Home Devotional ಈ ಕ್ಷೇತ್ರಕ್ಕೆ ಕಾಲಿಟ್ಟರೆ ಶ್ರೀಮಂತರಾಗುವುದರಲ್ಲಿ ಅನುಮಾನವೇ ಇಲ್ಲ, ಸೈಕಲ್ ನಲ್ಲಿ ಹೋದವರು ಇಂದು ಕಾರ್ ಕೊಂಡುಕೊಂಡಿದ್ದಾರೆ.!

ಈ ಕ್ಷೇತ್ರಕ್ಕೆ ಕಾಲಿಟ್ಟರೆ ಶ್ರೀಮಂತರಾಗುವುದರಲ್ಲಿ ಅನುಮಾನವೇ ಇಲ್ಲ, ಸೈಕಲ್ ನಲ್ಲಿ ಹೋದವರು ಇಂದು ಕಾರ್ ಕೊಂಡುಕೊಂಡಿದ್ದಾರೆ.!

0
ಈ ಕ್ಷೇತ್ರಕ್ಕೆ ಕಾಲಿಟ್ಟರೆ ಶ್ರೀಮಂತರಾಗುವುದರಲ್ಲಿ ಅನುಮಾನವೇ ಇಲ್ಲ, ಸೈಕಲ್ ನಲ್ಲಿ ಹೋದವರು ಇಂದು ಕಾರ್ ಕೊಂಡುಕೊಂಡಿದ್ದಾರೆ.!

 

ನಮ್ಮ ನಾಡಿನಲ್ಲಿ ಅನೇಕ ಪುಣ್ಯಕ್ಷೇತ್ರಗಳು ಇವೆ. ರಾಮಾಯಣ ಮಹಾಭಾರತ ನಡೆದಿರುವ ಈ ಭರತ ಭೂಮಿಯಲ್ಲಿ ಕರ್ನಾಟಕದಲ್ಲಿ ಕೂಡ ಇದಕ್ಕೆ ಉಲ್ಲೇಖಗಳು ಇವೆ, ಆಂಜನೇಯನ ಜನ್ಮಭೂಮಿ ಆಗಿರುವ ಕರ್ನಾಟಕದಲ್ಲಿ ರಾಮ ಸೀತೆ ಲಕ್ಷ್ಮಣ ಆಂಜನೇಯ ನಡೆದಾಡಿರುವ ಸ್ಥಳಗಳು ಮತ್ತು ಅವುಗಳ ಪ್ರಭಾವ ಇಂದಿಗೂ ಕಣ್ಣೆದುರಿಗೆ ಸಾಕ್ಷಿಯಾಗಿರುವುದನ್ನು ಕಾಣಬಹುದು.

ಅದೇ ರೀತಿ ಮಹಾಭಾರತದಲ್ಲಿ ನಡೆದಿರುವ ಅದೆಷ್ಟೋ ಘಟನೆಗಳಿಗೆ ಕರ್ನಾಟಕವು ಸಾಕ್ಷಿಯಾಗಿದೆ. ಹೀಗೆ ದೇವಾನು ದೇವತೆಗಳು ಮಹಾಮಹಿಮರು ಅವತಾರ ತಾಳಿ ನೆಲೆ ನಿಂತು ಆಶೀರ್ವದಿಸಿ ಹೋಗಿರುವ ಈ ಭೂಮಿಯಲ್ಲಿ ಇಂದಿಗೂ ಅನೇಕ ಕ್ಷೇತ್ರಗಳಲ್ಲಿ ಚಮತ್ಕಾರವೇ ನಡೆಯುತ್ತಿದೆ.

ಇಂತಹ ಕ್ಷೇತ್ರಗಳಲ್ಲಿ ತಾಯಿ ಚಾಮುಂಡೇಶ್ವರಿಯ ಸನ್ನಿಧಾನ ಹಾಗೂ ಬಸವಪ್ಪನವರ ಮತ್ತು ಆಂಜನೇಯ ಸ್ವಾಮಿಯ ಇರುವ ಒಂದು ಜಾಗ ಎಂದರೆ ಚನ್ನಪಟ್ಟಣ ತಾಲೂಕು ರಾಮನಗರ ಜಿಲ್ಲೆ ಬಳಿ ಇರುವ ಗೌಡಗೆರೆ ಗ್ರಾಮ. ಗೌಡಗೆರೆ ಚಾಮುಂಡೇಶ್ವರಿ ಶ್ರೀ ಬಸವಪ್ಪನವರ ಕ್ಷೇತ್ರ ಎಂದು ಕೇಳಿದರೆ ಯಾರು ಬೇಕಾದರೂ ಈ ಸ್ಥಳಕ್ಕೆ ದಾರಿ ತೋರಿಸುತ್ತಾರೆ. ಅಷ್ಟರಮಟ್ಟಿಗೆ ಈ ಸ್ಥಳವು ತನ್ನ ಪ್ರಭಾವದಿಂದ ಸುತ್ತ ಹತ್ತಾರು ಹಳ್ಳಿಗಳಲ್ಲಿ ಹೆಸರುವಾಸಿಯಾಗಿದೆ.

ಈ ಸುದ್ದಿ ಓದಿ:- ನಿಮ್ಮ ಕೆಲಸ ಆಗುತ್ತದಾ? ಇಲ್ಲವಾ? ಎನ್ನುವುದನ್ನು ನೀರಿನಿಂದಲೇ ತಿಳಿಯಬಹುದು, ನೀವೇ ಹೇಳುತ್ತದೆ ನಿಮ್ಮ ಭವಿಷ್ಯ.!

ಹತ್ತಿರದ ಜನರು ಮಾತ್ರವಲ್ಲದೆ ದೂರದ ಊರುಗಳಿಂದ ರಾಜ್ಯದ, ದೇಶದ ನಾನಾ ಭಾಗಗಳಿಂದ ಇಲ್ಲಿ ನೆಲೆಗೊಂಡಿರುವ ತಾಯಿ ಚಾಮುಂಡೇಶ್ವರಿ ಅಮ್ಮನವರ ದರ್ಶನ ಮಾಡಲು ಮತ್ತು ಏಳು ವಾರ ಬಂದು ತೆಂಗಿನಕಾಯಿ ಕಟ್ಟಿದವರಿಗೆ ಹರಕೆ ನೆರವೇರುವಂತೆ ಮಾಡುವ ಬಸವಪ್ಪನವರ ಪವಾಡವನ್ನು ಕಾಣಲು ಮತ್ತು ಆಂಜನೇಯನ ಉದ್ಭವ ಮೂರ್ತಿ ಬಳಿ ಇಂದಿಗೂ ರಾಮ ಸೇತುವೆ ನಿರ್ಮಿಸಿದ ತೇತ್ರಾಯುಗದ ತೇಲುವ ಕಲ್ಲು ಇರುವುದನ್ನು ನೋಡಲು ಭಕ್ತಾದಿಗಳು ಈ ಸ್ಥಳಕ್ಕೆ ಬರುತ್ತಾನೆ.

ಸ್ಥಳ ಮಹಾತ್ಮೆ ಬಗ್ಗೆ ವಿವರಿಸುವುದಾದರೆ ಇಲ್ಲಿಗೆ ಬರುವ ಭಕ್ತಾದಿಗಳು ಹೇಳುವ ಪ್ರಕಾರವಾಗಿ ಅನೇಕರಿಗೆ ಕಷ್ಟಕಾರ್ಪಣ್ಯಗಳು ಕಳೆದಿವೆ. ಆರೋಗ್ಯಕ್ಕಾಗಿ, ಹಣಕಾಸಿನ ಪರಿಸ್ಥಿತಿಯ ಸುಧಾರಣೆಗಾಗಿ, ಹೆಸರಿಗಾಗಿ, ಕೀರ್ತಿಗಾಗಿ, ನೆಮ್ಮದಿಗಾಗಿ, ಸಂತಾನಕ್ಕಾಗಿ ವಿವಾಹಕ್ಕಾಗಿ ಹೀಗೆ ಯಾವ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ಇಲ್ಲಿಗೆ ಬರುತ್ತಾರೆ.

ಬಸವಪ್ಪನವರ ಹರಕೆ ಸಲ್ಲಿಸುವವರಿಗೆ ಮಂಗಳವಾರ ಶುಕ್ರವಾರ ಹಾಗೂ ಭಾನುವಾರದಂದು ನೀರು ಹಾಕಲಾಗುತ್ತದೆ. ಏಳು ವಾರ ಕಾಯಿ ತಂದು ಕಟ್ಟಿ ಏಳು ಪ್ರದಕ್ಷಿಣೆ ಹಾಕಿ ನೀರು ಹಾಕಿಸಿಕೊಂಡು ಹೋದರೆ ಏಳು ವಾರ ಮುಗಿಯುವುದರೊಳಗೆ ಅವರ ಕೋರಿಕೆ ನೆರವೇರುತ್ತದೆ ಬಯಕೆ ಈಡೇರಿದ ಮೇಲೆ ಬಂದು ತಮ್ಮ ಸೇವೆ ಸಲ್ಲಿಸಿ ಹೋಗುತ್ತಾರೆ.

ಈ ಸುದ್ದಿ ಓದಿ:-ಬಡ ಹಾಗೂ ಮಧ್ಯಮ ವರ್ಗದವರಿಗೆ ಸರ್ಕಾರದಿಂದ ಬಂಪರ್ ಗಿಫ್ಟ್.! ರೇಷನ್ ಕಾರ್ಡ್ ಇದ್ದವರಿಗೆ 5 ಲಕ್ಷ, ಇಲ್ಲದವರಿಗೆ 1.5 ಲಕ್ಷ ಉಚಿತ.!

ಅದೇ ರೀತಿ ಪ್ರತಿನಿತ್ಯವೂ ತಾಯಿ ಚಾಮುಂಡೇಶ್ವರಿಯ ದರ್ಶನ ಭಾಗ್ಯ ಇರುತ್ತದೆ ಇಲ್ಲಿಗೆ ಬರುವವರು ಬಹಳ ಸಕರಾತ್ಮಕ ವಾತಾವರಣ ಇರುತ್ತದೆ ತುಂಬಾ ನೆಮ್ಮದಿ ಸಿಗುತ್ತದೆ ಎಂದು ಹೇಳುತ್ತಾರೆ. ಸುಮಾರು 10 ರಿಂದ 15 ಕೆಜಿ ಇರುವ ತೇಲುವ ಕಲ್ಲನ್ನು ಇಲ್ಲಿ ನೋಡಬಹುದು ಪರೀಕ್ಷೆ ಮಾಡಲು ನೀವು 1/2 ಕೆಜಿ ಇರುವ ಕಲ್ಲನ್ನು ಅದೇ ನೀರಿನಲ್ಲಿ ಹಾಕಿದರೆ ಅದು ಮುಳುಗುತ್ತದೆ.

ಹಾಗಾಗಿ ರಾಮ ಸೇತುವೆಗೆ ಸಾಕ್ಷಿಯಾದ ಆಂಜನೇಯನ ಸ್ಪರ್ಶಿಸಿದ್ದ ಈ ಕಲ್ಲನ್ನು ತಲೆ ಮೇಲೆ ಹೊತ್ತು ಆಶೀರ್ವಾದ ಪಡಿದರೆ ಯಾವುದೇ ನಕಾರಾತ್ಮಕ ಶಕ್ತಿಗಳ ಪ್ರಭಾವ ಇದ್ದರು ಹೊರಟು ಹೋಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳು ನಂಬಿರುವ ವಾಡಿಕೆ ಮತ್ತು ಹಣಕಾಸಿನ ವಿಚಾರದಲ್ಲಂತೂ ಬಹಳ ಉತ್ತಮ ಪರಿಣಾಮಗಳು ಸಂಭವಿಸುತ್ತವೆ‌

ತಾಯಿ ಚಾಮುಂಡೇಶ್ವರಿ ಧೈರ್ಯ ಕೊಡುತ್ತಾರೆ ವ್ಯಾಪಾರ ವ್ಯವಹಾರ ಅಭಿವೃದ್ಧಿಯಾಗುವಂತೆ ವೃತ್ತಿ ಕ್ಷೇತ್ರದಲ್ಲಿ ಉನ್ನತಿಗೆ ಏರುವಂತೆ ದಾರಿ ತೋರಿಸಿ ಕಾಪಾಡುತ್ತಾರೆ. ಹಿಂದೆ ಸೈಕಲ್ ನಲ್ಲಿ ಬರುತ್ತಿದ್ದ ನಾವು ಇಂದು ಕಾರ್ ಕೊಂಡುಕೊಂಡು ತಾಯಿ ನೋಡಲು ಬರುವಂತೆ ಅಮ್ಮ ಅನುಗ್ರಹಿಸಿದ್ದಾರೆ ಎಂದು ಹೇಳುತ್ತಾರೆ ಭಕ್ತಾದಿಗಳು.

ದೇವಸ್ಥಾನದ ಸಹಾಯವಾಣಿ:-
9964676625 / 8693968983

LEAVE A REPLY

Please enter your comment!
Please enter your name here