Home Blog Page 182

ಇನ್ಮುಂದೆ ನಾಡ ಕಛೇರಿಗೆ ಹೋಗಬೇಕಾದ ಅಗತ್ಯ ಇಲ್ಲ ಕರ್ನಾಟಕ ಸರ್ಕಾರದಿಂದ ಹೊಸ ವೆಬ್ಸೈಟ್ ಪ್ರಾರಂಭ, ಮನೆಯಲ್ಲಿ ಕುಳಿತು ನಿಮಗೆ ಬೇಕಾದ ಅರ್ಜಿ ಸಲ್ಲಿಸಬಹುದು.!

 

ಕರ್ನಾಟಕ ಸರ್ಕಾರ ನಾಡಕಛೇರಿಯಿಂದ ರಾಜ್ಯದ ನಾಗರಿಕರು ಎಲ್ಲ ರೀತಿಯ ಪ್ರಮಾಣ ಪತ್ರಗಳಿಗಾಗಿ ಅರ್ಜಿ ಸಲ್ಲಿಸಿ ಪಡೆಯಬಹುದು ಇದಕ್ಕೆ Atalji Jan Snehi Kendra, ajsk ಅಂತ ಕೂಡ ಕರೆಯುತ್ತಾರೆ. ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯು ಜಾತಿ ಮತ್ತು ಆದಾಯ, ಜಮೀನು ಮತ್ತು ಕೃಷಿಕರಿಗೆ ಸಂಬಂಧಿಸಿದ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳಂತಹ ವಿವಿಧ ಪ್ರಮುಖ ಸೇವೆಗಳನ್ನು ನಾಗರೀಕರಿಗೆ ಒದಗಿಸುತ್ತದೆ.

Nadakacheri ಯಲ್ಲಿ ಈ ಯೋಜನೆಯ ಅಡಿಯಲ್ಲಿ ಒದಗಿಸಿದ 42 Online ಸೇವೆಗಳ ಪಟ್ಟಿಇದೆ. ಸಾರ್ವಜನಿಕರಿಗೆ ಅಗತ್ಯವಿರುವ ಕಂದಾಯ ಇಲಾಖೆಯ ಹಲವು ಸೇವೆಗಳನ್ನು ಪಡೆಯಲು ಅನುಕೂಲವಾಗುವಂತೆ ಸರ್ಕಾರದ ಎಲ್ಲಾ ಕಂದಾಯ ಸೇವೆಗಳನ್ನು ಹೋಬಳಿ ಮಟ್ಟದಲ್ಲಿ ಗ್ರಾಮೀಣ ಪ್ರದೇಶದ ನಾಗರೀಕರಿಗೆ ಪಾರದರ್ಶಕ, ವಿಶ್ವಾಸರ್ಹ ಹಾಗೂ ಕೈಗೆಟಕುವ ವಿಧಾನದ ಮೂಲಕ ನೀಡಲು ಅಟಲ್ ಜೀ ಜನಸ್ನೇಹಿ ಕೇಂದ್ರವನ್ನು ಸರ್ಕಾರದ ಆದೇಶ ಅನ್ವಯ ಪ್ರಾರಂಭಿಸಲಾಗಿದ್ದು, ಅದರಂತೆ, ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿವೆ.

ಕರ್ನಾಟಕ ಸರ್ಕಾರದ ನಾಡಕಛೇರಿಯ ವೆಬೈಸೈಟ್‌ನಲ್ಲಿ ಮಹತ್ವದ ಬದಲಾವಣೆಯಾಗಿದೆ. ಹೌದು, ನಾಡಕಛೇರಿಯಲ್ಲಿ ಅರ್ಜಿ ಸಲ್ಲಿಸುವಾಗ ಮೊದಲು 4.1 ವರ್ಷನ್‌ ಇತ್ತು. ಆದ್ರೆ, ಇದೀಗ 2023 ರ 13, ಏಪ್ರಿಲ್‌ನಲ್ಲಿ ಇದನ್ನು ಬದಲಾವಣೆ ಮಾಡಲಾಗಿದ್ದು, ಈಗ 5.0 ವರ್ಷನ್‌ ಎಂದು ಲಾಂಚ್‌ ಮಾಡಲಾಗಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಅರ್ಜಿ ಸಲ್ಲಿಸಲು 4.1 ವರ್ಷನ್‌ ಕೂಡ ಲಭ್ಯವಿರುತ್ತದೆ. ಇದರಲ್ಲಿ ಮೊದಲು ಮೊಬೈಲ್‌ ನಂಬರ್‌ ಹಾಗೂ ಒಟಿಪಿ ಹಾಕಿ ಲಾಗ್‌ ಇನ್‌ ಮಾಡಲಾಗ್ತಿತ್ತು. ಈಗ 5.0 ವರ್ಷನ್‌ನಲ್ಲೂ ಕೂಡ ಅದೇ ರೀತಿಯಾಗಿ ಲಾಗ್‌ ಇನ್‌ ಮಾಡಬೇಕಾಗುತ್ತದೆ. ಈಗ ನಿಮ್ಮ ಮೊಬೈಲ್‌ಗೆ ʻನೀವು ಲಾಗ್‌ ಇನ್‌ ಆಗಿದ್ದೀರ ಎಂದುʼ ಒಂದು ಮೆಸೇಜ್‌ ಕೂಡ ಬರುತ್ತದೆ.

ಲಾಗ್‌ ಇನ್‌ ಆದ ನಂತ್ರ ಮೇನ್‌ ವಿಂಡೋ ಓಪನ್‌ ಆಗುತ್ತದೆ. ಇದರ ಮೇಲ್ಬಾಗದಲ್ಲಿ ನಿಮ್ಮ ಮೊಬೈಲ್‌ ನಂಬರ್‌ ಕೂಡ ಕಾಣಿಸುತ್ತದೆ. ಇನ್ನೂ, ಈ ಪೇಜ್‌ನಲ್ಲಿ ನಾವು ಅರ್ಜಿ ಸಲ್ಲಿಸುವ ಅಗತ್ಯ ಆಪ್ಷನ್‌ಗಳ ಲಿಸ್ಟ್‌ ಕಾಣಿಸುತ್ತದೆ. ಇಲ್ಲಿ, ಮೊದಲು

* ಅಗತ್ಯವಿರುವ ಸೇವೆ/ ಪ್ರಮಾಣ ಪತ್ರವನ್ನು ಆಯ್ಕೆ ಮಾಡಿ.
* ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ.
* ವಿನಂತಿಸಿದ ಪ್ರಮಾಣ ಪತ್ರ ಅಸ್ತಿತ್ವದಲ್ಲಿದ್ದರೆ ಅದನ್ನು ತೋರಿಸಲಾಗುತ್ತದೆ. ಆನ್‌ಲೈನ್‌ನಲ್ಲಿಪಾವತಿಸಿ ಮುದ್ರಿಸಿ.
* ಇಲ್ಲದಿದ್ದರೆ ಪೋಷಕ ದಾಖಲೆಗಳನ್ನು (ಪಿಡಿಎಫ್)‌ ಅಪ್‌ಲೋಡ್‌ ಮಾಡುವ ಮೂಲಕ ಹೊಸ ಪ್ರಮಾಣ ಪತ್ರಕ್ಕಾಗಿ ವಿನಂತಿಸಿ. ಅರ್ಜಿದಾರರ ಹೆಸರನ್ನು ಆಧಾರ್‌ ಪ್ರಕಾರ ನಮೂದಿಸಬೇಕು.
* ಅಪ್ಲಿಕೇಶನ್‌ ಅನ್ನು ಸೈನ್‌ ಮಾಡಿ, ಸ್ವೀಕೃತಿಯನ್ನು ಮುದ್ರಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಇರಿಸಿ.
* ಯಾವುದಾದರೂ ಇದ್ದರೆ ಶುಲ್ಕವನ್ನು ಪಾವತಿಸಿ. ಎಂದು ನೀವು ಇಲ್ಲಿನ ಲಿಸ್ಟ್‌ನಲ್ಲಿ ನೋಡಬಹುದು.

ಇನ್ನೂ ನೀವು ಇಲ್ಲಿ ಮೇಲ್ಭಾಗದಲ್ಲಿ ಕೆಲವು ಆಯ್ಕೆಗಳನ್ನು ನೋಡಬಹುದು. ಇಲ್ಲಿ ಹೊಸ ವಿನಂತಿ ಎಂಬ ಆಯ್ಕೆಯನ್ನು ನೋಡಬಹುದು. ಇಲ್ಲಿ ಕ್ಲಿಕ್‌ ಮಾಡಿದರೆ, ʻಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅಲ್ಪ ಸಂಖ್ಯಾತ ಹಾಗೂ ಹಿಂದುಳಿದ ಪ್ರಮಾಣ ಪತ್ರ ಇತ್ಯಾಇ ಆಯ್ಕೆಗಳನ್ನ ಇಲ್ಲಿ ಕಾಣಬಹುದು. ಇಲ್ಲಿ ನಿಮಗೆ ಅವಶ್ಯವಿರುವ ಪ್ರಮಾಣ ಪತ್ರಗಳ ಮೇಲೆ ಕ್ಲಿಕ್‌ ಮಾಡಬಹುದು.

ಈ ಕೆಳಗೆ ನೀಡಲಾಗಿರುವ ಲಿಂಕ್‌ ಕ್ಲಿಕ್‌ ಮಾಡುವ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಕಲಿಯುಗ ಮುಗಿದರು ತಿಮ್ಮಪ್ಪನ ಸಾಲ ತಿರುವುದಿಲ್ಲ.! ಹಾಗಾದ್ರೆ ತಿಮ್ಮಪ್ಪ ಮಾಡಿದ ಸಾಲ ಎಷ್ಟು.? ಸಾಲ ಮಾಡಿದ್ದು ಯಾಕೆ ಗೊತ್ತಾ.?

 

ಜಗತ್ತಿನ ಶ್ರೀಮಂತ ದೇವರು ಎಂದು ಕರೆಸಿಕೊಂಡಿರುವ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ವೈಭೋಗದ ಬಗ್ಗೆ ಎಲ್ಲರಿಗೂ ಸಹ ಗೊತ್ತೇ ಇದೆ. ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆಯಿಂದ ಭಾರತದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ಕೊಡುವ ಪುಣ್ಯಕ್ಷೇತ್ರ ಎನ್ನುವ ಹೆಸರು ಪಡೆದಿರುವ ತಿಮ್ಮಪ್ಪನ ಸನ್ನಿಧಾನವು ಭಕ್ತಾದಿಗಳು ನೀಡುವ ಕಾಣಿಕೆ ಕಾರಣದಿಂದ ಜಗತ್ತಿನ ಗಮನ ಸೆಳೆದಿದೆ.

ಇಷ್ಟೊಂದು ವೈಭೋಗ ಇದ್ದರು ಧನ ಕನಕ ಹರಿದು ಬರುತ್ತಿದ್ದರೂ ಕೂಡ ತಿರುಪತಿ ತಿಮ್ಮಪ್ಪ ಇನ್ನು ಸಹ ಸಾಲಗಾರ. ಈ ರೀತಿ ಸಂಕಟ ಪರಿಹಾರ ಮಾಡುವ ವೆಂಕಟರಮಣನೇ ಸಾಲಗಾರನಾದ ಬಗ್ಗೆ ಅನೇಕರಿಗೆ ಕಾರಣವೇ ಗೊತ್ತಿಲ್ಲ. ಅದರ ಬಗ್ಗೆ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

ರಾಮಾಯಣದ ಕಾಲದಲ್ಲಿ ಸೀತಾದೇವಿ ಬದಲು ವೇದವತಿ ಅಶೋಕನದಲ್ಲಿ ಇದ್ದ ಕಾರಣ ಸೀತಾರಾಮಂ ಮಾತೆ ಮಾತಿನಂತೆ ಶ್ರೀರಾಮ ರು ಆಕೆಯನ್ನು ವರ ಕೇಳಿದಾಗ ವೇದವತಿಯು ಶ್ರೀರಾಮನನ್ನು ವರಿಸುವ ಇಂಗಿತ ವ್ಯಕ್ತಪಡಿಸುತ್ತಾರೆ. ಶ್ರೀರಾಮನು ತಾನು ಏಕಪತ್ನಿವ್ರತಸ್ಥ ಆದರೆ ಕಲಿಯುಗದಲ್ಲಿ ವಿವಾಹವಾಗುತ್ತೇನೆ ಎಂದು ಭರವಸೆ ಕೊಟ್ಟಿರುತ್ತಾರೆ.

ಕಲಿಯುಗದಲ್ಲಿ ಆಕೆ ಪದ್ಮಾವತಿಯಾಗಿ ಜನ್ಮ ತಾಳುತ್ತಾರೆ. ಅದೇ ರೀತಿ ದ್ವಾಪರ ಯುಗದಲ್ಲಿ ಬಾಲಕೃಷ್ಣನ ಎಲ್ಲಾ ಲೀಲೆಯನ್ನು ನೋಡಿದ್ದ ಯಶೋಧ ಮಾತೆಗೆ ಶ್ರೀ ಕೃಷ್ಣನ ವಿವಾಹವನ್ನು ನೋಡುವ ಆಸೆಯಾಗಿ ಕೇಳಿದಾಗ ಈಗ ಅದು ಸಾಧ್ಯವಿಲ್ಲ. ಕಲಿಯುಗದಲ್ಲಿ ನೆರವೇರಿಸುವುದಾಗಿ ಹೇಳುತ್ತಾರೆ. ನಂತರ ಯಶೋದೆಯು ಕಲಿಯುಗದಲ್ಲಿ ಬಕುಳ ದೇವಿಯಾಗಿ ಜನ್ಮ ತಾಳುತ್ತಾರೆ.

ಕಲಿಯುಗದ ಆರಂಭಕ್ಕೂ ಮುನ್ನ ವೈಕುಂಠದಲ್ಲಿ ಒಮ್ಮೆ ವಿಷ್ಣು ಹಾಗೂ ಮಹಾಲಕ್ಷ್ಮಿಯು ತಮ್ಮ ಲೋಕದಲ್ಲಿದ್ದಾಗ ಅಲ್ಲಿಗೆ ಬಂದ ಭೃಗು ಮಹರ್ಷಿಗಳು ಅನೇಕ ಬಾರಿ ವಿಷ್ಣುವನ್ನು ಕರೆಯುತ್ತಾರೆ ಆಗಲೂ ವಿಷ್ಣುವಿಗೆ ಇವರ ಆಗಮನದ ಅರಿವಾಗದಿದ್ದಾಗ ಕೋಪಗೊಂಡ ಭೃಗು ಮಹರ್ಷಿಗಳು ವಿಷ್ಣುವಿನ ವೃಕ್ಷಸ್ಥಳಕ್ಕೆ ಒದೆಯುತ್ತಾರೆ.

ಕೋಪಗೊಳ್ಳದೇ ವಿಷ್ಣುವು ಭೃಗು ಮಹರ್ಷಿಗಳನ್ನು ಸಮಾಧಾನದಿಂದ ಮಾತನಾಡಿಸುತ್ತಾರೆ. ಇದರಿಂದ ಕೋಪಗೊಂಡ ಲಕ್ಷ್ಮಿಯು ತನಗೆ ಗೌರವ ಸಿಗದ ಜಾಗದಲ್ಲಿ ತಾನು ಇರುವುದಿಲ್ಲ ಎಂದು ಹೇಳಿ ಭೂಮಿಗೆ ಬರುತ್ತಾರೆ. ಆಗ ಲಕ್ಷ್ಮಿ ಗಾಗಿ ವಿಷ್ಣು ಸಹ ಭೂಮಿಗೆ ಬರುತ್ತಾರೆ. ಶ್ರೀನಿವಾಸನಾಗಿ ಭೂಮಿಯಲ್ಲಿ ಬಂದ ವಿಷ್ಣುವಿಗೆ ಹಿಂದಿನದೆಲ್ಲ ಮರೆತು ಹೋಗುತ್ತದೆ.

ಆ ಸಮಯದಲ್ಲಿ ಹಿಂದೆ ಕೊಟ್ಟಿದ್ದ ವಚನದಂತೆ ಬಕುಳದೇವಿಯ ಸಮ್ಮುಖದಲ್ಲಿ ಪದ್ಮಾವತಿಯನ್ನು ಶ್ರೀನಿವಾಸ ವೈಭೋಗದಿಂದ ವಿವಾಹ ಆಗುತ್ತಾರೆ. ಆ ವಿವಾಹವು 11 ದಿನಗಳ ಕಾಲ ನಡೆಯುತ್ತದೆ. ಇದು ಶ್ರೀನಿವಾಸ ಕಲ್ಯಾಣ ಎಂದು ಪುರಾಣಗಳಲ್ಲಿ ದಾಖಲಾಗಿದೆ. ಈ ವಿವಾಹವು ಅತ್ಯಂತ ಅದ್ದೂರಿಯಾಗಿ ನಡೆದ ಕಾರಣ ಮದುವೆ ಖರ್ಚಿಗೆ ಸಾಲವಾಗಿ ಶಿವ ಮತ್ತು ಬ್ರಹ್ಮನ ಸಾಕ್ಷಿಯಲ್ಲಿ ವಿಷ್ಣುವು ಕುಬೇರನಿಂದ 14 ಲಕ್ಷ ಬಂಗಾರದ ರಾಮ ಮುದ್ರೆ ಗಳನ್ನು ಪಡೆದಿರುತ್ತಾರೆ.

ಕುಬೇರನು ಒಂದು ಕಂಡಿಶನ್ ಹಾಕಿ 14 ಲಕ್ಷ ರಾಮ ಮುದ್ರೆ ಇರುವ ಬಂಗಾರದ ನಾಣ್ಯಗಳನ್ನು ಸಾಲ ನೀಡಿರುತ್ತಾರೆ. ಸಾವಿರ ವರ್ಷಗಳವರೆಗೆ ಈ 14 ಲಕ್ಷ ಬಂಗಾರದ ರಾಮ ಮುದ್ರೆಗಳಿಗೆ ಬಡ್ಡಿಯನ್ನು ತೀರಿಸಬೇಕು ಎಂದು ಹೇಳಿರುತ್ತಾರೆ. ದೇವತೆಗಳ ಸಾವಿರ ವರ್ಷ ಎಂದರೆ ಮನುಷ್ಯರ ಲೆಕ್ಕದಲ್ಲಿ ಕಲಿಯುಗ ಅಂತ್ಯ ಆಗುವವರೆಗೂ ಅದಕ್ಕೆ ಒಪ್ಪಿಕೊಂಡು ಶ್ರೀನಿವಾಸ ಸಾಲ ತೆಗೆದುಕೊಂಡಿರುತ್ತಾರೆ.

ಈಗ ಕಲಿಯುಗದಲ್ಲಿ ಶ್ರೀ ವೆಂಕಟೇಶ್ವರನ ಸನ್ನಿಧಿಗೆ ಬಂದು ಭಕ್ತಾದಿಗಳು ಕೊಡುತ್ತಿರುವ ಕಾಣಿಕೆಯು ಕುಬೇರನ ಬಡ್ಡಿಗೆ ತೀರುತ್ತಿದೆ, ಕಲಿಯುಗದ ಅಂತ್ಯದವರೆಗೂ ಕೂಡ ಅದು ಬರಿ ಬಡ್ಡಿಗೆ ಸಮ ಆಗುತ್ತದೆ. ಭಕ್ತಾದಿಗಳು ತಮ್ಮ ಇಷ್ಟದೈವವಾದ ವೆಂಕಟೇಶ್ವರನಿಗೆ ಸಾಲ ತೀರಿಸಲು ನೆರವಾಗಿ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಹುಂಡಿಗೆ ಹಣವನ್ನು ಹಾಕುತ್ತಿದ್ದಾರೆ. ಈ ವಿಚಾರದ ಬಗ್ಗೆ ಇನ್ನೂ ಹೆಚ್ಚಿನ ವಿವರವನ್ನು ಶ್ರೀನಿವಾಸ ಕಲ್ಯಾಣ ಕಥೆಯನ್ನು ಕೇಳಿ ಅಥವಾ ಚರಿತೆಯನ್ನು ಓದಿ ತಿಳಿದುಕೊಳ್ಳಿ.

ಕೇವಲ 7 ಲಕ್ಷದಲ್ಲಿ ಡಬಲ್ ಬೆಡ್ರೂಮ್ ಮನೆ ನಿರ್ಮಾಣ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟುವ ಆಸೆ ಇದ್ದವರು ತಪ್ಪದೆ ಇದನ್ನು ನೋಡಿ.!

 

ನಗರ ಪ್ರದೇಶದಲ್ಲಿ ಹೆಜ್ಜೆ ದೂರದಲ್ಲೇ ನಮಗೆ ಬೇಕಾದ ಎಲ್ಲಾ ಸೇವೆಗಳು ಹಾಗೂ ಸೌಲಭ್ಯಗಳು ಸಿಗುತ್ತವೆ. ಆದರೆ ಹಳ್ಳಿಗಳಲ್ಲಿ ಹಾಗಲ್ಲ. ನಗರ ಪ್ರದೇಶದಲ್ಲಿ ಬೆಳೆದು ಆ ಬದುಕಿಗೆ ಹೊಂದಿಕೊಂಡವರು ಹಳ್ಳಿಗಳಲ್ಲಿ ಬದುಕುವುದು ಬಹಳ ಕಷ್ಟ ಅದರಲ್ಲೂ ವಿದ್ಯಾವಂತರು ಒಳ್ಳೆ ಉದ್ಯೋಗದಲ್ಲಿದ್ದು ಕೈ ತುಂಬ ಸಂಬಳ ತೆಗೆದುಕೊಳ್ಳುತ್ತಿದ್ದವರು ಎಲ್ಲ ಅನುಕೂಲತೆಯನ್ನು ಒಳಗೊಂಡ ಮನೆಗಳಲ್ಲಿ ಬದುಕುತ್ತಿದ್ದವರು ಹಳ್ಳಿಗಳಲ್ಲಿ ಹೋಗಿ ಜೀವನ ನಡೆಸುವುದು ಬಹಳ ಕಷ್ಟ.

ಯಾಕೆಂದರೆ ಹಳ್ಳಿಗಳಲ್ಲಿ ವಿದ್ಯುತ್, ಸಾರಿಗೆ ಇನ್ನು ಮುಂತಾದ ಅನೇಕ ಮೂಲಭೂತ ಅವಶ್ಯಕತೆಗಳಿಗೆ ಸಮಸ್ಯೆ ಇದೆ. ಅವರು ಸಿಟಿಗಳಲ್ಲಿ ಇದ್ದು ಕಳೆದಂತ ಲೈಫ್ ಸ್ಟೈಲ್ ಅನ್ನು ಹಳ್ಳಿಗಳಲ್ಲಿ ಕಳೆಯಲು ಸಾಧ್ಯವಿಲ್ಲ. ಹಳ್ಳಿಗರು ಬಂದು ಸಿಟಿಯಲ್ಲಿ ಅಡ್ಜಸ್ಟ್ ಆಗಬಹುದು ಆದರೆ ಪಟ್ಟಣಿಗರು ಹಳ್ಳಿಗಳಲ್ಲಿ ನೀಸಲಾರರು. ಆದರೂ ಇತ್ತೀಚೆಗೆ ಕೃಷಿಯ ಗಂಧಗಾಳಿ ತಿಳಿಯದಿದ್ದರೂ ಕೂಡ ಅನೇಕರಿಗೆ ಕೃಷಿಯ ಬಗ್ಗೆ ಒಲವು ಇದೆ.

ಕಾರಣ ಈಗ ಎಲ್ಲರೂ ರೈತನ ಮಹತ್ವ ಏನು ಎಂದು ಅರಿವಾಗಿದೆ. ಮಣ್ಣಿನ ಮೌಲ್ಯದ ಬಗ್ಗೆ ಮನನ ಮಾಡಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎನ್ನುವುದನ್ನು ನಂಬಿ ಹಳ್ಳಿಗಳಿಗೆ ಹಿಂದಿರುಗಿ ಕೃಷಿ ಮಾಡಬೇಕು ಎಂದು ಆಸೆ ಪಡುತ್ತಿದ್ದಾರೆ. ಸಾಕಷ್ಟು ಮಂದಿ ಈ ರೀತಿ ಇದ್ದ ಉದ್ಯೋಗವನ್ನು ಬಿಟ್ಟು ಹಳ್ಳಿಗೆ ವಾಪಸ್ ಆಗಿ ಕೃಷಿ ಭೂಮಿ ಖರೀದಿ ಮಾಡಿ ನೆಮ್ಮದಿಯ ಜೀವನವನ್ನು ಕಳೆಯುತ್ತಿರುವ ಉದಾಹರಣೆಯನ್ನು ಕಾಣಬಹುದು.

ರೈತನಾಗಿ ಕೃಷಿ ಮಾಡಿ ಆದಾಯ ಗಳಿಸುವುದು, ಅದನ್ನು ಉದ್ಯಮವಾಗಿ ಪರಿಗಣಿಸುವುದು ಮನಸ್ಸು ಮಾಡಿದರೆ ಕಷ್ಟದ ಕೆಲಸವಲ್ಲ. ಹಾಗೆ ಆಗಲಿಲ್ಲ ಎಂದರೂ ಕೂಡ ನೆಮ್ಮದಿಗೇನು ಕೊರತೆ ಇಲ್ಲ. ಈ ಕಾರಣಕ್ಕಾಗಿ ಎಲ್ಲರೂ ಮಣ್ಣನ್ನು ನಂಬಿ ಬದುಕಲು ಇಚ್ಚಿಸುತ್ತಾರೆ. ಇದೇ ರೀತಿಯ ಮಹಾಕಾಂಕ್ಷೆಯಿಂದ ಇಂಜಿನಿಯರ್ ಕೆಲಸವನ್ನು ಬಿಟ್ಟ ಇಬ್ಬರು ದಂಪತಿಗಳು ಹಳ್ಳಿಗಳಿಗೆ ಹೋಗಿ ಜಮೀನನ್ನು ಖರೀದಿ ಮಾಡಿದ್ದಾರೆ.

ಆದರೆ ಈ ರೀತಿ ಜಮೀನು ಖರೀದಿ ಮಾಡಿದ ಮೇಲೆ ಅವರಿಗೆ ಆ ಗ್ರಾಮದಲ್ಲಿ ಉಳಿದುಕೊಳ್ಳಲು ವಸತಿಯ ಸೌಲಭ್ಯ ಸಿಗಲಿಲ್ಲ, ಬಾಡಿಗೆ ಮನೆ ಸಿಗಲಿಲ್ಲ. ಆಗ ಅವರು ತಾವು ಖರೀದಿಸಿದ ಜಮೀನಿನಲ್ಲಿಯೇ ಮನೆ ಕಟ್ಟುವ ಪ್ಲಾನ್ ಮಾಡಿದರು. ನಗರಗಳಲ್ಲಿ ಫೇಮಸ್ ಆಗಿದ್ದ ಕಂಟೇನರ್ ಮನೆ ಪ್ರಯೋಗವನ್ನು ಹಳ್ಳಿಯಲ್ಲಿ ಮಾಡಲು ಇಚ್ಚಿಸಿದರು. ಕಂಟೇನರ್ ಮನೆಗಳನ್ನು ನಿರ್ಮಿಸುವುದು ಕೂಡ ಬಹಳ ಸುಲಭ ಜೊತೆಗೆ ಅದನ್ನು ಬೇಕಾದಾಗ ವಿನ್ಯಾಸಗೊಳಿಸುವುದು ಕೂಡ ಬಹಳ ಸುಲಭ.

ಒಂದು ಬಾರಿ ಬಂಡವಾಳ ಹಾಕಿದರೆ ಆಮೇಲೆ ಬೇಕಾದ ಜಾಗಕ್ಕೆ ಸ್ವಲ್ಪ ಖರ್ಚಿನಲ್ಲಿ ಬದಲಾಯಿಸಬಹುದು ಅಥವಾ ವಿನ್ಯಾಸ ಮಾಡಬಹುದು ಎನ್ನುವ ಕಾರಣಕ್ಕಾಗಿ ಈ ರೀತಿ ಕಂಟೇನರ್ ಮನೆ ಮಾಡಿಕೊಳ್ಳಲು ಜನ ಇಚ್ಚಿಸುತ್ತಾರೆ. ಈ ಪ್ರಯೋಗವನ್ನು ಅವರು ತಮ್ಮ ಜಮೀನಿನಲ್ಲಿ ಮಾಡಿದರು. 7 ಲಕ್ಷ ಖರ್ಚಿನಲ್ಲಿ ಎಲ್ಲ ಸೌಲಭ್ಯವನ್ನು ಒಳಗೊಂಡ ಎರಡು ಕೋಣೆಗಳುಳ್ಳ ಕಂಟೇನರ್ ಮನೆಯನ್ನು ನಿರ್ಮಿಸಿದರು. ಆ ಹಳ್ಳಿಯಲ್ಲಿ ಮತ್ತು ಅಕ್ಕಪಕ್ಕದ ಹಳ್ಳಿಯಲ್ಲಿ ಅದೇ ಮೊದಲ ಪ್ರಯತ್ನವಾಗಿತ್ತು.

ಈಗ ಆ ಮನೆಯನ್ನು ನೋಡಲು ಜನರು ಆಶ್ಚರ್ಯದಿಂದ ಬರುತ್ತಿದ್ಧಾರೆ ಮತ್ತು ಹಲವರು ತಾವು ಸಹ ಇದೇ ರೀತಿ ಜಮೀನುಗಳಲ್ಲಿ ಸಣ್ಣ ಮನೆ ಮಾಡಿಕೊಳ್ಳಬೇಕು ಎಂದು ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕಂಟೇನರ್ಗಳ ಮನೆ ಮಾಡಿಕೊಳ್ಳುವುದು ಖರ್ಚನ್ನು ತಗ್ಗಿಸಿ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ನಿಮಗೂ ಸಹ ಕಂಟೇನರ್ ಮನೆಗಳನ್ನು ಮಾಡಿಕೊಳ್ಳಲು ಆಸಕ್ತಿ ಇದ್ದರೆ ಪುಷ್ಪಕ್ ನರಸಿಂಹನ್ 9663493831 ಈ ನಂಬರಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.

ಗಂಡನ ವಿರುದ್ಧ ಸುಳ್ಳು ಕೇಸ್ ಕೊಡುವವರಿಗೆ ಬ್ರೇಕ್ ಹಾಕಲು ಬಂತು ಹೊಸ ಕಾನೂನು.! ತಪ್ಪದೆ ಈ ಸುದ್ದಿ ನೋಡಿ.

 

ನಾವು ಈ ಮೇಲೆ ಹೇಳಿರುವಂತಹ ಟೈಟಲ್ ಅನ್ನು ಗಮನಿಸಿ ಖಂಡಿತವಾಗಿ ಇಂತಹ ಸಂದಿಗ್ಧ ಸಮಯವನ್ನು ಸಾಕಷ್ಟು ವಿವಾಹಿತ ಪುರುಷರು (Married Men) ಕಂಡಿದ್ದಾರೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಸಮಾಜ ಸದಾ ಕಾಲ ಮಹಿಳೆಯರ ಪರವಾಗಿ ನಿಲ್ಲುತ್ತದೆ. ಆದರೆ, ಇಂತಹ ಸುಳ್ಳು ಪ್ರಕರಣ (False Case) ಗಳಿಂದಾಗಿ ಸಮಸ್ಯೆಯನ್ನು ಅನುಭವಿಸುವಂತಹ ವಿವಾಹಿತ ಪುರುಷರ ಬಗ್ಗೆ ಯಾರೂ ಕೂಡ ಅಷ್ಟೊಂದು ಗಮನವಹಿಸುವುದಿಲ್ಲ.

ಹೀಗಾಗಿ, ಒಬ್ಬ ವಕೀಲರ ಸಲಹೆ ಈ ಪ್ರಕರಣದಲ್ಲಿ ಯಾವ ರೀತಿ ಇರುತ್ತದೆ ಎನ್ನುವುದನ್ನು ಇಂದಿನ ಲೇಖನದಲ್ಲಿ ಕಾನೂನು ಸಮೇತ ಹೇಳಲು ಹೊರಟಿದ್ದು ತಪ್ಪದೆ ಈ ಲೇಖನವನ್ನು ಕೊನೆಯವರೆಗೂ ಓದಿ. ಮದುವೆಯ ಕುರಿತಂತೆ ಎಷ್ಟೇ ನಿಯಮಗಳನ್ನು ತಿಳಿಯುತ್ತಾ ಹೋದರು ಕೂಡ ಅದು ಕಡಿಮೆ ಆಗುತ್ತದೆ. ಯಾಕೆಂದರೆ, ಮದುವೆಯಾದ ಮೇಲೆ ಕೆಲವೊಮ್ಮೆ ಇಬ್ಬರ ನಡುವೆ ವೈ ಮನಸ್ಸು ಉಂಟಾದಾಗ ಸಾಕಷ್ಟು ರೀತಿಯಲ್ಲಿ ಇಬ್ಬರು ಕಷ್ಟ ಪಡಬೇಕಾಗುತ್ತದೆ.

ಅದರಲ್ಲಿಯೂ ವಿಶೇಷವಾಗಿ ಗಂಡನಾದವನು ಕಾನೂನು ರೀತಿಯಾಗಿ ಸಾಕಷ್ಟು ತೊಂದರೆ ಪಡಬೇಕಾಗುತ್ತದೆ. ಯಾಕೆಂದರೆ, ಕಾನೂನು ಪ್ರಕಾರವಾಗಿ ಹೆಚ್ಚು ಕಮ್ಮಿ. ಆದರೆ, ಗಂಡನ ವಿರುದ್ಧವೇ ಪ್ರಕರಣ ದಾಖಲಾಗುತ್ತದೆ. ಇಂತಹ ಸಮಸ್ಯೆಯನ್ನು ಅನುಭವಿಸುತ್ತಿರುವ ವ್ಯಕ್ತಿ ಹೇಳುವ ಪ್ರಕಾರ, 2019 ರಲ್ಲಿ ಆತನ ಮದುವೆಯಾಗಿತ್ತು. ಆದರೆ, ವ್ಯಕ್ತಿಯ ಹೆಂಡತಿ ಕೇವಲ ಆರು ತಿಂಗಳಿಗೆ ತವರುಮನೆಗೆ ಹೋದವಳು ಮತ್ತೆ ಬರಲಿಲ್ಲ.

ಗಂಡ ಬರುವುದಕ್ಕೆ ಎಷ್ಟೇ ವಿನಂತಿಸಿ ಕೊಂಡರೂ ಕೂಡ ಹೆಂಡತಿ ನನಗೆ ನೀನು ಇಷ್ಟ ಇಲ್ಲ ಒಂದು ವೇಳೆ ಕರೆದುಕೊಂಡು ಹೋಗಲು ಬಲವಂತ ಮಾಡಿದರೆ, ನಾನು ನನ್ನ ಜೀವನವನ್ನು ಕೊನೆಗೊಳಿಗಿಸಿಕೊಳ್ಳುತ್ತೇನೆ ಎಂಬುದಾಗಿ ಕೂಡ ಹೇಳಿದ್ದಾಳೆ. ಆ ಕಡೆ ಅತ್ತೆ ಮಾವ ಕೂಡ ಯಾವುದೇ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿಲ್ಲ. ಈಗಾಗಲೇ ಗಂಡನಿಗೆ ಹೆಂಡತಿ ಬೇಡದ ಸಂಬಂಧವನ್ನು ಹೊಂದಿದ್ದಾಳೆ ಎನ್ನುವುದು ಕೂಡ ತಿಳಿದುಬಂದಿದೆ.

ಇದರ ಕುರಿತಂತೆ ಆಕೆಯ ತಂದೆ ತಾಯಿಯರಿಗೆ ಹೇಳಿದಾಗಲೂ ಕೂಡ ಅವರು ಕೂಡ ಈ ಕುರಿತಂತೆ ನಂಬುತ್ತಿಲ್ಲ ಎಂಬುದಾಗಿ ಆ ವ್ಯಕ್ತಿ ಅಳಲನ್ನು ತೋಡಿಕೊಂಡಿದ್ದಾರೆ. ಇದರ ನಡುವಲ್ಲಿಯೇ ಆಕೆ ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ವಕೀಲರಿಂದ ನೋಟಿಸ್ ಕಳಿಸಿದ್ದಾಳೆ ಎಂಬುದಾಗಿ ಕೂಡ ಆ ವ್ಯಕ್ತಿ ಸಮಸ್ಯೆಯನ್ನು ಲಾಯರ್ ಬಳಿ ತೋಡಿಕೊಂಡಿದ್ದಾರೆ. ಇದಕ್ಕೆ ಪರಿಹಾರವನ್ನು ಲಾಯರ್ ಬಳಿ ಕೇಳಿದ್ದಾರೆ. ಇದಕ್ಕೆ ಲಾಯರ್ ನೀಡಿರುವ ಪರಿಹಾರವೇನು ಎಂಬುದನ್ನು ಮೊದಲಿಗೆ ತಿಳಿದುಕೊಳ್ಳೋಣ.

ಲಾಯರ್‌ ಇದರ ಬಗ್ಗೆ ಮಾತನಾಡುತ್ತಾ, ಈ ಪ್ರಕರಣದಲ್ಲಿ ಮೊದಲಿಗೆ ಮಾಡಬೇಕಾಗಿರುವಂತಹ ಕೆಲಸ ಲಾಯರ್ ಕಳಿಸಿರುವ ಅಂತಹ ನೋಟಿಸಿಗೆ ಸರಿಯಾದ ಉತ್ತರವನ್ನು ನೀಡಬೇಕು. ಇದಾದ ನಂತರ ನಿಮ್ಮ ಹತ್ತಿರದ ಮಧ್ಯಸ್ಥಿಕೆ ಕೇಂದ್ರಕ್ಕೆ ಹೋಗಿ ನಿಮ್ಮ ನಡುವೆ ನಡೆಯುತ್ತಿರುವಂತಹ ಸಮಸ್ಯೆಗಳ ಪೂರ್ವ ಪದವನ್ನು ಸರಿಯಾಗಿ ಸಂಕ್ಷಿಪ್ತವಾಗಿ ವಿವರಿಸಬೇಕು ಹಾಗೂ ಆ ಸಂದರ್ಭದಲ್ಲಿ ಅವರು ನಿಮ್ಮಿಬ್ಬರನ್ನು ಕರೆಸಿ ರಾಜಿ ಮಾಡಲು ಪ್ರಯತ್ನಿಸುತ್ತಾರೆ.

ಒಂದು ವೇಳೆ ಇದಕ್ಕೆ ಕೂಡ ನಿಮ್ಮ ಹೆಂಡತಿ ಒಪ್ಪದೆ ಹೋದಲ್ಲಿ ದಾಂಪತ್ಯ ಜೀವನ ಹಕ್ಕುಗಳ ಪುನರ್ ಸ್ಥಾಪನೆಗೆ ಬೇಕಾದರು ಕೂಡ ಅರ್ಜಿ ಹಾಕಬಹುದು. ಇಲ್ಲವಾದಲ್ಲಿ ಅವರನ್ನು ನೀವು ನಿಮ್ಮ ಜೀವನದಿಂದ ಕಳೆದುಕೊಳ್ಳಬೇಕು ಎನ್ನುವಂತಹ ಯೋಚನೆ ಇದ್ದರೆ ನೇರವಾಗಿ ಡಿವೋರ್ಸ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಇಂಥಹ ಸಂದರ್ಭಗಳಲ್ಲಿ ನಿಮ್ಮ ಸಾಂಗತ್ಯವನ್ನು ದೂರ ಇಟ್ಟುಕೊಳ್ಳಬೇಕು ಎಂದು ಬಯಸುವಂತಹ ಸಂಗಾತಿಯಿಂದ ದೂರ ಇರುವುದೇ ಒಳ್ಳೆಯದು ಎಂಬುದಾಗಿ ಲಾಯರ್ ಪರಿಹಾರವನ್ನು ಹೇಳುತ್ತಾರೆ.

ಈ 4 ಎಲೆ ಅಗಿದು ತಿನ್ನು ಸಾಕು ಕಿಡ್ನಿ ಸ್ಟೋನ್ ಒಂದು ವಾರದಲ್ಲಿ ಮಂಗಮಾಯ.!

 

ಇತ್ತೀಚಿನ ದಿನಗಳಲ್ಲಿ ಈ ಒಂದು ಕಿಡ್ನಿ ಸ್ಟೋನ್ ಸಮಸ್ಯೆ ಅಧಿಕವಾಗಿ ಕಾಣಿಸಿಕೊಳ್ಳುತ್ತಿದ್ದು ಇದರಿಂದ ಹೆಚ್ಚಿನ ಜನ ಹಲವಾರು ಆರೋಗ್ಯ ಸಮಸ್ಯೆಗಳನ್ನು ಸಹ ಅನುಭವಿಸುತ್ತಿದ್ದಾರೆ. ಇದನ್ನು ದೂರ ಮಾಡಿ ಕೊಳ್ಳುವುದಕ್ಕೆ ಆಸ್ಪತ್ರೆಗಳಲ್ಲಿ ಆಪರೇಷನ್ ಗಳನ್ನು ಮಾಡುವುದರ ಮೂಲಕ ಈ ಸಮಸ್ಯೆಯನ್ನು ದೂರ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದಾರೆ.

ಆದರೆ ಎಷ್ಟೇ ಪ್ರಯತ್ನ ಪಟ್ಟರು ಮನುಷ್ಯರು ಸೇವನೆ ಮಾಡುವ ಆಹಾರ ಪದ್ಧತಿ ಆಗಿರಬಹುದು ಅಥವಾ ಅವರ ಜೀವನ ಶೈಲಿ ಆಗಿರ ಬಹುದು ಇವೆಲ್ಲದರಲ್ಲಿಯೂ ಮಾಡುವಂತಹ ಕೆಲವೊಂದಷ್ಟು ತಪ್ಪು ಗಳಿಂದ ಈ ರೀತಿಯ ಸಮಸ್ಯೆ ಎದುರಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಅವರು ಎಷ್ಟೇ ಹೇಳಿದರು ಜನರು ಮಾತ್ರ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವುದಿಲ್ಲ.

ಅದರಿಂದಲೇ ಈ ರೀತಿಯ ಸಮಸ್ಯೆಗಳು ಉಂಟಾಗುತ್ತಿದೆ ಎಂದು ಹೇಳಿದರೆ ತಪ್ಪಿಲ್ಲ ಅದಕ್ಕೂ ಮೊದಲು ಈ ಒಂದು ಕಿಡ್ನಿ ಸ್ಟೋನ್ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣಗಳು ಏನು ಎಂದು ನೋಡುವುದಾದರೆ.
* ನಮ್ಮ ದೇಹದಲ್ಲಿ ಪಿತ್ತ ವಿಕಾರಗಳು ಹೆಚ್ಚಾದಾಗ ನಮ್ಮ ದೇಹದಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

* ಪ್ರತಿನಿತ್ಯ ನಮ್ಮ ದೇಹಕ್ಕೆ ಬೇಕಾಗಿರುವಂತಹ ನೀರನ್ನು ಸೇವನೆ ಮಾಡದೆ ಇರುವುದು. ಅಂದರೆ ದಿನಕ್ಕೆ ಕನಿಷ್ಠಪಕ್ಷ ಐದರಿಂದ ಆರು ಲೀಟರ್ ನೀರನ್ನು ಸೇವನೆ ಮಾಡದೆ ಇರುವುದರಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
* ಸರಿಯಾಗಿ ಮಲ ವಿಸರ್ಜನೆ ಮಾಡದೇ ಇರುವುದು ಅಂದರೆ ಮಲಬದ್ಧತೆಯ ಸಮಸ್ಯೆ.

* ಅತಿಯಾಗಿ ಬೇಕರಿ ತಿಂಡಿಗಳನ್ನು ಸೇವನೆ ಮಾಡುವುದು ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು.
* ಹಾಗೂ ಬೀಡಿ ಸಿಗರೇಟು ಗುಟ್ಕಾ ತಂಬಾಕು ಸೇವನೆಯಿಂದಲೂ ಸಹ ಈ ಒಂದು ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣ ಎಂದೇ ಹೇಳಬಹುದು.

ಹೀಗೆ ಮೇಲೆ ಹೇಳಿದಂತಹ ಇಷ್ಟು ಕಾರಣಗಳಿಂದ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಇವುಗಳೆಲ್ಲವನ್ನು ಸಹ ನಾವು ದೂರ ಮಾಡುವುದರಿಂದ ಈ ಸಮಸ್ಯೆ ಬರುವುದನ್ನು ನಾವು ತಡೆಗಟ್ಟ ಬಹುದಾಗಿದೆ. ಹಾಗಾದರೆ ಈ ಒಂದು ಸಮಸ್ಯೆಯನ್ನು ಹೇಗೆ ದೂರ ಮಾಡಿಕೊಳ್ಳುವುದು ಅದರಲ್ಲೂ ನಮ್ಮ ಸುತ್ತಮುತ್ತ ಇರುವಂತಹ ಯಾವ ಕೆಲವು ಗಿಡಮೂಲಿಕೆಗಳನ್ನು ಉಪಯೋಗಿಸುವುದರ ಮೂಲಕ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳ ಬಹುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

* ಕಾಡು ಬಸಳೆ ಸೊಪ್ಪು ಹೌದು ಇದು ನಿಮ್ಮ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡುತ್ತದೆ ಬೆಳಗಿನ ಸಮಯ ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಈ ಮೂರು ಎಲೆಯನ್ನು ಸ್ವಚ್ಛ ಮಾಡಿ ಅದರ ಒಳಗಡೆ 2 ರಿಂದ 3 ಕಾಳು ಮೆಣಸನ್ನು ಸೇರಿಸಿ ಆಗಿದು ಸೇವನೆ ಮಾಡಬೇಕು.

ಇದರ ಜೊತೆ ಕೆಲವೊಂದಷ್ಟು ಮನೆ ಮದ್ದುಗಳನ್ನು ಸಹ ಮಾಡಿ ಸೇವನೆ ಮಾಡುವುದರಿಂದ ಹಾಗೂ ಕೆಲವೊಂದಷ್ಟು ಆಹಾರ ಪದ್ಧತಿ ಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದರಿಂದಲೂ. ಒಟ್ಟಾರೆಯಾಗಿ ನಿಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ಈ ಸಮಸ್ಯೆಯಿಂದ ನೀವು ಸಂಪೂರ್ಣವಾಗಿ ದೂರವಾಗಬಹುದು. ಬದಲಿಗೆ ಹೆಚ್ಚಿನ ಜನ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಲು ಆಸ್ಪತ್ರೆಗಳಿಗೆ ಹೋಗಿ ಅಲ್ಲಿ ಆಪರೇಷನ್ ಗಳನ್ನು ಮಾಡಿಸಿಕೊಳ್ಳುತ್ತಾರೆ.

ಆದರೆ ಅವೆಲ್ಲವನ್ನು ಮಾಡಿಸಿಕೊಳ್ಳುವುದರ ಬದಲು ಈ ವಿಧಾನಗಳನ್ನು ಅನುಸರಿಸಿ ಆನಂತರ ನೀವು ಮುಂದಿನ ವಿಧಾನಗಳನ್ನು ಅನುಸರಿಸಿದರೆ ಉತ್ತಮ. ಬದಲಿಗೆ ಮೊದಲೇ ನೀವು ಆಸ್ಪತ್ರೆಗಳಿಗೆ ಹೋಗಿ ತೋರಿಸಿ ತಕ್ಷಣವೇ ಆಪರೇಷನ್ ಗಳನ್ನು ಮಾಡಿಸಿಕೊಳ್ಳುವುದು ಉತ್ತಮವಲ್ಲ ಎಂದು ಹೇಳಬಹುದಾಗಿದೆ.

ಗಂಡನ ಮನೆಯಲ್ಲಿನ ಕಿರುಕುಳ ತಾಳಲಾರದೆ ಹೊರ ಬಂದಾಕೆ ಈಗ IAS ಅಧಿಕಾರಿ; ಹೆಣ್ಣು ಮನಸ್ಸು ಮಾಡಿದ್ರೆ ಎಲ್ಲವೂ ಸಾಧ್ಯ.!

ಹೆಣ್ಣು ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಮಾಡುತ್ತಾಳೆ ಅನ್ನೋ ಮಾತನ್ನ ಎಷ್ಟೋ ಮಂದಿ ಹೆಣ್ಣು ಮಕ್ಕಳು, ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಅಂತದ್ದೇ ಒಂದು ಸ್ಟೋರಿ ಬಗ್ಗೆ ಇಂದು ನಾವು ಹೇಳಲು ಹೊರಟಿದ್ದೇವೆ. ಕೆಲವರು ಜೀವನದಲ್ಲಿ ಆಗುವ ಸಣ್ಣಪುಟ್ಟ ಏರಿಳಿತಗಳಿಗೆ ಹೆದರಿ ಬಿಡುತ್ತಾರೆ. ಆದರೆ, ಕೆಲವರು ಪ್ರತಿ ಕೆಟ್ಟ ಪರಿಸ್ಥಿತಿಯಲ್ಲೂ ಹೋರಾಡುವ ಮೂಲಕ ಜಯಿಸುತ್ತಾರೆ.

ಮಧ್ಯಪ್ರದೇಶದ ಬಡ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ಸವಿತಾ ಪ್ರಧಾನ್ ಇಂದಿನ ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಅತಿಥಿ. ಅವರ ಹೋರಾಟದ ಬದುಕಿನ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ…. ಮಾಡೆಲ್‌ನಂತೆ ಕಾಣುವ ಸವಿತಾ ಅವರ ಬದುಕೇ ಒಂದು ಹೋರಾಟ. ಎರಡು ಮಕ್ಕಳ ತಾಯಿಯಾಗಿರುವ ಸವಿತಾ ಪ್ರಧಾನ್ ಅವರಿಗೆ ಐಎಎಸ್ ಅಧಿಕಾರಿಯಾಗುವುದು ಅಷ್ಟು ಸುಲಭವಾಗಿರಲಿಲ್ಲ. ಅವರ ಜೀವನದಲ್ಲಿ ಹಲವು ಏರಿಳಿತಗಳಿದ್ದವು. ವಿದ್ಯಾಭ್ಯಾಸದಿಂದ ಹಿಡಿದು ದಾಂಪತ್ಯ ಜೀವನದವರೆಗೆ ಸಾಕಷ್ಟು ಕಷ್ಟಪಡಬೇಕಾಯಿತು.

ಸವಿತಾ ಪ್ರಧಾನ್ ಅವರು ವಿಡಿಯೋ ಸಂದರ್ಶನದಲ್ಲಿ ತಮ್ಮ ಜೀವನದ ಹಲವು ಪ್ರಮುಖ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಅವರು ಪ್ರಸ್ತುತ ಗ್ವಾಲಿಯರ್ ವಿಭಾಗದಲ್ಲಿ ಜಂಟಿ ನಿರ್ದೇಶಕರಾಗಿದ್ದಾರೆ. 2021 ರಲ್ಲಿ, ಅವರು ಖಾಂಡ್ವಾ ಮುನ್ಸಿಪಲ್ ಕಾರ್ಪೊರೇಶನ್ ನ ಮೊದಲ ಮಹಿಳಾ ಆಯುಕ್ತರಾದರು. ಸವಿತಾ ಪ್ರಧಾನ್ ಅವರು ಸಂಸದೀಯ ಮಂಡಿ ಎಂಬ ಹಳ್ಳಿಯಲ್ಲಿ ಬುಡಕಟ್ಟು ಕುಟುಂಬದಲ್ಲಿ ಜನಿಸಿದರು. ಅತ್ಯಂತ ಬಡತನದಲ್ಲಿ ಬೆಳೆದವರು.

ತನ್ನ ಹೆತ್ತವರಿಗೆ ಮೂರನೇ ಮಗು. ಆಗ ಅವರ ಗ್ರಾಮದಲ್ಲಿ 10ನೇ ತರಗತಿವರೆಗೆ ಮಾತ್ರ ಶಾಲೆ ಇತ್ತು. ಹೆಚ್ಚಿನ ಹುಡುಗಿಯರನ್ನು ಓದಲು ಕಳುಹಿಸುತ್ತಿರಲಿಲ್ಲ. ತನ್ನ ಹಳ್ಳಿಯಿಂದ 10ನೇ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೊದಲ ಹುಡುಗಿ ಸವಿತಾ. ಸೆಕೆಂಡ್ ಪಿಯು ಅಲ್ಲಿ ಜೀವಶಾಸ್ತ್ರ ಅಧ್ಯಯನ ಮಾಡಿದರು. ಅದಕ್ಕೇ ಸವಿತಾ ಅವರನ್ನು ಮದುವೆ ಆಗಲು ದೊಡ್ಡಮನೆಯ ಸಂಬಂಧ ಬಂದಿತ್ತು.

16-17 ನೇ ವಯಸ್ಸಿನಲ್ಲಿ ಸವಿತಾ ಅವರ ಇಚ್ಛೆಗೆ ವಿರುದ್ಧವಾಗಿ ಮದುವೆ ಆಯಿತು. ಸವಿತಾ ಪ್ರಧಾನ್ ಅವರ ವೈವಾಹಿಕ ಜೀವನ ಕಷ್ಟಗಳಿಂದ ಕೂಡಿತ್ತು. ಅತ್ತೆ ಆಕೆಯನ್ನು ಸಾಕಷ್ಟು ಹಿಂಸಿಸುತ್ತಿದ್ದರು. ಆಕೆಯ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿತ್ತು. ಎಲ್ಲರೊಂದಿಗೆ ಕುಳಿತು ಊಟ ಮಾಡುವ ಹಕ್ಕೂ ಇರಲಿಲ್ಲ. ಯಾರ ಬಳಿಯೂ ಮಾತನಾಡುವಂತೆಯೂ ಇರಲಿಲ್ಲ. ಊಟವನ್ನೂ ಸರಿಯಾಗಿ ಕೊಡುತ್ತಿರಲಿಲ್ಲ.

ಆಗ ಕದ್ದ ರೊಟ್ಟಿಗಳನ್ನು ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡು ಯಾರೂ ಇಲ್ಲದಾಗ ತಿನ್ನುತ್ತಿದ್ದರಂತೆ. ಗರ್ಭಿಣಿಯಾದ ನಂತರವೂ ಆಕೆಯ ಮೇಲಿನ ದೌರ್ಜನ್ಯ ಕಡಿಮೆಯಾಗಲಿಲ್ಲ. ಎರಡನೇ ಮಗ ಹುಟ್ಟಿದ ನಂತರವೂ ಪತಿ ಆಕೆಗೆ ಥಳಿಸುತ್ತಲೇ ಇದ್ದರಂತೆ. ಇದರಿಂದ ಬೇಸತ್ತ ಸವಿತಾ ಒಮ್ಮೆ ನೇಣಿಗೆ ಕುಣಿಕೆ ಸಿದ್ಧಪಡಿಸಿದ್ದರು. ನೋಡುತ್ತಿದ್ದರೂ ಅತ್ತೆ ಬಂದು ತಡೆಯಲಿಲ್ಲ. ಆಗ ತಾನು ಸಾಯುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಸವಿತಾ ಬಂದರು.

ಮಕ್ಕಳೊಂದಿಗೆ ಅತ್ತೆಯ ಮನೆಯನ್ನು ತೊರೆದ ಸವಿತಾ ಪಾರ್ಲರ್ ನಲ್ಲಿ ಕೆಲಸ ಮಾಡುವುದರ ಜೊತೆಗೆ ಮತ್ತೆ ಓದಲು ಪ್ರಾರಂಭಿಸಿದರು. ಇಂದೋರ್ ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಸರ್ಕಾರಿ ಕೆಲಸಕ್ಕೆ ಸೇರಿದ ನಂತರ ಸವಿತಾ ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ದಾಖಲಿಸಿದ್ದರು. ಇಂದು ಅನ್ಯಾಯಕ್ಕೊಳಗಾದ ಅನೇಕರಿಗೆ ಸವಿತಾ ದಾರಿದೀಪವಾಗಿ ಬದುಕುತ್ತಿದ್ದಾರೆ.

ಮಳೆಗಾಲದಲ್ಲಿ ಬಟ್ಟೆ ಒಣಗುತ್ತಿಲ್ಲ ಅಂದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!

 

ಸಾಮಾನ್ಯವಾಗಿ ಮಳೆಗಾಲ ಬಂದಿತ್ತು ಎಂದರೆ ಬಟ್ಟೆಗಳನ್ನು ಒಣಗಿಸು ವುದು ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ ಅದಕ್ಕಾಗಿಯೇ ಹೆಚ್ಚಿನ ಜನ ಆ ಸಮಯದಲ್ಲಿ ಬಟ್ಟೆ ಒಗೆಯುವುದಕ್ಕೆ ಹಿಂದೆ ಬೀಳುತ್ತಾರೆ. ಏಕೆಂದರೆ ಆ ಸಮಯದಲ್ಲಿ ಬಟ್ಟೆ ಒಗೆದರೆ ಅದು ಬೇಗ ಒಣಗುವುದಿಲ್ಲ ಹಾಗೇನಾದರೂ ಒಣಗಿಲ್ಲ ಎಂದರೆ ಬಟ್ಟೆ ವಾಸನೆ ಬರುತ್ತದೆ ಇದೆಲ್ಲ ಒಂದು ತಲೆನೋವು ಎನ್ನುವ ಹಾಗೆ ಪ್ರತಿಯೊಬ್ಬರೂ ಹೇಳುತ್ತಿರುತ್ತಾರೆ.

ಆದರೆ ಈ ದಿನ ನಾವು ಹೇಳುವಂತಹ ವಿಧಾನ ನಿಮಗೆ ಉತ್ತಮವಾಗಿರು ತ್ತದೆ ಎಂದು ಹೇಳಬಹುದು. ಹೌದು ಇದು ನಿಮಗೆ ತುಂಬಾ ಅನುಕೂಲ ವಾಗುತ್ತದೆ ಹಾಗೂ ತುಂಬಾ ಸಹಾಯವು ಸಹ ಆಗುತ್ತದೆ ಎಂದು ಹೇಳಿದರೆ ತಪ್ಪಿಲ್ಲ. ಅದರಲ್ಲೂ ಕೆಲವೊಮ್ಮೆ ನಮಗೆ ಅಗತ್ಯವಾಗಿ ಬೇಕಾಗಿರುವಂತಹ ಬಟ್ಟೆಯನ್ನೇ ಮರೆತು ತಕ್ಷಣವೇ ಬೆಳಗ್ಗೆ ಆ ಬಟ್ಟೆ ಉಪಯೋಗಿಸಬೇಕು ಎಂದು ಹೆಚ್ಚಿನ ಜನ ಅದನ್ನು ಹೇಗೆ ಒಗೆದು ತಕ್ಷಣ ಅದನ್ನು ಹೇಗೆ ಒಣಗಿಸುವುದು ಎನ್ನುವ ಆಲೋಚನೆಯಲ್ಲಿ ಇರುತ್ತಾರೆ.

ಆದರೆ ಆ ಒಂದು ಪ್ರಶ್ನೆಗೆ ಈ ದಿನ ನಾವು ಉತ್ತರವನ್ನು ಕೊಡುತ್ತೇವೆ ಹೌದು ಅದನ್ನು ಹೇಗೆ ತಕ್ಷಣವೇ ಒಗೆದು ಕೇವಲ 20 ನಿಮಿಷದ ಒಳಗೆ ಆ ಬಟ್ಟೆಯನ್ನು ಹೇಗೆ ಒಣಗಿಸುವುದು ಎನ್ನುವ ಸೂಪರ್ ಟಿಪ್ಸ್ ಅನ್ನು ಈ ದಿನ ಈ ಕೆಳಗಿನಂತೆ ತಿಳಿಯೋಣ. ಮೊದಲೇ ಹೇಳಿದಂತೆ ಕೆಲವೊಮ್ಮೆ ಯಾವುದಾದರೂ ಒಂದು ಪರಿಸ್ಥಿತಿಯಿಂದ ಆ ಬಟ್ಟೆ ಕೊಳೆಯಾಗಿದ್ದು ಅದನ್ನು ಒಗೆದರೆ ನಾಳೆ ಒಣಗುವುದಿಲ್ಲ ಎನ್ನುವ ಉದ್ದೇಶದಿಂದ ಹೆಚ್ಚಿನ ಜನ ಅದೇ ಬಟ್ಟೆಯನ್ನು ಮತ್ತೆ ಉಪಯೋಗಿಸುತ್ತಿರುತ್ತಾರೆ.

ಆದರೆ ಆ ರೀತಿ ಮತ್ತೆ ಅದನ್ನೇ ಉಪಯೋಗಿಸಿ ಅದರಿಂದ ಕೆಲವೊಂದ ಷ್ಟು ಸಮಸ್ಯೆಯನ್ನು ತಂದುಕೊಳ್ಳುವುದರ ಬದಲು ಈ ದಿನ ನಾವು ಹೇಳುವ ಈ ಒಂದು ವಿಧಾನ ಅನುಸರಿಸಿದರೆ ಉಪಯುಕ್ತವಾಗುತ್ತದೆ. ಹಾಗಾದರೆ ಆ ಟಿಪ್ಸ್ ಯಾವುದು ಎಂದು ನೋಡುವುದಾದರೆ.

* ಬಟ್ಟೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿ ಅದನ್ನು ಚೆನ್ನಾಗಿ ಹಿಂಡಬೇಕು ಅಂದರೆ ಅದರಲ್ಲಿರುವಂತಹ ನೀರು ಸಂಪೂರ್ಣವಾಗಿ ಹೋಗುವ ತನಕ ಅದನ್ನು ಚೆನ್ನಾಗಿ ಹಿಂಡಿ ಅದರಿಂದ ನೀರನ್ನು ತೆಗೆದು ಅದನ್ನು ಕುಕ್ಕರ್ ಒಳಗಡೆ ಇಟ್ಟು ಎರಡು ನಿಮಿಷ ದೊಡ್ಡ ಉರಿಯಲ್ಲಿ ಚೆನ್ನಾಗಿ ಇಡಬೇಕು. ಆದರೆ ಯಾವುದೇ ಕಾರಣಕ್ಕೂ ಅದಕ್ಕೆ ಬೇಜಾರ ಹಾಕಬಾರದು ನಂತರ ಎರಡು ನಿಮಿಷ ದೊಡ್ಡ ಉರಿಯಲ್ಲಿ ಹಾಗೂ ಐದು ನಿಮಿಷ ಸಣ್ಣ ಉರಿಯಲ್ಲಿ ಇಡಬೇಕು.

ಆನಂತರ ಕುಕ್ಕರ್ ಅನ್ನು ಸ್ವಲ್ಪ ಸಮಯ ಹಾಗೆ ಬಿಟ್ಟು ಅದು ತಣ್ಣಗಾದ ನಂತರ ಕುಕ್ಕರ್ ಕ್ಯಾಪ್ ತೆಗೆದು ಆ ಬಟ್ಟೆಯನ್ನು ನೀವು ನೋಡಿ ದರೆ ಸಾಕು ಅದರಲ್ಲಿ ಇರುವಂತಹ ನೀರಿನಂಶ ಸಂಪೂರ್ಣವಾಗಿ ಹೋಗಿರುತ್ತದೆ. ಸಂಪೂರ್ಣವಾಗಿ ಒಣಗಿರುತ್ತದೆ ಹೌದು ಈ ಒಂದು ವಿಧಾನ ಪ್ರತಿಯೊಬ್ಬ ಮನೆಯಲ್ಲಿರುವ ಮಹಿಳೆಗೆ ಉಪಯುಕ್ತ ಎಂದು ಹೇಳಬಹುದು.

ಕೆಲವೊಮ್ಮೆ ಮಕ್ಕಳ ಶಾಲಾ ವಸ್ತ್ರವನ್ನು ನಾಳೆಯೇ ಹಾಕಿ ಕೊಂಡು ಹೋಗಬೇಕು ಎನ್ನುವ ಸಂದರ್ಭ ಇದ್ದಂತಹ ಸಮಯದಲ್ಲಿ ರಾತ್ರಿ ಸಮಯ ಈ ಒಂದು ವಿಧಾನವನ್ನು ಅನುಸರಿಸಿದರೆ ಮಕ್ಕಳ ಬಟ್ಟೆ ಆಗಿರಲಿ ಯಾರ ಬಟ್ಟೆಯನ್ನಾಗಲಿ ಈ ಒಂದು ವಿಧಾನ ಅನುಸರಿಸಿ ಸುಲಭವಾಗಿ ಕಡಿಮೆ ಸಮಯದಲ್ಲಿ ಸ್ವಚ್ಛ ಮಾಡಬಹುದಾಗಿದೆ. ಅದರಲ್ಲೂ ಮೊದಲ ಹೇಳಿದಂತೆ ಮಳೆಗಾಲದ ಸಮಯದಲ್ಲಿ ಈ ಒಂದು ವಿಧಾನ ಬಹಳ ಉಪಯುಕ್ತವಾಗಿರುತ್ತದೆ ಎಂದೇ ಹೇಳಬಹುದು.

ಗೃಹಿಣಿಯರು ಅನುಕೂಲವಾಗುವಂತಹ ಸೂಪರ್ ಟಿಪ್ಸ್ ಇದನ್ನೊಮ್ಮೆ ನೋಡಿ.!

 

ಮನೆಯಲ್ಲಿರುವಂತಹ ಮಹಿಳೆಯರು ಮನೆಯ ವಿಚಾರವಾಗಿ ಸಂಬಂಧಿ ಸಿದ ಕೆಲವೊಂದು ಮಾಹಿತಿಗಳನ್ನು ಅನುಸರಿಸುವುದು ಒಳ್ಳೆಯದು ಹಾಗೂ ಅದರಿಂದ ಹೆಚ್ಚಿನ ಪ್ರಯೋಜನವನ್ನು ಸಹ ಪಡೆದುಕೊಳ್ಳ ಬಹುದು ಎಂದು ಹೇಳಬಹುದು. ಹಾಗಾದರೆ ಮನೆಯಲ್ಲಿರುವಂತಹ ಮಹಿಳೆಯರು ಮನೆಯಲ್ಲಿ ಯಾವ ಕೆಲವು ಕೆಲಸವನ್ನು ಮಾಡುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕು ಹಾಗೂ ಅದರಿಂದ ಆಗುವ ಲಾಭವೇನು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಹಾಗೂ ನಾವು ಯಾವ ರೀತಿಯ ಕೆಲವು ತಪ್ಪುಗಳನ್ನು ಮಾಡುತ್ತೇವೆ ಹಾಗೂ ಅದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎನ್ನುವುದನ್ನು ಸಹ ನೋಡೋಣ. ಮನೆಯಲ್ಲಿ ಪ್ರತಿಯೊಂದು ಕೆಲಸವನ್ನು ಸಹ ನಾವು ಇದೇ ರೀತಿಯಾಗಿ ಮಾಡಬೇಕು ಎನ್ನುವ ನಿಯಮಗಳು ಇರುತ್ತದೆ ಹಾಗೇನಾದರೂ ನಾವು ಅದನ್ನು ಅನುಸರಿಸದೇ ಇದ್ದರೆ.

ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಇದ ರಿಂದ ನಮ್ಮ ಆರೋಗ್ಯದ ಮೇಲೆ ಅದು ನೇರವಾಗಿ ಪರಿಣಾಮ ಬೀರು ತ್ತದೆ ಎಂದು ಹೇಳಬಹುದು. ಅದರಲ್ಲೂ ಮುಖ್ಯವಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಆರೋಗ್ಯದ ವಿಚಾರವಾಗಿ ಒಳ್ಳೆಯ ವಿಧಾನಗಳನ್ನು ಅನುಸರಿಸುವುದು ಮುಖ್ಯ ಹಾಗಾದರೆ ಯಾವ ಕೆಲವು ಕೆಲಸವನ್ನು ಮಾಡುವಾಗ ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಎನ್ನುವುದನ್ನು ಸಹ ಈ ಕೆಳಗೆ ತಿಳಿಯೋಣ. ಮೊದಲನೆಯದಾಗಿ

* ಪ್ರತಿಯೊಬ್ಬರೂ ಕೂಡ ಸೊಪ್ಪಿನ ಸಾಂಬಾರ್ ಮಾಡುವಾಗ ಅದನ್ನು ಸೌಟಿನಿಂದ ಮಿಶ್ರಣ ಮಾಡುತ್ತೇವೆ ಆದರೆ ಯಾವುದೇ ಕಾರಣಕ್ಕೂ ಆ ರೀತಿ ಮಾಡಬಾರದು ಈ ರೀತಿ ಮಾಡುವುದರಿಂದ ಗಾಳಿಯಲ್ಲಿರುವ ಆಮ್ಲಜನಕವು ಸೊಪ್ಪು ತರಕಾರಿಗಳ ಜೀವಸತ್ವ ಗಳನ್ನು ನಾಶ ಮಾಡುತ್ತದೆ.
* ಹಣ್ಣು ಮತ್ತು ತರಕಾರಿಗಳನ್ನು ಯಾವುದೇ ಕಾರಣಕ್ಕೂ ಹಿತ್ತಾಳೆ ಪಾತ್ರೆಯಲ್ಲಿ ಬೇಯಿಸಬಾರದು.

* ಮೂಲಂಗಿ ಮತ್ತು ಕೋಸನ್ನು ಬೇಯಿಸುವಂತಹ ಸಮಯದಲ್ಲಿ ಸ್ವಲ್ಪ ಶುಂಠಿಯನ್ನು ಅದರ ಒಳಗಡೆ ಹಾಕಿ ಬೇಯಿಸುವುದರಿಂದ ಅದರಿಂದ ಬರುವ ವಾಸನೆ ದೂರವಾಗುತ್ತದೆ.
ಹೌದು ಎಲ್ಲರಿಗೂ ತಿಳಿದಿರುವಂತೆ ಮೂಲಂಗಿ ಮತ್ತು ಕೋಸನ್ನು ಬೆಳೆಸುವಂತಹ ಒಂದು ರೀತಿಯ ದುರ್ವಾಸನೆ ಬರುತ್ತದೆ ಆದರೆ ಅದರ ರುಚಿ ಮಾತ್ರ ಅದ್ಭುತ ಎಂದೇ ಹೇಳಬಹುದು ಆದರೆ ಕೆಲವೊಂದಷ್ಟು ಜನ ಅದರಿಂದ ಬರುವ ವಾಸನೆಯಿಂದ ಅದನ್ನು ತಿನ್ನುವುದನ್ನೇ ಬಿಟ್ಟಿರುತ್ತಾರೆ. ಆದರೆ ಮನೆಯಲ್ಲಿರುವ ಮಹಿಳೆಯರು ಈ ಒಂದು ವಿಧಾನವನ್ನು ಅನುಸರಿಸುವುದರಿಂದ ಅದರ ವಾಸನೆ ಸಂಪೂರ್ಣವಾಗಿ ದೂರವಾಗುತ್ತದೆ.

* ಕ್ಯಾರೆಟ್ ಅನ್ನು ಬೇಯಿಸಿ ಆಲೂಗಡ್ಡೆ ಬೇಯಿಸಿದಾಗ ನಾವು ಸಿಪ್ಪೆಯನ್ನು ಹೇಗೆ ತೆಗೆಯುತ್ತೇವೋ ಅದೇ ರೀತಿ ಕ್ಯಾರೆಟ್ ಸಿಪ್ಪೆಯನ್ನು ಸಹ ಸುಲಭವಾಗಿ ತೆಗೆಯಬಹುದು. ಇದು ಒಂದು ಸೂಪರ್ ಟಿಪ್ಸ್ ಎಂದು ಹೇಳಿದರೆ ತಪ್ಪಾಗುವುದಿಲ್ಲ.
* ಸೌತೆಕಾಯಿ, ಸೀಮೆಬದನೆಕಾಯಿ, ಟೊಮೆಟೊ, ಬದನೆಕಾಯಿ, ಗಜ್ಜರಿ, ಕೋಸು, ಪಡವಲಕಾಯಿ ಕುಂಬಳಕಾಯಿ, ಸೋರೆಕಾಯಿ, ಹೀರೆಕಾಯಿ ಮುಂತಾದ ಶೀಘ್ರವಾಗಿ ಬೇಯುವ ತರಕಾರಿಗಳನ್ನು ಕುಕ್ಕರಿನಲ್ಲಿ ಬೇಯಿಸಬೇಡಿರಿ.

* ಗೆಡ್ಡೆ, ಗೆಣಸುಗಳನ್ನು ಸಿಪ್ಪೆಯ ಸಹಿತ ಬೇಯಿಸಬೇಕು ಏಕೆಂದರೆ ಸಿಪ್ಪೆ ಜೀವಸತ್ವಗಳನ್ನು ರಕ್ಷಿಸುತ್ತದೆ.
* ಸಾಧ್ಯವಾದಷ್ಟು ತರಕಾರಿಗಳ ಸಿಪ್ಪೆಯನ್ನು ತೆಗೆಯದೆ ಉಪಯೋಗಿಸ ಬೇಕು.
* ಹೂ ಕೋಸು ಬೇಯಿಸುವ ನೀರಿನಲಿ ಒಂದು ಚಮಚ ಸಕ್ಕರೆ ಹಾಕಿದರೆ ತರಕಾರಿ ಬಿಳಿ ಬೆಣ್ಣದಲ್ಲೇ ಉಳಿಯುತ್ತದೆ.
* ಈರುಳ್ಳಿ ಮತ್ತು ಕ್ಯಾರೆಟ್‌ಗಳನ್ನು ಬೇಯಿಸುವಾಗ ಅವುಗಳನ್ನು ಅಡ್ಡವಾಗಿ ಹೆಚ್ಚಿದರೆ ಮೃದುವಾಗಿ ಬೇಯುತ್ತವೆ.

* ಬೆಂಡೆಕಾಯಿ ಪಲ್ಯದಲ್ಲಿ, ಸೀಳಿಕ ಬಿಡದೆ ಇರಲು ಹೋಳುಗಳನ್ನು ಒಗ್ಗರಣೆ ಹಾಕಿದ ತಕ್ಷಣ ತಿಳಿ ಮಜ್ಜಿಗೆ ಚಿಮುಕಿಸಿರಿ.
* ಆಲೂಗಡ್ಡೆ ಬೇಯಿಸುವಾಗ ಗೆಡ್ಡೆಯ ನಡುವೆ ಫೋರ್ಕ್‌ನಿಂದ ಚುಚ್ಚಿದರೆ ಬೇಗ ಬೇಯುತ್ತದೆ.
* ಕೋಸಿನ ಮೇಲೆ ಒಂದು ಚೂರು ಬ್ರೆಡ್ ಇಟ್ಟು ಬೇಯಿಸಿದಾಗ ಕೋಸಿನ ವಾಸನೆ ಬೇಯುವಾಗ ಬರುವುದಿಲ್ಲ.
* ಆಲೂಗಡ್ಡೆ ಬೇಯಿಸುವಾಗ ನೀರಿಗೆ ಸ್ವಲ್ಪ ಎಣ್ಣೆಹಾಕಿದರೆ ಪಾತ್ರೆಯು ಅಲುಗುವುದಿಲ್ಲ.

* ಇಡಿಯಾದ ಬೀಟ್‌ರೂಟ್‌ಗಳನ್ನು ಹಾಗೆಯೇ ಬೇಯಿಸಿ ತೆಗೆದು ಬಿಸಿ ಇರುವಾಗಲೇ ಒಂದು ಕಾಗದದ ಮೇಲೆ ಇಟ್ಟು ಉರುಳಿಸಿ ಕಾಗದದ ಜೊತೆಗೆ ಅದರ ಸಿಪ್ಪೆಯೂ ಬರುತ್ತದೆ. ಹೀಗೆ ಮಾಡುವುದರಿಂದ ಕೈಗೆ ಬಣ್ಣ ತಗುಲುವುದಿಲ್ಲ.
* ಹಾಗಲಕಾಯಿಯ ಕಹಿ ಹೋಗಲು ಹಾಗಲಕಾಯಿಯ ಹೋಳುಗಳನ್ನು ಹುಣಸೇ ಹಣ್ಣಿನ ನೀರಿನಲ್ಲಿ ಬೇಯಿಸಿ ಆನಂತರ ಒಗ್ಗರಣೆ ಮಾಡಿ ಗೊಜ್ಜು ಮಾಡಬೇಕು.

* ಸಿಹಿ ಕುಂಬಳಕಾಯಿ ಮತ್ತು ಖರ್ಬೂಜದ ಬೀಜಗಳನ್ನು ಬಿಸಿಲಿನಲ್ಲಿ ಒಣಗಿಸಿ ಸಿಪ್ಪೆ ತೆಗೆದು ಸಿಹಿತಿಂಡಿಗಳಿಗೆ ಉಪಯೋಗಿಸಬಹುದು.
* ಹೂ ಕೋಸು ಮತ್ತು ಮೂಲಂಗಿಗಳ ಎಳಸಾದ ಎಲೆಗಳನ್ನು ತರಕಾರಿಯೊಡನೆ ಬೇಯಿಸಿ ತಿಂದರೆ ಆಹಾರ ಜೀರ್ಣವಾಗುತ್ತದೆ.
* ಹುಣಸೇ ಚಿಗುರು, ಟೊಮೆಟೊಕಾಯಿ ಅಥವಾ ಮಾವಿನ ಕಾಯಿಯನ್ನು ಚಟ್ನಿಗೆ ಹುಳಿ ಬದಲು ಉಪಯೋಗಿಸಬಹುದು.

ಕೇವಲ 5 ನಿಮಿಷದಲ್ಲಿ ಇಡೀ ಮನೆ ಕ್ಲೀನ್.!

 

ಮನೆಯಲ್ಲಿರುವಂತಹ ಮಹಿಳೆಯರಿಗೆ ಮನೆ ಸ್ವಚ್ಛ ಮಾಡುವ ಕೆಲಸ ಎಂದರೆ ತಲೆನೋವಿನ ಕೆಲಸವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಮನೆಯನ್ನು ಸ್ವಚ್ಛ ಮಾಡಬೇಕು ಎಂದರೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಅಷ್ಟೇ ಶ್ರಮವನ್ನು ಸಹ ಹಾಕಬೇಕಾಗುತ್ತದೆ. ಆದರೆ ಹೆಚ್ಚಿನ ಜನಕ್ಕೆ ಮನೆಯನ್ನು ಸ್ವಚ್ಛ ಮಾಡಲು ಸಾಧ್ಯವಾಗುವುದಿಲ್ಲ.

ಏಕೆಂದರೆ ಸ್ವಲ್ಪ ಸಮಯ ನಿಂತು ಕೆಲಸ ಮಾಡಿದರೆ ಹಾಗೂ ಬಗ್ಗಿ ಕೆಲಸ ಮಾಡಿದರೆ ಅವರಿಗೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿ ರುತ್ತದೆ. ಮನೆ ಸ್ವಚ್ಛ ಮಾಡುವುದು ಎಂದರೆ ಒಂದು ದೊಡ್ಡ ಕೆಲಸ ವಾಗಿಯೇ ಅದು ಪರಿಣಮಿಸುತ್ತದೆ. ಹಾಗೆ ಅಂತವರಿಗೆ ಮನೆಯನ್ನು ಯಾವ ಕೆಲವು ಸುಲಭ ವಿಧಾನಗಳನ್ನು ಅನುಸರಿಸಿ ಮನೆಯನ್ನು ಸ್ವಚ್ಛ ಮಾಡಬಹುದು ಎನ್ನುವಂತಹ ವಿಷಯದ ಬಗ್ಗೆ ಅವರು ಎಲ್ಲಾ ಕಡೆ ಚರ್ಚಿಸುತ್ತಾರೆ.

ಹಾಗೂ ಇನ್ನೂ ಕೆಲವೊಂದಷ್ಟು ಜನ ಮನೆಯನ್ನು ಸ್ವಚ್ಛ ಮಾಡುವುದಕ್ಕೆ ಬೇರೆಯವರನ್ನು ಕೂಡ ಕರೆಸಿಕೊಂಡಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಈ ರೀತಿ ಕೆಲಸದವರನ್ನು ಇಟ್ಟುಕೊಂಡು ಮನೆಯನ್ನು ಪ್ರತಿ ಸಲ ಸ್ವಚ್ಛ ಮಾಡಲು ಕರೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಪ್ರತಿ ಬಾರಿ ಅವರಿಗೆ ಹೆಚ್ಚಿನ ಹಣವನ್ನು ಕೊಟ್ಟು ಮನೆಯನ್ನು ಸ್ವಚ್ಛ ಮಾಡಿಸಿ ಕೊಡುವಂತಹ ಶಕ್ತಿ ಕೆಲವೊಂದಷ್ಟು ಜನರಲ್ಲಿ ಇರುವುದಿಲ್ಲ.

ಹೆಚ್ಚಿನ ಹಣ ಸಂಪಾದನೆ ಮಾಡುವಂತಹ ಜನರು ಕೆಲವೊಂದಷ್ಟು ವಸ್ತುಗಳನ್ನು ಉಪಯೋಗಿಸಿ ಮನೆಯನ್ನು ಸ್ವಚ್ಛ ಮಾಡಬಹುದು ಆದರೆ ಅವುಗಳಿಗೆ ಹೆಚ್ಚಿನ ಬೆಲೆ ಇರುತ್ತದೆ ಹಾಗೂ ಅವುಗಳನ್ನು ಪ್ರತಿಯೊಬ್ಬರೂ ಕೂಡ ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಅದರ ಬದಲು ಈ ದಿನ ನಾವು ಹೇಳುವಂತಹ ಈ ಒಂದು ಪ್ರಾಡಕ್ಟ್

ಅನ್ನು ನಿಮ್ಮ ಮನೆಯ ನೆಲದ ಮೇಲೆ ಹಾಗೂ ಬಾತ್ರೂಮ್, ಶೀಂಕ್, ಸ್ಟವ್, ಬಾಗಿಲ ಮೇಲೆ ಇರುವಂತಹ ಪ್ರತಿಯೊಂದು ಕೊಳೆಯನ್ನು ಸಹ ನೀವು ಸುಲಭವಾಗಿ ಸ್ವಚ್ಛ ಮಾಡಬಹುದಾಗಿದೆ. ಹೌದು ಅದರ ಮೇಲೆ ಈ ಒಂದು ಪ್ರಾಡಕ್ಟ್ ಅನ್ನು ಹಾಕಿ ಸ್ವಲ್ಪ ಸಮಯ ಬಿಟ್ಟು ಆನಂತರ ಒಂದು ಚಿಕ್ಕ ಬ್ರಷ್ ಸಹಾಯದಿಂದ ಉಜ್ಜಿದರೆ ಸಾಕು ಅಲ್ಲಿರುವಂತಹ ಸಂಪೂರ್ಣ ವಾದಂತಹ ಕೊಳೆ ಹೊರ ಹೋಗುತ್ತದೆ.

ಇದನ್ನು ಉಜ್ಜಿ ತಿಕ್ಕಿ ತೊಳೆಯಬೇಕು ಎನ್ನುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಸುಲಭವಾಗಿ ಕಡಿಮೆ ಸಮಯದಲ್ಲಿ ಹೆಚ್ಚಿನ ಶ್ರಮ ಇಲ್ಲದೆ ಸ್ವಚ್ಛ ಮಾಡಬಹುದಾಗಿದೆ. ಹಾಗಾದರೆ ಆ ಒಂದು ಪ್ರಾಡಕ್ಟ್ ಯಾವುದು ಅದನ್ನು ಜನರಿಗೆ ಯಾವ ರೀತಿ ಅವರು ವಿತರಿಸುತ್ತಾರೆ. ಹಾಗೂ ನಾವು ಅದನ್ನು ಯಾವ ಒಂದು ವಿಧಾನವನ್ನ ಅನುಸರಿಸಿ ತೆಗೆದುಕೊಳ್ಳಬಹುದು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೋಡೋಣ.

ಇಲ್ಲಿ ನಿಮಗೆ ಪ್ರತಿಯೊಂದು ಕೂಡ ಕ್ಲೀನ್ ಮಾಡುವಂತಹ ಪದಾರ್ಥಗಳು ಸಿಗುತ್ತದೆ. ಈ ಕಂಪನಿಯ ಹೆಸರು ಕ್ಲೆನ್ಸೋ ಪ್ರಾಡಕ್ಟ್ಸ್ ಎಂದು ಹೌದು ಇಲ್ಲಿ ನಿಮಗೆ ಟಾಯ್ಲೆಟ್ ಕ್ಲೀನರ್ ಹಾಗೆಯೇ ಕಬೋರ್ಡ್ ಕ್ಲೀನರ್ ಹೀಗೆ ಪ್ರತಿಯೊಂದು ಕೂಡ ಸಿಗುತ್ತದೆ. ಅವುಗಳನ್ನು ಉಪಯೋಗಿಸಿ ನೀವು ಸುಲಭವಾಗಿ ಮನೆಯನ್ನು ಸ್ವಚ್ಛ ಮಾಡಬಹುದು.

ಹಾಗಾದರೆ ನೀವು ಇವುಗಳನ್ನು ಯಾವ ರೀತಿ ತೆಗೆದುಕೊಳ್ಳಬಹುದು ಎಂದು ನೋಡುವುದಾದರೆ
ಈಗ ನಾವು ಹೇಳುವ ಈ ಒಂದು ನಂಬರ್ ಗೆ ನೀವು ಕರೆ ಮಾಡಿ ನಿಮ್ಮ ವಿಳಾಸವನ್ನು ಹೇಳಿದರೆ ಸಾಕು ನಿಮ್ಮ ವಿಳಾಸಕ್ಕೆ ಅವರು ನಿಮ್ಮ ಮನೆಗೆ ಕಳಿಸಿಕೊಡುತ್ತಾರೆ.
ಮೊಬೈಲ್ ಸಂಖ್ಯೆ :- 9742333671 / 961177766

ಇದನ್ನು ಉಪಯೋಗಿಸುವ ವಿಧಾನ ನೋಡುವುದಾದರೆ :-
ನಿಮಗೆ ಎಷ್ಟು ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇರುತ್ತದೆಯೋ ಅದಕ್ಕೆ ತಕ್ಕಂತೆ ಸ್ವಲ್ಪ ಪ್ರಮಾಣದ ಈ ಒಂದು ಪ್ರಾಡಕ್ಟ್ ಅನ್ನು ಹಾಕಿ ಕೈಗೆ ಗ್ಲೌಸ್ ಹಾಕಿಕೊಂಡು ಆನಂತರ ನೀವು ಇದನ್ನು ಉಪಯೋಗಿಸಬಹುದು.

ನಿಮ್ಮ ದಿನಚರಿಯಲ್ಲಿ ಈ 12 ನಿಯಮಗಳನ್ನು ಅಳವಡಿಸಿಕೊಂಡರೆ ನೀವು ಎಂದಿಗೂ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ

 

ಪ್ರತಿಯೊಬ್ಬರೂ ಕೂಡ ಎಲ್ಲಾ ರೀತಿಯ ವಿಷಯಗಳಲ್ಲಿಯೂ ಹೆಚ್ಚಿನ ಗಮನ ವಹಿಸುತ್ತಾರೆ. ಆದರೆ ಕೆಲವು ಮುಖ್ಯವಾದ ವಿಷಯಗಳ ಬಗ್ಗೆ ಅದರಲ್ಲೂ ಅವರ ಆರೋಗ್ಯದ ವಿಷಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವುದಿಲ್ಲ. ಬದಲಿಗೆ ಅದರಿಂದ ಹಲವಾರು ಆರೋಗ್ಯ ಸಮಸ್ಯೆ ಗಳನ್ನು ಎದುರಿಸುತ್ತಿರುತ್ತಾನೆ.

ಆದ್ದರಿಂದ ಆರೋಗ್ಯ ಸಮಸ್ಯೆ ಎದುರಾದ ನಂತರ ಅದನ್ನು ಸರಿಪಡಿಸಿಕೊಳ್ಳುವುದರ ಬದಲು ಆರೋಗ್ಯ ಸಮಸ್ಯೆ ಬಾರದಂತೆ ಕೆಲವು ನಿಯಮಗಳನ್ನು ಅನುಸರಿಸುವುದು ಉತ್ತಮ ಹಾಗೂ ಅದರಿಂದ ಮುಂದಿನ ದಿನದಲ್ಲಿ ಯಾವುದೇ ರೀತಿಯ ದೊಡ್ಡ ಅಪಾಯ ಉಂಟಾಗುವುದನ್ನು ತಡೆಗಟ್ಟಬಹುದಾಗಿದೆ.

ಹೌದು ಅದರಲ್ಲಿ ನಾವು ಸೇವನೆ ಮಾಡುವಂತಹ ಆಹಾರ ಪದ್ಧತಿ ಇದಕ್ಕೆ ಬಹಳ ಪ್ರಮುಖವಾದ ಕಾರಣವಾಗಿರುತ್ತದೆ. ಹಾಗಾದರೆ ಈ ದಿನ ನಾವು ನಮ್ಮ ಪ್ರತಿನಿತ್ಯ ದಿನಚರಿಯಲ್ಲಿ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ಹಾಗೂ ಅದು ನಮ್ಮ ಆರೋಗ್ಯ ವನ್ನು ಯಾವ ರೀತಿ ಕಾಪಾಡುತ್ತದೆ ಎನ್ನುವ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ಪ್ರತಿದಿನ ಬೆಳಿಗ್ಗೆ ಎದ್ದ ನಂತರ, ನೀವು ಮೊದಲು ಒಂದ ರಿಂದ ಎರಡು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕುವುದು ಮತ್ತು ಹೊಟ್ಟೆಯನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ.
* ಉಪಾಹಾರದಲ್ಲಿ ಏನನ್ನಾದರೂ ತಿಂದ ನಂತರವೇ ನೀವು ಚಹಾವನ್ನು ಕುಡಿಯಬೇಕು, ಇಲ್ಲದಿದ್ದರೆ ಅದು ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು.

* ಮಲಬದ್ಧತೆಯಿಂದ ಬಳಲುತ್ತಿರುವವರು ಸಾಯಂಕಾಲ ಪಪಾಯಿ ಯನ್ನು ಸೇವಿಸಬೇಕು. ಇದಲ್ಲದೇ ನಾರಿನಂಶವಿರುವ ಆಹಾರ ಸೇವನೆ ಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
* ಹಲ್ಲುಗಳನ್ನು ಚೆನ್ನಾಗಿ ನೋಡಿಕೊಳ್ಳಲು ರಾತ್ರಿ ಮಲಗುವ ಮುನ್ನ ಹಲ್ಲುಗಳನ್ನು ಸ್ವಚ್ಛಗೊಳಿಸಿ ನಂತರ ಒಂದು ಲೋಟ ನೀರು ಕುಡಿದ ನಂತರವೇ ಮಲಗಬೇಕು.

* ಆಹಾರ ಸೇವಿಸುವಾಗ ನೀರು ಕುಡಿಯಬೇಡಿ. ಇದು ಜೀರ್ಣಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ನೀವು ಪೂರ್ಣ ಊಟವನ್ನು ತಿನ್ನಲು ಸಾಧ್ಯವಿಲ್ಲ, ಆಹಾರ ಸೇವಿಸಿದ ಅರ್ಧ ಗಂಟೆಯ ನಂತರ ಯಾವಾಗಲೂ ನೀರು ಕುಡಿಯಿರಿ.
* ರಾತ್ರಿ ಮಲಗುವಾಗ ಮೊಬೈಲ್ ಫೋನ್ ಅನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳಬೇಡಿ. ಅದರಲ್ಲಿ ಸಂಪರ್ಕಿಸುವ ವಿಕಿರಣಶೀಲ ಕಿರಣಗಳು ಮಲಗಿರುವಾಗ ನಿಮ್ಮ ಮೆದುಳಿಗೆ ಹಾನಿಯನ್ನುಂಟುಮಾಡುತ್ತದೆ.

* ಪ್ರತಿದಿನ ವ್ಯಾಯಾಮ ಅಥವಾ ಯೋಗವನ್ನು ಅಭ್ಯಾಸ ಮಾಡಿ, ಇದು ಅನೇಕ ಗಂಭೀರ ಕಾಯಿಲೆಗಳ ಅಪಾಯದಿಂದ ನಿಮ್ಮನ್ನು ಉಳಿಸುತ್ತದೆ,
* ಫೋನ್‌ನಲ್ಲಿ ಮಾತನಾಡುವಾಗ, ಯಾವಾಗಲೂ ಎಡ ಕಿವಿಯಲ್ಲಿ ಕರೆಗೆ ಉತ್ತರಿಸಿ. ವೈಜ್ಞಾನಿಕ ಅಧ್ಯಯನದ ಪ್ರಕಾರ ಎಡ ಕಿವಿಯಿಂದ ಫೋನ್ ಗೆ ಉತ್ತರಿಸುವ ಕಾರಣದಿಂದಾಗಿ ಆವರ್ತನವು ಅತ್ಯುತ್ತಮವಾಗಿ ಉಳಿಯುತ್ತದೆ ಮತ್ತು ರೇಡಿಯೋ ಸಕ್ರಿಯ ಕಿರಣಗಳ ಪರಿಣಾಮವೂ ಸಹ ಬಹಳ ಕಡಿಮೆಯಾಗುತ್ತದೆ.

* ಆಹಾರ ಸೇವಿಸಿದ ನಂತರ ಶುಂಠಿ ಅಥವಾ ಸ್ವಲ್ಪ ಬೆಲ್ಲವನ್ನು ತಿನ್ನಬೇಕು ಇದರಿಂದ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ.
* ಆಯುರ್ವೇದದ ಪ್ರಕಾರ, ರಾತ್ರಿಯಲ್ಲಿ ಮೊಸರು ಸೇವನೆಯನ್ನು ತಪ್ಪಿಸಬೇಕು. ಇದು ಲೋಳೆಯ ಬೆಳವಣಿಗೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

* ಅಕ್ಷಯ್ ಕುಮಾರ್ ಅವರ ಫಿಟ್ ನೆಸ್ ಬಗ್ಗೆ ನಿಮಗೆಲ್ಲರಿಗೂ ತಿಳಿದಿರ ಬೇಕು, ಅವರು ಸಂಜೆ 6:00 ಗಂಟೆಯ ನಂತರ ಆಹಾರವನ್ನು ಸೇವಿಸುವುದಿಲ್ಲ. ಅದಕ್ಕಾಗಿಯೇ ನೀವು ಸಂಜೆ 6 ರ ನಂತರ ಭಾರೀ ಆಹಾರವನ್ನು ತೆಗೆದುಕೊಳ್ಳದಿರಲು ಪ್ರಯತ್ನಿಸಬೇಕು.
* ಫ್ರಿಜ್ ನಲ್ಲಿಟ್ಟ ತಣ್ಣೀರು ಸೇವನೆಯಿಂದ ದೂರವಿರಿ ಇದು ಗಂಟಲಿಗೆ ಹಾನಿಕಾರಕವಲ್ಲ ಆದರೆ ನಿಮ್ಮ ಆರೋಗ್ಯಕ್ಕೆ ಅನೇಕ ಹಾನಿಯನ್ನುಂಟು ಮಾಡುತ್ತದೆ.