Home Blog Page 21

ಈ ಗುಣಗಳಿರುವ ಪತಿ ಸಿಕ್ಕಿದ್ರೆ ಹೆಣ್ಣು ಮಕ್ಕಳೇ ನಿಮ್ಮಷ್ಟು ಅದೃಷ್ಟಶಾಲಿಗಳು ಯಾರು ಇಲ್ಲ.!

 

ಪತಿಯು ಪತ್ನಿಗೆ ಆಕೆಯ ತಂದೆ ತಾಯಿಯ ಸ್ಥಾನವನ್ನು ತುಂಬಬೇಕು. ಪತ್ನಿಯ ಪ್ರತೀ ಕಷ್ಟದಲ್ಲೂ ನಾನಿದ್ದೇನೆ ಎನ್ನುವಂತೆ ಬಾಳಬೇಕು. ಪತಿ ಯು ಪತ್ನಿಯ ಮನೆಯವರ ಜೊತೆ ಭಾವನಾತ್ಮಕ ಸಂಬಂಧ ಹೊಂದಿರ ಬೇಕು. ಪತಿಗೆ ಸ್ವಾಭಿಮಾನ ಸ್ವಂತ ಬುದ್ಧಿ ಜವಾಬ್ದಾರಿ ಇರಬೇಕು ಪರರ ಸ್ವತ್ತಿಗೆ ಆಸೆಪಡದೆ ಪ್ರಾಮಾಣಿಕವಾಗಿ ದುಡಿದು ಬದುಕಬೇಕು

ಪತ್ನಿಗೆ ಕಷ್ಟದ ಸಮಯದಲ್ಲಿ ಧೈರ್ಯ ತುಂಬಬೇಕು ಹಾಗೂ ಮುಂದಿನ ಭವಿಷ್ಯದ ಬಗ್ಗೆ ಅವಳಲ್ಲಿ ಭರವಸೆಯನ್ನು ಮೂಡಿಸಬೇಕು ಪತಿ ಪತ್ನಿಯರ ನಡುವೆ ಪ್ರೀತಿ ವಿಶ್ವಾಸ ನಂಬಿಕೆ ಇರಬೇಕು ಅನುಮಾನಕ್ಕೆ ಜಾಗವೇ ಇರಬಾರದು. ಕೆಲವೊಮ್ಮೆ ಸಂಬಂಧಗಳಲ್ಲಿ ಬಿರುಕುಂಟಾದಾಗ ಆಪ್ತ ಸಮಾಲೋಚನೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳ ಬೇಕೇ ಹೊರತು ಸಂಬಂಧ ಕೊನೆಗಾಣಿಸುವುದು ಬೇಡ.

* ತನ್ನ ಕೆಲಸದಲ್ಲಿ ಆದಷ್ಟು ಬಿಡುವು ಮಾಡಿಕೊಂಡು ಪತ್ನಿಯ ಜೊತೆ ಕೆಲವೊಂದಷ್ಟು ಸಮಯ ಇರುವಂತೆ ಅವಳನ್ನು ನೋಡಿಕೊಳ್ಳಬೇಕು. ಅಂದರೆ ಆಕೆಗೆ ಸಮಯ ನೀಡಬೇಕು.
* ಪತ್ನಿ ಮಾಡುವ ಕೆಲಸ ಅಥವಾ ಅಡುಗೆಯಲ್ಲಿ ಮೆಚ್ಚುಗೆ ಸೂಸಬೇಕು. ಉತ್ತಮ ಸ್ನೇಹಿತನಾಗಿ ಆಕೆಯ ಅಂತರಾಳದ ಭಾವನೆಗಳಿಗೆ ಸ್ಪಂದಿಸ ಬೇಕು.

ಈ ಸುದ್ದಿ ಓದಿ:- ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!

* ಪತ್ನಿಯ ಆರೋಗ್ಯ ಹದಗೆಟ್ಟಾಗ ಆಕೆಯ ಕೆಲಸದ ಹೊರೆ ಕಡಿಮೆ ಮಾಡಿ ಆಕೆಯ ಆರೋಗ್ಯದ ಕಡೆ ಗಮನಹರಿಸಬೇಕು.
* ಒಂದು ವೇಳೆ ಪತ್ನಿಯು ಭಾವನೆಗಳ ಮೀರಿ ಮಾತು ಬಳಸಿದಾಗ ಆಕೆಯನ್ನು ಶಾಂತಗೊಳಿಸಿ ಬದುಕಿನ ಬಗ್ಗೆ ತಿಳಿ ಹೇಳಬೇಕು.
* ಪತಿಯು ಪತ್ನಿಗೆ ನಿಷ್ಟನಾಗಿ ಪ್ರಾಮಾಣಿಕವಾಗಿ ಸತ್ಯವಂತನಾಗಿರ ಬೇಕು. ಪತ್ನಿಗೆ ಅಂಬಲಿ ನೀಡಿದರೂ ಸರಿಯೇ ಸ್ವಂತ ದುಡಿಮೆಯದ್ದಾ ಗಿರಬೇಕು.

* ಪತ್ನಿಯು ತನ್ನ ಪತಿ ಸಮಾಜದಲ್ಲಿ ಜವಾಬ್ದಾರಿಯುತ ಗೌರವ ಸ್ಥಾನ ಹೊಂದಲೆಂದು ಆಸೆ ಪಡುತ್ತಾಳೆ. ಅದನ್ನು ಸಾಧಿಸಲು ಪ್ರಯತ್ನಿಸಬೇಕು. * ಪತಿಯು ಚಟಕ್ಕೆ ಬೀಳದೆ ಸಾಲಕ್ಕೆ ಶರಣಾಗದೆ ಹಾಸಿಗೆ ಇದ್ದಷ್ಟು ಕಾಲು ಚಾಚುವ ಮನಸ್ಸಿರಬೇಕು. ಎಂತದ್ದೇ ಸಂದರ್ಭದಲ್ಲಿ ಒಬ್ಬರನ್ನೊಬ್ಬರು ಬಿಟ್ಟುಕೊಡದೆ ಉತ್ತಮವಾಗಿ ಬದುಕಿ ಇತರರಿಗೆ ಮಾದರಿಯಾಗಬೇಕು.

* ತನ್ನ ಮಕ್ಕಳು ಉತ್ತಮ ದಾರಿಯಲ್ಲಿ ಸಾಗಲು ಮಾರ್ಗದರ್ಶಿಯಾಗಿ ತನ್ನ ಕರ್ತವ್ಯವನ್ನು ಚಾಚೂ ತಪ್ಪದೇ ನಿಭಾಯಿಸಬೇಕು.
* ಜಗಳ ಹತಾಶೆ ಕೋಪ ಮತ್ತಿತರ ಸಮಸ್ಯೆ ಬಂದಾಗ ತಾಳ್ಮೆ ಕಳೆದು ಕೊಳ್ಳದೆ ಶಾಂತವಾಗಿ ವರ್ತಿಸಿ ಆ ಸಮಸ್ಯೆಯಿಂದ ಹೊರಗೆ ಬನ್ನಿ.
* ಗಂಡ ಹೆಂಡತಿ ಸಂಬಂಧ ಮೀನು ಮತ್ತು ನೀರಿನಂತೆ ಇರಬೇಕು ಒಂದನ್ನು ಬಿಟ್ಟು ಒಂದು ಇರಲಾರದಂತೆ. ಕಷ್ಟ ಬಂದಾಗ ಕುಗ್ಗದೆ ಸಂತೋಷ ಬಂದಾಗ ಹಿಗ್ಗದೆ ಸಮಚಿತ್ತ ಉಳ್ಳವರಾಗಿ ಬರದುಕಬೇಕು.

ಈ ಸುದ್ದಿ ಓದಿ:- ಟೀ ಸ್ಟ್ರೈನರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸುವ ಸರಳ ವಿಧಾನ ಇಲ್ಲಿದೆ ನೋಡಿ.! ಹೊಸದರಂತೆ‌ ಕಾಣುತ್ತದೆ.!

* ಪತಿ ಪತ್ನಿಯರ ನಡುವೆ ಕಠಿಣ ಸಮಸ್ಯೆ ಎದುರಾದಾಗ ಮೌನವಾಗಿದ್ದು ಸಮಸ್ಯೆಗೆ ಪರಿಹಾರ ಹುಡುಕಬೇಕು ಹೀಗೆ ಪ್ರತಿಯೊಂದು ಸಂದರ್ಭದಲ್ಲೂ ಪ್ರತಿಯೊಂದು ಸನ್ನಿವೇಶದ ಲ್ಲಿಯೂ ಕೂಡ ಗಂಡ ತನ್ನ ಹೆಂಡತಿಯನ್ನು ಬಿಟ್ಟು ಕೊಡಬಾರದು ಅವಳನ್ನು ತನ್ನ ಸರ್ವಸ್ವದಂತೆ ನೋಡಿಕೊಳ್ಳಬೇಕು. ಆಗ ಮಾತ್ರ ನೀವು ಉತ್ತಮ ಪತಿಯಾಗಿರುವುದಕ್ಕೆ ಸಾಧ್ಯವಾಗುತ್ತದೆ.

ಕೆಲವೊಂದಷ್ಟು ಜನ ಕೆಲವೊಂದು ಸಂದರ್ಭದಲ್ಲಿ ತಮ್ಮ ಹೆಂಡತಿಗೆ ಬಹಳ ಅವಮಾನ ಅಪವಾದಗಳನ್ನು ಮಾಡುತ್ತಿರುತ್ತಾರೆ ಇನ್ನೂ ಕೆಲವೊಂದಷ್ಟು ಜನ ತನ್ನ ಪತ್ನಿಗೆ ಹೊಡೆಯುತ್ತಾರೆ ಆದರೆ ಈ ರೀತಿ ಮಾಡುವುವವರ ಮನೆಯಲ್ಲಿ ಯಾವುದೇ ಕಾರಣಕ್ಕೂ ನೆಮ್ಮದಿ ಇರುವುದಿಲ್ಲ.

ಅವರ ಮನೆಯಲ್ಲಿ ಸದಾ ಕಾಲ ಜಗಳ ಮನಸ್ತಾಪ ಹತಾಶೆ ಇಂತಹ ವಾತಾವರಣವೇ ಇರುತ್ತದೆ. ಆ ಮನೆಯಲ್ಲಿ ಯಾವುದೇ ಕಾರಣಕ್ಕೂ ಯಾವುದರಲ್ಲಿಯೂ ಏಳಿಗೆ ಎನ್ನುವುದು ಇರುವುದಿಲ್ಲ. ಒಟ್ಟಾರೆಯಾಗಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನ ಪತ್ನಿಗೆ ಹೆಚ್ಚಿನ ಗೌರವ ಬೆಲೆಯನ್ನು ಕೊಡುವುದು ಬಹಳ ಮುಖ್ಯವಾಗಿರುತ್ತದೆ.

https://youtu.be/2q-vuTdx0SM?si=TKBaG0pQNVRsERU6

ಯಾವ ದಿನಾಂಕದಂದು ಹುಟ್ಟಿದ ಹುಡುಗಿಯರು ಲಕ್ಷ್ಮಿ ಸ್ವರೂಪ ಗೊತ್ತಾ.!

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ದಿನಾಂಕ ಹಾಗೂ ಕೆಲವೊಂದು ದಿನಗಳಿಗೆ ಬಹಳ ವಿಶೇಷವಾದಂತಹ ಸ್ಥಾನ ಇದೆ. ಆ ಒಂದು ದಿನಾಂಕದಂದು ಜನಿಸಿದಂತಹ ವ್ಯಕ್ತಿಗಳು ಕೆಲವೊಮ್ಮೆ ತಮ್ಮ ಜೀವನದಲ್ಲಿ ಉನ್ನತ ರೀತಿಯಲ್ಲಿ ಅವರಿಗೆ ತಿಳಿಯದ ಹಾಗೆ ಅತಿಹೆಚ್ಚಿನ ಅಭಿವೃದ್ಧಿಯನ್ನು ಹೊಂದುತ್ತಾರೆ ಎಂದೇ ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

ಅದೇ ರೀತಿಯಾಗಿ ಕೆಲವೊಂದು ದಿನಾಂಕದಂದು ಕೆಲವೊಂದು ಸಮಯ ಕೆಲವೊಂದು ದಿನದಲ್ಲಿ ಹುಟ್ಟಿದಂತಹ ವ್ಯಕ್ತಿಗಳು ಕೆಲವೊಮ್ಮೆ ಅಷ್ಟೇ ಸಮಸ್ಯೆಗಳನ್ನು ಅನುಭವಿಸುತ್ತಾರೆ ಎಂಬ ಮಾಹಿತಿಯನ್ನು ಸಹ ನಮಗೆ ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಒಟ್ಟಾರೆಯಾಗಿ ಆ ಒಂದು ಮಗು ಜನನವಾದoತಹ ಘಳಿಗೆ ಸಮಯ ದಿನದ ಆಧಾರದ ಮೇಲೆ.

ಈ ಸುದ್ದಿ ಓದಿ:- ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!

ಆ ಸಮಯದಲ್ಲಿ ಗ್ರಹ ನಕ್ಷತ್ರಗಳು ಯಾವ ಒಂದು ಸ್ಥಾನದಲ್ಲಿ ಇರುತ್ತದೆಯೋ ಆ ಒಂದು ಪ್ರಭಾವದಿಂದ ಆ ವ್ಯಕ್ತಿ ತನ್ನ ಮುಂದಿನ ಜೀವನದಲ್ಲಿ ಏಳಿಗೆಯಾಗುತ್ತಾನೆ ಅಥವಾ ಅವನತಿ ಹೊಂದುತ್ತಾನೆ ಎನ್ನುವುದು ನಿರ್ಧಾರವಾಗಿರುತ್ತದೆ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ದಿನಾಂಕದಂದು ಹುಟ್ಟಿದ ಹುಡುಗಿಯರು ಲಕ್ಷ್ಮಿ ಸ್ವರೂಪ ಎಂದು ಹೇಳುತ್ತಿರುತ್ತಾರೆ ಹಾಗೂ ಆ ಒಂದು ದಿನಾಂಕ ಯಾವುದು ಹಾಗೂ ಆ ದಿನಾಂಕದ ವಿಶೇಷತೆ ಏನು? ಹೀಗೆ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ದೇವರ ಹುಂಡಿಯೊಳಗೆ ಕಾಣಿಕೆ ಏಕೆ ಹಾಕಬೇಕು ಇದರ ಸಿಗುವ ಪ್ರಯೋಜನವೇನು ತಪ್ಪದೆ ಎಲ್ಲರೂ ತಿಳಿದುಕೊಳ್ಳಿ.!

ಸನಾತನ ಹಿಂದೂ ಸಂಸ್ಕೃತಿಯ ಆಚರಣೆಗಳಲ್ಲಿ ಜ್ಯೋತಿಷ್ಯ ಶಾಸ್ತ್ರ ಒಂದು ಪ್ರಮುಖವಾದ ಅಂಗವಾಗಿದೆ. ಇದರ ಆಧಾರದಿಂದ ಒಬ್ಬ ವ್ಯಕ್ತಿಯ ರಾಶಿ ಹಾಗೂ ಭವಿಷ್ಯ ಹೇಗಿದೆ ಎನ್ನುವುದನ್ನು ಲೆಕ್ಕಾಚಾರ ಹಾಕಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವು ಕೂಡ ಒಂದಾಗಿದ್ದು ಯಾವ ದಿನಾಂಕದಂದು ಮಗು ಹುಟ್ಟಿದ ಹಾಗೂ ಅದರಿಂದ ಆತ ತನ್ನ ಜೀವನದಲ್ಲಿ ಯಾವ ರೀತಿಯ ಅಭಿವೃದ್ಧಿಯಾಗುತ್ತಾನೆ ಅವನತಿಯಾಗು ತ್ತಾನೆ ಎಂದು ನಿರ್ಧಾರ ಮಾಡಲಾಗುತ್ತದೆ. ಈಗಾಗಲೇ ಈ ಎಲ್ಲಾ ಮಾಹಿತಿಯನ್ನು ಸಹ ನಾವು ಮೇಲೆ ತಿಳಿದೆವು. ಹಾಗಾದರೆ ಯಾವ ದಿನಾಂಕದಂದು ಹುಟ್ಟಿದ ಮಹಿಳೆಯರು ಲಕ್ಷ್ಮಿ ಸ್ವರೂಪ ಎನ್ನು ವಂತಹ ಮಾಹಿತಿಯನ್ನು ಈಗ ತಿಳಿಯೋಣ.

ಈ ಸುದ್ದಿ ಓದಿ:- ಅಕ್ಕಿಯಲ್ಲಿ ಹುಳ ಆಗಿದ್ಯಾ? ಹೀಗೆ ಮಾಡಿ ಎರಡು ವರ್ಷ ಆದ್ರೂ ಅಕ್ಕಿ ಏನೂ ಆಗಲ್ಲ.!

* ಮೊದಲನೆಯದಾಗಿ ಆರನೇ ತಾರೀಖಿನಲ್ಲಿ ಜನಿಸಿದಂತಹ ಹೆಣ್ಣು ಮಕ್ಕಳು ಅದೃಷ್ಟವಂತರು ಎಂದೇ ಹೇಳಬಹುದು. ಇವರಲ್ಲಿರುವಂತಹ ಮಾತುಗಾರಿಕೆಯು ಪ್ರತಿಯೊಬ್ಬರನ್ನು ಸಹ ಆಕರ್ಷಿಸುವಂತಹ ಸ್ವಭಾವ ವಾಗಿದ್ದು ಪ್ರತಿಯೊಬ್ಬರೂ ಕೂಡ ಇವರಿಗೆ ಮನಸೋಲುತ್ತಾರೆ ಹಾಗಾಗಿ ಇವರ ಮಾತುಗಾರಿಕೆ ಬಹಳ ಉತ್ತಮವಾಗಿರುತ್ತದೆ.

ಒಟ್ಟಾರೆಯಾಗಿ ಇವರು ಲಕ್ಷ್ಮಿ ದೇವಿಯ ಸ್ವರೂಪ ಎಂದೇ ಸಂಖ್ಯಾಶಾಸ್ತ್ರದಲ್ಲಿ ತಿಳಿಸಲಾಗಿದೆ ಹಾಗೂ ಇವರು ತಮ್ಮ ಜೀವನದಲ್ಲಿ ಅತ್ಯುತ್ತಮವಾದಂತಹ ಉದ್ಯೋಗ ವ್ಯಾಪಾರ ವ್ಯವಹಾರಗಳನ್ನು ಮಾಡುವುದರ ಮೂಲಕ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುತ್ತಾರೆ. ಯಾವುದೇ ಎಂತದ್ದೇ ಕಷ್ಟದ ಕೆಲಸ ಇದ್ದರೂ ಕೂಡ ಅದನ್ನು ಸರಿಪಡಿಸುವಂತಹ ಬುದ್ಧಿವಂತಿಕೆಯನ್ನು ಇವರು ಹೊಂದಿರುತ್ತಾರೆ.

ಈ ಸುದ್ದಿ ಓದಿ:- ನವಿಲುಗರಿಯನ್ನು ಮನೆಯಲ್ಲಿ ಇಲ್ಲಿಟ್ಟರೆ ಹಣಕ್ಕೆ ಕೊರತೆ ಬರಲ್ಲ..

* ಇನ್ನು 15ನೇ ತಾರೀಖಿನoದು ಜನಿಸಿದ ಹೆಣ್ಣು ಮಕ್ಕಳು ಯಾವುದೇ ಕೆಲಸ ಕಾರ್ಯಗಳು ಆಗಿರಬಹುದು ಅದನ್ನು ಹೆಚ್ಚು ಕಷ್ಟಪಟ್ಟು ಶ್ರಮ ಪಟ್ಟು ಮಾಡುವುದರ ಮೂಲಕ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇವರು ಈಗಾಗಲೇ ಮಾಡುತ್ತಿರುವಂತಹ ಕೆಲಸ ಕಾರ್ಯಗಳಲ್ಲಿ ಹೊಸ ಹೊಸ ದಾರಿಗಳನ್ನು ಹುಡುಕುತ್ತಿರುತ್ತಾರೆ.

ಜೀವನದಲ್ಲಿ ಇವರು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಬೇಕು ಎನ್ನುವಂತಹ ಮನಸ್ಥಿತಿ ಯನ್ನು ಇವರು ಹೊಂದಿರುತ್ತಾರೆ. ಇವರು ಕನಸನ್ನು ಕಾಣುವುದರ ಜೊತೆಗೆ ಕನಸನ್ನು ನೆರವೇರಿಸಿಕೊಳ್ಳುವುದಕ್ಕೆ ಸಾಕಷ್ಟು ಶ್ರಮ ಪಡು ವುದರ ಮೂಲಕ ಅದರಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಇದೇ ಕಾರಣಕ್ಕಾಗಿ ಅವರು ಬೇರೆಯವರಿಗಿಂತ ಬೇಗ ಯಶಸ್ಸನ್ನು ಕಾಣುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!

 

ನಾವು ಏನೇ ಕಷ್ಟ ಬಂದರೂ ಕೂಡ ಅದನ್ನು ದೇವರ ಮುಂದೆ ಹೇಳಿ ಕೊಳ್ಳುತ್ತಿರುತ್ತೇವೆ ಆದರೆ ಎಷ್ಟೋ ದಿನಗಳಿಂದ ನಾವು ಬೇಡಿಕೊಳ್ಳುತ್ತಿರು ವಂತಹ ಬೇಡಿಕೆ ಈಡೇರದೆ ಇರುವುದಕ್ಕೆ ಕಾರಣ ಏನು ಎಂದರೆ ನಾವು ಬೇಡಿಕೊಳ್ಳುತ್ತಿರುವಂತಹ ಬೇಡಿಕೆ ಒಳ್ಳೆಯ ರೀತಿಯಲ್ಲಿ ಇರುತ್ತದೆಯ ಇಲ್ಲವಾ ಎನ್ನುವುದು.

ಹಾಗಾಗಿ ನಾವು ಯಾವುದೇ ಕಷ್ಟಗಳನ್ನು ಸರಿಪಡಿಸುವಂತೆ ದೇವರ ಮುಂದೆ ಕೇಳಿ ಕೊಳ್ಳುವಾಗ ಅದು ಒಳ್ಳೆಯ ರೀತಿಯಲ್ಲಿದ್ದರೆ ಮಾತ್ರ ಆ ಕಷ್ಟ ನಮಗೆ ದೂರವಾಗುತ್ತದೆ. ಇಲ್ಲವಾದರೆ ಮತ್ತಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಪ್ರತಿ ಯೊಬ್ಬರೂ ಕೂಡ ದೇವರ ಮುಂದೆ ಏನನ್ನಾದರೂ ಬೇಡಿಕೊಳ್ಳುವಾಗ ಒಳ್ಳೆಯ ರೀತಿಯಲ್ಲಿ ಒಳ್ಳೆಯ ಮನಸ್ಸಿನಿಂದ ದೇವರ ಮೇಲೆ ನಂಬಿಕೆ ಇಟ್ಟು ಕೇಳಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಅದರಲ್ಲೂ ಕೆಲವೊಮ್ಮೆ ನಾವು ತಪ್ಪಾದ ರೀತಿಯಲ್ಲಿ ತಪ್ಪಾದ ಬೇಡಿಕೆ ಗಳನ್ನು ಮಾಡಿಕೊಳ್ಳುವುದರಿಂದ ನಮ್ಮ ಪ್ರಾರ್ಥನೆಗಳು ಕೂಡ ಈಡೇರು ವುದಿಲ್ಲ. ಹಾಗಾಗಿ ದೇವರ ಮುಂದೆ ನಾವು ಯಾವ ರೀತಿ ಪ್ರಾರ್ಥನೆ ಮಾಡುತ್ತೇವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:-ದೇವರ ಹುಂಡಿಯೊಳಗೆ ಕಾಣಿಕೆ ಏಕೆ ಹಾಕಬೇಕು ಇದರ ಸಿಗುವ ಪ್ರಯೋಜನವೇನು ತಪ್ಪದೆ ಎಲ್ಲರೂ ತಿಳಿದುಕೊಳ್ಳಿ.!

ಆದರೆ ಈ ಮಾಹಿತಿ ಹೆಚ್ಚಿನ ಜನಕ್ಕೆ ತಿಳಿದಿಲ್ಲ ಆದ್ದರಿಂದ ಈ ದಿನ ನಾವು ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುವಾಗ ಯಾವ ರೀತಿಯ ಕೆಲವು ವಿಧಾನಗಳನ್ನು ಅನುಸರಿಸಬೇಕು ನಾವು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಕೆಲವೊಂದಷ್ಟು ಜನ ದೇವರ ಮುಂದೆ ಬೇಡಿಕೊಳ್ಳುವಂತಹ ಸಂದರ್ಭ ದಲ್ಲಿ ನಾವು ಬೇಡಿಕೊಂಡರೆ ದೇವರು ಒಳ್ಳೆಯದನ್ನು ಮಾಡುತ್ತಾನ ದೇವರು ನಮ್ಮ ಹಣೆಯ ಬರಹದಲ್ಲಿ ಏನನ್ನು ಬರೆದಿರುತ್ತಾನೆಯೋ ಅದೇ ನಮ್ಮ ಜೀವನದಲ್ಲಿ ನಡೆಯುತ್ತದೆ ಎನ್ನುವಂತಹ ಮಾತುಗಳನ್ನು ಹೇಳಿಕೊಳ್ಳುತ್ತಿರುತ್ತಾರೆ ಹಾಗೂ ಈ ರೀತಿ ಹೇಳಿಕೊಳ್ಳುತ್ತಿರುವಂತಹ ಕೆಲವೊಂದಷ್ಟು ಜನರನ್ನು ಸಹ ನಾವು ಕಣ್ಣ ಮುಂದೆ ನೋಡಿರುತ್ತೇವೆ.

ಆದರೆ ನಾವು ಈ ರೀತಿ ಬೇಡಿಕೊಳ್ಳುವುದರ ಬದಲು ನಿಷ್ಠೆಯಿಂದ ಬೇಡಿಕೊಳ್ಳುವುದರಿಂದ ನಾವು ನಮ್ಮ ಹಣೆಯ ಬರಹದಲ್ಲಿ ಇಲ್ಲದೆ ಇರುವಂತಹ ಸಮಸ್ಯೆಗಳನ್ನು ಸಹ ದೂರ ಮಾಡಿಕೊಳ್ಳುವಂತೆ ಆ ಭಗವಂತ ನಮಗೆ ಒಳ್ಳೆಯದನ್ನು ಕರುಣಿಸುತ್ತಾನೆ. ಆದ್ದರಿಂದ ನಾವು ಯಾವಾಗಲೂ ಕೂಡ ಒಳ್ಳೆಯ ಮನಸ್ಸಿನಿಂದ ಈ ಕೆಲಸ ಆಗುತ್ತದೆ ನಾನು ಅಂದುಕೊಂಡಿರುವಂತಹ ಎಲ್ಲಾ ಕಷ್ಟಗಳು ದೂರವಾಗುತ್ತದೆ ಅದನ್ನು ದೇವರು ಸರಿ ಮಾಡುತ್ತಾನೆ ಎನ್ನುವಂತಹ ನಂಬಿಕೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒಳ್ಳೆಯ ಮನಸ್ಸಿನಿಂದ ದೇವರಲ್ಲಿ ಪ್ರಾರ್ಥನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:-ನವಿಲುಗರಿಯನ್ನು ಮನೆಯಲ್ಲಿ ಇಲ್ಲಿಟ್ಟರೆ ಹಣಕ್ಕೆ ಕೊರತೆ ಬರಲ್ಲ..

ಮೊದಲೇ ಹೇಳಿದಂತೆ ಎರಡು ಮನಸ್ಸಿನಿಂದ ಯಾವುದೇ ಕಾರಣಕ್ಕೂ ದೇವರ ಮುಂದೆ ನೀವು ಯಾವುದೇ ರೀತಿಯ ಬೇಡಿಕೆಗಳನ್ನು ಹೇಳಿಕೊಳ್ಳಬೇಡಿ. ನಾವು ಯಾವುದೇ ವರವನ್ನು ಕೇಳುವಂತಹ ಸಂದರ್ಭದಲ್ಲಿ ನನಗೆ ಕಷ್ಟಗಳೆಲ್ಲ ದೂರವಾಗಬೇಕು ನನಗೆ ಅತಿ ಹೆಚ್ಚು ಹಣಕಾಸಿನ ಅವಶ್ಯಕತೆ ಬೇಕು.

ನನಗೆ ಒಳ್ಳೆಯದಾಗಬೇಕು ನಾನು ಅಂದುಕೊಂಡದ್ದು ನಾನು ಸಾಧಿಸಲೇಬೇಕು ಹೀಗೆ ನನಗೆ ನನಗೆ ಎನ್ನುವಂತಹ ಪದವನ್ನು ಬಳಸಬಾರದು ಇದೇ ನಾವು ಮಾಡುವಂತಹ ತಪ್ಪಾಗಿದೆ. ಅದರ ಬದಲು ಈ ಒಂದು ಸಮಯದಲ್ಲಿ ನಾವು ಹೇಗಿದ್ದೇವೆ ನಮಗೆ ಊಟ ಮಾಡುವುದಕ್ಕೆ ಮೂರು ಹೊತ್ತು ಆಹಾರ ಸಿಗುತ್ತಿದೆಯ ಈಗ ನೀವು ಅನುಭವಿಸುತ್ತಿರುವಂತಹ ಸುಖದ ಬಗ್ಗೆ ದೇವರಲ್ಲಿ ಧನ್ಯವಾದಗಳು ಹೇಳುತ್ತಾ.

ಇಷ್ಟನ್ನು ನನಗೆ ದಯಪಾಲಿಸಿದ್ದಕ್ಕೆ ನಿಮಗೆ ಕೃತಜ್ಞತೆಗಳು ಎಂದು ದೇವರಲ್ಲಿ ಹೇಳುತ್ತಾ ಪ್ರತಿನಿತ್ಯ ದೇವರನ್ನು ಪ್ರಾರ್ಥನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಈ ರೀತಿ ಮಾಡುವುದರಿಂದ ನಮ್ಮ ಜೀವನದಲ್ಲಿ ಎಷ್ಟೇ ಕಷ್ಟದ ಪರಿಸ್ಥಿತಿಗಳು ಬಂದರೂ ಅದನ್ನು ನಾವು ಸರಿಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ದೇವರ ಹುಂಡಿಯೊಳಗೆ ಕಾಣಿಕೆ ಏಕೆ ಹಾಕಬೇಕು ಇದರ ಸಿಗುವ ಪ್ರಯೋಜನವೇನು ತಪ್ಪದೆ ಎಲ್ಲರೂ ತಿಳಿದುಕೊಳ್ಳಿ.!

 

ಇತ್ತೀಚೆಗೆ ಪಂಡಿತರು ಹೇಳುತ್ತಿದ್ದಾರೆ ಒಂದೊಂದು ಕೋರಿಕೆ ಈಡೇರುವುದಕ್ಕೆ ಒಂದೊಂದು ಬೆಲೆ ಇರುತ್ತದೆ. ಹುಂಡಿಯಲ್ಲಿ ಇಷ್ಟು ಕಾಣಿಕೆ ಹಾಕಿದರೆ ಈ ಕೋರಿಕೆ ಈಡೇರುತ್ತದೆ ಎಂದು ಹೇಳುತ್ತಾರೆ. ನಾವೆಲ್ಲರೂ ಕೂಡ ದೇವಸ್ಥಾನಕ್ಕೆ ಹೋದಾಗ ನಮ್ಮ ಕೈಲಾದಷ್ಟು ಹಣವನ್ನು ದೇವಸ್ಥಾನದ ಹುಂಡಿಗೆ ಹಾಕಿ ಬರುತ್ತೇವೆ.

ಆದರೆ ಕೆಲವು ಪಂಡಿತರು ಹಾಗೂ ಕೆಲವು ಧರ್ಮ ಗ್ರಂಥಗಳ ಪ್ರಕಾರ ಹುಂಡಿಯಲ್ಲಿ ಎಷ್ಟು ದುಡ್ಡು ಹಾಕಿದರೆ ಏನು ಸಿಗುತ್ತದೆ, ಹಾಗೂ ಹುಂಡಿಯಲ್ಲಿ ಹಣ ಹಾಕುವುದರಿಂದ ನಾವು ಏನೆಲ್ಲಾ ಲಾಭ ಪಡೆದುಕೊಳ್ಳಬಹುದು ಹಾಗೂ ಯಾವ ದಿನ ಯಾವ ದೇವರ ಹೆಸರಿನಲ್ಲಿ ಪೂಜೆಯನ್ನು ಮಾಡಬೇಕು ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ.

* ಮೊದಲನೆಯದಾಗಿ ದೇವಸ್ಥಾನದ ಹುಂಡಿಯಲ್ಲಿ 7 ರೂಪಾಯಿ ಹಾಕಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆ‌ಹಾಗೆ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಅನಾರೋಗ್ಯದ ಸಮಸ್ಯೆ ಇದ್ದರೂ ಕೂಡ ಅದು ದೂರವಾಗುತ್ತದೆ.

ಈ ಸುದ್ದಿ ಓದಿ:-ಹಿರಿಯರು ಹೇಳಿರುವ 45 ಕಿವಿ ಮಾತುಗಳು ಒಮ್ಮೆ ಕೇಳಿ ಜೀವನ ಬದಲಾಗುತ್ತದೆ.!

* ನವರಾತ್ರಿ ಅಂದರೆ 9 ರಾತ್ರಿಗಳು 9 ರುಪಾಯಿಯನ್ನು ಹುಂಡಿಯಲ್ಲಿ ಹಾಕಿದರೆ ಶತ್ರು ಭಾದೆ ಹೋಗುತ್ತದೆ. ನಿಮ್ಮ ಜಾತಕದಲ್ಲಿ ಶನಿ ದೋಷ ಇದ್ದರೂ ಕೂಡ ನಿವಾರಣೆಯಾಗುತ್ತದೆ. ಹಾಗೂ ದೇವಿ ಅನುಗ್ರಹ ನಿಮ್ಮ ಕುಟುಂಬದ ಮೇಲೆ ಸದಾ ಕಾಲ ಇರುತ್ತದೆ.
* ಚಂದ್ರನಿಗೆ ಇಷ್ಟವಾದಂತಹ ಸಂಖ್ಯೆ 11 ದೇವಸ್ಥಾನದ ಹುಂಡಿಯಲ್ಲಿ 11 ರೂಪಾಯಿ ಹಾಕಿದರೆ ನಿಮಗಿರುವ ಸಾಲ ಬೇಗ ತೀರುತ್ತದೆ.

* ದೇವರ ಹುಂಡಿಯಲ್ಲಿ 12 ರೂಪಾಯಿ ಹಾಕಿದರೆ ನಿಮ್ಮ ಇಡೀ ಕುಟುಂಬದವರು ಸುಖ ಶಾಂತಿ ನೆಮ್ಮದಿ ಆರೋಗ್ಯ ಸಂತೋಷ ಸಮೃದ್ಧಿಯಿಂದ ಕೂಡಿರುತ್ತದೆ. ಅನೇಕ ಜನರಿಗೆ ತಮ್ಮ ಜಾತಕದಲ್ಲಿ ಅದೃಷ್ಟ ಎನ್ನುವುದೇ ಇರುವುದಿಲ್ಲ ಯಾವುದೇ ಕೆಲಸ ಮಾಡಿದರು ಕೂಡ ಅವರಿಗೆ ಫಲ ಸಿಗುವುದಿಲ್ಲ ಅಂತವರು ದೇವಸ್ಥಾನದ ಹುಂಡಿಯಲ್ಲಿ 12ರೂ ಹಾಕಿದರೆ ನಿಮ್ಮ ಜೀವನದಲ್ಲಿ ಇರುವಂತಹ ದುರಾದೃಷ್ಟ ಹೋಗಿ ಅದೃಷ್ಟ ಒಲಿಯುತ್ತದೆ.

* ಗುರು ಗ್ರಹದ ಅನುಗ್ರಹದ ಸಂಖ್ಯೆ 54. ಹುಂಡಿಯಲ್ಲಿ 54 ರೂಪಾಯಿ ಹಾಕುವುದರಿಂದ ಗುರುವಿನ ಅನುಗ್ರಹ ಸಿಗುತ್ತದೆ. ನೀವು ಕೈ ಹಿಡಿದಿರುವಂತಹ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ಯಶಸ್ಸನ್ನು ಸಾಧಿಸುವಿರಿ. ಹಾಗೆ ನಿಮ್ಮ ಮನೆ ಮೇಲು ಕೂಡ ತಾಯಿ ಲಕ್ಷ್ಮಿ ಕಟಾಕ್ಷ ಲಭಿಸುತ್ತದೆ.
* ದೇವರ ಹುಂಡಿಯಲ್ಲಿ 101 ರೂಪಾಯಿ ಹಾಕಿದರೆ ಅಖಂಡ ರಾಜ ಯೋಗ ಹಾಗೂ ಅಖಂಡ ಐಶ್ವರ್ಯ ಸಿದ್ಧಿಯಾಗುತ್ತದೆ.

ಈ ಸುದ್ದಿ ಓದಿ:-ದೇವರಲ್ಲಿ ಹರಿಕೆ ಹೊತ್ತು ನೀವು ಮರೆತಿರುವಿರೆ.! ಹರಿಕೆ ತೀರಿಸಲಾಗದೆ ಕಷ್ಟಗಳು ಎದುರಾಗುತ್ತಿದೆಯೇ.? ಇದಕ್ಕೆಲ್ಲಾ ಪರಿಹಾರ ಇಲ್ಲಿದೆ ನೋಡಿ

* ಆಶೀರ್ವಾದದ ಮೂಲ ಸಂಖ್ಯೆ 116 ಹಿಂದಿನ ಜನ್ಮದಲ್ಲಿ ತಿಳಿದು ತಿಳಿಯದೆಯೋ ಮಾಡಿರುವಂತಹ ಪಾಪಗಳೆಲ್ಲವೂ ನಾಶವಾಗುವುದಕ್ಕೆ ದೇವರ ಗುಂಡಿಯಲ್ಲಿ 116 ರೂಪಾಯಿ ಕಾಣಿಕೆ ಹಾಕಬೇಕು ಇದರಿಂದ ಮುಕ್ಕೋಟಿ ದೇವರುಗಳ ಆಶೀರ್ವಾದವನ್ನು ಸಹ ಪಡೆದು ಕೊಳ್ಳಬಹುದು. ದೇವಾಲಯ ಎನ್ನುವುದು ಪವಿತ್ರತೆಗೆ ಪ್ರತಿರೂಪ. ಅಂತಹ ದೇವಾಲಯಗಳಿಗೆ ಹೋದಾಗ ಭಕ್ತರು ತಪ್ಪದೆ ಕೆಲವು ನಿಯಮಗಳನ್ನು ಅನುಸರಿಸಬೇಕು.

* ದೇವಾಲಯಕ್ಕೆ ಹೋಗುವಾಗ ತಪ್ಪದೇ ಸ್ನಾನ ಮಾಡಿ ಹೋಗಬೇಕು.
* ಹಾಗೂ ಹೆಂಗಸರು ಮತ್ತು ಗಂಡಸರು ತಪ್ಪದೇ ಹಣೆಗೆ ಕುಂಕುಮ ಇಟ್ಟು ಕೊಂಡು ಹೋಗಬೇಕು.
* ಶಿವಾಲಯಕ್ಕೆ ಹೋದರೆ ಮಾತ್ರ ಗಂಡಸರು ಹಣೆಗೆ ವಿಭೂತಿ ಇಟ್ಟು ಕೊಂಡಿರಬೇಕು. ಹೆಂಗಸರು ವಿಭೂತಿ ಮತ್ತು ಕುಂಕುಮ ಎರಡನ್ನೂ ಇಟ್ಟುಕೊಂಡಿರಬೇಕು.
* ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ದೇವಸ್ಥಾನಕ್ಕೆ ಹೋದರೆ ತುಂಬಾ ಒಳ್ಳೆಯದು.

* ದೇವಸ್ಥಾನಕ್ಕೆ ಹೋಗುವ ಮುಂಚೆ ಕೈ ಕಾಲು ತೊಳೆದು ಕೊಂಡು ಹೋಗಬೇಕು.
* ಅರ್ಚನೆ ಮಾಡಿಸುವಾಗ ಕೇವಲ ಗಂಡ ಹೆಂಡತಿ ಹೆಸರು ಮಾತ್ರ ಹೇಳುತ್ತಾರೆ ಆದರೆ ಮೊದಲು ಮನೆಯ ಹಿರಿಯರ ಹೆಸರನ್ನು ಹೇಳುವುದು ಕಡ್ಡಾಯ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಹಿರಿಯರು ಹೇಳಿರುವ 45 ಕಿವಿ ಮಾತುಗಳು ಒಮ್ಮೆ ಕೇಳಿ ಜೀವನ ಬದಲಾಗುತ್ತದೆ.!

 

* ಸಂಜೆ ದೇವರ ದೀಪ ಹಚ್ಚುವ ಸಮಯದಲ್ಲಿ ಮುಂಭಾಗದಲ್ಲಿರುವ ಬಾಗಿಲನ್ನ ತೆರೆದು ಮನೆಯ ಹಿಂಭಾಗದಲ್ಲಿರುವ ಬಾಗಿಲನ್ನು ಮುಚ್ಚಬೇಕು.
* ಮನೆಯ ಮುಖ್ಯದ್ವಾರದ ಬಾಗಿಲ ಹೊಸ್ತಿಲ ಮೇಲೆ ನಿಲ್ಲಬೇಡಿ. ಅಷ್ಟು ಮಾತ್ರವಲ್ಲದೆ ಬೇರೆ ಯಾರೂ ಸಹ ಹೊಸ್ತಿಲಿನ ಮೇಲೆ ನಿಲ್ಲದಂತೆ ಎಚ್ಚರ ವಹಿಸಿ ತಿಳಿ ಹೇಳಿ.
* ಸಂಜೆ ದೀಪ ಬೆಳಗಿಸಿದ ಮೇಲೆ ಮನೆಯಲ್ಲಿ ಕಸ ಗುಡಿಸಬೇಡಿ. ರಾತ್ರಿ ಮಲಗುವ ಮೊದಲು ಕಸ ಗುಡಿಸಿದರೆ ಹೊರಗೆ ಹಾಕಬೇಡಿ. ಒಂದು ಕಡೆ ಗುಡ್ಡೆ ಮಾಡಿ ಶೇಖರಿಸಿಟ್ಟು ಬೆಳಗಿನ ಜಾವ ಸೂರ್ಯೋದಯದ ನಂತರ ಹೊರಗೆ ಹಾಕಿ.

* ಪೊರಕೆಯ ತುದಿಯ ಭಾಗ (ಕಸ ಗುಡಿಸುವ ಭಾಗ) ವನ್ನು ಮೇಲೆ ಮಾಡಿ ನಿಲ್ಲಿಸಬೇಡಿ ಅದು ಸ್ಮಶಾನ ಮನೆ ಸೂಚಕವಾಗಿದೆ ಹಾಗೆ ಇಡುವುದು ಸ.ತ್ತವರ ಮನೆಯಲ್ಲಿ ಮಾತ್ರ.
* ಮೊರ, ಪೊರಕೆಗಳನ್ನು ಕಾಲುಗಳಿಂದ ಒದೆಯಬೇಡಿ ಅಥವಾ ತುಳಿ ಯಬೇಡಿ ಹಾಗೇನಾದರೂ ನಿಮ್ಮ ಕಾಲು ಅಕಸ್ಮಾತ್ತಾಗಿ ತಗುಲಿದರೂ ಪೊರಕೆಗೆ ನಮಸ್ಕರಿಸಿ.
* ಚಪ್ಪಲಿಗಳನ್ನು ಮನೆಯ ಹೊಸ್ತಿಲು, ಮುಖ್ಯದ್ವಾರದ ಎದುರಿಗೆ, ಅಕ್ಕಪಕ್ಕ ಬಿಡಬೇಡಿ, ಸ್ವಲ್ಪ ದೂರದಲ್ಲಿಯೇ ಬಿಟ್ಟರೆ ಒಳ್ಳೆಯದು ರಂಗೋಲಿ ಹಾಕದೆ ಹಾಗೆ ಬಾಗಿಲ ಮುಂಭಾಗವನ್ನು ಸಾರಿಸಿ ಇಡುವುದು ಒಳ್ಳೆಯದಲ್ಲ.

ಈ ಸುದ್ದಿ ಓದಿ:- ದೇವರಲ್ಲಿ ಹರಿಕೆ ಹೊತ್ತು ನೀವು ಮರೆತಿರುವಿರೆ.! ಹರಿಕೆ ತೀರಿಸಲಾಗದೆ ಕಷ್ಟಗಳು ಎದುರಾಗುತ್ತಿದೆಯೇ.? ಇದಕ್ಕೆಲ್ಲಾ ಪರಿಹಾರ ಇಲ್ಲಿದೆ ನೋಡಿ

* ಯಾವುದಾದರೂ ಒಂದು ಪುಟ್ಟ ರಂಗೋಲಿಯನ್ನಾದರು ಹಾಕಿ.
* ಮನೆಯ ಗೋಡೆಯ ಮೇಲೆ, ದೇವರ ಮನೆ ಮುಂತಾದ ಸ್ಥಳಗಳಲ್ಲಿ ಗೋಡೆಗಳ ಮೇಲೆ ಶಾಯಿ ಅಥವಾ ಕರಿ ಬಣ್ಣ ಇತ್ಯಾದಿಗಳಿಂದ ವಿಕಾರ ಆಕೃತಿಗಳನ್ನು ಬರೆಯಬೇಡಿ.
* ನಡೆಯುವಾಗ ನಿಮ್ಮ ಪಾದವನ್ನು ನೆಲಕ್ಕೆ ಸವರಿಕೊಂಡು ಓಡಾಡ ಬೇಡಿ. ಕಾಲಿನ ಪಾದವನ್ನು ಎತ್ತಿ ಇಟ್ಟು ನಡೆಯಬೇಕು ಸಾಧ್ಯವಾದಷ್ಟು ಶಬ್ದ ಕಡಿಮೆ ಇರಲಿ. ಹೆಣ್ಣುಮಕ್ಕಳು ಕಾಲಿಗೆ ಕಾಲ್ಲೆಜ್ಜೆಯನ್ನು ಧರಿಸುವುದು ಒಳ್ಳೆಯದು.

* ಮಂಗಳವಾರ, ಶುಕ್ರವಾರದಂದು ಯಾರನ್ನೂ ಸಹ ಅವಾಚ್ಯ ಶಬ್ದ ಗಳಿಂದ ಬಯ್ಯಬೇಡಿ, ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಆ ದಿನಗಳು ಅವಾಚ್ಯ ಶಬ್ದಗಳಿಂದ ಬಯ್ಯಲುಬಾರದು, ಅವರ ಮನಸ್ಸನ್ನು ಸಹ ನೋಯಿಸಬಾರದು.
* ಹರಿದು ಹೋದ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಧರಿಸಬೇಡಿ. ಒಂದು ವೇಳೆ ನೀವೇನಾದರೂ ಧರಿಸಿದರೆ ಮಾಟ ಮಂತ್ರ ದೃಷ್ಟಿಗಳ, ಪ್ರಯೋಗ ಮಾಡಿಸಿದ್ದರೆ ಅವುಗಳ ಮೇಲೆ ಪರಿಣಾಮ ಬೇಗ ಬೀಳುತ್ತದೆ
* ಕೈ ಮತ್ತು ಕಾಲುಗಳ ಉಗುರುಗಳನ್ನು ವಿಪರೀತ ಬೆಳೆಸಬೇಡಿ. ಅದು ದಾರಿದ್ರದ ಸಂಕೇತವಾಗಿದೆ.

ಈ ಸುದ್ದಿ ಓದಿ:- ಅಕ್ಕಿಯಲ್ಲಿ ಹುಳ ಆಗಿದ್ಯಾ? ಹೀಗೆ ಮಾಡಿ ಎರಡು ವರ್ಷ ಆದ್ರೂ ಅಕ್ಕಿ ಏನೂ ಆಗಲ್ಲ.!

* ಉಗುರುಗಳನ್ನು ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಕತ್ತರಿಸಬೇಡಿ ಹಾಗೆ ಶುಕ್ರವಾರ, ಮಂಗಳವಾರ, ಶನಿವಾರದ ದಿನ ಉಗುರುಗಳನ್ನು ಕತ್ತರಿಸಬಾರದು. ಕತ್ತರಿಸಿದ ಉಗುರುಗಳನ್ನು ಸಹ ಮನೆಯಲ್ಲಿ ಎಲ್ಲಂದರಲ್ಲಿ ಎಸೆಯಬಾರದು.
* ಹಾಲನ್ನು ಚೆಲ್ಲಿದ್ದರೆ ತುಳಿದುಕೊಂಡು ಓಡಾಡಬೇಡಿ ಒಂದು ವಸ್ತ್ರವನ್ನು ತೆಗೆದುಕೊಂಡು ಕೈಗಳಿಂದ ಸ್ವಚ್ಛಗೊಳಿಸಬೇಕು.

* ಮನೆಯಲ್ಲಿ ಹೆಣ್ಣುಮಕ್ಕಳು ಕೆದರಿದ ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು, ಕುಂಕುಮವಿಲ್ಲದ ಹಣೆ, ಕೆದರಿದ ಕೂದಲು ಅರಿಶಿನ ಹಚ್ಚದ ಕೈ ಕಾಲುಗಳು ಮಹಿಳೆಯರಿಗೆ ಅಶುಭದ ಸಂಕೇತವಾಗಿವೆ.
* ಮುಸ್ಸಂಜೆ ಮತ್ತು ಸೂರ್ಯಾಸ್ತದ ಬಳಿಕ ತಲೆಯ ಕೂದಲನ್ನು ಬಾಚಬಾರದು.
* ಹಾಸಿಗೆ, ಸೋಫಾ, ಮಂಚದ ಮೇಲೆ ಕುಳಿತು ದ್ಯಾನ ಪೂಜೆಗಳನ್ನು ಮಾಡಬೇಡಿ, ಯಾವ ಫಲವನ್ನೂ ನೀಡುವುದಿಲ್ಲ.

ಈ ಸುದ್ದಿ ಓದಿ:- ನವಿಲುಗರಿಯನ್ನು ಮನೆಯಲ್ಲಿ ಇಲ್ಲಿಟ್ಟರೆ ಹಣಕ್ಕೆ ಕೊರತೆ ಬರಲ್ಲ..

* ಸೂರ್ಯೋದಯಕ್ಕೆ ಮುಂಚಿತವಾಗಿಯೇ ಹಾಸಿಗೆಯಿಂದ ಏಳುವ ಅಭ್ಯಾಸ ಮಾಡಿಕೊಳ್ಳಿ ಮುಸ್ಸಂಜೆ ವೇಳೆ ಸೂರ್ಯೋದಯದ ಸಮಯದಲ್ಲಿ ಮಲಗಬೇಡಿ ಹಾಗೆ ಮಾಡಿದರೆ ದರಿದ್ರಲಕ್ಷ್ಮೀ ಮನೆಯಲ್ಲಿ ತಾಂಡವವಾಡುತ್ತಾಳೆ.
* ಸುಮಂಗಲಿಯರ ಬೈತಲೆಯಲ್ಲಿ ಯಾವಾಗಲ ಕುಂಕುಮ ಇರದೇ ಇರಬಾರದು.
* ಎರಡು ಕೈಗಳಿಂದಲೂ ತಲೆಯನ್ನು ಕೆರೆದುಕೊಳ್ಳಬಾರದು.
* ಯಾವುದೇ ಕಾರಣಕ್ಕೂ ಸಂಧ್ಯಾ ಕಾಲದಲ್ಲಿ ಕಣ್ಣೀರು ಹಾಕಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ದೇವರಲ್ಲಿ ಹರಿಕೆ ಹೊತ್ತು ನೀವು ಮರೆತಿರುವಿರೆ.! ಹರಿಕೆ ತೀರಿಸಲಾಗದೆ ಕಷ್ಟಗಳು ಎದುರಾಗುತ್ತಿದೆಯೇ.? ಇದಕ್ಕೆಲ್ಲಾ ಪರಿಹಾರ ಇಲ್ಲಿದೆ ನೋಡಿ

 

ನಮಗೆ ಕಷ್ಟಗಳು ಬಂದಾಗ ಕಷ್ಟಗಳನ್ನು ನಿವಾರಿಸಲು ದೇವಸ್ಥಾನಕ್ಕೆ ತೆರಳಿ ದೇವರಿಗೆ ಹರಕೆಗಳನ್ನು ಹೊರುತ್ತೇವೆ ಅಥವಾ ಮನೆ ದೇವರಿಗೆ ಹರಕೆಯನ್ನು ಹೊರುತ್ತೇವೆ, ಕಷ್ಟಗಳು ತೀರಿದ ನಂತರ ಹರಕೆಯನ್ನು ತೀರಿಸದೇ ಮರೆತುಬಿಡುತ್ತೇವೆ. ಇದರಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ನಾವು ಮಾಡುವ ಕೆಲಸಗಳಿಗೆ ಅಡಚಣೆ ಉಂಟಾಗುತ್ತದೆ.

* ನಿಮ್ಮ ಮನೆ ದೇವರಿಗೆ ಹರಿಕೆಯನ್ನು ಹೊತ್ತಲ್ಲಿ ಮೊದಲು ನಿಮ್ಮ ಮನೆದೇವರಿಗೆ ಹರಿಕೆಯನ್ನು ತೀರಿಸಿ.
* ನೀವು ದೇವರಲ್ಲಿ ಹರಿಕೆ ಹೊರುವ ಮುನ್ನ ನಿಮಗೆ ಹರಿಕೆ ತೀರಿಸಲು ಸಾಧ್ಯ ಆಗುವುದಾದರೆ ಮಾತ್ರ ಅಂತಹವುದನ್ನು ಹರಿಕೆಯನ್ನು ಮಾಡಿಕೊಳ್ಳಿ.
* ನೀವು ದೇವರಲ್ಲಿ ಹರಿಕೆಯನ್ನು ಹೊತ್ತ ನಂತರ ಅದನ್ನು ಒಂದು ಪುಸ್ತಕದಲ್ಲಿ ಬರೆದು ದೇವರ ಮನೆಯಲ್ಲಿ ಇಡಿ.

ಈ ಸುದ್ದಿ ಓದಿ:-ಅಕ್ಕಿಯಲ್ಲಿ ಹುಳ ಆಗಿದ್ಯಾ? ಹೀಗೆ ಮಾಡಿ ಎರಡು ವರ್ಷ ಆದ್ರೂ ಅಕ್ಕಿ ಏನೂ ಆಗಲ್ಲ.!

* ನೀವು ಯಾರಿಗಾದರೂ ಅನಾರೋಗ್ಯದ ಸಮಸ್ಯೆಗೆ ಹರಿಕೆಯನ್ನು ಹೊತ್ತಿದ್ದರೆ, ನೀವು ಹರಿಕೆಯನ್ನು ತೀರಿಸದೆ ಹೋದರೆ ಅವರಿಗೆ ಪದೇ ಪದೇ ಅನಾರೋಗ್ಯದ ಸಮಸ್ಯೆ ಕಾಡುವುದು.
* ನೀವು ಯಾವುದಾದರೂ ದೇವರುಗಳಿಗೆ ಮುಡುಪನ್ನು ಕಟ್ಟಿ ಮರೆತಿದ್ದೀ ರವಾದರೆ ಹರಿಯುವ ನೀರಿನಲ್ಲಿ ಅಥವಾ ಬಾವಿಯಲ್ಲಿ ಅದನ್ನು ಬಿಟ್ಟು ಈ ಮುಡುಪು ಕಟ್ಟಿರುವ ದೇವರಿಗೆ ಸೇರಲಿ ಎಂದು ಕೈ ಮುಗಿದು ಪ್ರಾರ್ಥನೆಯನ್ನು ಸಲ್ಲಿಸಿ.

* ನೀವು ಕೆಲಸ ಸಿಗಲಿ ಎಂದು ಹರಿಕೆ ಹೊತ್ತಿದ್ದರೆ ಕೆಲಸ ಸಿಕ್ಕ ನಂತರ ಹರಿಕೆ ತೀರಿಸದೆ ಹೋದರೆ ಕೆಲಸದಲ್ಲಿ ಕಿರಿಕಿರಿ ಸಂಬಳ ಸರಿಯಾಗಿ ಕೊಡದಿರುವುದು, ಕೆಲಸದ ಸ್ಥಳದಲ್ಲಿ ಯಜಮಾನನ ಕಿರುಕುಳ ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ.
* ನೀವು ಮನೆ ಕಟ್ಟಲು ಏನಾದರೂ ಹರಿಕೆಯನ್ನು ಹೊತ್ತಿದ್ದರೆ ಅದನ್ನು ತೀರಿಸದಿದ್ದರೆ ಮನೆಯು ಪೂರ್ಣವಾಗದೆ ಅಡಚಣೆಯುಂಟಾಗುವುದು. ನೀವು ಮನೆಯನ್ನು ಕಟ್ಟಿದ ನಂತರವೂ ಸಹ ಮನೆಯಿಂದ ಏನಾದರೂ ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ.

ಈ ಸುದ್ದಿ ಓದಿ:-ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಮುಖ್ಯ ಕಾರಣಗಳು……!!

* ಒಂದು ವೇಳೆ ನಮ್ಮ ಹಿರಿಯರು ಹೊತ್ತ ಹರಿಕೆಯನ್ನು ಅವರ ಮಕ್ಕಳು ಅಥವಾ ಮೊಮ್ಮೊಕ್ಕಳು ತೀರಿಸಬಹುದಾಗಿರುತ್ತದೆ. ಇದರಿಂದ ನಮ್ಮ ಹಿರಿಯರಿಗೂ ದೋಷಗಳು ಹೊರಟುಹೋಗಿ ನಮಗೂ ಸಹ ದೈವ ಶಾಪದಿಂದ ಮುಕ್ತಿ ದೊರೆಯುತ್ತದೆ.
* ನೀವು ಮುಡುಪನ್ನು ಯಾವ ದೇವರಿಗೆ ಕಟ್ಟಿರುತ್ತೀರಿ ಎಂದು ಕೆಲವು ದಿನಗಳ ನಂತರ ಮರೆತು ಹೋಗುತ್ತೀರಿ ಹೀಗೆ ಆಗದಿರಲು ಒಂದು ಡಬ್ಬಿಯಲ್ಲಿ ಅದನ್ನು ಇಟ್ಟು ಒಂದು ಸಣ್ಣ ಚೀಟಿಯಲ್ಲಿ ಯಾವ ದೇವರಿಗೆ ಏತಕ್ಕಾಗಿ ಮುಡುಪನ್ನು ಕಟ್ಟಿರುತ್ತೀರ ಎಂದು ವಿವರವಾಗಿ ಬರೆದು ಡಬ್ಬಿಯಲ್ಲಿ ಇಡಿ.

* ಕಷ್ಟಗಳು ನಿಮ್ಮನ್ನು ಕಾಡುತ್ತಿದ್ದರೆ, ನಿಮ್ಮ ತಂದೆ, ತಾಯಿ ಅಥವಾ ಅಜ್ಜ ಅಜ್ಜಿಯರೇನಾದರು ಹರಿಕೆ ಹೊತ್ತಿದ್ದರೆ ಅವರು ಇಲ್ಲದಿದ್ದರೆ,ನೀವು ಹೀಗೆ ಮಾಡಿ ಮನೆಯನ್ನು ಸ್ವಚ್ಚಗೊಳಿಸಿ ಸಾಯಂಕಾಲ ಗೋಧೂಳಿ ಸಮಯ ದಲ್ಲಿ ದೇವರಲ್ಲಿ ನಮ್ಮ ತಂದೆ ತಾಯಂದಿರು ಯಾವದೇವರಿಗೆ ಹರಿಕೆ ಯನ್ನು ಹೊತ್ತಿದ್ದಾರೋ ಅವರು ಮರೆತಿರುತ್ತಾರೆ ಆದ್ದರಿಂದ ಅವರನ್ನು ಕ್ಷಮಿಸಿ ನಮಗೆ ಕಷ್ಟಗಳು ಎದುರಾಗದಂತೆ ನಮ್ಮನ್ನು ಕಾಪಾಡಿ ಎಂದು ಪ್ರಾರ್ಥಿಸಿದಲ್ಲಿ ಅದರ ದೋಷ ನಿವಾರಣೆಯಾಗುತ್ತದೆ.

ಈ ಸುದ್ದಿ ಓದಿ:-ಮನೆಯಲ್ಲಿ ಸುಖ ಸಂತೋಷ ಮತ್ತು ಸಮೃದ್ಧಿಗಾಗಿ ಈ 40 ವಾಸ್ತು ಸಲಹೆ ಪಾಲಿಸಿ.!

ಹೀಗೆ ಮೇಲೆ ಹೇಳಿದ ಇಷ್ಟು ವಿಧಾನಗಳನ್ನು ಪ್ರತಿಯೊಬ್ಬರು ತಿಳಿದುಕೊಂಡು ನಿಮ್ಮ ಕಷ್ಟದ ಸಂದರ್ಭದಲ್ಲೂ ಯಾವ ಪರಿಹಾರವನ್ನು ಮಾಡಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಂಡು ಆ ಪರಿಹಾರ ಮಾಡುವುದರ ಮೂಲಕ ನಿಮ್ಮ ಕಷ್ಟದ ಪರಿಸ್ಥಿತಿಗಳನ್ನು ದೂರ ಮಾಡಿ ಕೊಳ್ಳುವುದು ಒಳ್ಳೆಯದು ಇಲ್ಲವಾದರೆ ಮೇಲೆ ಹೇಳಿದಂತೆ ಇನ್ನೂ ಹಲವಾರು ರೀತಿಯ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಇಂತಹ ಕೆಲವೊಂದಷ್ಟು ಉತ್ತಮವಾದ ಮಾಹಿತಿಗಳನ್ನು ತಿಳಿದುಕೊಂಡಿರುವುದು ತುಂಬಾ ಒಳ್ಳೆಯದು.

 

ಟೀ ಸ್ಟ್ರೈನರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸುವ ಸರಳ ವಿಧಾನ ಇಲ್ಲಿದೆ ನೋಡಿ.! ಹೊಸದರಂತೆ‌ ಕಾಣುತ್ತದೆ.!

 

ಪ್ರತಿದಿನ ನಾವು ಟೀ ಸ್ಟ್ರೈನರ್ ಅನ್ನು ಉಪಯೋಗಿಸುತ್ತಿರುತ್ತೇವೆ ಪ್ರತಿನಿತ್ಯ ಕಾಫಿ ಟೀ ಅನ್ನು ನಾವು ಸೋಸುವುದಕ್ಕೆ ಟೀ ಸ್ಟ್ರೈನರ್ ಅನ್ನು ಉಪಯೋಗಿಸುತ್ತಿರುತ್ತೇವೆ. ಇದರಿಂದ ಆ ಒಂದು ಸ್ಟ್ರೇನರ್ ನಲ್ಲಿ ಒಂದು ರೀತಿಯ ಕಪ್ಪು ಕಲೆ ಕುಳಿತಿರುತ್ತದೆ ಅದನ್ನು ನಾವು ಪ್ರತಿನಿತ್ಯ ಸ್ವಚ್ಛವಾಗಿ ತೊಳೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಬೇರೆ ಕೆಲಸಗಳು ಇರುವುದರಿಂದ ತಕ್ಷಣಕ್ಕೆ ನಾವು ಕಾಫಿ ಸೋಸಿ ಅದನ್ನು ಹಾಗೆ ತೊಳೆದು ಇಡುತ್ತಿರುತ್ತೇವೆ.

ಆದರೆ ಕೆಲವೊಂದಷ್ಟು ಜನ ಅದನ್ನು ಕೆಲವೊಂದು ವಿಧಾನ ಅನುಸರಿಸುವುದರ ಮೂಲಕ ತಕ್ಷಣವೇ ಅದನ್ನು ಸ್ವಚ್ಛವಾಗಿ ತೊಳೆದು ಇಟ್ಟುಕೊಳ್ಳುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಅದನ್ನು ತಕ್ಷಣಕ್ಕೆ ಸಂಪೂರ್ಣವಾಗಿ ಸ್ವಚ್ಛ ಮಾಡುವುದಿಲ್ಲ ಏಕೆಂದರೆ ಅವರಿಗೆ ಬೇರೆ ಕೆಲಸ ಹೆಚ್ಚಿರುತ್ತದೆ ಆದ್ದರಿಂದ.

ಹಾಗಾದರೆ ಈ ದಿನ ಟೀ ಸ್ಟ್ರೈನರ್ ಅನ್ನು ನಾವು ಹೇಗೆ ಸ್ವಚ್ಛ ಮಾಡುವು ದು ಹಾಗೂ ಯಾವ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಅದನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಈ ಸುದ್ದಿ ಓದಿ:- ಅಕ್ಕಿಯಲ್ಲಿ ಹುಳ ಆಗಿದ್ಯಾ? ಹೀಗೆ ಮಾಡಿ ಎರಡು ವರ್ಷ ಆದ್ರೂ ಅಕ್ಕಿ ಏನೂ ಆಗಲ್ಲ.!

ಮೊದಲನೆಯದಾಗಿ ಇದನ್ನು ಸ್ವಚ್ಛ ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ತಿಳಿಯೋಣ.

* ಒಂದರಿಂದ ಎರಡು ಚಮಚ ಫ್ರಿಲ್ ಲಿಕ್ವಿಡ್
* ಎರಡು ಚಮಚ ಅಡುಗೆ ಸೋಡಾ
ಈ ಎರಡು ಪದಾರ್ಥ ಇದ್ದರೆ ಸಾಕು ನಾವು ಟೀ ಸ್ಟೀಲ್ ಸ್ಟ್ರೈನರ್ ಅನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಬಹುದು. ಹಾಗಾದರೆ ಯಾವ ವಿಧಾನ ಅನುಸರಿಸಿ ಇದನ್ನು ಸ್ವಚ್ಛ ಮಾಡಬಹುದು ಎಂದು ಈ ಕೆಳಗೆ ನೋಡೋಣ.

ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದನ್ನು ಚೆನ್ನಾಗಿ ಬಿಸಿ ಮಾಡಲು ಬಿಡಬೇಕು ಆನಂತರ ಅದಕ್ಕೆ ಎರಡು ಚಮಚ ಅಡುಗೆ ಸೋಡಾ ಹಾಗೂ ಎರಡು ಚಮಚ ಫ್ರಿಲ್ ಲಿಕ್ವಿಡ್ ಇಷ್ಟನ್ನು ಹಾಕಿ ಚೆನ್ನಾಗಿ ಕುದಿಸಿಕೊಂಡ ನಂತರ ಸ್ಟೀಲ್ ಸ್ಟ್ರೈನರ್ ಅನ್ನು ಅದರ ಒಳಗಡೆ ಹಾಕಿ ಐದರಿಂದ 10 ನಿಮಿಷ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:- ನವಿಲುಗರಿಯನ್ನು ಮನೆಯಲ್ಲಿ ಇಲ್ಲಿಟ್ಟರೆ ಹಣಕ್ಕೆ ಕೊರತೆ ಬರಲ್ಲ..

ಆನಂತರ ಒಂದು ಚಮಚ ಫ್ರಿಲ್ ಲಿಕ್ವಿಡ್ ಹಾಕಿ ಒಂದು ಹಳೆಯ ಬ್ರಷ್ ಸಹಾಯದಿಂದ ಬಿಸಿ ಮಾಡಿದಂತಹ ಈ ಸ್ಟ್ರೈನರ್ ಅನ್ನು ಒಂದು ಕಡೆಯಿಂದ ಉಜ್ಜಿದರೆ ಸಾಕು ಅದರಲ್ಲಿ ಇರುವಂತಹ ಕಪ್ಪು ಕಲೆ ಎಲ್ಲವೂ ಕೂಡ ಸಂಪೂರ್ಣವಾಗಿ ಹೋಗುತ್ತದೆ. ಈ ವಿಧಾನ ಬಹಳ ಸುಲಭವಾಗಿದ್ದು ಯಾವುದೇ ರೀತಿಯ ಹೆಚ್ಚಿನ ಸಮಯ ತೆಗೆದುಕೊಳ್ಳು ವುದಿಲ್ಲ ಹಾಗೂ ಉಜ್ಜಿ ತಿಕ್ಕಿ ತೊಳೆಯುವ ಅವಶ್ಯಕತೆಯೂ ಇರುವುದಿಲ್ಲ

ಕೇವಲ ಕಡಿಮೆ ಪದಾರ್ಥಗಳನ್ನು ಉಪಯೋಗಿಸಿ ಕಡಿಮೆ ಸಮಯದ ಲ್ಲಿಯೇ ಟೀ ಸ್ಟ್ರೈನರ್ ಅನ್ನು ಸುಲಭವಾಗಿ ಸ್ವಚ್ಚ ಮಾಡಬಹುದು. ಸ್ಟೀಲ್ ಸ್ಟ್ರೈನರ್ ಅನ್ನು ಮಾತ್ರ ನಾವು ಈ ವಿಧಾನದಲ್ಲಿ ತೊಳೆಯ ಬಹುದು. ಈ ವಿಧಾನ ಬಹಳ ಸುಲಭವಾಗಿದ್ದು ಮನೆಯಲ್ಲಿರುವಂತಹ ಮಹಿಳೆಯರು ಈ ವಿಧಾನ ಅನುಸರಿಸುವುದರಿಂದ ನಿಮ್ಮ ಸಮಯ ಹಾಗೂ ನಿಮ್ಮ ಶ್ರಮ ಎರಡನ್ನು ಸಹ ಕಡಿಮೆ ಮಾಡಿಕೊಳ್ಳುವುದು.

ಈ ಸುದ್ದಿ ಓದಿ:- ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಮುಖ್ಯ ಕಾರಣಗಳು……!!

ಆದ್ದರಿಂದ ಈ ವಿಧಾನ ಅನುಸರಿಸುವುದು ತುಂಬಾ ಒಳ್ಳೆಯದು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ ನಾವು ಪ್ರತಿನಿತ್ಯ ಉಪಯೋಗಿಸುವಂತಹ ಪ್ರತಿಯೊಂದು ವಸ್ತುಗಳನ್ನು ಸಹ ನಾವು ಆದಷ್ಟು ಪ್ಲಾಸ್ಟಿಕ್ ಮುಕ್ತವಾಗಿ ಉಪಯೋಗಿಸಬೇಕು. ಅಂದರೆ ಪ್ಲಾಸ್ಟಿಕ್ ಪದಾರ್ಥವನ್ನು ಉಪಯೋಗಿಸದೆ ಇಂತಹ ಸ್ಟೀಲ್ ಹಿತ್ತಾಳೆ ತಾಮ್ರ ಇಂತಹ ಕೆಲವೊಂದಷ್ಟು ವಸ್ತುಗಳನ್ನು ಉಪಯೋಗಿಸು ವುದು ತುಂಬಾ ಒಳ್ಳೆಯದು. ಹಾಗೂ ಅದು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾ ಒಳ್ಳೆಯದು.

ಅಕ್ಕಿಯಲ್ಲಿ ಹುಳ ಆಗಿದ್ಯಾ? ಹೀಗೆ ಮಾಡಿ ಎರಡು ವರ್ಷ ಆದ್ರೂ ಅಕ್ಕಿ ಏನೂ ಆಗಲ್ಲ.!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಪ್ರತಿನಿತ್ಯ ಬಳಸುವಂತಹ ಅಡುಗೆ ಪದಾರ್ಥ ಯಾವುದು ಎಂದರೆ ಅದು ಅಕ್ಕಿ. ಅಕ್ಕಿ ಇಲ್ಲ ಎಂದರೆ ನಮ್ಮ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವೇ ಇಲ್ಲ ಎಂದೇ ಹೇಳ ಬಹುದು ಅಷ್ಟೊಂದು ಪ್ರಾಮುಖ್ಯತೆಯನ್ನು ಅಕ್ಕಿ ಪಡೆದಿದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಮ್ಮೆ ನಾವು ನಮ್ಮ ಮನೆಯಲ್ಲಿ ಅಕ್ಕಿಯನ್ನು ಇಟ್ಟಂತಹ ಸಂದರ್ಭದಲ್ಲಿ ಅದರಲ್ಲಿ ಕೆಲವೊಂದು ಬಿಳಿ ಹುಳಗಳು ಹಾಗೆ ಕಪ್ಪು ಹುಳಗಳು ಕಾಣಿಸಿಕೊಳ್ಳುತ್ತಿರುತ್ತದೆ.

ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣಗಳು ಏನು ಎಂದರೆ ನಮ್ಮ ವಾತಾವರಣದಲ್ಲಿ ಉಂಟಾಗುವ ಬದಲಾವಣೆ. ಅತಿಯಾಗಿ ತಣ್ಣನೆಯ ಅಂಶ ಹಾಗೂ ಅತಿಯಾದ ಬಿಸಿಲಿನ ಅಂಶ ಇದ್ದರೂ ಕೂಡ ಅಕ್ಕಿಯಲ್ಲಿ ಈ ರೀತಿಯ ಕೆಲವು ಹುಳಗಳು ಕಾಣಿಸಿಕೊಳ್ಳುತ್ತಿರುತ್ತದೆ. ಆದರೆ ಕೆಲವೊಂದಷ್ಟು ಜನ ಅದನ್ನು ಹೇಗೆ ದೂರ ಮಾಡಬೇಕು ಎನ್ನುವಂತಹ ಮಾಹಿತಿ ತಿಳಿಯದೆ ಕೆಲವೊಂದಷ್ಟು ಜನ ಅದನ್ನು ಆಚೆ ಬಿಸಾಡುತ್ತಿರುತ್ತಾರೆ.

ಈ ಸುದ್ದಿ ಓದಿ:- ಲಕ್ಷ್ಮೀದೇವಿಗೆ ಇಷ್ಟವಾಗದ ಗುಣಗಳಿವು, ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ಇಂದೇ ಬದಲಾಗಿ.!

ಆದರೆ ಇನ್ನು ಕೆಲವೊಂದಷ್ಟು ಜನ ಕೆಲವೊಂದು ವಿಧಾನವನ್ನು ಅನುಸರಿಸುವುದರ ಮೂಲಕ ಅದನ್ನು ಮತ್ತೆ ಬಳಕೆ ಮಾಡುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಕೆಲವೊಂದು ಟಿಪ್ಸ್ ಗಳನ್ನು ನೀವು ಅನುಸರಿಸಿದರೆ ಅಕ್ಕಿಯಲ್ಲಿ ಯಾವುದೇ ರೀತಿಯ ಹುಳಬಾರದಂತೆ ಅದನ್ನು ಸುರಕ್ಷಿತವಾಗಿ ನೋಡಿಕೊಳ್ಳಬಹುದು.

ಹಾಗಾದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕ ಅಕ್ಕಿಯಲ್ಲಿ ಬರುವಂತಹ ಹುಳಗಳನ್ನು ಸಂಪೂರ್ಣವಾಗಿ ದೂರ ಮಾಡಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಅದಕ್ಕೂ ಮೊದಲು ಅಕ್ಕಿಯಲ್ಲಿ ಹುಳ ಬರದೆ ಇರಬೇಕು ಎಂದರೆ ಯಾವ ಕೆಲವು ವಿಧಾನಗಳನ್ನು ನಾವು ಅನುಸರಿಸಬೇಕಾಗುತ್ತದೆ ಎಂದು ನೋಡುವುದಾದರೆ.

* ಅಕ್ಕಿಯನ್ನು ತುಂಬಿಸುವಂತಹ ಯಾವುದೇ ಡಬ್ಬಿ ಇರಲಿ ಅದರಲ್ಲಿ ಯಾವುದೇ ರೀತಿಯ ನೀರಿನ ಅಂಶ ಇಲ್ಲದೆ ಇರುವ ಹಾಗೆ ಚೆನ್ನಾಗಿ ಒರೆಸಿ ಆನಂತರ ಸ್ವಲ್ಪ ಅಕ್ಕಿಯನ್ನು ಹಾಕಿ ಅದರ ಮೇಲೆ ಕಹಿಬೇವಿನ ಎಲೆಯನ್ನು ಇಡಬೇಕು, ಈ ರೀತಿ ಇಟ್ಟರೆ ಅದರಲ್ಲಿ ಇರುವಂತಹ ಕಹಿ ಅಂಶಕ್ಕೆ ಅಕ್ಕಿಯಲ್ಲಿ ಯಾವುದೇ ರೀತಿಯ ಹುಳ ಬರುವುದಿಲ್ಲ.

ಈ ಸುದ್ದಿ ಓದಿ:- ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು..? ಬಂಗು ಬಂದರೆ ಏನು ದೋಷ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಈ ರೀತಿ ಕಹಿಬೇವಿನ ಸೊಪ್ಪನ್ನು ಇಟ್ಟ ಮೇಲೆ ಅದರ ಮೇಲೆ ಅಕ್ಕಿಯನ್ನು ಹಾಕಿ ಮುಚ್ಚಿಡಬೇಕು. ಆನಂತರ ಸ್ವಲ್ಪ ಕಹಿಬೇವಿನ ಸೊಪ್ಪು ಅಕ್ಕಿ ಹೀಗೆ ಸ್ವಲ್ಪ ಸ್ವಲ್ಪ ಭಾಗಕ್ಕೆ ಕಹಿಬೇವಿನ ಸೊಪ್ಪನ್ನು ಹಾಕುವುದರಿಂದ ಅಕ್ಕಿಯಲ್ಲಿ ಹುಳ ಬರುವುದನ್ನು ತಪ್ಪಿಸಬಹುದು.

* ಅದೇ ರೀತಿಯಾಗಿ ಮೇಲೆ ಹೇಳಿದ ವಿಧಾನದಲ್ಲಿಯೇ ಕಹಿಬೇವಿನ ಬದಲು ಒಣಮೆಣಸಿನಕಾಯಿಯನ್ನು ಸಹ ಇದೇ ರೀತಿಯಾಗಿ ಇಟ್ಟು ಅಕ್ಕಿಯನ್ನು ತುಂಬಿಸಬೇಕು ಈ ವಿಧಾನ ಅನುಸರಿಸುವುದರಿಂದಲೂ ಕೂಡ ಅದರಲ್ಲಿರುವ ಘಾಟಿನ ಅಂಶಕ್ಕೆ ಅಕ್ಕಿಯಲ್ಲಿ ಹುಳ ಬರುವುದಿಲ್ಲ.

ಹಾಗೂ ಪಲಾವ್ ಎಲೆಯನ್ನು ಸಹ ಅಕ್ಕಿಯ ಒಳಗಡೆ ಹಾಕಿ ಇಡುವು ದರಿಂದ ಅದರಲ್ಲಿ ಇರುವಂತಹ ಒಂದು ವಾಸನೆಗೆ ಅಕ್ಕಿಯಲ್ಲಿ ಹುಳ ಬರುವುದಿಲ್ಲ ಈ ರೀತಿಯಾಗಿ ಅಡುಗೆ ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಉಪಯೋಗಿಸುವುದರ ಮೂಲಕ ನಾವು ಅಕ್ಕಿಯಲ್ಲಿ ಬರುವಂತಹ ಹುಳುವನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದು.

ಈ ಸುದ್ದಿ ಓದಿ:- ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೆ ಇರಲು ಮುಖ್ಯ ಕಾರಣಗಳು……!!

* ಇದರ ಜೊತೆ ಕರ್ಪೂರವನ್ನು ಒಂದು ಟಿಶ್ಯೂ ಪೇಪರ್ ನಲ್ಲಿ ಹಾಕಿ ಅದನ್ನು ಸಹ ಅಕ್ಕಿ ಒಳಗಡೆ ಇಡುವುದರಿಂದ ಅದರಲ್ಲಿರುವಂತಹ ಒಂದು ವಾಸನೆಗೂ ಸಹ ಅಕ್ಕಿಯಲ್ಲಿ ಯಾವುದೇ ರೀತಿಯ ಬಿಳಿ ಹುಳ ಹಾಗೂ ಕಪ್ಪು ಹುಳ ಬರುವುದಿಲ್ಲ. ಹಾಗಾಗಿ ಮಹಿಳೆಯರು ಅಡುಗೆ ಮನೆಯಲ್ಲಿ ಇಂತಹ ಕೆಲವೊಂದಷ್ಟು ಟಿಪ್ಸ್ ಗಳನ್ನು ಅನುಸರಿಸುವುದ ರಿಂದ ನಿಮ್ಮ ಅಡುಗೆ ಮನೆಯಲ್ಲಿ ಆಗುವಂತಹ ಕೆಲವೊಂದು ಸಮಸ್ಯೆಗಳನ್ನು ನೀವೇ ಸರಿಪಡಿಸಿಕೊಳ್ಳಬಹುದು.

ಲಕ್ಷ್ಮೀದೇವಿಗೆ ಇಷ್ಟವಾಗದ ಗುಣಗಳಿವು, ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ಇಂದೇ ಬದಲಾಗಿ.!

ಲಕ್ಷ್ಮೀದೇವಿಯ ಆಶೀರ್ವಾದವಿದ್ದರೆ ಬದುಕಿನಲ್ಲಿ ಎಲ್ಲವೂ ಹಸನಾಗಿರುತ್ತದೆ. ಆದರೆ ನಮ್ಮಲ್ಲಿರುವ ಕೆಲವು ಅಭ್ಯಾಸಗಳು ಲಕ್ಷ್ಮೀದೇವಿಯ ಕೋಪಕ್ಕೆ ಗುರಿಯಾಗುವಂತೆ ಮಾಡುತ್ತವೆ. ಇಂತಹ ಅಭ್ಯಾಸಗಳು ನಿಮ್ಮಲ್ಲೂ ಇದ್ದರೆ ಇಂದೇ ಬದಲಾಗಿ, ಇಲ್ಲದಿದ್ದರೆ ಹಣಕಾಸಿನ ಕೊರತೆ ಕಾಡುವ ಜೊತೆಗೆ ಮನೆಯಲ್ಲಿ ನೆಮ್ಮದಿಯೂ ಇರುವುದಿಲ್ಲ.

ಲಕ್ಷ್ಮೀ ದೇವಿಯು ಸಂಪತ್ತಿನ ಜೊತೆಗೆ ಮನೆಗೆ ಸುಖ, ಶಾಂತಿ, ನೆಮ್ಮದಿಯನ್ನೂ ತರುತ್ತಾಳೆ ಅವಳ ಆಶೀರ್ವಾದವಿದ್ದರೆ ಬದುಕಿನಲ್ಲಿ ಸೋಲು ಎಂಬು ದಿರುವುದಿಲ್ಲ. ಆದರೆ ನೀವು ಮಾಡುವ ಸಣ್ಣ ತಪ್ಪುಗಳು, ಅನುಸರಿಸುವ ಅಭ್ಯಾಸಗಳು ಲಕ್ಷ್ಮೀದೇವಿಯ ಮುನಿಸ್ಸಿಗೆ ಕಾರಣವಾಗುತ್ತದೆ. ಇದರಿಂದ ಆಕೆ ನಿಮ್ಮ ಮನೆ ಬಿಟ್ಟು ಹೊರ ನಡೆಯುತ್ತಾಳೆ.

ಇದರಿಂದ ನೀವು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಅಭ್ಯಾಸಗಳು ನಿಮ್ಮಲ್ಲೂ ಇದ್ದರೆ ನಿಮಗೆ ಲಕ್ಷ್ಮೀಯ ಆಶೀರ್ವಾದ ಸಿಗುವುದಿಲ್ಲ. ಅಲ್ಲದೇ ದುರಾದೃಷ್ಟ ನಿಮ್ಮನ್ನು ಹಿಂಬಾಲಿಸುತ್ತದೆ ಹಾಗಾದರೆ ಲಕ್ಷ್ಮೀದೇವಿಗೆ ಯಾವ ಅಭ್ಯಾಸಗಳು ಇಷ್ಟವಾಗುವುದಿಲ್ಲ ನೋಡಿ.

ಈ ಸುದ್ದಿ ಓದಿ:-ಪೊರಕೆ ವಿಚಾರದಲ್ಲಿ ಈ 7 ತಪ್ಪು ಖಂಡಿತಾ ಮಾಡಬೇಡಿ…!!

* ಮನೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳದೇ ಇರುವುದು:- ಕೆಲವರು ಪ್ರತಿದಿನ ಮನೆ ಗುಡಿಸುವುದು, ಒರೆಸುವುದು ಮಾಡಿ ಮನೆಯನ್ನು ನೀಟಾಗಿ ಇರಿಸಿಕೊಂಡಿರುತ್ತಾರೆ. ಆದರೆ ಕೆಲವರು ಶುದ್ಧ ಸೋಂಬೇರಿಗಳಾಗಿದ್ದು ಮನೆಯನ್ನು ಗಲೀಜಾಗಿ ಇರಿಸಿಕೊಂಡಿರುತ್ತಾರೆ. ಅಂತಹವರ ಮನೆಯಲ್ಲಿ ಲಕ್ಷ್ಮೀದೇವಿ ಎಂದಿಗೂ ನೆಲೆಸಲು ಇಷ್ಟ ಪಡುವುದಿಲ್ಲ. ಕೊಳಕು ತುಂಬಿರುವ ಮನೆಯಲ್ಲಿ ಬಡತನದ ದೇವಿ ನೆಲೆಸಿರುತ್ತಾಳೆ ಇದರಿಂದ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸುವಂತಾಗಬಹುದು.

* ಹೆಂಡತಿಗೆ ಗೌರವ ಕೊಡದೇ ಇರುವುದು:- ಮದುವೆಯ ನಂತರ ಪತಿ-ಪತ್ನಿ ಪರಸ್ಪರ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಬೇಕು. ಒಳ್ಳೆಯ ಸಮಯ ಕೆಟ್ಟ ಸಮಯ ಎರಡೂ ಸಂದರ್ಭಗಳಲ್ಲಿ ಜೊತೆಯಾಗಿ ನಿಲ್ಲಬೇಕು. ಪರಸ್ಪರರ ಭಾವನೆಗಳಿಗೆ ಬೆಲೆ ನೀಡಿ.

ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಿ. ಪ್ರೀತಿಯಿಂದ ಜೀವನ ನಡೆಸಿ, ಪರಸ್ಪರ ಗೌರವಿಸಿ. ಗಂಡನಾದವನು ಎಂದಿಗೂ ತಾನೇ ಮೇಲು, ತಾನು ಹೇಳಿದ್ದೇ ನಡೆಯಬೇಕು ಎಂಬ ದರ್ಪ ತೋರುವುದು, ಹೆಂಡತಿಗೆ ಗೌರವ
ನೀಡದೇ ಇರುವುದು ಮಾಡಿದರೆ ಅಂತಹ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಿರುವುದಿಲ್ಲ. ಅಂತಹ ವ್ಯಕ್ತಿಯ ಮೇಲೆ ಲಕ್ಷ್ಮೀದೇವಿ ಮುನಿಸಿ ಕೊಳ್ಳುತ್ತಾಳೆ.

ಈ ಸುದ್ದಿ ಓದಿ:-ಸಾಲ ಕೊಟ್ಟ ಹಣ ವಾಪಸ್ ಬರುತ್ತಿಲ್ಲ ಅಂದ್ರೆ ಹೀಗೆ ಮಾಡಿ ಸಾಕು ಅವರೇ ವಾಒಸ್ ತಂದು ಕೊಡ್ತಾರೆ.!

* ಸೂರ್ಯೋದಯದ ನಂತರವೂ ಮಲಗುವುದು :- ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗು ತ್ತಿವೆ. ಒತ್ತಡ ಮತ್ತು ನಿದ್ರೆಯ ಕೊರತೆಯಿಂದಾಗಿ, ಸೂರ್ಯ ಹುಟ್ಟಿದ ಎಷ್ಟೋ ಹೊತ್ತಿನ ನಂತರ ಎದ್ದೇಳುವವರು ಇದ್ದಾರೆ. ಆದರೆ ಸೂರ್ಯೋದಯದ ನಂತರವೂ ಮಲಗುವವರನ್ನು ಲಕ್ಷ್ಮೀದೇವಿ ಇಷ್ಟಪಡುವುದಿಲ್ಲ. ಇದರಿಂದ ನೀವು ಅವಳ ಕೋಪಕ್ಕೆ ಗುರಿಯಾಗಬಹುದು. ಅಲ್ಲದೇ ಹಲವು ತೊಂದರೆಗಳನ್ನು ಎದುರಿಸಬೇಕಾಗ ಬಹುದು. ನಿಮಗೆ ಸುರ್ಯೋದಯದ ನಂತರವೂ ಮಲಗುವ ಅಭ್ಯಾಸವಿದ್ದರೆ ಇಂದೇ ತ್ಯಜಿಸಿ.

* ಆಹಾರಕ್ಕೆ ಗೌರವ ನೀಡದೇ ಇರುವುದು:- ಆಹಾರವನ್ನು ವ್ಯರ್ಥ ಮಾಡಬೇಡಿ. ಅನ್ನವನ್ನು ಪರಬ್ರಹ್ಮ ಸ್ವರೂಪ ಎನ್ನುತ್ತಾರೆ. ಅನ್ನವನ್ನು ಎಂದಿಗೂ ಎಸೆಯಬಾರದು. ಆಹಾರಕ್ಕೆ ಅವಮಾನಿಸುವುದನ್ನು ಲಕ್ಷ್ಮೀ ದೇವಿಯು ಸಹಿಸುವುದಿಲ್ಲ. ಧಾನ್ಯಗಳನ್ನು ಗೌರವದಿಂದ ಕಾಣದ ಮನೆಯಲ್ಲಿ ಉಳಿಯಲು ಲಕ್ಷ್ಮೀದೇವಿ ಮನಸ್ಸು ಮಾಡುವುದಿಲ್ಲ ಎಂದು ಹೇಳಲಾಗುತ್ತದೆ ಮನೆಯಲ್ಲಿ ಸುಖ ಸಮೃದ್ಧಿ ತುಂಬಿರಲು ಮೊದಲು ಆಹಾರವನ್ನು ಗೌರವಿಸಬೇಕು.

* ಸುಳ್ಳು ಹೇಳಬೇಡಿ:- ಯಾರು ಸುಳ್ಳು ಹೇಳುತ್ತಾರೋ ಅವರಿಗೆ ಲಕ್ಷ್ಮೀದೇವಿಯು ಒಲಿಯಲು ಸಾಧ್ಯವಿಲ್ಲ. ಕೆಲವರು ತಮಗೆ ಬೇಕಾದುದನ್ನು ಪಡೆಯಲು ಇತರರಿಗೆ ಮೋಸ ಮಾಡುವ ಸಲುವಾಗಿ ಸಾಕಷ್ಟು ಸುಳ್ಳುಗಳನ್ನು ಹೇಳುತ್ತಾರೆ. ಇದರಿಂದ ಆ ಕ್ಷಣದಲ್ಲಿ ಅವರು ಗೆದ್ದರೂ ನಂತರದ ದಿನಗಳಲ್ಲಿ ಸಾಕಷ್ಟು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಈ ಸುದ್ದಿ ಓದಿ:-ಹೆಣ್ಣು ಮಕ್ಕಳು ತವರಿನಿಂದ ಈ ವಸ್ತುಗಳನ್ನು ತಂದರೆ ಅದೃಷ್ಟ ಬರುತ್ತದೆ.!

* ಹಿರಿಯರನ್ನು ಗೌರವಿಸಬೇಕು:- ತಂದೆ-ತಾಯಿ ಮತ್ತು ಹಿರಿಯರನ್ನು ಗೌರವಿಸಬೇಕು. ಆಗ ಮಾತ್ರ ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಪೊರಕೆ ವಿಚಾರದಲ್ಲಿ ಈ 7 ತಪ್ಪು ಖಂಡಿತಾ ಮಾಡಬೇಡಿ…!!

 

ಎಲ್ಲರ ಮನೆಯಲ್ಲಿಯೂ ಪೊರಕೆಯನ್ನು ಬಳಕೆ ಮಾಡುತ್ತೇವೆ. ಆದರೆ ಜ್ಯೋತಿಷ್ಯದಲ್ಲಿ ಪೊರಕೆ ಬಳಸಲು ಕೆಲ ನಿಯಮಗಳಿದೆ. ನಾವು ಆ ನಿಯಮಗಳನ್ನ ಮೀರಿದರೆ ಅನೇಕ ಸಮಸ್ಯೆಗಳನ್ನ ಅನುಭವಿಸ ಬೇಕಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಪೊರಕೆಗೆ ಅಪಾರ ಪ್ರಾಮುಖ್ಯತೆ ಇದೆ. ಇದರಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ಪೊರಕೆಯನ್ನ ನಾವು ಕಾಲಿನಿಂದ ಮುಟ್ಟುವುದಿಲ್ಲ ಅಥವಾ ಅದನ್ನ ಬಳಕೆ ಮಾಡುವಾಗ ಕೆಲ ವಿಚಾರಗಳನ್ನ ಪಾಲಿಸುತ್ತೇವೆ.

* ಮುಖ್ಯವಾಗಿ ನಾವು ಕಸ ಗುಡಿಸುವಾಗ ಯಾರಾದರೂ ಮನೆಯಿಂದ ಹೊರ ಹೊರಟಿದ್ದರೆ ಅದನ್ನು ಅಲ್ಲಿಯೇ ಅರ್ಧಕ್ಕೆ ನಿಲ್ಲಿಸಬೇಕು. ನಿಮಗೆ ಅವರು ಹೋಗುವ ವಿಚಾರ ಮೊದಲೇ ಗೊತ್ತಿದ್ದರೆ ಅವರು ಹೊರಡುವ ಮೊದಲು ಅಥವಾ ನಂತರವೇ ಗುಡಿಸುವುದು ಸೂಕ್ತ.

* ಏಕೆಂದರೆ ಯಾರಾದರೂ ಹೊರಗೆ ಹೋಗುವಾಗ ಮನೆ ಗುಡಿಸುವು ದರಿಂದ ಅವರು ಮಾಡಲು ಹೊರಟ ಕೆಲಸದಲ್ಲಿ ಸಮಸ್ಯೆ ಆಗುತ್ತದೆ. ಇದರ ಜೊತೆಗೆ ಅವರಿಗೆ ತೊಂದರೆ ಮಾಡಿದ ಕಾರಣದಿಂದ ನಿಮಗೂ ಆರ್ಥಿಕ ಸಮಸ್ಯೆಗಳಾಗುತ್ತದೆ ಎನ್ನಲಾಗುತ್ತದೆ.

ಈ ಸುದ್ದಿ ಓದಿ:-ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು..? ಬಂಗು ಬಂದರೆ ಏನು ದೋಷ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

* ಮನೆಯಿಂದ ಹೊರಗೆ ಹೋಗುವಾಗ ಹೇಗೆ ಕಸ ಗುಡಿಸಬಾರದೋ ಹಾಗೆಯೇ ಯಾವುದೇ ಕಾರಣಕ್ಕೂ ಪೊರಕೆಯನ್ನು ಅಡ್ಡ ಇಡಬಾರದು. ಮನೆಯಿಂದ ಹೊರಗೆ ಹೋಗುವವರು ಮುಂದೆ ಪೊರಕೆ ಕಾಣಿಸಬಾರದು ಎನ್ನಲಾಗುತ್ತದೆ.

* ಪೊರಕೆ ಹಳೆಯದಾದರೆ ಗುರುವಾರ ಮತ್ತು ಶುಕ್ರವಾರ ಮನೆಯಿಂದ ಹೊರಕ್ಕೆ ಹಾಕಬೇಡಿ. ಗುರುವಾರ ಶ್ರೀಮನ್ನಾರಾಯಣ ಮತ್ತು ಶುಕ್ರವಾರ ಲಕ್ಷ್ಮೀ ದೇವಿಯ ದಿನವಾಗಿದೆ. ಈ ದಿನ ಮನೆಯಿಂದ ಹೊರಕೆ ಹೊರ ಗಿಟ್ಟರೆ ಲಕ್ಷ್ಮೀ ಮನೆಯಿಂದ ಹೊರಗೆ ಹೋಗುತ್ತಾಳೆ ಎನ್ನಲಾಗುತ್ತದೆ.

* ಪೊರಕೆ ಖರೀದಿಗೂ ದಿನ ಇದೆ, ಮಂಗಳವಾರ ಅಥವಾ ಶನಿವಾರ ಪೊರಕೆ ಖರೀದಿಗೆ ಶುಭ ದಿನ ಎನ್ನಲಾಗುತ್ತದೆ. ಈ ದಿನ ಪೊರಕೆ ಖರೀದಿ ಮಾಡಿದರೆ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆಯಂತೆ ಸಂಪತ್ತು ಸಮೃದ್ಧಿಯಾಗಿರುತ್ತದೆಯಂತೆ.

ಈ ಸುದ್ದಿ ಓದಿ:-ಈ ರಾಶಿಯವರಿಗೆ ಗಜಕೇಸರಿ ರಾಜಯೋಗ ಪ್ರಾರಂಭ..!

* ವಾಸ್ತು ಪಂಡಿತರ ಪ್ರಕಾರ ಕೃಷ್ಣ ಪಕ್ಷದಲ್ಲೇ ಹೊಸ ಪೊರಕೆ ಖರೀದಿಸ ಬೇಕಂತೆ, ಶುಕ್ಲ ಪಕ್ಷದಲ್ಲಿ ಪೊರಕೆ ಖರೀದಿ ಸರಿಯಲ್ಲವಂತೆ.
* ಪೊರಕೆ ಮನೆಯಲ್ಲಿ ಎಲ್ಲೆಂದರಲ್ಲಿ ಇಡಬಾರದು. ಮನೆಯಲ್ಲಿ ಯಾರ ದೃಷ್ಟಿಯೂ ಬೀಳದ ಜಾಗದಲ್ಲಿ ಪೊರಕೆ ಇಡಬೇಕು.
* ಯಾವತ್ತಿಗೂ ಕೂಡ ಹಾಸಿಗೆ ಕೆಳಗಡೆ ಪೊರಕೆ ಇಡುವ ಪರಿಪಾಠ ಇಟ್ಟುಕೊಳ್ಳಬೇಡಿ .

* ಸೂರ್ಯಾಸ್ತದ ಬಳಿಕ ಯಾವತ್ತಿಗೂ ಪೊರಕೆ ಬಳಸಬಾರದು ಎಂದು ಹೇಳುತ್ತಾರೆ.
* ಕೆಲವರು ಕೋಪ ಬಂದಾಗ ಪೊರಕೆಯಲ್ಲಿ ಹೊಡೆದುಬಿಡುತ್ತಾರೆ ಯಾವುದೇ ಕಾರಣಕ್ಕೂ ಇಂತಹ ತಪ್ಪನ್ನು ಮಾಡಲೇಬೇಡಿ.
* ಪೊರಕೆಯನ್ನು ಕಾಲಿನಿಂದ ತುಳಿಯಬೇಡಿ ಅಥವಾ ಕಾಲಿನಿಂದ ಸರಿಸುವುದನ್ನು ಮಾಡಬೇಡಿ. ಪೊರಕೆಯನ್ನು ದಾಟಬಾರದು ಇವೆಲ್ಲಾ ನಿಶಿದ್ಧ.

* ಅಡುಗೆ ಮನೆ ಗುಡಿಸಲು ಪ್ರತ್ಯೇಕ ಪೊರಕೆ ಇಟ್ಟುಕೊಳ್ಳಿ ಇದು ತುಂಬಾ ಶುಭ ಎನ್ನಲಾಗುತ್ತದೆ.
* ಮನೆ ಒಳಗೆ ಮತ್ತು ಹೊರಗಡೆ ಗುಡಿಸಲು ಒಂದೇ ಪೊರಕೆ ಬಳಸಲೇ ಬೇಡಿ.
* ಯಾರಾದರೂ ಮನೆಯಿಂದ ಹೊರಹೋದ ತಕ್ಷಣ ಮನೆಯಲ್ಲಿ ಕಸ ಗುಡಿಸಬಾರದು ಕಾರಣ ಇದು ಯಾವುದೇ ಅಪಾಯಕ್ಕೆ ಕಾರಣ ಎಂದು ಪರಿಗಣಿಸಲಾಗಿದೆ.

ಈ ಸುದ್ದಿ ಓದಿ:-ಈ ಮರದ ಒಂದು ಕಡ್ಡಿ ಮನೆಯಲ್ಲಿದ್ದರೆ ಸಾಕು ನಿಮ್ಮ ಸಾಲಗಳೆಲ್ಲಾ ತೀರಿ ಕುಬೇರರಾಗುತ್ತೀರಿ.!

* ನೀವು ಮನೆಯನ್ನು ಬದಲಾಯಿಸಿದರೆ ಹೊಸ ಮನೆಯಲ್ಲಿ ಬಳಸಲು ಹೊಸ ಪೊರಕೆಯನ್ನು ಬಳಸಿ ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿ ಮಾಡುವುದು ಉತ್ತಮ ಹೆಜ್ಜೆ.
* ಮನೆಯಲ್ಲಿ ಕಸ ಗುಡಿಸುವ ಪೊರಕೆಯಿಂದ ನಿಮ್ಮ ಕಾಲುಗಳ ಧೂಳನ್ನು ಒರೆಸುವುದನ್ನು ತಪ್ಪಿಸಿ. ಏಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಮಾಡುವುದರಿಂದ ಲಕ್ಷ್ಮೀ ದೇವಿಯು ಕೋಪಗೊಳ್ಳುತ್ತಾರೆ ಎಂದು ನಂಬಲಾಗಿದೆ.
* ವಾಸ್ತು ಶಾಸ್ತ್ರದ ಪ್ರಕಾರ ದೀಪಾವಳಿ ಪರ್ವದಲ್ಲಿ ಪೊರಕೆಯನ್ನು ಖರೀದಿಸುವ ನಂಬಿಕೆಯೂ ಇದೆ.

https://youtu.be/ioyq-ODHyHA?si=Oov7RGBGqBMwa87o