Home Blog Page 220

ಕಿಚ್ಚ ಸುದೀಪ್ ತೆಗೆದುಕೊಂಡು ನಿರ್ಧಾರ ಅಚ್ಚರಿ ಮಾತ್ರ ಅಲ್ಲ ನನಗೆ ಅಪಾರ ನೋವನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತ ಪಡಿಸಿದ ನಟ ಪ್ರಕಾಶ್ ರಾಜ್.

 

ಈ ವರ್ಷದ ಆರಂಭದಿಂದಲೂ ಕೂಡ ಸುದೀಪ್ ಅವರ ರಾಜಕೀಯದ ಎಂಟ್ರಿ ಬಗ್ಗೆ ಸಾಕಷ್ಟು ಊಹಾಪೋಹಗಳ ಚರ್ಚೆ ನಡೆಯುತ್ತಿತ್ತು. ಕೆಲ ರಾಜಕೀಯ ಪ್ರಮುಖರ ಭೇಟಿ ವಿಷಯವನ್ನು ಇನ್ನಷ್ಟು ಗಂಭೀರಗೊಳಿಸಿತ್ತು. ಸದ್ಯಕ್ಕೆ ರಾಜ್ಯದಲ್ಲಿ ವಿಧಾನಸಭೆ ಎಲೆಕ್ಷನ್ ರಣಾಂಗಣ ಸಿದ್ಧವಾಗುತ್ತಿರುವುದರಿನಿಂದ ಸರ್ವಪಕ್ಷಗಳು ಕೂಡ ಸೆಲೆಬ್ರಿಟಿ ಗಳನ್ನು ಬಳಸಿಕೊಂಡು ಪ್ರಚಾರ ಕಾರ್ಯ ಮಾಡುವುದಕ್ಕೆ ಮುಂದಾಗಿವೆ.

ಈ ಬಗ್ಗೆ ಎಲ್ಲರ ದೃಷ್ಟಿ ಸುದೀಪ ಅವರ ನಡೆಯ ಕಡೆ ಇತ್ತು, ಏಪ್ರಿಲ್ 5 ರಂದು ಮಾನ್ಯ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ಸಮ್ಮುಖದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇದಕ್ಕೆಲ್ಲಾ ತೆರೆ ಬಿದ್ದಿದೆ. ನೆನ್ನೆ ಸುದೀಪ್ ಅವರು ತಮ್ಮ ರಾಜಕೀಯ ನಿಲುವು ಏನು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ ಆದರೆ ಅದಕ್ಕೂ ಹಿಂದೆ ಆದ ಕೆಲ ಬೆಳವಣಿಗೆಗಳ ಬಗ್ಗೆ ಹೇಳಲು ಇಚ್ಚಿಸುತ್ತಿದ್ದೇವೆ.

ಸುದೀಪ್ ಅವರು ಈ ಪತ್ರಿಕಾಗೋಷ್ಠಿಯಲ್ಲಿ ಪಾಲ್ಕೊಳ್ಳುವುದರ ಹಿಂದಿನ ದಿನ ಇದರ ಸೂಕ್ಷ್ಮ ಅರಿತ ಪ್ರಕಾಶ್ ರಾಜ್ ಅವರು ಸುದೀಪ್ ಅವರು ತಮ್ಮನ ತಾವು ಮಾರಿಕೊಳ್ಳುವ ವ್ಯಕ್ತಿತ್ವದವರಲ್ಲ ಎಂದು ಟ್ವೀಟ್ ಮಾಡಿದ್ದರು. ಆದರೆ ಮರುದಿನ ಸುದೀಪ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿರುವುದು ಪ್ರಕಾಶ್ ರಾಜ್ ಸೇರಿದಂತೆ ಅನೇಕರಿಗೆ ಶಾ’ಕ್ ನೀಡಿದೆ. ಸುದೀಪ್ ಅವರು ಪತ್ರಿಕಾಗೋಷ್ಠಿಯಲ್ಲಿ ಕೆಲ ಸ್ಪಷ್ಟತೆ ಕೂಡ ಕೊಟ್ಟಿದ್ದಾರೆ.

ಈಗ ಸುದೀಪ್ ಅವರ ಈ ನಿರ್ಧಾರದ ಬಗ್ಗೆ ಪ್ರಕಾಶ್ ರಾಜ್ ಅವರು ತಮ್ಮ ಟ್ವೀಟ್ ಅಲ್ಲಿ ಮತ್ತೊಮ್ಮೆ ಈ ರೀತಿ ಬರೆದುಕೊಂಡಿದ್ದಾರೆ ಸುದೀಪ್ ಅವರ ನಡೆ ಅಚ್ಚರಿಯನ್ನು ಮಾತ್ರ ಅಲ್ಲ ಬಹಳ ನೋವನ್ನು ಕೂಡ ಉಂಟು ಮಾಡಿದೆ ಎಂದು ಅವರು ಬರೆದುಕೊಂಡಿದ್ದಾರೆ. ಸುದೀಪ ಅವರ ಈ ನಡೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬಾರಿ ಪರ ಮತ್ತು ವಿರೋಧ ಚರ್ಚೆಗಳು ಮಾತುಕತೆಗಳು ನಡೆಯುತ್ತಿವೆ.

ಕಿಚ್ಚ ಸುದೀಪ್ ಅವರು ನೆನ್ನೆ ನಡೆದ ಮುಖ್ಯಮಂತ್ರಿಗಳ ಸಮ್ಮುಖದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು ಆದರೆ ಅವರು ತಾವು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿಲ್ಲ, ತಾನು ಟಿಕೆಟ್ ಆಕಾಂಕ್ಷಿಯು ಅಲ್ಲ ಎನ್ನುವುದನ್ನು ತಮ್ಮ ಅಭಿಮಾನಿಗಳಿಗೆ ಸ್ಪಷ್ಟಪಡಿಸಿದ್ದಾರೆ. ನಾನು ಬಿಜೆಪಿ ಪಕ್ಷದ ಪರವು ಕೂಡ ಪ್ರಚಾರ ಮಾಡುತ್ತಿಲ್ಲ ನನ್ನ ಅನೇಕ ಆಪ್ತರು ಬಿಜೆಪಿ ಪಕ್ಷದಲ್ಲಿದ್ದಾರೆ ನನ್ನ ಕಷ್ಟಕಾಲದಲ್ಲಿ ಅವರು ನನ್ನ ಕೈ ಹಿಡಿದಿದ್ದಾರೆ ಅದಕ್ಕಾಗಿ ನಾನು ಅವರ ಪರ ನಿಂತಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಇದೇ ಮಾತನ್ನು ಹೇಳಿದ್ದು ಅವರು ನನ್ನ ಪರವಾಗಿ ನಾನು ಕೇಳಿಕೊಂಡ ಕಾರಣಕ್ಕಾಗಿ ಪ್ರಚಾರಕ್ಕಾಗಿ ಬಂದಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಅ ಸಂದರ್ಭದಲ್ಲಿ ಪ್ರಕಾಶ್ ರಾಜ್ ಅವರ ಮೊದಲ ಟ್ವೀಟ್ ಕುರಿತು ಪ್ರಶ್ನೆ ಎದುರಾದಾಗ ಸುದೀಪ್ ಅವರು ನಗುನಗುತ್ತಲೆ ಬುದ್ದಿವಂತಿಕೆಯಿಂದ ಅದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ.

ಪ್ರಕಾಶ್ ರಾಜ್ ಅವರು ಒಬ್ಬ ಒಳ್ಳೆಯ ಕಲಾವಿದ, ನಾನು ಅವರೊಟ್ಟಿಗೆ ರನ್ನ ಎನ್ನುವ ಸಿನಿಮಾವನ್ನು ಮಾಡಿದೆ. ಅದು ಉತ್ತಮ ಅನುಭವ ಮತ್ತೊಮ್ಮೆ ಅವಕಾಶ ಸಿಕ್ಕರೆ ಅವರೊಂದಿಗೆ ಸಿನಿಮಾ ಮಾಡಲು ಇಷ್ಟಪಡುತ್ತೇನೆ ಆ ಸಮಯಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿ ನಕ್ಕು ಸುಮ್ಮನಾಗಿದ್ದಾರೆ. ಸುದೀಪ್ ಅವರಿಗೆ ಈಗಾಗಲೇ ಪ್ರಚಾರ ಇಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡಿದ್ದಾರೆ.

ಅವರು ರಾಜಕೀಯಕ್ಕೆ ಎಂಟ್ರಿ ಆದರೆ ಇನ್ನು ಅನೇಕ ಸಮಾಜಮುಖಿ ಕಾರ್ಯಗಳು ಜರುಗುತ್ತವೆ ಎನ್ನುವುದು ಕೆಲವರ ಅಭಿಪ್ರಾಯ. ಆದರೆ ಇನ್ನೂ ಕೆಲವರು ನಿಮ್ಮ ಅಭಿಮಾನಿಗಳು ಎಲ್ಲಾ ಪಕ್ಷದಲ್ಲೂ ಇದ್ದಾರೆ ಅವರಿಗೆ ತಪ್ಪು ಸಂದೇಶ ಹೋಗುತ್ತದೆ ದಯವಿಟ್ಟು ನೀವು ರಾಜಕೀಯಕ್ಕೆ ಬರಬೇಡಿ ಎಂದು ತಮ್ಮ ಅನಿಸಿಕೆ ಹೇಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ದರ್ಶನ್.

 

ಈಗಲೂ ಈ ವರ್ಷದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆ ಆಗಿದ್ದ ಕ್ರಾಂತಿ ಸಿನಿಮಾದ ಕ್ರೇಜ್ ಕಡಿಮೆ ಆಗಿಲ್ಲ. ಆಗಲೇ ದರ್ಶನ್ ಅವರ ಮುಂದಿನ ಚಿತ್ರದ ರಿಲೀಸ್ ಡೇಟ್ ಹಾಗೂ ಆ ಕುರಿತ ಅಪ್ಡೇಟ್ ಹೊರ ಬಿದ್ದಿದೆ. ದರ್ಶನ್ ಅವರ ಮುಂದಿನ ಚಿತ್ರ ಕಾಟೇರದ ಬಗ್ಗೆ ಕಳೆದ ವರ್ಷ ಅದು ಸೆಟ್ಟೇರಿದ ದಿನದಿಂದಲೂ ಅಭಿಮಾನಿಗಳಿಗೆ ಬಹಳ ಕುತೂಹಲ ಇದೆ. ಕನಕಪುರ ರಸ್ತೆಯಲ್ಲಿರುವ ಶ್ರೀ ರವಿಶಂಕರ ಗುರೂಜಿ ಅವರ ಆಶ್ರಮದಲ್ಲಿ ಡಿ 56 ಎನ್ನುವ ಹೆಸರಿನಲ್ಲಿ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿತ್ತು.

ಆ ದಿನ ಸಿನಿಮಾದ ಟೈಟಲ್ ಅನೌನ್ಸ್ ಮಾಡದೇ ಇದ್ದರೂ ಮಾಲಾಶ್ರಿ ಪುತ್ರಿ ರಾಧನ ರಾಮ್ ಸಿನಿಮಾದಲ್ಲಿ ನಾಯಕಿ ಆಗಿ ಲಾಂಚ್ ಆಗುತ್ತಿದ್ದಾರೆ, ಹಣ ಹೂಡುತ್ತಿರುವುದು ರಾಕ್ಲೈನ್ ವೆಂಕಟೇಶ್ ಅವರು ಮತ್ತು ಚಿತ್ರಕ್ಕೆ ತರುಣ್ ಸುಧೀರ್ ಅವರ ನಿರ್ದೇಶನ ಇದೆ, ಮತ್ತೊಮ್ಮೆ ರಾಬರ್ಟ್ ಸಿನಿಮಾ ತಂಡ ಮಾಡುತ್ತಿರುವ ಎರಡನೇ ಪ್ರಯತ್ನ ಇದು ಎಂದು ತಿಳಿದುಹೋಯಿತು.

ಆಗ ಇನ್ನೂ ಕ್ರಾಂತಿ ಸಿನಿಮಾದ ಕೆಲಸ ನಡೆಯುತ್ತಿದ್ದರಿಂದ ಸ್ವತಃ ದರ್ಶನ್ ಅವರೇ ಕ್ರಾಂತಿ ಸಿನಿಮಾ ರಿಲೀಸ್ ಆಗುವವರೆಗೂ ಡಿ56 ಸಿನಿಮಾ ಪ್ರಾಜೆಕ್ಟ್ ಬಗ್ಗೆ ಎಲ್ಲೂ ಪ್ರಚಾರ ಮಾಡಬಾರದು ಎಂದು ತಾಕಿತು ಮಾಡಿದ್ದರಂತೆ. ಈಗ ಕ್ರಾಂತಿ ಸಕ್ಸಸ್ ಕಂಡ ಹಿನ್ನೆಲೆ ದರ್ಶನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಚಿತ್ರತಂಡವು ಸಿನಿಮಾದ ಟೈಟಲ್ ಕಾಟೇರ ಎಂದು ರಿಲೀಸ್ ಮಾಡಿ ಇದರ ಜೊತೆಗೆ ದರ್ಶನ್ ಅವರ ವಿಭಿನ್ನ ಬಗೆಯ ಪೋಸ್ಟರ್ ಕೂಡ ರಿಲೀಸ್ ಮಾಡಿತ್ತು.

ದರ್ಶನ್ ಅವರ ಫಸ್ಟ್ ಲುಕ್ ನೋಡಿದ ಜನತೆ ಸಿನಿಮಾ ಹಿಟ್ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಈ ಸಿನಿಮಾದಲ್ಲಿ ದರ್ಶನವರು ಹಳ್ಳಿ ಹೈದನ ಲುಕ್ಕಲ್ಲಿ ಕಾಣಿಸಿಕೊಂಡಿದ್ದಿದ್ದು ನೈಜ ಕಥೆ ಆಧಾರಿತ ಚಿತ್ರ ಇದಾಗಲಿದೆ ಎಂದು ಕೂಡ ತಿಳಿದು ಬಂದಿದೆ. ಇತ್ತೀಚೆಗೆ ರಾಧನ ರಾಮ್ ಅವರ ಫೋಟೋ ಶೂಟ್ ಕೂಡ ನಡೆದಿದೆ. ಯುಗಾದಿ ಹಬ್ಬದ ಪ್ರಯುಕ್ತ ಚಿತ್ರತಂಡ ರಾಧನ ರಾಮ್ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಪಾತ್ರದ ಝಲಕ್ ನ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಇದರಲ್ಲಿ ಒಂದು ಕೈಯಲ್ಲಿ ಮಚ್ಚು ಹಾಗೂ ಒಂದು ಕೈಯಲ್ಲಿ ಪುಸ್ತಕ ಹಿಡಿದ ನಾಯಕಿ ಸಿನಿಮಾ ಬಗೆಗಿನ ಕುತೂಹಲವನ್ನು ಇನ್ನಷ್ಟು ಹೆಚ್ಚು ಮಾಡುತ್ತಿದ್ದಾರೆ. ಈ ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎನ್ನುವ ಕುರಿತು ಎಲ್ಲರೂ ತಿಳಿದುಕೊಳ್ಳುವ ತವಕದಲ್ಲಿ ಇದ್ದಾರೆ. ಈ ಬಗ್ಗೆ ಸಿನಿಮಾ ತಂಡದಿಂದ ಸ್ಪಷ್ಟನೆ ಕೂಡ ಸಿಕ್ಕಿದ್ದು ಆದಷ್ಟು ಬೇಗ ದರ್ಶನ್ ಅವರ ಈ ಚಿತ್ರ ಅಭಿಮಾನಿಗಳಿಗೆ ನೋಡ ಸಿಗುತ್ತಿದೆ.

ಮೊದಲ ಭಾಗದ ಚಿತ್ರೀಕರಣ ಪೂರ್ತಿಯಾಗಿದೆ ಎನ್ನುವುದನ್ನು ಹೇಳಿಕೊಂಡ ಚಿತ್ರತಂಡ, ಐದು ಭಾಷೆಗಳಲ್ಲಿ ಕಾಟೇರ ಸಿನಿಮಾ ಡಬ್ ಆಗುತ್ತಿದೆ ಎನ್ನುವುದನ್ನು ಕೂಡ ಹಂಚಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಮುಗಿದರೆ ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿಯೇ ಕಾಟೇರ ಸಿನಿಮಾವನ್ನು ಥಿಯೇಟರಲ್ಲಿ ನೋಡಬಹುದು. ದರ್ಶನ್ ಅವರ ಈ ಹೊಸ ಪ್ರಾಜೆಕ್ಟ್ ಶುಭವಾಗಲಿ. ರಾಬರ್ಟ್ ಚಿತ್ತದಲ್ಲಿ ಈಗಾಗಲೇ ತರುಣ್ ಮತ್ತು ದರ್ಶನ್ ಅವರ ಕೆಮಿಸ್ಟ್ರಿ ವರ್ಕ್ ಆಗಿರುವುದರಿಂದ ಅದೇ ರೀತಿಯ ಸಕ್ಸಸ್ ಕೂಡ ಕಾಟೇರ ಸಿನಿಮಾಗೆ ಸಿಗಲಿ ಎನ್ನುವುದು ಅಭಿಮಾನಿಗಳ ಆಶಯ. ಕನ್ನಡ ಸಿನಿಮಾಗಳ ಅಭಿಮಾನಿಗಳಾಗಿ ನಾವು ಸಹ ಸಿನಿಮಾ ತಂಡಕ್ಕೆ ಶುಭ ಹರಸೋಣ.

ಅಭಿಷೇಕ್ & ಅವಿವಾ ಮದುವೆ ಆಮಂತ್ರಣ ಪತ್ರವನ್ನು ಮೋದಿ ನೀಡಿ ವಿವಾಹಕ್ಕೆ ಆಹ್ವಾನಿಸಿದ ಸುಮಲಾತ ಅಂಬರೀಶ್.

 

ಜೂನ್ 5ಕ್ಕೆ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಕಲ್ಯಾಣೋತ್ಸವ. ಪ್ರಧಾನ ಮೋದಿ ಅವರಿಗೂ ಆಹ್ವಾನವಿತ್ತ ಸಂಸದೆ ಸುಮಲತಾ ಅಂಬರೀಶ್. ಕಳೆದ ವರ್ಷಾಂತ್ಯದಲ್ಲಿ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥವು ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಅವರೊಂದಿಗೆ ಬೆಂಗಳೂರಿನ ಐಷಾರಾಮಿ ಹೋಟೆಲ್ ಒಂದರಲ್ಲಿ ಅದ್ದೂರಿಯಾಗಿ ನೆರವೇರಿತ್ತು.

ಆವರೆಗೆ ಹೋದಲ್ಲಿ ಬಂದಲೆಲ್ಲಾ ಅಭಿಷೇಕ್ ಅವರಿಗೆ ಮದುವೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದವರಿಗೆ ಆ ನಿಶ್ಚಿತಾರ್ಥವು ಉತ್ತರ ಆಗಿತ್ತು. ಇದಾದ ಮೇಲೂ ಕೂಡ ಅಭಿಷೇಕ್ ಅಂಬರೀಶ್ ಅವರಿಗೆ ಪ್ರಶ್ನೆಗಳು ಎದುರಾಗುವುದು ಕಡಿಮೆ ಆಗಿಲ್ಲ, ಸದ್ಯಕ್ಕೆ ಬ್ಯಾಡ್ ಮ್ಯಾನರ್ಸ್ ಸಿನಿಮಾ ಕೆಲಸಗಳಲ್ಲಿ ಸಖತ್ ಬ್ಯುಸಿಯಾಗಿರುವ ಅಭಿಷೇಕ್ ಅಂಬರೀಶ್ ಅವರು ಸಿನಿಮಾ ಕುರಿತು ಯಾವುದೇ ಸಂದರ್ಶನಕ್ಕೆ ಹೋದರು ಕೂಡ ಅಲ್ಲಿ ಇವರ ಪ್ರೀತಿ ಮತ್ತು ಮದುವೆ ಬಗ್ಗೆಯೇ ಹೆಚ್ಚು ಪ್ರಶ್ನೆಗಳು ಎದುರಾಗುತ್ತಿವೆ.

ಅವಿವಾ ಜೊತೆಗಿನ ಪ್ರೀತಿ ವಿಚಾರವನ್ನು ಕೊನೆ ಹಂತದವರೆಗೂ ಬಹಳ ರಹಸ್ಯವಾಗಿ ಕಾಪಾಡಿಕೊಂಡಿದ್ದ ಅಭಿಷೇಕ್ ಅಂಬರೀಶ್ ಅವರು ನಿಶ್ಚಿತಾರ್ಥ ದಿನ ಹುಡುಗಿ ಇವರೇನಾ ಎಂದು ಎಲ್ಲರೂ ಶಾ’ಕ್ ಆಗುವಂತೆ ಮಾಡಿದ್ದರು. ಆದರೆ ಮದುವೆ ಆಗುವವರೆಗೂ ಕೂಡ ಇದೇ ರೀತಿ ಸೀಕ್ರೆಟ್ ಮೆಂಟೇನ್ ಮಾಡಬೇಕು ಎನ್ನುವುದು ಅವರ ಆಸೆ ಆಗಿತ್ತಂತೆ, ಮಾಧ್ಯಮಗಳಿಂದ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಸುದ್ದಿ ಹಾಗೂ ಅವರ ಬಾವಿ ಮಡದಿಯ ವಿಚಾರ ಬ್ರೇಕ್ ಆಯಿತು.

ಈಗ ಅಭಿಮಾನಿಗಳು ಸೇರಿದಂತೆ ಎಲ್ಲರೂ ಸಹ ಅಭಿಷೇಕ್ ಅಂಬರೀಶ್ ಅವರನ್ನು ಮದುವೆ ಊಟದ ಬಗ್ಗೆ ಗೇಧಿ ಮಾಡುತ್ತಿದ್ದಾರೆ. ಎಂಗೇಜ್ಮೆಂಟ್ ಬೇಗನೆ ಆಗಿದ್ದರೂ ಮದುವೆ ಬಹಳ ತಡವಾಗಬಹುದು ಎಂದೇ ಹಲವರು ಆಲೋಚನೆ ಮಾಡಿದ್ದರು. ಆದರೆ ಈಗಾಗಲೇ ಅಭಿಷೇಕ್ ಮತ್ತು ಅವಿವಾ ಜೋಡಿ ಮದುವೆ ಡೇಟ್ ಕೂಡ ಫಿಕ್ಸ್ ಆಗಿದೆ. ಸದ್ದಿಲ್ಲದೇ ವಿವಾಹದ ಕೆಲಸಗಳೆಲ್ಲಾ ಜರುಗುತ್ತಿದೆ.

ಅಭಿಷೇಕ್ ಅಂಬರೀಶ್ ಮತ್ತು ಅವಿವಾ ವಿವಾಹವು ಇದೇ ಜೂನ್ 5 ಕ್ಕೆ ಬೆಂಗಳೂರು ಅರಮನೆ ಮೈದಾನದ ಎದುರು ಅದ್ದೂರಿಯಾಗಿ ಜರುಗಲಿದೆ ಎನ್ನುವುದು ಕನ್ಫರ್ಮ್ ಆಗಿದೆ. ಈಗಾಗಲೇ ಮದುವೆಗೆ ಲಗ್ನ ಪತ್ರಿಕೆ ಕೂಡ ರೆಡಿ ಆಗಿದ್ದು ಪ್ರಧಾನಿ ಮೋದಿ ಅವರಿಗೂ ಕೂಡ ಮದುವೆಗೆ ಬರುವಂತೆ ಆಹ್ವಾನ ನೀಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಅಂಬರೀಶ್ ಅವರು ಪ್ರಧಾನಿ ಮೋದಿ ಅವರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಕರೆಯುತ್ತಿರುವ ಫೋಟೋಗಳು ವೈರಲ್ ಆಗಿವೆ.

ಮೋದಿ ಅವರು ಕೂಡ ಅಭಿಷೇಕ್ ಅಂಬರೀಶ್ ಅವರಿಗೆ ಶುಭ ಹಾರೈಸಿ ಕೆಲ ಸಮಯ ಅವರೊಂದಿಗೆ ಕಳೆದಿದ್ದಾರಂತೆ. ಇತ್ತೀಚೆಗೆ ಸೆಲೆಬ್ರಿಟಿಗಳು ವಿದೇಶಕ್ಕೆ ಹೋಗಿ ಅಥವಾ ಬೆರೆಲ್ಲೋ ಹೋಗಿ ಮದುವೆಯಾಗುವುದು ಟ್ರೆಂಡ್ ಆಗಿದೆ ಈ ಜೋಡಿ ಕೂಡ ಹಾಗೆ ಮದುವೆಯಾಗುತ್ತಾರೆ ಎಂದೇ ಎಲ್ಲಾ ಊಹೆ ಮಾಡಿದ್ದರು. ಯುಟ್ಯೂಬ್ ಚಾನೆಲ್ ಇಂಟರ್ವ್ಯೂನಲ್ಲಿ ಕನ್ನಡ ಸುದ್ದಿ ವಾಹಿನಿಯ ಖ್ಯಾತ ನಿರೂಪಕರೊಬ್ಬರು ಈ ಪ್ರಶ್ನೆ ಕೇಳಿದಾಗ ಅಭಿಷೇಕ್ ಅಂಬರೀಶ್ ಅವರು ಅದನ್ನು ಅಲ್ಲಗಳೆದಿದ್ದರು ಮತ್ತು ತಾವು ಕರ್ನಾಟಕದಲ್ಲೇ ಮದುವೆ ಆಗವುದಾಗಿ ಹೇಳಿದ್ದರು

ಈಗ ಕೊಟ್ಟ ಮಾತಿನಂತೆ ಅಭಿಮಾನಿಗಳ ಸಮ್ಮುಖದಲ್ಲಿ, ಕನ್ನಡಿಗರ ನಡುವೆ ಬೆಂಗಳೂರಿನಲ್ಲಿ ಮದುವೆಯಾಗುತ್ತಿರುವುದು ಕನ್ನಡ ಜನತೆಗೆ ಖುಷಿ ತಂದಿದೆ. ನವ ಜೋಡಿ ಅವಿವಾ ಮತ್ತು ಅಭಿಷೇಕ್ ಅಂಬರೀಶ್ ಅವರಿಗೆ ನಾವು ಸಹ ಶುಭ ಹಾರೈಸೋಣ.

ನೆನ್ನೆಯಷ್ಟೇ ಸುದೀಪ್ BJP ಪಕ್ಷ ಸೇರ್ಪಡೆಯಾದರು ಈ ವೇಳೆ ದರ್ಶನ್ ಕೂಡ BJP ಸೇರಿದ್ರೆ ಅವರ ಜೊತೆ ನೀವು ಕ್ಯಾಂಪೆನ್ ಹೋಗ್ತೀರಾ ಅಂತ ಪ್ರಶ್ನೆ ಕೇಳಿದಕ್ಕೆ ಕಿಚ್ಚ ಕೊಟ್ಟ ಉತ್ತರವೇನು ಗೊತ್ತಾ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಚಟುವಟಿಕೆಗಳು ಬಾರಿ ಜೋರಾಗಿ ನಡೆಯುತ್ತಿದೆ. ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿ ಬಿಡುಗಡೆ ಆದ ಹಿನ್ನೆಲೆ ಸರ್ವ ಪಕ್ಷಗಳು ಕೂಡ ಟಿಕೆಟ್ ಹಂಚಿಕೆ, ನಾಮಪತ್ರ ಸಲ್ಲಿಕೆ ಮತ್ತು ಪ್ರಚಾರ ಕಾರ್ಯದ ಬಗ್ಗೆ ಭಾರಿ ರಣತಂತ್ರ ಹೂಡುತ್ತಿವೆ. ಎಲ್ಲರ ಕಣ್ಣು ಈಗ ಸಿನಿಮಾರಂಗದವರ ಮೇಲಿದ್ದು ಸ್ಟಾರ್ ನಟರುಗಳು ಈ ಬಾರಿ ಯಾರಿಗೆ ಬೆಂಬಲ ನೀಡಲಿದ್ದಾರೆ ಎಂದು ಎದುರು ನೋಡುತ್ತಿದ್ದಾರೆ.

ಈ ವರ್ಷದ ಆರಂಭದಿಂದಲೂ ಸುದೀಪ್ ಅವರ ರಾಜಕೀಯ ಪ್ರವೇಶದ ಬಗ್ಗೆ ಸಾಕಷ್ಟು ಊಹಾಪೋಹಗಳು ಇತ್ತು. ಕಾಂಗ್ರೆಸ್ ಪಕ್ಷವು ಸುದೀಪ್ ಅವರನ್ನು ತನ್ನ ಪಾಳಯಕ್ಕೆ ಎಳೆದುಕೊಳ್ಳುವುದಕ್ಕೆ ತಯಾರಾಗಿದೆ, ಈ ಬಗ್ಗೆ ಅವರಿಗೆ ಆಫರ್ ಕೂಡ ನೀಡಲಾಗಿದೆ, ಮೊದಲ ಹಂತದ ಮಾತು ಕಥೆಯು ನಡೆದಿದೆ ಎನ್ನುವ ಸುದ್ದಿ ಬಹಳ ಹಬ್ಬಿತ್ತು. ಸುದೀಪ್ ಅವರು ಕೂಡ ಮಾತುಕತೆ ವಿಚಾರವನ್ನು ಒಪ್ಪಿಕೊಂಡಿದ್ದರು.

ಆದರೆ ಅವರ ನಿಲುವನ್ನು ಸ್ಪಷ್ಟಪಡಿಸಿರಲಿಲ್ಲ. ಯಾಕೆಂದರೆ ಸರ್ವ ಪಕ್ಷಗಳಲ್ಲೂ ಕೂಡ ಸುದೀಪ್ ಅವರಿಗೆ ಆತ್ಮೀಯರು ಇದ್ದಾರೆ. ಅದರಲ್ಲೂ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಸುದೀಪ್ ಅವರಿಗೆ ಬಹಳ ಆತ್ಮೀಯರು. ಹೀಗಾಗಿ ಅವರು ಒಂದು ಅರ್ಥದಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದರು. ಆದರೆ ಇಂದು ನಡೆದ ಬಸವರಾಜ ಬೊಮ್ಮಾಯಿ ಅವರ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ.

ಸುದೀಪ್ ಅವರು ತಮ್ಮ ಬೆಂಬಲ ಬಸರಾಜ್ ಬೊಮ್ಮಾಯಿ ಅವರಿಗೆ ಎಂದು ಹೇಳಿದ್ದಾರೆ. ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದ ಈ ಸವಿ ಸಂದರ್ಭದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರಿಗೆ ಮಾಧ್ಯಮಗಳಿಂದ ಸಾಕಷ್ಟು ಪ್ರಶ್ನೆಗಳು ಕೂಡ ಎದುರಾಗಿವೆ. ಅದಕ್ಕೆಲ್ಲ ಕಿಚ್ಚ ತಮ್ಮ ಜಾಣ್ಮೆಯಿಂದ ಉತ್ತರ ಕೊಟ್ಟಿದ್ದಾರೆ.

ಮೊದಲಿಗೆ ಭ್ರಷ್ಟಾಚಾರದ ಕುರಿತು ಸುದೀಪ್ ಅವರನ್ನು ಪ್ರಶ್ನಿಸಲಾಯಿತು. ರಾಜ್ಯದ ಬಿಜೆಪಿ ಪಕ್ಷದ ಮೇಲೆ 40% ಕಮಿಷನ್ ಪಡೆಯುವ ಆರೋಪ ಇದೆ. ನೀವು ಕೂಡ ಅದೇ ಪಕ್ಷಕ್ಕೆ ಸಪೋರ್ಟ್ ಮಾಡುತ್ತಿದ್ದೀರಾ ಹಾಗಾದ್ರೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ ಸುದೀಪ್ ಅವರು ನನಗೆ ದೇಶದ ಕಾನೂನಿನ ಮೇಲೆ ಬಹಳ ಗೌರವವಿದೆ ಅದು ನಿಜ ಆಗಿದ್ದಲ್ಲಿ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ.

ನಾನು ಬಿಜೆಪಿ ಪಕ್ಷದ ಒಳ್ಳೆಯ ಅಂಶಗಳಿಗಷ್ಟೇ ಬೆಂಬಲ ಸೂಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಅಷ್ಟರಲ್ಲಿ ಮತ್ತೊಬ್ಬ ವರದಿಗಾರನಿಂದ ದರ್ಶನ್ ಅವರ ಕುರಿತು ಪ್ರಶ್ನೆ ಎದುರಾಗಿದೆ. ದರ್ಶನ್ ಅವರು ಸಹ ಬಿಜೆಪಿ ಪಕ್ಷಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ. ಇಬ್ಬರು ಒಟ್ಟಿಗೆ ಕ್ಯಾಂಪೇನ್ ಮಾಡುವ ಸಂದರ್ಭ ಬಂದರೆ ಹೋಗುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಉತ್ತರ ಕೊಡುವ ಮೊದಲೇ ಬಸವರಾಜು ಬೊಮ್ಮಾಯಿ ಅವರು ಉತ್ತರಿಸಿ ಬಿಟ್ಟರು.

ಈ ರೀತಿಯ ಹೈಪೋಥೀಸ್ ಪ್ರಶ್ನೆಗಳನ್ನು ಕೇಳುವುದು ಬೇಡ ಎಂದು ತಡೆದ ಬಸವರಾಜ್ ಬೊಮ್ಮಾಯಿ ಅವರು ಇದು ನನ್ನ ವೈಯಕ್ತಿಕ ಸುದ್ದಿಗೋಷ್ಠಿ, ಅವರು ಬಿಜೆಪಿ ಪಕ್ಷ ಸೇರುವುದರ ಬಗ್ಗೆ ಒಪ್ಪಿಗೆ ನೀಡಿಲ್ಲ ನನ್ನ ಜೊತೆಗಿರುವ ನಂಟು ಹಾಗೂ ಆತ್ಮೀಯತೆಗೆ ಬೆಲೆಕೊಟ್ಟು ನನ್ನ ಸಲುವಾಗಿ ಪ್ರಚಾರ ಕಾರ್ಯಕ್ಕೆ ಬಂದಿದ್ದಾರೆ. ಇದು ನನಗೆ ಸೂಚಿಸುತ್ತಿರುವ ಬೆಂಬಲ ಅಷ್ಟೇ ಪಕ್ಷದ ಸುದ್ದಿಗೋಷ್ಠಿ ಇದ್ದಿದ್ದರೆ ಅದು ಕಚೇರಿಯಲ್ಲಿ ನಡೆಯುತ್ತಿತ್ತು ಎಂದು ಹೇಳಿದ್ದಾರೆ. ಆದರೆ ದರ್ಶನ ಅವರ ಹೆಸರು ಹೇಳುತ್ತಿದ್ದಂತೆ ಸುದೀಪ್ ಅವರ ಮುಖದಲ್ಲಿ ನಗು ಬಂದಿರುವುದನ್ನು ಎಲ್ಲರ ಕಣ್ಮಿಗೂ ಬಿದ್ದಿದೆ.

ಮೊದಲ ಬಾರಿಗೆ ನಟಿ ನಯನತಾರ ತನ್ನ ಇಬ್ಬರು ಅವಳಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ್ದಾರೆ. ನಯನ ಮಕ್ಕಳಿಗೆ ಇಟ್ಟಿರುವ ಮುದ್ದಾದ ಹೇಸರೇನು ಗೊತ್ತ.?

 

ಕಾಲಿವುಡ್ ನ ಲೇಡಿ ಸೂಪರ್ ಸ್ಟಾರ್ ಎಂದು ಕರೆಸಿಕೊಂಡಿರುವ ನಯನತಾರಾ ಅವರು ತಮ್ಮ ಕೆರಿಯರ್ ವಿಷಯದಲ್ಲಿ ಸದಾ ಸಿಹಿ ಸುದ್ದಿಗಳನ್ನೇ ನೀಡುತ್ತಿರುತ್ತಾರೆ. ಒಂದಲ್ಲ ಒಂದು ದಾಖಲೆಗಳನ್ನು ಮುರಿಯುತ್ತಾ ಬಹುತೇಕ ಭಾರತದಾದ್ಯಂತ ಗುರುತಿಸಿಕೊಂಡಿರುವ ಈ ನಟಿ ನಿಧಾನವಾಗಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿ ಶಾರುಖ್ ಖಾನ್ ಜೊತೆ ಜವಾನ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಬಿ ಟೌನ್ ಅಳಲು ಲಗ್ಗೆ ಇಟ್ಟಿರುವ ನಯನತಾರಾ ಅವರು ವೈಯಕ್ತಿಕ ಜೀವನದ ಬಗ್ಗೆ ಕೂಡ ಅಷ್ಟೇ ಕಾಳಜಿ ಹೊಂದಿದ್ದಾರೆ.

ಆದರೆ ಸದಾ ಇವರ ವೈಯಕ್ತಿಕ ಬದುಕು ಕಾಂಟ್ರವರ್ಸಿಯಿಂದಲೇ ಕೂಡಿರುತ್ತದೆ. ಅದರಲ್ಲೂ ಮದುವೆ ಮತ್ತು ಪ್ರೀತಿ ವಿಷಯದಲ್ಲಿ ನಟಿ ಸಾಕಷ್ಟು ಬಾರಿ ವಿವಾದಕ್ಕೆ ಸಿಲುಕಿದ್ದಾರೆ, ಹಲವು ಖ್ಯಾತರ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿದೆ. ಹಿಂದೆ ಹಲವು ನಟರ ಹೆಸರ ಜೊತೆ ನಟಿ ಹೆಸರು ಕಾಣಿಸಿಕೊಂಡಿದ್ದರು ಜನರು ಹೆಚ್ಚು ನಂಬಿದ್ದು ಪ್ರಭುದೇವ್ ಅವರ ಜೊತೆಗಿರುವ ರಿಲೇಶನ್ಶಿಪ್ ಬಗ್ಗೆ, ಒಂದು ಅರ್ಥದಲ್ಲಿ ಇವರಿಬ್ಬರು ಮದುವೆ ಆಗಿದ್ದಾರೆ ಎನ್ನುವಷ್ಟರ ಮಟ್ಟಿಗೆ ಜನ ನಂಬಿದ್ದರು ಹಾಗೆ ಇವರಿಬ್ಬರು ಒಟ್ಟಿಗೆ ಕೂಡ ಬದುಕುತ್ತಿದ್ದರು.

ಪ್ರಭುದೇವ್ ಅವರು ಸಹ ತಮ್ಮ ಮೊದಲ ಪತ್ನಿಗೆ ವಿಚ್ಛೇದರ ನೀಡಿ ನಯನತಾರ ಅವರ ಜೊತೆ ಜೀವನ ಕಳೆಯುವ ನಿರ್ಧಾರಕ್ಕೂ ಬಂದಿದ್ದರು. ಇದ್ದಕ್ಕಿದ್ದಂಗೆ ಇವರಿಬ್ಬರ ನಡುವೆ ಬಿರುಕು ಏರ್ಪಟ್ಟು ಈಗ ಒಬ್ಬರಿಗೊಬ್ಬರ ಮುಖ ಪರಿಚಯ ಇಲ್ಲದವರಂತೆ ಬದುಕುತ್ತಿದ್ದಾರೆ. ಪ್ರಭುದೇವ್ ಅವರಿಗೋಸ್ಕರ ತನ್ನ ಕೆರಿಯರ್ ಕೂಡ ಬಿಡಲು ರೆಡಿಯಾಗಿದ್ದಂತಹ ನಟಿ ಚೇತರಿಸಿಕೊಂಡು ಕೆರಿಯರಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮತ್ತೊಂದು ವರ್ಷನ್ ನಯನತಾರ ಆಗಿ ಬದಲಾಗಿದ್ದಾರೆ.

ಅದಾದ ಬಳಿಕ ಅವರಿಗೆ ನಿರ್ದೇಶಕ ವಿಜ್ಞೇಶ್ ಶಿವನ್ ಅವರ ಪರಿಚಯವಾಗಿ ಹಲವು ವರ್ಷಗಳ ವರೆಗೆ ಅವರಿಬ್ಬರು ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ಅಲ್ಲಿ ಸಹ ಇದ್ದರು. ಅಂತಿಮವಾಗಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಇಬ್ಬರು ಅದ್ದೂರಿಯಾಗಿ ವಿವಾಹ ಆಗುವ ಮೂಲಕ ತಾವಿಬ್ಬರು ಅಧಿಕೃತ ದಂಪತಿಗಳು ಎನ್ನುವುದನ್ನು ಸಾಬೀತುಪಡಿಸಿದನು. ಐಷಾರಾಮಿ ಹೋಟೆಲ್ ಒಂದರಲ್ಲಿ ಕೋಟ್ಯಾಂತರ ಹಣ ಖರ್ಚು ಮಾಡಿ ಅದ್ದೂರಿ ಮದುವೆ ಮಾಡಿಕೊಂಡ ಇವರಿಬ್ಬರು ಮದುವೆ ಆಗಿ ವರ್ಷ ತುಂಬಾ ಮೊದಲೇ ಸಿಹಿ ಸುದ್ದಿ ಕೂಡ ಕೊಟ್ಟರು.

ಆದರೆ ಆ ವಿಷಯ ಕೂಡ ವಿವಾದಕ್ಕೆ ಕಾರಣ ಆಯಿತು. ಯಾಕೆಂದರೆ ಮದುವೆ ಆದ ನಾಲ್ಕೇ ತಿಂಗಳಿಗೆ ಇವರಿಬ್ಬರೂ ತಂದೆ ತಾಯಿ ಆಗಿದ್ದರು, ಅದು ಬಾಡಿಗೆ ತಾಯ್ತನದ ಮೂಲಕ. ಆ ಸಮಯದಲ್ಲಿ ಇವರಿಬ್ಬರ ನಿಲುವಿನ ಬಗ್ಗೆ ಸಾಕಷ್ಟು ಜನ ವಿರೋಧ ಕೊಡ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಅವರ ಬದುಕು ಅವರ ಇಚ್ಛೆ ಎನ್ನುವುದನ್ನು ಒಪ್ಪಲೇ ಬೇಕಾಯಿತು. ಈಗ ನಯನತಾರ ಅವಳಿ ಮಕ್ಕಳ ಪೋಷಣೆ ಹಾಗೂ ತನ್ನ ಕೆರಿಯರ್ ಎರಡನ್ನು ಸಹ ಸಖತ್ ಆಗಿ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ.

ಈ ನಡುವೆ ಕಾರ್ಯಕ್ರಮ ಒಂದಕ್ಕೆ ಹೋದಾಗ ಅವರಿಗೆ ಮಕ್ಕಳ ಬಗ್ಗೆ ಪ್ರಶ್ನೆ ಎದುರಾಗಿದೆ. ಅದರಲ್ಲಿ ಒಬ್ಬರು ಮಕ್ಕಳ ಪೂರ್ತಿ ಹೆಸರೇನು ಎಂದು ಕೇಳಿದಾಗ ಇದೇ ಮೊದಲ ಬಾರಿಗೆ ನಟಿ ತಮ್ಮ ಮಕ್ಕಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಒಬ್ಬ ಮಗನ ಹೆಸರು ಉಯಿರ್ ರುದ್ರೋನೀಲ್ ಎನ್. ಶಿವನ್ ಮತ್ತೊಬ್ಬ ಮಗನ ಹೆಸರು ಉಳಗ್ ದೈವಗನ್ ಎನ್. ಶಿವನ್ ಎಂದು ಹೇಳಿಕೊಂಡಿದ್ದಾರೆ. ನಟಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರೂ ಮುದ್ದು ಮಕ್ಕಳ ಫೋಟೋವನ್ನು ಇನ್ನೂ ಹಂಚಿಕೊಳ್ಳದೇ ಆ ಕುತೂಹಲವನ್ನು ಇನ್ನು ಹಾಗೆ ಉಳಿಸಿದ್ದಾರೆ.

ಮದುವೆಗೂ ಮೊದಲೇ 10 ವರ್ಷ ಮಕ್ಕಳು ಮಾಡಿಕೊಳ್ಳುವುದು ಬೇಡ ಎಂಬ ಒಳ ಒಪ್ಪಂದ ಆಗಿತ್ತು. ಈ ಕಾರಣಕ್ಕೆ ಇಷ್ಟು ವರ್ಷ ಮಕ್ಕಳು ಮಾಡಿಕೊಳ್ಳಲಿಲ್ಲ ಎಂದು ಸ್ಪಷ್ಟಣೆ ಕೊಟ್ಟ ಉಪಾಸನ.

 

ಮದುವೆ, ಮಕ್ಕಳು, ಸಂಸಾರ, ಕುಟುಂಬ ಇದು ಈ ನೆಲದಲ್ಲಿ ಒಂದು ಅರ್ಹತಾ ಮಾನದಂಡವಾಗಿದೆ ಎಂದೇ ಹೇಳಬಹುದು. ಅದಕ್ಕಾಗಿ ಸಮಾಜ ಪ್ರತಿ ಬಾರಿ ಇಂತಹ ಪ್ರಶ್ನೆಗಳನ್ನು ಕೇಳಿ ಅದರ ಮೇಲೆ ನಮ್ಮ ಯೋಗ್ಯತೆಯನ್ನು ನಿರ್ಧರಿಸಿಬಿಡುತ್ತದೆ. ಈ ಪ್ರಶ್ನೆಗಳು ಸಾಮಾನ್ಯರಿಗೆ ಮಾತ್ರವಲ್ಲ ಸೆಲೆಬ್ರೆಟಿಗಳನ್ನು ಕಾಡದೇ ಬಿಡುವುದಿಲ್ಲ. ಇಂತಹ ಪ್ರಶ್ನೆಗಳು ಎದುರಾದಾಗ ಅದಕ್ಕೆ ಹೇಗೆ ಪ್ರತಿಕ್ರಿಸುತ್ತಿವೆ ಎನ್ನುವುದು ಸಕಾರಾತ್ಮಕವಾಗಿ ಹಾಗೂ ನಕಾರಾತ್ಮಕವಾಗಿ ಕೂಡ ನಮ್ಮನ್ನು ಸಮಾಜದಲ್ಲಿ ಬಿಂಬಿಸುತ್ತದೆ.

ಇದಕ್ಕೆ ಸ್ಪಷ್ಟ ಉದಾಹರಣೆ ಉಪಾಸನ ಮತ್ತು ರಾಮ್ ಚರಣ್ ತೇಜ್ ಜೋಡಿ. ಇವರಿಬ್ಬರು 2013ರಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 10 ವರ್ಷಗಳ ಕಳೆದರೂ ಇವರಿಗೆ ಮಕ್ಕಳಿರಲಿಲ್ಲ, ಇದಕ್ಕಾಗಿ ಜೋಡಿ ಎದುರಿಸಿದ ಸಂಕಷ್ಟಗಳು ಒಂದೆರಡಲ್ಲ. ಉಪಾಸನ ಅವರು ಅಪೋಲೋ ಆಸ್ಪತ್ರೆ ಒಡೆತನದ ಹಕ್ಕುದಾರಿ ಜೊತೆಗೆ ಸಾವಿರಾರು ಕೋಟಿ ಮೌಲ್ಯದ ಆಸ್ತಿಯ ಒಡತಿ, ಇನ್ನು ರಾಮಚರಣ್ ತೇಜ್ ಮೆಗಾಸ್ಟಾರ್ ಚಿರಂಜೀವಿ ಪುತ್ರ ಇವರಬ್ಬಿರ ನಡುವೆ ಎಂಥಹದೇ ಸಮಸ್ಯೆ ಇದ್ದರೆ ಕೂಡ ಮಕ್ಕಳು ಮಾಡಿಕೊಳ್ಳಬಹುದಿತ್ತು ಆದರೂ ದಂಪತಿ ಇದನ್ನು ಮುಂದಕ್ಕೆ ಹಾಕುತ್ತಲೇ ಬಂದರು‌

ಸೋಶಿಯಲ್ ಮೀಡಿಯಾದಲಂತು ಈ ವಿಚಾರವಾಗಿ ಸಾಕಷ್ಟು ಬಾರಿ ಉಪಸನ ಟ್ರೋಲ್ ಆದರು. ರಾಮ್ ಚರಣ್ ತೇಜ್ ಅವರನ್ನು ಕೂಡ ಈ ವಿಷಯಕ್ಕಾಗಿ ಟಾರ್ಗೆಟ್ ಮಾಡಿ ಬೇರೆ ನಾಯಕರ ಅಭಿಮಾನಿಗಳು ಅವಮಾನಿಸಿದರು ಇದನ್ನೆಲ್ಲ ಸಹಿಸಿಕೊಂಡು ಸುಮ್ಮನಿದ್ದ ಇವರು ಈ ವರ್ಷ ಜನತೆಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಈಗ ಆಸ್ಕರ್ ಅವಾರ್ಡ್ ಸಮಾರಂಭದ ಸಮಯದಲ್ಲಿ ಉಪಾಸನ 26 ವಾರಗಳ ಗರ್ಭಿಣಿ ಎನ್ನುವುದನ್ನು ರಾಮ್ ಚರಣ್ ತೇಜ್ ಅನೌನ್ಸ್ ಮಾಡಿದ್ದಾರೆ. ಇದಕ್ಕೂ ಮುನ್ನ ಮಾವ ಚಿರಂಜೀವಿ ಅವರು ಸಹ ಮನೆಗೆ ಹೊಸ ಅತಿಥಿ ಆಗುತ್ತಿರುವ ಬಗ್ಗೆ ಅನೌನ್ಸ್ ಮಾಡಿದ್ದರು.

ಇನ್ನೂ ಇಷ್ಟು ವರ್ಷಗಳು ಮಕ್ಕಳು ಪಡೆಯದೆ ಇದ್ದದಕ್ಕೆ ಪ್ರಶ್ನೆ ಮಾಡುತ್ತಿರುವ ಸಮಾಜಕ್ಕೆ ಉಪಾಸನ ಸ್ಪಷ್ಟನೆ ಕೊಟ್ಟಿದ್ದಾರೆ. ನಾವಿಬ್ಬರು ಮದುವೆ ಆದಾಗಲೇ ಹತ್ತು ವರ್ಷಗಳು ಮಕ್ಕಳು ಬೇಡ ಎನ್ನುವ ಒಪ್ಪಂದಕ್ಕೆ ಬಂದಿದ್ದೆವು. ಕುಟುಂಬದವರ, ಸ್ನೇಹಿತರ ಯಾರೊಬ್ಬರ ಒತ್ತಾಯಕ್ಕೂ ನಾವು ಮಣಿಯಲಿಲ್ಲ. ನಮ್ಮಿಬ್ಬರಿಗೂ ಸಂಬಂಧದ ಅರಿವನ್ನು ಹೆಚ್ಚಿಸಲು ಇದು ಸಹಾಯ ಮಾಡಿತು. ನಾವು ಸಮಾಜದ ಅವಶ್ಯಕತೆಗಾಗಿ ಅಲ್ಲ ನಮಗೆ ಬೇಕು ಅನಿಸಿದಾಗ ಮಕ್ಕಳು ಮಾಡಿಕೊಳ್ಳುತ್ತಿದ್ದೇವೆ ಎಂದು ಉತ್ತರ ಕೊಟ್ಟಿದ್ದಾರೆ ಉಪಾಸನಾ.

ಇದೇ ಮೊದಲನೇ ನಲ್ಲ ಈ ಹಿಂದೆ ಕೂಡ ಸಾಕಷ್ಟು ಬಾರಿ ಇದೇ ರೀತಿ ಮಕ್ಕಳ ಬಗ್ಗೆ ಪ್ರಶ್ನೆ ಕೇಳಿದವರಿಗೆ ಇವರು ಖಡಕ್ಕಾಗಿ ಆನ್ಸರ್ ಮಾಡಿದ್ದರು. ಮಕ್ಕಳು ಹೆರುವುದು ಎಂದರೆ ಅಷ್ಟು ಸುಲಭವಲ್ಲ, ಅದೊಂದು ಜವಾಬ್ದಾರಿ. ಹೆತ್ತ ಮೇಲೆ ಅವರನ್ನು ಅಷ್ಟೇ ಚೆನ್ನಾಗಿ ಪೋಷಿಸಿ ಏನು ಕೊರತೆ ಆಗದಂತೆ ನೋಡಿಕೊಳ್ಳಬೇಕು. ಅದಕ್ಕೆ ನಾವಿಬ್ಬರು ಆರ್ಥಿಕವಾಗಿ ಸದೃಢವಾಗಿರಬೇಕು ಎನ್ನುವುದು ಮೊದಲು ಆದ್ಯತೆ ಆಗಿತ್ತು. ಈಗ ನಾವಿಬ್ಬರು ನಮ್ಮ ಕ್ಷೇತ್ರದಲ್ಲಿ ನಾವಂದುಕೊಂಡಿದ್ದನ್ನು ಸಾಧಿಸಿದ್ದೇವೆ ಈಗ ಮಕ್ಕಳು ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ನಟಿ ಉತ್ತರಿಸಿದ್ದಾರೆ.

ಆದರೆ ಇವರು ಬೇರೆ ಏನೇ ಕಾರಣ ಕೊಟ್ಟಿದ್ದರು ಒಪ್ಪಿಕೊಳ್ಳಬಹುದಿತ್ತು ಹಣದ ವಿಚಾರ ಮಾತನಾಡಿದ್ದರಿಂದ ಇವರಿಬ್ಬರಿಗೂ ಇರುವ ಬ್ಯಾಕ್ಗ್ರೌಂಡ್ಗೆ ಇದು ತುಂಬಾ ಸಿಲ್ಲಿ ಆನ್ಸರ್ ಎನಿಸುತ್ತಿದೆ ಎಂದು ಮತ್ತೊಂದು ವರ್ಗ ಚಕಾರವೆತ್ತಿದೆ. ಅದೇನೇ ಇದ್ದರೂ 10 ವರ್ಷದ ಬಳಿಕವಾದರೂ ಉಪಾಸನ ಮಡಿಲಿಗೆ ಮಗು ಬರುತ್ತಿರುವುದು ಎಲ್ಲರ ಮುಖದಲ್ಲೂ ನಗು ತರಿಸಿದೆ.

ಬಿಜೆಪಿ ಪಕ್ಷ ಸೇರಿದ ಬೆನ್ನಲ್ಲೇ ಸುದೀಪ್ ಅವರ ಖಾಸಗಿ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ. ಚಿಂತೆಗೆ ಈಡಾದ ಕಿಚ್ಚ.

 

ಸ್ಯಾಂಡಲ್ ವುಡ್ ಬಾದ್ ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅಗರ್ಭ ಶ್ರೀಮಂತನಾಗಿ ಹುಟ್ಟಿದ್ದರೂ ಇಂದು ಅವರು ಪಡೆದಿರುವ ಈ ಹೆಸರು ಹೂವಿನ ಹಾದಿಯಲ್ಲಿ ಅವರಿಗೆ ಸಿಕ್ಕಿದ್ದಲ್ಲ. ಸಿನಿಮಾ ಹೀರೋ ಆಗಬೇಕು ಎನ್ನುವ ಕನಸು ಕಂಡಿದ್ದ ಸುದೀಪ್ ಅವರು ಅದಕ್ಕಾಗಿ ಸಾಕಷ್ಟು ಕಷ್ಟ ಅವಮಾನ ಎಲ್ಲವನ್ನು ಸಹಿಸಿಕೊಂಡು ಇಂದು ಸ್ವಂತ ಪರಿಶ್ರಮದಿಂದ ಈ ಮಟ್ಟ ತಲುಪಿದ್ದಾರೆ.

ಈಗ ಸುದೀಪ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ನಾಯಕ ಮಾತ್ರ ಅಲ್ಲದೆ ಇಡೀ ಭಾರತದ ಎಲ್ಲಾ ಚಿತ್ರರಂಗದಲ್ಲೂ ಕೂಡ ಬಹಳ ಬೇಡಿಕೆ ಇರುವ ನಟ, ನಿಧಾನವಾಗಿ ಸುದೀಪ್ ಅವರ ಖ್ಯಾತಿ ವಿಶ್ವದಾದ್ಯಂತ ಹರಡುತ್ತಿದೆ. ಆದರೆ ಕೆಲ ಕಿಡಿಗೇಡಿಗಳು ಇಂತಹ ಹೆಮ್ಮೆಯ ನಟನ ಹೆಸರಿಗೆ ಮಸಿ ಬೆಳೆಯುವ ಪ್ರಯತ್ನ ಮಾಡತ್ತಿದ್ದಾರೆ.

ಅದೇನೆಂದರೆ, ಸುದೀಪ್ ಅವರ ಖಾಸಗಿ ವಿಡಿಯೋವನ್ನು ರಿಲೀಸ್ ಮಾಡುತ್ತೇವೆ ಎಂದು ಸುದೀಪ್ ಅವರಿಗೆ ಪತ್ರ ಬರೆದು ಕಳುಹಿಸಲಾಗಿದೆ. ಎರಡು ಪತ್ರಗಳು ಬಂದಿದ್ದು, ಆ ಎರಡು ಪತ್ರಗಳು ಕೂಡ ಸುದೀಪ್ ಮ್ಯಾನೇಜರ್ ಅವರ ಕೈ ಸೇರಿವೆ. ಪತ್ರದಲ್ಲಿ ಸುದೀಪ್ ಅವರ ಬಗ್ಗೆ ಬಹಳ ಕೇವಲವಾಗಿ ಬರೆಯಲಾಗಿದ್ದು ಕೆಟ್ಟ ಪದಗಳನ್ನು ಬಳಕೆ ಮಾಡಿ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿ ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿದೆ. ಪತ್ರ ಎಲ್ಲಿಂದ ಬಂದಿದ್ದು, ಯಾರು ಬರೆದಿರಬಹುದು ಎನ್ನುವ ಕುರಿತಾದ ತನಿಖೆಗಳು ಕೂಡ ನಡೆಯುತ್ತಿದೆ. ಜಾಕ್ ಮಂಜು ಅವರು ಕೂಡ ಇದರ ಬಗ್ಗೆ ಪ್ರತಿಕ್ರಿಯಿಸಿ ಸುದೀಪ್ ಅವರಿಗೆ ಇದರಿಂದ ಮಾನಸಿಕ ಕಿ.ರುಕುಳ ಆಗುತ್ತಿದೆ, ಅವರನ್ನು ಮಾನಸಿಕವಾಗಿ ಕುಗ್ಗಿಸಲು ಈ ಹುನ್ನಾರ ಮಾಡಲಾಗಿದೆ ಎಂದು ಕಿಡಿ ಕಾರಿದ್ದಾರೆ.

ಮತ್ತೊಂದೆಡೆ ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಕಾವು ರಂಗೀರುತ್ತಿದೆ. ಸರ್ವ ಪಕ್ಷಗಳು ಕೂಡ ಪ್ರಭಾವಿ ವ್ಯಕ್ತಿಗಳನ್ನು ತಮ್ಮ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಲು ಪ್ರಯತ್ನ ನಡೆಸುತ್ತಿವೆ. ಈಗಾಗಲೇ ಸುದೀಪ್ ಅವರಿಗೆ ಕಾಂಗ್ರೆಸ್ ಮನ ಒಲಿಸುವ ಪ್ರಯತ್ನ ಮಾಡಿದೆ, ಅವರನ್ನು ಭೇಟಿ ಮಾಡಿ ಮಾತನಾಡಲಾಗಿದೆ ಎನ್ನುವ ಮಾತುಗಳು ಹರಿದಾಡಿದ್ದರೂ ಸುದೀಪ್ ಅವರು ತಾವು ಯಾವ ಪಕ್ಷ ಸೇರುವುದರ ಬಗ್ಗೆಯೂ ಹೇಳಿಕೊಂಡಿರಲಿಲ್ಲ.

ಮಾನ್ಯ ಮುಖ್ಯಮಂತ್ರಿಯಾದ ಬಸವರಾಜ್ ಬೊಮ್ಮಾಯಿ ಅವರು ಸುದೀಪ್ ಅವರಿಗೆ ಬಹಳ ಆಪ್ತರಾಗಿದ್ದಾರೆ, ಹಾಗಾಗಿ ಅವರು ಬಿಜೆಪಿಗೆ ಸಪೋರ್ಟ್ ಮಾಡುತ್ತಾರೆ ಎನ್ನುವ ನಿರೀಕ್ಷೆಯು ಇದೆ. ಏಪ್ರಿಲ್ 5 ರ ಮಧ್ಯಾಹ್ನ ಖಾಸಗಿ ಹೋಟೆಲಲ್ಲಿ ಬಿಜೆಪಿ ಪಕ್ಷ ಒಂದು ಸುದ್ದಿಗೋಷ್ಠಿ ಇಟ್ಟುಕೊಂಡಿದೆ. ಅಲ್ಲಿ ಈ ಬಗ್ಗೆ ಅನೌನ್ಸ್ ಆಗುವ ಸಾಧ್ಯತೆಗಳು ಇವೆ ಎಂದು ಊಹಾಪೋಹ ಮಾಡಲಾಗಿದೆ.

ಸುದೀಪ್ ಅವರು ಈ ಬಾರಿ ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಪಕ್ಕ ಎಂದು ಸಹ ಕೆಲವು ವರದಿಗಳು ಹೇಳುತ್ತಿವೆ. ಆದರೆ ಸುದೀಪ್ ಅವರು ರಾಜಕೀಯ ಪಕ್ಷಕ್ಕೆ ಸೇರಿಕೊಳ್ಳದೆ ಬರೀ ಪ್ರಚಾರ ಕಾರ್ಯದಲ್ಲಿ ಮಾತ್ರ ಭಾಗಿಯಾಗಬಹುದು ಎನ್ನುವ ಮಾತುಗಳು ಇವೆ. ಇದೆಲ್ಲ ಕುತೂಹಲಕ್ಕೂ ಇಂದು ತೆರೆ ಬೀಳಲಿದ್ದು ಸುದೀಪ್ ಅವರ ನಡೆ ಏನು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಯಲಿದೆ.

ಈಗ ಸುದೀಪ್ ಅವರ ಖಾಸಗಿ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತೇವೆ ಎಂದು ಬರೆದಿರುವ ಈ ಬೆದರಿಕೆ ಪತ್ರಕ್ಕೂ ಅವರ ಪಕ್ಷ ಸೇರುವುದಕ್ಕೂ ಸಂಬಂಧ ಇದೆಯಾ ಎಂದು ಕೆಲವರು ತಾಳೆ ಹಾಕಿ ನೋಡುತ್ತಿದ್ದಾರೆ. ಕರ್ನಾಟಕದ ಚಿತ್ತ ಈಗ ಸುದೀಪ್ ಅವರ ನಿಲುವು ಏನು ಎನ್ನುವುದರತ್ತ ಇದೆ ಏಪ್ರಿಲ್ 5ರ ಮಧ್ಯಾನದ ವರೆಗೂ ಕಾದು ನೋಡೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮೂಲಕ ತಿಳಿಸಿ.

ಕೋಟಿ ಆಸ್ತಿ ಒಡೆಯ, ಬಹು ಬೇಡಿಕೆ ನಟ ಆದ್ರೂ ಕೂಡ ಹಳ್ಳಿಯ ಪುಟ್ಟ ಮನೆಯಲ್ಲಿ ವಾಸವಾಗಿದ್ದಾರೆ ನಟ ಕಿಶೋರ್. ಇವರ ಮನೆ ಹೇಗಿದೆ ಅಂತ ಒಮ್ಮೆ ಈ ವಿಡಿಯೋ ನೋಡಿ.!

 

ಕನ್ನಡದಲ್ಲಿ ಪೊಲೀಸ್ ಪಾತ್ರಗಳಲ್ಲಿ ಮಿಂಚಿರುವ ಜೊತೆಗೆ ನಾಯಕ ನಟನಾಗಿ, ಖಳನಾಯಕನಾಗಿ ಹೆಸರುವಾಸಿಗೆ ಪಡೆದಿರುವ ಬೇಸ್ ವಾಯ್ಸ್ ನಟ ಕಿಶೋರ್. ನಟ ಕಿಶೋರ್ ಅವರು ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಎಲ್ಲಾ ಭಾಷೆಯ ಚಿತ್ರಗಳಲ್ಲೂ ಕೂಡ ನಟಿಸಿದ್ದಾರೆ. ಹಾಗೆ ಎಲ್ಲಾ ಚಿತ್ರರಂದಲ್ಲೂ ಕೂಡ ಅವರ ನಟನೆಗೆ ಬಹಳ ಬೇಡಿಕೆ ಇದೆ. ಇತ್ತೀಚಿಗೆ ತೆರೆ ಕಂಡ ಕನ್ನಡದ ಪ್ಯಾನ್ ಇಂಡಿಯ ಮೂವಿ ಕಾಂತಾರ ಆದ ಮೇಲಂತೂ ಈಗ ದೇಶದಾದ್ಯಂತ ಇವರ ಖ್ಯಾತಿ ಇಮ್ಮಡಿಗೊಂಡಿದೆ.

ಕಾಂತರಾ ಸಿನಿಮಾದಲ್ಲಿ ಇವರು ನಿರ್ವಹಿಸಿರುವ ಆ ಪಾತ್ರವನ್ನು ಮತ್ಯಾವ ನಟನಿಂದಲೂ ಅಷ್ಟು ಜೀವಂತಿಕೆ ತುಂಬಿ ನೈಜವಾಗಿ ಅಭಿನಯಿಸಲು ಅಸಾಧ್ಯ ಎಂದೇ ಸಿನಿಮಾ ನೋಡಿದವರೆಲ್ಲರ ಅಭಿಪ್ರಾಯ. ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದ ಇವರ ಆ ಪಾತ್ರದಲ್ಲಿನ ಸಹಜತೆಗೆ ಕಾರಣ ಅವರ ನಿಜವಾದ ವ್ಯಕ್ತಿತ್ವ ಅಂದರೆ ತಪ್ಪಾಗಲಾರದು. ಕಾರಣ ನಿಜ ಜೀವನದಲ್ಲೂ ಇವರು ಬೆಟ್ಟ-ಗುಡ್ಡ, ಕಾಡು-ಮೇಡುಗಳನ್ನು ಪ್ರೀತಿಸುವ ಪ್ರಕೃತಿ ಪ್ರೇಮಿ ಆಗಿದ್ದರೆ.

ನಟ ಕಿಶೋರ್ ಅವರ ದುಡಿಮೆಗೆ ಅವರು ಬೆಂಗಳೂರು ನಗರದ ಪ್ರತಿಷ್ಠಿತ ಏರಿಯಾದಲ್ಲಿ ಐಷಾರಾಮಿ ಬದುಕು ಕಳೆಯಬಹುದಿತ್ತು ಆದರೆ ನಟ ಕಿಶೋರ್ ಹಾಗೂ ಅವರ ಪತ್ನಿಗಿರುವ ನಿಸರ್ಗದ ಬಗೆಗಿನ ಒಲವು ಅವರು ಕಾಡಿನ ಮಧ್ಯೆ ಜೀವನ ಕಟ್ಟಿಕೊಳ್ಳುವಂತೆ ಪ್ರೇರೇಪಿಸಿದೆ. ನಟನಾಗಿ ಅಲ್ಲದೆ ಈ ಮಣ್ಣಿನ ಮಗನ ಆ ವ್ಯಕ್ತಿತ್ವ ನಾವೆಲ್ಲ ಪಾಲಿಸಿದಷ್ಟು ಆದರ್ಶವಾಗಿದೆ. ಓದಿದ್ದು ಸಿಎ ಆದರೂ ಕಿಶೋರ್ ಅವರು ಸಿನಿಮಾ ಕಡೆ ಬಂದ ಕಥೆಯೇ ರೋಚಕ, ಸಿನಿಮಾ ಕಲಾವಿದನಾಗಿದ್ದರು ಅವರು ಈಗ ಬದುಕುತ್ತಿರುವ ಈ ಬದುಕು ಅದಕ್ಕಿಂತಲೂ ಮೋಹಕ.

ಯಾಕೆಂದರೆ ನಟ ಕಿಶೋರ್ ಅವರು ಕೋಟಿ ಕೋಟಿ ಆಸ್ತಿಯ ಮಾಲೀಕನಾಗಿದ್ದರೆ ಜೊತೆಗೆ ಇವರ ಪತ್ನಿ ವಿಶಾಲಾಕ್ಷಿ ಕೂಡ ತಿಂಗಳಿಗೆ 3 ಲಕ್ಷ ದುಡಿಯುವ ದೊಡ್ಡ ಕೆಲಸದಲ್ಲಿದ್ದರು. ಆದರೆ ಎಲ್ಲವನ್ನು ಬಿಟ್ಟು ಕಾಡಿನಲ್ಲಿ ಮನೆ ಕಟ್ಟಿಕೊಂಡು ಸರಳವಾಗಿ ಜೀವಿಸುತ್ತಿದ್ದಾರೆ. ಕಾಡಿನ ಸಮೀಪ ಇರುವ ಹಳ್ಳಿ ಒಂದರಲ್ಲಿ ತಮ್ಮ ಇಚ್ಛೆಯಂತೆ ಕಾಡು ಬೆಟ್ಟ ನೀರು ಹಳ್ಳಕೊಳ್ಳ ಇರುವ ಪ್ರದೇಶದಲ್ಲಿ ಜಮೀನು ಖರೀದಿಸಿ ಕೃಷಿ ಮಾಡುತ್ತಾ ಅಕ್ಷರಶಃ ಆರ್ಗೆನಿಕ್ ಜೀವನವನ್ನು ನಡೆಸುತ್ತಿದ್ದಾರೆ.

ಅಲ್ಲದೆ ಇವರಿಬ್ಬರು ಮಕ್ಕಳು ಕೂಡ ಇವರೊಂದಿಗೆ ಅದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಣ್ಣಿನಿಂದ ಮಾಡಿದ ಹೆಂಚಿನ ಮನೆ ನಿರ್ಮಿಸಿಕೊಂಡಿರುವ ಅವರ ಮನೆಯ ಸೊಬಗು ಯಾವುದೇ ಅರಮನೆಗಿಂತ ಕಡಿಮೆ ಇಲ್ಲ. ಯಾಕೆಂದರೆ ತಮ್ಮ ಜೊತೆ ಸಾಧ್ಯವಾದಷ್ಟು ಎಲ್ಲಾ ಪ್ರಾಣಿಗಳನ್ನು ಸಾಕಬೇಕು ಎಂದು ಆಸೆ ಹೊಂದಿರುವ ಇವರು ದೊಡ್ಡದಾಗಿ ಮನೆ ನಿರ್ಮಿಸಿದ್ದಾರೆ. ಅಲ್ಲಿ ಪ್ರತ್ಯೇಕವಾಗಿ ಸಾಕುವ ಪ್ರಾಣಿಗಳಿಗೂ ಕೂಡ ಜಾಗ ಮಾಡಿ ಕೊಟ್ಟಿದ್ದಾರೆ.

ಇದರ ಅಡಿಗೆ ಮನೆಯಲ್ಲಂತೂ ಪ್ಲಾಸ್ಟಿಕ್ ವಸ್ತು ಸಿಗುವುದಿಲ್ಲ ಎಂದೇ ಹೇಳಬಹುದು. ನಮ್ಮ ಮೂರು ತಲೆಮಾರಿನ ಹಿಂದಿನ ಮಂದಿ ಹೇಗೆ ಬದುಕುತ್ತಿದ್ದರು ಹಾಗೆ ಮರಗಳಿಂದ ಮಾಡಿದ ಅಡುಗೆ ಸಲಕರಣೆಗಳು ಹಾಗೂ ಮಣ್ಣಿಂದ ಮಾಡಿದ ಮಡಿಕೆಗಳು ಇವರ ಅಡಿಗೆ ಮನೆಯನ್ನು ಅಲಂಕರಿಸಿವೆ. ಇವರ ಮನೆ ತುಂಬಾ ಅವರೇ ಬೆಳೆದ ತರಕಾರಿಗಳಿವೆ, ಕ್ಯಾರೆಟ್ ಕ್ಯಾಪ್ಸಿಕಮ್ ಇಂದ ಹಿಡಿದು ಟೊಮೇಟೊ ನಿಂಬೆಹಣ್ಣಿನವರೆಗೆ, ಸೊಪ್ಪು ತರಕಾರಿಗಳವರೆಗೆ ಜೊತೆಗೆ ಸೀಬೆ ನೆರಳೆಯಿಂದ ಡ್ರೈ ಫ್ರೂಟ್ ತನಕ ಜೊತೆಗೆ ರೇಷ್ಮೆಯನ್ನು ಕೂಡ ಇವರೇ ಅವರ ಜಮೀನಿನಲ್ಲಿ ಬೆಳೆಯುತ್ತಿದ್ದಾರೆ.

ಸಿನಿಮಾ ಇಲ್ಲ ಎಂದರೆ ಕಿಶೋರ್ ಅವರು ಕಾಣಿಸಿಕೊಳ್ಳುವುದು ಅವರ ಜಮೀನಿನಲ್ಲೇ. ಪ್ರೈವೇಟ್ ಜೆಟ್ ಖರೀದಿಸಿ ದೇಶವೆಲ್ಲ ಸುತ್ತಾಡುವಷ್ಟು ಸೌಕರ್ಯ ಹೊಂದಿರುವ ಕಿಶೋರ್ ಅವರು ಬಿಡುವಿದ್ದಾಗೆಲ್ಲಾ ಹೊಲದಲ್ಲಿ ಇಳಿದು ಕೆಲಸಮಾಡುವಷ್ಟು ಸರಳತೆ ರೂಡಿಸಿಕೊಂಡಿದ್ದಾರೆ. ಅವರ ಈ ಅಪರೂಪದ ವಿಡಿಯೋವನ್ನು ನೋಡಿದರೆ ನಿಮಗೆ ಅವರ ಲೈಫ್ ಸ್ಟೈಲ್ ಬಗ್ಗೆ ತಿಳಿಯುತ್ತದೆ.

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ರಮ್ಯಾ ಮೊದಲ ಸಿನಿಮಾಗಾಗಿ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಅಪ್ಪು ಕೊಟ್ಟ ಚೆಕ್ ನಲ್ಲಿ ಎಷ್ಟು ಹಣ ಇತ್ತು ಗೊತ್ತ.?

 

ಚಂದನವನದ ಮೋಹಕ ತಾರೆ ರಮ್ಯಾ ಅವರು ಸ್ಯಾಂಡಲ್ವುಡ್ ಕ್ವೀನ್ ಕೂಡ. ಪಡ್ಡೆ ಹೈಕಳಿಂದ ಪ್ರೀತಿಯಿಂದ ಪದ್ಮಾವತಿ ಎಂದು ಕೂಡ ಕರೆಸಿಕೊಳ್ಳುವ ಈ ಲಕ್ಕಿ ಡಾಲ್ ಸಿನಿಮಾರಂಗದಿಂದ ದೂರವಾಗಿ ದಶಕವೇ ಕಳೆದಿದ್ದರು ಇವರಿಗೆ ಇರುವ ಅಭಿಮಾನಿಗಳು ಈಗಿನ ಬಹುತೇಕ ಹೀರೋಗಳಿಗೆ ಇಲ್ಲ ಎಂದೇ ಹೇಳಬಹುದು. ತಮ್ಮ ಮೋಹಕ ಮೈಮಾಟ, ನಗು ಮುಖ, ಸೌಂದರ್ಯಕ್ಕೆ ತಕ್ಕ ಟ್ಯಾಲೆಂಟ್ ಇದೆಲ್ಲ ಕಾರಣದಿಂದಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಹೀರೋಯಿನ್ ಇವರು.

ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ದಿನದಿಂದಲೂ ಕೂಡ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಇವರಿಗೆ ಈಗಲೂ ಸಹ ಸಿನಿಮಾರಂಗದಲ್ಲಿ ನಾಯಕಿಯಾಗಿ ಬಹಳ ಬೇಡಕೆ ಇದೆ. ಈ ವರ್ಷ ಆಪಲ್ ಬಾಕ್ಸ್ ನಿರ್ಮಾಣ ಸಂಸ್ಥೆಯಿಂದ ಬಿಡುಗಡೆ ಆಗುತ್ತಿರುವ ಸ್ವಾತಿ ಮುತ್ತಿನ ಮಳೆಹನಿಗೆ ಸಿನಿಮಾದ ನಿರ್ಮಾಪಕಿಯಾಗಿ ಮತ್ತು ಡಾಲಿ ಧನಂಜಯ್ ಜೊತೆ ಉತ್ತರ ಕಾಂಡ ಸಿನಿಮಾಗೆ ನಾಯಕಿಯಾಗಿ ಮತ್ತೆ ಸ್ಯಾಂಡಲ್ವುಡ್ ಗೆ ಕಂಬ್ಯಾಕ್ ಆಗುತ್ತಿರುವ ರಮ್ಯ ಅವರು ಇತ್ತೀಚೆಗೆ ಜೀ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕ್ರಮಕ್ಕೆ ಮೊದಲ ಅತಿಥಿಯಾಗಿ ಬಂದಿದ್ದರು.

ಕಾರ್ಯಕ್ರಮದಲ್ಲಿ ಇದುವರೆಗೆ ರಮ್ಯಾ ಅವರ ಬಗ್ಗೆ ತಿಳಿದಿರದ ಅನೇಕ ವಿಚಾರಗಳು ಹೊರ ಬಿದ್ದಿವೆ. ರಮ್ಯಾ ಅವರೇ ತಮ್ಮ ಜೀವನದ ಅನೇಕ ಸ್ವಾರಸ್ಯಕರ ವಿಷಯಗಳನ್ನು ವೀಕೆಂಡ್ ವಿತ್ ರಮೇಶ್ ಟೆಂಟ್ನಲ್ಲಿ ಹೇಳಿಕೊಂಡಿದ್ದಾರೆ. ಇದರ ನಡುವೆ ಹೆಚ್ಚಿನ ಜನರ ಗಮನ ಸೆಳೆದಿದ್ದು, ಇವರು ಮೊದಲ ಸಿನಿಮಾದ ನಾಯಕಿಯಾಗಿ ಆಯ್ಕೆ ಆಗಿದ್ದರ ಬಗ್ಗೆ ಮತ್ತು ಅದಕ್ಕಾಗಿ ಪಡೆದ ಸಂಭಾವನೆ ಬಗ್ಗೆ.

ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ ಅಭಿನಯಿಸಿದ ಮೊದಲ ಚಿತ್ರ ಅಪ್ಪು. ಆ ಸಿನಿಮಾದ ಆಡಿಶನ್ ಗೆ ಕೂಡ ರಮ್ಯಾ ಅವರು ಹೋಗಿದ್ದರಂತೆ. ಆದರೆ ಇದು ರೀಮೆಕ್ ಚಿತ್ರವಾದ ಕಾರಣ ತೆಲುಗಿನಲ್ಲಿ ಈಗಾಗಲೇ ಈ ಸಿನಿಮಾದಲ್ಲಿ ಅಭಿನಯಿಸಿದ್ದ ರಕ್ಷಿತಾ ಅವರನ್ನು ಈ ಸಿನಿಮಾಗೆ ಹಾಕಿಕೊಳ್ಳಲಾಯಿತು. ಆದರೆ ಮೊದಲಿನಿಂದಲೂ ಕನ್ನಡದ ನಟಿಯರಿಗೆ ಮಣೆ ಹಾಕಿದ್ದ ವಜ್ರೇಶ್ವರಿ ಸಂಸ್ಥೆ ರಮ್ಯಾ ಅವರನ್ನು ಅಪ್ಪು ಮುಂದಿನ ಸಿನಿಮಾಗೆ ಕಾಯ್ದಿರಿಸಿತ್ತು. ನಂತರ 2013ರಲ್ಲಿ ಪುನೀತ್ ರಾಜಕುಮಾರ್ ಅವರ ಎರಡನೇ ಚಿತ್ರ ಅಭಿ ಸಿನಿಮಾದಲ್ಲಿ ಮೊದಲ ಬಾರಿಗೆ ಅವರು ನಾಯಕಿಯಾಗಿ ಇಂಡಸ್ಟಿಗೆ ಪಾದಾರ್ಪಣೆ ಮಾಡಿದರು.

ರ ಎನ್ನುವ ಅಕ್ಷಣವು ಸಿನಿಮಾ ರಂಗದಲ್ಲಿ ಅದೃಷ್ಟ ತರುತ್ತದೆ ಎನ್ನುವ ಕಾರಣಕ್ಕಾಗಿ ಸ್ವತಃ ಪಾರ್ವತಮ್ಮ ರಾಜಕುಮಾರ್ ಅವರೇ ದಿವ್ಯ ಸ್ಪಂದನ ಎನ್ನುವ ಹೆಸರಿನ ಬದಲಿಗೆ ರಮ್ಯಾ ಎನ್ನುವ ಮರು ನಾಮಕರಣ ಮಾಡಿದರಂತೆ. ಅಭಿ ಸಿನಿಮಾದ ನಟನೆಗಾಗಿ ರಮ್ಯಾ ಅವರು 40,000ಗಳನ್ನು ಸಂಭಾವನೆಯಾಗಿ ಪಡೆದರಂತೆ. ಆಗಿನ ಸಮಕಾಲಿನ ನಟಿಯರಲ್ಲಿ ರಮ್ಯಾ ಅವರೇ ಮೊದಲ ಬಾರಿಗೆ ಮೊದಲ ಸಿನಿಮಾಗಾಗಿ ಇಷ್ಟು ಸಂಭಾವನೆ ಪಡೆದ ನಟಿ ಆಗಿದ್ದರಂತೆ.

ಅದಾಗಲೇ ಅಪ್ಪು ಅವರ ಅಭಿಮಾನಿಯಾಗಿ ಹೋಗಿದ್ದ ರಮ್ಯ ಅವರು ಈ ಹಣವನ್ನು ಅಪ್ಪು ಇಂದಲೇ ಪಡೆಯಬೇಕು ಎಂದು ಹಠ ಮಾಡಿದ್ದರಂತೆ. ಅದಕ್ಕಾಗಿ ಪುನೀತ್ ರಾಜಕುಮಾರ್ ಅವರೇ ರೂ.40,000 ಚೆಕ್ಕನ್ನು ರಮ್ಯಾ ಅವರ ಕೈಗೆ ನೀಡಿದ್ದರಂತೆ. ಇದಾದ ಬಳಿಕ ಆಕಾಶ್ ಮತ್ತು ಅರಸು ಸಿನಿಮಾಗಳನ್ನು ಕೂಡ ಇವರಿಬ್ಬರ ಕಾಂಬಿನೇಶನ್ ಚೆನ್ನಾಗಿ ವರ್ಕ್ ಆಗಿತ್ತು. ಪುನೀತ್ ಅವರು ರಮ್ಯಾ ಅವರಿಗೆ ನೀವು ಕಂಬ್ಯಾಕ್ ಆದರೆ ನನ್ನ ಸಿನಿಮಾ ಮೂಲಕ ಆಗಬೇಕು ಎಂದು ಹೇಳಿದ್ದರಂತೆ. ಜೇಮ್ಸ್ ಸಿನಿಮಾದಲ್ಲೂ ಕೂಡ ಇವರಿಗೆ ಅಭಿನಯಿಸಲು ಆಫರ್ ಹೋಗಿತ್ತಂತೆ ಪಾತ್ರ ಒಪ್ಪಿಗೆ ಆಗದ ಕಾರಣ ರಮ್ಯಾ ಅವರು ನಟಿಸಲಿಲ್ಲವಂತೆ. ಇದಕ್ಕಾಗಿ ಇಂದಿಗೂ ಸಹ ರಮ್ಯಾ ಅವರು ಪಶ್ಚತ್ತಾಪ ಪಡುತ್ತಿದ್ದಾರಂತೆ.

ಕೃಷ್ಣ ಸಿನಿಮಾದಲ್ಲಿ ಆದ ಅನುಭವ ಹೇಳಿಕೊಂಡು ನೋವು ಹೊರ ಹಾಕಿದ ನಟಿ ಶರ್ಮಿಳಾ ಮಂಡ್ರೆ.

 

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೃಷ್ಣ ಸಿನಿಮಾ ಮಾಡುವಾಗ ಆದ ಅನುಭವಗಳ ಬಗ್ಗೆ ಹೇಳಿಕೊಂಡ ನಟಿ ಶರ್ಮಿಳಾ ಮಾಂಡ್ರೆ ಕಣ್ ಕಣ್ಣ ಸಲಿಗೆ, ನೀನು ಬಂದ ಮೇಲೆ ತಾನೆ ಇಷ್ಟು ಚೆಂದ ಈ ಬಾಳು, ಒಂದು ಸುಳ್ಳಾದರು ನುಡಿ ಹೆಣ್ಣೇ ಈ ಹಾಡುಗಳು ಕನ್ನಡದ ಎವರ್ಗ್ರೀನ್ ಹಾಡುಗಳು. ಈ ಹಾಡುಗಳು ಕೇಳುಗರನ್ನು ಮಾತ್ರವಲ್ಲದೆ ನೋಡುಗರನ್ನೂ ಕೂಡ ತನ್ನತ್ತ ಸೆಳೆಯುತ್ತದೆ. ಇದಕ್ಕೆ ಕಾರಣ ಅಪ್ಸರೆಯಂತೆ ಈ ಹಾಡುಗಳಲ್ಲಿ ಕಾಣಿಸಿಕೊಂಡಿರುವ ನಟಿ ಶರ್ಮಿಳಾ ಮಾಂಡ್ರೆ.

ಶರ್ಮಿಳಾ ಮಾಂಡ್ರೆ ಅವರು ಸುಮಾರು ಎರಡು ದಶಕಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯ ರಾಗಿದ್ದಾರೆ. ಇತ್ತೀಚೆಗೆ ಅವರ ಗಾಳಿಪಟ 2 ಸಿನಿಮಾ ಕೂಡ ಬಿಡುಗಡೆ ಆಗಿದೆ. ಈ ಸಮಯದಲ್ಲಿ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದ ಇವರು 16 ವರ್ಷದ ಹಿಂದೆ ಅವರು ಮಾಡಿದ ಕೃಷ್ಣ ಸಿನಿಮಾದ ಬಗ್ಗೆ ಹಾಗೂ ಆ ಸಮಯದಲ್ಲಿ ಆದ ಅನುಭವಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಸಜನಿ ಸಿನಿಮಾ ನನ್ನ ಮೊದಲ ಸಿನಿಮಾ, ಮ್ಯೂಸಿಕಲ್ ಆಗಿ ಸಿನಿಮಾ ಹೆಸರು ಮಾಡಿದರೂ ನಾವಂದು ಕೊಂಡ ದೊಡ್ಡ ಹಿಟ್ ಪಡೆಯಲಿಲ್ಲ. ಆದರೂ ನನ್ನನ್ನು ಸಾಕಷ್ಟು ಜನ ಗುರುತಿಸಿದರು. ನನಗೆ ಮುಂದಿನ ಅವಕಾಶಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು, ಆ ಸಮಯದಲ್ಲಿ ಕೃಷ್ಣ ಸಿನಿಮಾದ ನಿರ್ಮಾಪಕರಾದ ರಮೇಶ್ ಯಾದವ್ ಮತ್ತು ನಿರ್ದೇಶಕರಾದ ಶ್ರೀಧರ್ ಅವರು ನನ್ನನ್ನು ಭೇಟಿಯಾದರು. ನಮ್ಮ ಮನೆಯಲ್ಲಿ ಸಜನಿ ಸಿನಿಮಾದಲ್ಲಿ ಲಂಡನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಿಯಾ ಕೃಷ್ಣ ಸಿನಿಮಾದ ಪಾತ್ರ ಹಳ್ಳಿ ಹುಡುಗಿ ಪಾತ್ರ ನಿನ್ನಿಂದ ಆಗುತ್ತದೆಯಾ ಎಂದು ಹೇಳುತ್ತಿದ್ದರು.

ಆದರೂ ಕೂಡ ನಿರ್ದೇಶಕರು ಇಲ್ಲ ಇವರಿಗೆ ಆ ಸ್ಕಿಲ್ ಇದೆ, ಖಂಡಿತ ಈ ಪಾತ್ರ ಹಿಟ್ ಆಗುತ್ತದೆ ಎಂದು ಭರವಸೆ ತುಂಬಿಸಿ ನನ್ನನ್ನು ಆ ಪಾತ್ರಕ್ಕೆ ಹಾಕಿಕೊಂಡರು. ಅಂದುಕೊಂಡ ರೀತಿಯೇ ಕೃಷ್ಣ ಸಿನಿಮಾ ನನಗೆ ಒಳ್ಳೆ ಹೆಸರು ತಂದು ಕೊಟ್ಟಿತು. ನಾನು ಬೆಂಗಳೂರಿನಲ್ಲಿಯೇ ಬೆಳೆದಿದ್ದರಿಂದ ಹಳ್ಳಿಗಳ ಬಗ್ಗೆ ಹಳ್ಳಿಯಲ್ಲೇ ಇದ್ದು ವಾಸವಿದ್ದ ಬಗ್ಗೆ ಗೊತ್ತಿರಲಿಲ್ಲ. ಹಳ್ಳಿ ಎಂದರೆ ಯಾವಾಗಾದರೂ ಮೈಸೂರಿಗೆ ಅಥವಾ ಕೂರ್ಗ್ ಗೆ ಹೋಗಿ ಬರುತ್ತಿದ್ದ ನೆನಪು ಇರುತ್ತಿತ್ತು.

ಆದರೆ ಕೃಷ್ಣ ಸಿನಿಮಾದಲ್ಲಿ ನಟಿಸುವಾಗ ಹಳ್ಳಿಯಲ್ಲಿ ಬದುಕಿದ ಅನುಭವ ಸಿಕ್ಕಿತ್ತು. ಹಳ್ಳಿ ಸನ್ನಿವೇಶದ ಚಿತ್ರೀಕರಣ ನಡೆಯುವಾಗ ನಾವು ಚಿತ್ರದುರ್ಗದಲ್ಲಿ ಶೂಟಿಂಗ್ ಮಾಡುತ್ತಿದ್ದೆವು. ಆ ಸಮಯದಲ್ಲಿ ಅಲ್ಲಿ ಹೆಸರಾಂತ ಹೋಟೆಲ್ ಗಳು ಇರಲಿಲ್ಲ ಒಂದು ಗೆಸ್ಟ್ ಹೌಸ್ ಇಲ್ಲಿ ನಾವೆಲ್ಲಾ ಇದ್ದೆವು. ಅಲ್ಲಿ ಬಿಸಿ ನೀರಿನ ವ್ಯವಸ್ಥೆ ಕೂಡ ಇರಲಿಲ್ಲ, ಎಲ್ಲೋ ಕಾಯಿಸಿ ಬಕೆಟ್ಗಳಲ್ಲಿ ತುಂಬಿಸಿ ತಂದುಕೊಡುತ್ತಿದ್ದರು. ಅಕ್ಷರಶಃ ನಾವು 30 ದಿನಗಳ ಶೂಟಿಂಗ್ ಅಲ್ಲಿ 30 ದಿನಗಳು ಹಳ್ಳಿಗರ ರೀತಿಯೇ ಬದುಕಿದೆವು.

ನನ್ನ ಜೀವನ ಪೂರ್ತಿ ಆ ಸವಿ ನೆನಪು ಇರುತ್ತದೆ. ಈಗ ವ್ಯಾನಿಟಿ ಬ್ಯಾಗ್ ಇರುತ್ತದೆ ಆದರೆ ಕೃಷ್ಣ ಸಿನಿಮಾದ ಸಮಯದಲ್ಲಿ ಬೆಟ್ಟದ ಮೇಲೆಲ್ಲಾ ಶೂಟಿಂಗ್ ಮಾಡುವಾಗ ನಾವು ಡ್ರೆಸ್ ಚೇಂಜ್ ಮಾಡಬೇಕು ಎಂದರೆ ದೂರದಲ್ಲಿ ಹೋಗಿ ಡ್ರೆಸ್ ಚೇಂಜ್ ಮಾಡಿಕೊಂಡು ಬರುತ್ತಿದ್ದೆವು. ಎಲ್ಲವೂ ಅಷ್ಟು ಸರಳವಾಗಿತ್ತು. ನೆಟ್ ವರ್ಕ್ ಇರುತ್ತಿರಲಿಲ್ಲ, ಆಂಡ್ರಾಯ್ಡ್ ಫೋನ್ ಇರಲಿಲ್ಲ, ಸೋಶಿಯಲ್ ಮೀಡಿಯಾ ಇರಲಿಲ್ಲ ಆ ಕಾರಣಕ್ಕಾಗಿ ಆಕ್ಟಿಂಗ್ ಅಲ್ಲಿ ಇನ್ನೂ ಚೆನ್ನಾಗಿ ನಾವು ಇನ್ವೋಲ್ ಆಗಿರುತ್ತಿದ್ದೆವು. ಈಗ ಆಶ್ಚರ್ಯ ಆಗುವಷ್ಟು ಎಲ್ಲವೂ ಬದಲಾಗಿ ಹೋಗಿದೆ, ಎಂದು ತಮ್ಮ ಆ ದಿನಗಳನ್ನು ನೆನೆದು ಹೇಳಿಕೊಂಡಿದ್ದಾರೆ.