Home Blog Page 210

ಬಂದ್ ಆಗಲಿವೆ ಈ ಬ್ಯಾಂಕ್ ಗಳು, ಇಲ್ಲಿ ಹಣ ಇಟ್ಟವರ ಕಥೆ ಗೋವಿಂದ, ನೀವು ಸಹ ಖಾತೆ ಹೊಂದಿದ್ದರೆ ಈಗಲೇ ನೋಡಿ…

 

RBI ಈಗ ತನ್ನ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದೆ. ಯಾಕೆಂದರೆ ಈಗ ಭಾರತ ಹಳ್ಳಿ ಹಳ್ಳಿ ಪರಿಗೂ ಕೂಡ ಬ್ಯಾಂಕ್ ಸೌಲಭ್ಯ ಲಭಿಸಿದೆ ಬ್ಯಾಂಕ್ಗಳು ಜನರಿಗೆ ವಂಚಿಸುವ ಪ್ರಕರಣವನ್ನು ತಡೆಯುವ ಸಲುವಾಗಿ ಅವುಗಳನ್ನು ಕಾರ್ಯ ಪ್ರಕ್ರಿಯೆಯನ್ನು ಪರೀಕ್ಷಿಸಿ ಅವ್ಯವಹಾರಗಳಾಗಿದ್ದ ಪಕ್ಷದಲ್ಲಿ ಕೆಲವೊಮ್ಮೆ ತಂಡಗಳನ್ನು ವಿಧಿಸುವ ಮೂಲಕ ನಿಯಮಗಳ ಉಲ್ಲಂಘನೆ ಆಗಿದ್ದ ಸಂದರ್ಭದಲ್ಲಿ ಅವುಗಳನ್ನು ಮುಚ್ಚುವ ಕ್ರಮ ಕೈಗೊಳ್ಳುತ್ತದೆ.

ಈಗಾಗಲೇ RBI ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಬ್ಯಾಂಕುಗಳ ಬಾಗಿಲಿಗೆ ಬೀಗ ಹಾಕಿದೆ. ಈ ವರ್ಷದಲ್ಲೇ 2022 ಮತ್ತು 23ನೇ ಸಾಲಿನಲ್ಲಿ ಈ ರೀತಿ RBI ನಿಯಮಗಳನ್ನು ಉಲ್ಲಂಘಿಸಿದ 8 ಸಹಕಾರಿ ಕೋ ಆಪರೇಟಿವ್ ಬ್ಯಾಂಕ್ ಗಳ ಪರವಾನಿಗಳನ್ನು ರದ್ದುಗೊಳಿಸಿ, ಮಾರ್ಚ್ 31 2023 ರಂದು 8 ಬ್ಯಾಂಕಗಳ ಹೆಸರನ್ನು ಪಟ್ಟಿಮಾಡಿ, ಘೋಷಣೆ ಸಹ ನೀಡಿತ್ತು.

ಇದಾಗಿ ತಿಂಗಳು ಕಳೆಯುವ ಅಷ್ಟರಲ್ಲಿ ಇನ್ನು ನಾಲ್ಕು ಬ್ಯಾಂಕುಗಳಿಗೆ ಇದೇ ಪರಿಸ್ಥಿತಿ ಬಂದಿದೆ. ಬ್ಯಾಂಕ್ ವ್ಯವಹಾರದಲ್ಲಿ ಲೋಪಗಳು ಕಂಡುಬಂದಿರುವ ಈ ಬ್ಯಾಂಕುಗಳಿಗೆ 44 ಲಕ್ಷಗಳ ದಂಡ ವಿಧಿಸುವ ಮೂಲಕ ಈ ಬಾರಿ ಎಚ್ಚರಿಕೆಯನ್ನು ನೀಡಿದೆ. ಇದಕ್ಕೆ ಹೇಳಿಕೆ ಕೂಡ ನೀಡಿರುವ RBI ಬ್ಯಾಂಕುಗಳು RBI ನ ನಿಯಮಗಳಿಗೆ ಸರಿಯಾಗಿ ನಡೆದುಕೊಳ್ಳುತ್ತಿವೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬೇಕು.

ಮತ್ತು ಆಗಾಗ ಅವುಗಳ ಆರ್ಥಿಕ ವ್ಯವಹಾರ ಯಾವ ಉದ್ದೇಶವನ್ನು ಅನುಸರಿಸಿದೆ ಎನ್ನುವುದನ್ನು ಕೂಡ ನಾವು ಪರಿಶೀಲಿಸಿ ಖಚಿತಗೊಳಿಸಿಕೊಳ್ಳಬೇಕು‌. ಒಂದು ವೇಳೆ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಬಗ್ಗೆ ವರದಿ ಆದಾಗ ಆ ಬ್ಯಾಂಕ್ಗಳಿಗೆ ಈ ರೀತಿ ಶಿಕ್ಷೆ ನೀಡಲೇಬೇಕಾಗುತ್ತದೆ ಎಂದು ಸ್ಪಷ್ಟೀಕರಣ ಕೊಟ್ಟಿದೆ.

ಅದರ ಅನುಸಾರ ಈಗ RBI ನಿಂದ ದಂಡ ಹಾಕಿಸಿಕೊಂಡಿರುವ ಸಹಕಾರಿ ಬ್ಯಾಂಕ್ ಗಳ ವಿವರ ಈ ರೀತಿ ಇದೆ:-
● ತಮಿಳುನಾಡಿನ ಚೆನ್ನೈ ಮೂಲದ ತಮಿಳುನಾಡು ಸ್ಟೇಟ್ ಅಪೆಕ್ಸ್ ಕೋ ಆಪರೇಟಿವ್ ಬ್ಯಾಂಕಿಗೆ 16 ಲಕ್ಷ ದಂಡ ವಿಧಿಸಿ RBI ತನ್ನ ನಿಯಮ ಉಲ್ಲಂಘನೆ ಮಾಡಿರುವಂತಹ ವಿರುದ್ಧ ಕ್ರಮ ಕೈಗೊಂಡಿದೆ.
● ನಿಗದಿತ ಅವಧಿ ಒಳಗೆ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಠೇವಣಿಗಳನ್ನು ವರ್ಗಾಯಿಸಿದ ಬಾಂಬೆ ಮಾರ್ಕೆಟ್ ಕೋ ಆಪರೇಟಿವ್ ಬ್ಯಾಂಕಿಗೆ 13 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

● ಠೇವಣಿಗಳ ಮೇಲೆ ವಿಧಿಸುವ ಬಡ್ಡಿದರಗಳ ನಿರ್ದೇಶನಗಳನ್ನು ಸರಿಯಾಗಿ ಪಾಲಿಸದೆ ಇದ್ದಿದ್ದಕ್ಕಾಗಿ ಪುಣೆ ಮೂಲತ ಜನತಾ ಸಹಕಾರಿ ಬ್ಯಾಂಕಿಗೆ 13 ಲಕ್ಷ ದಂಡ ವಿಧಿಸಿದೆ.
● ನಿಗದಿತ ಸಮಯದೊಳಗೆ ಮಾಹಿತಿಗಳನ್ನು ನಬಾರ್ಡ್ ಗೆ ವರ್ಗಾವಣೆ ಮಾಡದೆ ವಿಳಂಬ ಮಾಡಿದ ಆರೋಪದ ಮೇಲೆ ಮತ್ತು ಇನ್ನು ಕೆಲ ನಿಯಮಗಳ ಉಲ್ಲಂಘನೆ ಆಗಿರುವುಕ್ಕಾಗಿ ರಾಜಸ್ಥಾನ ಮೂಲಕ ಬರಾನ್ ನಾಗರಿಕ ಸಹಕಾರ ಬ್ಯಾಂಕ್ 2 ಲಕ್ಷಗಳ ದಂಡ ವಿಧಿಸಿದೆ.

2022- 23ನೇ ಸಾಲಿನಲ್ಲಿ RBI ಪರವಾನಗಿ ರದ್ದು ಮಾಡಿದ ಬ್ಯಾಂಕ್ ಗಳ ವಿವರ:-
● ಮುಧೋಳ ಕೋ ಆಪರೇಟಿವ್ ಬ್ಯಾಂಕ್
● ಮಿಲತ್ ಕೋ ಆಪರೇಟಿವ್ ಬ್ಯಾಂಕ್
● ಶ್ರೀ ಆನಂದ್ ಕೋ ಆಪರೇಟಿವ್ ಬ್ಯಾಂಕ್
● ರೂಪಾಯಿ ಸಹಕಾರಿ ಬ್ಯಾಂಕ್
● ಡೆಕ್ಕನ್ ಕಾರ್ಬನ್ ಕೋ ಆಪರೇಟಿವ್ ಬ್ಯಾಂಕ್
● ಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್
● ಸೇವಾ ವಿಕಾಸ್ ಕೋ ಆಪರೇಟಿವ್ ಬ್ಯಾಂಕ್
● ಬಾಬಾಜಿ ದಿನಾಂಕ ಮಹಿಳಾ ಅರ್ಬನ್ ಬ್ಯಾಂಕ್.

ಶತ್ರುಗಳ ಪರಾಜಯ ಆಗಬೇಕೆ ದೇವಸ್ಥಾನಕ್ಕೆ ಹೋಗಿ ಈ ಒಂದು ಚಿಕ್ಕ ಕೆಲಸ ಮಾಡಿ ಸಾಕು. ವಾರದೊಳಗೆ ನೀವು ಅಂದುಕೊಂಡ ಕೆಲಸ ನೆರವೇರುತ್ತದೆ.

 

ಜೀವನದಲ್ಲಿ ಶತ್ರುಗಳು ಯಾರಿಗಿಲ್ಲ ಹೇಳಿ. ಜೀವನದಲ್ಲಿ ಶತ್ರುಗಳು ಆಗಲು ನಾವು ಇನ್ನೊಬ್ಬರಿಗೆ ಕೆಟ್ಟದ್ದು ಮಾಡಿರಬೇಕು ಅಥವಾ ಬಯಸಿರಬೇಕು ಎಂದು ಇಲ್ಲ. ನಾವು ಮಾಡುವ ಒಳ್ಳೆಯ ಕೆಲಸಗಳು ನಮ್ಮ ಒಳ್ಳೆಯತನ ಅಥವಾ ನಮ್ಮ ಜನಪ್ರಿಯತೆ ಅಥವಾ ನಾವು ಜೀವನದಲ್ಲಿ ಬೆಳೆಯುತ್ತಿರುವ ವೇಗ ಇವುಗಳಿಂದಲೂ ಕೂಡ ಶತ್ರುಗಳು ಉಂಟಾಗುತ್ತಾರೆ.

ಅಥವಾ ಇನ್ನೊಬ್ಬರ ತಪ್ಪುಗಳನ್ನು ನಾವು ತಿದ್ದಲು ಹೋದಾಗ ಇನ್ನೊಬ್ಬರಿಗೆ ಒಳಿತನ್ನು ಮಾಡುವ ಸಲುವಾಗಿ ಸ್ವಲ್ಪ ಕಟ್ಟುವಾಗಿ ನಡೆದುಕೊಂಡಾಗ ನಮ್ಮ ಮನಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳದೆ ನಮ್ಮ ಉದ್ದೇಶವನ್ನು ಅವರು ಅರಿಯದೆ ಹೋದಾಗ ನಮ್ಮನ್ನು ಶತ್ರುಗಳೆಂದು ಭಾವಿಸುತ್ತಾರೆ. ಒಮ್ಮೆ ಈ ರೀತಿ ಅವರ ಬುದ್ಧಿಗೆ ನಾವು ಶತ್ರುಗಳು ಎನಿಸಿದರೆ ನಂತರ ಅವರಿಂದ ನಮಗೆ ಕಷ್ಟ ಕಾರ್ಪಣ್ಯಗಳು ತಪ್ಪಿದ್ದಲ್ಲ.

ಈ ರೀತಿ ವಿನಾಕಾರಣ ನಮ್ಮ ಬದುಕಿಗೆ ಬಂದು ತೊಂದರೆ ಕೊಡುವ ಶತ್ರುಗಳು ಎಲ್ಲರಿಗೂ ಇದ್ದೇ ಇರುತ್ತಾರೆ. ಅದರಲ್ಲಂತೂ ಉದ್ಯೋಗ ಸ್ಥಳದಲ್ಲಿ ಕಾಂಪಿಟೇಶನ್ ಆಗಿ ಅಥವಾ ಆಸ್ತಿ ವಿವರದ ವಿಚಾರಕ್ಕಾಗಿ ಕುಟುಂಬಗಳ ಮನಸ್ತಾಪದ ಕಾರಣ ಶತ್ರುಗಳು ಆದಾಗಲಂತೂ ಅವರ ಕೋಪ ಅತಿರೇಕಕ್ಕೆ ಹೋಗಿರುತ್ತದೆ. ಅವರು ಸದಾ ನಮಗೆ ಕೇಡನ್ನೇ ಬಯಸುತ್ತಿರುತ್ತಾರೆ ಮತ್ತು ಸಾಧ್ಯವಾದಷ್ಟು ನಮ್ಮನ್ನು ತುಳಿಯುವ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.

ಇಂತಹ ಸಮಯದಲ್ಲಿ ಅವರಿಂದ ತಪ್ಪಿಸಿಕೊಳ್ಳಬೇಕು ಅಥವಾ ಆ ಸಮಸ್ಯೆಯಿಂದ ಪರಿಹಾರ ಆಗಬೇಕು ಎನ್ನುವ ಕಾರಣಕ್ಕೆ ನಾವು ಸಹ ಅವರಷ್ಟೇ ಕೆಳಮಟ್ಟಕ್ಕೆ ಇಳಿದು ಕೆಟ್ಟದ್ದು ಮಾಡಲು ಅಥವಾ ಅವರಂತೆ ನಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆಗ ಭಗವಂತನ ಮೊರೆ ಹೋಗಿ ಆತನಲ್ಲಿ ಪ್ರಾರ್ಥಿಸಿಕೊಳ್ಳಲು ಅಷ್ಟೇ ನಮಗೆ ಸಾಧ್ಯವಾಗುತ್ತದೆ. ನೀವು ದೇವಸ್ಥಾನಕ್ಕೆ ಹೋಗಿ ದೇವರಲ್ಲಿ ಈ ವಿಧಾನವಾಗಿ ಕೇಳಿಕೊಳ್ಳುವುದರಿಂದ ನೀವು ಅವರಿಗೆ ಏನು ಮಾಡದೇ ಇದ್ದರೂ ಅವರ ಪರಾಜಯ ಉಂಟಾಗುತ್ತದೆ.

ಸಾಮಾನ್ಯವಾಗಿ ಎಲ್ಲರೂ ಸಹ ಪ್ರತಿ ದಿನ ದೇವಸ್ಥಾನಕ್ಕೆ ಹೋಗುತ್ತಿರುತ್ತೇವೆ. ಸಾಧ್ಯವಾಗದಿದ್ದರೆ ವಿಶೇಷ ದಿನಗಳಲ್ಲಾದರೂ ದೇವಸ್ಥಾನಕ್ಕೆ ಹೋಗುತ್ತಾ ಇರುತ್ತೇವೆ. ನಮ್ಮ ಇಷ್ಟ ದೇವರ ದೇವಸ್ಥಾನವಾದರಂತೂ ಲೆಕ್ಕವಿರದಷ್ಟು ಬಾರಿ ಹೋಗುತ್ತಲೇ ಇರುತ್ತೇವೆ. ಈ ರೀತಿ ದೇವಸ್ಥಾನಕ್ಕೆ ಹೋದಾಗ ದೇವಾಲಯಗಳ ಪ್ರದಕ್ಷಿಣೆ ಹಾಕುವುದು ಹಾಗೂ ವಿಗ್ರಹಗಳ ಸುತ್ತ ಪ್ರದಕ್ಷಿಣೆ ಹಾಕುವುದು ಮಾಮೂಲಿ.

ಇಂತಹ ಸಮಯದಲ್ಲಿ ನೀವು ನಿಮ್ಮ ಶತ್ರುಗಳ ಕಾಟದಿಂದ ತಪ್ಪಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ದೇವಸ್ಥಾನಕ್ಕೆ ಹೋಗಿದ್ದರೆ ಅಥವಾ ವಿನಾಕಾರಣ ನಿಮಗೆ ತೊಂದರೆ ಕೊಡುತ್ತಿರುವವರು ಸೋಲಬೇಕು ಅವರಿಗೆ ಪರಾಜಯ ಆಗಬೇಕು ಇದು ನಿಮ್ಮ ಮನಸ್ಸಿನಲ್ಲಿದ್ದರೆ ನೀವು ದೇವರಿಗೆ ಪ್ರದಕ್ಷಿಣೆ ಹಾಕುವಾಗ ನಿಮ್ಮ ಮನಸ್ಸಿನಲ್ಲಿ ಅದನ್ನೇ ಕೇಳಿಕೊಳ್ಳಿ ಅದೇ ರೀತಿಯಾಗಿ ನೀವು ಪ್ರಾರ್ಥನೆ ಮಾಡಿ.

ಈ ರೀತಿ ಕೇಳಿಕೊಳ್ಳುತ್ತಾ ಪ್ರದಕ್ಷಿಣೆ ಹಾಕುವಾಗ ಮೂರು ಬಾರಿ ಬದಲು ಏಳು ಬಾರಿ ಪ್ರದಕ್ಷಿಣೆ ಹಾಕಿ. ಈ ರೀತಿ ಏಳು ಬಾರಿ ಪ್ರದಕ್ಷಿಣೆ ಹಾಕಿ ಮನಸ್ಸಿನಲ್ಲಿ ಶತ್ರುಗಳ ಕಾಟದಿಂದ ಕಾಪಾಡು ದೇವರೇ ಎಂದು ಕೇಳಿಕೊಂಡರೆ ಅಷ್ಟೇ ಸಾಕು, ನಿಮ್ಮ ಶತ್ರುಗಳು ನಾಶವಾಗಿ ಬಿಡುತ್ತಾರೆ. ಅಂತಹದೊಂದು ಶಕ್ತಿ ಈ ಉಪಾಯಕ್ಕೆ ಇದೆ, ವಾರದ ಯಾವ ದಿನ ಬೇಕಾದರೂ ಇದನ್ನು ಮಾಡಬಹುದು ಅಥವಾ ಪ್ರತಿದಿನ ಕೂಡ ಮಾಡಬಹುದು. ಅದರಲ್ಲೂ ಉಗ್ರ ನರಸಿಂಹ ಮತ್ತು ವೀರಭದ್ರ ಸ್ವಾಮಿಯಂತಹ ದೇವರ ದೇವಾಲಯಗಳಲ್ಲಿ ಈ ರೀತಿ ಮಾಡುವುದರಿಂದ ಇದರ ಪ್ರಭಾವ ಇನ್ನೂ ಹೆಚ್ಚು. ಇನ್ನು ಮುಂದೆ ನಿಮ್ಮ ಶತ್ರುಗಳ ಕಾಟದಿಂದ ತಪ್ಪಿಸಿಕೊಳ್ಳಲು ಈ ಉಪಾಯ ಮಾಡಿ ಸಾಕು.

ಗೌಡ್ರು ಹುಡುಗನ್ನ ಹುಡುಕಿ ಕೊಟ್ರೆ ಗ್ಯಾರೆಂಟಿ ಮದ್ವೆ ಆಗ್ತೀನಿ ಎಂದ ನಟಿ ರಮ್ಯಾ. ಈ ವೈರಲ್ ವಿಡಿಯೋ ನೋಡಿ.!

 

ಸ್ಯಾಂಡಲ್ ಪದ್ಮಾವತಿ ಕ್ರೇಜಿ ಕ್ವೀನ್ ರಮ್ಯಾ ಅವರು ಸದ್ಯಕ್ಕೆ ಈಗ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕಿಯಾಗಿ ವಿಧಾನಸಭಾ ಎಲೆಕ್ಷನ್ ಗೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ರಮದ ವೇಳೆ ಕ್ಯಾಮರಾ ಗೆ ಸಿಕ್ಕ ರಮ್ಯಾ ಅವರಿಗೆ ಮೀಡಿಯಾದವರಿಂದ ಪ್ರಶ್ನೆಗಳ ಸುರಿಮಳೆಯೇ ಸುರಿಯಿತು.

ರಮ್ಯಾ ಅವರು ಎಲೆಕ್ಷನ್ ಇದ್ದಾಗ ಮಾತ್ರ ಮಂಡ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವುದರಿಂದ ಹಿಡಿದು ಅಂಬರೀಶ್ ಅವರು ಸ.ತ್ತಾ.ಗ ಯಾಕೆ ಬರಲಿಲ್ಲ ಮತ್ತು ಸಿನಿಮಾ ರಂಗಕ್ಕೆ ಮತ್ತೆ ಬಂದಿದ್ದು ಯಾಕೆ, ಮುಂದೆ MP ಅಥವಾ MLA ಯಾವ ಸೀಟ್ ಕೇಳುತ್ತೀರಿ, ಮಂಡ್ಯದಲ್ಲೇ ಮನೆ ಮಾಡುವ ಬಗ್ಗೆ ಭರವಸೆ ಕೊಟ್ಟಿರಿ ಅದು ಏನಾಯಿತು ಎನ್ನುವ ಪ್ರಶ್ನೆಯಿಂದ ಹಿಡಿದು ಅವರ ಮದುವೆ ವಿಚಾರ ತನಕ ಸಾಕಷ್ಟು ಪ್ರಶ್ನೆಗಳು ಮೀಡಿಯಾದವರಿಂದ ಎದುರಾಯಿತು.

ಎಲ್ಲರಿಗೂ ಬಹಳ ಸ್ವಾರಸ್ಯಕರವಾದ ಉತ್ತರ ಎನಿಸಿದ್ದು ರಮ್ಯಾ ಅವರ ಮದುವೆ ಬಗ್ಗೆ ಮಾತನಾಡಿದ್ದು. ಪತ್ರಕರ್ತರೊಬ್ಬರು ರಮ್ಯಾ ಅವರಿಗೆ ನೀವು ಹೋದಲೆಲ್ಲಾ ಮದುವೆ ಬಗ್ಗೆ ಪ್ಯಶ್ನೆ ಕೇಳುತ್ತಾರೆ, ಇನ್ಸ್ಟಾಗ್ರಾಮಲ್ಲಂತೂ ಅದೇ ಪ್ರಶ್ನೆಗಳು ಕಮೆಂಟ್ ಬಾಕ್ಸ್ ನಲ್ಲಿ ತುಂಬಿರುತ್ತವೆ. ಮದುವೆ ಯಾವಾಗ ಆಗುತ್ತೀರಿ ಹೇಳಿ ಮೇಡಂ ಎಂದು ಕೇಳಿದ್ದಾರೆ. ಅದಕ್ಕೆ ರಮ್ಯಾ ಅವರು ನಾನು ಗೌಡ್ತಿ, ಗೌಡ್ರ ಹುಡುಗನನ್ನು ಹುಡುಕಿಕೊಟ್ಟರೆ ಮದುವೆ ಆಗ್ತೀನಿ. ನೀವೇ ಅದನ್ನು ನೋಡಿ ಬಿಡಿ ನನಗಂತೂ ಎಲ್ಲೂ ಹುಡುಗ ಕಾಣಿಸುತ್ತಾ ಇಲ್ಲ, ಹುಡುಕಿ ಹುಡುಕಿ ನನಗೆ ಸಾಕಾಗಿ ಹೋಗಿದೆ, ನೀವೇ ನೋಡಿ ನಿರ್ಧಾರ ಮಾಡಿಬಿಡಿ ಎಂದು ಉತ್ತರ ಕೊಟ್ಟಿದ್ದಾರೆ.

ಅದಕ್ಕಾಗಿ ಒಂದು ವೇದಿಕೆ ರೆಡಿ ಮಾಡೋಣವೇ ಎಂದು ಮರಳಿ ಮತ್ತೊಬ್ಬರು ಪ್ರಶ್ನೆ ಕೇಳಿದಕ್ಕೆ ಆಗಲಿ ಬಿಡಿ ಸ್ವಯಂವರವೇ ನಡೆಸೋಣ ಎಂದು ಉತ್ತರ ಕೊಟ್ಟಿದ್ದಾರೆ. ಅದರೊಂದಿಗೆ ಮಂಡ್ಯದ ಜೊತೆಗೆ ಇರುವ ಅನುಬಂಧದ ಬಗ್ಗೆ ಮಾತನಾಡಿದ ಅವರು ನಾನು ಗೌಡ್ತಿ ಎನ್ನುವುದನ್ನು ಯಾರಿಂದಲೂ ಕಿತ್ತುಕೊಳ್ಳಲು ಆಗುವುದಿಲ್ಲ. ತಾಯಿಯ ಊರು ಮಂಡ್ಯ, ನನ್ನ ತಂದೆ ಸತ್ತಿದ್ದು ಇಲ್ಲಿಯೇ, ಗೋಪಾಲಪುರದಲ್ಲಿ ನನ್ನ ತಾತನ ಮನೆ ಇದೆ. ನನ್ನ ಹಲವು ಸಂಬಂಧಿಕರು ಮಂಡ್ಯದಲ್ಲಿ ಇದ್ದಾರೆ. ನಾನು ಯಾವಾಗಲೂ ಇಲ್ಲಿಗೆ ಬರುತ್ತಿರುತ್ತೇನೆ.

ಇತ್ತೀಚೆಗಷ್ಟೇ ನಿಮಿಷಾಂಬ ದೇವಸ್ಥಾನಕ್ಕೂ ಬಂದಿದ್ದೆ. ಆದರೆ ನಾನು ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಕಾರಣಕ್ಕೆ ನಾನು ಮಂಡ್ಯದಲ್ಲಿ ಇಲ್ಲ ಮಂಡ್ಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಮಾತನಾಡುತ್ತಾರೆ. ಅದರ ಬಗ್ಗೆ ನಾನು ಏನು ಹೇಳಲಿ. ನನಗೂ ಮತ್ತು ಮಂಡ್ಯಕ್ಕೂ ಇರುವುದು ರಾಜಕೀಯವನ್ನು ಮೀರಿದ ಸಂಬಂಧ. ನನಗೆ ಮಂಡ್ಯ ಕುಟುಂಬದ ಹಾಗೆ ಮಂಡ್ಯದ ಜನ ನನ್ನ ಕಷ್ಟದಲ್ಲಿ ಕೈ ಹಿಡಿದಿದ್ದಾರೆ ನನ್ನ ಮತ್ತು ಮಂಡ್ಯ ಸಂಬಂಧವನ್ನು ರಾಜಕೀಯ ಲೇಪನ ಹಾಕಿ ಹೇಳುವುದು ಬೇಡ ಎಂದು ಉತ್ತರಿಸಿದ್ದಾರೆ.

ಜೊತೆಗೆ ಸಿನಿಮಾಗಳ ನಿರ್ಮಾಣ ಮತ್ತು ನಟನೆ ಬಗ್ಗೆ ಮಾತನಾಡಿದ ಅವರು ಇಂಡಸ್ಟ್ರಿ ಬಿಟ್ಟು ತುಂಬಾ ವರ್ಷ ಆಯ್ತು. ಬದುಕಲು ಮತ್ತೆ ದುಡ್ಡು ಮಾಡಬೇಕಲ್ಲ ಅದಕ್ಕಾಗಿ ಪ್ರೊಡಕ್ಷನ್ ಮಾಡಿದ್ದೇನೆ. ಒಂದೇ ಒಂದು ಸಿನೆಮಾಗೆ ಸೈನ್ ಮಾಡಿದ್ದೇನೆ ಧನಂಜಯ್ ಜೊತೆ ಉತ್ತರಕಾಂಡ ಸಿನಿಮಾದಲ್ಲಿ ಕಾಣಿಸಿಕೊಳ್ಳದಿದ್ದೇನೆ ಎನ್ನುವುದನ್ನು ಹೇಳಿಕೊಂಡರು. ಚುನಾವಣೆ ಪ್ರಚಾರದಲ್ಲಿ ಸ್ಟಾರ್ ಪ್ರಚಾರಕಿ ಆಗಿರುವ ಜವಬ್ದಾರಿ ಕೊಟ್ಟಿರುವುದರಿಂದ ಮಂಡ್ಯ ಮಾತ್ರ ಅಲ್ಲ ಆಯ್ದ ಕೆಲ ಪ್ರದೇಶಗಳಿಗೂ ಕೂಡ ಹೋಗಿ ಪ್ರಚಾರ ಮಾಡದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅಂತೂ ಇಂತೂ ರಮ್ಯಾ ಅವರು ಮದುವೆಗೆ ಒಪ್ಪಿಕೊಂಡಿರುವುದು ಅವರ ಅಭಿಮಾನಿಗಳಿಗೆ ಹಾಗೂ ಮಂಡ್ಯದ ಜನತೆಗೆ ಬಹಳ ಖುಷಿಯಾಗಿದೆ.

ಗಂಡ ಬ್ಯೂಟಿ ಪಾರ್ಲರ್ ಗೆ ಹೋಗ್ಬೇಡ ಅಂತ ಹೇಳಿದ್ದೆ ತಪ್ಪಾಯ್ತು, ಹೆಂಡ್ತಿ ಎಂಥ ಕೆಲಸ ಮಾಡಿದ್ದಾಳೆ ಗೊತ್ತಾ.?

 

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಮಾತಿತ್ತು. ಆದರೆ ಕಲಿಗಾಲದಲ್ಲಿ ಗಾದೆ ಮಾತು ಕೂಡ ಹೆಚ್ಚು ದಿನ ಬಾಳುತ್ತಿಲ್ಲ. ಪ್ರತಿ ಹೆಣ್ಣು ಮದುವೆಯಾಗಿ ತವರು ಮನೆ ಬಿಟ್ಟು ಗಂಡನ ಮನೆಗೆ ಹೋಗುವಾಗ ಹೆಣ್ಣು ಮಕ್ಕಳಿಗೆ ಕುಟುಂಬದ ಹಿರಿಯರು ಬುದ್ಧಿ ಮಾತು ಹೇಳಿ ಕಳುಹಿಸುತ್ತಿದ್ದರು. ಗಂಡ ಏನು ಹೇಳಿದರು ಕೇಳಿಕೊಂಡು ಅವನ ಮಾತು ಮೀರದಂತೆ ಅನ್ಯೋನ್ಯವಾಗಿ ಬದುಕು ಎಂದು ಆಶಿರ್ವಾದ ಮಾಡುತ್ತಿದ್ದರು.

ಆದರೆ ಇಂಥಹ ಮಾತುಗಳನ್ನು ಈಗ ಎಷ್ಟು ಜನ ಹೆಣ್ಣು ಮಕ್ಕಳು ಪಾಲಿಸುತ್ತಿದ್ದಾರೆ ಎನ್ನುವುದೇ ಪ್ರಶ್ನೆ. ಯಾಕೆಂದರೆ ಪಗಡೆ ಆಟದಲ್ಲಿ ಪತಿ ಜೂಜಿಗೆ ಇಟ್ಟಿದ್ದರು ಕೂಡ ಪತಿಯನ್ನು ಬಿಟ್ಟುಕೊಡದ ಕಾಲ ಆದಾಗಿತ್ತು, ಸ್ಮಶಾಣದಲ್ಲಿ ಹಣ ಕೊಡದೆ ಸ್ವಂತ ಮಗನ ಹೆಣವನ್ನೇ ಸುಡಲು ಬಿಡುವುದಿಲ್ಲ ಎಂದು ತಡೆದಿದ್ದರೂ ಕೂಡ ಸಹಿಸಿಕೊಂಡಿದ್ದ ಪತಿಭಕ್ತಿಗೆ ಬದ್ಧವಾಗಿ ಬದುಕುತ್ತಿದ್ದಂತಹ ಕಾಲ ಅದಾಗಿತ್ತು. ಆದರೆ ಇಂದು ಕ್ಷುಲ್ಲಕ ಕಾರಣಗಳಿಗೂ ಜಗಳವಾಡುತ್ತಿದ್ದಾರೆ ದಂಪತಿಗಳು.

ಜೀವನದ ಪವಿತ್ರಘಟ್ಟ ಎನ್ನುತ್ತಿದ್ದ ಮದುವೆ ಹಾಗೂ ಸಮಧುರವಾದ ಬಂಧನ ಹಾಗೂ ಸ್ಟ್ರಾಂಗೆಸ್ಟ್ ಬಂಧನ ಎಂದು ನಂಬಲಾಗಿದ್ದ ಮದುವೆ ಬಂಧನ ಕೂಡ ಈಗಿನ ಕಾಲದಲ್ಲಿ ತನ್ನ ವ್ಯಾಲ್ಯೂ ಕಳೆದುಕೊಳ್ಳುತ್ತಿದೆ. ಬೆಳಗ್ಗೆ ಮದುವೆಯಾಗಿ ಸಂಜೆ ಡೈ’ವೋ’ರ್ಸ್ ಪಡೆಯಲು ಕೋರ್ಟ್ ಕದ ತಟ್ಟುವ ತನಕ ಬಂದು ಜನರೇಷನ್ ತಲುಪಿದೆ. ಮದುವೆಯಾದರೆ ಮೊದಲ ದಿನವೇ ಕೋರ್ಟ್ ಮೆಟ್ಟಿಲು ಹೇರುವ ಪ್ರಕರಣ ಹೆಚ್ಚು ಆಶ್ಚರ್ಯ ಉಂಟು ಮಾಡದೆ.

ಇದ್ದರೂ ಅನ್ಯೋನ್ಯವಾಗಿ 10 ರಿಂದ 15 ವರ್ಷ ಹೊಂದಿಕೊಂಡು ಬದುಕಿದವರು ಕೂಡ ಇದೇ ರೀತಿ ವಿ’ಚ್ಛೇ’ದ’ನಕ್ಕಾಗಿ ಕೇಸ್ ಹಾಕುತ್ತಿರುವುದು ಬಹಳ ವಿಷಾದಕರ ಸಂಗತಿಯಾಗಿದೆ. ಮುಂದುವರೆದುಪತಿ ಪತ್ನಿ ನಡುವೆ ಉಂಟಾಗುವ ಸಣ್ಣ ಕಲಹ ಕೊನೆಗೆ ಸಾ’ವಿನಲ್ಲಿ ಅಂತ್ಯವಾಗುವಂತಹ ಪ್ರಕರಣಗಳಿಗೆ ಏನು ಕಡಿಮೆ ಇಲ್ಲ.

ಇಂತಹ ಹಲವಾರು ಪ್ರಕರಣಗಳು ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ದಿನ ಬೆಳಗಾದರೆ ಪ್ರಸಾರವಾಗುತ್ತಲೇ ಇರುತ್ತವೆ. ಅಂತಹದ್ದೇ ಒಂದು ಪ್ರಕರಣ ಇಂಧೋರ್ ನಲ್ಲಿ ಬಲು ವಿಚಿತ್ರವಾಗಿ ನಡೆದಿದೆ. ಬಲರಾಮ್ ಮತ್ತು ರೀನಾ ಯಾದವ್ ಎನ್ನುವ ದಂಪತಿಗಳು ಕಳೆದ 15 ವರ್ಷಗಳಿಂದ ಹಿಂದೆ ಮದುವೆಯಾಗಿ ಇಲ್ಲಿಯವರೆಗೂ ಅನುಸರಿಸಿಕೊಂಡೆ ಜೀವನ ನಡೆಸಿಕೊಂಡು ಬಂದಿದ್ದರು.

ಆದರೆ ಇತ್ತೀಚೆಗೆ ರಿನಾ ಯಾದವ್ ಅವರಿಗೆ ಬ್ಯೂಟಿ ಪಾರ್ಲರ್ ಗೆ ಹೋಗುವ ಹುಚ್ಚು ಹೆಚ್ಚಾಗಿತ್ತು. ಇದರಿಂದ ಬೇಸರ ಪಟ್ಟುಕೊಂಡಿದ್ದ ಪತಿ ಹೆಂಡತಿಗೆ ಇನ್ನು ಮುಂದೆ ಬ್ಯೂಟಿ ಪಾರ್ಲರ್ ಗೆ ಹೋಗುವುದನ್ನು ಬಿಟ್ಟು ಬಿಡು, ಹೋಗಬಾರದು ಎಂದು ಎರಡು ಮಾತು ಹೇಳಿದ್ದಾರೆ ಅಷ್ಟೇ. ಅಷ್ಟಕ್ಕೆ ನೊಂದುಕೊಂಡ ರೀನಾ ಯಾದವ್ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಫ್ಯಾನಿಗೆ ಕೊರಳೊಡ್ಡಿ ಜೀವ ಕಳೆದುಕೊಂಡಿದ್ದಾರೆ.

ಪ್ರಕರಣದ ದಾಖಲಿಸಿಕೊಂಡ ಪೊಲೀಸರಿಗೆ ಸದ್ಯಕ್ಕೆ ಇವರ ಸಾ.ವಿಗೆ ಇಷ್ಟೇ ಕಾರಣ ಎನ್ನುವುದು ತಿಳಿದುಬಂದಿದೆ. ಆದರೆ ತನಿಖೆ ಆದ ಬಳಿಕ ಸತ್ಯಾಂಶ ಹೊರ ಬೀಳಬೇಕಿದೆ. ಹೆಣ್ಣು ಮಕ್ಕಳಿಗೆ ತಮ್ಮ ಸೌಂದರ್ಯದ ಬಗ್ಗೆ ಎಷ್ಟು ಕಾಳಜಿ ಇರುತ್ತದೆ ಎಂದು ನಾವು ಕೇಳಿದ್ದವು ಆದರೆ ಅದು ವಿಪರೀತವಾಗಿ ಪ್ರಾ.ಣ ಕಳೆದುಕೊಳ್ಳುವ ಮಟ್ಟಕ್ಕೆ ಹೋಗಬಾರದು ಎನ್ನುವುದು ಈ ಪ್ರಕರಣ ತಿಳಿಸುವ ಪಾಠವಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೇನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ಹೆತ್ತ ತಾಯಿಯನ್ನೇ ಕತ್ತು ಹಿಸುಕಿ ಕೊಂ’ದು ತಾನು ಆ’ತ್ಮ’ಹ’ತ್ಯೆ ಮಾಡಿಕೊಂಡ ಯುವತಿ, ಕಾರಣವೇನು ಗೊತ್ತಾ.?

 

ತಾಯಿ ದೇವರ ಸಮಾನ ತಾಯಿಗಿಂತಲೂ ಮಿಗಿಲಾದ ದೇವರಿಲ್ಲ ಇಂತಹದನ್ನೆಲ್ಲ ಪಾಲಿಸಿಕೊಂಡು ನಂಬಿಕೊಂಡು ಬಂದಿರುವ ಸಂಸ್ಕೃತಿ ನಮ್ಮದು. ಭಾರತ ದೇಶದಲ್ಲಿ ಮಾತ್ರ ಅಲ್ಲ ಪ್ರಪಂಚದಾದ್ಯಂತ ಕೂಡ ಬಹಳ ಪವಿತ್ರವಾದ ಸಂಬಂಧ ಎಂದರೆ ಅದು ತಾಯಿ ಮತ್ತು ಮಕ್ಕಳ ಸಂಬಂಧ. ಮನುಷ್ಯ ಮಾತ್ರನಲ್ಲದೆ ಪ್ರಾಣಿಗಳು ಕೂಡ ತನ್ನ ಹೆತ್ತ ಕರುಳಿಗೆ ಹೇಗೆ ಕೃತಜ್ಞವಾಗಿರುತ್ತವೆ ಎನ್ನವ ಉದಾಹರಣೆಯನ್ನು ನಾವು ಕಾಣುತ್ತಿದ್ದೇವೆ.

ಅಂತಹದರಲ್ಲಿ ಆಗೊಮ್ಮೆ ಈಗೊಮ್ಮೆ ಮನುಷ್ಯರು ಎನಿಸಿಕೊಂಡವರು ಎಲ್ಲಾ ಸಂಬಂಧಗಳ ಮೌಲ್ಯ ಮರೆಯುತ್ತಿದ್ದಾರೆ. ಈಗ ಅದು ತಾಯಿ ಎನ್ನುವುದನ್ನು ನೋಡದೆ ತಾಯಿಯ ಪಾಲಿಗೆ ಯಮಕಂಠಕ ಆಗುವ ಮಟ್ಟಿಗೆ ತಲುಪಿದೆ. ಇದಕ್ಕೆ ಈಗಾಗಲೇ ಸಾಕಷ್ಟು ಉದಾಹರಣೆಗಳು ಇದ್ದರೂ ಆ ಪಟ್ಟಿಗೆ ಇತ್ತೀಚಿಗೆ ನಡೆದ ಬೆಂಗಳೂರಿನ ಪ್ರಕರಣವೂ ಕೂಡ ಸೇರಿದೆ.

ಬೆಂಗಳೂರಿನ ಮುನೇಶ್ವರ ನಗರದ ಮುಖ್ಯ ರಸ್ತೆಯ ಬಳಿ ಇರುವ ಅಪಾರ್ಟ್ಮೆಂಟ್ ಒಂದರಲ್ಲಿ ತಾಯಿ ಮತ್ತು ಮಗಳು ಮೃ’ತ ದೇಹಗಳಾಗಿ ಪತ್ತೆಯಾಗಿದ್ದಾರೆ. ತನಿಖೆಯ ಬೆನ್ನತ್ತಿ ಹೊರಟ ಪೊಲೀಸರಿಗೆ ಮಗಳೇ ತಾಯಿಯನ್ನು ಕೊಂ.ದು ಬಳಿಕ ತಾನು ಕೂಡ ಆ.ತ್ಮ.ಹ.ತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ಹಂತದ ತನಿಕೆಯಲ್ಲಿಯೇ ಸ್ಪಷ್ಟವಾಗಿ ಗೋಚರವಾಗಿದೆ. ಪ್ರಕರಣದ ವಿವರವನ್ನು ನೋಡುವುದಾದರೆ ಜರೀನಾ ಮತ್ತು ರಿಜಿಯಾ ಎನ್ನುವ ಹೆಸರಿನ ತಾಯಿ ಮಗಳು ಇಬ್ಬರು ಕೂಡ ಈ ಅಪಾರ್ಟ್ಮೆಂಟ್ ಅಲ್ಲಿ ಬಹಳ ವರ್ಷಗಳಿಂದ ವಾಸವಿದ್ದರು.

ಕಾಲ್ ಸೆಂಟರ್ ಅಲ್ಲಿ ಕೆಲಸ ಮಾಡುತ್ತಿದ್ದ ರಿಜಿಯಾ ಕೆಲ ತಿಂಗಳುಗಳ ಹಿಂದೆ ಹಿಂದೂ ಹುಡುಗನನ್ನು ಪ್ರೀತಿಸಿ, ಕುಟುಂಬದ ವಿರೋಧದ ನಡುವೆಯೂ ವಿವಾಹ ಕೂಡ ಆದರು. ವಿವಾಹ ಆದ ಬಳಿಕ ಪತಿ ಪತ್ನಿ ನಡುವೆ ಯಾವುದೋ ವಿಷಯಕ್ಕೆ ಮನಸ್ತಾಪ ಬಂದಿದೆ. ಇದರಿಂದ ಪತಿಯ ಜೊತೆ ಬೇಸರ ಮಾಡಿಕೊಂಡು ಮನೆ ಬಿಟ್ಟು ಬಂದ ರಿಜಿಯಾ ತಾಯಿ ಇದ್ದ ಆ ಅಪಾರ್ಟ್ಮೆಂಟ್ ನಲ್ಲಿಯೇ ವಾಸ ಇದ್ದರು ತಾಯಿ ಸಹ ಒಬ್ಬಟ್ಟಿಯಾಗಿದ್ದರಿಂದ, ಬದುಕಲ್ಲಿ ಬಹಳಷ್ಟು ನೊಂದಿದ್ದರು.

ಈಗ ಮಗಳು ಕೂಡ ಬಾಳು ಮುರಿದುಕೊಂಡು ಮನೆಗೆ ಬಂದಿದ್ದರಿಂದ ಇಬ್ಬರ ಮನಸ್ಥಿತಿಯು ನೆಮ್ಮದಿಯಿಂದ ಕೂಡಿರಲಿಲ್ಲ. ಇದೇ ಕಾರಣಕ್ಕೆ ಅವರು ಅಕ್ಕ ಪಕ್ಕದ ಮನೆಯವರ ಜೊತೆಯೂ ಕೂಡ ಹೆಚ್ಚು ಬೆರೆಯುತ್ತಿರಲಿಲ್ಲವಂತೆ. ದಿನ ಕೆಲಸಕ್ಕೆ ಹೋಗುತ್ತಿದ್ದ ರಿಜಿಯಾ ಹಲವು ದಿನಗಳವರೆಗೆ ರಜೆ ಹಾಕಿದ್ದನ್ನು ಗಮನಿಸಿ ಕಂಪನಿಯಿಂದ ರಿಜಿಯಾ ಫೋನಿಗೆ ಕರೆ ಮಾಡಿದ್ದಾರೆ. ಆದರೆ ರಿಜಿಯಾ ಯಾವುದಕ್ಕೂ ಉತ್ತರಿಸಿದಿದ್ದರಿಂದ ವಿಷಯವನ್ನು ಆಕೆಯ ಪತಿಗೆ ತಿಳಿಸಿದ್ದಾರೆ. ಅಪಾರ್ಟ್ಮೆಂಟ್ ಬಳಿ ಬಂದ ರಿಜಿಯಾ ಪತಿಗೆ ಶಾ’ಕ್ ಆಗಿತ್ತು. ಯಾಕೆಂದರೆ ಅಲ್ಲಿ ತನ್ನ ಮಡದಿ ಹಾಗೂ ಅತ್ತೆ ಇಬ್ಬರು ಕೂಡ ಹೆ’ಣವಾಗಿ ಪತ್ತೆ ಆಗಿದ್ದರು.

ಮನೆಯಲ್ಲಿ ಇಬ್ಬರೇ ಇದ್ದದರಿಂದ ತಾಯಿ ಮಗಳ ನಡುವೆ ಮಗಳ ಮದುವೆ ಜೀವನದ ಕುರಿತಂತೆ ಯಾವುದೋ ಮನಸ್ತಾಪ ಬಂದಿರಬಹುದು ಜಗಳ ತಾರಕಕ್ಕೇರಿ ಕೋಪದಲ್ಲಿ ಮಗಳೇ ತಾಯಿಗೆ ಈ ಸ್ಥಿತಿ ತಂದಿರಬಹುದು ಎಂದು ಕೆಲವರು ಅನುಮಾನ ಪಟ್ಟಿದ್ದರೆ, ಇನ್ನೂ ಕೆಲವರು ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಈ ರೀತಿ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಇವೆ. ಅದೇನೇ ಇದ್ದರೂ ಬದುಕು ಎಲ್ಲದಕ್ಕಿಂತಲೂ ದೊಡ್ಡದು, ಕ್ಷುಲಕ ಕಾರಣಕ್ಕೆ ಬದುಕನ್ನೇ ಕೊನೆಗೊಳಿಸಿಕೊಂಡಿದ್ದು ಮಾತ್ರ ದುರಂತವೇ ಸರಿ. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೇ ಮಾಡಿ ತಿಳಿಸಿ.

ಉಪ್ಪಿನ ಜಾಡಿಯಲ್ಲಿ ಈ ಮೂರು ವಸ್ತುಗಳನ್ನು ಹಾಕಿ ಸಾಕು, ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಯೇ ಬರುವುದಿಲ್ಲ.! ನಂಬಿಕೆ ಇಟ್ಟು ಈ ಪ್ರಯೋಗ ಮಾಡಿ ನೋಡಿ ಫಲಿತಾಂಶ ಸಿಕ್ಕೆ ಸಿಗುತ್ತೆ.

 

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವುದು ಕನ್ನಡದ ಒಂದು ಜನಪ್ರಿಯ ಗಾದೆ ಮಾತು. ಉಪ್ಪು ಈ ರೀತಿ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಮನೆಯ ಆರ್ಥಿಕ ಸಮಸ್ಯೆಯನ್ನು ಕೂಡ ಬಗೆಹರಿಸುತ್ತದೆ ಎಂದರೆ ನೀವು ನಂಬಲೇಬೇಕು. ನಮ್ಮ ಶಾಸ್ತ್ರಿಗಳಲ್ಲಿ ಹೇಳಿರುವ ಪ್ರಕಾರ ಮತ್ತು ನಾವು ಇದುವರೆಗೆ ಹಿರಿಯರಿಂದ ಕೇಳಿಕೊಂಡು ಬಂದ ಆಚರಿಸಿದ ಆಚರಣೆಗಳ ಪ್ರಕಾರ ಉಪ್ಪನ್ನು ಬಹಳ ಪೂಜನ್ಯೀಯ ಸ್ಥಾನವಲ್ಲಿ ಕಾಣುತ್ತೇವೆ.

ಸಾಕ್ಷಾತ್ ಮಹಾಲಕ್ಷ್ಮಿ ರೂಪವೇ ಉಪ್ಪು ಎಂದು ನಾವು ನಂಬುತ್ತೇವೆ. ಹಿರಿಯರು ಯಾವಾಗಲೂ ಮನೆಯಲ್ಲಿ ಉಪ್ಪು ಖಾಲಿ ಆಗಬಾರದು ಎಂದು ಹೇಳುವುದನ್ನು ಕೇಳಿದ್ದೇವೆ ಹಾಗೆಯೇ ಸಂಜೆಯ ಸಮಯ ಹೊತ್ತು ಮುಳುಗಿದ ಮೇಲೆ ಉಪ್ಪನ್ನು ಯಾರಿಗೂ ಕೊಡಬಾರದು ಮತ್ತು ಉಪ್ಪನ್ನು ಎಂದಿಗೂ ಸಾಲ ಕೊಡಬಾರದು, ತರಬಾರದು ಎಂದೆಲ್ಲಾ ಹೇಳುವುದನ್ನು ಕೇಳಿದ್ದೇವೆ.

ಯಾಕೆಂದರೆ ಉಪ್ಪಿಗೆ ಅಂತಹ ಒಂದು ಪ್ರಭಾವಶಾಲಿಯಾದ ಶಕ್ತಿ ಇದೆ. ಮನೆಯ ನೆಗೆಟಿವ್ ಎನರ್ಜಿಗಳನ್ನು ಕೂಡ ಹಿಡಿದಿಟ್ಟುಕೊಂಡು ಮನೆಯ ವಾತಾವರಣವನ್ನು ಸಕಾರಾತ್ಮಕವಾಗಿ ಮಾಡುವ ಶಕ್ತಿ ಈ ಉಪ್ಪಿಗೆ ಇದೆ. ಮನೆಗೆ ಯಾವುದೇ ರೀತಿ ಹಣಕಾಸಿನ ತೊಡಕು ಬಂದಾಗ ಉಪ್ಪಿನ ಮೂಲಕ ಅದನ್ನು ಬಗೆಹರಿಸಬಹುದು ಎಂದರೆ ಅದು ಆಶ್ಚರ್ಯ ಆಗಬಹುದು. ಆದರೆ ಈಗ ನಾವು ಹೇಳುವ ಈ ಕ್ರಮವನ್ನು ಅನುಸರಿಸಿ ನೋಡಿ ಆಶ್ಚರ್ಯಕರ ರೀತಿಯಲ್ಲಿ ನಿಮಗೆ ಪರಿಹಾರ ಖಂಡಿತವಾಗಿಯೂ ಸಿಗುತ್ತದೆ.

ಅದೇನೆಂದರೆ ಮನೆಯಲ್ಲಿ ಉಪ್ಪನ್ನು ಹಾಕಿ ಇಡಲು ಒಂದು ಡಬ್ಬವನ್ನು ಇಟ್ಟಿರುತ್ತೇವೆ. ಈ ರೀತಿ ಉಪ್ಪನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ಇಡುವ ಬದಲು ಜಾಡಿಗಳಲ್ಲಿ ಇಟ್ಟರೆ ಒಳ್ಳೆಯದು. ಅನೇಕ ಮನೆಗಳಲ್ಲಿ ಇಂದಿಗೂ ಸಹ ಜಾಡಿಗಳಲ್ಲೇ ಉಪ್ಪನ್ನು ತುಂಬಿ ಇಡುವ ರೂಢಿ ಇದೆ. ಈ ರೀತಿ ಉಪ್ಪನ್ನು ತುಂಬಿ ಇಡುವ ಜಾಡಿಯಲ್ಲಿ ಈ ಮೂರು ವಸ್ತುಗಳನ್ನು ಹಾಕಿದರೆ ನಿಮಗಿರುವ ಆರ್ಥಿಕ ಸಮಸ್ಯೆ ಪರಿಹಾರ ಆಗುತ್ತದೆ, ಆದರೆ ಅದಕ್ಕೆ ಕೆಲ ನಿಯಮ ಇದೆ.

ಮೊದಲಿಗೆ ನೀವು ಒಂದು ಹಳದಿ ಬಟ್ಟೆಯನ್ನು ತೆಗೆದುಕೊಳ್ಳಬೇಕು. ಹಳದಿ ಬಟ್ಟೆ ಇಲ್ಲವಾದಲ್ಲಿ ಒಂದು ಬಿಳಿ ಕಾಟನ್ ಬಟ್ಟೆ ಒದ್ದೆ ಮಾಡಿ ಸಂಪೂರ್ಣವಾಗಿ ಅದು ಹಳದಿ ಆಗುವ ತನಕ ನೀರು ಮತ್ತು ಅರಿಶಿನ ಪುಡಿ ಸಹಾಯದಿಂದ ಹಳದಿ ಮಾಡಿ ಅದನ್ನು ಒಣಗಿಸಿಟ್ಟುಕೊಳ್ಳಬೇಕು. ನಂತರ ಅದಕ್ಕೆ ಒಂಬತ್ತು ಬಟ್ಟಲು ಅಡಿಕೆಯನ್ನು ಹಾಕಬೇಕು. ಬಟ್ಟಲು ಅಡಿಕೆ ಎಂದರೆ ಭಾಗವಾಗಿರದ ವೃತ್ತಾಕಾರದ ಪೂರ್ತಿ ಅಡಿಕೆ. ಅಡಿಕೆಯು ಅಮ್ಮನವರ ಸ್ವರೂಪ ಎಂದು ನಂಬಲಾಗುತ್ತದೆ,

ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿ ಜೊತೆ ಅಮ್ಮನವರ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ. ನಂತರ ಆ ಅರಿಶಿಣ ಬಟ್ಟೆಗೆ ಅಡಿಕೆ ಜೊತೆ ನಿಮಗೆ ಅನುಕೂಲವಾದಷ್ಟು ಒಂದು ಚೂರು ಬಂಗಾರ ಅಥವಾ ಬೆಳ್ಳಿಯನ್ನು ಹಾಕಿ ಹಾಗೆಯೇ ಒಂದು ಕೊಂಬು ಅರಿಶಿನವನ್ನು ಹಾಕಿ ಗಟ್ಟಿಯಾಗಿ ಕಟ್ಟಿ.

ಈ ರೀತಿ ಬಟ್ಟೆಯಿಂದ ಕಟ್ಟಿದ ಈ ಪೊಟ್ಟಣ್ಣವನ್ನು ಶುಕ್ರವಾರದ ಬೆಳ್ಳಂಬೆಳಗ್ಗೆ ಮನೆಯೆಲ್ಲಾ ಶುದ್ಧ ಮಾಡಿ, ಮಡಿ ಉಟ್ಟುಕೊಂಡು ಪೂಜೆ ಮಾಡಿದ ಬಳಿಕ ಲಕ್ಷ್ಮೀದೇವಿಯನ್ನು ಮನಸ್ಸಿನಲ್ಲಿಯೇ ಪ್ರಾರ್ಥಿಸಿಕೊಂಡು ನಿಮಗಿರುವ ಹಣಕಾಸಿನ ಸಮಸ್ಯೆಯನ್ನು ಹೇಳಿಕೊಂಡು ಉಪ್ಪಿನ ಜಾಡಿನ ಕೆಳಗೆ ಹಾಕಿ ಅದರ ಮೇಲೆ ಪೂರ್ತಿ ಉಪ್ಪನ್ನು ತುಂಬಿ. ಈ ರೀತಿ ಮಾಡಿದ ಕೆಲವೇ ದಿನಗಳಲ್ಲಿ ನೀವು ಮಾಡಿರುವ ಬ್ಯಾಂಕ್ ಲೋನ್ ಬೇಗ ತೀರಿಸಲು ಸಾಧ್ಯವಾಗುತ್ತದೆ ಅಥವಾ ನೀವು ಅಡವಿಟ್ಟಿರುವ ಚಿನ್ನ ಬಿಡಿಸಿಕೊಂಡು ಮನೆಗೆ ತರಲು ಅನುಕೂಲವಾಗುತ್ತದೆ ಅಥವಾ ಅನಿರೀಕ್ಷಿತವಾಗಿ ನಿಮ್ಮ ಕುಟುಂಬಕ್ಕೆ ಧನಾಗಮನ ಆಗುತ್ತದೆ.

ದಿನವು ಫುಟ್ಪಾತ್ ನಲ್ಲಿ ಕಿತ್ತಳೆಹಣ್ಣು ಮಾರಿ ಬಂದ ಹಣದಲ್ಲಿ ಈ ಅಜ್ಜ ಮಾಡುತ್ತಿದ್ದ ಕೆಲಸವೇನು ಗೊತ್ತ.? ಸರ್ಕಾರಿ ಅಧಿಕಾರಿಗಳೇ ಶಾ-ಕ್ ಆದ್ರೂ.!

 

ಫುಟ್ ಪಾತ್ ನಲ್ಲಿ ಕಿತ್ತಳೆಹಣ್ಣು ಮಾರುತ್ತಿದ್ದ ಬಡವನಿಗೆ ಅವಮಾನ ಮಾಡಿದ್ರು, ಆದ್ರೆ ಈತ ಯಾರು ಅಂತ ತಿಳಿದಾಗ ಸರ್ಕಾರಿ ಅಧಿಕಾರಿಗಳೇ ಶಾ’ಕ್ ಆಗಿ ಎದ್ದು ನಿಂತು ನಮಸ್ಕಾರ ಮಾಡಿದ್ರು.! ಇಂಗ್ಲೀಷಿನಲ್ಲಿ ಬಂದು ಪ್ರಚಲಿತವಾದ ಕೋಟ್ ಇದೆ. ಡೋಂಟ್ ಜಡ್ಜ್ ದ ಬುಕ್ ಬೈ ಇಟ್ಸ್ ಕವರ್ ಎಂದು. ಸಧ್ಯಕ್ಕೆ ನಾವೀಗ ಹೇಳುವ ವ್ಯಕ್ತಿಗೆ ಇದು ಬಹಳ ಒಪ್ಪುತ್ತದೆ. ಯಾಕೆಂದರೆ ಅವರ ಕಥೆಯನ್ನು ನೀವೇ ಒಮ್ಮೆ ನೋಡಿ. ವ್ಯಕ್ತಿಯೊಬ್ಬ ಮಂಗಳೂರಿನ ಬಸ್ ನಿಲ್ದಾಣಗಳಲ್ಲಿ ಹಲವು ವರ್ಷಗಳಿಂದ ಕಿತ್ತಳೆ ಹಣ್ಣು ವ್ಯಾಪಾರ ಮಾಡುತ್ತಿರುತ್ತಾರೆ. ಅವರಿಗೆ ಗೊತ್ತಿರುವುದು ಪ್ರತಿದಿನ ಬೆಳಿಗ್ಗೆ ಮಂಕರಿ ತುಂಬಾ ಕಿತ್ತಳೆ ಹಣ್ಣುಗಳನ್ನು ತರುವುದು ಬಸ್ ನಿಲ್ದಾಣದಲ್ಲಿ ಅತ್ತ ಇತ್ತ ಓಡಾಡಿ ಹಣ್ಣುಗಳನ್ನೆಲ್ಲ ಮಾರಾಟ ಮಾಡಿ ಮನೆಗೆ ಹೋಗುವುದು.

ಇಷ್ಟಿದ್ದ ಅವರ ಪ್ರಪಂಚದಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಬದಲಾವಣೆ ತರುವಂತಹ ಘಟನೆ ನಡೆದು ಹೋಗುತ್ತದೆ. ಅದೇನೆಂದರೆ ವಿದೇಶಿ ವ್ಯಕ್ತಿ ಇವರ ಬಳಿ ಬಂದು 1 ಕೆಜಿ ಹಣ್ಣಿಗೆ ಎಷ್ಟು ದುಡ್ಡು ಎಂದು ಕೇಳುತ್ತಾರೆ. ಆದರೆ ಆತ ಮಾತನಾಡಿದ ಭಾಷೆ ಇವರಿಗೆ ಅರ್ಥ ಆಗದ ಕಾರಣ ಇವರಿಗೆ ಪ್ರತಿಕ್ರಿಯಿಸಲು ಬರುವುದಿಲ್ಲ. ಜೊತೆಗೆ ಆತ ಏನು ಹೇಳುತ್ತಿದ್ದಾನೆ ಎನ್ನುವುದರ ಅರ್ಥವು ತಿಳಿಯುವುದಿಲ್ಲ. ಅಂದು ಬಹಳ ಬೇಸರ ಮಾಡಿಕೊಂಡ ಇವರು ನನಗೂ ಸಹ ಶಿಕ್ಷಣ ಸಿಕ್ಕಿದರೆ ಈಗಾಗುತ್ತಿರಲಿಲ್ಲ ಎಂದು ನೊಂದುಕೊಳ್ಳುತ್ತಾರೆ.

ಅಷ್ಟಕ್ಕೆ ಸುಮ್ಮನಾಗದ ಇವರು ತನ್ನಂತೆ ತನ್ನೂರಿನಲ್ಲಿ ಮತ್ತಾರಿಗೂ ಈ ರೀತಿ ಆಗಬಾರದು ಎಂದು ನಿರ್ಧರಿಸುತ್ತಾರೆ. ಯಾಕೆಂದರೆ ಆ ವ್ಯಕ್ತಿ ಇದ್ದ ಊರಿನಲ್ಲಿ ಶಾಲೆ ಇರಲಿಲ್ಲ, ಆ ಕಾರಣಕ್ಕೆ ಆ ಗ್ರಾಮದಲ್ಲಿ ಅನೇಕರು ಅನಕ್ಷರಸ್ಥರಾಗಿದ್ದರು. ಅವರ ಬದುಕು ಮುಂದೆ ಎಷ್ಟು ಕಷ್ಟ ಎನ್ನುವ ಮುಂದಾಲೋಚನೆಯಿಂದ ಅದುವರೆಗೆ ಇವರು ಕಿತ್ತಳೆ ಹಣ್ಣಿನ ವ್ಯಾಪಾರ ಮಾಡಿ ಕೂಡಿಟ್ಟ ಹಣದಲ್ಲಿ ಶಾಲೆಯಿಂದ ತೆರೆಯಲು ನಿರ್ಧರಿಸುತ್ತಾರೆ.

ಆದರೆ ಕೂಲಿ ವ್ಯಾಪಾರಿಯಾಗಿದ್ದ ಇವರ ಹಣದಿಂದ ಶಾಲೆ ನಿರ್ಮಿಸುವುದು ಅಸಾಧ್ಯದ ಮಾತಾಗಿತ್ತು. ಉಳ್ಳವರ ಮನೆ ಕದ ತಟ್ಟಿ ಸಹಾಯ ಮಾಡಲು ಕೇಳಿಕೊಂಡರು. ಈ ಸಮಯದಲ್ಲಿ ಅವರು ಪಟ್ಟ ಅವಮಾನ ಅಷ್ಟಿಷ್ಟಲ್ಲ. ಕೆಲವರು ಈತ ಮೋಸಗಾರ ಶಾಲೆ ಹೆಸರು ಹೇಳಿಕೊಂಡು ದುಡ್ಡು ಹೊಡೆಯುತ್ತಾನೆ ಎಂದು ಹಣ ಕೊಡಲು ಹಿಂದೆ ಮುಂದೆ ನೋಡಿದರು.

ಇನ್ನೂ ಕೆಲವರು ಅದರಲ್ಲೂ ಶಾಲೆ ವ್ಯವಸ್ಥೆಗಾಗಿ ಸರ್ಕಾರಿ ಕಚೇರಿಗಳ ಸಹಾಯ ಅರಸಿ ಹೋದಾಗ ಸರ್ಕಾರಿ ಅಧಿಕಾರಿಗಳೇ ತೀರ ಕೇವಲವಾಗಿ ಕಂಡರು. ಭಿಕ್ಷೆ ನೀಡುವಂತೆ ಐವತ್ತು ನೂರು ಎಸೆದು ಇದೆಲ್ಲ ನಡೆಯುವುದಿಲ್ಲ ಮನೆಗೆ ಹೋಗುವಂತೆ ಹೇಳಿದ್ದರು. ಆದರೂ ಕೂಡ ತನ್ನ ಛಲ ಬಿಡದ ಇವರು ಹೊಸ ಪದಪು ಎನ್ನುವ ಗ್ರಾಮದಲ್ಲಿ 2011 ರಲ್ಲಿ ಶಾಲೆಯೊಂದನ್ನು ಕಟ್ಟಿಯೇ ತೀರಿದರು. ಇವರು ಅಲ್ಲಿ ಸ್ಥಳ ಖರೀದಿಸಿ ಶಾಲೆ ನಿರ್ಮಾಣ ಮಾಡಲೇಬೇಕು ಎನ್ನುವ ಗಟ್ಟಿ ನಿರ್ಧಾರಕ್ಕೆ ಬಂದಾಗ ಕೆಲ ಮಾನವೀಯ ವ್ಯಕ್ತಿಗಳು ಇವರ ನೆರವಿಗೆ ಬಂದರು.

ಕೆಲವರು ಯಂತ್ರೋಪಕರಣಗಳ ಸಹಾಯ ಮಾಡಿದರು ಕೆಲವರು ಸಿಮೆಂಟ್ ಮರಳು ಕಬ್ಬಿಣದ ವ್ಯವಸ್ಥೆ ಮಾಡಿದರೆ ಕೆಲವರು ಜಾಗ ಸಹ ನೀಡಿದರು. ಕೊನೆಗೆ ಅವರ ಕನಸಂತೆ ಊರಿನಲ್ಲೊಂದು ಶಾಲೆ ನಿರ್ಮಾಣ ಆಯಿತು. ಇದಕ್ಕಾಗಿ ಶ್ರಮ ಪಟ್ಟ ಆ ವ್ಯಕ್ತಿ ಬೇರೆ ಯಾರು ಅಲ್ಲ 2020ನೇ ವರ್ಷದ ಸಾಲಿನಲ್ಲಿ ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಹರೇಕಳ ಹಾಜಪ್ಪ. ಇವರು ಕಟ್ಟಿದ ಶಾಲೆಗೆ 20 ವರ್ಷಗಳಾಗಿವೆ. ಹಾಜಪ್ಪ ಶಾಲೆ ಎಂದೆ ಶಾಲೆಗೆ ಹೆಸರಿಡಲಾಗಿದೆ.

ಆ ಭಾಗದಲ್ಲಿ ಇವರನ್ನು ಅಕ್ಷರ ಸಂತ ಎಂದು ಕೂಡ ಕರೆಯುತ್ತಾರೆ. ಇವರ ಅಕ್ಷರ ಕ್ರಾಂತಿ ಕುರಿತು ಕರ್ನಾಟಕದಲ್ಲಿ ಹಾಗೂ ಬ್ರಿಟನಲ್ಲೂ ಪುಸ್ತಕಗಳು ಬಿಡುಗಡೆ ಆಗಿವೆ. ಕನ್ನಡಪ್ರಭದಲ್ಲಿ ಮ್ಯಾನ್ ಆಫ್ ದಿ ಇಯರ್ ಎನ್ನುವ ಹೆಸರನ್ನು ಪಡೆದಿದ್ದರು. ಹಾಗೆಯೇ ರಾಷ್ಟ್ರಪತಿಗಳಿಂದ ಇವರನ್ನು ಕರೆ ತರಲು ಕರೆ ಬಂದಾಗ ಅಂದು ಸಹಾಯ ಕೇಳಿದಾಗ ಯಾರೆಲ್ಲಾ ಅವಮಾನ ಮಾಡಿದ್ದರು ಅವರಿಂದಲೇ ಸೆಲ್ಯೂಟ್ ಹೊಡಿಸಿಕೊಂಡರು.

2023ರ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ BJP ಸರ್ಕಾರ, ಡಬಲ್ ಇಂಜಿನ್ ಸರ್ಕಾರ ಕೊಟ್ಟಿರುವ ಭರವಸೆಗಳು ಏನೇನು ಗೊತ್ತಾ.?

 

ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಪ್ರಜಾಪ್ರಭುತ್ವದ ಹಬ್ಬದ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯವಾಗಿ ನಡೆಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿಕೊಳ್ಳುತ್ತಿದೆ,ಹಾಗೆಯೇ ತಪ್ಪದೇ ಈ ಬಾರಿ ಮತದಾನ ಮಾಡುವಂತೆ ಜನರ ಮನವೊಲಿಸುತ್ತಿದೆ. ಇದರೊಂದಿಗೆ ರಾಜಕೀಯ ಪಕ್ಷಗಳಿಂದಲೂ ಕೂಡ ಜನರ ಮತಭೇಟೆಯ ಭರಾಟೆ ಭರ್ಜರಿಯಾಗಿ ಸಾಗುತ್ತಿದ್ದು, ದಿನ ಸಮೀಪವಾಗುತ್ತಿದ್ದಂತೆ ಎಲ್ಲೆಡೆ ರೋಡ್ ಶೋ ಸಮಾವೇಶಗಳ ಮೂಲಕ ಮತಯಾಚನೆ ಕಾರ್ಯಕ್ರಮಗಳು ನಡೆಯುತ್ತಿವೆ.

ಇದರೊಂದಿಗೆ ಪಕ್ಷಗಳ ಕಾರ್ಯಕರ್ತರು, ಬೆಂಬಲಿಗರೆಲ್ಲಾ ನಾಯಕರ ಜೊತೆ ಗಲ್ಲಿ ಗಲ್ಲಿ ಸುತ್ತಿ ಮನೆಮನೆಗೂ ಹೋಗಿ ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಮತಯಾಚನೆ ಮಾಡುತ್ತಿದ್ದಾರೆ. ಇದರೊಂದಿಗೆ ಮ್ಯಾಜಿಕಲ್ ನಂಬರ್ ಗಿಟ್ಟಿಸಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳಿಂದಲೂ ಪ್ರಣಾಳಿಕೆಯಿಂದ ಭರವಸೆಯ ಅಸ್ತ್ರ ಪ್ರಯೋಗವಾಗುತ್ತಿದೆ.

ಡಬಲ್ ಎಂಜಿನ್ ಸರ್ಕಾರ ಎಂದು ಕರೆಸಿಕೊಂಡಿರುವ BJP ಸರ್ಕಾರ ಕೂಡ ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಮತದಾರರನ್ನು ಒಲೈಸುತ್ತಿದೆ. ಇದಕ್ಕಾಗಿ ಅಮಿತ್ ಶಾ ಅಂತಹ ರಾಜಕೀಯ ಚಾಣಕ್ಯ ಮತ್ತು ಗೇಮ್ ಚೇಂಜರ್ ಎಂದು ಕರೆಸಿಕೊಂಡಿರುವ ನರೇಂದ್ರ ಮೋದಿ ಅವರು ಸಹ ಕರ್ನಾಟಕದ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. BJP ಸರ್ಕಾರ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದೆ ದಿನದಿಂದಲೂ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅನೇಕ ಅಭಿವೃದ್ಧಿ ಯೋಜನೆಗಳಿಗೆ ನರೇಂದ್ರ ಮೋದಿ ಅವರನ್ನೇ ಆಹ್ವಾನಿಸಿ ಕಾರ್ಯಕ್ರಮ ನಡೆಸಲಾಗಿದೆ.

ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ಮತ್ತು ಅವಕಾಶ ಒದಗಿಸುವ ಆಶಯ ತಮ್ಮದು ಎಂದು ಹೇಳಿಕೊಂಡು ಬರುವುದರ ಜೊತೆಗೆ ಅದೇ ರೀತಿ ನಡೆದುಕೊಂಡಿದೆ ಕೂಡ. ಇದುವರೆಗೂ ನೀಡಿದ್ದ ವಚನಗಳೆಲ್ಲವನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗದಿದ್ದರೂ ಸಾಕಷ್ಟು ಜನಪ್ರಿಯ ಯೋಜನೆಗಳಿಂದ BJP ಜನಪ್ರಿಯತೆ ಗಿಟ್ಟಿಸಿಕೊಂಡಿರುವುದು ಸುಳ್ಳಲ್ಲ.

ಅದರ ಪ್ರತಿ ಬಾರಿ ಎಲೆಕ್ಷನ್ ಬಂದಾಗ ಹೊಸ ಯೋಜನೆಗಳನ್ನು ಜಾರಿಗೆ ತರುವಂತಹ ಭರವಸೆಯಂತೂ ಇದ್ದೇ ಇರುತ್ತದೆ. ಜನ ಮತ ಕೇಳಲು ಹೋದಾಗ ಈ ಬಾರಿ ನಮಗಾಗಿ ಏನು ಮಾಡುತ್ತೀರಾ ಎಂದು ಪ್ರಶ್ನೆ ಕೇಳುತ್ತಾರೆ. ಕಾಂಗ್ರೆಸ್ ಮತ್ತು JDS ಪಕ್ಷಗಳು ಸಹ ಈಗಾಗಲೇ ಜನರಿಗೆ ಪ್ರಣಾಳಿಕೆ ಹೆಸರಿನಲ್ಲಿ ಸಾಕಷ್ಟು ಭರವಸೆಯನ್ನು ನೀಡುತ್ತಿರುವುದರಿಂದ BJP ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಕೆಲ ಅಂಶವನ್ನು ಸೇರಿಸಿ ಪ್ರಚಾರ ಮಾಡುತ್ತಿದೆ.

* ಪ್ರತಿ BPL ಕುಟುಂಬಕ್ಕೆ ಮೂರು ಸಿಲಿಂಡರ್ ಫ್ರೀ ಆಗಿ ಕೊಡುವುದು,
* ನಿವೇಶನ ಇಲ್ಲದವರಿಗೆ 10 ಲಕ್ಷ ಮನೆ ನಿರ್ಮಾಣ ಮಾಡಿ ಹಂಚುವುದು
* ಪ್ರತಿ BPL ಕುಟುಂಬಕ್ಕೂ 5kg ಅಕ್ಕಿ ಹಾಗೂ 5kg ಸಿರಿಧಾನ್ಯವನ್ನು ಉಚಿತವಾಗಿ ನೀಡುವುದು
* ಹಾಗೆ BPL ಕುಟುಂಬಕ್ಕೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲನ್ನು ಉಚಿತವಾಗಿ ನೀಡುವುದು
* ಹಿರಿಯ ನಾಗರಿಕರಿಗೆ ಉಚಿತವಾಗಿ ಮಾಸ್ಟರ್ ಹೆಲ್ತ್ ಚೆಕ್ ಅಪ್
* ಬೆಂಗಳೂರಿನ ಹೊಲ ವಲಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದೆ.

ಇದರ ನಡುವೆ ಪ್ರತಿಪಕ್ಷಗಳಿಂದ ಪ್ರಣಾಳಿಕೆಯ ವಿರುದ್ಧ ಟೀಕೆ ಟಿಪ್ಪಣಿ ಇದ್ದೆ ಇರುತ್ತದೆ. ಇನ್ನು ಕೆಲವರು ಕಳೆದ ಬಾರಿ ಹೇಳಿದ್ದ ಹಲವು ಯೋಜನೆಗಳನ್ನೇ ಇನ್ನು ಜಾರಿಗೆ ಬಂದಿಲ್ಲ ಎಂದು ಸಹ ಕುಹಕವಾಡುತ್ತಿದ್ದಾರೆ. BJP ಸರ್ಕಾರಕ್ಕೆ ಪೈಪೋಟಿಯಾಗಿರುವ ಕಾಂಗ್ರೆಸ್ ಮತ್ತು JDS ಪಕ್ಷಗಳಿಂದ ಉಚಿತ ಸಹಾಯಧನಗಳು, ನಿರುದ್ಯೋಗ ಭತ್ಯೆ, ಗೃಹಿಣಿಯರಿಗೆ ಸಹಾಯಧನ ವಿದ್ಯುತ್ ಉಚಿತ, ರೇಶನ್ ಉಚಿತ ಮುಂತಾದ ಬಲವಾದ ಅಸ್ತ್ರಗಳೇ ಪ್ರಯೋಗವಾಗುತ್ತಿದೆ.

ಆದರೆ ಕಾಯಕವೇ ಕೈಲಾಸ ಎಂದು ನಂಬಿರುವ ಬಸವಣ್ಣನ ನಾಡಿನವರು ಉದ್ಯೋಗ ಸೃಷ್ಟಿ ಮಾಡುವ ಸರ್ಕಾರವನ್ನು ನಂಬುತ್ತಾರೋ ಅಥವಾ ಎಲ್ಲವನ್ನು ಉಚಿತವಾಗಿ ಕೊಟ್ಟು ಸಹಾಯಧನವನ್ನು ನೀಡುವ ಸರ್ಕಾರಗಳಿಗೆ ಮನಸೊಲುತ್ತಾರೋ ಉತ್ತರ ಚುನಾವಣೆ ಫಲಿತಾಂಶದ ದಿನದಂದು ಸಿಗಲಿದೆ.

ಆನ್ ಲೈನ್ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸುವ ವಿಧಾನ.!

 

ಮತದಾರರ ಗುರುತಿನ ಚೀಟಿ ಭಾರತದ ಚುನಾವಣಾ ಆಯೋಗವು ನೀಡುವ ಒಂದು ಪುರಾವೆ ಆಗಿದೆ. ಈ ಫೋಟೋ ಗುರುತಿನ ಚೀಟಿಯನ್ನು 18 ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕರು ಪಡೆಯಲೇಬೇಕು. ಮತದಾನ ಮಾಡುವ ಸಮಯದಲ್ಲಿ ಒಂದು ಪ್ರಮುಖ ದಾಖಲೆಯಾಗಿ ಇದನ್ನು ತೋರಿಸಬಹುದು. ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿ ಪಡೆದ ನಂತರವಷ್ಟೇ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಣಿ ಆಗಲು ಸಾಧ್ಯ.

ಆದರೆ ಕೆಲವೊಮ್ಮೆ ತಂತ್ರಾಂಶದ ದೋಷದಿಂದಲೂ ಅಥವಾ ಹೊಸದಾಗಿ ಮತದಾರರ ಚೀಟಿ ಪಡೆದಾಗ ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ಅಚಾನಕ್ಕಾಗೆ ಬಿಟ್ಟು ಹೋಗಿರುತ್ತದೆ. ಅಂತಹ ಸಮಯದಲ್ಲಿ ಮತದಾನ ಮಾಡಲು ಹೋದಾಗ ತೊಂದರೆಗಳು ಆಗಬಾರದು ಎನ್ನುವ ಕಾರಣಕ್ಕಾಗಿ ಮುಂಚಿತವಾಗಿ ಆನ್ಲೈನ್ ನಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಿಕೊಳ್ಳಲು ಕೆಲವು ವಿಧಾನಗಳನ್ನು ಚುನಾವಣಾ ಆಯೋಗ ಸೂಚಿಸಿದೆ.

ಮತದಾರರ ಗುರುತಿನ ಚೀಟಿ ಪಡೆದವರಿಗೆ ಸ್ಥಳೀಯ ಚುನಾವಣೆಗಳಿಂದ ಹಿಡಿದು ರಾಷ್ಟ್ರಮಟ್ಟದ ಲೋಕಸಭಾ ಎಲೆಕ್ಷನ್ ತನಕ ವೋಟಿಂಗ್ ಮಾಡುವ ಅಧಿಕಾರ ಇರುತ್ತದೆ. ಆದರೆ ಈ ರೀತಿ ಮತದಾನ ಮಾಡಲು ಓಟಿಂಗ್ ಲಿಸ್ಟ್ ಅಲ್ಲಿ ನಿಮ್ಮ ಹೆಸರು ಇರುವುದು ಕೂಡ ಮುಖ್ಯ. ಆ ಪ್ರಕಾರವಾಗಿ ಈ ಕೆಳಗಿನ ವಿಧಾನಗಳು ಅನುಸರಿಸುವುದರಿಂದ ನೀವು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದಿಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬಹುದು. ನಂತರ ನೀವು ಯಾವ ಮತಗಟ್ಟೆಯಲ್ಲಿ ಮತದಾನ ಮಾಡಲು ಸಾಧ್ಯ ಎನ್ನುವುದರ ವಿವರವೂ ಸಹ ಬರುತ್ತದೆ. ಅದಕ್ಕಾಗಿ ನೀವು ಈ ಕ್ರಮಗಳನ್ನು ಅನುಸರಿಸಿ.

1. SMS ಮೂಲಕ:-
● EPIC ಎಂದು ಟೈಪ್ ಮಾಡಿ ನಿಮ್ಮ ಮತದಾರರ ಗುರುತಿನ ಸಂಖ್ಯೆಯನ್ನು ಹಾಕಿ 9211728082 ಅಥವಾ 1950 ಗೆ ಸಂದೇಶ ಕಳುಹಿಸಿ.
● ನೀವು ಸಂದೇಶ ಕಳುಹಿಸಿದ ಸ್ವಲ್ಪ ಸಮಯದಲ್ಲಿ ನಿಮ್ಮ ಮತಗಟ್ಟೆ ಸಂಖ್ಯೆ ಮತ್ತು ಹೆಸರು ಪ್ರತ್ಯುತ್ತರವಾಗಿ ನಿಮಗೆ ಸಂದೇಶದ ಮೂಲಕ ಬರುತ್ತದೆ. ಒಂದುವೇಳೆ ನಿಮಗೆ ಮರಳಿ ಸಂದೇಶ ಬಂದಿಲ್ಲ ಎಂದರೆ ವೋಟರ್ ಲಿಸ್ಟ್ ಅಲ್ಲಿ ನಿಮ್ಮ ಹೆಸರು ಇಲ್ಲ ಎಂದು ಅರ್ಥ.

2. ಆನ್ಲೈನ್ ಮೂಲಕ:-
● ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ NVSP ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಿ
● ಮೇನ್ ಪೇಜ್ ಅಲ್ಲಿ ಎಲೆಕ್ಟ್ರೋಲ್ ರೋಲ್ ಸರ್ಚ್ ಆಯ್ಕೆ ಇರುತ್ತದೆ, ಅದನ್ನು ಕ್ಲಿಕ್ ಮಾಡಿದರೆ ಹೊಸ ಪೇಜ್ ತೆಗೆದುಕೊಳ್ಳುತ್ತದೆ. ಅದರಲ್ಲಿ ನೀವು ನಿಮ್ಮ ಮಾಹಿತಿಯನ್ನು ನಮೂದಿಸಬೇಕು.
● ಆ ಹೊಸ ಪೇಜ್ ಅಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ತೋರಿಸಲು ಎರಡು ಆಯ್ಕೆಗಳನ್ನು ಕೇಳುತ್ತದೆ. ಆ ಪ್ರಕಾರವಾಗಿ ಮುಂದುವರೆಯಿರಿ.

● ಮೊದಲ ಆಯ್ಕೆಯಾಗಿ ನೀವು ನಿಮ್ಮ ಹೆಸರು, ನಿಮ್ಮ ಗಂಡ ಅಥವಾ ತಂದೆ ಹೆಸರು, ನಿಮ್ಮ ಹುಟ್ಟಿದ ದಿನಾಂಕ, ನಿಮ್ಮ ವಿಳಾಸ, ಲಿಂಗ ಇವುಗಳನ್ನು ನಮೂದಿಸಬೇಕು. ಇದಾದ ಬಳಿಕ ನಿಮ್ಮ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರವನ್ನು ನಮೂದಿಸುವ ಮೂಲಕ ಬರುವ ಲಿಸ್ಟ್ ಅಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಬಹುದು.
● ಎರಡನೇ ಸುಲಭದ ಆಯ್ಕೆ ಎಂದರೆ ನೀವು ಇವುಗಳ ಬದಲು ನಿಮ್ಮ EIPC ಸಂಖ್ಯೆ ಮೂಲಕ ಹುಡುಕುವುದು. EIPC ಸಂಖ್ಯೆ ಮತ್ತು ಸ್ಟೇಟಸ್ ನಮೂದಿಸಿ ನಂತರ ಬರುವ ಕ್ಯಾಪ್ಚಾ ಕೋಡನ್ನು ಹಾಕಿ ವೆಬ್ಸೈಟ್ ನಲ್ಲಿ ಮಾಹಿತಿಯನ್ನು ಅಧಿಕೃತಗೊಳಿಸಬೇಕು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವೆಬ್ ಪೇಜ್ ನಿಮಗೆ ಮತದಾರರ ನೋಂದಣಿ ವಿವರಗಳನ್ನು ತೋರಿಸುತ್ತದೆ.

PUC ಫೇಲ್ ಆದ ಮಕ್ಕಳಿಗೆ ವಿಶೇಷ ಸೂಚನೆ, PU ಬೋರ್ಡ್ ನಿಂದ ಮಹತ್ವದ ನಿರ್ಧಾರ…

 

ದ್ವಿತೀಯ PUC ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿ ಜೀವನದ ಒಂದು ಪ್ರಮುಖ ಘಟ್ಟ. SSLC ಮುಗಿದ ಬಳಿಕ ಜೀವನದ ಗುರಿ ನಿರ್ಧರಿಸಿಕೊಳ್ಳುವ ಮಕ್ಕಳುಗಳು PUC ಹಂತವನ್ನು ಕೂಡ ಕನ್ಫ್ಯೂಷನ್ ಅಲ್ಲಿಗೆ ದಾಟಬೇಕಾಗುತ್ತದೆ. PUC ಆದ ಬಳಿಕ ಅವರು ಬಯಸುವ ಕ್ಷೇತ್ರಕ್ಕೆ ಅಧಿಕೃತವಾಗಿ ಎಂಟ್ರಿ ಕೊಡಬಹುದು. ತಮ್ಮ ಇಚ್ಛೆಯ ಒಂದು ಫೀಲ್ಡ್ ಅನ್ನು ಮುಟ್ಟಲು ಪಿಯುಸಿ ಕೊನೆಯ ಹಂತ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಏನು ಅಥವಾ ತಾವು ಏನಾಗಬೇಕು ಎನ್ನುವುದನ್ನು ಅಲ್ಲೇ ನಿರ್ಧಾರ ಮಾಡಿಬಿಡುತ್ತಾರೆ.

ತಾವು ವೈದ್ಯರಾಗಬೇಕೋ, ವಕೀಲರಾಗಬೇಕೋ ಅಥವಾ ಇಂಜಿನಿಯರಿಂಗ್ ಆಗಬೇಕೋ ಅಥವಾ ಚಾರ್ಟೆಡ್ ಅಕೌಂಟ್ ಆಗಬೇಕೋ ಎನ್ನುವುದು ಅಲ್ಲಿ ಫಿಲ್ಟರ್ ಆಗಿಬಿಡುತ್ತದೆ. ಕೆಲವೊಮ್ಮೆ ಈ ನಿರ್ಧಾರ ವಿದ್ಯಾರ್ಥಿಗಳ ಕೈಲಿ ಇರುವುದಿಲ್ಲ ಬದಲಾಗಿ ಪೋಷಕರ ಒತ್ತಾಯದ ಅಥವಾ ಆಸಕ್ತಿ ಅನುಸಾರವಾಗಿ ವಿದ್ಯಾರ್ಥಿಗಳು ಕನಸು ಕಟ್ಟಿಕೊಳ್ಳುತ್ತಾರೆ.

ಪಿಯುಸಿಯಲ್ಲಿ ವಿಜ್ಞಾನ ಓದಿದ ವಿದ್ಯಾರ್ಥಿಗಳು ತಾವು ಇಂಜಿನಿಯರಿಂಗ್ ಕ್ಷೇತ್ರ ಆರಿಸಿ ಹೋಗಬೇಕಾ ಅಥವಾ ವೈದ್ಯಲೋಕದಂತಹ ಸೇವಾ ವಲಯಕ್ಕೆ ಸೇರಬೇಕಾ ಎನ್ನುವುದು ಬರೆಯುವ CETಯಲ್ಲಿ ಬರುವ ರ್ಯಾಂಕಿಂಗ್ ಮೇಲೆ ನಿರ್ಧಾರ ಆಗುತ್ತದೆ. ಅದರಿಂದ ಪ್ರತಿಯೊಬ್ಬ ವಿಜ್ಞಾನ ವಿದ್ಯಾರ್ಥಿ ಕೂಡ ಸಿಇಟಿ ಬರೆಯುತ್ತಾರೆ. ಪಡೆದ ಅಂಕಗಳ ಆಧಾರದ ಮೇಲೆ ಸೀಟುಗಳ ಹಂಚಿಕೆ ಆಗುತ್ತದೆ.

ಸರ್ಕಾರಿ ಸೀಟುಗಳು ಬೇಕು ಅಥವಾ ತಮ್ಮ ಇಚ್ಛೆಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡಬೇಕು ಎಂದರೆ ಈ ರೀತಿ CETಯಲ್ಲಿ ಪಡೆವ ಅಂಕಗಳು ಬಹಳ ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ದ್ವಿತೀಯ PUC ಅಭ್ಯಾಸ ನಡೆಸುವಾಗಲೇ CETಗೂ ಕೂಡ ತಯಾರಾಗಿ ಒಟ್ಟೊಟ್ಟಿಗೆ ಟ್ಯೂಷನ್ ಪಡೆದು ತಯಾರಾಗುತ್ತಾರೆ. ಸಾಮಾನ್ಯವಾಗಿ CET ಪ್ರಶ್ನೆ ಪತ್ರಿಕೆಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಎರಡು ವರ್ಷಗಳು ಓದಿದ ವಿಷಯದ ಕುರಿತೇ ಪ್ರಶ್ನೆಗಳು ಬರುತ್ತವೆ.

MCQ ಆಧಾರಿತ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡ ಈ ಪರೀಕ್ಷೆಯನ್ನು ದ್ವಿತೀಯ PUC ಪಾಸ್ ಆದ ಮೇಲೆ ಬರೆಯಬೇಕು ಎನ್ನುವ ನಿಯಮ ಇಲ್ಲ. ದ್ವಿತೀಯ PUC ಪರೀಕ್ಷೆ ಮಾರ್ಚ್ ತಿಂಗಳಲ್ಲಿಯೇ ಮುಗಿದು ಹೋಗಿರುತ್ತದೆ. ಮೇ ತಿಂಗಳ ಮೊದಲ ವಾರ ಅಥವಾ ಮಧ್ಯದಲ್ಲಿ ಪ್ರತಿ ವರ್ಷ CET ಎಕ್ಸಾಮ್ ಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ಈ ಸಮಯಕ್ಕಾಗಲೇ ದ್ವಿತೀಯ PUC ರಿಸಲ್ಟ್ ಕೂಡ ಬಂದು ಬಿಟ್ಟಿರುತ್ತದೆ. ಕೆಲವರು ಅನುತ್ತೀರ್ಣರಾಗಿ ಹೋಗಿರುತ್ತಾರೆ.

ಆದರೆ ಅವರು CET ಬರೆಯಲು ಪ್ರಿಪೇರ್ ಆಗಿರುತ್ತಾರೆ. ಹಾಗೆ CETಗೆ ಅರ್ಜಿ ಕೂಡ ಸಲ್ಲಿಸಿ ಆಗಿರುತ್ತದೆ ಮತ್ತು ಕೆಲವು ವಿದ್ಯಾರ್ಥಿಗಳು ಕಡಿಮೆ ಅಂಕ ಬಂದಿದೆ ಎನ್ನುವ ಕಾರಣಕ್ಕೆ ಪೂರಕ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ ಆಗ ಅವರು ಆ ವರ್ಷ ಸಿಟಿ ಬರೆಯಬೇಕು ಬರೆಯಬಾರದು ಎನ್ನುವ ಗೊಂದಲಕ್ಕೆ ಒಳಗಾಗುತ್ತಾರೆ. ಇದಕ್ಕೆ ಈ ವರ್ಷ ಪೂರಕ ಪರೀಕ್ಷೆ ಬರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಹಕಿ ಎಸ್.ರಮ್ಯ ಅವರು ಈ ಕುರಿತು ಮಹತ್ವದ ಸುದ್ದಿ ಹಂಚಿಕೊಂಡಿದ್ದಾರೆ.

ಅದೇನೆಂದರೆ ಮೇ 20 ಮತ್ತು 21ನೇ ತಾರೀಕು ಸಿಇಟಿ ಪರೀಕ್ಷೆಗಳು ನಡೆಯಲಿವೆ. ಈ ನಡುವೆ ಪೂರಕ ಪರೀಕ್ಷೆ ತೆಗೆದುಕೊಳ್ಳು ವಿದ್ಯಾರ್ಥಿಗಳು ಕೂಡ ಸಿಇಟಿ ಪರೀಕ್ಷೆಗೆ ಹಾಜರಾಗಬೇಕು ಎಂದು ಪಿಯು ಬೋರ್ಡ್ ನಿರ್ದೇಶಕಿ ಎಸ್ ರಮ್ಯಾ ಅವರು ಸ್ಪಷ್ಟ ಪಡಿಸಿದ್ದಾರೆ. ವಿದ್ಯಾರ್ಥಿಗಳು CET ಪರೀಕ್ಷೆಗೆ ಹಾಜರಾಗಿದ್ದರೆ ಮಾತ್ರ ಅವರ ಪೂರಕ ಪರೀಕ್ಷೆ ಅಂಕಗಳನ್ನು ಸೀಟುಗಳ ಹಂಚಿಕೆಗೆ ಪರಿಗಣನೆಗೆ ತೆಗೆದುಕೊಳ್ಳವುದು ಎಂದು ತಿಳಿಸಿದ್ದಾರೆ. ಆದ್ದರಿಂದ ತಪ್ಪದೇ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೆಲ್ಲ ಸಿಇಟಿ ಪರೀಕ್ಷೆ ಬರೆಯಿರಿ.