Home Blog Page 221

ಅಂದಿನ ಕಾಲದಲ್ಲೇ ಒಂದು ದಿನಕ್ಕೆ ಕೋಮಲ್ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತ.? ಮೊದಲ ಬಾರಿಗೆ ಮಾಧ್ಯಮದ ಮುಂದೆ ಸಂಭಾವನೆ ವಿಚಾರ ಬಿಚ್ಚಿಟ್ಟ ಕೋಮಲ್

ಕೋಮಲ್ ಕರ್ನಾಟಕದಲ್ಲಿ ಹಾಸ್ಯಕ್ಕೆ ಹೆಸರಾಂತ ನಟ.30 ವರ್ಷಗಳ ಕಾಲ ಸಿನಿಮಾ ಇಂಡಸ್ಟ್ರಿಯಲ್ಲಿ ಪಳಗಿರುವ ಕೋಮಲ್ ಅವರು ಈವರೆಗೆ ನೂರಾರು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರನ್ನು ನಕ್ಕು ನಗಿಸಿದ್ದಾರೆ. ಗೋವಿಂದಾಯ ನಮಃ, ಕರೋಡ್ಪತಿ ಮುಂತಾದ ಹಾಸ್ಯ ಸಿನಿಮಾಗಳಲ್ಲಿ ಹಾಸ್ಯನಾಯಕನಾಗಿದ್ದಾರೆ. ಬಹುತೇಕ ಕನ್ನಡದ ಎಲ್ಲಾ ಹೀರೋಗಳ ಸಿನಿಮಾದಲ್ಲೂ ಕೂಡ ಹೀರೋ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡು ಪಕ್ಕದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೋಮಲ್ ಅವನು ನಿಧಾನವಾಗಿ ಸಿನಿಮಾ ಇಂಡಸ್ಟ್ರಿಯಿಂದ ದೂರ ಆಗುತ್ತಿದ್ದಾರಾ ಎನ್ನುವ ಅನುಮಾನಗಳು ಕಾಡುತ್ತಿವೆ.

ಯಾಕೆಂದರೆ ಇತ್ತೀಚೆಗೆ ಕೋಮಲ್ ಅವರು ಯಾವ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿಲ್ಲ ಆದರೆ ಅವರ ಬಹು ನಿರೀಕ್ಷಿತ ಚಿತ್ರ ಉಂಡೆನಾಮ ಸದ್ಯದಲ್ಲೇ ಪ್ರೇಕ್ಷಕರು ಎದುರು ಬರುತ್ತಿದೆ. ಇದಕ್ಕೆ ಸಂಬಂಧಪಟ್ಟ ಒಂದು ಸಂದರ್ಶನದಲ್ಲಿ ಮಾತನಾಡಿದ ಕೋಮಲ್ ಅವರು ಇದರ ಬಗ್ಗೆ ಕೇಳಿದ ಪ್ರಶ್ನೆಗೆ ಕೊಟ್ಟ ಉತ್ತರ ಈ ರೀತಿ ಇತ್ತು. ಹೌದು ನನ್ನ ಸಿನಿ ಜರ್ನಿಗೆ 30 ವರ್ಷ ಹಾಗಿದೆ. 1992 ರಲ್ಲಿ ಸೂಪರ್ ನನ್ ಮಗ ಸಿನಿಮಾ ಮೂಲಕ ಬಂದೆ, ಹೇಗೆ ಇಷ್ಟು ವರ್ಷ ಕಳೆಯಿತು ಎಂದು ಗೊತ್ತೇ ಆಗಲಿಲ್ಲ.

ಜನರು ನನ್ನನ್ನು ಆ ಬ್ರಾಂಡ್ ಅಲ್ಲಿ ಒಪ್ಪಿಕೊಂಡಿದ್ದಾರೆ. ಈಗ ಅದನ್ನು ಕಳೆದುಕೊಳ್ಳುವುದಕ್ಕೆ ಇಷ್ಟ ಇಲ್ಲ. ಜನರಿಗೆ ಅವರ ನಿರೀಕ್ಷೆಗೆ ತಕ್ಕ ಹಾಗೆ ಖುಷಿ ಕೊಡಬೇಕು ಎನ್ನುವ ಕಾರಣಕ್ಕೆ ನನ್ನ ಕೆಲಸದಲ್ಲಿ ಇನ್ನಷ್ಟು ಹೊಸತನ ತರಲು, ಶಕ್ತಿ ತುಂಬಲು ಪ್ರಯತ್ನ ಮಾಡುತ್ತಲೇ ಇರುತ್ತೇನೆ, ಅದಕ್ಕಾಗಿ ಕಲಿಯುತ್ತಾನೆ ಇರುತ್ತೇನೆ. ಜನರಿಗೆ ಹತ್ತಿರವಾಗುವಂತಹ ಪಾತ್ರಗಳು ಅವರನ್ನು ಬೇಗ ಮುಟ್ಟುತ್ತವೆ ಅಂತಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರಿಂದ ಜನ ಇನ್ನೂ ನನ್ನನ್ನು ನೆನಪಿಟ್ಟುಕೊಂಡಿದ್ದಾರೆ, ಇಷ್ಟಪಡುತ್ತಿದ್ದಾರೆ.

ಈಗಂತೂ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ದೊಡ್ಡ ಕಾಂಪಿಟೇಶನ್ ಇದೆ ಆದರೆ ಆ ಕಾರಣಕ್ಕಾಗಿ ನಾನು ಇಂಡಸ್ಟ್ರಿಯಿಂದ ದೂರ ಉಳಿದಿಲ್ಲ ಅಥವಾ ಸಿನಿಮಾಗಳಲ್ಲಿ ನಡೆಸುತ್ತಿಲ್ಲ ಎಂದು ಅಲ್ಲ, ಸಂಭಾವನೆ ವಿಚಾರವಾಗಿ ನನಗೆ ಒಪ್ಪಿಗೆ ಆಗುತ್ತಿಲ್ಲ. ಯಾಕೆಂದರೆ ನಾನು ಆ ಕಾಲದಲ್ಲೇ ಒಂದು ದಿನಕ್ಕೆ 4 ಲಕ್ಷ ಸಂಭಾವನೆ ತೆಗೆದುಕೊಳ್ಳುತ್ತಿದ್ದವನು. ಒಂದು ಏರಿಯಾದ ಏಳು ಥಿಯೇಟರ್ ಗಳಲ್ಲೂ ಕೂಡ ನನ್ನ ನಟನೆ ಸಿನಿಮಾ ಇರುತ್ತಿತ್ತು.

ದತ್ತ, ಹುಡುಕಾಟ, ಚೆಲುವಿನ ಚಿತ್ತಾರ ಆ ಸಮಯದಲ್ಲೇ ಈ ರೀತಿ ಇತ್ತು. ನಿಜ ಹೇಳಬೇಕು ಎಂದರೆ ಸಿನಿಮಾ ಇಂಡಸ್ಟ್ರಿಯಲ್ಲಿ ಹಾಸ್ಯ ನಟರಿಗೆ ಸಂಭಾವನೆ ಹೆಚ್ಚಿಸಿದ್ದೆ ನಾನು, ಯಾಕೆಂದರೆ ಹಾಸ್ಯ ಮಾಡುವುದು ಬಹಳ ಕಷ್ಟ. ಅದು ಕೂಡ ಅಭಿನಯವೇ ಅಲ್ಲವೇ, ಜನ ನಮ್ಮನ್ನು ಸಿನಿಮಾದಲ್ಲಿ ನೋಡಲು ಇಷ್ಟ ಪಡುತ್ತಿದ್ದಾರೆ ಎಂದರೆ ನಮಗೂ ಆ ರೀತಿ ಸಂಭಾವನೆ ಬೇಕು ಎಂದು ಧ್ವನಿ ಎತ್ತಿದವನೇ ನಾನು.

ನಾನು ಕೂಡ ಆ ಪಾತ್ರಕ್ಕಾಗೆ ಸಾಕಷ್ಟು ಹೋಂವರ್ಕ್ ಮಾಡುತ್ತೇನೆ, ಪ್ರಾಕ್ಟೀಸ್ ಮಾಡುತ್ತೇನೆ. ಅದಕ್ಕಾಗಿ ಅದಕ್ಕೆ ಬೆಲೆ ಸಲ್ಲಲೇ ಬೇಕು ಎನ್ನುವುದು ನನ್ನ ಯೋಚನೆ ಲಹರಿ. ಇದೇ ಕಾರಣಕ್ಕಾಗಿ ನಾನು ಇತ್ತೀಚಿಗೆ ಹಲವು ಸಿನಿಮಾಗಳನ್ನು ಕಳೆದುಕೊಂಡೆ. ನಟಸಾರ್ವಭೌಮ ಸಿನಿಮಾದಲ್ಲೂ ಕೂಡ ನನಗೆ ಆಫರ್ ಮಾಡಿದ್ದರು. ಆದರೆ ಇದೇ ರೀತಿ ಸಂಭಾವನೆ ವಿಚಾರವಾಗಿ ಸುಮ್ಮನಾದೆ, ಆದರೆ ಈಗ ಪಶ್ಚಾತಾಪ ಆಗುತ್ತಿದೆ ಪುನೀತ್ ಅವರ ಜೊತೆ ಆ ಸಿನಿಮಾ ಮಾಡಬೇಕಿತ್ತು ಎಂದು ಈ ಇಂಟರ್ವ್ಯೂ ಅಲ್ಲಿ ಹೇಳಿಕೊಂಡಿದ್ದಾರೆ.

ದೇವರಕೊಂಡಗೆ ಕೈ ಕೊಟ್ಟು, ಬೆಲ್ಲಂಕೊಂಡ ಜೊತೆ ಡೇಟಿಂಗ್ ಶೂರು ಮಾಡಿದ ನಟಿ ರಶ್ಮಿಕಾ ಮಂದಣ್ಣ.

 

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ದೇಶದಾದ್ಯಂತ ಫೇಮಸ್, ಕನ್ನಡತಿಯ ಖ್ಯಾತಿ ಈಗ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಹಬ್ಬಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲೂ ಕೂಡ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವ ಅದೃಷ್ಟ ಪಡೆದುಕೊಂಡಿರುವ ಈಕೆ ಸಿನಿಮಾ ವಿಚಾರವಾಗಿ ಸದಾ ಸುದ್ದಿಯಲ್ಲಿ ಇರುವುದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಇವರ ಡೇಟಿಂಗ್ ವಿಚಾರ ಸದಾ ಚರ್ಚೆಯಲ್ಲಿ ಇರುತ್ತದೆ.

ಕರ್ನಾಟಕದ ಟ್ರೋಲ್ ಪೇಜ್ ಗಳ ಪಾಲಿಗಂತೂ ಈಕೆ ಸದಾ ಕಂಟೆಂಟ್. ರಶ್ಮಿಕಾ ಮಂದಣ್ಣ ಕೊಡುವ ಪ್ರತಿಯೊಂದು ಸ್ಟೇಟ್ಮೆಂಟ್ ಗಳು ಹಾಗೂ ಕನ್ನಡ ಮತ್ತು ಕರ್ನಾಟಕದ ಬಗೆಗಿನ ವಿಷಯದಲ್ಲಿ ಅವರು ನಡೆದುಕೊಳ್ಳುವ ನಡವಳಿಕೆಗಳು ಅದೇ ರೀತಿ ಇರುವುದರಿಂದ ಕರ್ನಾಟಕದಲ್ಲಿ ಸದಾ ಇವರು ಟ್ರೊಲ್ ಆಗುತ್ತಲೇ ಇರುತ್ತಾರೆ. ಟ್ರೋಲ್ ವಿಚಾರವನ್ನು ಬಿಟ್ಟರೆ ಅವರ ಪರ್ಸನಲ್ ವಿಚಾರ ಕೂಡ ಸದಾ ಸೋಶಿಯಲ್ ಮೀಡಿಯಾದಲ್ಲಿ ಕಾರ್ನರ್ ಪಾಯಿಂಟ್ ಆಗಿರುತ್ತದೆ.

ರಶ್ಮಿಕ ಪ್ರೀತಿ, ಬ್ರೇಕ್ ಅಪ್, ಡೇಟಿಂಗ್ ಇತ್ಯಾದಿ ವಿಚಾರಗಳು ಪದೇಪದೇ ಚರ್ಚೆಯಾಗುತ್ತಲೇ ಇರುತ್ತವೆ. ಇದುವರೆಗೆ ತೆಲುಗು ನಟ ವಿಜಯ್ ದೇವರಕೊಂಡ ಜೊತೆ ರಶ್ಮಿಕ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದೇ ಎಲ್ಲರೂ ನಂಬಿದ್ದರು. ಇವರಿಬ್ಬರ ಕೆಮಿಸ್ಟ್ರಿ ತೆರೆ ಮೇಲೆ ಚೆನ್ನಾಗಿ ವರ್ಕ್ ಆಗುತ್ತಿರುವುದರಿಂದ ಆಫ್ ಸ್ಕ್ರೀನ್ ಅಲ್ಲೂ ಕೂಡ ಇವರಿಬ್ಬರೂ ಬಹಳ ಆತ್ಮೀಯರಾಗಿದ್ದಾರೆ ಎನ್ನುವ ಸುದ್ದಿಗಳು ಹಬ್ಬಿದ್ದವು. ಗೀತಾ ಗೋವಿಂದಂ ಸಿನಿಮಾ ರಿಲೀಸ್ ಆದ ಮೇಲೆ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ನಡುವಿನ ನಿಶ್ಚಿತಾರ್ಥ ಮುರಿದು ಬಿದ್ದಕ್ಕೂ ವಿಜಯ ದೇವರಕೊಂಡ ಅವರೇ ಕಾರಣ ಎನ್ನುವ ಮಾತುಗಳು ಕೇಳಿ ಬಂದಿದ್ದವು.

ಇದುವರೆಗೂ ಕೂಡ ತಮ್ಮ ನಡುವಿನ ಪ್ರೀತಿ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಳ್ಳದೇ ಇರುವ ಈ ಜೋಡಿ ತಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಗಳು ಅಷ್ಟೇ ಎಂದೇ ಹೇಳುತ್ತಿದ್ದಾರೆ. ಇವರಿಬ್ಬರ ಹಂಚಿಕೊಳ್ಳುವ ವಿದೇಶಿ ಪ್ರವಾಸದ ಫೋಟೋಗಳು ಮತ್ತು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ರೀತಿಯು ಇಬ್ಬರು ಅಘೋಷಿತ ಜೋಡಿಗಳು ಎನ್ನುವುದನ್ನೇ ಖಚಿತ ಪಡಿಸುತ್ತವೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಗೀತ ಗೋವಿಂದಂ ಬಳಿಕ ಡಿಯರ್ ಕಾಮ್ರೆಡ್ ಸಿನಿಮಾದಲ್ಲಿ ಕೂಡ ಇವರಿಬ್ಬರ ಕಾಂಬಿನೇಷನ್ ಚೆನ್ನಾಗಿ ವರ್ಕ್ ಆಗಿದೆ.

ಟಾಲಿವುಡ್ ವಲಯದಲ್ಲಿ ಇವರಿಬ್ಬರ ನಡುವೆ ಸ್ನೇಹಕ್ಕೂ ಮೀರಿದ ಅನ್ಯೋನ್ಯತೆ ಇದೆ ಎನ್ನುವುದು ಬಲವಾಗಿ ನಂಬಲಾಗಿತ್ತು. ಆದ್ರೆ ನಟಿಯ ಇತ್ತೀಚಿನ ವರ್ತನೆ ಇವರಿಬ್ಬರ ನಡುವೆ ಏನೋ ಸರಿ ಇಲ್ಲ ಅನ್ನುವುದನ್ನು ಸೂಚಿಸುತ್ತಿದೆ. ಅದಲ್ಲದೆ ವಿಜಯದೇವರಕೊಂಡ ಅವರ ಜೊತೆ ಬ್ರೇಕ್ ಅಪ್ ಮಾಡಿಕೊಂಡಿದ್ದಾರಾ ಎನ್ನುವ ಅನುಮಾನವನ್ನು ಕೂಡ ತರಿಸುತ್ತಿದೆ.

ರಶ್ಮಿಕ ಮಂದಣ್ಣ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅವರೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಇಬ್ಬರು ಒಟ್ಟಿಗೆ ಪಾಪರಾಜಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಸಿನಿಮಾ ವಿಷಯ ಹೊರತುಪಡಿಸಿ ಆಗಾಗ ಒಟ್ಟಿಗೆ ಸಾರ್ವಜನಿಕವಾಗಿ ಇವರಿಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ನಡುವೆ ಪ್ರೀತಿ ಕೂಡ ಇದೆ ಎನ್ನುವ ಗಾಸಿಪ್ ಸಹಾ ಹರಿದಾಡುತ್ತಿದೆ.

ಇದರ ಸಂಬಂಧಿತವಾಗಿ ಸೋಶಿಯಲ್ ಮೀಡಿಯಾದಲ್ಲೂ ಕೂಡ ನಿನ್ನೆಯಿಂದ ಸಾಕಷ್ಟು ವಿಚಾರಗಳು ಹರಿದಾಡಿವೆ. ಆದರೆ ಅಧಿಕೃತವಾಗಿ ಇವರೇ ಒಪ್ಪಿಕೊಳ್ಳುವ ತನಕ ಯಾವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಬಹುತೇಕರಿಗೆ ವಿಜಯದೇವರಕೊಂಡ ಮತ್ತು ರಶ್ಮಿಕ ಜೋಡಿ ಇಷ್ಟವಾಗಿರುವುದರಿಂದ ಈ ಸುದ್ದಿ ಸುಳ್ಳಾಗಲಿ ಎನ್ನುವುದನ್ನು ಇಚ್ಚಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

 

ಮುಂದಿನ ಶೋ ನಲ್ಲಿ ಎಲ್ಲಾ ಅಜ್ಜಿಯರಿಗಾಗಿ ಕನ್ನಡದಲ್ಲಿ ಮಾತಾಡ್ತಿನಿ ಟ್ರೋಲ್ ಗೆ ಪ್ರತಿಕ್ರಿಯೆ ನೀಡಿದ ನಟಿ ರಮ್ಯಾ.

 

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿಥ್ ರಮೇಶ್ ಮತ್ತೆ ಆರಂಭಗೊಂಡಿದೆ. ಆ ಬಾರಿ ನಾಲ್ಕು ವರ್ಷಗಳ ನಂತರ ಸೀಸನ್ 5 ಆರಂಭವಾಗುತ್ತಿದ್ದು ಮೊದಲ ಅತಿಥಿಯಾಗಿ ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯ ಅವರು ಸಾಧಕರ ಸೀಟ್ ಅಲಂಕರಿಸಿದ್ದಾರೆ. ವಾಹಿನಿಯು ತಿಂಗಳ ಹಿಂದೆಯಿಂದಲೇ ಪ್ರೋಮೋಗಳನ್ನು ಹರಿಬಿಟ್ಟು ಪ್ರೇಕ್ಷಕರಿಗೂ ಯಾವ ಸಾಧಕರನ್ನು ಕೆಂಪು ಕುರ್ಚಿ ಮೇಲೆ ನೋಡಲು ಇಷ್ಟ ಪಡುತ್ತೀರಾ ಎಂದು ಪ್ರಶ್ನೆ ಮಾಡಲಾಗಿತ್ತು.

ಅತಿ ಹೆಚ್ಚಿನವರು ಈ ಬಾರಿ ರಿಷಭ್ ಶೆಟ್ಟಿ, ರಮ್ಯಾ ಮತ್ತು ಡಾ.ಬ್ರೋ ಅವರ ಹೆಸರನ್ನು ಹೇಳಿದ್ದರು. ಅಂತಿಮವಾಗಿ ಕಳೆದು ನಾಲ್ಕು ಸೀಸನ್ ಗಳಿಂದಲೂ ಕಿರುತೆರೆ ಪ್ರೇಕ್ಷಕರು ಕಾಯುತ್ತಿದ್ದ ರಮ್ಯಾ ಅವರ ಮೊದಲ ಅತಿಥಿಯಾಗಿ ಬಂದಿದ್ದಾರೆ. ಈ ಶನಿವಾರ ಮತ್ತು ಭಾನುವಾರ ರಮ್ಯಾ ಅವರು ಅತಿಥಿಯಾಗಿ ಆಗಮಿಸಿ ತನ್ನ ಬದುಕಿನ ಯಾನದ ಬಗ್ಗೆ ಹಾಗೂ ಅವರ ಯಶಸ್ಸಿನ ಏರಿಳಿತಗಳ ಬಗ್ಗೆ ಕುಟುಂಬ, ಸ್ನೇಹಿತರು, ರಾಜಕೀಯ ಮತ್ತು ಸಿನಿಮಾ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ರಮ್ಯಾ ಅವರು ಈ ಕಾರ್ಯಕ್ರಮದಲ್ಲಿ ಕೆಲ ಘಳಿಗೆ ಭಾವುಕರಾಗಿ ಕಣ್ಣೀರು ಕೂಡ ಇಟ್ಟಿದ್ದಾರೆ. ಎಲ್ಲವೂ ಸರಿ ಇತ್ತು, ಆದರೆ ಕನ್ನಡ ಕಾರ್ಯಕ್ರಮದಲ್ಲಿ ರಮ್ಯ ಅವರು ಅತಿ ಹೆಚ್ಚು ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದ್ದು ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡಿದೆ. ಈ ಕಾರಣಕ್ಕಾಗಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಹಾಗೂ ರಮ್ಯಾ ಅವರನ್ನು ಸಖತ್ ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಜೀ ಕನ್ನಡ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರನ್ನು ಎಳೆತರಲಾಗುತ್ತಿದೆ.

ಒಂದರ್ಥದಲ್ಲಿ ಇದಕ್ಕೆಲ್ಲಾ ಅವರು ಡಾ.ಬ್ರೋ ಅವರನ್ನು ಕರೆಸಿ ಎಂದು ಕೇಳಿದಾಗ ಕೊಟ್ಟ ರಾಘವೇಂದ್ರ ಹುಣಸೂರು ಅವರು ಕೊಟ್ಟ ವಿಡಂಬನಾತ್ಮಕ ಉತ್ತರವೇ ಕಾರಣ ಎನ್ನಬಹುದು. ಆ ವಿಡಿಯೋ ವೈರಲ್ ಆಗಿ ನಿಮ್ಮ ಅಜ್ಜಿಗೆ ಡಾ.ಬ್ರೋ ಗೊತ್ತಾ, ನಿಮ್ಮ ಅಮ್ಮನಿಗೆ ಗೊತ್ತಾ ಎಂದು ಅವರು ಹೇಳಿದ್ದ ಮಾತುಗಳು ವೈರಲಾಗಿ ಈಗ ಅದನ್ನೇ ಕಂಟೆಂಟ್ ಆಗಿ ಬಳಸಿಕೊಂಡು ರಮ್ಯಾ ಅವರ ಇಂಗ್ಲಿಷ್ ಎಪಿಸೋಡ್ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ.

ನಮ್ಮ ಅಜ್ಜಿಗೆ ಇಂಗ್ಲಿಷ್ ಗೊತ್ತಿಲ್ಲ, ನಮ್ಮಮ್ಮನಿಗೂ ಗೊತ್ತಿಲ್ಲ ಹಾಗಾಗಿ ಟಿವಿ ಆಫ್ ಮಾಡಿ ಮಲಗಿ ಬಿಟ್ಟರು, ಚಾನೆಲ್ ಚೇಂಜ್ ಮಾಡಿದರು. ನನಗೆ ರಮ್ಯಾ ಅವರ ಇಂಗ್ಲಿಷ್ ಕೇಳಿ ಯಾವುದೇ ಇಂಗ್ಲಿಷ್ ಕಾರ್ಯಕ್ರಮ ನೋಡಿದ ಹಾಗೆ ಆಯಿತು ಈ ಅನಿಸಿಕೆಗಳನ್ನು ಹಾಕಿ ಟ್ರೊಲ್ ಮಾಡಲಾಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿದ್ದ ಈ ಬೆಳವಣಿಗೆಗಳನ್ನೆಲ್ಲ ನೋಡಿ ಸುಮ್ಮನಿದ್ದ ರಮ್ಯ ಅವರು ಈಗ ಟ್ರೋಲ್ ಪೇಜ್ ಒಂದಕ್ಕೆ ಕಮೆಂಟ್ ಮಾಡುವ ಮೂಲಕ ಉತ್ತರ ಕೊಟ್ಟಿದ್ದಾರೆ.

ಕಾರ್ಯಕ್ರಮದ ಹೆಸರು ವೀಕೆಂಡ್ ವಿತ್ ರಮೇಶ್ ಎಂದು ಹೇಳುವುದಕ್ಕೆ ನಾನು ಇಷ್ಟಪಡುತ್ತೇನೆ, ಕಾರ್ಯಕ್ರಮದಲ್ಲಿ ಕನ್ನಡರೇತರರು ಅತಿಥಿಗಳಾಗಿದ್ದರೆ, ನಾನು ಎಲ್ಲರನ್ನು ಒಳಗೊಳ್ಳಲು ಇಷ್ಟಪಟ್ಟಿದ್ದೆ ಅಷ್ಟೇ. ಮುಂದಿನ ಶೋ ಅಲ್ಲಿ ನನ್ನ ಎಲ್ಲ ಮುದ್ದು ಅಜ್ಜಿಯರಿಗಾಗಿ ಕನ್ನಡದಲ್ಲಿ ಮಾತನಾಡುತ್ತೇನೆ. ನಾವು ಪ್ರೀತಿಯ ಹಾಗೂ ದಯೆ ಭಾಷೆಯನ್ನು ಮಾತನಾಡೋಣ ಎನ್ನುವ ಕಮೆಂಟ್ ಮಾಡಿದ್ದಾರೆ. ಇದರಲ್ಲೂ ಸಹ ಇಂಗ್ಲೀಷ್ ಹಾಗೂ ಕನ್ನಡ ಎರಡು ಮಿಕ್ಸ್ ಆಗಿದ್ದು ಈ ಕಮೆಂಟ್ ಬಗ್ಗೆ ಕೂಡ ಪರ ಮತ್ತು ವಿರೋಧ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

ಇವನು ಎಂಥ ಕಾ-ಮು-ಕ ಗೊತ್ತಾ.? ನಟ ಹರ್ಷ ಮುಖವಾಡ ಕಳಚಿಟ್ಟು ತಮಗಾದ ನೋವು ಹೇಳಿಕೊಂಡ ಬಿಕ್ಕಿ ಬಿಕ್ಕಿ ಕಣ್ಣಿರಿಟ್ಟ ನಟಿ.

 

ಕನ್ನಡದ ಬಹು ನಿರೀಕ್ಷಿತ ಪ್ರಯೋಗಾತ್ಮಕ ಚಿತ್ರ ಪೆಂಟಗಾನ್ ಏಪ್ರಿಲ್ ಮೊದಲ ವಾರದಲ್ಲಿ ತೆರೆಗಪ್ಪಳಿಸಲು ಸಿದ್ಧವಾಗಿದೆ. ಒಂದೆಡೆ ಚಿತ್ರತಂಡ ಸಿನಿಮಾ ತಯಾರಾದ ದಿನದಿಂದಲೂ ನಾನಾ ರೀತಿಯಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದೆ. ಈ ಸಿನಿಮಾದಲ್ಲಿ ಅಭಿನಯಿಸಿದ್ದ ತನಿಷಾ ಕುಪಂದ ಎನ್ನುವ ನಟಿ ಇದೇ ರೀತಿ ಸಿನಿಮಾ ಬಗ್ಗೆ ಪ್ರಚಾರ ಮಾಡುವ ಸಲುವಾಗಿ ಸಂದರ್ಶನ ಕೊಡಲು ಹೋಗಿ ಕಾಂಟ್ರವರ್ಸಿಗೆ ಸಿಲುಕಿದ್ದಾರೆ.

ತನಿಷಾ ಕುಪಂದ ಪೆಂಟಗಾನ್ ಸಿನಿಮಾದಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲೇನಲ್ಲ ಈ ಹಿಂದೆ ದಂಡುಪಾಳ್ಯ ಸಿನಿಮಾದಲ್ಲೂ ಕೂಡ ಪೂಜಾ ಗಾಂಧಿ ಜೊತೆ ನಟಿಸಿದ್ದ ಇವರು ಹಸಿ ಬಿಸಿ ದೃಶ್ಯಗಳಲ್ಲಿ ಕನ್ನಡಿಗರೆದುರು ಕಾಣಿಸಿಕೊಂಡು ಹಲ್ ಚಲ್ ಸೃಷ್ಟಿಸಿದ್ದರು. ಇದೇ ರೀತಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ನಟಿಗೆ ಸಂದರ್ಶನದಲ್ಲಿ ಅನಿರೀಕ್ಷಿತ ಪ್ರಶ್ನೆ ಎದುರಾಗಿತ್ತು, ಅದೇ ಈಗ ಇಷ್ಟೆಲ್ಲ ರಾಧ್ದಾಂತಕ್ಕೂ ಕಾರಣ ಆಗಿದೆ.

ಕಳೆದ ನಾಲ್ಕೈದು ದಿನಗಳಿಂದ ಕೂಡ ಸೋಶಿಯಲ್ ಮೀಡಿಯಾದಲ್ಲಿ ತನಿಷಾ ಕುಪಂದ ಅವರ ವಿಷಯ ಬಹಳ ಚರ್ಚೆ ಆಗುತ್ತಿದೆ. ಅದೇನೆಂದರೆ, ತಾನೊಬ್ಬ ಯೂಟ್ಯೂಬರ್ ಎಂದು ಹೇಳಿಕೊಂಡ ಸುಶಾನಂದ ಎನ್ನುವಾತ ಪೆಂಟಗಾನ್ ಚಿತ್ರದ ಕಲಾವಿದರ ಸಂದರ್ಶನ ತೆಗೆದುಕೊಳ್ಳುವ ಸಲುವಾಗಿ ತನುಷ ಕುಪ್ಪಂದ ಅವರನ್ನು ಭೇಟಿಯಾಗಿ ಅಚ್ಚುಕಟ್ಟಾಗಿ ಸಂದರ್ಶನವನ್ನು ಕೂಡ ಮಾಡುತ್ತಿದ್ದರು.

ಆದರೆ ಮಾತಿನ ಮಧ್ಯದಲ್ಲಿ ಕೇಳಿದ ಪ್ರಶ್ನೆ ಈಗ ಪೊಲೀಸ್ ಸ್ಟೇಷನ್ ಮೆಟ್ಟಲೇರುವ ತನಕ ತಲುಪಿದೆ. ಸಂದರ್ಶನದ ಮಧ್ಯದಲ್ಲಿ ನಿರೂಪಕ ಎನಿಸಿಕೊಂಡ ಸುಶಾನಂದ್ ತನಿಷ ಅವರನ್ನು ನೀವು ನೀ-ಲಿ ಚಿತ್ರಗಳಲ್ಲಿ ಅಭಿನಯಿಸಲು ರೆಡಿ ಇದ್ದೀರಾ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನು ನಟಿಗೆ ಮಾತ್ರ ಅಲ್ಲದೆ ಮತ್ಯಾವ ಹೆಣ್ಣಿಗೂ ಕೂಡ ಕೇಳಿದರು ಅವರು ಸಿಡಿಯುವುದರಲ್ಲಿ ಸಂದೇಹವೇ ಇಲ್ಲ.

ತಕ್ಷಣವೇ ಅದನ್ನು ತಡೆದ ನಟಿ ಅವರನ್ನು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ನಂತರ ಅದು ದೊಡ್ಡ ಹೈಡ್ರಾಮವಾಗಿ ಈಗ ಆತ ಪೊಲೀಸ್ ಅತಿಥಿ ಕೂಡ ಆಗಿದ್ದಾನೆ. ಇದೆ ಬೆನ್ನಲ್ಲೇ ನಟಿ ಈ ಕಾಂಟ್ರವರ್ಸಿಯಿಂದ ಮತ್ತಷ್ಟು ಸಂಕಷ್ಟಗಳನ್ನು ಎದುರಿಸುವ ರೀತಿ ಆಗಿದೆ ಎನ್ನುವುದನ್ನು ಮತ್ತೊಂದು ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. ಈ ಬಾರಿ ಅವರು ನೇರವಾಗಿ ರಾಜಾಹುಲಿ ಚಿತ್ರದಲ್ಲಿ ಯಶ್ ಸ್ನೇಹಿತರಾಗಿ ಕಾಣಿಸಿಕೊಂಡಿರುವ ಹರ್ಷ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಅದೇನೆಂದರೆ, ನಾನು ಒಂದು ಸ್ಟೋರಿ ಹಾಕಿದ್ದೆ ಆ ಸ್ಟೋರಿಗೆ ರಿಪ್ಲೈ ಮಾಡಿದ ಹರ್ಷ ಬ್ಲೂ ಫಿಲಂ ಅಲ್ಲಿ ನಟಿಸುತ್ತಿರ ಎಂದು ಸ್ಮೈಲ್ ಇಮೊಜಿ ಹಾಕಿ ಕಳಿಸಿದ್ದಾರೆ. ಆ ಸಮಯದಲ್ಲಿ ಬ್ಯುಸಿ ಇದ್ದ ಕಾರಣ ನಾನು ಅದನ್ನು ನೋಡಲಿಲ್ಲ ಬಹಳ ಸಮಯ ಆದನಂತರ ಅದನ್ನು ನೋಡಿದ ಮೇಲೆ ಬಹಳ ವಿ.ಕೃ.ತ ಎಂದು ಅನಿಸಿತು. ತಕ್ಷಣವೇ ಅವರಿಗೆ ನಿಮ್ಮ ಕಾಮನ್ಸೆನ್ಸ್ ಏನಾದರೂ ಸ.ತ್ತು ಹೋಗಿದೆಯಾ ಎಂದು ರಿಪ್ಲೈ ಕೂಡ ಮಾಡಿದೆ.

ಸುಶಾನಂದ್ ಅಂತಹ ಈಡಿಯಟ್ಗಳು ಬಂದು ಏನೇನೋ ಮಾಡಿ ಹೋಗುತ್ತಾರೆ. ನಂತರ ಆಗುವ ಪರಿಣಾಮಗಳ ಬಗ್ಗೆ ಅವರಿಗೆ ಅರಿವಿರುವುದಿಲ್ಲ. ಜನರಿಗೆ ಇದು ಹೇಗೆ ತಲುಪುತ್ತಿದೆ ಎನ್ನುವ ಜ್ಞಾನವು ಅವರಿಗಿರುವುದಿಲ್ಲ. ಸಮಾಜ ಒಂದು ಕಡೆ ಆದರೆ ಇಂಡಸ್ಟ್ರಿ ಕುಟುಂಬ ಇದ್ದಂತೆ, ಈಗ ಹರ್ಷ ಕೂಡ ನನ್ನಂತೆ ಆರ್ಟಿಸ್ಟ್ ಆಗಿರುವುದರಿಂದ ಅವರು ನನ್ನ ಕುಟುಂಬ ಇದ್ದಂತೆ. ಅಂತಹವರೇ ಈ ರೀತಿ ಪ್ರಶ್ನೆ ಕೇಳಿದಾಗ ಅದು ಎಷ್ಟು ಬೇಜಾರು ಮಾಡುತ್ತದೆ ಮತ್ತು ನಮ್ಮ ಧೈರ್ಯವನ್ನು ಎಷ್ಟು ಕಸಿದುಕೊಳ್ಳುತ್ತದೆ ಎನ್ನುವುದನ್ನು ವಿವರಿಸಲು ಸಾಧ್ಯವಿಲ್ಲ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.

ಮದ್ವೆ ಆದ್ಮೇಲೆ ಅಮೂಲ್ಯ ತುಂಬಾ ಬದಲಾಗಿದ್ದಾರೆ ಅಂತ ಪತ್ನಿ ಮೇಲೆ ಆರೋಪ ಹೊರಿಸಿದ ಪತಿ ಜಗದೀಶ್ ಅಷ್ಟಕ್ಕೂ ಅಮೂಲ್ಯ ಮಾಡಿದ್ದೇನು ಗೊತ್ತ.?

 

ಚಂದನವನದ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಇದೀಗ ಎರಡು ಮುದ್ದು ಮಕ್ಕಳ ತಾಯಿ. ಆದರೂ ಕೂಡ ನಟಿ ಅಮೂಲ್ಯ ಅವರ ಮುದ್ದು ಮುಖ ಮತ್ತು ಮುಗ್ದತೆ ನೋಡಿದರೆ ಹೈಸ್ಕೂಲು ಹುಡುಗಿ ಎನಿಸುತ್ತಾರೆ. ಕರ್ನಾಟಕದ ಪಡ್ಡೆ ಹೈಕಳಿಗೆ ಇನ್ನು ಐಶು ಹಾಗೇ ಉಳಿದಿರುವ ಅಮೂಲ್ಯ ನೋಡು ನೋಡುತ್ತಾ ಇದ್ದಂತೆ ಬಾಲನಟಿಯಿಂದ ನಾಯಕ ನಟಿಗೆ ಹಾಗೂ ನಾಯಕಿ ನಟಿಯಿಂದ ಎರಡು ಮಕ್ಕಳಿಗೆ ತಾಯಿ ಆಗುವ ತನಕ ಬೆಳೆದು ಬಿಟ್ಟಿದ್ದಾರೆ.

ಇತ್ತೀಚಿಗೆ ರಾಜಕೀಯದಲ್ಲಿ ಕೂಡ ಸಂಚಲ ಮೂಡಿಸುತ್ತಿರುವ ನಟಿ ಅಮೂಲ್ಯ ಅವರು ತಮ್ಮ ವೃತ್ತಿ ಜೀವದ ಉತ್ತುಂಗದಲ್ಲಿ ಇದ್ದಾಗಲೇ ಕೆರಿಯರ್ಗೆ ಗುಡ್ ಬೈ ಹೇಳಿ ರಾಜಕೀಯ ಹಿನ್ನೆಲೆ ಉಳ್ಳ ಕುಟುಂಬಕ್ಕೆ ಸೊಸೆಯಾಗಿ, ಉದ್ಯಮಿ ಜಗದೀಶ್ ರಾಮಚಂದ್ರ ಅವರ ಮಡದಿ ಆಗಿದ್ದಾರೆ. 2017ರಲ್ಲಿ ಮದುವೆ ಆದ ಈ ದಂಪತಿ ಪಾಲಿಗೆ ಕಳೆದ ವರ್ಷ ಡಬಲ್ ಧಮಾಕ. 2022ರ ಮಾರ್ಚ್ 1 ನೇ ತಾರೀಕಿನಂದು ಮಹಾಶಿವರಾತ್ರಿ ದಿನ ಅಮೂಲ್ಯ ಅವರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಅಂದಿನಿಂದ ಮಕ್ಕಳ ಲಾಲನೆ ಪಾಲನೆ ಪೋಷಣೆಯಲ್ಲಿ ಬಹಳ ಬಿಜಿ ಆಗಿದ್ದ ಇವರು ಅದ್ದೂರಿಯಾಗಿ ಮಕ್ಕಳ ನಾಮಕರಣ ಕಾರ್ಯಕ್ರಮ ಮತ್ತು ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಕೂಡ ಆಚರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿರುವ ನಟಿ ಅಮೂಲ್ಯ ಅವರು ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಫೋಟೋ ಶೂಟ್ಗಳು ಹಾಗೂ ಅವರ ಫೋಟೋ ಶೂಟ್ ಗಳನ್ನು ಹಂಚಿಕೊಳ್ಳುವ ಮೂಲಕ, ಟ್ರೆಂಡಿಂಗ್ ಹಾಡುಗಳಿಗೆ ರೀಲ್ಸ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.

ಕಿರುತೆರೆ ಕಾರ್ಯಕ್ರಮಗಳಲ್ಲೂ ಕೂಡ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದ ಅಮೂಲ್ಯ ಅವರು ಮಕ್ಕಳಾದ ಬಳಿಕ ಮೊದಲ ಬಾರಿಗೆ ಕಿರುತೆರೆ ವೇದಿಕೆಯಲ್ಲಿ ಪತಿಯ ಜೊತೆ ಕಾಣಿಸಿಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯ ಯುಗಾದಿ ಸಂಭ್ರಮ ಎನ್ನುವ ಕಾರ್ಯಕ್ರಮದಲ್ಲಿ ಪತಿ ಜೊತೆಗೆ ಮಾಸ್ತಿಗುಡಿ ಸಿನಿಮಾದ ಹಾಡಿಗೆ ಹೆಜ್ಜೆ ಇಡುತ್ತ ಬಂದ ನಟಿ ಅಮೂಲ್ಯ ಆ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದ್ದಾರೆ. ಜೊತೆಗೆ ನಿರೂಪಕರು ಕೇಳಿದ ದಂಪತಿಗಳ ಕುರಿತ ಪ್ರಶ್ನೆಗಳಿಗೂ ಕೂಡ ಇಬ್ಬರು ಉತ್ತರಿಸಿ ಪರಸ್ಪರ ಕೆಲವೊಂದು ಆರೋಪಗಳನ್ನು ಕೂಡ ಮಾಡಿಕೊಂಡಿದ್ದಾರೆ.

ನಟಿ ಅಮೂಲ್ಯ ಅವರ ಬಗ್ಗೆ ಪತಿ ಜಗದೀಶ್ ಅವರು ಸಾಕಷ್ಟು ದೂರು ಹೇಳಿದ್ದಾರೆ ಮೊದಲೆಲ್ಲ ನನ್ನ ಪತ್ನಿ ನನ್ನ ಹೇರ್ ಸ್ಟೈಲ್ ಬಗ್ಗೆ ಹಾಗೂ ಡ್ರೆಸ್ ಸೆನ್ಸ್ ಬಗ್ಗೆ ಬಹಳ ತಲೆಕೆಡಿಸಿಕೊಳ್ಳುತ್ತಿದ್ದರು, ಅದರಲ್ಲೆಲ್ಲಾ ನನಗೆ ಸಜೆಷನ್ ಕೊಡುತ್ತಿದ್ದರು, ಈಗ ಅವರಿಗೆ ನನ್ನ ಮೇಲೆ ಗಮನವೇ ಇಲ್ಲ, ಕೇಳಿದರೆ ಎರಡು ಮಕ್ಕಳನ್ನು ನೋಡಿಕೊಳ್ಳಬೇಕು ಅವರಿಗೆ ಮೊದಲ ಆದ್ಯತೆ ಎನ್ನುತ್ತಾರೆ ಎಂದು ಆರೋಪ ಮಾಡಿದ್ದಾರೆ. ನಟಿ ಅಮೂಲ್ಯ ಕೂಡ ಅಮ್ಮನ ಮನೆಯಲ್ಲಿದ್ದಾಗ ಮಕ್ಕಳಿಗಾಗಿ ಮಾತ್ರ ವಿಡಿಯೋ ಕಾಲ್ ಮಾಡುತ್ತಿದ್ದರು ಮಕ್ಕಳ ಜೊತೆ ಮಾತ್ರ ಮಾತನಾಡುತ್ತಿದ್ದರು ಎಂದು ಅದಕ್ಕೆ ಪ್ರತ್ಯಾರೋಪ ಮಾಡಿದ್ದಾರೆ.

ಇದಕ್ಕೆ ಸಮಜಾಯಿಷಿ ಕೊಟ್ಟ ಜಗದೀಶ್ ಅವರು ನಾನು ಬ್ಯುಸಿ ಇದ್ದೇನೆ ಎಂದು ಒಂದು ವಾರ ಹೋಗುವುದು ಲೇಟ್ ಮಾಡಿದರೆ ಮಕ್ಕಳು ನನ್ನನ್ನು ಮರೆತುಬಿಡುತ್ತಾರೆ ಗುರುತು ಹಿಡಿಯುವುದಿಲ್ಲ ಎನ್ನುವ ಭಯ ಕಾಡುತ್ತಿತ್ತು ಅದಕ್ಕೆ ಪ್ರತಿದಿನ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದೆ, ಮಕ್ಕಳ ಮುಖ ನೋಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಅಮೂಲ್ಯ ಅವರ ಸಿನಿಮಾಗಳ ಕುರಿತು ಕೇಳಿದ ಬಹುತೇಕ ಎಲ್ಲಾ ಪ್ರಶ್ನೆಗಳಿಗೂ ಜಗದೀಶ್ ಅವರು ನೆನಪಿಟ್ಟುಕೊಂಡು ಸರಿಯಾದ ಉತ್ತರ ಕೊಟ್ಟ ಮತ್ತೊಮ್ಮೆ ಮಡದಿಯ ಮನ ಗೆದ್ದಿದ್ದಾರೆ. ಈ ವಿಡಿಯೋಗಳು ಜೀ ವಾಹಿನಿಯ ಅಫಿಶಿಯಲ್ ಪೇಜಲ್ಲಿ ಹರಡುದಾಡುತ್ತಿದ್ದು ನೀವು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

ಕಲ್ಯಾಣ್ ಜ್ಯೂವಲರ್ಸ್ ಜಾಹೀರಾತಿಗಾಗಿ ರಶ್ಮಿಕಾ ಮಂದಣ್ಣ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತಾ.?

 

ಕಿರಿಕ್ ಹುಡುಗಿ, ಕೊಡಗಿನ ಬೆಡಗಿ ರಶ್ಮಿಕ ಮಂದಣ್ಣ ಈಗ ನ್ಯಾಷನಲ್ ಕ್ರಶ್. ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚುತ್ತಿರುವ ರಶ್ಮಿಕ ಮಂದಣ್ಣ ಕಾಲಿವುಡ್, ಟಾಲಿವುಡ್, ಮಾಲಿವುಡ್, ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲೂ ಕೂಡ ಬೇಡಿಕೆಯಲ್ಲಿರುವ ನಟಿ. ಎಲ್ಲಾ ಇಂಡಸ್ಟ್ರಿಯಲ್ಲೂ ಕೂಡ ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಳ್ಳುವ, ಪ್ಯಾನ್ ಇಂಡಿಯಾ ಮೂವಿಗಳಿಗೆ ನಾಯಕಿ ಆಗುವ ಚಾನ್ಸ್ ಪಡೆಯುತ್ತಿರುವ ಈಕೆ ಅದೃಷ್ಟವನ್ನು ಹೊಗಳಲೇಬೇಕು.

ಪ್ರತಿಭೆ ಜೊತೆ ಅದೃಷ್ಟ ಕೂಡ ಎಷ್ಟು ಮುಖ್ಯ ಎನ್ನುವುದಕ್ಕೆ, ಈಕೆ ಪ್ರತ್ಯಕ್ಷ ಸಾಕ್ಷಿ ಎಂದು ಹೇಳಬಹುದು. ಪುಷ್ಪ ಸಿನಿಮಾ ಆದಮೇಲಂತೂ ಈಕೆಯ ಕೈತುಂಬ ಅವಕಾಶಗಳಿದ್ದೂ ಸಂಭಾವನೆ ವಿಚಾರದಲ್ಲೂ ಕೂಡ ಸ್ಟಾರ್ ಹೀರೋಗಳಿಗೆ ಸೈಡ್ ಹೊಡೆಯುವಷ್ಟು ಮುಂದಕ್ಕೆ ಹೋಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ರಶ್ಮಿಕ ಮಂದಣ್ಣ ಸಿನಿಮಾಗಳು ಮಾತ್ರ ಅಲ್ಲದೆ ಜಾಹಿರಾತು ಕ್ಷೇತ್ರಕ್ಕೂ ಕೂಡ ಲಗ್ಗೆ ಇಟ್ಟಿದ್ದಾರೆ. ಡಾಬರ್ ಹನಿ, ಇವಾ, ಸೆವೆನ್ ಅಪ್ ಮುಂತಾದ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಶ್ಮಿಕ ಮಂದಣ್ಣ ನಿಧಾನವಾಗಿ ಕ್ಯಾಶ್ ಫೈ, ವೇಕ್ ಫಿಟ್, ಕೋಲ್ದಿಂಗ್ಸ್, ಅಗೋಡ ಮುಂತಾದವುಗಳಿಗೆ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದರು. ನಿಧಾನವಾಗಿ ಈಕೆ ಜಾಹೀರಾತು ವಲಯದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದು ಈಗ ಭಾರತದ ಪ್ರತಿಷ್ಠಿತ ಕಲ್ಯಾಣ್ ಜುವೆಲರ್ಸ್ ಗೆ ಮತ್ತೊಬ್ಬ ಸೆಲೆಬ್ರಿಟಿ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಕಝಾನ ಗೋಲ್ಡ್ ಜಾಹಿರಾತುಗಳಲ್ಲಿ ರಶ್ಮಿಕ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದರು, ಈ ಗೋಲ್ಡ್ ಕಂಪನಿ ಜೊತೆಗಿನ ಅಗ್ರಿಮೆಂಟ್ ಮುಗಿದಿರುವ ಕಾರಣ ಈಗ ಕಲ್ಯಾಣ್ ಜುವೆಲರ್ಸ್ ಭಾಗವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಲ್ಯಾಣ್ ಜುವೆಲರ್ಸ್ ಭಾರತದ ಹೆಸರಾಂತ ಚಿನ್ನದ ಮಳಿಗೆ. ಬಿಗ್ ಬಿ ಅಮಿತಾಬ್ ಬಚ್ಚನ್ ಇದಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ರಾಯಭಾರಿ ಆಗಿದ್ದರೆ, ಕತ್ರಿನಾ ಕೈಫ್ ಅವರು ದೇಶದ ರಾಯಭಾರಿಯಾಗಿದ್ದಾರೆ.

ಆಯಾ ರಾಜ್ಯಗಳ ಭಾಷೆಗಳ ಜಾಹಿರಾತಿಗಾಗಿ ಚಿತ್ರರಂಗದ ಪ್ರಮುಖರನ್ನೇ ಕಲ್ಯಾಣ ಜ್ಯುವೆಲರ್ಸ್ ತನ್ನ ಜಾಹೀರಾತಿಗಾಗಿ ಬಳಸಿಕೊಂಡಿದೆ. ಈಗಾಗಲೇ ದಕ್ಷಿಣ ವಲಯದಲ್ಲಿ ತೆಲುಗಿನಲ್ಲಿ ನಾಗಾರ್ಜುನ್, ತಮಿಳಿನಲ್ಲಿ ಪ್ರಭು, ಮಲಯಾಳಂ ನಲ್ಲಿ ಕಲ್ಯಾಣಿ ಪ್ರಿಯದರ್ಶಿನಿ ಮತ್ತು ಕರ್ನಾಟಕದಲ್ಲಿ ಡಾಕ್ಟರ್ ಶಿವರಾಜಕುಮಾರ್ ಅವರು ಕಲ್ಯಾಣ್ ಜುವೆಲರ್ಸ್ ನ ರಾಯಭಾರಿ ಆಗಿದ್ದಾರೆ. ಈಗ ರಶ್ಮಿಕ ಮಂದಣ್ಣ ಅವರು ಕೂಡ ಕಲ್ಯಾಣ್ ಜುವೆಲರ್ಸ್ ಜಾಹೀರಾತಿನ ಭಾಗವಾಗುತ್ತಿದ್ದು ಇವರು ತೆಲುಗು ತಮಿಳು ಮತ್ತು ಕನ್ನಡವನ್ನು ಪ್ರತಿನಿಧಿಸಲಿದ್ದಾರಂತೆ.

ಪ್ಯಾನ್ ಇಂಡಿಯಾ ನಟಿಯ ಪಾಲಿಗೆ ಒಲಿದಿರುವ ಮತ್ತೊಂದು ಅದೃಷ್ಟ ಇದು ಎಂದೇ ಹೇಳಬಹುದು. ನಟಿ ರಶ್ಮಿಕಾ ಮಂದಣ್ಣ ಅವರು ಕಲ್ಯಾಣ್ ಜುವೆಲರ್ಸ್ ಹೊಸ ಕಾಂಟ್ಯಾಕ್ಟ್ ಜೊತೆ ಟೈ ಅಪ್ ಆಗಿರುವುದಕ್ಕೆ ಅವರು ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಹಾಗೂ ವಿಡಿಯೋಗಳು ಸಾಕ್ಷಿಯಾಗಿವೆ. ಸೋಶಿಯಲ್ ಮೀಡಿಯಾದಲ್ಲಿ ಇದು ಬಹಳ ಟ್ರೆಂಡಿಂಗ್ ಅಲ್ಲಿ ಇದ್ದು ನಟಿ ಟ್ರಡಿಷನಲ್ ಹಾಗೂ ಮಾಡೆಲ್ ಲುಕ್ಕಿನಲ್ಲಿ ಚಿನ್ನದ ಆಭರಣದೊಂದಿಗೆ ಕಂಗೊಳಿಸುತ್ತಿದ್ದಾರೆ. ಕಲ್ಯಾಣ್ ಜುವೆಲರ್ಸ್ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವುದಕ್ಕೆ ನಟಿ ಪಡೆದಿರುವ ಸಂಭಾವನೆ ವಿಷಯ ಕೂಡ ಈಗ ಭಾರಿ ಚರ್ಚೆ ಆಗುತ್ತಿದೆ.

ಯಾಕೆಂದರೆ ಕೆಲ ಮಾಹಿತಿಗಳ ಪ್ರಕಾರ ಬರೋಬ್ಬರಿ ನಾಲ್ಕು ಕೋಟಿ ರೂಪಾಯಿಗಳನ್ನು ನಟಿ ಈ ಜಾಹೀರಾತಿಗಾಗಿ ಡಿಮ್ಯಾಂಡ್ ಮಾಡಿದ್ದಾರಂತೆ. ಪುಷ್ಪ ಸಿನಿಮಾ ಆದ ಬಳಿಕ ಎಲ್ಲೆಡೆ ತನ್ನ ಸಂಭವನೆಯನ್ನು ಹೆಚ್ಚಿಸಿಕೊಂಡಿರುವ ರಶ್ಮಿಕ ಮಂದಣ್ಣ ಅವರು ಈ ಜಾಹೀರಾತಿಗಾಗಿ ಪಡೆದಿರುವ ಸಂಭವನೆಯ ಬಗ್ಗೆ ಈ ರೀತಿ ಗಾಸಿಪ್ ಗಳು ಹರಿದಾಡುತ್ತಿವೆ. ಆದರೆ ಸ್ವತಃ ಕಲ್ಯಾಣ್ ಜುವೆಲರ್ಸ್ ಕಂಪನಿಯಾಗಲಿ ,ರಶ್ಮಿಕ ಮಂದಣ್ಣ ಅವರೇ ಆಗಲಿ ಈ ಸಂಭಾವನೆ ಬಗ್ಗೆ ಸ್ಪಷ್ಟ ಪಡಿಸಿಲ್ಲ.

ಅಣ್ಣಾವ್ರ ಈ ಸಿನಿಮಾವನ್ನು ಯಾರಿಂದಲೂ ರಿಮೇಕ್ ಮಾಡಲು ಆಗಲೇ ಇಲ್ಲ, ಅಪ್ಪು ಮಾತ್ರ ಈ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದರು ಅದು ಯಾವ ಸಿನಿಮಾ ಗೊತ್ತಾ.?

ಡಾಕ್ಟರ್ ರಾಜಕುಮಾರ್ ಅವರು ಮಾಡಿರುವ ಅಷ್ಟು ಸಿನಿಮಾಗಳು ಕೂಡ ಕಡದಾಳದಿಂದ ಹುಡುಕಿ ತೆಗೆದ ಅಪರೂಪದ ಮುತ್ತುಗಳ ರೀತಿ ಇವೆ. ಆ ಸಿನಿಮಾದಲ್ಲಿ ಅಣ್ಣಾವ್ರ ಅಭಿನಯ ಹಾಗೂ ಅವರು ಆಯ್ಕೆ ಮಾಡಿಕೊಂಡ ಪಾತ್ರಗಳು ಮತ್ತು ಸಿನಿಮಾದ ಕಥೆ ಇವುಗಳಿಂದ ಇಂದು ಅವರು ಸಿನಿಮಾ ಲೋಕದ ದಂತಕಥೆ ಎನಿಸಿದ್ದಾರೆ ಕನ್ನಡ ಸಿನಿಮಾರಂಗದ ಅರಸ ಎಂದರು ಕೂಡ ತಪ್ಪಾಗಲಾರದು.

ಅಣ್ಣಾವ್ರ ರೀತಿ ಅಭಿನಯ ಮಾಡುವ ಹಾಗೂ ವ್ಯಕ್ತಿತ್ವ ಹೊಂದಿರುವ ಆ ರಾಜಕಳೆ ಇರುವ ಮತ್ತೊಬ್ಬ ಹೀರೋ ಹಿಂದೆಯೂ ಇರಲಿಲ್ಲ ಮುಂದೆಯೂ ಸಹ ಬರಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಆದರೆ ಅಣ್ಣಾವ್ರ ಕೆಲ ಸಿನಿಮಾಗಳನ್ನು ರಿಮೇಕ್ ಮಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ ಒಂದು ಸಿನಿಮಾವನ್ನು ಮಾತ್ರ ಯಾರಿಂದಲೂ ಮಾಡಲಾಗಲಿಲ್ಲ ಅದು ಯಾವುದು ಗೊತ್ತಾ.?

ಅಣ್ಣಾವ್ರ ಬೇಡರ ಕಣ್ಣಪ್ಪ ಸಿನಿಮಾವನ್ನು ಶಿವಣ್ಣ ಅವರಿಗಾಗಿ ಶಿವ ಮೆಚ್ಚಿದ ಕಣ್ಣಪ್ಪ ಎಂದು ಮತ್ತೊಮ್ಮೆ ರಿಮೇಕ್ ಮಾಡಿ ತೆರೆಗೆ ತರಲಾಗಿತ್ತು. ಹಾಗೆ ಅಣ್ಣಾವ್ರ ಸಂಪತ್ತಿಗೆ ಸವಾಲ್ ಎನ್ನುವ ಸಿನಿಮಾವನ್ನು ಕೂಡ ರಿಮೇಕ್ ಮಾಡಬೇಕು ಅದರಲ್ಲಿ ಶಿವಣ್ಣ ಅಭಿನಯಿಸಬೇಕು ಎನ್ನುವುದು ನಿರ್ಮಾಪಕ ಉದಯ ಶಂಕರ್ ಅವರ ಅಭಿಲಾಷೆ ಆಗಿತ್ತು.

ಅದನ್ನು ಅವರು ಅಣ್ಣಾವರ ಬಳಿ ಕೂಡ ವ್ಯಕ್ತಪಡಿಸಿದ್ದರು. ಶಿವಣ್ಣ ಹಲವಾರು ಸಿನಿಮಾಗಳಲ್ಲಿ ಹಳ್ಳಿ ಹೈದನ ಗೆಟಪ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಪಾತ್ರಕ್ಕೆ ಅವರ ಸಮಕ್ಕೆ ಅಲ್ಲದಿದ್ದರೂ ಬಹುಮಟ್ಟಿಗೆ ನ್ಯಾಯಾಧಕ್ಕಿಸಬಲ್ಲರು ಎನ್ನುವುದು ಅವರ ನಂಬಿಕೆ ಆಗಿತ್ತು. ಅದನ್ನೇ ಅಣ್ಣಾವ್ರ ಬಳಿ ಹೇಳಿದಾಗ ಅಣ್ಣಾವ್ರು ಕೊಟ್ಟ ಉತ್ತರ ಉದಯ ಶಂಕರ್ ಅವರಿಗೆ ಶಾ’ಕ್ ನೀಡಿತ್ತು.

ಯಾಕೆಂದರೆ ಸರಿ ನನ್ನ ಮಗ ನಾನು ನಟಿಸಿದ ಪಾತ್ರದಲ್ಲಿ ಅಭಿನಯಿಸುತ್ತಾನೆ ಆದರೆ ಅದರಲ್ಲಿ ನನ್ನ ಪಾತ್ರದಷ್ಟೇ ಮುಖ್ಯ ಪಾತ್ರ ವಜ್ರಮುನಿ ಅವರದ್ದು ಸಹಾ. ಆ ಸಾಹುಕಾರನ ಪಾತ್ರದಲ್ಲಿ ಈಗ ಅಭಿನಯ ಮಾಡುವಂತಹ ನಟ ಯಾರಿದ್ದಾರೆ ಅವರಿಂದ ಅಷ್ಟು ಜೀವಂತಿಗೆ ಮತ್ತೆ ತುಂಬಲು ಸಾಧ್ಯ ಇದೆಯಾ ಎಂದು ಅಣ್ಣಾವ್ರು ಕೇಳಿದ್ದರಂತೆ.

ಅದನ್ನು ಯೋಚಿಸಿದ ಉದಯಶಂಕರ್ ಅವರು ಮರು ಮಾತನಾಡದೆ ಸುಮ್ಮನಾಗಿ ಹೋಗಿದ್ದರು. ನಂತರ ಇದೇ ಆಸೆ ಪುನಿತ್ ರಾಜಕುಮಾರ್ ಅವರಲ್ಲೂ ಕೂಡ ಮೂಡಿತ್ತು. ಅಣ್ಣಾವ್ರು ಹಲವಾರು ಲವ್ ಸ್ಟೋರಿಗಳಲ್ಲಿ ಕೂಡ ಅಭಿನಯಿಸಿದ್ದರು. ಅದರಲ್ಲಿ ನಾ ನಿನ್ನ ಮರೆಯಲಾರೆ ಒಂದು. ಕ ಪ್ರೇಮ ಕಥಾ ಹಂದರವುಳ್ಳ ಚಿತ್ರದಲ್ಲಿ ಲಕ್ಷ್ಮಿ ಹಾಗೂ ರಾಜಕುಮಾರ ಅವರು ಯುವ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದರು. ಈ ನಾ ನಿನ್ನ ಮರೆಯಲಾರೆ ಸಿನಿಮಾವನ್ನು ಮತ್ತೆ ರಿಮೇಕ್ ಮಾಡಬೇಕು ಎನ್ನುವುದು ಅಪ್ಪು ಅವರ ಕನಸಾಗಿತ್ತು.

ಕೆಲ ಮೂಲಗಳ ಪ್ರಕಾರ ಅಪ್ಪು ಅವರೇ ಅದರಲ್ಲಿ ಅಭಿನಯಿಸಬೇಕು ಎಂದು ಕೂಡ ಅಂದುಕೊಂಡಿದ್ದರಂತೆ. ಆದರೆ ಅದು ಕನಸಾಗಿಯೇ ಉಳಿದು ಹೋಯಿತು. ಕನ್ನಡಿಗರಿಗೂ ಅದನ್ನು ಅಪ್ಪು ವರ್ಷನ್ ಲಿ ನೋಡುವ ಭಾಗ್ಯ ಸಿಗಲೇ ಇಲ್ಲ. ಮುಂದೆಯೂ ಅಣ್ಣಾವ್ರ ಯಾವುದಾದರೂ ಸಿನಿಮಾ ರಿಮೇಕ್ ಆಗುತ್ತದೆಯಾ ಎಂದು ಕಾದು ನೋಡೋಣ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ನೀವು ನೋಡಿರುವ ಅಣ್ಣಾವ್ರ ಚಿತ್ರಗಳಲ್ಲಿ ಯಾವ ಸಿನಿಮಾವನ್ನು ಈಗಿನ ಯಾವ ನಟ ರಿಮೇಕ್ ಮಾಡಿ ಅಭಿನಯಿಸಬೇಕು ಎನ್ನುವ ಆಸೆ ನಿಮಗಿದೆ ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

ನಟಿ ಶೃತಿ ಅವರ ತಂದೆ ಎರಡು ಮದುವೆ ಆಗಿದ್ದು ಯಾಕೆ ಗೊತ್ತಾ.? ಶೃತಿ & ಶರಣ್ ಯಾವ ತಾಯಿ ಮಕ್ಕಳು ಗೊತ್ತ.? 50 ವರ್ಷದ ನಂತರ ಕೊನೆಗೂ ಹೊರಬಂತು ಸತ್ಯಾಂಶ.

0

 

ನಟಿ ಶ್ರುತಿ ಅವರು ಕರ್ನಾಟಕದಲ್ಲಿ ಕಣ್ಣೀರಿನ ನಟಿ ಎಂದು ಫೇಮಸ್ ಆಗಿದ್ದಾರೆ. ಇವರಿಗೆ ಮಿನುಗುತಾರೆ ಎನ್ನುವ ಇನ್ನೊಂದು ಟೈಟಲ್ ಕೂಡ ಇದೆ. 90 ದಶಕದ ಸ್ಟಾರ್ ಹೀರೋಯಿನ್ ಆಗಿದ್ದ ಶ್ರುತಿ ಅವರು ಇಂದಿಗೂ ಸಹ ಪೋಷಕ ಪಾತ್ರದಲ್ಲಿ ಬಾರಿ ಬೇಡಿಕೆ ಇರುವ ನಟಿ. ಜೊತೆಗೆ ಇವರ ಸಹೋದರನಾದ ಶರಣ್ ಬಗ್ಗೆ ಕೂಡ ಎಲ್ಲರಿಗೂ ಗೊತ್ತೇ ಇದೆ. ಕಳೆದ ದಶಕದವರಿಗೂ ಹಾಸ್ಯ ಕಲಾವಿದನಾಗಿ, ಸಹ ನಟನಾಗಿ ಕಾಣಿಸಿಕೊಳ್ಳುತ್ತಿದ್ದ ಇವರ ಸೆಕೆಂಡ್ ಇನ್ನಿಂಗ್ಸ್ ಭರ್ಜರಿಯಾಗಿ ಓಪನ್ ಆಗಿದೆ.

ಈಗ ಕರುನಾಡಿನಲ್ಲಿ ಕಾಮಿಡಿ ಕಿಂಗ್ ಆಗಿ ಅಧ್ಯಕ್ಷನಾಗಿ ಇವರು ಸ್ಯಾಂಡಲ್ವುಡ್ ನಲ್ಲಿ ಕಮಲ್ ಮಾಡುತ್ತಿದ್ದಾರೆ. ನಟಿ ಶ್ರುತಿ ಹಾಗೂ ಶರಣ್ ಅಣ್ಣ ತಂಗಿ ಆಗಿದ್ದರೂ ಕೂಡ ಇವರು ಒಂದೇ ತಾಯಿಯ ಮಕ್ಕಳಲ್ಲ. ಜೊತೆಗೆ ಇನ್ನೂ ಸಹ ಅವರಿಗೆ ಅವರ ತಾಯಿ ಯಾರು ಎಂದು ಗೊತ್ತಿಲ್ಲ. ಈ ವಿಷಯ ಎಲ್ಲರಿಗೂ ಆಶ್ಚರ್ಯ ತರಬಹುದು. ಇದು ನಿಮಗೆ ಜಮೀನ್ದಾರು ಚಿತ್ರದ ಸನ್ನಿವೇಶವನ್ನು ಕೂಡ ನೆನಪಿಸಬಹುದು. ಆದರೆ ಇದು ನಿಜ ಜೀವನದ ಕಥೆ ಆಗಿದೆ. ಈ ಮಾತು ಅಕ್ಷರಶಃ ಸತ್ಯ. ಯಾಕೆಂದರೆ ಶ್ರುತಿ ಹಾಗೂ ಶರಣ್ ತಾಯಿ ಬೇರೆ ಬೇರೆ, ಇವರಿಬ್ಬರ ತಂದೆ ಕೃಷ್ಣ.

ಕೃಷ್ಣ ಅವರು ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅದೇ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರುಕ್ಮಿಣಿ ಅವರ ಜೊತೆ ಇವರಿಗೆ ಪ್ರೀತಿಯಾಗುತ್ತದೆ. ಈ ವಿಷಯವನ್ನು ರುಕ್ಮಿಣಿ ಅವರು ಮನೆಯಲ್ಲಿ ತಿಳಿಸಿದಾಗ ಅವರ ಅಣ್ಣ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಾರೆ. ಅಂತಿಮವಾಗಿ ಇವರು ಕೃಷ್ಣನನ್ನು ಮದುವೆಯಾಗುವುದು ಎಂದು ಹೇಳಿದಾಗ ಕೋಪಗೊಂಡ ಅಣ್ಣ ಮನೆ ಬಿಟ್ಟು ಹೋಗುತ್ತಾರೆ. ಮದುವೆಗೆ ಸಕಲ ಸಿದ್ಧತೆಯು ಆದಮೇಲೆ ದಿಢೀರ್ ಎಂದು ರುಕ್ಮಿಣಿ ಅವರು ಕೃಷ್ಣ ಅವರಿಗೆ ಒಂದು ಶಾ’ಕ್ ನೀಡುತ್ತಾರೆ.

ಅದೇನೆಂದರೆ ರುಕ್ಮಿಣಿ ಅವರಿಗೆ ರಾಧೆ ಎನ್ನುವ ಅಕ್ಕ ಸಹ ಇರುತ್ತಾರೆ. ಇವರಿಬ್ಬರು ಅವಳಿ ಸಹೋದರಿಯರು ಆಗಿದ್ದು, ರಾಧೆಯನ್ನು ಬಿಟ್ಟು ಇರಲು ಸಾಧ್ಯವಿಲ್ಲ ನೀವು ಇಬ್ಬರನ್ನು ಮದುವೆ ಆಗಬೇಕು ಎಂದು ಹೇಳುತ್ತಾರೆ. ಅದಕ್ಕಾಗಿ ಶ್ರುತಿ ಅವರ ತಂದೆ ರಾಧೆ ಮತ್ತು ರುಕ್ಮಿಣಿ ಇಬ್ಬರನ್ನು ಮದುವೆ ಆಗಿದ್ದಾರೆ. ಈಗ ಇವರಿಬ್ಬರಿಗೆ ಮೂರು ಜನ ಮಕ್ಕಳಿದ್ದಾರೆ. ಶ್ರುತಿ, ಶರಣ್ ಹಾಗೂ ಇನ್ನೊಬ್ಬಳು ಸಹೋದರಿ ಉಷಾ. ಆದರೆ ಈ ಮೂರು ಜನರಿಗೂ ಇನ್ನೂ ಸಹ ಅವರ ತಾಯಿ ಯಾರು ಎಂದು ಗೊತ್ತೇ ಇಲ್ಲ ಆ ರೀತಿ ಮಕ್ಕಳನ್ನು ಬೆಳೆಸಿದ್ದಾರೆ ರಾಧೆ ಮತ್ತು ರುಕ್ಮಿಣಿ. ರಾಧೆ ಮತ್ತು ರುಕ್ಮಿಣಿ ಅವರು ಸಿನಿಮಾ ಹಾಗೂ ಧಾರವಾಹಿಗಳಲ್ಲೂ ನಟನೆ ಮಾಡುತ್ತಾರೆ.

ಹಲವು ಕಾರ್ಯಕ್ರಮಗಳಲ್ಲಿ ಮೂರು ಜನ ಕೂಡ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ವಿಶೇಷತೆ ಏನೆಂದರೆ ರಾಧೆ ಮತ್ತು ರುಕ್ಮಿಣಿ ಎಲ್ಲೇ ಹೋದರು ಕೂಡ ಒಂದೇ ರೀತಿಯ ಬಟ್ಟೆ ತೊಡುತ್ತಾರೆ. ಇದರಿಂದ ರಾಧೆ ಯಾರು ಹಾಗೂ ರುಕ್ಮಿಣಿ ಯಾರು ಎಂದು ಕಂಡುಹಿಡಿಯುವುದು ಕಷ್ಟ, ಆ ರೀತಿ ಇವರಿಬ್ಬರ ಮುಖಚಹರೆ ಹೋಲುತ್ತದೆ. ಇಷ್ಟು ವರ್ಷಗಳಲ್ಲಿ ಒಮ್ಮೆ ಸಹ ಇವರಿಬ್ಬರ ಮಧ್ಯೆ ಮನಸ್ತಾಪ ಕೂಡ ಬಂದಿಲ್ಲವಂತೆ. ಆ ರೀತಿ ಸಹೋದರಿಯೊಬ್ಬರು ಅನ್ಯೋನ್ಯವಾಗಿ ಜೀವನ ನಡೆಸಿದ್ದಾರೆ. ಇವರ ಕುಟುಂಬದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

ಅಂಬರೀಶ್ ಗೆ ಸ್ಮಾರಕ ನಿರ್ಮಾಣ ಮಾಡಿದ್ದು ಅನಗತ್ಯ. ಬುದ್ದಿ ಇರೋದು ಯಾರು ಕೂಡ ಇದನ್ನು ಒಪ್ಪಲ್ಲ ಎಂದ ನಟ ಚೇತನ್ ಅಹಿಂಸ.

 

ಮಾರ್ಚ್ 27ರಂದು ಅಂಬರೀಶ್ ಸ್ಮಾರಕ ಉದ್ಘಾಟನೆಗೊಂಡಿದೆ. ಕಂಠೀರವ ಸ್ಟುಡಿಯೋದಲ್ಲಿ 1.34 ಗುಂಟೆ ಪ್ರದೇಶದಲ್ಲಿ ಸುಮಾರು 12 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಭವ್ಯವಾದ ಈ ಸ್ಮಾರಕವನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಿದರು. ಅಂಬರೀಷ್ ಪತ್ನಿ ಸಂಸದೆ ಸುಮತ ಅಂಬರೀಶ್, ಸುಧಾಕರ್ ಸೇರಿದಂತೆ ಹಲವರು ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಿ ಅಂಬರೀಶ್ ಅವರನ್ನು ನೆನೆದು ಮಾತನಾಡಿದರು.

ಅದೇ ದಿನ ಸ್ಮಾರಕ ಉದ್ಘಾಟನೆ ಜೊತೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೂ ಕೂಡ ಅಂಬರೀಶ್ ಅವರ ಹೆಸರನ್ನು ಇಡಲಾಗಿದೆ .2017 ನವೆಂಬರ್ 27ರಂದು ಅಂಬರೀಶ್ ಅವರು ಇಹಲೋಕ ಯಾತ್ರೆ ಮುಗಿಸಿದರು, ಆದರೆ ಅವರ ಕೊನೆಯ ದಿನದವರೆಗೂ ಕೂಡ ಅಭಿಮಾನಿಗಳಿಗಾಗಿ ತುಡಿಯುತ್ತಿದ್ದರು ಈ ಬಗ್ಗೆ ಎಲ್ಲವನ್ನು ನೆನೆದುಕೊಂಡು ಅಂಬರೀಶ್ ಅವರ ಬಗ್ಗೆ ಮಾತನಾಡುತ್ತಾ ಸುಮಲತಾ ಅಂಬರೀಶ್ ಅವರು ಭಾವುಕರಾಗಿದ್ದಾರೆ.

ಅಂಬರೀಶ್ ಅವರ ವ್ಯಕ್ತಿತ್ವ ಏನು ಎಂದು ಎಲ್ಲರಿಗೂ ಗೊತ್ತು. ಕರ್ನಾಟಕದಲ್ಲಿ ಕರ್ಣ ಎಂದ ಹೆಸರಾಗಿರುವ ಅಂಬರೀಶ್ ಅವರು ಕೊಡು ಗೈ ದಾನಿ ತನ್ನ ಸಹಾಯ ಅರಸಿ ಬರುವ ಚಿತ್ರರಂಗದ ಚಿತ್ರೋದ್ಯಮಿಗಳಿಗೆ, ರಾಜಕೀಯ ವ್ಯಕ್ತಿಗಳು ಹಾಗೆ ಜನಸಾಮಾನ್ಯರನ್ನೂ ಕೂಡ ಖಾಲಿ ಕೈಯಲ್ಲಿ ಕಳುಹಿಸಿದವರಲ್ಲ. ಮಾತಿನಲ್ಲಿ ಒರಟಾಗಿದ್ದರು ಮಗುವಿಗಿಂತ ಮನಸ್ಸು ಒಂದಿದ್ದ ಇವರು ಎಲ್ಲರನ್ನು ಪ್ರೀತಿಯೆಂದ ಕಾಣುತ್ತಿದ್ದರು. ಇರುವ ತನಕ ಯಾರಿಗೂ ಕೇರ್ ಮಾಡದೆ ಬದುಕಿದ ಅವರ ರೆಬಲ್ ವ್ಯಕ್ತಿತ್ವದ ಬಗ್ಗೆ ಸುಮಲತಾ ಅಂಬರೀಶ್ ಅವರು ಮಾತನಾಡಿದರು.

ಜೀವಮಾನದಲ್ಲಿ ಅಂಬರೀಶ್ ಅವರು ಯಾರ ಬಳಿಯೂ ಎಂದು ಕೂಡ ಕೈಚಾಚಿದವರಲ್ಲ ಎಂದು ಆಕಾಶ ನೋಡದ ಕೈ ಆಗಿದ್ದ ಅಂಬರೀಶ್ ಅವರ ಗುಣವನ್ನು ಗುಣಗಾನ ಮಾಡಿದರು. ಸುಮಲತ ಅವರ ಆ ಮಾತುಗಳನ್ನು ಹೋರಾಟಗಾರ ನಟ ಚೇತನ ಅಹಿಂಸ ಅವರು ಖಂಡಿಸಿದ್ದಾರೆ ಅಂಬರೀಶ್ ಅವರು ಎಂತಹ ವ್ಯಕ್ತಿತ್ವ ಎಂದು ಇಡೀ ಕರ್ನಾಟಕಕ್ಕೆ ಗೊತ್ತು. ಎಂದಿಗೂ ಸಹ ಯಾರ ಬಳಿಯೂ ಅವರು ಏನನ್ನು ಕೇಳಿದವರು ಅಲ್ಲ, ತನಿಂದ ಸಾಧ್ಯವಾದಷ್ಟು ಎಲ್ಲರಿಗೂ ಸಹಾಯ ಮಾಡುತ್ತಾ ದಾನ ಮಾಡುತ್ತಿದ್ದರು.

ಆದರೆ ಸುಮಲತಾ ಅಂಬರೀಶ್ ಅವರು ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದ ಬಳಿ ಕೈ ಚಾಚಿದ್ದಾರೆ. ಸುಮಾರು ಎರಡು ಎಕರೆ ಭೂಮಿ ಮತ್ತು 12 ಕೋಟೆ ಹಣವನ್ನು ಸರ್ಕಾರದಿಂದ ಪಡೆದಿದ್ದಾರೆ. ಅನಗತ್ಯವಾದ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದ ತೆರಿಗೆ ಹಣ ಬಳಸಿದ್ದಾರೆ. ಅದರ ಬದಲು ಅವರೇ ಅವರು ಗಳಿಕೆ ಮಾಡಿರುವ ಹಣದಲ್ಲಿ 23.4 ಕೋಟಿ ಬಳಕೆ ಮಾಡಿ ಸ್ಮಾರಕ ನಿರ್ಮಾಣ ಮಾಡಬಹುದಾಗಿತ್ತು. ಅಷ್ಟು ಮಾಡಲು ಅವರಿಗೆ ಸಾಧ್ಯವಾಗಲಿಲ್ಲವೇ?

ಎಲ್ಲಾ ಉಳ್ಳವರಿಗೆ ಮತ್ತೆ ಮತ್ತೆ ಸರ್ಕಾರದ ಸವಲತ್ತು ನೀಡುವುದು ಎಷ್ಟರ ಮಟ್ಟಿಗೆ ನ್ಯಾಯ ಎಂದು ಹೋರಾಟಗಾರ ನಟ ಚೇತನ್ ಅಹಿಂಸ ಪ್ರಶ್ನೆ ಮಾಡಿದ್ದಾರೆ. ಈ ರೀತಿ ಖರ್ಚುಗಳಿಗೆ ಸರ್ಕಾರದ ಖಜಾನೆ ಖಾಲಿಯಾಗುತ್ತಾ ಹೋದರೆ ಅದು ತಲುಪಬೇಕಾದ ಜನಸಾಮಾನ್ಯರ ಕಷ್ಟಗಳಿಗೆ ತಲುಪುವುದಿಲ್ಲ ಎನ್ನುವುದು ಅವರ ಆತಂಕವಾಗಿದೆ. ಈ ಹಿಂದೆ ಕೂಡ ಅವರು ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಆದ ವೇಳೆಯು ತಕರಾರು ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಮನಸೋ ಇಚ್ಛೆ ಬರೆದಿದ್ದರು.

ಆಗಲೂ ಸಹ ಅಭಿಮಾನಿಗಳು ರೊಚ್ಚಿಗೆದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕಳೆದ ವಾರವು ಕೂಡ ಇಂತಹದೇ ಒಂದು ವಿಚಾರದ ಬಗ್ಗೆ ಮಾತನಾಡಿ ನ್ಯಾಯಾಂಗ ಬಂಧನಕ್ಕೂ ಒಳಗಾಗಿದ್ದರು. ಮತ್ತೆ ಮತ್ತೆ ಚೇತನ್ ಅಹಿಂಸಾ ಅವರು ಕರ್ನಾಟಕದ ರಾಜಕೀಯ ಚಟುವಟಿಕೆ ಬಗ್ಗೆ ಧ್ವನಿ ಎತ್ತುತ್ತಲೇ ಇದ್ದಾರೆ ಈ ಬಾರಿ ಜನರ ಪ್ರತಿಕ್ರಿಯೆ ಹೇಗಿರುತ್ತದೆ ನೋಡೋಣ.

ಕ್ರೇಜಿ ಸ್ಟಾರ್ ರವಿಚಂದ್ರನ್ & ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಟೇಜ್ ಮೇಲೆ ಮಾಡಿದ ಈ ರೊಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ ಎಷ್ಟು ಸೊಗಸಾಗಿದೆ.

 

ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಸಿನಿಮಾ ಇಂಡಸ್ಟ್ರಿಯ ಕನಸುಗಾರ. ಸಿನಿಮಾವನ್ನೇ ತನ್ನ ಉಸಿರಾಗಿಸಿಕೊಂಡು, ಬದುಕಾಗಿಸಿಕೊಂಡ ಹಠವಾದಿ. ಕನ್ನಡಿಗರಿಗೆ ಹೊಸದಾದ ಪ್ರೇಮಲೋಕ ಪರಿಚಯಿಸಿದ ರಣಧೀರ. ಚಿನ್ನ, ರಸಿಕ, ಜಾಣ, ಮಲ್ಲ, ಕಲಾವಿದನಾಗಿ ಪ್ರೀತಿ ಪಾಠವನ್ನು ಹೇಳಿಕೊಡುತ್ತಿದ್ದ ಹಳ್ಳಿ ಮೇಷ್ಟ್ರು. ಹೀಗಾಗಿ ಇವರನ್ನು ಪ್ರೀತಿಯಿಂದ ರವಿಮಾಮ ಎಂದು ಕೂಡ ಕರೆಯುತ್ತಾರೆ. ಇಂದಿಗೂ ಕೂಡ ಅದೆಷ್ಟೋ ಎಂಗೆಳೆಯರಿಗೆ ಸಿನಿಮಾ ಮೂಲಕ ಪ್ರೀತಿ ಪಾಠ ಹೇಳಿಕೊಡುತ್ತಿರುವ ಪ್ರೇಮ ಬ್ರಹ್ಮಸ್ಮಿ ಇವರು.

ಪ್ರಶ್ನಿಸಿದವರಿಗೆ ಪ್ರೀತ್ಸೋದ್ ತಪ್ಪಾ ಎಂದು ಕೇಳುವ ಸಿಪಾಯಿ. ಇದಷ್ಟೇ ಅಲ್ಲದೆ ಕೌಟುಂಬಿಕ ಚಿತ್ರಗಳಲ್ಲೂ ಕೂಡ ಕನ್ನಡಿಗರ ಮನ ಗೆದ್ದು ಪುಟ್ಟಂಜ, ಮೊಮ್ಮಗ, ಚಿಕ್ಕೆಜಮಾನ್ರು ಇಂತಹ ಹಳ್ಳಿ ಸೊಗಡಿನ ಸಿನಿಮಾದಲ್ಲೂ ರೈತನ ಪಾತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡ ಅಂಜದಗಂಡು. ಕನ್ನಡ ಚಲನಚಿತ್ರರಂಗದಲ್ಲಿ ಹಲವು ದಶಕಗಳಿಂದ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಸಂಗೀತ ನಿರ್ದೇಶಕನಾಗಿ, ಸ್ಕ್ರಿಪ್ಟ್ ರೈಟರ್ ಆಗಿ ಈಗ ಪೋಷಕ ಪಾತ್ರದಲ್ಲೂ ಕೂಡ ಬೇಡಿಕೆಯಲ್ಲಿರುವ ನಟ.

ರವಿಚಂದ್ರನ್ ಅವರು ಇವುಗಳೆಲ್ಲರ ಜೊತೆಗೆ ಬಹಳ ಚೆನ್ನಾಗಿ ಸಿನಿಮಾಗಳನ್ನು ವಿಮರ್ಶೆ ಕೂಡ ಮಾಡುತ್ತಾರೆ. ಈ ಕಾರಣಕ್ಕಾಗಿ ಕನ್ನಡದಲ್ಲಿ ಯಾವುದೇ ಸಿನಿಮಾ ತಯಾರಾದರೂ ಆ ನಿರ್ದೇಶಕರು ಹಾಗೂ ನಟರು ತಮ್ಮ ಸಿನಿಮಾ ಮತ್ತು ನಟನೆಯನ್ನು ಜಡ್ಜ್ ಮಾಡಲು ಅವರ ಸಿನಿಮಾದ ಪ್ರೀಮಿಯರ್ ಶೋಗೆ ರವಿಚಂದ್ರನ್ ಅವರನ್ನು ಅತಿಥಿಯಾಗಿ ಕರೆಸುತ್ತಾರೆ. ಇತ್ತೀಚೆಗೆ ಕಿರುತೆರೆ ಕಾರ್ಯಕ್ರಮಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿರುವ ರವಿಚಂದ್ರನ್ ಅವರು ಈ ಹಿಂದೆ ಕಲರ್ ಕನ್ನಡದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಎನ್ನುವ ಡ್ಯಾನ್ಸಿಂಗ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ಗುರುಪ್ರಸಾದ್, ರಕ್ಷಿತ ಮತ್ತು ರವಿಚಂದ್ರನ್ ಅವರು ಡ್ಯಾನ್ಸಿಂಗ್ ಸ್ಟಾರ್ ಸೀಸನ್ 1ರ ತೀರ್ಪುಗಾರರಾಗಿದ್ದರು. ಅದೇ ಮೊದಲು ಕಿರುತಕರ ಕಾರ್ಯಕ್ರಮ ಒಂದಕ್ಕೆ ರವಿಚಂದ್ರನ್ ಅವರು ತೀರ್ಪುಗಾರರಾಗಿ ಆಗಮಿಸಿದ್ದು. ಆಗಿನಿಂದ ಕಿರುತೆರೆ ಪ್ರೇಕ್ಷಕರ ಜೊತೆ ಹೊಸದೊಂದು ನಂಟು ರವಿಚಂದ್ರನ್ ಅವರಿಗೆ ಬೆಸೆದುಕೊಂಡಿದೆ. ಪ್ರತಿ ವಾರ ಕೂಡ ರಿಯಾಯಿತಿ ಶೋಗಳ ಮುಖಾಂತರ ಕಿರುತೆರೆ ಪ್ರೇಕ್ಷಕರ ಎದುರು ಕಾಣಿಸಿಕೊಳ್ಳುವುದರಿಂದ ಸಿನಿಮಾ ಗಿಂತ ಹೆಚ್ಚಿನ ಜನರಿಗೆ ಅವರು ರೀಚ್ ಆಗುತ್ತಿದ್ದಾರೆ.

ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಸಹ ಕಿರುತೆರೆ ರಿಯಾಲಿಟಿ ಶೋಗಳನ್ನು ಆಸಕ್ತಿಯಿಂದ ನೋಡುವುದರಿಂದ ಎಲ್ಲರ ಮನಸಿಗೂ ಬಹಳ ಹತ್ತಿರ ಆಗುತ್ತಿದ್ದಾರೆ. ಹೀಗಾಗಿ ಮತ್ತೊಮ್ಮೆ ಅವರು ಮತ್ತೊಂದು ರಿಯಾಲಿಟಿ ಶೋ ಗೆ ತೀರ್ಪುಗಾರರಾಗಿ ಕಾಣಿಸಿಕೊಳ್ಳಲು ಒಪ್ಪಿಕೊಂಡು ಈ ಬಾರಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಅಮ್ಮ ಜೂನಿಯರ್ಸ್ ದ ಸೀಸನ್ 4 ಗಾರರಾಗಿ ಬಂದಿದ್ದರು. ಡ್ರಾಮಾ ಜೂನಿಯರ್ ಸೀಸನ್ 4 ಗೆ ಜಡ್ಜಸ್ ಆಗಿ ಕ್ರೇಜಿಸ್ಟಾರ್ ರವಿಚಂದ್ರನ್, ಡಿಂಪಲ್ ಕ್ವೀನ್ ರಕ್ಷಿತಾ ಮತ್ತು ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅವರು ಕಾಣಿಸಿಕೊಂಡಿದ್ದರು.

ಈ ಕಾರ್ಯಕ್ರಮವು ಜೀ ವಾಹಿನಿ ಹೆಮ್ಮೆಯ ಕಾರ್ಯಕ್ರಮವಾಗಿದೆ. ಪುಟ್ಟ ಪುಟ್ಟ ಮಕ್ಕಳು ತಮ್ಮ ಅಭಿನಯ ಚಾತುರ್ಯವನ್ನು ಹಾಸ್ಯ ,ಕೌಟುಂಬಿಕ, ಪೌರಾಣಿಕ, ಐತಿಹಾಸಿಕ ಸ್ಕಿಟ್ ಗಳ ಮೂಲಕ ತೋರುತ್ತಿದ್ದಾರೆ. ಇದು ಪ್ರೇಕ್ಷಕರಿಗೆ ಮನೋರಂಜನೆಯನ್ನು ಸಹ ನೀಡುತ್ತಿದ್ದು ಜೊತೆಗೆ ತೀರ್ಪುಗಾರರು ಕೂಡ ಕಾರ್ಯಕ್ರಮದ ಮಧ್ಯೆ ಹಂಚಿಕೊಳ್ಳುವ ಮಾತುಗಳು, ನೆನಪುಗಳು, ಅನುಭವಗಳು ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ.

ರವಿಚಂದ್ರನ್ ಅವರು ತಮ್ಮ ಗೋಲ್ಡನ್ ಟೈಂ ಬಗ್ಗೆ ಯಾವಾಗಲೂ ವೇದಿಕೆ ಮೇಲೆ ಮಾತನಾಡುತ್ತಿರುತ್ತಾರೆ. ಹೀಗೆ ಹಿಂದಿನ ತಮ್ಮ ಸಿನಿಮಾ ಗಳ ಬಗ್ಗೆ ಹೇಳುವಾಗ ಹೂವ ರೋಜಾ ಹೂವ ಹಾಡಿನ ಬಗ್ಗೆ ಹೇಳುವ ಸಂದರ್ಭ ಡ್ರಾಮಾ ಜೂನಿಯರ್ ಸೀಸನ್ 4 ಮೆಗಾ ಅಡಿಷನ್ ಅಲ್ಲಿ ಬರುತ್ತದೆ. ನಂತರ ಆ ಹಾಡಿಗೆ ರಚಿತರಾಮ್ ಜೊತೆ ನೃತ್ಯ ಸಹ ಮಾಡುತ್ತಾರೆ. ಈ ವಿಡಿಯೋಗಳು ಈಗ ಮತ್ತೊಮ್ಮೆ ವೈರಲ್ ಆಗಿವೆ. ಇದನ್ನು ನೀವು ಸಹ ನೋಡಿ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.