ಪ್ರತಿಯೊಬ್ಬರಿಗೂ ಕೂಡ ಶ್ರೀಮಂತರಾಗಬೇಕು ಎನ್ನುವ ಇಚ್ಛೆ ಇದ್ದೇ ಇರುತ್ತದೆ. ಯಾಕೆಂದರೆ ಈ ಪ್ರಪಂಚದಲ್ಲಿ ಹಣ ಇರುವವರಿಗೆ ಹೆಚ್ಚು ಬೆಲೆ ಮತ್ತು ಅವರು ಏನು ಬೇಕಾದರೂ ಕೊಂಡುಕೊಳ್ಳಬಹುದು. ಅವರ ಇಚ್ಛೆಯಂತೆ ಬದುಕು ನಡೆಸಬಹುದು. ಹೀಗಾಗಿ ಪ್ರತಿಯೊಬ್ಬರ ಜೀವನದ ಗುರಿ ಹೆಚ್ಚು ಹೆಚ್ಚು ಹಣ ಹೊಂದುವುದು, ಶ್ರೀಮಂತರಾಗುವುದೇ ಆಗಿದೆ. ಹಣ ಅತ್ಯಂತ ಪ್ರಮುಖ ವಸ್ತುವಾಗಿರದ ಈಗಿನ ಕಾಲದಲ್ಲಿ ಹಣ ಇಲ್ಲದ ವ್ಯಕ್ತಿಗೆ ಬೆಲೆ ಕೂಡ ಇರುವುದಿಲ್ಲ.
ಹೀಗಾಗಿ ನಿಮಗೂ ಶ್ರೀಮಂತರಾಗಬೇಕು ಎನ್ನುವ ಆಸೆ ಇದ್ದರೆ ಶ್ರೀ ಕೃಷ್ಣ ಹೇಳಿರುವ ಈ ಉಪಾಯಗಳನ್ನು ಪಾಲಿಸಿ. ಶ್ರೀ ಕೃಷ್ಣ ಪರಮಾತ್ಮ ಮಹಾ ವಿಷ್ಣುವಿನ ಅವತಾರ ಮತ್ತು ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನಾಗಿ ಅವತರಿಸಿ ಮನುಕುಲವನ್ನು ಉದ್ದರಿಸುವುದಕ್ಕಾಗಿ ಭಗವದ್ಗೀತೆಯನ್ನು ಭೋದಿಸಿದ ಪುರುಷೋತ್ತಮ ಈ ಭಗವದ್ಗೀತೆಯಲ್ಲಿ ಬದುಕಿನ ಸಾರವೇ ಅಡಗಿದೆ ಎಂದು ಹೇಳಬಹುದು.
ಬದುಕಿನ ಎಲ್ಲಾ ಪ್ರಶ್ನೆಗಳಿಗೂ ಸಮಸ್ಯೆಗಳಿಗೂ ಉತ್ತರ ಭಗವದ್ಗೀತೆಯಲ್ಲಿದೆ. ಇದರಲ್ಲಿ ಶ್ರೀಕೃಷ್ಣ ತಿಳಿಸಿರುವ ರೀತಿ ಶ್ರೀಮಂತರಾಗುವ ಬಗ್ಗೆ ಮತ್ತು ಶ್ರೀಮಂತರಾಗುವ ಅದೃಷ್ಟ ಹೊಂದಿರುವವರಿಗೆ ಯಾವ ರೀತಿ ಲಕ್ಷಣ ಇರುತ್ತದೆ ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
* ಯಾರ ಮನೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ಭಗವಂತನನ್ನು ನೆನೆದು ದೀಪ ಬೆಳಗುತ್ತಾರೋ ಅಂತವರ ಮನೆಯಲ್ಲಿ ಹಣಕಾಸಿನ ತೊಂದರೆ ಬರುವುದಿಲ್ಲ, ಅವರು ದಿನದಿಂದ ದಿನಕ್ಕೆ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಹೊಂದುತ್ತಾರೆ ಎಂದು ತಿಳಿಸಲಾಗಿದೆ.
* ಮನೆಗೆ ಯಾರೇ ಬರಲಿ ಮೊದಲು ಅವರಿಗೆ ಕುಳಿತುಕೊಳ್ಳಲು ಹೇಳಿ ಕುಡಿಯಲು ನೀರು ಕೊಡಬೇಕು. ಈ ರೀತಿ ದಣಿದು ಬಂದವರಿಗೆ ನೀರು ಕೊಡುವುದರಿಂದ ಮನಸಾರೆ ಆಶೀರ್ವದಿಸುತ್ತಾರೆ. ಇಂತಹ ಆಶೀರ್ವಾದಗಳು ಬದುಕಿನಲ್ಲಿ ನಾವು ಅಂದುಕೊಂಡಿದ್ದನ್ನು ಪಡೆಯಲು ನಾವು ಸಂಪಾದಿಸುವ ಪುಣ್ಯವಾಗಿದೆ ಎಂದು ಹೇಳಲಾಗಿದೆ.
* ನಮ್ಮ ಕೈಲಿ ಸ್ವಲ್ಪ ಹಣ ಇದ್ದರೂ ಕೂಡ ಇರುವುದರಲ್ಲಿ ಸ್ವಲ್ಪ ಪ್ರಮಾಣವಾದರೂ ದಾನ ಮಾಡಬೇಕು ಎನ್ನುವ ಮನಸ್ಸು ಒಳ್ಳೆಯವರು ಇನ್ನು ಹೆಚ್ಚು ಹೆಚ್ಚು ಹಣ ಪಡೆಯುತ್ತಾರೆ. ಹಸಿದವರಿಗೆ ಅನ್ನ, ಅಸಹಾಯಕರಿಗೆ ಬಟ್ಟೆ, ಸಾಧ್ಯವಾದರೆ ಆಶ್ರಯದ ವ್ಯವಸ್ಥೆ ಮಾಡಿಕೊಡುವುದರಿಂದ ಶ್ರೀಮಂತರಾಗುವ ಅದೃಷ್ಟ ಒಲಿದು ಬರುತ್ತದೆ.
* ಯಾರು ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾರೆ ಮತ್ತು ತನ್ನ ಸುತ್ತಮುತ್ತ ಇರುವವರಿಗೆ ಬಹಳ ಬೇಕಾಗಿರುವವರು ಆಗಿರುತ್ತಾರೆ ಅಂತಹವರಿಗೆ ಸಮಸ್ಯೆಗಳು ಮತ್ತು ಕೊರತೆಗಳು ಬರುವುದಿಲ್ಲ.
* ಶ್ರೀಕೃಷ್ಣ ಪರಮಾತ್ಮರು ಪಾದದಲ್ಲಿ ಚಂದ್ರನ ಆಕೃತಿಯನ್ನು ಹೊಂದಿರುವವರು ಮತ್ತು ಶ್ರೀ ಕೃಷ್ಣನಂತೆ ಪಾದದಡಿಯಲ್ಲಿ ಕಮಲದ ತ್ರಿಕೋನದ ಶಂಕದ ಬಿಲ್ಲಿನ ಚಿಹ್ನೆ ಹೊಂದಿದವರಿಗೆ ಶ್ರೀಮಂತರಾಗುವ ಅದೃಷ್ಟ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ
* ಗುರು ಹಿರಿಯರನ್ನು ಗೌರವಿಸುವ ತಂದೆ ತಾಯಿಯನ್ನು ವೃದ್ಧಾಪ್ಯದಲ್ಲೂ ಅಷ್ಟೇ ಪ್ರೀತಿಯಿಂದ ಕಾಳಜಿಯಿಂದ ನೋಡಿಕೊಳ್ಳುವ ಮಕ್ಕಳು ಮುಂದಿನ ಜೀವನದಲ್ಲಿ ಸಕಲ ಸೌಕರ್ಯಗಳನ್ನು ಅನುಭವಿಸುತ್ತಾರೆ ಅವರಿಗೆ ಅಷ್ಟೈಶ್ವರ್ಯಗಳು ಒಲಿದು ಬರುತ್ತವೆ ಎಂದು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾರೆ
* ಮನೆಯಲ್ಲಿ ವೀಣೆ, ಶಂಖ, ಘಂಟೆ ಇಂತಹ ಶುಭಕಾರಕ ವಸ್ತುಗಳನ್ನು ಇಡುವುದರಿಂದ ಮನೆಯ ವಾತಾವರಣ ಸಕಾರಾತ್ಮಕವಾಗಿ ಹಣಕಾಸಿನ ಕೊರತೆಗಳು ನೀಗುತ್ತವೆ ಮತ್ತು ಎಲ್ಲ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಸಾಗುತ್ತವೆ.
* ಮನೆಯಲ್ಲಿ ಜೇನುತುಪ್ಪ ಇಡುವುದು ಕೂಡ ಇಂತಹ ಶುಭಫಲಗಳನ್ನು ಕೊಡುತ್ತದೆ. ಆದರೆ ಯಾರೂ ಕೂಡ ಇದನ್ನು ಬಳಸಬಾರದು ದೇವರ ಕೋಣೆಯಲ್ಲಿ ಚಿಕ್ಕ ಡಬ್ಬದಲ್ಲಿ ಯಾವಾಗಲು ಜೇನುತುಪ್ಪ ತುಂಬಿರುವಂತೆ ಇಡುವುದರಿಂದ ಹಣಕಾಸಿನ ಆಕರ್ಷಣೆ ಆಗುತ್ತದೆ ಮತ್ತು ಮನೆಯ ವಾತಾವರಣ ಉತ್ತಮವಾಗಿರುತ್ತದೆ
* ಇವುಗಳನ್ನು ಪಾಲಿಸುವುದರ ಜೊತೆಗೆ ಎಲ್ಲರಿಗೂ ಕೂಡ ಜೀವನದಲ್ಲಿ ತಾವು ಸಹಾ ಚೆನ್ನಾಗಿ ಬದುಕಬೇಕು, ಕಷ್ಟಪಟ್ಟು ದುಡಿಯಬೇಕು, ಹೊಸ ಹೊಸ ವಿಷಯಗಳನ್ನು ಕಲಿಯಬೇಕು ಎನ್ನುವ ಇಚ್ಛೆ ಇರಬೇಕು ಈ ರೀತಿ ಸದಾ ಹೊಸತನಕ್ಕೆ ಹೊಂದಿಕೊಳ್ಳುವ ಮತ್ತು ಜೀವನದಲ್ಲಿ ಏಳಿಗೆಯಾಗಲು ಪ್ರಯತ್ನಿಸುವ ವ್ಯಕ್ತಿಗೆ ಯಶಸ್ಸು ಶ್ರೀಮಂತಿಕೆ ಹುಡುಕಿಕೊಂಡು ಬರುತ್ತದೆ.