ಅಭಿಷೇಕ್ ಹೆಂಡ್ತಿ ಅವಿವಾ ಕಾಲಿಗೆ ಬಿದ್ದು ಅಂಬರೀಶ್ ಹೆಸರಿಗೆ & ಕುಟುಂಬದ ಗೌರವಕ್ಕೆ ಯಾವುದೇ ಕಾರಣಕ್ಕೂ ಧಕ್ಕೆ ತರಬೇಡ ಎಂದು ಕೇಳಿಕೊಂಡ ದರ್ಶನ್.!

 

ಅವಿವಾ ಮತ್ತು ಅಭಿಷೇಕ್ ಅಂಬರೀಶ್ ಮದುವೆ ಅದ್ದೂರಿಯಾಗಿ ನಡೆದಿದೆ. ನಂತರ ಪ್ರತ್ಯೇಕವಾಗಿ ಸಿನಿಮಾ ರಂಗದವರು ಹಾಗೂ ಕುಟುಂಬದ ಆತ್ಮೀಯರಿಗಾಗಿ ಪ್ರತ್ಯೇಕ ಪಾರ್ಟಿ ಏರ್ಪಡಿಸಲಾಗಿತ್ತು. ಈ ಪಾರ್ಟಿಯಲ್ಲಿ ಸಿನಿಮಾ ರಂಗಕ್ಕೆ ಸಂಬಂಧ ಪಟ್ಟ ಅನೇಕರು ಬಂದಿದ್ದರು. ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಾಲಾಶ್ರೀ, ರಾಕ್ ಲೈನ್ ವೆಂಕಟೇಶ್ ಅವರು ಸೇರಿದಂತೆ ಇಂಡಸ್ಟ್ರಿಯ ಎಲ್ಲಾ ಗಣ್ಯರು ಈ ಪಾರ್ಟಿಯಲ್ಲಿ ಸೇರಿದ್ದರು.

ಈಗ ಎಲ್ಲರೆದುರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅವಿವಾ ಅವರ ಎದುರು ಮಂಡಿಯೂರಿ ಕೆಲವು ಮಾತುಗಳನ್ನು ಕೇಳಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಡಿ ಬಾಸ್ ಸಿಂಪ್ಲಿಸಿಟಿ ಹಾಗೂ ಡೌನ್ ಟು ಅರ್ಥ್ ಗುಣದ ಬಗ್ಗೆ ಮತ್ತು ಅಂಬಿ ಕುಟುಂಬದ ಮೇಲೆ ದರ್ಶನ್ ಅವರು ಇಟ್ಟಿರುವ ಅಭಿಮಾನದ ಬಗ್ಗೆ ಮತ್ತೊಮ್ಮೆ ಎಲ್ಲರೂ ಮಾತನಾಡುತ್ತಿದ್ದಾರೆ.

ಅಂಬರೀಷ್ ಹಾಗೂ ದರ್ಶನ್ ಅವರ ನಡುವೆ ಒಂದು ಆತ್ಮೀಯವಾದ ಸಂಬಂಧ ಇತ್ತು. ಅಂಬರೀಶ್ ಅವರು ದರ್ಶನ್ ಅವರನ್ನು ಸ್ವಂತ ಮಗನಂತೆ ಭಾವಿಸಿದ್ದರು. ಜೊತೆಗೆ ದರ್ಶನ್ ಅವರ ಕುಟುಂಬಕ್ಕೆ ಸಂಬಂಧಪಟ್ಟ ಹಾಗೆ ಅನೇಕ ವಿಚಾರಗಳು ಆದಾಗ ಮಧ್ಯಸ್ಥಿಕೆ ವಹಿಸುತ್ತಿದ್ದರು. ಯಾರ ಮಾತಿಗೂ ಬಗ್ಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೆಬಲ್ ಸ್ಟಾರ್ ಮಾತಿಗೆ ಮರು ಮಾತಾಡದೆ ಅದನ್ನು ಒಪ್ಪುತ್ತಿದ್ದರು.

ಅವರಾದ ಬಳಿಕ ಸುಮಲತಾ ಅವರನ್ನು ಸಹ ಅಷ್ಟೇ ಗೌರವಿಸುತ್ತಿದ್ದರು. ಸುಮಲತಾ ಅವರು ಮಂಡ್ಯದಲ್ಲಿ ಎಲೆಕ್ಷನ್ ನಿಂತ ವೇಳೆ ಅವರಿಗೆ ಜೊತೆಯಾಗಿ ದರ್ಶನ್ ಮತ್ತು ಯಶ್ ಅವರು ಸಾತ್ ನೀಡಿದ್ದರು. ಆ ಸಮಯದಲ್ಲಿ ಸುಮಲತಾ ಅವರು ದರ್ಶನ್ ಅವರು ನನ್ನ ಮೊದಲನೇ ಮಗ ಎನ್ನುವ ಹೇಳಿಕೆಯನ್ನು ಕೊಟ್ಟಿದ್ದರು.

ಇದೀಗ ಮದುವೆ ಆದ ಬಳಿಕ ನಡೆದ ಪಾರ್ಟಿಯಲ್ಲೂ ಕೂಡ ಅಂಬಿ ಮಾಮ ಕುಟುಂಬದ ಮೇಲೆ ತಾವಿಟ್ಟಿರುವ ಪ್ರೀತಿ ಏನು ಅನ್ನುವುದನ್ನು ದರ್ಶನ್ ಅವರು ಮತ್ತೊಮ್ಮೆ ಕುಟುಂಬದ ಸೊಸೆಗೆ ಹೇಳಿದ್ದಾರೆ. ಈ ಕುಟುಂಬವು ನನ್ನ ಕುಟುಂಬ ಇದ್ದಂತೆ ನನ್ನ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇದ್ದರೂ ನನ್ನ ಬಳಿ ಹೇಳು ನೀನು ಅಮ್ಮನ ಬಳಿ ಹೇಳದಿದ್ದರೂ ಕೂಡ ಅಭಿಷೇಕ್ ಮೇಲೆ ಏನೇ ಕಂಪ್ಲಿಟ್ ಇದ್ದರು ನನ್ನ ಬಳಿ ಹೇಳು.

ಅದನ್ನು ಎಲ್ಲೂ ಆಚೆಗೆ ತರಬೇಡ ಅವನು ತಪ್ಪು ಮಾಡಿದ್ದಾದರೇ ಅವನನ್ನು ಪೀಸ್ ಪೀಸ್ ಮಾಡುವ ಜವಾಬ್ದಾರಿ ನನ್ನದು. ಆದರೆ ಯಾವುದೇ ಕಾರಣಕ್ಕೂ ರೆಬಲ್ ಸ್ಟಾರ್ ಎನ್ನುವ ಹೆಸರಿಗೆ ದಕ್ಕೆ ಬರಬಾರದು ಅವಿವಾಅಭಿ ಆಗುವುದು ಸುಲಭ ಆದರೆ ಅಭಿಷೇಕ್ ಅಂಬರೀಶ್ ಎಂದು ಹೆಸರು ಮಾಡುವುದು ಬಹಳ ಕಷ್ಟ.

ಈ ಜವಾಬ್ದಾರಿಯನ್ನು ಈಗ ನೀನು ಕಿರೀಟದಂತೆ ಹೊತ್ತಿದ್ದೀಯ ದಯಮಾಡಿ ಇದನ್ನೆಲ್ಲಾ ಅರ್ಥ ಮಾಡಿಕೋ ಎಂದು ಅವಿವಾ ಎದುರು ಮಂಡಿಯೂರಿ ದರ್ಶನ್ ಅವರು ಕೇಳಿಕೊಂಡಿದ್ದಾರೆ. ಇವರು ಈ ರೀತಿ ಮಾಡುತ್ತಿದ್ದಂತೆ ಭಾವುಕರಾದ ಅವಿವಾ ಅವರು ಸಹ ದರ್ಶನ್ ಅವರ ಎದುರು ಮಂಡಿಯೂರಿ ಕುಳಿತುಕೊಂಡಿದ್ದಾರೆ. ನಂತರ ಇವರಿಬ್ಬರ ಮಧ್ಯೆಬಂದ ರಾಕಿಂಗ್ ಸ್ಟಾರ್ ಯಶ್ ಅವರು ಸಹ ಜೋಡಿ ಬಗ್ಗೆ ಹಾಗೂ ಕುಟುಂಬದ ಬಗ್ಗೆ ಮಾತುಗಳನ್ನು ಆಡಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗಿದ್ದು ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Leave a Comment