Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಇಂದು 02 ಮಾರ್ಚ್ 2024, ಅಕ್ರಮ ಸಕ್ರಮ ಸರ್ಕಾರಿ ಜಮೀನಿನಲ್ಲಿ ಮನೆ / ಬೇಸಾಯ ಮಾಡುತ್ತಿರುವವರಿಗೆ ಸರ್ಕಾರದಿಂದ ಹಕ್ಕು ಪತ್ರ ವಿತರಣೆ.!

Posted on March 2, 2024 By Kannada Trend News No Comments on ಇಂದು 02 ಮಾರ್ಚ್ 2024, ಅಕ್ರಮ ಸಕ್ರಮ ಸರ್ಕಾರಿ ಜಮೀನಿನಲ್ಲಿ ಮನೆ / ಬೇಸಾಯ ಮಾಡುತ್ತಿರುವವರಿಗೆ ಸರ್ಕಾರದಿಂದ ಹಕ್ಕು ಪತ್ರ ವಿತರಣೆ.!

 

ನೂತನ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಕೃಷ್ಣ ಬೈರೇಗೌಡ ರವರು (Revenue Minister Krishna Bairegowda) ಆಡಳಿತಕ್ಕೆ ಬಂದ ದಿನದಿಂದ ಸಾಕಷ್ಟು ಹೊಸ ನಿಯಮಗಳನ್ನು ಜಾರಿಗೆ ತಂದು ಜನಸಾಮಾನ್ಯರಿಗೆ ಅದರಲ್ಲೂ ಮುಖ್ಯವಾಗಿ ರೈತರಿಗೆ ಅನುಕೂಲವಾಗುವಂತಹ ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ.

ಇವುಗಳಲ್ಲಿ ಒಂದು ಬಹಳ ವರ್ಷಗಳಿಂದ ಇತರ್ಥವಾಗದೇ ಉಳಿದಿದ್ದ ಬಗರ್ ಹುಕುಂ ಯೋಜನೆ (Bagar Hukum) ಕೂಡ ಒಂದು. ಕಳೆದ 15 ವರ್ಷಗಳಿಕ್ಕಿಂತ ಹಿಂದಿನ ಸಮಯದಿಂದಲೂ ಕೃಷಿ ಮಾಡಲು ಸ್ವಂತ ಭೂಮಿ ಇಲ್ಲದ ಕಾರಣ ಸರ್ಕಾರದ ಭೂಮಿಯಲ್ಲಿ ವ್ಯವಸಾಯಕ್ಕಾಗಿ ಅವಲಂಬಿಸಿರುವ ಕೃಷಿರಹಿತ ರೈತರಿಗೆ ಮತ್ತು ಸರ್ಕಾರಿ ಭೂಮಿಯಲ್ಲಿ ಆಶ್ರಯಕ್ಕಾಗಿ ಮನೆ ಕಟ್ಟಿಕೊಂಡಿರುವ ಈ ನಿರಾಶ್ರಿತರಿಗೆ ಅಕ್ರಮ ಸಕ್ರಮ ಯೋಜನೆಯಡಿ ಹಕ್ಕು ಪತ್ರ ನೀಡಲು ಸರ್ಕಾರ ಅರ್ಜಿ ಆಹ್ವಾನ ಮಾಡಿತ್ತು.

ಕಂದಾಯ ಇಲಾಖೆಯಿಂದ ಬಗರ್ ಹುಕುಂ ವ್ಯವಸ್ಥೆಯಡಿ ಕೃಷಿ ಭೂಮಿಯ ಸಕ್ರಮಕ್ಕೆ ಫಾರಂ 57 ರಲ್ಲಿ ಅರ್ಜಿ ಸಲ್ಲಿಸಲು ಕೆಲವು ಕಂಡಿಷನ್ ಗಳನ್ನು ಹಾಕಿ ಅರ್ಹರಿಂದ ಅರ್ಜಿ ಆಹ್ವಾನ ಮಾಡಲಾಗಿತ್ತು, ತಂತ್ರಜ್ಞಾನದ ಸಹಾಯವನ್ನು ತೆಗೆದುಕೊಂಡು ಆ ಅರ್ಜಿಗಳ ಪರಿಶೀಲನೆ ಮಾಡಿ ಸಾಗುವಳಿ ಚೀಟಿ ವಿತರಣೆ ಮಾಡಲು ರಾಜ್ಯ ಸರ್ಕಾರ ಈ ವ್ಯವಸ್ಥೆ ಜಾರಿಗೊಳಿಸಿದೆ.

ಈ ಸುದ್ದಿ ಓದಿ:- 10 ವರ್ಷ ಪ್ರೀತಿಸಿ ಮದುವೆಯಾದರೂ ಭಾಗ್ಯಲಕ್ಷ್ಮಿ ನಟಿ ಸುಷ್ಮಾ ದಾಂಪತ್ಯದಲ್ಲಿ ಬಿ’ರುಕು, ಸ್ಯಾಂಡಲ್ ವುಡ್ ಖ್ಯಾತ ಡೈರೆಕ್ಟರ್ ಕೈ ಹಿಡಿದರು ಒಬ್ಬಂಟಿ ಜೀವನ

ಈ ಬಗ್ಗೆ ಕಂದಾಯ ಸಚಿವರು ಇಂದು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅದೇನೆಂದರೆ, ಮೊದಲನೇ ಹಂತದಲ್ಲಿ 50,000 ಅರ್ಜಿಗಳ ಪರಿಶೀಲನೆ ನಡೆದಿದ್ದು ಮೊದಲನೇ ಹಂತದಲ್ಲಿ 50,000 ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ಡಿಜಿಟಲ್ ಹಕ್ಕುಪತ್ರ ವಿತರಣೆ (Digital Propery paper) ಮಾಡುವುದಾಗಿ ಕಂದಾಯ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

ಅಕ್ರಮ ಸಕ್ರಮ ಯೋಜನೆಗೆ ರಾಜ್ಯದ ಲಕ್ಷಾಂತರ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದರಲ್ಲಿ ಅನೇಕರು ಅನರ್ಹರರಾಗಿದ್ದರೂ ಕೂಡ ಸರ್ಕಾರಕ್ಕೆ ವಂಚಿಸಿ ಭೂಮಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎನ್ನುವುದು ತಿಳಿದು ಬಂದಿದೆ.

ಇದಕ್ಕೆಲ್ಲ ಕಡಿವಾಣ ಹಾಕಿ ಸರ್ಕಾರದ ಭೂಮಿಯನ್ನು ರಕ್ಷಿಸಿ ಅರ್ಹರಿಗೆ ಮಾತ್ರ ಯೋಜನೆ ತಲುಪುವಂತೆ ಮಾಡಲು ಬಹಳ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಸರ್ಕಾರ ವಿಧಿಸಿರುವ ಕಂಡಿಷನ್ ಪೂರೈಸಿ ಅರ್ಹರಾಗಿರುವ ಅರ್ಜಿಗಳನ್ನು ತಂತ್ರಜ್ಞಾನದ ಸಹಾಯದಿಂದ ಪರಿಶೀಲಿಸಿ ಅನುಮೋದನೆ ನೀಡಲು ಕಂದಾಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ ಮತ್ತು ಶೀಘ್ರವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ.

ಈ ಸುದ್ದಿ ಓದಿ:-ಮಕರ ರಾಶಿಯವರಿಗೆ ಮೇ 1 ರಿಂದ ಗುರುಬಲ ಬರಲಿದೆ ಇದರಿಂದ ಎಷ್ಟೆಲ್ಲಾ ಲಾಭಗಳು ಸಿಗಲಿದೆ ನೋಡಿ.!

1980ರಲ್ಲಿ ಆದ ಆದೇಶದಂತೆ ಭೂಮಿ ಹಿಡಿದು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲಾಗದ ರೈತರು ಕಳೆದ 15 ವರ್ಷದಿಂದ ಆ ಭೂಮಿಯನ್ನು ಕೃಷಿ ಕಾರಣಕ್ಕಾಗಿ ಬಳಸುತ್ತಿದ್ದರೆ ಅಥವಾ ವಾಸಸಲು ಉಪಯೋಗಿಸುತ್ತಿದ್ದರೆ ಅಂತಹ ಫಲಾನುಭವಿಗಳಿಂದ ಮಾತ್ರ 1991 ರ ರಾಜ್ಯ ಸರ್ಕಾರದಿಂದ ಕರ್ನಾಟಕ ಭೂ ಕಂದಾಯ ಕಾಯಿದೆ 1964 ಅನ್ವಯ.

1991 ರಲ್ಲಿ ನಮೂನೆ 50 ರಲ್ಲಿ ಮತ್ತು 1999 ರಲ್ಲಿ ನಮೂನೆ 53 ರಲ್ಲಿ 2018 ರಲ್ಲಿ ನಮೂನೆ 57 ರಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕೃಷಿ ಭೂಮಿಯ ಸಕ್ರಮಕ್ಕೆ ಫಾರಂ 57 ರಲ್ಲಿ ಅರ್ಜಿ ಸಲ್ಲಿಸಲು ಕಳೆದ ಸೆಪ್ಟೆಂಬರ್ ವರೆಗೆ ಅವಕಾಶ ಮಾಡಿಕೊಡಲಾಗಿತ್ತು. 15 ವರ್ಷಗಳಿಂದ ಸಾಗುವಳಿ ಮಾಡುತ್ತಿರುವವರಿಗೆ ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿತ್ತು.

ಈ ಹಿಂದೆ ನಮೂನೆ 50,53 ಮತ್ತು 57 ರಲ್ಲಿ ಸಕ್ರಮಕ್ಕೆ ಅರ್ಜಿ ಸಲ್ಲಿಸಿದವರ ಅರ್ಜಿಯನ್ನು ಭೌತಿಕವಾಗಿ ಪರಿಶೀಲಿಸಿ ವಿಲೇವಾರಿ ಮಾಡಲಾಗುತ್ತಿತ್ತು. ಸತ್ಯಾಂಶ ಏನು ಎಂಬುದನ್ನು ಇಸ್ರೋ ಹಾಗೂ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಉಪಗ್ರಹ ಆಧಾರಿತ ಚಿತ್ರಗಳನ್ನು ಸಂಗ್ರಹಿಸಿ ಪತ್ತೆ ಮಾಡಲಾಗುತ್ತದೆ.

ಈ ಸುದ್ದಿ ಓದಿ:-ಮಾರ್ಚ್ 1 ರಿಂದ ಗೃಹಲಕ್ಷ್ಮಿ ಹಣ ಪಡೆಯಲು ಹೊಸ ರೂಲ್ಸ್, 6 ಮತ್ತು 7ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!

ಇದಕ್ಕಾಗಿ 15 ವರ್ಷಗಳ ಚಿತ್ರಗಳನ್ನು ಪಡೆದುಕೊಂಡು ಅನರ್ಹರಿಗೆ ಭೂಮಿ ಹೋಗಬಾರದು ಹಾಗೂ ಅರ್ಹರಿಗೆ ಅ’ನ್ಯಾ’ಯವಾಗಬಾರದು ಎಂಬ ಕಾರಣಕ್ಕಾಗಿ ಎರಡು ಸಂಸ್ಥೆಗಳ ಸ್ಯಾಟಲೈಟ್ ಚಿತ್ರಗಳನ್ನು ಪಡೆಯಲಾಗುತ್ತದೆ. ಅದರಲ್ಲಿ ಸರ್ವೆ ನಂಬರ್ ಮೂಲಕ ಎಷ್ಟು ವರ್ಷದಿಂದ ಉಳುಮೆ ಮಾಡಲಾಗುತ್ತಿದೆ ಎಂಬುದು ಪತ್ತೆ ಹಚ್ಚಿ.

ಉಪಗ್ರಹದ ಚಿತ್ರಗಳಲ್ಲಿ ಉಳುಮೆಯ ಮಾಹಿತಿ ಲಭ್ಯವಾಗದಿದ್ದಲ್ಲಿ ಅಂತಹ ಅರ್ಜಿಗಳನ್ನು ಮುಲಾಜಿಲ್ಲದೇ ರದ್ದು ಮಾಡಲಾಗುತ್ತದೆ ಈಗಾಗಲೇ ಅರ್ಜಿ ಪರಿಶೀಲನೆ ಯಾಕೆ ಅನುಮೋದನೆ ಆಗಿರುವ 50,000 ಫಲಾನುಭವಿಗಳಿಗೆ ಕೂಡಲೇ ಮೊದಲ ಹಂತದಲ್ಲಿ ಡಿಜಿಟಲ್ ಹಕ್ಕಿನ ಪತ್ರ ವಿತರಣೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.

Useful Information
WhatsApp Group Join Now
Telegram Group Join Now

Post navigation

Previous Post: 10 ವರ್ಷ ಪ್ರೀತಿಸಿ ಮದುವೆಯಾದರೂ ಭಾಗ್ಯಲಕ್ಷ್ಮಿ ನಟಿ ಸುಷ್ಮಾ ದಾಂಪತ್ಯದಲ್ಲಿ ಬಿ’ರುಕು, ಸ್ಯಾಂಡಲ್ ವುಡ್ ಖ್ಯಾತ ಡೈರೆಕ್ಟರ್ ಕೈ ಹಿಡಿದರು ಒಬ್ಬಂಟಿ ಜೀವನ
Next Post: ಈ 3 ವಸ್ತುಗಳನ್ನು ದಾನ ಮಾಡಿದರೆ ಕಷ್ಟಗಳು ನಿಮ್ಮನ್ನೇ ಹುಡುಕಿ ಬರುತ್ತವೆ ಎಚ್ಚರ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore