Friday, June 9, 2023
HomeDevotionalನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇಲ್ಲವೇ, ವಿದ್ಯಾರ್ಜನೆಯಲ್ಲಿ ಅಡಚಣೆಯೇ, ಏಕಾಗ್ರತೆಯಲ್ಲಿ ಕೊರತೆಯೇ ಈ ದೇವಾಲಯಕ್ಕೆ ಭೇಟಿ...

ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇಲ್ಲವೇ, ವಿದ್ಯಾರ್ಜನೆಯಲ್ಲಿ ಅಡಚಣೆಯೇ, ಏಕಾಗ್ರತೆಯಲ್ಲಿ ಕೊರತೆಯೇ ಈ ದೇವಾಲಯಕ್ಕೆ ಭೇಟಿ ಒಮ್ಮೆ ಭೇಟಿ ನೀಡಿ. ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತದೆ.

 

ವಿದ್ಯೆಗೆ ಅಧಿಪತಿ ವಿನಾಯಕ ಮತ್ತು ತಾಯಿ ಸರಸ್ವತಿಯು ವಿದ್ಯಾದೇವತೆ ಎನ್ನುವುದು ನಮಗೆ ಗೊತ್ತಿದೆ. ಹಾಗೆಯೇ ವಿಷ್ಣುವಿನ ಒಂದು ಅವತಾರ ಕೂಡ ವಿದ್ಯೆ ಹಾಗೂ ಜ್ಞಾನಕ್ಕೆ ಹೆಸರಾಗಿದೆ. ವಿಷ್ಣುವು ಆರಂಭ ಕಾಲದಲ್ಲಿ ಎತ್ತಿದ ಹಯಗ್ರೀವ ಅವತಾರವನ್ನು ಜ್ಞಾನ ಮತ್ತು ಬುದ್ಧಿವಂತಿಕೆಯ ಅವತಾರ ಎಂದೇ ನಂಬಲಾಗಿದೆ. ಶ್ವೇತ ವರ್ಣದ ಕುದುರೆಯ ಮುಖವನ್ನು ಮತ್ತು ಮಾನವನ ದೇಹವನ್ನು ಅವತಾರದಲ್ಲಿ ವಿಷ್ಣು ಹೊಂದಿದ್ದಾರೆ.

ಜ್ಞಾನ ಮತ್ತು ಬುದ್ಧಿವಂತಿಕೆಯಿಂದ ರಕ್ಕಸರನ್ನು ಸಂಹಾರ ಮಾಡಿ ವೇದಗಳನ್ನು ವಾಪಸ್ಸು ಪಡೆದ ಕಾರಣದಿಂದ ಈ ಖ್ಯಾತಿ ಬಂದಿದೆ. ಕಥೆಯ ಹಿನ್ನೆಲೆ ಏನೆಂದರೆ ಪ್ರಳಯ ಆದ ನಂತರ ಶ್ರೀ ವಿಷ್ಣು ಮತ್ತೆ ಭೂಮಿಯನ್ನು ಸೃಷ್ಟಿಸುವ ಕಾರಣಕ್ಕಾಗಿ ನಾಭಿ ಮೂಲಕ ಬ್ರಹ್ಮನನ್ನು ಸೃಷ್ಟಿಸಿ ಅವರಿಗೆ ವೇದಗಳು ಮತ್ತು ಅವುಗಳ ಸಾರವನ್ನೆಲ್ಲಾ ತಿಳಿಸಿ ಮುಂದಿನ ಸೃಷ್ಟಿಯ ಜವಾಬ್ದಾರವನ್ನು ಕೊಟ್ಟಿದ್ದರು. ಕಾಲ ಕ್ರಮೇಣ ಬ್ರಹ್ಮನಿಗೆ ಇದರ ಬಗ್ಗೆ ಅಹಂಕಾರ ಬರುತ್ತದೆ.

ಆಗ ಮಹಾವಿಷ್ಣುವೇ ಮಧು ಮತ್ತು ಕೈಟಭ ಎನ್ನುವ ರಾಕ್ಷಸರನ್ನು ಕಿವಿ ಧೂಳಿನಿಂದ ಸೃಷ್ಟಿಸುತ್ತಾರೆ ಆ ರಾಕ್ಷಸರು ಬ್ರಹ್ಮನಿಂದ ವೇದಗಳನ್ನು ಕದ್ದು ಪಾತಾಳ ಲೋಕಕ್ಕೆ ಹೋಗಿ ಅಡಗಿ ಕೊಳ್ಳುತ್ತಾರೆ. ಅದರಿಂದ ಬ್ರಹ್ಮ ದೇವರಿಗೆ ಸೃಷ್ಟಿಕಾರ್ಯ ಮುಂದುವರಿಸಲು ಆಗುವುದಿಲ್ಲ. ಬ್ರಹ್ಮದೇವರು ವಿಷ್ಣುವಿನ ಬಳಿ ತೆರಲಿ ತಮ್ಮ ಕಷ್ಟವನ್ನು ಹೇಳಿಕೊಂಡು ಸಹಾಯ ಕೇಳುತ್ತಾರೆ.

ಆಗ ಪ್ರಸನ್ನರಾದ ವಿಷ್ಣುವೇ ಈ ಹಯಗ್ರೀವ ಅವತಾರ ತಾಳಿ ಪಾತಾಳ ಲೋಕದತ್ತ ಮುಖವನ್ನು ಮಾಡಿ ಜೋರಾಗಿ ಉಸಿರೆಳೆದು ಕೊಂಡಾಗ ಮಧು ಮತ್ತು ಕೈಟಭ ರಾಕ್ಷಸರು ವೇದದ ಸಮೇತ ಮೇಲೆ ಬರುತ್ತಾರೆ. ಲಕ್ಷ್ಮಿ ಸಮೇತರದ ಹಯಗ್ರೀವರು ಅವರ ಸಂಹಾರ ಮಾಡಿ ವೇದಗಳನ್ನು ಬ್ರಹ್ಮರಿಗೆ ಹಿಂತಿರುಗಿಸುತ್ತಾರೆ. ಬುದ್ಧಿವಂತಿಕೆಯಿಂದ ಈ ಕಾರ್ಯ ಜಯಿಸಿದ ಕಾರಣ ಬುದ್ಧಿವಂತಿಕೆ ಮತ್ತು ಜ್ಞಾನದ ಅವತಾರ ಎಂದು ಈ ಅವತಾರವನ್ನು ಭಾವಿಸಲಾಗಿದೆ. ಹಯಗ್ರೀವ ಅವತಾರದಲ್ಲಿ ವಿಷ್ಣು ವನ್ನು ಪೂಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ ಎನ್ನುವುದನ್ನು ನಂಬಲಾಗಿದೆ.

ಹಯಗ್ರೀವರ ಶಕ್ತಿಶಾಲಿ ಮಂತ್ರವಾದ ಜ್ಞಾನಾನಂದಮಯಂ ದ್ವಂದ್ವ ನಿರ್ಮಲ ಸ್ಫಟಿಕಾಕೃತಿಂ। ಆಧಾರಂ ಸರ್ವವಿದ್ಯಾನಾಮ್ ಹಯಗ್ರೀವಂ ಉಪಾಸ್ರಹೇ॥ ಈ ಶ್ಲೋಕವನ್ನು ಪ್ರತಿದಿನವೂ ವಿದ್ಯಾಭ್ಯಾಸ ಆರಂಭಿಸುವ ಮುನ್ನ ಹೇಳುವುದರಿಂದ ಅವರು ವಿದ್ಯೆಯಲ್ಲಿ ಕೀರ್ತಿಗಳಿಸುತ್ತಾರೆ ಹಾಗೂ ಅಪಾರಜ್ಞಾನವನ್ನು ಸಂಪಾದನೆ ಮಾಡಲು ಅವರಿಗೆ ಶಕ್ತಿ ಬರುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿರುವ ಒಂದು ಹಯಗ್ರೀವ ದೇವಾಲಯವು ಕೂಡ ಹೀಗೆ ವಿದ್ಯೆ ಮತ್ತು ವಿದ್ಯಾರ್ಥಿಗಳಿಂದ ಬಹಳ ಫೇಮಸ್ ಆಗಿದೆ.

ಪ್ರತಿದಿನವೂ ಈ ದೇವಾಲಯಕ್ಕೆ ನೂರಾರು ವಿದ್ಯಾರ್ಥಿಗಳು ಭೇಟಿ ಕೊಡ್ತಾರೆ. ಅದರಲ್ಲೂ ಪರೀಕ್ಷೆ ಸಮಯದಲ್ಲಂತೂ ಭಕ್ತಾದಿಗಳ ಸಂಖ್ಯೆ ಇನ್ನೂ ಹೆಚ್ಚಿರುತ್ತದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಈ ದೇವಾಲಯಕ್ಕೆ ಹಾಲ್ ಟಿಕೆಟ್ ದೇವಸ್ಥಾನ ಎಂದು ಕೂಡ ಹೆಸರಾಗಿದೆ. ಲಕ್ಷ್ಮಿ ಸಮೇತವಾಗಿ ಹಯಗ್ರೀವ ದೇವರು ಬೆಂಗಳೂರಿನ ಮೆಜೆಸ್ಟಿಕ್ ಅಲ್ಲಿ ನೆಲೆಸಿದ್ದಾರೆ.

ಇಲ್ಲಿ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಬಂದು ತಮ್ಮ ಹಾಲ್ ಟಿಕೆಟ್ ಪೂಜೆ ಮಾಡಿಸಿಕೊಂಡು ಹೋದರೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಾರೆ ಹಾಗೂ ಅವರು ಓದಿರುವುದೆಲ್ಲಾ ನೆನಪಿಗೆ ಬರುತ್ತದೆ ಎನ್ನುವ ನಂಬಿಕೆ ಇದೆ ಮತ್ತು ಪ್ರತಿ ಗುರುವಾರ ಈ ದೇವಾಲಯದಲ್ಲಿ 46 ಏಲಕ್ಕಿಗಳನ್ನು ಪೋಣಿಸಿರುವ ಹಾರವನ್ನು ತಂದು ಹಯಗ್ರೀವನಿಗೆ ಅರ್ಪಿಸಿ ಈ ಮೇಲೆ ತಿಳಿಸಲಾದ ಆ ಶ್ಲೋಕವನ್ನು ಹೇಳುತ್ತಾ ಪ್ರದಕ್ಷಿಣೆ ಹಾಕುವುದರಿಂದ ಕೂಡ ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಬರುತ್ತದೆ ಎನ್ನುವ ಪ್ರತೀತಿ ಇದೆ.

ಪ್ರತಿ ಗುರುವಾರ ಈ ದೇವಾಲಯದಲ್ಲಿ ದೇವರಿಗೆ ಜೇನುತುಪ್ಪ ಅಭಿಷೇಕ ಮಾಡುತ್ತಾರೆ. ಅದನ್ನು ಪ್ರಸಾದವಾಗಿ ಸ್ವೀಕರಿಸಿ ವಿದ್ಯಾರ್ಥಿಗಳು 48 ದಿನಗಳವರೆಗೆ ಪ್ರತಿದಿನ ಮುಂಜಾನೆ ಭಕ್ತಿಯಿಂದ ಮೇಲಿನ ಶ್ಲೋಕವನ್ನು ಹೇಳುತ್ತಾ ಇದನ್ನು ಸ್ವೀಕರಿಸಿದರೆ ಅವರು ಓದಿನಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ. ಲಕ್ಷ್ಮಿ ಸಮೇತ ಹಯಗ್ರೀವ ನೆಲೆಸಿರುವ ಈ ದೇವಾಲಯಕ್ಕೆ ಭೇಟಿ ಕೊಡುವುದರಿಂದ ವಿದ್ಯೆ ಜೊತೆ ಸಂಪತ್ತು ಕೂಡ ಪ್ರಾಪ್ತಿಯಾಗುತ್ತದೆ. ಆದ್ದರಿಂದ ತಪ್ಪದೇ ಒಮ್ಮೆ ಈ ದೇವಾಲಯಕ್ಕೆ ಭೇಟಿ ಕೊಡಿ.