ನಿದ್ರೆ ಎನ್ನುವುದು ಮನುಷ್ಯನ ಜೀವನಕ್ಕೆ ಬಹಳಷ್ಟು ಮುಖ್ಯ. ನಮ್ಮ ಜೀವನದ 30% ಭಾಗವನ್ನು ನಾವು ನಿದ್ದೆಯಲ್ಲಿ ಕಳೆಯುತ್ತೇವೆ ಹಾಗೂ ಹಿಂದಿನ ದಿನದ ರಾತ್ರಿ ನಾವು ಹೇಗೆ ನಿದ್ದೆ ಮಾಡುತ್ತೇವೆ ಎನ್ನುವುದರ ಮೇಲೆ ಮರುದಿನದ ನಮ್ಮ ಚಟುವಟಿಕೆಗಳ ಆರೋಗ್ಯ ನಿರ್ಧಾರ ಆಗುತ್ತದೆ. ಹಾಗಾಗಿ ನೆಮ್ಮದಿಯಾಗಿ ನಿದ್ರೆ ಮಾಡುವುದಕ್ಕೂ ಕೂಡ ಶಾಸ್ತ್ರಗಳಲ್ಲಿ ಕೆಲವು ಸಲಹೆಗಳನ್ನು ಸೂಚಿಸಲಾಗಿದೆ.
ಸಿದ್ಧಶಾಸ್ತ್ರ ಹಾಗೂ ವಾಸ್ತು ಶಾಸ್ತ್ರಗಳು ಮಲಗುವಾಗ ಯಾವ ರೀತಿಯ ವಸ್ತುಗಳು ತಲೆಪಕ್ಕ ಇರಬಾರದು ಎಂದು ಹೇಳುತ್ತದೆ, ವಿಜ್ಞಾನದ ಪ್ರಕಾರ ಕೂಡ ಕೆಲ ವಸ್ತುಗಳನ್ನು ಮಲಗುವಾಗ ತಲೆ ದಿಂಬಿನ ಬಳಿ ಇಟ್ಟುಕೊಂಡು ಮಲಗಬಾರದು.
ಈ ರೀತಿ ಮಾಡಿದರೆ ನಮ್ಮ ಆರೋಗ್,ಯ ಕುಟುಂಬದ ಶಾಂತಿ, ಹಣಕಾಸಿನ ಪರಿಸ್ಥಿತಿ ಎಲ್ಲದಕ್ಕೂ ಕೆಡಕಾಗುತ್ತದೆ ಮತ್ತು ನೆಗೆಟಿವ್ ಎನರ್ಜಿಗಳ ಪ್ರವೇಶವಾಗಿ ಒಳ್ಳೆಯ ನಿದ್ರೆ ಬರುವುದಿಲ್ಲ. ಯಾವ ವಸ್ತುಗಳನ್ನು ಈ ರೀತಿ ತಲೆ ಪಕ್ಕ ಇಟ್ಟುಕೊಳ್ಳಬಾರದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಬರುವುದೇ ಇಲ್ಲ, ಆದಾಯ ಹೆಚ್ಚಾಗುತ್ತದೆ.!
* ಕೆಲವರಿಗೆ ಮಲಗುವ ಮುನ್ನ ಓದುವ ಅಭ್ಯಾಸ ಇರುತ್ತದೆ. ಕೆಲವರು ದಿನಪೂರ್ತಿ ಬಿಸಿ ಇದ್ದ ಕಾರಣ ರಾತ್ರಿ ಹೊತ್ತು ನ್ಯೂಸ್ ಪೇಪರ್ ಅಥವಾ ವೃತ್ತ ಪತ್ರಿಕೆ ಓದುತ್ತಾರೆ. ಯಾವುದೇ ಕಾರಣಕ್ಕೂ ಈ ರೀತಿ ಓದಿದ ಮೇಲೆ ತಲೆ ದಿಂಬಿನ ಕೆಳಗಡೆ ಅಥವಾ ಪಕ್ಕದಲ್ಲಿ ಪೇಪರ್ ಪುಸ್ತಕಗಳನ್ನು ಇಟ್ಟುಕೊಂಡು ಮಲಗಬೇಡಿ. ಇದು ನಿಮ್ಮ ನಿದ್ರೆಗೆ ಅಡೆತಡೆ ತರುತ್ತದೆ, ಒಳ್ಳೆಯ ಕನಸು ಬರುವುದಕ್ಕೆ ಇದು ಅಡ್ಡಿಪಡಿಸುತ್ತದೆ ಎನ್ನುತ್ತದೆ ಶಾಸ್ತ್ರ.
* ಕೆಲವರು ಮಲಗುವಾಗ ತಲೆಗೆ ಎಣ್ಣೆ ಹಾಕಿಕೊಂಡು ಮಸಾಜ್ ಮಾಡಿಸಿಕೊಂಡು ಮಲಗುತ್ತಾರೆ ಆದರೆ ಯಾವುದೇ ಕಾರಣಕ್ಕೂ ಆ ಎಣ್ಣೆ ಬಾಟಲ್ ಗಳನ್ನು ತಲೆಪಕ್ಕ ಇಟ್ಟುಕೊಂಡು ಮಲಗಬೇಡಿ. ಈ ರೀತಿ ಮಾಡುವುದರಿಂದ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳುತ್ತದೆ ಸಿದ್ಧಿಶಾಸ್ತ್ರ
* ಕೆಲವರು ಮನೆ ಒಳಗೆ ಉಪಯೋಗಿಸುವುದಕ್ಕೆ ಬೇರೆ ಚಪ್ಪಲಿ ಇಟ್ಟುಕೊಂಡಿರುತ್ತಾರ,ೆ ಇಂತಹ ಚಪ್ಪಲಿಗಳಾದರು ಕೂಡ ಇವುಗಳನ್ನು ಮಲಗುವಾಗ ತಲೆ ದಿಂಬಿನ ಪಕ್ಕ ಇಟ್ಟುಕೊಳ್ಳಬೇಡಿ. ಈ ರೀತಿ ಮಾಡುವ ವ್ಯಕ್ತಿಗಳ ಕೀರ್ತಿ ಮತ್ತು ಪ್ರತಿಷ್ಠೆಗೆ ಹಾನಿ ಆಗುತ್ತದೆ ಎಂದು ಹೇಳುತ್ತದೆ ಶಾಸ್ತ್ರ.
ಈ ಸುದ್ದಿ ಓದಿ:- ನಿಮ್ಮ ಮದುವೆಯ ನಂತರ ಗಂಡನ ಮನೆಯಲ್ಲಿ ಜೀವನ ಹೇಗಿರುತ್ತದೆ ಎಂದು ಕೈನಲ್ಲಿರುವ ಈ ಹಸ್ತ ರೇಖೆಯ ಮೂಲಕ ತಿಳಿದುಕೊಳ್ಳಬಹುದು.!
* ಕೆಲವರು ಮಲಗುವಾಗ ತಮ್ಮ ಪರ್ಸ್ ಗಳನ್ನು ಹಾಸಿಗೆ ಪಕ್ಕ ಅಥವಾ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗುತ್ತಾರೆ. ನಿಮಗೂ ಕೂಡ ಈ ಅಭ್ಯಾಸ ಇದ್ದರೆ ಇಂದೇ ಬಿಟ್ಟು ಬಿಡಿ. ಯಾಕೆಂದರೆ ಈ ರೀತಿ ಮಾಡಿದರೆ ತಾಯಿ ಮಹಾಲಕ್ಷ್ಮಿಗೆ ಅಗೌರವ ತೋರಿದಂತೆ. ಇದರಿಂದ ತಾಯಿ ಕೋಪಗೊಳ್ಳುತ್ತಾರೆ ಮುಂದೆ ನಿಮಗೆ ಹಣಕಾಸಿನ ಸಮಸ್ಯೆಗಳು ಎದುರಾಗುತ್ತವೆ, ನಿಮ್ಮ ಏಳಿಗೆಗೆ ತೊಂದರೆ ಆಗುತ್ತದೆ.
* ಈಗಿನ ಕಾಲದಲ್ಲಿ ಬಹುತೇಕರಿಕೆ ಇರುವ ಒಂದು ದುರಭ್ಯಾಸ ಎಂದರೆ ರಾತ್ರಿ ಮಲಗುವವರೆಗೂ ಕೂಡ ಮೊಬೈಲ್ ನೋಡುವುದು. ನಿದ್ದೆ ಬಂದ ತಕ್ಷಣ ಅದನ್ನು ತಲೆ ದಿಂಬಿನ ಕೆಳಗೆ ಇಟ್ಟುಕೊಳ್ಳುವುದು. ಯಾವುದೇ ಕಾರಣಕ್ಕೂ ಇಂತಹ ರೂಢಿ ಇದ್ದರೆ ತಪ್ಪಿಸಿ.
ಯಾಕೆಂದರೆ, ವಿಜ್ಞಾನ ಶಾಸ್ತ್ರವು ಕೂಡ ಇದರಿಂದ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ಬರುತ್ತದೆ ಮತ್ತು ಮಾನಸಿಕ ಒತ್ತಡ ಹೆಚ್ಚಾಗುತ್ತದೆ ಎಂದು ಹೇಳುತ್ತದೆ. ಈ ರೀತಿ ಮಾಡುವುದರಿಂದ ನಿಮಗೆ ಕೆಟ್ಟ ಕನಸುಗಳು ಬೀಳುತ್ತದೆ, ಮನಸು ಬಹಳ ಗೊಂದಲಕ್ಕೆ ಒಳಗಾಗುತ್ತದೆ, ಸರಿಯಾಗಿ ನಿದ್ರೆ ಬರದ ಕಾರಣ ನಿದ್ರೆ ಕೊರತೆಯಿಂದ ನಾನಾ ರೀತಿ ಕಾಯಿಲೆಗೆ ತುತ್ತಾಗಿ ಇನ್ನು ಅನೇಕ ಬಗೆಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.