Home Blog Page 99

ಹಳದಿ ಹಲ್ಲು, ಹುಳುಕು ಹಲ್ಲು, ವಸಡಲ್ಲಿ ರಕ್ತ ಹಲ್ಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರಲಿ ಈ ಚೂರ್ಣ ಬಳಸಿ ಸಾಕು ಎಲ್ಲಾ ನೋವಿಗೂ ಮುಕ್ತಿ.!

 

ಈಗಿನ ಕಾಲದಲ್ಲಿ ಜನರಿಗೆ ಕಾಡುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಹಲ್ಲಿಗೆ ಸಂಬಂಧಪಟ್ಟ ಸಮಸ್ಯೆಯೂ ಕೂಡ ಸೇರಿದೆ. ಹಲ್ಲು ನೋವು, ಹಲ್ಲಿನ ಬೇರು ಸಡಿಲಾಗುವುದು, ವಸಡುಗಳ ಸವಕಳಿ, ಹಲ್ಲಿನ ಸೆನ್ಸಿಟಿವಿಟಿ, ದಂತಕ್ಷಯ ವಸಡುಗಳಲ್ಲಿ ರಕ್ತ ಬರುವುದು ಇವುಗಳ ಜೊತೆ ಮೌತ್ ಅಲ್ಸರ್ ಈ ಎಲ್ಲಾ ಸಮಸ್ಯೆಗಳಿಗೂ ಕೂಡ ನಾವು ಬಳಸುವ ಫೇಸ್ಟ್ ಔಷಧಿ ಎಂದು ತಿಳಿದುಕೊಂಡಿದ್ದೇವೆ.

ಆದರೆ ನಿಜಕ್ಕೂ ಇಂದು ನಾವು ಬಳಸುತ್ತಿರುವ ಪೇಸ್ಟ್ ಗಳು ಆರೋಗ್ಯಕ್ಕೆ ಪೂರಕವಾಗುವುದರ ಬದಲು ಬಹಳ ದೊಡ್ಡ ತೊಂದರೆ ಮಾಡುತ್ತಿವೆ. ಯಾಕೆಂದರೆ ಈ ಪೇಸ್ಟ್ ಗಳಲ್ಲಿ ಕೆಮಿಕಲ್ ಅಂಶ ಬಹಳ ಹೆಚ್ಚಾಗಿರುತ್ತದೆ ಯಾವುದೇ ಪೇಸ್ಟ್ ಆದರೂ ಅದರಲ್ಲಿ 1000 ppm ಗಿಂತಲೂ ಅಧಿಕವಾಗಿ ಫ್ಲೋರೈಡ್ ಅಂಶ ಮತ್ತು ಇನ್ನಿತರ ರಾಸಾಯನಿಕಗಳು ಗಳಿರುತ್ತವೆ.

ಫ್ಲೋರೈಡ್ ಅಂಶವನ್ನು ನಾವು ಪೇಸ್ಟ್ ರೂಪದಲ್ಲಿ ಬೆಳ್ಳಂಬೆಳಗ್ಗೆ ಉಪಯೋಗಿಸುವುದರಿಂದ ಇದು ಬಾಯಿಯ ಒಳಗೆ ಸಲೈವಗಳನ್ನು ಸ್ರವಿಸುವ ಗ್ರಂಥಿಗಳ ಕಾರ್ಯ ಚಟುವಟಿಕೆಯನ್ನು ಕುಂಠಿತಗೊಳಿಸುತ್ತದೆ. ಆಹಾರದ ಮೂಲಕ ಫ್ಲೋರೈಡ್ ಅಂಶ ದೇಹ ಸೇರಿದರೆ ಹೃದಯದ ಸಮಸ್ಯೆ, ಕಿಡ್ನಿ ಸಮಸ್ಯೆ ಹಾಗೂ ಮೆದುಳಿನ ಆರೋಗ್ಯಕ್ಕೆ ಬಹಳ ಹಾನಿಕರ.

ಈ ರೀತಿ ಅಂಗಾಂಗಗಳ ವೈಫಲ್ಯವನ್ನು ಉಂಟುಮಾಡುವ ಈ ಕೆಮಿಕಲ್ ನ್ನು ಬೆಳಂಬೆಳಗ್ಗೆ ನಾವು ಬಳಸುವುದು ಸೂಕ್ತವಲ್ಲ. ಯಾವ ಆಯುರ್ವೇದವು ಕೂಡ ಪೇಸ್ಟ್ ಗಳನ್ನು ಸೂಚಿಸುವುದಿಲ್ಲ ಆಯುರ್ವೇದದಲ್ಲಿ ಚೂರ್ಣ ಇದೆ ಈ ಚೂರ್ಣಗಳನ್ನು ಬಳಸಿ ನಾವು ಹಲ್ಲುಜ್ಜಿದಾಗ ನೊರೆಗಳು ಉಂಟಾಗುವುದಿಲ್ಲ ಆದರೆ ನಮ್ಮ ಕಲ್ಪನೆ ಏನೆಂದರೆ ನೊರೆ ಜಾಸ್ತಿ ಬರುತ್ತಿದೆ ಎಂದರೆ ನಮ್ಮ ಹಲ್ಲುಗಳು ಚೆನ್ನಾಗಿ ಕ್ಲೀನ್ ಆಗುತ್ತಿದ್ದೆ ಎಂದುಕೊಳ್ಳುತ್ತೇವೆ.

ಆದರೆ ಇದು ಹಲ್ಲುಗಳ ಹೊರ ಕವಚವಾದ ಎನಾಮಲ್ ನ್ನು ಸವೆಸಿ ಹಲ್ಲುಗಳ ಆರೋಗ್ಯ ಕ್ಷೀಣಿಸುವಂತೆ ಮಾಡುತ್ತಿವೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ನಮ್ಮ ಹಿರಿಯರು ಆಗಿನ ಕಾಲದಲ್ಲಿ ಯಾವುದೇ ರೀತಿಯ ಪೇಸ್ಟ್ ಆಗಲಿ ಬ್ರಷ್ ಆಗಲಿ ಬಳಸುತ್ತಿರಲಿಲ್ಲ ಬೇವಿನ ಕಡ್ಡಿ, ಇಟ್ಟಿಗೆ ಪುಡಿ, ಕಲ್ಲಿದ್ದಲನ್ನು ಪುಡಿ ಇವುಗಳನ್ನು ಬಳಸಿ ಹಲ್ಲುಜ್ಜಿ ವಯಸ್ಸಾದರೂ ರೊಟ್ಟಿ ತಿನ್ನುತ್ತಾ ಹಲ್ಲನ್ನು ಗಟ್ಟಿಮುಟ್ಟಾಗಿ ಇಟ್ಟುಕೊಂಡಿದ್ದರು.

ಈಗ ನಮಗೆ ಈ ಮೇಲೆ ತಿಳಿಸಿದ ವಸ್ತುಗಳು ಪ್ರತಿದಿನವೂ ಸಿಗದೇ ಇರುವುದರಿಂದ ಆಯುರ್ವೇದದಲ್ಲಿ ಒಂದು ಚೂರ್ಣವನ್ನು ತಿಳಿಸಲಾಗಿದೆ. ಈ ಚೂರ್ಣವನ್ನು ಕೂಡ ಮನೆಯಲ್ಲೇ ಮಾಡಿ ಇಟ್ಟುಕೊಂಡು ಪ್ರತಿದಿನವೂ ಬಳಸಬಹುದು ಇದು ತುಂಬಾ ಪರಿಣಾಮಕಾರಿಯಾಗಿ ಹಲ್ಲಿನ ಆರೋಗ್ಯ ರಕ್ಷಣೆ ಮಾಡುತ್ತದೆ.

ಜಾಲಿ ಗಿಡದ ಕಟ್ಟಿಗೆ ಪುಡಿ ಅಥವಾ ಚಕ್ಕೆಯನ್ನು ಪುಡಿ ಮಾಡಿ ಚೆನ್ನಾಗಿ ಒಣಗಿಸಬೇಕು. ಇದರ ಜೊತೆ ಬೇವಿನ ಚಕ್ಕೆ ಅಥವಾ ಬೇವಿನ ಎಲೆಯನ್ನು ಕೂಡ ಒಣಗಿಸಬೇಕು. ನೆಲ ನೆಲ್ಲಿಯನ್ನು ಕೂಡ ಚೆನ್ನಾಗಿ ಒಣಗಿಸಿ ಶುದ್ಧವಾದ ಅರಿಶಿಣ ಕೊಂಬಿನಿಂದ ತಯಾರಿಸಿದ ಅರಿಶಿಣ ಪುಡಿಯನ್ನು ತೆಗೆದುಕೊಳ್ಳಬೇಕು.

ಈ ಮೇಲಿನ ಎಲ್ಲಾ ಪದಾರ್ಥಗಳು 100 ಗ್ರಾಂ ಇದ್ದರೆ ಇದಕ್ಕೆ 200 ಗ್ರಾಂ ನಷ್ಟು ಸೈಂಧವ ಲವಣವನ್ನು ಸೇರಿಸಿ 200 ಗ್ರಾಂ ನಷ್ಟು ನಾಟಿ ಹಸುವಿನ ಬೆರಣಿ ಯನ್ನು ಉರಿಸಿದ ಬೂದಿಯನ್ನು ಹಾಕಿ ಮಿಕ್ಸ್ ಮಾಡಿ ಇವೆಲ್ಲವನ್ನು ಹಾಕಿಕೊಂಡು ಪ್ರತಿದಿನವೂ ಬ್ರಶ್ ಮಾಡಿದರೆ ಹಲ್ಲಿನ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತದೆ.

ಸಾಧ್ಯವಾದಷ್ಟು ಬ್ರಷ್ ಗಳ ಬಳಕೆಯನ್ನು ತಪ್ಪಿಸುವುದು ಒಳ್ಳೆಯದು, ಒಂದು ವೇಳೆ ಬಳಸಲೇಬೇಕು ಎಂದರೆ ತಪ್ಪದೇ ತಿಂಗಳಿಗೊಮ್ಮೆ ಇದನ್ನು ಬದಲಾಯಿಸಬೇಕು. ಈ ಮೇಲೆ ತಿಳಿಸಿದ ಪುಡಿಯನ್ನು ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದವರು ದಂತ ರೋಗ ನಿವಾರಕ ಲೇಪ ಎನ್ನುವ ಚೂರ್ಣ ಕೂಡ ಆಯುರ್ವೇದ ಅಂಗಡಿಯಲ್ಲಿ ಸಿಗುತ್ತದೆ ಇದನ್ನು ಕೂಡ ಬಳಸಬಹುದು.

https://youtu.be/cFHsOaXdUCA?si=g1LWK6V4mHh4-iy5

ನಿರುದ್ಯೋಗಿಗಳಿಗೆ ಉಚಿತ ರೂ.72,000 ನೀಡುವ ಯೋಜನೆಗೆ ರಾಜ್ಯ ಸರ್ಕಾರದಿಂದ ಚಾಲನೆ, ಏನೆಲ್ಲ ದಾಖಲೆಗಳು ಬೇಕು, ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!

 

ಕರ್ನಾಟಕದಲ್ಲಿ ನೂತನವಾಗಿ ಅಧಿಕಾರ ಸ್ಥಾಪಿಸಿರುವ ಕಾಂಗ್ರೆಸ್ (Congres) ನೇತೃತ್ವದ ರಾಜ್ಯ ಸರ್ಕಾರವು ಚುನಾವಣೆ ಪೂರ್ವವಾಗಿ ಜನರಿಗೆ ಪಂಚ ಗ್ಯಾರಂಟಿಗಳ (five guaranty Scheme) ಆಶ್ವಾಸನೆ ನೀಡಿತ್ತು. ಆ ಪ್ರಕಾರವಾಗಿ ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳ ಪ್ರಯೋಜನವನ್ನು ರಾಜ್ಯದ ಜನತೆ ಪಡೆಯುತ್ತಿದ್ದಾರೆ.

5ನೇ ಗ್ಯಾರಂಟಿಯಾಗಿ ಯುವನಿಧಿ ಯೋಜನೆ (Yuvanidhi Scheme) ಕೂಡ ಜಾರಿಗೆ ತರಲು ತಯಾರಾಗಿದೆ. ಈಗ ಸರ್ಕಾರಕ್ಕೆ ಆರು ತಿಂಗಳು ತುಂಬಿರುವ ಸಂಭ್ರಮ, ಇದರ ಜೊತೆಗೆ 5ನೇ ಗ್ಯಾರಂಟಿ ಯೋಜನೆಯನ್ನು ಕೂಡ ಜಾರಿಗೆ ತಂದು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸರ್ಕಾರ ಮುಂದಾಗಿದೆ.

ಆ ಪ್ರಕಾರವಾಗಿ ಯುವನಿಧಿ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಜಿಯಲ್ಲಿ ಸಲ್ಲಿಸಬೇಕು ಬೇಕಾಗುವ ದಾಖಲೆಗಳೇನು? ಯಾವ ದಿನಾಂಕದಿಂದ ಅರ್ಜಿ ಸಲ್ಲಿಸಬೇಕು ಎನ್ನುವುದರ ವಿವರವನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

* ಯೋಜನೆಯ ಹೆಸರು:- ಯುವನಿಧಿ ಯೋಜನೆ
ಯುವನಿಧಿ ಯೋಜನೆ ಕಾಂಗ್ರೆಸ್ ಪಕ್ಷ ನೀಡಿದ ಐದನೇ ಗ್ಯಾರಂಟಿ ಯೋಜನೆಯಾಗಿದ್ದು, ಈ ಯೋಜನೆ ಮೂಲಕ ನಿರುದ್ಯೋಗ ಯುವ ಜನತೆಗೆ ಪ್ರತಿ ತಿಂಗಳ ನಿರುದ್ಯೋಗಭತ್ಯೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ನಂತರ ಈ ಯೋಜನೆಯ ನಿಯಮಗಳಲ್ಲಿ ಮಾರ್ಪಾಡು ಮಾಡಿ ಕೆಲ ಕಂಡೀಶನ್ ಗಳನ್ನು ಹೇಳಲಾಗಿದೆ. ಈ ನಿರುದ್ಯೋಗ ಭತ್ಯೆ ಪಡೆಯಲು ಹೇರಿರುವ ಕಂಡೀಷನ್ ಗಳ ‌ವಿವರ ಹೀಗಿದೆ.

1. ಎಲ್ಲರಿಗೂ ತಿಳಿದಿರುವಂತೆ ಈ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕರ್ನಾಟಕದ ಖಾಯಂ ನಿವಾಸಿಗಳಷ್ಟೇ ಅರ್ಹರಾಗಿರುತ್ತಾರೆ
2. 2022-23 ನೇ ಸಾಲಿನಲ್ಲಿ ಅಂತಿಮ ವರ್ಷದ ಪದವಿ ಹಾಗೂ ಅಂತಿಮ ವರ್ಷದ ಡಿಪ್ಲೋಮಾ ಪರೀಕ್ಷೆಗಳನ್ನು ಉತ್ತೀರ್ಣರಾಗಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು.
3. ಡಿಪ್ಲೊಮಾ ಅಥವಾ ಪದವಿ ಉತ್ತೀರ್ಣರಾಗಿ ಆರು ತಿಂಗಳು ಕಳೆದರೂ ಕೆಲಸ ಸಿಗದಿದ್ದವರು ಮಾತ್ರ ಅರ್ಜಿ ಸಲ್ಲಿಸಬೇಕು

4. ಅರ್ಜಿ ಸಲ್ಲಿಸುವಾಗ ತಾವು ನಿರುದ್ಯೋಗಿಗಳು ಎನ್ನುವುದಕ್ಕೆ ಸ್ವಯಂ ಧೃಡೀಕರಣ ಪತ್ರ ಸಲ್ಲಿಸಬೇಕು ಮತ್ತು ಅದರ ನೋಟರಿ ಆಗಿರಬೇಕು ಒಂದು ವೇಳೆ ಇದು ಸುಳ್ಳು ಎಂದು ಸಾಬೀತದಲ್ಲಿ ಸರ್ಕಾರವು ದಂಡ ವಿಧಿಸುತ್ತದೆ
5. ಯಾವುದೇ ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದು, ಅಪ್ರೆಂಟಿಸ್ ಶಿಪ್ ನಲ್ಲಿ ಕೆಲಸ ಮಾಡುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ

‌6. ಈ ವರ್ಷ ಪದವಿ ಅಥವಾ ಡಿಪ್ಲೋಮೋ ಉತ್ತೀರ್ಣರಾಗಿದ್ದರು ವಿದ್ಯಾಭ್ಯಾಸ ಮುಂದುವರಿಸುವುದಾದರೆ ಮುಂದಿನ ಶೈಕ್ಷಣಿಕ ತರಗತಿಗಳಿಗೆ ದಾಖಲಾಗಿದ್ದರೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
7. ನಿರುದ್ಯೋಗ ಭತ್ಯೆ ಪಡೆಯುವ ಸಂದರ್ಭದಲ್ಲಿ ಕೆಲಸ ಸಿಕ್ಕಿದರೆ ಅದನ್ನು ಕೂಡ ಘೋಷಿಸಿಕೊಳ್ಳಬೇಕು

* ಸಿಗುವ ಸಹಾಯಧನ:-
1. ಡಿಪ್ಲೋಮೋ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ರೂ.1500
2. ಪದವಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ರೂ.3,000

* ಅರ್ಜಿ ಸಲ್ಲಿಸುವ ದಿನಾಂಕ:-

ಡಿಸೆಂಬರ್ 21, 2023 ರಿಂದ ಬಹು ನಿರೀಕ್ಷಿತ ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ ಮಾಡಲಾಗುತ್ತಿದೆ ಮತ್ತು ಒಂದು ತಿಂಗಳುಗಳ ಕಾಲ ಅರ್ಜಿ ಸ್ವೀಕಾರ ಹಾಗೂ ಪರಿಶೀಲನೆ ನಡೆದು ಜನವರಿ 2024ರ 20ನೇ ತಾರೀಖಿನ ನಂತರ ಫಲಾನುಭವಿಗಳ ಖಾತೆಗೆ DBT ಮೂಲಕ ಹಣ ವರ್ಗಾವಣೆ ಆಗುವ ಸಾಧ್ಯತೆ ಇದೆ.

* ಅರ್ಜಿ ಸಲ್ಲಿಸುವ ವಿಧಾನ:-

ಉಳಿದ 4 ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸದ ರೀತಿ ಸೇವಾ ಸಿಂಧು ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು.
* ವೆಬ್ಸೈಟ್ ವಿಳಾಸ:-
https://sevasindhu.karnataka.gov.in

 

ಪೋಸ್ಟ್ ಆಫೀಸ್ ನ ಫಿಕ್ಸೆಡ್ ಡೆಪಾಸಿಟ್ ಅಕೌಂಟ್ ನಲ್ಲಿ ರೂ.1 ಲಕ್ಷ ಕಟ್ಟಿದರೆ ರೂ.38,570 ಪಡೆಯಬಹುದು.!

 

ಫಿಕ್ಸೆಟ್ ಡಿಪೋಸಿಟ್ ಯೋಜನೆಗಳ (Fixed deposite Scheme) ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿರುತ್ತದೆ. ಸಾಮಾನ್ಯವಾಗಿ ನಾವು ಬ್ಯಾಂಕ್ ಗಳಲ್ಲಿ ಈ ರೀತಿ ಒಂದು ಮೊತ್ತದ ಹಣವನ್ನು ನಿರ್ದಿಷ್ಟ ಸಮಯವರೆಗೆ ಠೇವಣಿ ಇಡುತ್ತೇವೆ. ಪ್ರತಿ ಬ್ಯಾಂಕ್ ನಿಂದ ಬ್ಯಾಂಕ್ ಗೆ ಇದರ ಬಡ್ಡಿದರ ಬೇರೆ ಬೇರೆ ಇರುತ್ತದೆ, ಆದರೆ ಈ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಹಣಕ್ಕೆ ಹೆಚ್ಚಿನ ಭದ್ರತೆ ಇರುತ್ತದೆ ಮತ್ತು ಉತ್ತಮ ಲಾಭವನ್ನು ಕೂಡ ಪಡೆಯಬಹುದು.

ಬ್ಯಾಂಕ್ ಗಳು ಮಾತ್ರವಲ್ಲದೆ ಈಗ ಅಂಚೆಕಛೇರಿಯಲ್ಲಿ ಕೂಡ ಹಣವನ್ನು ನಿಶ್ಚಿತ ಠೇವಣಿ ಇಡಬಹುದು. ಇದನ್ನು ಟೈಮ್ ಫಿಕ್ಸೆಡ್ ಡೆಪೋಸಿಟ್ ಸ್ಕೀಮ್ (Time Fixed Deopsite Scheme) ಎಂದು ಕರೆಯುತ್ತಾರೆ ಇದರ ಕುರಿತು ಕೆಲ ಪ್ರಮುಖ ಮಾಹಿತಿ ಹೀಗಿದೆ ನೋಡಿ.

ಯೋಜನೆಯ ಹೆಸರು:- ಟೈಮ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್

ಪೋಸ್ಟ್ ಆಫೀಸ್ ನಲ್ಲಿ ಸಿಗುವ ಬಡ್ಡಿದರ (Intrest rate)
* 1 ವರ್ಷಕ್ಕೆ 6.80%
* 2 ವರ್ಷಕ್ಕೆ 6.90%
* 3 ವರ್ಷಕ್ಕೆ 7.00%
* 5 ವರ್ಷಕ್ಕೆ 7.50%

ಯೋಜನೆಯ ಕುರಿತು ಕೆಲವು ಪ್ರಮುಖ ಮಾಹಿತಿಗಳು:-

* ಭಾರತೀಯ ನಾಗರಿಕರಾದ ಯಾರು ಬೇಕಾದರೂ ಈ ಅಂಚೆ ಕಚೇರಿಯ ಟೈಮ್ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
* ಈ ಯೋಜನೆಯಲ್ಲಿ ಖಾತೆ ತೆರೆದು ಹೂಡಿಕೆ ಮಾಡಲು ವಯಸ್ಸಿನ ಮಿತಿ ಇರುವುದಿಲ್ಲ
* ಕನಿಷ್ಟ ರೂ.1000 ನಿಂದ ಗರಿಷ್ಟ ಯಾವುದೇ ಮಿತಿ ಇಲ್ಲ, ಎಷ್ಟು ಬೇಕಾದರೂ ಡೆಪಾಸಿಟ್ ಇಡಬಹುದು

* ಈ ಯೋಜನೆಯ ಮೆಚುರಿಟಿ ಅವಧಿ ಕನಿಷ್ಠ 1 ವರ್ಷ ಕನಿಷ್ಠ, ಗರಿಷ್ಠ ಅವಧಿ 5 ವರ್ಷ ಆದರೆ ನೀವು ಖಾತೆ ತೆರೆಯುವಾಗಲೇ ಇದನ್ನು ನಿರ್ಧರಿಸಬೇಕು.
* ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದೆ. ಒಂದು ವೇಳೆ ನೀವು ಯೋಜನೆಯ ಮೆಚುರಿಟಿ ಅವಧಿಗೂ ಮುನ್ನ ಮೃ’ತ ಪಟ್ಟರೆ ಕಾನೂನು ಪ್ರಕಾರ ಸೇರಬೇಕಾದ ಹಣ ನೀವು ಸೂಚಿಸುವ ನಾಮಿನಿಗೆ ಹೋಗುತ್ತದೆ
* ಒಂದು ಅಂಚೆ ಕಛೇರಿಯಿಂದ ಮತ್ತೊಂದು ಅಂಚೆ ಕಛೇರಿಗೆ ಇದನ್ನು ವರ್ಗಾಯಿಸಬಹುದು

* ಒಬ್ಬರುಶಎಷ್ಟು ಬೇಕಾದರೂ ಟೈಮ್ ಫಿಕ್ಸೆಡ್ ಡೆಪೋಸಿಟ್ ಸ್ಕೀಮ್ ಖಾತೆ ತೆರೆಯಬಹುದು.
* ಜಂಟಿಯಾಗಿ ಖಾತೆ ತೆರೆಯಲು ಕೂಡ ಅವಕಾಶವಿದೆ, ಖಾತೆ ತೆರೆದ ನಂತರವೂ ಕೂಡ ಜಾಯಿಂಟ್ ಅಕೌಂಟ್ ಮಾಡಲು ಅವಕಾಶವಿದೆ
* ನಿಮಗೆ ಬರುವ ಲಾಭದ ಲೆಕ್ಕಾಚಾರ ಹಾಕುವುದಾದರೆ ಉದಾಹರಣೆಗೆ ನೀವು ಈಗ 1 ಲಕ್ಷ ಹಣವನ್ನು ಅಂಚೆ ಕಚೇರಿಯಲ್ಲಿ ಟೈಮ್ ಫಿಕ್ಸ್ಡ್ ಡೆಪಾಸಿಟ್ ಸ್ಕೀಮ್ ಅಕೌಂಟ್ ತೆರೆದು ಹೂಡಿಕೆ ಮಾಡಿದ್ದೀರಿ ಎಂದುಕೊಳ್ಳೋಣ

ಒಂದು ವರ್ಷದ ಅವಧಿಗಾದರೆ 6.80% ಅನ್ವಯ 1,06,975,
ಎರಡು ವರ್ಷದ ಅವಧಿಗೆ ಆರಿಸುವುದಾದರೆ 6.90% ಅನ್ವಯ 1,14,162, ಮೂರು ವರ್ಷದ ಅವಧಿಗೆ ಆರಿಸುವುದಾದರೆ 7.0% ಅನ್ವಯ 1,21,558, ಐದು ವರ್ಷದ ಅವಧಿಗೆ ಡೆಪಾಸಿಟ್ ಇಡುವುದಾದರೆ 7.50% ಅನ್ವಯ 1,38,570 ರಿಟರ್ನ್ ಸಿಗುತ್ತದೆ.

* ಬೇಕಾಗುವ ದಾಖಲೆಗಳು
1. ಪ್ಯಾನ್ ಕಾರ್ಡ್
2. ಆಧಾರ್ ಕಾರ್ಡ್
3. ಮೊಬೈಲ್ ಸಂಖ್ಯೆ
* ಹೂಡಿಕೆ ಮಾಡುವ ಹಣವು ನಗದು ರೂಪದಲ್ಲಿ ಅಥವಾ ಚೆಕ್ ರೂಪದಲ್ಲಿ.
* ಯೋಜನೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಹತ್ತಿರದ ಅಂಚೆ ಕಛೇರಿಯಲ್ಲಿ ವಿಚಾರಿಸಿ.

1,000 ಕಟ್ಟಿದ್ರೆ ಒಂದು ಕೋಟಿ ಕೊಡುವ ಇನ್ಶೂರೆನ್ಸ್.!

 

ನಾವು ಲೈಫ್ ಇನ್ಶುರೆನ್ಸ್ ಗಳ (Life Insurance) ಬಗ್ಗೆ ಕೇಳಿರುತ್ತೇವೆ. ಲೈಫ್ ಇನ್ಶೂರೆನ್ಸ್ ನಲ್ಲಿ ನೀವು ಪ್ರೀಮಿಯಂಗಳನ್ನು ಪಾವತಿಸುವುದು ಹೂಡಿಕೆ ಆಗಿರುತ್ತದೆ ಮತ್ತು ಅದರ ಮೆಚುರಿಟಿ ಅವಧಿ ಮುಗಿದ ಮೇಲೆ ನಿಮಗೆ ನೀವು ಒಪ್ಪಿಕೊಂಡಿದ್ದ ಕಂಡಿಶನ್ ಗಳ ಆಧಾರದ ಮೇಲೆ ಅನ್ವಯವಾಗುವ ಬಡ್ಡಿ ದರದಲ್ಲಿ ಲಾಭದ ಸಮೇತ ಹೂಡಿಕೆ ಮೊತ್ತ ವಾಪಸ್ ಸಿಗುತ್ತದೆ.

ಆದರೆ ಟರ್ಮ್ ಇನ್ಶುರೆನ್ಸ್ (Term Insurance) ಎನ್ನುವುದು ಹೂಡಿಕೆ ಅಲ್ಲ ಇದು ಜೀವಕ್ಕೆ ಮಾಡಿಕೊಳ್ಳುವ ವಿಮೆ. ಹೇಗೆ ನಾವು ವಾಹನಗಳಿಗೆ ವಿಮೆ ಕಟ್ಟುತ್ತಿರುವ ಹಾಗೆ ಟರ್ಮ್ ಇನ್ಸೂರೆನ್ಸ್ ಗಳಲ್ಲಿ ಪ್ರೀಮಿಯಂ ಗಳನ್ನು ಪಾವತಿಸಬೇಕು ಒಂದು ವೇಳೆ ನಿಮಗೆ ಅ’ಪ’ಘಾ’ತ, ಆ’ನಾ’ರೋ’ಗ್ಯ ಅಥವಾ ಇನ್ಯಾವುದೋ ಕಾರಣದಿಂದ ಅ’ಪ’ಮೃ’ತ್ಯು ಸಂಭವಿಸಿದಾಗ ನಿಮ್ಮ ಅನುಪಸ್ಥಿತಿಯಲ್ಲಿ ಕುಟುಂಬಕ್ಕಾಗುವ ನ’ಷ್ಟವನ್ನು ಇದು ತಡೆಯುತ್ತದೆ.

ಹಾಗಾಗಿ ಕುಟುಂಬವನ್ನು ಪ್ರೀತಿಸುವ ಪ್ರತಿಯೊಬ್ಬರು ಕುಟುಂಬದ ಭದ್ರತೆಗಾಗಿ ಈ ಇನ್ಶುರೆನ್ಸ್ ಮಾಡಿಸಲೇಬೇಕು. ಲೈಫ್ ಇನ್ಶೂರೆನ್ಸ್ ಗಳ ರೀತಿಯೇ ಇದು IRDAI ನಿಯಂತ್ರಣದಲ್ಲಿರುತ್ತದೆ. ಭಾರತದಲ್ಲಿ TATA AIA life, Max Life Insurance, HDFC, ICICI life ಹೀಗೆ ಯಾವುದೇ ಕಂಪನಿಯ ಟರ್ಮ್ ಇನ್ಶುರೆನ್ಸ್ ಖರೀದಿಸಬಹುದು ಭಾರತದಲ್ಲಿ ನೂರಾರು ಟರ್ಮ್ ಇನ್ಸೂರೆನ್ಸ್ ಕಂಪನಿಗಳಿವೆ, ಆದರೆ ಎಲ್ಲದಕ್ಕೂ ಒಂದು ವೇದಿಕೆಯಾಗಿ ಪಾಲಿಸಿ ಬಜಾರ್ ಕಂಪನಿ ವೆದಿಕೆಯಾಗಿದೆ.

ಇದು ಪಾಲಿಸಿಗಳನ್ನು ಮಾರುವುದಿಲ್ಲ ಆದರೆ Policy bazar.com ಗೆ ಭೇಟಿ ಕೊಟ್ಟರೆ ಯಾವ ಯಾವ ಕಂಪನಿಗಳಿವೆ, ಯಾವುದರಲ್ಲಿ ಪ್ರೀಮಿಯಂ ಹೆಚ್ಚು ಪ್ರೀಮಿಯಂ ಕಡಿಮೆ, ಯಾವುದು ಬೆಸ್ಟ್ ಎಂದೆಲ್ಲಾ ಕಂಪೇರ್ ಮಾಡಿ ನೋಡಿ ನಿಮಗೆ ಅನುಕೂಲಕರವಾಗುವುದನ್ನು ಆರಿಸಿಕೊಳ್ಳಬಹುದು.

ಆರಿಸಿಕೊಳ್ಳುವಾಗ ತಪ್ಪದೆ ಆ ಕಂಪನಿಗಳ ಕ್ಲೈಮ್ ರೇಟ್ ಏನಿದೆ ಎನ್ನುವುದನ್ನು ಗಮನಿಸಿ. ಇನ್ನು 30-40 ವರ್ಷ ಕಳೆದ ಮೇಲೆ ಆ ಕಂಪನಿ ಗಟ್ಟಿಯಾಗಿ ಇರುತ್ತದೆಯೇ ಪರೀಕ್ಷಿಸಿ ಆ ಕಂಪನಿಯನ್ನು ಆಯ್ದುಕೊಳ್ಳಿ. ಟರ್ಮ್ ಇನ್ಸೂರೆನ್ಸ್ ಹೇಗೆ ಮಾಡಿಸಬೇಕು ಎಂದರೆ ಅತಿ ಕಡಿಮೆ ವಯಸ್ಸಿನಲ್ಲಿ ಮಾಡಿಸುವುದು ಬಹಳ ಬೆಸ್ಟ್. ಯಾಕೆಂದರೆ ಚಿಕ್ಕ ವಯಸ್ಸಿನಲ್ಲಿ ಖರೀದಿಸಿದಷ್ಟು ಪ್ರೀಮಿಯಂ ಮೊತ್ತ ಕಡಿಮೆ ಆಗುತ್ತದೆ.

ಉದಾಹರಣೆಗೆ ನೀವು 1 ಕೋಟಿ ಹಣಕ್ಕೆ ಟರ್ಮ್ ಇನ್ಸೂರೆನ್ಸ್ ಖರೀದಿಸಿದರೆ 60 ವರ್ಷ ಆಗುವವರೆಗೂ ಪ್ರೀಮಿಯಂ ಪಾವತಿಸಬೇಕು, ನೀವೇನಾದರೂ 20ನೇ ವಯಸ್ಸಿಗೆ ಆರಂಭಿಸಿದರೆ 500 ರೂಪಾಯಿಗಿಂತ ಕಡಿಮೆ ಪ್ರೀಮಿಯಂ ಇರುತ್ತದೆ ಮತ್ತು ಪ್ರೀಮಿಯಂ ಬ್ಲಾಕ್ ಮಾಡುವ ಆಪ್ಷನ್ ಇರುವುದರಿಂದ ನಂತರದ ದಿನಗಳಲ್ಲಿ ನಿಮ್ಮ ಆದಾಯ ಹೆಚ್ಚಾದರೂ ನಿಮ್ಮ ಪ್ರೀಮಿಯಂ ಮೊತ್ತ 500 ಮಾತ್ರ ಇರುತ್ತದೆ ಮತ್ತು ಈ ರೀತಿ ಇನ್ಸೂರೆನ್ಸ್ ಮೊತ್ತ ಆರಿಸುವಾಗ ನಿಮ್ಮ ವಾರ್ಷಿಕ ಆದಾಯಕ್ಕಿಂತ 10 ಪಟ್ಟು ಹೆಚ್ಚಿನ ಮೊತ್ತಕ್ಕೆ ಇನ್ಸೂರೆನ್ಸ್ ಮಾಡಿಸಿ.

ಯಾಕೆಂದರೆ ಯಾರ ಜೀವಕ್ಕೂ ಬೆಲೆಕಟ್ಟಲು ಆಗುವುದಿಲ್ಲ ಒಬ್ಬ ಕುಟುಂಬದಲ್ಲಿ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡಾಗ ಆ ತಂದೆ ತಾಯಿಗೆ ಅಥವಾ ಆತನ ಹೆಂಡತಿ ಮಕ್ಕಳಿಗೆ ಆಗುವ ನೋ’ವನ್ನು ವಿವರಿಸಲು ಆಗುವುದಿಲ್ಲ. ಅಂತಹ ಸಮಯದಲ್ಲೂ ಇನ್ಶೂರೆನ್ಸ್ ಆಶಾಕಿರಣವಾಗಿ ಅವರ ಬದುಕನನ್ನು ಮುಂದಕ್ಕೆ ನಡೆಸಿಕೊಂಡು ಹೋಗುವುದಕ್ಕೆ ಅನುಕೂಲವಾಗುತ್ತದೆ.

ಹಾಗಾಗಿ ಟರ್ಮ್ ಇನ್ಸೂರೆನ್ಸ್ ಮಾಡಿಸುವುದು ಅಷ್ಟೊಂದು ಇಂಪಾರ್ಟೆಂಟ್. ಕೆಲವು ಟರ್ಮ್ ಇನ್ಸೂರೆನ್ಸ್ ನಲ್ಲಿ ಕೆಲವೊಂದು ಕಂಪನಿಗಳು ಆಡೋನ್ ಸೇವೆಗಳು (add on) ಕೂಡ ಕೊಡುತ್ತವೆ, ಅವುಗಳ ಬಗ್ಗೆಯೂ ಕೂಡ ಗಮನಹರಿಸಿದರೆ ಇನ್ನು ಹೆಚ್ಚು ಅನುಕೂಲವಾಗುತ್ತದೆ. ಇವುಗಳ ಬಗ್ಗೆ ಇನ್ನಷ್ಟು ವಿವರ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

https://youtu.be/OvQmqY8dbLc?si=1u35dnGKNsCaV3py

ಈ ರೀತಿಯ ಫುಡ್ ಗಳನ್ನು ತಿಂದರೆ ಕಿಡ್ನಿ ತುಂಬಾ ಚೆನ್ನಾಗಿರುತ್ತೆ, ಕಿಡ್ನಿ ಹೆಲ್ತ್ ಇಂಪ್ರೂ ಮಾಡುವ ಸೂಪರ್ ಟಿಪ್ ಗಳು ಇವು.!

 

ಕಿಡ್ನಿ ಫೇಲ್ಯೂರ್ ಅಥವಾ ಕಿಡ್ನಿಗೆ ಇನ್ಫೆಕ್ಷನ್ ಈ ರೀತಿ ಕಿಡ್ನಿ ಗೆ ಸಂಬಂಧಿಸಿದ ಸಮಸ್ಯೆಗಳು ಜನಸಾಮಾನ್ಯರಿಗೆ ಬಂದರೆ ಅದನ್ನು ಸಹಿಸಿಕೊಳ್ಳುವುದು ಬಹಳ ಕಷ್ಟ. ಯಾಕೆಂದರೆ ಕಿಡ್ನಿ ಸಮಸ್ಯೆ ಇದ್ದರೆ ಯಾವುದೇ ಸಾಮಾನ್ಯ ವೈದ್ಯರು ಆ ರೋಗಿಗಳನ್ನು ಪರೀಕ್ಷಿಸುವುದಿಲ್ಲ, ತಜ್ಞ ವೈದ್ಯರ ಬಳಿಗೆ ಹೋಗಬೇಕು ಇನ್ನು ಮುಂತಾದ ಸಮಸ್ಯೆಗಳಿರುತ್ತವೆ.

ಒಂದು ಬಾರಿ ಕಿಡ್ನಿಗೆ ಇನ್ಫೆಕ್ಷನ್ ಆದರೆ ಅದು ಜೀವನಪೂರ್ತಿ ಗುಣವಾಗುವುದಿಲ್ಲ ಎನ್ನುವ ತಪ್ಪು ತಿಳುವಳಿಕೆ ಕೂಡ ಇದೆ. ಒಂದು ವೇಳೆ ಡಯಾಲಿಸಿಸ್ ಮಾಡಲು ಹೇಳಿದರೆ ಬಡ ಜನರಿಗೆ ಬಹಳ ದೊಡ್ಡ ಹೊರೆಯಾಗಿ ಬಿಡುತ್ತದೆ, ಈ ರೀತಿ ಕಿಡ್ನಿ ಸಮಸ್ಯೆ ಇದ್ದವರು ಯಾರು ಡಯಾಲಿಸಿಸ್ ಗೆ ಒಳಗಾಗಬೇಕು, ಕ್ರಿಯೇಟಿನೈನ್ ಲೆವೆಲ್ ಕಡಿಮೆ ಮಾಡಿಕೊಳ್ಳುವುದು ಹೇಗೆ ಎನ್ನುವ ಕುರಿತು ಈ ಅಂಕಣದಲ್ಲಿ ಕೆಲ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

ಕಿಡ್ನಿ ಸಮಸ್ಯೆ ಬಂದ ತಕ್ಷಣ ಎಲ್ಲರೂ ಡಯಾಲಿಸಿಸ್ ಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ಯಾಕೆಂದರೆ ಡಯಾಲಿಸಿಸ್ ಎನ್ನುವುದು ಬಹಳ ದೊಡ್ಡ ಖರ್ಚು ಮಾತ್ರ ಅಲ್ಲದೆ ಮನೆಯಲ್ಲಿ ಇರುವ ಇತರ ಸದಸ್ಯರ ಮನಸ್ಸನ್ನು ಕೂಡ ಕೆಡಿಸುವ ವಿಷಯವಾಗಿದೆ. ಪದೇ ಪದೇ ಆಸ್ಪತ್ರೆಗೆ ತಿರುಗುವುದು, ಆ ಖರ್ಚು ವೆಚ್ಚಗಳು ಬಹಳ ನೋ’ವನ್ನುಂಟು ಮಾಡುತ್ತವೆ.

ಹಾಗಾಗಿ ಕಿಡ್ನಿ ಸಮಸ್ಯೆ ಇದ್ದರೆ ತಕ್ಷಣವೇ ಡಯಾಲಿಸಿಸ್ ಎಂದು ಡಿಸೈಡ್ ಆಗಬೇಡಿ ಯಾರಿಗೆ ಮೂತ್ರ ವಿಸರ್ಜನೆ ಮಾಡಲು ಸಮಸ್ಯೆ ಇದೆ ಉಸಿರಾಟದ ತೊಂದರೆ ಆಗುತ್ತಿದೆ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಲೆವೆಲ್ 7% ಗಿಂತ ಕಡಿಮೆ ಇದೆ ಅಂತಹವರು ಮಾತ್ರ ಡಯಾಲಿಸಿಸ್ ಮಾಡಿಸುವ ಅವಶ್ಯಕತೆ ಇರುತ್ತದೆ.

ಮೊದಲಿಗೆ ಈ ರೀತಿ ಸಮಸ್ಯೆಗಳು ಯಾಕೆ ಬರುತ್ತವೆಂದರೆ ನಾವು ಹೆಚ್ಚಾಗಿ ಮಾತ್ರೆ ಇಂಜಕ್ಷನ್ ಮುಂತಾದ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಅಥವಾ ಆಕ್ಸಿಡೆಂಟ್ ಆಗಿ ಕಿಡ್ನಿ ಸಮಸ್ಯೆ ಬರಬಹುದು, ಕಿಡ್ನಿ ಭಾಗದಲ್ಲಿಗೆ ಉಂಟಾಗುವ ಅಶುದ್ಧತೆಯಿಂದ ಇನ್ಫೆಕ್ಷನ್ ಅಥವಾ ಹೆರಿಡಿಟಿಯಿಂದ ಕೂಡ ವಂಶಪಾರಂಪರ್ಯವಾಗಿ ಈ ಸಮಸ್ಯೆ ಬರಬಹುದು. BP ಶುಗರ್, ಮುಂತಾದ ಆರೋಗ್ಯ ಸಮಸ್ಯೆ ಇರುವವರಿಗೆ ಬರಬಹುದು, ಅತಿಯಾದ ಆಲ್ಕೋಹಾಲ್ ಸೇವನೆ ಕೂಡ ಒಂದು ಕಾರಣ ಆಗಿರಬಹುದು.

ಈ ರೀತಿ ಕಿಡ್ನಿ ಫೇಲ್ಯೂರ್ ಆಗೋದಕ್ಕೆ ಕಿಡ್ನಿಗೆ ಇನ್ಫೆಕ್ಷನ್ ಆಗೋದಕ್ಕೆ ಹಲವಾರು ಕಾರಣಗಳಿವೆ. ಯಾವುದೇ ಕಾರಣಗಳು ಇದ್ದರೂ ಒಮ್ಮೆ ನೀವು ಇದನ್ನು ಗುಣಪಡಿಸಿಕೊಳ್ಳಲು ಮನಸ್ಸು ಮಾಡಿದರೆ ಕೇವಲ ಒಂದೇ ತಿಂಗಳಲ್ಲಿ ನಿಮ್ಮ ಕ್ರಿಯೇಟಿನೈನ್ ಕಡಿಮೆ ಮಾಡಿಕೊಳ್ಳಬಹುದು, ಅದಕ್ಕಾಗಿ ಈಗ ನಾವು ಹೇಳುವ ಈ ಆಹಾರ ಪದ್ಧತಿ ರೂಢಿ ಮಾಡಿಕೊಳ್ಳಿ.

ಮೊದಲಿಗೆ ದಿನಕ್ಕೆ 5 ಗ್ರಾಂ ಮಾತ್ರ ಉಪ್ಪಿನ ಸೇವನೆ ಮಾಡಬೇಕು, ಒಂದು ಲೀಟರ್ ಗಿಂತ ಹೆಚ್ಚು ನೀರು ಕುಡಿಯಬಾರದು. ಆಹಾರದಲ್ಲಿ ಅಕ್ಕಿ, ಗೋಧಿ, ಜೋಳ, ರೊಟ್ಟಿ, ಸಿರಿಧಾನ್ಯ ಇವುಗಳ ಪ್ರಮಾಣ ಊಟದಲ್ಲಿ 25% ಮಾತ್ರ ಇರಬೇಕು ಉಳಿದ 75 ಪರ್ಸೆಂಟ್ ಸೊಪ್ಪು ಮತ್ತು ಧಾನ್ಯಗಳು ಇರಬೇಕು.

ಅದರಲ್ಲೂ ಸೊಪ್ಪಿನಿಂದ ಮಾಡಿದ ಪದಾರ್ಥಗಳನ್ನು ಸೇವಿಸುವುದರಿಂದ ಅದ್ಭುತವಾದ ರಿಸಲ್ಟ್ ಕಾಣಬಹುದು. ಆದರೆ ಧಾನ್ಯಗಳಲ್ಲಿ ತೊಗರಿಬೇಳೆ ಹಾಗೂ ಹುರುಳಿಗಳನ್ನು ಸೇವಿಸಬಾರದು ಯಾಕೆಂದರೆ ಅವು ಸುಲಭವಾಗಿ ಜೀರ್ಣವಾಗುವುದಿಲ್ಲ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ದೂರ ಇರಬೇಕು.

ಒಗ್ಗರಣೆಗೆ ಬಿಟ್ಟು ಎಣ್ಣೆ ಯಾವುದಕ್ಕೂ ಬಳಸಬಾರದು, ಆಲ್ಕೋಹಾಲ್ ನಿಂದ ದೂರ ಇರಬೇಕು, ಯಾವುದೇ ರೀತಿಯ ಜ್ಯೂಸ್ ಗಳನ್ನು ಕೂಡ ಕುಡಿಯಬಾರದು. ಈ ರೀತಿ ಒಂದು ತಿಂಗಳು ಕಟ್ಟುನಿಟ್ಟಾಗಿ ಪಥ್ಯದಲ್ಲಿ ಇದ್ದರೆ ಬಹಳ ಪರಿಣಾಮಕಾರಿಯಾಗಿ ರಿಸಲ್ಟ್ ಕಾಣುತ್ತೀರಿ. ಈ ವಿಚಾರದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಬಿಳಿ ಬಟ್ಟೆಗಳನ್ನು ಸ್ವಚ್ಛಗೊಳಿಸುವ ಸೂಪರ್ ಸೀಕ್ರೆಟ್ ಟಿಪ್ಸ್, ಎಷ್ಟೇ ಕೊಳೆ ಇದ್ದರೂ ನಿಮಿಷದಲ್ಲಿ ಫಿನಿಶ್.!

ಬಿಳಿ ಬಟ್ಟೆ ಹಾಕಿಕೊಳ್ಳಲು ಎಲ್ಲರಿಗೂ ಇಷ್ಟ. ಬಿಳಿ ಬಟ್ಟೆಯಲ್ಲಿ ಒಂದು ರೀತಿಯ ಸಕಾರಾತ್ಮಕ ಭಾವನೆ ಇದೆ. ಬಿಳಿ ಪರಿಶುದ್ಧತೆಯ ಸಂಕೇತ ಆಗಿರುವುದರಿಂದ ಬಿಳಿ ಬಟ್ಟೆ ಧರಿಸುವವರಲ್ಲಿ ಸಾತ್ವಿಕ ಗುಣಗಳು ಇರುತ್ತದೆ ಎನ್ನುವುದು ಒಂದು ನಂಬಿಕೆ. ನಾವು ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿದರು ಕೂಡ ಹಾಗೊಮ್ಮೆ, ಈಗೊಮ್ಮೆ ಬಿಳಿ ಬಣ್ಣದ ಬಟ್ಟೆ ಹಾಕಿಕೊಳ್ಳಬೇಕು ಎನ್ನುವ ಆಸೆ ಆಗುತ್ತದೆ.

ಪ್ರತಿಯೊಬ್ಬರಿಗೂ ಕೂಡ ಬಿಳಿ ಬಟ್ಟೆ ಹಾಕಿಕೊಂಡಾಗ ಚೆನ್ನಾಗಿ ಕಾಣುತ್ತಾರೆ ಕೆಲವೊಂದು ಕೆಲಸದ ಸ್ಥಳದಲ್ಲಿ ಬಿಳಿ ಬಟ್ಟೆ ಕಡ್ಡಾಯ ಸಮವಸ್ತ್ರವಾದರೆ, ಶಾಲಾ ಮಕ್ಕಳಿಗಂತೂ ವಾರದಲ್ಲಿ ಒಂದುದಿನ ಬಿಳಿ ಬಟ್ಟೆ ಬಿದ್ದೇ ಇರುತ್ತದೆ. ಈ ರೀತಿ ಬಿಡಿ ಬಟ್ಟೆ ಹಾಕುವವರ ಮನೆಯಲ್ಲಿ ಇರುವ ಒಂದು ಸಮಸ್ಯೆಯೇನೆಂದರೆ ಬಿಳಿ ಬಟ್ಟೆಗಳಿಗೆ ಆದ ಕಲೆಗಳು ಬೇಗ ಹೋಗಲ್ಲ ಮತ್ತು ದಿನ ಕಳೆದಂತೆ ಅವು ತಮ್ಮ ಹೊಳಪನ್ನು ಕಳೆದುಕೊಂಡು ಹಳದಿಯಾಗುತ್ತವೆ ಎನ್ನುವುದು ಈ ರೀತಿ ಸಮಸ್ಯೆಗೆ ಸೂಪರ್ ಸೀಕ್ರೆಟ್ ಗಳನ್ನು ತಿಳಿಸಿ ಕೊಡುತ್ತಿದ್ದೇವೆ.

* ಬೇಕಿಂಗ್ ಸೋಡಾ ಬಳಸಿ:- ಹಳದಿ ಬಣ್ಣಕ್ಕೆ  ತಿರುಗಿದ ಬಿಳಿ ಬಟ್ಟೆಗಳನ್ನು ಸುಲಭವಾಗಿ ಕ್ಲೀನ್ ಮಾಡಿ ಕಲೆ ಹೋಗಿಸಲು ಒಂದು ವಿಧಾನ ಇದೆ. ನೀವು ಅಡುಗೆ ಮಾಡಲು ಬಳಸುವ ಬೇಕಿಂಗ್ ಸೋಡಾ ವನ್ನು ಬಳಸಿ ಬಿಳಿ ಬಟ್ಟೆ ಫಳಫಳ ಹೊಳೆಯುವಂತೆ ಮಾಡಬಹುದು. ಅರ್ಧ ಬಕೆಟ್ ನೀರಿಗೆ ನಿಮ್ಮ ಬಟ್ಟೆ ಎಷ್ಟಿದೆ ಅದನ್ನು ನೋಡಿಕೊಂಡು ಬೇಕಿಂಗ್ ಸೋಡಾ ಹಾಕಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ನಿಮ್ಮ ಬಿಳಿ ಬಣ್ಣದ ಬಟ್ಟೆಗಳನ್ನು ಒಂದು ಗಂಟೆಗಳ ಕಾಲ ನೆನೆ ಹಾಕಿ. ಆನಂತರ ನೀರಿನಲ್ಲಿ ಆ ಬಟ್ಟೆಗಳನ್ನು ಸ್ವಚ್ಛ ಮಾಡಿ.

* ​ನಿಂಬೆಹಣ್ಣಿನ ರಸ ಬಳಸಬಹುದು:- ಒಂದು ವೇಳೆ ನಿಮ್ಮ ಬಿಳಿ ಬಣ್ಣದ ಬಟ್ಟೆಗಳ ಮೇಲೆ ಹಳದಿ ಬಣ್ಣದ ಕಲೆಗಳು, ಹಳೆ ಕೊಳೆಗಳು ಉಳಿದಿದ್ದರೆ ನಿಂಬೆಹಣ್ಣು ಅದಕ್ಕೆ ಪರಿಣಾಮಕಾರಿಯಾದ ರೀತಿಯಲ್ಲಿ ಕೆಲಸ ಮಾಡುತ್ತದೆ. ಅತ್ಯಂತ ಗಾಢವಾದ ಎಷ್ಟೇ ಹಳೆಯ ಕಲೆಗಳನ್ನು ಕೂಡ ನಿಂಬೆಹುಳಿಯಿಂದ  ಸ್ವಚ್ಛ ಮಾಡಬಹುದು ನೀವು ಇದಕ್ಕಾಗಿ ಬಹಳ ಕ’ಷ್ಟ ಪಡಬೇಕಾಗಿಲ್ಲ.

ಕೇವಲ ಒಂದು ಬಕೆಟ್ ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಅದರಲ್ಲಿ ನಿಮ್ಮ ಬಟ್ಟೆಗೆ ಎಷ್ಟಿದೆ ಅದರ ಪ್ರಮಾಣಕ್ಕೆ ಎರಡು ಚಮಚ ಅಥವಾ ಅರ್ಥ ಹೋಳು ನಿಂಬೆ ಹುಳಿ ಸೇರಿಸಿ. ಐದು ನಿಮಿಷ ಇದನ್ನು ಚೆನ್ನಾಗಿ ಮಿಕ್ಸ್ ಆಗಲು ಬಿಟ್ಟು, ನಂತರ ಬಿಳಿ ಬಟ್ಟೆಗಳನ್ನು ನೆನೆಹಾಕಬೇಕು. ಒಂದು ಗಂಟೆ ಕಳೆದ ನಂತರದಲ್ಲಿ ಸಾಧಾರಣವಾಗಿ ಬಟ್ಟೆ ಸ್ವಚ್ಛಮಾಡುವ ಹಾಗೆ ಅವುಗಳನ್ನು ಸ್ವಚ್ಛ ಮಾಡಿದರೆ ಕಲೆಗಳು ಮಾಯವಾಗುತ್ತವೆ.

* ​ಡಿಷ್ ವಾಶಿಂಗ್ ಸೋಪ್ ಬಳಸಿ:– ಪಾತ್ರೆ ತೊಳೆಯುವ ಸೋಪು, ಜೆಲ್ ನಲ್ಲೂ ಕೂಡ ಬಿಳಿ ಬಟ್ಟೆ ಸ್ವಚ್ಛ ಮಾಡುವ ಗುಣ ಇದೆ. ಒಂದು ಬಕೆಟ್ ನೀರಿಗೆ ನಿಮ್ಮ ಬಟ್ಟೆ ಪ್ರಮಾಣ ನೋಡಿಕೊಂಡು ಅದಕ್ಕೆ ಅನುಸಾರವಾಗಿ ಎರಡು ಚಮಚ ಸೋಪ್ ಪೌಡರ್ ಅಥವಾ ಎರಡು ಚಮಚ ಲಿಕ್ವಿಡ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಬಿಳಿ ಬಣ್ಣದ ಬಟ್ಟೆಗಳನ್ನು 30 ನಿಮಿಷಗಳ ಕಾಲ ನೆನೆಹಾಕಿ. ಆನಂತರ ಬ್ರಷ್ ನಲ್ಲಿ ಉಜ್ಜಿ, ನೀರಿನಲ್ಲಿ ಸ್ವಚ್ಛ ಮಾಡಿ.

* ​ಬ್ಲೀಚ್ ಬಳಸಿ:– ಬೀಚ್ ಕೂಡ ಬಟ್ಟೆಗಳಿಗೆ ಹಳೆ ಕಲೆ ತೆಗೆದು ಬಿಳಿ ಬಣ್ಣ ನೀಡುವ ಶಕ್ತಿ ಹೊಂದಿದೆ. ಅರ್ಧ ಬಕೆಟ್ ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಅದಕ್ಕೆ ಕಾಲು ಕಪ್ ಬ್ಲೀಚ್ ಹಾಕಿ ಮಿಶ್ರಣ ಮಾಡಿ. ನಂತರ ಬಿಳಿ ಬಟ್ಟೆಗಳನ್ನು ಹತ್ತು ನಿಮಿಷಗಳ ಕಾಲ ನೆನೆಹಾಕಿ, ಆ ಬಟ್ಟೆಗಳನ್ನು ಮಾಮೂಲಿಯಂತೆ ಸ್ವಚ್ಛ ಮಾಡಿ, ಕಲೆಗಳು  ಹೊರಟುಹೋಗಿ ಬಿಳಿ ಬಣ್ಣ ಮರಳಿ ಬರುತ್ತದೆ. ಒಂದು ವೇಳೆ ಹೋಗದೆ ಇದ್ದರೆ ಮತ್ತೊಮ್ಮೆ ಇದನ್ನು ರಿಪೀಟ್ ಮಾಡಿ, ಆದರೆ ಬ್ಲೀಚ್ ಬಳಸುವಾಗ ಕೈಗಳಿಗೆ ರಬ್ಬರ್ ಗ್ಲೌಸ್ ಹಾಕಿಕೊಂಡೇ ಬಳಸಿ.

​ಬಿಸಿಲಿನಲ್ಲಿ ಒಣಹಾಕಿ:–ಸೂರ್ಯನ ಬಿಸಿಲಿನಲ್ಲಿ ಅಪಾರವಾದ ಶಕ್ತಿಯಿದೆ ಅದು ಬೆಳ್ಳಿ ಬಟ್ಟೆಗಳಿಗೆ ತನ್ನ ಹಳೆಯ ಹೊಳಪನ್ನು ವಾಪಸ್ ಕೊಡುತ್ತದೆ. ನೀವು ಈ ಮೇಲಿನ ಯಾವುದೇ ವಿಧಾನಗಳಲ್ಲಿ ಬಟ್ಟೆ ಒಗೆದರೂ ನಂತರ ಅವುಗಳು ತೇವಾಂಶ ಇರುವಾಗಲೇ ಬಿಸಿಲಿನಲ್ಲಿ ಒಣಗಿ ಹಾಕಿ. ಸೂರ್ಯನ ಹಾನಿಕಾರಕ ಕಿರಣಗಳು ನಿಮ್ಮ ಬಿಳಿ ಬಟ್ಟೆಗಳನ್ನು ಒಣಗಿಸುತ್ತದೆ ಮತ್ತು ಮತ್ತೆ ತನ್ನ ಶೈನಿಂಗ್ ಕಂಡುಕೊಳ್ಳುವಂತೆ ಮಾಡುತ್ತದೆ.

ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕೆನಿಸುತ್ತಿದೆಯೇ.? ಈ ಮುದ್ರೆಯಲ್ಲಿದೆ ಶಾಶ್ವತ ಪರಿಹಾರ.!

 

ಮನುಷ್ಯನ ದೇಹವು ಪಂಚಭೂತಗಳಿಂದ ಆಗಿದೆ. ಹಾಗಾಗಿ ಮಾನವನ ದೇಹಕ್ಕೂ ವಾಯು ಅಗ್ನಿ ಜಲ ಮತ್ತು ಆಕಾಶಭೂಮಿ ಇವುಗಳಿಗೆ ಅವಿನಾಭಾಭ ಸಂಬಂಧ ಇದೆ. ನಮ್ಮ ದೇಹವು ಈ ಪಂಚಭೂತಗಳ ಶಕ್ತಿಯನ್ನು ಹೊಂದಿದೆ ಮತ್ತು ಇವುಗಳನ್ನು ಕಂಟ್ರೋಲ್ ಮಾಡುವ ಸಾಮರ್ಥ್ಯವನ್ನು ಕೂಡ ನಮ್ಮ ದೇಹ ಹೊಂದಿದೆ ಇದು ಆಗಿನ ಕಾಲದಲ್ಲಿ ಯೋಗ, ಆಸನ ಪ್ರಾಣಾಯಾಮ ಮತ್ತು ಮುದ್ರೆಗಳ ಮೂಲಕ ಸಾಬೀತುಪಡಿಸಲಾಗುತ್ತಿದ್ದಾರೂ ಈಗಿನ ದಿನಗಳಲ್ಲಿ ವಿಜ್ಞಾನವೂ ಕೂಡ ಇದನ್ನು ಸತ್ಯ ಎಂದು ಒಪ್ಪಿಕೊಂಡಿದೆ.

ಆಧುನಿಕ ಮೆಡಿಸಿನ್ ನಿಂದ ಗುಣ ಮಾಡಲಾಗದ ಎಷ್ಟೋ ಕಾಯಿಲೆಗಳನ್ನು ಯೋಗ ಪ್ರಾಣಾಯಾಮ ವಾಸಿ ಮಾಡಿದೆ ಮತ್ತು ಯೋಗದ ಆಸನಗಳಿಂದಲೂ ಗುಣವಾಗದ ಕಾಯಿಲೆಗಳು ಮುದ್ರೆಗಳನ್ನು ಮಾಡುವುದರ ಮೂಲಕ ಗುಣವಾಗಿವೆ. ಅಂಥಹ ಒಂದು ವಿಶೇಷವಾದ ಮುದ್ರೆಯನ್ನು ಹಾಕಿ ಗಂಭೀರ ಸಮಸ್ಯೆ ಒಂದನ್ನು ಗುಣ ಮಾಡಿಕೊಳ್ಳಬಹುದಾದ ವಿಷಯದ ಕುರಿತು ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.

ಕೆಲವರಿಗೆ ಪದೇಪದೇ ಮೂತ್ರಕ್ಕೆ ಹೋಗುವ ಅಭ್ಯಾಸ ಇರುತ್ತದೆ ಆದರೆ ಇದು ಅವರಿಗೆ ಕಿರಿಕಿರಿ ಆಗಿರುತ್ತದೆ, ಇದೊಂದು ಕಾಯಿಲೆ ಎಂದು ಹೇಳಬಹುದು. ಇದು ಹೆರಿಡಿಟಿಯಿಂದ ಬಂದಿರುತ್ತದೆ ಅಥವಾ ಅತಿಯಾದ ಸ್ಟ್ರೆಸ್ ನಿಂದಲೂ ಈ ರೀತಿ ಆಗುತ್ತದೆ. ಭ’ಯ ಆದಾಗಲು ಕೂಡ ಈ ರೀತಿ ಪದೇಪದೇ ಮೂತ್ರ ಮಾಡಬೇಕೆನ್ನುವ ರೀತಿ ಆಗುತ್ತದೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗಂತೂ ಇದು ಹಿಂ’ಸೆಯಾಗಿರುತ್ತದೆ ಹಾಗೂ ಚಳಿಗಾಲ, ಮಳೆಗಾಲ ಇಂತಹ ಸಂದರ್ಭಗಳಲ್ಲಿ ಇದು ಹೆಚ್ಚಾಗುತ್ತದೆ.

ಇದು ನಮಗೆ ನೆಮ್ಮದಿಯಾಗಿ ಹೊರಗೆ ಹೋಗಲು ಬಿಡುವುದಿಲ್ಲ ಪ್ರಯಾಣ ಮಾಡಲು ತೊಂದರೆ ಕೊಡುತ್ತದೆ ನೀವು ಕೂಡ ಇಂಥ ಸಮಸ್ಯೆಯಲ್ಲಿ ಸಿಲುಕಿದರೆ ಅಥವಾ ನಿಮ್ಮ ಮನೆಯಲ್ಲಿ ಯಾರಾದರೂ ಈ ರೀತಿ ಕಷ್ಟ ಪಡುತ್ತಿದ್ದರೆ ಅವರಿಗೆ ಜಲೋದ್ಧಾರ ನಾಶಕ ಮುದ್ರೆಯ ಬಗ್ಗೆ ತಿಳಿಸಿಕೊಡಿ.

ಈ ಜಲೋದ್ಧಾರ ನಾಶಕ ಮುದ್ರೆ ಮಾಡುವುದು ಹೇಗೆ ಎಂದರೆ ಸುಖಾಸನದಲ್ಲಿ ಕುಳಿತುಕೊಂಡು ನಿಮ್ಮ ತೊಡೆಗಳ ಮೇಲೆ ಎರಡು ಕೈಗಳನ್ನು ಇಟ್ಟುಕೊಳ್ಳಿ. ಮುದ್ರೆ ಹಾಕುವುದು ಹೇಗೆಂದರೆ ನಿಮ್ಮ ಹೆಬ್ಬೆರಳು ನಿಮ್ಮ ಕಿರು ಬೆರಳಿನ ಗಿಣ್ಣುಗಳ ಮಧ್ಯೆ ಟಚ್ ಆಗಬೇಕು ಮತ್ತು ತೋರು ಬೆರಳು, ಮಧ್ಯದ ಬೆರಳು ಹಾಗೂ ಉಂಗುರದ ಬೆರಳು ಈ ಮೂರು ಬೆರಳುಗಳು ಕೂಡ ಸ್ಟ್ರೈಟ್ ಆಗಿರಬೇಕು.

ಎರಡು ಕೈಗಳಿಂದಲೂ ಕೂಡ ಈ ಮುದ್ರೆಯನ್ನು ಮಾಡಿ ದಿನದಲ್ಲಿ 35 ರಿಂದ 40 ನಿಮಿಷಗಳ ಕಾಲ ಈ ಮುದ್ರೆಯನ್ನು ಮಾಡಿ. ಬೆಳಗ್ಗೆ 20 ನಿಮಿಷ ಹಾಗೂ ಸಂಜೆ 20 ನಿಮಿಷ ಕೂಡ ಮಾಡಬಹುದು, ನೀವು ಮೆಡಿಟೇಶನ್ ಮಾಡಲು ಕುಳಿತುಕೊಳ್ಳುವಾಗಲು ಕೂಡ ಈ ಮುದ್ರೆಯನ್ನು ಹಾಕಿಕೊಂಡು ಕುಳಿತುಕೊಳ್ಳ ಬಹುದು.

ಈ ರೀತಿ ಮಾಡುವುದರಿಂದ ದೇಹದಲ್ಲಿ ವಾಟರ್ ಕಂಟೆಂಟ್ ಬ್ಯಾಲೆನ್ಸ್ ಆಗುತ್ತದೆ ಮತ್ತು ನಿಮಗೆ ಪದೇಪದೇ ಮೂತ್ರಕ್ಕೆ ಹೋಗಬೇಕು ಎನ್ನುವ ಸಮಸ್ಯೆ ಕಂಟ್ರೋಲ್ ಆಗುತ್ತದೆ. ನಿಯಮಿತವಾಗಿ ಇದನ್ನು ಮಾಡಿಕೊಂಡು ಹೋಗಬೇಕು ಒಂದು ದಿನ ಮಾಡಿ ಮತ್ತೊಮ್ಮೆ ದಿನ ಬಿಟ್ಟು ಬಿಡುವುದರಿಂದ ಇದು ರಿಸಲ್ಟ್ ಕೊಡುವುದಿಲ್ಲ, ಈ ಸಮಸ್ಯೆ ಇಲ್ಲದಿದ್ದವರು ಕೂಡ ದಿನದಲ್ಲಿ ಐದು ನಿಮಿಷ ಈ ಮುದ್ರೆಯನ್ನು ಅಭ್ಯಾಸ ಮಾಡಬೇಕು. ಇದರಿಂದ ಮುಂದೆ ಈ ರೀತಿ ಸಮಸ್ಯೆ ಬರುವುದು ತಪ್ಪುತ್ತದೆ ಮತ್ತು ದೇಹದಲ್ಲಿ ‌ ವಾಟರ್ ಅಂಶ ಬ್ಯಾಲೆನ್ಸ್ ಆಗಿ ಇರುತ್ತದೆ.

2024ರ ವೃಷಭ ರಾಶಿ ವರ್ಷ ಭವಿಷ್ಯ, 95% ಮುಟ್ಟಿದ್ದೆಲ್ಲ ಚಿನ್ನ ಆಗುವ ಕಾಲ, ಹೀಗಿದೆ ನೋಡಿ ಹೊಸ ವರ್ಷ.!

 

ವೃಷಭ ರಾಶಿಯವರಿಗೆ 2024ನೇ ವರ್ಷವೂ ಬಹಳ ಅದೃಷ್ಟ ತರುವ ವರ್ಷವಾಗಿದೆ. ಈ ಹಿಂದೆಂದಿಗಿಂತಲೂ ಅತಿ ಹೆಚ್ಚು ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ ಎಲ್ಲವನ್ನು ಕೂಡ 2024ರಲ್ಲಿ ಪಡೆಯಲಿದ್ದಾರೆ. ವೃಷಭ ರಾಶಿಯವರಿಗೆ ಬಹಳ ವಿಶೇಷವಾದ ಯೋಗವು ಮುಂದಿನ ವರ್ಷ ಬರಲಿದ್ದು, ಇನ್ನು ಅದಕ್ಕೆ ಬೆರಳೆಣಿಕೆಯಷ್ಟು ದಿನಗಳಷ್ಟೇ ಬಾಕಿ ಇದೆ.

ವೃಷಭ ರಾಶಿಯವರು ಈ ಹೊಸ ವರ್ಷದಲ್ಲಿ ನೂರರಲ್ಲಿ 95% ಎಲ್ಲ ವಿಚಾರದಲ್ಲೂ ಸಕ್ಸಸ್ ಪಡೆಯುತ್ತಾರೆ ಅವರ ಬಹುದಿನಗಳ ಬೇಡಿಕೆಗಳು ನೆರವೇರುತ್ತವೆ. ಒಂದು ಅರ್ಥದಲ್ಲಿ ಅವರು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಕಾಲ ಎಂದು ಹೇಳಬಹುದು. ನಿಮ್ಮ ಮನೆಯಲ್ಲಿ ಅಥವಾ ಸ್ನೇಹಿತರಲ್ಲಿ ಯಾರಾದರೂ ವೃಷಭ ರಾಶಿಯವರು ಇದ್ದರೆ ತಪ್ಪದೇ ಅವರೊಂದಿಗೆ ಈ ಮಾಹಿತಿ ಹಂಚಿಕೊಳ್ಳಿ.

2024ರಲ್ಲಿ ವೃಷಭ ರಾಶಿಯವರು ವ್ಯಾಪಾರ ವಹಿವಾಟಿನಲ್ಲಿ ಬಹಳ ಯಶಸ್ಸು ಪಡೆಯುತ್ತಾರೆ. ಅವರು ಕುಳಿತಿದ್ದ ಕಡೆಯಲ್ಲಿ ಹಣ ಹುಡುಕಿಕೊಂಡು ಬರುತ್ತದೆ. ಅವರು ಏನು ಕೆಲಸ ಮಾಡದೆ ಇದ್ದರೂ ಹಣಕ್ಕೆ ಕೊರತೆ ಇಲ್ಲ. ಇನ್ನೇನಾದರೂ ಅವರು ಹೊಸ ಪ್ರಯತ್ನಗಳಿಗೆ ಕೈ ಹಾಕಿದರೆ, ಅವರು ಹೊಸ ವ್ಯಾಪಾರ ಶುರು ಮಾಡಿದರೆ ಅಥವಾ ಹೂಡಿಕೆ ಮಾಡಿದರೆ ಬಹಳ ಲಾಭವನ್ನು ಹೊಂದುತ್ತಾರೆ.

ಈ ವರ್ಷವೂ ಹಣಕಾಸಿನ ವಿಷಯದಲ್ಲಿ ವೃಷಭ ರಾಶಿಯವರಿಗೆ ಉಳಿದ ಎಲ್ಲಾ ರಾಶಿಗಳಲ್ಲೂ ಹೆಚ್ಚಿನ ಯೋಗ ಇದೆ. ಉದ್ಯೋಗಸ್ಥರಾಗಿದ್ದರೂ ಕೂಡ ಬಡ್ತಿ ಹೊಂದುವ ಅವರ ಕೆಲಸ ಕಾರ್ಯಗಳಿಗೆ ಹಿರಿಯ ಅಧಿಕಾರಿಗಳಿಂದ ಶ್ಲಾಘನೆ ಸಿಗುವಂತಹ ವರ್ಷವಾಗಿದೆ. ಬಹಳ ಉತ್ತಮ ಸ್ಥಾನವನ್ನು ಈ ವರ್ಷದಲ್ಲಿ ಅವರು ಎಷ್ಟೋ ವರ್ಷಗಳ ಕಠಿಣ ಪರಿಶ್ರಮಕ್ಕೆ ತಕ್ಕ ಫಲದಂತೆ ಅಲಂಕರಿಸಲಿದ್ದಾರೆ.

ಸರ್ಕಾರಿ ಹುದ್ದೆ ಪಡೆಯಬೇಕು ಎನ್ನುವ ಹಂಬಲ ಇದ್ದವರಿಗೂ ಸಹಾ ಕನಸು ನನಸಾಗುವ ಕಾಲ ವೈದ್ಯರು, ವಕೀಲರು, ಇಂಜಿನಿಯರ್ ಗಳು ಈ ರೀತಿ ಯಾವುದೇ ವೃತ್ತಿಯಲ್ಲಿ ಇರುವವರೆಗೂ ಕೂಡ ಬಹಳ ಬ್ಯುಸಿಯಾಗಿರುವ ವರ್ಷವಾಗಿರುತ್ತದೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಹಳ ಸಾಧನೆ ಮಾಡಿ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ. ರಿಯಲ್ ಎಸ್ಟೇಟ್ ಮಾಡುವವರಿಗಂತೂ ಗಜಕೇಸರಿ ಯೋಗ ಎಂದೇ ಹೇಳಬಹುದು.

ಮದುವೆ ಮಕ್ಕಳ ವಿಚಾರದಲ್ಲಿ ಕೂಡ ಇದ್ದ ದೋಷಗಳೆಲ್ಲ ಪರಿಹಾರ ಹಾಕಿ ಶುಭವಾರ್ತೆ ಕೇಳುವ ಸಮಯವಾಗಿದೆ ಮತ್ತು ಕಂಕಣ ಭಾಗ್ಯ ಇಲ್ಲದವರಿಗೆ ಕಂಕಣ ಭಾಗ್ಯವನ್ನು ಹಾಗೂ ಮಕ್ಕಳ ಭಾಗ್ಯ ಇಲ್ಲದವರು ಮಕ್ಕಳನ್ನು ಪಡೆಯುವಂತಹ ವರ್ಷವಾಗಿದೆ. ಹೊಸ ಮನೆ ಕಟ್ಟಿಸಬೇಕು ಎನ್ನುವವರು ಅಥವಾ ಈ ಹಿಂದಿನ ವರ್ಷಗಳಲ್ಲಿ ಮನೆ ಕಾರ್ಯಕ್ಕೆ ಕೈ ಹಾಕಿ ಅರ್ಧಕ್ಕೆ ನಿಂತು ಹೋಗಿದ್ದವರು ಅದನ್ನು ಮುಂದುವರಿಸುವ ಭಾಗ್ಯ ಹೊಂದಿದ್ದಾರೆ.

ಇನ್ನು ಮನೆಯ ಮೇಲೆ ಮನೆ ಕಟ್ಟಿಸುವ ಹೊಸ ಮನೆಗಳನ್ನು ಖರೀದಿಸುವ ಭಾಗ್ಯವನ್ನು ಕೂಡ ಹೊಂದಿದ್ದಾರೆ, ವಿದೇಶಿ ಪ್ರಯಾಣದ ಅದೃಷ್ಟವೂ ಕೂಡ ಈ ವರ್ಷ ನಿಮ್ಮ ಪಾಲಿಗೆ ಇದೆ. 2024ರಲ್ಲಿ ವೃಷಭ ರಾಶಿಯವರ ಜಾತಕದಲ್ಲಿ ಬುಧ, ಶುಕ್ರ, ಶನಿ ರಾಹು, ಕೇತು ಎಲ್ಲಾ ಗ್ರಹಗಳು ಕೂಡ ಸೂಕ್ತ ಸ್ಥಳದಲ್ಲಿ ಇರುವುದರಿಂದ ಎಲ್ಲಾ ಒಳಿತಾಗುತ್ತದೆ. ಆದರೆ 5% ನಷ್ಟು ಕೆ’ಡು’ಕಿ’ನ ಭಯ ಇದ್ದೇ ಇರುತ್ತದೆ, ಇದು ಆರೋಗ್ಯ ವಿಚಾರದಲ್ಲಿ ಬರಬಹುದು ಅಷ್ಟೇ. ಹಾಗಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡಬೇಡಿ ನಿಮ್ಮ ಆರೋಗ್ಯದ ಜೊತೆ ಕುಟುಂಬದ ಆರೋಗ್ಯ ಬಗ್ಗೆಯೂ ಕೂಡ ಕಾಳಜಿ ಮಾಡಿ.

ಆರಂಭದಲ್ಲಿ ಕಂಡು ಬರುವ ಬ್ರೈನ್ ಟ್ಯೂಮರ್ ನ ಲಕ್ಷಣಗಳು ಇವು.! ಈ ಲಕ್ಷಣಗಳು ಇದ್ದರೆ ಎಚ್ಚರ

 

ಬ್ರೈನ್ ಟ್ಯುಮರ್ ಕಾಯಿಲೆ ಎಂದ ತಕ್ಷಣ ಖಂಡಿತವಾಗಿಯೂ ಬಹಳ ಭ’ಯವಾಗುತ್ತದೆ. ಒಂದು ಕಾಲದಲ್ಲಿ ಇದು ಮಾ’ರ’ಣಾಂ’ತಿ’ಕ ಕಾಯಿಲೆ ಆಗಿತ್ತು, ಆದರೆ ಈಗ ಟೆಕ್ನಾಲಜಿ ಬಹಳಷ್ಟು ಮುಂದುವರೆದಿದೆ. ಹಾಗಾಗಿ ಇಷ್ಟೊಂದು ಹೆದರುವ ಬೀಳುವ ಅಗತ್ಯ ಇಲ್ಲ. ಯಾಕೆಂದರೆ ಟೆಕ್ನಾಲಜಿ ಎಷ್ಟು ಡೆವೆಲಪ್ ಆಗಿದೆ ಎಂದರೆ ಈಗಿನ ಕಾಲದಲ್ಲಿ 70% ರಿಂದ 80% ಬ್ಲೈನ್ ಟ್ಯೂಮರ್ ರೋಗಿಗಳು ಗುಣವಾಗಿ ಸಹಜವಾಗಿ ಬದುಕುತ್ತಿದ್ದಾರೆ.

ಈ ಟ್ಯೂಮರ್ ಗಳಲ್ಲಿ ಎರಡು ವಿಧ ಇರುತ್ತದೆ. ಮೆಲಿಗ್ನೆಂಟ್ ಮತ್ತು ನಾನ್ ಮೆಲಿಗ್ನೆಂಟ್. ಬ್ರೈನ್ ಟ್ಯೂಮರ್ ಕಾಯಿಲೆ ಕುರಿತು ತಿಳಿದುಕೊಳ್ಳುವ ಕುತೂಹಲಕ್ಕಾಗಿ ‌ಅನೇಕ ಬಾರಿ ನಾವು ಗೂಗಲ್ ಸರ್ಚ್ ಮಾಡಿರುತ್ತೇವೆ ಅಥವಾ ಗೊತ್ತಿರುವ ಡಾಕ್ಟರ್ ಬಳಿ ವಿಚಾರಿಸುತ್ತೇವೆ ಅಥವಾ ಈಗಾಗಲೇ ಈ ಕಾಯಿಲೆಯಿಂದ ನರಳುತ್ತಿರುವುದು ಕುಟುಂಬದವರಿಂದ ಕೆಲ ಮಾಹಿತಿ ಕಾಲೆ ಹಾಕಿರುತ್ತೇವೆ.

ಇಂದು ಈ ಅಂಕಣದಲ್ಲಿ ಕೂಡ ಇದರ ಕುರಿತು ಕೆಲ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ, ತಪ್ಪದೆ ಕೊನೆಯವರೆಗೂ ಓದಿ. ಬ್ರೈನ್ ಟ್ಯುಮರ್ ನಲ್ಲಿ ಮೆದುಳಿನ ಡ್ಯೂರ ಎನ್ನುವ ಪೊರೆಯಿಂದ ಉಂಟಾಗುವ ಮೆರಿಂಜ್ಯೋಮ ನಾನ್ ಮೆಲಿಗ್ನೆಂಟ್ ಟ್ಯೂಮರ್ ನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯಿಂದ ತೆಗೆದು ಹಾಕಬಹುದು. ಆ ನಂತರವು ಅದು ಮತ್ತೆ ಬೆಳೆಯುವುದಾಗಲಿ ಅಥವಾ ಮೆದುಳಿನ ಮತ್ತೊಂದು ಭಾಗಕ್ಕಾಗಲಿ ಹರಡುವುದಾಗಲಿ ಆಗುವುದಿಲ್ಲ.

ಪಿಟ್ಯುಟರಿ ಅಡಿನೋಮ, ಅಕೋಷ್ಟಿಕ್ ಶಾನೋಮ ಇವುಗಳು ಕೂಡ ನಾನ್ ಮೆಲಿಗ್ನೆಂಟ್ ಟ್ಯ್ಯೂಮರ್ ಗಳಾಗಿವೆ, ಇವುಗಳನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಇನ್ನು ಮತ್ತೊಂದು ಬಗ್ಗೆ ಟ್ಯೂಮರ್ ಗಳಾದ ಮೆಲಿಗ್ನೆಂಟ್ ಟ್ಯೂಮರ್ ಗಳ ಬಗ್ಗೆ ಹೇಳುವುದಾದರೆ ಇದರಲ್ಲಿ ಗ್ಲಯಾಬ್ಲಾಸ್ಟೋಮ ಎನ್ನುವುದು ಬಹಳ ಅಪಾಯಕಾರಿ. ಇದು ಮೆದುಳಿನಲ್ಲಿ ಬೇರೆ ಬೇರೆ ಭಾಗಗಳಿಗೆ ಹಬ್ಬುವ ಬಗೆಯ ಟ್ಯೂಮರ್ ಆಗಿದೆ.

ಆದರೆ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡಾಗಲೇ ಇದನ್ನು ಗುರುತಿಸಿ ಸೂಕ್ತ ವೈದ್ಯರ ಸಲಹೆ ಪಡೆದು ಅವಶ್ಯಕತೆ ಇದ್ದಾಗ ಚಿಕಿತ್ಸೆಗೆ ಒಳಗಾದರೆ ಖಂಡಿತವಾಗಿ ಇದರಿಂದಲೂ ಕೂಡ ಪೂರ್ತಿಯಾಗಿ ಗುಣವಾಗಿ ಬದುಕಬಹುದು. ಆದರೆ ಅನೇಕರಿಗೆ ಇದರ ಲಕ್ಷಣಗಳು ಬ್ರೈನ್ ಟ್ಯೂಮಾರ್ ಆಗಿರುವ ಲಕ್ಷಣಗಳು ಎಂದು ಗೊತ್ತೇ ಆಗುವುದಿಲ್ಲ.

ಇದರ ಲಕ್ಷಣಗಳು ಹೇಗಿರುತ್ತವೆ ಎಂದರೆ ಎಷ್ಟೋ ದಿನಗಳಿಂದ ದಿನ ಬೆಳಗ್ಗೆ ಎದ್ದ ಕೂಡಲೇ ಬಹಳ ತಲೆನೋವು ಬರುತ್ತಿದ್ದರೆ, ತಲೆ ನೋವಿನ ಜೊತೆಗೆ ವಾಂತಿಯಾಗಿ ವಾಂತಿ ಆದ ಬಳಿಕ ರಿಲ್ಯಾಕ್ಸ್ ಅನಿಸುತ್ತಿದ್ದೆ, ತುಂಬಾ ತಲೆ ಸುತ್ತು ಬರುವುದು, ಅನ್ ಕಾನ್ಶಿಯಸ್ ಆಗುವುದು, ಅಬ್ ನಾರ್ಮಲ್ ಆಗಿ ಬಿಹೇವ್ ಮಾಡುತ್ತಾ ಅವರ ವರ್ತನೆ ಬದಲಾಗಿರುವುದು, ಪಿಟ್ಸ್ ಕೈ ಕಾಲುಗಳ ವೀಕ್ನೆಸ್ ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ಇದು ಬ್ರೈನ್ ಟ್ಯೂಮರ್ ಲಕ್ಷಣಗಳಾಗಿರಬಹುದು, ಆಗ ನಿರ್ಲಕ್ಷ ಮಾಡದೆ ಆದಷ್ಟು ಬೇಗ ವೈದ್ಯರ ಸಂಪರ್ಕಿಸಬೇಕು.

ಇದರ ಬಗ್ಗೆ ಸಂಶಯ ಬಂದಾಗ CT, MRI, ಸ್ಟೆಕ್ಟ್ರೋಸ್ಕೋಪಿ ಈ ರೀತಿಯ ಪರೀಕ್ಷೆಗಳಿಂದ ಕಾಯಿಲೆ ದೃಢಪಡಿಸಲಾಗುತ್ತದೆ. ಈ ಕಾಯಿಲೆಗೆ ಕೆಮೋಡೆಕ್ಟಮಾ ಸಾಮಾನ್ಯವಾಗಿ ನೀಡುವ ಚಿಕಿತ್ಸೆ ಮತ್ತು ಮೆದುಳಿನ ಯಾವ ಭಾಗದಲ್ಲಿ ಗೆಡ್ಡೆಗಳು ಆಗಿದೆ ಆ ಭಾಗಕ್ಕೆ ಮಾತ್ರ ಕೆಮೋಡೆಕ್ಟಮ್ ಮಾಡುವ ಚಿಕಿತ್ಸೆಯೂ ಇದೆ. ಬೆನ್ನು ಮೂಳೆಯಲ್ಲಿ ಟ್ಯೂಮರ್ ಆಗಿದ್ದರೆ ಲೆಮೊಕ್ಟಮಿನ್ ಚಿಕಿತ್ಸೆ ಮಾಡುತ್ತಾರೆ. ರೇಡಿಯೋ ಸರ್ಜರಿ ಕಿಮಿಯೋಥೆರಫಿ ಹೀಗೆ ರೋಗಿಯ ಆರೋಗ್ಯ ಪರಿಸ್ಥಿತಿಯನ್ನು ನೋಡಿಕೊಂಡು ಯಾವ ಚಿಕಿತ್ಸೆ ನೀಡಬೇಕು ಎನ್ನುವುದನ್ನು ವೈದ್ಯರ ನಿರ್ಧರಿಸುತ್ತಾರೆ.

ಇಷ್ಟು ಮಾಡಿದರೆ 90% ಕಾಯಿಲೆಗಳು ಬರುವುದಿಲ್ಲ, ಇವತ್ತಿನಿಂದಲೇ ಇವುಗಳನ್ನು ಬದಲಾಯಿಸಿ ನೋಡಿ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ.!

ಈಗಿನ ಕಾಲದಲ್ಲಿ ಆಗುತ್ತಿರುವ ದೇಹದ ತೂಕದ ಅಸಮತೋಲನ, ಹಾರ್ಮೋನ್ ವೇರಿಯೇಶನ್ ಮತ್ತು ಶುಗರ್, ರಕ್ತದೊತ್ತಡ, ಥೈರಾಯ್ಡ್ ಒಬೆಸಿಟಿ ಮುಂತಾದ ದೇಹದ ಡಿಸ್ ಆರ್ಡರ್ ಗಳಿಗೆಲ್ಲ ನಾವು ಅಳವಡಿಸಿಕೊಂಡಿರುವ ತಪ್ಪಾದ ಜೀವನ ಶೈಲಿ ಹಾಗೂ ವಿಷಯಯುಕ್ತವಾದ ಆಹಾರ ಪದ್ಧತಿಯ ಕಾರಣ ಎಂದು ಹೇಳಬಹುದು.

ಭಾರತದಂತಹ ಸಂಪ್ರದಾಯಬದ್ಧ ದೇಶದ ಬೇರನ್ನು ಇಂದು ಪಾಶ್ಚಿಮಾತ್ಯ ಆಹಾರ ಪದ್ಧತಿಗೆ ಬದಲಾಯಿಸಿ ಅಲುಗಾಡುತ್ತಿರುವುದು ದುರ್ದೈವವೇ ಸರಿ. ನಮ್ಮ ದೇಶವು ರೋಗ ನಿರೋಧಕ ಶಕ್ತಿಯಲ್ಲಿ ನಂ.1 ಆಗಿತ್ತು, ಹಾಗಾಗಿ ಕರೋನಂತಹ ಸಾಂಕ್ರಾಮಿಕ ದ ಸಂದರ್ಭದಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಅತಿ ಕಡಿಮೆ ಸಾ’ವು ನೋ’ವು ಸಂಭವಿಸಿತು.

ಆಗಿನ ಕಾಲದ ಜನರು ಯಾವುದೇ ಆಡಂಬರವಿಲ್ಲದೆ ವಿದ್ಯಾಭ್ಯಾಸದ ಕಡಿಮೆ ಇದ್ದರೂ ಇದ್ದಿದ್ದರಲ್ಲೇ ತೃಪ್ತರಾಗಿ ಗಟ್ಟಿ ಮುಟ್ಟಾಗಿ ನೂರಾರು ವರ್ಷ ಕಾಯಿಲೆ ಕಸಾಲೆ ಇಲ್ಲದೆ ಬದುಕುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಎಜುಕೇಟೆಡ್ ಫೂಲ್ ಗಳಂತೆ ಅಜ್ಞಾನಿಗಳಾಗಿ ತಮ್ಮ ಕೈಯಾರೆ ತಾವೇ ತಮ್ಮ ದೇಹಕ್ಕೆ ವಿ’ಷ ಸೇರಿಸುತ್ತಿದ್ದಾರೆ.

ಇದೇ ಕಾರಣಕ್ಕೆ 30, 40ರ ವಯಸ್ಸಿನಲ್ಲಿಯೇ ಹೃ’ದ’ಯ’ಘಾ’ತ ಅದಕ್ಕಿಂತ ಕಡಿಮೆ ಹರೆಯದವರಿಗೆ ಕಿಡ್ನಿ ಲಿವರ್ ಡ್ಯಾಮೇಜ್ ಸ್ಟ್ರೋಕ್ ಬಂದೊದಗಿ ಆಸ್ಪತ್ರೆ ಸೇರಿ ನರಳುವಂಥಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ದೂರವಿದ್ದು ನಾವು ಕೂಡ ಆರೋಗ್ಯವಂತರವಾಗಿ ಸಂತೋಷವಾಗಿ ದೀರ್ಘಕಾಲದ ಜೀವನ ಜೀವಿಸಬೇಕು ಎಂದರೆ ಮೊದಲು ನಮ್ಮ ಆಹಾರ ಪದ್ಧತಿಯನ್ನು ಸರಿ ಮಾಡಿಕೊಳ್ಳಬೇಕು.

ರಾತ್ರೋರಾತ್ರಿ ಈ ಬದಲಾವಣೆ ಅಸಾಧ್ಯವಾದರೂ ಬಹಳ ಗಂಭೀರವಾಗಿ ತೆಗೆದುಕೊಂಡು ದಿನದಿಂದ ದಿನಕ್ಕೆ ಕಟ್ಟುನಿಟ್ಟಾಗಿ ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳುತ್ತಾ ಬನ್ನಿ ನಿಮಗೆ ಭಾಧಿಸುತ್ತಿರುವ ಯಾವುದೇ ಆರೋಗ್ಯ ಸಮಸ್ಯೆ ಆದರೂ ಹೇಗೆ ಕಣ್ಮರೆಯಾಗುತ್ತದೆ ಎನ್ನುವುದನ್ನು ನೀವೇ ಪರೀಕ್ಷೆ ಮಾಡಿ ನೋಡಿ.

* ಉದಾಹರಣೆಗೆ ಹೇಳಬೇಕು ಎಂದರೆ ಕಿಡ್ನಿಯಲ್ಲಿ ಕಲ್ಲಾಗುವ ಸಮಸ್ಯೆ, ಸಕ್ಕರೆ ಕಾಯಿಲೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಸಕ್ಕರೆ ಹಾಗೂ ರಾಸಾಯನಿಕ ಯುಕ್ತ ಬೆಲ್ಲಗಳ ಬಳಕೆ. ನೀವು ಗಮನಿಸಿದರೆ ಆ ಬೆಲ್ಲಗಳ ಮೇಲೆ ಜೇನು ಹುಳ, ಇರುವೆಗಳು ಕೂಡ ಹೋಗುವುದಿಲ್ಲ ಎನ್ನುವುದನ್ನು ಅರಿಯಬಹುದು.

ಹಾಗಾಗಿ ಸ್ವಾಭಾವಿಕವಾಗಿ ತಯಾರಾದ ಬೆಲ್ಲಗಳ ಕಡೆ ಮುಖ ಮಾಡಿ ಸಾವಯವ ಬಲ್ಲವನ್ನು ಬಳಸಿದರೆ ಹೊಟ್ಟೆಯಲ್ಲಿ ಜಂತು ಹುಳುಗಳು ಕೂಡ ಬರುವುದಿಲ್ಲ ರಕ್ತ ಹೀನತೆ ಚರ್ಮದ ಸಮಸ್ಯೆಯಿಂದ ಹಿಡಿದು ಅನೇಕ ರೋಗಗಳಿಗೆ ಇದು ಉತ್ತಮ ಪರಿಹಾರವಾಗಿದೆ.

* ಅಡುಗೆ ಎಣ್ಣೆ ರಾಸಾಯನಿಕಯುಕ್ತವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ಪೆಟ್ರೋಲಿಯಂ ಉತ್ಪನ್ನಗಳಿಗೆ ಬಂದ ಕಚ್ಚಾ ವಸ್ತುಗಳಲ್ಲಿ ಉಳಿದ ವಿಸರ್ಜಿತವಾದ ಅಂಶವು ಇಂದು ಆಡುಗೆ ಎಣ್ಣೆಗಳಾಗಿ ಮನುಷ್ಯರ ಹೊಟ್ಟೆ ಸೇರುತ್ತಿದೆ, ಗೊತ್ತಿದ್ದು ನಾವೇ ಖರೀದಿಸುತ್ತಿದ್ದೇವೆ ಎಂದರೆ ನಾವು ಇಂದು ಯಾವ ರೀತಿಯ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಗಾ’ಬ’ರಿ ಆಗದೆ ಇರದು.

ಇಲ್ಲಿ ಯಾರು ಕೂಡ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡುವುದಿಲ್ಲ. ಕಡಲೆ ಕಾಯಿ ಎಣ್ಣೆ, ಕೊಬ್ಬರಿ ಎಣ್ಣೆ, ಹುಚ್ಚಳ್ಳು ಸೂರ್ಯಕಾಂತಿ ಯಾವುದೇ ಎಣ್ಣೆಯನ್ನು ಬಳಸಿದರೂ ಕೂಡ ನಾವೇ ಆ ಪದಾರ್ಥಗಳನ್ನು ತೆಗೆದುಕೊಂಡು ಹೋಗಿ ಗಿರಣಿ ಅಂಗಡಿಯಲ್ಲಿ ಎಣ್ಣೆ ತೆಗೆಸಿಕೊಂಡು ಬಂದು ಬಳಕೆ ಮಾಡುವುದು 90% ರಷ್ಟು ಕಾಯಿಲೆಗಳಿಗೆ ಔಷಧಿಯಾಗಿದೆ.

* ಇದರೊಂದಿಗೆ ಎಲ್ಲರೂ ಮಾಡುವ ಸಣ್ಣ ತಪ್ಪು ಏನೆಂದರೆ, ಜಾಹೀರಾತುಗಳಿಗೆ ಮಾರು ಹೋಗುವುದುಕ್ರಿಕೆಟ್ ಸ್ಟಾರ್ ಅಥವಾ ಸಿನಿಮಾ ಸ್ಟಾರ್ ಒಂದು ಕೂಲ್ ಡ್ರಿಂಕ್ ಅಡ್ವರ್ಟೈಸ್ ಮಾಡಿದರು ಎಂದರೆ ಎಲ್ಲರೂ ಕೂಡ ಅದನ್ನೇ ಫಾಲೋ ಮಾಡುತ್ತಾರೆ. ಅದರಲ್ಲಿ ಬಳಸುವ ರಾಸಾಯನಿಕಗಳು ನಮ್ಮ ಮನೆಯ ಫೆನಾಯಿಲಾ, ಡಿಶ್ ವಾಷರ್ ಗಳಲ್ಲೂ ಕೂಡ ಬಳಕೆ ಆಗಿರುತ್ತವೆ ಆದರೆ ಅದರ ಡೀಟೇಲ್ಸ್ ನೋಡಲು ಯಾರಿಗೂ ಸಮಯವಿಲ್ಲ.

ದುಬಾರಿಯಾದರೂ ಅದನ್ನೇ ಕೊಂಡು ಕುಡಿಯುತ್ತಾರೆ, ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಅದರ ಬದಲು ಎಳನೀರು ಪ್ರಕೃತಿ ಕೊಟ್ಟಿರುವ ಅತ್ಯದ್ಭುತ ಔಷಧಿ. ಒಂದು ಎಳನೀರಿಗೆ ಅರ್ಧ ಹೋಳು ನಿಂಬೆರಸ, ಎರಡು ಏಲಕ್ಕಿ ಜಜ್ಜಿ ಹಾಕಿ, ಎರಡು ಚಮಚ ಜೇನುತುಪ್ಪ ಸೇರಿಸಿ ಕುಡಿದರೆ ಇಡೀ ದಿನದ ಚೈತನ್ಯವಾಗಿ ಇರುವಷ್ಟು ಶಕ್ತಿ ಅದರಿಂದ ಬರುತ್ತದೆ.

ಈ ರೀತಿಯ ಬದಲಾವಣೆಗಳನ್ನು ಅಗತ್ಯವಾಗಿ ಮಾಡಿಕೊಂಡು ನಿಮ್ಮ ಆರೋಗ್ಯವನ್ನು ನೀವೇ ಸುಧಾರಿಸಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದೊಡನೆ ಶೇರ್ ಮಾಡಿ.