Home Blog Page 299

ಜೋಡಿ ನಂಬರ್ ಒನ್ ಶೋ ಗೆದ್ದ ಅಭಿಜಿತ್ ಮತ್ತು ರೋಹಿಣಿ ದಂಪತಿಗಳಿಗೆ ಸಿಕ್ಕ ಬಹುಮಾನವೆಷ್ಟು ಗೊತ್ತಾ.?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಜೋಡಿ ನಂಬರ್ ಒನ್ ಕಾರ್ಯಕ್ರಮಕ್ಕೆ ಸಾಕಷ್ಟು ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು ಈ ಪೈಕಿ ಅಭಿಜಿತ್ ಮತ್ತು ರೋಹಿಣಿ ದಂಪತಿಗಳು ಕೂಡ ಭಾಗವಹಿಸಿದ್ದರು. ಸುಮಾರು ಮೂರು ತಿಂಗಳಗಳ ಕಾಲ ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ಇಬ್ಬರೂ ಕೂಡ ಅದ್ಭುತವಾದಂತಹ ಪರ್ಫಾರ್ಮೆನ್ಸ್ ನೀಡಿದ್ದರು‌. ಕಳೆದ ವಾರವಷ್ಟೇ ಗ್ರಾಂಡ್ ಫಿನಾಲೆಯನ್ನು ಆಯೋಜಿಸಲಾಗಿತ್ತು ಈ ವೇದಿಕೆಯಲ್ಲಿ ಅಭಿಜಿತ್ ಮತ್ತು ರೋಹಿಣಿ ದಂಪತಿಯವರು ವಿಜೇತರಾಗಿದ್ದಾರೆ. ಇದು ನಿಜಕ್ಕೂ ಕೂಡ ಸಂತಸ ಪಡಬೇಕಾದ ವಿಚಾರವೇ ಏಕೆಂದರೆ ಸತತ ಸೋಲುಗಳಿಂದ ಕಂಗಿಟ್ಟಿದ್ದಂತಹ ಅಭಿಜಿತ್ ದಂಪತಿಗಳಿಗೆ ಈ ಗೆಲವು ನಿಜಕ್ಕೂ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಅಷ್ಟೇ ಅಲ್ಲದೆ ಈ ಶೋನಲ್ಲಿ ಗೆದ್ದಿರುವ ಕಾರಣ ಬದುಕುವುದಕ್ಕೆ ಒಂದು ಭರವಸೆಯೂ ಕೂಡ ಮೂಡಿದೆಯಂತೆ ಈ ಮಾತನ್ನು ಅಭಿಜಿತ್ ಮತ್ತು ರೋಹಿಣಿ ದಂಪತಿಗಳಿಗೆ ವೇದಿಕೆಯ ಮೇಲೆ ಹೇಳಿಕೊಂಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಭಿಜಿತ್ ಅವರು ಸುಮಾರು ನಾಲ್ಕು ದಶಕಗಳಿಂದಲೂ ಕೂಡ ಸಿನಿಮಾರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಹಲವಾರು ಸಿನಿಮಾದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಇತ್ತೀಚಿಗಷ್ಟೇ ಕಿರುತೆರೆಯ ಸಾಕಷ್ಟು ಧಾರಾವಾಹಿಯಲ್ಲೂ ಕೂಡ ಅಭಿನಯಿಸುತ್ತಿದ್ದಾರೆ ಆದರೆ ಇವರು ಮಾತ್ರ ಸಂಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ. ಇದ್ದ ಅಸ್ತಿ ಪಾಸ್ತಿಯನ್ನೆಲ್ಲ ಮಾಡಿಕೊಂಡಿದ್ದಾರೆ ಇದಕ್ಕೆ ಮುಖ್ಯ ಕಾರಣ ಇವರಲ್ಲಿ ಪ್ರತಿಭೆಯಿದ್ದರು ಕೂಡ ಸೂಕ್ತವಾದ ವೇದಿಕೆ ಮತ್ತು ಅವಕಾಶ ದೊರೆಯಲಿಲ್ಲ.

ಹಾಗಾಗಿಯೇ ಕುಟುಂಬ ನಿರ್ವಹಣೆಗಾಗಿ ತಮ್ಮ ಪೂರ್ವಜರ ಆಸ್ತಿ ಹಾಗೂ ಇವರು ಚಿತ್ರರಂಗದಿಂದ ಗಳಿಸಿದಂತಹ ಎಲ್ಲಾ ಆಸ್ತಿಯನ್ನು ಮಾರಿಕೊಂಡು ಕೊನೆಗೆ ಧಾರಾವಾಹಿಗಳತ್ತ ಮುಖ ಮಾಡಿದ್ದಾರೆ. ಸದ್ಯಕ್ಕೆ ಜೀ ಕನ್ನಡ ವಾಸಿನಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರವಾಹಿಯಲ್ಲಿ ಲಕ್ಷ್ಮಣ ಎಂಬ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಇದೇ ಸಮಯದಲ್ಲಿ ಜೋಡಿ ನಂಬರ್ ಒನ್ ಕಾರ್ಯಕ್ರಮಕ್ಕೆ ಈ ದಂಪತಿಗಳಿಗೆ ಆಹ್ವಾನವನ್ನು ನೀಡಲಾಗುತ್ತದೆ. ಈ ಒಂದು ಆಹ್ವಾನವನ್ನು ಸ್ವೀಕರಿಸಿ ವೇದಿಕೆಯ ಮೇಲೆ ಅದ್ಭುತವಾದ ಪರ್ಫಾರ್ಮೆನ್ಸ್ ಅನ್ನು ಅಭಿಜಿತ್ ದಂಪತಿಗಳು ನೀಡಿದ್ದರು.

ಕಳೆದ ಎರಡು ವಾರಗಳ ಹಿಂದೆಯಷ್ಟೇ ಶಿವಣ್ಣ, ಚಿನ್ನಿ ಮಾಸ್ಟರ್, ರಕ್ಷಿತಾ ಮೇಡಂ ಹಾಗೂ ಅರ್ಜುನ್ ಜನ್ಯ ಇನ್ನೂ ಹಲವಾರು ಸೆಲೆಬ್ರೇಟಿಗಳು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಅಭಿಜಿತ್ ಮತ್ತು ರೋಹಿಣಿ ದಂಪತಿ ಮಾಡಿದಂತಹ ಡಾನ್ಸ್ ಎಲ್ಲರ ಗಮನವನ್ನು ಸೆಳೆದಿತ್ತು. ಈ ಡ್ಯಾನ್ಸ್ ನೋಡಿದಂತಹ ಶಿವಣ್ಣ ಅವರು ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ ಇಲ್ಲಿಯವರೆಗೂ ಕಂಡಿತಂತಹ ಸೋಲು ಇಂದಿಗೆ ಮುಕ್ತಾಯವಾಗಲಿದೆ. ಇನ್ನು ಮುಂದೆ ನಿಮಗೆ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶ ದೊರೆಯಲಿದೆ ನನ್ನ ಎಲ್ಲಾ ಸಿನಿಮಾದಲ್ಲಿಯೂ ಕೂಡ ನಿಮಗಾಗಿ ಒಂದು ವಿಶೇಷ ಪಾತ್ರವನ್ನು ಕಲ್ಪಿಸಿ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದಾರೆ.

ಶಿವಣ್ಣ ಅವರ ಈ ಮಾತುಗಳನ್ನು ಕೇಳಿ ವೇದಿಕೆ ಮೇಲೆ ಅಭಿಜಿತ್ ಅವರು ಭಾವುಕರಾಗಿದ್ದರು ಇದೆಲ್ಲ ಒಂದು ಕಡೆಯಾದರೆ ಇದೀಗ ಜೋಡಿ ನಂಬರ್ ಒಂದು ಕಾರ್ಯಕ್ರಮವನ್ನು ವಿಜೇತರಾಗಿದ್ದಾರೆ. ಈ ದಂಪತಿಗಳಿಗೆ 5 ಲಕ್ಷ ರೂಪಾಯಿಗಳ ನಗದು ಬಹುಮಾನ ಹಾಗೂ ಟ್ರೋಫಿ ದೊರೆತಿದೆ. ಈ ಸಂದರ್ಭದಲ್ಲಿ ಅಭಿಜಿತ್ ಮತ್ತು ರೋಹಿಣಿ ಮಾತನಾಡಿದಂತಹ ಮಾತುಗಳನ್ನು ಕೇಳಿದರೆ ನಿಜಕ್ಕೂ ಒಂದು ಕ್ಷಣ ಮನಸು ವಿಚಲಿತವಾಗುತ್ತದೆ. ಹೌದು ಅದೇನೆಂದರೆ ರೋಹಿಣಿ ಅವರು ನಮಗೆ ಇಲ್ಲಿ ಸಿಕ್ಕ ಹಣಕ್ಕಿಂತ ಜಾಸ್ತಿ ನಮಗೆ ವಿಜಯ ಸಿಕ್ಕಿ ಬಹಳ ಸಮಯ ಆಗಿತ್ತು. ಇದಾದ ಮೇಲೆ ನನ್ನ ಪತಿ ವಿಜಯಪತಾಕೆ ಹಾರಿಸಬೇಕು” ಎಂದು ರೋಹಿಣಿ ಅವರು ಹೇಳಿದ್ದಾರೆ. ನಮಗೆ ಈ ಟ್ರೋಫಿ, ಈ ಬಹುಮಾನ ಎಲ್ಲವೂ ನಮಗೆ ಆಕ್ಸಿಜನ್ ಎಂದು ಭಾವಿಸುವೆ. ಎಲ್ಲರಿಗೂ ಧನ್ಯವಾದಗಳು” ಎಂದು ಅಭಿಜಿತ್ ಹೇಳಿದ್ದಾರೆ.

ಸಂತು-ಮಾನಸ, ಕಿರಿಕ್ ಕೀರ್ತಿ-ಅರ್ಪಿತಾ, ನೇಹಾ ಗೌಡ-ಪ್ರಣವ್, ಮಿತ್ರ-ಗೀತಾ, ಗೋವಿಂದೇ ಗೌಡ-ದಿವ್ಯಾ, ನಿನಾದ್-ರಮ್ಯಾ, ಪಂಕಜಾ ಶಿವಣ್ಣ-ಭವಾನಿ ಸಿಂಗ್, ಕೃಷ್ಣೇ ಗೌಡ ದಂಪತಿ, ಕಂಬದ ರಂಗಯ್ಯ ದಂಪತಿ ಈ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಮೊದಲನೇ ರನ್ನರ್ ಅಪ್ ಆಗಿ ಕಿರ್ತೀ ಹಾಗೂ ಅರ್ಪಿತ ಹೊರಹೊಮ್ಮಿದ್ದಾರೆ ಈ ದಂಪತಿಗಳಿಗೆ 3 ಲಕ್ಷ ರೂಪಾಯಿ ನಗದು ಬಹುಮಾನ ದೊರೆತಿದೆ ಎರಡನೇ ರನ್ನರ್ ಅಪ್ ಆಗಿ ಸಂತು ಹಾಗೂ ಮಾನಸಾ ಅವರು ಹೊರ ಹೊಮ್ಮಿದರೆ ಈ ಜೋಡಿಗೆ ಒಂದು ಲಕ್ಷ ರೂಪಾಯಿಗಳ ನಗದು ಬಹುಮಾನ ದೊರೆತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ನಟಿ ಆಶಿಕಾ ರಂಗನಾಥ್ ಮಾಡಿದ ಈ ಕ್ಯೂಟ್ ಡಾನ್ಸ್ ನೋಡಿದ್ರೆ ನಿಜಕ್ಕೂ ಫಿದಾ ಆಗ್ತಿರಾ.

ನಟಿ ಆಶಿಕಾ ರಂಗನಾಥ್ ಅವರು ಮೂಲತಃ ಹಾಸನದವರು ಮೊದಮೊದಲು ಮಾಡಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ತದನಂತರ ಸಿನಿಮಾದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುವುದರ ಮೂಲಕ ತಮ್ಮ ಪ್ರತಿಭೆಯನ್ನು ಇಡೀ ದಕ್ಷಿಣ ಭಾರತದ ತುಂಬೆಲ್ಲ ಚೆಲ್ಲಿದರು. ಹೌದು ಶರಣ್ ಅಭಿನಯದ ರಾಂಬೊ 2 ಸಿನಿಮದಲ್ಲಿ ಚುಟು ಚುಟು ಎಂಬ ಹಾಡಿಗೆ ಇವರು ಮಾಡಿರುವಂತಹ ಡಾನ್ಸ್ ಬಹಳ ಮನ ಮೋಹಕವಾಗಿದೆ. ಇದನ್ನು ಹೊರತು ಪಡಿಸಿದರೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಮದಗಜಾ ಸಿನಿಮಾದಲ್ಲಿಯೂ ಕೂಡ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಒಂದು ಪಾತ್ರಕ್ಕೆ ಇವರು 2022 ಸೈಮಾ ಫಿಲಂ ಅವಾರ್ಡನ್ನು ಕೂಡ ಪಡೆದುಕೊಂಡಿದ್ದಾರೆ ಆಶಿಕಾ ರಂಗನಾಥ್ ಅವರು ಚಿತ್ರರಂಗಕ್ಕೆ ಬಂದು ಆರು ವರ್ಷಗಳು ಕಳೆದಿದೆ. ಆದರೆ ಒಂದು ಬಾರಿಯೂ ಕೂಡ ಇವರು ಯಾವುದೇ ಅವಾರ್ಡನ್ನು ಸ್ವೀಕರಿಸಿರಲಿಲ್ಲ ಇದೆ ಮೊದಲ ಬಾರಿಗೆ ಮದಗಜ ಸಿನಿಮಾದ ಮೂಲಕ ಅವಾರ್ಡ್ ಅದು ಸ್ವೀಕರಿಸಿದ್ದಾರೆ. ಹಾಗಾಗಿ ಮದಗಜ ಸಿನೆಮಾದ ಟೀಮ್ ಗೆ ತಮ್ಮ ಅವಾರ್ಡ್ ಅನ್ನು ಅರ್ಪಿಸಿದ್ದಾರೆ ಈ ಒಂದು ಅವಾರ್ಡ್ ಪಡೆದುಕೊಂಡ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡು ಅಭಿಮಾನಿಗಳೊಂದಿಗೆ ತಮ್ಮ ಸಂತೋಷದ ಕ್ಷಣವನ್ನು ಸವಿದಿದ್ದಾರೆ.

ಇನ್ನು ನಟಿ ಆಶಿಕಾ ರಂಗನಾಥ್ ಅವರು ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲಿಯೂ ಕೂಡ ನಟನೆ ಮಾಡುತ್ತಿದ್ದಾರೆ ಹೌದು ಇತ್ತೀಚಿಗಷ್ಟೇ ಆಶಿಕಾ ಅವರು ತವೀಣ ಚಿತ್ರದಲ್ಲಿ ನಟನೆ ಮಾಡುತ್ತಿರುವುದರ ಬಗ್ಗೆ ಮಾಹಿತಿಯನ್ನು ಹೊರ ಹಾಕಿದ್ದಾರೆ. ಇತ್ತೀಚೆಗಷ್ಟೇ ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು. ನಟ ಸಿದ್ಧಾರ್ಥ್ ಅಭಿನಯದ ಮುಂದಿನ ತಮಿಳು ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಸಹ ಶೀರ್ಷಿಕೆಯನ್ನು ಇಟ್ಟಿಲ್ಲ. ಪ್ರೊಡಕ್ಷನ್ ನಂಬರ್ 1 ಎಂಬ ತಾತ್ಕಾಲಿಕ ಶೀರ್ಷಿಕೆ ಅಡಿಯಲ್ಲಿ ಸೆಪ್ಟೆಂಬರ್ 15 ರಂದು ಚೆನ್ನೈನಲ್ಲಿ ಚಿತ್ರದ ಮುಹೂರ್ತ ಸಮಾರಂಭವನ್ನು ನಡೆದಿದ್ದು, ಈ ಕಾರ್ಯಕ್ರಮದ ಫೋಟೊಗಳನ್ನು ಆಶಿಕಾ ರಂಗನಾಥ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದ ಆಶಿಕಾ ರಂಗನಾಥ್ ನೆಚ್ಚಿನ ನಟರಲ್ಲಿ ಓರ್ವರಾದ ಸಿದ್ಧಾರ್ಥ್ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ಅವಕಾಶ ಸಿಗುತ್ತಿರುವುದು ಖುಷಿಯ ವಿಚಾರ. ಸಿದ್ಧಾರ್ಥ್ ಅಭಿನಯದ ‘ಬೊಮ್ಮರಿಲ್ಲು’ ಹಾಗೂ ‘ನುವ್ವೊಸ್ತಾನಂಟೆ ನೇನೊದ್ದಂಟಾನಾ’ ಚಿತ್ರಗಳನ್ನು ಎಷ್ಟು ಬಾರಿ ನೋಡಿದ್ದೇನೆ ಎಂಬುದೇ ಲೆಕ್ಕವಿಲ್ಲ. ಸಿದ್ಧಾರ್ಥ್ ಜೊತೆಗೆ ನಟಿಸುತ್ತಿರುವುದು ತುಂಬಾ ವಿಶೇಷ ಎಂದು ಬರೆದುಕೊಳ್ಳುವ ಮೂಲಕ ಸಂತಸದ ವಿಚಾರವನ್ನು ಶೇರ್ ಮಾಡಿಕೊಂಡಿದ್ದರು.

ನಿಜಕ್ಕೂ ಕೂಡ ಇದು ಹೆಮ್ಮೆ ಪಡುವಂತಹ ವಿಚಾರವೇ ನಮ್ಮ ಕನ್ನಡದ ನಟಿಯರು ಬೇರೆ ರಾಜ್ಯಗಳಿಗೆ ಹೋಗಿ ಬೇರೆ ಭಾಷೆಯಲ್ಲಿ ಸಾಧನೆ ಮಾಡುತ್ತಿದ್ದಾರೆ ಅಂದರೆ ನಮ್ಮ ಕನ್ನಡಿಗರ ಪ್ರತಿಭೆ ಎಷ್ಟು ಇದೆ ಎಂಬುದನ್ನು ನಾವು ಇಲ್ಲೇ ಅರ್ಥಮಾಡಿಕೊಳ್ಳಬಹುದು. ಇನ್ನೂ ಆಶಿಕಾ ಅವರ ಈ ಡ್ಯಾನ್ಸ್ ನೋಡಿದ್ರೆ ನಿಜಕ್ಕೂ ನೀವು ಕಳೆದು ಹೋಗುತ್ತೀರಾ ಅಷ್ಟು ಮೋಹಕವಾಗಿ ಈ ಡಾನ್ಸ್ ಮಾಡಿದ್ದಾರೆ. ಇವರ ಎನರ್ಜಿಗೆ ಹಾಗೂ ಇವರ ಡೆಡಿಕೇಶನ್ ಗೆ ಎಲ್ಲರೂ ಒಂದು ಸಲಾಂ ಹೊಡೆಯಲೇಬೇಕು ಅಂತ ಹೇಳುತ್ತಾರೆ. ಆಶಿಕಾ ರಂಗನಾಥ್ ಅವರು ಮಾಡಿದಂತಹ ಡಾನ್ಸ್ ಈ ಕೆಳಗಿನ ವಿಡಿಯೋದಲ್ಲಿ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ಅಭಿಮಾನಿ ಜೊತೆ ನಟ ದರ್ಶನ್ ಮಾಡಿದ ಸಖತ್ ಡ್ಯಾನ್ಸ್ , ಅಪರೂಪದ ಈ ವಿಡಿಯೋ ನೋಡಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಯನ್ನು ಒಳಗೊಂಡಿರುವಂತಹ ಖ್ಯಾತ ನಟ ಅಂತಾನೆ ಹೇಳಬಹುದು. ಚಿತ್ರರಂಗಕ್ಕೆ ಬಂದು ಸುಮಾರು ಎರಡು ದಶಕಗಳೇ ಆಗಿದೆ ಆದರೆ ಇವರು ಚಿತ್ರರಂಗಕ್ಕೆ ನಡೆದು ಬಂದ ಹಾದಿ ಮಾತ್ರ ಸುಖಕರವಾಗಿರಲಿಲ್ಲ. ಹೌದು ಕಲ್ಲು ಮುಳ್ಳಿನ ಹಾದಿಯನ್ನೇ ತುಳಿದುಕೊಂಡು ಬಂದಂತವರು ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ ಅವರು ಚಿತ್ರರಂಗದಲ್ಲಿ ಹಲವಾರು ಪೋಷಕ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದರೆ ಖಳನಾಯಕನ ಪಾತ್ರದಲ್ಲಿಯೂ ಕೂಡ ಗುರುತಿಸಿಕೊಂಡಿದ್ದಾರೆ ಸುಮಾರು 300ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಇಷ್ಟೆಲ್ಲಾ ಸಿನಿಮಾ ಬ್ಯಾಕ್ ಗ್ರೌಂಡ್ ಇದ್ದರೂ ಕೂಡ ನಟ ದರ್ಶನ್ ಅವರು ಚಿತ್ರರಂಗಕ್ಕೆ ಎಂಟ್ರಿ ಪಡೆಯುವುದಕ್ಕೆ ಏನೆಲ್ಲ ಕಷ್ಟ ಪಟ್ಟರು ಎಂಬ ವಿಚಾರವನ್ನು ತಿಳಿದರೆ ನಿಜಕ್ಕೂ ಒಂದು ಕ್ಷಣ ಕಣ್ಣಂಚಲ್ಲಿ ನೀರು ಬರುತ್ತದೆ.

ಜಾಹಿರಾತು:- Astrologers no matter how tough your problem is, it will be a permanent solution in 3 hours if you believe in a phone call 9740495989 ಜ್ಯೋತಿಷ್ಯರು ನಿಮ್ಮ ಸಮಸ್ಯೆ ಎಷ್ಟೇ ಇರಲ್ಲಿಎಷ್ಟೇ ಕಠಿಣವಾಗಿರಲ್ಲಿ ತಿಳಿಸಿಕೊಡುತಾ 3 ಗಂಟೆಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ನೀವು ನಂಬಿಕೆ ಆಗಿದ್ದಲ್ಲಿ ಒಂದು ಫೋನಿನ ಮುಖಾಂತರ ನಿಮ್ಮ ಸಮಸ್ಯೆಯನ್ನು ಸಮಸ್ಯೆ ಪರಿಹಾರ ಮಾಡಿಕೊಡುತ್ತಾರೆ 9740495989ಶ್ರೀ ವಶೀಕರಣ ಪುರುಷ ವಶೀಕರಣ ಮಾಡಿಕೊಡಲಾಗುವುದು ಲಕ್ಷ್ಮಿ ವಶೀಕರಣ ಕೇವಲ 3 ಗಂಟೆಯಲ್ಲಿ ನಿಮ್ಮ ಏನೇ ಸಮಸ್ಯೆ ಇದ್ದರೂ ಫೋನಿನ ಮುಖಾಂತರ ತಿಳಿಸಿಕೊಡುತ್ತಾರೆ ಶಾಶ್ವತ ಪರಿಹಾರ ಮೊಬೈಲ್ ನಂಬರ್ 9740495989

ಹೌದು ಇಂದು ಸ್ಟಾರ್ ನಟರ ಮಕ್ಕಳು ಸಿನಿಮಾ ರಂಗಕ್ಕೆ ಬರುವುದಕ್ಕಿಂತ ಮುಂಚೆಯೇ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ ಅಷ್ಟೇ ಅಲ್ಲದೆ ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಕರೆತರಬೇಕು ಎಂದು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ಈ ರೀತಿಯ ಯಾವುದೇ ರೀತಿಯಾದಂತಹ ತಯಾರಿ ಮಾಡಿಕೊಳ್ಳುತ್ತಿರಲಿಲ್ಲ ಈ ಕಾರಣಕ್ಕಾಗಿ ಹಿಂದಿನ ಕಾಲದ ನಾಯಕರ ಮಕ್ಕಳು ಚಿತ್ರರಂಗದಿಂದ ಕಣ್ಮರೆಯಾಗಿ ಹೋದರೂ. ಆದರೂ ಕೂಡ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ತಂದೆ ನಡೆದು ಬಂದ ಹಾದಿಯನ್ನು ಮರೆಯಲಿಲ್ಲ ಅದೇ ಹಾದಿಯಲ್ಲಿ ತಾನೂ ಕೂಡ ಚಿತ್ರರಂಗದಲ್ಲೇ ಮುಂದೆ ಹೋಗಬೇಕು ಎಂದು ತೀರ್ಮಾನ ಮಾಡುತ್ತಾರೆ.

ಈ ಕಾರಣಕ್ಕಾಗಿ ಮೊದಲ ಬಾರಿಗೆ ಲೈಟ್ ಬಾಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ತದನಂತರ ಚಿಕ್ಕಪುಟ್ಟ ಸಿನಿಮಾದಲ್ಲಿ ಸೈಡ್ ಆಕ್ಟರ್ ಆಗಿ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ. ತದನಂತರ ಧಾರವಾಹಿಯಲ್ಲಿ ಕೂಡ ನಟನೆ ಮಾಡುತ್ತಾರೆ ಇದಾದ ನಂತರ ಮೆಜೆಸ್ಟಿಕ್ ಎಂಬ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಗುರುತಿಸಿಕೊಳ್ಳುತ್ತಾರೆ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತದೆ ದರ್ಶನ್ ಒಬ್ಬ ನಾಯಕನಟ ಎಂಬುವುದನ್ನು ಈ ಸಿನಿಮಾ ಎತ್ತಿ ತೋರಿಸುತ್ತದೆ‌. ತದನಂತರ ದರ್ಶನ್ ಅವರ ಅದೃಷ್ಟವೇ ಬದಲಾಗಿ ಹೋಗುತ್ತದೆ ಒಂದರ ಹಿಂದೆ ಮತ್ತೊಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಬರುತ್ತಾರೆ.

ದರ್ಶನ್ ಅವರು ಇಲ್ಲಿಯವರೆಗೂ ಕೂಡ ಕನ್ನಡದಲ್ಲಿ ಸುಮಾರು 55ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಇವರು ತೆಗೆದಂತಹ ಎಲ್ಲಾ ಸಿನಿಮಾ ಕೂಡ ಸೂಪರ್ ಡೂಪರ್ ಹಿಟ್ ಹಾಗಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಇದೀಗ ದರ್ಶನ್ ಅವರು ದೊಡ್ಡ ಸ್ಟಾರ್ ನಟ ಅಂತಾನೆ ಹೇಳಬಹುದು. ಇಷ್ಟೆಲ್ಲ ಹೆಸರು ಕೀರ್ತಿ ಆಸ್ತಿ ಸಿರಿ ಸಂಪತ್ತು ಎಲ್ಲವನ್ನು ಕೂಡ ಗಳಿಸಿದ್ದರು ದರ್ಶನ್ ಅವರು ಇಂದಿಗೂ ಕೂಡ ಸಾಮಾನ್ಯ ಜನರಂತೆ ಬದುಕುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.

ಹೌದು ದರ್ಶನ್ ಅವರ ಬಳಿ ಸ್ವಲ್ಪವೂ ಕೂಡ ಅಹಂಕಾರ ಎಂಬುವುದು ಇಲ್ಲ ಅಧಿಕಾರ ಎಂಬುದು ಇಲ್ಲ ಸಾಮಾನ್ಯ ಜನರಂತೆ ವಾಸ ಮಾಡುತ್ತಿದ್ದರೆ ಹಾಗೂ ಅಭಿಮಾನಿಗಳು ಎಲ್ಲೆ ಸಿಕ್ಕರು ಕೂಡ ಬಹಳ ಆತ್ಮೀಯವಾಗಿ ಮಾತನಾಡುತ್ತಾರೆ. ಇತ್ತೀಚಿಗಷ್ಟೇ ತಮ್ಮ ಅಭಿಮಾನಿ ಒಬ್ಬರ ಹುಟ್ಟು ಹಬ್ಬದ ಕಾರ್ಯಕ್ರಮ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಅಭಿಮಾನಿಯೊಟ್ಟಿಗೆ ಡ್ಯಾನ್ಸ್ ಮಾಡುವುದರ ಮೂಲಕ ಮನರಂಜನೆಯನ್ನು ನೀಡಿದ್ದಾರೆ ಆ ವಿಡಿಯೋ ಕೆಳಗೆ ಇದೆ ದರ್ಶನ್ ಅವರ ಈ ಸರಳತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ

ಹೆಚ್ಚು ಬಾರಿ ಫಿಲಂ ಫೇರ್ ಅವಾರ್ಡ್ಸ್ ಪಡೆದ ಕನ್ನಡದ ಏಕೈಕ ನಟ ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡುತ್ತೀರಾ

ಪ್ರತಿ ವರ್ಷವೂ ಕೂಡ ಸಿನಿಮಾ ರಂಗದಲ್ಲಿ ಯಶಸ್ಸನ್ನು ಸಾಧಿಸಿದಂತಹ ಸಾಧಕರಿಗೆ ಫೀಲಂ ಫೇರ್ ಅವಾರ್ಡ್ ಅನ್ನು ನೀಡಲಾಗುತ್ತದೆ ಕಳೆದ ಭಾನುವಾರ ಅಂದರೆ 9ನೇ ತಾರೀಖಿನಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. ಇದೇ ಮೊದಲ ಬಾರಿಗೆ ಸೌತ್ ಫಿಲಂ ಅವಾರ್ಡ್ ಅನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಇದು 67ನೇ ಫಿಲಂ ಫೇರ್ ಅವಾರ್ಡ್ ಇದಾಗಿದೆ. ನಿಜಕ್ಕೂ ಕೂಡ ಬೆಂಗಳೂರಿನಲ್ಲಿ ಈ ಒಂದು ಅವಾರ್ಡ್ ಫಂಕ್ಷನ್ ಮಾಡಿರುವುದು ಹೆಮ್ಮೆಯ ಸಂಗತಿ ಅಂತಾನೆ ಹೇಳಬಹುದು. ಯಾಕೆಂದರೆ ಇಲ್ಲಿಯವರೆಗೂ ಒಂದು ಬಾರಿಯೂ ಕೂಡ ಬೆಂಗಳೂರಿನಲ್ಲಿ ಯಾವುದೇ ರೀತಿಯಾದಂತಹ ಫೀಲ್ಂ ಫೇರ್ ಅವಾರ್ಡ್ ಆಗಿರಬಹುದು ಸೈಮ ಅವಾರ್ಡ್ ಆಗಿರಬಹುದು ಅಥವಾ ಇನ್ನಿತರ ಇಂಟರ್ನ್ಯಾಷನಲ್ ಸಿನಿಮಾರಂಗಕ್ಕೆ ಸಂಬಂಧ ಪಟ್ಟಂತಹ ಅವಾರ್ಡ್ ಫಂಕ್ಷನ್ ಗಳನ್ನು ಏರ್ಪಡಿಸಿರಲಿಲ್ಲ.

ಆದರೆ ಈಗ ಕಾಲ ಬದಲಾಗಿದೆ ನಮ್ಮ ಕನ್ನಡ ಚಿತ್ರರಂಗದವರು ಕೂಡ ಒಳ್ಳೊಳ್ಳೆ ಸಿನಿಮಾಗಳನ್ನು ನೀಡುತ್ತಿದ್ದಾರೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ದೊಡ್ಡ ಹೆಸರನ್ನು ಗಳಿಸುತ್ತಿದೆ . ಈ ಕಾರಣಕ್ಕಾಗಿ ಇದೀಗ ಉತ್ತರ ಭಾರತದವರೆಲ್ಲರೂ ಕೂಡ ದಕ್ಷಿಣ ಭಾರತದತ್ತ ತಿರುಗಿ ನೋಡುತ್ತಿದ್ದಾರೆ. ಇನ್ನು ಈ ಒಂದು ಸೌತ್ ಇಂಡಿಯಾ ಫಿಲಂ ಫೇರ್ ಅವಾರ್ಡ್ ನಲ್ಲಿ ಅತಿ ಹೆಚ್ಚು ಬಾರಿ ಪ್ರಶಸ್ತಿಯನ್ನು ಪಡೆದಂತಹ ವ್ಯಕ್ತಿ ಅಂದರೆ ಅದು ರೆಹಮನ್ ಅಂತಾನೆ ಹೇಳಬಹುದು. ಹೌದು ಇಲ್ಲಿಯವರೆಗೂ ಕೂಡ 17 ಬಾರಿ ಫಿಲಂ ಅವಾರ್ಡ್ ಅನ್ನು ಪಡೆದಿದ್ದಾರೆ ತಮ್ಮ ಮಾಂತ್ರಿಕ ಸಂಗೀತದ ಮೂಲಕ ಎಲ್ಲರನ್ನೂ ಕೂಡ ಮಂತ್ರ ಮುಗ್ಧರನ್ನಾಗಿ ಮಾಡಿದ್ದಾರೆ ಈ ಕಾರಣಕ್ಕಾಗಿ ಅತಿ ಹೆಚ್ಚು ಬಾರಿ ಫಿಲಂ ಅವಾರ್ಡ್ ಅನ್ನು ರೆಹಮಾನ್ ಅವರು ಪಡೆದಿದ್ದಾರೆ.

ಇದನ್ನು ಹೊರತು ಪಡಿಸಿದರೆ ಕಮಲ್ ಹಾಸನ್ ಅವರು 16 ಬಾರಿ ಫಿಲಂ ಫೇರ್ ಅವಾರ್ಡನ್ನು ಗಳಿಸಿದ್ದಾರೆ ಇವರ ನಂತರ ಮೂರನೇ ಸ್ಥಾನವನ್ನು ಪಡೆಯುವ ವ್ಯಕ್ತಿ ಎಂದರೆ ಅದು ಮಲೆಯಾಳಂನಾ ಮುಮ್ಮಟಿ ಅಂತಾನೆ ಹೇಳಬಹುದು‌. ಇದಿಷ್ಟು ಕೂಡ ಪರ ಅಂದರೆ ಹೊರ ರಾಜ್ಯದ ಚಿತ್ರರಂಗದವರ ಸಾಧನೆ ಇನ್ನೂ ನಮ್ಮ ಕರ್ನಾಟಕದ ವಿಚಾರ ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದರೆ ಅತಿ ಹೆಚ್ಚು ಬಾರಿ ಫಿಲಂ ಫೇರ್ ಅವಾರ್ಡ್ ಪಡೆದಂತ ವ್ಯಕ್ತಿ ಅಂದರೆ ಅದು ವರ ನಟ ಡಾಕ್ಟರ್ ರಾಜಕುಮಾರ್ ಅಂತಾನೆ ಹೇಳಬಹುದು. ಹೌದು ಡಾಕ್ಟರ್ ರಾಜಕುಮಾರ್ ಅವರು ಇಲ್ಲಿಯವರೆಗೂ ಕೂಡ ಸುಮಾರು ಎಂಟು ಬಾರಿ ಫಿಲಂ ಫಾರ್ ಅವಾರ್ಡನ್ನು ತಮ್ಮದಾಗಿಸಿಕೊಂಡಿದ್ದಾರೆ‌.

ಇದನ್ನು ಹೊರತು ಪಡಿಸಿದರೆ 2ನೇ ಸ್ಥಾನವನ್ನು ಪಡೆಯುವಂತಹ ವ್ಯಕ್ತಿ ಆನಂತ್ ನಾಗ್ ಹಾಗೂ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರು ಆರು ಬಾರಿ ಫಿಲಂ ಫೇರ್ ಅವರನ್ನು ತಮ್ಮದಾಗಿಸಿಕೊಂಡಿದ್ದಾರೆ ಇನ್ನು ಮೂರನೇ ಸ್ಥಾನವನ್ನು ಪಡೆದಿರುವ ವ್ಯಕ್ತಿ ಯಾರೇಂದರೆ ಡಾಕ್ಟರ್ ವಿಷ್ಣುವರ್ಧನ್ ಹಾಗೂ ಶಿವರಾಜ್ ಕುಮಾರ್ ಸುಮಾರು ನಾಲ್ಕು ಬಾರಿ ಫಿಲಂ ಫೇರ್ ಅವಾರ್ಡನ್ನು ಪಡೆದುಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರು ಮೂರು ಬಾರಿ ಅವಾರ್ಡ್ ಪಡೆದಿದ್ದಾರೆ ಇದನ್ನು ಹೊರತು ಪಡಿಸಿದರೆ ಗೋಲ್ಡನ್ ಸ್ಟಾರ್ ಗಣೇಶ್, ಲೋಕೇಶ್, ಯಶ್, ನೆನಪಿರಲಿ ಪ್ರೇಮ್, ರಮೇಶ್ ಅರವಿಂದ್ ಇವರು ಎರಡು ಬಾರಿ ಫಿಲಂ ಫೆರ್ ಅವರನ್ನು ಪಡೆದಿದ್ದಾರೆ. ಇದಿಷ್ಟು ಜನ ಕನ್ನಡದಲ್ಲಿ ಫಿಲಂ ಫೇರ್ ಅವಾರ್ಡ್ ಅನ್ನು ಪಡೆದುಕೊಂಡಿರುವವರು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು ಸ್ನೇಹಿತರೆ

 

ಚಿರು ಫೋಟೋ ಇರುವ ಬ್ಲೇಜರ್ ಧರಿಸಿ ಅವಾರ್ಡ್ ಸ್ವೀಕರಿಸಿದ ಪನ್ನಗಭರಣ, ಸ್ನೇಹಿನಿಗೆ ಕೊಟ್ಟ ಗೌರವ ನೋಡಿ ಮೆಚ್ಚಿದ ನೆಟ್ಟಿಗರು.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಚಿರಂಜೀವಿ ಸರ್ಜಾ ಅವರು ಕಳೆದ ಎರಡು ವರ್ಷಗಳ ಹಿಂದೆ ನಮ್ಮೆಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿದ ವಿಚಾರ ನಿಮಗೆ ತಿಳಿದೇ. ಈ ಈ ಸಮಯದಲ್ಲಿ ಮೇಘನಾ ರಾಜ್ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ಈ ಸ್ಥಿತಿ ಯಾವ ಹೆಣ್ಣಿಗೂ ಕೂಡ ಬರೆದಿರಲಿ. ಇದೆಲ್ಲ ಒಂದು ಕಡೆಯಾದರೆ ಚಿರಂಜೀವಿ ಸರ್ಜಾ ಅವರ ಸ್ನೇಹಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದರು ಅಷ್ಟೇ ಅಲ್ಲದೆ ಸ್ನೇಹಿತರಾಗಿ ಯಾವ ಕೆಲಸವನ್ನು ಕೂಡ ಮಾಡುವುದಕ್ಕೆ ಸಿದ್ಧರಾಗಿದ್ದರು ಈ ಕಾರಣದಿಂದಾಗಿಯೇ ಚಿರಂಜೀವಿ ಸರ್ಜಾ ಅವರಿಗೆ ಸ್ನೇಹಿತರ ಬಳಗ ತುಂಬಾ ಇದೆ ಅವರಲ್ಲಿ ಪನ್ನಗಭರಣ ಅವರು ಕೂಡ ಒಬ್ಬರು.

ಹೌದು ಚಿರಂಜೀವಿ ಸರ್ಜಾ ಅವರ ಚಿತ್ರರಂಗದಲ್ಲಿ ಸಕ್ರಿಯರಾಗಿ ಇರುವಂತಹ ಹಾಗೂ ನಿರ್ದೇಶಕರಾಗಿ ಇರುವಂತಹ ಪನ್ನಗಭರಣ ಅವರ ಆತ್ಮೀಯ ಸ್ನೇಹಿತರು. ಇನ್ನು ಪ್ರಜ್ವಲ್ ದೇವರಾಜ್ ಜೊತೆಗೂ ಕೂಡ ಉತ್ತಮ ಒಡನಾಟವನ್ನು ಹೊಂದಿದ್ದರು ಎಲ್ಲೇ ಹೋದರೂ ಬಂದರು ಕೂಡ ಪನ್ನಗಭರಣ ಹಾಗೂ ಪ್ರಜ್ವಲ್ ದೇವರಾಜ್ ಜೊತೆಗೆ ಸುತ್ತುತ್ತಿದ್ದರು. ಚಿರಂಜೀವಿ ಸರ್ಜಾ ಅವರು ಇನ್ನಿಲ್ಲ ಎಂಬ ವಿಚಾರವನ್ನು ಕೇಳುತ್ತಿದ್ದ ಹಾಗೆ ಪನ್ನಗ ಭರಣ ಅವರು ನಿಜಕ್ಕೂ ಕೂಡ ಕುಸಿದು ಬಿದ್ದರು. ತಮ್ಮ ಆತ್ಮೀಯ ಸ್ನೇಹಿತನ್ನು ಕಳೆದುಕೊಂಡ ದುಃಖವನ್ನು ಈ ಜೀವನದಲ್ಲಿ ಎಂದಿಗೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ ಅಂತ ಹೇಳಿಕೊಂಡಿದ್ದರು.

ಸಾಮಾನ್ಯವಾಗಿ ಆತ್ಮೀಯ ಸ್ನೇಹಿತರು ಇಹಲೋಕವನ್ನು ತ್ಯಜಿಸಿದಾಗ ಒಂದೆರಡು ದಿನ ಅವರ ನೆನಪಿನಲ್ಲಿ ಇರುತ್ತಾರೆ ತದನಂತರ ಅವರನ್ನು ಮರೆತು ತಮ್ಮ ಕೆಲಸ ಕಾರ್ಯದತ್ತ ಗಮನ ವಹಿಸುತ್ತಾರೆ. ಆದರೆ ಚಿರಂಜೀವಿ ಸರ್ಜಾ ಅವರ ಜೀವದ ಗೆಳೆಯ ಆದಂತಹ ಪನ್ನಗಭರಣ ಅವರು ಮಾತ್ರ ಚಿರಂಜೀವಿ ಸರ್ಜಾ ಅವರು ಆಗಲಿ ಎರಡು ವರ್ಷವಾದರೂ ಕೂಡ ಅವರನ್ನು ಮರೆತಿಲ್ಲ. ಯಾವುದೇ ಕಾರ್ಯಕ್ರಮ ಇರಲಿ ಅಥವಾ ಯಾವುದೇ ಸಿನಿಮಾ ಕೆಲಸ ಇರಲಿ, ಎಲ್ಲದರಲ್ಲೂ ಕೂಡ ಮೊದಲು ಚಿರು ಅವರನ್ನು ಸ್ಮರಿಸಿ ತದನಂತರವಷ್ಟೇ ಕೆಲಸ ಕಾರ್ಯವನ್ನು ಪ್ರಾರಂಭಿಸುತ್ತಾರೆ.

ಅದೇ ರೀತಿ ನೆನ್ನೆಯಷ್ಟೇ ಬೆಂಗಳೂರಿನಲ್ಲಿ ನಡೆದಂತಹ 67ನೇ ಫೀಲ್ಮಂ ಫೆಸ್ಟಿವಲ್ ಅವಾರ್ಡ್ ಫಂಕ್ಷನ್ ಗೆ ತೆರಳುವ ಸಮಯದಲ್ಲಿ ಚಿರಂಜೀವಿ ಸರ್ಜಾ ಇರುವಂತಹ ಬ್ಲೇಜರನ್ನು ಧರಿಸಿ ಎಲ್ಲರ ಕಣ್ಮನವನ್ನು ಸೆಳೆದಿದ್ದಾರೆ.‌ ಹೌದು ಪನ್ನಗ ಭರಣ ಅವರು 2020 ಹಾಗೂ 2021 ರಲ್ಲಿ ನಿರ್ದೇಶನ ಮಾಡಿದಂತಹ ಫ್ರೆಂಚ್ ಬಿರಿಯಾನಿ ಸೇರಿದಂತೆ ಸಾಕಷ್ಟು ಸಿನಿಮಾಗಳು ಸೂಪರ್ ಹಿಟ್ ಆಗಿದೆ ಆ ಕಾರಣ ಅವರಿಗೆ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಅನ್ನು ನೀಡಲಾಗಿದೆ. ಈ ಸಮಯದಲ್ಲಿ ಅವಾರ್ಡ್ ಪಡೆದುಕೊಳ್ಳುವುದಕ್ಕಿಂತ ಮುಂಚೆ ನನ್ನ ಎಲ್ಲಾ ಯಶಸ್ಸಿಗೂ ಕೂಡ ನನ್ನ ಸ್ನೇಹಿತನಾದಂತಹ ಚಿರಂಜೀವಿ ಸರ್ಜಾ ಅವರೇ ಕಾರಣ ಆದರೆ ಈ ಸಮಯದಲ್ಲಿ ಚಿರಂಜೀವಿ ಸರ್ಜಾ ನನ್ನ ಜೊತೆ ಶಾರೀರಿಕವಾಗಿ ಇಲ್ಲ.

ಆದರೂ ಕೂಡ ಆತನ ನೆನಪು ಸದಾ ನನ್ನ ಬಳಿ ಇರುತ್ತದೆ ಎಂದು ಚಿರಂಜೀವಿ ಸರ್ಜಾ ಫೋಟೋ ಯುವ ಬ್ಲೇಜರ್ ಅನ್ನು ಧರಿಸಿ ಅವಾರ್ಡ್ ಅನ್ನು ಸ್ವೀಕರಿಸಿದ್ದಾರೆ. ಸದ್ಯಕ್ಕೆ ಪನ್ನಗ ಭರಣ ಧರಿಸಿರುವಂತಹ ಬ್ಲೇಜರ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆಗೆ ಪ್ರಶಂಸೆ ಗಿಟ್ಟಿಸಿಕೊಂಡಿದೆ ನಿಜಕ್ಕೂ ಪನ್ನಗಭರಣ ಅವರ ಈ ಫ್ರೆಂಡ್ ಶಿಪ್ ಅನ್ನು ನಾವೆಲ್ಲರೂ ಮೆಚ್ಚಲೇಬೇಕು ಇದ್ದರೆ ಇಂತಹ ಸ್ನೇಹಿತರು ಇರಬೇಕು ಎಂದು ಕೆಲವು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ನಟಿ ರಮ್ಯಾ ಮದುವೆಯಾಗುವ ಹುಡುಗನಿಗೆ ಏನೆಲ್ಲಾ ಗುಣಗಳು ಇರಬೇಕಂತೆ ಗೊತ್ತಾ.? ಮೊದಲ ಬಾರಿಗೆ ತಮ್ಮ ಕನಸಿನ ಗಂಡನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ ನೋಡಿ.!

ನಟಿ ರಮ್ಯಾ ಅವರು ಇದೀಗ ಚಿತ್ರರಂಗ ಹಾಗೂ ಕಿರುತರೆ ಸೇರಿದಂತೆ ಎಲ್ಲಾ ಸಿನಿಮಾ ಕಾರ್ಯಕ್ರಮದಲ್ಲೂ ಕೂಡ ಭಾಗಿಯಾಗುತ್ತಿದ್ದಾರೆ ಕಳೆದ ನಾಲ್ಕೈದು ವರ್ಷಗಳಿಂದಲೂ ಕೂಡ ಚಿತ್ರರಂಗ ಹಾಗೂ ಕಿರುತೆರೆಯಿಂದ ದೂರ ಉಳಿದಿದ್ದರು. ಆದರೆ ಇದೀಗ ಆರು ತಿಂಗಳಿನಿಂದ ಈಚೆ ಯಾವುದೇ ಸಿನಿಮಾ ಕಾರ್ಯವಿರಲಿ ಇವೆಂಟ್ ಇರಲಿ ಅಥವಾ ಕಿರುತೆರೆಗೆ ಸಂಬಂಧಪಟ್ಟಂತಹ ಕಾರ್ಯಕ್ರಮ ಇರಲಿ ಎಲ್ಲದರಲ್ಲೂ ಕೂಡ ಪಾಲ್ಗೊಳ್ಳುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ರಮ್ಯಾ ಅಭಿಮಾನಿಗಳಿಗೆ ಸಂತಸದ ವಿಚಾರವ ಏಕೆಂದರೆ ತಮ್ಮ ನೆಚ್ಚಿನ ನಟಿಯನ್ನು ತೆರೆಯ ಮೇಲು ಕೂಡ ನೋಡಲು ಸಾಧ್ಯವಾಗುತ್ತಿರಲಿಲ್ಲ ಹಾಗೂ ಕಿರುತರೆಯಲ್ಲೂ ಕೂಡ ನೋಡಲು ಸಾಧ್ಯವಾಗುತ್ತಿರಲಿಲ್ಲ ಹಾಗಾಗಿ ರಮ್ಯಾ ಅಭಿಮಾನಿಗಳು ರಮ್ಯಾ ಅವರನ್ನು ಇದೀಗ ಎಲ್ಲಾ ಕಡೆ ನೋಡಿ ಕಣ್ತುಂಬಿ ಕೊಳ್ಳುತ್ತಿದ್ದಾರೆ.

ಇನ್ನು ಕಳೆದ ಶನಿವಾರ ಮತ್ತು ಭಾನುವಾರ ನಡೆದಂತಹ ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಕಾರ್ಯಕ್ರಮ ಅವಾರ್ಡ್ಸ್ ನಲ್ಲಿ ನಟಿ ರಮ್ಯಾ ಅವರು ಪಾಲ್ಗೊಂಡಿದ್ದಾರೆ. ಈ ಸಮಯದಲ್ಲಿ ವೇದಿಕೆಯ ಮೇಲೆ ಬಂದಂತಹ ರಮ್ಯಾ ಅವರು ಕಿರುತೆರೆಯ ನಟ ನಟಿಯರಿಗೆ ಶುಭಾಶಯವನ್ನು ಸಲ್ಲಿಸಿದ್ದಾರೆ. ತದನಂತರ ನಿರೂಪಕ ಅಕುಲ್ ಬಾಲಾಜಿ ಅವರು ನಿಮ್ಮ ಪ್ರೀತಿಯ ಹುಡುಗನ ಬಗ್ಗೆ ಏನು ಹೇಳುತ್ತೀರಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಈ ಸಮಯದಲ್ಲಿ ರಮ್ಯಾ ಅವರು ನಾನಿನ್ನು ಸಿಂಗಲ್ ಅಂತ ಹೇಳಿದ್ದಾರೆ ತದನಂತರ ಅಕುಲ್ ಬಾಲಾಜಿ ಅವರು ಪರವಾಗಿಲ್ಲ ನೀವು ಮದುವೆಯಾಗುವಂತಹ ಹುಡುಗ ಹೇಗಿರಬೇಕು ಅದನ್ನಾದರೂ ಹೇಳಿ ಎಂದು ಪ್ರಶ್ನೆ ಕೇಳಿದ್ದಾರೆ.

ಅಕುಲ್ ಬಾಲಾಜಿ ಕೇಳಿದ ಪ್ರಶ್ನೆಗೆ ರಮ್ಯ ಕೊಟ್ಟ ಉತ್ತರ ಕೇಳಿ ಫ್ಯಾನ್ಸ್ ಫಿದಾ ಆಗಿದ್ದಾರೆ ಹೌದು, ರಮ್ಯಾ ಅವರು ತಮ್ಮ ಕನಸಿನ ಹುಡುಗನ ಬಗ್ಗೆ ಮೊದಲ ಬಾರಿಗೆ ಬಹಿರಂಗವಾಗಿ ವೇದಿಕೆಯ ಮೇಲೆ ಮಾತನಾಡಿದ್ದಾರೆ. ಅದೇನೆಂದರೆ ನಾನು ಇನ್ನು ಸಿಂಗಲ್ ಹಾಗಾಗಿ ನನ್ನನ್ನು ಮದುವೆಯಾಗುವಂತಹ ಹುಡುಗ ಕೂಡ ಸಿಂಗಲ್ ಆಗಿ ಇರಬೇಕು, ಆತನಿಗೆ ಈಗಾಗಲೇ ಮದುವೆ ಆಗಿರಬಾರದು ಅವರು ಕೂಡ ಸಿಂಗಲ್​ ಆಗಿ ಇರಬೇಕು, ನಾನು ಅವರ ಲುಕ್ಸ್​​ ಬಗ್ಗೆ ಜಾಸ್ತಿ ಯೋಚನೆ ಮಾಡೋದಿಲ್ಲ ಅವರು ಒಳ್ಳೆಯ ಮನುಷ್ಯನಾಗಿರಬೇಕು ಅವರಲ್ಲಿ ಕರುಣೆಯ ಮನೋಭಾವ ಇರಬೇಕು. ಇದಿಷ್ಟು ಗುಣಗಳು ಇದ್ದರೆ ಸಾಕು ಆತನನ್ನು ನಾನು ಮದುವೆಯಾಗುತ್ತೇನೆ ಎಂದು ವೇದಿಕೆಯ ಮೇಲೆ ಹೇಳಿದ್ದಾರೆ.

ರಮ್ಯಾ ಕೊಟ್ಟ ಈ ಉತ್ತರವನ್ನು ಕೇಳಿದಂತಹ ಹುಡುಗರು ಆಶ್ಚರ್ಯ ಚಕಿತರಾಗಿದ್ದರೆ ಏಕೆಂದರೆ ಸಾಮಾನ್ಯವಾಗಿ ನಟಿಯರು ಹೆಚ್ಚು ಹಣ ಆಸ್ತಿ ಗಾಗಿ ಆಸೆ ಪಡುತ್ತಾರೆ. ತಮಗಿಂತಲೂ ಸುಂದರವಾಗಿರುವಂತಹ ಪತಿಯನ್ನು ಪಡೆಯಬೇಕು ಅಂತ ಅಂದುಕೊಳ್ಳುತ್ತಾರೆ ಆದರೆ ನಟಿ ರಮ್ಯಾ ಅವರು ಮಾತ್ರ ವಿಭಿನ್ನವಾಗಿ ಯೋಚಿಸಿದ್ದಾರೆ. ಅವರಿಗೆ ಲುಕ್ ನಾ ಬಗ್ಗೆ ಯಾವುದೇ ಚಿಂತೆ ಇಲ್ಲ ಒಳ್ಳೆಯ ಮನುಷ್ಯನಾಗಿರಬೇಕು ಹಾಗೂ ಕರುಣೆಯ ಮನೋಭಾವನೆಯನ್ನು ಹೊಂದಿದ್ದರೆ ಸಾಕು ಎಂದು ಹೇಳಿದ್ದಾರೆ. ಹಾಗಾಗಿ ಈ ಕಾಲದಲ್ಲೂ ಕೂಡ ಇಂತಹ ನಟಿ ಮಣಿಯರು ಇದ್ದಾರಲ್ಲ ಎಂದು ರಮ್ಯಾ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ನಟಿ ರಮ್ಯಾ ಅವರಿಗೆ ಇನ್ನೇನು 40 ವರ್ಷದ ಸಮೀಪವಾಗಿದೆ ಆದರೂ ಕೂಡ ಇವರಿಗೆ ತಕ್ಕಂತಹ ಹುಡುಗ ಇನ್ನೂ ಸಿಕ್ಕಿಲ್ಲ ಹಾಗಾಗಿ ಇನ್ನು ಮುಂದೆಯಾದರೂ ರಮ್ಯಾ ಬಯಸಿದಂತಹ ಗುಣಗಳನ್ನು ಹೊಂದಿರುವ ವ್ಯಕ್ತಿಯೇ ಇವರಿಗೆ ಸಿಗಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಇಡೀ ಕಿರುತೆರೆಯಲ್ಲೇ ಇಂಥ ಸಾಧನೆ ಯಾರೂ ಮಾಡಿಲ್ಲ ಸುಮಾರು 10 ವರ್ಷಗಳಿಂದ ರಂಜಿಸಿದ್ದ ಜನಪ್ರಿಯ ಧಾರಾವಾಹಿ ಮಂಗಳ ಗೌರಿ ಇದೀಗ ಮುಕ್ತಾಯವಾಗಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಪುಟ್ಟಗೌರಿ ಮದುವೆ ಎಂಬ ಧಾರವಾಹಿಗೆ ಎಲ್ಲಿಲ್ಲದ ಜನಪ್ರಿಯತೆ ಇತ್ತು, ಈ ಧಾರಾವಾಹಿಯನ್ನು ನೋಡುವುದಕ್ಕೆ ಅಭಿಮಾನಿಗಳು ಕಾತುರದಿಂದ ಕಾದುಕೊಳ್ಳುತ್ತಿದ್ದರು. ಬಾಲ್ಯ ವಿವಾಹ ಮಾಡಿದರೆ ಅದರಿಂದ ಏನೆಲ್ಲಾ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಬಾಲ್ಯ ವಿವಾಹ ಮಾಡುವುದು ಕಾನೂನಿಗೆ ವಿರೋಧ ಎಂಬ ಕಾನ್ಸೆಪ್ಟ್ ಅನ್ನು ಇಟ್ಟುಕೊಂಡು ಕೆ ಎಸ್ ರಾಮ್ ಜಿ ಎಂಬ ನಿರ್ದೇಶಕ ಪುಟ್ಟಗೌರಿ ಮದುವೆ ಎಂಬ ಧಾರವಾಹಿಯನ್ನು ಮೊದಲ ಬಾರಿಗೆ ಪ್ರಸಾರ ಮಾಡುತ್ತಾರೆ. ಅಂದಿನ ಕಾಲದಲ್ಲಿ ಈ ಧಾರಾವಾಹಿ ಎಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿತು ಅಂದರೆ ಸಂಜೆ 7:30 ಗಂಟೆ ಆದರೆ ಸಾಕು ಮನೆ ಮಂದಿಯವರೆಲ್ಲ ಒಟ್ಟಾಗಿ ಕುಳಿತುಕೊಂಡು ಈ ಧಾರಾವಾಹಿಯನ್ನು ನೋಡುತ್ತಿದ್ದರು ಅಷ್ಟು ಪ್ರಸಿದ್ಧಿಯನ್ನು ಈ ಧಾರಾವಾಹಿ ಪಡೆಯಿತು.

ಒಂದೆರಡು ವರ್ಷ ಈ ಧಾರಾವಾಹಿ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿತ್ತು ತದನಂತರ ಪುಟ್ಟಗೌರಿ ವಯಸ್ಕ ವಯಸ್ಸಿಗೆ ಬಂದ ನಂತರ ಅಲ್ಲಿ ಇದ್ದಂತಹ ಬಾಲಕ ಕಲಾವಿದರನ್ನು ಹೊರಹಾಕಿ ಆ ಸ್ಥಾನಕ್ಕೆ ರಕ್ಷಕ್ ಗೌಡ ಹಾಗೂ ರಂಜನಿ ರಾಘವನ್ ಅವರನ್ನು ಕರೆತರಲಾಗುತ್ತದೆ. ಇಲ್ಲಿಂದ ಕತೆ ಬದಲಾವಣೆಯಾಗುತ್ತದೆ ಕಾಲಕ್ಕೆ ತಕ್ಕಂತೆ ಕಥೆಯು ಬದಲಾದಾಗ ಪ್ರೇಕ್ಷಕರು ಕೂಡ ಈ ಕಥೆಗೆ ಹೊಂದಿಕೊಂಡು ಧಾರವಾಹಿಯನ್ನು ಎಂದಿನಂತೆ ನೋಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಪುಟ್ಟಗೌರಿ ಮದುವೆ ಮೊದಲಿಗಿಂತಲೂ ಕೂಡ ಹೆಚ್ಚು ಆಕರ್ಷಿಣಿಯಕರವಾಗಿತ್ತು ಹಾಗಾಗಿ ಈ ಒಂದು ಧಾರಾವಾಹಿಯನ್ನು ನೋಡುವಂತಹ ಅಭಿಮಾನಿಗಳ ಸಂಖ್ಯೆ ಕಡಿಮೆ ಏನು ಆಗಲಿಲ್ಲ.

ಆದರೆ ಕೆಲವು ಕಾರಣಾಂತರಗಳಿಂದ ಕಥೆಯನ್ನು ಎಳೆಯಲಾಯಿತು ಆ ಸಂದರ್ಭದಲ್ಲಿ ಪುಟ್ಟಗೌರಿ ಧಾರಾವಾಹಿಯನ್ನು ಟ್ರೋಲ್ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ತದನಂತರ ಪುಟ್ಟಗೌರಿ ಮದುವೆಯನ್ನು ಸ್ಥಗಿತಗೊಳಿಸಿ ಆ ಒಂದು ಜಾಗಕ್ಕೆ ಮಂಗಳ ಗೌರಿ ಎಂಬ ಶೀರ್ಷಿಕೆಯನ್ನು ಮರು ನಾಮಕರಣ ಮಾಡುತ್ತಾರೆ. ಈ ಒಂದು ಮಂಗಳ ಗೌರಿ ಧಾರವಾಹಿಯಲ್ಲಿ ಸಂಪೂರ್ಣವಾಗಿ ಹಳೆಯ ಪುಟ್ಟಗೌರಿ ಧಾರವಾಹಿಯಲ್ಲಿ ಇದ್ದಂತಹ ಎಲ್ಲಾ ಕಲಾವಿದರ ಪಾತ್ರಗಳನ್ನು ಕೂಡ ಬದಲಾವಣೆ ಮಾಡಲಾಗುತ್ತದೆ. ಈ ಪಾತ್ರಗಳನ್ನು ಬದಲಾವಣೆ ಮಾಡುತ್ತಿದ್ದ ಹಾಗೆ ಅಭಿಮಾನಿಗಳು ತಮ್ಮ ಬೇಸರವನ್ನು ಹೊರಹಾಕುತ್ತಾರೆ.

ಇನ್ನು ಕೆಲವರು ಈ ಪಾತ್ರಗಳು ಮುಕ್ತಾಯವಾಗಿದ್ದು ಒಳ್ಳೆಯದೇ ಆಯಿತು ಎಂದು ಹೇಳುತ್ತಾರೆ ಆದರೂ ಕೂಡ ಇದೀಗ ಪುಟ್ಟಗೌರಿ ಮದುವೆ ಬರೋಬ್ಬರಿ 10 ವರ್ಷಗಳ ಕಾಲ ನಿಮ್ಮನ್ನು ರಂಜಿಸಿದೆ ಎಂದರೆ ನೀವು ನಂಬಲೇಬೇಕು. ಹೌದು ಇದೇ ಮೊದಲ ಬಾರಿಗೆ ಇತಿಹಾಸದಲ್ಲಿ ಕಿರುತೆರೆಯಲ್ಲಿ ಮೂರು ಸಾವಿರ ಸಂಚಿಕೆಗಳನ್ನು ಪೂರೈಸಿದಂತಹ ಹೆಗ್ಗಳಿಕೆ ಮತ್ತು ಕೀರ್ತಿ ಪುಟ್ಟಗೌರಿ ಧಾರಾವಾಹಿ ತಂಡಕ್ಕೆ ಸಲ್ಲುತ್ತದೆ. ಇಲ್ಲಿಯವರೆಗೂ ಕೂಡ ಯಾವ ಧಾರವಾಹಿ ಇಷ್ಟು ದೀರ್ಘ ಕಾಲದ ವರೆಗೆ ಪ್ರಸಾರವಾಗಿಲ್ಲ. ಇದೇ ಮೊದಲ ಬಾರಿಗೆ ಇಷ್ಟು ದೀರ್ಘಕಾಲದ ವರೆಗೆ ಪ್ರಸಾರವಾಗಿರುವುದು ಹಾಗಾಗಿ ಈ ಧಾರಾವಾಹಿಯು ಇದೀಗ ಅಂತ್ಯವಾಗುತ್ತಿದೆ.

ಈ ವಿಚಾರ ಕೇಳುತ್ತಿದ್ದ ಹಾಗೆ ಬಹಳಷ್ಟು ಅಭಿಮಾನಿಗಳು ಸದ್ಯ ಈಗಲಾದರೂ ಈ ಧಾರಾವಾಹಿ ಮುಕ್ತಾಯದ ಹಂತಕ್ಕೆ ಬಂತಲ್ಲ ಎಂದು ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ, ಇನ್ನು ಕೆಲವರು ಇನ್ನೂ ಕೂಡ ಈ ಕಥೆ ಇನ್ನು ಇರಬೇಕಾಯಿತು ಎಂದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೆಲವೊಂದು ಮೂಲಗಳ ಪ್ರಕಾರ ಈ ಮುಕ್ತಾಯವಾಗುತ್ತಿದೆ ಎಂಬುದು ಖಚಿತವಾಗಿದೆ ಮಂಗಳಗೌರಿ ಕಥೆ ಮುಗಿಯುತ್ತಿದ್ದ ಹಾಗೆ ಆ ಜಾಗಕ್ಕೆ ಇದೀಗ ಹೊಸ ಧಾರಾವಾಹಿ ಆದಂತಹ ಭಾಗ್ಯಲಕ್ಷ್ಮಿ ಎಂಬುದು ಸೇರ್ಪಡೆಯಾಗುತ್ತಿದೆ. ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಮಂಗಳಗೌರಿ ಧಾರಾವಾಹಿಯನ್ನು ಬೀಳ್ಕೊಡಲಾಯಿತು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಮದುವೆಯಾದ ನಾಲ್ಕೇ ತಿಂಗಳಿಗೆ ಅವಳಿ ಮಕ್ಕಳನ್ನು ಪಡೆದದ್ದು ಹೇಗೆ ಎಂಬುದರ ಬಗ್ಗೆ ತನಿಖೆ ಆದೇಶಿಸಿದ ತಮಿಳುನಾಡು ಸರ್ಕಾರ.! ನಯನತಾರಾ ಮತ್ತು ವಿಘ್ನೇಶ್ ಗೆ ಎದುರಾಯ್ತು ಸಂ.ಕ.ಷ್ಟ

ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರು ಸುಮಾರು ಎಂಟು ವರ್ಷಗಳ ಕಾಲ ಪ್ರೀತಿಸಿದಂತಹ ತಮ್ಮ ಜೀವದ ಗೆಳೆಯ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಈ ಒಂದು ಮದುವೆಗೆ ದಕ್ಷಿಣ ಭಾರತ ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ಗಣ್ಯರು ಪಾಲ್ಗೊಂಡಿದ್ದರು ಬಹಳ ಅದ್ದೂರಿಯಾಗಿ ಈ ಒಂದು ಮದುವೆಯನ್ನು ಮಾಡಿಕೊಳ್ಳಲಾಯಿತು. ನಾಲ್ಕು ತಿಂಗಳಿನಿಂದಲೂ ಕೂಡ ನಯನತಾರ ಹಾಗೂ ವಿಘ್ನೇಶ್ ಶಿವನ್ ಇಬ್ಬರು ಕೂಡ ಪ್ರಣಯ ಪಕ್ಷಿಗಳಂತೆ ದೇಶ ವಿದೇಶ ಸುತ್ತುತ್ತಿದ್ದರು.

ಆದರೆ ನೆನ್ನೆಯಷ್ಟೇ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಇಬ್ಬರೂ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಾನು ಮತ್ತು ನಯನ ಅಪ್ಪ-ಅಮ್ಮ ಆಗುತ್ತಿದ್ದೇವೆ. ನಮ್ಮ ಈ ಅವಳಿ ಗಂಡು ಮಕ್ಕಳಿಗೆ ನಿಮ್ಮ ಆಶೀರ್ವಾದ ಸದಾ ಕಾಲ ಇರಲಿ ಎಂದು ಶಾ.ಕಿಂ.ಗ್ ಹೇಳಿಕೆಯನ್ನು ನೀಡಿದರು. ಅಷ್ಟೇ ಅಲ್ಲದೆ ಮಕ್ಕಳ ಜೊತೆಗಿರುವಂತಹ ಫೋಟೋವನ್ನು ಕೂಡ ಶೇರ್ ಮಾಡಿಕೊಂಡರು ಈ ಫೋಟೋ ನೋಡುತ್ತಿದ್ದ ಹಾಗೆ ಅಭಿಮಾನಿಗಳ ಮನಸ್ಸಿನಲ್ಲಿ ಆತಂಕ ಹೆಚ್ಚಾಯ್ತು. ಅಷ್ಟೇ ಅಲ್ಲದೆ ಇಡೀ ಭಾರತೀಯ ಚಿತ್ರರಂಗದವರಿಗೆ ಒಂದು ಕ್ಷಣ ಶಾ.ಕ್ ಆದರು ಏಕೆಂದರೆ ಮದುವೆಯಾದ ನಾಲ್ಕು ತಿಂಗಳಿಗೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡುವುದಾದರೂ ಹೇಗೆ ಸಾಧ್ಯ ಎಂಬ ಅನುಮಾನವನ್ನು ವ್ಯಕ್ತಪಡಿಸಿದರು.

ಆದರೆ ನಯನತಾರಾ ಅವರು ಬಾಡಿಗೆ ತಾಯ್ತನದ ಮೂಲಕ ಎರಡು ಗಂಡು ಮಕ್ಕಳನ್ನು ದತ್ತು ಪಡೆದಿದ್ದಾರೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ಕೂಡ ಮದುವೆಯಾಗುವುದಕ್ಕಿಂತ ಮುಂಚೆಯೇ ಮಕ್ಕಳನ್ನು ದತ್ತು ಪಡೆಯಬೇಕು ಎಂಬ ನಿರ್ಧಾರ ಮಾಡಿದ್ದರು. ಅದರಂತೆ ಬಾಡಿಗೆ ತಾಯ್ತನದ ಮೂಲಕ ಇದೀಗ ಅವಳಿ ಮಕ್ಕಳನ್ನು ತಮ್ಮ ಮನೆಗೆ ಬರ ಮಾಡಿಕೊಂಡಿದ್ದಾರೆ. ಇದು ಒಂದು ಕಡೆ ಖುಷಿಯ ವಿಚಾರವಾದರೆ ಮತ್ತೊಂದು ಕಡೆ ತಮಿಳುನಾಡು ಸರ್ಕಾರ ಇದೀಗ ನಯನತಾರಾ ಹಾಗೂ ವಿಜ್ಞೇಶ್ ಶಿವನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಹೌದು, ಬಾಡಿಗೆ ತಾಯ್ತನದ ಕುರಿತು ಮಾಹಿತಿಯನ್ನು ನೀಡಬೇಕು ಎಂದು ತನಿಕೆಯ ಆದೇಶವನ್ನು ಹೊರಡಿಸಿದ್ದಾರಂತೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡಲಾಗಿದೆ ಬಾಡಿಗೆ ತಾಯಿ ಆರೋಗ್ಯವಾಗಿರಬೇಕು, ಆಕೆಯ ವಯಸ್ಸು 21-35 ರ ಅಂತರದಲ್ಲಿ ಇರಬೇಕು. ಒಂದೇ ಸಲ ಬಾಡಿಗೆ ತಾಯಿ ಆಗಲು ಸಾಧ್ಯ ಹಾಗೂ ವಾಣಿಜ್ಯ ಬಾಡಿಗೆ ತಾಯ್ತನದ ಮೇಲೆ ನಿರ್ಬಂಧ ಹೇರಲಾಗಿದೆ. ಬಾಡಿಗೆ ತಾಯಿಯಿಂದ ಮಗು ಪಡೆಯಲು ಇವೆಲ್ಲ ನಿಯಮಗಳನ್ನು ಪಾಲಿಸಲೇಬೇಕಿದೆ. ಆದರೆ ನಯನ ದಂಪತಿ ಇವುಗಳನ್ನು ಪಾಲಿಸಿಲ್ಲ ಎನ್ನುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳು ನಾಡು ವೈದ್ಯಕೀಯ ಸೇವೆಗಳ ನಿರ್ದೇಶನಾಲಯವು ತನಿಖೆಗೆ ಆದೇಶಿಸಿದೆ. ಇದೀಗ ನಯನ ತರಹ ಹಾಗೂ ವಿಜ್ಞಾನ ಶಿವನ್ ತನಿಕೆಯನ್ನು ಎದುರಿಸಬೇಕಾಗಿದೆ.

ತನಿಖೆಯಲ್ಲಿ ಎಲ್ಲಾ ನಿಯಮ ಹಾಗೂ ಕ್ರಮಗಳನ್ನು ಸರಿಯಾಗಿ ಪಾಲಿಸಿದ್ದರೆ ಈ ದಂಪತಿಗಳಿಗೆ ಯಾವುದೇ ರೀತಿಯಾದಂತಹ ತೊಂದರೆ ಆಗುವುದಿಲ್ಲ. ಒಂದು ವೇಳೆ ಈ ನಿಯಮದಲ್ಲಿ ಏನಾದರೂ ಉಲ್ಲಂಘನೆ ಮಾಡಿದರೆ ಖಂಡಿತವಾಗಿಯೂ ಕೂಡ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಕ.ಠಿ.ಣ.ವಾದ ಶಿ.ಕ್ಷೆಗೆ ಒಳಗಾಗುತ್ತಾರೆ. ನಯನತಾರಾ ಅವರು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದ ಕಾರಣವೇ ಇಂತಹ ಸಂ.ಕ.ಷ್ಟ.ವನ್ನು ಎದುರಿಸುತ್ತಿದ್ದಾರೆ. ಅದರ ಬದಲು ತಾವೇ ಮಕ್ಕಳನ್ನು ಮಾಡಿಕೊಂಡಿದ್ದರೆ ಇಷ್ಟೆಲ್ಲಾ ತೊಂದರೆಗಳನ್ನು ಅನುಭವಿಸಬೇಕಾದಂತಹ ಪ್ರಮೇಯವೇ ಇರುತ್ತಿರಲಿಲ್ಲ. ಅದೇನೆ ಆಗಲಿ ಸದ್ಯಕಂತು ತಮ್ಮ ಕನಸಿನ ಮಕ್ಕಳನ್ನು ಮನೆಗೆ ಬರಮಾಡಿಕೊಂಡ ಖುಷಿಯಲ್ಲಿ ಇದ್ದಂತಹ ದಂಪತಿಗಳಿಗೆ ಇದೀಗ ಸಂ.ಕ.ಷ್ಟ ಎದುರಾಗಿದೆ ಅಂತಾನೆ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

 

ದರ್ಶನ್ ಈಗಲೂ ನನ್ನ ನೆನಪಿಟ್ಟುಕೊಂಡಿದ್ದಾರೆ ಆದ್ರೆ ಶಿವಣ್ಣ ಹಾಗಲ್ಲ, ನೀವು ಯಾರು ಗೊತ್ತೇ ಇಲ್ಲ ಅಂತ ಹೇಳಿದ್ರು ಎಂದ ನಟಿ ಲಲಿತಮ್ಮ.

ನಟಿ ಲಲಿತಮ್ಮ ದುನಿಯಾ ಸಿನಿಮಾ ಸುಂಟರಗಾಳಿ ಸಿನಿಮಾ ಹಾಗೂ ಕನ್ನಡದ ಬಹುತೇಕ ಸಿನಿಮಾದಲ್ಲಿ ಖಳನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಸ್ಯ ಪ್ರಧಾನ ಪಾತ್ರದಲ್ಲಿಯೂ ಕೂಡ ಅಭಿನಯಿಸಿದ್ದಾರೆ ಕೆಲವು ಬಾರಿ ಪೋಷಕ ಸ್ಥಾನದಲ್ಲಿಯೂ ನಿಂತು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ನಟಿ ಲಲಿತಮ್ಮ ಅವರು ಇಲ್ಲಿಯವರೆಗೂ ಕನ್ನಡದಲ್ಲಿ ಸುಮಾರು 50ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಬಹುತೇಕ ಎಲ್ಲಾ ಸಿನಿ ರಸಿಕರಿಗೂ ಕೂಡ ಲಲಿತಮ್ಮ ಅವರ ಪರಿಚಯ ಇದ್ದೇ ಇರುತ್ತದೆ ಅದರಲ್ಲಿಯೂ ಕೂಡ ಸುಂಟರಗಾಳಿ ಸಿನಿಮಾದಲ್ಲಿ ನಟಿ ಲಲಿತಮ್ಮ ಅವರ ಅದ್ಭುತವಾದ ಅಭಿನಯವನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ.

ಚಿತ್ರರಂಗದಲ್ಲಿ ಇಷ್ಟೆಲ್ಲ ಯಶಸ್ವಿ ಕೀರ್ತಿ ಸಾಧನೆ ಮಾಡಿದವರು ಕೂಡ ನಟಿ ಲಲಿತಮ್ಮ ಅವರು ಇದೀಗ ಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ ಇವರು ಇರುವಂತಹ ಪರಿಸ್ಥಿತಿ ನೋಡಿದರೆ ನಿಜಕ್ಕೂ ಕೂಡ ಆಶ್ಚರ್ಯವಾಗುತ್ತದೆ. ಇಷ್ಟು ಸಿನಿಮಾದಲ್ಲಿ ನಟನೆ ಮಾಡಿದರು ಕೂಡ ಇವರ ಬದುಕಿನ ಸ್ಥಿತಿ ಇನ್ನೂ ಹೀಗೆ ಇದೆಯಲ್ಲ ಎಂಬ ಸತ್ಯದ ಅರಿವು ನಮಗಾಗುತ್ತದೆ. ಅದೇನೇ ಆಗಿರಲಿ ಸದ್ಯಕ್ಕೆ ಲಲಿತಮ್ಮ ಅವರನ್ನು ಸಂದರ್ಶನ ಗಾರರೊಬ್ಬರು ಇಂಟರ್ವ್ಯೂ ಮಾಡಿದಾಗ ರೋಚಕ ಸುದ್ದಿ ಒಂದನ್ನು ಹೊರಹಾಕಿದ್ದಾರೆ. ಹೌದು ತಮ್ಮ ಸಿನಿಮಾ ಜರ್ನಿಯ ಬಗ್ಗೆ ಮಾತನಾಡಿದ ಲಲಿತಮ್ಮ ಅವರು ಶಿವಣ್ಣ ಹಾಗೂ ದರ್ಶನ್ ಮತ್ತು ಅಪ್ಪು ಅವರ ಬಗ್ಗೆಯೂ ಕೂಡ ಮಾತನಾಡಿದ್ದಾರೆ ನಟಿ ಲಲಿತಮ್ಮ ಅವರು ಹೇಳಿದಂತಹ ಹೇಳಿಕೆ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಹೌದು ಒಂದು ಬಾರಿ ಲಲಿತಮ್ಮ ಅವರು ಅಚಾನಕ್ಕಾಗಿ ಶಿವಣ್ಣ ಅವರನ್ನು ಭೇಟಿ ಮಾಡುತ್ತಾರಂತೆ ಶಿವಣ್ಣನ ಬಳಿ ಲಲಿತಮ್ಮ ಹೋದಾಗ ಶಿವಣ್ಣ ಅವರು ಲಲಿತಮ್ಮ ಅವರನ್ನು ಯಾರು ನೀವು ಎಂದು ಪ್ರಶ್ನೆ ಕೇಳುತ್ತಾರಂತೆ. ಇದರಿಂದ ಬೇಸರಗೊಂಡಂತಹ ಲಲಿತಮ್ಮ ಅವರು ಅಲ್ಲಿಂದ ಹೊರ ನಡೆಯುತ್ತಾರಂತೆ ಇತ್ತೀಚಿಗಷ್ಟೇ ನಡೆದ ಸಂದರ್ಶನ ಒಂದರಲ್ಲಿ ಶಿವಣ್ಣ ಅವರು ನನ್ನನ್ನು ಸಂಪೂರ್ಣವಾಗಿ ಮರೆತೆ ಬಿಟ್ಟಿದ್ದಾರೆ ಆದರೆ ದರ್ಶನ್ ಹಾಗಲ್ಲ ಈಗಲೂ ಕೂಡ ಎಲ್ಲೆ ಸಿಕ್ಕರು ನಮಸ್ತೆ ಮೇಡಂ ಹೇಗಿದ್ದೀರಾ? ಆರೋಗ್ಯ ಹೇಗಿದೆ ಎಂದು ಎಲ್ಲವನ್ನು ಕೂಡ ವಿಚಾರಿಸುತ್ತಾರೆ ಎಂದು ದರ್ಶನವರ ದೊಡ್ಡ ಗುಣವನ್ನು ಹಾಡಿ ಹೊಗಳಿದ್ದಾರೆ.

ಅಷ್ಟೇ ಅಲ್ಲದೆ ಶಿವಣ್ಣ ಶಿವಣ್ಣನೇ ಅಪ್ಪು ಅಪ್ಪು ಎಂದಿದ್ದಾರೆ ಒಂದು ವೇಳೆ ಅಪ್ಪು ಅವರ ಮನೆ ಬಾಗಿಲಿನ ಮುಂದೆ ಹೋಗಿದ್ದರೆ ಖಂಡಿತವಾಗಿಯೂ ಕೂಡ ಅವರು ನನ್ನನ್ನು ಗುರುತು ಹಿಡಿಯುತ್ತಿದ್ದರು ನನ್ನನ್ನು ಮಾತನಾಡಿಸುತ್ತಿದ್ದರು ಆದರೆ ಶಿವಣ್ಣ ಯಾಕೋ ಇಷ್ಟು ಬೇಗ ಮರೆತು ಬಿಟ್ಟರು ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ. ಶಿವಣ್ಣ ಅವರು ಇಲ್ಲಿಯವರೆಗೂ ಸುಮಾರು 150ಕ್ಕೂ ಅಧಿಕ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಹಾಗಾಗಿ ತಮ್ಮ ಸಿನಿಮಾದಲ್ಲಿ ಅಭಿನಯಿಸಿದಂತಹ ಕಲಾವಿದರು ಗುರುತು ಹಿಡಿಯುವುದಕ್ಕೆ ಕಷ್ಟ ಪಟ್ಟರೋ ಏನೋ ತಿಳಿದಿಲ್ಲ.

ಆದರೂ ಕೂಡ ಲಲಿತಮ್ಮ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡಿದರು ಇವರು ಕೇವಲ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲದೆ ಕಿರುತೆರೆಯ ಹಲವಾರು ಧಾರವಾಹಿ ಹಾಗೂ ರಂಗಭೂಮಿಯ ಹಲವಾರು ನಾಟಕಗಳಲ್ಲಿ ಭಾಗವಹಿಸಿದ್ದಾರೆ. ಇಂತಹ ಹಿರಿಯ ನಟಿಯನ್ನು ಮರೆಯುವುದು ಅಷ್ಟು ಸುಲಭದ ಮಾತಲ್ಲ ಆದರೂ ಕೂಡ ಶಿವಣ್ಣ ಅವರು ಆವತ್ತು ಯಾಕೆ ಆ ರೀತಿ ಹೇಳಿದರು ಎಂಬುದು ಈಗಲೂ ತಿಳಿದಿಲ್ಲ. ಆದರೂ ಕೂಡ ಶಿವಣ್ಣ ಅವರು ಹೇಳಿದಂತಹ ಮಾತನ್ನು ಕೇಳಿ ನಟಿ ಲಲಿತಮ್ಮ ಅವರು ಮಾತ್ರ ತುಂಬಾನೇ ಬೇಸರ ಮಾಡಿಕೊಂಡಿದ್ದಾರಂತೆ. ಲಲಿತಮ್ಮ ಮಾತನಾಡಿದಂತಹ ವಿಡಿಯೋ ಈ ಕೆಳಗಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅನಿಕಾ & ಶಂಭು ಮದುವೆ ಕ್ಯೂಟ್ ವಿಡಿಯೋ, ಕುಟುಂಬಸ್ಥರ ಜೊತೆಗಿರುವ ಸುಂದರ ಕ್ಷಣಗಳು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಕಮಲಿ ಎಂಬ ಧಾರವಾಹಿಯಲ್ಲಿ ಅನೇಕ ಮತ್ತು ಶಂಭು ಪಾತ್ರವನ್ನು ನಿರ್ವಹಿಸುತ್ತಿದ್ದಂತಹ ಸುಹಾಸ್ ಆತ್ರೆಯ ಮತ್ತು ಗ್ಯಾಬ್ರಿಯಾಲ ಅವರು ಪ್ರೀತಿಸಿ ನೆನ್ನೆ ಅಷ್ಟೇ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನೂತನ ವರ ಮತ್ತು ವಧುವಿಗೆ ಶುಭಾಶಯ ತಿಳಿಸಲು ಕಮಲಿ ಸೀರಿಯಲ್ ತಂಡ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಬಹುತೇಕ ಎಲ್ಲಾ ದಾರವಾಹಿಯ ನಾಯಕ ನಟರು ಮತ್ತು ನಾಯಕ ನಟಿಯರು ಈ ಒಂದು ಮದುವೆಯ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

 

ಗ್ಯಾಬ್ರಿಯಾಲ ಮತ್ತು ಸುಹಾಸ್ ಅವರು ಕಳೆದ ಮೂರು ವರ್ಷಗಳಿಂದಲೂ ಕೂಡ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ತಾವು ಪ್ರೀತಿಸುತ್ತಿರುವಂತಹ ವಿಚಾರವನ್ನು ಎಲ್ಲಿಯೂ ಕೂಡ ತೋರ್ಪಡಿಸಿಕೊಂಡಿರಲಿಲ್ಲ. ಆದರೆ ಕಳೆದ ಎರಡು ತಿಂಗಳ ಹಿಂದೆ ಎಷ್ಟೇ ಸುಹಾಸ್ ಅವರು ಗ್ಯಾಬ್ರಿಯಾಲ ಅವರಿಗೆ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿ ಉಂಗುರ ತೊಡಗಿಸುವಂತಹ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದರ ಮೂಲಕ ತಾವು ಇಬ್ಬರು ಪ್ರೇಮಿಗಳು ಎಂಬ ವಿಚಾರವನ್ನು ಹೊರಹಾಕಿದರು. ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ಅಭಿಮಾನಿಗಳೆಲ್ಲರೂ ಕೂಡ ಈ ಜೋಡಿಗೆ ಶುಭವಾಗಲಿ ಎಂದು ಕೋರಿದರು.

ಅಷ್ಟೇ ಅಲ್ಲದೆ ಸ್ವತಹ ವಿಡಿಯೋ ಒಂದನ್ನು ಮಾಡಿ ನಾವಿಬ್ಬರು ಅಕ್ಟೋಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದೇವೆ ಎಂಬ ಮಾಹಿತಿಯನ್ನು ಹೊರ ಹಾಕಿದರು. ಆದರೆ ಈ ಮದುವೆ ಹಿಂದೂ ಸಂಪ್ರದಾಯದಂತೆಯೂ ಆಗಿಲ್ಲ ಕ್ರೈಸ್ತ ಸಂಪ್ರದಾಯದಂತೆಯೂ ಆಗಿಲ್ಲ ಕೋರ್ಟ್ ನಾ ನಿಯಮದ ಪ್ರಕಾರ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಮದುವೆಯನ್ನು ಬಹಳ ಸರಳವಾಗಿಯೇ ಆಗಿದ್ದರೆ ಆದರೆ ರಿಸೆಪ್ಶನ್ ಅನ್ನು ಮಾತ್ರ ಬಹಳ ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ. ಬೆಂಗಳೂರು ಸಮೀಪದ ಖಾಸಗಿ ಹೋಟೆಲ್ ಒಂದರಲ್ಲಿ ತಮ್ಮ ವಿವಾಹದ ರಿಸೆಪ್ಶನ್ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದಾರೆ.

ಈ ಒಂದು ರಿಸೆಪ್ಶನ್ ಕಾರ್ಯಕ್ರಮದಲ್ಲಿ ಸ್ವತಹ ಅನಿಕ ಮತ್ತು ಶಂಭು ಅವರು ಡ್ಯಾನ್ಸ್ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದಾರೆ. ಕೇಕ್ ಅನ್ನು ಕತ್ತರಿಸಿ ಇಬ್ಬರೂ ಕೂಡ ಪರಸ್ಪರ ಸಿಹಿಯನ್ನು ಸೇವಿಸುವುದರ ಮೂಲಕ ತಮ್ಮ ದಾಂಪತ್ಯ ಜೀವನ ಸುಖಕರವಾಗಿರಲಿ ಯಾವುದೇ ರೀತಿಯಾದಂತಹ ಅಹಿತಕರ ಘಟನೆ ನಮ್ಮ ಬದುಕಿನಲ್ಲಿ ನಡೆಯಬಾರದು ಎಂದು ಇಬ್ಬರೂ ಕೂಡ ಪರಸ್ಪರ ಮಾತನಾಡಿಕೊಂಡಿದ್ದರೆ ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ

ಧಾರವಾಹಿಯಲ್ಲಿ ಅನಿಕ ಮತ್ತು ಶಂಭು ಪರಸ್ಪರ ಬದ್ಧ ವೈರಿಗಳು ಆದರೆ ನಿಜ ಜೀವನದಲ್ಲಿ ಇಬ್ಬರು ಪ್ರೇಮಿಗಳು ನಿಜಕ್ಕೂ ಈ ಜೀವನ ಎಂಬುದೇ ಆಶ್ಚರ್ಯ ತಾವು ಮಾಡುವಂತಹ ಕೆಲಸಕ್ಕೂ ಹಾಗೂ ತಾವು ಇರುವಂತಹ ಬದುಕಿಗೆ ಬಹಳ ವ್ಯತ್ಯಾಸ ಇರುತ್ತದೆ ಎಂಬುದಕ್ಕೆ ಈ ಜೋಡಿಯೇ ನೈಜ ಉದಾಹರಣೆ ಎನ್ನಬಹುದು. ಇನ್ನು ಅನಿಕ ಮತ್ತು ಶಂಭು ಅವರ ಆರತಕ್ಷತೆ ಕಾರ್ಯಕ್ರಮಕ್ಕೆ ಜಿ ಕನ್ನಡ ವಾಹಿನಿಯ ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುವಂತಹ ವಿಕ್ರಂ ಹಾಗೂ ಪಾರು ಧಾರವಾಹಿಯಲ್ಲಿ ನಟನೆ ಮಾಡುತ್ತಿರುವಂತಹ ಸಿದ್ದು ಮೂಲಿಮನೆ ಹಾಗೂ ಕಾಮಿಡಿ ಕಿಲಾಡಿಗಳಲ್ಲಿ ಅಭಿನಯಿಸುತ್ತಿದ್ದಂತಹ ಹಲವಾರು ನಟ ನಟಿಯರು ಭಾಗಿಯಾಗಿದ್ದಾರೆ.

ಈಗಷ್ಟೇ ದಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಅನಿಕಾ ಮತ್ತು ಶಂಭು ಅವರಿಗೆ ಯಾವುದೇ ರೀತಿಯಾದಂತಹ ತೊಂದರೆ ಆಗದಿರಲಿ ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಗ್ಯಾಬ್ರಿಯಾಲ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು ಸುಹಾಸ್ ಆತ್ರೆಯ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಹಾಗಾಗಿ ಇವರಿಬ್ಬರ ನಡುವೆ ಜಾತಿ ಮತದ ಅಂತರವಿದೆ ಈ ಅಂತರ ಇವರ ದಾಂಪತ್ಯ ಜೀವನದಲ್ಲಿ ಎಂದು ಕೂಡ ಮೂಡದಿರಲಿ ಎಂಬುದೇ ಕೆಲವು ನೆಟ್ಟಿಗರ ಅಭಿಪ್ರಾಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ ಹಾಗೂ ನೀವು ಕೂಡ ಈ ನೂತನ ಜೋಡಿಗೆ ಶುಭವನ್ನು ಕೋರುವುದಾದರೆ ಕಾಮೆಂಟ್ ಬಾಕ್ಸ್ ನಲ್ಲಿ ತಪ್ಪದೇ ಕಂಗ್ರಾಜುಲೇಷನ್ ಎಂದು ಕಾಮೆಂಟ್ ಮಾಡಿ.