ನಾವು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕೆಲವು ವಸ್ತುಗಳು ನಮಗೆ ಸಿಗುತ್ತವೆ. ನಮ್ಮ ಜೊತೆ, ನಮಗಿಂತ ಮುಂಚೆ ನಾಲ್ಕು ಜನ ಮಾತನಾಡಿಕೊಂಡು ಬರುತ್ತಿದ್ದರೂ ಕೂಡ ಅವರು ನಮ್ಮ ಮುಂದೆ ಹಾದು ಹೋಗಿದ್ದರು ಅವರ ಕಣ್ಣಿಗೆ ಬೀಳದ ವಸ್ತುಗಳು ನಮ್ಮ ಕಣ್ಣಿಗೆ ಕಾಣಿಸುತ್ತವೆ.
ಆಗ ನಾವು ಅದನ್ನು ಗುರುತಿಸಿ ಇದು ನಮ್ಮ ಕಣ್ಣಿಗೆ ಯಾಕೆ ಕಾಣಿಸಿತು ಏನೋ ಸೂಚನೆ ಇರಬೇಕು ಎಂದು ಯೋಚಿಸುತ್ತಾ ಆಶ್ಚರ್ಯದೊಂದಿಗೆ ಸಂತೋಷ ಪಡುತ್ತೇವೆ. ಆದರೆ ರಸ್ತೆಯಲ್ಲಿ ಈ ರೀತಿ ಯಾವ ವಸ್ತುಗಳು ಸಿಗಬಹುದು, ಸಿಗಬಾರದು, ಬೆಲೆ ಬಾಳುವ ವಸ್ತುಗಳಾದ ಬೆಳ್ಳಿ ಬಂಗಾರ ರಸ್ತೆಯಲ್ಲಿ ಸಿಕ್ಕರೆ ಏನು ಫಲ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ನೀವೇನಾದರೂ ರಸ್ತೆಯಲ್ಲಿ ಹೋಗುವಾಗ ನಿಮ್ಮ ಕಣ್ಣಿಗೆ ಬಂಗಾರ ಕಾಣಿಸಿದರೆ ಖಂಡಿತವಾಗಿಯೂ ಅದನ್ನು ಯಾರಾದರೂ ಬೀಳಿಸಿಕೊಂಡು ಹೋಗಿರುತ್ತಾರೆ. ಹೆಚ್ಚಿನ ಸಮಯದಲ್ಲಿ ಮಹಿಳೆಯರ ಒಡವೆಗಳು ಬಿದ್ದು ಹೋಗಿರುತ್ತವೆ ಅದರಲ್ಲೂ ಮಾಂಗಲ್ಯ ಸರ ಮುಂತಾದ ಪವಿತ್ರವಾದ ವಸ್ತುಗಳು ಬಿದ್ದು ಹೋಗಿದ್ದರೆ ಅದು ಸಿಕ್ಕಿದಾಗ ತೆಗೆದುಕೊಳ್ಳಿ ಆದರೆ ಮತ್ತೆ ಅವರು ಅದನ್ನು ಹುಡುಕಿಕೊಂಡು ಬರುತ್ತಿದ್ದರೆ ಅವರನ್ನು ಪರೀಕ್ಷಿಸಿ ನಿಜವಾಗಿಯೂ ಅದು ಅವರದ್ದೇ ಆಗಿದ್ದರೆ ಕೊಟ್ಟುಬಿಡಿ.
ಯಾವುದೇ ಕಾರಣಕ್ಕೂ ಬೇರೆಯವರ ಮಂಗಳಸೂತ್ರವಾಗಲಿ ಅಥವಾ ಇನ್ಯಾವುದೇ ಬಂಗಾರದ ಒಡವೆ ಆಗಿದ್ದರು ನಿಜವಾಗಿ ಅದು ಅವರದ್ದೇ ಆಗಿದ್ದರೆ ಅವರಿಗೆ ಮೋಸ ಮಾಡಿ ನಿಮ್ಮ ಬಳಿ ಇಟ್ಟುಕೊಳ್ಳಬೇಡಿ. ಒಂದು ವೇಳೆ ಯಾರು ಸಿಗಲೇ ಇಲ್ಲ ನಿಮ್ಮ ಕೈಗೆ ಈಗ ಒಡವೆ ಸಿಕ್ಕಿದೆ ಎಂದರೆ ನೀವು ಅದನ್ನು ತೆಗೆದುಕೊಂಡು ಯಾವುದಾದರೂ ದೇವಸ್ಥಾನಕ್ಕೆ ಅರ್ಪಿಸಿ ಯಾಕೆಂದರೆ ಸಿಕ್ಕ ಬಂಗಾರವನ್ನು ಮನೆಗೆ ತೆಗೆದುಕೊಂಡು ಹೋಗುವುದರಿಂದ ಕುಟುಂಬದ ಸದಸ್ಯರಿಗೆ ಕಷ್ಟಗಳು ಬರುತ್ತವೆ ಆ ಮನೆ ಏಳಿಗೆ ಆಗುವುದಿಲ್ಲ ಎಂದು ಹೇಳುತ್ತದೆ ಶಾಸ್ತ್ರ.
ಅದೇ ರೀತಿಯಾಗಿ ಬೆಳ್ಳಿಯ ಕಾಲ್ಗೆಜ್ಜೆ ಅಥವಾ ಬೆಳ್ಳಿಯ ಸರ ಉಂಗುರ ಬೆಳ್ಳಿಯ ಉಡುದಾರ ಮುಂತಾದ ವಸ್ತುಗಳು ಸಿಕ್ಕರೆ ಅದು ನಿಮಗೆ ಶುಭ ಹಾಗು ಅಶುಭ ಯಾವುದೇ ರೀತಿಯ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ನೀವು ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗುವುದರ ಬದಲು ಯಾರಾದರೂ ಕ’ಷ್ಟದಲ್ಲಿರುವವರಿಗೆ ಅದನ್ನು ಕೊಟ್ಟುಬಿಡಿ ಅಥವಾ ಅದನ್ನು ಕೊಡುವುದರ ಜೊತೆಗೆ ನಿಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ.
ಆಗ ನಿಮಗೂ ಒಳ್ಳೆಯದಾಗುತ್ತದೆ, ತೆಗೆದುಕೊಂಡವರಿಗೂ ಸಹಾಯವಾಗುತ್ತದೆ ಮತ್ತು ಕಳೆದುಕೊಂಡವರಿಗೆ ಪರೋಕ್ಷವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗೆ ನಿಮಗೆ ಏನಾದರೂ ತಾಮ್ರದ ಪದಾರ್ಥಗಳು ಸಿಕ್ಕರೆ ಅದು ಬಹಳ ಶುಭ ಸೂಚನೆ ಆಗಿದೆ. ಅವು ನಿಮ್ಮ ಜೀವನದಲ್ಲಿ ಒಳ್ಳೆಯ ಸಂಗತಿಗಳು ಘಟಿಸುತ್ತವೆ ಎನ್ನುವುದನ್ನು ನೀಡುವ ಮುನ್ಸೂಚನೆಗಳಾಗಿವೆ.
ಮತ್ತು ಕಬ್ಬಿಣದ ವಸ್ತುಗಳು ಸಿಕ್ಕರೆ ಅದರಲ್ಲೂ ಹಸು ಹಾಗೂ ಕುದುರೆ ಕಾಲಿಗೆ ಕಟ್ಟಿರುವ ಕಬ್ಬಿಣದ ಲಾಳ ಸಿಕ್ಕರೆ ನೀವು ಬಹಳ ಬೇಗ ಆರ್ಥಿಕ ಅಭಿವೃದ್ಧಿ ಹೊಂದುತ್ತೀರಿ ನಿಮ್ಮ ಜೀವನದಲ್ಲಿ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಶೀಘ್ರದಲ್ಲಿ ಉಂಟಾಗಿ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳು ಪರಿಹಾರ ಆಗಿ ಬಹಳ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಿರಿ ಎನ್ನುವುದನ್ನು ಸೂಚಿಸುವ ಶಕುನವಾಗಿದೆ.
ಈ ರೀತಿ ತಾಮ್ರ ಅಥವಾ ಕಬ್ಬಿಣದ ವಸ್ತುಗಳು ಸಿಕ್ಕಾಗ ಅದನ್ನು ಮನೆ ಮುಂಭಾಗದಲ್ಲಿರುವ ಯಾವುದಾದರೂ ಗಿಡದ ಬುಡದಲ್ಲಿ ಹಾಕಿ ಮಣ್ಣನ್ನು ಮುಚ್ಚಿ. ಒಂದು ವೇಳೆ ಹಣ ಸಿಕ್ಕಿದರೆ ಕ’ಷ್ಟದಲ್ಲಿರುವವರಿಗೆ ಸಹಾಯ ಮಾಡಲು ಬಳಸಿಕೊಳ್ಳಿ.