Home Blog Page 205

500 ರೂಪಾಯಿ ಬಾಡಿಗೆ ಮನೆಯಲ್ಲಿ ಇದ್ದ ನಾನು ಇಂದು 1.5 ಕೋಟಿ ಮೌಲ್ಯದ ಮನೆ ಕಟ್ಟಿದ್ದಿನಿ ಇದೆಲ್ಲದಕ್ಕೂ ಕಾರಣ ಕುಬೇರಲಕ್ಷ್ಮಿ ವ್ರತ, ನೀವು ಒಂದು ಸಲ ಈ ವ್ರತ ಮಾಡಿ ಸಕಲವು ದೊರೆಯುತ್ತದೆ

 

ಲಕ್ಷ್ಮಿ ಕುಬೇರ ವ್ರತದ ಬಗ್ಗೆ ಆಸಕ್ತಿ ಎಲ್ಲರಿಗೂ ಇರುತ್ತದೆ. ಯಾಕೆಂದರೆ ಈ ವ್ರತ ಪಾಲಿಸುವವರಿಗೆ ತಪ್ಪದೆ ಲಕ್ಷ್ಮಿಯ ಕೃಪಾಕಟಾಕ್ಷ ದೊರೆಯುತ್ತದೆ. ಮನೆಯಲ್ಲಿ ಎಷ್ಟೇ ಆರ್ಥಿಕ ಸಂಕಷ್ಟ ಇದ್ದರೂ ಹಣಕಾಸಿನ ತೊಂದರೆಗಳು ಎಷ್ಟೇ ಭಾದಿಸುತ್ತಿದ್ದರು ಭಕ್ತಿಯಿಂದ ಈ ವ್ರತವನ್ನು ನಿಯಮ ಪ್ರಕಾರ ಪಾಲಿಸಿದರೆ ಅವರೆಲ್ಲಾ ಕಷ್ಟಗಳು ಕೂಡ ದೂರ ಆಗುತ್ತವೆ.

ಇದಕ್ಕೆ ಯಾವುದೇ ಬೇಧವಿಲ್ಲದೆ ಪುರುಷರು, ಮಹಿಳೆಯರು, ವಿಧವೆಯರು, ಸುಮಂಗಲಿಯರು ಕನ್ಯೆಯರು ಯಾರು ಬೇಕಾದರೂ ಆಚರಿಸಬಹುದು. ಇದನ್ನು ಅಮಾವಾಸ್ಯೆ ದಿನ ಆರಂಭಿಸಿದರೆ ತುಂಬಾ ಒಳ್ಳೆಯದು ಅಥವಾ ಅಮಾವಾಸ್ಯೆ ಆದ ಬಳಿಕ ಆರಂಭಿಸಿದರು ಒಳ್ಳೆಯದು. ಗುರುವಾರ ದಿನ ಆರಂಭಿಸುವುದರಿಂದ ಗುರುಗಳ ಆಶೀರ್ವಾದ ಹೆಚ್ಚು ಸಿಗುತ್ತದೆ ಎಂದು ನಂಬಲಾಗಿದೆ. ಆದರೆ ಒಮ್ಮೆ ಆರಂಭಿಸಿದ ಮೇಲೆ 48 ದಿನಗಳವರೆಗೆ ಪಾಲಿಸಬೇಕು.

ಹೆಣ್ಣು ಮಕ್ಕಳಿಗೆ ಮಧ್ಯದಲ್ಲಿ ತಿಂಗಳ ಸಮಸ್ಯೆ ಬಂದಾಗ ಐದಾರು ದಿನ ಬಿಟ್ಟು ಮತ್ತೆ ಆರಂಭಿಸಬಹುದು. ಈ ವ್ರತ ಆರಂಭಿಸಲು ಈ ರೀತಿ ಮಾಡಿ ಒಂದು ದಿನ ನಿರ್ಧಾರ ಮಾಡಿಕೊಂಡು ಮನೆಯಲ್ಲ ಶುದ್ಧ ಮಾಡಿಕೊಂಡು ಬೇಗ ಎದ್ದು ಸ್ನಾನ ಮಾಡಿ ಮನೆ ದೇವರ ಪೂಜೆ ಮಾಡಿ ಮತ್ತು ಮನೆ ದೇವರಿಗೆ ಕಾಣಿಕೆಯಾಗಿ 11 ರೂಪಾಯಿಯನ್ನು ಒಂದು ಅರಿಶಿಣದ ಬಟ್ಟೆಯಲ್ಲಿ ಕಟ್ಟಿ ಇಡಬೇಕು.

ನಂತರ ಎಂದಿನಂತೆ ಎಲ್ಲ ದೇವರಿಗೆ ಪೂಜೆ ಮಾಡಿ, ಮೊದಲು ಗಣಪತಿಯನ್ನು ಆಶೀರ್ವಾದಕ್ಕಾಗಿ ಆರಂಭಿಸಬೇಕು ಗಣಪತಿ ಆಶೀರ್ವಾದ ಬೇಡಿ ಬಳಿಕ ಕುಬೇರ ಲಕ್ಷ್ಮಿ ವ್ರತ ಪಾಲಿಸುತ್ತೇನೆ ಎಂದು ಸಂಕಲ್ಪ ಮಾಡಿಕೊಂಡು ನಿಯಮ ನಿಷ್ಠೆಯಿಂದ ನಡೆದುಕೊಳ್ಳಬೇಕು. ಪ್ರತಿದಿನವೂ ಕೂಡ 48 ದಿನಗಳವರೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ದೇವರಿಗೆ ಹೂವು ಇಟ್ಟು ದೀಪ ಹಚ್ಚಿ ಪೂಜೆ ಮಾಡಬೇಕು.

ಪ್ರತಿದಿನವೂ ಕೂಡ ಸ್ನಾನ ಮಾಡಲೇಬೇಕು ಎನ್ನುವ ನಿಯಮ ಇಲ್ಲ. ನೀವು ತಲೆ ಸ್ನಾನ ಮಾಡುವ ದಿನ ಮಾತ್ರ ತಲೆಗೆ ಸ್ನಾನ ಮಾಡಬಹುದು, ಬೇರೆ ದಿನ ಹಾಗೆ ಸ್ನಾನ ಮಾಡಿ ಕೂಡ ಪೂಜೆ ಮಾಡಬಹುದು. ಆದರೆ 48 ದಿನಗಳವರೆಗೆ ಮಾಂಸಹಾರದ ಸೇವನೆ ಅಥವಾ ಮಧ್ಯಪಾನ ಮಾಡಬಾರದು. ಆದಷ್ಟು ಆಧ್ಯಾತ್ಮಿಕವಾಗಿ ಇರಬೇಕು. ಈ ವ್ರತವಲ್ಲದೆ ಯಾವುದೇ ದೇವರ ಪೂಜೆಗಳನ್ನು, ವ್ರತಗಳನ್ನು ಮಾಡುವಾಗಲು ಕೂಡ ನಾವು ಎಷ್ಟು ಪ್ರಾಮಾಣಿಕವಾಗಿರುತ್ತವೆ.

ಒಳ್ಳೆ ಮಾತುಗಳನ್ನು ಆಡುತ್ತೇವೆ ಹಾಗೂ ಒಳ್ಳೆಯದನ್ನು ಬೇರೆಯವರಿಗೆ ಬಯಸುತ್ತೇವೆ ಅಷ್ಟೇ ಪ್ರತಿಫಲ ನಮಗೂ ಸಿಗುತ್ತದೆ. ಆದ್ದರಿಂದ ಈ ರೀತಿ ಸಕಾರಾತ್ಮಕತೆಯಿಂದ ಕೂಡಿದವರಿಗೆ ದೇವರ ಅನುಗ್ರಹ ಬೇಗ ಸಿಗುತ್ತದೆ. ಆರಂಭದಲ್ಲಿ ತಪ್ಪದೇ ಮುಖ್ಯವಾಗಿ ಒಂದು ಕೆಲಸ ಮಾಡಬೇಕು. ಅದೇನೆಂದರೆ ಬೆಲ್ಲ ಮೈದಾ ಹಿಟ್ಟು ಹಾಗೂ ಹಾಲಿನಿಂದ ಉಂಡೆಗಳನ್ನು ಮಾಡಿಕೊಳ್ಳಬೇಕು. 108 ಉಂಡೆಗಳನ್ನು ಮಾಡಿಕೊಂಡು ಅದನ್ನು ಸ್ವಲ್ಪ ಒಣಗಿಸಿ ಒಂದು ಬಟ್ಟಲಿನಲ್ಲಿ ದೇವರ ಮುಂದೆ ಇಡಬೇಕು.

ಮೊದಲ ದಿನ ತಪ್ಪದೇ ಇದನ್ನು ದೇವರ ಮುಂದೆ ಇಡುವಾಗ ಒಂದೊಂದು ಉಂಡೆ ಇಡುವಾಗಲು ಕೂಡ ಕನಕಧಾರಸ್ತೋತ್ರವನ್ನು ಒಂದೊಂದು ಉಂಡೆಗಳನ್ನು ಹಿಡಿದುಕೊಂಡು ಹೇಳಿ ಬಟ್ಟಲಿಗೆ ಹಾಕಬೇಕು. ಪೂರ್ವಾಭಿಮುಖವಾಗಿ ಅಥವಾ ಉತ್ತರಕ್ಕೆ ಮುಖವಾಗಿ ಚಾಪೆ ಮೇಲೆ ಅಥವಾ ಮಣೆಯ ಮೇಲೆ ಕುಳಿತುಕೊಂಡು ಗಣಪತಿಯನ್ನು ಮೊದಲು ಪ್ರಾರ್ಥಿಸಿ, ನಂತರ ಈ ರೀತಿ ಮಂತ್ರವನ್ನು ಹೇಳಬೇಕು.

108 ಬಾರಿ ಈ ರೀತಿ ಉಂಡೆಗಳನ್ನು ಹಿಡಿದುಕೊಂಡು 48 ದಿನಗಳವರೆಗೂ ಹೇಳಿ ವ್ರತ ಮುಗಿದ ಮೇಲೆ ಈ ಉಂಡೆಗಳನ್ನು ಹರಿಯುವ ನೀರಿನಲ್ಲಿ ಹಾಕಬೇಕು. ಅದನ್ನು ಮೀನುಗಳ ಸೇವಿಸಬೇಕು ಅಥವಾ ನಿಮ್ಮ ಮನೆ ಪಕ್ಕದಲ್ಲಿ ಯಾವುದಾದರೂ ಕೆರೆಗಳಲ್ಲಿ ಮೀನು ಇದ್ದರು ಹಾಕಬಹುದು ಆದರೆ ಯಾವುದೇ ಕಾರಣಕ್ಕೂ ಮನೆಯಲ್ಲಿರುವ ಅಕ್ವೇರಿಯಂ ಮೀನುಗಳಿಗೆ ಹಾಕಬಾರದು. ಈ ರೀತಿ ವ್ರತವನ್ನು ಪಾಲಿಸಿ ನೋಡಿ, ನಿಮ್ಮ ಪರಿಸ್ಥಿತಿ ಎಷ್ಟು ಉತ್ತಮವಾಗುತ್ತದೆ ಎಂದು ಆಶ್ಚರ್ಯಗೊಳ್ಳುತ್ತೀರಿ.

ಕಳೆದುಕೊಂಡಿದ್ದು ಏನೇ ಆಗಲಿ ಯಾವುದೇ ಆಗಲಿ ಈ ದೇವಲಾಯಕ್ಕೆ ಒಮ್ಮೆ ಭೇಟಿ ನೀಡಿ ಮರಳಿ ಸಿಗುತ್ತೆ.

 

ನಮ್ಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ಎನ್ನುವಲ್ಲಿ ಪುರಾಣ ಪ್ರಸಿದ್ದಿಯಾದ ಶ್ರೀ ರಾಜರಾಜೇಶ್ವರಿ ತಾಯಿಯ ದೇವಸ್ಥಾನ ಇದೆ. ಈ ದೇವಾಲಯವನ್ನು ಸಾವಿರ ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ ಎಂದು ನಂಬಲಾಗಿದ್ದು, ಈ ದೇವಸ್ಥಾನದ ಪ್ರತಿಷ್ಠಾಪನೆ ಹಿಂದೆ ಕೂಡ ಒಂದು ಕಥೆ ಇದೆ. ಸುರಥ ಮಹಾರಾಜ ಎನ್ನುವ ಮಹಾರಾಜನು ಯುದ್ಧದಲ್ಲಿ ಸೋತು ಶತ್ರುಗಳಿಂದ ತನ್ನ ಎಲ್ಲಾ ಸಂಪತ್ತನ್ನು ಕಳೆದುಕೊಂಡಿರುತ್ತಾನೆ.

ಬಳಿಕ ಜೀವನದಲ್ಲಿ ಬೇಸರವಾಗಿ ಕಾಡು ಮಾರ್ಗದಲ್ಲಿ ಹೋಗುತ್ತಿರುವಾಗ ಸುಮೇಧ ಎನ್ನುವ ಒಬ್ಬ ಮುನಿ ಸಿಗುತ್ತಾರೆ. ಋಷಿಮುನಿಯ ಜೊತೆ ತನ್ನೆಲ್ಲಾ ಕಷ್ಟವನ್ನು ಹೇಳಿಕೊಂಡಾಗ ಋಷಿಮುನಿಯು ಅರಸನಿಗೆ ಶ್ರೀ ರಾಜರಾಜೇಶ್ವರಿಯ ಮಂತ್ರೋಪದೇಶವನ್ನು ಕೊಟ್ಟು ಸದಾ ತಾಯಿ ಧ್ಯಾನದಲ್ಲಿದ್ದರೆ ಪರಿಹಾರ ಸಿಗುತ್ತದೆ ಎಂದು ಹೇಳುತ್ತಾರೆ. ಇದನ್ನೇ ಪಾಲಿಸುತ್ತಿದ್ದ ರಾಜನಿಗೆ ಒಂದು ದಿನ ಕನಸಿನಲ್ಲಿ ಆಸ್ಥಾನರೂಢರಾದ ಶ್ರೀಮಾತೆಯು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ.

ಅದನ್ನು ಋಷಿಮುನಿಗೆ ತಿಳಿಸಿದಾಗ ಕನಸಿನಲ್ಲಿ ಕಂಡಂತೆಯೇ ಆ ಜಾಗದಲ್ಲಿ ತಾಯಿಯನ್ನು ಪ್ರತಿಷ್ಠಾಪಿಸಬೇಕು ಎಂದು ಆಶಿಸುತ್ತಾರೆ. ಮೊದಲಿಗೆ ಮಣ್ಣಿನಲ್ಲಿ ತಾಯಿಯನ್ನು ಪ್ರತಿಷ್ಠಾಪಿಸಿ ಪೂಜಿಸಲು ಶುರು ಮಾಡಿದ ಸುರಥ ಮಹಾರಾಜನು ಜೀವನದಲ್ಲಿ ಕಳೆದುಕೊಂಡಿದ್ದೆಲ್ಲಾ ಮತ್ತೆ ಬರಲು ಶುರು ಆಗುತ್ತದೆ. ಬಳಿಕ ರಾಜ ಹಿಂದಿನಂತೆ ತನ್ನ ಸಂಪತ್ತು ರಾಜ್ಯವನ್ನೆಲ್ಲಾ ವಾಪಸ್ಸು ಪಡೆಯುತ್ತಾರೆ. ತಾಯಿಯ ದೇವಸ್ಥಾನವನ್ನು ಲೋಕ ವಿಖ್ಯಾತಿಯಾಗುವಂತೆ ಜೀರ್ಣೋದ್ದಾರ ಗೊಳಿಸುತ್ತಾರೆ.

ಪುಳನ, ಪೊಳಲ್ ಎಂದರೆ ಮಣ್ಣು ಎನ್ನುವ ಅರ್ಥ ಬರುವುದಿಂದ ಈ ಕ್ಷೇತ್ರಕ್ಕೆ ಪುಳಿನಪುರ ಎನ್ನುವ ಹೆಸರು ಇದೆ. ಇಲ್ಲಿ ಪ್ರಥಮ ದೇವತೆ ಶ್ರೀ ರಾಜರಾಜೇಶ್ವರಿ ತಾಯಿ ಹಾಗೆಯೇ ಎಡ ಭಾಗದಲ್ಲಿ ಭದ್ರಕಾಳಿಯನ್ನು ಬಲಭಾಗದಲ್ಲಿ ಶ್ರೀ ಸುಬ್ರಮಣ್ಯ ಸ್ವಾಮಿ, ಬ್ರಹ್ಮವಟು, ವಿಷ್ಣುವಟು, ಶೂಲಿನಿ, ದಂಡಿನಿ, ಮುಂಡಿನಿ ಪರಿವಾರ ಗಣಗಳ ಆಳೆತ್ತರದ ವಿಗ್ರಹಗಳನ್ನು ಪ್ಯತಿಷ್ಟಾಪಿಸಲಾಗಿದೆ. ಭಾರತ ದೇಶದಲ್ಲಿ ಅತ್ಯಂತ ಬೃಹತಾಕಾರದ ವಿಗ್ರಹಗಳು ಇಲ್ಲೇ ಇರುವುದು ಎನ್ನುವ ಖ್ಯಾತಿಗೆ ಒಳಗಾಗಿದೆ.

ದೇವಸ್ಥಾನದ ಹೊರಾಂಗಣದಲ್ಲಿ ಭಾಗದಲ್ಲಿ ಸುಮೇಧ ಮುನಿಯವರ ಪ್ರತಿಷ್ಠಾಪಿಸಿದ ದುರ್ಗಾಪರಮೇಶ್ವರಿ ಅಮ್ಮನವರ ಗುಡಿ ಇದ್ದು, ಎಡ ಭಾಗದಲ್ಲಿ ಶ್ರೀ ಕ್ಷೇತ್ರಪಾಲನ ಸನ್ನಿಧಿ ಇದೆ. ದೈನಂದಿಕ ಪೂಜೆಯಲ್ಲಿ ಪ್ರಥಮ ಪೂಜೆ ಹೊರಾಂಗಣದಲ್ಲಿರುವ ದುರ್ಗಾಪರಮೇಶ್ವರಿ ಅಮ್ಮನಿಗೆ ಆಗುತ್ತದೆ. ನಂತರ ಕ್ಷೇತ್ರದ ಅದಿದೇವತೆ ಶ್ರೀ ರಿಜರಾಜೇಶ್ವರಿ ಅಮ್ಮನಿಗೆ ಪೂಜಾ ಕಾಂಕರ್ಯ ನಡೆಯುತ್ತಿದೆ. ಫಲ್ಗುಣಿ ನದಿ ದಂಡೆಯ ಮೇಲೆ ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ಸುತ್ತ ಹಸಿರಿನ ನಡುವೆ ದೇವಾಲಯವು ದೇವಲೋಕದಿಂದ ಇಳಿದಿರುವಂತೆ ಕಂಗೊಳಿಸುತ್ತದೆ.

ದೇವಾಲಯದ ಪ್ರಖ್ಯಾತಿ ಹೆಚ್ಚಾಗುತ್ತಿದ್ದು ಈ ದೇವಸ್ಥಾನಕ್ಕೆ ಹೋಗುವುದರಿಂದ ಜೀವನದಲ್ಲಿ ಏನನ್ನೇ ಕಳೆದುಕೊಂಡಿದ್ದರು ಅದು ವಾಪಸ್ ಬರುತ್ತದೆ ಎನ್ನುವ ನಂಬಿಕೆ ಜನರಲ್ಲಿ ಬೆಳೆಯುತ್ತದೆ ಹಾಗೂ ನಂಬಿಕೆಗೆ ತಕ್ಕ ಹಾಗೆ ಪವಾಡಗಳ ನಡೆಯುತ್ತಿರುವುದು ಅಗಾಧ ಪ್ರಮಾಣದ ಭಕ್ತರನ್ನು ಸೆಳೆಯುತ್ತಿದೆ. ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ಸ್ವರೂಪಳಾದ ಈ ಮಾತೆಯು ಭಕ್ತರ ಪಾಲಿನ ಇಷ್ಟಪ್ರಧಾಯಿನಿಯಾಗಿ ಇಲ್ಲಿ ಮೆರೆಯುತ್ತಿದ್ದಾರೆ.

ಕ್ಷೇತ್ರವನ್ನು ಸಾವಿರ ಸೀಮೆಯ ದೇವಸ್ಥಾನ ಎಂದು ಕೂಡ ಕರೆಯುತ್ತಾರೆ. ದಿನ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮೂರು ಸಮಯದಲ್ಲೂ ಪೂಜೆ ನಡೆಯುತ್ತದೆ. ಮಂಗಳವಾರ, ಶುಕ್ರವಾರ ಮತ್ತು ಭಾನುವಾರದಂದು ವಿಶೇಷ ಪೂಜೆಗಳು ಜರುಗುತ್ತವೆ. ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಮಧ್ಯದಲ್ಲಿ ಈ ಜಾತ್ರಾ ಮಹೋತ್ಸವ ಜರುಗುತ್ತದೆ. ರಾಜರಾಜೇಶ್ವರಿ ಅಮ್ಮ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ಜಾತ್ರೋತ್ಸವ ಜರಗುತ್ತದೆ. 12 ವರ್ಷಗಳಗೊಮ್ಮೆ ನಡೆಯುವ ಲೇಪಾಷ್ಟ ಗಂಧ ಬ್ರಹ್ಮ ಕಲಶಾಭಿಷೇಕ ವಿಶೇಷವಾಗಿದೆ. ನೀವು ಜೀವನದಲ್ಲಿ ಒಮ್ಮೆಯಾದರೂ ಈ ಕ್ಷೇತ್ರಕ್ಕೆ ಭೇಟಿ ನೀಡಿ ತಾಯಿ ರಾಜರಾಜೇಶ್ವರಿಯ ಕೃಪಾಕಟಾಕ್ಷಕ್ಕೆ ಒಳಗಾಗಿ.

ಸ್ವಂತ ಮನೆ ಕಟ್ಟುವ ಆಸೆ ಇರುವವರು ಭೂ ವರಹಾ ಸ್ವಾಮಿಯ ಈ ಮಂತ್ರವನ್ನು ಕೇವಲ 21 ಬಾರಿ ಪಠಿಸಿ ನಂತರ ಆಗುವ ಚಮತ್ಕಾರ ನೋಡಿ.

ಪ್ರತಿಯೊಬ್ಬರಿಗೂ ಕೂಡ ಮನೆ ಕಟ್ಟಬೇಕು ಎನ್ನುವ ಆಸೆ ಇರುತ್ತದೆ. ಮನೆ ಎನ್ನುವುದು ಜೀವಮಾನದ ಕನಸು. ಯಾಕೆಂದರೆ ಸ್ವಂತ ಮನೆಯಲ್ಲಿ ಇರುವಷ್ಟು ನೆಮ್ಮದಿ ನಿರಾಳ ಮನೋಭಾವ ಬೇರೆ ಎಲ್ಲೃ ಸಿಗುವುದಿಲ್ಲ. ಹುಟ್ಟಿದಾಗಲಿಂದ ಇನ್ನೊಬ್ಬರ ಮನೆಯಲ್ಲಿ ಅಥವಾ ಬಾಡಿಗೆ ಮನೆಯಲ್ಲಿ ಇದ್ದವರಿಗೆ ಆ ನೋವು ಗೊತಿರುತ್ತದೆ. ಹಾಗಾಗಿ ಅದು ಪುಟ್ಟ ಗೂಡು ಆಗಿದ್ದರೂ ಪರವಾಗಿಲ್ಲ ಆದರೆ ಅದು ಸ್ವತಂತ್ರವಾದ ಅರಮನೆಯಂತೆ ಇರುತ್ತದೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ.

ಈ ಕಾರಣಕ್ಕಾಗಿ ಬಹಳ ಚಿಕ್ಕ ವಯಸ್ಸಿನಿಂದಲೇ ಆನೇಕರು ಹಣ ಕೂಡಿಡುತ್ತಾರೆ. ಸಾಲ ಮಾಡಿ ಆದರೂ ಪರವಾಗಿಲ್ಲ ಬ್ಯಾಂಕ್ ಲೋನ್ ಆದರೂ ತೆಗೆದುಕೊಂಡು ಮನೆ ಕಟ್ಟಿಯೇ ತಿರಬೇಕು ಎಂದು ಹಠ ತೊಡುತ್ತಾರೆ. ಈ ರೀತಿ ನೀವು ಬಹಳ ಶ್ರಮ ಹಾಕುತ್ತಿದ್ದರೂ ಸ್ವಂತ ಮನೆ ಕನಸು ನನಸಾಗುತ್ತಿಲ್ಲ ಎಂದರೆ ಈ ರೀತಿ ಮಾಡಿ. ಮನೆ ಮಾತ್ರ ಅಲ್ಲದೆ ಮನೆ ಕಟ್ಟಿಸಲು ಸೈಟ್ ಕೊಳ್ಳುವ ಯೋಜನೆ ಇದ್ದರೆ ಅಥವಾ ಯಾವುದೇ ಒಂದು ಭೂಮಿಯನ್ನು ಆಸ್ತಿಯನ್ನು ಖರೀದಿ ಮಾಡುವ ಆಸೆ ನಿಮಗಿದ್ದರೆ.

ನೀವು ಎಷ್ಟೇ ಶ್ರಮವನ್ನು ಹಾಕಿದರೂ ಪ್ರಯತ್ನಪಟ್ಟರು ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಅಥವಾ ನಿಮ್ಮ ಕೈಲಿ ಅದು ಆಗೋದೇ ಇಲ್ಲವೇನೋ ಎನ್ನುವಷ್ಟು ನೋವಾಗುತ್ತಿದ್ದರೆ ನೀವು ಭಗವಂತನ ಮೊರೆ ಹೋಗುವುದೇ ಒಳ್ಳೆಯದು. ಎಲ್ಲದಕ್ಕೂ ಕೂಡ ಭಗವಂತನ ಆಶೀರ್ವಾದ ಇದ್ದರೆ ಮಾತ್ರ ಕಾರ್ಯಸಿದ್ಧಿ ಆಗುವುದು. ನೀವು ನಿಮ್ಮ ಕೋರಿಕೆಯನ್ನು ನಿಷ್ಕಲ್ಮಶ ಮನಸ್ಸಿನಿಂದ ದೇವರ ಹತ್ತಿರ ಹೇಳಿಕೊಂಡು ಬಿಟ್ಟರೆ ಅದರಲ್ಲೂ ಈ ರೀತಿ ಆಸ್ತಿಗೆ ಸಂಬಂಧಪಟ್ಟ ಹಾಗೆ ಅಥವಾ ಮನೆ ಮತ್ತು ಭೂಮಿಗೆ ಸಂಬಂಧಪಟ್ಟ ಹಾಗೆ ಸಮಸ್ಯೆಗಳು ಇದ್ದರೆ ಅಥವಾ ಕನಸುಗಳು ಇದ್ದರೆ ಶ್ರೀ ಲಕ್ಷ್ಮಿ ಸಮೇತ ಭೂವರಹ ಸ್ವಾಮಿಯನ್ನು ಪ್ರಾರ್ಥಿಸಿದರೆ ಬೇಗ ನೆರವೇರುತ್ತದೆ.

ವಿಷ್ಣುವಿನ ಅವತಾರಗಳಲ್ಲಿ ಒಂದಾದ ಭೂವರಹ ಸ್ವಾಮಿಗೆ ನಿಮ್ಮ ಕೋರಿಕೆ ತಲುಪಿದರೆ ಶೀಘ್ರದಲ್ಲೇ ಅವರು ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿ ನಿಮ್ಮ ಕನಸು ನನಸಾಗುವಂತೆ ಮಾಡುತ್ತಾರೆ. ಅವರ ಆಶೀರ್ವಾದದಿಂದ ನೀವು ಬೇಗ ಮನೆ ಕಟ್ಟಿಕೊಳ್ಳಬಹುದು. ಆದರೆ ವರಾಹ ಸ್ವಾಮಿಗೆ ನಿಮ್ಮ ಕೋರಿಕೆಗಳು ಕೇಳಬೇಕು ಎಂದರೆ ನಿಮ್ಮ ಪೂಜೆ ಇಷ್ಟ ಆಗಬೇಕು ಎಂದರೆ ಅವರು ನಿಮಗೆ ಆಶೀರ್ವಾದ ಮಾಡಬೇಕು ಎಂದರೆ ಅದಕ್ಕೆ ಒಂದು ವಿಧಾನ ಇದೆ.

ಹಾಗೆ ಒಂದು ಮಂತ್ರ ಕೂಡ ಇದೆ ಈ ಮಂತ್ರಶಕ್ತಿಯಿಂದ ನೀವು ವರಾಹ ಸ್ವಾಮಿಯ ಆಶೀರ್ವಾದ ಪಡೆಯಬಹುದು. ಪ್ರತಿದಿನ ಮುಂಜಾನೆ ಅಥವಾ ಸಂಜೆ ಸಮಯ ನಿಮಗೆ ಅನುಕೂಲವಾದ ಸಮಯದಲ್ಲಿ ದಿನಕ್ಕೆ 21 ಬಾರಿ ಅಥವಾ 108 ಬಾರಿ ಈ ಮಂತ್ರವನ್ನು ಜಪ ಮಾಡುವುದರಿಂದ ವರಾಹ ಸ್ವಾಮಿ ಆಶೀರ್ವಾದ ನಿಮಗೆ ದೊರೆತು ನಿಮ್ಮ ಕಾರ್ಯ ಸಿದ್ಧಿಯಾಗುತ್ತದೆ.

ಓಂ ನಮೋ ಭಗವತೆ ವರಾಹ ರೂಪಯೇ ಭೂರ್ಭುವಃಸ್ವಃ । ಭೂ ಪತಯೇ ಭೂಪತಿತ್ವಃ ಮೇ ದೇಹಿ ದಾಪಯ ಸ್ವಾಹ॥ ಈ ಮಂತ್ರವನ್ನು ಹೇಳಬೇಕು ಮನಸ್ಸಿನಲ್ಲಿ ಬರಹ ಸ್ವಾಮಿಯನ್ನು ಭಕ್ತಿಯಿಂದ ನೆನೆಯುತ್ತಾ ಧ್ಯಾನಿಸುತ್ತಾ ನಿಮ್ಮ ಕೋರಿಕೆಯನ್ನು ಹೇಳಿಕೊಳ್ಳುತ್ತಾ ತಪ್ಪದೇ ಪ್ರತಿದಿನ ಇದನ್ನು ಪಾಲಿಸಿಕೊಂಡು ಬಂದರೆ ಶೀಘ್ರವಾಗಿ ನಿಮ್ಮ ಮನೆ ಕಟ್ಟುವ ಕನಸು ಹಾಗೂ ಆಸ್ತಿ ಖರೀದಿಯ ಕನಸು ನನಸಾಗುತ್ತದೆ. ಉಪಯುಕ್ತ ವಿಷಯವನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ ಅವರ ಮನೆಯ ಕನಸು ಕೂಡ ನೆರವೇರಲಿ.

ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ. ಆಸಕ್ತರು ಅರ್ಜಿ ಸಲ್ಲಿಸಿ

ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಹುದ್ದೆ ಮಾಡಬೇಕು ಎಂದು ಆಸಕ್ತಿ ಹೊಂದಿರುವ ಆಕಾಂಕ್ಷಿಗಳಿಗೆ ಜೊತೆಗೆ ದೇಶದ ಎಲ್ಲಾ ನಿರುದ್ಯೋಗಿಗಳಿಗೂ ಕೂಡ ಇದೊಂದು ಸಿಹಿ ಸುದ್ದಿ. ಯಾಕೆಂದರೆ ಪೋಲಿಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ ನಡೆಯುತ್ತಿದೆ. 914 ಹೆಡ್ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳುವ ಬಗ್ಗೆ ಅಧಿಸೂಚನೆ ಕೂಡ ಬಿಡುಗಡೆ ಆಗಿದೆ.

ಹುದ್ದೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಬಹುತೇಕ ಆಕಾಂಕ್ಷಿಗಳಿಗೆ ಹುದ್ದೆ ಸಿಗುವ ಸಾಧ್ಯತೆ ಇದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಿ, ಪರೀಕ್ಷೆಗಳನ್ನು ಎದುರಿಸಿ ಉದ್ಯೋಗ ಪಡೆಯಬಹುದು. ಈ ಅಂಕಣದಲ್ಲಿ ಆಕಾಂಕ್ಷಿಗಳಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಉದ್ಯೋಗದ ಕುರಿತಂತೆ ತಿಳಿಸಿರುವ ಪ್ರಮುಖ ಅಂಶಗಳನ್ನು ತಿಳಿಸಿ ಕೊಡುತ್ತಿದ್ದೇವೆ.

ಸಂಸ್ಥೆಯ ಹೆಸರು:- ಸಶಸ್ತ್ರ ಸೀಮಾ ಬಾಲ್ SSB.
ಹುದ್ದೆಗಳ ಸಂಖ್ಯೆ:- 914
ಉದ್ಯೋಗ ಸ್ಥಳ:- ಭಾರತದಾತ್ಯಂತ
ಹುದ್ದೆ:- ಹೆಡ್ ಕಾನ್ಸ್ಟೇಬಲ್
ವೇತನ ಶ್ರೇಣಿ:- 25,500 ರಿಂದ 81,000 ಮಾಸಿಕವಾಗಿ…

ಶೈಕ್ಷಣಿಕ ವಿದ್ಯಾರ್ಹತೆ:-
ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, 12ನೇ ತರಗತಿ ಅಥವಾ ಐಟಿಐ ಉತ್ತಿರ್ಣರಾಗಿರಬೇಕು.
ವಯಸ್ಸಿನ ಮಿತಿ:-
● ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಸರಿಯಾಗಿ 18 ವರ್ಷ ಪೂರೈಸಿರಬೇಕು.
● ಗರಿಷ್ಠ 27 ವರ್ಷಗಳನ್ನು ಮೀರಿದಬಾರದು.

ವಯೋಮಿತಿ ಸಡಿಲಿಕೆ:-
● OBC ಅಭ್ಯರ್ಥಿಗಳಿಗೆ 3 ವರ್ಷಗಳು.
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು.
ಅರ್ಜಿ ಶುಲ್ಕ:-
● UR, EWS, OBC ಅಭ್ಯರ್ಥಿಗಳಿಗೆ 100ರೂ.
● SC/ST, ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕಗಳಿರುವುದಿಲ್ಲ.

ಆಯ್ಕೆ ವಿಧಾನ:-
● ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಒಂದು ನಿಗದಿತ ದಿನಾಂಕದಂದು ದೈಹಿಕ ದಕ್ಷತೆ ಪರೀಕ್ಷೆ ನಡೆಸಲಾಗುತ್ತದೆ.
● ಇದರಲ್ಲಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
● ನಂತರ ಸಂದರ್ಶನ ನಡೆಸಲಾಗುತ್ತದೆ.
● ಅಂತಿಮವಾಗಿ ದಾಖಲಾತಿಗಳ ಪರಿಶೀಲನೆ ಮೂಲಕ ಫೈನಲ್ ಲಿಸ್ಟ್ ತಯಾರಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:-
● ಅರ್ಜಿ ಸಲ್ಲಿಸಲು ಇಚ್ಛೆ ಇರುವ ಅಭ್ಯರ್ಥಿಗಳು ಮೊದಲು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಓದಿ ಅರ್ಥೈಸಿಕೊಳ್ಳಬೇಕು, ಅರ್ಹತೆ ಇದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
● ಅರ್ಜಿ ಸಲ್ಲಿಸಲು SSB ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡುವ ಮೂಲ ಅರ್ಜಿ ಫಾರಂ ಅನ್ನು ಸವಿವರಗಳೊಂದಿಗೆ ಭರ್ತಿ ಮಾಡಬೇಕು.
● ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಾನದ ಕುರಿತಂತೆ ಕೇಳಲಾದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಅರ್ಜಿ ಶುಲ್ಕ ಪಾವತಿ ಮಾಡಿ ರಶೀದಿ ಸ್ವೀಕರಿಸಬೇಕು.
● ಅರ್ಜಿ ಸಲ್ಲಿಕೆ ಪೂರ್ತಿ ಆದ ಬಳಿಕ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಬೇಕು. ಅರ್ಜಿ ಸಂಖ್ಯೆ, ವಿನಂತಿ ಸಂಖ್ಯೆ ಮುಂತಾದವುಗಳನ್ನು ಬರೆದಿಟ್ಟುಕೊಳ್ಳಬೇಕು.

ಕೇಳಲಾಗುವ ದಾಖಲೆಗಳು:-
● ಇತ್ತೀಚಿನ ಭಾವಚಿತ್ರ ಮತ್ತು ಸಹಿ
● ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
● ಆಧಾರ್ ಕಾರ್ಡ್
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಇನ್ನಿತ್ಯಾದಿ ಪ್ರಮುಖ ದಾಖಲೆಗಳು

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ:- 09.05.2023.
● ಅರ್ಜಿ ಸಲ್ಲಿಸಲು ಕೊನೆ ದಿನಾಂಕ:- 07.06.2023.

SSLC ಆಯ್ತು ಮುಂದೇನು? ಯಾವ ಕೋರ್ಸ್ ಬೆಸ್ಟ್.? ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ಇಲ್ಲಿದೆ ಕೆಲವು ಸಲಹೆ

SSLCವರೆಗೂ ವಿದ್ಯಾರ್ಥಿ ಜೀವನ ಒಂದು ರೀತಿಯಾಗಿ ಇರುತ್ತದೆ. ನಂತರದ ಶೈಕ್ಷಣಿಕ ಶಿಕ್ಷಣವೇ ಬೇರೆ ರೀತಿ ಇರುತ್ತದೆ. ಯಾಕೆಂದರೆ SSLC ತನಕ ಹೆಚ್ಚಿನ ಬದಲಾವಣೆ ವಿದ್ಯಾರ್ಥಿಗಳ ಜೀವನದಲ್ಲಿ ಇರುವುದಿಲ್ಲ. ಬಹುತೇಕ ಅಭ್ಯರ್ಥಿಗಳು ಶಾಲೆಗೆ ಸೇರಿದ ದಿನದಿಂದಲೂ ಕೂಡ 10 ವರ್ಷಗಳವರೆಗೆ ಒಂದೇ ಶಾಲೆಯಲ್ಲಿ ಓದಿರುತ್ತಾರೆ. ಅದೇ ಟೀಚರ್ ಗಳು, ಜೊತೆಗಿದ್ದ ಅದೇ ಸ್ನೇಹಿತರು, ಒಂದೇ ರೀತಿಯ ಸಿಲಬಸ್ಸು, ತಮ್ಮ ಊರುಗಳಲ್ಲಿ ಇರುವ ಶಾಲೆಗಳು ಈ ರೀತಿ ಸೌಲಭ್ಯಗಳಿಂದ ಇದ್ದ ಕಾರಣ SSLC ಪರೀಕ್ಷೆ ಆದಮೇಲೆ ಬಳಿಕ ಮುಂದಿನ ಶಿಕ್ಷಣದ ಬಗ್ಗೆ ನಿರ್ಧಾರ ಬಂದಾಗ ಒಂದು ಕ್ಷಣ ಗಾಬರಿಗೊಳ್ಳುತ್ತಾರೆ.

ಫಲಿತಾಂಶ ಬಂದ ದಿನದಿಂದಲೂ ಈ ಬಗ್ಗೆ ಚರ್ಚೆ ಶುರುವಾಗಿ ಬಿಡುತ್ತದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಾಲಾವಕಾಶ ಕಡಿಮೆ ಇದ್ದರಂತೂ ವಿದ್ಯಾರ್ಥಿಗಳ ಮೇಲೆ ಇದರ ಒತ್ತಡ ತುಸು ಹೆಚ್ಚೇ ಇರುತ್ತದೆ. ಈಗಷ್ಟೇ ರಾಜ್ಯದಲ್ಲಿ ಕರ್ನಾಟಕದ ಪ್ರೌಢ ಶಿಕ್ಷಣ ಮಂಡಳಿಯು 2022-23ನೇ ಸಾಲಿನಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ರಿಸಲ್ಟ್ ಅನೌನ್ಸ್ ಮಾಡಿದೆ. ಈಗ ರಾಜ್ಯದಲ್ಲಿ SSLC ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮುಂದೆ ಏನು ಎನ್ನುವ ಕನ್ಫ್ಯೂಷನ್ ಶುರು ಆಗಿದೆ.

ಹಲವರು ಅಂಕಗಳ ಆಧಾರದ ಮೇಲೆ ಮನೆಯಲ್ಲಿ ಹಿರಿಯರು ಏನು ಹೇಳಿದ್ದಾರೆ ಅದನ್ನು ಕೇಳಿ ಸೇರಿಕೊಂಡರೆ ಇನ್ನೂ ಕೆಲವರು ತಮಗಿರುವ ಅನುಕೂಲತೆ ಆಧಾರದ ಮೇಲೆ ಅಥವಾ ಆಸಕ್ತಿಗಳ ಅನುಸಾರವಾಗಿ ಬೇರೆ ವಿಭಾಗಕ್ಕೆ ಹೋಗುತ್ತಾರೆ. ಇನ್ನು ಕೆಲವರಿಗೆ ಏನೇನು ಆಯ್ಕೆಗಳಿವೆ ಎನ್ನುವುದೇ ಗೊತ್ತಿರುವುದಿಲ್ಲ. ಹತ್ತಿರದ ಕಾಲೇಜು ಅಥವಾ ಊರು ತನ್ನೂರಿನಲ್ಲೇ ಇರುವ ಯಾವುದೋ ಕೋರ್ಸ್ಗೆ ಸೇರಿಕೊಂಡು ಮುಂದೊಂದು ದಿನ ಸಮಯ ಹಾಗೂ ಭವಿಷ್ಯ ಎರಡು ಹಾಳಾಯಿತು ಎಂದು ವ್ಯಥೆ ಪಡುತ್ತಾರೆ.

ಹಾಗೆ ಈ ಅಂಕಣದಲ್ಲಿ SSLC ನಂತರ ವಿದ್ಯಾರ್ಥಿಗಳು ಯಾವೆಲ್ಲ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು, ಯಾವ ಕೋರ್ಸ್ ಆಯ್ದುಕೊಂಡರೆ ಯಾವ ಸಬ್ಜೆಕ್ಟ್ ಇರುತ್ತದೆ ಆದ್ದರಿಂದ ಭವಿಷ್ಯದಲ್ಲಿ ಏನೆಲ್ಲಾ ಉಪಯೋಗ ಬರುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಇದೆ. SSLC ಆದ ಬಳಿಕ ವಿದ್ಯಾರ್ಥಿಗಳು ಓದುವ ಸಬ್ಜೆಕ್ಟ್ ಮೇರೆಗೆ ಮುಂದಿನ ಪದವಿ ಅಥವಾ ಸ್ನಾತಕೋತ್ತರ ಪದವಿ ಶಿಕ್ಷಣಗಳು ನಿರ್ಧಾರ ಆಗುತ್ತದೆ ಮತ್ತು ಅವರು ಆಯ್ದುಕೊಳ್ಳುವ ಆಯ್ಕೆಗಳ ಮೇರೆಗೆ ಅವರ ಉದ್ಯೋಗ ಭವಿಷ್ಯವೂ ಕೂಡ ನಿರ್ಧಾರವಾಗುತ್ತದೆ.

ಹಾಗಾಗಿ ಇದು ತಮಾಷೆಯ ವಿಚಾರವೂ ಅಲ್ಲ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುತ್ತಿರುವ ಅಡಿಗಲ್ಲುಗಳು ಎಂದೇ ಹೇಳಬಹುದು. ಆದರೆ SSLC ವರೆಗೂ ಒಂದೇ ರೀತಿ ಇದ್ದ ಶಿಕ್ಷಣ ಪದ್ಧತಿ ನಂತರ ಕವಲೊಡೆದು ಹಲವು ದಾರಿಗಳನ್ನು ತೋರಿಸುತ್ತದೆ. ಪಿಯುಸಿ ಆರಿಸಿಕೊಂಡರೆ ಅದರಲ್ಲೂ ಆರ್ಟ್ಸ್ ಕಾಮರ್ಸ್ ಸೈನ್ಸ್ ಎನ್ನುವ ವಿಭಾಗ ಇರುತ್ತದೆ. ಇದು ಬೇಡ ಎನ್ನುವವರಿಗೆ ಐಟಿಐ ಮತ್ತು ಡಿಪ್ಲೋಮೋ ಅಂತಹ ತಾಂತ್ರಿಕೇತರ ಅವಕಾಶಗಳು ಇರುತ್ತವೆ.

ಇನ್ನು ಮೆಡಿಕಲ್ ಕ್ಷೇತ್ರ ಆರಿಸಿಕೊಳ್ಳುವವರಿಗೆ ಸೀದಾ ಪಾರಮೆಡಿಕಲ್ ಕೋರ್ಸ್ಗೆ ಜಾಯಿನ್ ಆಗಬಹುದು. NTTF ಅವಕಾಶಗಳು ಇರುತ್ತದೆ. ಹೀಗಾಗಿ ಇವುಗಳಲ್ಲಿ ಯಾವುದು ಬೆಸ್ಟ್ ಎಂದು ಕನ್ಫ್ಯೂಷನ್ ಶುರು ಆಗುತ್ತದೆ. ನೀವು ಕೂಡ ಈ ವರ್ಷ ಪರೀಕ್ಷೆಗಳಾಗಿದ್ದು ಇವುಗಳಲ್ಲಿ ನಿಮಗೂ ಗೊಂದಲ ಇದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ನಂತರ ಒಂದು ಸರಿಯಾದ ನಿರ್ಧಾರವನ್ನು ಮಾಡಿ.

ಹುಟ್ಟಿದ ದಿನಾಂಕದ ಮೂಲಕವೇ ನಿಮ್ಮ ವಿವಾಹ ಯಾವಾಗ ಆಗುತ್ತದೆ ಎಂದು ತಿಳಿದುಕೊಳ್ಳಬಹುದು ಹೇಗೆ ಗೊತ್ತಾ.?

 

ಸಂಖ್ಯಾಶಾಸ್ತ್ರ ಎನ್ನುವುದು ನಾವು ಹುಟ್ಟಿದ ದಿನಾಂಕ ತಿಂಗಳು ವರ್ಷದ ಆಧಾರದ ಮೇಲೆ ನಮ್ಮ ಭವಿಷ್ಯವನ್ನು ತಿಳಿಸುವಂತಹ ಒಂದು ಶಾಸ್ತ್ರ. ಇದನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ನಂಬುತ್ತಾರೆ. ಯಾಕೆಂದರೆ, ಇತ್ತೀಚಿನ ದಿನಗಳಲ್ಲಿ ನಮ್ಮ ಎಲ್ಲಾ ವ್ಯಾಪಾರ, ವ್ಯವಹಾರ, ದಿನನಿತ್ಯದ ಚಟುವಟಿಕೆ ಎಲ್ಲವೂ ಕೂಡ ಸಂಖ್ಯೆಗಳನ್ನು ಹೆಚ್ಚು ಆಧರಿಸುವುದರಿಂದ ಈ ಸಂಖ್ಯಾಶಾಸ್ತ್ರದ ಪ್ರಭಾವ ನಮ್ಮ ಮೇಲೆ ಈ ದಿನಗಳಲ್ಲಿ ಹೆಚ್ಚಾಗಿದೆ.

ಆದ್ದರಿಂದ ಈ ಸಂಖ್ಯಾ ಶಾಸ್ತ್ರದ ಪ್ರಕಾರವಾಗಿ ನಡೆದುಕೊಂಡರೆ ನಮ್ಮ ಲಾಭ ನಷ್ಟವನ್ನು ನಾವೇ ಲೆಕ್ಕಾಚಾರ ಹಾಕಿ ಉನ್ನತಿ ಕಂಡುಕೊಳ್ಳಬಹುದು. ಎನ್ನುವುದು ಸಂಖ್ಯಾಶಾಸ್ತ್ರಜ್ಞರ ಅಭಿಪ್ರಾಯ. ಸಂಖ್ಯಾಶಾಸ್ತ್ರ ಮೂಲಕ ಇದುವರೆಗೆ ಭವಿಷ್ಯದ ಹಲವು ವಿಷಯಗಳ ಬಗ್ಗೆ ಹೇಳಲಾಗಿದೆ. ಇದೇ ಸಂಖ್ಯಾಶಾಸ್ತ್ರದ ಅನುಸಾರದಿಂದ ನಮ್ಮ ಮದುವೆ ಆಗುವ ವರ್ಷವನ್ನು ಕೂಡ ಕಂಡುಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವುದು ಒಂದು ದೊಡ್ಡ ಜವಾಬ್ದಾರಿ ಆಗಿದೆ. ಹಾಗೆ ಮದುವೆ ಕಾರ್ಯ ಶುರು ಮಾಡಿದ ಕಡಿಮೆ ಅವಧಿಗೆ ಮದುವೆ ಆಗುವುದಂತೂ ಅಸಾಧ್ಯದ ಮಾತು. ಮದುವೆ ಆಗಲು ತಯಾರಾದ ವರ್ಷದಿಂದ ಐದು, ಹತ್ತು ವರ್ಷ ಕಳೆದ ಮೇಲೆ ಮದುವೆ ಆಗಿರುವ ಉದಾಹರಣೆಗಳು ಇವೆ ಹಾಗಾಗಿ ಯಾವ ವರ್ಷದಲ್ಲಿ ನಮ್ಮ ಮದುವೆ ನಡೆಯುತ್ತದೆ ಎನ್ನುವುದು ಸರಿಯಾಗಿ ಗೊತ್ತಾಗಿ ಬಿಟ್ಟರೆ ನಾವು ಇನ್ನೂ ಹೆಚ್ಚಿನ ಪ್ರಯತ್ನವನ್ನು ಪಡೆಯಬಹುದು ಅಥವಾ ಆ ವರ್ಷದಲ್ಲಿಯೇ ಬರುವ ಸಂಬಂಧವನ್ನು ಒಪ್ಪಿಕೊಂಡು ನೆಮ್ಮದಿಯಾಗಿ ದಾಂಪತ್ಯ ಜೀವನ ಶುರು ಮಾಡಬಹುದು.

ಆದ್ದರಿಂದ ಇದನ್ನು ಸಂಖ್ಯಾಶಾಸ್ತ್ರ ಕಂಡುಹಿಡಿಯುವುದು ಹೇಗೆ ಎಂದು ತಿಳಿಸಲಾಗಿದೆ. ಈ ರೀತಿ ಕಂಕಣ ಭಾಗ್ಯ ಕೂಡಿ ಬರುವ ವರ್ಷವನ್ನು ಕಂಡುಹಿಡಿಯಲು ಈ ವಿಧಾನ ಬಳಸಿ. ಸಂಖ್ಯಾಶಾಸ್ತ್ರದಲ್ಲಿ ಒರಿಜಿನಲ್ ನಂಬರ್ ಎಂದು ಹುಟ್ಟಿದ ದಿನಾಂಕವನ್ನು ಕರೆಯುತ್ತಾರೆ ಮತ್ತು ಪರ್ಸನಲ್ ಇಯರ್ ಎಂದು ಹುಟ್ಟಿದ ವರ್ಷವನ್ನು ಕರೆಯುತ್ತಾರೆ. ಆದರೆ ಸಂಖ್ಯಾಶಾಸ್ತ್ರದಲ್ಲಿ ಎಲ್ಲಾ ಲೆಕ್ಕಚಾರವು ಸಿಂಗಲ್ ಡಿಜಿಟ್ ಅಲ್ಲಿ ಇರುವುದರಿಂದ ಯಾವುದೇ ಸಂಖ್ಯೆ ಆದರೂ ಅದನ್ನು ಸಿಂಗಲ್ ಡಿಜಿಟ್ ಮಾಡಿಕೊಳ್ಳಬೇಕು.

ಉದಾಹರಣೆಗೆ 14 ಎಂದು ಇದ್ದರೆ 1+4=5 ಇದನ್ನು ಐದು ಎಂದುಕೊಳ್ಳಬೇಕು, ಹಾಗೆ ವರ್ಷದ ಲೆಕ್ಕಾಚಾರ ಬಂದಾಗ 1992 ಇದ್ದರೆ ಇದನ್ನು 1+9+9+2=3 ಎಂದುಕೊಳ್ಳಬೇಕು. ಇದೇ ರೀತಿಯಾಗಿ ಒರಿಜಿನಲ್ ನಂಬರ್ ಮತ್ತು ಪರ್ಸನಲ್ ಇಯರ್ ಕಂಡುಹಿಡಿದು ನಿಮ್ಮ ಮದುವೆ ವರ್ಷವನ್ನು ತಿಳಿದುಕೊಳ್ಳಬಹುದು.
ನಿಮ್ಮ ಹುಟ್ಟಿದ ದಿನಾಂಕ 14.02.1992 ಇದ್ದರೆ 2023ರಲ್ಲಿ ಮದುವೆ ಆಗುತ್ತದೆಯಾ ಎಂದು ಯೋಚಿಸುತ್ತಿದ್ದರೆ ಅದನ್ನು ಹೀಗೆ ಲೆಕ್ಕ ಹಾಕಿ.

ನಿಮ್ಮ ಹುಟ್ಟಿದ ವರ್ಷ ತೆಗೆದು ಈ ವರ್ಷವನ್ನು ಹಾಕಿ ಮತ್ತು ಎಲ್ಲವನ್ನು ಕೂಡಿಸಿ 1+4+2+2+0+2+3=5 ಈಗ ನಿಮ್ಮ ಒರಿಜಿನಲ್ ನಂಬರ್ 5 ಹಾಗೂ ಪರ್ಸನಲ್ ಇಯರ್ ಕೂಡ 5 ಬಂತು. ಈ ರೀತಿ ಕಾಂಬಿನೇಷನ್ ಇದ್ದಾಗ ಆ ವರ್ಷ ಮದುವೆ ಆಗುತ್ತದೆಯಾ ಎಂದು ತಿಳಿದುಕೊಳ್ಳಲು ಒಂದು ಚಾರ್ಟ್ ಇದೆ. ಇದರಲ್ಲಿ ವರ್ಷಗಳ ಸಂಖ್ಯೆಯನ್ನು ಒರಿಜಿನಲ್ ಸಂಖ್ಯೆ ಜೊತೆ ಜೋಡಿಸಲಾಗಿದೆ. ಇದರಲ್ಲಿ ಚೆಕ್ ಮಾಡಿಕೊಳ್ಳಿ ನಿಮ್ಮ ಒರಿಜಿನಲ್ ನಂಬರ್ ಪರ್ಸನಲ್ ಜೊತೆ ಮ್ಯಾಚ್ ಆದರೆ ಆ ವರ್ಷವೇ ನಿಮಗೆ ಮದುವೆ ಆಗುತ್ತದೆ.

ಒರಿಜಿನಲ್ ನಂಬರ್. ಪರ್ಸನಲ್ ಇಯರ್.
1 – 1,4,5,7,9

2 – 1,2,5,6,8

3 – 3,6,7,9

4 – 1,2,4,7,8

5 – 2,3,5,7,9

6 – 1,2,3,5,6,8

7 – 1,2,4,8

8 – 1,2,4,6,8

9 – 1,2,3,6,7

ಪರ್ಸ್ ಅಥವಾ ಬ್ಯಾಗ್ ನಲ್ಲಿ ಈ ವಸ್ತು ಇಡುವುದರಿಂದ ದುಡ್ಡಿನ ಸಮಸ್ಯೆ ದೂರ ಆಗಿ ಸಂಪಾದನೆ ಹೆಚ್ಚಾಗುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ.

 

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಬ್ಯಾಂಕಿಂಗ್, ಡಿಜಿಟಲ್ ವ್ಯವಹಾರ ಇವೆಲ್ಲ ರೂಢಿ ಆಗಿರುವುದರಿಂದ ಪರ್ಸ್, ಬ್ಯಾಗಗಳಲ್ಲಿ ದುಡ್ಡು ಇಟ್ಟುಕೊಳ್ಳುವ ಅಭ್ಯಾಸವೇ ರೂಢಿ ತಪ್ಪಿ ಹೋಗಿದೆ. ಆದರೂ ಕೂಡ ಆಪತ್ಕಾಲಕ್ಕೆ ಎಂದುಕೊಂಡಾದರೂ ಅಥವಾ ಲಕ್ಷ್ಮಿ ತಾಯಿಯ ಅನುಗ್ರಹ ಆಗಲಿ ಎನ್ನುವ ಕಾರಣಕ್ಕಾಗಾದರೂ ಪರ್ಸಲ್ಲಿ ಹಣ ಇಟ್ಟುಕೊಂಡಿರಲೇಬೇಕು.

ಈ ರೀತಿ ಪರ್ಸನಲ್ ಹಣ ಇಟ್ಟುಕೊಳ್ಳುವ ವಿಧಾನದಿಂದ ಕೂಡ ಲಕ್ಷ್ಮಿ ದೇವಿ ಅನುಗ್ರಹ ಪಡೆದು ಹಣ ಹೆಚ್ಚಾಗುವಂತೆ ಮಾಡಬಹುದು. ಪರ್ಸ್ ಗಳು ಮತ್ತು ಹ್ಯಾಂಡ್ ಬ್ಯಾಗ್ಗಳಲ್ಲೂ ಕೂಡ ಹಣ ಇಡುವುದರಿಂದ ಅದು ಸಹ ತಾಯಿಯ ವಾಸಸ್ಥಾನಕ್ಕೆ ಸಮ. ಅಲ್ಲಿ ಇಷ್ಟ ಬಂದದ್ದನ್ನೆಲ್ಲಾ ಇಡುವ ಹಾಗಿಲ್ಲ ,ಕೆಲವು ವಸ್ತುಗಳಿಗೆ ಅಷ್ಟೇ ಅಲ್ಲಿ ಜಾಗ ಇರಬೇಕು. ಆ ರೀತಿ ಪಾಲಿಸಿದರೆ ಶೀಘ್ರವಾಗಿ ತಾಯಿ ಆಶೀರ್ವಾದ ದೊರೆತು ಇನ್ನು ಹೆಚ್ಚಿನ ಹಣ ಆಕರ್ಷಣೆ ಉಂಟಾಗುತ್ತದೆ.

ಪರ್ಸಿನಲ್ಲಿ ಕೆಲವರು ಸಿಕ್ಕಸಿಕ್ಕ ವಸ್ತುಗಳನೆಲ್ಲ ಹಾಕಿಕೊಳ್ಳುತ್ತಾರೆ. ಹಣ, ಕೀಗಳು, ಚೀಟಿಗಳು ಇನ್ನಿತರ ಯಾವುದೋ ಬಳಕೆ ಆಗದ ವಸ್ತುಗಳು, ಬೇಕಾಗಿರುವ ವಸ್ತುಗಳು ಎಲ್ಲವನ್ನು ಒಟ್ಟಿಗೆ ಹಾಕಿ ಒಂದನ್ನು ತೆಗೆದುಕೊಳ್ಳಲು ಹೋಗಿ ಮತ್ತೊಂದನ್ನು ಕೆಳಗೆ ಬೀಳಿಸುತ್ತಿರುತ್ತಾರೆ. ಇದೊಂದು ಅಸಂಬದ್ಧ ವಿಧಾನ, ಈ ರೀತಿ ಇದ್ದರೆ ಖಂಡಿತವಾಗಿಯೂ ಹಣದ ಆಕರ್ಷಣೆ ಮಾಡುವ ಶಕ್ತಿ ಆ ಪರ್ಸ್ ಗೆ ಇರುವುದಿಲ್ಲ.

ಪರ್ಸ್, ಬ್ಯಾಗ್ ಎಷ್ಟು ಅಚ್ಚುಕಟ್ಟಾಗಿ ಇರುತ್ತದೆಯೋ ಅಷ್ಟೇ ಶಕ್ತಿಯು ಆ ಪರ್ಸ್ಗೆ ಇರುತ್ತದೆ. ಹಾಗಾಗಿ ಎಲ್ಲಕ್ಕೂ ಒಂದು ಸಪರೇಟ್ ವ್ಯವಸ್ಥೆ ಮಾಡಿ ದಿನನಿತ್ಯಕ್ಕೆ ಬೇಕಾದ ವಸ್ತುಗಳನ್ನು ಒಂದು ಕಡೆ ಇಡಿ. ಬೇಡದ ವಸ್ತುಗಳನ್ನು ಯಾವುದನ್ನೂ ಸಹ ಪರ್ಸಲ್ಲಿ ಇಡಬೇಡಿ. ಜೊತೆಗೆ ಹಾಗಾಗಿ ನಿಮ್ಮ ಪರ್ಸ್ ಮತ್ತು ಹ್ಯಾಂಡ್ ಬ್ಯಾಗ್ ಗಳನ್ನು ಕ್ಲೀನ್ ಮಾಡುತ್ತಿರಿ ಮತ್ತು ಈ ವಸ್ತುಗಳನ್ನು ಇಡುವುದನ್ನು ಮರೆಯಬೇಡಿ.

ಯಾಕೆಂದರೆ ಈ ವಸ್ತುಗಳಿಗೆ ಧನಾಕರ್ಷಣೆ ಮಾಡುವ ಶಕ್ತಿ ಇರುತ್ತದೆ. ಹಿರಿಯರು ಉಡುಗೊರೆ ರೂಪದಲ್ಲಿ ಕೊಟ್ಟ ಹಣ ಪರ್ಸಲ್ಲಿ ಇಡಬೇಕು, ನಮ್ಮ ಹಿರಿಯರು ನಮಗೆ ಆಶೀರ್ವಾದ ಮಾಡಿ ಅವರ ಕೈಯಿಂದ ಆದಷ್ಟು ಪ್ರೀತಿಯಿಂದ ಹಣವನ್ನು ಕೊಟ್ಟಿರುತ್ತಾರೆ. ಅಂತಹ ಹಣವನ್ನು ಸಾಧ್ಯವಾದಷ್ಟು ಖರ್ಚು ಮಾಡದೆ ಇಟ್ಟುಕೊಳ್ಳಬೇಕು. ಒಂದು ರೂಪಾಯಿ ನಾಣ್ಯ ಅಥವಾ ಇಪ್ಪತ್ತು ರೂಪಾಯಿ ನೋಟುಗಳನ್ನು ಯಾವಾಗಲೂ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು, ಆದರೆ ಯಾವುದೇ ಕಾರಣಕ್ಕೂ ಇವುಗಳನ್ನು ಖರ್ಚು ಮಾಡಬಾರದು.

ಹಣದ ಒಡತಿ ಆದ ಲಕ್ಷ್ಮಿ ದೇವಿಯ ಫೋಟೋ ಕೂಡ ಚಿಕ್ಕದಾಗಿದ್ದರೂ ಪರವಾಗಿಲ್ಲ ಇಟ್ಟುಕೊಂಡಿರಬೇಕು, ಇದರಿಂದ ಲಕ್ಷ್ಮಿ ಆಶೀರ್ವಾದ ದೊರೆಯುತ್ತದೆ. ಬೆಳ್ಳಿ ನಾಣ್ಯವನ್ನು ಕೂಡ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು. ಆರು ಹಳದಿ ಬಣ್ಣದ ಕವಡೆಗಳನ್ನು ಕೂಡ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು ಮತ್ತು 21 ಅಕ್ಕಿ ಕಾಳುಗಳನ್ನು ತಾಯಿ ಲಕ್ಷ್ಮಿ ದೇವಿಗೆ ಅರ್ಪಿಸಿ ಅದನ್ನು ಒಂದು ಕಾಗದದಲ್ಲಿ ಅಥವಾ ಪೌಚ್ ಅಲ್ಲಿ ಹಾಕಿಕೊಂಡು ಅದನ್ನು ಸಹ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು.

ಇದರಿಂದ ಬಹಳ ಒಳ್ಳೆಯದಾಗುತ್ತದೆ. ಕಮಲದ ಹೂ ಲಕ್ಷ್ಮಿ ದೇವಿಗೆ ಇಷ್ಟವಾದ ಹೂ ಆಗಿರುವ ಕಾರಣ ಕಮಲದ ಬೀಜಗಳಿಗೂ ಕೂಡ ಹಣ ಆಕರ್ಷಣೆ ಮಾಡುವ ಶಕ್ತಿ ಇರುತ್ತದೆ ಇವುಗಳನ್ನು ಬೆಸ ಸಂಖ್ಯೆಯಲ್ಲಿ ಇಟ್ಟುಕೊಳ್ಳಬೇಕು. ಇದರ ಜೊತೆ ಒಂದು ಅರಳಿ ಮರದ ಎಲೆಯನ್ನು ಸ್ವಚ್ಛವಾಗಿ ತೊಳೆದು ಅದರಲ್ಲಿ ಕೇಸರಿ ಯಿಂದ ಶ್ರೀ ಎಂದು ಬರೆದು ಅದನ್ನು ಸಹ ಇಟ್ಟು ಕೊಳ್ಳಬೇಕು ಇದೆಲ್ಲವನ್ನು ಇಟ್ಟುಕೊಳ್ಳುವುದರಿಂದ ಖಂಡಿತವಾಗಿಯೂ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

ದೀರ್ಘಕಾಲದ ವರೆಗೆ ನಿಮಗೆ ಹಣದ ಹೊಳೆಯೇ ಹರಿದು ಬರುತ್ತದೆ. ಆದರೆ ಈ ಎಲ್ಲಾ ಆಚರಣೆ ಮಾಡಿದ ಬಳಿಕ ನೀವು ಅಷ್ಟೇ ಶ್ರಮದಿಂದ ನಿಮ್ಮ ಕೆಲಸ ಕಾರ್ಯಗಳನ್ನು ಕೂಡ ಮಾಡಬೇಕು, ಜೊತೆಗೆ ಸದಾ ನಗುನಗುತ್ತ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬಳಸಿಕೊಂಡು ಹಸನ್ಮುಖಿ ಆಗಿರಬೇಕು. ಸದಾ ಒಳ್ಳೆಯತನದ ಬಗ್ಗೆ ಯೋಚನೆ ಮಾಡುತ್ತಾ ಸಕರಾತ್ಮಕವಾಗಿ ಬದುಕಿದರೆ ಖಂಡಿತ ಧನಾಕರ್ಷಣೆ ಉಂಟಾಗುತ್ತದೆ.

ಮಹಿಳೆಯರು ತಾಳಿಯ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ. ಗಂಡನ ಆಯಸ್ಸು, ಶ್ರೇಯಸ್ಸು ಇದರಲ್ಲಿಯೇ ನಿರ್ಧಾರವಾಗುವುದು.!

ಮಾಂಗಲ್ಯ ಎಂಬುವುದು ಮುತ್ತೈದೆಯರಿಗೆ ಒಂದು ಸೌಭಾಗ್ಯ. ಮದುವೆ ಆಗಿರುವ ಸುಮಂಗಲಿಗೆ ಮಾತ್ರ ಅದನ್ನು ಧರಿಸಲು ಸಾಧ್ಯ. ಮಾಂಗಲ್ಯ ಎನ್ನುವುದು ಒಂದು ಬಂಗಾರದ ಒಡವೆ ಮಾತ್ರ ಆಗಿರದೆ ಆಕೆಯ ಸುಖ ಸೌಭಾಗ್ಯ ಎಲ್ಲವೂ ಆಗಿರುತ್ತದೆ. ಮುತ್ತೈದೆತನ ಎನ್ನುವುದು ಹೆಣ್ಣಿನ ಜೀವನದ ಅತಿದೊಡ್ಡ ಸಂಪತ್ತು ಮದುವೆ ಆದ ಪ್ರತಿಹೆಣ್ಣು ಕೂಡ ತನಗೆ ಶಾಶ್ವತವಾಗಿ ತಾಳಿಭಾಗ್ಯ ಸಿಗಲಿ ಎಂದು ದೇವರಲ್ಲಿ ಕೇಳುತ್ತಾಳೆ.

ಮದುವೆಯಾದ ಹೆಣ್ಣು ಮಕ್ಕಳು ಯಾವ ಒಡವೆಯನ್ನು ಧರಿಸದೆ ಇದ್ದರೂ ಕೂಡ ಅವರ ಕೊರಳಿನಲ್ಲಿರುವ ಮಾಂಗಲ್ಯವೇ ಅವರಿಗೆ ಶ್ರೀರಕ್ಷೆಯಾಗಿ ಕಾವಲಿರುತ್ತದೆ. ಆದ್ದರಿಂದಲೇ ಆಕೆಗೆ ಅಷ್ಟೊಂದು ಗೌರವ ಸ್ಥಾನಮಾನ ಸಿಗುವುದು. ತಾಳಿ ಕೊರಳಿನಲ್ಲಿದ್ದರೆ ಆಕೆ ಯಾವ ಕಾರ್ಯವನ್ನು ಕೂಡ ಜಯಿಸಬಳ್ಳಲು. ಇದರ ಅರ್ಥ ಆಕೆ ಒಬ್ಬಳೇ ಅಲ್ಲ ಮಾಂಗಲ್ಯ ರೂಪದಲ್ಲಿ ಆತನ ಗಂಡನೂ ಜೊತೆಗಿರುತ್ತಾನೆ ಎಂದು.

ಮದುವೆ ಕಾರ್ಯದ ಭಾಗವಾಗಿ ಶಾಸ್ತ್ರಗಳಲ್ಲಿ ಮಾಂಗಲ್ಯ ಧಾರಣೆ ಕೂಡ ಒಂದು. ಪುರೋಹಿತರು ಅರಿಶಿನ ದಾರದಲ್ಲಿ ತಾಳಿಬಟ್ಟುಗಳನ್ನು ಗಂಟು ಹಾಕಿ ಅದರ ಜೊತೆ ಕರಿಮಣಿ ಹಾಗೂ ಹವಳಗಳನ್ನು ಹಾಕಿ ವರನ ಕೈಗೆ ಕೊಟ್ಟು ವಧುವಿನ ಕೊರಳಿಗೆ ಮೂರು ಗಂಟು ಹಾಕುವಂತೆ ಹೇಳುತ್ತಾರೆ. ಆ ಮೂರು ಗಂಟುಗಳು ಮುಕ್ಕೋಟಿ ದೇವರುಗಳ ಸಾಕ್ಷಿಯಾಗಿ ಅವರ ಆಶೀರ್ವಾದದೊಂದಿಗೆ ಹೆಣ್ಣಿಗೆ ಸಿಗುವ ಉಡುಗೊರೆ ಆಗಿದೆ.

ಇನ್ನು ಮುಂದೆ ಅವರಿಬ್ಬರು ಮಾಂಗಲ್ಯ ಸಾಕ್ಷಿಯಾಗಿ ಒಬ್ಬರಿಗೊಬ್ಬರು ಜೊತೆಯಾಗಿ ಬದುಕುವುದಕ್ಕಾಗಿ ಮಾಡಿಕೊಳ್ಳುವ ಒಪ್ಪಂದದ ಸಂಕೇತ ಈ ಮಾಂಗಲ್ಯ ಧಾರಣೆ. ಇದನ್ನು ನಂಬಿ ಆಚರಣೆ ಮಾಡಿಕೊಂಡು ಬರುತ್ತಿರುವ ಸಂಸ್ಕೃತಿ ಭಾರತ ದೇಶದದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಲೋಕವು ಇದನ್ನು ಹದಗೆಡಿಸುತ್ತಿದೆ. ತಾಳಿಗಿರುವ ಮಹತ್ವವನ್ನು ಮರೆತು ಅದನ್ನು ಸಹ ಒಂದು ಅಲಂಕಾರಿಕ ವಸ್ತುವನ್ನಾಗಿ ಮಾಡಿಕೊಂಡುಬಿಟ್ಟಿದ್ದಾರೆ.

ನೀವೇನಾದರೂ ತಪ್ಪಾದ ರೀತಿಯಲ್ಲಿ ಮಾಂಗಲ್ಯ ಧಾರಣೆ ಮಾಡಿದರೆ ಅಥವಾ ಅದನ್ನು ಧರಿಸುವುದು ತಪ್ಪಾದ ರೀತಿಯಲ್ಲಿ ಇದ್ದರೆ ನಿಮಗೆ ಮಾತ್ರವಲ್ಲದೇ ನಿಮ್ಮ ಗಂಡನಿಗೂ ಕೂಡ ಅದು ತೊಂದರೆ ಆಗುತ್ತದೆ. ಮತ್ತು ಇಡೀ ಕುಟುಂಬಕ್ಕೆ ಅದರ ಪ್ರಭಾವ ಕೆಟ್ಟದಾಗಿ ಬೀರುತ್ತದೆ. ಹಾಗಾಗಿ ತಾಳಿ ವಿಷಯದಲ್ಲಿ ಈಗ ನಾವು ಹೇಳುವ ಕೆಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅದೇ ರೀತಿ ನಡೆದುಕೊಂಡು ನಿಮ್ಮ ಸೌಭಾಗ್ಯವನ್ನು ಹೆಚ್ಚಿಸಿಕೊಳ್ಳಿ.

ಗಂಡನ ಏಳಿಗೆ ಹಾಗೂ ಮನೆಯ ಅಭಿವೃದ್ಧಿಗೆ ಕಾರಣರಾಗಿ. ಯಾವಾಗಲೂ ಕರಿಮಣಿ ಜೊತೆಗೆ ಮಾಂಗಲ್ಯವನ್ನು ಧರಿಸಬೇಕು, ಬಂಗಾರದ ಸರದಲ್ಲಿ ಧರಿಸಿದರು ಕೂಡ ಮಧ್ಯೆ ಮಧ್ಯೆ ಕರಿಮಣಿ ಇರಬೇಕು. ಕರಿಮಣಿ ಜೊತೆ ಹವಳ ಮುತ್ತು ಇವುಗಳನ್ನು ಕೂಡ ಸೇರಿಸಿ ಧರಿಸುವುದರಿಂದ ಇನ್ನು ಒಳ್ಳೆಯದೇ ಆಗುತ್ತದೆ.

ಕರಿಮಣಿ ಸಮೇತ ಮಾಂಗಲ್ಯವನ್ನು ಪಾರ್ವತಿ ಪರಮೇಶ್ವರ ರೂಪ ಎಂದು ಕಾಣುವುದರಿಂದ ಅದು ಹೃದಯ ಭಾಗದಲ್ಲಿ ಇರುವಂತೆ ಧರಿಸಬೇಕು. ವೃಕ್ಷ ಸ್ಥಳಕ್ಕೆ ಬರುವಂತೆ ಮಾಂಗಲ್ಯ ಧರಿಸಬೇಕ. ನಮ್ಮ ಮಾಂಗಲ್ಯ ಸರದ ಜೊತೆ ಯಾವುದೇ ಕಾರಣಕ್ಕೂ ಪಿನ್ನುಗಳನ್ನಾಗಲಿ ಅಥವಾ ಕಬ್ಬಿಣದ ಪದಾರ್ಥಗಳನ್ನಾಗಲಿ ಹಾಕಬಾರದು, ಇದರಿಂದ ದೋಷ ಉಂಟಾಗುತ್ತದೆ.

ಒಂದು ವೇಳೆ ಯಾವುದಾದರೂ ಸಮಯದಲ್ಲಿ ಮಾಂಗಲ್ಯ ಸರ ಕಟ್ ಆಗಿ ಹೋದರೆ ಅದನ್ನು ಸರಿಪಡಿಸುವ ತನಕ ಐದು ಎಳೆ ಅರಿಶಿನದ ದಾರದಲ್ಲಿ ಅರಿಶಿನ ಕೊಂಬನ್ನು ಹಾಕಿ ಗಂಡನ ಕೈಯಿಂದ ಕಟ್ಟಿಸಿಕೊಂಡು. ನಂತರ ನಿಮ್ಮ ಸರವನ್ನು ಸರಿಪಡಿಸಿಕೊಂಡು ಬೆಳಗ್ಗೆ ಒಂಬತ್ತು ಗಂಟೆ ಒಳಗೆ ಅದನ್ನು ಧರಿಸಬೇಕು. ನಂತರ ಆ ಅರಿಶಿನದ ದಾರವನ್ನು ತುಳಸಿ ಗಿಡದ ಕೆಳಗೆ ಅಥವಾ ದೇವಾಲಯದ ಹುಂಡಿಯಲ್ಲಿ ಅಥವಾ ಆಲದ ಮರದ ಕೆಳಗೆ ಹಾಕಬೇಕು. ಈ ರೀತಿ ಮಾಂಗಲ್ಯ ಸರ ಧರಿಸುವುದರ ಬಗ್ಗೆ ಇನ್ನಷ್ಟು ಮಹತ್ವದ ಅಂಶಗಳನ್ನು ತಿಳಿದುಕೊಳ್ಳಲು ಈ ವಿಡಿಯೋ ಪೂರ್ತಿಯಾಗಿ ನೋಡಿ.

ಪ್ರತಿದಿನ ಸಾಯಂಕಾಲ ಮಾಯವಾಗುವ ಶಿವನ ದೇವಾಲಯ ಇದು, ನಿಮ್ಮ ಕಣ್ಣ ಮುಂದೆಯೇ ಈ ಚಮತ್ಕಾರ ನಡೆಯುತ್ತದೆ.! ಈ ದೇಗುಲ ಎಲ್ಲಿದೆ ಗೊತ್ತಾ.?

ನಮ್ಮ ದೇಶದಲ್ಲಿ ಹಿಂದಿನ ರಾಜ ಮಹಾರಾಜರ ಕಾಲದಿಂದ ಹಿಡಿದು ಋಷಿಮುನಿಗಳು ಇದ್ದ ಸಮಯದಿಂದ ಈಗಿನ ಕಲಿಗಾಲದಲ್ಲೂ ಸಾಕಷ್ಟು ಶಿವ ದೇವಾಲಯಗಳು ನಿರ್ಮಾಣ ಆಗಿವೆ. ಆದರೆ ಈಗಿನ ದೇವಾಲಯಗಳಿಂದ ಈ ಹಿಂದೆ ನಿರ್ಮಿಸಲಾಗಿರುವ ದೇವಾಲಯಗಳು ಬಹಳ ವಿಶೇಷತೆ ಹೊಂದಿವೆ. ಅವುಗಳಲ್ಲಿ ಕೆಲವೊಂದು ಸಾಕ್ಷಾತ್ ದೇವತೆಗಳೇ ನಿರ್ಮಾಣ ಮಾಡಿದ್ದಾರೆ ಎನ್ನುವುದು ಪುರಾಣಗಳಲ್ಲಿ ಉಲ್ಲೇಖ ಆಗಿದೆ. ಇದೇ ರೀತಿ ಶಿವನ ಪುತ್ರ ಸ್ಕಂದನಿಂದ ನಿರ್ಮಾಣವಾದ ದೇವಾಲಯ ಒಂದು ಗುಜರಾತಿನಲ್ಲಿ ಇದೆ.

ಈ ದೇವಾಲಯವು ತನ್ನ ವಿಶೇಷತೆಯಿಂದ ಪ್ರತಿ ದಿನ ಸಹಸ್ರಾರು ಸಂಖ್ಯೆಯ ಭಕ್ತಾದಿಗಳನ್ನು ಸೆಳೆಯುತ್ತಿದೆ. ಅಲ್ಲದೆ ವಾರಾಂತ್ಯದಲ್ಲಿ ಈ ದೇವಾಲಯವನ್ನು ಕಾಣಲು ದೇಶವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು ಬರುತ್ತಾರೆ. ಇಷ್ಟು ಸಂಖ್ಯೆಯಲ್ಲಿ ಜನರನ್ನು ದೇವಾಲಯ ಸೆಳೆಯಲು ಅಲ್ಲೊಂದು ವಿಸ್ಮಯ ಸೃಷ್ಟಿಯಾಗುವುದು ಕಾರಣವಾಗಿದೆ ಇದು ಗಿನ್ನೀಸ್ ವರ್ಡ್ ಬುಕ್ ಅಲ್ಲಿ ಕೂಡ ರೆಕಾರ್ಡ್ ಆಗಿದೆ.

ಅದೇನೆಂದರೆ ಈ ದೇವಾಲಯ ಪ್ರತಿದಿನ ಸಂಜೆ 5:00 ಗಂಟೆಗೆ ಮುಳುಗಲು ಆರಂಭ ಆಗುತ್ತದೆ ಇದ್ದಕ್ಕಿದ್ದಂತೆ ನೋಡುಗರ ಕಣ್ಣೆದುರಿಗೆ ಈ ದೇವಾಲಯ ಪೂರ್ತಿಯಾಗಿ ನೀರಿನಲ್ಲಿ ಮುಳುಗಿ ಮಾಯವಾಗಿ ಬಿಡುತ್ತದೆ. ಮತ್ತು ಮರುದಿನ ಮುಂಜಾನೆ ಎಂದಿನಂತೆ ದೇವಾಲಯ ತೆರೆದಿರುತ್ತದೆ. ಆಗ ಭಕ್ತಾದಿಗಳು ಇಲ್ಲಿರುವ ಶಿವಲಿಂಗವನ್ನು ದರ್ಶನ ಮಾಡಬಹುದು ಹಾಗೂ ದೇವಾಲಯವನ್ನು ಪ್ರವೇಶಿಸಿ ಪೂಜೆ ಮಾಡಬಹುದು.

ಈ ದೇವಾಲಯ ಈ ರೀತಿ ನಿರ್ಮಾಣ ಆಗಿರುವುದಕ್ಕೆ ಕಾರಣ ಏನು ಎಂದು ಕೇಳುವುದಾದರೆ ಶ್ರೀ ಮಹಾ ಶಿವ ಪುರಾಣ ರುದ್ರ ಸಹಿತ ಭಾಗ ಎರಡರಲ್ಲಿ ಉಲ್ಲೇಖವಾಗಿರುವ ಕಥೆ ಈ ರೀತಿ ಹೇಳುತ್ತದೆ. ತಾರಕಾಸುರ ಎನ್ನುವ ರಾಕ್ಷಸನು ಶಿವನ ಕುರಿತು ತಪಸ್ಸನ್ನು ಆಚರಿಸಿ ತನಗೆ ಸಾವು ಬರಲೇಬಾರದೆಂದು ಕೇಳಿಕೊಳ್ಳುತ್ತಾರೆ. ಶಿವನು ಇದು ಸೃಷ್ಟಿಗೆ ವಿರುದ್ಧ ಮತ್ತೇನನ್ನಾದರೂ ಕೇಳುವಂತೆ ಆದೇಶಿಸಿದಾಗ ಸಾವು ಬರುವುದಾದರೆ ಶಿವನ ಪುತ್ರನಿಂದಲೇ ಬರಬೇಕು ಅದು ಆರು ವರ್ಷದ ಮಗುವಿಗೆ ಮಾತ್ರ ನನ್ನನ್ನು ಸಾಯಿಸಲು ಆಗಬೇಕು ಎಂದು ಕೇಳಿಕೊಳ್ಳುತ್ತಾರೆ.

ಆಗ ಶಿವನು ಸ್ಕಂದನಿಗೆ ಜನ್ಮ ನೀಡುತ್ತಾರೆ ಸ್ಕಂದ ಆರು ವರ್ಷದವನಿರುವಾಗ ಭೂಮಿಯ ಮೇಲೆ ರಾಕ್ಷಸತ್ವ ತೋರಿ ಜನರಿಗೆ ಹಿಂಸೆ ಕೊಡುತ್ತಿದ್ದ ತಾರಕಾಸುರನನ್ನು ವಧೆ ಮಾಡುತ್ತಾರೆ, ನಂತರ ಸ್ಕಂದನಿಗೂ ಪಶ್ಚಾತಾಪ ಉಂಟಾಗುತ್ತದೆ. ಆಗ ಮಹಾವಿಷ್ಣು ಇಂತಹದೊಂದು ಸಲಹೆಯನ್ನು ನೀಡುತ್ತಾರೆ. ನಿನ್ನ ತಂದೆಯ ಹೆಸರಿನಲ್ಲಿ ಶಿವಾಲಯ ನಿರ್ಮಿಸಿ ಪ್ರತಿದಿನವೂ ಕೂಡ ನೀರಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿದರೆ ನಿನ್ನ ಪಾಪ ಕಡಿಮೆ ಆಗುತ್ತದೆ ಎನ್ನುತ್ತಾರೆ.

ಅವರ ಅಣತಿ ಮೇರೆಗೆ ಗುಜರಾತಿನ ಬುರುಚ್ ಜಿಲ್ಲೆಯಿಂದ 2 ಕಿಲೋಮೀಟರ್ ದೂರದಲ್ಲಿರುವ ಜಂಬೂತರ ಎನ್ನುವ ಸಮುದ್ರ ತಟದ ಮೇಲೆ ಸ್ಕಂದನು ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಈ ದೇವಸ್ಥಾನವನ್ನು ಶ್ರೀ ಸ್ತಂಬೇಶ್ವರ ಮಹಾದೇವ ದೇವಸ್ಥಾನ ಎನ್ನುತ್ತಾರೆ. ಜನವರಿಯಿಂದ ಏಪ್ರಿಲ್ ತನಕ ಮಧ್ಯಾಹ್ನ 3 ಗಂಟೆಗೆ ದೇವಾಲಯ ಮುಳುಗಲು ಆರಂಭ ಆಗುತ್ತದೆ. ಉಳಿದ ತಿಂಗಳಲ್ಲಿ ಸಂಜೆ 5 ಗಂಟೆ ಆಗುತ್ತಿದ್ದಂತೆ ಸಮುದ್ರದ ನೀರಿನ ಪ್ರಮಾಣ ಹೆಚ್ಚಾಗಿ ಮುಳುಗುತ್ತಾ ಹೋಗುತ್ತದೆ.

ಆಗ ದೇವಸ್ಥಾನದ ಸಿಬ್ಬಂದಿ ಒಂದು ಸೈರನ್ ಮೊಳಗಿಸುತ್ತಾರೆ. ಕೂಡಲೇ ಒಳಗಿದ್ದ ಭಕ್ತರೆಲ್ಲರೂ ಆಚೆ ಬರಬೇಕು. ಸಂಪೂರ್ಣವಾಗಿ ದೇವಾಲಯವೇ ಜಲಾವೃತ ಆಗಿಬಿಡುತ್ತದೆ. ನಾವು ಬೆಳಗ್ಗೆಯಿಂದ ನೋಡಿದ ದೇವಸ್ಥಾನ ಇಲ್ಲೇ ಇತ್ತಾ ಎಂದು ಅನುಮಾನ ಆಗುವಂತೆ ಇದ್ದಿದ್ದೆಲ್ಲಾ ಮಾಯವಾಗಿ ಬಿಡುತ್ತದೆ. ಸ್ಕಂದನೇ ಇಲ್ಲಿ ಸಮುದ್ರವಾಗಿ ಬದಲಾಗಿದ್ದಾರೆ ಎನ್ನುವ ನಂಬಿಕೆಗಳು ಇವೆ. ಯಾಕೆಂದರೆ ಇಲ್ಲಿರುವ ಸಮುದ್ರ ನೀರಿನ ಉಪ್ಪಿನಾಂಶ 18%ಇದೆ. ಬೇರೆ ಸಮುದ್ರಗಳಲ್ಲಿ 40% ಗಿಂತ ಹೆಚ್ಚಿನ ಪ್ರಮಾಣದಲ್ಲಿ ಉಪ್ಪಿನಾಂಶ ಇದೆ. ಈ ದೈವ ಪವಾಡವನ್ನು ಭೇದಿಸಲು ವಿಜ್ಞಾನಿಗಳಿಗೂ ಕೂಡ ಸಾಧ್ಯವಾಗಿಲ್ಲ.

ವಾಸಸ್ಥಳ ದೃಢೀಕರಣ ಒರೀಜಿನಲ್ ಪತ್ರವನ್ನು ಕೇವಲ 5 ನಿಮಿಷದಲ್ಲಿ ಪಡೆಯುವ ವಿಧಾನ.

 

ನಮಗೆ ಒಂದಲ್ಲ ಒಂದು ಕಾರಣಕ್ಕಾಗಿ ನಮ್ಮ ವಾಸಸ್ಥಳ ದೃಢೀಕರಣ ಪತ್ರ ಬೇಕಾಗಿರುತ್ತದೆ. ಆಗ ನಾವು ನಾಡಕಚೇರಿಗೆ ಹೋಗಬೇಕಾಗುತ್ತದೆ ಅಥವಾ ಇದನ್ನು ಪಡೆದುಕೊಳ್ಳುವುದಕ್ಕಾಗಿ ಇನ್ಯಾವುದೇ ವ್ಯಕ್ತಿಗಳ ಸಹಾಯಕ್ಕಾಗಿ ಕಾಯಬೇಕಿರುತ್ತದೆ. ಆದರೆ ಈಗ ನಾವು ಹೇಳುವ ಈ ವಿಧಾನದಿಂದ ನೀವು ಯಾರ ಸಹಾಯವಿಲ್ಲದೆ ನಿಮ್ಮ ಮೊಬೈಲ್ ಮೂಲಕವೇ ಐದು ನಿಮಿಷಗಳೇ ವಾಸ ಸ್ಥಳ ಧೃಢೀಕರಣ ಪತ್ರದ ಫೈನಲ್ ಪ್ರಿಂಟ್ ಔಟ್ ಕೂಡ ತೆಗೆದುಕೊಳ್ಳಬಹುದು.

ಇತ್ತೀಚಿಗೆ ಎಲ್ಲಾ ಪ್ರಕ್ರಿಯೆಗಳು ಕೂಡ ಆನ್ಲೈನ್ ನಲ್ಲಿ ಜರುಗುತ್ತಿರುವುದರಿಂದ ನಾಡ ಕಛೇರಿಗೆ ಸಂಬಂಧಪಟ್ಟ ಭೂಮಿ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು. ಅದಕ್ಕಾಗಿ ಹಂತ ಹಂತವಾಗಿ ಈ ಕ್ರಮಗಳನ್ನು ಅನುಸರಿಸಿ.

● ಮೊದಲಿಗೆ ನಿಮ್ಮ ಯಾವುದೇ ಬ್ರೌಸರ್ ಮೂಲಕ ಭೂಮಿ ಆನ್ಲೈನ್ ಗೆ ಭೇಟಿ ಕೊಡಿ, ಯೂಸರ್ ಐಡಿ ಹಾಗೂ ಪಾಸ್ವರ್ಡ್ ಹಾಕುವ ಮೂಲಕ ಲಾಗ್ ಇನ್ ಆಗಿ ಮುಂದಿನ ಹಂತಕ್ಕೆ ಹೋಗಿ.
● ಹೊಸ ಪೇಜ್ ಅಲ್ಲಿ ನಾಡಕಛೇರಿ ಸರ್ವಿಸಸ್ ಎನ್ನುವ ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
● ನಾಡ ಕಚೇರಿಯಿಂದ ಪಡೆಯುವ ಹಲವಾರು ದಾಖಲೆಗಳ ಅಪ್ಲಿಕೇಶನ್ ಫಾರಂ ಇರುತ್ತದೆ ಅದರಲ್ಲಿ ವಾಸಸ್ಥಳ ದೃಢೀಕರಣಕ್ಕಾಗಿ ಇರುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

● ರೇಷನ್ ಕಾರ್ಡ್ ಹಾಗೂ ಆಧಾರ್ ಸಂಖ್ಯೆ ನಮೂದಿಸುವ ಬಗ್ಗೆ ಕೇಳುತ್ತದೆ ಆಗ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ ಇದರಿಂದ ಶೀಘ್ರವಾಗಿ ನೀವು ವಾಸಸ್ಥಳ ಪತ್ರ ಪಡೆದುಕೊಳ್ಳಬಹುದು.
● ಮುಂದಿನ ಪೇಜ್ ಅಲ್ಲಿ ನಿಮ್ಮ ಜಿಲ್ಲೆ ತಾಲೂಕು ಗ್ರಾಮ ನಿಮ್ಮ ವಾರ್ಡ್ ಅದು ಹರ್ಬಲ್ ಅಥವಾ ರೂರಲ್ ಎನ್ನುವ ಆಪ್ಷನ್ಗಳು ಇರುತ್ತವೆ, ಅದರಲ್ಲಿ ಸರಿಯಾದ ವಿವರ ಫಿಲ್ ಮಾಡಿ, ಅರ್ಜಿದಾರರ ಹೆಸರು ಇರುವಲ್ಲಿ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಹೆಸರು ಇರುತ್ತದೆ. ಅದರಲ್ಲಿ ಯಾರ ಹೆಸರಿನಲ್ಲಿ ವಾಸಸ್ಥಳ ದೃಢೀಕರಣ ಪತ್ರ ಬೇಕು ಅವರ ಹೆಸರನ್ನು ಸೆಲೆಕ್ಟ್ ಮಾಡಿ ಮತ್ತು ತಂದೆ ಅಥವಾ ಗಂಡನ ಹೆಸರನ್ನು ಕೂಡ ಹಾಕಿ.

● ಈ ಸರ್ಟಿಫಿಕೇಟ್ ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಬೇಕಾ ಎನ್ನುವುದಕ್ಕೂ ಆಯ್ಕೆ ಇರುತ್ತದೆ ಅದರಲ್ಲಿ ನಿಮ್ಮ ಇಷ್ಟದ ಲಾಂಗ್ವೇಜ್ ಆಯ್ಕೆ ಮಾಡಿ ಸರ್ಚ್ ಕೊಡಿ.
● ಅಷ್ಟಾದ ಮೇಲೆ ನೀವು ಯಾರ ಹೆಸರನ್ನು ಸೆಲೆಕ್ಟ್ ಮಾಡಿದ್ದೀರೋ ಅವರ ಹೆಸರು ಅವರ ತಂದೆಯ ಅಥವಾ ಗಂಡನ ಹೆಸರು ಹೀಗೆ ವಾಸಸ್ಥಳದ ದೃಢೀಕರಣಕ್ಕಾಗಿ ಬೇಕಾದ ಎಲ್ಲ ವಿವರಗಳ ಮಾಹಿತಿ ಇರುತ್ತದೆ. ಇದನ್ನೆಲ್ಲ ಮತ್ತೊಮ್ಮೆ ಚೆಕ್ ಮಾಡಿಕೊಂಡು ಪ್ರಿವಿವ್ಯು ಮೇಲೆ ಕ್ಲಿಕ್ ಮಾಡಿ.
● ಮತ್ತೊಮ್ಮೆ ಯಾವುದಾದರೂ ಮಾಹಿತಿಯನ್ನು ಸರಿಪಡಿಸಬೇಕಾ ಎನ್ನುವ ಆಯ್ಕೆ ಬರುತ್ತದೆ, ತಪ್ಪಿದ್ದರೆ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಎಡಿಟ್ ಮಾಡಿಕೊಳ್ಳಬಹುದು, ಏನು ಇಲ್ಲ ಎಂದರೆ ಮುಂದಿನ ಹಂತಕ್ಕೆ ಹೋಗಬಹುದು.

● ಡ್ರಾಫ್ಟ್ ವಿವ್ಯೂ ಮೇಲೆ ಕ್ಲಿಕ್ ಮಾಡಿದ ತಕ್ಷಣವೇ ನೀವು ಅಪ್ಲಿಕೇಶನ್ ಹಾಕಿದ ಅರ್ಜಿದಾರರ ಹೆಸರಿನಲ್ಲಿ ವಾಸಸ್ಥಳ ದೃಢೀಕರಣ ಪತ್ರ ಸ್ಕ್ರೀನ್ ಮೇಲೆ ಕಾಣುತ್ತದೆ, ಪ್ರಿಂಟ್ ಹಾಕಲು ಅದು ತಯಾರಾಗಿರುತ್ತದೆ.
● ಎಕ್ನೋಲೆಜ್ಮೆಂಟ್ ನಂಬರ್ಸ್ ಸಮೇತವಾಗಿ ಅವರ ಸಂಪೂರ್ಣ ವಿವರವೂ ಕೂಡ ಇದರಲ್ಲಿ ಇರುತ್ತದೆ.
ಎಲ್ಲಾ ಚೆಕ್ ಮಾಡಿಕೊಂಡ ಮೇಲೆ ಬ್ಯಾಕ್ ಹೋಗಿ ಪೇಜ್ ಸರ್ವಿಸ್ ಮೇಲೆ ಕ್ಲಿಕ್ ಮಾಡಿದರೆ ರೂ. 40 ಚಾರ್ಜನ್ನು ನೆಟ್ ಬ್ಯಾಂಕಿಂಗ್ ಮೂಲಕ ಪೇ ಮಾಡಬೇಕು.
● ಈ ವಿಧಾನಗಳ ಮೂಲಕ ಐದರಿಂದ ಹತ್ತು ನಿಮಿಷದೊಳಗೆ ನೀವು ನಿಮ್ಮ ವಾಸಸ್ಥಳ ಧೃಡೀಕರಣ ಪತ್ರವನ್ನು ಪಡೆದುಕೊಳ್ಳಬಹುದು.