ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ದಿನನಿತ್ಯ ದೇವರಿಗೆ ಪೂಜೆ ಮಾಡುವಂತಹ ಪದ್ಧತಿ ಇದ್ದೇ ಇರುತ್ತದೆ. ಆದರೆ ಕೆಲಒಬ್ಬರ ಮನೆಯಲ್ಲಿ ವಾರಕ್ಕೆ ಒಮ್ಮೆಯಾದರೂ ಸಹ ದೇವರ ಪೂಜೆಯನ್ನು ಮಾಡುತ್ತಾರೆ. ಅದೇ ರೀತಿಯಾಗಿ ದೇವರ ಪೂಜೆ ಮಾಡಿದ ತಕ್ಷಣ ಅಂದರೆ ದೇವರ ಪೂಜೆಯನ್ನು ಮುಗಿಸಿದ ನಂತರ ದೇವರಿಗೆ ನಾವು ವಿಶೇಷವಾಗಿ ನೈವೇದ್ಯವನ್ನು ಇಡುತ್ತೇವೆ.
ಆ ನೈವೇದ್ಯದಲ್ಲಿ ಕಲ್ಲು ಸಕ್ಕರೆ ಆಗಿರಬಹುದು, ಹಾಲು ಕಲ್ಲು ಸಕ್ಕರೆ ಆಗಿರಬಹುದು, ಖರ್ಜೂರ ಹಣ್ಣು ಹಂಪಲು ಪಾಯಸ ಪಾನಕ ಹಾಗೂ ಪುಳಿಯೋಗರೆ ಕೂಡ ಆಗಿರಬಹುದು. ಹೀಗೆ ಯಾವುದೇ ರೀತಿಯ ಪೂಜೆ ಮಾಡಿದಂತಹ ಸಂದರ್ಭದಲ್ಲಿ ಅವರಿಗೆ ತಕ್ಕಂತೆ ಅಂದರೆ ಅವರ ಮನೆಯಲ್ಲಿ ಯಾವ ರೀತಿಯ ಪದ್ಧತಿ ಇರುತ್ತದೆಯೋ ಅದಕ್ಕೆ ಅನುಕೂಲವಾಗುವಂತೆ ಅವರು ದೇವರಿಗೆ ನೈವೇದ್ಯವನ್ನು ಇಡುತ್ತಾರೆ.
ಈ ಸುದ್ದಿ ಓದಿ:- ಪ್ಲಾಸ್ಟಿಕ್ ಮುರಿದ ಮಗ್ ಬಕೆಟ್ ಗಳನ್ನು ಜೋಡಿಸುವ ಸುಲಭ ವಿಧಾನ.!
ಅದೇ ರೀತಿಯಾಗಿ ನಾವು ಯಾವ ಒಂದು ದೇವರ ಪೂಜೆಯನ್ನು ಮಾಡುತ್ತಿರುತ್ತೇವೆ ಆ ದೇವರಿಗೆ ಇಷ್ಟವಾದಂತಹ ಬಹಳ ಪ್ರಿಯವಾಗಿರು ವಂತಹ ಕೆಲವೊಂದಷ್ಟು ಆಹಾರ ಪದಾರ್ಥಗಳನ್ನು ಸಹ ನಾವು ಆ ಒಂದು ದೇವರ ಪೂಜೆಯ ಸಂದರ್ಭದಲ್ಲಿ ನೈವೇದ್ಯವನ್ನು ಇಡುತ್ತೇವೆ.
ಇದ್ಯಾವುದೇ ನೈವೇದ್ಯದ ಪದಾರ್ಥಗಳು ಇಲ್ಲ ಎಂದರೂ ಸಹ ಕೆಲವೊಂದಷ್ಟು ಜನ ಸ್ವಲ್ಪ ಸಕ್ಕರೆ ಅಥವಾ ಬೆಲ್ಲದ ತುಂಡು ಇವುಗಳನ್ನಾದರೂ ಸಹ ದೇವರ ಮುಂದೆ ಇಟ್ಟು ದೇವರಿಗೆ ನೈವೇದ್ಯವನ್ನು ಮಾಡುತ್ತಾರೆ.
ಇಂತಹ ನೈವೇದ್ಯವನ್ನು ಇರುವೆಗಳು ತಿಂದರೆ ಒಳ್ಳೆಯದ ಅಥವಾ ಕೆಟ್ಟದ್ದ ಅಥವಾ ಇರುವೆಗಳು ಹೀಗೆ ತಿನ್ನುವುದರಿಂದ ಮುಂದಿನ ದಿನದಲ್ಲಿ ನಮಗೇನಾದರೂ ತೊಂದರೆ ಉಂಟಾಗುತ್ತದೆಯ ಎನ್ನುವ ಗೊಂದಲ ಪ್ರಶ್ನೆ ಕೆಲವೊಂದಷ್ಟು ಜನರಲ್ಲಿ ಇರುತ್ತದೆ. ಇಂತಹ ಕೆಲವೊಂದಷ್ಟು ಗೊಂದಲಗಳಿಗೆ ಪ್ರಶ್ನೆಗಳಿಗೆ ಉತ್ತರವನ್ನು ಈ ದಿನ ತಿಳಿಯೋಣ. ಅಂದರೆ ದೇವರ ನೈವೇದ್ಯವನ್ನು ಇರುವೆಗಳು ತಿಂದರೆ ಏನಾಗುತ್ತದೆ ಎನ್ನುವುದನ್ನು ನೋಡೋಣ.
ಈ ಸುದ್ದಿ ಓದಿ:- ಈ ಸಮಯದಲ್ಲಿ ಕಸ ಗುಡಿಸಿದರೆ 8 ವರ್ಷ ಕಷ್ಟ ತಪ್ಪೋಲ್ಲ.
ಅದಕ್ಕೂ ಮೊದಲು ಪ್ರತಿಯೊಂದೂ ದೇವಸ್ಥಾನದಲ್ಲೂ ಕೂಡ ಪ್ರಸಾದದ ರೂಪದಲ್ಲಿ ನಮಗೆಲ್ಲರಿಗೂ ಸಹ ಪ್ರಸಾದವನ್ನು ಕೊಡುತ್ತಿರುತ್ತಾರೆ. ಇದರ ಅರ್ಥ ಏನು ಹಾಗೂ ಇದನ್ನು ತಿನ್ನುವುದರಿಂದ ಏನೆಲ್ಲಾ ನಮಗೆ ಒಳ್ಳೆಯದಾಗುತ್ತದೆ ಎಂದು ನೋಡುವುದಾದರೆ.
ಸಾಮಾನ್ಯವಾಗಿ ನಾವು ಯಾವುದಾದರೂ ಒಂದು ದೇವಸ್ಥಾನಕ್ಕೆ ಹೋದಂತಹ ಸಂದರ್ಭ ದಲ್ಲಿ ಹಾಗೂ ಆ ಒಂದು ದಿನ ಏನಾದರೂ ವಿಶೇಷತೆ ಇದ್ದರೆ ದೇವಸ್ಥಾನ ದಲ್ಲಿ ನಮಗೆ ಪ್ರಸಾದವನ್ನು ಕೊಡುತ್ತಾರೆ. ಆಗ ನಾವು ಅದನ್ನು ಬಹಳ ಭಕ್ತಿಯಿಂದ ತೆಗೆದುಕೊಂಡು ದೇವರನ್ನು ನೆನಪಿಸಿಕೊಳ್ಳುತ್ತಾ ಅದನ್ನು ಪ್ರಸಾದವಾಗಿ ಸ್ವೀಕರಿಸುತ್ತೇವೆ.
ಈ ರೀತಿ ಅನುಸರಿಸುವುದು ಸಹಜ ಆದರೆ ಪ್ರಸಾದವನ್ನು ಏಕೆ ದೇವರಿಗೆ ಇಡುತ್ತಾರೆ ಹಾಗೂ ಅದನ್ನು ನಾವು ಏಕೆ ತಿನ್ನಬೇಕು ಎಂದು ನೋಡೋಣ ಅಷ್ಟಕ್ಕೂ ನೈವೇದ್ಯ ಎಂದರೆ ಮನಸ್ಸಿಗೆ ನಿರ್ಮಲವನ್ನು ನೀಡುವಂತದ್ದು ಅಂತ ಅರ್ಥ ಅದೇ ರೀತಿಯಾಗಿ ದೇವರ ಮುಂದೆ ಇಟ್ಟಂತಹ ಪ್ರಸಾದಕ್ಕೆ ಇರುವೆಗಳು ಮುತ್ತಿಕೊಂಡರೆ ನಮ್ಮ ಮನೆಯಲ್ಲಿ ಯಾವುದೇ ರೀತಿಯ ಸಾಲದ ಸಮಸ್ಯೆ ಇದ್ದರೂ ಸಹ ಅದು ದೂರವಾಗುತ್ತದೆ ಎನ್ನುವಂತಹ ಸೂಚನೆಯಾಗಿರುತ್ತದೆ.
ಈ ಸುದ್ದಿ ಓದಿ:- 3 ಪದಾರ್ಥ ಸಾಕು ಮಾರ್ಕೆಟ್ ನಲ್ಲಿ ಸಿಗುವ ಐಸ್ ಕ್ರೀಮ್ ಮನೆಯಲ್ಲೇ ರೆಡಿ ಮಾಡಬಹುದು.!
ಅಷ್ಟಕ್ಕೂ ದೇವರ ಮುಂದೆ ಇಟ್ಟಂತಹ ಪ್ರಸಾದ ವನ್ನು ನಾವು ಮರೆತು ಬಿಡಬಾರದು ಬದಲಿಗೆ ದೇವರ ಮುಂದೆ ಇಟ್ಟಂತಹ ನೈವೇದ್ಯವನ್ನು ಸ್ವಲ್ಪ ಹೊತ್ತು ಹಾಗೆ ಬಿಟ್ಟು ಆನಂತರ ನಾವು ಅದನ್ನು ಸೇವನೆ ಮಾಡಬೇಕು ಹಾಗೂ ಮನೆಯಲ್ಲಿರುವಂತಹ ಪ್ರತಿ ಯೊಬ್ಬರಿಗೂ ಕೂಡ ಅದನ್ನು ಪ್ರಸಾದದ ರೂಪದಲ್ಲಿ ಕೊಡಬೇಕು.
ಅದರ ಬದಲು ಅಯ್ಯೋ ನಾನು ಇಟ್ಟಂತಹ ನೈವೇದ್ಯಕ್ಕೆ ಇರುವೆಗಳು ಮುತ್ತಿಕೊಂಡಿದಿಯಲ್ಲ ಎಂದು ಯೋಚಿಸಬಾರದು. ಮೇಲೆ ಹೇಳಿದಂತೆ ಇದರಿಂದ ನಿಮಗೆ ಮತ್ತಷ್ಟು ಒಳ್ಳೆಯದಾಗುತ್ತದೆ ಹಾಗೂ ನಮ್ಮನ್ನು ಕಾಡುತ್ತಿರುವಂತಹ ಸಕಲ ದಾರಿದ್ರ್ಯಗಳು ಸಹ ದೂರವಾಗುತ್ತದೆ ಎನ್ನುವುದರ ಅರ್ಥ ಇದಾಗಿರುತ್ತದೆ.