Home Blog Page 165

ಪೋಸ್ಟ್ ಆಫೀಸ್ ಈ ಸ್ಕೀಮ್ ನಲ್ಲಿ ಹಣ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಸಿಗಲಿದೆ 5325 ಬಡ್ಡಿ ಹಣ ಸಿಗಲಿದೆ. ಬೇರೆ ಅವರಿಗೆ ದುಡ್ಡು ಕೊಟ್ಟು ಮೋಸ ಹೋಗದಕ್ಕಿಂತ ಇದು ಬೆಸ್ಟ್ ಪ್ಲಾನ್

 

ಕೇಂದ್ರ ಸರ್ಕಾರವು ಇಂತಹ ಹಲವಾರು ಸ್ಕೀಮ್ ಗಳನ್ನು ತಂದಿದೆ. ಅದರಲ್ಲಿ ಗ್ರಾಮೀಣ ಭಾಗದ ಜನರಿಗೂ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಜೊತೆಗೆ ದೇಶದಾದ್ಯಂತ ಸುಲಭವಾಗಿ ವಿಸ್ತರಿಸುವ ಉದ್ದೇಶದಿಂದ ಪೋಸ್ಟ್ ಆಫೀಸ್ ಅಲ್ಲಿ ಇಂತಹ ಹಲವಾರು ಸ್ಕೀಮ್ ಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ.

ಪೋಸ್ಟ್ ಆಫೀಸ್ ಹಲವಾರು ಉದ್ದೇಶಗಳಿಂದ ಈಗಾಗಲೇ ದೇಶದ ನಾಗರಿಕರ ನಂಬಿಕೆ ಗಿಟ್ಟಿಸಿಕೊಂಡಿದೆ. ಪೋಸ್ಟ್ ಆಫೀಸ್ ಅಲ್ಲಿ ಹೂಡಿಕೆ ಮಾಡುವುದರಿಂದ ನಾವು ಹಾಕಿದ ಹಣಕ್ಕೆ ಸರ್ಕಾವೇ ಭದ್ರತೆ ಆಗಿರುತ್ತದೆ ಆದ್ದರಿಂದ ಕೇಂದ್ರ ಸರ್ಕಾರದ ಅಡಿಯಲ್ಲಿರುವ ಅಂಚೆ ಇಲಾಖೆಯು ಹಣ ಉಳಿಸುವವರ ಹಾಗೂ ಹಣ ಹೂಡಿಕೆ ಮಾಡುವವರ ನಂಬಿಕೆದಾರ ಸಂಸ್ಥೆ ಆಗಿದೆ.

ಮೇಕೆ ಕುರಿ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್, ಶೆಡ್ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಸಿಗಲಿದೆ 68,000/- ಸಹಾಯಧನ.!

ಈಗ ಪೋಸ್ಟ್ ಆಫೀಸ್ ಅಲ್ಲಿ ಈ ಹೊಸ ಸ್ಕೀಮ್ ಅಲ್ಲಿ ಹೂಡಿಕೆ ಮಾಡುವುದರಿಂದ ಹಿಂದೆಂದಿಗಿಂತ ಹೆಚ್ಚಿನ ರೂಪದ ಬಡ್ಡಿ ಹಣವನ್ನು ಪಡೆಯಬಹುದಾಗಿದೆ. PMMIS ಅಂದರೆ ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ ಈ ಸ್ಕೀಮ್ ಅನ್ನು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪರಿಚಯಿಸಿದ್ದರು.

ಕೆಲವು ವರ್ಷಗಳಿಂದ ಇದು ಜಾರಿಯಲ್ಲಿ ಇದೆ ಆದರೆ ಈ ವರ್ಷದ ಕೇಂದ್ರ ಸರ್ಕಾರದ ಬಜೆಟ್ ಅಲ್ಲಿ ಈ ಸ್ಕೀಮ್ ಅನ್ನು ಇನ್ನಷ್ಟು ಸಡಿಲಿಕೆ ಮಾಡಿ ದೇಶದ ನಾಗರಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗಿದೆ. ಅದೇನೆಂದರೆ ಈವರಿಗೆ ಇದರಲ್ಲಿ ಹಿರಿಯ ನಾಗರಿಕರಿಗೆ ಹೂಡಿಕೆ ಮಾಡಲು ಅವಕಾಶ ಇರಲಿಲ್ಲ ಆದರೆ ನೂತನ ಆರ್ಥಿಕ ವರ್ಷದಿಂದ ಹಿರಿಯ ನಾಗರಿಕರೂ ಸಹ ಇದರಲ್ಲಿ ಹೂಡಿಕೆ ಮಾಡಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆ ಹಣ ಆಗಸ್ಟ್ 2 ಸಿಗಲ್ಲ ಮುಖ್ಯಮಂತ್ರಿಗಳಿಂದ ಸ್ಪಷ್ಟನೆ ಮತ್ತೊಂದು ಹೊಸ ನಿರ್ಧಾರ ಕೈಗೊಂಡ ಸರ್ಕಾರ.!

ಜೊತೆಗೆ ಈ ಹೂಡಿಕೆಯಲ್ಲಿ ಹಣ ಇಡುವುದಕ್ಕೆ ಒಬ್ಬ ವ್ಯಕ್ತಿಗೆ 4.5 ಹಾಗೂ ಜಂಟಿಯಾಗಿ ಖಾತೆ ತೆಗೆಯುವುದಾದರೆ 9 ಲಕ್ಷಗಳ ಮಿತಿ ಇತ್ತು. ಅದನ್ನು ಒಬ್ಬ ವ್ಯಕ್ತಿಗೆ 7.5 ಲಕ್ಷ ಹಾಗೂ ಜಂಟಿಯಾಗಿ ತೆರೆಯುವವರಿಗೆ 15 ಲಕ್ಷದವರೆಗೆ ಗಡಿ ಕೊಡಲಾಗಿದೆ. ಈ ಸ್ಕೀಮ್ ಅಲ್ಲಿ ಹೂಡಿಕೆ ಮಾಡುವುದರಿಂದ 7.1% ಬಡ್ಡಿ ರೂಪದ ಹಣ ಪ್ರತಿ ತಿಂಗಳು ಕೂಡ ನಿಮ್ಮ ಖಾತೆಗೆ ಬರಲಿದೆ. ಉದಾಹರಣೆ ಜೊತೆ ಹೇಳುವುದಾದರೆ ನೀವು ಸ್ಕೀಮ್ ಅಲ್ಲಿ ಸಾವಿರದಿಂದ ನಾಲ್ಕುವರೆ ಲಕ್ಷದವರೆಗೆ ಎಷ್ಟು ಹಣವನ್ನು ಆದರೂ ಠೇವಣಿ ಅಥವಾ ಹೂಡಿಕೆ ಆಗಿ ಇಡಬಹುದು‌.

ಐದು ವರ್ಷಗಳವರೆಗೆ ಈ ಸ್ಕೀಮ್ ಇರುತ್ತದೆ ಐದು ವರ್ಷದವರೆಗೆ ನೀವು ಇದರಲ್ಲಿ ಹಣ ಹೂಡಿಕೆ ಮಾಡಿದಾಗ ನೀವು ಇಟ್ಟ ಹಣಕ್ಕೆ 7.1% ಬಡ್ಡಿ ರೂಪದ ಹಣವು ನಿಮಗೆ ಪ್ರತಿ ತಿಂಗಳಿಗೂ ನೀವು ಕೊಡುವ ಬ್ಯಾಂಕ್ ಖಾತೆಗೆ ಅಥವಾ ಅಂಚೆ ಕಚೇರಿಯಲ್ಲಿರುವ ಖಾತೆಗೆ ಬರುತ್ತದೆ. ಅದನ್ನು ನೀವು ನಿಮ್ಮ ಅನುಕೂಲತೆಗಳಿಗೆ ತಕ್ಕ ಹಾಗೆ ಪ್ರತಿ ತಿಂಗಳು ಬೇಕಾದರೂ ಹಿಂಪಡೆಯಬಹುದಾಗಿದೆ.

ಪಶುಸಂಗೋಪನೆ ಮಾಡುವ ರೈತರಿಗೆ ಗುಡ್ ನ್ಯೂಸ್ ದನದ ಕೊಟ್ಟಿಗೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಸಿಗಲಿದೆ 57 ಸಾವಿರ ಸಹಾಯಧನ ಕೂಡಲೇ ಅರ್ಜಿ ಸಲ್ಲಿಸಿ

10 ವರ್ಷ ಮೇಲ್ಪಟ್ಟ ಯಾರಾದರೂ ಒಂಟಿಯಾಗಿ ಅಥವಾ ಜಂಟಿಯಾಗಿ ಈ ಯೋಜನೆಗೆ ಹೂಡಿಕೆ ಮಾಡಬಹುದಾಗಿದೆ. ಇದಕ್ಕೆ ಪೋಸ್ಟ್ ಆಫೀಸ್ನಲ್ಲಿ ಉಳಿತಾಯ ಖಾತೆ ಇರಬೇಕಾಗುತ್ತದೆ. ಇದುವರೆಗೆ ಇರುವ ಎಲ್ಲಾ ಉಳಿತಾಯ ಯೋಜನೆಗಳಿಗಿಂತ ಇದು ಹೆಚ್ಚಿನ ಲಾಭ ಕೂಡ ತರುತ್ತದೆ. ಐದು ವರ್ಷ ಆದ ಬಳಿಕ ನೀವು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಬಹುದಾಗಿದೆ.

ನಾಮಿನಿ ಫೆಸಿಲಿಟಿ ಕೂಡ ಇರುವುದರಿಂದ ಹೂಡಿಕೆ ಮಾಡಿದ ವ್ಯಕ್ತಿ ಮೃತ ಪಟ್ಟಲ್ಲಿ ಕಾನೂನು ವಾರಸುದಾರರಿಗೆ ಠೇವಣಿ ಇಟ್ಟಿದ್ದ ಹಣ ಹಾಗೂ ಪ್ರತಿ ತಿಂಗಳ ಬಡ್ಡಿ ಹಣ ಸೇರುತ್ತದೆ ಯೋಜನೆ ಕುರಿತು ಹೆಚ್ಚಿನ ವಿವರಣೆಗೆ ಹತ್ತಿರದ ಅಂಚೆ ಕಛೇರಿಗೆ ಭೇಟಿಕೊಟ್ಟು ವಿಷಯ ತಿಳಿದು ಈ ಸ್ಕೀಮ್ ಅಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಿರಿ.

 

ಮೇಕೆ ಕುರಿ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್, ಶೆಡ್ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಸಿಗಲಿದೆ 68,000/- ಸಹಾಯಧನ.!

 

ಕಳೆದ ಕೆಲವು ವರ್ಷಗಳಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸರ್ಕಾರದ ಕಡೆಯಿಂದ 19,000ರೂ. ಸಹಾಯಧನವು ಕುರಿ ಮೇಕೆ ಶೆಡ್ ನಿರ್ಮಾಣ ಮಾಡುವವರಿಗೆ ಸಿಗುತ್ತಿತ್ತು. ಈಗ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಗ್ರಾಮೀಣಾಭಿವೃದ್ಧಿ ಎನ್ನುವ ಉದ್ದೇಶದಿಂದ ರಾಜ್ಯದ ಎಲ್ಲಾ ರೈತರಿಗೆ 68,000 ರೂ. ಸಹಾಯಧನವನ್ನು ಮೇಕೆ ಶೆಡ್ ಮತ್ತು ಕುರಿ ಶೆಡ್ ನಿರ್ಮಾಣ ಮಾಡುವವರಿಗೆ ಕೊಡುತ್ತಿದ್ದಾರೆ.

ನಮ್ಮ ರಾಜ್ಯದಲ್ಲಿರುವ ಅನೇಕ ಕುರಿ ಮೇಕೆ ಸಾಕಣೆ ಮಾಡುವ ರೈತರಿಗೆ ಈ ಯೋಜನೆಗಳಿಗೆ ಅರ್ಜಿಯಲ್ಲಿ ಹೇಗೆ ಸಲ್ಲಿಸಬೇಕು ಯಾವ ರೀತಿ ಇದರ ಫಲಾನುಭವಿಗಳು ಆಗಬೇಕು ಎನ್ನುವ ಮಾಹಿತಿ ಸಿಗದೇ ವಂಚಿತರಾಗುತ್ತಿದ್ದಾರೆ. ಈ ಲೇಖನದಲ್ಲಿ ಇದರ ಬಗ್ಗೆ ತಿಳಿಸಿಕೊಡುವ ಪ್ರಯತ್ನವನ್ನು ಮಾಡಲಾಗಿದೆ.

ಗೃಹಲಕ್ಷ್ಮಿ ಯೋಜನೆ ಹಣ ಆಗಸ್ಟ್ 2 ಸಿಗಲ್ಲ ಮುಖ್ಯಮಂತ್ರಿಗಳಿಂದ ಸ್ಪಷ್ಟನೆ ಮತ್ತೊಂದು ಹೊಸ ನಿರ್ಧಾರ ಕೈಗೊಂಡ ಸರ್ಕಾರ.!

ಕರ್ನಾಟಕದ ಯಾವುದೇ ರೈತರು ಕೂಡ ಈ ಯೋಜನೆಯ ಫಲಾನುಭವಿಗಳಾಗಬಹುದು. ನೀವು ಮಾಡಬೇಕಾಗಿರುವುದು ಇಷ್ಟೇ, ನೀವು ವಾಸಿಸುತ್ತಿರುವ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಯಲ್ಲಿ PDO ಅಧಿಕಾರಿಗಳ ಬಳಿ ಅಥವಾ ನೀವೇ ಆರಿಸಿದ ಗ್ರಾಮ ಪಂಚಾಯಿತಿ ಸದಸ್ಯರ ಬಳಿ ಹೋಗಿ ನಿಮ್ಮನ್ನು ಸಹ ಸರ್ಕಾರದಿಂದ 68,000 ಸಹಾಯಧನ ಬರುತ್ತಿರುವ ಈ ಕುರಿ ಮೇಕೆ ಶೆಡ್ ನಿರ್ಮಾಣ ಯೋಜನೆಯಲ್ಲಿ ಸೇರಿಸಲು ಮನವಿ ಮಾಡಿಕೊಳ್ಳಬೇಕು.

ಪ್ರತಿ ವರ್ಷವೂ ಕೂಡ ಒಂದು ಗ್ರಾಮ ಪಂಚಾಯಿತಿಗೆ ಇಂತಿಷ್ಟು ಮೇಕೆ ಶೆಡ್ ಗಳು ಹಾಗೂ ಇಂತಿಷ್ಟು ಕುರಿ ಶೆಡ್ ಗಳ ನಿರ್ಮಾಣಕ್ಕೆ ಹಣ ಮೀಸಲು ಎಂದು ನೀಡಲಾಗಿರುತ್ತದೆ. ಜೊತೆಗೆ ಮತ್ತೊಂದು ಪ್ರಮುಖ ವಿಷಯ ಏನು ಎಂದರೆ ಒಂದು ಆಕ್ಷನ್ ಪ್ಲಾನ್ ಅಲ್ಲಿ ಇಷ್ಟೇ ಜನ ಫಲಾನುಭವಿಗಳು ಇರಬೇಕು ಅಥವಾ ಇಷ್ಟೇ ಜನ ಅರ್ಜಿ ಸಲ್ಲಿಸಬೇಕು ಎನ್ನುವ ಯಾವ ನಿಯಮವು ಕೂಡ ಇಲ್ಲ.

ಪಶುಸಂಗೋಪನೆ ಮಾಡುವ ರೈತರಿಗೆ ಗುಡ್ ನ್ಯೂಸ್ ದನದ ಕೊಟ್ಟಿಗೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಸಿಗಲಿದೆ 57 ಸಾವಿರ ಸಹಾಯಧನ ಕೂಡಲೇ ಅರ್ಜಿ ಸಲ್ಲಿಸಿ

ಒಂದು ಭಾಗದಲ್ಲಿ ಈ ರೀತಿ ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುವ ರೈತರ ಸಂಖ್ಯೆ ಹೆಚ್ಚಾಗಿರುತ್ತದೆ. ಮತ್ತೊಂದು ಭಾಗದಲ್ಲಿ ಆ ಸಂಖ್ಯೆ ವಿರಳವಾಗಿರಬಹುದು ಆದ್ದರಿಂದ ಈ ರೀತಿ ಯಾವುದೇ ಮಿತಿಯನ್ನು ಸರ್ಕಾರ ಹೇರಿಲ್ಲ. ಆ ನಿಟ್ಟಿನಲ್ಲಿ ನಿಮ್ಮ ಗ್ರಾಮ ಪಂಚಾಯಿತಿದ ಸದಸ್ಯರು ಅಥವಾ ಅಧ್ಯಕ್ಷರು ಅಥವಾ PDO ಅಧಿಕಾರಿಗಳ ಬಳಿ ಮನವಿ ಸಲ್ಲಿಸಬೇಕು.

ಇನ್ನೂ ಸಹ 19 ಸಾವಿರದ ಯೋಜನೆ ಜಾರಿಯಲ್ಲಿರುವುದು ಹಾಗೂ 68,000 ಯೋಜನೆಗಳು ಇರುವುದರಿಂದ ಸ್ಪಷ್ಟವಾಗಿ ನೀವು 68,000 ಸಹಾಯಧನ ಇರುವ ಯೋಜನೆಗೆ ಮನವಿ ಮಾಡಬೇಕು. ಯಾಕೆಂದರೆ ಈಗ ಮಾಡಿರುವ ಈ 68,000 ಸಹಾಯಧನದ ಸಿಗುವ ಶೆಡ್ ನಿರ್ಮಾಣದಲ್ಲಿ ಎಲ್ಲವೂ ಸುಸ್ತಜಿತವಾಗಿದೆ . ಈ ಶೆಡ್ ಗಳ ಸೈಜ್, ಅಟ್ಟಣಿಕೆ, ರೂಫ್ ಮತ್ತು ಮಧ್ಯಂತರ ರೂಫ್ ಎಲ್ಲದರ ಬಗ್ಗೆ ಸ್ಪಷ್ಟತೆ ಇದೆ.

ಶಿಕ್ಷಕರ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…

ಈ ಪ್ಲಾನ್ ಪ್ರಕಾರ ನಿರ್ಮಾಣ ಮಾಡುವುದರಿಂದ ಸರ್ಕಾರದ ಸಹಾಯಧನ 68,000 ಅಲ್ಲಿ ರೈತರಿಗೆ ಅನುಕೂಲವಾಗುವಂತಹ ಒಳ್ಳೆಯ ವ್ಯವಸ್ಥೆಯ ಶೆಡ್ ನಿರ್ಮಾಣ ಆಗಲಿದೆ. ಈ 68,000ಗಳಲ್ಲಿ 18,000 ಕೂಲಿ ಹಾಗೂ ಉಳಿದ ಹಣ ಸಾಮಗ್ರಿ ಖರ್ಚಿಗಾಗಿ ಇರುತ್ತದೆ. ಈ ಯೋಜನೆ ಸಂಪೂರ್ಣವಾಗಿ ರೈತರ ಅಭಿವೃದ್ಧಿಗಾಗಿ ಮೀಸಲಾಗಿರುವ ಯೋಜನೆ ಆಗಿದೆ.

ಆದ್ದರಿಂದ ರಾಜ್ಯದ ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುವ ರೈತರುಗಳು ಈ ಹೊಸ ಆಕ್ಷನ್ ಪ್ಲಾನ್ ಅಲ್ಲಿ ಹೆಸರು ಸೇರಿಸಿ ಅಪ್ರೂವಲ್ ಆಗಿ ಬಂದ ಬಳಿಕ ಅದನ್ನು ಉಪಯೋಗಿಸಿಕೊಂಡು ಶೆಡ್ ನಿರ್ಮಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪಂಚಾಯಿತಿ ಸಂಪರ್ಕಿಸಿ. ಈ ಮಾಹಿತಿ ಹೆಚ್ಚಿನ ರೈತರಿಗೆ ತಲುಪುವಂತೆ ಶೇರ್ ಮಾಡಿ.

 

ಗೃಹಲಕ್ಷ್ಮಿ ಯೋಜನೆ ಹಣ ಆಗಸ್ಟ್ 2 ಸಿಗಲ್ಲ ಮುಖ್ಯಮಂತ್ರಿಗಳಿಂದ ಸ್ಪಷ್ಟನೆ ಮತ್ತೊಂದು ಹೊಸ ನಿರ್ಧಾರ ಕೈಗೊಂಡ ಸರ್ಕಾರ.!

 

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಚನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಹಲವು ಬಾರಿ ವಿಘ್ನವಾಗಿದೆ ಎಂದೇ ಹೇಳಬಹುದು. ಯಾಕೆಂದರೆ ಈ ಹಿಂದೆ ಅರ್ಜಿ ಸ್ವೀಕಾರ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ತಡವಾಗಿ ಆರಂಭಿಸಿತು. ಅದಕ್ಕಾಗಿ ಸೂಚಿಸಿದ ದಿನಾಂಕದ ಮೇಲೆ ಹಲವು ಬಾರಿ ತಾಂತ್ರಿಕ ಸಮಸ್ಯೆಗಳ ಕಾರಣ ಹೇಳಿ ಮುಂದೂಡಿ ಅಂತಿಮವಾಗಿ ಆಗಸ್ಟ್ 19ರಿಂದ ಅರ್ಜಿ ಸ್ವೀಕಾರ ಮಾಡಲು ಅನುಮತಿಸಿತು.

ಅರ್ಜಿ ಸಲ್ಲಿಸುವ ವೇಳೆ ಕೂಡ ಕಂಡಿಷನ್ ಹಾಕಿದ ಸರ್ಕಾರ ಸಹಾಯವಾಣಿಯನ್ನು ನೀಡಿ ಅರ್ಜಿ ಸಲ್ಲಿಸುವವರು ಮೊದಲು ಪಡಿತರ ಚೀಟಿ ಸಂಖ್ಯೆಯನ್ನು ಸಹಾಯವಾಣಿ ಸಂಖ್ಯೆಗೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮೂಲಕ SMS ಕಳುಹಿಸಿ ವೇಳಾಪಟ್ಟಿಯನ್ನು ಪಡೆದು ಅದೇ ಸಮಯದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಅದರಲ್ಲೂ ಕೂಡ ಸರ್ಕಾರ ಸೂಚಿಸಿರುವ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿತು.

ಪಶುಸಂಗೋಪನೆ ಮಾಡುವ ರೈತರಿಗೆ ಗುಡ್ ನ್ಯೂಸ್ ದನದ ಕೊಟ್ಟಿಗೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಸಿಗಲಿದೆ 57 ಸಾವಿರ ಸಹಾಯಧನ ಕೂಡಲೇ ಅರ್ಜಿ ಸಲ್ಲಿಸಿ

ಒಂದು ದಿನಕ್ಕೆ 60 ಜನರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದ್ದದ್ದರಿಂದ ಬಹಳಷ್ಟು ತಡವಾಗಿದೆ ಎನ್ನುವುದನ್ನು ಅರಿತು ನಂತರ ವೇಳಾಪಟ್ಟಿ ಇಲ್ಲದಿದ್ದರೂ ಕೂಡ ಹತ್ತಿರದಲ್ಲಿರುವ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದೆಂದು ಹೇಳಿತು. ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ಸಹಾಯಧನ ನೀಡುವ ಈ ಮಹತ್ವಕಾಂಕ್ಷೆಯ ಯೋಜನೆ ಬಗ್ಗೆ ಫಲಾನುಭವಿಗಳಾಗಲು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಈವರೆಗೆ 1.05 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಅಂಕಿ ಅಂಶವನ್ನು ಸರ್ಕಾರ ತಿಳಿಸುತ್ತಿದೆ. ಅದೇ ಬೆನ್ನಲ್ಲೇ ಯೋಜನೆಯ ಲಾಂಚ್ (launch) ಯಾವಾಗ ಎನ್ನುವ ಪ್ರಶ್ನೆಗಳು ಎದುರಾಗುತ್ತಿವೆ. ಆದೇಶ ಪತ್ರ ಹೊರಡಿಸಿದಾಗ ಮಾನ್ಯ ಮುಖ್ಯಮಂತ್ರಿಗಳು ಆಗಸ್ಟ್ 15ರಂದು ಸ್ವತಂತ್ರ ದಿನಾಚರಣೆ ಪ್ರಯುಕ್ತವಾಗಿ ಕಾರ್ಯಕ್ರಮ ನಡೆಸಿ ಅದ್ದೂರಿಯಾಗಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುವುದು.

ಶಿಕ್ಷಕರ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…

ಆಗಸ್ಟ್ 16 ರಂದು ಎಲ್ಲಾ ಫಲಾನುಭವಿಗಳ ಖಾತೆಗೆ ರೂ. 2000 ಸಹಾಯಧನವು DBT ಮೂಲಕ ವರ್ಗಾವಣೆಯಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಪದೇಪದೇ ಈ ದಿನಾಂಕ ಮುಂದಕ್ಕೆ (postponed) ಹೋಗುತ್ತಿದೆ. ಮಹಿಳೆಯರು ತಮ್ಮ ಖಾತೆಗೆ ಯಾವ ದಿನಾಂಕದಂದು 2000 ಸಹಾಯಧನ ಸಿಗಲಿದೆ ಎಂದು ಬಾರಿ ಕುತೂಹಲದಲ್ಲಿ ಇದ್ದಾರೆ.

ಎರಡು ದಿನಗಳ ಹಿಂದಷ್ಟೇ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ (D.K Shivakumar) ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ (Pressmeet) ಆಗಸ್ಟ್ 27ನೇ ತಾರೀಕಿನಂದು ಬೆಳಗಾವಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸರ್ಕಾರದ ಅನುಮತಿ, ಆದ್ರೆ ಕಂಡಿಷನ್ ಅಪ್ಲೈ ಏನೆಲ್ಲಾ ರೂಲ್ಸ್ ಫಾಲೋ ಮಾಡ್ಬೇಕು ನೋಡಿ.!

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ವಾದ್ರಾ ಅವರು ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬರಲಿದ್ದಾರೆ. ಆಗಸ್ಟ್ 28 ರಂದು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂದು ತಿಳಿಸಿದ್ದರು.

ಆದರೆ ಈಗ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (CM Siddaramaiah) ಅವರು ಬೆಳಗಾವಿಯಲ್ಲಿ (Belagavi) ಕಾರ್ಯಕ್ರಮ ನಡೆಸಲು ನಿರ್ಧಾರವಾಗಿರುವ ಜಿಲ್ಲಾ ಕ್ರೀಡಾಂಗಣ ಮತ್ತು CBEd ಆವರಣ ಸ್ಥಳ ಪರಿಶೀಲನೆಗೆ ಹೋಗಿದ್ದ ವೇಳೆ ಆಗಸ್ಟ್ 27ರಂದು ಕಾರ್ಯಕ್ರಮ ನಡೆಯುವುದಿಲ್ಲರ ಇನ್ನು ಎರಡು ದಿನ ಮುಂದೆ ಹೋಗಲಿದೆ ಆಗಸ್ಟ್ 29 ಅಥವಾ 30ನೇ ತಾರೀಕಿನಂದು ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪಶುಸಂಗೋಪನೆ ಮಾಡುವ ರೈತರಿಗೆ ಗುಡ್ ನ್ಯೂಸ್ ದನದ ಕೊಟ್ಟಿಗೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಸಿಗಲಿದೆ 57 ಸಾವಿರ ಸಹಾಯಧನ ಕೂಡಲೇ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಾದ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ಅನೇಕ ಯೋಜನೆಗಳ ಪ್ರಯೋಜನವನ್ನು ನೀಡುತ್ತಾ ಬಂದಿತ್ತು. ಇದೀಗ ದನದ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ ನೀಡಲು ಮುಂದಾಗಿದೆ. ಗ್ರಾಮೀಣ ಭಾಗದ ರೈತರಿಗೆ 57,000 ರೂ ಧನ ಸಹಾಯದೊಂದಿಗೆ ದನದ ದೊಡ್ಡಿ ನಿರ್ಮಾಣ ಕಾಮಗಾರಿಗೆ ಆಯುಕ್ತಾಲಯದಿಂದ ಹೊಸ ಸಂದೇಶ ಹೊರಡಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ರೋಷನ್ ಅವರು ತಿಳಿಸಿದ್ದಾರೆ.

ಈ ಯೋಜನೆ ಅಡಿ ಇದಕ್ಕೂ ಮೊದಲು SC ಮತ್ತು ST ಕುಟುಂಬದವರಿಗೆ ಮಾತ್ರ 43,000 ಸಹಾಯದನ ಮತ್ತು ಇತರೆ ವರ್ಗದ ಕುಟುಂಬದವರಿಗೆ 22,000ಗಳನ್ನು ಮಾತ್ರ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನವಾಗಿ ನೀಡಲಾಗುತ್ತಿತ್ತು. ಈಗ ಇದರಲ್ಲಿ ಸ್ವಲ್ಪ ಮಾರ್ಪಾಡು ಮಾಡಿ ಸಹಾಯಧನವನ್ನು ಎಲ್ಲ ವರ್ಗದವರಿಗೂ ಸಮಾನವಾಗಿ ತಲುಪುವಂತೆ ಇನ್ನು ಹೆಚ್ಚಿನ ಮೊತ್ತದ ಸಹಾಯಧನ ನೀಡುವಂತೆ ನಿರ್ಣಯ ಮಾಡಲಾಗಿದೆ.

ಶಿಕ್ಷಕರ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…

ದಿನಾಂಕ 20.07.2022ರಂದು ನಾಲ್ಕು ಜಾನುವಾರುಗಳಿಗೆ 57,000 ರೂ ಅಂತೆ ಎಲ್ಲಾ ವರ್ಗದ ಜನರಿಗೂ ಕೂಡ ಇದೆ ಅನ್ವಯವಾಗುವಂತೆ ವೈಯುಕ್ತಿಕ ಆಧಾರಿತ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಬುಡಕಟ್ಟೆಗಳು, ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟೆಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು.

ಮಹಿಳಾ ಪ್ರಧಾನ ಕುಟುಂಬಗಳು, ವಿಕಲಚೇತನ ಕುಟುಂಬಗಳು, ಭೂ ಸುಧಾರಣಾ ಫಲಾನುಭವಿಗಳು, ವಸತಿ ಯೋಜನೆಯ ಫಲಾನುಭವಿಗಳು, ಅರಣ್ಯ ಹಕ್ಕು ಕಾಯ್ದೆ 2006 ಫಲಾನುಭವಿಗಳು ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳು ಇವರೆಲ್ಲರೂ ಸಹ ಸದರಿ ಯೋಜನೆಯ ಅಡಿ ವೈಯಕ್ತಿಕ ಕಾಮಗಾರಿಗಳನ್ನು ಪಡೆಯಲು ಅರ್ಹರಿಸುತ್ತಾರೆ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸರ್ಕಾರದ ಅನುಮತಿ, ಆದ್ರೆ ಕಂಡಿಷನ್ ಅಪ್ಲೈ ಏನೆಲ್ಲಾ ರೂಲ್ಸ್ ಫಾಲೋ ಮಾಡ್ಬೇಕು ನೋಡಿ.!

ಜಿಲ್ಲೆಯ ಗ್ರಾಮೀಣ ಭಾಗದ ರೈತರು ವೈಯುಕ್ತಿಕ ದನದ ದೊಡ್ಡಿ ನಿರ್ಮಾಣಕ್ಕಾಗಿ ತಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ ರೈತರಿಗೆ ನರೇಗಾ ಯೋಜನೆ ಅಡಿ ಈ ವರ್ಷ ಒಳ್ಳೆಯ ಸಿಹಿ ಸುದ್ದಿ ಸಿಕ್ಕಿದೆ. ರೈತರುಗಳು ಹತ್ತಿರದಲ್ಲಿರುವ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆಗಳನ್ನು ನೀಡಿ ಈ ಯೋಜನೆ ಫಲಾನುಭವಿಗಳಾಗಬಹುದು. ಆದರೆ ಕೆಲವೊಂದು ಷರತ್ತುಗಳು ಇಲ್ಲಿ ರೈತರಿಗೆ ಇರುತ್ತದೆ.

ಅದೇನೆಂದರೆ ಅವರು ಕಡ್ಡಾಯವಾಗಿ ಕರ್ನಾಟಕದ ರೈತರಾಗಿರಬೇಕು, ಅವರ ಬಳಿ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣಕ್ಕಾಗಿ ಸ್ವಂತ 22 ಅಡಿ ಉದ್ದ ಹಾಗೂ 12 ಅಡಿ ಅಗಲದ ಜಾಗ ಇರಬೇಕು, ಕನಿಷ್ಠ ನಾಲ್ಕು ಹಸುಗಳನ್ನಾದರೂ ಅವರು ಸಾಕುತ್ತಿರಬೇಕು, ಅವರು ಹಸುಗಳನ್ನು ಹೊಂದಿರುವ ಬಗ್ಗೆ ಸಂಬಂಧಪಟ್ಟ ವೈದ್ಯಾಧಿಕಾರಿಗಳ ಬಳಿ ದೃಢೀಕರಣ ಪತ್ರವನ್ನು ಕೂಡ ತರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅವರು ನರೇಗಾ ಕಾರ್ಡ್ ಹೊಂದಿರಬೇಕು.

ರೈತರಿಗೆ ಸಿಹಿಸುದ್ದಿ, ಕೃಷಿಹೊಂಡ ನಿರ್ಮಾಣ ಮಾಡಲು 75,000 ಸಹಾಯ ಧನ ನೀಡುತ್ತಿದ್ದಾರೆ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

ಇಷ್ಟೆಲ್ಲಾ ದಾಖಲಾತಿಗಳು ಇದ್ದಲ್ಲಿ ತಪ್ಪದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಫಲಾನುಭವಿಗಳಾಗಬಹುದು. ಈ ವಿಷಯವನ್ನು ನಿಮ್ಮ ಕುಟುಂಬದವರು ಸ್ನೇಹಿತರ ಜೊತೆ ಹಂಚಿಕೊಳ್ಳುವ ಮೂಲಕ ಇನ್ನು ಹೆಚ್ಚಿನ ರೈತರಿಗೆ ಈ ಮಾಹಿತಿ ತಿಳಿಯುವಂತೆ ಮಾಡಿ. ಇದರಿಂದ ಕರ್ನಾಟಕದಾದ್ಯಂತ ಇರುವ ಸಾಕಷ್ಟು ರೈತರಿಗೆ ಖಂಡಿತವಾಗಿ ಅನುಕೂಲ ಆಗಲಿದೆ. ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವ ಈ ಹೊಸ ಯೋಜನೆ ಬಗ್ಗೆ ರೈತರಿಗೆ ಎಷ್ಟು ಅನುಕೂಲ ಆಗುತ್ತಿದೆ ಎಂದು ನಿಮ್ಮ ಅಭಿಪ್ರಾಯವನ್ನು ಅನಿಸಿಕೆ ಬಗ್ಗೆ ಕೂಡ ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

 

ಶಿಕ್ಷಕರ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…

0

 

ಏಕಲವ್ಯ ಮಾದರಿ ವಸತಿ ಶಾಲೆಯನ್ನು (Ekalavya Modern Residential School) ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲಾಗಿದೆ. ಭಾರತದಲ್ಲಿ ಅನೇಕ ಬುಡಕಟ್ಟು ಜನಾಂಗಗಳಿವೆ. ಇವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಾಕಷ್ಟು ಹಿಂದುಳಿದರುವುದರಿಂದ ಆ ವರ್ಗಕ್ಕೆ ಸೇರಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ.

ದೇಶದ ಎಲ್ಲ ಮಕ್ಕಳಂತೆ ಅವರು ಸಹ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಶಿಕ್ಷಣ ಸೇತುವೆಯಾಗಬೇಕು ಎನ್ನುವ ಕಾರಣಕ್ಕೆ ಭಾರತದಾದ್ಯಂತ ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ನಿರ್ಮಿಸಿ ಮಕ್ಕಳಿಗೆ ಶಿಕ್ಷಣ ಸೌಲಭ್ಯದ ಜೊತೆಗೆ ಇನ್ನಿತರ ಸೌಕರ್ಯಗಳನ್ನು ಕೂಡ ಸರ್ಕಾರ ನೋಡಿಕೊಳ್ಳಲಾಗುತ್ತದೆ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸರ್ಕಾರದ ಅನುಮತಿ, ಆದ್ರೆ ಕಂಡಿಷನ್ ಅಪ್ಲೈ ಏನೆಲ್ಲಾ ರೂಲ್ಸ್ ಫಾಲೋ ಮಾಡ್ಬೇಕು ನೋಡಿ.!

ಈಗ ಈ ಶಾಲೆಯಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇದ್ದು ಅವುಗಳ ನೇಮಕಾತಿಗಾಗಿ ಅಧಿಸೂಚನೆ (EMRS Job notification) ಹೊರಬಿದ್ದಿದೆ. ಇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವವರು ಅಂಕಣವನ್ನು ಪೂರ್ತಿಯಾಗಿ ಓದಿ ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ಎದುರಿಸಿ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ.

ಉದ್ಯೋಗ ಸಂಸ್ಥೆ:- ಏಕಲವ್ಯ ಮಾದರಿ ವಸತಿ ಶಾಲೆ.

ಒಟ್ಟು ಹುದ್ದೆಗಳ ಸಂಖ್ಯೆ:- 4062.

ಹುದ್ದೆಗಳ ವಿವರ:-
●:ಪ್ರಿನ್ಸಿಪಾಲ್ – 303
● ಪೋಸ್ಟ್ ಗ್ರಾಜುಯೇಟೆಡ್ ಟೀಚರ್ಸ್ (PGT) – 2266
● ಅಕೌಂಟೆಂಟ್ – 361
● ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ – 759
● ಲ್ಯಾಬ್ ಅಟೆಂಡೆಂಟ್ – 373.

ರೈತರಿಗೆ ಸಿಹಿ ಸುದ್ದಿ, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಎಲ್ಲಾ ಜಮೀನುಗಳಿಗೂ ರಸ್ತೆ ಭಾಗ್ಯ.!

ಉದ್ಯೋಗ ಸ್ಥಳ:- ಭಾರತದಾತ್ಯಂತ…

ವೇತನ ಶ್ರೇಣಿ:- ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಹುದ್ದೆಯನುಸಾರ ಮಾಸಿಕವಾಗಿ 18,000 ದಿಂದ 2,09,200 ವೇತನ ಸಿಗಲಿದೆ.

ಶೈಕ್ಷಣಿಕ ವಿದ್ಯಾರ್ಹತೆ:-
● ಪ್ರಿನ್ಸಿಪಾಲ್ – ಸ್ನಾತಕೋತ್ತರ ಪದವಿ, ಬಿ.ಎಡ್
●:PGT – ಪದವಿ / ಸ್ನಾತಕೋತ್ತರ ಪದವಿ + B.Ed, M.Sc, ME / M.Tech in Computer Science/IT, MCA
● ಅಕೌಂಟೆಂಟ್ – ವಾಣಿಜ್ಯದಲ್ಲಿ ಪದವಿ
● ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ – 12ನೇ ತರಗತಿ
● ಲ್ಯಾಬ್ ಅಟೆಂಡೆಂಟ್ – 10ನೇ ತರಗತಿ.

ರೈತರಿಗೆ ಸಿಹಿ ಸುದ್ದಿ, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಎಲ್ಲಾ ಜಮೀನುಗಳಿಗೂ ರಸ್ತೆ ಭಾಗ್ಯ.!

ವಯೋಮಿತಿ:-
● ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು.
● ಪ್ರಿನ್ಸಿಪಾಲ್ ಹುದ್ದೆಗೆ ಗರಿಷ್ಠ ವಯೋಮಿತಿ 50 ವರ್ಷಗಳು
● PGT ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 40 ವರ್ಷಗಳು
● ಅಕೌಂಟೆಂಟ್, ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ & ● ಲ್ಯಾಬ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 30 ವರ್ಷಗಳು.

ವಯೋಮಿತಿ ಸಡಿಲಿಕೆ:-
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು
● PWD ಅಭ್ಯರ್ಥಿಗಳಿಗೆ 10 ವರ್ಷಗಳು

ರೈತರಿಗೆ ಸಿಹಿ ಸುದ್ದಿ, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಎಲ್ಲಾ ಜಮೀನುಗಳಿಗೂ ರಸ್ತೆ ಭಾಗ್ಯ.!

ಅರ್ಜಿ ಶುಲ್ಕ:-
● ಆನ್ಲೈನ್ ಮೂಲಕವೇ ಅರ್ಜಿ ಶುಲ್ಕ ಪಾವತಿಸಬೇಕು.
● SC/ST/PwD  ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
● ಎಲ್ಲಾ ಇತರ ಅಭ್ಯರ್ಥಿಗಳಿಗೆ ಹುದ್ದೆಯನುಸಾರ ನಿಗದಿಪಡಿಸಿರುವ ಅರ್ಜಿ ಶುಲ್ಕ ಪಾವತಿಸಬೇಕು
●:ಪ್ರಿನ್ಸಿಪಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2000ರೂ.
● PGT ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 1500ರೂ.
● ಅಕೌಂಟೆಂಟ್, ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ & ● ಲ್ಯಾಬ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 1000ರೂ.

ಅಜ್ಜಿ ಸಲ್ಲಿಸುವ ವಿಧಾನ:-
● emrs.tribal.gov.in ಈ ವೆಬ್ಸೈಟ್ ವಿಳಾಸಕ್ಕೆ ಭೇಟಿ ಕೊಟ್ಟು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
● ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಕೆ ಯಶಸ್ವಿಯಾದ ಬಳಿಕ ಸ್ವೀಕೃತಿ ಪತ್ರವನ್ನು ತಪ್ಪದೇ ಪಡೆದು ಇಟ್ಟುಕೊಳ್ಳಬೇಕು.

ನಿಮ್ಮ ಭವಿಷ್ಯದಲ್ಲಿ ಆಗುವ ಘಟನೆಗಳು ಹಾಗೂ ನಿಮ್ಮ ಜೀವನದ ಕಥೆಯನ್ನು ತಿಳಿದುಕೊಳ್ಳಲು ಈ ಎರಡು ಪುಸ್ತಕಗಳಲ್ಲಿ ಒಂದನ್ನು ಆಯ್ಕೆ ಮಾಡಿ.!

ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಕೌಶಲ್ಯ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ.

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 28.06.2023.
● ಅರ್ಜಿ ಸಲ್ಲಿಸಲು ಮತ್ತು ಅರ್ಜಿಶುಲ್ಕ ಪಾವತಿಸಲು ಕೊನೆಯ ದಿನಾಂಕ – 18.08.2023.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸರ್ಕಾರದ ಅನುಮತಿ, ಆದ್ರೆ ಕಂಡಿಷನ್ ಅಪ್ಲೈ ಏನೆಲ್ಲಾ ರೂಲ್ಸ್ ಫಾಲೋ ಮಾಡ್ಬೇಕು ನೋಡಿ.!

 

ಕರ್ನಾಟಕದಲ್ಲಿ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನ ಆದಮೇಲೆ ರೇಷನ್ ಕಾರ್ಡಿಗೆ (Ration card) ವಿಪರೀತವಾದ ಬೇಡಿಕೆ ಸೃಷ್ಟಿಯಾಗಿದೆ. ಯಾರೆಲ್ಲಾ ರೇಷನ್ ಕಾರ್ಡ್ ಗಳನ್ನು ಹೊಂದಿಲ್ಲ (new Ration card) ಅವರು ಅರ್ಜಿ ಸಲ್ಲಿಸುತ್ತಿದ್ದಾರೆ ಮತ್ತು ರೇಷನ್ ಕಾರ್ಡ್ ಗಳಲ್ಲಿ ತಿದ್ದುಪಡಿ (Ration card correction) ಮಾಡಿಕೊಳ್ಳಬೇಕಾದವರು ಕೂಡ ಕಾಯುತ್ತಿದ್ದಾರೆ.

ಚುನಾವಣೆ ನೀತಿ ಸಂಹಿತೆ (Code of Conduct) ಜಾರಿಯಲ್ಲಿದ್ದ ಕಾರಣ ಮೂರು ತಿಂಗಳ ಅರ್ಜಿ ಸಲ್ಲಿಸಿದವರಿಗೂ ಕೂಡ ರೇಷನ್ ಕಾರ್ಡ್ ವಿತರಣೆಯಾಗಿಲ್ಲ. ಆದರೆ ಈಗ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (Food and Civil supply Minister K.H Muniyappa) ಅವರು ಈ ಕುರಿತು ರಾಜ್ಯದ ಜನತೆಗೆ ಸಿಹಿಸುದ್ದಿ ನೀಡಿದ್ದಾರೆ.

ರೈತರಿಗೆ ಸಿಹಿಸುದ್ದಿ, ಕೃಷಿಹೊಂಡ ನಿರ್ಮಾಣ ಮಾಡಲು 75,000 ಸಹಾಯ ಧನ ನೀಡುತ್ತಿದ್ದಾರೆ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

ಶೀಘ್ರದಲ್ಲಿ ಆಗಸ್ಟ್ 15 ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗುವುದು ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ. ಇದರ ಪ್ರಕಾರವಾಗಿ ಸಿಟಿಜನ್ ಲಾಗಿನ್ (citizen log in) ಮೂಲಕ ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಸರ್ಕಾರ ಸೂಚಿಸುವ ಸೇವಾಕೇಂದ್ರಗಳಾದ.

ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹೋಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬಹುದು. ಅಥವಾ ಈಗಾಗಲೇ ರೇಷನ್ ಕಾರ್ಡ್ ಹೊಂದಿದ್ದು ಅದು ಸ್ಥಗಿತಗೊಂಡಿದ್ದಾರೆ ಅಥವಾ ಅದರಲ್ಲಿ ತಿದ್ದುಪಡಿಗಳಿದ್ದರೆ ಸರಿಯಾದ ದಾಖಲೆಗಳನ್ನು ಸಲ್ಲಿಸಿ ಅದನ್ನು ಸರಿಪಡಿಸಿಕೊಳ್ಳಬಹುದು ಎಂದಿದ್ದಾರೆ.

ರೈತರಿಗೆ ಸಿಹಿ ಸುದ್ದಿ, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಎಲ್ಲಾ ಜಮೀನುಗಳಿಗೂ ರಸ್ತೆ ಭಾಗ್ಯ.!

ಇದರ ಜೊತೆಗೆ ಆಹಾರ ಸಚಿವರು ಮತ್ತೊಂದು ಪ್ರಮುಖವಾದ ವಿಷಯವನ್ನು ತಿಳಿಸಿದ್ದಾರೆ ಅದೇನೆಂದರೆ BPL ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಹಲವು ಯೋಜನೆಗಳು ಸಿಗುವುದರಿಂದ ಅನುಕೂಲಸ್ಥರು ಕೂಡ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಮರೆಮಾಚಿ BPL ಕಾರ್ಡ್ಗಳನ್ನು ಹೊಂದಿರುವುದು ಆಹಾರ ಇಲಾಖೆ ಗಮನಕ್ಕೂ ಬಂದಿದೆ.

ಅಂತವರ ಮೇಲೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿದೆ ಮತ್ತು ಮುಂದೆಯೂ ಕೂಡ ಇದರ ಕುರಿತು ಪರಿಶೀಲನೆ ನಡೆಸಿ ಕಾರ್ಡ್ ರದ್ದುಪಡಿಸಿ ಕ್ರಮ ಕೈಗೊಳ್ಳಲಿದ್ದೇವೆ. ಈಗಲೂ ಅನುಕೂಲಸ್ಥರಾಗಿದ್ದರೂ ಕೂಡ BPL ಕಾರ್ಡ್ ಗಾಗಿ ಅರ್ಜಿ ಸಲ್ಲಿಸುತ್ತಿರುವುದರಿಂದ ರೇಷನ್ ಕಾರ್ಡ್ ಪಡೆಯಲು ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿರುವ ಬಗ್ಗೆ ತಿಳಿಸಿದ್ದಾರೆ.

ನಿಮ್ಮ ಭವಿಷ್ಯದಲ್ಲಿ ಆಗುವ ಘಟನೆಗಳು ಹಾಗೂ ನಿಮ್ಮ ಜೀವನದ ಕಥೆಯನ್ನು ತಿಳಿದುಕೊಳ್ಳಲು ಈ ಎರಡು ಪುಸ್ತಕಗಳಲ್ಲಿ ಒಂದನ್ನು ಆಯ್ಕೆ ಮಾಡಿ.!

ಸರ್ಕಾರ 2016ರಲ್ಲಿ ರೂಪಿಸಿದ್ದ ಮಾನದಂಡಗಳನ್ನು ಮೀರಿ ಯಾರು ಸಹ BPL ಕಾರ್ಡ್ ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅದರ ಜೊತೆ ಈಗ ಆಹಾರ ಸಚಿವರು ಯಾರು ಸ್ವಂತ ವೈಟ್ ಬೋರ್ಡ್ ಕಾರುಗಳನ್ನು ಹೊಂದಿದ್ದಾರೆ ಅವರಿಗೂ ಸಹ BPL ಕಾರ್ಡ್ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ ಜೀವನೋಪಾಯಕ್ಕಾಗಿ ಹಳದಿ ಬೋರ್ಡ್ ವಾಹನಗಳನ್ನು ಹೊಂದಿರುವವರಿಗೆ ಸಮಸ್ಯೆ ಇಲ್ಲ ಎನ್ನುವುದನ್ನು ಸಹ ಉಲ್ಲೇಖಿಸಿದ್ದಾರೆ.

ಹಾಗಾದರೆ ಸರ್ಕಾರದ ನಿಯಮದ ಪ್ರಕಾರ ಯಾರೆಲ್ಲಾ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಅರ್ಹರು ಮತ್ತು BPL ಕಾರ್ಡ್ ಪಡೆಯಲು ಸರ್ಕಾರದ ಮನದಂಡ ಏನು ಎನ್ನುವ ಎನ್ನುವ ಪಟ್ಟಿ ಇಲ್ಲಿದೆ ನೋಡಿ.

ಜಮೀನು ಇಲ್ಲದವರಿಗೆ ಸಿಹಿ ಸುದ್ದಿ, ಪ್ರತಿ ಕುಟುಂಬಕ್ಕೂ 2 ಎಕರೆ ಜಮೀನು ಘೋಷಣೆ ಮಾಡಿದ ಸರ್ಕಾರ.!

● ಕರ್ನಾಟಕದ ನಿವಾಸಿಗಳಾಗಿರಬೇಕು
● ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ದಾಖಲೆಗಳನ್ನು ಕೂಡ ಹೊಂದಿರಬೇಕು.
● BPL ರೇಷನ್ ಕಾರ್ಡ್ ಪಡೆಯಲು ಆದಾಯ ಪ್ರಮಾಣ ಪತ್ರ ಕಡ್ಡಾಯ
● ಸರ್ಕಾರಿ ಹುದ್ದೆಯಲ್ಲಿರುವ ಕುಟುಂಬಗಳು ಮತ್ತು ಆದಾಯ ತೆರಿಗೆ, ವೃತ್ತಿ ತೆರಿಗೆ, GST ಕಟ್ಟುವ ಕುಟುಂಬಸ್ಥರು BPL ಕಾರ್ಡಿಗೆ ಅರ್ಹರಲ್ಲ.

● ಸರ್ಕಾರಿ ವಲಯದ ಉದ್ಯಮಗಳು, ಮಂಡಳಿಗಳು, ಸ್ವಾಯತ್ತ ಮಂಡಳಿಗಳು, ಸಂಸ್ಥೆಗಳು, ನಿಗಮಗಳು, ಸಹಕಾರಿ ಸಂಸ್ಥೆಗಳ ಖಾಯಂ ಉದ್ಯೋಗಿಗಳು BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ
● ವೈದ್ಯರು, ವಕೀಲರು, ಲೆಕ್ಕಪರಿಶೋಧಕರು BPL ಕಾರ್ಡ್ ಹೊಂದಲು ಅರ್ಹರಲ್ಲ
● ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ನೌಕರರು ಕೂಡ ಅರ್ಹರಲ್ಲ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವವರು ತಪ್ಪದೇ ಈ ಚೆಕ್ ಲಿಸ್ಟ್ ನೋಡಿ, ಇದರಲ್ಲಿ ನಿಮ್ಮ ಹೆಸರು ಇಲ್ಲ ಅಂದ್ರೆ ಮತ್ತೊಮ್ಮೆ ಅರ್ಜಿ ಹಾಕಬೇಕಾಗುತ್ತೆ.!

● 3 ಹೆಕ್ಟರ್ ಅಂದರೆ 7.5 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ಕುಟುಂಬಗಳು ಅರ್ಹರಲ್ಲ
● ಜೀವನೋಪಾಯಕ್ಕಾಗಿ ಬಳಸುವ ಹಳದಿ ಬೋರ್ಡ್ ವಾಹನಗಳನ್ನು ಹೊರತುಪಡಿಸಿ ಸ್ವಂತ ಕಾರು ಅಥವಾ 100CC ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ವಾಹನಗಳನ್ನು ಹೊಂದಿರುವವರು BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ
● ಅಧಿಸೂಚಿತ ಗುತ್ತಿಗೆದಾರರು, APMC ವ್ಯಾಪಾರಿಗಳು ಕಮಿಷನ್ ಏಜೆಂಟ್ ಗಳು BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂದು ಸರ್ಕಾರದ ನಿಯಮಾವಳಿಯಲ್ಲಿದೆ.

ರೈತರಿಗೆ ಸಿಹಿಸುದ್ದಿ, ಕೃಷಿಹೊಂಡ ನಿರ್ಮಾಣ ಮಾಡಲು 75,000 ಸಹಾಯ ಧನ ನೀಡುತ್ತಿದ್ದಾರೆ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

 

ಮಳೆಗಾಲದಲ್ಲಿ (Rain water) ಕೃಷಿ ಜಮೀನಿನಲ್ಲಿ ನೀರನ್ನು ಕೃಷಿಕೊಂಡದ (agricultural pit ) ಮೂಲಕ ಸಂಗ್ರಹಣೆ ಮಾಡಿ ಬಳಿಕ ನೀರಿನ ಅಭಾವ ಇರುವ ಸಮಯದಲ್ಲಿ ಅದನ್ನು ರೈತರು ಬಳಸಿಕೊಳ್ಳಲು ಕೃಷಿ ಹೊಂಡಗಳು ಸಹಾಯ ಮಾಡುತ್ತದೆ. ಹೂವು, ಹಣ್ಣು, ತರಕಾರಿ ಮತ್ತು ಸಾಂಬಾರ್ ಪದಾರ್ಥಗಳನ್ನು ಬೆಳೆಯುವ ರೈತರುಗಳು ತಮ್ಮ ಜಮೀನಿನಲ್ಲಿ ಈ ರೀತಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ನೀರು ಸಂಗ್ರಹಣೆ ಮಾಡುತ್ತಿದ್ದಾರೆ.

ತೋಟಗಾರಿಕೆ ಮತ್ತು ನೀರಾವರಿ ಉತ್ತೇಜಿಸುವ ಸಲುವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು (Government) ಕೂಡ ಕೃಷಿ ಹೊಂಡ ನಿರ್ಮಿಸುವ ರೈತರಿಗೆ ಸಹಾಯಧನ ನೀಡಿ ನೆರವಾಗುತ್ತಿದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿ (National horticulture mission) 2005-06ನೇ ಸಾಲಿನ 10ನೇ ಪಂಚವಾರ್ಷಿಕ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸುವ ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ಸಹಾಯ ನೀಡುತ್ತಿವೆ.

ರೈತರಿಗೆ ಸಿಹಿ ಸುದ್ದಿ, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಎಲ್ಲಾ ಜಮೀನುಗಳಿಗೂ ರಸ್ತೆ ಭಾಗ್ಯ.!

ನೀರಿನ ಪ್ರಾಮುಖ್ಯವನ್ನು ಅರಿತು ಮಳೆಗಾಲದಲ್ಲಿ ಮತ್ತು ನೀರಿನ ಪ್ರಮಾಣ ಹೆಚ್ಚಾಗಿದ್ದ ಸಮಯದಲ್ಲಿ ಅದನ್ನು ಸಂಗ್ರಹಿಸಿಕೊಂಡು ಬಳಿಕ ಬೇಸಿಗೆ ಕಾಲದಲ್ಲಿ ಅಥವಾ ನೀರಿನ ಅಭಾವ ಉಂಟಾದಾಗ ರೈತರು ಅದನ್ನು ಸದುಪಯೋಗ ಮಾಡಿಕೊಳ್ಳಲು ಉತ್ತೇಜಿಸುವ ಸಲುವಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಕೃಷಿ ಹೊಂಡ ನಿರ್ಮಾಣಕ್ಕೆ ಎಲ್ಲಾ ವರ್ಗದ ರೈತರಿಗೂ ಅದರ ವೆಚ್ಚದ ಶೇಕಡ 50% ಪ್ರತಿಶತದವರೆಗೂ ಕೂಡ ಸರ್ಕಾರ ಸಹಾಯಧನ ನೀಡುತ್ತಿದೆ.

ರಾಜ್ಯ ಸರ್ಕಾರವು ಈ ವೆಚ್ಚದ 35%-50% ಭರಿಸುತ್ತದೆ. ಉಳಿದ ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಕೃಷಿ ಹೊಂಡ ನಿರ್ಮಾಣ ಅಥವಾ ನೀರು ಹೊಂಡ ನಿರ್ಮಾಣಕ್ಕಾಗಿ ಬೇಕಾಗುವ ತಾಡಪತ್ರಿ ಅಥವಾ ನೀರು ನಿಲ್ಲಿಸಲು ಬೇಕಾಗುವ ಪ್ಲಾಸ್ಟಿಕನ್ನು ಖರೀದಿಸಿಕೊಳ್ಳಲು ಜೊತೆಗೆ ಕೂಲಿ ಕಾರ್ಮಿಕರಿಂದ ಅಥವಾ ಯಂತ್ರಗಳ ಸಹಾಯದಿಂದ ಬದು ನಿರ್ಮಾಣ ಮಾಡಿ ನೀರನ್ನು ಕ್ರೋಢೀಕರಿಸಿ ಕೃಷಿಗೆ ಬಳಸಿಕೊಳ್ಳಲು ನಿರ್ಮಿಸುವ ವೈಯಕ್ತಿಕ ನೀರು ಸಂಗ್ರಹಣೆ ಘಟಕಕ್ಕೆ ಅದರ ನಿರ್ಮಾಣ ಖರ್ಚಿಗಾಗಿ ರೈತರಿಗೆ 75,000 ವರೆಗೂ ಕೂಡ ಈ ಸಹಾಯಧನ ಸಿಗಲಿದೆ.

ನಿಮ್ಮ ಭವಿಷ್ಯದಲ್ಲಿ ಆಗುವ ಘಟನೆಗಳು ಹಾಗೂ ನಿಮ್ಮ ಜೀವನದ ಕಥೆಯನ್ನು ತಿಳಿದುಕೊಳ್ಳಲು ಈ ಎರಡು ಪುಸ್ತಕಗಳಲ್ಲಿ ಒಂದನ್ನು ಆಯ್ಕೆ ಮಾಡಿ.!

ಇದನ್ನು ಪಡೆದುಕೊಳ್ಳಲು ರೈತರು ದಾಖಲೆಗಳ ಸಮೇತ ಗ್ರಾಮ ಪಂಚಾಯಿತಿ ಅಥವಾ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರ / ಸಹಾಯಕ ತೋಟಗಾರಿಕೆ ಅಧಿಕಾರಿ / ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಭೇಟಿ ಮಾಡಿದರೆ ಈ ಯೋಜನೆ ಕುರಿತು ನಿಮಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಾರೆ.

ಯೋಜನೆ ಕುರಿತು ಇರುವ ನಿಯಮಗಳು:-

● ಈ ಯೋಜನೆಯಲ್ಲಿ ಸಹಾಯಧನ ಪಡೆಯಲು ರೈತರು 20×20×3 ಮೀ ಅಳತೆಯ 1:1 ಇಳಿಜಾರಿನಂತೆ ಕೃಷಿ ಹೊಂಡವನ್ನು ಕಡ್ಡಾಯವಾಗಿ ನಿರ್ಮಿಸಬೇಕು.
● ಈ ಕೃಷಿಹೊಂಡದ ನೀರು ಶೇಖರಣೆ ಸಾಮರ್ಥ್ಯ 1200 ಘ.ಮೀ ಇರಬೇಕು.

● ತಳಭಾಗದಲ್ಲಿ ನೀರು ಇಂಗಬಾರದು ಎನ್ನುವ ಕಾರಣಕ್ಕಾಗಿ ನಿರ್ಮಿಸಿರುವ ಕೃಷಿ ಹೊಂಡಕ್ಕೆ 300 ಮೈಕ್ರಾನ್ ISI ಗುಣಮಟ್ಟದ ಪಾಲಿಥೀನ್ ಹೊದಿಕೆಯನ್ನು ಕೃಷಿ ಇಲಾಖೆಯು ಸೂಚಿಸಿರುವ ಏಜೆನ್ಸಿಯಿಂದಲೇ ಖರೀದಿಸಿ ರೈತರು ಬಳಸಿರಬೇಕು.
● ನೀರು ಸಂಗ್ರಹಣೆಯಾದಾಗ ಒಳಹರಿವಿಗಾಗಿ ಮತ್ತು ನೀರಿನ ಮಟ್ಟ ಹೆಚ್ಚಾದಾಗ ಹೆಚ್ಚುವರಿ ನೀರನ್ನು ಹೊರಗೆ ಹೋಗಲು ಔಟ್ಲೆಟ್ ನಿರ್ಮಾಣ ಮಾಡಬೇಕು.

● ಈಶಾನ್ಯದ 8 ರಾಜ್ಯಗಳನ್ನು ಹೊರತುಪಡಿಸಿ ಎಲ್ಲ ರಾಜ್ಯದ ರೈತರು ಅರ್ಹರಿದ್ದಲ್ಲಿ ಈ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದು.
● ಕೇಂದ್ರಾಡಳಿತ ಪ್ರದೇಶಗಳಾದ ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ ಹಿಮಾಚಲ ಪ್ರದೇಶ, ಉತ್ತರಖಾಂಡ ಈ ಪ್ರದೇಶಗಳಲ್ಲಿನ ರೈತರ ಕೂಡ ಈ ಸಹಾಯಧನ ಪಡೆಯಲು ಅರ್ಹರಿದರೆ ಅರ್ಜಿ ಸಲ್ಲಿಸಬಹುದು.

ಜಮೀನು ಇಲ್ಲದವರಿಗೆ ಸಿಹಿ ಸುದ್ದಿ, ಪ್ರತಿ ಕುಟುಂಬಕ್ಕೂ 2 ಎಕರೆ ಜಮೀನು ಘೋಷಣೆ ಮಾಡಿದ ಸರ್ಕಾರ.!

ರೈತರಿಗೆ ಸಿಹಿ ಸುದ್ದಿ, ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಎಲ್ಲಾ ಜಮೀನುಗಳಿಗೂ ರಸ್ತೆ ಭಾಗ್ಯ.!

 

ಹಳ್ಳಿಯಲ್ಲಿ ಕೃಷಿ ಮಾಡುವ ರೈತನಿಗೆ (Farmer) ಇರುವ ಅನೇಕ ಸಮಸ್ಯೆಗಳ ಜೊತೆಗೆ ತನ್ನ ಸ್ವಂತ ಕೃಷಿ ಭೂಮಿಗೆ (Agricultur land) ಹೋಗಲು ದಾರಿ (road) ಇಲ್ಲದಿರುವುದು ಕೂಡ ಒಂದು ಸಮಸ್ಯೆ. ಈಗಲೂ ಕೂಡ ನಮ್ಮ ರಾಜ್ಯದಲ್ಲಿ ಅನೇಕ ರೈತರ ಅವರ ಭೂಮಿಗಳಿಗೆ ಹೋಗಲು ರಸ್ತೆ ಮಾರ್ಗ ಇಲ್ಲದಿರುವುದರಿಂದ ಮತ್ತೊಬ್ಬ ರೈತನ ಜಮೀನಿನ ಮೇಲೆ ತನ್ನ ಜಮೀನಿಗೆ ಹೋಗಬೇಕಾಗುತ್ತದೆ.

ಆ ರೈತನ ಜೊತೆ ಮನಸ್ತಾಪವಾದಾಗ, ಮಳೆ ಬಂದಾಗ, ಜಮೀನುಗಳಲ್ಲಿ ಬೆಳೆ ಇದ್ದಾಗ, ವಾಹನಗಳಲ್ಲಿ ಹೋಗುವುದು ಕಷ್ಟವಾಗಿರುತ್ತದೆ. ಈ ಸಮಸ್ಯೆಯನ್ನು ಅರಿತು 2017-18 ನೇ ಸಾಲಿನಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರವು (government) ನಮ್ಮ ಹೊಲ ನಮ್ಮ ದಾರಿ (Namma Hola namma Dari) ಎನ್ನುವ ಯೋಜನೆಯನ್ನು ರೂಪಿಸಿತ್ತು. ಈಗ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಯಲ್ಲಿರುವುದರಿಂದ ಯೋಜನೆಯನ್ನು ಪುನಶ್ಚೇತನಗೊಳಿಸಲಾಗಿದೆ.

ನಿಮ್ಮ ಭವಿಷ್ಯದಲ್ಲಿ ಆಗುವ ಘಟನೆಗಳು ಹಾಗೂ ನಿಮ್ಮ ಜೀವನದ ಕಥೆಯನ್ನು ತಿಳಿದುಕೊಳ್ಳಲು ಈ ಎರಡು ಪುಸ್ತಕಗಳಲ್ಲಿ ಒಂದನ್ನು ಆಯ್ಕೆ ಮಾಡಿ.!

ಯಾವ ರೈತರಿಗೆ ತಮ್ಮ ಜಮೀನುಗಳಿಗೆ ಹೋಗಲು ರಸ್ತೆ ಇಲ್ಲ ಅವರು ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಿದರೆ ನಮ್ಮ ಹೊಲ ನಮ್ಮ ದಾರಿ ಯೋಜನೆಯ ಮಾರ್ಗಸೂಚಿ ಪ್ರಕಾರ ಕ್ರಮ ಕೈಗೊಂಡು ಗ್ರಾಮ ಪಂಚಾಯಿತಿ ವತಿಯಿಂದ 25 ಕಿಲೋಮೀಟರ್ ವರೆಗೂ ಕೂಡ ರಸ್ತೆ ನಿರ್ಮಿಸಿ ಕೊಡಲಾಗುತ್ತದೆ. ಇದರ ಪ್ರಕಾರವಾಗಿ ರೈತನು ಈ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬಹುದು, ಇದಕ್ಕಾಗಿ ಏನೆಲ್ಲ ದಾಖಲೆಗಳನ್ನು ಕೊಡಬೇಕು ಹಾಗೂ ಇದಕ್ಕೆ ನಿಯಮಗಳು ಏನಿದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ನಮ್ಮ ಹೊಲ ನಮ್ಮ ದಾರಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-

● ರೈತನು ಹೊಲದ ಸರ್ವೆ ನಂಬರ್, ಹೊಲದ ವಿಸ್ತೀರ್ಣ ಹಾಗೂ ಜಮೀನಿಗೆ ಸಂಬಂಧಪಟ್ಟ ಹಾಗೆ ಎಲ್ಲಾ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಗ್ರಾಮ ಪಂಚಾಯಿತಿಗೆ ನೀಡಬೇಕು.
● ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ನಿಮ್ಮ ಅರ್ಜಿಯ ಕುರಿತಾಗಿ ಚರ್ಚಿಸಿ ಅನುಮೋದನೆ ನೀಡಲಾಗುತ್ತದೆ.
● ಇದನ್ನು ವಾರ್ಷಿಕ ಕ್ರಿಯೆ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತ್ ಸೇರಿಸುತ್ತದೆ.
● ಆ ಮೂಲಕ ನಿಮಗೆ ಅನುದಾನ ನೀಡುವ ಬಗ್ಗೆ ಚರ್ಚೆ ಮಾಡಿ ಸಾಮಾನ್ಯ ಸಭೆಯಲ್ಲಿ ಎಷ್ಟು ಅನುದಾನ ನೀಡಬೇಕು ಎನ್ನುವುದನ್ನು ಚರ್ಚಿಸಿ ಅಷ್ಟು ಹಣವನ್ನು ಮಂಜೂರು ಮಾಡಲಾಗುತ್ತದೆ.

ಜಮೀನು ಇಲ್ಲದವರಿಗೆ ಸಿಹಿ ಸುದ್ದಿ, ಪ್ರತಿ ಕುಟುಂಬಕ್ಕೂ 2 ಎಕರೆ ಜಮೀನು ಘೋಷಣೆ ಮಾಡಿದ ಸರ್ಕಾರ.!

ನಮ್ಮ ಹೊಲ ನಮ್ಮ ದಾರಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

● ಜಮೀನಿನ ಪೂರ್ಣ ಸರ್ವೆಯ ನಕ್ಷೆ
● ಜಮೀನಿನ ಸರ್ವೇ ನಂಬರ್ ನ ನಾಲ್ಕು ದಿಕ್ಕುಗಳಲ್ಲಿರುವ ಜಮೀನುಗಳ ಸರ್ವೇ ನಂಬರ್ ಗಳ ಪೂರ್ಣ ಪ್ರಮಾಣದ ಸ್ಕೆಚ್.
● ಅರ್ಜಿದಾರ ರೈತನ ಜಮೀನಿನ ಸರ್ವೇ ನಂಬರಿನ ಟಿಪ್ಪಣಿಗಳು.
● ಜಮೀನಿನ ಪಹಣಿ ಮತ್ತು ಅರ್ಜಿದಾರ ರೈತನ ಆಧಾರ್ ಕಾರ್ಡ್
● ಅರ್ಜಿ ಸಲ್ಲಿಸಿರುವ ರೈತನ ಜಮೀನಿನ ಎದುರಿರುವ ಜಮೀನಿನ ಪಹಣಿ ಮತ್ತು ವಿಳಾಸ
● ಜಮೀನಿಗೆ ದಾರಿ ಇಲ್ಲದಿರುವ ಕುರಿತು ಪ್ರಮಾಣ ಪತ್ರ.

ಇಷ್ಟೆಲ್ಲಾ ದಾಖಲೆಗಳನ್ನು ಸಲ್ಲಿಸಿ ರೈತ ಮನವಿ ಸಲ್ಲಿಸಿದ ಮೇಲೆ ರೈತನ ಅರ್ಜಿ ಕುರಿತು ಗ್ರಾಮ ಸಭೆಯಲ್ಲಿ ಚರ್ಚೆಯಾಗಿ, ಪಂಚಾಯಿತಿ ಅನುಮತಿ ಸಿಕ್ಕ ಬಳಿಕ ನಿಮ್ಮ ಕೆಲಸಕ್ಕೆ ಚಾಲನೆ ದೊರೆಯುತ್ತದೆ. ಅಕ್ಕ ಪಕ್ಕದ ರೈತರ ಅನುಮತಿಯೊಂದಿಗೆ 60% ಯಂತ್ರೋಪಕರಣ ಮತ್ತು 40% ಕಾರ್ಮಿಕರ ಸಹಾಯದೊಂದಿಗೆ ರಸ್ತೆ ಕಾಮಗಾರಿ ಶುರುವಾಗುತ್ತದೆ.

ಹಳೆಯ ಬಟ್ಟೆಗಳು ಇವರ ಕೈಗೆ ಸಿಗದಂತೆ ನೋಡಿಕೊಳ್ಳಿ, ಈ ರೀತಿ ಹಳೆ ಬಟ್ಟೆಗಳನ್ನು ಮನೆಯಲ್ಲಿ ಬಳಸಿದರೆ ಕಷ್ಟಗಳು ಗ್ಯಾರಂಟಿ.!

ಆ ವ್ಯಾಪ್ತಿಯ ಪಂಚಾಯಿತಿ ಪ್ರತಿನಿಧಿಯೊಬ್ಬರು ನಿಮ್ಮ ಹೊಲಕ್ಕೆ ರಸ್ತೆ ಮಾಡಲು ಬೇಕಾದ ರಸ್ತೆ ಅಳತೆ ಕಾರ್ಯ ತಗುಲುವ ವೆಚ್ಚ ಹಾಗೂ ಉಪಕರಣ ಮತ್ತು ಕೆಲಸಗಾರ ವೆಚ್ಚ ಪಟ್ಟಿಯನ್ನು ತಯಾರಿ ಮಾಡುತ್ತಾರೆ. ತದನಂತರ ಆ ಗ್ರಾಮದಲ್ಲಿ ಇರುವ ಕೂಲಿ ಕಾರ್ಮಿಕರು ಜಾಬ್ ಕಾರ್ಡ್ ಇರುವರಿಗೆ ಅವಕಾಶ ನೀಡಿ ಪ್ರತಿಯೊಬ್ಬ ಕೆಲಸಗಾರನಿಗೂ ಅವರ ವೇತನ ಸೀದಾ ಅವರ ಅಕೌಂಟ್ ಜಮೆ ಆಗುವಂತೆ ಮಾಡುತ್ತಾರೆ. ಈ ಯೋಜನೆ ಬಗ್ಗೆ ಯಾವುದೇ ಗೊಂದಲ ಇದ್ದರೂ ಗ್ರಾಮ ಪಂಚಾಯಿತಿ ಸದಸ್ಯರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ನಿಮ್ಮ ಭವಿಷ್ಯದಲ್ಲಿ ಆಗುವ ಘಟನೆಗಳು ಹಾಗೂ ನಿಮ್ಮ ಜೀವನದ ಕಥೆಯನ್ನು ತಿಳಿದುಕೊಳ್ಳಲು ಈ ಎರಡು ಪುಸ್ತಕಗಳಲ್ಲಿ ಒಂದನ್ನು ಆಯ್ಕೆ ಮಾಡಿ.!

 

ಭವಿಷ್ಯ ಎನ್ನುವುದನ್ನು ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಕೂಡ ಆಸಕ್ತಿ ಇದ್ದೇ ಇರುತ್ತದೆ. ಯಾಕೆಂದರೆ ಭವಿಷ್ಯವನ್ನು ತಿಳಿದುಕೊಳ್ಳುವುದರಿಂದ ನಾವು ಸ್ವಲ್ಪ ಮುಂಜಾಗ್ರತೆಯಿಂದ ಇರಬಹುದು ಎನ್ನುವುದು ಒಂದು ಕಾರಣ, ಅದೇ ರೀತಿ ಭವಿಷ್ಯವನ್ನು ತಿಳಿದುಕೊಳ್ಳುವುದರಿಂದ ಮುಂದೆ ಒಳ್ಳೆಯದಾಗುತ್ತದೆ ಎನ್ನುವ ಭರವಸೆ ನಮ್ಮನ್ನು ಇನ್ನಷ್ಟು ದಿನ ನಮ್ಮ ಗುರಿ ಕಡೆ ಕಾರ್ಯ ಪ್ರವೃತ್ತರನ್ನಾಗಿ ಮಾಡುವ ಉತ್ಸಾಹ ತುಂಬಿಸುತ್ತದೆ.

ಇದೆಲ್ಲಾ ಕಾರಣದಿಂದಾಗಿ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಪ್ರತಿಯೊಬ್ಬರೂ ಕೂಡ ತುಡಿಯುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಅಥವಾ ನಿಮ್ಮ ಹುಟ್ಟಿದ ದಿನಾಂಕ, ನಕ್ಷತ್ರ ರಾಶಿಯ ಪ್ರಕಾರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭವಿಷ್ಯವನ್ನು ಶಾಸ್ತ್ರಜ್ಞರು ಹೇಳುತ್ತಾರೆ. ಈಗ ನಾವು ಮತ್ತೊಂದು ವಿಶೇಷ ವಿಧಾನದ ಮೂಲಕ ನಿಮಗೆ ಭವಿಷ್ಯವನ್ನು ಹೇಳಲು ಪ್ರಯತ್ನಿಸುತ್ತಿದ್ದೇವೆ.

ಜಮೀನು ಇಲ್ಲದವರಿಗೆ ಸಿಹಿ ಸುದ್ದಿ, ಪ್ರತಿ ಕುಟುಂಬಕ್ಕೂ 2 ಎಕರೆ ಜಮೀನು ಘೋಷಣೆ ಮಾಡಿದ ಸರ್ಕಾರ.!

ಕೆಲವೊಂದು ಸಮಯದಲ್ಲಿ ನಮ್ಮ ಬಗ್ಗೆ ನಮಗೆ ಯೋಚನೆ ಮಾಡುವಷ್ಟು ಕೂಡ ಸಮಯ ಇರುವುದಿಲ್ಲ. ಒಂದು ಬಾರಿ ತಾಳ್ಮೆಯಿಂದ ಕುಳಿತು ಇದುವರೆಗೆ ನಾವು ಏನೆಲ್ಲಾ ಮಾಡಿದ್ದೇವೆ ಮತ್ತು ಮುಂದೆ ಏನು ಮಾಡಿದರೆ ಆ ಕೆಲಸ ಸಕ್ಸಸ್ ಆಗುತ್ತದೆ ಎಂದು ತಾಳ್ಮೆಯಿಂದ ತಾಳೆ ಹಾಕಿ ನೋಡಿದರೆ ಭವಿಷ್ಯ ನಮ್ಮ ಕಣ್ಣೆದುರಿಗೆ ತೆರೆದುಕೊಳ್ಳುತ್ತದೆ.

ಆದರೂ ಕೂಡ ಅಷ್ಟೊಂದು ಸಮಯ ಇಲ್ಲದೆ ನಾವು ಒದ್ದಾಡುತ್ತಿರುತ್ತೇವೆ. ಈಗ ನಾನು ಹೇಳುವ ಈ ವಿಧಾನದ ಮೂಲಕ ನೀವೇ ನಿಮ್ಮ ಹಿಂದಿನ ಕಥೆಯನ್ನು ಒಮ್ಮೆ ನೆನೆದು ಹೌದೌದು ಎನ್ನುತ್ತೀರಿ. ಹಾಗೆ ಭವಿಷ್ಯದಲ್ಲಿ ನಿಮಗಾಗಬಹುದಾದ ಒಳಿತು ಕೆಡಕುಗಳ ಬಗ್ಗೆ ತಿಳಿದುಕೊಂಡು ಸಮಾಧಾನಗೊಳ್ಳುತ್ತೀರಿ. ಈ ಹೊಸ ವಿಧಾನದ ಬಗ್ಗೆ ತಿಳಿದುಕೊಳ್ಳಲು ಆಸಕ್ತರಿದ್ದರೆ ತಪ್ಪದೆ ಈ ಅಂಕಣವನ್ನು ಪೂರ್ತಿಯಾಗಿ ಓದಿ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವವರು ತಪ್ಪದೇ ಈ ಚೆಕ್ ಲಿಸ್ಟ್ ನೋಡಿ, ಇದರಲ್ಲಿ ನಿಮ್ಮ ಹೆಸರು ಇಲ್ಲ ಅಂದ್ರೆ ಮತ್ತೊಮ್ಮೆ ಅರ್ಜಿ ಹಾಕಬೇಕಾಗುತ್ತೆ.!

ಇದೊಂದು ಮನಶಾಸ್ತ್ರ ಎಂದರು ಕೂಡ ತಪ್ಪಾಗಲಾರದು ಎನಿಸುತ್ತದೆ. ಯಾಕೆಂದರೆ ನಿಮ್ಮ ಮನಸ್ಸಿನಲ್ಲಿರುವುದನ್ನು ನಿಮಗೆ ತಿಳಿಸುವ ಪ್ರಯತ್ನವನ್ನು ಆ ಮೂಲಕ ನಿಮ್ಮಲ್ಲಿರುವ ಸಾಕಷ್ಟು ಗೊಂದಲಗಳಿಗೆ ತೆರೆ ಎಳೆಯಲು, ನಿಮ್ಮ ಮಾನಸಿಕ ಜಟಿಲತೆಯನ್ನು ಬಿಡಿಸುವ ಪ್ರಯತ್ನವನ್ನು ಇದರಲ್ಲಿ ನಾವು ಮಾಡುತಿದ್ದೇವೆ. ಈಗ ನೀವು ಕಣ್ಮುಚ್ಚಿ ಎರಡು ನಿಮಿಷ ಶಾಂತರಾಗಿ.

ಈಗ ನಿಮ್ಮ ಕಣ್ಣ ಮುಂದೆ ಒಂದು ಕೆಂಪು ಪುಸ್ತಕ ಹಾಗೂ ಒಂದು ಹಳದಿ ಪುಸ್ತಕ ಇದೆ ಎಂದು ಭಾವಿಸಿಕೊಳ್ಳಿ. ಈ ಎರಡು ಪುಸ್ತಕದಲ್ಲಿ ನೀವು ಯಾವ ಪುಸ್ತಕ ಆರಿಸುತ್ತಿರಿ ಎನ್ನುವುದರ ಮೇಲೆ ನಿಮ್ಮ ಭೂತ ಹಾಗು ಭವಿಷ್ಯವನ್ನು ನಾವು ಹೇಳುತ್ತೇವೆ. ಈಗಾಗಲೇ ನೀವು ಒಂದು ಪುಸ್ತಕವನ್ನು ಸೆಲೆಕ್ಟ್ ಮಾಡಿದ್ದರೆ ಮುಂದಿನದನ್ನು ಓದುತ್ತಾ ಹೋಗಿ.

ಹಳೆಯ ಬಟ್ಟೆಗಳು ಇವರ ಕೈಗೆ ಸಿಗದಂತೆ ನೋಡಿಕೊಳ್ಳಿ, ಈ ರೀತಿ ಹಳೆ ಬಟ್ಟೆಗಳನ್ನು ಮನೆಯಲ್ಲಿ ಬಳಸಿದರೆ ಕಷ್ಟಗಳು ಗ್ಯಾರಂಟಿ.!

ನೀವೇನಾದರೂ ಕೆಂಪು ಪುಸ್ತಕವನ್ನು ಸೆಲೆಕ್ಟ್ ಮಾಡಿದ್ದರೆ ನೀವು ಜೀವನದಲ್ಲಿ ಮಹತ್ವಕಾಂಕ್ಷಿಗಳು ಆಗಿರುತ್ತೀರಿ, ನಿಮ್ಮಲ್ಲಿ ನಾಯಕತ್ವ ಗುಣ ಇರುತ್ತದೆ. ಪ್ರಾಮಾಣಿಕತೆ, ನ್ಯಾಯ, ಧರ್ಮ ಎನ್ನುವುದಕ್ಕೆ ನೀವು ಹೋರಾಡುತ್ತೀರಿ ಅದಕ್ಕಾಗಿ ಸಾಕಷ್ಟು ಅಪಮಾನಗಳನ್ನು ಎದುರಿಸುತ್ತೀರಿ.

ಸತ್ಯವಾಗಿ ನಡೆದಿದ್ದರೂ ಕೂಡ ಅನೇಕರನ್ನು ಎದುರು ಹಾಕಿಕೊಂಡಿರುತ್ತೀರಿ. ನಿಮ್ಮ ಕಷ್ಟಕಾಲದಲ್ಲಿ ನೀವು ಪ್ರೀತಿಸಿದವರು ಹೊರತುಪಡಿಸಿ ಇನ್ನಾರು ನಿಮ್ಮ ಜೊತೆ ನಿಲ್ಲುವುದಿಲ್ಲ ಆದರೂ ಕೂಡ ನೀವು ಇದನ್ನು ಮನಸ್ಸಿಗೆ ಹಂಚಿಕೊಳ್ಳದೆ ಸದಾ ಎಲ್ಲರಿಗೂ ಸಹಾಯ ಮಾಡಲು ಮುಂದಾಗುತ್ತಿರಿ. ನೀವು ಬಹಳ ಪ್ರಾಮಾಣಿಕವಾದ ಪ್ರೀತಿಯನ್ನು ನಿಮ್ಮವರಿಂದ ಪಡೆಯುತ್ತೀರಿ.

ಎಷ್ಟೇ ಹಳೆ ಕಾವಲಿ ಆಗಿದ್ರು ದೋಸೆ ನೀಟಾಗಿ ಬರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!

ಶೀಘ್ರದಲ್ಲೇ ನಿಮಗೆ ಶುಭವಾಗಲಿದೆ ನೀವು ಏನೆಂದುಕೊಂಡಿದ್ದೀರಾ ಅದೇ ರೀತಿ ಜೀವನದಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸಿ ತೀರುತ್ತೀರಿ. ಯಾವುದೇ ಕಾರಣಕ್ಕೂ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡಿ. ಅದೇ ರೀತಿ ನೀವು ಹಳದಿ ಪುಸ್ತಕವನ್ನು ಸೆಲೆಕ್ಟ್ ಮಾಡಿದ್ದರೆ ಈ ಹಿಂದೆ ಬದುಕಿನಲ್ಲಿ ಬಹಳ ಮೋಸ ಹೋಗಿರುತ್ತೀರಿ, ಬಹಳ ಕಷ್ಟವನ್ನು ಪಟ್ಟಿರುತ್ತೀರಿ.

ನಿಮಗೆ ಬಿಸಿನೆಸ್ ಎಂದರೆ ಬಹಳ ಇಷ್ಟ ಹಣದ ಬಗ್ಗೆ ಹಣ ಮಾಡುವುದರ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ. ಆದರೆ ನೀವು ಬಹಳ ಇಷ್ಟ ಪಟ್ಟವರಿಂದಲೇ ಮೋಸ ಹೋಗುತ್ತೀರಿ ನಿಮಗೆ ಪ್ರೀತಿಸಿದವರ ಜೊತೆ ಬದುಕುವ ಅದೃಷ್ಟ ಇರುವುದಿಲ್ಲ. ನೀವು ಯಾವುದನ್ನು ತೀರ ಮನಸ್ಸಿಗೆ ಹಚ್ಚಿಕೊಳ್ಳದೆ ನಡೆಯುವ ಸ್ವಭಾವದವರಾಗಿರುತ್ತೀರಿ. ಭವಿಷ್ಯದಲ್ಲಿ ಕೂಡ ನಿಮಗೆ ಬಹಳ ನಿಧಾನವಾಗಿ ನೀವು ಅಂದುಕೊಂಡ ಕೆಲಸಗಳು ಜರುಗುತ್ತವೆ. ಇದೇ ರೀತಿ ಈ ವಿಚಾರದ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಜಮೀನು ಇಲ್ಲದವರಿಗೆ ಸಿಹಿ ಸುದ್ದಿ, ಪ್ರತಿ ಕುಟುಂಬಕ್ಕೂ 2 ಎಕರೆ ಜಮೀನು ಘೋಷಣೆ ಮಾಡಿದ ಸರ್ಕಾರ.!

 

ನಮ್ಮ ದೇಶ ಹಳ್ಳಿಗಳ (Village) ದೇಶ, ಹಳ್ಳಿಗಳೇ ಹೆಚ್ಚಾಗಿರುವ ನಮ್ಮ ದೇಶದಲ್ಲಿ ಹಳ್ಳಿಯ ಜನರ ಜೀವನೋಪಾಯ ಕೃಷಿಯೇ (Agriculture) ಆಗಿದೆ. ಆದರೆ ಕೃಷಿಯಲ್ಲಿ ತೊಡಗಿಕೊಳ್ಳಲು ಎಲ್ಲರಿಗೂ ಕೂಡ ಸ್ವಂತ ಜಮೀನು (agriculture land) ಇಲ್ಲ. ನಮ್ಮ ದೇಶದಲ್ಲಿ ಆಸ್ತಿ ಹಂಚಿಗೆ ಸಮನಾಗಿಲ್ಲ ಎನ್ನುವ ಅಂಶ ಎಲ್ಲರಿಗೂ ತಿಳಿದಿದೆ. ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರಾಗಿ ಇನ್ನೂ ಸಾಕಷ್ಟು ಜನರು ಕೆಲಸ ಮಾಡುತ್ತಿದ್ದಾರೆ.

ಆದರೆ ಕುಟುಂಬ ದೊಡ್ಡದಾಗುತ್ತಿದ್ದಂತೆ ಅದರಿಂದ ಬರುವ ಆದಾಯ ಸಾಲದ ಕಾರಣ ಮುಂದಿನ ದಿನಗಳಲ್ಲಿ ಅವರು ನಗರ ಪ್ರದೇಶಗಳಿಗೆ ಗುಳೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಈ ರೀತಿ ಉದ್ಯೋಗ ಹರಸಿ ಕೃಷಿ ಭೂ ರಹಿತ ಕುಟುಂಬಗಳು (Agriculture landless families) ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ನಗರ ಪ್ರದೇಶಕ್ಕೆ ಹೋಗುವ ಪರಿಸ್ಥಿತಿ ಸುಧಾರಿಸುವ ಸಲುವಾಗಿ ರಾಜ್ಯ ಸರ್ಕಾರ (Karnataka government) ಹೊಸ ನಿರ್ಧಾರಕ್ಕೆ ಬಂದಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವವರು ತಪ್ಪದೇ ಈ ಚೆಕ್ ಲಿಸ್ಟ್ ನೋಡಿ, ಇದರಲ್ಲಿ ನಿಮ್ಮ ಹೆಸರು ಇಲ್ಲ ಅಂದ್ರೆ ಮತ್ತೊಮ್ಮೆ ಅರ್ಜಿ ಹಾಕಬೇಕಾಗುತ್ತೆ.!

ಸದ್ಯಕ್ಕಿರುವ ಅಂಕಿ ಅಂಶಗಳ ಪ್ರಕಾರ ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರ ವರ್ಗದವರು ಈ ರೀತಿ ಹಳ್ಳಿಗಳಿಂದ ನಗರ ಪ್ರದೇಶಕ್ಕೆ ವಲಸೆ ಹೋಗುವ ಸಂಖ್ಯೆ ಹೆಚ್ಚಾಗುತ್ತಿದೆ. ಇವರುಗಳು ಹಳ್ಳಿಯಲ್ಲಿಯೇ ನೆಮ್ಮದಿಯಾಗಿ ಜೀವನದ ನಡೆಸಲು ಸಾಧ್ಯವಾಗಬೇಕು ಎನ್ನುವುದು ಡಾ. ಬಿಆರ್ ಅಂಬೇಡ್ಕರ್ (Dr. B.R Ambedkar) ಅವರ ಕನಸಾಗಿತ್ತು.

ಈ ರೀತಿ ಹಳ್ಳಿಯಲ್ಲಿಯೇ ನೆಲೆ ನಿಲ್ಲಬೇಕು ಎಂದರೆ ಒಂದು ಕುಟುಂಬಕ್ಕೆ ಕನಿಷ್ಠ 1.67 ಎಕರೆ ಕೃಷಿ ಜಮೀನು ಬೇಕು ಎನ್ನುವುದು ಕೇಂದ್ರ ಸರ್ಕಾರದ ಮಾನದಂಡ. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡಿರುವ ಕರ್ನಾಟಕ ರಾಜ್ಯ ಸರ್ಕಾರ ಹೊಸ ಯೋಜನೆ ಯನ್ನು ಜಾರಿ ಮಾಡಿ ಹಳ್ಳಿಗಾಡಿನಲ್ಲಿರುವ ಜಮೀನು ರಹಿತ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವರ್ಗಕ್ಕೆ ಸರ್ಕಾರದ ವತಿಯಿಂದ ಜಮೀನು (Land sanction) ನೀಡುವ ನಿರ್ಧಾರಕ್ಕೆ ಬಂದಿದೆ ಎನ್ನುವ ಮಾಹಿತಿಯನ್ನು ಮಾನ್ಯ ಸಹಕಾರ ಸಚಿವರಾದ ಕೆ.ಸಿ ಮಹದೇವಪ್ಪ (Co-Operative Minister K C Mahadevappa) ಅವರು ತಿಳಿಸಿದ್ದಾರೆ.

ಹಳೆಯ ಬಟ್ಟೆಗಳು ಇವರ ಕೈಗೆ ಸಿಗದಂತೆ ನೋಡಿಕೊಳ್ಳಿ, ಈ ರೀತಿ ಹಳೆ ಬಟ್ಟೆಗಳನ್ನು ಮನೆಯಲ್ಲಿ ಬಳಸಿದರೆ ಕಷ್ಟಗಳು ಗ್ಯಾರಂಟಿ.!

ಬಲವಾದ ಮೂಲಗಳ ಮಾಹಿತಿ ಪ್ರಕಾರ ಈಗಾಗಲೇ ಸರ್ಕಾರ ಇದಕ್ಕೆ ಕ್ರಮ ಕೂಡ ಕೈಗೆತ್ತಿಕೊಂಡಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸರ್ಕಾರಿ ವಲಯದ ಪ್ರದೇಶವನ್ನು ಕೃಷಿ ಭೂಮಿಯಾಗಿ ಪರಿವರ್ತನೆ ಮಾಡಿ ಈ ರೀತಿ ಜಮೀನು ರಹಿತ ಕುಟುಂಬಗಳಿಗೆ ಹಂಚಲು ನಿರ್ಧಾರ ಮಾಡಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಇದರ ಪ್ರಕಾರವಾಗಿ ಆಯಾ ಜಿಲ್ಲಾಧಿಕಾರಿಗಳಿಗೆ ಕೂಡ ಇದರ ಕುರಿತು ಕ್ರಮ ಕೈಗೊಳ್ಳುವಂತೆ ಮತ್ತು ವರದಿ ಸಿದ್ದಪಡಿಸಿಕೊಂಡು ತರುವಂತೆ ಸರ್ಕಾರ ಸೂಚಿಸಿದೆ ಎನ್ನುವ ಮಾಹಿತಿಯು ಕೂಡ ಇದೆ.

ಮೊದಲ ಹಂತದಲ್ಲಿ ಮೈಸೂರು ಜಿಲ್ಲೆಯಲ್ಲಿ (Mysore district) ಈ ರೀತಿ ಜಮೀನು ರಹಿತ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವರ್ಷಕ್ಕೆ ಜಮೀನು ಹಂಚಿಕೆ ಮಾಡುವ ಪ್ರಯೋಗ ಮಾಡಲಾಗುವುದು ಎನ್ನುವ ಮಾಹಿತಿಯು ಇದೆ. ಈ ಬಗ್ಗೆ ಮಾಹಿತಿ ತಿಳಿಸಿದ ಸಹಕಾರ ಸಚಿವರಾದ ಕೆ.ಸಿ ಮಹದೇವಪ್ಪ ಅವರು ಒಂದು ವೇಳೆ ಕೆಲವು ಪ್ರದೇಶಗಳಲ್ಲಿ ಸರ್ಕಾರಿ ವಲಯದ ಭೂಮಿ ಸಿಗದೇ ಹೋದಲ್ಲಿ ಉಳ್ಳವರಿಂದ 50 ಎಕರೆ ಜಮೀನುವರೆಗೆ ಖರೀದಿಸಿ ಹಂಚುವ ನಿರ್ಧಾರವನ್ನು ಸರ್ಕಾರ ಮಾಡಿದೆ.

ಎಷ್ಟೇ ಹಳೆ ಕಾವಲಿ ಆಗಿದ್ರು ದೋಸೆ ನೀಟಾಗಿ ಬರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!

ಜಿಲ್ಲಾಧಿಕಾರಿಗಳ ವರದಿ ಪರಿಶೀಲಿಸಿ ಇದರ ಕುರಿತು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಈ ಯೋಜನೆ ಜಾರಿಗೆ ಬಂದರೆ ಕರ್ನಾಟಕದಲ್ಲಿರುವ ಎಲ್ಲಾ ಕುಟುಂಬಗಳು ಕೂಡ ಕೃಷಿ ಭೂಮಿ ಹೊಂದುವ ಅವಕಾಶ ಸಿಗಲಿದೆ. ಆದಷ್ಟು ಬೇಗ ಕರ್ನಾಟಕ ರಾಜ್ಯದಲ್ಲಿ ಈ ಯೋಜನೆ ಜಾರಿಗೆ ಬರಲಿ ಎಂದು ನಾವು ಕೂಡ ಆಶಿಸೋಣ. ಸರ್ಕಾರದ ಈ ನಿರ್ಧಾರವು ರಾಜ್ಯದ ಬಡ ಜನತೆಗೆ ಸಂತಸ ತರಲಿದೆ. ಆದ್ದರಿಂದ ಈ ಉಪಯುಕ್ತ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ.