Home Blog Page 222

ನನ್ಗೆ ಮಕ್ಕಳು ಇಲ್ಲದೇ ಇರಬಹುದು, ಆದ್ರೆ ಶ್ವಾನಗಳೇ ನನಗೆ ಮಕ್ಕಳ ಸಮಾನ ಎಂದ ನಟಿ ರಮ್ಯಾ.

 

ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ 5ನೇ ಸೀಸನ್ ಮೊದಲ ಅತಿಥಿ ಆಗಿ ಬಂದಿದ್ದರು. ಈಗ ಸೋಶಿಯಲ್ ಮೀಡಿಯಾದಲೆಲ್ಲ ರಮ್ಯಾ ಅವರ ಇಂಗ್ಲಿಷ್ ಮಾತಿನ ಬಗ್ಗೆ ಸಕ್ಕತ್ ಚರ್ಚೆ ಶುರುವಾಗಿದೆ. ಹಲವಾರು ಟ್ರೋಲ್ ಪೇಜ್ ಗಳು ನಮ್ಮ ಅಜ್ಜಿಗೆ ಇಂಗ್ಲಿಷ್ ಬರಲ್ಲ ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಮ್ಯಾ ಅವರು ಕಾಣಿಸಿಕೊಂಡಿದ್ದ ಫೋಟೋ ಹಾಕಿ ಟ್ರೋಲ್ ಮಾಡುತ್ತಿದ್ದಾರೆ.

ಈ ವಾರಪೂರ್ತಿ ಸೋಶಿಯಲ್ ಮೀಡಿಯಾದಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ, ರಮ್ಯ ಅವರ ಇಂಗ್ಲಿಷ್ ಮಾತು, ಡಾ.ಬ್ರೋ ಬಗೆಗಿನ ವಿಚಾರ ಹಾಗೂ ರಾಘವೇಂದ್ರ ಹುಣಸೂರು ಅವರು ಡಾ. ಬ್ರೊ ಅವರ ಬಗ್ಗೆ ಆಡಿದ ವಿಡಂಭನಕಾರಿ ಮಾತುಗಳ ಬಗ್ಗೆಯೇ ಹೆಚ್ಚು ಚರ್ಚೆ ಮಾತುಕತೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ರಮ್ಯಾ ಅವರು ಅತಿ ಹೆಚ್ಚು ಇಂಗ್ಲೀಷ್ ಬಳಸಿ ಮಾತನಾಡಿದರು, ಶೇಕಡ 20%ರಷ್ಟು ಕನ್ನಡ ಬಳಕೆ ಮಾಡಲಿಲ್ಲ ಎನ್ನುವುದನ್ನು ಬಿಟ್ಟರೆ ರಮ್ಯಾ ಅವರ ಬಗ್ಗೆ ಜನಸಾಮಾನ್ಯರಿಗೆ ಗೊತ್ತಿರದ ಅನೇಕ ವಿಷಯಗಳನ್ನು ಅವರು ಮಾತನಾಡಿದ್ದಾರೆ.

ರಮ್ಯಾ ಅವರ ಜೀವನದ ಕಥೆ ಕೇಳಬೇಕು ಎಂದು ಕಿರುತೆರೆ ಪ್ರೇಕ್ಷಕರು ಕೂಡ ಕಾದಿದ್ದರು. ಈವರೆಗೆ ನಡೆದ ನಾಲ್ಕು ಸೀಸನ್ನಲ್ಲೂ ಕೂಡ ಇವರು ಅತಿಥಿಯಾಗಿ ಬರುತ್ತಾನೆ ಎನ್ನುವ ನಿರೀಕ್ಷೆ ಇತ್ತು. ಅಂತಿಮವಾಗಿ ಪ್ರೇಕ್ಷಕರ ಕುತೂಹಲಕ್ಕೆ ತಕ್ಕ ಹಾಗೆ ರಮ್ಯಾ ಅವರು ಸಾಧಕರ ಸೀಟ್ ಏರಿದ್ದಾರೆ. ಹಾಗೆ ಬದುಕಿನ ಸ್ವಾರಸ್ಯಕರ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮುಖ್ಯವಾಗಿ ರಮ್ಯಾ ಅವರು ತಂದೆಯ ಬಗ್ಗೆ ಎಲ್ಲೂ ಸಹ ಇದುವರೆಗೆ ಹೇಳಿಕೊಂಡಿರಲಿಲ್ಲ, ಈ ಕಾರ್ಯಕ್ರಮದಲ್ಲಿ ಸಾಕು ತಂದೆ ಆರ್.ಟಿ ನಾರಾಯಣ್ ಅವರ ಬಗ್ಗೆ ರಮ್ಯ ಮಾತನಾಡಿದ್ದಾರೆ.

ಜೊತೆಗೆ ಅವರ ತಂದೆ ತೀರಿಕೊಂಡಾಗ ಡಿಪ್ರೆಷನ್ ಗೆ ಹೋಗಿದ್ದು, ರಾಹುಲ್ ಗಾಂಧಿ ಅವರು ಆ ಸಮಯದಲ್ಲಿ ಧೈರ್ಯ ಹೇಳಿದ್ದು ಬದುಕನ್ನು ಅರ್ಥ ಮಾಡಿಸಿದರ ಬಗ್ಗೆಯೂ ಮಾತನಾಡಿದ್ದಾರೆ. ಅವರ ಬದುಕಿನಲ್ಲಿ ತಂದೆ-ತಾಯಿ ಬಿಟ್ಟರೆ ರಾಹುಲ್ ಗಾಂಧಿಯೇ ಪ್ರಮುಖ ವ್ಯಕ್ತಿ ಎಂದು ಹೇಳಿಕೊಂಡಿರುವ ಅವರು ಪ್ರಾಣಿಗಳ ಬಗ್ಗೆ ಕೂಡ ಮಾತನಾಡಿದ್ದಾರೆ. ಸೆಲೆಬ್ರಿಟಿಗಳಿಗೆಲ್ಲರಿಗೂ ಸಾಮಾನ್ಯವಾಗಿ ಪೆಟ್ಗಳ ಬಗ್ಗೆ ಆಸಕ್ತಿ ಇರುತ್ತದೆ.

ಅದರಲ್ಲೂ ಚಂದನವನದ ಪದ್ಮಾವತಿ ಶ್ವಾನಪ್ರಿಯೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ರಮ್ಯಾ ಅವರು ಲಕ್ಕಿ ಸಿನಿಮಾದಲ್ಲೂ ಕೂಡ ತಮ್ಮ ನಿಜ ಜೀವನದ ಕ್ಯಾರೆಕ್ಟರ್ ರೀತಿ ಕಾಣಿಸಿಕೊಂಡಿದ್ದರು. ಅಂದರೆ ಆ ಸಿನಿಮಾದಲ್ಲಿ ಕೂಡ ಅವರು ನಾಯಿಯನ್ನು ಹೆಚ್ಚು ಪ್ರೀತಿಸುವ ಯುವತಿ ಪಾತ್ರ ಮಾಡಿದ್ದರು. ಶ್ವಾನಗಳು ಎಂದರೆ ರಮ್ಯಾ ಅವರಿಗೆ ಬಹಳ ಪ್ರೀತಿ ಈ ಕಾರ್ಯಕ್ರಮದಲ್ಲಿ ಕೂಡ ನಾಯಿಗಳ ಬಗ್ಗೆ ಮಾತನಾಡಿದ ಅವರು ನಮ್ಮ ಮನೆಯಲ್ಲಿ ಮಕ್ಕಳು ಇರದೇ ಇರಬಹುದು, ಆದರೆ ನನಗೆ ಶ್ವಾನಗಳೇ ಮಕ್ಕಳ ಸಮಾನ ಎಂದು ಹೇಳಿದ್ದಾರೆ.

ಈಗ ಅವರ ಮನೆಯಲ್ಲಿ ಇರುವ 16 ವರ್ಷದ ಚಾಂಪಿ ಎನ್ನುವ ನಾಯಿ ಬಗ್ಗೆ ಮಾತನಾಡಿ, ಅದಕ್ಕೆ ಹೃದಯ ಸಂಬಂಧಿ ಕಾಯಿಲೆ ಇದೆ ಎನ್ನುವುದನ್ನು ಹೇಳಿದ್ದಾರೆ. ಮತ್ತೊಂದು ರಾಣಿ ಎನ್ನುವ ನಾಯಿ ಗೋವಾದಲ್ಲಿ ಆಕ್ಸಿಡೆಂಟ್ ಮಾಡಿಕೊಂಡಿದ್ದು, ರಾಣಿ ಬಂದ ಮೇಲೆ ಬದುಕು ಬದಲಾಗಿದ್ದು ಎಲ್ಲವನ್ನು ಹೇಳಿಕೊಂಡಿದ್ದಾರೆ. ಜೊತೆಗೆ ಅವರಿಗೆ ಈ ಕಾರ್ಯಕ್ರಮದಲ್ಲಿ ಅವರ ಪ್ರೀತಿಯ ಬ್ರಾಂಡಿ ಶ್ವಾನದ ಫೋಟೋವನ್ನು ಸರ್ಪ್ರೈಸ್ ಗಿಫ್ಟಾಗಿ ನೀಡಲಾಗಿದೆ. ಅದನ್ನು ಅಂಬರೀಶ್ ಅವರು ಗಿಫ್ಟ್ ನೀಡಿದ್ದರು ಆದರೆ ಮಾರ್ಚ್ 14, 2022ರಂದು ಅವಳು ತೀರಿಕೊಂಡಳು ಎನ್ನುವ ವಿಚಾರ ಹೇಳಿಕೊಂಡು ತುಂಬಾ ಹಚ್ಚಿಕೊಂಡಿದ್ದ ಬ್ರ್ಯಾಂಡಿ ನೆನೆದುಕೊಂಡು ಭಾವುಕರಾಗಿದ್ದಾರೆ ರಮ್ಯಾ.

ಸಿಂಹಾದ್ರಿಯ ಸಿಂಹ ಪಾರ್ಟ್-2 ಸಿನಿಮಾ ಮಾಡಲು ಸುದೀಪ್ ಒಪ್ಪಿಕೊಂಡಿದ್ರೂ ಕೂಡ ಸಿನಿಮಾ ಯಾಕಿನ್ನು ಬಂದಿಲ್ಲ ಗೊತ್ತಾ.?

ಸಿಂಹಾದ್ರಿಯ ಸಿಂಹ ಕನ್ನಡಿಗರಿಂದ ಸಾಹಸಸಿಂಹ ಎಂದು ಕರೆಸಿಕೊಂಡ ಡಾ. ವಿಷ್ಣುವರ್ಧನ್ ಅವರ ವೃತ್ತಿ ಜೀವನದ ಅತ್ಯುತ್ತಮ ಚಿತ್ರ. ವಿಷ್ಣುವರ್ಧನ್ ಅವರು ನಟಿಸಿದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳು. ಕೊನೆ ಕೊನೆಗೆ ಅವರು ಮಾಡಿದಂತಹ ರಾಜ ಗಾಂಭೀರ್ಯದ ಪಾತ್ರಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಜನರಿಗೆ ಇಷ್ಟ ಆಗಿತ್ತು. ಕೋಟಿಗೊಬ್ಬ, ಜಮೀನ್ದಾರು, ರಾಜನರಸಿಂಹ, ಸಿಂಹಾದ್ರಿಯ ಸಿಂಹ, ಆಪ್ತಮಿತ್ರ, ಆಪ್ತರಕ್ಷಕ ಈ ಸಿನಿಮಾಗಳಲ್ಲಿ ವಿಷ್ಣುವರ್ಧನ್ ಅವರ ಮುಖದಲ್ಲಿ ಹೆಸರಿಗೆ ತಕ್ಕ ಹಾಗೆ ಮಹಾರಾಜನ ಲುಕ್ ಎದ್ದು ಕಾಣುತ್ತಿತ್ತು.

ಅದರಲ್ಲೂ ವಿಷ್ಣುವರ್ಧನ್ ಅವರು ತ್ರಿಪಾತ್ರದಲ್ಲಿ ಅಭಿನಯಿಸಿದ್ದ ಸಿಂಹಾದ್ರಿಯ ಸಿಂಹ ಸಿನಿಮಾವಂತೂ ಈಗ ರೀ ರಿಲೀಸ್ ಮಾಡಿದರೂ ಕೂಡ ಸೂಪರ್ ಹಿಟ್ ಆಗಿ ರನ್ ಆಗುವಂತಹ ಸಿನಿಮಾ. ವಿಷ್ಣುವರ್ಧನ್, ಭಾನುಪ್ರಿಯ, ಮೀನಾ, ಅಭಿಜಿತ್, ಶಿವರಾಂ, ಉಮಾಶ್ರೀ, ರಮೇಶ್ ಭಟ್, ಸಿರಿ ಹೀಗೆ ಬಹುದೊಡ್ಡ ತಾರಾ ಬಳಗವನ್ನೇ ಹೊಂದಿದ್ದ ಚಿತ್ರ ಸಿಂಹಾದ್ರಿಯ ಸಿಂಹ ಚಿತ್ರದ ಚಿತ್ರಕಥೆ ಹಾಗೂ ಸೂಪರ್ ಹಿಟ್ ಹಾಡುಗಳ ಕಾರಣದಿಂದಾಗಿ ಅದಕ್ಕೆ ಇನ್ನಷ್ಟು ವೈಭೋಗ ಹೆಚ್ಚಾಗಿತ್ತು.

ಹೀಗೆ ಒಂದು ಮ್ಯೂಸಿಕಲ್ ಹಿಟ್ ಹಾಗೂ ರಿಚ್ ವಿಷುವಲೈಝ್ ಇದ್ದ ಸಿಂಹಾದ್ರಿಯ ಸಿಂಹ ಸಿನಿಮಾವನ್ನು ಅಷ್ಟು ಗ್ರಾಂಡ್ ಆಗಿ ನಿರ್ದೇಶನ ಮಾಡಿದವರು ಎಸ್ ನಾರಾಯಣ್ ಅವರು. ಈ ಸಿನಿಮಾಗೆ ತಕ್ಕನಾದ ಬಂಡವಾಳ ಸುರಿದು ಅದಕ್ಕೆ ಸಾತ್ ನೀಡಿದವರು ವಿಷ್ಣುವರ್ಧನ್ ಅವರ ಬಹಳ ಆತ್ಮೀಯರಾದ ವಿಜಯಕುಮಾರ್ ಅವರು. ಈ ಸಿನಿಮಾ ರಿಮೇಕ್ ಸಿನಿಮಾ ಆಗಿದ್ದರೂ ಕೂಡ ಕನ್ನಡದ ನೇಟಿವಿಟಿಗೆ ತಕ್ಕಹಾಗೆ ಇದನ್ನು ಬದಲಾಯಿಸಿ ತೆರೆಗೆ ತಂದಿದ್ದರು.

ಕನ್ನಡದ ಬಗ್ಗೆ ಒಂದು ಹಾಡು ಕೂಡ ಇದ್ದ ಈ ಸಿನಿಮಾವನ್ನು ಕನ್ನಡಿಗರು ಮೆಚ್ಚಿ ಅಪ್ಪಿಕೊಂಡಿದ್ದರು. ಈ ಸಿನಿಮಾಗೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಗೆ ಮನಸೋತ ಚಿತ್ರತಂಡ ಸಿಂಹಾದ್ರಿಯ ಸಿಂಹ ಸೀಕ್ವೆಲ್ ಮಾಡಬೇಕು ಎಂದು ನಿರ್ಧರಿಸಿತು. ವಿಷ್ಣುವರ್ಧನ್ ಅವರು ಸಹ ಅದಕ್ಕೆ ಒಪ್ಪಿಕೊಂಡಿದ್ದರು. ವಿಜಯ ಕುಮಾರ್ ಅವರು ಬಂಡವಾಳ ಹೂಡಲು ತಯಾರಿದ್ದರು, ಎಸ್ ನಾರಾಯಣ್ ಅವರು ಸಹ ಅದಕ್ಕೆ ಚಿತ್ರಕಥೆ ರೆಡಿ ಮಾಡಿಕೊಂಡಿದ್ದರು.

ಆದರೆ ಅದು ಸೆಟ್ಟೇರುವ ಮುನ್ನವೇ ವಿಷ್ಣುವರ್ಧನ್ ಅವರು ಬಹಳ ಬೇಗ ನಮ್ಮನ್ನೆಲ್ಲ ಅ’ಗ’ಲಿ ಹೋದರು. ಆನಂತರ ಈ ಕನಸು ಹಾಗೆ ಉಳಿಯುವುದು ಬೇಡ ವಿಷ್ಣುವರ್ಧನ್ ಅವರ ನೆನಪಿಗಾಗಿ ಇದನ್ನು ಸ್ವಲ್ಪ ಮಾರ್ಪಾಡಿಸಿ ಮಾಡೋಣ ಎಂದು ಸುದೀಪ್ ಅವರಿಗೆ ಆಫರ್ ನೀಡಲಾಗಿತ್ತು. ಸದ್ಯಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ವಿಷ್ಣುವರ್ಧನ್ ಅವರು ಇಲ್ಲ ಎನ್ನುವ ನೋವನ್ನು ಮರೆಸುತ್ತಿರುವ ಅವರ ಛಾಯೆ ಉಳ್ಳ ನಟ ಎಂದರೆ ಸುದೀಪ್.

ಅದನ್ನು ಇಂಡಸ್ಟ್ರಿ ಹಾಗೂ ಕನ್ನಡದ ಜನತೆ ಕೂಡ ಒಪ್ಪಿಕೊಂಡಿದ್ದಾರೆ. ವಿಷ್ಣುವರ್ಧನ್ ಹಾಗೂ ಸುದೀಪ್ ಅವರ ನಡುವೆ ವಿವರಿಸಲಾಗದಂತಹ ಒಂದು ವಿಶೇಷ ಅನುಬಂಧ ಇದೆ. ಇದೇ ಕಾರಣಕ್ಕೆ ಸುದೀಪ್ ಅವರು ಸಹ ಈ ಸಿನಿಮಾಕ್ಕೆ ಒಪ್ಪಿಕೊಂಡಿದ್ದರು. ಆದರೆ ಇದರ ನಿರ್ಮಾಣದ ಹೊಣೆ ಹೊತ್ತಿದ್ದ ವಿಜಯಕುಮಾರ್ ಅವರು ಸಹ ತೀರಿಕೊಂಡ ಕಾರಣ ಸಿನಿಮಾ ತಯಾರಾಗಲಿಲ್ಲ. ಇಂದಿಗೂ ಇದರ ಕಥೆ ಎಸ್ ನಾರಾಯಣ್ ಅವರ ಬಳಿ ಇದೆ. ಆದಷ್ಟು ಬೇಗ ಮತ್ತೊಬ್ಬ ನಿರ್ಮಾಪಕ ಸಿಕ್ಕಿ, ಸಿನಿಮಾ ಮುಂದುವರೆಯುವಂತಾಗಲಿ ಎನ್ನುವುದು ಕನ್ನಡಿಗರ ಆಶಯ.

Mayur Patel: ನನಗೆ ಯಾವ ಸಿನಿಮಾದಲ್ಲು ಆಫರ್ ಕೊಡದೆ ಇರಲು ಕಾರಣ ಏನು ಗೊತ್ತ.? ನೋವು ಹಂಚಿಕೊಂಡ ನಟ ಮಯೂರ್ ಪಟೇಲ್

 

ಮಣಿ, ಲವ್ ಸ್ಟೋರಿ, ಗುನ್ನ, ನಿನದೇ ನೆನಪು, ಮುನಿಯ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದ ಮಯೂರ್ ಪಟೇಲ್ ಅವರು ನಿಧಾನವಾಗಿ ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಿದ್ದಾರೆ. ಒಂದು ಸಮಯದಲ್ಲಿ ಹೀರೋ ಆಗಿ ಬಹಳ ಫೇಮಸ್ ಆಗಿದ್ದ ಇವರು ಅದ್ಯಾವಾಗ ತೆರೆಯಿಂದ ದೂರವಾಗಿ ಬಿಟ್ಟರು ಎಂದು ಗೊತ್ತೇ ಆಗಲಿಲ್ಲ ಅಷ್ಟೊಂದು ದೊಡ್ಡ ಗ್ಯಾಪ್ ತೆಗೆದುಕೊಂಡು ಬಿಟ್ಟಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಯಾವ ಸಿನಿಮಾದಲ್ಲಿ ಹೀರೋ ಆಗಿಯೂ ಅಭಿನಯಿಸಿಲ್ಲ. ಹಾಗೆ ಅತಿಥಿ ಪಾತ್ರಗಳಲ್ಲ್ಲೂ ಕೂಡ ಕಾಣಿಸಿಕೊಂಡಿಸಲ್ಲ . ಇದಕ್ಕೆಲ್ಲ ಕಾರಣ ಏನು ಅಷ್ಟು ಪಿಕ್ ಅಲ್ಲಿ ಇದ್ದವರು ಅಷ್ಟು ಬೇಗ ಅವಕಾಶಗಳನ್ನೆಲ್ಲ ಕಳೆದುಕೊಂಡು ಸಿನಿಮಾ ಇಂದ ದೂರಾಗಲು ಕಾರಣ ಏನು ಎನ್ನುವುದನ್ನು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಬಹಳ ವರ್ಷಗಳ ನಂತರ ಮಯೂರ್ ಪಟೇಲ್ ಅವರು ರಾಜೀವ್ ಐಎಎಸ್ ಎನ್ನುವ ಸಿನಿಮಾ ಒಂದರಲ್ಲಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಬಂದರೂ ಕೂಡ ಅದೊಂದು ಸ್ಪೆಷಲ್ ರೋಲ್ ಆಗಿದೆಯಂತೆ. ಸಿನಿಮಾ ಸಲುವಾಗಿ ಸಂದರ್ಶನ ಒಂದರಲ್ಲಿ ಭಾಗಿಯಾದ ಇವರು ಸಿನಿಮಾ ರಂಗದಿಂದ ದೂರ ಉಳಿಯಲು ಕಾರಣ ಏನು ಎಂದು ಹೇಳಿಕೊಂಡಿದ್ದಾರೆ.

ಹೌದು, ಒಂದು ಕಾಲದಲ್ಲಿ ನಾನು ಕೈತುಂಬಾ ಅವಕಾಶಗಳನ್ನು ಇಟ್ಟುಕೊಂಡಿದ್ದೆ, ಒಳ್ಳೊಳ್ಳೆ ಸಿನಿಮಾಗಳು ಕೂಡ ನನಗೆ ಸಿಗುತ್ತಿತ್ತು. ಆದರೆ ಆ ಸಮಯ ಕಳೆದ ಮೇಲೆ ಈಗ ನನ್ನ ಹತ್ತಿರ ಯಾರು ಕೂಡ ಕಥೆ ಹೇಳಲು ಹುಡುಕಿಕೊಂಡು ಬರುತ್ತಿಲ್ಲ ಏಕೆಂದರೆ ಎಲ್ಲಾ ಕಡೆ ನನ್ನ ಬಗ್ಗೆ ನೆಗೆಟಿವ್ ಆಗಿ ಪಬ್ಲಿಸಿಟಿ ಆಗಿದೆ ನನ್ನನ್ನು ನೋಡಬೇಕು ಎಂದರೆ ನನ್ನ ತಂದೆಯನ್ನು ದಾಟಿಕೊಂಡು ಬರಬೇಕು ಎಂದು ಹಲವರು ಅಂದುಕೊಂಡಿದ್ದಾರೆ.

ಅದೇ ನನಗೆ ಮೈನಸ್ ಪಾಯಿಂಟ್ ಆಗಿರುವುದು ಆದರೆ ನನ್ನ ತಂದೆ ಅವರು ಇಂಡಸ್ಟ್ರಿಯಲ್ ಇದ್ದರೂ ಕೂಡ ಎಂದು ನನ್ನ ಸಿನಿಮಾ ವಿಚಾರವಾಗಿ ತಲೆ ಹಾಕಿದವರಲ್ಲ. ನನ್ನ ಪ್ರೊಡ್ಯೂಸರ್ ಗಳನ್ನು ಮಾತನಾಡಿಸುತ್ತಿದ್ದರು ಅವರೇನಾದರೂ ಸಲಹೆ ಕೇಳಿದಾಗ ಮಾತ್ರ ಸಿನಿಮಾ ರಿಲೀಸ್ ವೇಳೆಗೆ ಏನಾದರು ಸಜೆಶನ್ ಕೊಡುತ್ತಿದ್ದರು ಅಷ್ಟೇ ನನಗೆ ಗೊತ್ತಿರೋ ಹಾಗೆ ಮತ್ಯಾವ ವಿಷಯದಲ್ಲಿ ಅವರು ತಲೆ ಹಾಕುತ್ತಿರಲಿಲ್ಲ.

ಆದರೆ ಈ ರೀತಿ ಒಂದು ತಪ್ಪು ಕಲ್ಪನೆ ಆಗ ಎಲ್ಲರ ತಲೆಯಲ್ಲಿ ತುಂಬಿತ್ತು. ಹಾಗಾಗಿ ಹೆಚ್ಚಿನ ಜನರು ನನ್ನ ಹತ್ತಿರ ಬರಲೇ ಇಲ್ಲ ಮತ್ತು ಇನ್ನೊಂದು ಏನೆಂದರೆ ನಾನು ತುಂಬಾ ಸಂಭಾವನೆ ಡಿಮ್ಯಾಂಡ್ ಮಾಡುತ್ತೇನೆ ಎಂದು ಕೂಡ ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದರ ಜೊತೆಗೆ ನನಗೆ ತುಂಬಾ ಅಟಿಟ್ಯೂಡ್ ಇದೆ ಎಂದು ಹಲವರು ಮಾತನಾಡಿಕೊಂಡಿದ್ದಾರೆ.

ಆದರೆ ಈವರೆಗೆ ನನಗೆ ಆಟಿಟ್ಯೂಡ್ ಸ್ಪೆಲ್ಲಿಂಗ್ ಕೂಡ ಗೊತ್ತಿಲ್ಲ, ನಾನು ಎಲ್ಲರೊಳಗೆ ಒಬ್ಬನಾಗಿ ಇರಲು ಆಸೆಪಡುತ್ತಿದ್ದವನು. ಇಂದಿಗೂ ನನ್ನ ತಂದೆ ಹಾಗೂ ಹೆಂಡತಿ ಕೂಡ ಸ್ವಲ್ಪ ಆದರೂ ಆಟಿಟ್ಯೂಡ್ ಇಟ್ಕೋಬೇಕು ಎಂದು ಸಲಹೆ ಕೊಡುತ್ತಾರೆ, ನನಗೆ ಅದು ಬರುವುದೇ ಇಲ್ಲ. ಆದರೂ ಸಹ ನನ್ನ ಬಗ್ಗೆ ಕೆಲವರು ಹೀಗೆಲ್ಲಾ ಹಬ್ಬಿಸಿದ ಕಾರಣ ಈಗ ಅವಕಾಶಗಳಿಲ್ಲದ ರೀತಿ ಆಗಿ ಹೋಗಿದೆ. ಹಾಗಾಗಿ ಸಿನಿಮಾಗಳಲ್ಲಿ ನಾನು ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ನನಗೆ ತುಂಬಾ ಆಟಿಟ್ಯೂಡ್ ಅಂತ ಸುಳ್ಳು ಹಬ್ಬಿಸಿ ಬಿಟ್ಟಿದ್ದಾರೆ ಹಾಗಾಗಿ ಸಿನಿಮಾ ಆಫರ್ ಸಿಗುತ್ತಾ ಇಲ್ಲ ಎಂದು ಸಂದರ್ಶನದಲ್ಲಿ ನೋವು ಹಂಚಿಕೊಂಡ ನಟ ಮಯೂರ್ ಪಟೇಲ್.

ಅಲ್ಲು ಅರ್ಜುನ್ ಗೆ ಸಿನಿಮಾ ಮಾಡ್ತಿನಿ ಅಂತ ಹೋದಾಗ ಅವಮಾನ ಮಾಡಿದ್ರು ಎಂದು ಕಬ್ಜ ಸಿನಿಮಾ ಸಿನಿಮಾ ಸಕ್ಸಸ್ ಮೀಟಿಂಗ್ ನಲ್ಲಿ ನೋವು ಹಂಚಿಕೊಂಡ ನಿರ್ದೇಶಕ ಚಂದ್ರು

 

ಆರ್ ಚಂದ್ರು ಅವರು ಅಲ್ಲು ಅರ್ಜುನ್ ಅವರಿಗೆ ಕಥೆ ಹೇಳುತ್ತೇನೆ ಎಂದು ಹೋದಾಗ ಯಾವ ರೀತಿ ಅವಮಾನ ಮಾಡಿದ್ರು ಗೊತ್ತಾ. ಕನ್ನಡದಲ್ಲಿ ತಾಜ್ ಮಹಲ್ ಮತ್ತು ಚಾರ್ ಮಿನಾರ್ ಇಂತಹ ಪ್ರೇಮ ಕಥೆಗಳನ್ನು ಬರೆದು ನಿರ್ದೇಶಿಸಿ ಹಿಟ್ ಆದ ನಿರ್ದೇಶಕ ಆರ್ ಚಂದ್ರು ಅವರು ಸಿನಿಮಾ ಮಾಡುತ್ತಾರೆ ಎಂದರೆ ಕನ್ನಡಿಗರು ಈಗಲೂ ಸಹ ಅವರ ಕಥೆಗಳ ಮೇಲೆ ಅಷ್ಟೇ ಕುತೂಹಲ ಉಳಿಸಿಕೊಂಡಿರುತ್ತಾರೆ. ಈ ರೀತಿ ಕಾಲಕ್ಕೆ ತಕ್ಕ ಹಾಗೆ ತನ್ನ ಕಥೆಗಳಲ್ಲಿ ಇಂಪ್ರೂವ್ಮೆಂಟ್ ಮಾಡಿಕೊಂಡು ಕನ್ನಡಿಗರಿಗೆ ಎಂದೂ ಮನರಂಜನ ವಿಷಯದಲ್ಲಿ ಮೋಸ ಮಾಡಿದ ಆರ್ ಚಂದ್ರು ಅವರು ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ರಿಯಲ್ ಸ್ಟಾರ್ ಉಪ್ಪಿ, ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವಣ್ಣನ ಕಾಂಬಿನೇಷನ್ ಇಟ್ಟುಕೊಂಡು ಕಬ್ಜಾ ಎನ್ನುವ ರಕ್ತ ಚರಿತ್ರೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆಗೆದಿದ್ದಾರೆ. ಕನ್ನಡದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರವಾಗಿದ್ದ ಕಬ್ಜಾ ಚಿತ್ರವು ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಾರ್ಚ್ 17ರಂದು ಬಿಡುಗಡೆ ಆಗಿದೆ. ಸಿನಿಮಾ ರಿಲೀಸ್ ಆದ ಮೂರು ದಿನಕ್ಕೆ 100 ಕೋಟಿ ಕಲೆಕ್ಷನ್ ದಾಟಿದ್ದು, ಚಿತ್ರತಂಡ ಆ ಸಂಭ್ರಮಾಚರಣೆ ಭಾಗಿ ಆಗಿದೆ.

ಇತ್ತೀಚೆಗೆ ಸಿನಿಮಾ ನೂರು ಕೋಟಿ ದಾಟಿದ ದಾಖಲೆಯನ್ನು ಸಂಭ್ರಮಿಸುವ ರೂಢಿ ಇಂಡಸ್ಟ್ರಿಯಲ್ಲಿ ಶುರುವಾಗಿದೆ. ಅದಕ್ಕಾಗಿ ಪ್ರೆಸ್ ಮೀಟ್ ಕೂಡ ನಡೆಸಲಾಗಿದ್ದು, ಅದರಲ್ಲಿ ಅನೇಕ ಭಾವನಾತ್ಮಕ ವಿಷಯಗಳನ್ನು ಆರ್. ಚಂದ್ರು ಅವರು ಹಂಚಿಕೊಂಡಿದ್ದಾರೆ. ಮೊದಲಿಗೆ ಅವರು ಅವರ ಚಿತ್ರದ ಕಲೆಕ್ಷನ್ ಬಗ್ಗೆ ಮಾತನಾಡಿ ನನ್ನ ಸಿನಿಮಾ ಓ ಟಿ ಟಿ ರೈಡ್ಸ್ ಮತ್ತು ಸ್ಯಾಟಲೈಟ್ ರೈಟ್ಸ್ ಎಲ್ಲವೂ ಸೇರಿ ಈಗಾಗಲೇ ಹಾಕಿದ್ದ ಬಜೆಟ್ ಅನ್ನು ಗೆದ್ದುಕೊಂಡಿದೆ, ಅದು ಮೊದಲ ಸಂಭ್ರಮ ಈಗ ಕಲೆಕ್ಷನ್ ಅಲ್ಲಿ ಥಿಯೇಟರ್ ಕಲೆಕ್ಷನ್ ಇಷ್ಟು ಉತ್ತಮವಾಗಿರುವುದು ನಮ್ಮ ಎರಡನೇ ಸಂಭ್ರಮ ಎಂದಿದ್ದಾರೆ.

ಪ್ಯಾನ್ ಇಂಡಿಯಾ ಸಿನೆಮಾ ಬಗ್ಗೆ ಮಾತು ಶುರು ಮಾಡಿದ ಅವರು ಪಕ್ಕದ ತೆಲುಗು ಇಂಡಸ್ಟ್ರಿಯವರು ಒಮ್ಮೆ ಹೇಗೆ ಅವಮಾನ ಮಾಡಿದ್ದರು ಎನ್ನುವ ಘಟನೆ ಬಗ್ಗೆಯೂ ಹೇಳಿಕೊಂಡಿದ್ದಾರೆ. ನಾನು ಎಲ್ಲರೂ ಹೋಗುತ್ತಾರೆ ನಾನು ದೊಡ್ಡದಾಗಿ ಏನಾದ್ರು ಮಾಡಬೇಕು ಎಂದುಕೊಂಡು ಅಲ್ಲಿಗೆ ಒಂದು ಸಿನಿಮಾ ಮಾಡಲು ಹೋದೆ. ಅವರು ನನಗೆ ಮೂರು ಕೋಟಿ ಬಜೆಟ್ ಕೊಟ್ಟರು, ಅದೇ ಹೆಚ್ಚಾಗಿತ್ತು ಆದರೂ ಅದರಲ್ಲಿ ಅಚ್ಚುಕಟ್ಟಾಗಿ ಮುಗಿಸಿ ಆ ಸಕ್ಸಸ್ ನಲ್ಲಿ ಇದ್ದಾಗಲೇ ಅಲ್ಲು ಅರ್ಜುನ್ ಅವರಿಗೆ ಕಥೆ ಹೇಳುತ್ತೇನೆ ಎಂದು ಕೇಳಿಕೊಂಡೆ.

ಆಗ ನನ್ನ ಸಿನಿಮಾದ ನಿರ್ಮಾಪಕರೇ ಬೇಡ ಎಂದು ಬಿಟ್ಟರು, ಮತ್ತೊಬ್ಬರನ್ನು ಸಂಪರ್ಕಿಸಿದಾಗ ಕನ್ನಡ ಡೈರೆಕ್ಟರ್ ಆ? ಕನ್ನಡ ರೈಟರ್ ಆದರೆ ಬೇಡ ಎಂದು ಹೇಳಿ ಬಿಟ್ಟರು. ಈ ರೀತಿ ಕನ್ನಡದವರು ಆ ರೆಂಜ್ ಗೆ ಅಲ್ಲ ಎನ್ನುವ ಅಭಿಪ್ರಾಯ ಅವರ ಮನದಲ್ಲಿ ಇತ್ತು, ಅದನ್ನೆಲ್ಲವನ್ನು ಹೋಗಲಾಡಿಸಿದ್ದು ಕೆಜಿಎಫ್ ತಂಡ ಎಂದು ಕೆಜಿಎಫ್ ಟೀಮ್ ಅನ್ನು ಕೂಡ ನೆನೆಸಿಕೊಂಡಿದ್ದಾರೆ ಎಲ್ಲರೂ ಬೇರೆಯವರ ಬಗ್ಗೆ ಮಾತನಾಡಬೇಡಿ ಎನ್ನುತ್ತಾರೆ.

ಆದರೆ ಗೆದ್ದವರು ಯಾರೇ ಆಗಿದ್ದರೂ ಅವರ ಬಗ್ಗೆ ಮಾತನಾಡಲೇಬೇಕು. ನನಗೂ ಸಹ ಕೆಜಿಎಫ್ ರೀತಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕು ಅನ್ನುವ ಸ್ಫೂರ್ತಿಯನ್ನು ಅದೇ ಚಿತ್ರ ಕೊಟ್ಟಿದ್ದು, ಅದಕ್ಕೆ ನನಗೆ ಎಲ್ಲರೂ ಬೆಂಬಲವಾಗಿ ಸಹಕಾರವಾಗಿ ನಿಂತುಕೊಂಡ ಕಾರಣ ಎಂದು ಕಬ್ಜಾ ಸಿನಿಮಾ ತಯಾರಾಗಿದ್ದು ಎಂದು ತಮ್ಮ ಕಬ್ಜಾ ಸಿನಿಮಾ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ.

ಹರೀಶ್ ರಾಯ್ ಕ್ಯಾನ್ಸರ್ ನಿಂದ ಕಷ್ಟ ಅನುಭವಿಸುತ್ತಿದ್ದಾಗ ಅವರ ಜೀವ ಉಳಿಸಿದ ವ್ಯಕ್ತಿ ಯಾರು ಎಂಬ ಸತ್ಯ ಬಿಚ್ಚಿಟ್ಟ ದರ್ಶನ್

 

ನಿನ್ನೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಮಹಿಳಾ ಸಮಾವೇಶ ಕಾರ್ಯಕ್ರಮ ನಡೆಸಿದೆ. ನಟ ದರ್ಶನ್ ಅವರು ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಅವರ ಸಲುವಾಗಿ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸುಮಲತ ಅಂಬರೀಶ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ದರ್ಶನ್ ಅವರು ಸತೀಶ್ ರೆಡ್ಡಿ ಅವರ ಬಗ್ಗೆ ಮಾತನಾಡುತ್ತಾ, ಅವರು ಜನರ ಕಷ್ಟಕ್ಕೆ ಹೇಗೆ ನೆರವಾಗುತ್ತಾರೆ ಎನ್ನುವುದನ್ನು ಉದಾಹರಣೆ ಸಮೇತ ವಿವರಿಸಿದ್ದಾರೆ.

ಚಿತ್ರರಂಗದ ವಿಷಯಕ್ಕೆ ಬರುವುದಾದರೆ ನಾವೆಲ್ಲ ಇವರ ಪ್ರಚಾರಕ್ಕಾಗಿ ಇಷ್ಟು ಮಾಡುತ್ತೇವೆ ನಮಗಾಗಿ ಏನು ಮಾಡಿದ್ದೀರಾ ಎಂದು ಒಮ್ಮೆ ಕೇಳಿಕೊಂಡಾಗ ಅವರು ಎಂಥ ದೊಡ್ಡ ಉಪಕಾರ ಮಾಡಿದರು ಗೊತ್ತಾ ಎಂದು ಹಳೆ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಕಳೆದ ವರ್ಷ ಹರೀಶ್ ರಾಯ್ ಎನ್ನುವ ಕನ್ನಡದ ಕಲಾವಿದನೊಬ್ಬನಿಗೆ ಕ್ಯಾನ್ಸರ್ ಎನ್ನುವಂತಹ ಮಾರಣಾಂತಿಕ ಖಾಯಿಲೆ ಕಾಡಿತ್ತು. ಆ ಕಾಯಿಲೆಯಲ್ಲಿ ಬಳಲುತ್ತಿದ್ದ ಅವರಿಗೆ ಇದರ ವಿರುದ್ಧ ಚಿಕಿತ್ಸೆ ಪಡೆದುಕೊಂಡು ಹೋರಾಡುವಷ್ಟು ಹಣಕಾಸಿನ ಅನುಕೂಲ ಇರಲಿಲ್ಲ.

ಅದನ್ನು ನೋಡಿದ ದರ್ಶನ್ ಅವರು ಸತೀಶ್ ರೆಡ್ಡಿ ಅವರು ಹಾಗೂ ಅವರ ಸ್ನೇಹಿತರ ಜೊತೆ ಕಲಾವಿದನೊಬ್ಬನಿಗೆ ಹೀಗಾಗಿದೆ ನೀವು ಏನು ಮಾಡಿತ್ತೀರಾ ಎಂದು ಒಂದು ಮಾತು ಹೇಳಿದ್ದಕ್ಕಾಗಿ ಸಂಪೂರ್ಣ ಚಿಕಿತ್ಸೆಯ ವೆಚ್ಚ ಭರಿಸಿದರು. ಅದು ಮಾತ್ರ ಅಲ್ಲದೆ ಇನ್ನು ಅನೇಕ ಸಹಾಯವನ್ನು ಅವರು ಮಾಡಿದ್ದಾರೆ. ಮುಂದುವರೆದು ಈಗ ಬೊಮ್ಮನಹಳ್ಳಿ ಕ್ಷೇತ್ರದವರ ಸೇವೆ ಮಾಡಬೇಕೆಂದು ನಿಂತಿದ್ದಾರೆ. ನಿಮ್ಮ ಶಾಸಕನನ್ನು ಮಂತ್ರಿ ಮಾಡುವ ಅವಕಾಶ ನಿಮ್ಮ ಕೈಲಿದೆ ಸರಿಯಾದ ನಿರ್ಧಾರ ಮಾಡಿ ಆರಿಸಿ ಎಂದು ಸಲಹೆ ಕೊಟ್ಟಿದ್ದಾರೆ.

ಮೊದಲಿನಿಂದಲೂ ದರ್ಶನ್ ಅವರು ರಾಜಕೀಯ ವ್ಯಕ್ತಿಗಳ ಪರವಾಗಿ ಪ್ರಚಾರಕ್ಕೆ ಹೋಗುವುದು ಮಾಮೂಲಿ ಆಗಿದೆ. ಅದರಲ್ಲೂ ಬಿಜೆಪಿ ಪಕ್ಷದ ಕ್ಯಾಂಡಿಡೇಟ್ ಗಳ ಬಗ್ಗೆ ಅವರು ಹೆಚ್ಚು ಪ್ರಚಾರಕ್ಕೆ ಹೋಗುತ್ತಾರೆ. ಈ ಹಿಂದೆ ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡಿದ್ದರು, ನಂತರ ಮಂಡ್ಯ ಕಣದಲ್ಲಿ ಸುಮಲತಾ ಅಂಬರೀಶ್ ಅವರು ಎಲೆಕ್ಷನ್ ಗೆ ನಿಂತಿದ್ದಾಗ ಯಶ್ ಅವರ ಜೊತೆ ಜೋಡೆತ್ತಾಗಿ ನಿಂತು ಅವರ ಗೆಲುವಿಗೆ ಕಾರಣಕರ್ತರಾಗಿದ್ದರು.

ಇತ್ತೀಚಿಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಇವರು ಈ ಬಾರಿ ಸತೀಶ್ ರೆಡ್ಡಿ ಅವರಿಗಾಗಿ ಬಹಿರಂಗವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಜೊತೆಗೆ ಸತೀಶ್ ರೆಡ್ಡಿ ಅವರು ಮಾಡಿರುವ ಸೇವೆಗಳ ಬಗ್ಗೆ ಜನರಿಗೆ ತಿಳಿಸಿ ಇಂತಹ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ದರ್ಶನ್ ಅವರು ಸಹ ತಮ್ಮ ಮನೆ ಮುಂದೆ ಸಹಾಯಕ್ಕಾಗಿ ಹೋದವರನ್ನು ಎಂದು ಬರಿ ಗೈ ನಲ್ಲಿ ಕಳುಹಿಸಿದವರಲ್ಲ. ವರ್ಷಕ್ಕೆ ಎರಡು ಕೋಟಿ ರೂಪಾಯಿಗಳು ನನಗೆ ಇದಕ್ಕಾಗಿಯೇ ಬೇಕಾಗುತ್ತದೆ ಎಂದು ಅವರು ಈ ಹಿಂದೆ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಇನ್ನು ಮುಂದೆ ನಾನು ಪ್ರಚಾರಕ್ಕೆ ಹೋಗುವಾಗ ನನ್ನನ್ನು ಕರೆಯುವವರಲ್ಲಿ ಒಂದು ಭರವಸೆ ತೆಗೆದುಕೊಳ್ಳುತ್ತೇನೆ. ಏನೆಂದರೆ ನಾವು ಕಳಿಸುವ ಜನರಿಗೆ ವೈದ್ಯಕೀಯ ಚಿಕಿತ್ಸೆ ಇರಲಿ ಅಥವಾ ವಿದ್ಯಾಭಾಸಕ್ಕೆ ನೆರವು ಇರಲಿ ಸಂಪೂರ್ಣವಾಗಿ ಎಲ್ಲವೂ ನಾವೇ ಮಾಡಲು ಸಾಧ್ಯವಾಗಲ್ಲ.

ಜನರ ಪರವಾಗಿ ಆಯ್ಕೆಯಾಗುವವರು ಅದರಲ್ಲಿ ಭಾಗಿಯಾಗಿ ಅವರ ಸಮಸ್ಯೆ ಪರಿಹಾರ ಜವಾಬ್ದಾರಿ ತೆಗೆದುಕೊಳ್ಳಲಿ ಎಂದಿದ್ದರು. ಈಗ ಹರೀಶ್ ರಾಯ್ ಅವರ ಉದಾಹರಣೆ ಹೇಳಿದ ಮೇಲೆ ಈಗಾಗಲೇ ದರ್ಶನ್ ಅವರು ಪ್ರಚಾರವಿಲ್ಲದೆ ಈ ರೀತಿ ಒಳ್ಳೆ ಕೆಲಸಗಳನ್ನು ಮಾಡಲು ಶುರು ಮಾಡಿದ್ದಾರೆ ಎನಿಸುತ್ತಿದೆ.

ಮೆಗಾಸ್ಟಾರ್ ಚಿರಂಜೀವಿ ಮಗನಾದ ನೀವು ಹೀರೋ, ಬಸ್ ಡ್ರೈವರ್ ಮಗ ಯಶ್ ಕೂಡ ಹೀರೋ ಅಂದಿದಕ್ಕೆ ರಾಮ್ ಚರಣ್ ಕೊಟ್ಟ ಉತ್ತರವೇನು ಗೊತ್ತಾ.?

 

ರಾಮ್ ಚರಣ್ ಅವರು ಬಹಳ ಸಂಭ್ರಮದಲ್ಲಿದ್ದಾರೆ. ಇದಕ್ಕೆ ಎರಡು ಕಾರಣಗಳು ಒಂದು ಅಂತರಾಷ್ಟ್ರೀಯ ಸಿನಿಮಾ ಶ್ರೇಷ್ಠ ಅಕಾಡೆಮಿ ಅವಾರ್ಡ್ ಆಸ್ಕರ್ ಅವರ RRR ಚಿತ್ರದ ನಾಟು ನಾಟ ಹಾಡಿಗೆ ಬಂದಿರುವುದು ಜೊತೆಗೆ ಅವರ ಮನೆಗೆ ಪುಟ್ಟ ಕಂದಮ್ಮನ ಆಗಮನ ಆಗುತ್ತಿರುವುದು. ಸದ್ಯಕ್ಕೆ ರಾಮ್ ಚರಣ್ ಅವರೂ RRR ಗೆದ್ದ ಖುಷಿಯಲ್ಲಿ ಅನೇಕ ಸಂದರ್ಶನಗಳನ್ನು ನೀಡುತ್ತಿದ್ದಾರೆ.

ಆ ಹಾಡಿನ, ಸಿನಿಮಾದ ಅನುಭವ ಹಾಗೂ ಹಾಡಿಗೆ ಪಟ್ಟ ಶ್ರಮದ ಬಗ್ಗೆ ಹೇಳಿಕೊಂಡು ಜೊತೆಗೆ ಜೀವನದ ಅನುಭವಗಳು ಹಾಗೂ ಅವರ ಸ್ಟಾರ್ ಡಂ ಇತ್ಯಾದಿ ಬಗ್ಗೆ ಎಲ್ಲದರ ಬಗ್ಗೆ ಕೂಡ ಪ್ರಬುದ್ದತೆಯಿಂದ ಮಾತುಗಳನ್ನಾಡಿದ್ದಾರೆ. ಹಾಗೆ ದಿ ಇಂಡಿಯಾ ಟುಡೇ ಕಾಲ್ಕ್ಲೇವ್ ಅಲ್ಲಿ ಕೂಡ ರಾಮ್ ಚರಣ್ ಅವರ ಸಂದರ್ಶನ ನಡೆದಿದೆ.

ಸಿನಿಮಾಗೆ ಸಂಬಂಧಪಟ್ಟ ಹಲವು ಚರ್ಚೆಗಳು ನಡೆದವು, ರಾಮಚರಣ್ ಅವರ ಸಹ ನಿರೂಪಕರು ಕೇಳುತ್ತಿದ್ದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುತ್ತಿದ್ದರು. ನಡುವೆ ವಿರುಪಕರ ಕಡೆಯಿಂದ ನಿರೀಕ್ಷೆ ಮಾಡಿರದ ಪ್ರಶ್ನೆ ಎದುರಾಯಿತು. ಅದೇನೆಂದರೆ ಈಗ ರಾಕಿಂಗ್ ಸ್ಟಾರ್ ಹವಾ ದೇಶದಾದ್ಯಂತ ಎಲ್ಲಾ ಕಡೆ ಇದೆ. ನ್ಯಾಷನಲ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಬಗ್ಗೆ ದೇಶದ ಎಲ್ಲಾ ಭಾಷೆಯ ಮಾಧ್ಯಮಗಳು ವರದಿ ಮಾಡುತ್ತವೆ ಹಾಗೂ ಎಲ್ಲಾ ಭಾಷೆಯ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಕೂಡ ಇವರ ಕುರಿತು ಪ್ರಶ್ನೆ ಇರುತ್ತದೆ.

ಹಾಗೆಯೇ ಇಲ್ಲೂ ಸಹ ರಾಮಚರಣ್ ಅವರಿಗೆ ಯಶ್ ಕುರಿತು ಪ್ರಶ್ನೆ ಕೇಳಲಾಗಿದೆ. ಜೊತೆಗೆ ಯಶ್ ಅವರ ಜೊತೆ ರಾಮ್ ಚರಣ್ ಅವರನ್ನು ತಾಳೆ ಹಾಕಿ ಅವರಿಗೆ ಪ್ರಶ್ನೆ ಕೇಳಿ ಉತ್ತರ ತರಿಸುವ ಪ್ರಯತ್ನ ಮಾಡಲಾಗಿದೆ. ಅದಕ್ಕೆ ರಾಮಚರಣ್ ಕಡೆಯಿಂದ ಸಿಕ್ಕ ಉತ್ತರ ಮಾತ್ರ ಬಹಳ ಶ್ಲಾಘನೀಯವಾಗಿತ್ತು.

ನಿರೂಪಕರು ಸ್ಟಾರ್ ಗಿರಿ ಬಗ್ಗೆ ಮಾತನಾಡುತ್ತಾ ಮೆಗಾಸ್ಟಾರ್ ಚಿರಂಜೀವಿ ಪುತ್ರ ನೀವು, ನೀವು ಕೂಡ ಸ್ಟಾರ್ ಆಗಿದ್ದೀರಾ ಹಾಗೆ ಬಸ್ ಡ್ರೈವರ್ ಮಗ ಆಗಿದ್ದ ಯಶ್ ಕೂಡ ಸ್ಟಾರ್ ಆಗಿದ್ದಾರೆ. ಆರು ತಿಂಗಳ ಹಿಂದೆ ಇದೇ ಸಂದರ್ಶನದಲ್ಲಿ ಯಶ್ ಪಾಲ್ಗೊಂಡಿದ್ದರು ಈಗ ಆ ಜಾಗದಲ್ಲಿ ನೀವು ಇದ್ದೀರಾ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ, ರಾಮ್ ಚರಣ್ ಅವರು ಹೌದು ನಾನು ಯಶ್ ಅವರು ಪಾಲ್ಗೊಂಡಿದ್ದ ಎಪಿಸೋಡ್ ನೋಡಿದ್ದೇನೆ.

ಅವರು ಬಹಳ ಚೆನ್ನಾಗಿ ಮಾತನಾಡಿದರು. ಈ ವಿಷಯದ ಬಗ್ಗೆ ನಾನು ಹೇಳುವುದು ಇಷ್ಟೇ ಅಂತಿಮವಾಗಿ ಪ್ರತಿಭೆ ಮಾತ್ರ ಮಾತನಾಡುತ್ತದೆ. ಯಾರು ಯಾವುದೇ ಬ್ಯಾಗ್ರೌಂಡ್ ಇಂದ ಬಂದರು ಅಥವಾ ಇಲ್ಲದೇ ಬಂದರು ಅವರಲ್ಲಿ ಪ್ರತಿಭೆ ಇದ್ದರೆ ಮಾತ್ರ ಅವರು ಬೆಳಗಲು ಸಾಧ್ಯ. ಅದು ಇಲ್ಲಿ ಸಾಬೀತು ಆಗಿದೆ ಎಂದಿದ್ದಾರೆ. ಈ ಮಾತುಗಳನ್ನು ಎಲ್ಲರೂ ಒಪ್ಪಲೇಬೇಕು ಯಾಕೆಂದರೆ ಸಿನಿಮಾ ಬ್ಯಾಗ್ರೌಂಡ್ ಇಂದ ಅಥವಾ ಸ್ಟಾರ್ ಮಕ್ಕಳಾಗಿ ಬಂದ ಕಾರಣಕ್ಕೆ ಅವರಿಗಳಿಗೆ ಸುಲಭವಾಗಿ ಮೊದಲ ಅವಕಾಶ ಸಿಗಬಹುದು ಹೊರತು ಅವರು ಸಾಧನೆ ಮಾಡಲಾಗದು, ಇಲ್ಲಿ ಟ್ಯಾಲೆಂಟೆ ಎಲ್ಲದಕ್ಕೂ ಮುಖ್ಯ ಎಂದ ಅವರ ಮಾತು ಅಕ್ಷರಶಃ ಸತ್ಯ ಎನಿಸುತ್ತದೆ.

ಯಾಕೆಂದರೆ ಆರಂಭದಲ್ಲಿ ಬ್ಯಾಗ್ರೌಂಡ್ ಇದ್ದವರು ಇಲ್ಲಿ ಗ್ರಾಂಡ್ ಆಗಿ ಲಾಂಚ್ ಆಗಬಹುದು ಅಥವಾ ಒಂದೆರಡು ಸಿನಿಮಾ ಅವಕಾಶ ಅವರನ್ನೇ ಹುಡುಕಿ ಹೋಗಬಹುದು ಆದರೆ ಅದನ್ನು ಹಾಗೆ ಉಳಿಸಿಕೊಳ್ಳುವುದಕ್ಕೆ, ಹೆಮ್ಮರವಾಗಿ ಚಿತ್ರರಂಗದಲ್ಲಿ ಬೆಳೆದು ನಿಲ್ಲುವುದಕ್ಕೆ ಅವರ ಸ್ವಂತ ಪರಿಶ್ರಮ ಹಾಗೂ ಅವರದೇ ಆದ ಪ್ರತಿಭೆ ಖಂಡಿತ ಮುಖ್ಯ. ಈ ಎರಡು ರಾಮ್ ಚರಣ್ ಮತ್ತು ಯಶ್ ಅವರಲ್ಲಿ ಇದ್ದ ಕಾರಣ ಇಬ್ಬರೂ ಸಹ ಇದು ದಕ್ಷಿಣ ಭಾರತದ ಖ್ಯಾತ ತಾರೆಗಳಾಗಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

830 ಅಡಿ ಎತ್ತರದ ಜೋಗ್ ಫಾಲ್ಸ್ ತುತ್ತ ತುದಿಯಲ್ಲಿ ಅಪ್ಪು ಪುಷ್ ಅಪ್ಸ್ ಮಾಡಿದ ವಿಡಿಯೋ ನೋಡಿ.

 

830 ಅಡಿ ಎತ್ತರದ ಜಲಪಾತ ಎಂದು ಹೇಳಿದ ತಕ್ಷಣವೇ ಹಲವರಿಗೆ ತಲೆ ಸುತ್ತು ಬಂದಿರುತ್ತದೆ, ಆದರೆ ಅಷ್ಟು ಎತ್ತರದ ಜಲಪಾತ ತುದಿಯಲ್ಲಿ ನಿಂತು ಪುಶ್ ಅಪ್ಸ್ ಹೊಡೆಯೋದು ಎಂದರೆ ಅದಕ್ಕೆ ಡಬ್ಬಲ್ ಗುಂಡಿಗೆ ಬೇಕು. ಇಂತಹದೊಂದು ಸಾಹಸವನ್ನು ಮಾಡಿಯೇ ತೀರಿದ್ದಾರೆ ನಮ್ಮ ಇಂಡಸ್ಟ್ರಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು, ಈ ಕಾರಣಕ್ಕಾಗಿ ಅವರನ್ನು ಇಂಡಸ್ಟ್ರಿಯ ಎನರ್ಜಿಟಿಕ್ ಸ್ಟಾರ್ ಎಂದು ಕರೆಯಬಹುದು.

ಅಭಿನಯ ಡ್ಯಾನ್ಸಿಂಗ್ ಸಿಂಗಿಂಗ್ ಟ್ರಕ್ಕಿಂಗ್ ಸ್ಟಂಟ್ಸ್ ಈ ರೀತಿ ಅಪ್ಪು ಕಲಿಯದ ವಿದ್ಯೆಯೇ ಇಲ್ಲ. ಸದಾ ಹೊಸ ಸಾಹಸಗಳಿಗೆ ತನ್ನನ್ನು ಒಪ್ಪಿಸಿಕೊಂಡು ತನ್ನಂತೆ ಇತರರು ಕೂಡ ಜೀವನವನ್ನು ಮತ್ತೊಂದು ದೃಷ್ಟಿಕೋನದ ನೋಡಿ ಎಂಜಾಯ್ ಮಾಡಬೇಕು ಈ ರೀತಿ ಬದುಕನ್ನು ಸಹಜವಾಗಿಯೇ ಸಿಗುವ ಸಂತೋಷವನ್ನು ಪಡೆಯಬೇಕು ಎಂದು ಸ್ಪೂರ್ತಿ ತುಂಬುತ್ತಿದ್ದವರು ಅಪ್ಪು. ಅದಕ್ಕಾಗಿಯೇ ಇಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಕರ್ನಾಟಕದ ಮಂದಿ ಇನ್ಸ್ಪಿರೇಷನ್ ಡೇ ಎಂದು ಆಚರಿಸುತ್ತಿದ್ದಾರೆ.

ಪುನೀತ್ ರಾಜಕುಮಾರ್ ಅವರು 830 ಅಡಿ ಎತ್ತರದ ಜೋಕ್ ಫಾಲ್ಸ್ ಮೇಲೆ ಹೋಗಿ ಪುಶ್ ಅಪ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಹುಶಃ ಇದು ಗಂಧದ ಗುಡಿ ಸಿನಿಮಾ ಶೂಟಿಂಗ್ ವೇಳೆ ಮಾಡಿರುವ ವಿಡಿಯೋ ಇರಬಹುದು, ಅಪ್ಪು ಜೊತೆಯಲ್ಲಿ ಅವರ ಸ್ನೇಹಿತರೊಬ್ಬರು ಕ್ಯಾಮರಾ ಹಿಡಿದು ಅಪ್ಪು ಪುಷ್ಪಪ್ಸ್ ಹೊಡಿಯೋದನ್ನು ಸೆರೆ ಹಿಡಿಯುತ್ತಿದ್ದಾರೆ. ಅಲ್ಲಿದ್ದ ತುದಿಯ ಬಂದ ಮೇಲೆ 50 ಪುಷಪ್ಸ್ ಗಳನ್ನು ತಡೆಯಿಲ್ಲದೆ ಮಾಡಿದ ಪುನೀತ್ ಅವರು ಬಹಳ ರೋಮಾಂಚನಗೊಂಡು ಖುಷಿ ಪಟ್ಟು 50 ಹೊಡೆದೆ ಆರಾಮಾಗಿತ್ತು ಸದ್ಯ ಸ್ಲೋಪ್ ಆಗಿ ಇರಲಿಲ್ಲ ಅದಕ್ಕೆ ಆಯ್ತು.

ಎಂದು ಆ ಕ್ಷಣದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಹಿಂದೊಮ್ಮೆ ಅಪ್ಪು ಅವರ ಆಕಾಶದಿಂದ ಸ್ಕೈ ಡೈವಿಂಗ್ ಮಾಡಿದ್ದ ವಿಡಿಯೋಗಳು ಸಹ ನೋಡಿದ್ದೇವು ಮತ್ತು ಕಡಲ ಕಿನಾರೆಯಲ್ಲಿ ನಿಂತು ಅಲ್ಲಿದ್ದ ಶಾರ್ಕ್ ತಿಮಿಂಗಲಗಳೇ ನಾಚುವಂತೆ ಬ್ಯಾಕ್ ಫ್ಲಿಫ್ ಹೊಡೆದಿದ್ದ ಸ್ಟಂಟ್ ಗಳನ್ನು ನೋಡಿದ್ದೇವೆ ಹಾಗೆ ಅಪ್ಪು ವರ್ಕೌಟ್ ಕೂಡ ಅದೇ ರೀತಿ ಹುಬ್ಬೇರಿಸುವಂತೆ ಇರುತ್ತಿತ್ತು. ಜೊತೆಗೆ ಸಿನಿಮಾಗಳು ಕೂಡ ಯಾವುದೇ ಡೂಪಿಂಗ್ ಇಲ್ಲದೆ ಫೈಟ್ಗಳನ್ನು ಮಾಡುತ್ತಿದ್ದ ಏಕೈಕ ಹೀರೋ ಇವರು.

ಸದಾ ಇದೇ ರೀತಿ ಅಡ್ವೆಂಚರ್ ಲೈಫ್ ಅಲ್ಲಿ ಬದುಕಲು ಇಷ್ಟಪಡುತ್ತಿದ್ದ ಅವರು ಬದುಕನ್ನು ಒಂದು ಸುಂದರವಾದ ಪ್ರಯಾಣದ ರೀತಿ ಕಳೆದು ಅಂತಿಮವಾಗಿ ತನ್ನ ಅದೇ ಆಸೆಗಳನ್ನು ಗಂಧದಗುಡಿ ಸಿನಿಮಾದಲ್ಲಿ ತಾನಾಗಿ ಅಭಿನಯಿಸಿ ಅದನ್ನು ತಾನೇ ನಿರ್ಮಾಣ ಕೂಡ ಮಾಡಿ ಬದುಕು ಎಂದರೇನು ಬದುಕದಲ್ಲಿ ದೈನಂದಿಕ ಆಗುಹೋಗುಗಳ, ಜಂಜಾಟಗಳ ನಡುವೆಯೂ ಕೂಡ ಪ್ರಕೃತಿದತ್ತವಾಗಿ ಹೇಗೆಲ್ಲ ಸಂತೋಷವಾಗಿ ನಮ್ಮನ್ನು ನಾವು ಪ್ರಕೃತಿಗೆ ಹೊಂದಿಸಿಕೊಂಡು ಬದುಕಬಹುದು ಇತ್ಯಾದಿಗಳನ್ನು ತೋರಿಸಿಕೊಟ್ಟು ಹೋದರು.

ಅಪ್ಪು ಇಂದು ನಮ್ಮ ಜೊತೆ ಇಲ್ಲದಿದ್ದರೂ ಕೂಡ ಅವರು ಮಾಡಿದ ಸಮಾಜ ಸೇವೆ ಅವರು ಅಭಿನಯಿಸಿದಂತ ಸಿನಿಮಾಗಳ ಪಾತ್ರಗಳ ಮೂಲಕ ಮತ್ತು ಇಂತಹ ಯುವ ಜನತೆಗೆ ಸ್ಪೂರ್ತಿ ಆಗುವಂತಹ ವಿಷಯಗಳ ಮೂಲಕ ಶಾಶ್ವತವಾಗಿ ಕನ್ನಡಿಗರ ಮನದಲ್ಲಿ ಯುವ ರತ್ನ ಆಗಿರುತ್ತಾರೆ.

ದೊಡ್ಮನೆಯ ರಾಜಕುಮಾರನಾಗಿ ಹುಟ್ಟಿ ಇಡೀ ಕರ್ನಾಟಕ ಮನೆ ಮಗನಾಗಿ ಬದುಕನ್ನು ಪೂರ್ತಿಗೊಳಿಸಿದ ಅಪ್ಪು ಅವರ ಎಷ್ಟು ವಿಡಿಯೋಗಳನ್ನು ನೋಡಿದರೆ ಕೂಡ ಸಾಕು ಎನಿಸುವುದಿಲ್ಲ ಈಗ ಮತ್ತೊಂದು ಅವರ ಹೊಸ ಈ ಹೊಸ ವಿಡಿಯೋ ನೀವು ಈ ವಿಡಿಯೋನೋಡಿಲ್ಲ ಅಂದ್ರೆ ನೋಡಿ ಅಪ್ಪು ಅವರ ಲೈಫ್ ಬಗ್ಗೆ ನಿಮ್ಮ ಅಭಿಪ್ರಾಯ ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

9 ತಿಂಗಳ ತುಂಬು ಗರ್ಭಿಣಿ – ಹೆರಿಗೆಗೂ ಹಣವಿಲ್ಲದೆ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಕನ್ನಡದ ಈ ನಟಿಯ ಸ್ಥಿತಿ ಯಾವ ಹೆಣ್ಣಿಗೂ ಬರದಿರಲಿ.

 

ನೂರು ನಿಲ್ದಾಣಗಳಲ್ಲಿ ನಿಂತು ಸಾಗುವ, ಕೆಲವರು ಇಳಿದು ಕೆಲವರುಳಿದು ಮತ್ತೆ ಓಡುವ, ತಿರುವಿಕೊಂಡು ಅಚ್ಚರಿಯ ಬಿಚ್ಚಿ ತೋರುವ ಬದುಕು ಒಂದು ರೈಲು ಬಂಡಿಯೇ ಸರಿ. ಆದರೆ ಈ ಬದುಕಿನ ಪಯಣದಲ್ಲಿ ಮುಟ್ಟುವ ಗುರಿ ಬಗ್ಗೆ ಸ್ಪಷ್ಟನೆ ಇರಬೇಕು, ಆರಿಸಿಕೊಂಡ ಹಾದಿಯ ಬಗ್ಗೆ ಗೌರವ ಹೆಮ್ಮೆ ಇರಬೇಕು ಆಗ ಮಾತ್ರ ಅದೊಂದು ಅರ್ಥಪೂರ್ಣ ಹಾಗೂ ಆದರ್ಶಮಯ ಬದುಕಾಗುತ್ತದೆ. ಹುಚ್ಚು ಕೋಡಿ ಮನಸ್ಸಿನಲ್ಲಿ ಸ್ವೇಚ್ಛೇಯಿಂದ ಬದುಕಿನ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ಬಿಟ್ಟರೆ ಬದುಕು ಮೂರಾಬಟ್ಟೆ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಅಂತಹದೇ ಒಂದು ತಪ್ಪು ನಿರ್ಧಾರದಿಂದ ಕನ್ನಡದಲ್ಲಿ ಟಾಪ್ ನಟಿ ಆಗಿದ್ದ ಈಕೆ ಇಂದು ಗರ್ಭಿಣಿಯಾಗಿದ್ದರು ಕೂಡ ಹಣದ ಕಾರಣಕ್ಕಾಗಿ ಶೂಟಿಂಗ್ ಅಲ್ಲಿ ಭಾಗಿಯಾಗುವ ರೀತಿ ಆಗಿದೆ. ದಿವ್ಯ ಶ್ರೀಧರ್ ಎನ್ನುವ ಈ ನಟಿ ಬಗ್ಗೆ ಕನ್ನಡಿಗರೆಲ್ಲ ತಿಳಿದೇ ಇದೆ. ಈಕೆ ಸಿನಿಮಾ ನಾಯಕಿ ಆಗಿ ಕಾಣಿಸಿಕೊಂಡಿದ್ದರು ಕೂಡ ಕಿರುತೆರೆಯ ಧಾರವಾಹಿಗಳಿಂದ ಹೆಚ್ಚು ಫೇಮಸ್. ಸುವರ್ಣ ವಾಹಿನಿಯ ಸೂಪರ್ ಹಿಟ್ ಸೀರಿಯಲ್ ಆಗಿದ್ದ ಆಕಾಶ ದೀಪ ಧಾರಾವಾಹಿಯಲ್ಲಿ ದೀಪ ಪಾತ್ರಧಾರಿ ಆಗಿದ್ದ ಈಕೆ ನಂತರ ಅಮ್ಮ ಎನ್ನುವ ಧಾರವಾಹಿಯಲ್ಲೂ ಕೂಡ ಮುಖ್ಯ ಪಾತ್ರದಲ್ಲಿದ್ದರು.

ನಂತರ ಈಕೆಯ ಅದೃಷ್ಟ ಬದಲಾಯಿಸಿದ್ದು ತಮಿಳು ಕಿರುತೆರೆ. ಸಾಲು ಸಾಲು ತಮಿಳಿನ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿ ತಮಿಳುನಾಡಿನಲ್ಲಿ ನೆಲೆ ಕಳೆದುಕೊಂಡಳು ನಿರ್ಧರಿಸಿದರು. ಮೂಲತಃ ಬೆಂಗಳೂರಿನವರೇ ಆದ ಈಕೆ ಬಣ್ಣದ ಪ್ರಪಂಚಕ್ಕೆ ಬರುವ ಮುನ್ನವೇ ಒಳ್ಳೆಯ ವಿದ್ಯಾಭ್ಯಾಸ ಪಡೆದು ಮಾಡಲಿಂಗ್ ಕ್ಷೇತ್ರದಲ್ಲೂ ಕೂಡ ಗುರುತು ಮೂಡಿಸಿ ಮದುವೆಯಾಗಿ ಮಗುವನ್ನು ಪಡೆದಿದ್ದರು. ಅದ್ಯಾವ ಕೆಟ್ಟ ಘಳಿಗೆಯಲ್ಲಿ ತಮಿಳಿನ ಚೆಲ್ಲಮ್ಮ ಧಾರವಾಹಿ ಒಪ್ಪಿಕೊಂಡಿರೋ ಆ ಧಾರಾವಾಹಿ ಇವರ ಬದುಕನ್ನೇ ಚೆಲಪಿಲ್ಲಿ ಮಾಡಿಬಿಟ್ಟಿತು.

ಚೆಲ್ಲಮ್ಮ ಧಾರವಾಹಿ ಈಕೆ ನಾಯಕ ನಟಿಯಾಗಿದ್ದಾಗ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಅರ್ನವ್ ಅಲಿಯಾಸ್ ಅನ್ಸಾ ಖಾನ್ ಜೊತೆ ಸಲಿಗೆ ಬೆಳೆಯುತ್ತದೆ. ಜೋಡಿ ಫೇಮಸ್ ಆಗುತ್ತಿದ್ದಂತೆ ಪರಸ್ಪರ ಪ್ರೀತಿಯಲ್ಲಿ ಬೀಳುತ್ತಾರೆ ಅವರನ್ನು ಮದುವೆಯಾಗುವ ಉದ್ದೇಶದಿಂದ ಮೊದಲ ಪತಿಯಿಂದ ಡೈ’ವೋ’ರ್ಸ್ ಪಡೆದುಕೊಂಡು ಮಗುವಿಂದಲೂ ದೂರ ಆಗುತ್ತಾರೆ ಇವರ ಎರಡನೇ ಮದುವೆ ಬಗ್ಗೆ ಬೇಸರಗೊಂಡ ತಂದೆ ತಾಯಿ ಕೂಡ ಇವರನ್ನು ದೂರ ಇಡುತ್ತಾರೆ.

ಮದುವೆಯಾದ ಆರಂಭ ದಿನಗಳಲ್ಲಿ ಎಲ್ಲವೂ ಚೆನ್ನಾಗಿರುತ್ತದೆ ನಂತರ ಅನರ್ವ್ ಅವರ ಅಸಲಿ ಮುಖ ಈಕೆಗೆ ಗೊತ್ತಾಗುತ್ತದೆ. ಕಳೆದ ವರ್ಷ ಇದ್ದಕ್ಕಿದ್ದಂತೆ ನಟಿ ಫೇಸ್ಬುಕ್ ಲೈವ್ ಬಂದು ಗಂಡನ ವಿರುದ್ಧ ಕಣ್ಣೀರಿಡುತ್ತಾ ಮಾತನಾಡಿ ತನ್ನ ಪರಿಸ್ಥಿತಿ ಹೇಗಾಗಿದೆ ಎಂದು ಹೇಳಿಕೊಂಡಿದ್ದು ತಮಿಳು ತೆಲುಗು ಮಲಯಾಳಂ ಹಾಗೂ ಕನ್ನಡದ ಸುದ್ದಿ ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರಸಾರವಾಗಿತ್ತು. ಈಗ ಅನರ್ವ್ ಕಿರುಕಿರ ತಾಳಲಾರದೆ ದೂರವಾಗಿರುವ ಈಕೆ ಅಕ್ಷರಶಃ ಅನಾಥೆಯಾಗಿದ್ದಾರೆ.

ಈಕೆ ಮಾಡಿದ ತಪ್ಪು ನಿರ್ಧಾರದಿಂದಾಗಿ ಆತ್ಮೀಯರೆಲ್ಲರೂ ಕೈ ಬಿಟ್ಟಿದ್ದಾರೆ. ನಂಬಿಕೊಂಡಿದ್ದ ಪತಿ ದ್ರೋಹ ಬಗೆದು ಹೋಗಿದ್ದಾನೆ. ಹೊಟ್ಟೆ ಅಲ್ಲಿ 9 ತಿಂಗಳ ಮಗು ಇದೆ, ವೈದ್ಯರೇ ರೆಸ್ಟ್ ಮಾಡುವಂತೆ ಹೇಳಿದ್ದರೂ ಒಂದು ದಿನವೂ ಶೂಟಿಂಗ್ ಬಿಡಲಾಗದ ಪರಿಸ್ಥಿತಿಯಲ್ಲಿ ದಿವ್ಯ ಶ್ರೀಧರ್ ಇದ್ದಾರೆ. ಯಾಕೆಂದರೆ ಅಷ್ಟೊಂದು ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿದ್ದಾರೆ ಸದ್ಯಕ್ಕೆ ತಮಿಳಿನ ಸೇವಂತಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಇವರಿಗೆ ನಿರ್ದೇಶಕರು ದೊಡ್ಡ ಮನಸ್ಸು ಮಾಡಿ ಕಥೆಯಲ್ಲೂ ಕೂಡ ಇವರ ಪಾತ್ರವು ಗರ್ಭಿಣಿ ಆಗಿರುವಂತೆ ಮಾರ್ಪಾಡು ಮಾಡಿ ಸಹಾಯ ಮಾಡಿ ಕೊಟ್ಟಿದ್ದಾರೆ.

ಇದೆಲ್ಲದರ ಬಗ್ಗೆ ಇತ್ತೀಚಿಗೆ ಮತ್ತೊಮ್ಮೆ ಸಂದರ್ಶನದಲ್ಲಿ ಕಾಣಿಸಿಕೊಂಡ ನಟಿ ತನ್ನ ಪರಿಸ್ಥಿತಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ತನ್ನಂತೆ ಇದ್ದ ಸುಂದರ ಬದುಕನ್ನು ಒಡೆದುಕೊಂಡು ಹೊರ ಹೋಗುವ ನಿರ್ಧಾರ ಮಾಡುವವರಿಗೆ ಪಾಠವಾಗಲಿ ಎಂದು ಎಲ್ಲವನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ

ಅಪ್ಪು ಸ್ಥಾನವನ್ನು ಯುವರಾಜಗೆ ದಯವಿಟ್ಟು ಕೊಡಬೇಡಿ, ಸ್ವಂತ ಪರಿಶ್ರಮದಿಂದ ಹಾಗು ವ್ಯಕ್ತಿತ್ವದಿಂದ ಅವರವರೇ ಜಾಗ ಮಾಡಿಕೊಳ್ಳಬೇಕು ಎಂದ ರಾಘವೇಂದ್ರ ರಾಜಕುಮಾರ್

.

ನೆನ್ನೆ ಅಪ್ಪು ಹುಟ್ಟಿದ ದಿನ, ಇಡೀ ಕರ್ನಾಟಕಕ್ಕೆ ಈ ದಿನ ಇನ್ಸ್ಪಿರೇಷನ್ ಡೇ. ಇದರ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ರಾಘಣ್ಣ ಮುಖ್ಯವಾಗಿ ಎರಡು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮೊದಲಿಗೆ ಅಪ್ಪು ಇನ್ಸ್ಪಿರೇಷನ್ ದಿನದ ಬಗ್ಗೆ ಮಾತನಾಡಿದ ಅವರು ಅಪ್ಪು ಅವನು ಇಲ್ಲದಿದ್ದರೂ ಕೂಡ ಹುಟ್ಟು ಹಬ್ಬವನ್ನು ಮಾಡಿಸಿಕೊಳ್ಳುವಂತಹ ವ್ಯಕ್ತಿತ್ವದವನು, ಅಪ್ಪುಗೆ ಎರಡು ಹುಟ್ಟಿದಬ್ಬ ಮಾರ್ಚ್ 17 ಹಾಗೂ ಅಕ್ಟೋಬರ್ 29.
ನಾವು ಅಪ್ಪುವನ್ನು ಹೂತಿಲ್ಲ, ಬಿತ್ತಿದ್ದೇವೆ.

ಅದಕ್ಕಾಗಿ ಇಂದು ಅಪ್ಪುನಂತೆ ಸ್ಪೂರ್ತಿ ಪಡೆದು ಇಡೀ ದೇಶದಾದ್ಯಂತ ಅನೇಕ ಅಪ್ಪುಗಳು ಹುಟ್ಟುಕೊಂಡು ಅವನ ಆದರ್ಶದಂತೆ ಅವನ ದಾರಿಯಂತೆ ನಡೆದು ನೊಂದವರಿಗೆ ನೆರವಾಗುತ್ತಿದ್ದಾರೆ. ಈ ಸ್ಪೂರ್ತಿ ಪಡೆದಿದ್ದಕ್ಕಾಗಿ ಯುವಜನತೆ ಸ್ಪೂರ್ತಿ ದಿನವಾಗಿ ಆಚರಿಸುತ್ತಿದ್ದಾರೆ. ನನ್ನ ತಮ್ಮನಾಗಿದ್ದರೂ ಕೂಡ ಜನರ ಜೊತೆ ಹೇಗಿರಬೇಕು, ಜನರಿಗೆ ಏನು ಮಾಡಬೇಕು ಎನ್ನುವ ಸ್ಫೂರ್ತಿ ನನ್ನಲ್ಲಿಯೂ ತುಂಬಿದ್ದಾನೆ.

ಅಪ್ಪುವನ್ನು ಸುಮ್ಮನೆ ಪವರ್ ಸ್ಟಾರ್ ಎನ್ನಲಿಲ್ಲ ಎನಿಸುತ್ತದೆ. ಯಾಕೆಂದರೆ ತಾನು ಮಾಡಿದ ಅಷ್ಟು ಸಿನಿಮಾಗಳಲ್ಲಿ ಕೊನೆ ಸಿನಿಮಾವನ್ನು ಮಾತ್ರ ಅದು ಯಾವ ಸೂಚನೆಯಿಂದ ಮಾಡಿದ್ದನೋ ಏನೋ ಅದರಲ್ಲಿಯೂ ಸಹ ವನ್ಯ ಪ್ರಾಣಿಗಳ ರಕ್ಷಣೆ, ವನ್ಯ ಸಂಪತ್ತಿನ ರಕ್ಷಣೆ, ಹೆಣ್ಣು ಮಕ್ಕಳ ಶಿಕ್ಷಣ, ಪ್ಲಾಸ್ಟಿಕ್ ಮುಕ್ತ ಪ್ರಪಂಚ, ನದಿಗಳ ರಕ್ಷಣೆ ಇತ್ಯಾದಿ ವಿಷಯಗಳ ಬಗ್ಗೆ ಸ್ಪೂರ್ತಿ ತುಂಬಿ ಮುಂದಿನ ಭವಿಷ್ಯದ ಬಗ್ಗೆ ಎಚ್ಚರಿಸಿ ಹೋಗಿದ್ದಾನೆ. ಅದಕ್ಕೆ ಅವನನ್ನು ಶಕ್ತಿ ಎನ್ನುವುದು ಪವರ್ ಸ್ಟಾರ್ ಆಗಿದ್ದ ಅವನು ಸ್ಟಾರ್ ಆಗಿ ಮೇಲೆ ಹೋಗಿದ್ದಾನೆ ಆದರೆ ಆ ಪವರ್ ಮಾತ್ರ ಇನ್ನು ಹಾಗೆ ಇದೆ.

ಆ ಶಕ್ತಿ ಇಂದು ಅವನ ಹುಟ್ಟುಹಬ್ಬವನ್ನು ಆಚರಿಸಲು ಸಾವಿರಾರು ಮಂದಿ ಬರುವ ರೀತಿ ಮಾಡುತ್ತಿದೆ. ಅಕ್ಟೋಬರ್ 29ರಂದು ಅಪ್ಪು ಶಕ್ತಿಯಾಗಿ ಮಾರ್ಪಾಡಾಗಿದ್ದಾನೆ. ಆ ಶಕ್ತಿ ಇಂದಿಗೂ ಸಹ ನಮ್ಮೊಂದಿಗೆ ಇದೆ ಎಂದು ಹೇಳಿದ್ದಾರೆ. ಇದರ ನಡುವೆ ಅಪ್ಪು ಅಭಿಮಾನಿಗಳು ಇತ್ತೀಚೆಗೆ ಯುವರಾಜ್ ಕುಮಾರ್ ಅಲ್ಲಿ ಅಪ್ಪುವನ್ನು ನೋಡುತ್ತೇವೆ ಎನ್ನುತ್ತಿದ್ದಾರೆ. ಜೊತೆಗೆ ಯುವರಾಜ್ ಅವರ ಮುಖ ಚಹರೆಯಲ್ಲಿ ಅಣ್ಣಾವ್ರು ಮತ್ತು ಅಪ್ಪುವಿನ ಛಾಯೆ ಎದ್ದು ಕಾಣುತ್ತಿದೆ ಹಾಗಾಗಿ ಹಲವು ಫೋಟೋಗಳಲ್ಲಿ ಇವರನ್ನು ತಾಳೆ ಹಾಕಿರುವ ಅಭಿಮಾನಿಗಳು ಅವರು ಇನ್ನು ಮುಂದೆ ನಾವೆಲ್ಲ ಯುವರಾಜ್ ಅಭಿಮಾನಿಗಳು ಎನ್ನುತ್ತಿದ್ದಾರೆ.

ಈ ಬಗ್ಗೆ ಕೂಡ ಮಾತನಾಡಿದ ರಾಘಣ್ಣ ಅಪ್ಪು ಅನ್ನು ಎಲ್ಲರೂ ಒಬ್ಬ ನಟನಾಗಿ ಅಥವಾ ವ್ಯಕ್ತಿಯಾಗಿ ಒಪ್ಪಿಕೊಂಡಿಲ್ಲ, ಅವನ ವ್ಯಕ್ತಿತ್ವದಿಂದ ಅವನು ಇಂದು ಈ ಮಟ್ಟಗಿನ ಪ್ರೀತಿ ಪಡೆಯುತ್ತಿರುವುದು. ಆ ಸ್ಥಾನದಲ್ಲಿ ಇನ್ನೊಬ್ಬರನ್ನು ತುಂಬಿ ನೋಡಲು ಸಾಧ್ಯವೇ ಇಲ್ಲ. ದಯವಿಟ್ಟು ಯಾರು ನನ್ನ ಮಗನಿಗೆ ಆ ಸ್ಥಾನ ಕೊಡಬೇಡಿ ಅವರವರ ಪರಿಶ್ರಮದಿಂದ ಜಾಗ ಗಿಟ್ಟಿಸಿಕೊಳ್ಳಬೇಕು ಹಾಗೂ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ನನ್ನ ಮಗ ಆ ನಿಟ್ಟಿನಲ್ಲಿ ಕಾಲಿಟ್ಟು ಇಂಡಸ್ಟ್ರಿಗೆ ಬರುತ್ತಿದ್ದಾನೆ, ಅವನನ್ನು ಹರಸಿ ಸಾಕು ಎಂದಿದ್ದಾರೆ.

ಯುವರಾಜ್ ಕುಮಾರ್ ಅವರು ಸ್ಯಾಂಡಲ್ವುಡ್ ಗೆ ಎಂಟ್ರಿ ಆಗಲು ಭರ್ಜರಿಯಾಗಿ ಸಿದ್ಧತೆ ನಡೆಯುತ್ತಿದೆ. ಯೈವ ರಾಜಕುಮಾರ್ ಅವರ ಫೋಟೋ ಹಾಗು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಅದರಲ್ಲಿ ಅವರು ಇಂಡಸ್ಟ್ರಿಯ ಭರವಸೆಯ ನಾಯಕ ಹಾಗು ಎಲ್ಲ ಲಕ್ಷಣಗಳು ಕೂಡ ಕಾಣಿಸುತ್ತಿದೆ. ಯುವರಾಜ್ ಕುಮಾರ್ ಕೂಡ ಅಣ್ಣಾವ್ರು ಹಾಗೂ ಅಪ್ಪುವಂತೆ ಹೆಸರು ಮಾಡಲಿ ಎಂದು ನಾವು ಸಹ ಹರಸೋಣ.

ಡಾ. ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಅವರ ನಡುವೆ ಬಿರುಕು ತಂದಿಟ್ಟಿದ್ದು ದ್ವಾರಕೀಶ್ ಅವರಾ.? ಲೀಲಾವತಿ ನಿಜವಾದ ಹೆಸರೇನು? ಸ್ವಂತ ಗಂಡನನ್ನೆ ಕೆಲಸಕ್ಕೆ ಇಟ್ಟುಕೊಂಡಿದ್ರಾ ಲೀಲಾವತಿ.?

 

ಕರ್ನಾಟಕದಲ್ಲಿ ಡಾ.ರಾಜಕುಮಾರ್ ಅವರಷ್ಟು ಜನಪ್ರಿಯತೆ ಮತ್ತು ಪ್ರೀತಿ ಅಭಿಮಾನ ಪಡೆದ ವ್ಯಕ್ತಿ ಮತ್ತೊಬ್ಬರು ಹುಟ್ಟಲಾರರು. ಆದರೆ ಅನೇಕ ವಿಷಯಗಳಿಗೆ ಆದರ್ಶವಾಗಿ ಸರಳತೆಯ ಮೇರು ಪರ್ವತದಂತೆ ಬದುಕಿದ ಅಣ್ಣಾವ್ರನ್ನು ಕೂಡ ಕೆಲ ವಿವಾದಗಳು ಬಿಟ್ಟಿಲ್ಲ. ಅದರಲ್ಲೂ ರಾಜಕುಮಾರ್ ವಿಷ್ಣುವರ್ಧನ್ ಅವರ ನಡುವೆ ಗಂಧದಗುಡಿ ಸಿನಿಮಾ ಶೂಟಿಂಗ್ ವೇಳೆ ಆದ ಕಹಿ ಘಟನೆ ಮತ್ತು ಲೀಲಾವತಿ ಅವರ ಸಂಬಂಧದ ಜೊತೆ ತಳಕು ಹಾಕಿಕೊಂಡಿರುವ ಅಣ್ಣಾವ್ರ ಹೆಸರು ಇದರ ಬಗ್ಗೆ ಇಂದಿಗೂ ಸಹ ಸ್ಪಷ್ಟತೆ ಸಿಕ್ಕದೆ ಕರುನಾಡ ಜನಕ್ಕೆ ಇವು ಯಕ್ಷ ಪ್ರಶ್ನೆಗಳಾಗಿವೆ.

ಅಣ್ಣಾವ್ರ ಕುಟುಂಬದ ಬಗ್ಗೆ ಕರುನಾಡಿಗೆ ಗೊತ್ತಿಲ್ಲದ ಅನೇಕ ವಿಚಾರಗಳನ್ನು ಸಂದರ್ಶನಗಳಲ್ಲಿ ಹೇಳಿಕೊಂಡಿರುವ ದೊಡ್ಮನೆಗೆ ಬಹಳ ಹತ್ತಿರವಾಗಿರುವ NR ರಮೇಶ್ ಅವರು ಇದಕ್ಕೆಲ್ಲ ನೇರವಾಗಿ ದ್ವಾರಕೀಶ್ ಅವರನ್ನೇ ಹೊಣೆ ಮಾಡಿದ್ದಾರೆ. ಆ ಬಗ್ಗೆ ಯಾವುದೇ ಭಯವಿಲ್ಲದೆ ಬಹಿರಂಗವಾಗಿ ಸಂದರ್ಶನಗಳಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಅವರು ದ್ವಾರಕೀಶ್, ರಾಜೇಂದ್ರ ಸಿಂಗ್ ಬಾಬು ಮತ್ತಿತರದು ವಿಷ್ಣುವರ್ಧನ್ ಅವರ ಸುತ್ತ ಸುತ್ತುಕೊಂಡು ಅವರನ್ನು ದಾರಿ ತಪ್ಪಿಸಿದ್ದರು ಎಂದು ಹೇಳುತ್ತಿದ್ದಾರೆ.

ಜೊತೆಗೆ ದ್ವಾರಕೀಶ್ ಅವರು ಗಂಧದಗುಡಿ ಸಿನಿಮಾ ಬಗ್ಗೆ ಎಷ್ಟು ಅಪಪ್ರಚಾರ ಮಾಡಿದ್ದರು ಎಂದು ಗಂಧದಗುಡಿ ನಿರ್ಮಾಪಕರಾಗಿದ್ದ ಎಂಪಿ ಶಂಕರ್ ಅವರ ಆತ್ಮಚರಿತ್ರೆ ಕಾಡಿನ ರಾಜದಲ್ಲಿ ಬರೆಯಲಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಗಂಧದಗುಡಿ ಶೂಟಿಂಗ್ ವೇಳೆ ಯಾವುದೇ ಗುಂಡುಗಳು ಇಲ್ಲದ ಬಂದೂಕಲ್ಲಿ ಗುಂಡುಗಳು ಹೇಗೆ ಬಂತು ಎನ್ನುವುದಕ್ಕೆ ಇನ್ನು ಉತ್ತರ ಸಿಕ್ಕಿಲ್ಲ. ಆ ದೃಶ್ಯದಲ್ಲಿ ನೇರವಾಗಿ ಅಣ್ಣಾವ್ರ ಎದೆಗೆ ಗುರಿಯಿಟ್ಟು ಸೀನ್ ತೆಗೆಯಬೇಕಿತ್ತು.

ಆದರೆ ತೂಕದ ಕಾರಣ ಅವರು ಅದನ್ನು ಎತ್ತಲಾಗದೆ ಬಾಗಿಸಿದ್ದ ಕಾರಣ ಅನಾಹುತ ತಪ್ಪಿ ಹೋಯಿತು. ಆದರೂ FIR ದಾಖಲಾದಾಗ ಸ್ವತಃ ರಾಜಕುಮಾರ್ ಅವರೇ ಅಂದಿನ ಮುಖ್ಯಮಂತ್ರಿ ಆಗಿದ್ದ ಡಿ.ದೇವರಾಜ್ ಅರಸ್ ಅವರಿಗೆ ಕರೆ ಮಾಡಿ ಕೇಸ್ ಕೈ ಬಿಡುವಂತೆ ಮನವಿ ಸಲ್ಲಿಸಿದ್ದು ಅಕ್ಷರಶಃ ಸತ್ಯ ಎಂದು ಹೇಳಿದ್ದಾರೆ. ಕೊನೆಗೆ ಲೀಲಾವತಿ ಅವರನ್ನು ಅಸ್ತ್ರವಾಗಿ ಬಳಸಿದ್ದರು ಲೀಲಾವತಿ ಹಾಗೂ ಅಣ್ಣಾವ್ರು ಒಟ್ಟಿಗೆ ಸಿನಿಮಾ ಅಭಿನಯಿಸುವುದಕ್ಕಿಂತ ಮುನ್ನ ಐದು ವರ್ಷಗಳ ಹಿಂದೆಯೇ ಮಹದೇವ ಭಾಗವತ ಎನ್ನುವವರನ್ನು ವಿವಾಹವಾಗಿದ್ದರು.

ಆದರೆ ನಿಧಾನವಾಗಿ ಇವರಿಗೆ ಜನಪ್ರಿಯತೆ ಬರುತ್ತಿದ್ದಂತೆ ಅವರನ್ನು ಅವರ ಮನೆ ಅಡುಗೆ ಕೆಲಸಕ್ಕೆ ಇಟ್ಟುಕೊಂಡರು. ಇಂದಿಗೂ ಸಹ ಭಾಗವತ ಅವರ ಮೊಮ್ಮಕ್ಕಳು ಬದುಕಿದ್ದಾರೆ ಅವರೇ ಇದನ್ನು ಪುರಾವೆ ಸಮೇತ ಹೇಳುತ್ತಾರೆ. ಆಗಿಲ್ಲ ಎಂದರೆ ಚೆನ್ನೈ ಬಳಿಯ ಸುತ್ತಮುತ್ತಲಿನ ಆಸ್ತಿಗಳೆಲ್ಲ ಹೇಗೆ ಬಂತು, ಮಹಾದೇವ ಭಾಗವತ್ ಅವರ ಆಸ್ತಿ ಯಾರಿಗೆ ವರ್ಗಾವಣೆ ಆಯಿತು ಎಂದು ನೋಡಿದರೆ ಅಲ್ಲೇ ಇದಕ್ಕೆಲ್ಲ ಸ್ಪಷ್ಟತೆ ಸಿಕ್ಕಿ ಬಿಡುತ್ತದೆ.

ನಿಧಾನವಾಗಿ ದ್ವಾರಕೀಶ್ ಬಣ್ಣ ಗೊತ್ತಾದ ಮೇಲೆ ವಿಷ್ಣುವರ್ಧನ್ ಅವರನ್ನು ಅವಾಯ್ಡ್ ಮಾಡುತ್ತಿದ್ದಂತೆ ವಿಷ್ಣುವರ್ಧನ್ ಅವರ ವಿರುದ್ಧವೂ ಷಡ್ಯಂತ ರೂಪಿಸಿ ತನ್ನನ್ನು ತಾನೇ ಕರ್ನಾಟಕ ಕುಳ್ಳ ಎಂದು ಕರೆದುಕೊಂಡಿದ್ದ ದ್ವಾರಕೀಶ್ ಅವರು ಹಳೆ ಕುಳ್ಳ ಹೊಸ ಕಳ್ಳ ಎಂದು ವಿಷ್ಣುವರ್ಧನ್ ಎದುರಿಗೆ ಶಶಿಕುಮಾರ್ ಅವರನ್ನು ಹೀರೋ ಹಾಕಿ ಮಾಡಿಕೊಂಡು ಸಿನಿಮಾ ಮಾಡಿದರು.

ಆದರೆ ಅದಕ್ಕೂ ಬಗ್ಗದೇ ಹೋದಾಗ ವಿಷ್ಣುವರ್ಧನ್ ಅವರು ನನಗೆ ತುಂಬಾ ದ್ರೊಹ ಮಾಡಿದ್ದಾರೆ ಇಲ್ಲದ ಪ್ರಚಾರ ಮಾಡಿ ಎಂದು ದ್ರೋಹಿ ಎನ್ನುವ ಸಿನಿಮಾವನ್ನು ಮಾಡಿ ವಿಜಯಕಾಂತ್ ಎನ್ನುವ ತಮಿಳು ನಟರನ್ನು ಆಕ್ಟಿಂಗ್ ಮಾಡಿಸಿ ಅದರಲ್ಲಿ ವಿಷ್ಣುವರ್ಧನ್ ಅವರ ಹೆಗಲ ಮೇಲೆ ಅವರು ಕಾಲಿಟ್ಟಿರುವಂತೆ ಪೋಸ್ಟ್ ಮಾಡಿದ್ದರು. ಅದನ್ನು ಮೊದಲ ದಿನವೇ ತೆರೆ ಕಾಣದಂತೆ ಅಭಿನಯ ಥಿಯೇಟರ್ ಗೆ ಬೆಂಕಿ ಹಾಕಿ ಮುಚ್ಚಿಸಿದ್ದೆವು ಎಂಬಿತ್ಯಾದಿ ವಿಷಯಗಳನ್ನು ಹೇಳಿಕೊಂಡಿದ್ದಾರೆ. ಆ ಸಂದರ್ಶನದ ಇನ್ನಿತರ ವಿಷಯಗಳನ್ನು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.