Sunday, May 28, 2023
HomePublic Vishyaಭಕ್ತರಿಗೆ ಉಚಿತ ಮನೆ ಕೊಡುವ ಪ್ರಪಂಚದ ಏಕೈಕ ದೇವಸ್ಥಾನ ಇದು.!

ಭಕ್ತರಿಗೆ ಉಚಿತ ಮನೆ ಕೊಡುವ ಪ್ರಪಂಚದ ಏಕೈಕ ದೇವಸ್ಥಾನ ಇದು.!

ಭಾರತ ದೇಶದಲ್ಲಿ ಜನರು ಅನೇಕ ವಿಷಯಗಳಿಗಾಗಿ ದೇವರಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಮದುವೆ ಮನೆ ಮಕ್ಕಳು ಈ ವಿಚಾರಗಳಿಗೆ ದೇವಸ್ಥಾನಕ್ಕೆ ಹೋಗಿ ಹರಕೆ ಮಾಡಿಕೊಂಡು ಇದು ನೆರವೇರಿದ ಬಳಿಕ ಹರಕೆಯನ್ನು ತೀರಿಸುತ್ತಾರೆ. ಆದರೆ ದಕ್ಷಿಣ ಕೊರಿಯಾದಲ್ಲಿರುವ ಈ ದೇವಸ್ಥಾನದಲ್ಲಿ ಒಂದು ವಿಚಿತ್ರ ಆಚರಣೆ ಇದೆ. ಅದೇನೆಂದರೆ, ಮನೆಗಾಗಿ ಹರಕೆ ಕಟ್ಟಿಕೊಳ್ಳುವವರಿಗೆ ಹರಕೆ ತೀರಿಸಿದ ಬಳಿಕ ಮನೆ ನೀಡಲಾಗುತ್ತದೆ.

ದೇವಸ್ಥಾನದ ಆಡಳಿತ ವರ್ಗವೇ ಹರಕೆ ತೀರಿಸಿದವರು ಕೇಳಿದ ಜಾಗದಲ್ಲಿ ಐಷಾರಾಮಿ ಮನೆ ಕಟ್ಟಿಸಿ ಕೊಡುತ್ತಾರೆ. ಇದುವರೆಗೆ ಭಾರತದ ಒಬ್ಬರು ಸೇರಿದಂತೆ 634 ಮಂದಿ ಈ ರೀತಿ ಮನೆಗಳನ್ನು ಪಡೆದಿದ್ದಾರೆ ಆದರೆ 8000 ಮಂದಿ ಈ ಹರಕೆಯನ್ನು ತಿಳಿಸಲಾಗದೆ ವಿಫಲರಾಗಿದ್ದಾರೆ ಮತ್ತು 250 ಮಂದಿ ಹರಕೆ ತಿಳಿಸುವಾಗ ಆರೋಗ್ಯ ಸಮಸ್ಯೆಯಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಆದರೆ ಇದು ಯಾವ ದೇವರ ಹರಕೆ, ಈ ದೇವಸ್ಥಾನದಲ್ಲಿರುವ ದೇವರು ಯಾವುದು? ಹರಕೆ ತೀರಿಸುವ ನಿಯಮದಲ್ಲಿ ಇರುವ ಆ ಕಟ್ಟುನಿಟ್ಟಿನ ಪದ್ಧತಿ ಏನು ಎನ್ನುವುದರ ಬಗ್ಗೆ ಆಸಕ್ತಿ ಇದ್ದರೆ ಈ ಅಂಕಣವನ್ನು ಪೂರ್ತಿ ಓದಿ ತಿಳಿದುಕೊಳ್ಳಿ. ಸೌತ್ ಕೊರಿಯಾದಲ್ಲಿ ಇರುವ ಪುರಾಣ ಪ್ರಸಿದ್ಧ ದೇವಸ್ಥಾನ ಇದಾಗಿದೆ. ಈ ದೇವಸ್ಥಾನದ ಹೆಸರು ಸಂಮ್ಗಾಸ್ಕಾನ್ ದುಸೇ ಒನಸ್ಕಾ ಟೆಂಪಲ್ ಇದು ಕೊರಿಯನ್ ಭಾಷೆ ಹೆಸರಾಗಿದೆ ಕನ್ನಡದಲ್ಲಿ ಇದಕ್ಕೆ ಅರ್ಥ ಸಾಮ್ರಾಟ್ ಮಹರಾಜ ದೇವಸ್ಥಾನ ಎಂದು.

ಒಂದರ್ಥದಲ್ಲಿ ಈ ದೇವಸ್ಥಾನ ಕೋರಿಯನ್ ದೇಶದ ಎಲ್ಲ ದೇವಸ್ಥಾನಗಳ ಸಾಮ್ರಾಟ ಎಂದೇ ಹೇಳಬಹುದು. ಯಾಕೆಂದರೆ ದೇವಸ್ಥಾನ ಸುಮಾರು 25 ಎಕರೆಗಳಿಗಿಂತ ದೊಡ್ಡದಾಗಿದ್ದು, ದಿನವೊಂದಕ್ಕೆ ಒಂದುವರೆ ಲಕ್ಷ ಜನ ಬಂದು ಇಲ್ಲಿ ಒಂದೇ ಸಮಯದಲ್ಲಿ ಧ್ಯಾನವನ್ನು ಮಾಡುತ್ತಾರೆ. ಈ ದೇವಸ್ಥಾನದಲ್ಲಿ ಎರಡು ದೇವರಗಳಿದ್ದಾರೆ, ಒಂದು ಭಗವಾನ್ ಬುದ್ಧ ಮತ್ತೊಂದು ಹಿಮೋಗಿಯ ಎನ್ನುವ ಸೌತ್ ಕೊರಿಯನ್ ದೇಶದ ದೇವರು.

ಈ ದೇವಸ್ಥಾನವು ಅಲ್ಲಿ ಮನೆ ಕೊಡುವ ದೇವಸ್ಥಾನ ಎಂದೆ ಫೇಮಸ್ ಆಗಿದೆ. ಯಾಕೆಂದರೆ ಯಾರಿಗಾದರೂ ಮನೆ ಇಲ್ಲದೆ ಇದ್ದ ಪಕ್ಷದಲ್ಲಿ ಈ ದೇವಸ್ಥಾನಕ್ಕೆ ಬಂದು ಅರ್ಜಿ ಹಾಕಿ ಮನೆ ಹರಕೆ ಹೊತ್ತುಕೊಂಡರೆ ಹರಕೆ ಮುಗಿದ ತಕ್ಷಣವೇ ಆಧುನಿಕ ವಿನ್ಯಾಸವುಳ್ಳ ಬೃಹತ್ ಬಂಗಲೆಯನ್ನು ಕೊಡುತ್ತಾರೆ. ಆದರೆ ಇದಕ್ಕಾಗಿ ಒಂದು ವರ್ಷಗಳ ಕಾಲ ಹರಕೆಯನ್ನು ತೀರಿಸುವ ನೀತಿ ನಿಯಮಗಳನ್ನು ಪಾಲಿಸಬೇಕು.

ಇದು ಎಷ್ಟು ಕಠಿಣವಾಗಿರುತ್ತದೆ ಎಂದರೆ ಒಂದು ವರ್ಷದವರೆಗೆ ಪದೇ ಪ್ರತಿದಿನವೂ ಬೆಳಗ್ಗೆ 4:30ಗೆ ಏಳಬೇಕು, ರಾತ್ರಿ ಹತ್ತರವರೆಗೆ ದೇವಸ್ಥಾನದಲ್ಲಿ ಸೇವೆ ಮಾಡಬೇಕು. ದೇವಸ್ಥಾನದ ಸ್ವಚ್ಛತೆಯಿಂದ ಹಿಡಿದು ಪ್ರತಿಯೊಂದು ಕೆಲಸವನ್ನು ಕೂಡ ನೋಡಿಕೊಳ್ಳಬೇಕು. ಸ್ವಚ್ಛತೆ ಹಾಳದ ಪಕ್ಷದಲ್ಲಿ ಹರಕೆಯ ಕಾಲಾವಧಿಯನ್ನು ಎರಡು ವರ್ಷಗಳ ಕಾಲ ಮತ್ತೆ ಹೆಚ್ಚಿಸಲಾಗುತ್ತದೆ.

ಇವರು ಚಪ್ಪಲಿ ಹಾಕುವಂತಿಲ್ಲ, ಹರಕೆ ಹೊತ್ತುಕೊಂಡು ಎರಡು ತಿಂಗಳ ಬಳಿಕ ಇವರ ತಲೆ ಕೂದಲನ್ನು ತೆಗೆಯುತ್ತಾರೆ. ಹರಕೆ ತಿರುವತನಕ ಇವರು ತಲೆಕೂದಲು ಬೆಳೆಸುವಂತಿಲ್ಲ. ಬಂಧುಗಳು ಸ್ನೇಹಿತರು ದೇವಸ್ಥಾನದ ಸಿಬ್ಬಂದಿ ಯಾರ ಜೊತೆಗೂ ಮಾತನಾಡುವಂತಿಲ್ಲ. ಏನನ್ನಾದರೂ ಹೇಳಬೇಕು ಎಂದರೆ ಅದನ್ನು ಕಾಗದ ರೂಪದಲ್ಲಿ ಬರೆದು ಹಾಕಬೇಕು ಮತ್ತು ಮಳೆ ಇರಲಿ ಚಳಿ ಇರಲಿ ಬಿಸಿಲಿರಲಿ ದೇವಸ್ಥಾನದ ಎದುರುಗಡೆ ಇರುವ ಖಾಲಿ ಮೈದಾನದಲ್ಲಿ ರಾತ್ರಿ ಹೊತ್ತು ಮಲಗಬೇಕು.

ಪ್ರತಿದಿನ ಎರಡು ಸಮಯದಲ್ಲಿ ಮಾತ್ರ ಬರಿ ಅನ್ನವನ್ನು ಆಹಾರವಾಗಿ ಕೊಡಲಾಗುತ್ತದೆ ಮತ್ತು ಇವರು ತಣ್ಣೀರಿನಲ್ಲಿಯೇ ಸ್ನಾನ ಮಾಡಬೇಕು ಮತ್ತು ಮೂರು ತಿಂಗಳುಗಳ ಕಾಲ ಭಿಕ್ಷೆ ಬೇಡಬೇಕು. ಅದರಲ್ಲಿ ಮೂರು ಭಾಗ ಮಾಡಿ ಒಂದು ಭಾಗವನ್ನು ಬಡವರಿಗೆ ಒಂದು ಭಾಗವನ್ನು ದೇವಸ್ಥಾನಕ್ಕೆ ಕೊಟ್ಟು ಮತ್ತೊಂದು ಭಾಗವನ್ನು ಮಾತ್ರ ಅವರು ಇಟ್ಟುಕೊಳ್ಳಬೇಕು. ಈ ಸಮಯದಲ್ಲಿ ಆರೋಗ್ಯ ವ್ಯತ್ಯಾಸ ಆದಾಗ ದೇವಸ್ಥಾನದ ಸಿಬ್ಬಂದಿ ನೇಮಿಸಿದವರೇ ಬಂದು ಚಿಕಿತ್ಸೆ ಕೊಡುತ್ತಾರೆ. ಈ ಕಟ್ಟುನಿಟ್ಟಿನ ನಿಯಮವನ್ನು ಪಾಲಿಸಿದ್ದೇ ಆದರೆ ಒಂದು ವರ್ಷ ತುಂಬಿದ ಬಳಿಕ ಇವರಿಗೆ ಅರಮನೆಂತಹ ಮನೆ ಸಿಗುತ್ತದೆ.