Friday, June 9, 2023
HomeEntertainmentತಮ್ಮ ಯುವರಾಜ್ ಮದುವೆಯಾಗಿ 4 ವರ್ಷವಾದ್ರು, ಅಣ್ಣ ವಿನಯ್ ಯಾಕಿನ್ನು ಮದುವೆಯಾಗಿಲ್ಲ ಗೊತ್ತ.? ಇಷ್ಟು ದಿನ...

ತಮ್ಮ ಯುವರಾಜ್ ಮದುವೆಯಾಗಿ 4 ವರ್ಷವಾದ್ರು, ಅಣ್ಣ ವಿನಯ್ ಯಾಕಿನ್ನು ಮದುವೆಯಾಗಿಲ್ಲ ಗೊತ್ತ.? ಇಷ್ಟು ದಿನ ಮುಚ್ಚಿಟಿದ್ದ ಗುಟ್ಟು ಬಯಲು ಅಸಲಿ ಸತ್ಯ ಇಲ್ಲಿದೆ ನೋಡಿ.!

ಕರ್ನಾಟಕ ರತ್ನ ಡಾ ರಾಜಕುಮಾರ್ ಹಾಗೂ ಅವರ ಕುಟುಂಬ ಎಂದರೆ ಕನ್ನಡಿಗರಿಗೆ ಎಲ್ಲಿಲ್ಲದ ಅಭಿಮಾನ ಅವರ ಅವರ ಕುಟುಂಬವು ಕನ್ನಡ ಚಿತ್ರರಂಗದಲ್ಲಿ ನೀಡಿರುವ ಕೊಡುಗೆಯು ಅಷ್ಟಿಷ್ಟಲ್ಲ. ರಾಜಕುಮಾರ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಎಲ್ಲರೂ ಸಿನಿಮಾ ರಂಗದಲ್ಲಿ ಇದ್ದಾರೆ. ಅದರಲ್ಲೂ ರಾಜಕುಮಾರ ಅವರ ಎರಡನೇಯ ಮಗನಾದ ರಾಘವೇಂದ್ರ ರಾಜಕುಮಾರ್ ಹಾಗೂ ಅವರ ಇಬ್ಬರ ಮಕ್ಕಳು ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ವಿನಯ್ ರಾಜಕುಮಾರ ತಮ್ಮನ್ನು ಕನ್ನಡ ಚಿತ್ರರಂಗದಲ್ಲಿ ಚಿಕ್ಕವಯ್ಸಿನಲ್ಲಿಯೇ ತೊಡಗಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅನುರಾಗದ ಅಲೆಗಳು, ಆಕಸ್ಮಿಕ, ಒಡಹುಟ್ಟಿದವರು ಈ ಚಿತ್ರಗಳಲ್ಲಿ ವಿನಯ್ ರಾಜಕುಮಾರ್ ಅವರು ಬಾಲ ನಟನಾಗಿ ಪಾತ್ರವನ್ನು ಮಾಡಿದ್ದಾರೆ ವಿನಯ್ ರಾಜಕುಮಾರ ಅವರು ಸಿದ್ದಾರ್ಥ್ ಚಿತ್ರದಲ್ಲಿ ನಾಯಕನಟನಾಗಿ ಮೊದಲು ಅಭಿನಯಿಸಿದ್ದಾರೆ.

ರನ್ ಆಂಟೋನಿ, ಆರ್ ದಿ ಕಿಂಗ್ ಇವೆಲ್ಲವೂ ವಿನಯ್ ರಾಜಕುಮಾರ್ ಅವರ ಚಿತ್ರಗಳಾಗಿವೆ. ಇನ್ನು ವಿನಯ್ ರಾಜಕುಮಾರ್ ಅವರು ಈಗಾಗಲೇ ಇವರಿಗೆ 30 ವರ್ಷ ಕಳೆದರೂ ಇನ್ನೂ ವಿವಾಹವನ್ನು ಮಾಡಿಕೊಂಡಿಲ್ಲ ಎಂಬುವುದು ಅಭಿಮಾನಿಗಳ ಪ್ರಶ್ನೆಯಾಗಿದೆ. ವಿನಯ್ ರಾಜಕುಮಾರ್ ಅವರ ತಮ್ಮನಾದ ಯುವ ರಾಜಕುಮಾರ್ ಅವರಿಗೆ ಈಗಾಗಲೇ 25 ವರ್ಷಕ್ಕೆ ಶ್ರೀದೇವಿ ಭೈರಪ್ಪ ಎನ್ನುವವರನ್ನು ಮದುವೆಯಾಗಿದ್ದಾರೆ.

ತಮ್ಮ ಮದುವೆಯಾದರು ಅಣ್ಣನಾದ ವಿನಯ್ ರವರು ಮದುವೆಯಾಗಿಲ್ಲ ಇನ್ನೂ ಏಕೆ ಎಂಬುವುದು ಜನಗಳ ಕುತೂಹಲವಾಗಿದೆ. ತಮ್ಮನ ಮದುವೆಯಲ್ಲಿ ರನ್ ಆಂಟೋನಿ ಚಿತ್ರದ ನಾಯಕ ನಟಿಯಾದ ವೃಕ್ಷ ರವರ ಜೊತೆ ವಿನಯ್ ರವರ ಓಡಾಟವನ್ನು ನೋಡಿ ಜನರು ವಿನಯ್ ರವರು ವೃಕ್ಷಾರವರನ್ನು ಪ್ರೀತಿಸುತ್ತಿರಬಹುದು ಇವರು ಮುಂದೆ ಮದುವೆಯಾಗಬಹುದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅದಕ್ಕೆ ವಿನಯ್ ರಾಜಕುಮಾರ್ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ ನಾವಿಬ್ಬರು ಮದುವೆಯಾಗುತ್ತಿಲ್ಲ ನಾವು ಚಿತ್ರದ ಕೆಲಸಗಳಲ್ಲಿ ತೊಡಗಿದ್ದೇವೆ, ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಉತ್ತರಿಸಿದ್ದಾರೆ. ಇದಾದ ಬಳಿಕ ತಮಿಳು ಹಾಗೂ ಕನ್ನಡ ಚಿತ್ರರಂಗಗಳಲ್ಲಿ ಹೆಚ್ಚು ಅಭಿನಯಿಸಿರುವ ಪಾರ್ವತಿ ನಾಯರ್ ಅವರ ಹೆಸರು ಕೇಳಿಬಂದಿತು. ಪಾರ್ವತಿ ನಾಯರವರು ವಿನಯ್ ರವರ ಜೊತೆ ಓಡಾಡುತ್ತಿರುವುದು ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.

ಈ ಬಗ್ಗೆ ಪಾರ್ವತಿ ನಾಯರ್ ಅವರನ್ನು ವಿಚಾರಿಸಿದಾಗ, ಪರ್ವತಿಯವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ, ನಾವಿಬ್ಬರು ಸ್ನೇಹಿತರು ಹಾಗೂ ಕ್ಲಾಸ್ ಮೇಟ್ಸ್, ನಾವಿಬ್ಬರು ಸಿನಿಮಾಗಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಇವರಿಬ್ಬರ ಮಧ್ಯೆ ಯಾವುದೇ ತರಹದ ಪ್ರೀತಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ವಿನಯ್ ರಾಜಕುಮಾರ್ ಅವರನ್ನು ಪ್ರಶ್ನೆ ಮಾಡಿದಾಗ ನಾನು ಯಾರನ್ನು ಪ್ರೀತಿಸುತ್ತಿಲ್ಲ, ನನಗೆ ಯಾರು ಮೋಸ ಮಾಡಿಲ್ಲ, ಅವರೆಲ್ಲ ನನ್ನ ಸ್ನೇಹಿತರು ನಾವು ಸಿನಿಮಾಗಾಗಿ ಕೆಲಸ ಮಾಡುತ್ತಿದ್ದೇವೆ ಅಷ್ಟೇ ಎಂದು ಉತ್ತರ ನೀಡಿ, ಪ್ರೇಕ್ಷಕರ ಹಾಗೂ ಅಭಿಮಾನಿಗಳ ಗೊಂದಲಗಳಿಗೆ ಉತ್ತರವನ್ನು ನೀಡಿ ಅನುಮಾನಗಳಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ ವಿನಯ್ ರಾಜಕುಮಾರ್.

ಇದರ ಜೊತೆ ಮಾಧ್ಯಮದವರಿಗೆ ವಿನಯ್ ರಾಜಕುಮಾರ ಅವರ ಮದುವೆಯ ಬಗ್ಗೆ ಕುರಿತು ರಾಘವೇಂದ್ರ ರಾಜಕುಮಾರ್ ಅವರು ಹೀಗೆ ಹೇಳಿದ್ದಾರೆ. ಸದ್ಯಕ್ಕೆ ನನ್ನ ಮಗನಿಗೆ ಮದುವೆ ಮಾಡುವುದಿಲ್ಲ, ನನ್ನ ದೊಡ್ಡ ಮಗನ ಮೇಲೆ ಸಾಕಷ್ಟು ಜವಾಬ್ದಾರಿಗಳು ಇದೆ, ಡಾಕ್ಟರ್ ರಾಜ್ ಕುಮಾರ್ ಅವರ ಕನಸುಗಳನ್ನು ಇವನು ನೆರವೇರಿಸಬೇಕಾಗಿದೆ, ಸಾಲು ಸಾಲು ಸಿನಿಮಾಗಳನ್ನೂ ಮಾಡಬೇಕಾಗಿದೆ, ಹಾಗಾಗಿ ಸದ್ಯಕ್ಕೆ ವಿನಯ್ ರಾಜಕುಮಾರ್ ಅವರ ಮದುವೆಯ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದು ಹೇಳಿ ಸ್ಪಷ್ಟನೆಯನ್ನು ನೀಡಿದ್ದಾರೆ.