ಮನುಷ್ಯನಿಗೆ ನಾನಾ ರೀತಿಯ ಕನಸುಗಳು ಬೀಳುತ್ತವೆ. ಕೆಲವರಿಗೆ ಅವರು ಯಾವ ವಿಷಯದ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಿರುತ್ತಾರೋ ಅದಕ್ಕೆ ಸಂಬಂಧಿಸಿದ ಕನಸುಗಳು ಬೀಳುತ್ತವೆ ಅಥವಾ ನಮಗೆ ಯಾವ ವಿಚಾರವಾಗಿ ಹೆಚ್ಚು ಭ’ಯ ಇರುತ್ತೋ ಆ ವಿಚಾರಗಳು ಕೂಡ ಕನಸುನಲ್ಲಿ ಬರುತ್ತವೆ ನಾವು ಮಲಗುವಾಗ ಯಾವ ವಿಚಾರದ ಬಗ್ಗೆ ಮಾತನಾಡಿದ್ದೇವೆ ಆ ವಿಚಾರಗಳು ಕೂಡ ಕನಸಿನಲ್ಲಿ ಬರುತ್ತದೆ.
ಸ್ವಪ್ನ ಶಾಸ್ತ್ರ ಎನ್ನುವುದಿದೆ ಕೆಲವು ವಸ್ತುಗಳು ಕನಸಿನಲ್ಲಿ ಕಂಡರೆ ಸ್ವಪ್ನ ಶಕುನಗಳು ಎನ್ನಲಾಗುತ್ತದೆ. ಈ ಶಕುನಗಳ ಪ್ರಕಾರವಾಗಿ ಕೆಲವೊಂದು ರೀತಿಯ ಕನಸುಗಳು ಬಿದ್ದರೆ ಅವು ಭವಿಷ್ಯದ ಬಗ್ಗೆ ಸೂಚನೆ ಕೊಡಲು ಬಂದಿರುತ್ತವೆ ಎಂದು ಅರ್ಥ. ಅದರ ಪ್ರಕಾರವಾಗಿ ಕನಸಿನಲ್ಲಿ ದೇವರು ಕಂಡರೆ ಏನು ಎನ್ನುವ ವಿಚಾರದ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಸಿಂಹ ರಾಶಿಯವರ ಮಾರ್ಚ್ ತಿಂಗಳ ಮಾಸ ಭವಿಷ್ಯ, ಈ ತಿಂಗಳಲ್ಲಿ ನಿಮಗೆ ಬಲ ಕೊಡುವುದು ಇದೊಂದೇ ಶಕ್ತಿ.!
ಕನಸಿನಲ್ಲಿ ಗಣೇಶ , ಅಮ್ಮನವರು, ಆಂಜನೇಯ, ಸಾಯಿಬಾಬಾ, ಗುರುಗಳು ಅಥವಾ ಪಾರ್ವತಿ ಪರಮೇಶ್ವರರು ಒಟ್ಟಿಗೆ ಸಾಕ್ಷಾತ್ ವಿಷ್ಣು ಮಹಾಲಕ್ಷ್ಮಿ , ಸರಸ್ವತಿ ಈ ರೀತಿ ಯಾವುದೇ ದೇವರು ಬರಬಹುದು ಅಥವಾ ನಿಮ್ಮ ಕುಲದೇವರು ಇಷ್ಟ ದೇವರು ಯಾವುದೇ ದೇವರ ಸ್ವರೂಪ ಕನಸಿನಲ್ಲಿ ಕಾಣಿಸಬಹುದು.
ಈ ರೀತಿ ಯಾವುದೇ ದೇವರು ಕನಸಿನಲ್ಲಿ ಬಂದರೂ ಕೂಡ ಅದಕ್ಕೆ ಇರುವುದು ಒಂದೇ ಅರ್ಥ. ನಿಮ್ಮ ಶುಭಕಾಲ ಶುರು ಆಗಿದೆ ನೀವು ಜೀವನದಲ್ಲಿ ಒಳ್ಳೆಯ ದಾರಿಯಲ್ಲಿ ನಡೆಯುತ್ತಿದ್ದೀರಿ ಎನ್ನುವುದೇ ಇದರ ಅರ್ಥ. ನಾವು ಒಳ್ಳೆ ವಿಚಾರಗಳನ್ನು ಮಾತನಾಡುತ್ತಿದ್ದರೆ ಬದುಕಿನಲ್ಲಿ ಒಳ್ಳೆಯ ರೀತಿ ನಡೆದುಕೊಳ್ಳುತ್ತಿದ್ದರೆ ಒಳ್ಳೆಯವರಾಗಿದ್ದರೆ ಮಾತ್ರ ಸಕಾರಾತ್ಮಕ ಶಕ್ತಿಗಳ ಬಗ್ಗೆ ಆಲೋಚನೆ ಬರುತ್ತದೆ, ಕನಸು ಬೀಳುತ್ತದೆ.
ಈ ಸುದ್ದಿ ಓದಿ:- ಅರಿಶಿಣದಿಂದ ಈ ಚಿಕ್ಕ ಕೆಲಸ ಮಾಡಿದರೆ, ಗಿರವಿ ಇಟ್ಟಿರೋ ಚಿನ್ನವನ್ನು 3 ದಿನದಲ್ಲಿ ತರಬಹುದು.!
ಆ ಪ್ರಕಾರವಾಗಿ ನೀವು ಸರಿಯಾಗಿ ಬದುಕುತಿದ್ದೀರಿ ಎನ್ನುವುದರ ಸೂಚನೆಯನ್ನು ಈ ಮೂಲಕ ಕೊಡಲಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಇದರ ಜೊತೆಗೆ ಬಹಳ ದಿನದಿಂದ ನೀವು ಯಾವುದೋ ಒಂದು ಕಷ್ಟದಲ್ಲಿ ಸಿಲುಕಿಕೊಂಡು ಅದನ್ನು ಪರಿಹಾರ ಮಾಡುವಂತೆ ದೇವರಿಗೆ ಪೂಜೆ ಮಾಡುತ್ತಿದ್ದರೆ ಅದಕ್ಕಾಗಿ ವ್ರತ ಮಾಡುತ್ತಿದ್ದರೆ ಹರಕೆ ಕಟ್ಟಿಕೊಂಡಿದ್ದರೆ.
ಈ ರೀತಿ ಸಮಯದಲ್ಲಿ ದೇವರು ನಿಮ್ಮ ಕನಸಿನಲ್ಲಿ ಬಂದಿದ್ದರೆ ದೇವರು ನಿಮ್ಮ ಸಮಸ್ಯೆಯನ್ನು ಆಲಿಸಿದ್ದಾರೆ ಮತ್ತು ನಿಮ್ಮ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಲಿದ್ದಾರೆ ನೀವು ನಿಮ್ಮ ದೇವತಾ ಕಾರ್ಯಗಳನ್ನು ಮುಂದುವರಿಸಬಹುದು ಎನ್ನುವುದಕ್ಕೆ ನೀಡಿರುವ ಸೂಚನೆ ಎಂದು ಹೇಳಲಾಗುತ್ತದೆ ಮತ್ತು ತಾಯಿ ಮಹಾಲಕ್ಷ್ಮಿ ಏನಾದರೂ ಕನಸಿನಲ್ಲಿ ಕಾಣಿಸಿದರೆ ನಿಮಗೆ ಅನಿರೀಕ್ಷಿತ ಧನಲಾಭ ಅಥವಾ ಯಾವುದಾದರೂ ಮೂಲದಿಂದ ನಿಮಗೆ ಶುಭ ಸುದ್ದಿ ಬರುತ್ತದೆ ಎಂದೇ ಅರ್ಥ.
ಈ ಸುದ್ದಿ ಓದಿ:- 30 ವರ್ಷಗಳಿಂದ ತರಕಾರಿ ಮಾರುತಿದ್ದ ಅಜ್ಜಿ ಹೇಳಿದ ಗುಟ್ಟು, ಫ್ರಿಡ್ಜ್ ಬೇಡ, ಕರೆಂಟ್ ಬೇಡ, ಈ ರೀತಿ ಮಾಡಿದರೆ 1 ತಿಂಗಳಾದರು ತರಕಾರಿ ಬಾಡುವುದಿಲ್ಲ.!
ಅಮ್ಮನವರು ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡಿದ್ದರು ಮುಂದೆ ಬರುವ ಅಥವಾ ನಿಮಗೆ ಕಷ್ಟ ಇರುವ ವಿಷಯದ ಬಗ್ಗೆ ಧೈರ್ಯಗೆಡಬೇಡಿ ದೇವಿ ನಿಮ್ಮ ಜೊತೆಯಲ್ಲಿ ಇದ್ದಾರೆ ಎಂದು ಅರ್ಥ ಅನಾರೋಗ್ಯದಲ್ಲಿ ಇರುವವರಿಗೆ ಮಾರುತಿ ಕನಸಿನಲ್ಲಿ ಕಂಡರೆ ನಿಮ್ಮ ಖಾಯಿಲೆ ಗುಣವಾಗುತ್ತದೆ ನೀವು ಮೊದಲಿನಂತೆ ಸ್ವಾಸ್ಥರಾಗುತ್ತೀರಿ ಎನ್ನುವುದರ ಸೂಚನೆ ಎಂದು ಅರ್ಥ ಮಾಡಿಕೊಳ್ಳಬೇಕು.
ನೀವು ನಿಮ್ಮ ಕನಸಿನಲ್ಲಿ ಯಾವುದೇ ದೇವರನ್ನು ಕಂಡರೂ ಅದರ ಬಗ್ಗೆ ಯೋಚನೆ ಬರುತ್ತಿರುತ್ತದೆ. ಆಗ ನೀವು ಯಾವುದೇ ಗೊಂದಲಕ್ಕೆ ಒಳಗಾಗದೆ ಸಾಧ್ಯವಾದರೆ ಆ ದೇವರ ದೇವಸ್ಥಾನಕ್ಕೆ ಹೋಗಿ ಬನ್ನಿ ಎಲ್ಲವೂ ಒಳ್ಳೆಯದೇ ಆಗುತ್ತದೆ. ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದಿದ್ದರೆ ನೀವು ಕನಸಿನಲ್ಲಿ ಕಂಡ ದೇವರ ಹೆಸರಿನ್ನು ಹೇಳಿ ಮನೆಯಲ್ಲಿ ದೇವರ ದೀಪ ಹಚ್ಚಿ ಪೂಜೆ ಮಾಡಿ ದೇವರ ಅನುಗ್ರಹ ಸಂಪೂರ್ಣವಾಗಿ ಸಿಗುತ್ತದೆ.