ಮನೆಯಲ್ಲಿರುವಂತಹ ಮಹಿಳೆಯರಿಗೆ ಮನೆಗಳಲ್ಲಿ ಅನುಸರಿಸು ವಂತಹ ಕೆಲವೊಂದಷ್ಟು ಸುಲಭವಾದಂತಹ ಹೆಚ್ಚಿನ ಕೆಲಸಕ್ಕೆ ಉಪಯೋಗವಾಗುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಲು ಬೇರೆಯವರನ್ನು ಕೇಳುತ್ತಿರುತ್ತಾರೆ.
ಆದರೆ ಈ ದಿನ ಬೇರೆಯವರನ್ನು ಕೇಳುವುದರ ಬದಲು ನಾವೇ ಈ ಕೆಲವು ಉಪಾಯಗಳನ್ನು ಮಾಡಿ ಕೊಳ್ಳುವುದರಿಂದ ನಮ್ಮ ಮನೆಯಲ್ಲಿ ಬಹಳ ಉತ್ತಮವಾದಂತಹ ಕೆಲಸ ಕಾರ್ಯಗಳು ನಡೆಯುತ್ತದೆ ಎಂದೇ ಹೇಳಬಹುದು.
ಹಾಗಾದರೆ ಮನೆಯಲ್ಲಿರುವಂತಹ ಮಹಿಳೆಯರು ಯಾವ ಕೆಲವು ವಸ್ತುಗಳು ನಮಗೆ ಕೆಲಸಕ್ಕೆ ಬರುವುದಿಲ್ಲ ಎಂದು ಆಚೆ ಹಾಕುತ್ತಿರುತ್ತಾರೋ ಅವುಗಳನ್ನು ಮತ್ತೆ ಪುನರ್ ಬಳಕೆ ಮಾಡಿಕೊಳ್ಳುವುದರ ಮೂಲಕ ಅದನ್ನು ಮಹತ್ವವಾದ ಕೆಲಸಗಳಿಗೆ ಬಳಸಿಕೊಳ್ಳಬಹುದು. ಹಾಗಾದರೆ ಈ ದಿನ ಮನೆಯಲ್ಲಿರುವಂತಹ ಕೆಲವೊಂದಷ್ಟು ಪದಾರ್ಥ ಗಳನ್ನು ನಾವು ಆಚೆ ಬಿಸಾಡುತ್ತಿದ್ದರೆ ಅದನ್ನು ಹೇಗೆ ಮತ್ತೆ ಬಳಸಿಕೊಳ್ಳ ಬಹುದು ಎಂದು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:-ಅಡ ಇಟ್ಟ ಚಿನ್ನವನ್ನು ಶೀಘ್ರವಾಗಿ ಬಿಡಿಸಲು ಈ ಮಂತ್ರ ಒಮ್ಮೆ ಹೇಳಿಸಾಕು.!
* ಮೊದಲನೆಯದಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಉಪಯೋಗಿಸದೆ ಇರುವಂತಹ ಹಲವಾರು ಮಾತ್ರೆಗಳು ಇರುತ್ತದೆ. ಅದನ್ನು ಕೆಲವೊಂದಷ್ಟು ಜನ ಆಚೆ ಬಿಸಾಡುತ್ತಿರುತ್ತಾರೆ, ಆದರೆ ಇನ್ನು ಮುಂದೆ ಬಿಸಾಡುವ ಅವಶ್ಯಕತೆ ಇಲ್ಲ ಬದಲಿಗೆ ಇದು ಬಹಳ ಪ್ರಮುಖ ವಾದ ಕೆಲಸಕ್ಕೆ ಬರುತ್ತದೆ. ಹಾಗಾದರೆ ಅದನ್ನು ಹೇಗೆ ಉಪಯೋಗಿಸು ವುದು ಎಂದು ನೋಡುವುದಾದರೆ ಮೊದಲು ಎಲ್ಲಾ ಮಾತ್ರೆಗಳನ್ನು ಒಂದು ಪೇಪರ್ ಮೇಲೆ ಹಾಕಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು.
ಆನಂತರ ಅದಕ್ಕೆ ಒಂದು ಲೋಟ ನೀರನ್ನು ಹಾಕಿ ಒಂದು ಚಮಚ ಕೋಲ್ಗೇಟ್ ಪೇಸ್ಟ್ ಅಥವಾ ಯಾವುದೇ ಪೇಸ್ಟ್ ಇದ್ದರೂ ಸಹ ಅದನ್ನು ಅದರಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಒಂದು ಸ್ಪ್ರೇ ಬಾಟಲ್ ನಲ್ಲಿ ಹಾಕಿ ಆ ಒಂದು ನೀರನ್ನು ನಿಮ್ಮ ಅಡುಗೆಮನೆಯ ಸೆಲ್ಫ್ ಮೇಲೆ ಹಾಗೂ ಸ್ಟವ್ ಮೇಲ್ಭಾಗಕ್ಕೆ ಹಾಕಿ.
ಈ ಸುದ್ದಿ ಓದಿ:-ಬೇರೆಯವರು ವಡವೆ ಬಟ್ಟೆಗಳನ್ನು ಯಾವ ಕಾರಣಕ್ಕೂ ಹೀಗೆ ಮಾಡದೆ ಧರಿಸಬಾರದು ಇಲ್ಲಾಂದ್ರೆ ದೋಷಗಳು ತೊಂದರೆಗಳು ಕಾಡುತ್ತೆ…..||
ಸ್ವಚ್ಛ ಮಾಡಿಕೊಳ್ಳುವುದರಿಂದ ಅಡುಗೆ ಮನೆಯಲ್ಲಿ ಓಡಾಡುವಂತಹ ಜಿರಳೆಗಳನ್ನು ದೂರ ಮಾಡ ಬಹುದು. ಇದರಲ್ಲಿ ಇರುವಂತಹ ವಾಸನೆಯೂ ಜಿರಳೆಗಳಿಗೆ ಕಿರಿಕಿರಿ ಉಂಟುಮಾಡುತ್ತದೆ. ಆದ್ದರಿಂದ ಇದನ್ನು ಈವಿಧವಾಗಿ ಉಪಯೋಗಿಸು ವುದರಿಂದ ಜಿರಳೆಗಳ ಹಾವಳಿಯನ್ನು ತಪ್ಪಿಸಬಹುದು.
* ಬೇಸಿಗೆಕಾಲದ ಸಮಯದಲ್ಲಿ ಎಷ್ಟೇ ಗಾಳಿ ಬಂದರು ಅದು ಬಿಸಿಯಿಂದ ಕೂಡಿರುತ್ತದೆ ಆದರೆ ಅದನ್ನು ತಪ್ಪಿಸಬೇಕು ಎಂದರೆ ಒಂದು ಕಾಟನ್ ಬೆಡ್ ಶೀಟ್ ಅಥವಾ ಟವಲ್ ತೆಗೆದುಕೊಂಡು ಅದನ್ನು ತಣ್ಣೀರಿನಲ್ಲಿ ತೊಳೆದು ಅದನ್ನು ನಿಮ್ಮ ಕಿಟಕಿಯಲ್ಲಿ ಕರ್ಟನ್ ಹಾಕುವಂತಹ ಜಾಗಕ್ಕೆ ಹಾಕಿ ಎಲ್ಲಾ ಕಿಟಕಿಯನ್ನು ತೆಗೆದರೆ ಬರುವಂತಹ ಗಾಳಿ ತಣ್ಣನೆ ಬೀಸುತ್ತದೆ. ಹೌದು ಬಟ್ಟೆಯಲ್ಲಿರುವಂತಹ ತಣ್ಣಗಿನ ಅಂಶ ಗಾಳಿಯ ಮೂಲಕ ಒಳಗಡೆ ಬರುತ್ತದೆ ಇದರಿಂದ ನಮಗೆ ಎಸಿ ಹಾಕಿದ ಅನುಭವವೇ ಉಂಟಾಗುತ್ತದೆ.
* ಬೇಸಿಗೆ ಕಾಲದಲ್ಲಿ ವೀಳ್ಯದೆಲೆಯನ್ನು ಹೆಚ್ಚು ದಿನಗಳ ತನಕ ಇಟ್ಟು ಕೊಳ್ಳಲು ಸಾಧ್ಯವಾಗುವುದಿಲ್ಲ ಅಂತಹ ಸಂದರ್ಭದಲ್ಲಿ ಒಂದು ಅಲ್ಯುಮಿನಿಯಂ ಪೇಪರ್ ತೆಗೆದುಕೊಂಡು ಅದರ ಒಳಗಡೆ ವೀಳ್ಯದೆಲೆ ಇಟ್ಟು ಅದರ ಮೇಲೆ ಮತ್ತೆ ಒಂದು ಅಲ್ಯೂಮಿನಿಯಂ ಪೇಪರ್ ಇಟ್ಟು ಗಾಳಿ ಆಡದೆ ಇರುವ ಹಾಗೆ ಮಾಡಿ ಫ್ರಿಡ್ಜ್ ನಲ್ಲಿ ಇಡುವುದರಿಂದ ಹೆಚ್ಚು ದಿನಗಳವರೆಗೆ ಚೆನ್ನಾಗಿರುತ್ತದೆ.
ಈ ಸುದ್ದಿ ಓದಿ:-ಮಂಗಳಸೂತ್ರದಲ್ಲಿ ಇವು ಇರಲೇಬಾರದು.!
* ಬೇಸಿಗೆ ಕಾಲದಲ್ಲಿ ಗಿಡಗಳಿಗೆ ಎಷ್ಟೇ ನೀರನ್ನು ಹಾಕಿದರು ಅದು ಬೇಗ ಒಣಗುತ್ತಾ ಇರುತ್ತದೆ ಅಂತಹ ಸಂದರ್ಭದಲ್ಲಿ ತೆಂಗಿನ ನಾರುಗಳನ್ನು ಗಿಡದ ಬುಡಕ್ಕೆ ಹಾಕಿ ನೀರನ್ನು ಹಾಕುವುದರಿಂದ ಗಿಡದ ಬುಡದಲ್ಲಿ ನೀರಿನ ಅಂಶ ಸದಾ ಕಾಲ ಇರುತ್ತದೆ ತೆಂಗಿನ ನಾರಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವಂತಹ ಶಕ್ತಿ ಇರುವುದರಿಂದ ಗಿಡದ ಬೇರುಗಳು ಬೇಗನೆ ಒಣಗುವುದಿಲ್ಲ ಗಿಡ ಚೆನ್ನಾಗಿರುತ್ತದೆ.