Home Blog Page 211

ನಟಿ ರಶ್ಮಿಕಾ 1 ತಿಂಗಳಿಗೆ ಎಷ್ಟು ಆದಾಯ ಪಡೆಯುತ್ತಾರೆ ಗೊತ್ತಾ. ಇವರ ಆದಾಯ ಕೇಳಿದ್ರೆ ಪಕ್ಕಾ ಶಾ-ಕ್ ಆಗ್ತೀರಾ.

 

ಕೊಡಗಿನ ಕುವರಿ ರಶ್ಮಿಕ ಮಂದಣ್ಣ ಈಗ ಪ್ಯಾನ್ ಇಂಡಿಯ ತಾರೆ. ನ್ಯಾಷನಲ್ ಕ್ರಷ್ ಎನ್ನುವ ಬಿರುದು ಕೂಡ ಪಡೆದಿರುವ ಈಕೆ ಅತಿ ಕಡಿಮೆ ವಯಸ್ಸಿಗೆ ಭಾರತದ ಎಲ್ಲಾ ಪ್ರಮುಖ ಚಿತ್ರರಂಗಗಳಲ್ಲೂ ಗುರುತಿಸಿಕೊಂಡಿರುವ ನಟಿಯಾಗಿದ್ದಾರೆ. 2016 ರಲ್ಲಿ ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗಲೇ ರಿಷಬ್ ಶೆಟ್ಟಿ ಅವರ ನಿರ್ದೇಶನದ ರಕ್ಷಿತ್ ಶೆಟ್ಟಿ ನಿರ್ಮಾಣ ಮತ್ತು ನಟನೆಯ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದ ಮೂಲಕ ಚಿತ್ರರಂಗ ಎಂಟ್ರಿಕೊಟ್ಟ ಈಕೆ ಆನಂತರ ಹಿಂತಿರುಗಿ ನೋಡಿದ್ದೇ ಇಲ್ಲ.

ಕಿರಿಕ್ ಪಾರ್ಟಿ ಸಿನಿಮಾ ನಂತರ ದರ್ಶನ್, ಪುನೀತ್, ಧ್ರುವ ಸರ್ಜಾ, ಗಣೇಶ್ ರಂತಹ ಸ್ಟಾರ್ಗಳ ಜೊತೆ ತೆರೆ ನಟಿಸಿದ ಈಕೆ ಚಲೋ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ವಿಜಯ ದೇವರಕೊಂಡ ಜೊತೆ ನಟಿಸಿದ ಗೀತಾಗೋವಿಂದಂ ಸಿನಿಮಾ ಇವರಿಗೆ ದೊಡ್ಡ ಬ್ರೇಕ್ ನೀಡಿತು. ಇವರಿಬ್ಬರ ತೆರೆ ಮೇಲಿನ ಕೆಮೆಸ್ಟ್ರಿಯನ್ನು ಜನ ಮೆಚ್ಚಿಕೊಂಡರು. ಇದೇ ಕಾಂಬಿನೇಷನ್ ಡಿಯರ್ ಕಾಮ್ರೆಡ್ ಸಿನಿಮಾದಲ್ಲೂ ಕೂಡ ಸಕ್ಸಸ್ ಕಂಡಿತು.

ಮಹೇಶ್ ಬಾಬು, ಅಲ್ಲು ಅರ್ಜುನ್ ಅಂತಹ ಸ್ಟಾರ್ಗಳ ಜೊತೆ ತೆರೆ ಹಂಚಿಕೊಳ್ಳುವ ಅದೃಷ್ಟವೂ ಒಲಿಯಿತು. ಅದರಲ್ಲೂ ಕಳೆದ ವರ್ಷ ತೆರೆಕಂಡ ಪುಷ್ಪ -2 ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಶ್ರೀ ವಲ್ಲಿ ಆಗಿ ಕಾಣಿಸಿಕೊಂಡು ಈಕೆ ಆ ಮೂಲಕ ಪಾನ್ ಇಂಡಿಯಾ ನಟಿ ಆದರು. ಇದೇ ಸಿನಿಮಾದ ಸಕ್ಸಸ್ ನಿಂದ ತಮಿಳಿನ ವಿಜಯ್ ದಳಪತಿ ಜೊತೆ ವಾರಿಸು ಸಿನಿಮಾ ಮಾಡುವ ಅವಕಾಶ ಪಡೆದುಕೊಂಡರು.

ನಂತರ ಮಲಯಾಳಂನಲ್ಲೂ ಕೂಡ ಸಿನಿಮಾ ಒಂದರಲ್ಲಿ ಕಾಣಿಸಿಕೊಂಡು ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲೂ ಹೆಸರುವಾಸಿಯಾದ ನಟಿ ಎನಿಸಿಕೊಂಡರು. ಈಗ ಬಾಲಿವುಡ್ ಕಡೆ ಹಾರಿರುವ ರಶ್ಮಿಕ ಮೊದಲ ಸಿನಿಮಾದಲ್ಲಿ ಅಮಿತಾ ಬಚ್ಚನ್ ಜೊತೆ ಅಭಿನಯಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇದೆಲ್ಲಾ ಸಿನಿಮಾಗಳ ಕಥೆ ಆದರೆ ಸಿನಿಮಾ ಹೊರತುಪಡಿಸಿ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಜೊತೆಗೆ ಅನೇಕ ಜಾಹಿರಾತುಗಳಲ್ಲೂ ಕೂಡ ಕಂಪನಿಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಕಲ್ಯಾಣ್ ಜುವೆಲ್ಲರ್ಸ್ ಗೂ ಕೂಡ ರಾಯಭಾರಿ ಆಗಿರುವ ಈಕೆ ಇದೆಲ್ಲದರಿಂದ ಸಂಪಾದಿಸುತ್ತಿರುವ ಹಣ ಎಷ್ಟಿರಬಹುದು ಎಂದು ಜನರಿಗೆ ಆಶ್ಚರ್ಯ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ವಿಚಾರ ಬಂದಾಗ ಅವರ ಮೇಲೆ ಆದ ಐಟಿ ರೈಡ್ ಬಗ್ಗೆಯೂ ನೆಟ್ಟಿಗರು ಚರ್ಚೆ ಮಾಡುತ್ತಾರೆ. ಹಾಗೆಯೇ ಇಷ್ಟೆಲ್ಲಾ ಬಿಝಿ ಆಗಿರೋ ರಶ್ಮಿಕ ಎಷ್ಟು ಸಂಪಾದನೆ ಮಾಡುತ್ತಿರಬಹುದು ಎಂದು ಲೆಕ್ಕ ಹಾಕುತ್ತಾರೆ. ಬಲವಾದ ಮೂಲಗಳ ಪ್ರಕಾರ ರಶ್ಮಿಕ ಮಂದಣ್ಣ ಒಂದು ಸಿನಿಮಾಗೆ 4 ಕೋಟಿ ಸಂಭಾವನೆ ಡಿಮಾಂಡ್ ಮಾಡುತ್ತಾರಂತೆ.

ಇವರ ಮಾಸಿಕ ಆದಾಯ 60 ಲಕ್ಷಕ್ಕಿಂತ ಹೆಚ್ಚು ಇರುತ್ತದೆ ಎನ್ನುವುದನ್ನು ಮೂಲ ತಿಳಿಸಿದೆ. ವರ್ಷಪೂರ್ತಿ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಈ ನಟಿ ಈಗಾಗಲೇ 64 ಕೋಟಿ ಓಡತಿ ಎನ್ನುವುದು ಮಾಧ್ಯಮಗಳಲ್ಲಿ ವರದಿ ಆಗಿದೆ. ವರ್ಷದಿಂದ ವರ್ಷಕ್ಕೆ ರಶ್ಮಿಕ ಮಂದಣ್ಣ ಆದಾಯ, ಸಂಭಾವನೆ ಎಲ್ಲವೂ ಹೆಚ್ಚಾಗುತ್ತಿದ್ದು ಹಲವು ಕಡೆ ಐಷಾರಾಮಿ ಬಂಗಳೆಗಳನ್ನು ಮತ್ತು ಫ್ಲಾಟ್ ಗಳನ್ನು ಕೂಡ ಖರೀದಿಸಿದ್ದಾರೆ.

ಈಗಾಗಲೇ ಬೆಂಗಳೂರಿನಲ್ಲಿ ಕೂಡ ಅರಮನೆಂತಹ ಮನೆ ಹೊಂದಿರುವ ರಶ್ಮಿಕ ಮಂದಣ್ಣ ಸದ್ಯದಲ್ಲಿ ಮುಂಬೈನಲ್ಲಿ ಮನೆ ಖರೀದಿಸುವ ಸಾಧ್ಯತೆ ಇದೆ. ಯಾಕೆಂದರೆ ಬಿ ಟೌನ್ ವಲಯದಲ್ಲಿ ನೆಲೆಯೂರಲು ಬಯಸಿರುವ ಈಕೆ ಅಲ್ಲೇ ಕಳೆದು ಹೋದರು ಅನುಮಾನ ಇಲ್ಲ. ಏನೇ ಆಗಲಿ ನಮ್ಮ ನಾಡಿನ ನಟಿಯೊಬ್ಬರು ದೇಶದಾದ್ಯಂತ ಸೌಂಡ್ ಮಾಡುತ್ತಿರುವುದು ಕನ್ನಡಿಗರಾದ ನಾವು ಹೆಮ್ಮೆಪಡುವ ವಿಷಯವೇ ಸರಿ.

ಹಣಕಾಸಿನ ಸಮಸ್ಯೆ ಏನೇ ಇದ್ದರೂ ಐದು ನಿಮಿಷದಲ್ಲಿ ಪರಿಹರಿಸುತ್ತಾಳೆ ಈ ಶಕ್ತಿಶಾಲಿ ದೇವತೆ. ಒಮ್ಮೆ ಈ ದೇವಾಲಯಕ್ಕೆ ಭೇಟಿ ನೀಡಿ ನಿಮ್ಮ ಸಂಕಷ್ಟ ನಿವಾರಣೆಯಾಗುತ್ತೆ.

 

ಹಿಂದೂಗಳ ನಂಬಿಕೆಗಳ ಪ್ರಕಾರ, ಪುರಾಣಗಳಲ್ಲಿ ಉಲ್ಲೇಖ ಆಗಿರುವ ಪ್ರಕಾರ ಒಟ್ಟಾರೆಯಾಗಿ 330 ಕೋಟಿ ದೇವತೆ ಹಾಗೂ ದೇವರುಗಳು ಇದ್ದಾರೆ. ಹಿಂದೂಗಳು ದೇವತೆಗಳನ್ನು ಬಹಳವಾಗಿ ನಂಬುತ್ತಾರೆ ಹಾಗೂ ಅವರ ನಂಬಿಕೆಗಳು ಹುಸಿಯಾಗದಂತೆ ದೇವತೆಗಳು ಕೂಡ ತನ್ನ ಭಕ್ತಾದಿಗಳ ಕಷ್ಟವನ್ನು ತೀರಿಸಿ ಕಾಪಾಡುತ್ತಾರೆ. ಇಂದಿಗೂ ಸಹ ಮನುಷ್ಯರು ತಾವು ಬಗೆಹರಿಸಲಾಗದ ಸಮಸ್ಯೆಗಳು ಬಂದಾಗ ದೇವರ ಮೊರೆ ಹೋಗುತ್ತಾರೆ.

ದೇವರುಗಳಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ತಮ್ಮ ಕಷ್ಟ ಪರಿಹಾರ ಆದ ಬಳಿಕ ಅಥವಾ ಇಷ್ಟಾರ್ಥ ಸಿದ್ಧಿಯಾದ ಬಳಿಕ ಬಂದು ಆ ಹರಕೆಗಳನ್ನು ತೀರಿಸುತ್ತಾರೆ. ಇದು ಅನಾಧಿಕಾರದಿಂದಲೂ ಕೂಡ ನಡೆದುಕೊಂಡು ಬಂದಿರುವ ಪದ್ಧತಿ. ಇದೆ ರೀತಿ ಹಣಕಾಸಿನ ಸಮಸ್ಯೆ ಬಂದಾಗ ಕರ್ನಾಟಕದಲ್ಲಿ ಒಂದು ದೇವತೆ ಬಹಳ ಎಲ್ಲರಿಗೂ ನೆನಪಾಗುತ್ತದೆ ಅದರಲ್ಲೂ ಬೆಂಗಳೂರಿನಲ್ಲಿಯೇ ನೆಲೆಸಿರುವ ಈ ತಾಯಿಯ ಶಕ್ತಿಯ ಬಗ್ಗೆ ಎಲ್ಲರೂ ಸಹ ಕೇಳಿರುತ್ತೀರಿ.

ಶಿವಾಜಿನಗರದಲ್ಲಿರುವ ಮುತ್ಯಾಲಮ್ಮ ತಾಯಿ ಬಗ್ಗೆ ಒಂದು ಬಾರಿಯಾದರೂ ನೀವು ಕೇಳಿಯೇ ಇರುತ್ತೀರಿ. ಮುತ್ಯಾಲಮ್ಮ ತಾಯಿ ಎಂದರೆ ತಾಯಿ ಕಾಳಿ ಮತ್ತೆ ಹಾಗೂ ದುರ್ಗಾ ಮಾತೆ ಒಟ್ಟಿಗೆ ಒಂದು ಶಕ್ತಿ ಆಗಿರುವುದು ಎಂದರ್ಥ. ಈ ತಾಯಿಯ ಶಕ್ತಿ ಎಷ್ಟಿದೆ ಎಂದರೆ ಹಣಕಾಸಿನ ಸಮಸ್ಯೆ ಇದ್ದವರು ಈ ದೇವಸ್ಥಾನಕ್ಕೆ ಬಂದು ಹರಕೆ ಕಟ್ಟಿಕೊಂಡರೆ 30 ದಿನಗಳಲ್ಲಿ ಪರಿಹಾರ ಆಗುತ್ತದೆ ಎನ್ನುವುದು ಪ್ರಚಲಿತದಲ್ಲಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ.

ಮುತ್ಯಾಲಮ್ಮ ದೇವಿಯ ದೇವಸ್ಥಾನ ಒಂದು ಹೈದರಾಬಾದ್ ಅಲ್ಲಿ ಇದೆ. 1870ರಲ್ಲಿ ಹೈದರಾಬಾದ್ ನ ಒಂದು ದೇವಸ್ಥಾನದ ಒಂದು ಘಟನೆ ಜರುಗುತ್ತದೆ. ಅದೇನೆಂದರೆ ದೇವಾಲಯ ಒಂದರದಲ್ಲಿ ಇಬ್ಬರು ಹೆಣ್ಣು ಮಕ್ಕಳ ಕೆಲಸ ಮಾಡುತ್ತಿರುತ್ತಾರೆ. ಒಂದು ದಿನ ದಿನ ಇದ್ದಕ್ಕಿದ್ದಂತೆ ಅವರಿಬ್ಬರು ಶಿಲೆಯಾಗಿ ಬಿಡುತ್ತಾರೆ. ಅದನ್ನು ನೋಡಿದ ಪುರೋಹಿತರಿಗೆ ಅಂದು ತಿಳಿಯುತ್ತದೆ ಅವರಿಬ್ಬರು ಕಾಳಿ ಹಾಗೂ ದುರ್ಗಾ ಅವತಾರ ಎಂದು ಅಂದಿನಿಂದ ಆ ಶಕ್ತಿ ಅವತಾರರನ್ನು ಮುತ್ಯಾಲಮ್ಮ ಎಂದು ಪೂಜಿಸಿಕೊಂಡು ಬರಲಾಗಿದೆ.

ಹೈದ್ರಾಬಾದ್ ಭಾಗದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಮುತ್ಯಾಲಮ್ಮ ದೇವಿಯ ದೇವಾಲಯಗಳು ಇವೆ. ಈ ರೀತಿ ಅಂದು ಶಿಲೆಯಾಗಿ ನಿಂತ ಆ ದೇವತೆಗಳ ಫೋಟೋವನ್ನು ಕೂಡ ತೆಗೆದು ದೇವಲಾಯದ ಆವರಣದಲ್ಲಿ ಹಾಕಲಾಗಿದೆ, ಇಂದಿಗೂ ಕೂಡ ಹೈದರಾಬಾದಿನ ಮುತ್ಯಾಲಮ್ಮ ದೇವಾಲಯದಲ್ಲಿ ಈ ಫೋಟೋವನ್ನು ಕಾಣಬಹುದು. ಹಾಗೆ ಅಂದಿನ ಬ್ರಿಟಿಷ್ ಗವರ್ನರ್ ಆಗಿದ್ದ ಎಡ್ವರ್ಡ್ ಅವರು ಕೂಡ ಈ ತಾಯಿ ಶಕ್ತಿಗೆ ಸೋತು ಶರಣಾಗಿ ನಮಿಸಿದ್ದ.

ತಾಯಿಯು ಶಿಲೆಯಾಗಿ ನಿಂತ 2 ಗಂಟೆಗಳ ಒಳಗೆ ತೆಗೆದ ಫೋಟೋ ಇಂಗ್ಲೆಂಡಿನಲ್ಲಿರುವ ಎಡ್ವರ್ಡ್ ಮನೆಯಲ್ಲಿಯೂ ಇರುವುದನ್ನು ಕಾಣಬಹುದು. ಇಂದಿಗೂ ಸಹ ಎಡ್ವರ್ಡ್ ಮನೆತನದವರು ಹೈದರಾಬಾದ್ ನಲ್ಲಿರುವ ಈ ಮುತ್ಯಾಲಮ್ಮ ದೇವಿ ದೇವಾಲಯಕ್ಕೆ ವರ್ಷಕೊಮ್ಮೆ ಬಂದು ಪೂಜೆ ಸಲ್ಲಿಸುತ್ತಾರೆ. ಬೆಂಗಳೂರಿನಲ್ಲಿರುವ ಈ ಮುತ್ಯಾಲಮ್ಮ ದೇವಿ ದೇವಸ್ಥಾನದಲ್ಲಿಯೂ ವರ್ಷಕ್ಕೊಮ್ಮೆ ಅದ್ದೂರಿಯಾಗಿ ಉತ್ಸವ ನಡೆಯುತ್ತದೆ. ಸಿನಿಮಾ ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಈ ತಾಯಿಗೆ ಭಕ್ತರಾಗಿದ್ದಾರೆ.

ಹರಕೆಗಳನ್ನು ಹೊರುವುದಕ್ಕೆ ಹಾಗೂ ತೀರಿಸುವುದಕ್ಕಾಗಿಯೇ ಈ ದೇವಾಲಯಕ್ಕೆ ಬರುತ್ತಾರೆ. ಈ ದೇವಾಲಯಕ್ಕೆ ಹಣಕಾಸಿನ ಸಮಸ್ಯೆ ಇದ್ದಾಗ ಬಂದು ಹರಕೆ ಹೊತ್ತುಕೊಂಡು 21 ಪ್ರದಕ್ಷಿಣೆ ಹಾಕಿ ಹೋದರೆ ಖಂಡಿತವಾಗಿಯೂ ಆ ಸಮಸ್ಯೆ ಪರಿಹಾರ ಆಗಿರುತ್ತದೆ. ನಂತರ ಒಂದು ದಿನ ಬಂದು ಹರಕೆ ತಿಳಿಸಬಹುದು. ಈ ರೀತಿ ಬೆಂಗಳೂರಿಗರನ್ನು ಕಾಯುತ್ತಿರುವ ಕರ್ನಾಟಕದ ಮನೆ ಮನೆಯಲ್ಲೂ ಹೆಸರಾಗಿರುವ ಮುತ್ಯಾಲಮ್ಮ ದೇವಿ ಆಶೀರ್ವಾದ ನಾಡಿನ ಜನರ ಮೇಲೆ ಸದಾ ಇರಲಿ ಎಂದು ಕೇಳಿಕೊಳ್ಳೋಣ.

ಕೇವಲ 5 ನಿನಿಷದಲ್ಲಿ ಮೊಬೈಲ್ ಮೂಲಕ ಪಾನ್ ಕಾರ್ಡ್ ಅಪ್ಲೈ ಮಾಡಿ.

 

ಪ್ಯಾನ್ ಕಾರ್ಡ್ ಎನ್ನುವುದು ಈಗ ಒಂದು ಅವಶ್ಯಕ ದಾಖಲೆ ಆಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಆಗಲಿ ಅಥವಾ ಖಾಸಗಿ ವಲಯದ ಹಣಕಾಸು ಸಂಸ್ಥೆಗಳಲ್ಲಿ ಆಗಲಿ ಆರ್ಥಿಕ ಚಟುವಟಿಕೆ ನಡೆಸಬೇಕು ಎಂದರೆ ಈ ಪಾನ್ ಕಾರ್ಡ್ ಇರಲೇಬೇಕು. ಆದರೆ ತೆರಿಗೆ ಇಲಾಖೆ ನೀಡುವ ಪ್ಯಾನ್ ಕಾರ್ಡ್ ಅನ್ನು ಭಾರತೀಯರಾದ ಪ್ರತಿಯೊಬ್ಬರು ಕೂಡ ಪಡೆದಿರಬೇಕು. ಪಾನ್ ಕಾರ್ಡ್ ಎಂದರೆ ಪರ್ಮನೆಂಟ್ ಅಕೌಂಟ್ ನಂಬರ್ ಎಂದರ್ಥ ಇದರಲ್ಲಿ 10 ಅಂಕೆಗಳ ಒಂದು ಯೂನಿಕ್ ನಂಬರನ್ನು ಒಬ್ಬ ವ್ಯಕ್ತಿಯೇ ಕೊಡಲಾಗುತ್ತದೆ.

ಒಬ್ಬ ವ್ಯಕ್ತಿ ಒಂದು ಬಾರಿ ಮಾತ್ರ ಈ ನಂಬರನ್ನು ಪಡೆದುಕೊಳ್ಳಲು ಸಾಧ್ಯ. ಇದರ ಮೂಲಕ ಆತನ ಆರ್ಥಿಕ ಚಟುವಟಿಕೆಗಳ ಲೆಕ್ಕಾಚಾರ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಇಂಥದೊಂದು ದಾಖಲೆಯನ್ನು ಆದಾಯ ತೆರಿಗೆ ಇಲಾಖೆಯು ಜಾರಿಗೆ ತಂದಿದೆ. ಸರ್ಕಾರದ ಪ್ರಮುಖ ದಾಖಲೆ ಆಗಿರುವ ಇದನ್ನು ಪಡೆಯಲು CSC ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕು.

ಈ ರೀತಿ ಹೊರಗೆ ಇಂಟರ್ನೆಟ್ ಸೆಂಟರ್ ಗಳಿಗೆ ಹೋಗಿ ಅರ್ಜಿ ಸಲ್ಲಿಸಿ ಪ್ಯಾನ್ ಕಾರ್ಡ್ ಪಡೆಯಬೇಕು ಎಂದರೆ ಕನಿಷ್ಠ 300 ರೂಪಾಯಿ ಆದರೂ ಖರ್ಚು ಹಾಗೆ ಆಗುತ್ತದೆ. ಹಳ್ಳಿಗಾಡಿನಲ್ಲಿ ಇರುವವರಿಗೆ ಅವರು ಇರುವ ಸ್ಥಳದಲ್ಲಿಯೇ ಈ ರೀತಿ ಪಾನ್ ಕಾರ್ಡ್ ಪಡೆಯಲು ಅವಕಾಶ ಸಿಗದೇ ಇದ್ದರೆ, ಅವರು ಪಕ್ಕದ ಪಟ್ಟಣ ಪ್ರದೇಶಗಳಿಗೆ ಬಂದು ಈ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬೇಕು, ಅದಕ್ಕೆ ಇನ್ನು ಹೆಚ್ಚಿನ ಖರ್ಚು ಬೀಳುತ್ತಿದೆ.

ಇದೆಲ್ಲಾ ಸಮಸ್ಯೆ ಇಲ್ಲದೆ ನೀವು ಇರುವಲ್ಲಿಯೇ ನಿಮ್ಮ ಕೈಲಿರುವ ಮೊಬೈಲ್ ಮೂಲಕವೇ ಪ್ಯಾನ್ ಕಾರ್ಡ್ ಪಡೆಯಬಹುದು. ಅದಕ್ಕಾಗಿ ಇರುವ ಸುಲಭ ವಿಧಾನಗಳನ್ನು ನಾವು ಈ ಅಂಕಣದ ಮೂಲಕ ಹೇಳಿ ಕೊಡುತ್ತಿದ್ದೇವೆ. ಮೊದಲಿಗೆ ಪ್ಯಾನ್ ಕಾರ್ಡ್ ಪಡೆಯಲು ಏನೆಲ್ಲ ಅರ್ಹತೆಗಳು ಇರಬೇಕು ಎಂದು ನೋಡುವುದಾದರೆ 18 ವರ್ಷ ತುಂಬಿದವರಿಗೆ ಮಾತ್ರ ಈ ರೀತಿ ಪ್ಯಾನ್ ಕಾರ್ಡ್ ಮಾಡಿಸಲು ಅವಕಾಶ ಇರುತ್ತದೆ.

ಜೊತೆಗೆ ಅವರು ಆಧಾರ್ ಕಾರ್ಡನ್ನು ಕಡ್ಡಾಯ ದಾಖಲೆ ಆಗಿ ಹೊಂದಿರಬೇಕು. ಆಧಾರ್ ಕಾರ್ಡ್ ಅಲ್ಲಿರುವ ಅವರ ಹೆಸರು ವಿಳಾಸ ಮತ್ತು ಹುಟ್ಟಿದ ದಿನಾಂಕ ಸೇರಿದಂತೆ ಎಲ್ಲಾ ಮಾಹಿತಿಗಳು ಕೂಡ ಸರಿಯಾಗಿರಬೇಕು. ಮೊಬೈಲ್ ನಂಬರ್ ಕೂಡ ನಿಮ್ಮದೇ ಆಗಿರಬೇಕು. ಆಧಾರ್ ಕಾರ್ಡ್ ಅಲ್ಲಿ ಇರುವ ಮೊಬೈಲ್ ನಂಬರ್ ಇಂದ ಮಾತ್ರ ಪಾನ್ ಕಾರ್ಡ್ ಅರ್ಜಿ ಸಲ್ಲಿಸಲು ಸಾಧ್ಯ ಜೊತೆಗೆ ಹುಟ್ಟಿದ ದಿನಾಂಕ ತಿಂಗಳು ಇಸವಿ ಮೂರು ಸಹ ಸ್ಪಷ್ಟವಾಗಿ ಇರಬೇಕು.

ಕೆಲವೊಂದು ಆಧಾರ್ ಕಾರ್ಡ್ ಅಲ್ಲಿ ಹುಟ್ಟಿದ ವರ್ಷ ಮಾತ್ರ ಇರುತ್ತದೆ. ಆ ರೀತಿ ಆಧಾರ್ ಕಾರ್ಡ್ ಇರುವವರಿಗೆ ಪಾನ್ ಕಾರ್ಡ್ ಮಾಡಿಸಲು ಸಾಧ್ಯವಾಗುವುದಿಲ್ಲ. ಆಧಾರ್ ಕಾರ್ಡ್ ಅಲ್ಲಿರುವ ಮಾಹಿತಿಯ ಅನುಸಾರ ಪಾನ್ ಕಾರ್ಡ್ ನ್ನು ಸಹ ಅದೇ ವಿಳಾಸಕ್ಕೆ ಅದೇ ಹೆಸರಿಗೆ ಮಾಡಲಾಗುತ್ತದೆ. ಇಷ್ಟೆಲ್ಲಾ ಇದ್ದರೆ ನಿಮ್ಮ ಕೈಯಲ್ಲಿರುವ ಮೊಬೈಲ್ ಉಪಯೋಗಿಸಿಕೊಂಡರೆ ನೀವು ಆಧಾರ್ ತೆರಿಗೆ ಇಲಾಖೆಯ ವೆಬ್ಸೈಟ್ಗೆ ಭೇಟಿ ಕೊಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಮೊದಲಿಗೆ ನಿಮ್ಮ ಆಂಡ್ರಾಯ್ಡ್ ಫೋನ್ ನಲ್ಲಿ ಯಾವುದಾದರೂ ಬ್ರೌಸರ್ ತೆಗೆದುಕೊಳ್ಳಿ ,ಕ್ರೋಮ್ ಅಥವಾ ಗೂಗಲ್ ಬಳಸಿ ಇನ್ಸ್ಟಾಂಟ್ ಇ-ಪ್ಯಾನ್ ಎಂದು ಟೈಪ್ ಮಾಡಿ ನಂತರ ಹಲವು ವೆಬ್ ಸೈಟ್ ಲಿಂಕ್ಗಳು ಕಾಣಿಸುತ್ತವೆ. ಅದರಲ್ಲಿ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಹೋಮ್ ಎನ್ನುವ ಮೇಲೆ ಕ್ಲಿಕ್ ಮಾಡಿ. ಆಗ ಇನ್ಕಮ್ ಟ್ಯಾಕ್ಸ್ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತದೆ. ನಂತರದ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ.

ಸರ್ಕಾರಿ ಆಸ್ಪತ್ರೆಯಲ್ಲಿ ನೇಮಕಾತಿ, SSLC ಆಗಿದ್ರೂ ಸಾಕು ಆಸಕ್ತರು ಇಂದೇ ಅರ್ಜಿ ಹಾಕಿ

 

ಸರ್ಕಾರಿ ಹುದ್ದೆಗಳನ್ನು ಪಡೆಯಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಸರ್ಕಾರಿ ಹುದ್ದೆಗಳಲ್ಲಿ ಭದ್ರತೆ ಹೆಚ್ಚು ಹಾಗೂ ವೇತನವು ಕೂಡ ತೃಪ್ತಿಕರವಾಗಿರುತ್ತದೆ ಎನ್ನುವ ಕಾರಣಕ್ಕಾಗಿ ಪ್ರತಿಯೊಬ್ಬರು ಕೂಡ ತಮ್ಮ ವಿದ್ಯಾಭ್ಯಾಸದ ದಿನದಿಂದಲೂ ಇದಕ್ಕೆ ತಯಾರಿ ನಡೆಸುತ್ತಾರೆ. ಕೆಲವರು ಖಾಸಗಿ ಉದ್ಯೋಗದ ಕಷ್ಟಗಳನ್ನು ಅರಿತ ಮೇಲೆ ಸರ್ಕಾರಿ ಹುದ್ದೆಗಳನ್ನು ಪಡೆದು ನೆಮ್ಮದಿಯಾಗಿ ಜೀವನ ಸಾಗಿಸಬಹುದು ಎನ್ನುವ ಕಾರಣಕ್ಕೆ ಸರ್ಕಾರಿ ಹುದ್ದೆಗಳ ಕಡೆ ವಾಲುತ್ತಾರೆ.

ಅದಕ್ಕಾಗಿ ತರಬೇತಿ ಅದು ಪರೀಕ್ಷೆ ಬರೆದು ಹುದ್ದೆ ಪಡೆಯುತ್ತಾರೆ. ಆದರೆ ವಿದ್ಯಾರ್ಹತೆ ಕಡಿಮೆ ಹೊಂದಿದವರಿಗೆ ಕೂಡ ಸರ್ಕಾರಿ ಉದ್ಯೋಗಗಳು ಸಿಗುತ್ತದೆಯಾ ಎನ್ನುವ ಅನುಮಾನ ಹಲವರಲ್ಲಿ ಇದೆ. ಸರ್ಕಾರದ ಕೆಲ ಹುದ್ದೆಗಳು ಕಡಿಮೆ ವಿದ್ಯಾಭ್ಯಾಸ ಹೊಂದಿದವರಿಗಾಗಿಯೇ ಇವೆ. ಈ ಹುದ್ದೆಗಳಿಗೆ ಪ್ರತಿಭಾನ್ವಿತರಾಗಿದ್ದರೆ ಸಾಕು ವಿದ್ಯಾರ್ಹತೆ ಕಡಿಮೆ ಇದ್ದರೂ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ದೇಶದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆ ಇದೆ ಎನ್ನುವ ಸುದ್ದಿಯನ್ನು ನಾವು ಕೇಳುತ್ತಿದ್ದೇವೆ. ಆ ಪ್ರಕರವಾಗಿಯೇ ಈ ಸುದ್ದಿ ಇದೆ. ಯಾಕೆಂದರೆ ಈಗಷ್ಟೇ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಪಿಂಪ್ರಿ ಚಿಂಚ್ ಲಾರ್ಡ್ ಮುನ್ಸಿಪಲ್ ಕಾರ್ಪೊರೇಷನ್ ಸಂಸ್ಥೆಯು ಅಧಿಸೂಚನೆಯನ್ನು ಹೊರಡಿಸಿದ್ದು ಆಸಕ್ತರಿಂದ ಅರ್ಜಿ ಆಹ್ವಾನ ಮಾಡಿದೆ.

ಆಶಾ ಸ್ವಯಂ ಕಾರ್ಯಕರ್ತೆಯರ ಹುದ್ದೆಗಳಿಗಾಗಿ ಈ ನೇಮಕಾತಿ ನಡೆಯುತ್ತಿದ್ದು ಇದಕ್ಕೆ ದೇಶದಾದ್ಯಂತ ಇರುವ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿಧಿಸಲಾಗಿರುವ ಶೈಕ್ಷಣಿಕ ವಿದ್ಯಾರ್ಹತೆ, ವಯೋಮಾನ ಮಿತಿ ಮತ್ತು ಅರ್ಜಿ ಸಲ್ಲಿಸುವ ರೀತಿ, ಕಡೆ ದಿನಾಂಕ ಮತ್ತಿತರ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.

ಸಂಸ್ಥೆಯ ಹೆಸರು:- ಪಿಂಪ್ರಿ ಚಿಂಚ್ ಲಾಡ್ ಮುನ್ಸಿಪಲ್ ಕಾರ್ಪೊರೇಷನ್ ( PCMC ).
ಹುದ್ದೆಗಳ ಸಂಖ್ಯೆ:- 154.
ಹುದ್ದೆಯ ಹೆಸರು:- ಆಶಾ ಸ್ವಯಂ ಕಾರ್ಯಕರ್ತೆಯರು.
ವೇತನ ಶ್ರೇಣಿ:- ಮೂಲಗಳ ಪ್ರಕಾರ 15,000 ದಿಂದ 20,000 ಮಾಸಿಕ ವೇತನ ಇರುತ್ತದೆ. ಹಾಗೂ PCMC ನಿಯಮಗಳ ಅನುಸಾರವಾಗಿ ಕಾಲಕಾಲಕ್ಕೆ ಇದು ಪರಿಷ್ಕೃತಗೊಳ್ಳುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ:- ಪ್ರಿಂಪಿ ಚಿಂಚ್ ಲಾರ್ಡ್ ಮುನ್ಸಿಪಲ್ ಕಾರ್ಪೊರೇಷನ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಅದಕ್ಕಿಂತಲೂ ಹೆಚ್ಚು ಅಥವಾ ಅದಕ್ಕೆ ತತ್ಸಮಾನ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.

ವಯೋಮಿತಿ:- ಪಿಂಪ್ರಿ ಚಿಂಚ್ ಲಾರ್ಡ್ ಮುನ್ಸಿಪಲ್ ಕಾರ್ಪೊರೇಷನ್ ಸಂಸ್ಥೆಯ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು
ಕನಿಷ್ಠ 20 ವರ್ಷಗಳನ್ನು ಪೂರೈಸಬೇಕು ಹಾಗೂ ಗರಿಷ್ಠ 45 ವರ್ಷಗಳನ್ನು ಮೀರಿರಬಾರದು.

ಅರ್ಜಿ ಶುಲ್ಕ:- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ವಿಧಿಸಿಲ್ಲ.
ಆಯ್ಕೆ ಪ್ರಕ್ರಿಯೆ:-
● ಸಂದರ್ಶನ
● ದಾಖಲೆಗಳ ಪರಿಶೀಲನೆ

ಅರ್ಜಿ ಸಲ್ಲಿಸುವ ವಿಧಾನ:- ಆಫ್ ಲೈನ್ ಮೂಲಕ. ●ಸಂಸ್ಥೆಯ ಅಧಿಕೃತ ವೆಬ್ಸೈಟ್ ಆದ pcmcindia.gov.in ವೆಬ್ಸೈಟ್ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ವಿವರಗಳನ್ನು ತುಂಬಿಸಿ ಸಂಬಂಧ ಪಟ್ಟ ದಾಖಲೆಗಳನ್ನು ಲಗತ್ತಿಸಿ ಸಂಸ್ಥೆಯ ಮಹಾರಾಷ್ಟ್ರದಲ್ಲಿರುವ ಆಡಳಿತ ಕಛೇರಿಗೆ ಅಂಚೆ ಮೂಲಕ ಕಳುಹಿಸಿಕೊಡಬೇಕು.

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ – 25.04.2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 04.05.2023.

ಮನೆಯಲ್ಲಿ ನೆಮ್ಮದಿ ಇಲ್ವಾ, ಕಲ್ಲುಪ್ಪಿನಿಂದ ಈ ಒಂದು ಚಿಕ್ಕ ಪ್ರಯೋಗ ಮಾಡಿ ನಂತರ ಆಗುವ ಜಾದು ನೋಡಿ.

 

ಕಲಿಯುಗದಲ್ಲಿ ಯಂತ್ರ ಶಕ್ತಿಗಳಂತೆ ತಂತ್ರಗಳು ಕೂಡ ಕೆಲಸ ಮಾಡುತ್ತವೆ. ಸದ್ಯಕ್ಕೆ ಕಲಿಯುಗದಲ್ಲಿ ಮಂತ್ರ ಗಳಿಗಿಂತ ತಂತ್ರಗಳೇ ಹೆಚ್ಚು ಕೆಲಸ ಮಾಡುತ್ತದೆ ಎಂದರೂ ತಪ್ಪಾಗಲಾರದು. ಆದ್ದರಿಂದ ಎಲ್ಲರೂ ಕೂಡ ಯಾವುದೇ ಸಮಸ್ಯೆ ಬಂದರೂ ತಂತ್ರಗಳ ಮೊರೆ ಹೋಗುತ್ತಾರೆ. ತಂತ್ರಗಳಿಂದ ಚಿಕ್ಕ ಚಿಕ್ಕ ಪ್ರಯೋಗಗಳನ್ನು ಮಾಡಿ ನಮ್ಮನ್ನು ಕಾಡುವ ನೆಗೆಟಿವ್ ಎನರ್ಜಿಗಳನ್ನು ದೂರ ಮಾಡಬಹುದು. ಇದರಿಂದ ಸಕರಾತ್ಮಕತೆ ತುಂಬಿ ಎಲ್ಲವೂ ಶುಭವಾಗಲು ಶುರು ಆಗುತ್ತದೆ.

ತಂತ್ರಕ್ಕೆ ಇರುವ ಶಕ್ತಿ ಅಂತಹದ್ದು. ಯಾವುದೇ ಕಾರಣಕ್ಕೂ ಇದರ ಶಕ್ತಿಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಸಂಪೂರ್ಣ ನಂಬಿಕೆ ಇಟ್ಟು ಈ ಪ್ರಯೋಗಗಳನ್ನು ಮಾಡಿದರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ. ಇಂತಹ ಒಂದು ತಂತ್ರಶಕ್ತಿ ಉಪಯೋಗವನ್ನು ಇಂದು ನಾವು ಈ ಅಂಕಣದಲ್ಲಿ ಹೇಳಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

ಕುಟುಂಬಗಳಲ್ಲಿ ಯಾವಾಗಲೂ ಜಗಳ ನಡೆಯುತ್ತಿದ್ದರೆ, ಯಾರು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಕುಟುಂಬದ ಯಾವ ಸದಸ್ಯರು ಏಳಿಗೆ ಆಗಲು ಸಾಧ್ಯವಾಗುತ್ತಿಲ್ಲವಾದರೆ ಸದಾ ಕಲಹ ಭಿನ್ನಾಭಿಪ್ರಾಯ ಮನಸ್ತಾಪ ಬೇಜಾರು ಮತ್ತು ದುಃಖ ಹಾಗೂ ಹಣದ ಕೊರತೆ ಆರೋಗ್ಯಭಾದೆ ಮುಂತಾದ ಸಮಸ್ಯೆಗಳು ನಿಮ್ಮನ್ನು ಬಾಧಿಸುತ್ತಾ ಇದ್ದರೆ ಇದಕ್ಕೆಲ್ಲ ಕಾರಣ ಮನೆಯಲ್ಲಿರುವ ನೆಗೆಟಿವ್ ಎನರ್ಜಿ. ಜೊತೆಗೆ ಶನಿ ಪ್ರಭಾವ ಕಡಿಮೆ ಇರುವುದು, ರಾಹುವಿನ ಪ್ರಭಾವ ಕಡಿಮೆ ಆಗಿರುವುದು ಕೂಡ ಇದಕ್ಕೆ ಕಾರಣ ಆಗುತ್ತದೆ.

ನಮ್ಮ ಜಾತಕದಲ್ಲಿ ರಾಹು ಮತ್ತು ಶನಿಗಳ ಬಲ ಹೆಚ್ಚಾಗಿದ್ದಾಗ ಯಾವುದೇ ಸಮಸ್ಯೆ ಬಂದರೂ ನಮಗೆ ನಿವಾರಿಸಿಕೊಡಲು ಶಕ್ತಿ ಬರುತ್ತದೆ. ಜೊತೆಗೆ ಕೆಲವೊಮ್ಮೆ ನಮಗೆ ಆಗದೇ ಇರುವವರು ನಮ್ಮ ಮೇಲೆ ಮಾಟ ಮಂತ್ರಗಳನ್ನು ಮಾಡಿಸುವುದರಿಂದ ಕೂಡ ಇಂತಹದೊಂದು ಸಮಸ್ಯೆಗೆ ಕುಟುಂಬದಲ್ಲಿರುವ ಎಲ್ಲಾ ಸದಸ್ಯರು ಈಡಾಗುತ್ತಾರೆ.

ಈ ಎಲ್ಲ ಸಮಸ್ಯೆಗಳಿಂದ ಹೊರಬರಲು ಈ ಒಂದು ಚಿಕ್ಕ ಪ್ರಯೋಗವನ್ನು ಮಾಡಿ ಸಾಕು. ಅದೇನೆಂದರೆ ಪ್ರತಿ ಶನಿವಾರದಂದು ನೀವು ಈ ಕೆಲಸ ಮಾಡಬೇಕು ಶನಿವಾರದಂದು ಬೆಳಿಗ್ಗೆ ಬೇಗ ಎದ್ದು ಮನೆಯಲ್ಲಾ ಸ್ವಚ್ಛಗೊಳಿಸಿ ಮುಂಜಾನೆ ಎಲ್ಲರಿಗಿಂತ ಮುಂಚೆ ನೀವು ಸ್ನಾನ ಮಾಡಿ ದೇವರಲ್ಲಿ ನಂಬಿಕೆಯಿಂದ ಪ್ರಾರ್ಥನೆ ಮಾಡಿ ಕಷ್ಟವನ್ನು ಕಳೆಯುವಂತೆ ಕೇಳಿಕೊಂಡು ಒಂದು ಗಾಜಿನ ಲೋಟ ತೆಗೆದುಕೊಳ್ಳಿ.

ಅದಕ್ಕೆ ನಿಮ್ಮ ಎರಡು ಕೈಗಳಿಂದ ಹಿಡಿಯುವಷ್ಟು ಎರಡು ಬಾರಿ ಉಪ್ಪನ್ನು ತುಂಬಿ, ಅದರ ಕೆಳಗೆ ಒಂದು ಪ್ಲೇಟ್ ಇಟ್ಟು ಅದನ್ನು ನೀವು ಸ್ನಾನ ಮಾಡುವ ಕೋಣೆಯಲ್ಲಿ ಯಾವುದಾದರೂ ಒಂದು ಮೂಲೆಯಲ್ಲಿ ಇಡಿ. ನಂತರ ನಿಮ್ಮ ಮನೆಯ ವಾತಾವರಣದಲ್ಲಿ ಆಗುವ ಬದಲಾವಣೆಯನ್ನು ನೀವೇ ಗಮನಿಸಿ. ಉಪ್ಪಿಗೆ ನೆಗೆಟಿವ್ ಎನರ್ಜಿಗಳನ್ನು ಸೆಳೆದುಕೊಳ್ಳುವ ಶಕ್ತಿ ಇರುತ್ತದೆ. ಅದು ಮನೆಯಲ್ಲಿರುವ ಎಲ್ಲ ನೆಗೆಟಿವ್ ಅನ್ನು ಸೆಳೆದು ಇಟ್ಟುಕೊಂಡಿರುತ್ತದೆ.

ನೀವು ಪ್ರತಿ ಶನಿವಾರದಂದು ಈ ಉಪ್ಪನ್ನು ಬದಲಾಯಿಸುತ್ತಿರಬೇಕು. ಈ ಉಪ್ಪನ್ನು ಹೊರಗೆ ಚೆಲ್ಲಿ ಅಥವಾ ಕಸಕ್ಕೆ ಹಾಕಿ ಮುಂದಿನ ಶನಿವಾರ ಆ ಗಾಜಿನ ಲೋಟವನ್ನು ಚೆನ್ನಾಗಿ ಶುದ್ಧಗೊಳಿಸಿ, ಎಂದಿನಂತೆ ಬೆಳಗ್ಗೆ ಬೇಗ ಎದ್ದು ಪೂಜೆ ಮಾಡಿ ದೇವರಲ್ಲಿ ಪ್ರಾರ್ಥಿಸಿ ಮತ್ತೆ ಉಪ್ಪುಹಾಕಿ, ಪ್ಲೇಟ್ ಇಟ್ಟು ಸ್ನಾನ ಮಾಡುವ ಕೋಣೆಯಲ್ಲಿ ಇಡಬೇಕು.ನಿಮ್ಮ ಕಷ್ಟಗಳು ಕಳೆಯುವ ತನಕ ನೀವು ಈ ಪ್ರಯೋಗವನ್ನು ಮಾಡಿಕೊಂಡು ಬಂದರೆ ಶೀಘ್ರವಾಗಿರುವ ಸಮಸ್ಯೆಯಿಂದ ಹೊರ ಬರುತ್ತೀರಿ.

ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತರಿಗೆ ದುಡ್ಡು ಕೊಡುವ ಭಾರತದ ಏಕೈಕ ದೇವಸ್ಥಾನ ಇದು.! ಈ ದೇವಾಲಯದ ವಿಶೇಷತೆ ಏನು ಗೊತ್ತಾ.?

 

ಭಾರತ ದೇಶದಲ್ಲಿ ಇರುವಷ್ಟು ಹಿಂದೂ ದೇವಾಲಯಗಳು ಪ್ರಪಂಚದ ಯಾವ ದೇಶದಲ್ಲೂ ಕೂಡ ಇರಲಾರದು. ಅತಿ ಹೆಚ್ಚು ಪುರಾತನ ದೇವಾಲಯಗಳನ್ನು ಹೊಂದಿರುವ ಖ್ಯಾತಿಗೆ ಒಳಗಾಗಿರುವ ಭಾರತ ದೇಶದಲ್ಲಿ ಒಂದೊಂದು ದೇವಾಲಯಗಳಲ್ಲಿ ಒಂದೊಂದು ರೀತಿಯ ವಿಶೇಷತೆ ಇರುವುದನ್ನು ಗಮನಿಸಬಹುದು. ನಮ್ಮ ದೇಶದಲ್ಲಿ ಹೆಜ್ಜೆ ಹೆಜ್ಜೆಗೂ ದೇವಾಲಯಗಳು ಸಿಗುತ್ತವೆ.

ನಮ್ಮ ಹಿಂದೂ ಧರ್ಮದವರ ನಂಬಿಕೆಗಳ ಪ್ರಕಾರ 300 ಕೋಟಿ ದೇವತೆಗಳೆಂದು ನಾವು ಹೇಳುವುದರಿಂದ ಆ ದೇವರು ಹಾಗೂ ದೇವತೆಗಳಿಗೆಲ್ಲ ದೇವಾಲಯ ಇದೆ. ಅದರಲ್ಲಿ ಕೆಲವು ದೇವಾಲಯಗಳು ತನ್ನ ಪ್ರಭಾವ ಹಾಗೂ ಶಕ್ತಿಯಿಂದ ದೇಶದಾದ್ಯಂತ ಎಲ್ಲರ ಗಮನವನ್ನು ಸೆಳೆಯುತ್ತವೆ ಅಂತ ವಿಶೇಷತೆ ಹೊಂದಿರುವ ದೇವಾಲಯ ಮಹಾರಾಷ್ಟ್ರದ ರತಲಂ ಸಮೀಪ ಮನಕ್ ಚೌಕ್ ಅಲ್ಲಿರುವ ಮಹಾಲಕ್ಷ್ಮಿಯ ದೇವಾಲಯ.

ಈ ದೇವಸ್ಥಾನಕ್ಕೆ ಸುಮಾರು 2000 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸ ಇದೆ. ಈ ದೇವಾಲಯದಲ್ಲಿ ಬಂಗಾರ, ಬೆಳ್ಳಿ ಹಾಗೂ ಸಾಲಿಗ್ರಾಮ ಮಾಡಿದ ಲಕ್ಷ್ಮಿಯ ವಿಗ್ರಹವಿದೆ. ಸಾಕ್ಷಾತ್ ಮಹಾಲಕ್ಷ್ಮಿ ತಾಯಿಯೇ ಇಲ್ಲಿ ನೆಲೆಸಿದ್ದಾರೆ ಎಂದು ಭಕ್ತರ ನಂಬಿಕೆ. ಈ ದೇವಾಲಯಕ್ಕೆ ಬಂದು ಭೇಟಿ ಕೊಟ್ಟು ಭಕ್ತಿಯಿಂದ ಏನೆನ್ನೇ ಬೇಡಿಕೊಂಡಿರು ಹರಕೆ ಕಟ್ಟಿಕೊಂಡರು ಅದು ನೆರವೇರುತ್ತದೆ.

ಆದರೆ ನೆರವೇರಿದ 30 ದಿನಗಳ ಒಳಗೆ ಬಂದು ಭಕ್ತರು ತಮ್ಮ ಹರಕೆ ತೀರಿಸಬೇಕು ಎನ್ನುವುದು ಇಲ್ಲಿನ ತಾಯಿ ಲಕ್ಷ್ಮಿಯ ಆಜ್ಞೆ ಜಾತಿ ಧರ್ಮ ಮತ ಇದ್ಯಾವುದರ ಭೇದ ಇಲ್ಲದೆ ದಿನಕ್ಕೆ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಇಲ್ಲಿಗೆ ಭೇಟಿ ಕೊಡುತ್ತಾರೆ. ಇಲ್ಲಿಗೆ ಮುಸ್ಲಿಮರು ಕೂಡ ಬಂದು ಪೂಜೆ ಮಾಡಿಸುವುದು ಈ ತಾಯಿಯ ಸಾಕ್ಷಾತ್ಕಾರಕ್ಕೆ ಇರುವ ಸಾಕ್ಷಿ.

ಶ್ರೀಮಂತ ದೇವಾಲಯಗಳ ಪೈಕಿ 21ನೇ ಸ್ಥಾನನಲ್ಲಿರುವ ಈ ಮಹಾಲಕ್ಷ್ಮಿಯ ದೇವಾಲಯದಲ್ಲಿ ಮತ್ತೊಂದು ವಿಶೇಷತೆ ಇದೆ. ಅದೇನೆಂದರೆ ಎಲ್ಲರೂ ಸಹ ದೇವಾಲಯಗಳಿಗೆ ಹೋಗುವಾಗ ಕಾಣಿಕೆಗಳನ್ನು ತೆಗೆದುಕೊಂಡು ಹೋಗುತ್ತಾರೆ ಅಥವಾ ಹರಕೆ ಏನಾದರೂ ಇದ್ದರೆ ಅದನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ದೇವಾಲಯದಲ್ಲಿ ಒಂದು ವಿಶೇಷ ಸಂದರ್ಭದಲ್ಲಿ ದೇವಾಲಯದಲ್ಲಿ ಭಕ್ತರಿಗೆ ಕಾಣಿಕೆ ಕೊಟ್ಟು ಕಳುಹಿಸಲಾಗುತ್ತದೆ.

ಮಹಾಲಕ್ಷ್ಮಿಗೆ ದೀಪಾವಳಿ ಬಹಳ ವಿಶೇಷ ಅಂದು ಎಲ್ಲರೂ ಮನೆ ಮತ್ತು ಅಂದ ಆಸ್ಪತ್ರೆಗಳಲ್ಲಿ ಹಾಗೂ ಮಹಾಲಕ್ಷ್ಮಿಯನ್ನು ಕೂರಿಸಿ ಪೂಜೆ ಮಾಡುತ್ತಾರೆ ಆ ಸಮಯದಲ್ಲಿ ಮಾತ್ರ ಐದು ದಿನಗಳ ವರೆಗೆ ದಿನದ 24 ತಾಸು ಕೂಡ ಮಹಾಲಕ್ಷ್ಮಿ ದೇವಸ್ಥಾನ ತೆರೆದಿರುತ್ತದೆ. ಅಂತಹ ಸಮಯದಲ್ಲಿ ತಾಯಿಯನ್ನು ಕಾಣಲು ದರ್ಶನಕ್ಕೆ ಬರುವ ಭಕ್ತಾದಿಗಳು ಯಾರು ಬರೀ ಕೈಯಲ್ಲಿ ವಾಪಸ್ಸು ಹೋಗುವುದಿಲ್ಲ ಯಾಕೆಂದರೆ ಲಕ್ಷ್ಮಿ ತಾಯಿಯು ವರಪ್ರಸಾದವಾಗಿ ಅವರಿಗೆ ಉಡುಗೊರೆ ಕೊಡುತ್ತಾರೆ.

ಅರ್ಥ ಏನು ಎಂದರೆ ಆ ಐದು ದಿನಗಳ ದೇವಾಲಯಕ್ಕೆ ಭೇಟಿ ಕೊಡುವವರಿಗೆ ಏನಾದರೂ ವಿಶೇಷ ಕಾಣಿಸಿಕೊಟ್ಟು ಅಥವಾ ದೇವಾಲಯದಲ್ಲಿ ಸಂಗ್ರಹ ಆಗುವ ಹಣ ಬೆಳ್ಳಿ ಬಂಗಾರ ಈ ರೀತಿ ಯಾವುದನ್ನಾದರೂ ಕೊಟ್ಟು ಭಕ್ತರಿಗೆ ಕಳುಹಿಸುತ್ತಾರೆ. ಇದು ಹಿಂದಿನಿಂದ ನಡೆದುಕೊಂಡು ಬಂದಿರೋ ವಾಡಿಕೆ ಆಗಿದೆ ಅದನ್ನು ಹೊರತುಪಡಿಸಿ ಇನ್ನು 96% ಆದಾಯವನ್ನು ದೇವಸ್ಥಾನದ ಏಳಿಗೆಗಾಗಿ ದೇವಸ್ಥಾನದ ಮಂಡಳಿ ಬಳಸಿಕೊಳ್ಳುತ್ತದೆ‌ ಈ ದೇವಾಲಯದಲ್ಲಿ ತಂದೆ ತಾಯಿ ಇಲ್ಲದ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಸಾಗುತ್ತಾರೆ. ಇಂದು ಅಲ್ಲಿ ಬೆಳೆದ ಅನೇಕ ಮಕ್ಕಳುಗಳು ಜೀವನದಲ್ಲಿ ಉನ್ನತ ಸ್ಥಾನ ತಲುಪಿದ್ದಾರೆ.

ಕ್ಲರ್ಕ್ ಹುದ್ದಗಳ ನೇಮಕಾತಿ ಆರಂಭ ಖಾಲಿ ಇರುವ 1156 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ ವೇತನ 35400 – 1,12,400 ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

.

ರಾಜ್ಯದ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೂ ಸಿಹಿಸುದ್ದಿ ಸರ್ಕಾರ ಕಡೆಯಿಂದ ಮತ್ತೊಂದು ನೇಮಕಾತಿ ನಡೆಯುತ್ತಿದ್ದು, ಈ ಬಾರಿ ಹುದ್ದೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹೆಚ್ಚಿನ ಜನರಿಗೆ ಕೆಲಸ ಸಿಗುವ ಸಾಧ್ಯತೆ ಇದೆ. ದೇಶದಲ್ಲೆಡೆ ನಿರುದ್ಯೋಗ ಹೆಚ್ಚಾಗುತ್ತಿದೆ, ಪದವಿ ಪಡೆದಿದ್ದರು ಕೂಡ ಅರ್ಹತೆಗೆ ತಕ್ಕ ಉದ್ಯೋಗ ಇಲ್ಲದೆ ಯುವಜನತೆ ಪರದಾಡುತ್ತಿದ್ದಾರೆ. ಜೊತೆಗೆ ಕೊರೋನಾ ಅಂತಹ ಮಹಾಮಾರಿ ಕಾಡಿದ ಮೇಲೆ ಇತ್ತೀಚೆಗೆ ಜನರು ಸರ್ಕಾರಿ ಹುದ್ದೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ತಮಗೆ ಹಾಗೂ ಕುಟುಂಬಕ್ಕೆ ಭದ್ರತೆ ಎನ್ನುವ ಕಾರಣಕ್ಕಾಗಿ ಸರ್ಕಾರಿ ಹುದ್ದೆ ಹೊಂದಬೇಕು ಎಂದು ಪ್ರಯತ್ನ ಪಡುತ್ತಿರುವ ಅಭ್ಯರ್ಥಿಗಳಿಗೆ ಇದೀಗ ಸಕಾಲ. ಕೇಂದ್ರ ಸರ್ಕಾರದ ವತಿಯಿಂದ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದೆ.

ಈ ಅಂಕಣದಲ್ಲಿ ಸಹ ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಹುದ್ದೆಗಳಿಗೆ ಸಂಬಂಧಪಟ್ಟ ಹಾಗೆ ಅಧಿಸೂಚನೆಯಲ್ಲಿ ಇರುವ ಪ್ರಮುಖ ವಿಷಯಗಳಾದ ಹುದ್ದೆಗಳ ಸಂಖ್ಯೆ, ಹುದ್ದೆಗಳ ವಿವರ, ವೇತನ ಶ್ರೇಣಿ, ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ವಯೋಮಾನ ಸಡಲಿಕೆ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಅರ್ಜಿ ಶುಲ್ಕ, ಅರ್ಜಿ ಶುಲ್ಕ ಪಾವತಿಸುವ ರೀತಿ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಆಯ್ಕೆ ಪ್ರಕ್ರಿಯೆ ಇವುಗಳ ಬಗ್ಗೆ ತಿಳಿಸಿಕೊಡಲಾಗಿದೆ.

ಹೆಚ್ಚಿನ ವಿವರ ಬೇಕಾದಲ್ಲಿ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು, ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ತಿಳಿದುಕೊಳ್ಳಬಹುದು.
ಸಂಸ್ಥೆ:- ಇನ್ಸ್ಟಿಟ್ಯೂಟ್ ಆಫ್ ಕಿಡ್ನಿ ಡಿಸೀಸ್ ಅಂಡ್ ರಿಸರ್ಚ್ ಸೆಂಟರ್.
ಹುದ್ದೆಗಳ ಸಂಖ್ಯೆ:- 1156
ಉದ್ಯೋಗ ಸ್ಥಳ:- ಭಾರತದಾದ್ಯಂತ

ಹುದ್ದೆಗಳ ವಿವರ:-
● ಆಡಳಿತ ಸಹಾಯಕ
● ಜೂನಿಯರ್ ಕ್ಲರ್ಕ್
● ಸೀನಿಯರ್ ಕ್ಲರ್ಕ್

ವೇತನ ಶ್ರೇಣಿ:- ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ 35,400 ರಿಂದ 1,12,400 ವೇತನ ಸಿಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ಅದಕ್ಕೆ ತತ್ಸಮಾನವಾದ ಪರೀಕ್ಷೆ ಪಾಸ್ ಆಗಿರಬೇಕು.

ವಯಸ್ಸಿನ ಮಿತಿ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಸರಿಯಾಗಿ ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು. ಗರಿಷ್ಠ 40 ವರ್ಷಗಳನ್ನು ಮೀರಿದಬಾರದು.
ವಯೋಮಿತಿ ಸಡಿಲಿಕೆ:-
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು

ಅರ್ಜಿ ಶುಲ್ಕ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೂ ಕೂಡ 1000ರೂ. ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ.
ಆಯ್ಕೆ ವಿಧಾನ:-
● ಸಂದರ್ಶನ
● ದಾಖಲಾತಿ ಪರಿಶೀಲನೆ

ಅರ್ಜಿ ಸಲ್ಲಿಸುವ ವಿಧಾನ:-
● ಅಧಿಸೂಚನೆಯನ್ನು ಓದಿ ಆ ಪ್ರಕಾರವಾಗಿ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಾನ ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಬೇಕು.
● ಸಂಸ್ಥೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅರ್ಜಿ ಫಾರಂ ಭರ್ತಿ ಮಾಡಿ ಕೇಳಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ಇತ್ತೀಚಿನ ಭಾವಚಿತ್ರ ಮತ್ತು ಸಹಿ
● ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
● ಆಧಾರ್ ಕಾರ್ಡ್
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ಇನ್ನಿತರ ಪ್ರಮುಖ ದಾಖಲೆಗಳು

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 15 ಏಪ್ರಿಲ್, 2023.
● ಅರ್ಜಿ ಸಲ್ಲಿಸಲು ಕೊನೆ ದಿನಾಂಕ – 16 ಮೇ, 2023.

ಪೋಸ್ಟ್ ಆಫೀಸ್‌ನಲ್ಲಿ ಕೇವಲ 10 ಸಾವಿರ ಡೆಪೊಸಿಟ್ ಮಾಡಿ 6,96,967 ಪಡೆಯಿರಿ, ಹಣ ಉಳಿತಾಯ ಮಾಡಲು & ಅಧಿಕ ಲಾಭ ಗಳಿಸಲು ಇದಕ್ಕಿಂತ ಬೆಸ್ಟ್ ಪ್ಲಾನ್ ಮತ್ತೊಂದಿಲ್ಲ.

ಇಂಡಿಯಾ ಪೋಸ್ಟ್‌ನೊಂದಿಗೆ ಮರುಕಳಿಸುವ ಠೇವಣಿ (Recurring Deposit)ಗಳು ನಿಯಮಿತವಾಗಿ ಉಳಿಸಲು ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಖಾತೆಯನ್ನು ತೆರೆಯುವ ಮೂಲಕ ಉತ್ತಮ ಆದಾಯ ನೀಡುತ್ತದೆ. ಅದರ ಪೋಸ್ಟ್ ಆಫೀಸ್ ಉಳಿತಾಯ ಯೋಜನೆ (Savings Plan) ಅಡಿಯಲ್ಲಿ, ಇದು ವ್ಯಕ್ತಿಗಳಿಗೆ 5 ವರ್ಷದ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಖಾತೆ ತೆರೆಯಲು ಅನುಮತಿಸುತ್ತದೆ.

ದೇಶದ ಆರ್ಥಿಕತೆಯ ಕಾರ್ಯನಿರ್ವಹಣೆಯಲ್ಲಿ ಅಂಚೆ ಕಚೇರಿಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಪ್ರಪಂಚದಾದ್ಯಂತ ಅಂಚೆಪತ್ರ ವಿತರಿಸುವ ಅವರ ಪ್ರಾಥಮಿಕ ಕಾರ್ಯಗಳ ಹೊರತಾಗಿ, ಅಂಚೆ ಕಚೇರಿಯು ತನ್ನ ಗ್ರಾಹಕರಿಗೆ ವಿವಿಧ ಹಣಕಾಸು ಸೇವೆಗಳನ್ನು ನೀಡುತ್ತದೆ. ಈ ಹಣಕಾಸು ಸೇವೆಗಳು ಗ್ರಾಹಕರಿಗೆ ಉಳಿತಾಯ ಯೋಜನೆಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಮಾರುಕಟ್ಟೆ ಅಪಾಯಗಳಿಂದ ಮುಕ್ತವಾಗಿವೆ.

ನೀಡಲಾಗುವ ವಿವಿಧ ಉಳಿತಾಯ ಯೋಜನೆಗಳಲ್ಲಿ, ಸ್ಥಿರ ಠೇವಣಿಗಳು ಮತ್ತು ಇತರ ದೀರ್ಘಾವಧಿಯ ಅಥವಾ ಅಲ್ಪಾವಧಿಯ ಯೋಜನೆಗಳಂತಹ ನಿಯಮಿತ ಅಥವಾ ಸಾಂಪ್ರದಾಯಿಕ ಉಳಿತಾಯ ಯೋಜನೆಗಳನ್ನು ಹೊರತುಪಡಿಸಿ ಗ್ರಾಹಕರು ಆದ್ಯತೆಯ ಹೂಡಿಕೆಯ ಆಯ್ಕೆಗಳಲ್ಲಿ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಸೇರಿದೆ.

ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ(ಆರ್‌ಡಿ) ಯೋಜನೆ ಎಂದರೇನು..?
ಪೋಸ್ಟ್ ಆಫೀಸ್ ಉಳಿತಾಯ ಯೋಜನೆ ಒಳಗೊಂಡಿರುವ ಭಾರತ ಸರ್ಕಾರದ ಬೆಂಬಲದೊಂದಿಗೆ ಒಟ್ಟು 9 ಉಳಿತಾಯ ಯೋಜನೆಗಳಿವೆ. ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ಮಧ್ಯಾವಧಿಯ ಉಳಿತಾಯ ಯೋಜನೆಯಾಗಿದ್ದು, ಠೇವಣಿದಾರರು ತಮ್ಮ ಹೂಡಿಕೆಗಳನ್ನು ಕನಿಷ್ಠ 5 ವರ್ಷಗಳವರೆಗೆ ಇರಿಸಬೇಕಾಗುತ್ತದೆ.

ಮರುಕಳಿಸುವ ಠೇವಣಿ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿಲ್ಲದಿರುವುದರಿಂದ, ಇದು ಅಪಾಯ-ಮುಕ್ತವಾಗಿದೆ ಮತ್ತು ಕಡಿಮೆ ಅಪಾಯದ ಹಸಿವನ್ನು ಹೊಂದಿರುವ ಹೂಡಿಕೆದಾರರಿಗೆ ಮತ್ತು ಮೊದಲ ಬಾರಿಗೆ ತಮ್ಮ ಹಣವನ್ನು ಯೋಜನೆಯಲ್ಲಿ ಠೇವಣಿ ಮಾಡುವ ಹೂಡಿಕೆದಾರರಿಗೆ ಒದಗಿಸುತ್ತದೆ. ಮರುಕಳಿಸುವ ಠೇವಣಿ ಯೋಜನೆಗೆ ನಿಯಮಿತ ಮಧ್ಯಂತರದಲ್ಲಿ ಖಾತೆಗೆ ನಿಶ್ಚಿತ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ, ಇದಕ್ಕಾಗಿ ಬಡ್ಡಿಯನ್ನು ತ್ರೈಮಾಸಿಕವಾಗಿ ಸಂಗ್ರಹಿಸಲಾಗುತ್ತದೆ.

ತಮ್ಮ ಹೂಡಿಕೆಯ ಮೇಲಿನ ಭದ್ರತೆ ಇಷ್ಟಪಡುವ ಮತ್ತು ಸ್ಥಿರವಾದ ಹಣವನ್ನು ಬಡ್ಡಿಯಾಗಿ ಗಳಿಸಲು ಬಯಸುವ ಹೂಡಿಕೆದಾರರಿಗೆ, ಪೋಸ್ಟ್ ಆಫೀಸ್ ಆರ್‌ಡಿ ಸೂಕ್ತ ಹೂಡಿಕೆಯಾಗಿದೆ. ಇದಲ್ಲದೆ, ಈ ಯೋಜನೆಯು ಜನರಿಗೆ ನಿಗದಿತ ಮೊತ್ತ ಗಳಿಸಲು ಮತ್ತು ಕಾಲಾನಂತರದಲ್ಲಿ ಉತ್ಪಾದಿಸಲು ಮತ್ತು ಸ್ಥಿರ ಆದಾಯ ಗಳಿಸಲು ಸಹ ಪ್ರಯೋಜನಕಾರಿಯಾಗಿದೆ.

ಪೋಸ್ಟ್ ಆಫೀಸ್ ಆರ್‌ಡಿ ಮೇಲಿನ ಬಡ್ಡಿ ದರ
ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿಯ ಮೇಲೆ ಸದ್ಯ 5.8% ಬಡ್ಡಿದರವನ್ನು ನೀಡಲಾಗುತ್ತದೆ. ಇದು ಜನರಿಗೆ ಉನ್ನತ ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗಿದೆ. ನೀವು ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ, ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಖಾತೆಯನ್ನು ಬಳಸಿಕೊಂಡು ನೀವು ಆನ್‌ಲೈನ್‌ನಲ್ಲಿ ಆರ್‌ಡಿ ಖಾತೆಯನ್ನು ತೆರೆಯಬಹುದು. ನೀವು ನೆಟ್ ಬ್ಯಾಂಕಿಂಗ್ ಹೊಂದಿಲ್ಲದಿದ್ದರೆ, ನೀವು ಹತ್ತಿರದ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಒಮ್ಮೆ ನೀವು ವಿವರಗಳನ್ನು ಸ್ವೀಕರಿಸಿದ ನಂತರ, ನೀವು ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಸಕ್ರಿಯಗೊಳಿಸಬೇಕು.

ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಅಪ್ಲಿಕೇಶನ್ ಬಳಸುವಾಗ, ಒಬ್ಬರು ಆನ್‌ಲೈನ್‌ನಲ್ಲಿ RD ಪಾವತಿಗಳನ್ನು ಮಾಡಬಹುದು. ಅಲ್ಲದೆ, ನೀವು ಬಯಸಿದ ಪೋಸ್ಟ್ ಆಫೀಸ್ ಶಾಖೆಗೆ ಭೇಟಿ ನೀಡುವ ಮೂಲಕ ಮರುಕಳಿಸುವ ಠೇವಣಿಗಳನ್ನು (RD) ತೆರೆಯಬಹುದು ಮತ್ತು ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು KYC ದಾಖಲೆಗಳು ಮತ್ತು ಠೇವಣಿ ಸ್ಲಿಪ್‌ನೊಂದಿಗೆ ಸಲ್ಲಿಸಬಹುದು.

ಪೋಸ್ಟ್ ಆಫೀಸ್ ಆರ್‌ಡಿ ಖಾತೆಯನ್ನು ಆನ್‌ಲೈನ್‌ನಲ್ಲಿ ತೆರೆಯುವುದು ಹೇಗೆ?
ಲಾಗಿನ್ ರುಜುವಾತುಗಳನ್ನು ಸ್ವೀಕರಿಸಿದ ನಂತರ ವ್ಯಕ್ತಿಗಳು ಪೋಸ್ಟ್ ಆಫೀಸ್‌ನಿಂದ ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಲು ನೋಂದಾಯಿಸಿಕೊಳ್ಳಬೇಕು. ನೀವು ನೋಂದಾಯಿಸಿದ ನಂತರ ಮತ್ತು ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಿದ ನಂತರವೇ ಈ ಆಯ್ಕೆಯು ಲಭ್ಯವಿರುತ್ತದೆ.

* ಮೊದಲಿಗೆ https://ebanking.indiapost.gov.in ಗೆ ಭೇಟಿ ನೀಡಿ
* ಬಳಕೆದಾರ ಐಡಿ ಮತ್ತು ಲಾಗಿನ್ ಪಾಸ್‌ವರ್ಡ್ ನಮೂದಿಸಿ
* ಮೆನುವಿನಲ್ಲಿ ಲಭ್ಯವಿರುವ ‘ಸಾಮಾನ್ಯ ಸೇವೆ’ ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು ‘ಸೇವಾ ವಿನಂತಿ’ ಟ್ಯಾಬ್ ಅನ್ನು ಕ್ಲಿಕ್ ಮಾಡಿ
* ಸೇವಾ ವಿನಂತಿ’ ಅಡಿಯಲ್ಲಿ, ‘ಹೊಸ ವಿನಂತಿಗಳು’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
* ಆಯ್ಕೆಗಳಿಂದ, ‘RD ಖಾತೆಗಳು- RD ಖಾತೆಯನ್ನು ತೆರೆಯಿರಿ’ ಮೇಲೆ ಕ್ಲಿಕ್ ಮಾಡಿ
* ಹೊಸ ಪುಟದಲ್ಲಿ, ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ
* ‘ಸಲ್ಲಿಸು’ ಮೇಲೆ ಕ್ಲಿಕ್ ಮಾಡಿ ಮತ್ತು ಮುಂದಿನ ಪುಟದಲ್ಲಿ ವಿವರಗಳನ್ನು ಪರಿಶೀಲಿಸಿ
* ನಿಮ್ಮ ‘ವಹಿವಾಟು ಪಾಸ್‌ವರ್ಡ್’ ನಮೂದಿಸಿ.

ಒಮ್ಮೆ ಅದು ಯಶಸ್ವಿಯಾದರೆ, ಮೆಚ್ಯೂರಿಟಿ ದಿನಾಂಕ ಮತ್ತು ನಿಯತಕಾಲಿಕವಾಗಿ ಠೇವಣಿ ಮಾಡಬೇಕಾದ ಮೊತ್ತದೊಂದಿಗೆ ನಿಮ್ಮ RD ಖಾತೆಯ ವಿವರಗಳನ್ನು ನೀವು ಕಾಣಬಹುದು. 1 ಕೆಲಸದ ದಿನದೊಳಗೆ ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆಯಲ್ಲಿ ವಿವರಗಳನ್ನು ನವೀಕರಿಸಲಾಗುತ್ತದೆ.

ಮೊಬೈಲ್ ಬ್ಯಾಂಕಿಂಗ್ ಬಳಸಿ RD ಖಾತೆಗೆ ಪಾವತಿ ಮಾಡುವುದು ಹೇಗೆ?
ನೀವು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಅಪ್ಲಿಕೇಶನ್ ಅನ್ನು ಬಳಸಿಕೊಂಡು ಪೋಸ್ಟ್ ಆಫೀಸ್ RD ಗಳಲ್ಲಿ ಆನ್‌ಲೈನ್ ಠೇವಣಿಗಳನ್ನು ಮಾಡಬಹುದು. ಪ್ಲೇಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಡಿಜಿಟಲ್ ಉಳಿತಾಯ ಖಾತೆಗೆ ಸೈನ್ ಅಪ್ ಮಾಡಿ. ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ಖಾತೆ ತೆರೆಯುವ ವಿಧಾನವನ್ನು ಪೂರ್ಣಗೊಳಿಸಲು MPIN ಅನ್ನು ರಚಿಸಿ.

ಇಂಟರ್ನೆಟ್ ಮೂಲಕ ನಿಮ್ಮ RD ಖಾತೆಗೆ ನಿಮ್ಮ ಮಾಸಿಕ RD ಪಾವತಿಯನ್ನು ಠೇವಣಿ ಮಾಡಲು ಈ ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ. ನಿಮ್ಮ IPPB ಖಾತೆಯನ್ನು ಬಳಸಿಕೊಂಡು ನಿಮ್ಮ ಪೋಸ್ಟ್ ಆಫೀಸ್ RD ಖಾತೆಗೆ ಹಣವನ್ನು ವರ್ಗಾಯಿಸಲು ಕೆಳಗಿನ ಕಾರ್ಯವಿಧಾನಗಳನ್ನು ಅನುಸರಿಸಿ.

* IPPB ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ರುಜುವಾತುಗಳನ್ನು ಬಳಸಿಕೊಂಡು ಲಾಗಿನ್ ಮಾಡಿ
* ಪೋಸ್ಟ್‌ಗಳ ಇಲಾಖೆ (DoP) ಉತ್ಪನ್ನಗಳ ಮೆನುವಿನಿಂದ ಮರುಕಳಿಸುವ ಠೇವಣಿ ಆಯ್ಕೆಮಾಡಿ.
* ಮೊದಲು ನಿಮ್ಮ RD ಖಾತೆ ಸಂಖ್ಯೆಯನ್ನು ನಮೂದಿಸಿ, ನಂತರ ನಿಮ್ಮ DoP ಗ್ರಾಹಕ ID
* ಕಂತು ಅವಧಿ ಮತ್ತು ಮೊತ್ತವನ್ನು ಆಯ್ಕೆಮಾಡಿ
ಅದರ ನಂತರ, IPPB ಮೊಬೈಲ್ ಅಪ್ಲಿಕೇಶನ್ ಮೂಲಕ ನಿಮ್ಮ ಪಾವತಿ ವರ್ಗಾವಣೆ ಯಶಸ್ವಿಯಾದರೆ IPPB ನಿಮಗೆ ಅಧಿಸೂಚನೆಯನ್ನು ಕಳುಹಿಸುತ್ತದೆ.

4 ಬಾರಿ ಮುಖ್ಯಮಂತ್ರಿ ಆಗಿದ್ರೂ ಕೂಡ ಗುಡಿಸಲಿನಲ್ಲಿ ವಾಸ, ನಮ್ಮ ದೇಶದ ಅತ್ಯಂತ ಕಡು ಬಡ ಮುಖ್ಯಮುಂತ್ರಿ ಇವರು. ಈ ನಾಯಕ ಎಲ್ಲರಿಗೂ ಮಾದರಿ.!

 

ನಮ್ಮ ಇಂದಿನ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ನಮಗೆಲ್ಲರಿಗೂ ತಿಳಿಯುವುದು ಒಂದೇ ಜನರ ಹೆಸರಿನಲ್ಲಿ ರಾಜಕಾರಣಿಗಳು ಹಣ ಮಾಡಿ ಶ್ರೀಮಂತರಾಗುತ್ತಿದ್ದಾರೆ. ಭ್ರ’ಷ್ಟ ರಾಜಕಾರಣಿಗಳ ನಡುವೆ ಎಲೆ ಮರಿ ಕಾಯಿಯಂತೆ ಅಲ್ಲೊಬ್ಬರು ಇನ್ನೊಬ್ಬರು ರಾಜಕಾರಣಿಗಳು ಜನರಿಗೆ ಸೇವೆಯನ್ನು ಮಾಡಿ ಯಾರಿಗೂ ಗೊತ್ತಾಗದ ಹಾಗೆ ಉಳಿದುಕೊಂಡಿದ್ದಾರೆ.

ಅಪಾರವಾದ ಸೇವೆಯನ್ನು ಜನರಿಗೆ ಮಾಡಿದ್ದರು ಸಹ ಅವರು ಜನರಿಂದ ಏನನ್ನು ಸಹ ಅಪೇಕ್ಷೆ ಮಾಡಿಲ್ಲ ನಿಸ್ವಾರ್ಥ ಸೇವೆಯನ್ನು ಮಾಡಿಕೊಂಡು ಬಂದಿರುವಂತಹ ಒಬ್ಬ ನಾಯಕನ ಬಗ್ಗೆ ನಾವಿಲ್ಲಿ ತಿಳಿಸುತ್ತೇವೆ ಹೌದು ಮುಖ್ಯಮಂತ್ರಿ ಆಗಿ 20 ವರ್ಷಗಳ ಕಾಲ ಆಡಳಿತವನ್ನು ನಡೆಸಿದಂತಹ ಮಾಣಿಕ್ ಸರ್ಕಾರ್ ಅವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದಂತಹ ಸಾಕಷ್ಟು ಮಾಹಿತಿಗಳು ಇವೆ.

ಸರ್ಅವರು ಧೀಮಂತ ನಾಯಕ ವಿದ್ಯಾಭ್ಯಾಸ ಮಾಡುತ್ತಿರುವಂತಹ ಸಂದರ್ಭದಲ್ಲಿ ಕಾಲೇಜು ಚುನಾವಣೆಯಲ್ಲಿ ನಾಯಕನಾಗಿದ್ದರು. ಕೇವಲ 31ನೇ ವಯಸ್ಸಿಗೆ ಶಾಸಕರಾಗಿ ಕಾಣಿಸಿಕೊಳ್ಳುತ್ತಾರೆ ಸಿಸಿಐ ಪಕ್ಷದ ನಾಯಕರಾಗಿರುವ ಇವರು ರಾಜಕಾರಣದಲ್ಲಿ ತಮ್ಮದೇ ಆದಂತಹ ಇತಿಹಾಸವನ್ನು ಒಳಗೊಂಡಿದ್ದಾರೆ.

ಮೊದಲಿಗೆ 1998ರಲ್ಲಿ ಮೊದಲ ಬಾರಿಗೆ ಸರ್ಕಾರ್ ಅವರು ತ್ರಿಪುರ ರಾಜ್ಯದ ಮುಖ್ಯಮಂತ್ರಿ ಆಗಿ ಆಯ್ಕೆಯಾಗುತ್ತಾರೆ ಅದಾದ ನಂತರ ಮತ್ತೆ ಅವರು ರಾಜ್ಯದ ರಾಜಕಾರಣದಲ್ಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಮಾಣಿಕ್ ಸರ್ಕಾರ್ ಅವರು ಸತತ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಜನರ ಸೇವೆಯನ್ನು ಮಾಡಿದ್ದಾರೆ ಹಾಗೆಯೇ ಜನ ಮೆಚ್ಚಿದ ನಾಯಕ ಎನಿಸಿಕೊಂಡಿದ್ದಾರೆ.

1998ರಿಂದ 2018 ರ ವರೆಗೂ ಕೂಡ ಸತತವಾಗಿ ಇವರು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿರುತ್ತಾರೆ ಅಷ್ಟರಮಟ್ಟಿಗೆ ತ್ರಿಪುರ ರಾಜ್ಯದಲ್ಲಿ ಇವರ ಜನಪ್ರಿಯತೆ ದೊಡ್ಡ ಮಟ್ಟದಲ್ಲಿ ಹರಡಿತ್ತು. ಇವರು ಯಾವುದೇ ರೀತಿಯಾದಂತಹ ಹಣದ ಗಳಿಕೆ ಅಥವಾ ಇನ್ನಿತರ ಭ್ರ’ಷ್ಟಾ’ಚಾ’ರ ಯಾವುದಕ್ಕೂ ಸಹ ತಲೆಕೊಡದೆ ಜನರ ಸೇವೆಯಲ್ಲಿ ನಿರತರಾಗಿದ್ದರಿಂದ ಸತತವಾಗಿ ಇವರು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದರು.

ತಮ್ಮ ಕೈಯಲ್ಲಿ ಅಧಿಕಾರ ಇದ್ದರೂ ಸಹ ಇವರು ಅದನ್ನು ದುರುಪಯೋಗ ಪಡಿಸಿಕೊಳ್ಳದೆ ಜನರಿಗೆ ಸಾಕಷ್ಟು ರೀತಿಯಾದಂತಹ ಉತ್ತಮ ಕೆಲಸಗಳನ್ನು ನಡೆಸಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಆಗಿ ಆಯ್ಕೆಗೊಂಡಂತಹ ಮಾಣಿಕ್ ಅವರಿಗೆ ಸರ್ಕಾರದ ಕಡೆಯಿಂದ ನೀಡಿದಂತಹ ನಿವಾಸವನ್ನು ಅವರು ತೊರೆದು ತಮ್ಮ ತಾತನ ಗುಡಿಸಲ ಹಳೆಯ ಮನೆಯಲ್ಲಿ ವಾಸ ಮಾಡುತ್ತಾರೆ ಕೈಯಲ್ಲಿ 2500 ರೂಪಾಯಿ ಹಾಗೂ ಅಕೌಂಟ್ ನಲ್ಲಿ 2500 ರೂಪಾಯಿ ಒಟ್ಟಾಗಿ ಐದು ಸಾವಿರ ಹಣ ಇರುತ್ತದೆ.

ಸರ್ಕಾರ್ ಹೆಸರಿನಲ್ಲಿ ಯಾವುದೇ ರೀತಿಯಾದಂತಹ ಆಸ್ತಿ ಸಹ ಇರಲಿಲ್ಲ ಎಷ್ಟು ಪ್ರಾಮಾಣಿಕರಾಗಿದ್ದರು ಎಂದರೆ ಇವರ ಪಾರದರ್ಶಕ ರಾಜಕೀಯವನ್ನು ಜನರು ಮೆಚ್ಚಿ ಕೊಂಡಾಡಿದ್ದಾರೆ. ಈಗಿನ ರಾಜಕೀಯ ಅಧಿಕಾರಿಗಳನ್ನು ನೋಡಿದರೆ ಇಂತಹ ಒಬ್ಬ ನಿಷ್ಠಾವಂತ ರಾಜಕೀಯ ನಾಯಕ ಸಿಕ್ಕಿರುವುದು ನಿಜಕ್ಕೂ ತ್ರಿಪುರ ರಾಜ್ಯದ ಅದೃಷ್ಟ ಎಂದು ಹೇಳಬಹುದು.

ಈ ನಿಷ್ಠಾವಂತ ಅಧಿಕಾರಿಯ ಬಗ್ಗೆ ಎಷ್ಟು ಹೇಳಿದರು ಸಹ ಸಾಕಾಗುವುದಿಲ್ಲ ಅಷ್ಟರಮಟ್ಟಿಗೆ ಇವರ ರಾಜಕೀಯ ಪ್ರಜ್ಞೆ ಹಾಗೂ ಇವರ ಪಾರದರ್ಶಕ ವಾದಂತಹ ಸೇವೆ ಇಂದಿಗೂ ಸಹ ಜನರ ಮನಸ್ಸಿನಲ್ಲಿ ಮನೆ ಮಾಡಿದೆ. ಇವರನ್ನು ಹಾಡಿ ಹೊಗಳದೇ ಇರುವಂತಹ ವ್ಯಕ್ತಿಯೇ ಇಲ್ಲ ತ್ರಿಪುರ ರಾಜ್ಯದಲ್ಲಿ ಮಾಣಿಕ್ ಸರ್ಕಾರ್ ಅವರು ಎಂದರೆ ಎಲ್ಲರಿಗೂ ಸಹ ಎಲ್ಲಿಲ್ಲದ ಗೌರವ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ

ದೇವಸ್ಥಾನದಲ್ಲಿ ತೀರ್ಥ ಸೇವಿಸಿದ ಬಳಿಕ ಕೈಯನ್ನು ತಲೆಗೆ ಸವರಿದರೆ ಏನಾಗುತ್ತದೆ ಗೊತ್ತಾ.?

ನಮ್ಮ ಹಿಂದೂ ನಂಬಿಗಳ ಪ್ರಕಾರ ದೇವರಿಗೆ ಸಂಬಂಧಪಟ್ಟ ಯಾವುದೇ ವಿಷಯವಾದರೂ, ವಸ್ತುವಾದರೂ ಸರಿ ದೇವರಿಗೆ ಸಮಾನ. ಕಾಣುವ ಪ್ರತಿ ಕಲ್ಲಿನಲ್ಲೂ ಕೂಡ ದೇವರಿದ್ದಾನೆ ಎಂದು ನಂಬುವ ನಂಬಿಕೆ ನಮ್ಮದು. ನಮ್ಮ ನಂಬಿಕೆಗೆ ತಕ್ಕ ಹಾಗೆ ಇಡೀ ಪ್ರಕೃತಿಯಲ್ಲಿ ಪ್ರತಿಯೊಂದು ವಿಷಯವು ನಮಗೆ ದೇವರಂತೆ ಆಶೀರ್ವಾದ ಮಾಡಿ ನಮ್ಮನ್ನು ಕಾಯುತ್ತಿದೆ. ಭಾರತದಂತಹ ವಿವಿಧತೆಯಲ್ಲಿ ಏಕತೆ ಕಂಡ ದೇಶದಲ್ಲಿ ಪ್ರತಿಯೊಂದು ಭಾಗದಿಂದ ಭಾಗಕ್ಕೆ ಪೂಜಿಸುವ ದೇವರು, ಆಚರಿಸುವ ಆಚಾರ-ವಿಚಾರ, ನಂಬಿಕೆಗಳ ವಿಧಾನ ಬದಲಾಗಿರಬಹುದು.

ಆದರೆ ದೇವರ ಆಲಯ ದೇವಸ್ಥಾನ ತೀರ್ಥ ಪ್ರಸಾದ ಇಂತಹ ವಿಷಯಗಳಲ್ಲಿ ಒಂದೇ ತೆರನಾದ ಹೋಲಿಕೆ ಇದೆ. ದೇವಸ್ಥಾನ ಎಂದರೆ ಹೆಸರೇ ಸೂಚಿಸುವಂತೆ ದೇವರುಗಳು ವಾಸಿಸುವ ಸ್ಥಳ ಎಂದೇ ನಂಬಲಾಗಿದೆ, ನಂಬಿಕೆಗೆ ಸಾಕ್ಷಿಯಾಗಿ ಅಲ್ಲಿ ಅಷ್ಟು ಸಕರಾತ್ಮಕತೆ ತುಂಬಿರುವುದು ಸಹ ಈ ನಂಬಿಕೆಗೆ ಇನ್ನಷ್ಟು ಪುಷ್ಟಿ ನೀಡುತ್ತದೆ. ದೇವಸ್ಥಾನಗಳಲ್ಲಿ ದೇವರ ಮೂರ್ತಿ ಮತ್ತು ಅಲ್ಲಿ ನಡೆಯುವ ಪೂಜೆ-ಪುನಸ್ಕಾರ, ವಿಶೇಷವಾದ ಅಲಂಕಾರ, ಅಭಿಷೇಕ, ಯಜ್ಞ-ಯಾಗ, ನೀಡುವ ಮಂಗಳಾರತಿ, ತೀರ್ಥ-ಪ್ರಸಾದ ಎಲ್ಲವೂ ಕೂಡ ವಿಶೇಷವಾದದ್ದು.

ದೇವರಿಗೆ ಅರ್ಪಿಸಿ ಏನನ್ನೇ ಕೊಟ್ಟರು ಅದು ಪ್ರಸಾದವಾಗುತ್ತದೆ. ಅದರಲ್ಲೂ ದೇವರ ಮುಂದೆ ಅರ್ಚಕರು ಮಂಗಳಾರತಿ ಮಾಡಿ ಅದನ್ನು ನೋಡುವ ಅವಕಾಶ ಮಾಡಿಕೊಟ್ಟರೆ ಸಾಕ್ಷಾತ್ ದೇವರ ಮೂರ್ತಿಯ ಮುಂದೆ ನಿಂತು ನಾವು ನೋಡುತ್ತಿದ್ದೇವೆ ಎನ್ನುವಂತಹ ಸಾಕ್ಷಾತ್ಕಾರ ಉಂಟಾಗುತ್ತದೆ. ಆರತಿ ಆದ ಬಳಿಕ ನೀಡುವ ಮಂಗಳಾರತಿಯು ದೇವರೇ ನಮಗಾಗಿ ಕಳುಹಿಸಿರುವ ಆಶೀರ್ವಾದ ಎನ್ನುವಂತೆ ಭಾಸವಾಗುತ್ತದೆ.

ಜೊತೆಗೆ ಮಂಗಳಾರತಿ ಆದ ತಕ್ಷಣ ಎಲ್ಲಾ ದೇವಾಲಯಗಳಲ್ಲೂ ಕೂಡ ತಪ್ಪದೆ ತೀರ್ಥವನ್ನು ಕೂಡ ಕೊಡುತ್ತಾರೆ ದೇವರ ಮುಂದೆ ಇಟ್ಟು ದೇವರಿಗೆ ಅರ್ಪಿಸಿ ಆ ನೀರನ್ನು ಪ್ರಸಾದವೆಂದು ಎಲ್ಲರಿಗೂ ತೀರ್ಥವಾಗಿ ಕೊಡಲಾಗುತ್ತದೆ. ಕನ್ನಡದಲ್ಲಿ ಒಂದು ಗಾದೆ ಮಾತು ಕೂಡ ಹೇಳುತ್ತಾರೆ. ಕಂಚಿನಿಂದ ಬಂದರೆ ತೀರ್ಥ ಎಂದು ಆದರೆ ಇದರ ಸರಿಯಾದ ಅರ್ಥವನ್ನು ಈ ರೀತಿ ಹೇಳಬಹುದು. ದೇವರ ಮುಂದೆ ಇಟ್ಟು ಪೂಜೆ ಮಾಡಿ ಪ್ರೋಕ್ಷಣೆ ಮಾಡಿ ಕೊಟ್ಟಾಗ ಮಾತ್ರ ಅದು ತೀರ್ಥ ಎಂದು, ಇಲ್ಲವಾದಲ್ಲಿ ಅದು ಎಷ್ಟೇ ಬೆಲೆಬಾಳುವ ದ್ರವ್ಯ ಅಥವಾ ದ್ರವ ಆಗಿದ್ದರು ಅದು ಪ್ರಸಾದ ಅಥವಾ ತೀರ್ಥ ಎಂದು ಕರೆಸಿಕೊಳ್ಳಲಾರದು.

ಈ ರೀತಿ ತೀರ್ಥ ಸೇವನೆ ಮಾಡುವುದರಿಂದ ನಮಗೆ ಸಾಕಷ್ಟು ಪ್ರಯೋಜನಗಳಾಗುತ್ತವೆ. ದೇವರ ಆಶೀರ್ವಾದದ ರೂಪದಲ್ಲಿ ಸಿಗುವ ಈ ತೀರ್ಥ ಒಂದು ತೊಟ್ಟು ಕೂಡ ನೆಲದ ಮೇಲೆ ಬೀಳದಂತೆ ಸ್ವೀಕರಿಸಬೇಕು. ಹಾಗಾಗಿ ಎರಡು ಕೈಗಳನ್ನು ಹಿಡಿದು ಇದನ್ನು ಬಲಗೈ ಮೇಲೆ ಮಾಡಿಟ್ಟು ಸ್ವೀಕರಿಸುತ್ತೇವೆ. ಆಮೇಲೆ ಕೈಯನ್ನು ತಲೆಗೆಸವರಿ ಕೊಳ್ಳುತ್ತೇವೆ ಹಾಗೂ ಕೆಲವೊಮ್ಮೆ ಎಡಗೈನ ಮಣಿಕಟ್ಟಿ ಬಳಗೈನ ಮಣಿಕಟ್ಟಿಗೂ ಕೂಡ ಸವರಿ ಕೊಳ್ಳುತ್ತೇವೆ.

ದೇವರ ಪ್ರಸಾದ ನೆಲಕ್ಕೆ ತಾಕಬಾರದು ಎನ್ನುವ ಉದ್ದೇಶ ಇದ್ದರೂ ಇದರ ಹಿಂದೆ ಇನ್ನೊಂದು ಅಂಶ ಕೂಡ ಇದೆ. ಅದೇನೆಂದರೆ, ತೀರ್ಥದ ರೂಪದಲ್ಲಿ ನಮಗೆ ಸಿಗುವ ಗಂಗೆಯು ಬಹಳ ಪವಿತ್ರವಾದದ್ದು. ಈ ರೀತಿ ಪವಿತ್ರವಾದ ಗಂಗೆಯನ್ನು ನಾವು ಸ್ವೀಕರಿಸಿದ ನಂತರ ತಲೆಗೆ ಸವರಿಕೊಳ್ಳುವುದರಿಂದ ನಾವು ಮಾಡಿದ ಅಷ್ಟು ಪಾಪಗಳು ಪರಿಹಾರ ಆಗುತ್ತದೆ ಎನ್ನುವ ನಂಬಿಕೆ ಇದೆ.

ಜೊತೆಗೆ ನಮ್ಮ ದೇಹದಲ್ಲಿ ಯಾವುದಾದರೂ ನೆಗೆಟಿವ್ ಎನರ್ಜಿ ಇದ್ದರೂ ಈ ರೀತಿ ನೆತ್ತಿ ಮೇಲೆ ದೇವರ ತೀರ್ಥ ಸೋಕಿದ ತಕ್ಷಣವೇ ಅದೆಲ್ಲ ಹೊರಟು ಹೋಗುತ್ತದೆ. ಸಕಾರಾತ್ಮಕತೆ ನಮ್ಮ ದೇಹದಲ್ಲಿ ತುಂಬಿ ಹೊಸ ಚೈತನ್ಯ ಆವರಿಸುತ್ತದೆ, ಈ ಕಾರಣಕ್ಕಾಗಿ ಈ ರೀತಿ ಮಾಡುತ್ತೇವೆ. ಹಾಗಾಗಿ ದೇವಸ್ಥಾನದಲ್ಲಿ ಕೊಡುವ ತೀರ್ಥವನ್ನು ನಮ್ಮ ತಲೆಗೆ ಸವರಿಕೊಳ್ಳುವುದರಿಂದ ನಾವು ಮಾಡಿರುವಂತಹ ಪಾಪ ಕರ್ಮಗಳೆಲ್ಲವೂ ಕೂಡ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.