Sunday, May 28, 2023
HomeEntertainmentಸಿನಿಮಾಗಾಗಿ ಮನೆ ಆಸ್ತಿ ಎಲ್ಲವನ್ನು ಕಳೆದುಕೊಂಡೆ ಎಂದು ವೇದಿಕೆಯ ಮೇಲೆ ಕಣ್ಣೀರು ಇಟ್ಟ ರವಿಚಂದ್ರನ್ ಸ್ಥಿತಿ...

ಸಿನಿಮಾಗಾಗಿ ಮನೆ ಆಸ್ತಿ ಎಲ್ಲವನ್ನು ಕಳೆದುಕೊಂಡೆ ಎಂದು ವೇದಿಕೆಯ ಮೇಲೆ ಕಣ್ಣೀರು ಇಟ್ಟ ರವಿಚಂದ್ರನ್ ಸ್ಥಿತಿ ನೋಡಿ ದರ್ಶನ್ ಮಾಡಿದ್ದೇನು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರವಿಚಂದ್ರನ್ ಅವರಿಗಿಂತ ಅದ್ದೂರಿಯಾಗಿ ಸಿನಿಮಾ ಮೇಕಿಂಗ್ ಮಾಡಿದ ವ್ಯಕ್ತಿ ಮತ್ತೋರ್ವ ಇಲ್ಲ ಅಂತಾನೆ ಹೇಳಬಹುದು. ಇತ್ತೀಚಿನ ದಿನದಲ್ಲಿ ಸಿನಿಮಾದ ಬಜೆಟ್ ಕೋಟಿ ಕೋಟಿ ರೂಪಾಯಿ ಇರಬಹುದು ಆದರೆ ಸುಮಾರು ಮೂರು ದಶಕಗಳ ಹಿಂದೆ ರವಿಚಂದ್ರನ್ ಅವರನ್ನು ಹೊರತು ಪಡಿಸಿದರೆ ಯಾರು ಕೂಡ ಹಣವನ್ನು ನೀರಿನಲ್ಲಿ ಖರ್ಚು ಮಾಡಿ ಸಿನಿಮಾವನ್ನು ತೆಗೆಯುತ್ತಿರಲಿಲ್ಲ.

ಅಷ್ಟು ಅದ್ದೂರಿಯಾಗಿ ಸಿನಿಮಾವನ್ನು ಇವರು ತೆಗೆಯುತ್ತಿದ್ದರು ಇದಕ್ಕೆ ಸಾಕ್ಷಿ ಎಂದರೆ ಶಾಂತಿ ಕ್ರಾಂತಿ, ಏಕಾಂಗಿ, ಮಲ್ಲ ಹೀಗೆ ಸಾಕಷ್ಟು ಸಿನಿಮಾಗಳು ಇವೆ. ಆದರೆ ಇಂದು ನಟ ರವಿ ಚಂದ್ರನ್ ಅವರು ಸಿನಿಮಾಗಾಗಿ ಇರೋಬರ ಆಸ್ತಿಯನ್ನೆಲ್ಲ ಮಾರಿಕೊಂಡು ಯಾವ ಸ್ಥಿತಿಗೆ ಬಂದಿದ್ದಾರೆ ಅಂದರೆ ನಿಜಕ್ಕೂ ಬೇಸರವಾಗುತ್ತದೆ. ಹೌದು ಒಂದು ಕಾಲದಲ್ಲಿ ರವಿಚಂದ್ರನ್ ಅವರ ಕೈಕೆಳಗೆ ದಿನ ಕೂಲಿ ಮಾಡುತ್ತಿದ್ದಂತಹ ವ್ಯಕ್ತಿ ಇಂದು ರವಿಚಂದ್ರನ್ ಅವರನ್ನು ಕರೆದು ನಮ್ಮ ಸಿನಿಮಾದಲ್ಲಿ ಆಕ್ಟ್ ಮಾಡಿ ಕೋಟಿ ಸಂಭಾವನೆ ನೀಡುತ್ತೇನೆ ಅಂತ ಹೇಳಿದ್ದರಂತೆ.

ಆ ಮಟ್ಟಕ್ಕೆ ರವಿಚಂದ್ರನ್ ತಮ್ಮ ಸುತ್ತಮುತ್ತ ಇರುವಂತಹ ಜನರನ್ನು ಬೆಳೆಸಿದ್ದಾರೆ ಎಲ್ಲರನ್ನೂ ಬೆಳೆಸುವ ಬರದಲ್ಲಿ ತಮ್ಮನ್ನು ತಾವು ಕಳೆದುಕೊಂಡರು ಅಂತ ಹೇಳಿದರು ಕೂಡ ತಪ್ಪಾಗಲಾರದು. ಇತ್ತೀಚಿನ ದಿನದಲ್ಲಿ ರವಿಚಂದ್ರನ್ ಅವರ ಯಾವ ಸಿನಿಮಾ ಕೂಡ ಹೆಚ್ಚಾಗಿ ಸದ್ದು ಮಾಡುತ್ತಿಲ್ಲ ಥಿಯೇಟರ್ ನಲ್ಲಿ ಓಡುತ್ತಿಲ್ಲ ಜನಗಳು ಬಂದು ರವಿಚಂದ್ರನ್ ಅವರ ಸಿನಿಮಾ ವನ್ನು ನೋಡಿತ್ತಿಲ್ಲ. ಈ ಕಾರಣಕ್ಕಾಗಿ ಅವರು ಸಿನಿಮಾಗಾಗಿ ವಿನಿಯೋಗ ಮಾಡಿದ ಹಣ ಅವರ ಕೈ ತಲುಪುತ್ತಿಲ್ಲ ಹಾಗಾಗಿ ಒಂದೊಂದೇ ಆಸ್ತಿಯನ್ನು ಮಾರಿಕೊಂಡು ಬಂದಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ರವಿಚಂದ್ರನ್ ಅವರಿಗೆ ಸ್ವಂತ ಮನೆಯನ್ನು ಬಿಟ್ಟರೆ ಬೇರೆ ಯಾವ ಆಸ್ತಿಯೂ ಕೂಡ ಇಲ್ಲ ಎಲ್ಲವನ್ನು ಕೂಡ ಮಾರಿಕೊಂಡಿದ್ದಾರೆ. ಕಳೆದ ವಾರ ತಾವು ವಾಸವಾಗಿದಂತಹ ರಾಜಾಜಿನಗರ ಮನೆಯನ್ನು ಕೂಡ ಖಾಲಿ ಮಾಡಿದ್ದಾರೆ ಹೌದು ಇದೀಗ ರವಿಚಂದ್ರನ್ ಅವರು ಬೇರೆಡೆಗೆ ಹೋಗಿದ್ದಾರೆ. ಮನೆ ಮಾರಿಕೊಂಡ ವಿಚಾರ ಹೆಚ್ಚು ವೈರಲ್ ಆಗಿದ್ದು ಇದು ರವಿಚಂದ್ರನ್ ಅವರ ಮನಸ್ಸಿಗೆ ಇನ್ನಷ್ಟು ನೋವನ್ನು ಉಂಟುಮಾಡಿದೆ. ಈ ವಿಚಾರವಾಗಿ ಜೀ ಕನ್ನಡ ವೇದಿಕೆಯ ಮೇಲೆ ಮಾತನಾಡುತ್ತಾ ಭಾವುಕರಾಗಿದ್ದಾರೆ ನಾನು ಇಲ್ಲಿಯವರೆಗೂ ಏನು ಸಂಪಾದನೆ ಮಾಡಿಲ್ಲ.

30 ವರ್ಷದಿಂದಲೂ ಕೂಡ ಎಲ್ಲವನ್ನು ಕಳೆದುಕೊಂಡೆ ಬಂದಿದ್ದೇನೆ ಇದೆಲ್ಲ ಮಾಡಿದ್ದು ಜನರ ಪ್ರೀತಿಗಾಗಿ ಜನರ ಮನಸ್ಸನ್ನು ಗೆಲ್ಲುವುದಕ್ಕಾಗಿ ಅವರಿಗೆ ಒಳ್ಳೆಯ ಸಿನಿಮಾಗಳನ್ನು ನೀಡಬೇಕು ಮನರಂಜನೆಯನ್ನು ನೀಡಬೇಕು ಅಂತ ನಾನು ಎಲ್ಲಾ ಅಸ್ತಿಪಾಸ್ತಿಯನ್ನು ಕಳೆದುಕೊಂಡಿದ್ದೇನೆ. ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ದರ್ಶನ್ ಅವರು ನಟ ರವಿಚಂದ್ರನ್ ಅವರಿಗೆ ಸಾಥ್ ನೀಡಲು ಮುಂದಾಗಿದ್ದಾರೆ.

ಹೌದು ನಿಮಗೆ ತಿಳಿದಿರುವಂತೆ ದರ್ಶನ್ ಹಾಗೂ ರವಿಚಂದ್ರನ್ ಅವರು ಬಹಳನೆ ಆತ್ಮೀಯರು ಹಾಗಾಗಿ ರವಿಚಂದ್ರನ್ ಅವರು ತಮ್ಮ ಕಳೆದುಕೊಂಡಿದ್ದರ ಬಗ್ಗೆ ವೇದಿಕೆಯ ಮೇಲೆ ಕಣ್ಣೀರು ಹಾಕಿದ ವಿಡಿಯೋ ನೋಡಿ ಇದೀಗ ರವಿಚಂದ್ರನ್ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಹೌದು ಅಷ್ಟಕ್ಕೂ ದರ್ಶನ್ ಮಾಡುತ್ತಿರುವ ಸಹಾಯ ಏನೆಂದರೆ ನಾವು ಕನ್ನಡ ಚಿತ್ರರಂಗದವರು ಎಲ್ಲರೂ ಒಗ್ಗಟ್ಟಾಗಿ ಇರುತ್ತೇವೆ ಹಾಗಾಗಿ ರವಿಚಂದ್ರನ ಅವರಿಗೆ ಬಂದಂತಹ ಕಷ್ಟ ನಮ್ಮೆಲ್ಲರ ಕಷ್ಟವಾಗಿದೆ ಹಾಗಾಗಿ ನಾವೆಲ್ಲರೂ ಸಹ ಅವರಿಗೆ ಕಷ್ಟದಲ್ಲಿ ಹೆಗಲು ಕೊಡುತ್ತೇವೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಆರ್ಥಿಕ ವಿಚಾರವಾಗಿಯೂ ಕೂಡ ನಾವು ಅವರಿಗೆ ಸಹಾಯ ಮಾಡುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ. ಸದ್ಯಕ್ಕೆ ದರ್ಶನ್ ಅವರು ಹೇಳಿಕೆ ಕೊಟ್ಟಂತಹ ಈ ಮಾತು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ದಾನ ಧರ್ಮ ಮಾಡುವುದರಲ್ಲಿ ದರ್ಶನ್ ಅವರು ಕೂಡ ಒಂದು ಕೈ ಮೇಲೆಯೇ ಇದ್ದರೆ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ರವಿಚಂದ್ರನ್ ಅವರ ಎಲ್ಲಾ ಕಷ್ಟಕ್ಕೂ ಇದೀಗ ಪರಿಹಾರ ದೊರೆಯಲಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ‌.