Home Blog Page 300

ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ಅನ್ನು ಚಿರು ಪರವಾಗಿ ಪಡೆದ ಮೇಘನಾ ರಾಜ್ ಚಿರು ಫೋಟೊ ಮುಂದೆ ಅವಾರ್ಡ್ ಇಟ್ಟು ಹೇಳಿದ್ದೇನು ಗೊತ್ತಾ.? ಈ ಮಾತು ಕೇಳಿದ್ರೆ ನಿಜಕ್ಕೂ ಕಣ್ಣು ವದ್ದೆಯಾಗುತ್ತೆ.

ನಿನ್ನೆಯಷ್ಟೇ ಬೆಂಗಳೂರಿನಲ್ಲಿ 7ನೇ ಫೀಲಂ ಫೇರ್ ಫೆಸ್ಟಿವಲ್ ಅವಾರ್ಡ್ ಫಂಕ್ಷನ್ ಏರ್ಪಡಿಸಲಾಗಿದೆ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಒಂದು ಫಿಲಂ ಫೇರ್ ಫೆಸ್ಟಿವಲ್ ಅವಾರ್ಡ್ ಫಂಕ್ಷನ್ ಅನ್ನು ಏರ್ಪಡಿಸಿರುವುದು. ಈ ಅವಾರ್ಡ್ ಫಂಕ್ಷನ್ ಗೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಹಾಗೂ ಕನ್ನಡ ಸಿನಿಮಾರಂಗದ ನಟ ನಟಿಯರು ಪಾಲ್ಗೊಂಡಿದ್ದಾರೆ. ಈ ಅವಾರ್ಡ್ ಫಂಕ್ಷನ್ ಗೆ ನಟಿ ಮೇಘನಾ ರಾಜ್ ಅವರು ಕೂಡ ಬಂದಿದ್ದಾರೆ ಗೋಲ್ಡನ್ ಕಲರ್ ಡ್ರೆಸ್ ನಲ್ಲಿ ಮೇಘನಾ ರಾಜ್ ಅವರು ದೇವತೆಯಂತೆ ಕಂಗೊಳಿಸುತ್ತಿದ್ದಾರೆ. ಈ ಫಿಲಂ ಫೆಸ್ಟಿವಲ್ ನಲ್ಲಿ ಸಿನಿಮಾದಲ್ಲಿ ಅತ್ಯುತ್ತಮವಾಗಿ ನಟನೆ ಮಾಡಿದಂತಹ ನಾಯಕ ನಟರಿಗೂ, ನಟಿಯರಿಗೂ, ನಿರ್ದೇಶಕರಿಗೂ ಹಾಗೂ ಸಂಗೀತ ನಿರ್ದೇಶಕರು ಸೇರಿದಂತೆ ಹಲವಾರು ತಂತ್ರಜ್ಞರಿಗೆ ಅವಾರ್ಡ್ ಅನ್ನು ಕೊಡಲಾಗುತ್ತದೆ.

ಅದೇ ರೀತಿಯಲ್ಲಿ ಲೈಫ್ ಟೈಮ್ ಅಚೀವ್ಮೆಂಟ್ ಎಂಬ ಪ್ರಶಸ್ತಿಯನ್ನು ಚಿರಂಜೀವಿ ಸರ್ಜಾ ಅವರಿಗೆ ನೀಡಿದ್ದಾರೆ ಈ ಒಂದು ಅವಾರ್ಡ್ ಅನ್ನು ಸ್ವೀಕರಿಸುವಂತಹ ಅದೃಷ್ಟ ಚಿರಂಜೀವಿ ಸರ್ಜಾ ಅವರಿಗೆ ಇಲ್ಲ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ವರ್ಷಗಳ ಹಿಂದೆ ಚಿರಂಜೀವಿ ಸರ್ಜಾ ಅವರು ನಮ್ಮೆಲ್ಲರನ್ನು ಬಿಟ್ಟು ಹೋದ ವಿಚಾರ ನಿಮಗೆ ತಿಳಿದೇ ಇದೆ. ಹಾಗಾಗಿ ಈ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ಅನ್ನು ಇದೀಗ ಚಿರಂಜೀವಿ ಸರ್ಜಾ ಅವರ ಧರ್ಮಪತ್ನಿ ಆದಂತಹ ಮೇಘನಾ ರಾಜ್ ಅವರು ಸ್ವೀಕರಿಸಿದ್ದಾರೆ.

ಚಿರಂಜೀವಿ ಸರ್ಜಾ ಅವರು ನಾಯಕ ನಟರಾಗಿ ತೆರೆಯ ಮೇಲೆ ನಟನೆ ಮಾಡುವುದಕ್ಕಿಂತ ಮುಂಚೆ ಅರ್ಜುನ್ ಸರ್ಜಾ ಅವರ ಜೊತೆ ಹಾಗೂ ಅವರ ತಮ್ಮ ಕಿಶೋರ್ ಸರ್ಜಾ ಅವರ ಜೊತೆ ನಾಲ್ಕೈದು ವರ್ಷ ಜೂನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ತದನಂತರ 2009ರಲ್ಲಿ ತೆರೆಕಂಡಂತಹ ವಾಯುಪುತ್ರ ಸಿನಿಮಾದ ಮೂಲಕ ನಾಯಕ ನಟರಾಗಿ ಗುರುತಿಸಿಕೊಂಡರು. ಅಲ್ಲಿಂದ ಸುಮಾರು 20 ಸಿನಿಮಾದಲ್ಲಿ ನಟರಾಗಿ ಅಭಿನಯ ಮಾಡಿದ್ದಾರೆ ತಮ್ಮ ಜೀವನದುದ್ದಕ್ಕೂ ಸಿನಿಮಾಗಾಗಿಯೇ ಕೊಡುಗೆಯನ್ನು ನೀಡಿದ ಕಾರಣ ಚಿರಂಜೀವಿ ಸರ್ಜಾ ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಲೈಫ್ ಟೈಮ್ ಅಚೀವ್ಮೆಂಟ್ ಎಂಬ ಬಿರುದನ್ನು ನೀಡಿದ್ದಾರೆ.

ಈ ಅವಾರ್ಡ್ ಫಂಕ್ಷನ್ ನಲ್ಲಿ ಮಾತನಾಡಿದಂತಹ ಮೇಘನಾ ರಾಜ್ ಅವರು ಚಿರು ಇಲಿಯವರೆಗೂ ಯಾವುದೇ ಪ್ರಶಸ್ತಿಯನ್ನು ಸ್ವೀಕಾರ ಮಾಡಿರಲಿಲ್ಲ ಈ ಬಾರಿ ಅವರಿಗಾಗಿ ಪ್ರಶಸ್ತಿಯನ್ನು ನಾನು ಸ್ವೀಕರಿಸಿದ್ದೇನೆ. ಒಂದು ವೇಳೆ ಚಿರು ಬದುಕಿದ್ದರೆ ಖಂಡಿತವಾಗಿಯೂ ಕೂಡ ಎಷ್ಟು ಖುಷಿ ಪಡುತ್ತಿದ್ದರು ಎಂದು ವೇದಿಕೆಯ ಮೇಲೆ ಭಾವುಕರಾಗಿದ್ದಾರೆ. ಅಷ್ಟೇ ಅಲ್ಲದೆ ಚಿರು ಪರವಾಗಿ ಪಡೆದುಕೊಂಡಂತಹ ಪ್ರಶಸ್ತಿಯನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿ “ನೋಡು ಚಿರು ಫೈನಲ್ಲಿ ನಿನ್ನ ಬ್ಲ್ಯಾಕ್ ಲೇಡಿ ಮನೆಯಲ್ಲಿದ್ದಾಳೆ. ನನಗೆ ಸರಿಯಾಗಿ ಕಾಣಿಸುತ್ತಿದೆ ಒಂದೊಮ್ಮೆ ನೀವು ಈ ಅವಾರ್ಡ್ ಸ್ವೀಕರಿಸಿದರೇ ನಿಮ್ಮ ರಿಯಾಕ್ಷನ್, ಮುಖದ ಭಾವ ಏನಿರುತ್ತಿತ್ತು ಎಂಬುದನ್ನು ನಾನು ಈಗಲೂ ಹೇಳಬಲ್ಲೆ. ಇಂತ ಇನ್ನಷ್ಟು ಸಾಧನೆಗಳು ನಿಮ್ಮದಾಗಲಿ ಎಂದು ಮೇಘನಾ ಚಿರುಗಾಗಿ ಅವಾರ್ಡ್ ಜೊತೆ ಪೋಟೋ ಶೇರ್ ಮಾಡಿ ಶುಭ ಹಾರೈಸಿದ್ದಾರೆ.

ಚಿರು ಚಿತ್ರರಂಗದಲ್ಲಿ ಸಾಗಿ ಬಂದ ಹಾದಿಯನ್ನು ಸ್ಮರಿಸಿ ಫಿಲ್ಮ್ ಫೇಸ್ಟ್ ನಲ್ಲಿ ಚಿರುಗೆ ಜೀವಮಾನದ ಸಾಧನೆ ಅವಾರ್ಡ್ ನೀಡಲಾಗಿದೆ ಸದ್ಯಕ್ಕೆ ಮೇಘನಾ ರಾಜ್ ಅವರು ತಮ್ಮ instagram ಖಾತೆಯಲ್ಲಿ ಶೇರ್ ಮಾಡಿಕೊಂಡಿರುವಂತಹ ಈ ಫೋಟೋ ನೋಡಿ ಅಭಿಮಾನಿಗಳು ಚಿರು ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೂ ಮೇಘನಾ ರಾಜ್ ಅವರಿಗೆ ಆದಷ್ಟು ಅನ್ಯಾಯ ಮತ್ತು ಯಾರಿಗೂ ಆಗಿಲ್ಲ ಅಂತಾನೆ ಹೇಳಬಹುದು, ಚಿರು ಚಿರು ಇಲ್ಲದೆ ಇವರ ಜೀವನವೇ ಒಂದು ರೀತಿಯಲ್ಲಿ ನಶ್ವರವಾದಂತಿದೆ ಆದರೂ ಕೂಡ ಮಗುವಿನ ಮುಖ ನೋಡಿಕೊಂಡು ಇನ್ನೂ ಕೂಡ ಜೀವನ ಸಾಗಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಇದೇ ಮೊದಲ ಬಾರಿಗೆ ಸ್ಟೇಜ್ ಮೇಲೆ ಕಣ್ಣೀರು ಹಾಕಿದ ರವಿಚಂದ್ರನ್ ಇವರ ಮಾತು ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ. ರವಿಚಂದ್ರನ್ ನಾ ಈ ಸ್ಥಿತಿಗೆ ಕಾರಣವೇನು ಗೊತ್ತಾ.?

ಕ್ರೇಜಿಸ್ಟಾರ್ ರವಿಚಂದ್ರನ್ ಒಂದು ಕಾಲದಲ್ಲಿ ಅದ್ದೂರಿಯಾಗಿ ಬೆಳೆದವರು ಐಷಾರಾಮಿ ಜೀವನವನ್ನು ಸಾಗಿಸಿದವರು ಕೈಗೊಂದು ಆಳು ಕಾಲಿಗೊಂದು ಆಳು ಇಟ್ಟುಕೊಂಡಿದ್ದವರು. ಇನ್ನು ರವಿಚಂದ್ರನ್ ಅವರು ಅರ್ಧದಲ್ಲಿ ಶ್ರೀಮಂತರಾದ ಅವರ ವ್ಯಕ್ತಿಯಲ್ಲ ಹುಟ್ಟುತ್ತಾಗಲೇ ಆಗರ್ಭ ಶ್ರೀಮಂತರು ಚಿನ್ನದ ಸ್ಪೂನ್ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದಂತಹ ವ್ಯಕ್ತಿ ಅಂತ ಹೇಳಿದರು ಕೂಡ ತಪ್ಪಾಗಲಾರದು. ರವಿಚಂದ್ರನ್ ಅವರ ತಂದೆ ವೀರ ಸ್ವಾಮಿಯವರು ಖ್ಯಾತ ಪ್ರೊಡ್ಯೂಸರ್ ಈಶ್ವರಿ ಎಂಬ ಪ್ರೊಡಕ್ಷನ್ಸ್ ಮೂಲಕ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಂಡವಾಳವನ್ನು ಹೂಡಿಕೆ ಮಾಡಿ ಅಪಾರ ಆಸ್ತಿಯನ್ನು ಸಂಪಾದನೆ ಮಾಡಿದರು.

ಆದರೆ ರವಿಚಂದ್ರನ್ ಅವರು ಮಾತ್ರ ಆಸ್ತಿಯನ್ನು ಸಂಪಾದನೆ ಮಾಡುವ ಗುರಿಯನ್ನು ಹೊಂದಿರಲಿಲ್ಲ ಬದಲಿಗೆ ಸಿನಿಮಾವನ್ನು ಅದ್ದೂರಿ ತನದಿಂದ ತೋರಿಸಬೇಕು ಜನರಿಗೆ ಮನರಂಜನೆಯನ್ನು ನೀಡಬೇಕು ಎಂಬ ಆಸೆ ಕನಸನ್ನು ಮಾತ್ರ ಒತ್ತಿದ್ದರು. ಈ ಕಾರಣಕ್ಕಾಗಿಯೇ ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ, ಮಲ್ಲ, ಏಕಾಂಗಿ ಈ ರೀತಿ ಅದ್ದೂರಿ ಮೇಕಿಂಗ್ ಇರುವಂತಹ ಸಿನಿಮಾಗಳನ್ನು ತೆಗೆಯುತ್ತಾರೆ. ಆದರೆ ಈ ಸಿನಿಮಾಗಳು ಒಳ್ಳೆಯ ಹೆಸರನ್ನು ಪಡೆದರು ಕೂಡ ಬಾಕ್ಸ್ ಆಫೀಸ್ ನಲ್ಲಿ ಮಾತ್ರ ಹೆಚ್ಚು ಕಲೆಕ್ಷನ್ ಮಾಡಲಿಲ್ಲ ಕೇವಲ ಇದಿಷ್ಟು ಮಾತ್ರವಲ್ಲದೆ ರವಿಚಂದ್ರನ್ ರವರು ಇಲ್ಲಿಯವರೆಗೂ ತೆಗೆದಂತ ಎಲ್ಲಾ ಸಿನಿಮಾಗಳಲ್ಲೂ ಕೂಡ ಕೋಟಿ ಕೋಟಿ ಖರ್ಚು ಮಾಡಿದ್ದಾರೆ.

ಸಾಮಾನ್ಯವಾಗಿ ಯಾವುದೇ ನಟ ಆಗಿರಬಹುದು ನಿರ್ಮಾಪಕ ಆಗಿರಬಹುದು ಅಥವಾ ನಿರ್ದೇಶಕ ಆಗಿರಬಹುದು ಸಿನಿಮಾವನ್ನು ಕೈಗೆತ್ತಿಕೊಂಡರೆ ಸಿನಿಮಾ ಚೆನ್ನಾಗಿ ಮೂಡಿ ಬರಬೇಕು ಇದರಿಂದ ಜನರಿಗೆ ಮನರಂಜನೆ ನೀಡಬೇಕು ಅದಕ್ಕಿಂತಲೂ ಹೆಚ್ಚಾಗಿ ಲಾಭ ದೊರೆಯಬೇಕು ಎಂಬ ದೃಷ್ಟಿಯಿಂದ ಸಿನಿಮಾವನ್ನು ತೆಗೆಯುತ್ತಾರೆ. ಆದರೆ ರವಿಚಂದ್ರನ್ ರವರು ಮಾತ್ರ ಎಂದಿಗೂ ಕೂಡ ಈ ಸಿನಿಮಾದಿಂದ ನಾನು ಕೋಟ್ಯಾಧಿಪತಿ ಆಗಬೇಕು, ಈ ಸಿನಿಮಾದಿಂದ ನನಗೆ ಹೆಚ್ಚು ಲಾಭ ಸಿಗಬೇಕು ಅಂತ ಬಯಸುತ್ತಿರಲಿಲ್ಲವಂತೆ. ಬದಲಿಗೆ ಈ ಸಿನಿಮಾದಿಂದ ಹೆಚ್ಚು ಜನರಿಗೆ ನಾನು ಇನ್ನೂ ಹತ್ತಿರವಾಗಬೇಕು ಅವರಿಗೆ ಮನರಂಜನೆ ದೊರೆಯಬೇಕು ಎಂಬ ಆಸೆಯನ್ನು ಹೊಂದಿದ್ದರಂತೆ.

ಈ ಕಾರಣಕ್ಕಾಗಿಯೇ ರವಿಚಂದ್ರನ್ ಅವರು ತಮ್ಮ ಎಲ್ಲಾ ಆಸ್ತಿಯನ್ನು ಮಾರಿಕೊಂಡು ಎಲ್ಲಾ ಹಣವನ್ನು ಕೂಡ ಸಿನಿಮಾಗಾಗಿಯೇ ಮೀಸಲಿಟ್ಟಿದ್ದಾರೆ. ಆದರೆ ಅದೃಷ್ಟ ಎಂಬುದು ಇವರ ಕೈಹಿಡಿಯಲಿಲ್ಲ ಅಂತಾನೇ ಹೇಳಬಹುದು ಯಾವ ಸಿನಿಮಾದಿಂದಲೂ ಕೂಡ ಇವರಿಗೆ ಲಾಭ ಎಂಬುದು ದೊರೆಯುವುದಿಲ್ಲ. ಇತ್ತೀಚಿಗಷ್ಟೇ ತಾವು ವಾಸವಾಗಿದ್ದಂತಹ ಮನೆಯನ್ನು ಕೂಡ ಬಿಟ್ಟು ಇದೀಗ ಬೇರೆಡೆಗೆ ಹೋಗಿದ್ದಾರೆ. ಒಂದು ಕಾಲದಲ್ಲಿ ಕೋಟಿ ಕೋಟಿ ಸಂಪತ್ತಿನ ಒಡೆಯ ಆಗಿದ್ದಂತಹ ರವಿಚಂದ್ರನ್ ಇದೀಗ ಸಾಲದಲ್ಲಿದ್ದಾರೆ.

ಹೌದು ನೀವು ಇದನ್ನು ನಂಬುತ್ತಿರೋ ಇಲ್ಲವೋ ಗೊತ್ತಿಲ್ಲ ರವಿಚಂದ್ರನ್ ಅವರ ಕೈಕೆಳಗೆ ದಿನಗೂಲಿ ಮಾಡುತ್ತಿದ್ದಂತಹ ಕೆಲಸಗಾರರೊಬ್ಬ ಇದೀಗ ರವಿಚಂದ್ರನ್ ಅವರಿಗೆ ಒಂದುವರೆ ಕೋಟಿ ರೂಪಾಯಿ ನೀಡಿ ತಮ್ಮ ಸಿನಿಮಾದಲ್ಲಿ ನಟನೆ ಮಾಡಲು ಆಫರ್ ಕೊಟ್ಟರಂತೆ. ಇದನ್ನು ಹೇಳಿಕೊಂಡಂತಹ ರವಿಚಂದ್ರನ್ ನನ್ನ ಕೈ ಕೆಳಗೆ ಇದ್ದಂತಹ ಎಲ್ಲಾ ವ್ಯಕ್ತಿಗಳು ಕೂಡ ಇದೀಗ ಬೃಹದಾಕಾರವಾಗಿ ಬೆಳೆದಿದ್ದಾರೆ ಎಂದರೆ ನನಗೆ ಹೆಮ್ಮೆ ಇದೆ ಅಂದಿದ್ದಾರೆ. ನಾನು ಮನಸ್ಸು ಮಾಡಿದ್ರೆ ಕಂಠೀರವ ಸ್ಟುಡಿಯೋ ಪಕ್ಕದಲ್ಲಿಯೇ ನೂರಾರು ಎಕರೆ ಜಮೀನು ಖರೀದಿ ಮಾಡುತ್ತಿದ್ದೆ ಆದರೆ ನಾನು ಎಂದಿಗೂ ಕೂಡ ಆಸ್ತಿಗಾಗಿ ಆಸೆ ಪಟ್ಟವನಲ್ಲ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ.

ರವಿಚಂದ್ರನ್ ರವರು ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಮನೆ ಖಾಲಿ ಮಾಡಿದ್ದರ ಬಗ್ಗೆ ಗಾಂಧಿನಗರದಲ್ಲಿ ವಿಧವಿಧವಾಗಿ ಮಾತನಾಡುತ್ತಿದ್ದಾರಂತೆ. ಈ ವಿಚಾರಗಳನ್ನೆಲ್ಲ ಕೇಳಿಸಿಕೊಂಡ ರವಿಚಂದ್ರನ್ ಅವರು ಬೇಸರಗೊಂಡು ಇದೀಗ ಡ್ರಾಮಾ ಜೂನಿಯರ್ಸ್ ವೇದಿಕೆಯ ಮೇಲೆ ಭಾವುಕರಾಗಿ ತಮ್ಮ ಮನದಾಳದ ಮಾತುಗಳನ್ನು ಆಡುವ ಮೂಲಕ ಕಣ್ಣೀರು ಹಾಕಿದ್ದಾರೆ. ಆ ವಿಡಿಯೋ ಈ ಕೆಳಗಿನ ನೋಡಿ ಇದನ್ನು ನೋಡಿ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಜನ ಮೆಚ್ಚಿದ ನಾಯಕಿ ಅವಾರ್ಡ್ ಪಡೆದ ನಿವೇದಿತಾ ಗೌಡ, ಅವಾರ್ಡ್ ಪಡೆದ ನಂತರ ವೇದಿಕೆಯ ಮೇಲೆ ಕಣ್ಣೀರು ಹಾಕಿದ್ದಾರೆ ಯಾಕೆ ಗೊತ್ತಾ.?

ಪ್ರತಿ ವರ್ಷವೂ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅನುಬಂಧ ಅವಾರ್ಡ್ ಅನ್ನು ನೀಡಲಾಗುತ್ತದೆ ಅಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುವಂತಹ ಧಾರವಾಹಿ ಆಗಿರಬಹುದು ಕಿರುತೆರೆ ಆಗಿರಬಹುದು ಅಥವಾ ರಿಯಲಿಟಿ ಶೋ ಆಗಿರಬಹುದು ಇನ್ನಿತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಹ ನಟ ನಟಿಯರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಗೌರವಾನ್ವಿತವಾದಂತಹ ಉಡುಗೊರೆ ಹಾಗೂ ಅವಾರ್ಡನ್ನು ನೀಡಲಾಗುತ್ತದೆ. ಪ್ರತಿ ವರ್ಷವೂ ಕೂಡ ಈ ಒಂದು ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ ಹಾಗೆಯೇ ಈ ಬಾರಿಯೂ ಕೂಡ ಅನುಬಂಧ ಅವಾರ್ಡ್ ಅನ್ನು ಏರ್ಪಡಿಸಲಾಗಿತ್ತು.

ಈ ಬಾರಿಯ ಅನುಬಂಧ ಅವಾರ್ಡ್ಸ್ ನಲ್ಲಿ ಜನ ಮೆಚ್ಚಿದ ಎಂಟರ್ ಟೈನರ್ ನಾಯಕಿ ಅವಾರ್ಡ್ ಅನ್ನು ನಿವೇದಿತಾ ಗೌಡ ಅವರು ಪಡೆದುಕೊಂಡಿದ್ದಾರೆ. ಅನುಬಂಧ ಅವಾರ್ಡ್ ನಲ್ಲಿ ಎರಡು ರೀತಿಯ ಅವಾರ್ಡ್ ಗಳನ್ನು ವಿತರಿಸಲಾಗುತ್ತದೆ ಒಂದು ಜನ ಮೆಚ್ಚಿದ ಅವಾರ್ಡ್ ಮತ್ತೊಂದು ಮನೆ ಮೆಚ್ಚಿದ ಅವಾರ್ಡ್ ಇವೆರಡಕ್ಕೂ ಇರುವ ವ್ಯತ್ಯಾಸ ಏನೆಂದರೆ. ಮನೆ ಮೆಚ್ಚಿದ ಅವಾರ್ಡ್ ಅಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪಾಲ್ಗೊಳ್ಳುವಂತಹ ನಟ ನಟಿಯರು ಬೇರೆ ಬೇರೆ ಧಾರಾವಾಹಿಯಲ್ಲಿ ಅಭಿನಯಿಸುವಂತಹ ನಟ ನಟಿಯರಿಗೆ ವೋಟ್ ಮಾಡುವ ಮೂಲಕ ಅವರನ್ನು ಆಯ್ಕೆ ಮಾಡಲಾಗುತ್ತದೆ ಇದನ್ನು ಮನೆ ಮೆಚ್ಚಿದ ಅವಾರ್ಡ್ ಎಂದು ಕರೆಯಲಾಗುತ್ತದೆ.

ಇದನ್ನು ಹೊರತುಪಡಿಸಿ ಜನ ಮೆಚ್ಚಿದ ಅವಾರ್ಡ್ ಅಂದರೆ ಇದನ್ನು ಸಂಪೂರ್ಣವಾಗಿ ಸಾರ್ವಜನಿಕರಿಗೆ ಮತ್ತು ಪ್ರೇಕ್ಷಕರಿಗೆ ಬಿಡಲಾಗುತ್ತದೆ ಈ ಒಂದು ಅವಾರ್ಡ್ ನಲ್ಲಿ ಪಾಲ್ಗೊಳ್ಳುವಂತಹ ನಾಯಕ ನಟಿಯರು ಮತ್ತು ನಾಯಕ ನಟರನ್ನು ಜನರೇ ಆಯ್ಕೆ ಮಾಡಬೇಕಾಗುತ್ತದೆ. ಈ ಒಂದು ಜನ ಮೆಚ್ಚಿದ ಎಂಟರ್ ಟೈನರ್ ಕೋಟದಲ್ಲಿ ನಿವೇದಿತ ಗೌಡ ಅವರು ಆಯ್ಕೆಯಾಗಿದ್ದರೆ. ಇದರಿಂದಲೇ ತಿಳಿಯುತ್ತದೆ ನಿವೇದಿತಾ ಗೌಡ ಅವರು ಜನರಿಗೆ ಎಷ್ಟು ಮನರಂಜನೆಯನ್ನು ನೀಡುತ್ತಿದ್ದರು ಅಂತ ಹೌದು ನಿವೇದಿತಾ ಗೌಡ ಅವರು ಬೆಸ್ಟ್ ಎಂಟರ್ಟೈನ್ಮೆಂಟ್ ಆಫ್ ದಿ ಲೇಡಿ ಎಂಬ ಅವಾರ್ಡನ್ನು ತಮ್ಮ ಮುಡುಗೇರಿಸಿಕೊಂಡಿದ್ದಾರೆ.

ಈ ಒಂದು ಅವಾರ್ಡನ್ನು ಮಾಲಾಶ್ರೀಯವರಿಂದ ಪಡೆದಿದ್ದಾರೆ ಸದ್ಯಕ್ಕೆ ನಿವೇದಿತಾ ಗೌಡ ಅವರು ಮಾಲಾಶ್ರೀ ಅವರಿಂದ ಅವಾರ್ಡ್ ಪಡೆದಂತಹ ಫೋಟೋಸ್ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿವೇದಿತ ಗೌಡ ಅವರು ರಾಜ ರಾಣಿ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಇದಾದ ನಂತರ ಗಿಚ್ಚಿ ಗಿಲಿಗಿಲಿ ಎಂಬ ಕಾಮಿಡಿ ಶೋನಲ್ಲಿ ಕೂಡ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಮೂಲಕ ಜನರನ್ನು ರಂಜಿಸುವಂತಹ ಕಾರ್ಯವನ್ನು ಮಾಡಿದ್ದರು ಈ ಕಾರಣಕ್ಕಾಗಿಯೇ ಇದೀಗ ಬೆಸ್ಟ್ ಎಂಟರ್ಟೈನ್ಮೆಂಟ್ ಆಫ್ ದಿ ಲೇಡಿ ಎಂಬ ಅವಾರ್ಡ್ ಅನ್ನು ಜನರೇ ನಿವೇದಿತ ಗೌಡ ಅವರಿಗೆ ಕೊಟ್ಟಿದ್ದಾರೆ.

ನಿಜ ಹೇಳಬೇಕು ಅಂದರೆ ಇದು ನಿವೇದಿತಾ ಗೌಡ ಅವರಿಗೆ ಒಂದು ವರದಾನ ಹಾಗೂ ಬಯಸದೆ ಬಂದ ಭಾಗ್ಯ ಅಂತಾನೆ ಹೇಳಬಹುದು ಇನ್ನು ವೇದಿಕೆಯ ಮೇಲೆ ಮಾಲಾಶ್ರೀ ಅವರಿಂದ ಅವಾರ್ಡ್ ಸ್ವೀಕರಿಸುವಂತಹ ಸಂದರ್ಭದಲ್ಲಿ ಮಾತನಾಡಿದಂತಹ ನಿವೇದಿತ ಗೌಡ ಅವರು ಇದು ನನಗೆ ಕಿರುತೆರೆಯಲ್ಲಿ ಸಿಕ್ಕ ಮೊದಲ ಅವಾರ್ಡ್ ಎಂದು ಖುಷಿಯಿಂದ ಕಣ್ಣೀರು ಇಟ್ಟು ಅವಾರ್ಡ್ ಅನ್ನು ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಮುಂದೆ ನಾನು ಇದಕ್ಕಿಂತಲೂ ಬೆಸ್ಟ್ ಎಂಟರ್ಟೈನ್ಮೆಂಟ್ ಕೊಡುವುದಕ್ಕೆ ಪ್ರಯತ್ನಪಡುತ್ತೇನೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ಕಿರುತೆರೆಯಲ್ಲಿ ನಿವೇದಿತಾ ಗೌಡ ಅವರದೇ ಹವಾ ಏಕೆಂದರೆ ಕಳೆದ ತಿಂಗಳಷ್ಟೇ ಮಿಸಸ್ ಇಂಡಿಯಾ ಕಾಂಪಿಟೇಶನ್ ನಲ್ಲಿ ಪೀಪಲ್ ಚಾಯ್ಸ್ ಆಫ್ ದಿ ಕೋಟದಲ್ಲಿಯೂ ಕೂಡ ಪ್ರಶಸ್ತಿಯನ್ನು ಪಡೆದಿದ್ದರು. ಅದಾದ ನಂತರ ಇದೀಗ ಬೆಸ್ಟ್ ಎಂಟರ್ಟೈನ್ಮೆಂಟ್ ಅವಾರ್ಡ್ ಅನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನು ಮುಂದಿನ ದಿನದಲ್ಲಿ ನಿವೇದಿತಾ ಗೌಡ ಅವರಿಗೆ ಇನ್ನಷ್ಟು ಅವಕಾಶಗಳು ಮತ್ತು ಅವಾರ್ಡ್ಗಳು ದೊರೆಯಲಿ ಎಂದು ಅಭಿಮಾನಿಗಳು ತಮ್ಮ ಶುಭಾಶಯವನ್ನು ನಿವೇದಿತ ಗೌಡ ಅವರಿಗೆ ತಿಳಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ

 

ನಟ ಕಿಶೋರ್ ಗೆ ಕೈ ತುಂಬಾ ಸಿನಿಮಾ ಕೆಲಸವಿದೆ, ಹೆಂಡತಿಗೆ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಬರುತ್ತೆ ಆದ್ರೂ ಇವೆಲ್ಲವನ್ನು ಬಿಟ್ಟು ಹಳ್ಳಿಯಲ್ಲಿ ಕೃಷಿ ಮಾಡುತ್ತಿರುವುದಕ್ಕೆ ಗೊತ್ತಾ.?

ನಟ ಕಿಶೋರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ವಿಭಿನ್ನವಾದ ನಟನೆಯಿಂದಲೇ ಎಲ್ಲರನ್ನು ಕೂಡ ತಮ್ಮತ ಗಮನ ಸೆಳೆದಿದ್ದಾರೆ ಹುಲಿ ಎಂಬ ಸಿನಿಮಾದಲ್ಲಿ ಖಡಕ್ ಪೊಲೀಸ್ ಪಾತ್ರವನ್ನು ನಿರ್ವಹಿಸುವುದರ ಮೂಲಕ ಸಿನಿಮಾರಂಗದಲ್ಲಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿದವರು. ನಾಯಕ ನಟರಾಗಿ ಹೆಚ್ಚಾಗಿ ಗುರುತಿಸಿಕೊಳ್ಳದೆ ಇದ್ದರೂ ಕೂಡ ಖಳನಾಯಕರ ಪಟ್ಟಿಯಲ್ಲಿ ಇವರೇ ಅಗ್ರಸ್ಥಾನವನ್ನು ಪಡೆಯುತ್ತಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಕನ್ನಡದಲ್ಲಿ ಸಾಕಷ್ಟು ಖಳನಾಯಕರ ಹಾಗೂ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ತೆರೆಕಂಡಂತಹ ರಿಷಬ್ ಶೆಟ್ಟಿ ಅಭಿನಯದ ಕಾಂತರಾ ಸಿನಿಮಾದಲ್ಲಿಯೂ ಕೂಡ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ತೆಲುಗು ತಮಿಳು ಸೇರಿದಂತೆ ಇಲ್ಲಿಯವರೆಗೂ ನೂರಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.

ನಿಜ ಹೇಳಬೇಕೆಂದರೆ ಬಹು ಬೇಡಿಕೆಯ ನಟ ಅಂತಾನೆ ಹೇಳಬಹುದು ಇಷ್ಟೆಲ್ಲ ಸಿನಿಮಾ ಆಫರ್ ಇದ್ದರೂ ಕೂಡ ನಟ ಕಿಶೋರ್ ಅವರು ಕೇವಲ ಚಿತ್ರರಂಗವನ್ನು ಮಾತ್ರ ಅವಲಂಬಿಸದೆ ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಹೌದು ಸಿಟಿ ಜೀವನ ಬೇಡ ಅಲ್ಲಿನ ಜಂಜಾಟವು ಬೇಡ ಅಂತ ಬೆಂಗಳೂರಿನ ಸಮೀಪದಲ್ಲಿ ಇರುವಂತಹ ಹಳ್ಳಿಯೊಂದರಲ್ಲಿ ಹೆಂಡತಿ ಮಕ್ಕಳ ಸಮೇತ ವಾಸವಾಗಿದ್ದಾರೆ. ವಿಶೇಷ ಏನೆಂದರೆ ತಮ್ಮ ದಿನದ ಭಾಗಶಹ ಕಾಲವನ್ನು ಕೃಷಿ ಮಾಡುವುದರಲ್ಲಿ ಕಳೆಯುತ್ತಾರೆ. ಹೌದು ಹಾಗೊಂದು ಹೀಗೊಂದು ಸಿನಿಮಾ ಆಫರ್ ಬಂದರೆ ಅಲ್ಲಿ ನಟನೆ ಮಾಡುತ್ತಾರೆ ಅದನ್ನು ಹೊರತು ಪಡಿಸಿದರೆ ಸಂಪೂರ್ಣವಾಗಿ ನಗರ ಜೀವನದಿಂದ ದೂರ ಉಳಿದು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇನ್ನು ಕಿಶೋರ್ ಅವರ ಧರ್ಮಪತ್ನಿ ವಿಶಾಲಕ್ಷಿ ಪದ್ಮನಾಭ ಕೂಡ ತಮ್ಮ ಗಂಡನಿಗೆ ಸಾತ್ ಕೊಟ್ಟಿದ್ದಾರೆ ವಿಶಾಲಕ್ಷಿಯವರು ಚಾರ್ಟೆಡ್ ಅಕೌಂಟೆಡ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತಿಂಗಳಿಗೆ ಎರಡರಿಂದ ನಾಲ್ಕು ಲಕ್ಷ ಸಂಬಳವನ್ನು ಪಡೆಯುತ್ತಿದ್ದರು ಆದರೂ ಕೂಡ ಆ ಕೆಲಸವನ್ನು ಬಿಟ್ಟು ತಮ್ಮ ಪತಿಯೊಂದಿಗೆ ಕೃಷಿ ಜೀವನವನ್ನು ನಡೆಸುತ್ತಿದ್ದರೆ. ಇತ್ತೀಚಿನ ದಿನದಲ್ಲಿ ಓದು ಬರಹ ತಿಳಿಯದಿದ್ದವರು ಕೂಡ ಕೃಷಿ ಕೆಲಸ ಮಾಡುವುದಕ್ಕೆ ಹಿಂದೆಟು ಹಾಕಿ ನಗರ ಪ್ರದೇಶದಲ್ಲಿ ಖಾಸಗಿ ಕಂಪನಿಯಲ್ಲಿ ಸಣ್ಣಪುಟ್ಟ ಕೆಲಸ ಸಿಕ್ಕರು ಸಾಕು ಅಲ್ಲಿ ಜೀವನ ಕಟ್ಟಿಕೊಳ್ಳಬೇಕು ಜೀವನ ನಡೆಸಬೇಕು ಐಷಾರಾಮಿ ಬದುಕನ್ನು ನಾವು ನೋಡಬೇಕು ಅಂತ ಅಂದುಕೊಳ್ಳುತ್ತಾರೆ.

ಆದರೆ ನಟ ಕಿಶೋರ್ ಹಾಗೂ ಅವರ ಧರ್ಮಪತ್ನಿ ಮಾತ್ರ ತಮ್ಮ ಐಷಾರಾಮಿ ಹಾಗೂ ವೈಭೋಗದ ಜೀವನವನ್ನು ತ್ಯಜಿಸಿ ಸಾಮಾನ್ಯ ಜನರಂತೆ ಕೃಷಿ ಕೆಲಸದಲ್ಲಿ ನಿರತರಾಗಿದ್ದಾರೆ. ನಿಜಕ್ಕೂ ಇಂದಿನ ಯುವ ಪೀಳಿಗೆಗೆ ಈ ದಂಪತಿಗಳು ಸ್ಪೂರ್ತಿ ಅಂತಾನೇ ಹೇಳಬಹುದು. ಸದ್ಯಕ್ಕೆ ಕಿಶೋರ್ ಹಾಗೂ ಅವರ ಧರ್ಮಪತ್ನಿ ಹಾಗೂ ಮಕ್ಕಳು ಎಲ್ಲರೂ ಕೂಡ ಬೆಂಗಳೂರಿನಿಂದ ಕೇವಲ 30 ಕಿ.ಮೀ. ದೂರವಿರುವ ಕೇವಲ 14 ಕುಟುಂಬಗಳು ವಾಸವಿರುವ ಬನ್ನೇರುಘಟ್ಟಕ್ಕೆ ಹೊಂದಿಕೊಂಡಂತೆ ಇರುವ ಕರಿಯಪ್ಪನ ದೊಡ್ಡಿ ಗ್ರಾಮದಲ್ಲಿ 1.5 ಎಕರೆ ಭೂಮಿಯನ್ನು ಖರೀದಿಸಿ ಅಲ್ಲಿಯೇ ಮನೆ ಕಟ್ಟಿ ತಮ್ಮ ಕುಟುಂಬಕ್ಕಾಗಿ ಆಹಾರ ಬೆಳೆಸಲು ಸಣ್ಣ ತೋಟ ಒಂದನ್ನು ಮಾಡಿದ್ದಾರೆ.

ವಿಶೇಷ ಏನೆಂದರೆ ಈ ಪುಟ್ಟ ಗ್ರಾಮದಲ್ಲಿ ಇರುವಂತಹ ಕುಟುಂಬದವರಿಗೆ ವೈಜ್ಞಾನಿಕ ಕೃಷಿಯ ಬಗ್ಗೆ ತಿಳುವಳಿಕೆ ಇಲ್ಲ ಈ ಒಂದು ವೈಜ್ಞಾನಿಕ ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ವಹಿಸಿಕೊಂಡಿರುವ ಕಿಶೋರ್ ರವರು ತಮ್ಮ ಜಮೀನಿನಲ್ಲಿ ವೈಜ್ಞಾನಿಕ ಕೃಷಿಯನ್ನು ಅಳವಡಿಕೆ ಮಾಡಿಕೊಂಡಿದ್ದು ಇದರ ಉಪಯೋಗವನ್ನು ಇನ್ನಿತರ ಕೃಷಿಕರಿಗೂ ಕೂಡ ತಿಳಿಸಿದ್ದಾರೆ. ಇನ್ನು ತಮ್ಮ ಜಮೀನಿಗೆ ತಂದಂತಹ ಯಂತ್ರೋಪಕರಣವನ್ನು ಈ ಹಳ್ಳಿಯಲ್ಲಿ ಇರುವಂತಹ ಬಡ ಸಾಮಾನ್ಯ ಜನರಿಗೂ ಬಳಕೆ ಮಾಡುವಂತಹ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ. ನಿಜಕ್ಕೂ ಈತ ಒಬ್ಬ ಮಾದರಿ ರೈತ ಅಂತಾನೇ ಹೇಳಬಹುದು ಈ ಕಾರಣದಿಂದಲೇ ಕಿಶೋರ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ನಟನೆಗೂ ಸೈ ಕೃಷಿಗೂ ಸೈ ಎಂಬುದನ್ನು ಎತ್ತಿ ತೋರಿಸಿದ್ದಾರೆ ಕಿಶೋರ್ ಹಾಗೂ ಅವರ ಧರ್ಮಪತ್ನಿ ಹಾಗೂ ಅವರ ಕುಟುಂಬದವರ ಇನ್ನಷ್ಟು ಹಿನ್ನೆಲೆಯನ್ನು ತಿಳಿಯಲು ಈ ಕೆಳಗಿನ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಕಾಂತರಾ ಸಿನಿಮಾ ನೋಡಿ ಹಾಡಿ ಹೊಗಳಿದ ತೆಲುಗು ನಟ ನಾನಿ, ಕನ್ನಡದಲ್ಲಿ ಈಗೀಗ ಏನು ಸಿನಿಮಾ ತೆಗಿತೀರಪ್ಪ ನಿಜಕ್ಕೂ ನಂಬುವುದಕ್ಕೆ ಆಗುವುದಿಲ್ಲ ಅನ್ನುತ್ತಿದ್ದಾರೆ.

ತೆಲುವಿನ ಖ್ಯಾತ ನಟ ನಾನಿ ಅವರು ಬೆಂಗಳೂರಿನಲ್ಲಿ ನಡೆದಂತಹ 67ನೇ ಫಿಲಂ ಫೇರ್ ಅವಾರ್ಡ್ ಫಂಕ್ಷನ್ ಗೆ ಹಾಜರಾಗಿದ್ದರೆ ಈ ಸಮಯದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹೇಳುವುದರ ಮೂಲಕ ಕನ್ನಡ ಭಾಷೆಯನ್ನು ಹಾಗೂ ಕನ್ನಡ ಸಿನಿಮಾ ಮತ್ತು ಕನ್ನಡ ಸಿನಿಮಾದಲ್ಲಿ ಇರುವಂತಹ ನಟ ನಟಿಯರನ್ನು ಹಾಡಿ ಹೊಗಳಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಸಿನಿಮಾ ಅಂದರೆ ಮುಸಿಯು ಕೂಡ ನೋಡದಂತಹ ಜನರು ಇದೀಗ ಕನ್ನಡ ಸಿನಿಮಾದ ಹೆಸರು ಕೇಳುತ್ತಿದ್ದ ಹಾಗೆ ಬೆಚ್ಚಿ ಬೆರಗಾಗುತ್ತಿದ್ದಾರೆ. ಇಂತಹ ತಾಕತ್ತನ್ನು ಕನ್ನಡಕ್ಕೆ ನೀಡಿದಂತಹ ಖ್ಯಾತಿ ಕೆಜಿಎಫ್ ಸಿನಿಮಾ ಗೆ ಸೇರುತ್ತದೆ ಅಂತ ಹೇಳಿದರು ಕೂಡ ತಪ್ಪಾಗಲಾರದು.

ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿ ಕನ್ನಡದಲ್ಲಿ ಹೊರ ಹೊಮ್ಮಿದ ಸಿನಿಮಾ ಅಂದರೆ ಅದು ಕೆಜಿಎಫ್ ಅಂತಾನೇ ಹೇಳಬಹುದು ಕೆಜಿಎಫ್ ಸಿನಿಮಾ ಬಂದ ನಂತರ ಬೇರೆ ಯಾವ ಸಿನಿಮಾವು ಕೂಡ ಈ ಮಟ್ಟದಲ್ಲಿ ಹೆಸರು ಮಾಡುವುದಿಲ್ಲ ದೊಡ್ಡ ಸಾಧನೆ ಮಾಡುವುದಿಲ್ಲ ಅಂತ ಅಂದುಕೊಂಡಿದ್ದರು. ಆದರೆ ನಿಜಕ್ಕೂ ಈ ತಪ್ಪಾಯ್ತು ಅಂತಾನೆ ಹೇಳಬಹುದು ಏಕೆಂದರೆ ಕೆಜಿಎಫ್ ಸಿನಿಮಾದ ನಂತರ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಸಿನಿಮಾ ತೆರೆಕಡ್ಡಿದು. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ವಾಗಿ ಹೊರಹೊಮ್ಮಿತ್ತು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತು‌. ಈ ಸಿನಿಮಾದ ನಂತರ ಗರುಡಾಗಮನ ವೃಷಭ ವಾಹನ ಸಿನಿಮಾ ತೆರೆಕಂಡಿತು ಇದು ಕೂಡ ಯಾರು ಕೂಡ ನಿರೀಕ್ಷೆ ಮಾಡಿರದಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆಯಿತು.

ಈ ಸಿನಿಮಾವನ್ನು ನೋಡಿದ ನಂತರ ದಕ್ಷಿಣ ಭಾರತ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಇಂದು ಮುಂದೆ ಕನ್ನಡ ಸಿನಿಮಾವನ್ನು ಹಿಡಿದು ನಿಲ್ಲಿಸುವುದಕ್ಕೆ ಯಾರಿಂದಲೂ ಕೂಡ ಸಾಧ್ಯವಾಗುವುದಿಲ್ಲ ಎಂದು ಮಾತನಾಡುವುದಕ್ಕೆ ಪ್ರಾರಂಭ ಮಾಡಿದ್ದರು. ಇನ್ನೇನು ಈ ವಿಚಾರ ಮರೆಯುತ್ತಿದ್ದ ಹಾಗೆ ಮತ್ತೊಂದು ಕನ್ನಡ ಸಿನಿಮಾ ಅಬ್ಬರಿಸಲು ಸಜ್ಜಾಯಿತು. ಹೌದು ಅದು ರಿಷಬ್ ಶೆಟ್ಟಿ ಅಭಿನಯದ ಕಾಂತರಾ ಸಿನಿಮಾ ಅಂತಾನೆ ಹೇಳಬಹುದು ಕಾಂತರಾ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೆ ಇದೀಗ ಭಾರತದ ಎಲ್ಲಾ ಭಾಷೆಯಲ್ಲೂ ಕೂಡ ಮೂಡಿ ಬರಲಿದೆ.

ಈ ಸಿನಿಮ ತೆರೆ ಕಂಡು ಒಂದು ವಾರವಾಗಿದೆ ಭರ್ಜರಿ ಕಲೆಕ್ಷನ್ ಮೂಲಕ ಹೌಸ್ ಫುಲ್ ಪ್ರದರ್ಶನವನ್ನು ಕಂಡಿದೆ ವಿಶೇಷ ಹಾಗೂ ವಿಚಿತ್ರ ಏನೆಂದರೆ ಮೊದಲ ಕನ್ನಡ ಸಿನಿಮಾ ಬೇರೆ ಭಾಷೆಗೆ ಡಬ್ಬಿಂಗ್ ಆದರೆ ಮಾತ್ರ ಆ ಸಿನಿಮಾವನ್ನು ಬೇರೆ ಭಾಷೆಯ ನಟರು ನೋಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಕನ್ನಡ ಭಾಷೆಯಲ್ಲಿ ಕಾಂತರಾ ಸಿನಿಮಾವನ್ನು ವೀಕ್ಷಣೆ ಮಾಡಿದಂತಹ ಕೆಲವು ನಟರು ಮತ್ತು ನಿರ್ಮಾಪಕರು ಈ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ, ಹೌದು, ತೆಲುಗಿನ ಖ್ಯಾತ ನಿರ್ದೇಶಕ ಆದಂತಹ ರಾಜಮೌಳಿ ಹಾಗೂ ತೆಲುಗಿನ ನಾನಿ ಸೇರಿದಂತೆ ಸಾಕಷ್ಟು ಕಲಾವಿದರು ಕಾಂತರಾ ಸಿನಿಮಾವನ್ನು ಕನ್ನಡದಲ್ಲಿ ನೋಡಿ ಈ ಸಿನಿಮಾವನ್ನು ಮೆಚ್ಚಿಕೊಂಡು ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಇವುಗಳನ್ನು ನಾವು ಕೇವಲ ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೆವು. ಆದರೆ ಇದೇ ಮೊದಲ ಬಾರಿಗೆ ಫಿಲಂ ಫೇರ್ ಅವಾರ್ಡ್ ಫಂಕ್ಷನ್ ಗೆ ಬಂದಿದ್ದಂತಹ ನಟ ನಾನಿ ಅವರು ಕಾತಾರಾ ಸಿನಿಮಾವನ್ನು ನೋಡಿ “ಯಪ್ಪಾ ಕನ್ನಡದಲ್ಲಿ ಈಗೀಗ ಏನು ಸಿನಿಮಾ ತೆಗಿತಿದ್ದೀರಪ್ಪ ಕನ್ನಡ ಚಿತ್ರರಂಗದ ಬಗ್ಗೆ ಇಡೀ ಭಾರತ ಮಾತನಾಡುತ್ತಿದ ಇತ್ತೀಚೆಗೆ ಬಂದ ಕಾಂತಾರ ಬಗ್ಗೆ ಕೂಡ ಕೇಳಿದೆ ಸಖತ್ ಆಗಿದ್ದೆಯಂತೆ. ಎಲ್ಲಿ ಹೋದರೂ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುತ್ತಿದ್ದಾರೆ ತುಂಬ ಹೆಮ್ಮೆಯಾಗುತ್ತಿದೆ” ಎಂದು ನಾನಿ ಹೇಳಿದ್ದಾರೆ.

ನಿಜಕ್ಕೂ ಕೂಡ ಇದು ಸಂತಸವಾದ ವಿಚಾರವೇ ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗದವರು ಕನ್ನಡವನ್ನು ಅಸಡ್ಡೆಯಿಂದ ಕಾಣುತ್ತಿದ್ದರು ಆದರೆ ಇದೀಗ ಕನ್ನಡ ಸಿನಿಮಾ ಬಗ್ಗೆ ಹಾಡಿ ಹೊಗಳುವಂತಹ ಕಾಲ ಬಂದಿದೆ. ನಿಜಕ್ಕೂ ನಮ್ಮ ಚಿತ್ರರಂಗ ಮುಂದಿನ ದಿನದಲ್ಲಿ ಭಾರತ ಚಿತ್ರರಂಗದಲ್ಲಿಯೇ ಮೊದಲ ಸ್ಥಾನವನ್ನು ಗಿಟ್ಟಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂಬುವುದು ಇದರಿಂದಲೇ ಸಾಬೀತಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಮದುವೆಯಾದ 5 ತಿಂಗಳಿಗೆ ಅವಳಿ ಮಕ್ಕಳ ತಾಯಾದ ನಟಿ ನಯನತಾರ, ವಿಚಾರ ಕೇಳಿ ತಬ್ಬಿಬಾದ ಅಭಿಮಾನಿಗಳು.!

ದಕ್ಷಿಣ ಭಾರತದಲ್ಲಿ ಸೂಪರ್ ಸ್ಟಾರ್ ನಯನತಾರಾ ಅವರು ತಮ್ಮ ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಕಳೆದ ಐದು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದರು. ಮದುವೆಯಾದ ನಂತರ ಈ ದಂಪತಿಗಳು ಹನಿಮೂನ್ ಗಾಗಿ ದೇಶ ವಿದೇಶವನ್ನು ಸುತ್ತುತ್ತಿದ್ದರು ಸುಮಾರು ಎರಡು ತಿಂಗಳಿನಿಂದಲೂ ಕೂಡ ವಿದೇಶದಲ್ಲಿ ವಾಸವಾಗಿದ್ದರು. ತಮ್ಮ ಎಲ್ಲಾ ಸಿನಿಮಾ ಕಾರ್ಯಗಳನ್ನು ಪಕ್ಕಕ್ಕೆ ಇಟ್ಟು ಸದ್ಯಕ್ಕೆ ಗಂಡ ಹೆಂಡತಿ ಇಬ್ಬರೂ ಕೂಡ ಜಾಲಿ ಮೂಡ್ ನಲ್ಲಿ ಕಾಲ ಕಳೆಯುತ್ತಿದ್ದರು. ಈ ಫೋಟೋಸ್ ಮತ್ತು ವೀಡಿಯೋಸ್ಗಳನ್ನು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಿದ್ದರು.

ಈ ದಂಪತಿಗಳನ್ನು ನೋಡಿದಂತಹ ಅಭಿಮಾನಿಗಳು ಈ ಜೋಡಿ ಕೊನೆಯವರೆಗೂ ಹೀಗೆ ಇರಲಿ ಕೆಟ್ಟ ದೃಷ್ಟಿಯು ಕೂಡ ಇವರ ಮೇಲೆ ಬೀಳದಿರಲಿ ಎಂದು ಹೇಳುತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಇದೀಗ ನಯನತಾರಾ ಅವರು ಶಾ-ಕಿಂ-ಗ್ ವಿಚಾರ ಒಂದನ್ನು ಹೊರ ಹಾಕಿದ್ದಾರೆ ಹೌದು ಈ ವಿಚಾರ ಕೇಳುತ್ತಿದ್ದ ಹಾಗೆ ಅಭಿಮಾನಿಗಳು ನಿಜಕ್ಕೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ವಿಚಾರ ಕೇಳಿದ್ರೆ ನಿಮಗೂ ಕೂಡ ಶಾ-ಕ್ ಆಗುತ್ತೆ ಏಕೆಂದರೆ ನಯನತಾರಾ ಇದೀಗ ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಹೌದು ಮದುವೆಯಾದ ಕೇವಲ ಐದೇ ತಿಂಗಳಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುವುದಾದರೂ ಹೇಗೆ ಎಂಬ ಸಂದೇಹ ಎಲ್ಲರಲ್ಲೂ ಮೂಡುವುದು ಸಹಜ ಆದರೆ ಇಲ್ಲೇ ಇರೋದು ನೋಡಿ ಅಸಲಿ ವಿಚಾರ.

ನಯನತಾರಾ ಅವರು ತಾಯಿಯಾಗುತ್ತಿಲ್ಲ ಬದಲಿಗೆ ಬಾಡಿಗೆ ತಾಯ್ತನದ ಮೂಲಕ ಎರಡು ಅವಳಿ ಗಂಡು ಮಕ್ಕಳನ್ನು ದತ್ತು ಪಡೆದಿದ್ದಾರೆ. ಹೌದು ನಯನತಾರಾ ಅವರು ತಮ್ಮ ಮದುವೆಯಾಗುವುದಕ್ಕಿಂತ ಮುಂಚೆಯೇ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಬೇಕು ಎಂಬ ಕನಸನ್ನು ಹೊಂದಿದ್ದರು. ಈ ಒಂದು ನಿರ್ಧಾರಕ್ಕೆ ತಮ್ಮ ಪತಿ ವಿಘ್ನೇಶ್ ಶಿವನ್ ಅವರ ಅನುಮತಿಯು ಕೂಡ ಇತ್ತು ಈ ವಿಚಾರವನ್ನು ಗೌಪ್ಯವಾಗಿಯೇ ಇಟ್ಟಿದ್ದರು. ಇದೀಗ ನಯನತಾರ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ಕೂಡ ಅಧಿಕೃತವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಮುದ್ದು ಎರಡು ಅವಳಿ ಗಂಡು ಮಕ್ಕಳ ಫೋಟೋವನ್ನು ಶೇರ್ ಮಾಡುವುದರ ಮೂಲಕ ನಾವಿಬ್ಬರು ತಂದೆ ಮತ್ತು ತಾಯಿಯಾಗಿ ಬಡ್ತಿ ಪಡೆದಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ವಿಘ್ನೇಶ್ ನಯನ ಮತ್ತು ನಾನು ಅಮ್ಮ ಮತ್ತು ಅಪ್ಪ ಆಗಿದ್ದೇವೆ ನಮಗೆ ಅವಳಿ ಗಂಡು ಮಕ್ಕಳಾಗಿವೆ. ನಮ್ಮ ಎಲ್ಲಾ ಪ್ರಾರ್ಥನೆ, ನಮ್ಮ ಪೂರ್ವಜರ ಆಶೀರ್ವಾದ ಎಲ್ಲಾ ಒಳ್ಳೆಯ ಅಭಿವ್ಯಕ್ತಿಗಳ ಹಾರೈಕೆಯ ಫಲವಾಗಿ ನಮಗೆ ಈ ಮಕ್ಕಳಾಗಿವೆ. ನಿಮ್ಮೆಲ್ಲರ ಆಶೀರ್ವಾದ ನಮಗೆ ಬೇಕು ಎಂದಿದ್ದಾರೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಕೆಲವು ಅಭಿಮಾನಿಗಳು ಶುಭಾಶಯವನ್ನು ಕೋರಿದರೆ ಇನ್ನು ಕೆಲವು ಅಭಿಮಾನಿಗಳು ನಯನತಾರಾ ಅವರಿಗೆ ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ.

ಬಾಡಿಗೆ ತಾಯ್ತನ ಎಂಬುದು ಇತ್ತೀಚಿನ ದಿನದಲ್ಲಿ ಟ್ರೆಂಡ್ ಆಗಿದೆ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದುಕೊಂಡರೆ ನೀವು ತಾಯ್ತನದ ಸುಖವನ್ನು ಅನುಭವಿಸಲು ಸಾಧ್ಯವಿಲ್ಲ ಇದು ಒಂದು ಕೃತಕ ಸಂತೋಷವಷ್ಟೇ. ನೈಸರ್ಗಿಕ ಸಂತೋಷವನ್ನು ನೀವು ಪಡೆಯಬೇಕಾದರೆ ನೀವೇ ಮಗುವನ್ನು ಎತ್ತು ಹೊರಬೇಕು ಆಗಲೇ ಅದರ ಸುಖ ದೊರೆಯುವುದು ಎಂದು ಟೀಕೆ ಮಾಡಿದ್ದಾರೆ. ಅದೇನೇ ಆಗಲಿ ಸದ್ಯಕ್ಕಂತೂ ತಮ್ಮ ಅವಳಿ ಮಕ್ಕಳನ್ನು ಮನೆಗೆ ಬರ ಮಾಡಿಕೊಂಡ ಖುಷಿಯಲ್ಲಿ ವಿಜ್ಞೇಶ್ ಶಿವನ್ ಮತ್ತು ನಯನತಾರಾ ಅವರು ಇದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ನಿವೇದಿತಾ ಗೌಡ & ಅವರ ತಾಯಿ ಮಾಡಿದ ಈ ಡ್ಯಾನ್ಸ್ ನೋಡಿ ಎಷ್ಟು ಸೊಗಸಿದೆ.

ಸೋಶಿಯಲ್ ಮಿಡಿಯೋದಿಂದಲೇ ಸಿಕ್ಕಾಪಟ್ಟೆ ಫೇಮಸ್ ಆದ ಸೆಲೆಬ್ರೆಟಿಗಳ ಪೈಕಿ ನಿವೇದಿತಾ ಗೌಡ ಅವರು ಕೂಡ ಒಬ್ಬರು ಟಿಕ್ ಟಾಕ್ ಡಬ್ಸ್ಮ್ಯಾಶ್‌ಗಳಲ್ಲಿ ವಿಡಿಯೋ ಮಾಡುವುದರ ಮುಖಾಂತರವೇ ಇದೀಗ ಎಲ್ಲಾ ಕನ್ನಡಿಗರ ಕಣ್ಮಣವನ್ನು ಸೆಳೆದಿದ್ದಾರೆ. ಅಷ್ಟೇ ಅಲ್ಲದೆ ಸೆಲೆಬ್ರಿಟಿ ಅಂತಾನೂ ಕೂಡ ಗುರುತಿಸಿಕೊಂಡಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾ ದಿಂದಲೇ ಬಿಗ್ ಬಾಸ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡವರು. ಕೇವಲ 18ನೇ ವಯಸ್ಸಿಗೆ ಬಿಗ್ ಬಾಸ್ ವೇದಿಕೆ ಏರಿದ ಅತಿ ಚಿಕ್ಕ ವಯಸ್ಸಿನ ಸ್ಪರ್ಧಿ ಅಂದರೆ ಅದು ನಿವೇದಿತಾ ಗೌಡ.

ಬಿಗ್ ಬಾಸ್ ಮನೆಯಿಂದ ನಿವೇದಿತಾ ಗೌಡ ಅವರಿಗೆ ಸಿಕ್ಕಾಪಟ್ಟೆ ಹೆಸರು ಕೀರ್ತಿ ಎಲ್ಲವೂ ದೊರೆಯಿತು ಒಂದು ರೀತಿಯಲ್ಲಿ ಹೇಳುವುದಾದರೆ ಬಿಗ್ ಬಾಸ್ ಮನೆ ನಿವೇದಿತಾ ಗೌಡ ಅವರಿಗೆ ಒಂದು ಟರ್ನಿಂಗ್ ಪಾಯಿಂಟ್ ಅಂತಾನೆ ಹೇಳಬಹುದು. ಏಕೆಂದರೆ ಬಿಗ್ ಬಾಸ್ ಮನೆಯಿಂದಲೇ ಇವರಿಗೆ ಚಂದನ್ ಶೆಟ್ಟಿ ಅವರ ಪರಿಚಯವಾಗಿದ್ದು ಚಂದನ್ ಶೆಟ್ಟಿ ಪರಿಚಯ ಸ್ನೇಹವಾಗಿ ಬೆಳೆದು ತದನಂತರ ಪ್ರೀತಿಯಾಗಿ ಚಿಗುರೊಡೆದು ಇದೀಗ ಮದುವೆಯಾಗಿರುವ ವಿಚಾರವೂ ಕೂಡ ನಿಮ್ಮೆಲ್ಲರಿಗೂ ತಿಳಿದೇ ಇದೆ. ಮದುವೆಯ ಸಂದರ್ಭದಲ್ಲಿ ಹಲವಾರು ಟೀಕೆ ಮತ್ತು ವಾದಂತಿಗಳು ಕೇಳಿ ಬರುತ್ತಿದ್ದವು ಆದರೆ ಇದ್ಯಾವುದಕ್ಕೂ ಕೂಡ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ತಲೆ ಕೆಡಿಸಿಕೊಳ್ಳಲಿಲ್ಲ ಸದ್ಯಕ್ಕೆ ಇಬ್ಬರು ಕೂಡ ಸುಖ ದಾಂಪತ್ಯವನ್ನು ನಡೆಸುತ್ತಿದ್ದಾರೆ.

ಸದ್ಯಕ್ಕೆ ನಿವೇದಿತಾ ಗೌಡ ಅವರು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಕಾರ್ಯಕ್ರಮ ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿಗಿಲಿ ರಾಜ ರಾಣಿ ಇನ್ನಿತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದರ ಜೊತೆಗೆ ತಮ್ಮದೇ ಆದಂತಹ ಸ್ವಂತ ಯುಟ್ಯೂಬ್ ಚಾನೆಲ್ ಒಂದನ್ನು ಕೂಡ ತೆಗೆದಿದ್ದರೆ ಈ ಒಂದು ಚಾನಲ್ನಲ್ಲಿ ತಮ್ಮ ಪ್ರತಿನಿತ್ಯದ ದಿನಾಚರಣೆಯನ್ನು ಅಪ್ಲೋಡ್ ಮಾಡುತ್ತಾರೆ. ಇದರ ಜೊತೆಗೆ ಸೌಂದರ್ಯ ವರ್ಧಕ ಹಾಗೂ ಅಡಿಗೆ ಬಗ್ಗೆ ಕೆಲವು ಟಿಪ್ಸ್ ಗಳನ್ನು ಕೂಡ ನೀಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವಂತಹ ನಿವೇದಿತಾ ಗೌಡ ಅವರು ಆಗಾಗ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಮತ್ತು ವೀಡಿಯೋಸ್ ಗಳನ್ನು ಅಪ್ಲೋಡ್ ಮಾಡುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾರೆ.

ಮೊದಲೆಲ್ಲಾ ಕೇವಲ ನಿವೇದಿತ ಗೌಡ ಅವರು ಮಾತ್ರ ವೀಡಿಯೋಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಆದರೆ ಇತ್ತೀಚಿನ ದಿನದಲ್ಲಿ ಮಗಳೊಟ್ಟಿಗೆ ತಾಯಿ ಹೇಮಾ ಅವರು ಕೂಡ ಸೇರಿಕೊಂಡಿದ್ದಾರೆ. ಹೌದು ಬಹುತೇಕ ಎಲ್ಲಾ ವಿಡಿಯೋದಲ್ಲೂ ಕೂಡ ಇದೀಗ ಹೇಮಾ ಅವರು ಅವರ ಮಗಳೊಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ನೂಲಿನಂತೆ ಸೀರೆ ತಾಯಿಯಂತೆ ಮಗಳು ಎಂಬ ಮಾತಿದೆ ಇದು ಇವರಿಬ್ಬರು ನೋಡಿ ಇಟ್ಟಿರಬೇಕು ಅನ್ನುವಷ್ಟು ತದ್ರೂಪಿ ಇವರಿದ್ದಾರೆ ಅಮ್ಮ ಮಗಳಿಗಿಂತ ಹೆಚ್ಚಾಗಿ ಅಕ್ಕ ತಂಗಿಯಂತೆ ಕಾಣುತ್ತಾರೆ ಇವರು. ಅವರ ತಾಯಿ ಹೇಮ ಬಿಗ್ ಬಾಸ್ ಸೇರಿದಂತೆ ಇನ್ನಿತರ ಕಾರ್ಯಕ್ರಮಕ್ಕೆ ತೆರಳಿದ್ದರು ಒಂದೇ ರೂಪದಂತಿರುವ ಅಮ್ಮ-ಮಗಳು ಹಲವು ಕಾರ್ಯಕ್ರಮ ವೇದಿಕೆಗಳಲ್ಲಿಯೂ ಮೆಚ್ಚುಗೆ ಪಡೆದಿದ್ದಾರೆ.

ಹೇಮಾ ರಮೇಶ್​ ಕೂಡ ಈಗ ಮಗಳ ಅಲಂಕಾರ, ಡ್ರೆಸ್ಸಿಂಗ್​ ಸ್ಟೈಲ್​ ಅನ್ನು ಕಾಪಿ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುತ್ತಿದ್ದಾರೆ. ನಿವೇದಿತಾ ಗೌಡ ಹಾಗೂ ಅವರ ತಾಯಿ ಸಾಕಷ್ಟು ವಿಡಿಯೋಗಳನ್ನು ಮಾಡಿ ರೀಲ್ಗಳಲ್ಲಿ ಹರಿಬಿಡುತ್ತಾರೆ. ಇವರಿಬ್ಬರನ್ನ ನೋಡಿದ್ರೆ ಜನ ಬೆಕ್ಕಸ ಬೆರಗಾಗುತ್ತಾರೆ ಯಾಕೆಂದರೆ ಇವರಿಬ್ಬರೂ ಅಮ್ಮ ಮಗಳು ಎನ್ನುವುದಕ್ಕಿಂತ ಅಕ್ಕ ತಂಗಿ ಎನ್ನುವಂತೆ ಕಾಣಿಸುತ್ತಾರೆ. ನಿವೇದಿತಾ ಗೌಡ ತಾಯಿ ಹೇಮಾ ರಮೇಶ್​ ಸಾಮಾಜಿಕ ಜಾಲತಾಣದಲ್ಲಿ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಮೂಲಕ ತಾಯಿ ಮತ್ತು ಮಗಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯಕ್ಕೆ ನಿವೇದಿತಾ ಗೌಡ ಅವರು ತವ ತಮ್ಮ ತಾಯಿಯೊಟ್ಟಿಗೆ ಮಾಡಿದಂತಹ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋವನ್ನು ಒಮ್ಮೆ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಸೃಜನ್ ಲೋಕೇಶ್ ಕಂಡ್ರೆ ನನ್ಗೆ ಆಗ್ತಿರಲಿಲ್ಲ ಅವನೊಬ್ಬ ದುರಹಂಕಾರಿ ಎಂಬ ಶಾ-ಕಿಂ-ಗ್ ವಿಚಾರ ಹೊರ ಹಾಕಿದ ಶ್ವೇತಾ ಚಂಗಪ್ಪ ಅಷ್ಟಕ್ಕೂ ಇವರಿಬ್ಬರ ನಡುವೆ ನಡೆದದ್ದೇನು ನೋಡಿ.!

ಶ್ವೇತಾ ಚಂಗಪ್ಪ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ಅಮೋಘ ಅಭಿನಯದಿಂದಲೇ ಎಲ್ಲರ ಗಮನವನ್ನು ಸೆಳೆತಿದ್ದಾರೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಸುಮತಿ ಎಂಬ ಧಾರವಾಹಿಯಲ್ಲಿ ಮೊಟ್ಟಮೊದಲ ಬಾರಿಗೆ ನಟನೆ ಮಾಡುವುದರ ಮೂಲಕ ಕಿರುತೆರೆ ಲೋಕದಲ್ಲಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿದ್ದರು‌. ಈ ಧಾರಾವಾಹಿ ಇವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ತಂದು ಕೊಟ್ಟಿದ್ದು ತದನಂತರ 2006ರಲ್ಲಿ ತೆರೆಕಂಡಂತಹ ಕಾದಂಬರಿ ಎಂಬ ಧಾರವಾಹಿಯಲ್ಲಿ ನಾಯಕನಟಿಯಾಗಿ ಮುಖ್ಯ ಪಾತ್ರದಲ್ಲಿ ನಟಿಸಲು ಪ್ರಾರಂಭಿಸಿದರು. ಇಲ್ಲಿಂದ ಇವರ ಜೀವನಕ್ಕೆ ಒಂದು ಟರ್ನಿಂಗ್ ಪಾಯಿಂಟ್ ಸಿಕ್ಕಿತು ಅಂತ ಹೇಳಬಹುದು ಈ ಒಂದು ಧಾರಾವಾಹಿಯ ಮೂಲಕ ಅಪಾರ ಕೀರ್ತಿ ಹೆಸರು ಜನ ಹಾಗೂ ಹಣ ಎಲ್ಲವನ್ನು ಕೂಡ ಸಂಪಾದನೆ ಮಾಡಿದರು.

ತದನಂತರ ಇವರು ಸಿನಿಮಾದಲ್ಲಿಯೂ ಕೂಡ ನಟನೆ ಮಾಡುವುದಕ್ಕೆ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ ದರ್ಶನ್ ಶಿವರಾಜ್ ಕುಮಾರ್ ಸೇರಿದಂತೆ ಇನ್ನೂ ಹಲವು ದಿಗ್ಗಜರ ನಟ ತೆರೆಯನ್ನು ಹಂಚಿಕೊಂಡಿದ್ದಾರೆ. ಇವೆಲ್ಲ ಒಂದು ಕಡೆಯಾದರೆ ನಿರೂಪಕಿಯಾಗಿಯೂ ಕೂಡ ಶ್ವೇತಾ ಚಂಗಪ್ಪ ಅವರು ಕಾಣಿಸಿಕೊಂಡಿದ್ದಾರೆ ಹೌದು, ಯಾರಿಗುಂಟು ಯಾರಿಗಿಲ್ಲ, ರಾಜಾ ರಾಣಿ, ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಇದಿಷ್ಟು ಮಾತ್ರವಲ್ಲದೆ ಶ್ವೇತಾ ಚಂಗಪ್ಪ ಅವರು ಬಿಗ್ ಬಾಸ್ ಸೀಸನ್ ಎರಡರಲ್ಲಿಯೂ ಕೂಡ ಸ್ಪರ್ಧಿಯಾಗಿ ಕಾಣಿಸಿಕೊಂಡರು ಇಲ್ಲಿಂದ ಹೊರ ಬಂದ ನಂತರ ಇವರಿಗೆ ಹೆಚ್ಚು ಸಿನಿಮಾ ಮತ್ತು ಸೀರಿಯಲ್ ನಲ್ಲಿ ನಟನೆ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ. ಇನ್ನು ಶ್ವೇತ ಚೆನ್ನಪ್ಪ ಅವರು ಹೊಸದೊಂದು ಚಾಪನ್ನು ಮೂಡಿಸಿದಂತಹ ಕಾರ್ಯಕ್ರಮ ಅಂದರೆ ಅದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಮಜಾ ಟಾಕೀಸ್ ಅಂತಾನೇ ಹೇಳಬಹುದು.

ಇಷ್ಟು ದಿನಗಳ ಕಾಲ ಶ್ವೇತಾ ಚಂಗಪ್ಪ ಅವರು ನಡೆದುಕೊಳ್ಳುತ್ತಿದ್ದಂತಹ ರೀತಿಗೂ ಮಜಾ ಟಾಕೀಸ್ ನಲ್ಲಿ ನಟನೆ ಮಾಡುತ್ತಿದ್ದಂತ ರೀತಿಗೂ ತದ್ವಿರುತವಾಗಿತ್ತು. ಸದಾ ಕಾಲ ಸಂಸಾರಿಕ ಮತ್ತು ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಂತಹ ಶ್ವೇತ ಚಂಗಪ್ಪ ಅವರು ಇದ್ದಕ್ಕಿದ್ದ ಕಾಮಿಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರಿಂದ ಇವರಿಗೆ ಕೆಲವು ನೆಗೆಟಿವ್ ಕಮೆಂಟ್ಸ್ ಕೂಡ ಬರುತ್ತದೆ ಈ ಕಾರ್ಯಕ್ರಮ ನಿಮಗೆ ಸೂಕ್ತವಲ್ಲ ಇಲ್ಲಿಂದ ಹೊರ ನಡೆಯಿರಿ ಎಂಬ ಮಾತುಗಳನ್ನು ಕೂಡ ಕೇಳಿಸಿಕೊಳ್ಳುತ್ತಾರೆ. ಆದರೆ ಇವೆಲ್ಲವನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸಿ ನಾನು ಎಲ್ಲಾ ರೀತಿಯಾದಂತಹ ಅಭಿನಯವನ್ನು ಮಾಡಿ ತೋರಿಸಬಲ್ಲೆ ಎಂಬುದನ್ನು ಸಾಬೀತುಪಡಿಸುತ್ತಾರೆ ಇದಿಷ್ಟು ಇವರ ಸಿನಿಮಾ ಮತ್ತು ಕಿರುತೆರೆ ಲೋಕಕ್ಕೆ ಸಂಬಂಧಪಟ್ಟಂತಹ ವಿಚಾರವಾಗಿದೆ.

ಇನ್ನು ಶ್ವೇತ ಚೆಂಗಪ್ಪ ಅವರು ಇತ್ತೀಚಿಗಷ್ಟೇ ಪಾಲ್ಗೊಂಡಿದ್ದಂತಹ ಸಂದರ್ಶನ ಒಂದರಲ್ಲಿ ಸೃಜನ್ ಲೋಕೇಶ್ ಅವರ ಬಗ್ಗೆ ಶಾ-ಕಿಂ-ಗ್ ಹೇಳಿಕೆ ಒಂದನ್ನು ನೀಡಿದ್ದಾರೆ. ಹೌದು ಸೃಜನ್ ಲೋಕೇಶ್ ಅವರ ಬಗ್ಗೆ ಮೊದಲು ಶ್ವೇತಾ ಚಂಗಪ್ಪ ಅವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರಂತೆ. ಅವನೊಬ್ಬ ದುರಹಂಕಾರಿ ಅಂತ ತಿಳಿದುಕೊಂಡಿದ್ದರಂತೆ ಆದರೆ ಸೃಜನ್ ಲೋಕೇಶ್ ಅವರು ಅಂತ ವ್ಯಕ್ತಿತ್ವವನ್ನು ಒಳಗೊಂಡಿರುವಂತಹ ವ್ಯಕ್ತಿ ಅಲ್ಲ ಎಂಬುದು ಇವರಿಗೆ ತಡವಾಗಿ ಅರ್ಥವಾಗುತ್ತದೆ. ವಿಶೇಷ ಏನೆಂದರೆ ಶ್ವೇತ ಚೆಂಗಪ್ಪ ಅವರ ಸ್ನೇಹಿತೆ ಗ್ರೀಷ್ಮ ಅವರ ಪತಿ ಸೃಜನ್ ಲೋಕೇಶ್ ಎಂಬ ವಿಚಾರವನ್ನು ತಿಳಿದ ನಂತರವಷ್ಟೇ ಅವರ ಮೇಲೆ ಇದ್ದಂತಹ ಭಾವನೆ ಬದಲಾಗುತ್ತದೆ. ಈ ವಿಚಾರವನ್ನು ಸ್ವತಃ ಶ್ವೇತ ಚಂಗಪ್ಪ ಅವರ ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

 

ಲೀಲಾವತಿ ಮತ್ತು ಡಾಕ್ಟರ್ ರಾಜಕುಮಾರ್ ನಡುವಿನ ಸಂಬಂಧದ ವಿಚಾರ ತಿಳಿದ ನಂತರ ಪಾರ್ವತಮ್ಮನವರು ಎಂತಹ ದೊಡ್ಡ ತ್ಯಾಗ ಮಾಡುವುದಕ್ಕೆ ಸಿದ್ಧರಾಗಿದ್ದರು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಐದು ದಶಕಗಳಿಂದಲೂ ಕೂಡ ಲೀಲಾವತಿ ಮತ್ತು ವರನಟ ಡಾಕ್ಟರ್ ರಾಜಕುಮಾರ್ ಅವರ ನಡುವೆ ಸಂಬಂಧವಿದೆ ಎಂಬ ವಿಚಾರ ಚರ್ಚೆಯಾಗುತ್ತಿರುವುದರ ಬಗ್ಗೆ ತಿಳಿದೆ ಇದೆ. ಈ ವಿಚಾರದ ಬಗ್ಗೆ ರಾಜಕುಮಾರ್ ಆಗಲಿ ಪಾರ್ವತಮ್ಮನಾಗಲಿ ಅಥವಾ ಲೀಲಾವತಿಯಾಗಲಿ ಎಲ್ಲಿಯೂ ಕೂಡ ಬಹಿರಂಗವಾಗಿ ನಮ್ಮ ಸಂಬಂಧ ಈ ರೀತಿ ಇದೆ ಎಂದು ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ಡಾಕ್ಟರ್ ರಾಜಕುಮಾರ್ ಹಾಗೂ ಲೀಲಾವತಿಯವರು ಒಬ್ಬರು ಇನ್ನೊಬ್ಬರು ಇಷ್ಟ ಪಡುತ್ತಿದ್ದರು ಇವರಿಬ್ಬರ ಮಗನೇ ವಿನೋದ್ ರಾಜ್ ಎಂದು ಹೇಳುತ್ತಾರೆ. ಇದಕ್ಕೆ ಪೂರಕವಾಗುವಂತೆ ರವಿ ಬೆಳಗೆರೆ ಅವರು ರಾಜ್ ವಿನೋದ್ ಲೀಲಾ ಎಂಬ ಪುಸ್ತಕವನ್ನು ಕೂಡ ಬರೆದು ಅದನ್ನು ಪ್ರಕಟಣೆ ಮಾಡಿದರು. ಈ ಒಂದು ಪುಸ್ತಕ ಓದಿದ ನಂತರ ರಾಜಕುಮಾರ್ ಅವರ ಮಗನೇ ವಿನೋದ್ ರಾಜ್ ಎಂದು ಹೇಳುತ್ತಿದ್ದರು ಇದು ಒಂದು ಕಡೆಯಾದರೆ.

ಮತ್ತೊಂದು ಕಡೆ ಡಾಕ್ಟರ್ ರಾಜಕುಮಾರ್ ಹಾಗೂ ಲೀಲಾವತಿಯವರಿಗೆ ಯಾವುದೇ ಸಂಬಂಧವಿಲ್ಲ ಲೀಲಾವತಿಯವರು ನಾಟಕ ಕಂಪನಿಯ ಓನರ್ ಆದಂತಹ ಮಹಾಲಿಂಗ ಭಾಗವತ್ ಅವರನ್ನು ಮದುವೆಯಾಗಿದ್ದರು ಈ ದಂಪತಿಗಳಿಗೆ ಹುಟ್ಟಿದ ಮಗನೇ ವಿನೋದ್ ಎಂದು ಹೇಳುತ್ತಾರೆ. ಇನ್ನು ವಿನೋದ್ ಎಂಬ ಹೆಸರಿನ ಮುಂದೆ ರಾಜ್ ಎಂಬ ಹೆಸರು ಯಾಕೆ ಸೇರ್ಪಡೆಯಾಯಿತು ಎಂಬ ಇತಿಹಾಸವನ್ನು ನೋಡುವುದಾದರೆ. ವಿನೋದ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಬೇಕಾದ ಅನಿವಾರ್ಯ ಎದುರಾಗುತ್ತದೆ ಈ ಸಮಯದಲ್ಲಿ ದ್ವಾರಕೀಶ್ ಅವರು ವಿನೋದ್ ಎಂಬ ಹೆಸರಿನ ಮುಂದೆ ರಾಜ್ ಎಂಬ ಹೆಸರನ್ನು ಇಡುತ್ತಾರೆ. ತದನಂತರ ವಿನೋದ್ ಎಂಬ ಹೆಸರು ವಿನೋದ್ ರಾಜ್ ಎಂದು ಬದಲಾಗುತ್ತದೆ ಡಾನ್ಸ್ ರಾಜ ಡಾನ್ಸ್ ಎಂಬ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಾರೆ.

ವಿನೋದ್ ಹೆಸರಿನ ಪಕ್ಕ ರಾಜ್ ಎಂಬ ಹೆಸರು ಬಂದ ಕಾರಣ ಎಲ್ಲರೂ ಕೂಡ ಡಾಕ್ಟರ್ ರಾಜಕುಮಾರ್ ಅವರ ಮಗನೇ ವಿನೋದ್ ಈ ಕಾರಣಕ್ಕಾಗಿ ರಾಜ್ ಎಂಬ ಹೆಸರನ್ನು ಸೇರಿಸಿದ್ದಾರೆ ಎಂಬ ಮಾತುಗಳನ್ನು ಆಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ರಾಜ್ ಮತ್ತು ಲೀಲಾವತಿ ಅವರ ನಡುವಿನ ಸಂಬಂಧದ ಚರ್ಚೆ ಕೊನೆಯವರೆಗೂ ಮುಗಿಯುವುದೇ ಇಲ್ಲ. ಆದರೆ ಚಿತ್ರರಂಗದ ಹಿರಿಯರು ಹಾಗೂ ಕೆಲವು ಆಪ್ತರು ಹೇಳುವ ಪ್ರಕಾರ ಲೀಲಾವತಿ ಹಾಗೂ ಡಾಕ್ಟರ್ ರಾಜಕುಮಾರ್ ನಡುವೆ ಸ್ನೇಹ ಸಂಬಂಧವಿತ್ತು ಅಷ್ಟೇ ಅದನ್ನು ಹೊರತು ಪಡಿಸಿದರೆ ಬೇರೆ ಯಾವ ಸಂಬಂಧವೂ ಕೂಡ ಇರಲಿಲ್ಲ ಎಂದು ತಿಳಿದು ಬಂದಿದೆ. ಇನ್ನು ಈ ವಿಚಾರ ಹೊರ ಬರುತ್ತಿದ್ದ ಹಾಗೆ ಬಹಳಷ್ಟು ಚರ್ಚೆ ಹಾಗೂ ತೀವ್ರ ವಿರೋಧಗಳು ಉಂಟಾದವು ಈ ಸಮಯದಲ್ಲಿ ಪಾರ್ವತಮ್ಮನವರು ಒಂದು ನಿಲುವನ್ನು ತೆಗೆದುಕೊಳ್ಳುತ್ತಾರೆ.

ಹೌದು ಅದೇನಂದರೆ ಪಾರ್ವತಮ್ಮದವರು ಬಹಿರಂಗವಾಗಿ ಲೀಲಾವತಿಯವರನ್ನು ಮನೆಗೆ ಕರೆಸಿ, ನೀವು ಪ್ರಚಾರ ಮಾಡುತ್ತಿರುವ ಈ ವಿಚಾರ ನಿಜವೇ ಆದರೆ ನೀವು ನಿಸ್ಸಂಕೋಚವಾಗಿ ಡಾಕ್ಟರ್ ರಾಜಕುಮಾರ್ ಅವರ ಜೊತೆ ಬದುಕಬಹುದು ನನಗೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳುತ್ತಾರಂತೆ. ಈ ಮಾತನ್ನು ಕೇಳುತ್ತಿದ್ದ ಹಾಗೆ ಲೀಲಾವತಿ ಅವರು ನನ್ನನ್ನು ಕ್ಷಮಿಸಿ ಇದು ನನ್ನಿಂದ ಸಾಧ್ಯವಿಲ್ಲ ಎಂದು ಅಲ್ಲಿಂದ ಹೊರಟು ಹೋಗುತ್ತಾರಂತೆ. ನಿಜಕ್ಕೂ ಪಾರ್ವತಮ್ಮನವರ ಈ ಧೈರ್ಯವನ್ನು ಹಾಗೂ ಅವರು ಲೀಲಾವತಿ ಅವರ ಬಗ್ಗೆ ಇಟ್ಟು ಕೊಂಡಿರುವಂತಹ ಗೌರವವನ್ನು ಮೆಚ್ಚಿಕೊಳ್ಳಲೇಬೇಕು. ಏಕೆಂದರೆ ಅಂದಿನ ಕಾಲದಲ್ಲಿ ಪಾರ್ವತಮ್ಮ ಅಂದರೆ ಚಿತ್ರರಂಗದಲ್ಲಿ ಒಂದು ಹೆಸರಿತ್ತು ಗತ್ತು ಇತ್ತು ಆಕೆ ಏನು ಬೇಕಾದರೂ ಮಾಡಬಹುದಾಗಿತ್ತು ಆದರೆ ಹೆಂಗರಳು ಲೀಲಾವತಿಗೆ ಹಾಗೂ ಅವರ ಮಗ ವಿನೋದ್ ಗೆ ಯಾವುದೇ ರೀತಿಯಾದಂತಹ ತೊಂದರೆ ಮಾಡಲಿಲ್ಲ.

ಮತ್ತೊಂದು ವಿಚಾರ ಏನೆಂದರೆ 1978ರಲ್ಲಿ ಭಕ್ತ ಕುಂಬಾರ ಎಂಬ ಸಿನಿಮಾ ಪ್ರಾರಂಭವಾಗುತ್ತದೆ ಈ ಸಮಯದಲ್ಲಿ ಪಾರ್ವತಮ್ಮನವರು ರಾಜಕುಮಾರ್ ಅವರ ಹೆಂಡತಿಯ ಪಾತ್ರವನ್ನು ಲೀಲಾವತಿಯವರೆ ಮಾಡಬೇಕು ಎಂದು ಪಟ್ಟು ಹಿಡಿದುಕೊಳ್ಳುತ್ತಾರೆ. ಈ ಸಮಯದಲ್ಲಿ ಕೆಲವೊಂದು ನಿರ್ಮಾಪಕರು ಮತ್ತು ನಿರ್ದೇಶಕರು ಬೇಡ ಇದರಿಂದ ರಾಜಕುಮಾರ ಅವರ ಹೆಸರಿಗೆ ಮತ್ತೆ ಚ್ಯೂತಿ ಬಂದಂತೆ ಆಗುತ್ತದೆ ಎಂಬ ಮಾತನ್ನು ಹೇಳುತ್ತಾರಂತೆ. ಆದರೂ ಕೂಡ ಪಾರ್ವತಮ್ಮನವರು ಇದು ಸಿನಿಮಾರಂಗಕ್ಕೆ ಸೇರ್ಪಡೆಯಾದಂತಹ ವಿಚಾರ ವೈಯಕ್ತಿಕ ವಿಚಾರಗಳನ್ನು ಇಲ್ಲಿ ಎಳೆಯಬೇಡಿ ನಾನು ಕಲೆಗೆ ಮಾತ್ರ ಬೆಲೆಯನ್ನು ನೀಡುತ್ತೇನೆ ಎಂದು ಹಠ ಹಿಡಿದು ಲೀಲಾವತಿಯವರೆ ಈ ಪಾತ್ರವನ್ನು ಮಾಡಬೇಕು ಅಂತ ಹೇಳಿದರಂತೆ. ಈ ವಿಚಾರವನ್ನು ಸಂದರ್ಶನ ಗಾರರೊಬ್ಬರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದಾರೆ ಆ ವಿಡಿಯೋ ಕೆಳಗೆದೆ ಇದನ್ನು ನೋಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಡ್ಯಾನ್ಸ್ ಕಿಂಗ್ ಎಂದೇ ಫೇಮಸ್ ಆಗಿರೋ ವಿನೋದ್ ರಾಜ್ ಅವರನ್ನು ಯಾವುದೇ ಡ್ಯಾನ್ಸ್ ರಿಯಾಲಿಟಿ ಷೋಗೆ ಜಡ್ಜ್ ಆಗಿ ಕರೆಯುವುದಿಲ್ಲ ಯಾಕೆ ಗೊತ್ತಾ.? ಸತ್ಯ ಬಾಯ್ಬಿಟ್ಟ ವಿನೋದ್

ಸ್ಯಾಂಡಲ್ ವುಡ್ ನಲ್ಲಿ ಡ್ಯಾನ್ಸಿಂಗ್ ಕಿಂಗ್ ಎಂದು ಫೇಮಸ್ ಆದ ಮೊದಲ ನಟ ವಿನೋದ್ ರಾಜ್. ಅವರು ಮೈಕಲ್ ಜಾಕ್ಸನ್ ಕೂಡ ನ್ಯಾಚುವಂತೆ ಹೆಜ್ಜೆ ಹಾಕುತ್ತಿದ್ದ ಇವರು ನೃತ್ಯವನ್ನು ಕನ್ನಡಿಗರು ಬಹಳ ಮೆಚ್ಚಿದ್ದರು. ನೃತ್ಯದ ಜೊತೆಗೆ ಅಭಿನಯವನ್ನು ಕೂಡ ಕರಗತ ಮಾಡಿಕೊಂಡಿದ್ದ ಇವರು 90ರ ದಶಕದಲ್ಲಿ ಮಹಾಭಾರತ, ಡ್ಯಾನ್ಸ್ ರಾಜ ಡ್ಯಾನ್ಸ್ ಮುಂತಾದ ಕೆಲವು ಸಿನಿಮಾಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದರು. ಹೀರೋ ಆಗಿ ಕೂಡ ಒಳ್ಳೆ ಹೆಸರು ಮಾಡುತ್ತಿದ್ದ ವಿನೋದ್ ರಾಜ್ ಅವರು ಇದ್ದಕ್ಕಿದ್ದಂತೆ ಸಿನಿಮಾ ರಂಗದಿಂದ ದೂರ ಉಳಿದರು.

ಇದಕ್ಕೆ ಯಾವುದೇ ಕಾರಣವೂ ಇದುವರೆಗೂ ರೀವಿಲ್ ಆಗದೆ ಇರುವ ಕಾರಣ ಅವಕಾಶಗಳ ಕೊರತೆಯಿಂದ ಇವರು ಅಭಿನಯಿಸುತ್ತಿಲ್ಲ ಎಂದೇ ಎಲ್ಲರೂ ತಿಳಿದುಕೊಂಡಿದ್ದಾರೆ. ಇವರ ತಾಯಿ ಲೀಲಾವತಿ ಅವರು ಕೂಡ ಕನ್ನಡದ ಫೇಮಸ್ ಹಿರಿಯ ಕಲಾವಿದೆ ನಾಯಕಿಯಾಗಿ, ತಾಯಿಯ ಪಾತ್ರಧಾರಿ ಆಗಿ, ಖಳನಾಯಕಿಯಾಗಿ ಹಲವು ದಶಕಗಳವರೆಗೆ ಕನ್ನಡ ಸಿನಿಮಾ ಲೋಕವನ್ನು ಆಳಿದ ಇವರು ನೂರಾರು ಸಿನಿಮಾಗಳಲ್ಲಿ ಲೀಡ್ ರೋಲ್ ಅಲ್ಲಿ ಅಭಿನಯಿಸಿದ್ದಾರೆ. ವಯಸ್ಸಾದ ಬಳಿಕ ಇವರು ಕೂಡ ಸಿನಿಮಾ ಇಂಡಸ್ಟ್ರಿ ಯಿಂದ ದೂರ ಉಳಿಯುವ ನಿರ್ಧಾರ ಮಾಡಿದರು. ಬಳಿಕ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದ ತಾಯಿ ಮಗ ಅದರಲ್ಲೇ ಜೀವನ ಕಂಡುಕೊಳ್ಳುವ ನಿರ್ಧಾರ ಮಾಡಿದರು.

ಲೀಲಾವತಿ ಅವರು ಚೆನ್ನೈ ಅಲ್ಲಿ ಕೂಡ ಸ್ವಲ್ಪ ಜಮೀನು ಖರೀದಿಸಿದ್ದರು ಮತ್ತು ಬೆಂಗಳೂರಿನ ಸೋಲದೇವನ ಹಳ್ಳಿ ಬಳಿ ಕೃಷಿ ಭೂಮಿ ಖರೀದಿಸಿ ಅದನ್ನೇ ತೋಟವಾಗಿ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಚೆನ್ನೈ ಅಲ್ಲಿ ಇದ್ದ ಜಮೀನನ್ನು ಮಾರಿ ಸೋಲದೇವನಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಇವರ ಸೇವಾ ಮನೋಭಾವವನ್ನು ಇಡೀ ಕರ್ನಾಟಕ ಕೊಂಡಾಡಿದೆ.

ಅನಾರೋಗ್ಯ ಕಾರಣದಿಂದ ಹಾಸಿಗೆ ಹಿಡಿದಿರುವ ಇವರು ವಿನೋದ್ ರಾಜ್ ಅವರ ಆರೈಕೆಯಲ್ಲಿ ಇದ್ದಾರೆ. ಬಸವರಾಜ ಬೊಮ್ಮಾಯಿ ಅವರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದ ಸಮಯದಲ್ಲಿ ಲೀಲಾವತಿ ಅವರು ಕೂಡ ಬಂದು ಭಾಗಿಯಾಗಿದ್ದರು. ಇಷ್ಟೆಲ್ಲಾ ಹೆಸರು ಮಾಡಿರುವ ವಿನೋದ್ ರಾಜ್ ಅವರು ಅವರ ಟ್ಯಾಲೆಂಟ್ ಗೆ ತಕ್ಕ ಅವಕಾಶಗಳನ್ನು ಪಡೆದಿದ್ದರೆ ಇಂದಿಗೂ ಬಹಳ ಬಿಝಿ ಇರುವ ನಟ ಆಗಿರುತ್ತಿದ್ದರು. ಇವರು ಇಂಡಸ್ಟ್ರಿಯಿಂದ ದೂರ ಇದ್ದರೂ ಕೂಡ ಇವರು ನೆಮ್ಮದಿಯಾಗಿ ಇಡಲು ಕಾಣದ ಕೈಗಳು ಬಿಡುತ್ತಿಲ್ಲ.

ಇವರಿಗೆ ಎರಡು ಬಾರಿ ಕಾರ್ ಅಟ್ಯಾಕ್ ನಡೆಸಿದ್ದಾರೆ ಮತ್ತು ಒಂದು ಬಾರಿ ಸೋಲದೇವನಹಳ್ಳಿಯ ತೋಟಕ್ಕೆ ಬೆಂಕಿ ಹಾಕಿ ತೊಂದರೆ ಕೊಟ್ಟಿದ್ದಾರೆ. ಇವರನ್ನು ರಿಯಾಲಿಟಿ ಶೋ ಕಾರ್ಯಕ್ರಮಗಳಿಗೆ ಜಡ್ಜ್ ಆಗಿ ಕರೆಸಿ ಎಂದು ಜನಗಳಿಂದ ಕೋರಿಕೆಗಳು ಕೇಳಿ ಬರುತ್ತಿದ್ದೆ ಇದಕ್ಕಾಗಿ ಚಾನೆಲ್ ಒಂದು ಅವರನ್ನು ಅಪ್ರೋಚ್ ಮಾಡಿದಾಗ ನನ್ನ ಬದುಕಿಗಾಗಿ ಕೃಷಿ ಇದೆ ನನಗೆ ಅಷ್ಟೇ ಸಾಕು ಎಂದು ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ.

ಎನ್ನುತ್ತಿದ್ದಾರೆ ಮತ್ತು ಈಗಾಗಲೇ ಅವರ ಮೇಲೆ ಅಟ್ಯಾಕ್ ಗಳು ಮತ್ತು ಅವರಿಗೆ ತೊಂದರೆ ಕೊಡುವ ಕೆಲಸ ನಡೆದಿರುವುದರಿಂದ ಚಾನೆಲ್ ಹಾಗೂ ಕಾರ್ಯಕ್ರಮಕ್ಕೂ ತೊಂದರೆ ಆಗಬಹುದು ಎನ್ನುವ ಭಯದಿಂದ ಚಾನಲ್ಗಳು ಅವರಿಗೆ ಆಫರ್ ನೀಡುತ್ತಿಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಅದೇನೆ ಆಗಿದ್ದರೂ ಕನ್ನಡ ಚಿತ್ರರಂಗದ ಒಬ್ಬ ಪ್ರತಿಭಾವಂತ ನಟನಿಗೆ ಅನ್ಯಾಯ ಆಯ್ತು ಎಂದು ಅನಿಸುವುದಂತು ಸುಳ್ಳಲ್ಲ. ಈ ವಿಚರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.