂಬಾ ಅದ್ಭುತವಾಗಿ ಇದೆ. ಈ ಐದು ದೇವಸ್ಥಾನಗಳು ಕೂಡ 5000 ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿದೆ. ಕೈಗಳನ್ನು ಹೊಂದಿರುವಂತಹ ಶಿವಲಿಂಗವು ಭಾರತದ ಏಕೈಕ ಮತ್ತು ಪುರಾತನ ಶಿವಲಿಂಗ ಎಂದೇ ಪರಿಗಣಿಸಲಾಗಿದೆ.

ಅಷ್ಟೇ ಅಲ್ಲದೆ ಶಂಕರಾಚಾರ್ಯರ ಪುರಾವೆಯಲ್ಲಿ ಉಲ್ಲೇಖಿಸಿರುವ ಪ್ರಕಾರ ಈ ಶಿವಲಿಂಗವು ಸುಮಾರು 8000 ವರ್ಷಗಳ ಹಳೆಯದ್ದು ಎಂದು ಹೇಳಲಾಗಿದೆ. ಈ ಪುರಾವೆಯ ನ್ನು ಆಧಾರವಾಗಿಟ್ಟುಕೊಂಡು ನೋಡಿದರೆ ಭೂಮಿಯ ಮೇಲೆ ಉದ್ಭವ ಗೊಂಡ ಮೊದಲ ಶಿವಲಿಂಗ ಎಂದು ಹೇಳಿದರು ತಪ್ಪಿಲ್ಲ. ಸುಮಾರು 2500 ವರ್ಷಗಳ ಹಿಂದೆ ಭಾರತ ದೇಶದ ಗುರುಗಳಾಗಿದ್ದಂತಹ ಶ್ರೀ ಆದಿ ಶಂಕರಾಚಾರ್ಯರು ಈ ಶಿವಲಿಂಗ ಇರುವ ಜಾಗಕ್ಕೆ ಬಂದು ತಪಸ್ಸು ಮಾಡಲು ಆರಂಭಿಸುತ್ತಾರೆ.

ನೀವು ಇಲ್ಲಿ ನಿಜವಾಗಲೂ ನೆಲೆಸಿದ್ದರೆ ನೀವು ನನ್ನ ಮುಂದೆ ಬನ್ನಿ ನನಗೆ ಆಶೀರ್ವಾದ ಮಾಡಿ ಎಂದು ಪಟ್ಟು ಬಿಡದೆ ತಪಸ್ಸನ್ನು ಮಾಡುತ್ತಾರೆ. ಶಂಕರಾಚಾರ್ಯರ ಭಕ್ತಿಗೆ ಮೆಚ್ಚಿದoತಹ ಶಿವ ಪರಮಾತ್ಮನು ಲಿಂಗದಿಂದ ತನ್ನ ಕೈಯನ್ನು ಹೊರಗೆ ಹಾಕಿ ಸತ್ಯಂ ಅದ್ವೈತಂ ಎಂದು ಮೂರು ಬಾರಿ ಕೂಗಿ ಆಶೀರ್ವಾದವನ್ನು ಮಾಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಅಭಿಷೇಕ್ ಹೆಂಡ್ತಿ ಅವಿವಾ ಕಾಲಿಗೆ ಬಿದ್ದು ಅಂಬರೀಶ್ ಹೆಸರಿಗೆ & ಕುಟುಂಬದ ಗೌರವಕ್ಕೆ ಯಾವುದೇ ಕಾರಣಕ್ಕೂ ಧಕ್ಕೆ ತರಬೇಡ ಎಂದು ಕೇಳಿಕೊಂಡ ದರ್ಶನ್.!

 

ಅವಿವಾ ಮತ್ತು ಅಭಿಷೇಕ್ ಅಂಬರೀಶ್ ಮದುವೆ ಅದ್ದೂರಿಯಾಗಿ ನಡೆದಿದೆ. ನಂತರ ಪ್ರತ್ಯೇಕವಾಗಿ ಸಿನಿಮಾ ರಂಗದವರು ಹಾಗೂ ಕುಟುಂಬದ ಆತ್ಮೀಯರಿಗಾಗಿ ಪ್ರತ್ಯೇಕ ಪಾರ್ಟಿ ಏರ್ಪಡಿಸಲಾಗಿತ್ತು. ಈ ಪಾರ್ಟಿಯಲ್ಲಿ ಸಿನಿಮಾ ರಂಗಕ್ಕೆ ಸಂಬಂಧ ಪಟ್ಟ ಅನೇಕರು ಬಂದಿದ್ದರು. ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಾಲಾಶ್ರೀ, ರಾಕ್ ಲೈನ್ ವೆಂಕಟೇಶ್ ಅವರು ಸೇರಿದಂತೆ ಇಂಡಸ್ಟ್ರಿಯ ಎಲ್ಲಾ ಗಣ್ಯರು ಈ ಪಾರ್ಟಿಯಲ್ಲಿ ಸೇರಿದ್ದರು.

ಈಗ ಎಲ್ಲರೆದುರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅವಿವಾ ಅವರ ಎದುರು ಮಂಡಿಯೂರಿ ಕೆಲವು ಮಾತುಗಳನ್ನು ಕೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಡಿ ಬಾಸ್ ಸಿಂಪ್ಲಿಸಿಟಿ ಹಾಗೂ ಡೌನ್ ಟು ಅರ್ಥ್ ಗುಣದ ಬಗ್ಗೆ ಮತ್ತು ಅಂಬಿ ಕುಟುಂಬದ ಮೇಲೆ ದರ್ಶನ್ ಅವರು ಇಟ್ಟಿರುವ ಅಭಿಮಾನದ ಬಗ್ಗೆ ಮತ್ತೊಮ್ಮೆ ಎಲ್ಲರೂ ಮಾತನಾಡುತ್ತಿದ್ದಾರೆ.

ಅಂಬರೀಷ್ ಹಾಗೂ ದರ್ಶನ್ ಅವರ ನಡುವೆ ಒಂದು ಆತ್ಮೀಯವಾದ ಸಂಬಂಧ ಇತ್ತು. ಅಂಬರೀಶ್ ಅವರು ದರ್ಶನ್ ಅವರನ್ನು ಸ್ವಂತ ಮಗನಂತೆ ಭಾವಿಸಿದ್ದರು. ಜೊತೆಗೆ ದರ್ಶನ್ ಅವರ ಕುಟುಂಬಕ್ಕೆ ಸಂಬಂಧಪಟ್ಟ ಹಾಗೆ ಅನೇಕ ವಿಚಾರಗಳು ಆದಾಗ ಮಧ್ಯಸ್ಥಿಕೆ ವಹಿಸುತ್ತಿದ್ದರು. ಯಾರ ಮಾತಿಗೂ ಬಗ್ಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೆಬಲ್ ಸ್ಟಾರ್ ಮಾತಿಗೆ ಮರು ಮಾತಾಡದೆ ಅದನ್ನು ಒಪ್ಪುತ್ತಿದ್ದರು.

ಅವರಾದ ಬಳಿಕ ಸುಮಲತಾ ಅವರನ್ನು ಸಹ ಅಷ್ಟೇ ಗೌರವಿಸುತ್ತಿದ್ದರು. ಸುಮಲತಾ ಅವರು ಮಂಡ್ಯದಲ್ಲಿ ಎಲೆಕ್ಷನ್ ನಿಂತ ವೇಳೆ ಅವರಿಗೆ ಜೊತೆಯಾಗಿ ದರ್ಶನ್ ಮತ್ತು ಯಶ್ ಅವರು ಸಾತ್ ನೀಡಿದ್ದರು. ಆ ಸಮಯದಲ್ಲಿ ಸುಮಲತಾ ಅವರು ದರ್ಶನ್ ಅವರು ನನ್ನ ಮೊದಲನೇ ಮಗ ಎನ್ನುವ ಹೇಳಿಕೆಯನ್ನು ಕೊಟ್ಟಿದ್ದರು.

ಇದೀಗ ಮದುವೆ ಆದ ಬಳಿಕ ನಡೆದ ಪಾರ್ಟಿಯಲ್ಲೂ ಕೂಡ ಅಂಬಿ ಮಾಮ ಕುಟುಂಬದ ಮೇಲೆ ತಾವಿಟ್ಟಿರುವ ಪ್ರೀತಿ ಏನು ಅನ್ನುವುದನ್ನು ದರ್ಶನ್ ಅವರು ಮತ್ತೊಮ್ಮೆ ಕುಟುಂಬದ ಸೊಸೆಗೆ ಹೇಳಿದ್ದಾರೆ. ಈ ಕುಟುಂಬವು ನನ್ನ ಕುಟುಂಬ ಇದ್ದಂತೆ ನನ್ನ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇದ್ದರೂ ನನ್ನ ಬಳಿ ಹೇಳು ನೀನು ಅಮ್ಮನ ಬಳಿ ಹೇಳದಿದ್ದರೂ ಕೂಡ ಅಭಿಷೇಕ್ ಮೇಲೆ ಏನೇ ಕಂಪ್ಲಿಟ್ ಇದ್ದರು ನನ್ನ ಬಳಿ ಹೇಳು.

ಅದನ್ನು ಎಲ್ಲೂ ಆಚೆಗೆ ತರಬೇಡ ಅವನು ತಪ್ಪು ಮಾಡಿದ್ದಾದರೇ ಅವನನ್ನು ಪೀಸ್ ಪೀಸ್ ಮಾಡುವ ಜವಾಬ್ದಾರಿ ನನ್ನದು. ಆದರೆ ಯಾವುದೇ ಕಾರಣಕ್ಕೂ ರೆಬಲ್ ಸ್ಟಾರ್ ಎನ್ನುವ ಹೆಸರಿಗೆ ದಕ್ಕೆ ಬರಬಾರದು ಅವಿವಾಅಭಿ ಆಗುವುದು ಸುಲಭ ಆದರೆ ಅಭಿಷೇಕ್ ಅಂಬರೀಶ್ ಎಂದು ಹೆಸರು ಮಾಡುವುದು ಬಹಳ ಕಷ್ಟ.

ಈ ಜವಾಬ್ದಾರಿಯನ್ನು ಈಗ ನೀನು ಕಿರೀಟದಂತೆ ಹೊತ್ತಿದ್ದೀಯ ದಯಮಾಡಿ ಇದನ್ನೆಲ್ಲಾ ಅರ್ಥ ಮಾಡಿಕೋ ಎಂದು ಅವಿವಾ ಎದುರು ಮಂಡಿಯೂರಿ ದರ್ಶನ್ ಅವರು ಕೇಳಿಕೊಂಡಿದ್ದಾರೆ. ಇವರು ಈ ರೀತಿ ಮಾಡುತ್ತಿದ್ದಂತೆ ಭಾವುಕರಾದ ಅವಿವಾ ಅವರು ಸಹ ದರ್ಶನ್ ಅವರ ಎದುರು ಮಂಡಿಯೂರಿ ಕುಳಿತುಕೊಂಡಿದ್ದಾರೆ. ನಂತರ ಇವರಿಬ್ಬರ ಮಧ್ಯೆಬಂದ ರಾಕಿಂಗ್ ಸ್ಟಾರ್ ಯಶ್ ಅವರು ಸಹ ಜೋಡಿ ಬಗ್ಗೆ ಹಾಗೂ ಕುಟುಂಬದ ಬಗ್ಗೆ ಮಾತುಗಳನ್ನು ಆಡಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗಿದ್ದು ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

ಸದ್ದಿಲ್ಲದೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ಕಾಮಿಡಿ ಕಿಲಾಡಿ ಖ್ಯಾತಿಯ ನಟಿ ಸಂಜು ಬಸಯ್ಯ…

 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ನ ಮೊದಲ ಆವೃತ್ತಿಯಲ್ಲಿ ತನ್ನ ಹೈಟ್ ಕಾರಣದಿಂದ ಎಲ್ಲರ ಗಮನ ಸೆಳೆದಿದ್ದ ಸಂಜು ಬಸಯ್ಯ ಅವರು ಕನ್ನಡಿಗರಿಗೆಲ್ಲ ಕುಳ್ಳ ಮಿಂಡ್ರಿ ಎನ್ನುವ ಹೆಸರಿನಿಂದ ಚಿರಪರಿಚಿತರು. ಅದಾದ ಬಳಿಕ ಕಾಮಿಡಿ ಚಾಂಪಿಯನ್, ಸೇರಿದಂತೆ ಅನೇಕ ರಿಯಾಲಿಟಿ ಶೋಗಳು ಹಾಗೂ ಕನ್ನಡದ ಕೆಲವು ಹಲವು ಚಿತ್ರಗಳಲ್ಲಿ ಸೂಪರ್ ಸ್ಟಾರ್ಗಳ ಜೊತೆಗೆ ಕಾಮಿಡಿ ಆಕ್ಟರ್ ಆಗಿ ಕಾಣಿಸಿಕೊಂಡಿದ್ದ ಸಂಜು ಬಸಯ್ಯ ಅವರು ಈಗ ಕರ್ನಾಟಕದ ಮನೆಮನೆಗಳಿಗೂ ಪರಿಚಯವಿರುವ ಫೇಮಸ್ ಸೆಲೆಬ್ರಿಟಿ.

ಈಗಲೂ ಸಹ ಹೈಸ್ಕೂಲ್ ಹುಡುಗನಂತೆ ಕಾಣಿಸುವ ಸಂಜು ಬಸಯ್ಯ ಅವರು ಪ್ರೇಮ ವಿವಾಹವಾಗಿ ಎಲ್ಲರಿಗೂ ಶಾ’ಕ್ ಆಗುವಂತೆ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಅನೇಕ ಗಾಸಿಪ್ ಗಳು ಸಂಜು ಬಸಯ್ಯ ಪ್ರೀತಿ ಕುರಿತು ಹರಿದಾಡಿದ್ದರು, ಈ ಜೋಡಿಗಳ ಫೋಟೋಗಳು ವೈರಲ್ ಆಗಿದ್ದರೂ ಕೂಡ ಅಧಿಕೃತವಾಗಿ ಇದರ ಬಗ್ಗೆ ಜೋಡಿಗಳು ಎಂದು ಮಾತನಾಡಿರಲಿಲ್ಲ.

ಆದರೆ ಇದೀಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮದುವೆ ಆಗಿರುವ ಬಗ್ಗೆ ಸ್ವತಃ ಸಂಜು ಬಸಯ್ಯ ಅವರೇ ಅನೌನ್ಸ್ ಮಾಡಿದ್ದಾರೆ. ಸಂಜು ಬಸಯ್ಯ ಅವರು ತಮ್ಮ instagram ಖಾತೆಯಲ್ಲಿ ತಾವು ತಮ್ಮ ಬಹಳ ಕಾಲದ ಗೆಳತಿ ಪಲ್ಲವಿ ಬಳ್ಳಾರಿ ಅವರನ್ನು ರಿಜಿಸ್ಟರ್ ಮ್ಯಾರೇಜ್ ಆಗಿರುವ ಬಗ್ಗೆ ಬರೆದುಕೊಂಡು ಅವರ ಒಟ್ಟಿಗಿದ್ದ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ. ಈ ರೀತಿ ಮಾಡುವ ಮೂಲಕ ಕನ್ನಡಿಗರಿಗೆ ಬಹಳ ದಿನದಿಂದ ಇದ್ದ ಕೆಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ತಮ್ಮ ಮದುವೆ ಬಗ್ಗೆ ಸಂಜು ಬಸಯ್ಯ ಅವರು ಬರೆದಿರುವ ಮಾತುಗಳು ಈ ರೀತಿ ಇದೆ. ಕನ್ನಡದ ಕಲಾಭಿಮಾನಿಗಳಿಗೆ ನಿಮ್ಮ ಪ್ರೀತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಮಾಡುವ ಅನಂತ ಕೋಟಿ ನಮಸ್ಕಾರಗಳು. ಇಲ್ಲಿಯವರೆಗಿನ ನನ್ನ ಹಾಗೂ ಪಲ್ಲವಿ ಬಳ್ಳಾರಿಯವರ ನಡುವಿನ ಸಂಬಂಧಗಳ ಊಹಾಪೋಹಗಳಿಗೆ ಇಂದು ನಾವು ತೆರೆ ಎಳೆದಿದ್ದೆವೆ ಎಂದು ಹೇಳಿದ್ದಾರೆ. ಮೊದಲಿಗೆ ನಮ್ಮಿಬ್ಬರ ಪರಿಚಯವಾಗಿತು, ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿದ್ದ ವಿಷಯ.

ಈಗ ನಾವಿಬ್ಬರು ಕಾನೂನಬದ್ದವಾಗಿ, ಅಧಿಕೃತವಾಗಿ, ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ. ನಮ್ಮ, ನಮ್ಮ ಕುಟುಂಬದ ಒಪ್ಪಿಗೆ ಪಡೆದು ನಿಮ್ಮೆಲ್ಲರ ಸುಮ್ಮುಖದಲ್ಲಿ ಆದಷ್ಟು ಬೇಗ ಸಪ್ತಪದಿ ತುಳಿಯಲಿದ್ದೇವೆ. ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಮೇಲೆ ಹೀಗೆ ಇರ್ಲಿ ನಿಜವಾದ ಪ್ರೀತಿಗೆ ಯಾವುದೇ ಜಾತಿ, ಧರ್ಮ, ಇನ್ನಿತರ ಯಾವುದೇ ವಿಷಯಗಳು ಅಡ್ಡ ಬರಲಾರದು ಎಂಬುದನ್ನು ಸಾಧಿಸಿ ತೋರಿಸಿದ್ದೇವೆ, ನಿಜವಾದ ಪ್ರೀತಿಗೆ ಜಯ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ನಾವೇ ಕಾರಣ’ ಎಂದು ಬರೆದುಕೊಂಡಿದ್ದಾರೆ.

ಪಲ್ಲವಿ ಬಳ್ಳಾರಿ ಅವರು ಮೂಲತಃ ರಂಗಭೂಮಿ ಕಲಾವಿದೆ ಆಗಿದ್ದು, ಅವರು ಅನೇಕ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಲವಾದ ಮೂಲಗಳ ಮೂಲಕ ಬಂದ ಸುದ್ದಿಯ ಪ್ರಕಾರ ಈ ಜೋಡಿ ಮದುವೆ ಆಗಿ ನಾಲ್ಕು ವಾರಗಳು ಕಳೆದಿವೆಯಂತೆ ಆದರೆ ಕುಟುಂಬಸ್ಥರು ಇನ್ನೂ ಒಪ್ಪಿಲ್ಲ ಎನ್ನುವ ಮಾಹಿತಿಗಳು ಇವೆ. ಆದಷ್ಟು ಬೇಗ ಕುಟುಂಬದ ಆಶೀರ್ವಾದ ಕೂಡ ಈ ಜೋಡಿಗೆ ಸಿಗಲಿ. ಅವರು ಕನ್ನಡದ ಹೆಸರಾಂತ ಪ್ರತಿಭೆಯಾಗಿ ಇನ್ನು ಅನೇಕ ವರ್ಷಗಳ ಕಾಲ ತಮ್ಮ ಹಾಸ್ಯದ ಮೂಲಕ ಕನ್ನಡಿಗರನ್ನು ರಂಜಿಸುವಂತೆ ಆಗಲಿ ಎಂದು ಹಾರೈಸೋಣ.

ಗೃಹಜ್ಯೋತಿ ಉಚಿತ ವಿದ್ಯುತ್ ಪಡೆಯಲು ಆಧಾರ್ ಲಿಂಕ್ ಮಾಡುವುದು ಕಡ್ಡಾಯ. ಆಧಾರ್ ಲಿಂಕ್ ಮಾಡುವುದೇಗೆ ನೋಡಿ.!

 

ರಾಜ್ಯದಲ್ಲಿ ಕಳೆದ ತಿಂಗಳಿನಿಂದ ಕಾಂಗ್ರೆಸ್ ಸರ್ಕಾರ ತಾತ್ವಿಕ ಆದೇಶ ನೀಡಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಅಂತಿಮವಾಗಿ ಎರಡನೇ ಸುತ್ತಿನ ಕ್ಯಾಬಿನೆಟ್ ಮೀಟಿಂಗ್ ನಡೆದು ಜೂನ್ ಎರಡನೇ ತಾರೀಖಿನಂದು ಸರ್ಕಾರದ ಕಡೆಯಿಂದ ಮತ್ತೊಂದು ಆದೇಶ ಪತ್ರವು ಹೊರ ಬಿದ್ದಿದೆ.

ಪ್ರತಿಯೊಂದು ಯೋಜನೆಗೂ ಕೂಡ ಇರುವ ಕಂಡೀಶನ್ಗಳು ಏನು ಆ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಅನುಸರಿಸುತ್ತಿರುವ ಮಾರ್ಗಸೂಚಿಗಳು ಏನಿರುತ್ತದೆ, ಯಾರೆಲ್ಲ ಈ ಯೋಜನೆಯ ಫಲಾನುಭವಿಗಳಾಗುವ ಅರ್ಹತೆ ಹೊಂದಿ ಯೋಜನೆ ವ್ಯಾಪ್ತಿ ಒಳಗೆ ಬರುತ್ತಾರೆ ಎನ್ನುವುದಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಈ ಆದೇಶ ಪತ್ರವು ಒಳಗೊಂಡಿದೆ.

ಅದರಲ್ಲಿ ಮೊದಲನೆಯ ಗ್ಯಾರಂಟಿ ಕಾರ್ಡ್ ಯೋಜನೆಯಾದ ಗೃಹಜೋತಿ ಯೋಜನೆ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಸರ್ಕಾರ ಸ್ಥಾಪನೆಗೊ ಮುನ್ನ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಉದ್ದೇಶದಿಂದ ಎಲ್ಲಾ ಕುಟುಂಬಗಳಿಗೂ ಸಹ ಉಚಿತವಾಗಿ 200 ಯೂನಿಟ್ ವಿದ್ಯುತ್ ಕೊಡುವುದಾಗಿ ಹೇಳಿತ್ತು ಆದರೆ ಆದೇಶಪತ್ರ ಹೊರಬಿದ್ದ ಬಳಿಕ ಅದಕ್ಕೆ ಕೆಲವು ಕಂಡೀಶನ್ ಗಳನ್ನು ಸೇರಿಸಲಾಯಿತು.

ಕಳೆದ ಒಂದು ವರ್ಷದಿಂದ ಜನಸಾಮಾನ್ಯರು ಬಳಸಿರುವ ವಿದ್ಯುತ್ ಸರಾಸರಿಯಲ್ಲಿ ಹೆಚ್ಚುವರಿಯಾಗಿ 10% ಉಚಿತ ವಿದ್ಯುತ್ ಕೊಡುತ್ತೇವೆ ಅದಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆಗೆ ಮಾಲೀಕರೇ ಹೊಣೆ ಹಾಗೂ 200 ಯೂನಿಟ್ ಕಿಂತ ಹೆಚ್ಚು ವಿದ್ಯುತ್ ಬಳಸಿದರೆ ಸಂಪೂರ್ಣ ವಿದ್ಯುತ್ ಬಿಲ್ ಅನ್ನು ಮನೆಮಾಲೀಕರೇ ಕಟ್ಟಬೇಕು ಎನ್ನುವುದು ಸರ್ಕಾರ ಹಾಕಿದ ಪ್ರಮುಖ ಕಂಡಿಶನ್. ಜೊತೆಗೆ ಈ ಯೋಜನೆಗೆ ಫಲಾನುಭವಿಗೆಗಳನ್ನು ಆಯ್ಕೆ ಮಾಡುವ ವಿಚಾರಕ್ಕಾಗಿ ಫಲಾನುಭವಿಗಳ ಆಧಾರ್ ಕಾರ್ಡನ್ನು ಅವರ ಗ್ರಾಹಕರ ಐಡಿ ನಂಬರ್ ಅಥವಾ ವಿದ್ಯುತ್ ಖಾತೆ ಸಂಖ್ಯೆಗೆ ಲಿಂಕ್ ಮಾಡಬೇಕು ಈ ಮೂಲಕ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ ಎಂದು ಹೇಳಲಾಗಿತ್ತು.

ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿತ್ತು. ಯಾಕೆಂದರೆ ಈ ರೀತಿ ಗ್ರಾಹಕರ ಐಡಿ ಸಂಖ್ಯೆಗೆ ಅಥವಾ ವಿದ್ಯುತ್ ಖಾತೆ ಸಂಖ್ಯೆಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡುವ ವಿಚಾರ ಸಾಕಷ್ಟು ಗೊಂದಲಗಳನ್ನು ಸೃಷ್ಟಿ ಮಾಡಿದೆ. ಯಾಕೆಂದರೆ ಸ್ವಂತ ಮನೆ ಹೊಂದಿರುವವರಿಗೆ ಇದರ ಸಮಸ್ಯೆಗಳು ಉಂಟಾಗುವುದಿಲ್ಲ ಆದರೆ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಇನ್ನೂ ಸಹ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ.

ಈ ರೀತಿ ಗ್ರಾಹಕರ ಖಾತೆ ಸಂಖ್ಯೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದಾದರೆ ಬಾಡಿಗೆದಾರರು ಅದರ ವ್ಯಾಪ್ತಿಯಿಂದ ಹೊರಗುಳಿಯಬಹುದು ಎನ್ನುವುದು ಸೇರಿದಂತೆ ಇನ್ನೂ ಅನೇಕ ಜಟಿಲ ಸಮಸ್ಯೆಗಳನ್ನು ಇದು ಹೊಂದಿದೆ. ಬಾಡಿಗೆ ಮನೆಗಳಿಗೂ ಸಹ ಪ್ರತಿಯೊಬ್ಬವಾಗಿ ವಿದ್ಯುತ್ ಖಾತೆ ಸಂಖ್ಯೆ ಇರುವ ಕಾರಣವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಈ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಊಹಿಸಲಾಗಿದೆ.

ಈಗ ಇಂಧನ ಇಲಾಖೆಯಿಂದ ಈ ಬಗ್ಗೆ ಸ್ಪಷ್ಟತೆ ಕೂಡ ಸಿಕ್ಕಿದ್ದು ಪ್ರತಿಯೊಬ್ಬರು ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆಯಲು ಅವರ ವಿದ್ಯುತ್ ಖಾತೆ ಸಂಖ್ಯೆ ಅಥವಾ ಗ್ರಾಹಕರ ಐಡಿ ಸಂಖ್ಯೆಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಲೇಬೇಕು ಇದು ಕಡ್ಡಾಯ ಎನ್ನುವ ಸ್ಪಷ್ಟತೆ ಕೊಟ್ಟಿದ್ದಾರೆ. ಇಲಾಖೆಯಿಂದ ಈ ರೀತಿಯ ಆದೇಶ ಹೊರ ಬಿದ್ದಿದ್ದರೂ ಕರ್ನಾಟಕಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿರುವ ಯಾವುದೇ ಕಂಪನಿಗಳಿಂದ ಕೂಡ ಇದಕ್ಕಾಗಿ ವೆಬ್ಸೈಟ್ ಓಪನ್ ಆಗಿಲ್ಲ. ಇದರ ಸಿದ್ಧತೆ ನಡೆಯುತ್ತಿರುವುದರಿಂದ ಶೀಘ್ರವಾಗಿ ಸರ್ಕಾರದಿಂದ ಅಥವಾ ಇಂಧನ ಇಲಾಖೆಯಿಂದ ಇದರ ಕುರಿತು ಮಾಹಿತಿ ಹೊರಬೀಳಬಹುದು.

ʻಗೃಹ ಲಕ್ಷ್ಮಿʼ ಯೋಜನೆಗೆ ಮಹಿಳೆಯರು ಎಲ್ಲಿ ಅರ್ಜಿ ಸಲ್ಲಿಸಬೇಕು.?, ಅರ್ಹತೆ-ಯಾವ ದಾಖಲೆಗಳು ಬೇಕು.? ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ ಸರ್ಕಾರವು ‘ಗೃಹ ಲಕ್ಷ್ಮಿ’ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಹಲವಾರು ಷರತ್ತುಗಳನ್ನು ಮುಂದಿಟ್ಟಿದೆ. ಹೊಸ ನಿಯಮಗಳ ಪ್ರಕಾರ, ಬಿಪಿಎಲ್, ಎಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಜನರು ಮಾತ್ರ ಅರ್ಹರು.

ಕರ್ನಾಟಕ ಕ್ಯಾಬಿನೆಟ್ ‘ಗೃಹ ಲಕ್ಷ್ಮಿ’ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದ ದಿನಗಳ ನಂತರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಂಗಳವಾರ ರಾತ್ರಿ ಇಲಾಖೆ ಹೊರಡಿಸಿದ ವಿವರವಾದ ಮಾರ್ಗಸೂಚಿಗಳಲ್ಲಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಹಲವಾರು ಷರತ್ತುಗಳನ್ನು ಘೋಷಿಸಿತು . ಆದಾಯ ತೆರಿಗೆ ಪಾವತಿಸುವ ಅಥವಾ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಿಟರ್ನ್ಸ್ ಸಲ್ಲಿಸುವ ಮಹಿಳೆಯರಿಗೆ ಈ ಯೋಜನೆ ಅನ್ವಯಿಸುವುದಿಲ್ಲ.

ಏನಿದು ‘ಗೃಹ ಲಕ್ಷ್ಮಿ’ ಯೋಜನೆ?
ಕಾಂಗ್ರೆಸ್‌ ವಿಧಾನಸಭಾ ಚುನಾವಣೆಗೂ ಮುನ್ನ ನೀಡಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ‘ಗೃಹ ಲಕ್ಷ್ಮಿ’ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿಯಲ್ಲಿ ರಾಜ್ಯದ ಪ್ರತಿ ಕುಟುಂಬದ ಮಹಿಳೆಯೊಬ್ಬರಿಗೆ ಮಾಸಿಕ 2,000 ರೂಪಾಯಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಜೂನ್ 2 ರಂದು ಕರ್ನಾಟಕ ಕ್ಯಾಬಿನೆಟ್ ಆಗಸ್ಟ್ 15 ರಿಂದ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿತು .

ಯಾರು ಅರ್ಹರು?
* ಫಲಾನುಭವಿಯು ಕಡ್ಡಾಯವಾಗಿ ಬಡತನ ರೇಖೆಗಿಂತ ಕೆಳಗಿರುವ (BPL) ಅಥವಾ ಬಡತನ ರೇಖೆಗಿಂತ ಮೇಲಿರುವ (APL) ಅಥವಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ನೀಡಲಾದ ಅಂತ್ಯೋದಯ ಕಾರ್ಡ್ ಅನ್ನು ಹೊಂದಿರಬೇಕು.
* ಅರ್ಹ ಮಹಿಳೆಯು ಮೇಲೆ ತಿಳಿಸಿದ ಕಾರ್ಡ್‌ಗಳನ್ನು ಹೊಂದಿರಬೇಕು, ಆಕೆಯನ್ನು ಕುಟುಂಬದ ಮಹಿಳಾ ಮುಖ್ಯಸ್ಥೆ (ಯೆಜಮಾನಿ) ಎಂದು ಸ್ಪಷ್ಟವಾಗಿ ನಮೂದಿಸಬೇಕು.
* ಮನೆಯಲ್ಲಿ ಹೆಚ್ಚು ಮಹಿಳೆಯರು ಇದ್ದರೂ, ಅವರಲ್ಲಿ ಒಬ್ಬರಿಗೆ ಮಾತ್ರ ಯೋಜನೆಯ ಲಾಭ ಸಿಗುತ್ತದೆ.

ಯಾರು ಅರ್ಹರಲ್ಲ?
* ಮಹಿಳೆಯರು ಆದಾಯ ತೆರಿಗೆ ಪಾವತಿಸುತ್ತಿದ್ದರೆ ಅಥವಾ GST ರಿಟರ್ನ್ಸ್‌ಗಾಗಿ ಸಲ್ಲಿಸುತ್ತಿದ್ದರೆ ಅವರು ಅರ್ಹರಾಗಿರುವುದಿಲ್ಲ.
* ಪತಿ ಆದಾಯ ತೆರಿಗೆ ಅಥವಾ GST ರಿಟರ್ನ್ಸ್ ಪಾವತಿಸುತ್ತಿದ್ರೆ ಆತನ ಪತ್ನಿ ಅರ್ಹಳಾಗಿರುವುದಿಲ್ಲ.
* ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್‌ನಲ್ಲಿ ಕುಟುಂಬದ ಮುಖ್ಯಸ್ಥರ ಹೆಸರನ್ನು ನಮೂದಿಸದ ಮಹಿಳೆಯರು ಅರ್ಹರಲ್ಲ.

ಯೋಜನೆಗೆ ಎಲ್ಲಿ ಮತ್ತು ಯಾವಾಗ ಅರ್ಜಿ ಸಲ್ಲಿಸಬೇಕು?
* ಅರ್ಹ ಮಹಿಳೆಯರು ಜೂನ್ 15 ರಿಂದ ಜುಲೈ 15 ರವರೆಗೆ Sevasindhu.Karnataka.gov.in ವೆಬ್‌ಸೈಟ್‌ನಲ್ಲಿ ಪ್ರಯೋಜನಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದು .
* ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರು ದೈಹಿಕವಾಗಿಯೂ ಯೋಜನೆಗೆ ಅರ್ಜಿ ಸಲ್ಲಿಸಬಹುದು.
* ಸರ್ಕಾರವು ಎಲ್ಲಾ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ ಮತ್ತು ಆಗಸ್ಟ್ 15 ರಿಂದ ಹಣವನ್ನು ನೀಡಲು ಪ್ರಾರಂಭಿಸುತ್ತದೆ .
* ಯೋಜನೆಯ ಪ್ರಯೋಜನವನ್ನು ಪಡೆಯಲು, ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗಳೊಂದಿಗೆ ತಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು.

ಗೃಹಲಕ್ಷ್ಮೀ ಯೋಜನೆ ಜಾರಿ ಯಾವಾಗ?
ಗೃಹಲಕ್ಷ್ಮೀ ಯೋಜನೆ ಆಗಸ್ಟ್‌ 17 ಅಥವಾ 18ರಂದು ಜಾರಿಗೆ ಬರಲಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಈ ವೇಳೆ ಇರಲಿದ್ದಾರೆ.

ಗೃಹಲಕ್ಷ್ಮೀ ಯೋಜನೆಗೆ ಬೇಕಾಗುವ ದಾಖಲೆಗಳು ಏನು?
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳನ್ನು ಹೊಂದಿರಲೇಬೇಕು.1. ರೇಷನ್‌ ಕಾರ್ಡ್‌ 2. ಬ್ಯಾಂಕ್‌ ಪಾಸ್‌ಬುಕ್‌ 3. ಆಧಾರ್‌ ಕಾರ್ಡ್‌ 4. ಯಾವುದಾದರೂ ಗುರುತಿನ ಚೀಟಿ.

ಬ್ಯಾಂಕ್‌-ಆಧಾರ್‌ ಜೋಡಣೆ ಕಡ್ಡಾಯ
ಹೌದು, ಈ ಯೋಜನೆಯ ಲಾಭ ಪಡೆಯಲು ಮನೆಯೊಡತಿಯ ಬ್ಯಾಂಕ್‌ ಹಾಗೂ ಆಧಾರ್‌ ಕಾರ್ಡ್‌ ಅನ್ನು ಜೋಡಣೆ ಮಾಡಿರಲೇಬೇಕು.

ಡೆತ್ ಸರ್ಟಿಫಿಕೇಟ್ ಪಡೆಯುವ ಸುಲಭ ವಿಧಾನ ಇಲ್ಲಿದೆ ನೋಡಿ.!

 

ಪ್ರತಿಯೊಂದು ಕುಟುಂಬದಲ್ಲೂ ಕೂಡ ಆಗುವ ಜನನ ಹಾಗೂ ಮ.ರಣವನ್ನು ಕುಟುಂಬದವರು ನೋಂದಾಯಿಸಬೇಕು. ಜೊತೆಗೆ ಜನನ ಪ್ರಮಾಣ ಪತ್ರವನ್ನು ಹೇಗೆ ಪಡೆದುಕೊಳ್ಳುತ್ತೇವೆಯೋ ಅದೇ ರೀತಿ ಮನೆಯಲ್ಲಿ ಯಾರಾದರೂ ಮೃ.ತರಾದಾಗ ಅವರ ಮರಣ ಪ್ರಮಾಣ ಪತ್ರವನ್ನು ಕೂಡ ಸಂಬಂಧ ಪಟ್ಟ ಕಚೇರಿಯಿಂದ ಪಡೆದುಕೊಳ್ಳಬೇಕು. ಭವಿಷ್ಯದಲ್ಲಿ ಹಲವು ಸಂದರ್ಭಗಳಲ್ಲಿ ದಾಖಲೆಯಾಗಿ ಈ ಮ.ರಣ ಪ್ರಮಾಣ ಪತ್ರವನ್ನು ಕೇಳುತ್ತಾರೆ.

 

ಹಾಗಾಗಿ ಈ ಅಂಕಣದಲ್ಲಿ ಮರಣ ಪ್ರಮಾಣ ಪತ್ರವನ್ನು ಯಾಕೆ ಪಡೆದುಕೊಳ್ಳಬೇಕು ಅದನ್ನು ಹೇಗೆ ಪಡೆದುಕೊಳ್ಳಬೇಕು ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಒಂದು ವೇಳೆ ನಮ್ಮ ಕುಟುಂಬದಲ್ಲಿ ಯಾರಾದರೂ ಮೃ.ತರಾಗಿದ್ದು ಅವರ ಮರ.ಣ ಪ್ರಮಾಣ ಪತ್ರವನ್ನು ನಾವು ಇನ್ನೂ ಪಡೆದಿಲ್ಲ ಎಂದರೆ ಅದನ್ನು ಹೇಗೆ ಈಗ ಪಡೆದುಕೊಳ್ಳಬಹುದು ದಾಖಲೆಗಳಾಗಿ ಏನೆಲ್ಲಾ ಕೊಡಬೇಕು ಎನ್ನುವ ವಿಷಯವನ್ನು ತಿಳಿಸುತ್ತಿದ್ದೇವೆ.

ಮ.ರಣ ಪ್ರಮಾಣಪತ್ರದ ಪ್ರಾಮುಖ್ಯತೆ:-
● ಜಮೀನಿನ ವಿವಾದಗಳು ಇದ್ದಲ್ಲಿ ಅಥವಾ ಆಸ್ತಿ ಭಾಗ ಮಾಡಿಕೊಳ್ಳುವಾಗ ಅಥವಾ ವಂಶಾವಳಿ ಪತ್ರಕ್ಕಾಗಿ ಅರ್ಜಿ ಸಲ್ಲಿಸುವಾಗ ಈ ಮ.ರಣ ಪ್ರಮಾಣ ಪತ್ರ ಬೇಕಾಗುತ್ತದೆ.
● ಮ.ರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿ ಯಾವುದಾದರೂ ಇನ್ಸುರೆನ್ಸ್ ಅಥವಾ LIC ಪಾಲಿಸಿಗಳಿದ್ದರೆ ಆ ಹಣವನ್ನು ಪಡೆಯಲು ಮ.ರಣ ಪ್ರಮಾಣ ಪತ್ರ ಬೇಕೇ ಬೇಕು.
● ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿ ಪೋಸ್ಟ್ ಆಫೀಸ್ ಸ್ಕೀಮ್ ಗಳು FD, EPF, PPF ಗಳು ಇದ್ದಲ್ಲಿ ಅದನ್ನು ಪಡೆದುಕೊಳ್ಳಲು ಸಹ ಮ.ರಣ ಪ್ರಮಾಣ ಪತ್ರ ಬೇಕು.
● ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಯಾವುದಾದರೂ ವ್ಯಕ್ತಿ ಮರಣ ಹೊಂದಿದ್ದರೆ ತಹಶೀಲ್ದಾರ್ ಕಚೇರಿಯಿಂದ ಅಂತ್ಯಸಂಸ್ಕಾರಕ್ಕೆ ಸಹಾಯಧನ ಸಿಗುತ್ತದೆ. ಅದನ್ನು ಪಡೆಯಲು ಕೂಡ ಈ ಮ.ರಣ ಪ್ರಮಾಣ ಪತ್ರ ಬೇಕು.

ಡೆತ್ ಸರ್ಟಿಫಿಕೇಟ್ ಗೆ ಅರ್ಜಿ ಸಲ್ಲಿಸುವ ವಿಧಾನ:-
● ತಹಶೀಲ್ದಾರ್ ಕಚೇರಿಯಲ್ಲಿರುವ ಜನನ ಮ.ರಣ ಶಾಖೆಯಲ್ಲಿ ಮೃತ ವ್ಯಕ್ತಿಯ ಆಧಾರ್ ಕಾರ್ಡ್ ಜೊತೆ ಹಿಂಬರಹ ದೃಢೀಕರಣ ತೆಗೆದುಕೊಳ್ಳಬೇಕು .
ಜನನ ಮ.ರಣ ಶಾಖೆಯಿಂದ ವ್ಯಕ್ತಿಯು ಮರ.ಣ ಹೊಂದಿದ್ದ ಪುರವೆಯಾಗಿ ಯಾವುದೇ ದಾಖಲೆ ಇಲ್ಲ ಎನ್ನುವ ಹಿಂಬರಹ ಧೃಡೀಕರಣ ಪತ್ರ ನೀಡುತ್ತಾರೆ.
● ಗ್ರಾಮೀಣ ಭಾಗದವರು ಆಗಿದ್ದರೆ ಮರ.ಣ ವರದಿ ಜೊತೆಗೆ ನಾಡಕಚೇರಿಯಲ್ಲಿ ಅರ್ಜಿ ಹಾಕಬಹುದು.

● ಪ್ರಮುಖವಾದ ವಿಷಯ ಎಂದರೆ ಜನನ ಮ.ರಣ ಶಾಖೆಯಲ್ಲಿ ಹೋಗಿ ಹಿಂಬರಹ ದೃಢೀಕರಣ ಪತ್ರ ಪಡೆಯುವುದು ಎಂದರೆ ತಿರಸ್ಕಾರ ಪತ್ರ ಪಡೆಯುವುದು ಎಂದರ್ಥ. ಒಂದು ವೇಳೆ ಅವರ ಬಳಿ ಈಗಾಗಲೇ ನೀವು ಕೇಳುತ್ತಿರುವ ವ್ಯಕ್ತಿಯ ಮರ.ಣ ಪ್ರಮಾಣ ಪತ್ರ ಇದ್ದರೆ ಅದರ ಪ್ರತಿಯನ್ನು ಕೊಡುತ್ತಾರೆ. ಒಂದು ವೇಳೆ ಇಲ್ಲದೆ ಇದ್ದಾಗ ಮಾತ್ರ ಅವರು ಹಿಂಬರಹ ಧೃಡೀಕರಣ ಪತ್ರವನ್ನು ನೀಡುತ್ತಾರೆ.
● ಈ ರೀತಿ ಪಡೆದ ಹಿಂಬರಹಪತ್ರ, ಮರ.ಣ ಹೊಂದಿದ ವ್ಯಕ್ತಿ ಐಡಿ ಕಾರ್ಡ್, ವಾರಸುದಾರರ ಆಧಾರ್ ಕಾರ್ಡ್, ಸಾಕ್ಷಿಗಳ ಹೇಳಿಕೆ ಪತ್ರ, ನಮೂನೆ ಫಾರಂ ಈ ದಾಖಲೆಗಳ ಸಹಾಯದಿಂದ ಕೋರ್ಟಿನಲ್ಲಿ ತಡ ನೋಂದಣಿ ಪತ್ರ ತೆಗೆದುಕೊಳ್ಳಬೇಕು.

ಇದಕ್ಕೆ ಸಂಬಂಧಪಟ್ಟ ಕೆಲವು ಅಂಗಡಿಗಳಲ್ಲಿ ಸಿಗುತ್ತವೆ ಇವುಗಳನ್ನು ತೆಗೆದುಕೊಂಡು ಸಮೀಪದ ಕೋರ್ಟಿನಲ್ಲಿ ಆದೇಶ ಪತ್ರಕ್ಕಾಗಿ ಅರ್ಜಿ ಹಾಕಬೇಕು. ಅಥವಾ ಈ ದಾಖಲೆಗಳೆಲ್ಲವನ್ನು ಕೂಡ ತೆಗೆದುಕೊಂಡು ವಕೀಲರ ಮೂಲಕವೂ ಕೂಡ ಈ ತಡ ನೋಂದಣಿ ಆದೇಶ ಪತ್ರವನ್ನು ಪಡೆದುಕೊಳ್ಳಬಹುದು. ಆದರೆ ಅದಕ್ಕಾಗಿ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ.
● ಈ ಎಲ್ಲಾ ದಾಖಲೆಗಳ ಜೊತೆ ತಹಶೀಲ್ದಾರ್ ಕಚೇರಿಯ ಜನನ ಮ.ರಣ ಶಾಖೆಯಲ್ಲಿ ತಡ ನೋಂದಣಿ ಪತ್ರ ಪಡೆದುಕೊಳ್ಳಲು ಮತ್ತು ಮರಣ ದೃಢೀಕರಣ ಪತ್ರ ಪಡೆದುಕೊಳ್ಳಲು ಅರ್ಜಿ ಹಾಕಬೇಕು. ಈ ಪ್ರಕ್ರಿಯೆಯು ಪೂರ್ತಿಯಾಗಲು ಕನಿಷ್ಠ ಒಂದು ತಿಂಗಳಾದರೂ ಆಗಬಹುದು.

ಮಹಿಳಾ ಸಮ್ಮಾನ್ ಯೋಜನೆಗೆ ವ್ಯಾಪಕ ಸ್ಪಂದನೆ, ನೀವೂ ಅಕೌಂಟ್​ ಓಪನ್​ ಮಾಡಿಸಿ ಪ್ರತಿ ತಿಂಗಳು 5 ಸಾವಿರ ರೂಪಾಯಿ ಹಣ ಗಳಿಸಿ.!

 

ಮಹಿಳೆಯರನ್ನು ಆರ್ಥಿಕವಾಗಿ ಸಬಲವನ್ನಾಗಿಸುವ ಉದ್ದೇಶ ಹೊಂದಿರುವ ಈ ಯೋಜನೆಗೆ ವಯಸ್ಸಿನ ನಿರ್ಬಂಧ ಇಲ್ಲ. ಎರಡು ವರ್ಷದ ಅವಧಿಗೆ ಮಹಿಳೆಯರು ಠೇವಣಿ ಇಡುವುದಕ್ಕೆ ಅವಕಾಶವಿದ್ದು, ಕನಿಷ್ಠ 1 ಸಾವಿರ ರೂ. ಗಳಿಂದ 2 ಲಕ್ಷ ರೂ.ಗಳವರೆಗೆ ಠೇವಣಿ ಇಟ್ಟರೆ ಶೇ. 7.5ರ ಬಡ್ಡಿಯೊಂದಿಗೆ 2 ವರ್ಷದ ನಂತರ ಹಣ ಹಿಂದಿರುಗಿಸುವ ಯೋಜನೆ ಇದು.

 

ಬಾಗಲಕೋಟೆ : ಉಳಿತಾಯವೂ ಒಂದು ಆದಾಯ ಎಂಬ ತತ್ವದಂತೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ `ಮಹಿಳಾ ಸಮ್ಮಾನ್​​ ಉಳಿತಾಯ ಪ್ರಮಾಣಪತ್ರ’ ಯೋಜನೆಗೆ (Mahila Samman Saving Certificate-MSSC) ಕೋಟೆ ನಾಡು ಬಾಗಲಕೋಟೆಯಲ್ಲಿ ವ್ಯಾಪಕ ಸ್ಪಂದನೆ ದೊರಕುತ್ತಿದೆ. ಈ ಯೋಜನೆ ಲಾಭ ಪಡೆದುಕೊಳ್ಳಲು ಅನುಷ್ಠಾನ ಇಲಾಖೆಯಾಗಿರುವ ಅಂಚೆ ಇಲಾಖೆಗೆ ಮಹಿಳೆಯರು ತಂಡೋಪತಂಡವಾಗಿ ಭೇಟಿ ನೀಡಿ ಈ ಯೋಜನೆ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ.

ಆರ್ಥಿಕ ಸ್ವಾವಲಂಬಿ ಜೊತೆಗೆ ಸುರಕ್ಷಿತ ಲಾಭವನ್ನು ಒದಗಿಸುವ ಈ ಯೋಜನೆಯನ್ನು 2023 ರ ಕೇಂದ್ರ ಆ್ಯಯವ್ಯಯದಲ್ಲಿ ಘೋಷಣೆ ಮಾಡಲಾಗಿತ್ತು. ಈಗ ಈ ಯೋಜನೆಗೆ‌ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿರುವುದನ್ನು ನೋಡಿ ಬಾಗಲಕೋಟೆ ಅಂಚೆ ಇಲಾಖೆ ಈ ಯೋಜನೆಯನ್ನು ಇನ್ನಷ್ಟೂ ಜನರಿಗೆ ಹತ್ತಿರವಾಗಿಸಲು ಅಭಿಯಾನವನ್ನೇ ಆರಂಭಿಸಲು ಮುಂದಾಗಿದೆ. ಕಳೆದ ಒಂದೇ ತಿಂಗಳ ಅವಧಿಯಲ್ಲಿ 300 ಮಹಿಳೆಯರು ಖಾತೆ ತೆರೆದು ನಗದು ಠೇವಣಿ ಇರಿಸಿದ್ದಾರೆ.

ಈ ಯೋಜನೆಗೆ ಕಳೆದ ಮೇ ತಿಂಗಳಿನಿಂದ ಅಧಿಕ ಪ್ರಮಾಣದಲ್ಲಿ ಸ್ಪಂದನೆ ವ್ಯಕ್ತವಾಗುತ್ತಿದೆ, ಪ್ರತಿ ತಾಲೂಕಿನಲ್ಲಿ ಒಂದು ಹಳ್ಳಿಯನ್ನು ಈ ಯೋಜನೆಗಾಗಿ ಆಯ್ಕೆ ಮಾಡಿಕೊಂಡು ಅಂಥ ಹಳ್ಳಿಯಲ್ಲಿ ಕನಿಷ್ಠ 100 ಖಾತೆಯನ್ನು ತೆರೆಯಲು ಮೇಳ ನಡೆಸಲು ಅಂಚೆ ಇಲಾಖೆ ತೀರ್ಮಾನಿಸಿದೆ.

ಏನಿದು ಯೋಜನೆ?

ಮಹಿಳೆಯರನ್ನು ಆರ್ಥಿಕವಾಗಿ ಸಬಲವನ್ನಾಗಿಸುವ ಉದ್ದೇಶ ಹೊಂದಿರುವ ಈ ಯೋಜನೆಗೆ ವಯಸ್ಸಿನ ನಿರ್ಬಂಧ ಇಲ್ಲದಿರುವುದು ವಿಶೇಷ. ಈ ಯೋಜನೆಯಡಿಯಲ್ಲಿ ಎರಡು ವರ್ಷದ ಅವಧಿಗೆ ಮಹಿಳೆಯರು ಠೇವಣಿ ಇಡುವುದಕ್ಕೆ ಅವಕಾಶವಿದ್ದು, ಕನಿಷ್ಠ 1 ಸಾವಿರ ರೂ. ಗಳಿಂದ 2 ಲಕ್ಷ ರೂ.ಗಳವರೆಗೆ ಠೇವಣಿ ಇಟ್ಟರೆ ಶೇ. 7.5ರ ಆಕರ್ಷಕ ಬಡ್ಡಿಯೊಂದಿಗೆ 2 ವರ್ಷದ ನಂತರ ಹಣವನ್ನು ಹಿಂದಿರುಗಿಸುವ ಯೋಜನೆ ಇದಾಗಿದೆ.

ಚಿಕ್ಕಮಕ್ಕಳಿಂದ ಹಿಡಿದು ಎಲ್ಲ ವಯೋಮಾನದ ಹೆಣ್ಣುಮಕ್ಕಳಿಗಾಗಿ ಈ ಯೋಜನೆಯನ್ನು ರೂಪಿಸಲಾಗಿದ್ದು, 2025ರ ಮಾ.31ರಂದು ಯೋಜನೆ ಮುಕ್ತಾಯಗೊಳ್ಳಲಿದೆ. ಒಬ್ಬ ಮಹಿಳೆ ಹೆಸರಿನಲ್ಲಿ ಒಂದು ಠೇವಣಿ ಇಡಲು ಅವಕಾಶವಿದ್ದು, ಮತ್ತೊಮ್ಮೆ ಠೇವಣಿ ಇಡಬೇಕಾದರೆ ಮೂರು ತಿಂಗಳು ಬಿಟ್ಟು ಇಡಬಹುದಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಒಂದು ಬಾರಿ ಹಣ ಹಿಂಪಡೆಯುವ ಅವಕಾಶ

ಖಾತೆದಾರರು ಖಾತೆಯನ್ನು ತೆರೆದ ದಿನಾಂಕದಿಂದ ಒಂದು ವರ್ಷದ ಬಳಿಕ ಅಗತ್ಯವಿದ್ದರೆ ಬ್ಯಾಲೆನ್ಸ್​ನ ಗರಿಷ್ಠ ಶೇ.40 ರಷ್ಟು ಹಣವನ್ನು ಒಂದು ಬಾರಿ ಹಿಂಪಡೆಯುವ ಅವಕಾಶವೂ ಯೋಜನೆಯಡಿಯಲ್ಲಿ ಅಡಕವಾಗಿದೆ.

ಅದೇ ತೆರನಾಗಿ ವೈದ್ಯಕೀಯ ನೆರವಿಗಾಗಿ ಈ ಖಾತೆಯನ್ನು ಅಕಾಲಿಕವಾಗಿ ಮುಚ್ಚುವ ಅವಕಾಶವೂ ಇದ್ದು, ಹೀಗೆ ಅಕಾಲಿಕವಾಗಿ ಖಾತೆಯನ್ನು ಮುಚ್ಚಿದರೆ ಅಸಲಿನ ಮೇಲಿನ ಬಡ್ಡಿಯನ್ನು ಈ ಯೋಜನೆಗೆ ಅನ್ವಯಿಕ ದರದಲ್ಲಿಯೇ ಪಾವತಿಯಾಗಲಿದೆ.

ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಈ ಯೋಜನೆ ಪೂರಕ, ಹೀಗಾಗಿ ಒಂದು ಅಭಿಯಾನ ರೂಪದಲ್ಲಿ ಈ ಯೋಜನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕರಪತ್ರಗಳಲ್ಲಿ ಈ ಯೋಜನೆಯ ಸಮಗ್ರವಾದ ವಿವರ ನೀಡಿ ಕರಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಬಾಗಲಕೋಟೆ ಅಂಚೆ ಅಧೀಕ್ಷಕ ಎಚ್.ಬಿ. ಹಸಬಿ ವಿವರಿಸಿದರು.

ಅಂಚೆ ಮೇಲೆ ನಂಬಿಕೆ

ಮಾರುಕಟ್ಟೆಯಲ್ಲಿ ಇಂದು ಸಾಕಷ್ಟು ಆರ್ಥಿಕ ಸಂಸ್ಥೆಗಳು ಹುಟ್ಟಿಕೊಂಡಿವೆ, ಆಕರ್ಷಕ ಬಡ್ಡಿ ದರ ನೀಡುವುದಾಗಿ ಹೇಳುತ್ತವೆ, ಆದರೆ ಅವುಗಳ ಮೇಲೆ ಯಾವ ರೀತಿ ವಿಶ್ವಾಸವೂ ಇಲ್ಲ, ಹೀಗಾಗಿ ಅಂಚೆ ಇಲಾಖೆಯ ಮೇಲೆ ನಂಬಿಕೆ ಇದೆ, ನಮ್ಮ ಹಣವೂ ಸುರಕ್ಷಿತವಾಗಿರುತ್ತದೆ, ಉಳಿತಾಯಕ್ಕೆ ಪೂರಕವಾಗಿ ಬಡ್ಡಿ ಹಣವೂ ಸಿಗುತ್ತದೆ, ವಿಶ್ವಾಸಾರ್ಹತೆಯೂ ಮುಖ್ಯ ಎಂದು ಮಹಿಳಾ ಸಮ್ಮಾನ್ ಯೋಜನೆಯಡಿಯಲ್ಲಿ ಠೇವಣಿ ಇರಿಸಿದ ಮಹಿಳೆಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಗೃಹಲಕ್ಷ್ಮಿ ಯೋಜನೆಯ ಹೊಸ ನಿಯಮ ಈ ರೀತಿಯ ದಾಖಲಾತಿಯನ್ನು ಹೊಂದಿರುವ ಮಹಿಳೆಯರಿಗೆ ಮಾತ್ರ ಹಣ ಜಮಾ..!!

 

2023ರ ಚುನಾವಣೆಯಲ್ಲಿ ಕರ್ನಾಟಕದ ಎಲ್ಲಾ ಪಕ್ಷಗಳು ಹಲವಾರು ಆಶ್ವಾಸನೆಗಳನ್ನು ನೀಡಿದ್ದವು. ಅದರ ಬೆನ್ನಲ್ಲೇ ಗೆದ್ದು ಬೀಗಿದ ಕಾಂಗ್ರೆಸ್ ಪಕ್ಷವು, ಆಡಳಿತವನ್ನು ಪ್ರಾರಂಭಿಸಿದ ಕೆಲವೇ ಕೆಲವು ದಿನಗಳಿಂದಲೇ ಚುನಾವಣಾ ಪ್ರಣಾಳಿಕೆಯಲ್ಲಿ ತಾನು ನೀಡಿದ ವಾಗ್ದಾನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಮುಖಾಂತರ ಪ್ರತಿ ಮನೆಯ ಯಜಮಾನಿಗೆ ಮಾಸಿಕ ಹಣ ಎರಡು ಸಾವಿರ ರೂಪಾಯಿಗಳನ್ನು ನೀಡುವುದಾಗಿ ಹೇಳಿತ್ತು.

ಅಂತೆಯೇ ಕುಟುಂಬವನ್ನು ನಿರ್ವಹಿಸಲು ಸಹಾಯವಾಗುವಂತೆ ಮಹಿಳೆಗೆ ಹಣ ನೀಡುವುದಾಗಿ ಅಧಿಕೃತ ಘೋಷಣೆಯನ್ನು ಸರ್ಕಾರವು ಮಾಡಿದೆ ಎಂಬ ವಿಚಾರವು ನಮಗೆಲ್ಲರಿಗೂ ತಿಳಿದಿದೆ. ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವು ಆಗಸ್ಟ್ 15ರಿಂದ ಲಭ್ಯವಾಗಲಿದೆ ಎಂದು ಈಗಾಗಲೇ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.

ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಂಡು ಉತ್ತಮ ಆಹಾರ ಪೂರೈಕೆಯೊಂದಿಗೆ ಮಕ್ಕಳ ವಿದ್ಯಾಭ್ಯಾಸ ಮದುವೆ ಇನ್ನಿತರ ಖರ್ಚುಗಳನ್ನು ನಿಭಾಯಿಸಿಕೊಂಡು ಜೀವನ ಸಾಗಿಸುವುದು ಅನೇಕ ಕುಟುಂಬಗಳಿಗೆ ಕಷ್ಟವೇ ಸರಿ. ಕುಟುಂಬ ನಿರ್ವಹಣೆಗಾಗಿ ಮಹಿಳೆಯರಿಗೆ ಹಣವನ್ನು ನೀಡುವ ಭರವಸೆಯನ್ನು ಕಾಂಗ್ರೆಸ್ ಸರ್ಕಾರವು ನೀಡಿದೆ. ಆರ್ಥಿಕ ಬೆಂಬಲವನ್ನು ನೀಡುವಲ್ಲಿ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು ಅನುಮೋದನೆ ಕೂಡ ದೊರಕಿದೆ.

ಈಗಾಗಲೇ ಸರ್ಕಾರವು ಅಧಿಕೃತ ವೆಬ್ಸೈಟ್ನಲ್ಲಿ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸಲು ನಮೂನೆಯನ್ನು ಬಿಡುಗಡೆ ಮಾಡಿದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜೂನ್ 15 2023 ರಿಂದ ಪ್ರಾರಂಭವಾಗಲಿದ್ದು ಜುಲೈ 15 2019 ರವರೆಗೆ ಸಮಯಾವಕಾಶವಿದೆ. ಜುಲೈ 15 ರಿಂದ ಆಗಸ್ಟ್ 15 ರವರೆಗೆ ಸಲ್ಲಿಸಿರುವ ಅರ್ಜಿಗಳ ಪರಿಶೀಲನ ಕಾರ್ಯವು ನಡೆಯಲಿದ್ದು, ಬಳಿಕ ಯೋಜನೆಯ ಫಲವು ಲಭ್ಯವಾಗಲಿದೆ.

ಗೃಹಲಕ್ಷ್ಮಿ ಯೋಜನೆಯ ಮೂಲಕ ಆರ್ಥಿಕ ನೆರವನ್ನು ಪಡೆಯಲು ಇಚ್ಚಿಸುವ ಮಹಿಳೆಯರು ಮೊದಲಿಗೆ ಅಧಿಕೃತ ವೆಬ್ಸೈಟ್ ನಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಸಬೇಕು. ಜೊತೆಯಲ್ಲಿ ಅಗತ್ಯ ದಾಖಲಾತಿಗಳನ್ನು ಲಗತ್ತಿಸಬೇಕು. ಒಬ್ಬರಿಗಿಂತ ಹೆಚ್ಚು ಮಹಿಳೆಯರನ್ನು ಹೊಂದಿರುವ ಕುಟುಂಬದ ಯಜಮಾನಿಯನ್ನು ಸದಸ್ಯರೇ ತೀರ್ಮಾನಿಸಿಕೊಂಡಿರಬೇಕು.

ಎಪಿಎಲ್ ಅಥವಾ ಬಿಪಿಎಲ್ ಕಾರ್ಡನ್ನು ಕುಟುಂಬವು ಹೊಂದಿರಬೇಕು. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಡೀಟೇಲ್ಸ್ ಅನ್ನು ಸರಿಯಾಗಿ ನೀಡಿರುವ ಕುಟುಂಬದ ಯಜಮಾನೀಯ ಖಾತೆಗೆ ನೇರವಾಗಿ ಸರ್ಕಾರದಿಂದ ಮಾಸಿಕ 2,000ಗಳಷ್ಟು ಹಣವು ಜಮಾ ಆಗಲಿದೆ. ಇದೊಂದು ಸಣ್ಣ ಕೆಲಸವನ್ನು ಮಾಡಿದರೆ ಮಾತ್ರ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದಂತೆ. ಏನೆಂದು ಯೋಚಿಸುತ್ತಿದ್ದೀರಾ?

ಅದೇನೆಂದರೆ ಯೋಜನೆಯ ಸೌಲಭ್ಯವನ್ನು ಪಡೆಯಲು ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರಬೇಕು.
ಲಿಂಕ್ ಮಾಡುವ ವಿಧಾನ :
• ಮೊದಲಿಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ : https://resident.uidai.gov.in/bank-mapper
• ಬಳಿಕ ಚೆಕ್ ಆಧಾರ್ ಬ್ಯಾಂಕ್ ಸ್ಟೇಟಸ್ ಎಂದು ಬರೆದಿರುವ ಪುಟ ಒಂದು ತೆರೆದುಕೊಳ್ಳುತ್ತದೆ. ಪುಟದ ಕೆಳಭಾಗದಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ನೀಡಿರುವ ಕ್ಯಾಪ್ಚಾವನ್ನು ಬರೆಯಬೇಕು. ಬಳಿಕ ಸೆಂಡ್ ಒಟಿಪಿಯನ್ನು ಕ್ಲಿಕ್ ಮಾಡಬೇಕು. ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬಂದಿರುವ ಓಟಿಪಿಯನ್ನು ಪುಟದಲ್ಲಿ ಬರೆದು ಸಬ್ಮಿಟ್ ಮಾಡಬೇಕು.

• ಬಳಿಕ ತೆರೆದುಕೊಳ್ಳುವ ಪುಟದಲ್ಲಿ ಬ್ಯಾಂಕ್ ಸೀಡಿಂಗ್ ಸ್ಟೇಟಸ್ ಆಕ್ಟಿವ್ ಎಂದು ಬರೆದಿದ್ದು, ಖಾತೆಯನ್ನು ಹೊಂದಿರುವ ಬ್ಯಾಂಕಿನ ಹೆಸರು ಕೂಡ ಕೆಳಗೆ ಕಾಣಿಸುತ್ತದೆ. ಇದು ಆಧಾರ್ ಹಾಗೂ ಬ್ಯಾಂಕ್ ಖಾತೆಯು ಜೋಡಣೆ ಆಗಿದೆ ಎಂದರ್ಥ.
• ಇನ್ ಆಕ್ಟಿವ್ ಎಂದು ಬರೆದಿದ್ದರೆ ಬ್ಯಾಂಕ್ ಖಾತೆಗೆ ಭೇಟಿ ನೀಡಿ ಅಗತ್ಯ ಅರ್ಜಿಗಳನ್ನು ಭರ್ತಿ ಮಾಡಿ ಆಧಾರ್ ಕಾರ್ಡನ್ನು ಖಾತೆಗೆ ಲಿಂಕ್ ಮಾಡಿಸಿಕೊಳ್ಳಬೇಕು.

ನೆನಪಿನಲ್ಲಿಡಿ : ಗೃಹಲಕ್ಷ್ಮಿ ಯೋಜನೆಯಿಂದ ಸೌಲಭ್ಯವನ್ನು ಪಡೆಯಲು ಇಚ್ಚಿಸುವ ಕುಟುಂಬದ ಯಜಮಾನ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ ನೊಂದಿಗೆ ಜೋಡಣೆಯಾಗಿರಬೇಕು. ಸರ್ಕಾರವು ಅಧಿಕೃತ ಆದೇಶವನ್ನು ಹೊರಡಿಸಿರುವುದರಿಂದ ಮತ್ತೊಮ್ಮೆ ಖಚಿತಪಡಿಸಿಕೊಂಡು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಉತ್ತಮ.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*

ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಮಹಿಳೆಯರ ಬಳಿ ಇರಲೇಬೇಕು ಈ ದಾಖಲೆಗಳು… ಅದ್ಯಾವುವು ಗೊತ್ತಾ.?

 

ಕಾಂಗ್ರೆಸ್‌ ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಎಲ್ಲ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣವನ್ನು ಘೋಷಣೆ ಮಾಡಿದೆ. ಈ ಯೋಜನೆಗೆ ಯಾವುದೇ ನಿರ್ಬಂಧವನ್ನು ರಾಜ್ಯ ಸರ್ಕಾರ ವಿಧಿಸಿಲ್ಲ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣದ ಯೋಜನೆ ‘ಶಕ್ತಿ’ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಜೂನ್‌ 11 ರಿಂದ ಹವಾ ನಿಯಂತ್ರಿತ ಬಸ್‌ಗಳು ಮತ್ತು ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಪ್ರಯಾಣ ಮಾಡಬಹುದು ಎಂದು ಘೋಷಿಸಿದ್ದಾರೆ. ಪುರುಷರಿಗೆ ಶೇ.50ರಷ್ಟು ಮೀಸಲಾತಿ ಘೋಷಿಸಲಾಗಿದೆ.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಅದಲ್ಲದೇ ಕರ್ನಾಟಕದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣಿಸಬಹುದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಮಹಿಳೆಯರ ಉಚಿತ ಪ್ರಯಾಣಕ್ಕೆ ನಿಯಮಗಳೇನು?

* ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣ
* ಎಸಿ, ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ ಎಲ್ಲ ಬಸ್‌ಗಳಲ್ಲೂ ಉಚಿತ ಪ್ರಯಾಣ
* ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಶೇ.50ರಷ್ಟು ಪುರುಷರಿಗೆ ಮೀಸಲಾತಿ ಘೋಷಣೆ
* ಬಿಎಂಟಿಸಿ ಬಸ್‌ಗಳಲ್ಲಿ ಮಾತ್ರ ಪುರುಷರಿಗೆ ಮೀಸಲಾತಿ ಇಲ್ಲ
* ಜೂನ್‌ 11ರಿಂದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಪ್ರಾರಂಭ
* ಕರ್ನಾಟಕದ ಎಲ್ಲ ಮಹಿಳೆಯರಿಗೂ ‘ಶಕ್ತಿ’ ಯೋಜನೆ ಅನ್ವಯ
* ಕರ್ನಾಟಕ ರಾಜ್ಯದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣಿಸಲು ಅವಕಾಶ

ಜೂನ್‌ 11ರಿಂದ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣ ಘೋಷಿಸಲಾಗಿದೆ. ಆದರೆ, ಟಿಕೆಟ್‌ ನೀಡುವ ಬಗ್ಗೆ ಇನ್ನು ಚರ್ಚೆಯಾಗಿಲ್ಲ. ದಿಲ್ಲಿ ಮಾದರಿಯಲ್ಲಿ ಪಿಂಕ್‌ ಟಿಕೆಟ್‌ ಅಥವಾ ಬಸ್‌ ಪಾಸ್‌ ವಿತರಿಸುತ್ತಾರೋ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಗುರುತಿನ ಚೀಟಿಗಳನ್ನು ಪರಿಶೀಲಿಸಿ ಎಲ್ಲ ಮಹಿಳೆಯರಿಗೂ ಬಸ್‌ ಪಾಸ್‌ ವಿತರಿಸುವ ಸಾಧ್ಯತೆ ಇದೆ.

ಉಚಿತವಾಗಿ ಪ್ರಯಾಣಿಸಲು ಈ ದಾಖಲೆಗಳು ಕಡ್ಡಾಯ

ಹೌದು, ಉಚಿತವಾಗಿ ಪ್ರಯಾಣಿಸಲು ಸ್ಮಾರ್ಟ್‌ ಕಾರ್ಡ್‌ ಅಗತ್ಯವಾಗಿದೆ. ಇದನ್ನು ಮಾಡಿಸಿದರೆ ಅದು ನಮ್ಮ ಕೈ ತಲುಪಲು 3 ತಿಂಗಳಾದ್ರೂ ಬೇಕಾಗುತ್ತದೆ. ಹೀಗಾಗಿ, ಅಲ್ಲಿಯವರೆಗೂ ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಡ್ರೈವಿಂಗ್‌ ಲೈಸೆನ್ಸ್‌, ವಾಸಸ್ಥಳ ನಮೂದಿಸಿರುವ ಗುರುತಿನ ಚೀಟಿ, ಅಂಗವಿಕಲ, ಹಿರಿಯ ನಾಗರೀಕರ ಕಲ್ಯಾಣ ಇಲಾಖೆ ನೀಡಿರುವ ಗುರುತಿನ ಪತ್ರ ಅಥವಾ ಇವುಗಳಲ್ಲಿ ಯಾವುದಾದರೊಂದು ಗುರುತಿನ ಪತ್ರ ಭೌತಿಕವಾಗಿ ಅಥವಾ ಡಿಜಿಲಾಕರ್‌ನಲ್ಲಿ ಇರಬೇಕು. ಈ ಗುರುತಿನ ಚೀಟಿಗಳಲ್ಲಿ ಫೋಟೋ ಮತ್ತು ವಾಸಸ್ಥಳ ನಮೂದಾಗಿರಬೇಕು.( ಸ್ಮಾರ್ಟ್‌ ಕಾರ್ಡ್‌ ಬರುವವರೆಗೂ ಮಾತ್ರ).

ಸ್ಮಾರ್ಟ್‌ಕಾರ್ಡ್‌ ಬರೋವರೆಗೂ ಉಚಿತ ಪ್ರಯಾಣ ಇಲ್ವಾ?

ಇಲ್ಲ, ಸ್ಮಾರ್ಟ್‌ಕಾರ್ಡ್‌ ವಿತರಣೆ ತಡವಾಗುತ್ತದೆ. ಈ ಹಿನ್ನೆಲೆ ಮಹಿಳೆಯರಿಗೆ ಶೂನ್ಯ ದರದ ಟಿಕೆಟ್‌ ನೀಡಲು ಸೂಚಿಸಲಾಗಿದೆ. ಆದ್ದರಿಂದ ಸ್ಮಾರ್ಟ್‌ಕಾರ್ಡ್‌ ಮಹಿಳೆಯರ ಕೈ ಸೇರೋವರೆಗೂ ಕೂಡ ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಬಹುದು.

ಅರ್ಜಿ ಸಲ್ಲಿಕೆಗೆ ಅಥವಾ ಸ್ಮಾರ್ಟ್‌ಕಾರ್ಡ್‌ ಪಡೆಯಲು ಹಣ ನೀಡಬೇಕಾ?

ಇಲ್ಲ, ಅರ್ಜಿ ಸಲ್ಲಿಕೆಗೆ ಯಾವುದೇ ಹಣವನ್ನು ಮಹಿಳೆಯರು ನೀಡಬೇಕಿಲ್ಲ. ನೀವೇ ಸೇವಾಸಿಂಧು ಪೋರ್ಟಲ್‌ನಲ್ಲಿ ಲಾಗಿನ್‌ ಆಗಿ ಅರ್ಜಿ ಸಲ್ಲಿಸಬಹುದು. ಇನ್ನು, ಸ್ಮಾರ್ಟ್‌ಕಾರ್ಡ್‌ ಪಡೆಯಲು ಸದ್ಯದ ಮಾಹಿತಿ ಪ್ರಕಾರ ಸರ್ಕಾರ ಯಾವುದೇ ಶುಲ್ಕವನ್ನು ವಿಧಿಸಿಲ್ಲ.

ಲಗೇಜ್‌ಗೆ ಏನಾದ್ರೂ ಶುಲ್ಕ ಇದ್ಯಾ?

ಸಾಮಾನ್ಯವಾಗಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ಎಲ್ಲರಿಗೂ ಉಚಿತ ಲಗೇಜ್‌ ಮಿತಿ ಇದೆ. ಅದನ್ನು ಹೊರತುಪಡಿಸಿ ಹೆಚ್ಚು ಲಗೇಜ್‌ ಇದ್ದರೆ ಅದರ ಶುಲ್ಕವನ್ನು ನೀವು ಪಾವತಿಸಬೇಕು.

*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*