ಮತ್ತೆ ಅಶ್ವಿನಿ ಅವರ ಮುಖದಲ್ಲಿ ಮೂಡಿದ ಮಂದಹಾಸ, ಅಪ್ಪು ಅಗಲಿದ 8 ತಿಂಗಳ ಬಳಿಕ ನಗು ಮುಖದಲ್ಲಿ ಕಾಣಿಸಿಕೊಂಡ ಅಶ್ವಿನಿ.
ಅಕ್ಟೋಬರ್ 29, 2021 ಕರ್ನಾಟಕದ ಕಣ್ಮಣಿಯೊಂದು ಕಳೆದು ಹೋದ ದಿನ. ಕನ್ನಡ ಚಲನಚಿತ್ರರಂಗದ ಪವರ್ ಸ್ಟಾರ್, ದೊಡ್ಮನೆಯ ರಾಜಕುಮಾರ, ಅಭಿಮಾನಿಗಳ ಪಾಲಿನ ದೇವರು, ರಾಜ್ ಕುಟುಂಬದ ಕೀರ್ತಿ ಕಲಶ ಎಲ್ಲಕ್ಕಿಂತ ಹೆಚ್ಚಾಗಿ ನಗುವಿನ ಒಡೆಯ ಅಂದು ಹೃದಯ ಬಡಿತ ನಿಲ್ಲಿಸಿದ ದಿನ. ಮಕ್ಕಳ ಪ್ರೀತಿಯ ಅಪ್ಪು, ದೊಡ್ಡವರ ಪಾಲಿನ ಪುನೀತ್, ಯೂತ್‌ಗಳ ಸ್ಟೈಲ್ ಐಕಾನ್ ರಾಜರತ್ನ ಅಂದು ಮಣ್ಣಲ್ಲಿ ಮಣ್ಣಾಗಿ ಹೋದರು. ಇದುವರೆಗೂ ಕಾಣಿಸಿಕೊಳ್ಳುತ್ತಿದ್ದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಕೂಡ ನಗುಮುಖದೊಂದಿಗೆ ಎಲ್ಲರ ಜೊತೆ ಮಾತನಾಡುತ್ತ ಕಾಲ…