Home Blog Page 298

ಸಿನಿಮಾಗಾಗಿ ಮನೆ ಆಸ್ತಿ ಎಲ್ಲವನ್ನು ಕಳೆದುಕೊಂಡೆ ಎಂದು ವೇದಿಕೆಯ ಮೇಲೆ ಕಣ್ಣೀರು ಇಟ್ಟ ರವಿಚಂದ್ರನ್ ಸ್ಥಿತಿ ನೋಡಿ ದರ್ಶನ್ ಮಾಡಿದ್ದೇನು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರವಿಚಂದ್ರನ್ ಅವರಿಗಿಂತ ಅದ್ದೂರಿಯಾಗಿ ಸಿನಿಮಾ ಮೇಕಿಂಗ್ ಮಾಡಿದ ವ್ಯಕ್ತಿ ಮತ್ತೋರ್ವ ಇಲ್ಲ ಅಂತಾನೆ ಹೇಳಬಹುದು. ಇತ್ತೀಚಿನ ದಿನದಲ್ಲಿ ಸಿನಿಮಾದ ಬಜೆಟ್ ಕೋಟಿ ಕೋಟಿ ರೂಪಾಯಿ ಇರಬಹುದು ಆದರೆ ಸುಮಾರು ಮೂರು ದಶಕಗಳ ಹಿಂದೆ ರವಿಚಂದ್ರನ್ ಅವರನ್ನು ಹೊರತು ಪಡಿಸಿದರೆ ಯಾರು ಕೂಡ ಹಣವನ್ನು ನೀರಿನಲ್ಲಿ ಖರ್ಚು ಮಾಡಿ ಸಿನಿಮಾವನ್ನು ತೆಗೆಯುತ್ತಿರಲಿಲ್ಲ.

ಅಷ್ಟು ಅದ್ದೂರಿಯಾಗಿ ಸಿನಿಮಾವನ್ನು ಇವರು ತೆಗೆಯುತ್ತಿದ್ದರು ಇದಕ್ಕೆ ಸಾಕ್ಷಿ ಎಂದರೆ ಶಾಂತಿ ಕ್ರಾಂತಿ, ಏಕಾಂಗಿ, ಮಲ್ಲ ಹೀಗೆ ಸಾಕಷ್ಟು ಸಿನಿಮಾಗಳು ಇವೆ. ಆದರೆ ಇಂದು ನಟ ರವಿ ಚಂದ್ರನ್ ಅವರು ಸಿನಿಮಾಗಾಗಿ ಇರೋಬರ ಆಸ್ತಿಯನ್ನೆಲ್ಲ ಮಾರಿಕೊಂಡು ಯಾವ ಸ್ಥಿತಿಗೆ ಬಂದಿದ್ದಾರೆ ಅಂದರೆ ನಿಜಕ್ಕೂ ಬೇಸರವಾಗುತ್ತದೆ. ಹೌದು ಒಂದು ಕಾಲದಲ್ಲಿ ರವಿಚಂದ್ರನ್ ಅವರ ಕೈಕೆಳಗೆ ದಿನ ಕೂಲಿ ಮಾಡುತ್ತಿದ್ದಂತಹ ವ್ಯಕ್ತಿ ಇಂದು ರವಿಚಂದ್ರನ್ ಅವರನ್ನು ಕರೆದು ನಮ್ಮ ಸಿನಿಮಾದಲ್ಲಿ ಆಕ್ಟ್ ಮಾಡಿ ಕೋಟಿ ಸಂಭಾವನೆ ನೀಡುತ್ತೇನೆ ಅಂತ ಹೇಳಿದ್ದರಂತೆ.

ಆ ಮಟ್ಟಕ್ಕೆ ರವಿಚಂದ್ರನ್ ತಮ್ಮ ಸುತ್ತಮುತ್ತ ಇರುವಂತಹ ಜನರನ್ನು ಬೆಳೆಸಿದ್ದಾರೆ ಎಲ್ಲರನ್ನೂ ಬೆಳೆಸುವ ಬರದಲ್ಲಿ ತಮ್ಮನ್ನು ತಾವು ಕಳೆದುಕೊಂಡರು ಅಂತ ಹೇಳಿದರು ಕೂಡ ತಪ್ಪಾಗಲಾರದು. ಇತ್ತೀಚಿನ ದಿನದಲ್ಲಿ ರವಿಚಂದ್ರನ್ ಅವರ ಯಾವ ಸಿನಿಮಾ ಕೂಡ ಹೆಚ್ಚಾಗಿ ಸದ್ದು ಮಾಡುತ್ತಿಲ್ಲ ಥಿಯೇಟರ್ ನಲ್ಲಿ ಓಡುತ್ತಿಲ್ಲ ಜನಗಳು ಬಂದು ರವಿಚಂದ್ರನ್ ಅವರ ಸಿನಿಮಾ ವನ್ನು ನೋಡಿತ್ತಿಲ್ಲ. ಈ ಕಾರಣಕ್ಕಾಗಿ ಅವರು ಸಿನಿಮಾಗಾಗಿ ವಿನಿಯೋಗ ಮಾಡಿದ ಹಣ ಅವರ ಕೈ ತಲುಪುತ್ತಿಲ್ಲ ಹಾಗಾಗಿ ಒಂದೊಂದೇ ಆಸ್ತಿಯನ್ನು ಮಾರಿಕೊಂಡು ಬಂದಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ರವಿಚಂದ್ರನ್ ಅವರಿಗೆ ಸ್ವಂತ ಮನೆಯನ್ನು ಬಿಟ್ಟರೆ ಬೇರೆ ಯಾವ ಆಸ್ತಿಯೂ ಕೂಡ ಇಲ್ಲ ಎಲ್ಲವನ್ನು ಕೂಡ ಮಾರಿಕೊಂಡಿದ್ದಾರೆ. ಕಳೆದ ವಾರ ತಾವು ವಾಸವಾಗಿದಂತಹ ರಾಜಾಜಿನಗರ ಮನೆಯನ್ನು ಕೂಡ ಖಾಲಿ ಮಾಡಿದ್ದಾರೆ ಹೌದು ಇದೀಗ ರವಿಚಂದ್ರನ್ ಅವರು ಬೇರೆಡೆಗೆ ಹೋಗಿದ್ದಾರೆ. ಮನೆ ಮಾರಿಕೊಂಡ ವಿಚಾರ ಹೆಚ್ಚು ವೈರಲ್ ಆಗಿದ್ದು ಇದು ರವಿಚಂದ್ರನ್ ಅವರ ಮನಸ್ಸಿಗೆ ಇನ್ನಷ್ಟು ನೋವನ್ನು ಉಂಟುಮಾಡಿದೆ. ಈ ವಿಚಾರವಾಗಿ ಜೀ ಕನ್ನಡ ವೇದಿಕೆಯ ಮೇಲೆ ಮಾತನಾಡುತ್ತಾ ಭಾವುಕರಾಗಿದ್ದಾರೆ ನಾನು ಇಲ್ಲಿಯವರೆಗೂ ಏನು ಸಂಪಾದನೆ ಮಾಡಿಲ್ಲ.

30 ವರ್ಷದಿಂದಲೂ ಕೂಡ ಎಲ್ಲವನ್ನು ಕಳೆದುಕೊಂಡೆ ಬಂದಿದ್ದೇನೆ ಇದೆಲ್ಲ ಮಾಡಿದ್ದು ಜನರ ಪ್ರೀತಿಗಾಗಿ ಜನರ ಮನಸ್ಸನ್ನು ಗೆಲ್ಲುವುದಕ್ಕಾಗಿ ಅವರಿಗೆ ಒಳ್ಳೆಯ ಸಿನಿಮಾಗಳನ್ನು ನೀಡಬೇಕು ಮನರಂಜನೆಯನ್ನು ನೀಡಬೇಕು ಅಂತ ನಾನು ಎಲ್ಲಾ ಅಸ್ತಿಪಾಸ್ತಿಯನ್ನು ಕಳೆದುಕೊಂಡಿದ್ದೇನೆ. ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ದರ್ಶನ್ ಅವರು ನಟ ರವಿಚಂದ್ರನ್ ಅವರಿಗೆ ಸಾಥ್ ನೀಡಲು ಮುಂದಾಗಿದ್ದಾರೆ.

ಹೌದು ನಿಮಗೆ ತಿಳಿದಿರುವಂತೆ ದರ್ಶನ್ ಹಾಗೂ ರವಿಚಂದ್ರನ್ ಅವರು ಬಹಳನೆ ಆತ್ಮೀಯರು ಹಾಗಾಗಿ ರವಿಚಂದ್ರನ್ ಅವರು ತಮ್ಮ ಕಳೆದುಕೊಂಡಿದ್ದರ ಬಗ್ಗೆ ವೇದಿಕೆಯ ಮೇಲೆ ಕಣ್ಣೀರು ಹಾಕಿದ ವಿಡಿಯೋ ನೋಡಿ ಇದೀಗ ರವಿಚಂದ್ರನ್ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಹೌದು ಅಷ್ಟಕ್ಕೂ ದರ್ಶನ್ ಮಾಡುತ್ತಿರುವ ಸಹಾಯ ಏನೆಂದರೆ ನಾವು ಕನ್ನಡ ಚಿತ್ರರಂಗದವರು ಎಲ್ಲರೂ ಒಗ್ಗಟ್ಟಾಗಿ ಇರುತ್ತೇವೆ ಹಾಗಾಗಿ ರವಿಚಂದ್ರನ ಅವರಿಗೆ ಬಂದಂತಹ ಕಷ್ಟ ನಮ್ಮೆಲ್ಲರ ಕಷ್ಟವಾಗಿದೆ ಹಾಗಾಗಿ ನಾವೆಲ್ಲರೂ ಸಹ ಅವರಿಗೆ ಕಷ್ಟದಲ್ಲಿ ಹೆಗಲು ಕೊಡುತ್ತೇವೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಆರ್ಥಿಕ ವಿಚಾರವಾಗಿಯೂ ಕೂಡ ನಾವು ಅವರಿಗೆ ಸಹಾಯ ಮಾಡುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ. ಸದ್ಯಕ್ಕೆ ದರ್ಶನ್ ಅವರು ಹೇಳಿಕೆ ಕೊಟ್ಟಂತಹ ಈ ಮಾತು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ದಾನ ಧರ್ಮ ಮಾಡುವುದರಲ್ಲಿ ದರ್ಶನ್ ಅವರು ಕೂಡ ಒಂದು ಕೈ ಮೇಲೆಯೇ ಇದ್ದರೆ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ರವಿಚಂದ್ರನ್ ಅವರ ಎಲ್ಲಾ ಕಷ್ಟಕ್ಕೂ ಇದೀಗ ಪರಿಹಾರ ದೊರೆಯಲಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ‌.

ಕೇಸರಿ ಸೀರೆಯಲ್ಲಿ ದೇವತೆ ಹಾಗೇ ಕಂಗಳಿಸುತ್ತಿರುವ ಸುಕೃತಾ ನಾಗ್ ಅವರ ಈ ಕ್ಯೂಟ್ ವಿಡಿಯೋ ನೋಡಿ, ನಿಜಕ್ಕೂ ಕಳೆದು ಹೋಗ್ತಿರಾ.

ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಅಂಜಲಿ ಪಾತ್ರವನ್ನು ನಿಭಾಯಿಸುತ್ತಿದ್ದಂತಹ ಸುಕೃತ ನಾಗ್ ಅವರು ಧಾರವಾಹಿಯಲ್ಲಿ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಿದ್ದರು‌. ಸುಮಾರು 4 ವರ್ಷಗಳ ಕಾಲ ಈ ಧಾರಾವಾಹಿಯ ಮೂಲಕ ಎಲ್ಲರಿಗೂ ಕೂಡ ಮನರಂಜನೆಯನ್ನು ನೀಡುತ್ತಿದ್ದರು. ಈ ಧಾರಾವಾಹಿ ಮುಕ್ತಾಯವಾಗುತ್ತಿದ್ದ ಹಾಗೆ ಕೆಲವು ವರ್ಷ ಯಾವುದೇ ಆಫರ್ ಇಲ್ಲದೆ ಆರಾಮಾಗಿ ಕಾಲ ಕಳೆಯುತ್ತಿದ್ದರು ತದನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಮತ್ತೊಂದು ಧಾರವಾಹಿ ಆದಂತಹ ಲಕ್ಷ್ಮಣ ಸೀರಿಯಲ್ ನಲ್ಲಿ ಖಡಕ್ ವಿಲ್ಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೊದಮೊದಲು ಈ ಪಾತ್ರದಲ್ಲಿ ನಟನೆ ಮಾಡುವುದಕ್ಕೆ ಸುಕೃತ ನಾಗ್ ಅವರು ಒಪ್ಪಿರಲಿಲ್ಲವಂತೆ ಕಾರಣ ಇದಿಷ್ಟೇ ಇವರನ್ನು ನೋಡಿದರೆ ಯಾರಿಗೂ ಕೂಡ ವಿಲನ್ ಅಂತ ಹೇಳುತ್ತಿರಲಿಲ್ಲವಂತೆ. ಏಕೆಂದರೆ ಇವರನ್ನು ನೋಡಿದರೆ ಯಾರಿಗೂ ಕೂಡ ದ್ವೇಷದ ಮನೋಭಾವನೆ ಮೂಡುವುದಿಲ್ಲ ಬದಲಿಗೆ ಪ್ರೀತಿಯ ಹುಟ್ಟುತ್ತದೆ. ಏಕೆಂದರೆ ಇವರ ಮುಖದ ಛಾಯೆಯು ಕೂಡ ಅದೇ ರೀತಿ ಇರುವುದು ನೋಡುವುದಕ್ಕೆ ಸಖತ್ ಸಿಂಪಲ್ ಆಗಿ ಇರುವ ಮುಗ್ದು ಮುಖದ ಚೆಲುವೆ ಅಂತಾನೆ ಹೇಳಬಹುದು. ಆದರೂ ಕೂಡ ಜಗನ್ ನವರು ಒಮ್ಮೆ ಇವರಿಗೆ ಕರೆ ಮಾಡಿ ಲಕ್ಷಣ ಸೀರೆನಲ್ಲಿ ನೀವು ವಿಲನ್ ಪಾತ್ರದಲ್ಲಿ ನಟನೆ ಮಾಡಬೇಕು ಶ್ವೇತಾ ಎಂಬ ಹೆಸರು ನಿಮಗಿದೆ ಎಂದು ಹೇಳುತ್ತಾರಂತೆ.

ಮೊದಮೊದಲು ಇವರು ಇದನ್ನು ರಿಜೆಕ್ಟ್ ಮಾಡಿದ್ದರಂತೆ ನಾನು ಈ ಪಾತ್ರಕ್ಕೆ ಸೂಟ್ ಆಗುವುದಿಲ್ಲ ಬೇಡ ಅಂತ ಹೇಳಿದರಂತೆ ಆದರೆ ಜಗನ್ ಅವರು ಇವರ ಮನಸ್ಸನ್ನು ಒಲಿಸುತ್ತಾರೆ. ಒಂದೇ ಪಾತ್ರಕ್ಕೆ ನೀವು ಸ್ಟಿಕನ್ ಆಗಿರಬಾರದು ಎಲ್ಲಾ ಪಾತ್ರದಲ್ಲಿಯೂ ಕೂಡ ನೀವು ನಟನೆ ಮಾಡಬೇಕು ಆಗಲೇ ನಿಮ್ಮ ಕಲೆಗೆ ಮತ್ತು ಪ್ರತಿಭೆಗೆ ತಕ್ಕ ನ್ಯಾಯ ದೊರಕುತ್ತದೆ ಎಂದು ಜಗನ್ ಅವರು ಸುಕೃತ ಅವರ ಮನಸ್ಸನ್ನು ಒಲಿಸುತ್ತಾರಂತೆ. ತದನಂತರ ಲಕ್ಷಣ ಸೀರಿಯಲ್ ನಲ್ಲಿ ಪಾತ್ರದಲ್ಲಿ ನಟನೆ ಮಾಡುವುದಕ್ಕೆ ಒಪ್ಪಿಕೊಳ್ಳುತ್ತಾರೆ ಒಂದಷ್ಟು ದಿನ ಈ ಪಾತ್ರವನ್ನು ನಿಭಾಯಿಸುವುದಕ್ಕೆ ಇವರಿಗೆ ಕಷ್ಟವಾಗುತ್ತದೆ.

ಏಕೆಂದರೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಪಾಸಿಟಿವಿಟಿ ಇರುವಂತಹ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಇದ್ದಕ್ಕಿದ್ದ ಹಾಗೆ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳಬೇಕು ಅಂದರೆ ಈ ನಟಿಗೆ ಸಾಕಷ್ಟು ಸವಾಲುಗಳೇ ಎದುರಾಗುತ್ತದೆ ಹಾಗಾಗಿ ಲಕ್ಷಣ ಸಿರಿಯಲ್ ಶೂಟಿಂಗ್ ಪ್ರಾರಂಭವಾದ ಕೆಲವು ದಿನಗಳ ಕಾಲ ಸಾಕಷ್ಟು ಅಡೆತಡೆಯನ್ನು ಅನುಭವಿಸಿದ್ದರಂತೆ. ದಿನ ಕಳೆದಂತೆ ಈ ಪಾತ್ರಕ್ಕೆ ಹೊಂದಿಕೊಂಡು ಇದೀಗ ಲಕ್ಷಣ ಸಿರಿಯಲ್ ನಲ್ಲಿ ಖ್ಯಾತ ನಟಿಯಾಗಿ ಹೊರ ಹೊಮ್ಮಿದ್ದಾರೆ. ಇದಿಷ್ಟು ಇವರ ಕೆರಿಯರ್ ಗೆ ಸಂಬಂಧಪಟ್ಟ ವಿಚಾರ ಇದನ್ನು ಹೊರತು ಪಡಿಸಿದರೆ ವೈಯಕ್ತಿಕ ಜೀವನದಲ್ಲಿ ನಟಿ ಸುಕೃತ ಅವರು ಸಿಕ್ಕಾಪಟ್ಟೆ ಆಕ್ಟಿವ್ ಇರುತ್ತಾರೆ.

ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ ಆಗಾಗ ಫೋಟೋ ಮತ್ತು ವಿಡಿಯೋ ಮಾಡುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ. ಸದ್ಯಕ್ಕೆ ಕೇಸರಿ ಸೀರೆಯನ್ನು ಹುಟ್ಟು ಮೀನಿನ ನಡಿಗೆಯಲ್ಲಿ ನಡೆದಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಪ್ರೇಕ್ಷಕರ ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದಾರೆ‌‌. ಅಷ್ಟೇ ಅಲ್ಲದೆ ಸುಕೃತ ನಾಗ್ ಅವರ ಈ ಮೈ ಮಾಟಕ್ಕೆ ಫಿದಾ ಆಗಿದ್ದಾರೆ, ನೀವು ಕೂಡ ಒಮ್ಮೆ ಸುಕೃತ ನಾಗ್ ಅವರ ಈ ವಿಡಿಯೋ ನೋಡಿ ನಿಜಕ್ಕೂ ಮೆಚ್ಚಿಕೊಳ್ಳುತ್ತೀರ ಅದರಲ್ಲಿ ಎರಡು ಮಾತಿಲ್ಲ. ಈ ವಿಡಿಯೋ ನೋಡಿದ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅಪ್ಪುಗಾಗಿ ಎಲ್ಲಾ ಮರೆತು ಮತ್ತೆ ಒಂದಾಗುತ್ತಿದ್ದಾರೆ ದರ್ಶನ್ ಮತ್ತು ಕಿಚ್ಚ ಸುದೀಪ್, ಒಂದೇ ವೇದಿಕೆಯ ಮೇಲೆ ಇಬ್ಬರು ಮುಖಾಮುಖಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಪ್ಪು ಅವರು ನಮ್ಮನ್ನು ಅಗಲಿ ಹೋಗಿ 11 ತಿಂಗಳು ಕಳೆದೆ ಹೋಗಿದೆ ಆದರೂ ಕೂಡ ಪ್ರತಿನಿತ್ಯವೂ ಅವರನ್ನು ಒಂದಲ್ಲ ಒಂದು ವಿಚಾರಕ್ಕಾಗಿ ನೆನಪು ಮಾಡಿಕೊಳ್ಳುತ್ತೇವೆ. ಸದ್ಯಕ್ಕೆ ಅಪ್ಪು ಅವರ ಗಂಧದ ಗುಡಿ ಟ್ರಲೈರ್ ಬಿಡುಗಡೆಯಾಗಿದೆ ಎಲ್ಲಾ ಕಡೆಯಲ್ಲೂ ಕೂಡ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಹಾಗಾಗಿ ಗಂಧದ ಗುಡಿಯ ಪ್ರೀ ಈವೆಂಟ್ ಕಾರ್ಯಕ್ರಮವನ್ನು ಅಕ್ಟೋಬರ್ 21ನೇ ತಾರೀಕು ಹಮ್ಮಿಕೊಳ್ಳಲಾಗಿದೆ. ಈ ಒಂದು ಪ್ರೀ ಇವೆಂಟ್ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್‌ ನಾ ಸಾಕಷ್ಟು ನಟ ನಟಿಯರು ಪಾಲ್ಗೊಳ್ಳಲಿದ್ದಾರೆ. ವಿಶೇಷ ಏನೆಂದರೆ ಬಾಲಿವುಡ್ ನ ಅಮಿತಾ ಬಚ್ಚನ್ ನಿಂದ ಹಿಡಿದು ತಮಿಳುನಾಡಿನ ರಜನಿಕಾಂತ್ ತೆಲುಗುನಲ್ಲಿನ ಚಿರಂಜೀವಿ ಸರ್ಜಾ ಸೇರಿದಂತೆ ಇಡೀ ಸೌತ್ ಇಂಡಿಯಾದ ನಾಯಕ ನಟರು ಈ ಒಂದು ಪ್ರಿ ಇವೆಂಟ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ವಿಶೇಷ ಏನೆಂದರೆ ಅಪ್ಪು ಅವರ ಗಂಧದಗುಡಿ ಸಿನಿಮಾದ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ಇಬ್ಬರೂ ಕೂಡ ಮುಖ ಮುಖಿಯಾಗಲಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಮತ್ತು ಕಿಚ್ಚ ಸುದೀಪ್ ನಡುವಿನ ಸಂಬಂಧ ಹಾಳಾಗಿ ನಾಲ್ಕೈದು ವರ್ಷಗಳೇ ಕಳೆದು ಹೋಗಿದೆ. ಇಬ್ಬರು ಕೂಡ ಒಬ್ಬರನ್ನು ಒಬ್ಬರು ಮುಖ ನೋಡುತ್ತಿಲ್ಲ ಅಷ್ಟೇ ಅಲ್ಲದೆ ಸುದೀಪ್ ಅವರು ಪಾಲ್ಗೊಳ್ಳುವಂತಹ ಕಾರ್ಯಕ್ರಮದಲ್ಲಿ ದರ್ಶನ್ ಅವರು ಭಾಗಿಯಾಗುವುದಿಲ್ಲ. ದರ್ಶನ್ ಅವರು ಪಾಲ್ಗೊಳ್ಳುವಂತಹ ಕಾರ್ಯಕ್ರಮದಲ್ಲಿ ಸುದೀಪ್ ಅವರು ಪಾಲ್ಗೊಳ್ಳುವುದಿಲ್ಲ ಆದರೆ ಇದೀಗ ಅಪ್ಪು ಅವರ ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಮಾತ್ರ ಇಬ್ಬರೂ ಎದುರುಬದುರು ಆಗುತ್ತಿದ್ದಾರೆ. ಅಷ್ಟೇ ಅಲ್ಲದೆ ಅಪ್ಪು ಅವರ ಕಾರ್ಯಕ್ರಮದ ಮೂಲಕ ಇಬ್ಬರೂ ದಿಗ್ಗಜರು ಕೂಡ ತಮ್ಮ ಮನಸ್ಸಿನಲ್ಲಿ ಇದ್ದಂತಹ ವೈಮನಸ್ಸನ್ನು ಬಿಟ್ಟು ಮತ್ತೆ ಒಂದಾಗಲಿದ್ದಾರೆ.

ಈ ವಿಚಾರವನ್ನು ಗಂಧದಗುಡಿ ಪ್ರೀತಿ ಇವೆಂಟ್ ಕಾರ್ಯಕ್ರಮವನ್ನು ಆಯೋಜಿಸುತ್ತಿರುವಂತಹ ಮೇಲ್ವಿಚಾರಕರು ಹಾಗೂ ಮುಖ್ಯಸ್ಥರೇ ಮಾಧ್ಯಮದವರೊಟ್ಟಿಗೆ ಹಂಚಿಕೊಂಡಿದ್ದಾರೆ ಹೌದು. ನಿಮ್ಮೆಲ್ಲರಿಗೂ ತಿಳಿದಿರುವಂತೆ ಪುನೀತ್ ರಾಜಕುಮಾರ್ ಅವರ ಕನಸಿನ ಕೂಸು ಗಂಧದಗುಡಿ ಎಂಬ ಡಾಕ್ಯೂಮೆಂಟರಿ ಚಿತ್ರವನ್ನು ಕಳೆದ ವರ್ಷ ಚಿತ್ರೀಕರಣ ಮಾಡಲಾಗಿತ್ತು‌. ಅಷ್ಟೇ ಅಲ್ಲದೆ ನವಂಬರ್ ಒಂದನೇ ತಾರೀಕು ಈ ಒಂದು ಡಾಕ್ಯುಮೆಂಟರಿ ಸಿನಿಮಾವನ್ನು ಬಿಡುಗಡೆ ಮಾಡಬೇಕು ಅಂತ ಅಪ್ಪು ಅವರು ಅಂದುಕೊಂಡಿದ್ದರು. ಆದರೆ ಅದಕ್ಕೂ ಮೊದಲೇ ಅವರು ನಮ್ಮೆಲ್ಲರನ್ನು ಬಿಟ್ಟುಹೋದರು ಈ ಕಾರಣಕ್ಕಾಗಿ ಈ ಒಂದು ಗಂಧದಗುಡಿ ಡಾಕ್ಯುಮೆಂಟರಿ ಸಿನಿಮಾವನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ.

ಕರ್ನಾಟಕದ ನೆಲಾ ಜಲ ಹಾಗೂ ವನ್ಯಜೀವಿಗಳ ಬಗ್ಗೆ ವೈಭವೀಕರಿಸಿ ತೆಗೆದಂತಹ ಪ್ರಕೃತಿಯ ರಮಣೀಯ ಗಂಧದಗುಡಿಯನ್ನು ಕಣ್ತುಂಬಿಕೊಳ್ಳಲು ಹಾಗೂ ಈ ಒಂದು ಸಿನಿಮಾವನ್ನು ವೀಕ್ಷಣೆ ಮಾಡಲು ಇದೀಗ ಸದಾ ಅವಕಾಶ ಒದಗಿದೆ ಅಂತಾನೆ ಹೇಳಬಹುದು. ಹೌದು ಈಗಾಗಲೇ ಕಳೆದ ವಾರವಷ್ಟೇ ಗಂಧದಗುಡಿ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಯಿತು. ಅದೇ ರೀತಿ 21 ನೇ ತಾರೀಕು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಈ ಒಂದು ಕಾರ್ಯಕ್ರಮಕ್ಕೆ ಮುಖ್ಯಸ್ಥರಾಗಿ ರಾಜಕುಮಾರ್ ಕುಟುಂಬದ ಪರಿವಾರದ ಎಲ್ಲರೂ ಇರಲಿದ್ದಾರೆ. ಜೊತೆಗೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ಕೂಡ ಭಾಗಿಯಾಗಲಿದ್ದಾರೆ.

ಇದು ನಿಜಕ್ಕೂ ಸಂತೋಷವಾದ ವಿಚಾರವೇ ಏಕೆಂದರೆ ಒಂದು ಕಡೆ ಅಪ್ಪು ಅವರ ಕೊನೆಯ ಸಿನಿಮಾವನ್ನು ಕಂಡುಕೊಳ್ಳುವಂತಹ ಅವಕಾಶ ಇನ್ನು ದರ್ಶನ್ ಮತ್ತು ಸುದೀಪ್ ಒಂದಾಗುತ್ತಿರುವಂತಹ ಈ ಒಂದು ಸುಂದರ ಕ್ಷಣವನ್ನು ನೋಡುವಂತಹ ಸದಾಾವಕಾಶ. ಇನ್ನು ಮುಂದೆಯಾದರೂ ದರ್ಶನ್ ಮತ್ತು ಕಿಚ್ಚ ಸುದೀಪ್ ನಡುವೆ ಇರುವಂತಹ ಫಾನ್ ವಾರ್ ಕಡಿಮೆಯಾಗುತ್ತದೆ ಎಂಬುದು ಕೆಲವು ಸೀನಿರಸಿಕರ ಅಭಿಪ್ರಾಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ..

ಸನ್ನಿ ಲಿಯೋನ್ ಜೊತೆ ಡಾನ್ಸ್ ಮಾಡಿದ ಖುಷಿಯಲ್ಲಿ ಬಟ್ಟೆ ಬಿಚ್ಚಿ ಎಸೆದ ಚಿಕ್ಕಣ್ಣ ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗುತ್ತೆ.

ಸನ್ನಿ ಲಿಯೋನ್ ಸಾಮಾನ್ಯವಾಗಿ ಈ ಹೆಸರನ್ನು ಎಲ್ಲರೂ ಕೇಳೇ ಇರುತ್ತೀರ ನೀಲಿ ಚಿತ್ರದ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದಂತಹ ತಾರೆ ಅಂದರೆ ಅದು ಸನ್ನಿ ಲಿಯೋನ್ ಅಂತಾನೆ ಹೇಳಬಹುದು. ಒಂದು ಕಾಲದಲ್ಲಿ ಭಾಗಶಃ ನೀಲಿ ಸಿನಿಮಾದಲ್ಲಿಯೇ ಸಿಕ್ಕಾಪಟ್ಟೆ ಹೆಸರುವಾಸಿಯಾಗಿದ್ದರು. ಆದರೆ ದಿನ ಕಳೆದಂತೆ ಇವರು ಭಾರತಕ್ಕೆ ಬಂದು ನೆಲೆಸಿದ ನಂತರ ಸಿನಿಮಾಗಳತ್ತ ಮುಖ ಮಾಡುತ್ತ ಖ್ಯಾತಿಯನ್ನು ಗಳಿಸುತ್ತಾರೆ. ಇದರ ಜೊತೆಗೆ ಇದೀಗ ಚಿಕ್ಕಣ್ಣ ಅಭಿನಯದ ಮತ್ತೊಂದು ಸಿನಿಮಾದಲ್ಲಿಯೂ ಕೂಡ ಡ್ಯಾನ್ಸ್ ಮಾಡುವ ಮೂಲಕ ಹೆಚ್ಚು ಸುದ್ದಿಯಾಗಿದ್ದಾರೆ.

ಹೌದು ಚಿಕ್ಕಣ್ಣ ಅವರು ಅಭಿನಯಿಸುತ್ತಿರುವ ಚಾಂಪಿಯನ್ ಸಿನಿಮಾದ ಹಾಡೊಂದರಲ್ಲಿ ನಟಿ ಸನ್ನಿ ಲಿಯೋನ್ ಅವರು ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಡ್ಯಾನ್ಸ್ ಮಾಡುತ್ತಿರುವಂತಹ ವಿಡಿಯೋ ತುಣುಕಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಈ ವಿಡಿಯೋದಲ್ಲಿ ಇರುವುದಾದರೂ ಏನು ಎಂಬುದನ್ನು ನೋಡುವುದಾದರೆ. ಕೊರಿಯೋಗ್ರಾಫರ್ ಸೇರಿದಂತೆ ಹಲವಾರು ಡ್ಯಾನ್ಸರ್ ಗಳು ಸ್ಟೇಜ್ ಮೇಲೆ ಇರುತ್ತಾರೆ ಈ ಸಮಯದಲ್ಲಿ ನಟಿ ಸನ್ನಿ ಲಿಯೋನ್ ಕೂಡ ಹಾಡಿಗೆ ತಕ್ಕ ಹೆಜ್ಜೆಯನ್ನು ಹಾಕುತ್ತಾರೆ. ಮೊದ ಮೊದಲು ಚಿಕ್ಕಣ್ಣ ಅವರು ಕೂಡ ಸನ್ನಿ ಲಿಯೋನ್ ಜೊತೆಗೆ ಹೆಜ್ಜೆಯನ್ನು ಹಾಕುತ್ತಾರೆ.

ತದನಂತರ ಡ್ಯಾನ್ಸ್ ಚೆನ್ನಾಗಿ ಮೂಡಿ ಬಂದ ಕಾರಣ ಇದೆ ಖುಷಿಯಲ್ಲಿ ಚಿಕ್ಕಣ್ಣ ಅವರು ತಾವು ಧರಿಸಿ ದಂತಹ ಜಾಕೆಟ್ ಶರ್ಟ್ ಎಲ್ಲವನ್ನು ಕೂಡ ಒಂದೊಂದೇ ಕಿತ್ತು ಬಿಸಾಕುತ್ತಾರೆ.ವಇದನ್ನು ನೋಡಿದಂತಹ ಸನ್ನಿ ಲಿಯೋನ್ ಅವರು ಸಿಕ್ಕಾಪಟ್ಟೆ ನಗುತ್ತಾರೆ ಸದ್ಯಕ್ಕೆ ಚಿಕ್ಕಣ್ಣ ಅವರು ವೇದಿಕೆಯ ಮೇಲೆ ಮಾಡಿದಂತಹ ಈ ಕಾಮಿಡಿ ನೋಡಿ ಎಲ್ಲರೂ ಕೂಡ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಹಾಸ್ಯ ಕಲಾವಿದ ಚಿಕ್ಕಣ್ಣ ಅವರು ರಾಜಾಹುಲಿ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಪಡೆದರು.

ತದನಂತರ ಒಂದರ ಹಿಂದೆ ಮತ್ತೊಂದರಂತೆ ಹಿಟ್ ಸಿನಿಮಾಗಳನ್ನು ಮಾಡುತ್ತಾ ಕನ್ನಡಿಗರ ಗೆ ಮನರಂಜನೆಯನ್ನು ನೀಡುತ್ತಾ ಬಂದರು ನೀವು ನಂಬುತ್ತಿರೋ ಇಲ್ಲವೋ ಗೊತ್ತಿಲ್ಲ ಚಿಕ್ಕಣ್ಣ ಅವರು ಕನ್ನಡ ಇಂಡಸ್ಟ್ರಿ ಗೆ ಬಂದು ಕೇವಲ ಹತ್ತು ವರ್ಷವಾಗಿದೆ ಅಷ್ಟೇ ಆದರೆ ಸುಮಾರು 150ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದರೆ ಇಂತಹದೊಂದು ಸಾಧನೆ ಇಷ್ಟು ಕಡಿಮೆ ಸಮಯದಲ್ಲಿ ಯಾವ ಹಾಸ್ಯ ಕಲಾವಿದನು ಕೂಡ ಮಾಡಿರಲಿಲ್ಲ ಪ್ರತಿಭೆ ಮತ್ತು ಕಲೆ ಇದ್ದರೆ ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಬೆಳೆಯಬಹುದು ಎಂಬುದಕ್ಕೆ ಚಿಕ್ಕಣ್ಣ ಅವರ ನೈಜ ಉದಾಹರಣೆ ಅಂತ ಹೇಳಬಹುದು.

ಇನ್ನು ಚಿಕ್ಕಣ್ಣ ಅಭಿಮಾನಿಗಳಿಗೆ ಮತ್ತೊಂದು ಸಂತಸದ ವಿಚಾರ ಏನೆಂದರೆ, ಮೊದಲ ಚಿಕ್ಕಣ್ಣ ಅವರು ಕೇವಲ ಹಾಸ್ಯ ಪ್ರಧಾನ ಪಾತ್ರದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಮೊಟ್ಟಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಹೌದು, ಇತ್ತೀಚಿಗಷ್ಟೇ ಉಪಾಧ್ಯಕ್ಷ ಸಿನಿಮಾದ ಮುಹೂರ್ತ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದೆ. ಈ ಒಂದು ಸಿನಿಮಾದಲ್ಲಿ ಸ್ವತಃ ಚಿಕ್ಕಣ್ಣ ಅವರೇ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ ಇವರಿಗೆ ನಾಯಕನಟಿಯಾಗಿ ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ನಾಯಕ ನಟಿಯಾಗಿ ಅಭಿನಯಿಸಿದಂತಹ ಲೀಲಾ ಅವರು ಕಾಣಿಸಿಕೊಳ್ಳಲಿದ್ದಾರೆ. ಇಷ್ಟು ದಿನಗಳ ಕಾಲ ಅಲ್ಲೊಂದು ಇಲ್ಲೊಂದು ಹಾಸ್ಯ ಪಾತ್ರಗಳಲ್ಲಿ ನಮ್ಮನ್ನು ರಂಜಿಸುತ್ತಿದ್ದಂತಹ ಚಿಕ್ಕಣ್ಣ ಅವರು ಇನ್ನು ಮುಂದೆ ಪೂರ್ಣ ಪ್ರಮಾಣದ ನಾಯಕ ನಟರಾಗಿ ನಮ್ಮನ್ನು ರಂಜಿಸಲು ಮುಂದಾಗುತ್ತಿದ್ದಾರೆ. ಸದ್ಯಕ್ಕೆ ಸನ್ನಿ ಲಿಯೋನ್ ಜೊತೆ ಮಾಡಿದ ಈ ಡಾನ್ಸ್ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

ಅಭಿಜಿತ್ ಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಶಿವಣ್ಣ, ರಾಜವಂಶ ಅಂದ್ರೆ ಇದೇ ನೋಡಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಜಕುಮಾರ್ ವಂಶ ಅಂದರೆ ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೂ ಕೂಡ ತಿಳಿಯದಂತೆ ನೋಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಕಷ್ಟ ಅಂತ ಇವರ ಮನೆ ಮುಂದೆ ಯಾರೇ ಹೋದರು ಕೂಡ ಬರಿಗೈನಲ್ಲಿ ಕಳುಹಿಸಿದ ಇತಿಹಾಸವೇ ಇಲ್ಲ ಸಹಾಯ ಮಾಡುವುದರಲ್ಲಿ ದಾನ ಧರ್ಮ ಮಾಡುವುದರಲ್ಲಿ ಅಪ್ಪು ಅವರನ್ನು ಬಿಟ್ಟರೆ ಬೇರೆ ಯಾವ ನಟರು ಕೂಡ ಇಲ್ಲ ಅಂತ ಹೇಳುತ್ತಿದ್ದರು. ಆದರೆ ಇದೀಗ ಅದೇ ಸಾಲಿನಲ್ಲಿ ಶಿವಣ್ಣ ಅವರು ಕೂಡ ಇದ್ದಾರೆ ಹೌದು ಶಿವಣ್ಣ ಅವರು ಒಂದು ಬಾರಿ ಮಾತು ಕೊಟ್ಟರೆ ಮುಗಿಯಿತು‌. ಅದಿಷ್ಟೇ ಕಷ್ಟ ಬಂದರೂ ಕೂಡ ಆ ಮಾತನ್ನು ನೆರವೇರಿಸುವುದಕ್ಕೆ ಅವರು ಸಿದ್ಧರಾಗಿರುತ್ತಾರೆ ಇಂತಹ ಹಲವು ಉದಾರಣೆಗಳು ಇದೆ.

ಇತ್ತೀಚಿಗಷ್ಟೇ ಶಿವಣ್ಣ ಅಭಿಜಿತ್ ಅವರಿಗೆ ಕೊಟ್ಟ ಮಾತು ಇಷ್ಟು ಬೇಗ ಈಡೇರುತ್ತದೆ ಎಂದು ಯಾರೂ ಕೂಡ ಅಂದುಕೊಂಡಿರಲಿಲ್ಲ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ಅಭಿಜಿತ್ ಅವರು ಇದೀಗ ಸಾಕಷ್ಟು ಸಂಕಷ್ಟದಲ್ಲಿ ಇದ್ದಾರೆ. ಅವಕಾಶಗಳು ಸಿಗದೇ ಮನೆಯಲ್ಲೇ ಕೈ ಕೊಟ್ಟು ಕುಳಿತುಕೊಳ್ಳುವಂತಹ ಸಂದರ್ಭ ಎದುರಾಗಿದೆ ಒಂದು ಕಾಲದಲ್ಲಿ ಟಾಪ್ ನಟ ಆಗಿದಂತಹ ಅಭಿಜಿತ್ ಅವರು ದಿನ ಕಳೆದಂತೆ ಸಿನಿಮಾದಿಂದ ಕಣ್ಮರೆಯಾಗುತ್ತಾರೆ. ಜೀವನ ನಡೆಸುವುದಕ್ಕಾಗಿ ಇದೀಗ ಧಾರಾವಾಹಿಯಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ನಿಭಾಯಿಸುತ್ತಿದ್ದರೆ ತಮ್ಮ ಕುಟುಂಬದ ನಿರ್ವಹಣೆಗಾಗಿ ಕೂಡ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಈ ವಿಚಾರವನ್ನು ಇತ್ತೀಚಿಗಷ್ಟೇ ಜೋಡಿ ನಂಬರ್ ಒನ್ ಎಂಬ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ ಜೋಡಿ ನಂಬರ್ ಒಂದು ಎಂಬ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಕೂಡ ಅಭಿಜಿತ್ ಅವರು ಕಾಣಿಸಿಕೊಂಡಿದ್ದರು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಜೋಡಿ ನಂಬರದ ಒನ್ ಎಂಬ ಕಾರ್ಯಕ್ರಮದ ಮಹಾಸಂಗಮದ ವೇಳೆಯಲ್ಲಿ ಅಭಿಜಿತ್ ಅವರು ಮಾಡಿದಂತಹ ಡ್ಯಾನ್ಸನ್ನು ನೋಡಿ ಶಿವಣ್ಣ ಅವರು ಸಿಕ್ಕಾಪಟ್ಟೆ ಫಿಧಾ ಆಗಿದ್ದರು. ಈ ಸಮಯದಲ್ಲಿ ಅಭಿಜಿತ್ ಅವರು ತಮ್ಮ ಸಿನಿಮಾ ಜೀವನದ ಬಗ್ಗೆ ಮತ್ತು ವೈಯಕ್ತಿಕ ಜೀವನದ ಬಗ್ಗೆ ವೇದಿಕೆಯ ಮೇಲೆ ಹೇಳಿಕೊಂಡು ಬಹಳ ಭಾವುಕರಾಗುತ್ತಾರೆ.

ಅಭಿಜಿತ್ ಅವರ ಮಾತನ್ನು ಕೇಳಿಸಿಕೊಂಡಂತಹ ಶಿವಣ್ಣ ಅವರು ಅಭಿಜಿತ್ ಅವರಿಗೆ ಧೈರ್ಯ ತುಂಬುತ್ತಾರೆ ಅಷ್ಟೇ ಅಲ್ಲದೆ ಅವರು ಜೀವನದುದ್ದಕ್ಕೂ ಕೂಡ ನೀವು ಸಂಘರ್ಷ ಮಾಡಿಕೊಂಡು ಬಂದಿದ್ದಿರ ಎಂದು ವೇದಿಕೆಯ ಮೇಲೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಇದರ ಜೊತೆಗೆ ಮುಂದಿನ ನನ್ನ ಸಿನಿಮಾದಲ್ಲಿ ಅಭಿಜಿತ್ ಅವರಿಗೆ ವಿಶೇಷ ಪಾತ್ರವನ್ನು ನೀಡುತ್ತೇನೆ. ಅವರ ಕೈಗೆ ದುಬಾರಿ ಸಂಭಾವನೆ ಸಿಗುವಂತೆ ನಾನು ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದರು. ಶಿವಣ್ಣ ಅವರು ಈ ಮಾತನ್ನು ಹೇಳಿ ಕೇವಲ 3 ವಾರಗಳಷ್ಟೇ ಆಗಿತ್ತು ಆದರೆ ಇದೀಗ ಆ ಮಾತನ್ನು ಶಿವಣ್ಣ ಅವರು ನಿಜ ಮಾಡಿದ್ದಾರೆ.

ಹೌದು ಶಿವಣ್ಣ ಅವರ ಮುಂದಿನ ಪ್ರಾಜೆಕ್ಟ್ ಆದಂತಹ ಘೋಸ್ಟ್ ಸಿನಿಮಾದಲ್ಲಿ ಅಭಿಜಿತ್ ಅವರಿಗೆ ವಿಶೇಷ ಪಾತ್ರ ಒಂದನ್ನು ಕಲ್ಪಿಸಿ ಕೊಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ಚಿತ್ರತಂಡದವರೇ ಹೇಳಿಕೊಂಡಿದ್ದಾರೆ ಇದರಿಂದಲೇ ತಿಳಿಯುತ್ತದೆ ರಾಜ್ ವಂಶದವರು ಒಂದು ಬಾರಿ ಮಾತು ಕೊಟ್ಟರೆ ಮುಗಿಯಿತು ಆ ಮಾತನ್ನು ತಪ್ಪುವ ಪ್ರಮೇಯವೇ ಇಲ್ಲ ಅಂತ. ಸದ್ಯ ಕಂತು ಅಭಿಜಿತ್ ಅವರಿಗೆ ಸಿನಿಮಾದಲ್ಲಿ ಮತ್ತೆ ನಟನೆ ಮಾಡುವುದಕ್ಕೆ ಅವಕಾಶ ಸಿಕ್ಕಿರುವುದು ಸಂಜೀವಿನಿ ಸಿಕ್ಕಂತೆ ಆಗಿದೆ. ಇನ್ನು ಕಳೆದ ವಾರ ಜೋಡಿ ನಂಬರ್ ಒಂದು ಕಾರ್ಯಕ್ರಮದಲ್ಲಿ ವಿಜೇತರಾದಂತಹ ಅಭಿಜಿತ್ ದಂಪತಿಗಳಿಗೆ 5 ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿ ದೊರೆತಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಶಿವಣ್ಣ ಅವರು ಅಭಿಜಿತ್ ಗೆ ಧೈರ್ಯ ತುಂಬಿದ ಮೇಲೆ ಒಂದರ ಮೇಲೆ ಮತ್ತೊಂದರಂತೆ ಸಿಹಿ ಸುದ್ದಿಯನ್ನು ಕೇಳುತ್ತಿದ್ದಾರೆ. ಹಲವು ವರ್ಷದಿಂದ ಕಷ್ಟದ ಜೀವನ ನಡೆಸುತ್ತಿದ್ದ ಅಭಿಜಿತ್ ಕುಟುಂಬ ಇನ್ನು ಮುಂದೆಯಾದರೂ ಕೂಡ ಸುಖಕರವಾಗಿರಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಕಾಂತಾರ ಸಿನಿಮಾಗೆ ನಟಿ ಸಪ್ತಮಿ ಗೌಡ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಈ ದಾಖಲೆಯನ್ನು ಕನ್ನಡದಲ್ಲಿ ಇನ್ನು ಯಾವ ನಟಿಯು ಕೂಡ ಮಾಡಿಲ್ಲ.

ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅಭಿನಯದ ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿರುವಂತಹ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಕರಾವಳಿಯ ದೈವಾರದಲ್ಲಿ ಹಾಗೂ ಅಲ್ಲಿನ ಶಾಸ್ತ್ರ ಸಂಪ್ರದಾಯ ಮತ್ತು ಪ್ರಕೃತಿಗೆ ಮಾನವನ ಕೊಡುಗೆ ಇವೆಲ್ಲದರ ಕುರಿತಾಗಿ ಕಾಂತಾರ ಸಿನಿಮಾ ಮೂಡಿ ಬಂದಿದೆ. ಪ್ರಕೃತಿಗೆ ನಾವು ಬೇಕಾಗಿಲ್ಲ ನಮಗೆ ಪ್ರಕೃತಿ ಬೇಕು ಎಂಬುದನ್ನು ಈ ಸಿನಿಮಾದಲ್ಲಿ ಎತ್ತಿ ತೋರಿಸಲಾಗಿದೆ. ಈ ಒಂದು ಕಾಂತಾರ ಸಿನಿಮಾವನ್ನು ಸ್ವತಃ ರಿಷಬ್ ಶೆಟ್ಟಿ ಅವರೇ ನಿರ್ದೇಶನ ಮಾಡಿದ್ದಾರೆ.

ಒಂದೇ ಮಾತಿನಲ್ಲಿ ಹೇಳಬೇಕಾದರೆ ಸ್ವತಃ ರಿಷಬ್ ಶೆಟ್ಟಿಯವರಿಗೂ ಕೂಡ ಈ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತದೆ ಎಂಬ ವಿಚಾರ ತಿಳಿದಿರಲಿಲ್ಲ. ಒಂದು ಹೊಸ ಎಕ್ಸ್ಪರಿಮೆಂಟ್ ಮಾಡುವ ಸಲುವಾಗಿ ಈ ಸಿನಿಮಾವನ್ನು ಮಾಡುತ್ತಾರೆ ಈ ಸಿನಿಮಾ ತೆರೆ ಮೇಲೆ ಮೂಡಿ ಬಂದ ನಂತರ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತದೆ. ಈ ಕಾರಣಕ್ಕಾಗಿ ಕಾಂತಾರ ಸಿನಿಮಾ ಮೊದಲ ವಾರ ಭರ್ಜರಿ ಕಲೆಕ್ಷನ್ ಮಾಡಿ ಇದೀಗ ಎರಡನೇ ವಾರವು ಕೂಡ ದಾಪುಗಾಲು ಇಟ್ಟಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಕೆಜಿಎಫ್ ದಾಖಲೆಯನ್ನು ಕೂಡ ಇದೀಗ ಕಾಂತಾರ ಮುರಿಯುವ ಮಟ್ಟಕ್ಕೆ ಹೋಗಿ ನಿಂತಿದೆ.

ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಗೆ ಇದೀಗ ಎಲ್ಲಿಲ್ಲದ ಬೇಡಿಕೆ ಇದೆ ಇದೇ ಕಾರಣಕ್ಕಾಗಿ ತೆಲುಗು ತಮಿಳು ಹಿಂದಿ ಸೇರಿದಂತೆ ಸಾಕಷ್ಟು ಭಾಷೆಯಲ್ಲಿ ಈ ಸಿನಿಮ ಡಬ್ಬಿಂಗ್ ಆಗಿದೆ. ಹಿಂದಿಯಲ್ಲಿ ಸುಮಾರು ಎರಡುವರೆ ಸಾವಿರ ಥಿಯೇಟರ್ನಲ್ಲಿ ಕಾಂತಾರ ಸಿನಿಮಾ ಬಿಡುಗಡೆಯಾಗಿದ್ದ ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ. ಇನ್ನು ಈ ಕಾಂತಾರ ಸಿನಿಮಾ ವನ್ನು ನೋಡಿದಂತಹ ದಕ್ಷಿಣ ಭಾರತದ ಸ್ಟಾರ್ ನಟ ನಟರು ರಿಷಬ್ ಶೆಟ್ಟಿ ಅವರಿಗೆ ಶುಭಾಶಯದ ಮಹಾಪುರವನ್ನೇ ಹರಿಸುತ್ತಿದ್ದಾರೆ ಅಷ್ಟರ ಮಟ್ಟಿಗೆ ಈ ಸಿನಿಮಾ ಹಿಟ್ ಆಗುತ್ತಿದೆ.

ಇನ್ನು ಈ ಸಿನಿಮಾದ ಮೈನ್ ಕ್ಯಾರೆಕ್ಟರ್ ಅಂದರೆ ಅದು ನಟಿ ಸಪ್ತಮಿ ಗೌಡ ಅಂತಾನೇ ಹೇಳಬಹುದು ಹೌದು ನಟಿ ಸಪ್ತಮಿ ಗೌಡ ಅವರಿಗೆ ಇದು ಎರಡನೇ ಸಿನಿಮಾ. ಮೂಲತಃ ಬೆಂಗಳೂರಿನವರಾದ ನಟಿ ಸಪ್ತಮಿ ಗೌಡ ಈ ಹಿಂದೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಟಿಸಿದ್ದರು ಆದರೆ ಅದರಲ್ಲಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಕಾಂತಾರ ಸಿನಿಮಾದ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಸಾಮಾನ್ಯವಾಗಿ ನಮ್ಮ ಇಂಡಸ್ಟ್ರಿಯಲ್ಲಿ ನಟಿಯಾಗಿ ಪಾದರ್ಪಣೆ ಮಾಡಬೇಕು ಅಂದರೆ ಅದಕ್ಕೆ ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಇದರ ಜೊತೆಗೆ ಸಂಭಾವನೆ ವಿಚಾರದಲ್ಲಿ ಯಾವ ನಿರೀಕ್ಷೆಯನ್ನು ಕೂಡ ಇಟ್ಟುಕೊಳ್ಳುವುದಿಲ್ಲ ಒಂದು ಚಾನ್ಸ್ ಕೊಟ್ಟರೆ ಸಾಕು ಮುಂದಿನ ಸಿನಿಮಾದಿಂದ ಸಂಭಾವನೆ ನೋಡಿಕೊಳ್ಳೋಣ ಅಂತ ಅಂದುಕೊಳ್ಳುತ್ತಾರೆ. ಆದರೆ ನಟಿ ಸಪ್ತಮಿ ಗೌಡ ಅವರಿಗೆ ಮಾತ್ರ ತಾವು ನಟನೆ ಮಾಡಿದ ಮೊದಲ ಸಿನಿಮಾದಲ್ಲಿಯೇ ಯಾರಿಗೂ ಸಿಗದಷ್ಟು ಹಾಗೂ ನಿರೀಕ್ಷೆಗೂ ಮೀರಿದಂತಹ ಸಂಭಾವನೆಯನ್ನು ಪಡೆದಿದ್ದಾರೆ.

ಹೌದು ಸಪ್ತಮಿ ಗೌಡ ಅವರು ಕಾಂತಾರ ಸಿನಿಮಾಗೆ ಬರೋಬರಿ 50 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ ಕನ್ನಡದಲ್ಲಿ ಇಲ್ಲಿಯವರೆಗೂ ಯಾವ ನಟಿಯು ಕೂಡ ಇಷ್ಟು ದೊಡ್ಡ ಮಟ್ಟದ ಸಂಭಾವನೆಯನ್ನು ಪಡೆದಿಲ್ಲ. ತಾವು ಅಭಿನಯಿಸಿದ ಮೊದಲ ಸಿನಿಮಾಗೆ ಎರಡರಿಂದ 5 ಲಕ್ಷ ಸಂಭಾವನೆ ಪಡೆಯುವುದೇ ಹೆಚ್ಚು ಟಾಪ್ ನಟಿಯರಿಗೆ 10 ಲಕ್ಷ ಸಂಭಾವನೆ ನೀಡುತ್ತಾರೆ. ಆದರೆ ಸಪ್ತಮಿ ಗೌಡ ಅವರು ಮಾತ್ರ 50 ಲಕ್ಷ ರೂಪಾಯಿ ಈ ಸಂಭಾವನೆ ಪಡೆಯುವುದರ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇನ್ನು ಕಾಂತಾರ ಸಿನಿಮಾವನ್ನು ನೀವು ನೋಡಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

5 ವರ್ಷದಿಂದ ಬಿಗ್ ಬಾಸ್ ಆಫರ್ ತಿರಸ್ಕರಿಸುತ್ತಿದ್ದ ನೇಹ ಗೌಡ ಈ ಬಾರಿ ಮಾತ್ರ ಯಾಕೆ ಬಿಗ್ ಬಾಸ್ ಗೆ ಯಾಕೆ ಹೋಗಿದ್ದಾರೆ ಗೊತ್ತ.?

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಂತಹ ನೇಹಾ ಗೌಡ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಇರುವ ವಿಚಾರ ನಿಮಗೆ ತಿಳಿದೇ ಇದೆ. ತಾವು ಕನ್ನಡದಲ್ಲಿ ನಟಿಸಿದ್ದು ಒಂದೇ ಧಾರವಾಹಿಯಾದರೂ ಕೂಡ ಈ ಧಾರಾವಾಹಿ ಇವರಿಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿತು. ಈ ಧಾರಾವಾಹಿಯಲ್ಲಿ ನಟಿಸುತ್ತಿರುವಗಾಲೇ ತೆಲುಗಿನ ಧಾರವಾಹಿಯಲ್ಲೂ ಕೂಡ ನಟನೆ ಮಾಡುವುದಕ್ಕೆ ಆಫರ್ ದೊರೆಯುತ್ತದೆ. ಇನ್ನು ಹಲವಾರು ಕಾರ್ಯಕ್ರಮ ಹಾಗೂ ಡ್ಯಾನ್ಸಿಂಗ್ ಶೋ ರಾಜ ರಾಣಿ ಸೋ ಇನ್ನಿತರ ರಿಯಾಲಿಟಿ ಶೋ ಗಳಲ್ಲಿ ಪಾಲ್ಗೊಂಡಿದ್ದಂತಹ ನೇಹಾ ಗೌಡ ಅವರು ಸದಾ ಕಾಲ ಒಂದಲ್ಲ ಒಂದು ವಿಷಯಕ್ಕೆ ಚರ್ಚೆಯಾಗುತ್ತದೆ ಇದ್ದರು.

ಈ ಬಾರಿಯೂ ಕೂಡ ಇಂತಹದ್ದೇ ಒಂದು ವಿಚಾರಕ್ಕೆ ಚರ್ಚೆಯಾಗಿದ್ದಾರೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡದ ಬಿಗ್ ಬಾಸ್ ಸೀಸನ್ 9 ರ ಕಾರ್ಯಕ್ರಮ ಇದಾಗಲೇ ಪ್ರಾರಂಭವಾಗಿ ಎರಡು ವಾರ ಕಳೆದೆ ಹೋಗಿದೆ. ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಬಹಳಷ್ಟು ವಿಶೇಷತೆಯನ್ನು ಒಳಗೊಂಡಿದೆ ಏಕೆಂದರೆ ಕಳೆದ ಸೀಸನ್ ನಲ್ಲಿ ಪಾಲ್ಗೊಂಡಿದ್ದಂತಹ ಸ್ಪರ್ಧಿಗಳು ಹಾಗೂ ಒ ಟಿ ಟಿ ಯಲ್ಲಿ ಪ್ರಾರಂಭವಾಗಿದಂತಹ ಕಂಟೆಸ್ಟೆಂಟ್ಗಳು ಜೊತೆಗೆ ಹೊಸ ಕಂಟೆಸ್ಟೆಂಟ್ಗಳನ್ನು ಈ ಬಾರಿಯ ಬಿಗ್ ಬಾಸ್ ಸೀಸನ್ 9ರ ಮನೆ ಒಳಗೆ ಹಾಕಲಾಗಿದೆ. ಹಾಗಾಗಿ ಹಿಂದೆಂದೂ ಕಂಡಿರಾದಂತಹ ಬಿಗ್ ಬಾಸ್ ಕಾರ್ಯಕ್ರಮ ಈ ಬಾರಿ ಪ್ರಸಾರವಾಗುತ್ತಿದೆ ಇನ್ನು ನೇಹಾ ಗೌಡ ಅವರು ಈ ಬಿಗ್ ಬಾಸ್ ಕಾಣಿಸಿಕೊಂಡಿದ್ದಾರೆ.

ನೇಹ ಗೌಡ ಅವರು ತಮ್ಮ ದೀರ್ಘಕಾಲದ ಗೆಳೆಯ ಚಂದನ್ ಅವರನ್ನು ಪ್ರೀತಿಸಿ ಮದುವೆಯಾಗಿರುವ ವಿಚಾರ ನಿಮಗೆ ತಿಳಿದೇ ಇದೆ ಚಂದನ್ ಅವರು ಇದೀಗ ನೇಹಾ ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಿರುವ ಹಿಂದಿನ ಸೀಕ್ರೆಟ್ ಒಂದು ರಿವೀಲ್ ಮಾಡಿದ್ದಾರೆ. ಹೌದು ಬಿಗ್ ಬಾಸ್ ಅವರನ್ನು ಕಳೆದ ಐದು ವರ್ಷಗಳಿಂದಲೂ ಕೂಡ ಇನ್ವೈಟ್ ಮಾಡುತ್ತಿದ್ದರಂತೆ. ಆದರೆ ನೇಹ ಗೌಡ ಅವರು ಮಾತ್ರ ಇದಕ್ಕೆ ಒಪ್ಪಿರಲಿಲ್ಲ ಸೋಶಿಯಲ್ ಮೀಡಿಯಾದಲ್ಲೂ ಕೂಡ ನೇಹ ಗೌಡ ಅವರು ಬಿಗ್ ಬಾಸ್ ನಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಪೋಸ್ಟರ್ಗಳು ಕೂಡ ಹರಿದಾಡುತ್ತಿದ್ದವು. ಆದರೆ ಕೊನೆಯವರೆಗೂ ಕೂಡ ನೇಹ ಗೌಡ ಅವರು ಬಿಗ್ ಬಾಸ್ ಮನೆಗೆ ಕಾಲು ಇಡಲೇ ಇಲ್ಲ.

ಈ ವಿಚಾರ ಕುರಿತಾಗಿ ನೇಹ ಗೌಡ ಅವರ ಪತಿ ಚಂದು ಅವರನ್ನು ಪ್ರಶ್ನೆ ಕೇಳಿದಾಗ ಅವರು ಇಷ್ಟು ದಿನಗಳ ಕಾಲ ನೇಹ ಗೌಡ ಅವರು ಬಿಗ್ ಬಾಸ್ ಗೆ ಹೋಗದೆ ಇರುವುದಕ್ಕೆ ಕಾರಣ ಸಮಯದ ಅಭಾವ ಎಂದು ತಿಳಿಸಿದ್ದಾರೆ. ಹೌದು ನೇಹಾ ಗೌಡ ಅವರು ಸಖತ್ ಬ್ಯುಸಿ ಇರುವ ನಟಿ ಅವರಿಗೆ ಆಫರ್ ಬಂದಾಗೆಲ್ಲ ಏನಾದರೂ ಒಂದು ಕಾರ್ಯಕ್ರಮ ಇರುತ್ತಿತ್ತಂತೆ. ಸೀರಿಯಲ್ ನಲ್ಲಿ ನಟಿಸುವುದು ಅಥವಾ ಇನ್ನಿತರ ಡ್ಯಾನ್ಸಿಂಗ್ ಕಾರ್ಯಕ್ರಮ ಅಥವಾ ಬೇರೆ ಬೇರೆ ಪ್ರೋಗ್ರಾಮ್ ಗಳಲ್ಲಿ ನಿರತರಾಗಿದ್ದಾರಂತೆ‌‌. ಈ ಕಾರಣದಿಂದಲೇ ಬಿಗ್ ಬಾಸ್ ಗೆ ಅವರು ಹೋಗುವುದಕ್ಕೆ ಸಮಯ ಅವಕಾಶ ಸಿಕ್ಕಿರಲಿಲ್ಲವಂತೆ ಸದ್ಯಕ್ಕೆ ನೇಹಾ ಗೌಡ ಅವರು ಯಾವುದೇ ಧಾರವಾಹಿ ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಇರುವ ಕಾರಣ ಈ ಬಾರಿಯ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ ಎಂದು ನೇಹ ಗೌಡ ಅವರ ಪತಿ ಚಂದನ್ ಅವರು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮಾಡಿ ಹಾಗೂ ನಿಮ್ಮ ನೆಚ್ಚಿನ ಬಿಗ್ ಬಾಸ್ ಸ್ಪರ್ಧಿ ಯಾರು ಎಂಬುದನ್ನು ತಿಳಿಸಿ

ದೀಪಿಕಾ ದಾಸ್ & ಶೈನ್ ಶೆಟ್ಟಿ ನಡುವಿನ ಸಂಬಂಧದ ಬಗ್ಗೆ ಮೊದಲ ಬಾರಿ ಪಬ್ಲಿಕ್ ನಲ್ಲಿಯೇ ಹೇಳಿಕೆ ಕೊಟ್ಟ ದೀಪಿಕಾ ದಾಸ್ ತಾಯಿ ಏನದು ಗೊತ್ತಾ ನಿಜಕ್ಕೂ ಆಶ್ಚರ್ಯ ಆಗುತ್ತೆ ಇವರ ಮಾತು ಕೇಳಿದ್ರೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಜೋಡಿಗಳ ಪೈಕಿ ದೀಪಿಕಾ ದಾಸ್ ಹಾಗೂ ಶೈನ್ ಶೆಟ್ಟಿ ಅವರು ಕೂಡ ಒಬ್ಬರು. ಹೌದು ಬಿಗ್ ಬಾಸ್ ಸೀಸನ್ ಏಳರ ಸ್ಪರ್ಧಿಯಾಗಿ ದೀಪಿಕಾ ದಾಸ್ ಹಾಗೂ ಶೈನ್ ಶೆಟ್ಟಿ ಇಬ್ಬರು ಕೂಡ ಮನೆಯೊಳಗೆ ಎಂಟ್ರಿ ಪಡೆದಿದ್ದರು. ಮೊದಲ ದಿನದಲ್ಲಿ ಇಬ್ಬರಿಗೂ ಕೂಡ ಒಬ್ಬರಿಗೊಬ್ಬರು ಪರಿಚಯನೇ ಇಲ್ಲ ಎನ್ನುವ ಮಾದರಿಯಲ್ಲಿ ನಡೆದುಕೊಳ್ಳುತ್ತಿದ್ದರು. ಆದರೆ ದಿನ ಕಳೆದಂತೆ ಇವರಿಬ್ಬರ ನಡುವೆ ಆತ್ಮೀಯವಾದ ಸಂಬಂಧ ಎಂಬುದು ಏರ್ಪಡುತ್ತದೆ ಇನ್ನು ನಟ ಶೈನ್ ಶೆಟ್ಟಿ ಅವರು ಕೂಡ ದೀಪಿಕಾ ದಾಸ್ ಅವರನ್ನು ಪ್ರೀತಿಸುವುದಾಗಿ ಪರೋಕ್ಷವಾಗಿ ಹೇಳಿಕೊಳ್ಳುತ್ತಿದ್ದರು.

ಈ ವಿಚಾರ ಮನೆಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಹಾಸ್ಯಾಸ್ಪದವಾಗಿ ಕಂಡರೂ ಕೂಡ ಮನೆಯಿಂದ ಹೊರಗೆ ಇದ್ದಂತಹ ಪ್ರೇಕ್ಷಕರಿಗೆ ಇಬ್ಬರೂ ಕೂಡ ಪ್ರೇಮಿಗಳಂತೆ ಕಾಣಿಸುವುದಂತು ಸತ್ಯವಾಗಿತ್ತು. ಈ ವಿಚಾರಕ್ಕಾಗಿಯೇ ಒಮ್ಮೆ ದೀಪಿಕಾ ದಾಸ್ ಅವರ ತಾಯಿ ಮಗಳನ್ನು ನೋಡುವುದಕ್ಕೆ ಬಿಗ್ ಬಾಸ್ ಮನೆಗೆ ಬಂದ ಸಂದರ್ಭದಲ್ಲಿ ಮಗಳ ಬಗ್ಗೆ ಕೋಪ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಹೊರಗೆ ನಿನ್ನನ್ನು ಯಾವ ರೀತಿ ನೋಡುತ್ತಿದ್ದಾರೆ ಗೊತ್ತಾ ಎಂದು ಹೇಳಿದರು ಇದಿಷ್ಟು ಮಾತ್ರವಲ್ಲದೆ ದೀಪಿಕ ದಾಸ್ ತಾಯಿ ಬಿಗ್ ಬಾಸ್ ಮನೆಗೆ ಬಂದಾಗ ಎಲ್ಲಾ ಸ್ಪರ್ಧಿಗಳನ್ನು ಮಾತನಾಡಿಸಿದರೂ ಆದರೆ ಶೈನ್ ಶೆಟ್ಟಿ ಅವರನ್ನು ಮಾತನಾಡಿಸಲಿಲ್ಲ ಸ್ವತಹ ಶೈನ್ ಶೆಟ್ಟಿ ಅವರೇ ಮುಂದೆ ಬಂದರೂ ಕೂಡ ಮುಖ ತಿರುಗಿಸಿಕೊಂಡು ಹೋದರು.

ಅಲ್ಲಿಗೆ ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್ ಅವರಿಗೆ ಈ ವಿಚಾರ ಕನ್ಫರ್ಮ್ ಆಗುತ್ತದೆ ಹೊರಗಡೆ ನಾವಿಬ್ಬರೂ ಪ್ರೇಮಿಗಳಂತೆ ಕಾಣಿಸಿಕೊಳ್ಳುತ್ತಿದ್ದೇವೆ ಈ ಕಾರಣಕ್ಕಾಗಿಯೇ ನಮ್ಮ ತಾಯಿ ಕೋಪಗೊಂಡಿದ್ದಾರೆ ಅಂತ ಈ ವಿಚಾರ ನಡೆದ ನಂತರ ಶೈನ್ ಶೆಟ್ಟಿ ಅವರು ದೀಪಿಕಾ ದಾಸ್ ಅವರಿಂದ ಸ್ವಲ್ಪ ದೂರನೇ ಉಳಿಯುತ್ತಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಕೆಲವು ಖಾಸಗಿ ಕಾರ್ಯಕ್ರಮದಲ್ಲೂ ಕೂಡ ಶೈನ್ ಮತ್ತು ದೀಪಿಕಾ ದಾಸ್ ಅವರು ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಇದನ್ನು ನೋಡಿದಂತಹ ಅಭಿಮಾನಿಗಳು ಬಿಗ್ ಬಾಸ್ ಮನೆಯಲ್ಲಿ ಪ್ರಾರಂಭವಾದ ಇವರ ಪ್ರೀತಿ ಪ್ರೇಮ ಇಲ್ಲಿಯೂ ಕೂಡ ಮುಂದುವರೆಯುತ್ತಿದೆ ಅಂತ ಅಂದುಕೊಂಡಿದ್ದರು.

ಆದರೆ ಬಿಗ್ ಬಾಸ್ ಮನೆ ಒಳಗೆ ಇರುವಾಗ ದೀಪಿಕಾ ದಾಸ್ ಅವರ ತಾಯಿ ಈ ಪ್ರೀತಿಗೆ ಅಡ್ಡಿಯನ್ನು ವ್ಯಕ್ತಪಡಿಸಿದ್ದರು ಆದರೆ ಮನೆ ಹೊರಗೆ ಹೇಗೆ ಇವರನ್ನು ಒಪ್ಪಿಕೊಂಡಿದ್ದಾರೆ ಎಂದು ಪ್ರಶ್ನೆಯನ್ನು ಕೇಳಲು ಪ್ರಾರಂಭಿಸಿದರು. ಈ ಪ್ರಶ್ನೆಗೆ ಇದೀಗ ದೀಪಿಕಾ ದಾಸ್ ಅವರ ತಾಯಿ ನೇರವಾಗಿ ಉತ್ತರ ನೀಡಿದ್ದಾರೆ ಹೌದು ಇತ್ತೀಚಿಗಷ್ಟೇ ನಡೆದ ಯುಟ್ಯೂಬ್ ಚಾನೆಲ್ ಸಂದರ್ಶನ ಒಂದರಲ್ಲಿ ತಮ್ಮ ಮಗಳು ಹಾಗೂ ಶೈನ್ ಶೆಟ್ಟಿ ಅವರ ಬಗ್ಗೆ ಯಾರಿಗೂ ತಿಳಿಯದ ಮಾಹಿತಿ ಎಂದನು ಹೊರ ಹಾಕಿದ್ದಾರೆ.

ದೀಪಿಕಾ ದಾಸ್ ಅವರ ತಾಯಿ ಹೇಳುವ ಪ್ರಕಾರ ಬಿಗ್ ಬಾಸ್ ಮನೆಯಲ್ಲಿ ಇವರು ಆಟದ ದೃಷ್ಟಿಯಿಂದ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು ಅದನ್ನು ಹೊರತು ಪಡಿಸಿದರೆ ಇವರಿಬ್ಬರು ಒಳ್ಳೆಯ ಸ್ನೇಹಿತರು ಪ್ರೇಮಿಗಳಂತೂ ಅಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ ಮನೆಯಿಂದ ಹೊರಬಂದ ನಂತರ ಶೈನ್ ಶೆಟ್ಟಿ ಅವರು ನನ್ನನ್ನು ಭೇಟಿ ಮಾಡಿ ಕ್ಷಮೆ ಕೇಳಿದ್ದಾರೆ ನನ್ನಿಂದ ನಿಮಗೆ ಏನಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ. ಅಷ್ಟೇ ಅಲ್ಲದೆ ನಾನು ಮತ್ತು ದೀಪಿಕಾ ಒಳ್ಳೆಯ ಸ್ನೇಹಿತರು ಕೊನೆಯವರೆಗೂ ನಾವು ಸ್ನೇಹಿತರಾಗಿಯೇ ಉಳಿಯುತ್ತೇವೆ ಎಂದು ಹೇಳಿದ್ದಾರೆ ಎಂದು ದೀಪಿಕಾ ದಾಸ್ ಅವರ ತಾಯಿ ಮಾತನಾಡಿದ್ದಾರೆ. ಆ ವಿಡಿಯೋ ಈ ಕೆಳಗಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಮದುವೆಯಾಗಿ 2 ವರ್ಷವಾದ್ರೂ ಇನ್ನು ಹನಿಮೂನ್ ಗೆ ಕರೆದುಕೊಂಡು ಹೋಗಿಲ್ಲ ಎಂದು ಪತಿ ಮೇಲೆ ಕಿಡಿಕಾರಿದ ಶುಭಪುಂಜ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.

ಮುದ್ದು ಮುಖದ ಚೆಲುವೆ ನಟಿ ಶುಭಪುಂಜ ಅವರು ಕಳೆದ ಎರಡು ದಶಕಗಳಿಂದಲೂ ಕೂಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರೆ. ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಇವರು ಮಾಡಿದಂತಹ ಅಮೋಘ ನಟನೆಯನ್ನು ಯಾರಿಂದಲೂ ಕೂಡ ಮರೆಯೋದಕ್ಕೆ ಸಾಧ್ಯವಿಲ್ಲ. ತದನಂತರ ಚಂದ, ಸ್ಲಂ ಬಾಲ, ಜಾಕ್ಪಾಟ್, ಕಂಠೀರವ, ಗೂಗಲ್, ಪರಾರಿ ಜೈ ಮಾರುತಿ ಹೀಗೆ ಕನ್ನಡದಲ್ಲಿ ಸುಮಾರು 15 ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲಿಯೂ ಕೂಡ ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ನಟಿ ಶುಭಪುಂಜ ಅವರು ಸದ್ಯಕ್ಕೆ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.

ಇದು ಒಂದು ಕಡೆಯಾದರೆ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಕೂಡ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಆಗಮಿಸಿದ್ದು ನಿಮಗೆ ತಿಳಿದೇ ಇದೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ನಟಿ ಶುಭಪುಂಜ ಅವರಿಗೆ ಇನ್ನಷ್ಟು ಸಿನಿಮಾದಲ್ಲಿ ನಟಿಸುವಂತಹ ಆಫರ್ ಸಿಕ್ಕಿದೆ. ಸದ್ಯಕ್ಕೆ ಅಂಬುಜ ಎಂಬ ಸಿನಿಮಾದಲ್ಲಿ ಪ್ರೆಸ್ ರಿಪೋರ್ಟರ್ ಪಾತ್ರ ಒಂದನ್ನು ನಿಭಾಯಿಸಲಿದ್ದಾರೆ, ಈ ಸಿನಿಮಾದ ಶೂಟಿಂಗ್ ನಲ್ಲಿ ಸಕ್ಕತ್ ಬ್ಯುಸಿಯಾಗಿದ್ದಾರೆ ಇದಿಷ್ಟು ಇವರ ವೃತ್ತಿ ಜೀವನ. ಆದರೆ ನಟಿ ಶುಭಪುಂಜ ಅವರು ಮಾಧ್ಯಮದ ಮುಂದೆ ಮಾತನಾಡುವ ಸಮಯದಲ್ಲಿ ತಮ್ಮ ವೈಯಕ್ತಿಕ ವಿಚಾರವನ್ನು ಕೂಡ ಹಂಚಿಕೊಂಡಿದ್ದಾರೆ.

ಹೌದು ನಟಿ ಶುಭಪುಂಜ ಹೇಳಿದ ವಿಚಾರ ಕೇಳಿ ನಿಜಕ್ಕೂ ಅಭಿಮಾನಿಗಳು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ ಅಷ್ಟಕ್ಕೂ ಶುಭಪುಂಜ ಅವರು ಹೇಳಿದ್ದಾದರೂ ಏನು ಎಂಬುದನ್ನು ನೋಡುವುದಾದರೆ. ಶುಭಪುಂಜ ಅವರು ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ನಮ್ಮ ಬಹುಕಾಲದ ಗೆಳೆಯ ಹಾಗೂ ಬಿಸಿನೆಸ್ ಮ್ಯಾನ್ ಆದಂತಹ ಶಮಂತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಸಾಮಾನ್ಯವಾಗಿ ನಟ ನಟಿಯರು ಮದುವೆ ಎಂದರೆ ಬಹಳ ಅದ್ದೂರಿಯಾಗಿ ಆಡಂಬರದಿಂದ ಮದುವೆ ಮಾಡಿಕೊಳ್ಳುತ್ತಾರೆ. ಆದರೆ ಮದುವೆಗೂ ಮುಂಚೆಯೇ ಶುಭಪುಂಜ ಅವರು ಸರಳವಾಗಿಯೇ ವಿವಾಹವಾಗಬೇಕು ಎಂಬ ಷರತ್ತು ಅನ್ನು ವಿಧಿಸಿದ್ದರಂತೆ.

ಈ ಒಂದು ಷರತ್ತಿನ ಅನುಗುಣವಾಗಿ ಶಮಂತ್ ಅವರು ಶುಭಪುಂಜ ಅವರ ಅಜ್ಜಿ ಮನೆ ಆದಂತಹ ಮಂಗಳೂರಿನ ಸಮೀಪದ ಪುಟ್ಟ ಗ್ರಾಮ ಒಂದರಲ್ಲಿ ಮನೆಯಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಇವರ ಮದುವೆಗೆ ಕುಟುಂಬಸ್ಥರು ಆತ್ಮೀಯ ಸ್ನೇಹಿತರನ್ನು ಬಿಟ್ಟರೆ ಬೇರೆ ಯಾರೂ ಕೂಡ ಹಾಜರಾಗಿರಲಿಲ್ಲ. ಮದುವೆಯಾಗಿ ಎರಡು ವರ್ಷ ಆಗಿದೆ ಈ ಎರಡು ವರ್ಷದಲ್ಲಿ ತಮ್ಮ ದಾಂಪತ್ಯ ಜೀವನ ಚೆನ್ನಾಗಿಯೇ ಇದೆ ಶಮಂತ್ ನನ್ನನ್ನು ಅರ್ಥ ಮಾಡಿಕೊಂಡಿದ್ದಾರೆ ನನ್ನ ಎಲ್ಲಾ ಸಿನಿಮಾ ಕೆಲಸಗಳಿಗೂ ಕೂಡ ಸಪೋರ್ಟ್ ಮಾಡುತ್ತಾರೆ. ನಿಜಕ್ಕೂ ಕೂಡ ನಾನು ಅದೃಷ್ಟವಂತೆ ಆತನನ್ನು ಲೈಫ್ ಪಾರ್ಟ್ನರ್ ಆಗಿ ಪಡೆದಿದ್ದು ಎಂದು ಹೇಳಿದ್ದಾರೆ.

ಇದಿಷ್ಟು ಒಳ್ಳೆಯ ವಿಚಾರವಾದರೆ ಇದರ ನಡುವೆಯೇ ತಮ್ಮ ಪತಿಯ ವಿರುದ್ಧ ಕಿಡಿ ಕಾರಿದ್ದಾರೆ ಹೌದು ಶುಭಪುಂಜ ಹಾಗೂ ಶವಂತ್ ಅವರು ಮದುವೆಯಾಗಿ ಎರಡು ವರ್ಷವಾಗಿದೆ. ಆದರೂ ಕೂಡ ನಾವಿಬ್ಬರೂ ಇನ್ನು ಹನಿಮೂನ್ ಗೆ ಹೋಗಿಲ್ಲ ಈ ವಿಚಾರದ ಬಗ್ಗೆ ನನಗೆ ಬೇಸರವಿದೆ ಮದುವೆಯಾದ ಒಂದೇ ವಾರಕ್ಕೆ ನಾನು ಸಿಕ್ಕಾಪಟ್ಟೆ ಬ್ಯುಸಿ ಅದೇ ಸಿನಿಮಾ ಕೆಲಸದಲ್ಲಿ ನಿರತರಾಗಿದ್ದೆ. ಅತ್ತ ಕಡೆ ಶ್ರಮಂತ್ ಅವರು ಕೂಡ ಬಿಸಿನೆಸ್ ಮ್ಯಾನ್ ಹೀಗಾಗಿ ಆಗಿನಿಂದಲೂ ಕೂಡ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ನಾವಿಬ್ಬರೂ ಕೂಡ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳುವುದಕ್ಕೆ ಮತ್ತು ಏಕಾಂತದಲ್ಲಿ ಇರುವುದಕ್ಕೆ ಸಮಯ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಸಂದರ್ಶನಾಗಾರರು ಹನಿಮೂನ್ ಗೆ ಯಾವ ಜಾಗಕ್ಕೆ ಹೋಗಬೇಕು ಅಂತ ಅಂದುಕೊಂಡಿದ್ದೀರಾ ಎಂಬ ಪ್ರಶ್ನೆಯನ್ನು ಕೇಳುತ್ತಾರೆ.

ಈ ಪ್ರಶ್ನೆಗೆ ಉತ್ತರಿಸಿದ ಶುಭಪುಂಜ ಅವರು ನನಗೆ ಮಾಲ್ಡಿವ್ಸ್ ಎಂದರೆ ತುಂಬಾನೆ ಇಷ್ಟ ಹಾಗಾಗಿ ಶಮಂತ್ ಅನ್ನು ಹನಿಮೂನ್ ಗೆ ಮಾಲ್ಡಿವ್ಸ್ ಗೆ ಕರೆದುಕೊಂಡು ಹೋಗು ಅಂತ ಕೇಳಿದ್ದೇನೆ. ಆದರೆ ಆತ ಮಾತ್ರ ಕರ್ನಾಟಕದಲ್ಲಿಯೇ ಇರುವ ಸಿಂಪಲ್ ಪ್ಲೇಸ್ ಹುಡುಕುತ್ತಿದ್ದಾನೆ ಆದರೆ ನನಗೆ ಮಾಲ್ಡಿವ್ಸ್ ಗೆ ಹೋಗಬೇಕು ಎಂಬ ಆಸೆ ಇದೆ ಎಂದು ಹೇಳಿದ್ದಾರೆ. ನಟಿ ಶುಭಪುಂಜ ಅವರು ಸ್ವಲ್ಪವು ನಾಚಿಕೆ ಇಲ್ಲದೆ ನಿಸ್ಸಂಕೋಚವಾಗಿ ತಮ್ಮ ಹನಿಮೂನ್ ವಿಚಾರವನ್ನು ಮುಕ್ತವಾಗಿ ಮಾಧ್ಯಮ ಮುಂದೆ ಮಾತನಾಡಿದ್ದಾರೆ. ಈ ವಿಚಾರ ಕೇಳುತ್ತಿದ್ದ ಹಾಗೆ ಕೆಲವು ಅಭಿಮಾನಿಗಳು ಶಮಂತ್ ಅವರಿಗೆ ಆದಷ್ಟು ಬೇಗ ನಿಮ್ಮ ಹೆಂಡತಿಯನ್ನು ಹನಿಮೂನ್ ಗೆ ಕರೆದುಕೊಂಡು ಹೋಗಿ ಎಂದು ಬುದ್ಧಿವಾದ ಹೇಳುತ್ತಿದ್ದಾರೆ. ಮತ್ತು ಕೆಲವು ಅಭಿಮಾನಿಗಳು ತೀರಾ ವೈಯಕ್ತಿಕ ವಿಚಾರವನ್ನು ಮಾಧ್ಯಮದ ಮುಂದೆ ಪ್ರಚಾರ ಮಾಡುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ. ಶುಭಪುಂಜ ಅವರು ಮಾತನಾಡಿದ ವಿಡಿಯೋ ಈ ಕೆಳಗಿದೆ ನೋಡಿ

ದರ್ಶನ್ ಗೆ ಸಪೋರ್ಟ್ ಮಾಡಿದ್ರು ಎಂಬ ಒಂದೇ ಕಾರಣಕ್ಕೆ ಪತ್ರಕರ್ತ ಬಿ.ಗಣಪತಿ ಅವರನ್ನು ಮಾಧ್ಯಮದಿಂದ ಬ್ಯಾನ್ ಮಾಡಲಾಗಿದೆ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಬೇಸರ ಆಗುತ್ತೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ್ ಅವರನ್ನು ಕಳೆದ ಒಂದು ವರ್ಷದಿಂದಲೂ ಕೂಡ ಮಾಧ್ಯಮದಿಂದ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ದರ್ಶನ್ ಅವರನ್ನು ಬ್ಯಾನ್ ಮಾಡುತ್ತಿರುವುದು ಇದು ಮೊದಲನೇ ನಲ್ಲ ಕಳೆದ ನಾಲ್ಕೈದು ವರ್ಷಗಳ ಹಿಂದೆಯೇ ಒಂದು ಬಾರಿ ದರ್ಶನ್ ಅವರನ್ನು ಬ್ಯಾನ್ ಮಾಡಲಾಗಿತ್ತು. ಆದರೂ ಕೂಡ ಕಾಲ ಕಳೆದಂತೆ ಪತ್ರಕರ್ತರಿಗೆ ಮತ್ತು ಮಾಧ್ಯಮದವರಿಗೆ ತಮ್ಮ ತಪ್ಪಿನ ಅರಿವಾಗಿ ತದನಂತರ ದರ್ಶನ್ ಅವರಿಗೆ ಮೊದಲಿನ ಆದ್ಯತೆ ಸ್ಥಾನಮಾನ ಗೌರವವನ್ನು ನೀಡಿದರು. ಎಲ್ಲಾ ಸುಗಮವಾಗಿಯೇ ನಡೆಯುತ್ತಿತ್ತು ಆದರೆ ಕಳೆದ ವರ್ಷವಷ್ಟೇ ನಿರ್ಮಾಪಕ ಉಮಾಪತಿ ಹಾಗೂ ಅರುಣದೇವಿ ಕೇಸ್ ವಿಚಾರವಾಗಿ ದರ್ಶನವರು ಮತ್ತೊಮ್ಮೆ ಮಾಧ್ಯಮದವರ ವಿರುದ್ಧ ಮಾತನಾಡಿದರು ಎಂಬ ಕಾರಣಕ್ಕಾಗಿ ಇಡೀ ಮಾಧ್ಯಮ ಮಿತ್ರನು ಹಾಗೂ ಪತ್ರಕರ್ತರ ಎಲ್ಲರೂ ಕೂಡ ದರ್ಶನ್ ಅವರನ್ನು ಬ್ಯಾನ್ ಮಾಡಿದರು.

ಅಂದ ಹಾಗೆ ಪತ್ರಕರ್ತರು ಮತ್ತು ಮಾಧ್ಯಮದವರು ಅಂದರೆ ಎಲ್ಲರೂ ಕೂಡ ಒಂದೇ ರೀತಿಯಲ್ಲಿ ಇರುವುದಿಲ್ಲ ಒಬ್ಬೊಬ್ಬರು ಒಂದೊಂದು ಸ್ವಭಾವವನ್ನು ಒಳಗೊಂಡಿರುತ್ತಾರೆ ಅಷ್ಟೇ ಅಲ್ಲದೆ ಒಂದೊಂದು ಸಿದ್ಧಾಂತವನ್ನು ಇಟ್ಟುಕೊಂಡಿರುತ್ತಾರೆ ಅದರಂತೆ ನಡೆದುಕೊಳ್ಳುತ್ತಾರೆ. ಇದೇ ಮಾದರಿಯಲ್ಲಿ ಬಿ.ಗಣಪತಿ ಅವರು ಕೂಡ ತಮ್ಮ ಕರ್ತವ್ಯಕ್ಕೆ ಯಾವುದೇ ರೀತಿಯಾದಂತಹ ಚ್ಯೂತಿ ಬರಬಾರದು ಹಾಗೂ ನಾನು ಮಾಡುವಂತಹ ಕೆಲಸ ನನ್ನ ಮನಸ್ಸಾಕ್ಷಿ ಒಪ್ಪುವ ರೀತಿ ಇರಬೇಕು ಎಂಬ ಸಿದ್ದಾಂತವನ್ನು ಅಳವಡಿಸಿಕೊಂಡಿದ್ದರು. ಈ ಕಾರಣಕ್ಕಾಗಿ ಇಡೀ ಮಾಧ್ಯಮ ಮಿತ್ರರೆಲ್ಲರೂ ದರ್ಶನ್ ಅವರನ್ನು ಬ್ಯಾನ್ ಮಾಡಿದರು ಕೂಡ ದರ್ಶನ್ ಪರವಾಗಿ ನಿಂತ ಏಕೈಕ ವ್ಯಕ್ತಿ ಅಂದರೆ ಅದು ಬಿ.ಗಣಪತಿಯವರು ಮಾತ್ರ.

ಅಂದ ಹಾಗೆ ದರ್ಶನ್ ಗೆ ಇವರು ಸಪೋರ್ಟ್ ಮಾಡಿದ್ದಾರೆ ಎಂಬ ಮಾತ್ರಕ್ಕೆ ಇವರಿಬ್ಬರೂ ಆತ್ಮೀಯ ಸ್ನೇಹಿತರು ಅಥವಾ ಇವರಿಬ್ಬರಿಗೂ ನಂಟು ಇದೆ ಎಂಬ ಅರ್ಥವಲ್ಲ. ಬದಲಿಗೆ ಗಣಪತಿಯವರು ಇದ್ದ ವಿಚಾರವನ್ನು ಇದ್ದ ಹಾಗೆಯೇ ಹೇಳುತ್ತಾರೆ ಸುಳ್ಳು ಮೋಸ ಮಾಡಿ ಜನರ ದಾರಿ ತಪ್ಪಿಸುವ ದಿಕ್ಕನ್ನು ಇವರು ಮಾಡುವುದಿಲ್ಲ. ಈ ಕಾರಣಕ್ಕಾಗಿ ದರ್ಶನ್ ಅವರ ನಿಜ ಸ್ವಭಾವವನ್ನು ಜನರಿಗೆ ತಿಳಿಸಿ ದರ್ಶನ್ ಅವರದು ಏನು ತಪ್ಪು ಇಲ್ಲ ಎಂಬ ಮಾಹಿತಿಯನ್ನು ಅವರದ್ದೇ ಆದಂತಹ ಒಂದು ಯುಟ್ಯೂಬ್ ಚಾನೆಲ್ ನಲ್ಲಿ ಹಾಕುತ್ತಾರೆ. ಈ ವಿಡಿಯೋ ನೋಡಿದಂತಹ ಮಾಧ್ಯಮ ಮಿತ್ರರು ಹಾಗೂ ಗಣಪತಿ ಅವರ ಆತ್ಮೀಯ ಸ್ನೇಹಿತರು ಹಾಗೂ ಪತ್ರಕರ್ತರ ಎಲ್ಲರೂ ಕೂಡ ಇದೀಗ ದರ್ಶನ್ ಗೆ ಸಪೋರ್ಟ್ ಮಾಡಿದ್ರು ಎಂಬ ಕಾರಣಕ್ಕಾಗಿ ಗಣಪತಿ ವಿರುದ್ಧವೂ ಕೂಡ ಗುಡುಗಿದ್ದಾರೆ.

ಅಷ್ಟೇ ಅಲ್ಲದೆ ಮಾಧ್ಯಮದಿಂದಲೂ ಕೂಡ ಬಿ ಗಣಪತಿ ಅವರನ್ನು ಬ್ಯಾನ್ ಮಾಡಲಾಗಿದೆ ನಿಜಕ್ಕೂ ಕೂಡ ಇದು ಒಂದು ವಿಷಾದಕರವಾದ ವಿಚಾರವೇ. ಏಕೆಂದರೆ ನಟನನ್ನು ಬ್ಯಾನ್ ಮಾಡುವುದರಲ್ಲಿ ಒಂದು ಅರ್ಥವಿದೆ ಆದರೆ ತಮ್ಮ ಜೊತೆಗೆ ಕೆಲಸ ಮಾಡುತ್ತಿದ್ದಂತಹ ಸಹೋದ್ಯೋಗಿಯನ್ನೇ ಬ್ಯಾನ್ ಮಾಡಿದ್ದಾರೆ ಅಂದರೆ ಇಂದಿನ ಮಾಧ್ಯಮ ಯಾವ ಮಟ್ಟಕ್ಕೆ ಹೋಗಿ ತಲುಪಿದೆ ಎಂಬುದನ್ನು ನೀವೇ ಊಹೆ ಮಾಡಿ. ಅಷ್ಟಕ್ಕೂ ಗಣಪತಿ ಅವರು ಯಾವ ವಿಚಾರಕ್ಕಾಗಿ ದರ್ಶನ್ ಅವರಿಗೆ ಸಪೋರ್ಟ್ ಮಾಡಿದರು ಇದರಿಂದ ಗಣಪತಿ ಅವರು ಏನೆಲ್ಲಾ ಸಂಕಷ್ಟವನ್ನು ಅನುಭವಿಸಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಗಣಪತಿಯವರೇ ತಮ್ಮ ಯುಟ್ಯೂಬ್ ಚಾನೆಲ್ ಒಂದರಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಕೆಳಗೆ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮಾಡಿ.