Home Blog Page 37

ತುಲಾ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ 2024, ಇದೊಂದು ಕೆಲಸ ನೀವು ಮಾಡದಿದ್ದರೆ ಸಾಕು.!

ತುಲಾ ರಾಶಿಯವರು ಈಗಾಗಲೇ ಪಂಚಮ ಶನಿಯ ಪ್ರಭಾವದಲ್ಲಿ ಇದ್ದಾರೆ. ಏಪ್ರಿಲ್ 07 ರಂದು ಶನಿ ಮತ್ತು ಸೂರ್ಯನ ಜೊತೆಗೆ ಶುಕ್ರನು ಕೂಡ ಇವರನ್ನು ಕೂಡುತ್ತಿದ್ದಾರೆ ಇದರ ಪರಿಣಾಮವಾಗಿ ಅನೇಕ ಶುಭಾಶುಭ ಫಲಗಳನ್ನು ತುಲಾ ರಾಶಿಯವರು ಪಡೆಯುತ್ತಿದ್ದಾರೆ. ತುಲಾ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಇದ್ದ ಬಹುತೇಕ ಎಲ್ಲಾ ರೀತಿಯ ಪರಿಣಾಮಗಳು ಕೂಡ ಏಪ್ರಿಲ್ ತಿಂಗಳಿನಲ್ಲೂ ಮುಂದುವರೆಯುತ್ತಿದೆ ಎಂದರೂ ಕೂಡ ತಪ್ಪಾಗಲಾರದು.

ಕೆಲಸ ಕಾರ್ಯಗಳಲ್ಲಿ ವಿಳಂಬ, ಅಂದುಕೊಂಡ ಕಾರ್ಯ ನಡೆಯದೇ ಇರುವುದು ಅಥವಾ ಎಲ್ಲಾ ಪ್ರಯತ್ನಗಳು ಫೇಲ್ ಆಗುವುದು, ಸಣ್ಣಪುಟ್ಟ ಆರೋಗ್ಯ ತೊಂದರೆ ಇಂತಹ ಪರಿಣಾಮಗಳು ಖಂಡಿತವಾಗಿಯೂ ಕೂಡ ಇರುತ್ತದೆ. ಆದರೆ ಸ್ವಲ್ಪ ಸಮಯ ಬದಲಾವಣೆ ಆಗುತ್ತಿದೆ ಆದರೆ ಈ ತಿಂಗಳಿನಲ್ಲಿ ನಿಮಗೆ ಹೆಚ್ಚಿನ ಕೆಟ್ಟ ಪರಿಣಾಮಗಳು ಸಿಗಬಾರದು ಎಂದರೆ ನೀವು ಒಂದು ವಿಷಯದಲ್ಲಿ ಜಾಗೃತರಾಗಿ ಇರಲೇಬೇಕು.

ಈ ಸುದ್ದಿ ಓದಿ :- ಬಿಪಿ ಶುಗರ್ ಇದ್ದವರು ಇದನ್ನು ಪಾಲಿಸಿ, ಮೆಡಿಕಲ್ ಶಾಪ್ ನಲ್ಲಿ ಸಿಗುವುದು ಡಾಕ್ಟರ್ ಹೇಳಿದ್ದು ಮಾತ್ರ ಔಷಧವಲ್ಲ.!

ಅದೇನೆಂದರೆ, ಈ ತಿಂಗಳು ಪೂರ್ತಿ ನಿಮ್ಮನ್ನು ಒಂದು ವಿಷಯ ಬಹಳ ಕಾಡುತ್ತದೆ. ಅದು ಯಾವ ವಿಷಯ ಎಂದರೆ ಇನ್ನೊಬ್ಬರ ಜೊತೆ ಹೋಲಿಕೆ ಮಾಡಿಕೊಳ್ಳುವುದು. ತುಲಾ ರಾಶಿಯವರಿಗೆ ಈ ತಿಂಗಳಿನಲ್ಲಿ ಇದೇ ರೀತಿ ಆಲೋಚನೆ ಹೆಚ್ಚಾಗಿ ಬರುತ್ತದೆ. ತುಲಾ ರಾಶಿಯವರು ಇದೇ ಯೋಚನೆಯಲ್ಲಿ ತಿಂಗಳ ಪೂರ್ತಿ ಸಮಯ ಕಳೆಯುತ್ತಾರೆ.

ಸಾವಿರದಲ್ಲಿ ಸಂಬಳ ತೆಗೆದುಕೊಳ್ಳುವವರಿಗೆ ಲಕ್ಷ, ಲಕ್ಷ ಸಂಬಳ ತೆಗೆದುಕೊಳ್ಳುವವರಿಗೆ ಯೋಚನೆ, ಲಕ್ಷ ಸಂಬಳ ತೆಗೆದುಕೊಳ್ಳುವವರಿಗೆ ಕೋಟಿ ಯೋಚನೆ ತಮ್ಮ ಸ್ನೇಹಿತನೇ ಮನೆ ಕಟ್ಟಿದರು ಮನಃಸ್ಪೂರ್ತಿಯಾಗಿ ಅದನ್ನು ಒಪ್ಪಿಕೊಡಲಾಗದ ಮನಸ್ಥಿತಿ ಇವರಲ್ಲಿ ಮನೆ ಮಾಡಿರುತ್ತದೆ. ಇದೇ ವಿಚಾರವು ನಿಮ್ಮ ಮನಃಶಾಂತಿಯನ್ನು ಕೂಡ ಹಾಳು ಮಾಡುತ್ತದೆ.

ಹಣಕಾಸಿನ ವಿಚಾರವಾಗಿ ಮಾತ್ರವಲ್ಲದೆ ಉಳಿದ ಎಲ್ಲ ವಿಚಾರಗಳಲ್ಲೂ ಕೂಡ ಈ ರೀತಿಯ ಕಂಪೇರಿಷನ್ ಇದ್ದೇ ಇರುತ್ತದೆ. ಈಗ ನಿಮ್ಮ ಪರಿಸ್ಥಿತಿ ಮತ್ತು ಮನಃಸ್ಥಿತಿ ಹೇಗಾಗಿದೆ ಎಂದರೆ ಯಾವ ವಿಚಾರದಲ್ಲಿ ಅಳತೆ ಮಾಡಿ ತೂಕ ಮಾಡಿ ನೋಡಿದರೂ ಕೂಡ ನಿಮ್ಮ ವಿರೋಧಿ ಸ್ಥಾನದಲ್ಲಿ ಯಾರು ಇರುತ್ತಾರೋ ಅವರೇ ತೂಕವಾಗಿ ಕಾಣುತ್ತಾರೆ.

ಈ ಸುದ್ದಿ ಓದಿ :- ಮನೆಯಲ್ಲಿ ದೈವಶಕ್ತಿ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿಯುವುದು ಹೇಗೆ ನೋಡಿ.!

ಪರಿಣಾಮ ನೀವು ತಕ್ಕಡಿಯಲ್ಲಿ ಹಾಕಿದಾಗ ಕಡಿಮೆ ಭಾರವು ಎತ್ತರದಲ್ಲಿ ಹೋಗುವಂತೆ ಎತ್ತರಕ್ಕೆ ಹೋಗುತ್ತಾ ಹೋಗುತ್ತಾ ಅಭದ್ರತೆಯಲ್ಲಿ ಮತ್ತು ಅಸಮಾಧಾನದಲ್ಲಿ, ಅಸಮಾನತೆಯಲ್ಲಿ ಈ ತಿಂಗಳನ್ನು ಕಳೆಯುತ್ತೀರಿ. ಈ ತಿಂಗಳಿನಲ್ಲಿ ನೀವು ಎಚ್ಚರಿಕೆಯಿಂದ ಇರಲೇಬೇಕಾದು ಹೇಳಿದ ವಿಚಾರವೂ ಕೂಡ ಇದೇ ಆಗಿದೆ. ಆದಷ್ಟು ಈ ವಿಷಯದಲ್ಲಿ ತಾಳ್ಮೆ ಇಂದ ಇರಿ.

ಪ್ರತಿಯೊಬ್ಬರಿಗೂ ಜೀವನದಲ್ಲಿ ಅವರವರ ಸಮಯ ಬಂದೇ ಬರುತ್ತದೆ, ಆ ಸಮಯ ಬರುವವರೆಗೂ ಕೂಡ ಇಂತಹ ಸನ್ನಿವೇಶಗಳನ್ನು ಎದುರಿಸಲೇಬೇಕು ಮತ್ತು ಎಲ್ಲರ ಬದುಕಿನಲ್ಲಿ ಇದು ಬಹಳ ಸಾಮಾನ್ಯ ವಿಷಯ ಆಗಿದೆ. ಇದನ್ನು ಸ್ಪೂರ್ತಿ ತೆಗೆದುಕೊಂಡು ಬದುಕಬೇಕು ಹೊರತು ವಿಪರೀತವಾಗಿ ಮನಸ್ಸಿಗೆ ಹಚ್ಚಿಕೊಳ್ಳದೇ ಇರುವುದು ಒಳ್ಳೆಯದು.

ಈ ಸುದ್ದಿ ಓದಿ :-BPL / ಅಂತ್ಯೋದಯ ರೇಷನ್ ಕಾರ್ಡ್ ಇರುವ ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಸಿಗಲಿದೆ 1 ಲಕ್ಷ ಹಣ.!

ಈ ತಿಂಗಳು ಪೂರ್ತಿ ನೀವು ಬರಿ ಓಡಾಟದಲ್ಲಿ ಹಣ ಹೊಂದಾಣಿಕೆ ಮಾಡುವುದರಲ್ಲಿ ಕೆಲಸ ಸ್ಥಳದಲ್ಲಿ ಕೆಲಸ ಮಾಡುವುದಕ್ಕಿಂತ ಅದಕ್ಕೆ ತಯಾರಿ ಮಾಡಿಕೊಳ್ಳುವುದರಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಓಡಾಟಗಳಲ್ಲಿ ಸಮಯ ಕಳೆಯುತ್ತೀರಿ. ಏಪ್ರಿಲ್ 14ರ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಣೆ ಕಾಣಲಿದೆ.

ಒಟ್ಟಾರೆಯಾಗಿ ಹೇಳಬಹುದಾದ ಸಂಗತಿ ಏನೆಂದರೆ ನೀವು ಹೆಚ್ಚಿಗೆ ಯಾವುದನ್ನು ಮನಸ್ಸಿಗೆ ಹಾಕಿಕೊಳ್ಳದಿದ್ದರೆ ಆರೋಗ್ಯ ಉತ್ತಮ ಮತ್ತು ಈ ಮೇಲೆ ತಿಳಿಸಿದ ಸೂಚನೆಯನ್ನು ಅನುಸರಿಸಿ ಈ ತಿಂಗಳಲ್ಲಿ ಬರುವ ಕಷ್ಟಗಳಿಗೆ ಹೆದರದೆ ಎದೆ ಕೊಟ್ಟು ನಿಂತರೆ ಹಣಕಾಸಿನ ನಷ್ಟ ಆಗುವುದು ತಪ್ಪುತ್ತದೆ ಎನ್ನುವುದು. ನವಗ್ರಹಗಳ ಆರಾಧನೆ ಮಾಡಿ, ಶುಭವಾಗಲಿ.

https://youtu.be/nPEjjNIAJxI?si=eLgmreya97UJl12o

ಎಷ್ಟೇ ಕಷ್ಟಪಟ್ಟರು ಸ್ವಂತ ಮನೆ ಕನಸು ನನಸಾಗುತ್ತಿಲ್ಲವೇ? 7 ಗುರುವಾರ ಈ ಚಿಕ್ಕ ಕೆಲಸ ಮಾಡಿ, ಮುಕ್ಕೋಟಿ ದೇವತೆಗಳ ಆಶೀರ್ವಾದದಿಂದ ಸ್ವಗೃಹ ಯೋಗ ಖಚಿತ…

 

ಸ್ವಂತ ಮನೆ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ನಮಗಾಗಿ ನೆಲೆಸಲು ಒಂದು ಭದ್ರವಾದ ನೆಲೆ ಇಲ್ಲ ಎಂದರೆ ಬದುಕು ಪೂರ್ತಿ ಅಭದ್ರತೆಯಲ್ಲಿ ಕಳೆದು ಹೋಗುತ್ತದೆ. ದುಡಿದ ಹೆಚ್ಚಿನ ಭಾಗದ ಹಣವನ್ನು ಬಾಡಿಗೆ ಮನೆಗಳಲ್ಲಿ ಬದುಕುವುದಕ್ಕಾಗಿ ಕೊಡಬೇಕು ಅದು ಅಲ್ಲದೆ ಬಾಡಿಗೆ ಮನೆಯಲ್ಲಿ ಬದುಕುವವರಿಗೆ ಅವರ ಮಾಲೀಕರಿಂದ 108 ರೂಲ್ಸ್ ಗಳು ಇರುತ್ತವೆ.

ಆಗ ದಿನಪೂರ್ತಿ ಕಾಡುವ ಒಂದೇ ಒಂದು ಚಿಂತೆ ನಮಗೆ ಸ್ವಂತ ಮನೆ ಯೋಗ ಯಾವಾಗ ಬರುತ್ತದೆ ಎನ್ನುವುದೇ ಆಗಿದೆ. ದುಡಿಯುವ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಜೀವಮಾನದಲ್ಲಿ ತನ್ನ ಇಷ್ಟಪಟ್ಟ ಹಾಗೆ ಒಂದು ಸ್ವಂತ ಮನೆ ಕಟ್ಟಿ ಆ ಮನೆಯಲ್ಲಿ ತಾನು ಮತ್ತು ತನ್ನ ಪರಿವಾರ ನೆಮ್ಮದಿಯಾಗಿ ಸಮಯ ಕಳಬೇಕು ಎನ್ನುವ ಆಸೆ ಇರುತ್ತದೆ.

ಈ ಸುದ್ದಿ ಓದಿ:- ತುಲಾ ರಾಶಿಯ ಏಪ್ರಿಲ್ ತಿಂಗಳ ಭವಿಷ್ಯ 2024, ಈ ಎಂಟು ದಿನಗಳು ಮಾತ್ರ ಮಹಾರಾಜಯೋಗ.!

ಆದರೆ ಮನೆ ಕಟ್ಟಿಸುವ ವಿಚಾರ ಅಷ್ಟೊಂದು ಸರಳವಾದದ್ದಲ್ಲ ಕೈಯಲ್ಲಿ ಹಣ ಇಟ್ಟುಕೊಂಡು ಕೂಡ ಎಷ್ಟೋ ಬಾರಿ ಈ ವಿಚಾರವಾಗಿ ವಿಘ್ನಗಳನ್ನು ಎದುರಿಸಬೇಕು. ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಅಂದುಕೊಂಡ ಹಾಗೆ ಏನೂ ನಡೆಯುತ್ತಿರುವುತ್ತಿಲ್ಲ. ಈ ರೀತಿ ಪರಿಸ್ಥಿತಿ ಇದ್ದಾಗ ನಿಮ್ಮ ಸ್ವಂತ ಮನೆಯ ಕನಸು ಆದಷ್ಟು ಬೇಗ ನೆರವೇರಬೇಕು ಮನೆ ಕಟ್ಟಿಸುವುದಕ್ಕೆ ಇರುವ ವಿಘ್ನಗಳು ನಿವಾರಣೆಯಾಗಿ ಸ್ವಗೃಹ ಯೋಗ ಬರಬೇಕು.

ನಿಮ್ಮ ಮನೆ ಕಟ್ಟಿಸುವ ಕೆಲಸಕ್ಕೆ ಶೀಘ್ರವೇ ದೇವಾನು ದೇವತೆಗಳ ಆಶೀರ್ವಾದ ದೊರೆತು ಶುಭವಾಗಬೇಕು ಎನ್ನುವುದಾದರೆ ಈಗ ನಾವು ಹೇಳುವ ಒಂದು ಆಚರಣೆಯನ್ನು 7 ಗುರುವಾರ ಶ್ರದ್ಧಾ ಭಕ್ತಿ ಹಾಗೂ ನಂಬಿಕೆಯಿಂದ ಆಚರಿಸಿ ಸಾಕು 100% ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ.

ಗುರುವಾರದಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಮಡಿಯುಟ್ಟು ನಿಮ್ಮ ಮನೆಯಲ್ಲಿ ಸರಳವಾಗಿ ದೇವರ ಪೂಜೆ ಮಾಡಬೇಕು. ಗುರುವಾರದಂದು ಈ ಪೂಜೆ ಮಾಡುವುದರಿಂದ ಗುರುಬಲ ಹೆಚ್ಚಾಗಿ ನಿಮಗೆ ಮನೆ ಯೋಗ ಬರುತ್ತದೆ. ಈಗ ಈ ಸರಳ ಆಚರಣೆ ಶುರು ಮಾಡಬೇಕು.

ಈ ಸುದ್ದಿ ಓದಿ:- ಈ ಮಂತ್ರವನ್ನು ಜಪ ಮಾಡಿ ಸಾಕು, ಮಕ್ಕಳಾಗದೇ ಇದ್ದವರಿಗೆ ಮಕ್ಕಳಾಗುವ ಯೋಗ ಬರುತ್ತದೆ…

ದೇವರ ಪೂಜೆ ಆದಮೇಲೆ ಭಗವಂತನ ಕೃಪಾಕಟಾಕ್ಷಕ್ಕಾಗಿ ನಿಮ್ಮ ಇಷ್ಟ ದೇವರು ಮನೆ ದೇವರು ಎಲ್ಲರನ್ನು ಬೇಡಿಕೊಂಡ ಮೇಲೆ ಮೊದಲಿಗೆ ಮನೆಯ ಹಿರಿಯರಿಂದ ಆಶೀರ್ವಾದ ಪಡೆಯಬೇಕು. ಒಂದು ವೇಳೆ ಮನೆಯಲ್ಲಿ ಹಿರಿಯರು ಯಾರು ಇಲ್ಲದೆ ಇದ್ದರೆ ಹಿರಿಯರ ಫೋಟೋಗೆ ನಮಸ್ಕರಿಸಬಹುದು ಅಥವಾ ಪತ್ನಿ ಈ ಪೂಜೆ ಮಾಡುತ್ತಿದ್ದರೆ ತನ್ನ ಪತಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಬಹುದು.

ನಂತರ ಒಂದು ಆಲೂಗಡ್ಡೆಯನ್ನು ತೆಗೆದುಕೊಂಡು ಅದನ್ನು ಬೇಯಿಸಬೇಕು ಮತ್ತು ಮೂರು ಚಿಟಿಕೆ ಅರಿಶಿನ ಹಾಕಿ ಈಗ ಚೆನ್ನಾಗಿ ಮಿಕ್ಸ್ ಮಾಡಿ ಎರಡು ಉಂಡೆ ಮಾಡಿಕೊಳ್ಳಬೇಕು. ಇದರಲ್ಲಿ ಒಂದು ಉಂಡೆಯನ್ನು ನಿಮ್ಮ ಮನೆ ಸುತ್ತಮುತ್ತ ‌ಸಿಗುವ ಯಾವುದಾದರೂ ಹಸುವಿಗೆ ತಿನಿಸಬೇಕು.

ಈ ಸುದ್ದಿ ಓದಿ:- BPL / ಅಂತ್ಯೋದಯ ರೇಷನ್ ಕಾರ್ಡ್ ಇರುವ ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಸಿಗಲಿದೆ 1 ಲಕ್ಷ ಹಣ.!

ಮತ್ತು ಇನ್ನೊಂದು ಉಂಡೆಯನ್ನು ಹತ್ತಿರದಲ್ಲಿರುವ ಅರಳಿ ಮರದ ಪಕ್ಕದಲ್ಲಿ ಸ್ವಲ್ಪ ಮಣ್ಣು ತೆಗೆದು ಅದರೊಳಗೆ ಹಾಕಿ ಮುಚ್ಚಬೇಕು ಮತ್ತು ಈ ಆಚರಣೆ ಮಾಡಿದ ಮೇಲೆ ಹಿಂತುರುಗಿ ನೋಡದೆ ಮನೆಗೆ ಬರಬೇಕು, ಏಳು ವಾರಗಳ ಕಾಲ ಇದೇ ರೀತಿಯಾಗಿ ನೀವು ಪಾಲನೆ ಮಾಡಿದರೆ ನಿಮ್ಮ ಮನೆ ಕಟ್ಟಿಸುವ ಕನಸಿಗೆ ಭಗವಂತನ ಆಶೀರ್ವಾದ ದೊರೆಯುತ್ತದೆ ಮತ್ತು ಒಂದು ವೇಳೆ ಈಗಾಗಲೇ ಮನೆ ಕೆಲಸ ಆರಂಭವಾಗಿ ಯಾವುದಾದರೂ ತೊಡಕುಗಳು ಆಗುತ್ತಿದ್ದರೆ ಅದು ಕೂಡ ನಿವಾರಣೆ ಆಗುತ್ತದೆ.

ಆಮೆ ಉಂಗುರವನ್ನು ಈ ರಾಶಿಯವರು ಧರಿಸಲೇಬಾರದು, ನೀವು ಆಮೆ ಉಂಗುರ ಹಾಕುತ್ತಿದ್ದೀರಾ? ತಪ್ಪದೇ ಈ ಸುದ್ದಿ ನೋಡಿ.!

 

ಇತ್ತೀಚಿನ ದಿನಗಳಲ್ಲಿ ಆಮೆ ಉಂಗುರ ಧರಿಸುವುದು ಬಹಳ ಟ್ರೆಂಡಿಂಗ್ ಆಗಿದೆ. ಆಮೆ ಉಂಗುರ ಧರಿಸುವುದರಿಂದ ಅದೃಷ್ಟ ಹೆಚ್ಚಾಗುತ್ತದೆ ಹಣಕಾಸಿನ ಕೊರತೆ ಬರುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಮತ್ತು ಎಲ್ಲಾ ಕಾರ್ಯಗಳಲ್ಲೂ ಕೂಡ ಜಯ ಸಿಗುತ್ತದೆ ಎಂದು ನಂಬಲಾಗುತ್ತದೆ.

ನಮ್ಮ ಪುರಾಣಗಳಲ್ಲಿರುವ ನಂಬಿಕೆ ಪ್ರಕಾರವಾಗಿ ತಾಯಿ ಮಹಾಲಕ್ಷ್ಮಿ ಸಮುದ್ರದಿಂದ ಜನಿಸಿದವರು ಹಾಗಾಗಿ ನೀರಿನಲ್ಲಿರುವ ಈ ಆಮೆಯು ಐಶ್ವರ್ಯದ ಸಂಕೇತ ಎಂದು ಭಾವಿಸಲಾಗಿದೆ. ಮಹಾ ವಿಷ್ಣುವಿನ 10 ಅವತಾರಗಳಲ್ಲಿ ಕೂರ್ಮಾವತಾರ ಕೂಡ ಒಂದಾಗಿರುವುದರಿಂದ ಲಕ್ಷ್ಮಿ ಸಮೇತ ಮಹಾ ವಿಷ್ಣುವಿನ ಮೇಲೆ ಅಪಾರವಾದ ನಂಬಿಕೆ ಇರುವವರು ಅವರ ಅನುಗ್ರಹ ಕೋರಿ ಈ ಉಂಗುರಗಳನ್ನು ಧರಿಸುತ್ತಾರೆ.

ಆದರೆ ಎಲ್ಲಾ ರಾಶಿಯವರಿಗೂ ಕೂಡ ಇದು ಆಗಿ ಬರುವುದಿಲ್ಲ, ಆಮೆ ಉಂಗುರ ಧರಿಸುವುದಕ್ಕೂ ಕೆಲವು ನಿಯಮಗಳಿವೆ. ಒಂದು ವೇಳೆ ಇದರಲ್ಲಿ ವ್ಯತ್ಯಾಸಗಳಾದರೆ ಕಷ್ಟ ತಪ್ಪಿದ್ದಲ್ಲ, ಹಾಗಾದರೆ ಆಮೆ ಉಂಗುರ ಧರಿಸಲು ಪಾಲಿಸಲೇಬೇಕಾದ ನಿಯಮಗಳೇನು? ಇವುಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

ಈ ಸುದ್ದಿ ಓದಿ:- ತುಲಾ ರಾಶಿಯ ಏಪ್ರಿಲ್ ತಿಂಗಳ ಭವಿಷ್ಯ 2024, ಈ ಎಂಟು ದಿನಗಳು ಮಾತ್ರ ಮಹಾರಾಜಯೋಗ.!

* ಆಮೆ ಉಂಗುರವನ್ನು ಉಂಗುರದ ಬೆರಳು ಅಥವಾ ಮಧ್ಯದ ಬೆರಳಿಗೆ ಮಾತ್ರ ಧರಿಸಬೇಕು, ಅದರಲ್ಲೂ ಬಲಗೈ ಬೆರಳಿಗೆ ಮಾತ್ರ ಧರಿಸಬೇಕು
* ಆಮೆ ಉಂಗುರವನ್ನು ಗುರುವಾರ ಅಥವಾ ಶುಕ್ರವಾರದಂದು ಮಾತ್ರ ಖರೀದಿಸಬೇಕು ಹಾಗೂ ಧರಿಸಬೇಕು
* ಉಂಗುರವನ್ನು ನಮ್ಮ ಕಡೆಗೆ ಮುಖ ಮಾಡಿದಂತೆ ಧರಿಸಬೇಕು.
* ಶುಭಫಲಗಳಿಗಾಗಿ ಆಮೆ ಉಂಗುರ ಧರಿಸುವುದಾದರೆ ಪಂಚಧಾತು, ಅಷ್ಟಧಾತು ಅಥವಾ ಬೆಳ್ಳಿಯ ಆಮೆ ಉಂಗುರಗಳನ್ನು ಧರಿಸಬೇಕು.

* ಉಂಗುರದಲ್ಲಿ ದೈವ ಕಳೆ ಬರಬೇಕು ಮತ್ತು ಅದಕ್ಕೆ ಶಕ್ತಿ ಬರಬೇಕು ಎಂದರೆ ವಿಧಿ ವಿಧಾನದ ಮೂಲಕ ಅದನ್ನು ಧರಿಸಬೇಕು. ಉಂಗುರ ಖರೀದಿಸಿ ತಂದ ಮೇಲೆ ಗುರುವಾರ ಅಥವಾ ಶುಕ್ರವಾರದಂದು ಶುಭ ಘಳಿಕೆ ನೋಡಿ ಆ ಸಮಯದಲ್ಲಿ ಹಾಲಿನಲ್ಲಿ ಅಥವಾ ಗಂಗಾಜಲದಲ್ಲಿ ಉಂಗುರವನ್ನು ಹದ್ದಿ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋ ಮುಂದೆ ಇಟ್ಟು ಪೂಜೆ ಮಾಡಿ ನಂತರ ಒಳ್ಳೆ ಸಮಯದಲ್ಲಿ ಧರಿಸಬೇಕು.

* ಒಮ್ಮೆ ಉಂಗುರ ಧರಿಸಿಕೊಂಡ ಮೇಲೆ ಪದೇ ಪದೇ ವಿನಾಕಾರಣ ಅವುಗಳನ್ನು ತೆಗೆಯುತ್ತಿರಬಾರದು ಅಥವಾ ಬೇರೆ ಉಂಗುರಕ್ಕೆ ಬದಲಾಯಿಸುತ್ತ ಇರಬಾರದು.

ಈ ಸುದ್ದಿ ಓದಿ:- ಮನೆಯಲ್ಲಿ ದೈವಶಕ್ತಿ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿಯುವುದು ಹೇಗೆ ನೋಡಿ.!

* ವಾಸ್ತು ಶಾಸ್ತ್ರದ ಪ್ರಕಾರವಾಗಿ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಇರಬೇಕು ಮತ್ತು ವ್ಯಕ್ತಿಯಲ್ಲಿ ಸೃಜನಶೀಲತೆ ಹೆಚ್ಚಾಗಬೇಕು, ಸಹನೆ ಮತ್ತು ಶಾಂತಿ ನೆಲೆಸಬೇಕು ಎಂದು ಬಯಸುವುದಾದರೆ ಆಮೆ ಉಂಗುರ ಧರಿಸಬೇಕು. ಈ ಉಂಗುರ ಧರಿಸುವುದರಿಂದ ಮನುಷ್ಯನಿಗೆ ಮನಸ್ಸು ಬಹಳ ಪ್ರಶಾಂತವಾಗಿರುತ್ತದೆ ಸಕಾರಾತ್ಮಕ ಚಿಂತನೆಗಳು ಆಲೋಚನೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.

* ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆರ್ಥಿಕ ಸಮಸ್ಯೆಗಳ ಪರಿಹಾರಕ್ಕಾಗಿ ಕೂಡ ಆಮೆ ಉಂಗುರ ಧರಿಸಲು ಸೂಚಿಸಲಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಈ ನಾಲ್ಕು ರಾಶಿಯವರು ಮಾತ್ರ ಆಮೆ ಉಂಗುರವನ್ನು ಧರಿಸಲೇಬಾರದು. ಯಾವ ರಾಶಿಯವರು ಮತ್ತು ಅದಕ್ಕೆ ಕಾರಣ ಏನು ವಿವರ ಹೀಗಿದೆ.

1. ಮೇಷರಾಶಿ – ಮೇಷ ರಾಶಿಯವರ ಧಿಪತಿ ಅಂಗಾರಕ ಈ ಕಾರಣದಿಂದಾಗಿ ಧರಿಸಬಾರದು. ಒಂದುವೇಳೆ ಈ ರಾಶಿಯವರು ಆಮೆ ಉಂಗುರವನ್ನು ಧರಿಸಿದರೆ ಆರ್ಥಿಕ ನಷ್ಟಗಳು ಮತ್ತು ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ.

ಈ ಸುದ್ದಿ ಓದಿ:- ತವರು ಮನೆಯಿಂದ ಈ ವಸ್ತುಗಳನ್ನು ತೆಗೆದುಕೊಂಡು ಬಂದರೆ ಗಂಡನ ಅದೃಷ್ಟ ಕುಲಾಯಿಸುತ್ತೆ.!

2. ಕನ್ಯಾ ರಾಶಿ – ಕನ್ಯಾ ರಾಶಿಯ ಅಧಿಪತಿ ಬುಧ ಆದಕಾರಣ ಕನ್ಯಾ ರಾಶಿಯವರು ಕೂಡ ಆಮೆ ಉಂಗುರವನ್ನು ಧರಿಸುವುದು ಸೂಕ್ತವಲ್ಲ. ತಪ್ಪಿದರೆ ವ್ಯಕ್ತಿಗತವಾಗಿ ಹಾಗೂ ವೃತ್ತಿಗತವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

3. ವೃಶ್ಚಿಕ ರಾಶಿ – ವೃಶ್ಚಿಕ ರಾಶಿಯ ಅಧಿಪತಿ ಅಂಗಾರಕ ಆದಕಾರಣ ವೃಶ್ಚಿಕ ರಾಶಿಯವರು ಕೂಡ ಆಮೆ ಉಂಗುರ ಧರಿಸಬಾರದು. ಒಂದು ವೇಳೆ ಧರಿಸಿದರೆ ಕುಜ ದೋಷಗಳನ್ನು ಎದುರಿಸಬೇಕಾಗುತ್ತದೆ.

4. ಮೀನ ರಾಶಿ – ಮೀನ ರಾಶಿಯ ಅಧಿಪತಿ ಬೃಹಸ್ಪತಿ. ಒಂದು ವೇಳೆ ಮೀನ ರಾಶಿಯವರು ಆಮೆ ಉಂಗುರ ಧರಿಸಿದರೆ ಅವರಿಗೆ ಗುರುಬಲ ಕಡಿಮೆ ಆಗುತ್ತದೆ, ಈ ಕಾರಣದಿಂದ ಕೂಡ ಧರಿಸಬಾರದು.

ತುಲಾ ರಾಶಿಯ ಏಪ್ರಿಲ್ ತಿಂಗಳ ಭವಿಷ್ಯ 2024, ಈ ಎಂಟು ದಿನಗಳು ಮಾತ್ರ ಮಹಾರಾಜಯೋಗ.!

 

ಏಪ್ರಿಲ್ 9ನೇ ತಾರೀಖಿನಂದು ನಿಮ್ಮ ರಾಶಿಯಲ್ಲಿ 7ನೇ ಮನೆಯಲ್ಲಿದ್ದ ಬುಧನು ವಕ್ರನಾಗಿ 6ನೇ ಮನೆಗೆ ಬರುತ್ತಿದ್ದಾರೆ. 13ನೇ ಮನೆಗೆ ರವಿಯು 7ನೇ ಮನೆಗೆ ಅಂದರೆ ಸಪ್ತಮ ಭಾವಕ್ಕೆ ಬರುತ್ತಿರುವುದು ತುಲಾ ರಾಶಿಯವರಿಗೆ ಶ್ರೇಷ್ಠವಾದ ಸಮಯವಾಗಿದೆ, ಅತ್ಯಂತ ರಾಜಯೋಗ ನೀಡುತ್ತಿದೆ.

23ನೇ ತಾರೀಖಿನಂದು ಕುಜನು 6ನೇ ಮನೆಗೆ ಬರುತ್ತಿದ್ದಾರೆ, ಪಂಚಮದಿಂದ ಷಷ್ಠ ಸ್ಥಾನಕ್ಕೆ ಬರುತ್ತಿದ್ದಾರೆ. ಇದು ಕೂಡ ಮಿತ್ರ ಸ್ಥಾನವಾಗಿರುವುದರಿಂದ ಶುಭಫಲ ನೀಡುತ್ತಿದೆ. ಏಪ್ರಿಲ್ 24 ನೇ ತಾರೀಖಿನಂದು ಶುಕ್ರನು ಉಚ್ಛಸ್ಥಾನಕ್ಕೆ ಬರುತ್ತಿದ್ದಾರೆ ಇದು ಕೂಡ ಅತ್ಯಂತ ಶುಭಪ್ರದವಾಗಿದೆ.

ಈ ತಿಂಗಳ ಅಂತ್ಯದಲ್ಲಿ ಅಂದರೆ 30ನೇ ತಾರೀಖು ಗುರುವು ಸ್ಥಾನ ಬದಲಾವಣೆ ಆಗುತ್ತಿರುವುದು ದ್ವಾದಶ ರಾಶಿಗಳೆಲ್ಲದರ ಮೇಲೆ ಬದಲಾವಣೆ ಬೀರುತ್ತದೆ. ಅದರಲ್ಲೂ ತುಲಾರಾಶಿಗೆ ಗುರುಬಲ ಕ್ಷೀಣಿಸುತ್ತದೆ.

ಸೂರ್ಯನು ಸಪ್ತಮ ಸ್ಥಾನದಲ್ಲಿ ಇರುವುದರಿಂದ ನೀವು ಅಂದುಕೊಂಡ ಎಲ್ಲಾ ಕಾರ್ಯಗಳಲ್ಲೂ ಕೂಡ ನಿಮಗೆ ಯಶಸ್ಸು ಸಿಗುತ್ತದೆ. ನೀವು ಈ ಸಮಯದಲ್ಲಿ ಯಾವುದೇ ಕೆಲಸ ಆರಂಭಿಸಿದರು ಅಥವಾ ಅದಕ್ಕೆ ಯೋಜನೆ ಹಾಕಿಕೊಂಡು ಪ್ರಯತ್ನಪಟ್ಟರು ಅದು ಖಂಡಿತ ಕೈ ಹಿಡಿಯುತ್ತದೆ.

ಏಪ್ರಿಲ್ ತಿಂಗಳಿನಲ್ಲಿ ನಿಮಗೆ 9 ಹಾಗೂ 12 ಮನೆಯ ಅಧಿಪತಿಯಾದ ಬುಧನು ಕೆಟ್ಟಿರುತ್ತಾನೆ ಆದರೆ ಏಪ್ರಿಲ್ 24ರಂದು ಬುಧನ ನೀಚಭಂಗತ್ವವಾಗಿ ಇದು ರಾಜಯೋಗವಾಗಿ ಬದಲಾಗುತ್ತಿದೆ ನಂತರ ಬುಧನು ಕೂಡ ಸ್ಟ್ರಾಂಗ್ ಆಗುವುದರಿಂದ ನಿಮ್ಮ ರಾಜಯೋಗ ಇನ್ನಷ್ಟು ಹೆಚ್ಚು ಆಗಲಿದೆ.

ಬುಧನ ಪ್ರಭಾವದಿಂದಾಗಿ ಈ ತಿಂಗಳ ಅಂತ್ಯದಲ್ಲಿ ವ್ಯಾಪಾರ ವ್ಯವಹಾರಗಳಲ್ಲಿ ಬಹಳ ಉತ್ತಮ ಬದಲಾವಣೆಗಳು ಕಂಡುಬರುತ್ತವೆ. ದೊಡ್ಡಮಟ್ಟದ ವಹಿವಾಟುಗಳು ಮತ್ತು ಒಳ್ಳೆಯ ಸಂಪರ್ಕಗಳು ಕೂಡ ಸಿಗುತ್ತವೆ ನೀವು ನಿರೀಕ್ಷೆ ಮಾಡಿದಷ್ಟು ಆರ್ಥಿಕ ಲಾಭಗಳು ಉಂಟಾಗಿ ಧನಯೋಗ ಪ್ರಾಪ್ತಿಯಾಗುತ್ತದೆ.

ಏಪ್ರಿಲ್ 24 ರಿಂದ 29 ರವರೆಗೆ ಅತ್ಯಂತ ಶುಭಫಲಗಳು ಸಿಗುತ್ತಿವೆ ರಾಶಿಯಿಂದ ದ್ವಿತೀಯ ಹಾಗೂ ಸಪ್ತಮಾಧಿಪತಿ, ಕುಜನು 6ನೇ ಮನೆಗೆ ಬರುತ್ತಿರುವುದರಿಂದ ಕೋಪ ಹೆಚ್ಚಾಗಿರುತ್ತದೆ. ಸಣ್ಣಪುಟ್ಟ ವಿಷಯವನ್ನು ದೊಡ್ಡದು ಮಾಡಿ ಮನಸ್ಸಿಗೆ ಬಹಳ ಮಾಡಿಕೊಳ್ಳುತ್ತೀರಾ ಸಾಲದಕ್ಕೆ ಉಗುರಿನಲ್ಲಿ ಹೋಗುವ ವಿಚಾರಕ್ಕೆ ಕೊಡಲಿ ತೆಗೆದುಕೊಂಡು ಸಿಕ್ಕಾಪಟ್ಟೆ ಜಗಳ ಆಡುತ್ತೀರ ಆದರೆ ಇದು ಯಾವುದು ಪ್ರಯೋಜನಕ್ಕೆ ಬರುವುದಿಲ್ಲ.

ಈ ಸಮಯದಲ್ಲಿ ಸ್ವಲ್ಪ ಶಾಂತಿ ಹಾಗೂ ಸಮಾಧಾನದ ಇದ್ದರೆ ಸಮಯ ತಾನೇ ಕಳೆಯುತ್ತದೆ ನಂತರ ಪಶ್ಚಾತಾಪ ಪಡುವ ಬದಲು ಈಗಲೇ ಎಚ್ಚರಿಕೆವಹಿಸಿ ಆರೋಗ್ಯದಲ್ಲೂ ಹೆಚ್ಚಿನ ವ್ಯತ್ಯಾಸಗಳು ಇಲ್ಲ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ನಿಗಾ ವಹಿಸಿ.

ಈಗಾಗಲೇ ಪಂಚಮ ಶನಿ ಪ್ರಭಾವ ತುಲಾ ರಾಶಿಯವರ ಮೇಲೆ ಇದೆ ಆ ಪ್ರಭಾವ ಇದ್ದೇ ಇರುತ್ತದೆ ಇದನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಇನ್ಯಾವುದೇ ರೀತಿ ದೋಷಗಳು ಇದ್ದರೂ ಎಲ್ಲದರ ನಿವಾರಣೆಗಾಗಿ ಮತ್ತು 6 ನೇ ತಾರೀಖಿನಂದು ಶನಿ ಪ್ರದೋಷ ಇರುವ ದಿನದಂದು ಶಿವಾಲಯಕ್ಕೆ ಹೋಗಿ ಶಿವನಿಗೆ ಹಾಗೂ ನಂದಿಗೆ ಅಭಿಷೇಕ ಮಾಡಿ ನಂದಿಯ ಕೊಂಬುಗಳ ಮಧ್ಯದಿಂದ ಶಿವಲಿಂಗ ದರ್ಶನ ಮಾಡಿ ಎಲ್ಲಾ ರೀತಿಯ ಪಾಪಗಳು ನಿವಾರಣೆ ಆಗುತ್ತದೆ.

ಈ ತಿಂಗಳು ಪೂರ್ತಿ ತುಳಸಿ ಆರಾಧನೆ ಮಾಡುವುದನ್ನು ಮಾತ್ರ ಮರೆಯಬೇಡಿ. ಪ್ರತಿದಿನವೂ ಸಂಜೆ ಸಮಯ ತುಳಸಿ ಬಳಿ ದೀಪ ಹಚ್ಚಿ ನವಗ್ರಹಗಳ ಆರಾಧನೆ ಮಾಡಿ ಎಲ್ಲವೂ ಶುಭವಾಗುತ್ತದೆ.

ಈ ಕ್ಷೇತ್ರದಲ್ಲಿ ತೀರ್ಥ ಸ್ನಾನ ಮಾಡಿ ಹರಕೆ ಕಟ್ಟಿಕೊಂಡು ಮನೆಗೆ ಹೋದರೆ ನೀವು ತಲುಪುವುದರ ಒಳಗೆ ಸಮಸ್ಯೆ ಪರಿಹಾರ ಆಗುವುದು ಗ್ಯಾರಂಟಿ.!

 

ನಮ್ಮ ಸಂಸ್ಕೃತಿಯಲ್ಲಿ ಮನುಷ್ಯನ ಎಲ್ಲಾ ರೀತಿಯ ಸಮಸ್ಯೆಗಳಿಗೂ ಕೂಡ ಪರಿಹಾರ ನೀಡುವ ಶಕ್ತಿ ಭಗವಂತನಲ್ಲಿ ಮಾತ್ರ ಇರುವುದು ಎನ್ನುವುದನ್ನು ನಂಬಿದ್ದೇವೆ. ಹಾಗೆಂದ ಮಾತ್ರಕ್ಕೆ ನೇರವಾಗಿ ದೇವರೇ ಬಂದು ನಮ್ಮ ಸಮಸ್ಯೆ ಬಗೆ ಹರಿಸುವುದಿಲ್ಲ. ಆತನಿಗೆ ಪ್ರಾರ್ಥಿಸಿದರೆ ಭಕ್ತಿಯಿಂದ ಕೇಳಿಕೊಂಡರೆ ಮನುಷ್ಯ ಸಹಜವಾಗಿ ಬರುವ ಕಷ್ಟಗಳನ್ನು ಎದುರಿಸುವ ಶಕ್ತಿ ನಮಗೆ ಬರುತ್ತದೆ.

ಹೀಗೆ ಪರೋಕ್ಷವಾಗಿ ಭಗವಂತ ಯಾವುದಾದರೂ ರೂಪದಲ್ಲಿ ಬಂದು ಸಮಸ್ಯೆ ಪರಿಹರಿಸುತ್ತಾನೆ ಮತ್ತು ನಮ್ಮತ್ತ ತನ್ನ ಕೃಪೆ ತೋರುತ್ತಾನೆ ಎನ್ನುವುದು ನಂಬಿಕೆ. ಈ ನಂಬಿಕೆಯಿಂದಲೇ ವ್ರತ, ಪೂಜೆ, ಆಚರಣೆ, ಹೋಮ, ಹವನ, ಪುಣ್ಯಕ್ಷೇತ್ರ ದರ್ಶನ ತೀರ್ಥ ಸ್ಥಾನ ಇಂತಹ ಆಚರಣೆಗಳೆಲ್ಲವೂ ನಡೆಯುವುದು. ಹೀಗೆ ಭಗವಂತನನ್ನು ನೆನೆದು ಕೇಳಿಕೊಂಡವರಿಗೆ ಸಮಸ್ಯೆ ಬಗೆ ಹರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಈ ಸುದ್ದಿ ಓದಿ:- ಬಿಪಿ ಶುಗರ್ ಇದ್ದವರು ಇದನ್ನು ಪಾಲಿಸಿ, ಮೆಡಿಕಲ್ ಶಾಪ್ ನಲ್ಲಿ ಸಿಗುವುದು ಡಾಕ್ಟರ್ ಹೇಳಿದ್ದು ಮಾತ್ರ ಔಷಧವಲ್ಲ.!

ಹೀಗೆ ಮನುಷ್ಯನು ಮೊರೆಯಿಟ್ಟು ಕೇಳಿಕೊಂಡರೆ ಅವರ ಕೋರಿಕೆಯನ್ನು ಅದೇ ದಿನದೊಳಗೆ ಪೂರೈಸುವ ಪವಾಡಗಳು ನಡೆಯುವ ಪುಣ್ಯ ಸ್ಥಳಗಳು ಕೂಡ ನಮ್ಮ ನಾಡಿನಲ್ಲಿ ಸಾಕಷ್ಟಿವೆ. ರಾಜ್ಯದ ಹಲವು ಭಾಗಗಳಲ್ಲಿ ಇಂತಹ ಕ್ಷೇತ್ರಗಳು ಇದ್ದು ಇದರ ಖ್ಯಾತಿ ಇಂದು ಗಡಿದಾಟಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ದೇಶದ ವಿವಿಧ ಮೂಲಗಳಿಂದ ಭಕ್ತಾದಿಗಳು ಬರುತ್ತಾ ಲೋಕ ವಿಖ್ಯಾತಿಯಾಗುತ್ತಿರುವ ಕ್ಷೇತ್ರಗಳು ಬಹಳಷ್ಟಿವೆ.

ಈ ಪಟ್ಟಿಗೆ ಸೇರುತ್ತಿದೆ ನಮ್ಮ ಮಂಡ್ಯ ಜಿಲ್ಲೆಯ ಪಾಂಡಪುರ ತಾಲೂಕಿನ ಕೆ.ಬೆಟ್ಟ ಹಳ್ಳಿಯಲ್ಲಿರುವ ಮತ್ತು ಹುಲಿಕೆರೆ ಮಧ್ಯ ಭಾಗದಲ್ಲಿ ಬರುವ ಶ್ರೀ ವಿಜಯ ಕಾಳಿ ಪವಾಡ ಬಸವಪ್ಪನವರ ಪುಣ್ಯಕ್ಷೇತ್ರ ಈ ಪುಣ್ಯಕ್ಷೇತ್ರದ ವಿಶೇಷತೆ ಏನೆಂದರ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ತಾಯಿ ವಿಜಯ ಕಾಳಿ ಅಮ್ಮನವರಿಗೆ ಉಷಾ ಕಾಲದಲ್ಲಿ ಅಭಿಷೇಕ ನಡೆಯುತ್ತದೆ.

ಈ ಸುದ್ದಿ ಓದಿ:-ಈ ಮಂತ್ರವನ್ನು ಜಪ ಮಾಡಿ ಸಾಕು, ಮಕ್ಕಳಾಗದೇ ಇದ್ದವರಿಗೆ ಮಕ್ಕಳಾಗುವ ಯೋಗ ಬರುತ್ತದೆ…

ಇದು ಬಹಳ ವಿಶೇಷವಾದ ಪೂಜೆಯಾಗಿದೆ ಈ ಪೂಜೆ ನಡೆದ ಬಳಿಕ ಬರುವ ಭಕ್ತರಿಗೆ ತೀರ್ಥ ಸ್ಥಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈ ಸಮಯದಲ್ಲಿ ಅರಿಶಿಣದ ನೀರನ್ನು ಭಕ್ತಾದಿಗಳ ಮೇಲೆ ಹಾಕಲಾಗುತ್ತದೆ. ಈ ನೀರಿಗೆ ಎಷ್ಟು ಶಕ್ತಿ ಇದೆ ಎಂದರೆ ನೀವು ಯಾವ ರೀತಿಯ ಸಮಸ್ಯೆಗಳ ಪರಿಹಾರಕ್ಕಾಗಿ ಕೇಳಿ ಹರಕೆ ಕಟ್ಟಿಕೊಳ್ಳಲು ಬಂದಿರುತ್ತೀರೋ ಅದು ನೀರನ್ನು ಹಾಕಿಸಿಕೊಂಡು ಮನೆಗೆ ತಲುಪುವಷ್ಟರಲ್ಲೇ ನಡೆದಿರುವ ಉದಾಹರಣೆಗಳು ಇವೆ.

ಆರೋಗ್ಯ ಸಮಸ್ಯೆಗಳು, ಕೌಟುಂಬಿಕ ಸಮಸ್ಯೆಗಳು, ಹಣಕಾಸಿನ ವಿಚಾರಗಳು, ಸಂತಾನ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದ ತೊಂದರೆಗಳು, ಗಂಡನ ಕುಡಿತದ ಚಟ ಬಿಡಿಸಲು ಹರಕೆ ಈ ರೀತಿ ನಾನಾ ಕಾರಣಕ್ಕಾಗಿ ಬಂದು ಇಲ್ಲಿ ಹರಕೆ ಕಟ್ಟಿಕೊಂಡು ನೀರು ಹಾಕಿಸಿಕೊಂಡು ತೀರ್ಥ ಸ್ನಾನ ಮಾಡಿ ಹೋಗುತ್ತಾರೆ.

ಈ ಸುದ್ದಿ ಓದಿ:-ಮಹಿಳೆಯರಿಗೆ ಕೆಲವು ಕಿವಿ ಮಾತುಗಳು. ಇವುಗಳನ್ನು ಪಾಲಿಸಿದರೆ ನಿಮಗೆ ಬರುವ ಎಷ್ಟೋ ಕಷ್ಟಗಳಿಂದ ಪಾರಾಗಬಹುದು.!

ಕೆಲವರಿಗೆ ಮನೆ ತಲುಪುವೊಳಗೆ ಫಲ ಸಿಕ್ಕಿದರೆ ಇನ್ನೂ ಕೆಲವರಿಗೆ ಮೂರು ಸ್ನಾನಗಳು, 5 ಸ್ನಾನಗಳು ಈ ರೀತಿ ಇಲ್ಲಿರುವ ಅರ್ಚಕರೇ ಸೂಚಿಸುತ್ತಾರೆ. ಆ ಪ್ರಕಾರವಾಗಿ ಬಂದು ಮನಸ್ಪೂರ್ತಿಯಾಗಿ ನಂಬಿಕೆ ಇಟ್ಟು ಹರಕೆ ಮಾಡಿಕೊಂಡು ನೀರು ಹಾಕಿಸಿಕೊಂಡು ಹೋದರೆ ಖಂಡಿತ ಸಮಸ್ಯೆ ಪರಿಹಾರ ಆಗುತ್ತದೆ.

ಪ್ರತಿ ಅಮವಾಸ್ಯೆಯಂದು ಪ್ರತ್ಯಂಗಿರಾ ಹೋಮ ಕೂಡ ನಡೆಯುತ್ತದೆ ಮೂರು ಬಾರಿ ಬಂದು ಈ ಹೋಮಗಳಲ್ಲಿ ಭಾಗಿಯಾದವರ ಸಮಸ್ಯೆಗಳು ಕೂಡ ತಾಯಿಯ ಕೃಪಾಕಟಾಕ್ಷದಿಂದ ಪರಿಹಾರವಾಗಿರುವ ಉದಾಹರಣೆಗಳಿವೆ. ಇಷ್ಟು ಪವಾಡ ಸದೃಶವಾದ ಈ ದೇವಾಲಯಕ್ಕೆ ಸಾಧ್ಯವಾದರೆ ನೀವು ಕೂಡ ಒಮ್ಮೆ ಕುಟುಂಬದೊಡನೆ ಭೇಟಿ ಕೊಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ದೇವಸ್ಥಾನದ ಸಂಪರ್ಕ ಸಂಖ್ಯೆ:
9731652666 / 9632333433

https://youtu.be/rwxWS_Z0_K0?si=fheqrLEhdT20RRfd

ಮನೆಯಲ್ಲಿ ದೈವಶಕ್ತಿ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿಯುವುದು ಹೇಗೆ ನೋಡಿ.!

ಮನುಷ್ಯನಿಗೆ ಹಣಬಲ ಹಾಗೂ ಜನಬಲಕ್ಕಿಂತ ದೈವಬಲ ಬಹಳ ದೊಡ್ಡದು. ಆ ದೇವರ ಸಹಕಾರ ಒಂದಿದ್ದರೆ, ಆಶೀರ್ವಾದ ಇದ್ದರೆ ಎಂತಹ ಕಷ್ಟಗಳನ್ನು ಬೇಕಾದರೂ ಮೆಟ್ಟಿನಿಂತು ಜಯಿಸಬಹುದು. ಮನುಷ್ಯನಿಗೆ ಹಣ ಶಾಶ್ವತವಲ್ಲ ಜನಬೆಂಬಲವೂ ಕೂಡ ಹಣದ ಮೇಲೆ ನಿರ್ಧಾರವಾಗಿರುತ್ತದೆ ಹಾಗಾಗಿ ಇದು ಕೆಲವು ಸಮಯ ಮಾತ್ರ ಆದರೆ ದೈವ ಬಲ ಎನ್ನುವುದು ಸತ್ಯ ಹಾಗೂ ಶಾಶ್ವತ.

ಹಾಗೆ ಇದು ಒಲಿಯುವುದು ಕೂಡ ಸುಲಭವಲ್ಲ, ಒಂದು ಕಠಿಣ ತಪಸ್ಸು. ನಿಮಗೂ ಕೂಡ ದೇವರು ಕೃಪೆ ತೋರಿರಬಹುದು, ನಿಮ್ಮ ಪಾಲಿಗೂ ಭಗವಂತನ ಅನುಗ್ರಹ ಆಗಿರಬಹುದು ಆದರೆ ಬಹುತೇಕರಿಗೆ ಇದು ಅರ್ಥವಾಗುವುದಿಲ್ಲ. ನಿಮ್ಮ ಮನೆ ಮೇಲೆ ದೇವರ ಆಶೀರ್ವಾದ ಇದೆ ಆತ ನಿಮ್ಮ ಕಷ್ಟ-ಸುಖ ನೋಡುತ್ತಿದ್ದಾನೆ ಎನ್ನುವ ವಿಚಾರವನ್ನು ಈಗ ನಾವು ಹೇಳುವ ವಿಧಾನದ ಮೂಲಕ ನೀವು ಪರೀಕ್ಷಿಸಿ ತಿಳಿದುಕೊಳ್ಳಬಹುದು.

ನಿಮ್ಮ ಮನೆಯಲ್ಲಿ ಪ್ರತಿನಿತ್ಯವೂ ಕೂಡ ದೇವರಿಗೆ ದೀಪ ಹಚ್ಚಿ ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ದೇವರ ಕೋಣೆಯಲ್ಲಿ ತಪ್ಪದೆ ಭಗವಂತನ ಹೆಸರು ಹೇಳಿ ದೀಪ ಹಚ್ಚಿ ಪ್ರಾರ್ಥನೆ ಮಾಡುತ್ತಾ ಇದ್ದರೆ ಆ ಮೂಲಕ ಭಗವಂತನ ಸ್ಮರಣೆ ಮಾಡುತ್ತಾ ಇದ್ದರೆ ಖಂಡಿತವಾಗಿಯೂ ಆತ ನಿಮ್ಮನ್ನು ಅನುಗ್ರಹಿಸಿರುತ್ತಾನೆ.

ನೀವು ದೀಪದ ಎಣ್ಣೆ ಜೊತೆ ಎರಡು ಲವಂಗ ಹಾಕಿ ದೀಪ ಹಚ್ಚಿದರೆ ಅದು ಲವಂಗದ ದೀಪ ಆಗುತ್ತದೆ ಈ ದೀಪ 21 ದಿನಗಳವರೆಗೆ ಅಥವಾ 48 ದಿನಗಳವರೆಗೆ ಪ್ರತಿ ಬೆಳಿಗ್ಗೆ ಹಾಗೂ ಸಂಜೆ ಹಚ್ಚಿ ನಿಮಗೆ ಈ ಸಂದರ್ಭದಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ಅದನ್ನು ಭಗವಂತನ ಬಳಿ ಹೇಳಿಕೊಂಡು ಪರಿಹರಿಸುವಂತೆ ಕೇಳಿಕೊಳ್ಳಿ ಅಥವಾ ಇಷ್ಟಾರ್ಥಗಳಿದ್ದರೆ ಅದಕ್ಕಾಗಿ ಕೋರಿಕೆ ಸಲ್ಲಿಸಿ.

ಈ ಸಮಯ ಮುಗಿಯುವುದರ ಒಳಗೆ ನಿಮಗೆ ಸಮಸ್ಯೆಯಿಂದ ಮುಕ್ತಿ ಸಿಕ್ಕರೆ ಅಥವಾ ನಿಮ್ಮ ಇಷ್ಟಾರ್ಥ ಸಿದ್ದಿಯಾದರೆ ನಿಮ್ಮ ಜೊತೆ ದೇವರಿದ್ದಾರೆ ನೀವು ಸರಿಯಾದ ಮಾರ್ಗದಲ್ಲಿ ಇದ್ದೀರಿ ಹಾಗಾಗಿ ಅವರು ನಿಮ್ಮ ಪ್ರತಿ ಮಾತನ್ನು ಕೇಳುತ್ತಿದ್ದಾರೆ ಎಂದು ಅರ್ಥ.

ಹೀಗೆ ಇದೊಂದು ವಿಧಾನ ಮಾತ್ರ ಅಲ್ಲದೆ ಈ ರೀತಿಯಾದ ಸಣ್ಣಪುಟ್ಟ ಹಲವು ವಿಚಾರಗಳಿಂದ ಇದನ್ನು ಅರ್ಥಮಾಡಿಕೊಳ್ಳಬಹುದು. ಉದಾಹರಣೆಗೆ ನಿಮ್ಮ ಮನೆಯಲ್ಲಿ ಹಿರಿಯರು ಸಂತೋಷವಾಗಿದ್ದರೆ ಹಿರಿಯರನ್ನು ಪ್ರೀತಿಯಿಂದ ಜೋಪಾನ ಮಾಡಿ ನೋಡಿಕೊಳ್ಳುತ್ತಿದ್ದರೆ, ನಿಮ್ಮ ಮನೆ ಏಳಿಗೆ ಆಗುವುದರಲ್ಲಿ ಅನುಮಾನವೇ ಇಲ್ಲ.

ಹೀಗೆ ಹಿರಿಯರ ಆಶೀರ್ವಾದ ಭಗವಂತನ ಆಶೀರ್ವಾದಕ್ಕೆ ಸಮ ನೀವು ಈ ರೀತಿ ಕುಟುಂಬದ ಹಿರಿಯರನ್ನು ಚೆನ್ನಾಗಿ ನೋಡಿಕೊಂಡರೆ ನಿಮ್ಮ ಕಲ್ಲಿನಂತ ಕಷ್ಟಗಳು ಮಂಜಿನಂತೆ ಕರಗುತ್ತವೆ ಮತ್ತು ನೀವು ಕೈ ಹಾಕಿದ ಎಲ್ಲಾ ಕೆಲಸಗಳನ್ನು ಕೂಡ ಜಯ ನಿಮ್ಮದಾಗುತ್ತದೆ. ಆಗ ಭಗವಂತನೇ ಆಶೀರ್ವಾದ ಮಾಡಿದ್ದಾನೆ ಎಂದು ಅರ್ಥ ಮಾಡಿಕೊಳ್ಳಬಹುದು.

ಅತಿಥಿ ದೇವೋಭವ ಎನ್ನುವ ಸಂಸ್ಕೃತಿ ನಮ್ಮದು ನೀವು ಕೂಡ ನಿಮ್ಮ ಮನೆಗೆ ಬರುವ ಅತಿಥಿಗಳನ್ನು ಪ್ರೀತಿಯಿಂದ ಸ್ವಾಗತಿಸಿ ಅಷ್ಟೇ ಕಾಳಜಿಯಿಂದ ಅವರ ಸತ್ಕಾರ ಮಾಡಿದರೆ ಅವರು ಸಂತೋಷದಿಂದ ನಿಮ್ಮ ಮನೆಯಿಂದ ಹೊರಟರೆ ಹಾಗೂ ಪದೇಪದೇ ಅವರು ನಿಮ್ಮ ವಿಶ್ವಾಸಕ್ಕಾಗಿ ನಿಮ್ಮ ಬಳಿ ಬರುತ್ತಿದ್ದರೆ ಆ ರೂಪದಲ್ಲಿ ಭಗವಂತ ಬಂದಿದ್ದಾನೆ ಎಂದು ಅರ್ಥ.

ಯಾಕೆಂದರೆ ಯಾರು ಯಾರ ಮನೆಗೆ ಹೋದರೂ ಒಮ್ಮೆ ಅವಮಾನವಾದರೆ ಮತ್ತೆ ಬರುವುದಿಲ್ಲ. ಹೀಗೆ ಅತಿಥಿಗಳಿಗೆ ಗೌರವ ಇಲ್ಲದ ಮನೆಯಲ್ಲಿ ಭಗವಂತ ಹೋದರು ಕೂಡ ಹೀಗೆ ಆಗುತ್ತದೆ ಎಂದು ಭಗವಂತನು ಬರಲಾರ ಎಂದು ಈ ರೀತಿಯಾಗಿ ಅರ್ಥ ಮಾಡಿಕೊಳ್ಳಬಹುದು.

ಬಿಪಿ ಶುಗರ್ ಇದ್ದವರು ಇದನ್ನು ಪಾಲಿಸಿ, ಮೆಡಿಕಲ್ ಶಾಪ್ ನಲ್ಲಿ ಸಿಗುವುದು ಡಾಕ್ಟರ್ ಹೇಳಿದ್ದು ಮಾತ್ರ ಔಷಧವಲ್ಲ.!

ಇಂದು BP, ಶುಗರ್ ಇದೆಲ್ಲ ಯಾವ ರೀತಿ ಆಗಿಬಿಟ್ಟಿದೆ ಎಂದರೆ ಪ್ರತಿ ಮನೆಯಲ್ಲೂ ಕೂಡ ಈ ಕಾಯಿಲೆಗೆ ತುತ್ತಾಗಿರುವವರು ಸಿಗುತ್ತಾರೆ ಇದನ್ನು ಕಾಯಿಲೆ ಎಂದು ಹೇಳುವುದಕ್ಕಿಂತಲೂ ದೇಹದಲ್ಲಾಗುವ ವ್ಯತ್ಯಾಸ ಎಂದೇ ಹೇಳಬಹುದು.

ಈ ಆರೋಗ್ಯ ವ್ಯತ್ಯಾಸಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವ ಶಕ್ತಿ ನಮ್ಮಲ್ಲಿಯೇ ಇರುತ್ತದೆ ಆದರೆ ನಾವು ಇಂದು ಎಲ್ಲದಕ್ಕೂ ಮೆಡಿಸನ್ ಗಳ ಮೊರೆ ಹೋಗಿದ್ದೇವೆ. ಸಂಪೂರ್ಣವಾಗಿ ಈಗ ಅದನ್ನು ಕೂಡ ತಪ್ಪು ಎಂದು ಹೇಳಲು ಆಗುವುದಿಲ್ಲ. ಇದೆಲ್ಲದರ ಜೊತೆಗೆ ಔಷಧಿ ಅಲ್ಲದ ಔಷಧಿಗಳು ಕೂಡ ಇವೆ.

ಇವು ಇನ್ನು ಉತ್ತಮವಾಗಿ ನಿಮ್ಮ ದೇಹದ ಸಮಸ್ಯೆಗಳನ್ನು ಸರಿಪಡಿಸುತ್ತೇವೆ. ಅದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡುತ್ತಿದ್ದೇವೆ ಮೊದಲೇ ಹೇಳಿದಂತೆ ಹಿಂದೆಲ್ಲ BP ಮತ್ತು ಶುಗರ್ ಬಂದರೆ ಶ್ರೀಮಂತರ ಕಾಯಿಲೆ ಅಥವಾ ವಯೋಸಹಜ ಕಾಯಿಲೆ ಎಂದು ಹೇಳಲಾಗುತ್ತಿತ್ತು.

ಈಗ ಹೇಗಾಗಿದೆ ಎಂದರೆ 40ರ ಆಸು ಪಾಸಿನಲ್ಲಿ ಇರುವವರಿಗೂ ಕೂಡ ಅಧಿಕ ರಕ್ತದೊತ್ತಡ ಮಧುಮೇಹ ಭಾದಿಸುತ್ತಿದೆ ಇದಕ್ಕೆ ನಮ್ಮ ಜೀವನ ಶೈಲಿ ಬದಲಾಗಿರುವುದು ಆಹಾರ ಪದ್ಧತಿ ಹಾಳಾಗಿರುವುದು ಕೂಡ ಅಷ್ಟೇ ಕಾರಣವಾಗಿದೆ. ಇದಲ್ಲದೇ ವಂಶವಾಹಿನಿ ಕಾರಣದಿಂದಲೂ ಈ ಸಮಸ್ಯೆ ಬಂದಿರಬಹುದು.

ಇನ್ನು ಕೆಲವರಿಗೆ ಇದರೊಂದಿಗೆ ಥೈರೊಯ್ಡ್, PCOD, ಮಲಬದ್ಧತೆ, ಡಿಪ್ರೆಶನ್ ಇನ್ನು ಮುಂತಾದ ಕಾಯಿಲೆಗಳು ಇವೆ ಇದನ್ನು ದೇಹದ ಅಬ್ ನಾರ್ಮಲ್ ಸ್ಥಿತಿ ಎಂದರೆ ಸೂಕ್ತ. ಇದನ್ನು ಸರಿಪಡಿಸಲೇಬೇಕು ಇಲ್ಲವಾದಲ್ಲಿ ನಮಗೆ ಮಾತ್ರವಲ್ಲದೆ ನಮ್ಮಿಂದ ನಮ್ಮನ್ನು ನಂಬಿಕೊಂಡಿರುವ ಕುಟುಂಬಕ್ಕೂ ಕೂಡ ತೊಂದರೆ ಆಗುತ್ತದೆ.

ರಕ್ತದೊತ್ತಡ ಹೆಚ್ಚಾದರೆ ಸ್ಟ್ರೋಕ್, ಹಾರ್ಟ್ ಅಟ್ಯಾಕ್, ಕಿಡ್ನಿ ಫೇಲ್ಯೂರ್ ಇನ್ನು ಮುಂತಾದ ತೊಂದರೆಗಳಾಗುತ್ತವೆ. ಹಾಗಾಗಿ ಯಾವುದನ್ನು ನಿರ್ಲಕ್ಷಿಸದೆ ಕೂಡಲೇ ವೈದ್ಯರ ಬಳಿ ಹೋಗುವುದು ಸೂಕ್ತ ವೈದ್ಯರು ಕೊಡುವ ಚಿಕಿತ್ಸೆ ಪಡೆದು ಅವರ ಮಾರ್ಗದರ್ಶನದ ಪ್ರಕಾರ ಸರಿಪಡಿಸಿಕೊಳ್ಳುವುದರ ಜೊತೆಗೆ ಇಂದು ನಾವು ಹೇಳುತ್ತಿರುವ ಈ ಸೂಕ್ತ ವಿಚಾರಗಳ ಬಗ್ಗೆಯೂ ಕೂಡ ಸ್ವಲ್ಪ ಗಮನ ಕೊಡಿ.

ಇವು ಸಹ ನೀವು ಯಾವುದೇ ಹಣ ಖರ್ಚು ಮಾಡದೆ ಔಷಧಿಯಾಗಿ ನಿಮ್ಮ ದೇಹವನ್ನು ಸರಿಪಡಿಸುವ ಕೆಲಸ ಮಾಡುತ್ತದೆ. ನೀವು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಕೂಡ ಆರೋಗ್ಯವಾಗಿ ಆನಂದವಾಗಿ ಬದುಕಲು ಈಗ ನಾವು ಹೇಳುತ್ತಿರುವ ಔಷಧಿಯಲ್ಲದ ಔಷಧಿಗಳು ಸಹಕರಿಸುತ್ತವೆ.

* ದಿನ ಬೆಳಿಗ್ಗೆ ಎದ್ದು 10 ನಿಮಿಷ ದೇವರ ಧ್ಯಾನ ಮಾಡಿ ನಂತರ ದಿನ ಆರಂಭಿಸಿ. ಬೆಳಗಿನ ಜಾವದ 30 ನಿಮಿಷ ವ್ಯಾಯಾಮ ಯೋಗ ಧ್ಯಾನ ಈ ರೀತಿ ಚಟುವಟಿಕೆಗಳಿಗೆ ಮೀಸಲಿರಲಿ ಅಥವಾ ಬೆಳಗಿನ ಅಥವಾ ಸಂಜೆಯ 30 ನಿಮಿಷಗಳ ವಾಕಿಂಗ್ ಅಭ್ಯಾಸ ಇಂದಿನಿಂದಲೇ ಆರಂಭಿಸಿ ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು ಮತ್ತು ದೇಹದ ಅನೇಕ ಅಬ್ ನಾರ್ಮಲ್ ಸ್ಥಿತಿಗಳನ್ನು ಇದು ಸರಿಪಡಿಸುತ್ತದೆ.

* ಸೂರ್ಯನ ಬೆಳಕಿನಲ್ಲಿ ಕೆಲ ಹೊತ್ತು ಸಮಯ ಕಳೆಯಿರಿ ಜೊತೆಗೆ ಹುಲ್ಲಿನ ಮೇಲೆ ಅಥವಾ ಮಣ್ಣು ನೆಲದ ಮೇಲೆ ನಡೆದಾಡಿ ಪ್ರಕೃತಿ ಜೊತೆಗೆ ಸ್ವಲ್ಪ ಬೆರೆಯಿರಿ.

* ದಿನಕ್ಕೆ 7-8 ಘಂಟೆಗಳ ನಿದ್ರೆ ಅವಶ್ಯಕ. ಮಲಗಿರುವ ಸಮಯ ಅಲ್ಲ ನೀವು ಎಷ್ಟು ನಿದ್ರಾ ಅವಸ್ಥೆಯಲ್ಲಿ ಇರುತ್ತೀರ ಅದು ಮುಖ್ಯವಾಗುತ್ತದೆ. ಹಾಗಾಗಿ ಸರಿಯಾಗಿ ನಿದ್ದೆ ಮಾಡಲು ಬೇಕಾದ ಕ್ರಮಗಳನ್ನು ಕೈಗೊಳ್ಳಿ. ರಾತ್ರಿ ಮಲಗುವ ಎರಡು ತಾಸಿನ ಮೊದಲು ಊಟ ಮುಗಿಸುವುದು ಒಂದು ತಾಸಿನ ಮೊದಲು ಮೊಬೈಲ್ ಟಿವಿ ಆಫ್ ಮಾಡಿ ಸಮಯ ಕಳೆದು ಮಲಗುವುದು ಇಂತಹ ಅಭ್ಯಾಸ ಬೆಳೆಸಿಕೊಳ್ಳಿ, ಒಳ್ಳೆಯ ನಿದ್ರೆ ಬರುತ್ತದೆ.

* ವಾರಕ್ಕೆ ಒಮ್ಮೆಯಾದರೂ ಉಪವಾಸ ಮಾಡುವುದು ನಿಮ್ಮ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ತಪ್ಪದೆ ಇದನ್ನು ಕೂಡ ಪಾಲಿಸಿ ಮತ್ತು ಪ್ರತಿನಿತ್ಯ ಚೆನ್ನಾಗಿ ನೀರು ಕುಡಿಯಿರಿ
* ವಾರಕ್ಕೆ ಒಮ್ಮೆಯಾದರೂ ಅರ್ಧ ದಿನ ನಿಮ್ಮ ಸ್ನೇಹಿತರ ಜೊತೆಗೆ ಸಂತೋಷದಿಂದ ಮಾತನಾಡುತ್ತಾ ಸಮಯ ಕಳೆಯಿರಿ, ಇದು ನಿಮ್ಮ ಮನಸ್ಸಿಗೆ ಚೈತನ್ಯ ತುಂಬುತ್ತದೆ ಮತ್ತು ಇದೆಲ್ಲವೂ ಉಚಿತವೇ ಆಗಿದೆ.

ಕುಂಭ ರಾಶಿಯವರ ಏಪ್ರಿಲ್ – 2024ರ ಭವಿಷ್ಯ, ಕುಂಭ ರಾಶಿಯವರಿಗೆ ಇದೆಲ್ಲಾ ಕಾದಿದೆ ನೋಡಿ.!

 

ಕುಂಭ ರಾಶಿಯವರ ಏಪ್ರಿಲ್ ತಿಂಗಳ ಭವಿಷ್ಯ ಹೇಗಿರುತ್ತದೆ ಎಂದು ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಆದಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಬಹುದು. ಈ ಮಾತಿನಿಂದಲೇ ಅರ್ಥ ಆಗುತ್ತದೆ ಅವರಿಗೆ ಈ ತಿಂಗಳಿನಲ್ಲಿ ಶುಭಫಲಗಳು ಎಷ್ಟಿವೆ ಮತ್ತು ಅಶುಭ ಫಲಗಳು ಎಷ್ಟಿವೆ ಎಂದು ಯಾಕೆಂದರೆ ಈಗಾಗಲೇ ಕುಂಭ ರಾಶಿಯವರು ಕಳೆದ ಒಂದು ವರ್ಷದಿಂದ ಸಾಕಷ್ಟು ಕ’ಷ್ಟಗಳನ್ನು ಎದುರಿಸುತ್ತಾರೆ/

ಮತ್ತು ಈಗಿನ ಪರಿಸ್ಥಿತಿ ಅದಕ್ಕೆ ಹೊರತೇನಲ್ಲ ಏಪ್ರಿಲ್ ತಿಂಗಳಿನಲ್ಲಿ ಕೂಡ ಇದೇ ರೀತಿ ಪರಿಸ್ಥಿತಿ ಮುಂದುವರೆದಿದ್ದು ಕೆಲವು ವಿಚಾರಗಳಲ್ಲಿ ನೀವು ಬಹಳಷ್ಟು ಎಚ್ಚರಿಕೆಯಿಂದ ಇದ್ದರೆ ತುಂಬಾ ಒಳ್ಳೆಯದು ಮತ್ತು ಕೆಲವು ವಿಚಾರಗಳಲ್ಲಿ ಸುಧಾರಣೆ ಕೂಡ ಕಂಡುಬರುತ್ತದೆ. ಅದರ ಬಗ್ಗೆ ಈ ಲೇಖನದಲ್ಲಿ ತಿಳಿಸಲು ಬಯಸುತ್ತಿದ್ದೇವೆ.

ನೇರವಾಗಿ ಹೇಳಬೇಕು ಎಂದರೆ ಕುಂಭ ರಾಶಿಯವರಿಗೆ ಅವರೇ ಅವರ ಮನಸಾಕ್ಷಿಯೇ ಹೇಳುತ್ತಿರುತ್ತದೆ ತಾನು ಮಾಡುತ್ತಿರುವುದು ಸರಿ ಅಲ್ಲ ಹೀಗೆ ಮಾಡಿದರೆ ತೊಂದರೆಗೆ ಸಿಲುಕುತ್ತೇನೆ ಎಂದು ಉದಾಹರಣೆಗೆ, ನೀವು ಹೊರಗೆ ಹೋಗುವುದು ಬೇಡ ಎಂದುಕೊಂಡಿರುತ್ತೀರಾ ಆದರೂ ಸ್ನೇಹಿತರ ಒತ್ತಾಯದ ಮೇರೆಗೆ ಹೊರಗೆ ಹೋಗಿರುತ್ತೀರಾ ಲೇಟ್ ಆದ ಕಾರಣ ಮನೆಗೆ ಬರದೆ ಸಮಸ್ಯೆ ಆಗಬಹುದು ಅಥವಾ ನೀವಲ್ಲಿ ತಿಂದ ಆಹಾರ ನಿಮಗೆ ಸೆಟ್ ಆಗದೆ ಇರಬಹುದು.

ತಿನ್ನುವುದೋ ಬೇಡವೋ ಎನ್ನುವ ಗೊಂದಲದಲ್ಲಿ ನೀವು ಈ ತಪ್ಪು ಮಾಡಿದ್ದರು ಶಿಕ್ಷೆ ಅನುಭವಿಸಲೇಬೇಕು ಅಥವಾ ನಿಮ್ಮ ನಿರೀಕ್ಷೆಗೂ ಮೀರಿದ ಖರ್ಚಿನ ಹೊರೆ ಬರಬಹುದು ಹಾಗಾಗಿ ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ ಮುಂದುವರೆಯುವುದು ಬಹಳ ಒಳ್ಳೆಯದು.

ಯಾಕೆಂದರೆ, ನಿಮ್ಮ ಮನಸಾಕ್ಷಿ ಹೇಳಿದಂತೆ ಕೇಳಿದರೆ ಬಹಳ ಶುಭಫಲಗಳು ಹಾಗೂ ಒತ್ತಾಯದಿಂದ ಮಾಡುವ ಕಾರ್ಯಗಳಿಗೆ ಅಶುಭ ಫಲಗಳನ್ನು ಈ ತಿಂಗಳಿನಲ್ಲಿ ಪಡೆಯುತ್ತೀರಿ. ಹೊಸ ಸಂವತ್ಸರ ಅಂದರೆ ಯುಗಾದಿ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಬಹುದು. ಆದರೆ ಆ ಸಮಯದಲ್ಲೂ ನೀವಾಯಿತು ನಿಮ್ಮ ಕೆಲಸವಾಯಿತು ಎಂದು ನೀವು ಇರುವುದೇ ನಿಮಗೆ ಒಳ್ಳೆಯದು.

ಮಾತಿನ ಬಗ್ಗೆ ಬಹಳ ನಿಗಾ ಇರಲಿ ಮಾತಿನಿಂದ ಕೂಡ ಸಮಸ್ಯೆಗೆ ಸಿಲುಕುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಮಾತು ಕೊಡುವ ಮುನ್ನ ಅಥವಾ ಮಾತಿನ ಮೂಲಕ ನಡೆಯುವ ವ್ಯವಹಾರಗಳಲ್ಲಿ ಕಟ್ಟು ಬೀಳದಿರಿ ಪ್ರಯಾಣದಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು, ಆದಷ್ಟು ಅನಾವಶ್ಯಕ ಪ್ರಯಾಣಗಳನ್ನು ತಪ್ಪಿಸುವುದೇ ಹೆಚ್ಚು ಉತ್ತಮ. ನೀವು ಯಾವುದೇ ಕಾರ್ಯ ಮಾಡಲು ಹೋದರು ವಿಘ್ನಗಳು ಬರುವುದು ಗ್ಯಾರಂಟಿ ಆದರೆ ಏಪ್ರಿಲ್ ತಿಂಗಳ ಅಂತ್ಯದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಲಿದೆ.

ಅತಿಯಾಗಿ ಭ’ಯ ಬೀಳುವ ಅಗತ್ಯ ಇಲ್ಲ, ಆತಂಕವೂ ಬೇಡ. ಈ ಮೇಲೆ ತಿಳಿಸಿದಂತೆ ಜಾಗ್ರತೆ ಒಂದಿದ್ದರೆ ಸಾಕು. ಯಾವುದೇ ಸಂದರ್ಭ ಬಂದರೂ ನಿಮ್ಮ ಮನಸ್ಸಿನ ಮಾತನ್ನು ಕೇಳಿ ಹೊರತು ಇತರರ ಸಲಹೆಯನ್ನು ಕಡಿಮೆ ಮಾಡಿ ಎನ್ನುವುದನ್ನು ಬಲವಾಗಿ ಹೇಳಬಹುದು. ಹಣಕಾಸಿನ ಪರಿಸ್ಥಿತಿಯು ಮಧ್ಯಮವಾಗಿರುತ್ತದೆ.

ಮಾತಿನ ಹಿಡಿತದಿಂದ ಮತ್ತು ಇಲ್ಲ ಸಲ್ಲದ ಕೆಲಸಗಳಲ್ಲಿ ತಲೆ ಹಾಕುವುದನ್ನು ತಪ್ಪಿಸುವುದರಿಂದ ಆರ್ಥಿಕ ನ’ಷ್ಟ ಆಗುವುದನ್ನು ತಪ್ಪಿಸಬಹುದು. ಈ ತಿಂಗಳ ನಾಲ್ಕು ಶನಿವಾರಗಳಂದು ಶನೇಶ್ವರ ಸ್ವಾಮಿ ಹಾಗೂ ಆಂಜನೇಯ ಸ್ವಾಮಿಯ ದರ್ಶನ ಮಾಡಿ ನವಗ್ರಹಗಳ ಆರಾಧನೆ ಮಾಡಿ ಇನ್ನು ಉತ್ತಮ ಫಲಗಳನ್ನು ಪಡೆಯುತ್ತೀರಿ. ಇರುಳು ಕಳೆದು ಬೆಳಕು ಹರಿವಂತೆ ನಿಮ್ಮ ಬದುಕು ಕೂಡ ಉತ್ತಮವಾಗುತ್ತದೆ ಧೈರ್ಯದಿಂದ ಇರಿ.

https://youtu.be/8g2t852-40E?si=EkSFCf2vsFclYF9X

ತುಲಾ ರಾಶಿಯ ಏಪ್ರಿಲ್ 2024ರ ಯುಗಾದಿ ಭವಿಷ್ಯ, ಈ ತಿಂಗಳು ಸೂಪರ್ ಆದರೆ ಗುರು ಬದಲಾಗುತ್ತಿದ್ದಂತೆ ಪರಿಸ್ಥಿತಿ ಹೀಗಾಗಿ ಬಿಡುತ್ತದೆ.!

ನಾವೀಗ ನೂತನ ಸಂವತ್ಸರದ ಆಗಮನದ ತುದಿಯಲ್ಲಿದ್ದೇವೆ. ಏಪ್ರಿಲ್ 09, 2024 ರಂದು ಉತ್ತರಾಯಣ, ವಸಂತ ಮಾಸ, ಚೈತ್ರ ಮಾಸ, ಕ್ರೋಧಿ ಸಂವತ್ಸರ ಆರಂಭವಾಗುತ್ತಿದೆ. ಈ ಸಮಯದಲ್ಲಿ ನವಗ್ರಹಗಳ ಸಂಚಾರದಲ್ಲೂ ಬದಲಾವಣೆಯಾಗುತ್ತಿದೆ. ಏಪ್ರಿಲ್ 09ರಂದು ಬುಧ ಮೀನ ರಾಶಿಯನ್ನು ಪ್ರವೇಶಿಸುತ್ತಿದ್ದಾರೆ, ಏಪ್ರಿಲ್ 13ರಂದು ಸೂರ್ಯ ಮೇಷ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾರೆ.

ಏಪ್ರಿಲ್ 23ರಂದು ಕುಜ ಮೇಷ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾರೆ, ಏಪ್ರಿಲ್ 24ರಂದು ಶುಕ್ರ ಮೇಷ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾರೆ. ಈ ಎಲ್ಲಾ ಗ್ರಹ ಪರಿವರ್ತನೆ ಪರಿಣಾಮವು ದ್ವಾದಶ ರಾಶಿಗಳೆಂದರೆ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ಏಪ್ರಿಲ್ ತಿಂಗಳಲ್ಲಿ ತುಲಾ ರಾಶಿಯ ಮಾಸ ಭವಿಷ್ಯ ಹೇಗಿರುತ್ತದೆ ಎನ್ನುವ ವಿಚಾರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ತುಲಾ ರಾಶಿಯ ಲಗ್ನ ರಾಶಿಯಾಧಿಪತಿಯಾದ ಶುಕ್ರನು ಉಚ್ಛ ಸ್ಥಾನದಲ್ಲಿದ್ದಾರೆ ಪರಿಣಾಮವಾಗಿ ಶುಭಫಲಗಳನ್ನೇ ಪಡೆಯುತ್ತಿದ್ದೀರಿ. ಆರೋಗ್ಯದಲ್ಲಿ ಯಾವುದೇ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ, ಒಂದು ವೇಳೆ ಈ ಹಿಂದೆ ಆರೋಗ್ಯ ಸಮಸ್ಯೆ ಇದ್ದರೆ ಕೂಡ ಅದು ಸುಧಾರಣೆ ಆಗಲಿದೆ. ದ್ವಿತೀಯ ಭಾಗ್ಯಾಧಿಪತಿ ಕುಜ ಷಷ್ಠದಲ್ಲಿ ಸಂಚಾರ ಮಾಡುತ್ತಿರುತ್ತಾರೆ.

ಈ ಸುದ್ದಿ ಓದಿ:- ಮನೆಯಲ್ಲಿ ಯಾವುದೇ ಕಾರಣಕ್ಕೂ ಈ 6 ವಸ್ತುಗಳು ಖಾಲಿಯಾಗಲು ಬಿಡಬೇಡಿ.!

ಪಾಪ ಗ್ರಹಗಳಿಗೆ 3, 6, 11 ಶುಭ ಸ್ಥಾನವೇ ಆದ್ದರಿಂದ ಶುಭ ಫಲಿತಾಂಶಗಳೇ ಸಿಗುತ್ತಿದೆ. ಸ್ವಲ್ಪ ರಾಹುಗ್ರಸ್ತನಾಗಿರುವುದರಿಂದ ಮಾತಿನ ಮೇಲೆ ಹಿಡಿತ ಇರಬೇಕು. ಮಾತು ಕೊಡುವಾಗ ಮಾತಿಗೆ ಸಿಲುಕುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಮತ್ತು ನಿಮ್ಮ ಮಾತಿನಿಂದಲೇ ಕ’ಲ’ಹ, ಜ’ಗ’ಳ, ಮ’ನ’ಸ್ತಾ’ಪ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಯಾರ ಜೊತೆ ಮಾತನಾಡಬೇಕಾದರೂ ಮಾತು ಮಿತವಾಗಿರಲಿ ಹಿತವಾಗಿರಲಿ.

ಹಣಕಾಸಿನ ವಿಚಾರದಲ್ಲಿ ವಿಳಂಬವಾದರೂ ಶುಭವಾಗುತ್ತದೆ. ಧನಕಾರಕ ಶುಕ್ರನು ಉಚ್ಛ ಸ್ಥಾನದಲ್ಲಿರುವುದರಿಂದ ಧನಯೋಗವಿದೆ. ಮೇಷ ರಾಶಿಯನ್ನು ಶುಕ್ರ ಪ್ರವೇಶ ಮಾಡಿದರು ಕೂಡ ಶುಕ್ರನು ಜನ್ಮ ರಾಶಿಯನ್ನು ನೋಡುತ್ತಾರೆ, ಇದು ಕೂಡ ಶುಭಫಲಗಳನ್ನು ನೀಡುತ್ತಿದೆ. ಇದರಿಂದಾಗಿ ನೂತನ ವರ್ಷದ ಪ್ರಾರಂಭವೂ ತುಲಾ ರಾಶಿಯವರಿಗೆ ಬಹಳ ಉತ್ತಮ ರೀತಿಯಲ್ಲಿ ಆರಂಭವಾಗುತ್ತಿದೆ ಎಂದೇ ಹೇಳಬಹುದು.

3ನೇ ಮನೆ ಅಧಿಪತಿಯಾದ ಗುರುವು 7ನೇ ಮನೆಯಲ್ಲಿ ಸಂಚಾರ ಮಾಡುತ್ತಿರುವುದು ಏಪ್ರಿಲ್ ಅಂತ್ಯದಲ್ಲಿ ಅಷ್ಟಮ ಭಾವವನ್ನು ಪ್ರವೇಶ ಮಾಡುತ್ತಾರೆ. ಈ ತೃತೀಯ ಭಾವವನ್ನು ಸಹೋದರ ಸ್ಥಾನ ಎಂದು ಕೂಡ ಹೇಳುವುದರಿಂದ ಒಡಹುಟ್ಟಿದವರು ಜೊತೆಗಿನ ಒಡನಾಟವನ್ನು ಸೂಚಿಸುತ್ತದೆ.

ಈ ಸುದ್ದಿ ಓದಿ:- ಏಪ್ರಿಲ್ 1, 2024 ರಿಂದ ಉಚಿತ ವಿದ್ಯುತ್ ಸೌಲಭ್ಯ ಬಂದ್, ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

ಇದರ ಪರಿಣಾಮ ಹೇಗಿರುತ್ತದೆ ಎಂದರೆ ನೀವು ಎಷ್ಟು ಚೆನ್ನಾಗಿ ನಿಮ್ಮ ಒಡ ಹುಟ್ಟಿದವರ ಜೊತೆ ಹೊಂದಿಕೊಂಡಿರುತ್ತೀರೋ ಅಷ್ಟು ಒಳ್ಳೆಯ ಫಲಗಳು ಒಂದು ವೇಳೆ ಮನಸ್ತಾಪಗಳಾದರೆ ಅಷ್ಟೇ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾದ ಫಲಗಳನ್ನು ಹೊಂದಿದೆ ಎಂದು ಹೇಳುತ್ತದೆ.

ಎಲ್ಲ ವಿಚಾರಗಳನ್ನು ಕೂಡ ಒಳ್ಳೆ ರೀತಿಯ ಫಲಿತಾಂಶಗಳನ್ನು ಪಡೆದಿದ್ದರೂ ಗುರುಬಲದ ಕೊರತೆ ಹಾಗೂ ಶನಿ ದೋಷ ತುಲಾ ರಾಶಿಯವರನ್ನು ಖಂಡಿತವಾಗಿಯೂ ಕಾಡುತ್ತದೆ. ಇದರಿಂದ ಕೆಲ ಸಣ್ಣ ಪುಟ್ಟ ಸಮಸ್ಯೆಗಳು ಬಂದು ಹೋಗಬಹುದು ಇವುಗಳನ್ನು ಎದುರಿಸಲು ಪರಿಹಾರ ಮಾಡಿಕೊಳ್ಳುವುದು ಸೂಕ್ತ.

ದಿನನಿತ್ಯ ಮಾಡುವ ಪೂಜೆಗಳಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿಕೊಳ್ಳುವುದೇ ಇದಕ್ಕೆ ಪರಿಹಾರ ಆಗಿದೆ. ಈಶ್ವರನ ದರ್ಶನ ಮಾಡುವುದು, ಆಂಜನೇಯನ ಸೇವೆ ಮಾಡುವುದು, ಶನೇಶ್ವರನ ದರ್ಶನ ಮಾಡುವುದು, ನವಗ್ರಹ ಆರಾಧನೆ ಮಾಡುವುದು ಇದೆಲ್ಲವೂ ಕೂಡ ಸರಳ ಪರಿಹಾರಗಳಾಗಿವೆ. ಈ ರೀತಿ ಮಾಡುವುದರಿಂದ ಕಷ್ಟಗಳು ಕಡಿಮೆಯಾಗಿ ಅದೃಷ್ಟವು ದುಪ್ಪಟ್ಟಾಗುತ್ತದೆ.

ಮೀನಾ ರಾಶಿಯವರಿಗೆ ಏಪ್ರಿಲ್-2024 ತಿಂಗಳ ಭವಿಷ್ಯ ಹೇಗಿರುತ್ತದೆ ಗೊತ್ತಾ.?

0

 

ಮೀನ ರಾಶಿಯವರಿಗೆ ಈಗಾಗಲೇ ಸಾಡೇಸಾತಿ ಪ್ರಭಾವ ಕಾಡುತ್ತಿದೆ. ಆದರೂ ಇದರ ನಡುವೆ ಹೊಸ ವರ್ಷವು ಹೊಸ ರೀತಿ ಬದಲಾವಣೆ ತರಲಿದಿಯೋ ಇಲ್ಲವೋ ಎನ್ನುವ ನಿರೀಕ್ಷೆ ಖಂಡಿತಾ ಇರುತ್ತದೆ. ಸಾಡೆ ಸಾತಿ ಸಮಯವನ್ನು ಅರಗಿಸಿಕೊಂಡು ಬುದ್ಧಿ ಕಲಿತು ಜೀವನದ ಮಹತ್ವವನ್ನು ಬದುಕಿನ ಪಾವಿತ್ರತೆಯನ್ನು ಅರಿತು ಅನುಭವ ಪಡೆಯಲೇಬೇಕು, ಇದು ಪರಮಾತ್ಮ ನಿಯಮ.

ಆದರೂ ಇಷ್ಟು ಕಷ್ಟದ ಸಮಯದಲ್ಲೂ ಭರವಸೆ ಮಾಡುವಂತಹ ಒಂದಷ್ಟು ಶುಭ ವಿಚಾರಗಳು ನಡೆದರೆ ನಮ್ಮನ್ನು ಇನ್ನಷ್ಟು ದಿನಗಳು ಮುಂದೆ ನಡೆಯುವ ಹಾಗೆ ಮಾಡುತ್ತದೆ. ಅಂತಹ ಯಾವುದಾದರೂ ಶುಭ ಸಮಾಚಾರ ಕ್ರೋಧಿ ಸಂವತ್ಸರ ಆರಂಭವಾಗುತ್ತಿರುವ ಈ ಏಪ್ರಿಲ್ ತಿಂಗಳಿನಲ್ಲಿ ಇದೆಯೇ ಎಂದು ಮೀನ ರಾಶಿಯವರು ನಿರೀಕ್ಷೆ ಮಾಡುತ್ತಿದ್ದರೆ ಇದರ ಕುರಿತ ಮಾಹಿತಿ ಹೀಗಿದೆ ನೋಡಿ.

ಹೌದು ಏಪ್ರಿಲ್ ತಿಂಗಳಲ್ಲಿ ನಿಮಗೆ ಇಂತಹ ಶುಭ ಸಮಾಚಾರಗಳು ಇದೆ. ಆದರೆ ಅದಕ್ಕೂ ಮುನ್ನ ನೀವು ಬಹಳ ಕ’ಷ್ಟದ ದಿನಗಳನ್ನು ಕೂಡ ಆರಂಭದಲ್ಲಿಯೇ ಕಳೆಯಬೇಕು. ಯಾಕೆಂದರೆ ಶನಿ ಜೊತೆಗೆ ರವಿ ಹಾಗೂ ಕುಜ ಪಕ್ಕದಲ್ಲಿ ಇರುವುದರಿಂದ ಇವುಗಳ ಸಂಯೋಗವು ಅಷ್ಟೊಂದು ಶುಭ ತರುವುದಿಲ್ಲ.

ಪರಿಣಾಮವಾಗಿ ಕುಟುಂಬದ ವಿಚಾರವಾಗಿ ನೀವು ಒಂದಷ್ಟು ಭಿನ್ನಾಭಿಪ್ರಾಯಗಳನ್ನು, ನೋ’ವುಗಳನ್ನು ತಿನ್ನಲೇಬೇಕಾಗುತ್ತದೆ. ಆ ಸಮಯದಲ್ಲಿ ಶುಕ್ರನ ಸಹಕಾರದಿಂದ ನಿಮಗೆ ಹಣಕಾಸಿನ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬರುತ್ತದೆ. ಆದರೆ ನೀವು ಎಚ್ಚರಿಕೆಯಿಂದ ಇರಬೇಕು.

ಆದಷ್ಟು ಜಾಗ್ರತೆಯಿಂದ ಹಣ ವಿನಿಯೋಗ ಮಾಡುವುದು ಅಥವಾ ಹೂಡಿಕೆ ಮಾಡುವುದು ಅಥವಾ ಬುದ್ಧಿವಂತಿಕೆಯಿಂದ ಕಳೆದುಕೊಂಡಿದ್ದ ಹಣವನ್ನು ಪಡೆದುಕೊಳ್ಳುವ ಮಾರ್ಗ ಹುಡುಕಿದರೆ ನಿಮ್ಮ ನಿರೀಕ್ಷಿತ ಫಲ ಸಿಗುತ್ತದೆ. ತೃತೀಯ ಭಾವ ಎಂದು ಹೇಳುವ ಸಹೋದರ ಸ್ಥಾನವು ನಿಮ್ಮ ಈ ತಿಂಗಳ ಪರಿಸ್ಥಿತಿಗೆ ವರದಾನವಾಗಿದೆ ಯಾಕೆಂದರೆ ನೀವು ನಿಮ್ಮ ಒಡಹುಟ್ಟಿದವರ ಸಹಕಾರದಿಂದ ಅನೇಕ ಕಷ್ಟಗಳಿಂದ ಹೊರ ಬರುತ್ತೀರಿ.

ಈ ಹಂತದಲ್ಲಿ ಅವರಿಂದ ಹಣಬಲ ಹಾಗೂ ಹಿತನುಡಿಗಳು ಕೂಡ ಸಿಗುತ್ತವೆ. ಅವರು ಜೊತೆಗಿದ್ದಾರೆ ಎನ್ನುವ ಧೈರ್ಯವು ನಿಮ್ಮನ್ನು ಇನ್ನಷ್ಟು ಮುಂದಕ್ಕೆ ತೆಗೆದುಕೊಂಡು ಹೋಗುತ್ತದೆ ಮತ್ತು ಈ ತಿಂಗಳ ಅಂತ್ಯದಲ್ಲಿ ಗುರುವಿನ ಜೊತೆಗೆ ಬುಧನು ಕೂಡ ಸೇರುತ್ತಿರುವುದರಿಂದ ಇವರಿಬ್ಬರ ಯೋಗವು ಇನ್ನು ಉತ್ತಮ ಫಲಗಳನ್ನು ನೀಡುತ್ತಿದೆ.

ಆ ಪರಿಣಾಮವಾಗಿ ನೀವೇನಾದರೂ ಒಳ್ಳೆಯ ಕೆಲಸಗಳಿಗೆ ಕೈ ಹಾಕಿದರೆ ಅಥವಾ ಯಾವುದೇ ಹೊಸ ಪ್ರಯತ್ನ ಮಾಡಿದರು ಅದು ನಡೆಯುತ್ತದೆ, ಕೈಗೂಡುತ್ತದೆ. ಆದರೆ ಇದನ್ನು ಇಷ್ಟೇ ಯಶಸ್ಸಿನಲ್ಲಿ ನಡೆಸಿಕೊಂಡು ಹೋಗಲು ನಿಮ್ಮ ಶ್ರದ್ದೆ ಆಸಕ್ತಿ ನೋಡಿ ಪರಮಾತ್ಮನು ಆಶೀರ್ವದಿಸಬೇಕಾಗುತ್ತದೆ.

ವಿದ್ಯಾರ್ಥಿಗಳಿಗೂ ಅತ್ಯಂತ ಶುಭ ಫಲಗಳು ಇವೆ. ಈ ತಿಂಗಳ ಅಂತ್ಯದಲ್ಲಿ ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುತ್ತಾರೆ. ಆರೋಗ್ಯದ ವಿಚಾರದಲ್ಲಿ ಕೂಡ ಅಷ್ಟೇನೂ ತೊಂದರೆ ಇರುವುದಿಲ್ಲ ಆದರೆ ಮೀನ ರಾಶಿಯವರಿಗೆ ಈ ತಿಂಗಳು ಪೂರ್ತಿ ಟೆನ್ಶನ್ ತಪ್ಪೋದಿಲ್ಲ.

ಒಟ್ಟಾರೆಯಾಗಿ ಒಂದಲ್ಲ ಒಂದು ಕಾರಣದ ಜಂಜಾಟದಲ್ಲಿಯೇ ಈ ತಿಂಗಳನ್ನು ಕಳೆಯುತ್ತೀರಿ. ಈಗ ಶುಭಗ್ರಹಗಳ ಪರಿಣಾಮ ಉತ್ತಮಗೊಳ್ಳಲು ಹಾಗೂ ಪಾಪಗ್ರಹಗಳ ಪ್ರಭಾವ ಕಡಿಮೆ ಆಗಲು ಪ್ರತಿ ಶನಿವಾರದಂದು ಶನೇಶ್ವರ ಹಾಗೂ ಆಂಜನೇಯನ ದರ್ಶನ ಮಾಡಿ ಶನಿ ಸ್ತೋತ್ರ ಮತ್ತು ಹನುಮಾನ್ ಚಾಲೀಸಾ ಪಠಿಸಿ ನವಗ್ರಹಗಳನ್ನು ಆರಾಧನೆ ಮಾಡಿ ಎಲ್ಲರಿಗೂ ಶುಭವಾಗಲಿ.

https://youtu.be/lXfTxKp0zhs?si=ZAkXHeq3zOjFYSpv