ಬಹಳ ಹಿಂದಿನ ದಿನದಲ್ಲಿ ನಮ್ಮ ಹಿರಿಯರು ಅನುಸರಿಸುತ್ತಿದ್ದಂತಹ ಆಹಾರ ಪದ್ಧತಿ ಜೀವನ ಶೈಲಿ ಇಂದಿಗೆ ಮಾಯವಾಗಿದೆ ಎಂದು ಹೇಳ ಬಹುದು ಹೌದು ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರು ಕೂಡ ತಮ್ಮ ಜೀವನ ಶೈಲಿ ಆಹಾರ ಶೈಲಿಯಲ್ಲಿ ಬಹಳಷ್ಟು ಬದಲಾವಣೆಯನ್ನು ಮಾಡಿಕೊಂಡಿರುವುದರಿಂದ ಅವರ ಆರೋಗ್ಯದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುತ್ತಿದೆ.
ಏಕೆಂದರೆ ಬಹಳ ಹಿಂದಿನ ದಿನದಲ್ಲಿ ಅವರು ಉಪಯೋಗಿಸುತ್ತಿದ್ದಂತಹ ಆಹಾರಗಳೆಲ್ಲವೂ ಕೂಡ ಬಹಳ ಶುಚಿಯಾಗಿದ್ದವು ಹಾಗೂ ಅದರಲ್ಲಿ ಅಷ್ಟು ಪೌಷ್ಟಿಕಾಂಶಗಳು ಇದ್ದವು ಆದ್ದರಿಂದ ಅವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿರಲಿಲ್ಲ ಆದರೆ ಇತ್ತೀಚಿನ ದಿನದಲ್ಲಿ ನಾವು ಉಪಯೋಗಿಸುತ್ತಿರುವಂತಹ ಆಹಾರದಲ್ಲಿ ಅರ್ಧದಷ್ಟು ವಿಷಕಾರಿ ಅಂಶವೇ ಇದೆ.
ಈ ಸುದ್ದಿ ನೋಡಿ:- ಮಂಚ ಅಥವಾ ಹಾಸಿಗೆ ಮೇಲೆ ಗೊತ್ತಿಲ್ಲದೆ ಇವುಗಳನ್ನು ಇಟ್ಟರೆ ಅಶುಚಿ.! ದುಡ್ಡು ನಿಲ್ಲದೆ ಇರೋದಕ್ಕೆ ಕಾರಣ ಇದೆ.!
ಆದ್ದರಿಂದ ಅವುಗಳನ್ನು ನಾವು ಸೇವನೆ ಮಾಡುವುದರಿಂದ ಆರೋಗ್ಯದಲ್ಲಿ ತೊಂದರೆಯನ್ನು ನಾವು ಅನುಭವಿಸುತ್ತಿದ್ದೇವೆ. ಆದ್ದರಿಂದ ನಾವು ನಮ್ಮ ಹಿಂದಿನ ದಿನದಲ್ಲಿ ಅಂದರೆ ನಮ್ಮ ಹಿರಿಯರು ಯಾವ ರೀತಿಯ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರು ಹಾಗೂ ಯಾವ ಸಮಯದಲ್ಲಿ ಯಾವ ರೀತಿಯ ಆಹಾರವನ್ನು ಸೇವನೆ ಮಾಡುವುದರಿಂದ ನಮ್ಮ ಆ ಒಂದು ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಎಂದು ತಿಳಿಸಿಕೊಟ್ಟಿದ್ದರೋ ಅದನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.
* ಬಾಳೆದಿಂಡಿನ ರಸವನ್ನು ಕುಡಿಯುವುದರಿಂದ ಪಿತ್ತಕೋಶದ ಕಲ್ಲುಗಳು ಕರಗುತ್ತವೆ.
* ತಂಗಳನ್ನದ ಜೊತೆ ಮೊಸರನ್ನು ಸೇರಿಸಿ ತಿಂದರೆ ಬೇಗನೆ ತೂಕ ಹೆಚ್ಚಿಸಿಕೊಳ್ಳಬಹುದು.
* ಪ್ರತಿದಿನ ಒಂದೆರಡು ಕಾಳು ಏಲಕ್ಕಿಯನ್ನು ತಿನ್ನುವುದರಿಂದ ರಕ್ತದಲ್ಲಿ ರುವಂತಹ ಕೊಬ್ಬಿನಂಶ ಕಡಿಮೆಯಾಗುತ್ತದೆ.
* ಶುಂಠಿ ಬೆರೆಸಿದ ಹಾಲು ಕುಡಿಯುವುದರಿಂದ ದೀರ್ಘಕಾಲದ ಕೆಮ್ಮು ಗುಣವಾಗುತ್ತದೆ.
* ದಾಸವಾಳ ಸೊಪ್ಪನ್ನು ರುಬ್ಬಿ ತಲೆಗೆ ಹಚ್ಚುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.
* ಊಟದ ಜೊತೆ ಉಪ್ಪಿನಕಾಯಿ ತಿನ್ನುವುದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ.
ಈ ಸುದ್ದಿ ನೋಡಿ:- 200% ನೀವು ಅಂದುಕೊಂಡಿದ್ದು ಆಗುತ್ತದೆ ಅಂದರೆ ನೀವು ಕೂತ ಕಲ್ಲು ಬಲಗಡೆಗೆ ತಿರುಗುತ್ತದೆ.!
* ಹಸಿ ಶೇಂಗವನ್ನು ಬೇಯಿಸದೆ ಹುರಿಯದೆ ತಿನ್ನುವುದರಿಂದ ತಲೆ ತಿರುಗು ಪಿತ್ತ ಹೆಚ್ಚಾಗುತ್ತದೆ ಶೇಂಗಾ ಬೀಜವನ್ನು ಹುರಿದು ಅಥವಾ ನೆನೆಸಿ ತಿನ್ನುವುದರಿಂದ ಬಾದಾಮಿಯಷ್ಟೇ ಪೋಷಕಾಂಶಗಳು ದೇಹಕ್ಕೆ ದೊರಕುವವು.
* ಬಿಸಿಲಿನಲ್ಲಿ ಹೊರಗಡೆ ಸುತ್ತಾಡಿ ಬಂದಾಗ ಸ್ವಲ್ಪ ಬೆಲ್ಲ ತಿಂದು ನೀರು ಕುಡಿಯುವುದರಿಂದ ತಕ್ಷಣ ಆಯಾಸ ಪರಿಹಾರವಾಗುತ್ತದೆ.
* ಅಜೀರ್ಣವಾಗಿ ಹೊಟ್ಟೆ ಉಬ್ಬರವಿದ್ದಾಗ ಸ್ವಲ್ಪ ಬಜೆಯನ್ನು ತಿನ್ನುವುದ ರಿಂದ ಹೊಟ್ಟೆಯ ಉಬ್ಬರ ಅಜೀರ್ಣ ಕಡಿಮೆ ಆಗುವುದು.
* ಪರಸ್ಪರ ವಿರುದ್ಧ ಗುಣಗಳಿರುವ ಆಹಾರವನ್ನು ಒಟ್ಟಿಗೆ ಸೇವಿಸ ಬಾರದು ಉದಾಹರಣೆಗೆ ಮೀನು ತಿಂದ ನಂತರ ಹಾಲು ಕುಡಿಯಬಾರದು.
* ಕಹಿಬೇವಿನ ಎಲೆಗಳನ್ನು ದಿನವೂ ಯಾವುದಾದರೂ ರೂಪದಲ್ಲಿ ಬಳಸಿದರೆ ಆರೋಗ್ಯ ವೃದ್ಧಿ ಯಾಗುತ್ತದೆ.
* ಗಂಟಲು ನೋವಿಗೆ ತುಂಬೆ ಎಲೆ ರಸವನ್ನು ಸುಣ್ಣದಲ್ಲಿ ಬೆರೆಸಿ ಗಂಟ ಲಿಗೆ ಹಚ್ಚುವುದರಿಂದ ಒಂದೇ ದಿನದಲ್ಲಿ ನೋವು ಮಾಯವಾಗುವುದು.
* ಸಿಹಿ ಪದಾರ್ಥಗಳನ್ನು ತಿಂದ ತಕ್ಷಣ ಅಥವಾ ಊಟ ಮಾಡಿದ ತಕ್ಷಣ ಬಾಯಿ ಮುಕ್ಕಳಿಸುವುದನ್ನು ಮರೆಯಬಾರದು.
* ವೀಳ್ಯದೆಲೆಯ ಜೊತೆಗೆ ಎರಡು ಕಾಳುಮೆಣಸು ಒಂದು ಬೆಳ್ಳುಳ್ಳಿ ಸ್ವಲ್ಪ ಕಲ್ಲುಪ್ಪು ಸೇರಿಸಿ ನಿಧಾನವಾಗಿ ಜಗಿದು ನುಂಗುವುದರಿಂದ ಒಣ ಕೆಮ್ಮು ಕಡಿಮೆಯಾಗುವುದು.
ಈ ಸುದ್ದಿ ನೋಡಿ:- ಎಕ್ಕದ ಗಿಡದ ಬುಡದಲ್ಲಿ ಈ ವಸ್ತುಗಳನ್ನು ಇಡಬೇಕು ಇದರಿಂದ ಸಾಲ ಇದ್ದರೆ ತೀರುತ್ತದೆ..!
* ಚರ್ಮ ರೋಗ ಹುಳುಕಡ್ಡಿಗೆ ತುಳಸಿ ರಸ ಮತ್ತು ಉಪ್ಪು ಸೇರಿಸಿ ಹಚ್ಚುವುದರಿಂದ ಒಂದೆರಡು ದಿನಗಳಲ್ಲಿ ಹುಳುಕಡ್ಡಿ ಹೆಸರಿಲ್ಲದಂತಾಗು ವುದು.
* ಪಪ್ಪಾಯ ಬೀಜಗಳನ್ನು ಒಣಗಿಸಿ ಜೇನುತುಪ್ಪದೊಂದಿಗೆ ಸೇರಿಸಿ ಖಾಲಿ ಹೊಟ್ಟೆಗೆ ತೆಗೆದುಕೊಳ್ಳುವುದರಿಂದ ಹೊಟ್ಟೆ ಹುಳುವಿನ ಸಮಸ್ಯೆ ಕಡಿಮೆಯಾಗುವುದು.
* ಕುಂಬಳಕಾಯಿ ರಸ ಕುಡಿಯುವುದರಿಂದ ಹೊಟ್ಟೆ ಸಂಬಂಧಿ ಕಾಯಿಲೆ ಗಳು ಬೇಗನೆ ವಾಸಿಯಾಗುತ್ತದೆ.
* ಈರುಳ್ಳಿ ರಸದೊಂದಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರ್ನಾಲ್ಕು ಬಾರಿ ಸೇವಿಸುವುದರಿಂದ ಗಂಟಲು ಕೆರೆತ ಧ್ವನಿ ಕಟ್ಟುವಿಕೆ ಶೀತ ನೆಗಡಿ ಕೆಮ್ಮು ಇತ್ಯಾದಿಗೆ ಶೀಘ್ರದಲ್ಲಿ ಗುಣಮುಖವಾಗುತ್ತದೆ.
* ಶುದ್ಧ ಹಸುವಿನ ತುಪ್ಪವನ್ನು ಮೂಗಿನ ಪ್ರತಿಯೊಂದು ಹೊಳ್ಳೆಗೆ ಎರಡೆರಡು ಹನಿ ಹಾಕುವುದರಿಂದ ಧೀರ್ಘಕಾಲದ ಅರ್ಧ ತಲೆನೋವು ಕಡಿಮೆಯಾಗುವುದು.
* ಪ್ರತಿದಿನ ಮಧ್ಯಾಹ್ನ ಅಥವಾ ರಾತ್ರಿ ಊಟದ ನಂತರ ಎಲೆ ಅಡಿಕೆ ಸುಣ್ಣತಿನ್ನುವುದರಿಂದ ಕ್ಯಾಲ್ಸಿಯಂ ಜೊತೆಗೆ ಹಲ್ಲಿನ ಆರೋಗ್ಯ ಕೂಡ ಚೆನ್ನಾಗಿರುವುದು.