ಇತ್ತೀಚಿನ ದಿನದಲ್ಲಿ ಬಿಪಿ ಸಮಸ್ಯೆ ಎನ್ನುವುದು ಸಾಮಾನ್ಯ ಸಮಸ್ಯೆ ಯಾಗಿಯೇ ಬಿಟ್ಟಿದೆ. ಹೌದು ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಅವರ ಕೆಲಸದ ವಿಚಾರವಾಗಿ ಹೆಚ್ಚು ಟೆನ್ಶನ್ ತೆಗೆದುಕೊಳ್ಳುತ್ತಾರೆ. ಹೌದು ತಮ್ಮ ವ್ಯಾಪಾರ ವ್ಯವಹಾರದಲ್ಲಾಗಿರಬಹುದು ತಾವು ಮಾಡುವ ಒಂದು ಬಿಸಿನೆಸ್ ನಲ್ಲಾಗಿರಬಹುದು.
ಆಫೀಸ್ ನಲ್ಲಿ ಸರಿಯಾಗಿ ಕೆಲಸ ನಡೆದಿಲ್ಲ ಮನೆಯಲ್ಲಿ ಇಲ್ಲ ಸಲ್ಲದ ಮಾತುಗಳಿಗೆ ಜಗಳ ಕದನ ಹೀಗೆ ಇಂತಹ ಸಂದರ್ಭದಲ್ಲಿ ನಾವು ಆ ಒಂದು ವಿಷಯದ ಬಗ್ಗೆ ಹೆಚ್ಚು ಆಲೋಚನೆಯನ್ನು ಮಾಡುತ್ತಿರುತ್ತೇವೆ. ಇಂತಹ ಸಮಯದಲ್ಲಿ ನಮಗೆ ಬಿಪಿ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಕೂಡ ಇರುತ್ತದೆ. ಹಾಗೂ ಬಿಪಿ ಸಮಸ್ಯೆ ಉಂಟಾಗುವುದಕ್ಕೂ ಕೂಡ ಇವೆಲ್ಲ ಪ್ರಮುಖವಾದಂತಹ ಕಾರಣಗಳು ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಹೌದು ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಒಂದು ಸಮಸ್ಯೆ ಯಾವ ಒಂದು ಕಾರಣಕ್ಕಾಗಿ ಬರುತ್ತದೆ ಎಂದು ತಿಳಿಯದೆ ಇದಕ್ಕೆ ಅತಿ ಹೆಚ್ಚಿನ ಔಷಧಿಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಆದ್ದರಿಂದ ಪ್ರತಿಯೊ ಬ್ಬರೂ ಕೂಡ ಯಾವುದೇ ವಿಚಾರವಾಗಿರಬಹುದು ಅದರ ಬಗ್ಗೆ ಹೆಚ್ಚು ಯೋಚನೆ ಮಾಡದೆ ಅದನ್ನು ಹೇಗೆ ಸರಿಪಡಿಸಬಹುದು ಎನ್ನುವುದನ್ನು ತಿಳಿದು ಒಳ್ಳೆಯ ರೀತಿಯಾಗಿ ನಿರ್ಧಾರ ತೆಗೆದುಕೊಳ್ಳುವುದರಿಂದ ಹೆಚ್ಚು ಆಲೋಚನೆ ಮಾಡುವ ಅವಶ್ಯಕತೆ ಬರುವುದಿಲ್ಲ.
ಯಾವುದೇ ವಿಚಾರ ವನ್ನು ನಾವು ಸರಳವಾಗಿ ತೆಗೆದುಕೊಂಡು ಅದನ್ನು ಸರಿಪಡಿಸುವ ವಿಧಾನ ತಿಳಿದುಕೊಂಡರೆ ಅದರ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಆನಂತರ ಇದರಿಂದ ಯಾವುದೇ ಬಿಪಿ ಸಮಸ್ಯೆಗಳು ಕೂಡ ಬರುವುದಿಲ್ಲ ಎಂದೇ ಹೇಳಬಹುದು.
ಬಹಳಷ್ಟು ಜನರಲ್ಲಿ 35 ವರ್ಷ 40 ವರ್ಷದ ಒಳಗೆಯೇ ಬಿಪಿ ಶುಗರ್ ಎನ್ನುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದಕ್ಕೆ ಮೇಲೆ ಹೇಳಿದ ವಿಷಯಗಳು ಪ್ರಮುಖವಾದಂತಹ ಕಾರಣಗಳಾಗಿರುತ್ತದೆ ಅದರಲ್ಲೂ ಲೋ ಬಿಪಿ ಎನ್ನುವಂತಹ ಸಮಸ್ಯೆ ಕೆಲವೊಂದಷ್ಟು ಜನರಿಗೆ ಇದ್ದು ಈ ಒಂದು ಸಮಸ್ಯೆ ಒಂದು ರೋಗ ಎಂದು ಹೇಳಲು ಸಾಧ್ಯವಿಲ್ಲ.
ಹೌದು ಕೆಲವೊಂದಷ್ಟು ಜನ ಇದನ್ನು ದೊಡ್ಡ ರೋಗ ಎಂದು ತಿಳಿದುಕೊಂಡಿರು ತ್ತಾರೆ ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣ ಏನು ಎಂದರೆ ನಾವು ಹೆಚ್ಚಾಗಿ ನೀರನ್ನು ಸೇವನೆ ಮಾಡದೆ ಇರುವುದು ಹೌದು ಆದ್ದರಿಂದ ಪ್ರತಿಯೊಬ್ಬರೂ ಕೂಡ ಅಧಿಕವಾಗಿ ನೀರನ್ನು ಸೇವನೆ ಮಾಡುವುದು ಉತ್ತಮ.
ಬಿಪಿ ಎಂದರೆ 90/60 ಇರುವಂತದ್ದು ಹೀಗಿದ್ದರೆ ಏನು ತೊಂದರೆ ಇಲ್ಲ. ಆದ್ದರಿಂದ ಇಂಥವರು ಹೆಚ್ಚಾಗಿ ಸೊಪ್ಪು ಹಣ್ಣು ತರಕಾರಿಗಳನ್ನು ಸೇವನೆ ಮಾಡಬೇಕು ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹಾಗೇನಾದರೂ ಬಿಪಿ ಸಮಸ್ಯೆ ಇದ್ದು ಅವರಿಗೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಇದ್ದಂತಹ ಸಮಯದಲ್ಲಿ ಅವರು ಮತ್ತಷ್ಟು ಟೆನ್ಶನ್ ಮಾಡಿಕೊಳ್ಳುವುದರಿಂದ ಅವರಿಗೆ ಬ್ರೈನ್ ಸ್ಟ್ರೋಕ್ ಆಗುವಂತಹ ಬಲವಾದ ಸಾಧ್ಯತೆಗಳು ಇರುತ್ತದೆ.
ಹೌದು ಇಂತಹ ಸಮಯದಲ್ಲಿ ಅವರ ಬಿಪಿ ಅಧಿಕವಾಗಿರುತ್ತದೆ ಹಾಗಾಗಿ 40 ವರ್ಷ ತುಂಬಿದ ಪ್ರತಿಯೊಬ್ಬರು ಕೂಡ ಬಿಪಿ ಶುಗರ್ ಇಂತಹ ಕೆಲವೊಂದಷ್ಟು ಟೆಸ್ಟ್ ಗಳನ್ನು ಮಾಡಿಸಿ ಕೊಳ್ಳುವುದು ತುಂಬಾ ಒಳ್ಳೆಯದು ಇದರ ಜೊತೆ ಪ್ರತಿಯೊಬ್ಬರೂ ಕೈಲಾದಷ್ಟು ಯೋಗಭ್ಯಾಸ ಪ್ರಾಣಾಯಾಮ ವ್ಯಾಯಾಮ ವಾಕಿಂಗ್ ಇಂತಹ ಕೆಲವೊಂದಷ್ಟು ಒಳ್ಳೆಯ ಅಭ್ಯಾಸಗಳನ್ನು ಮಾಡುವುದು ಒಳ್ಳೆಯದು ಇದರಿಂದ ಅವರ ಆರೋಗ್ಯದ ಜೊತೆ ಅವರ ಇಡೀ ದೇಹವು ಕ್ರಿಯಾಶೀಲವಾಗಿ ಇರುತ್ತದೆ.