Home Blog Page 223

ರಾಜಮೌಳಿ ನಿರ್ದೇಶನದ ಯಾವ ಸಿನಿಮಾದಲ್ಲೂ ಕೂಡ ಪ್ರಕಾಶ್ ರಾಜ್ ಅವರಿಗೆ ಅವಕಾಶ ಕೊಟ್ಟಿಲ್ಲ ಯಾಕೆ ಗೊತ್ತಾ? ಬಹುಬೇಡಿಕೆ ನಟನಾಗಿದ್ರು ಪ್ರಕಾಶ್ ರಾಜ್ ಅವರನ್ನು ದೂರ ಇಟ್ಟಿರೋದ್ಯಾಕೆ.

ಪ್ರಕಾಶ್ ರಾಜ್ ಕನ್ನಡಿಗರಿಗೆ ಪ್ರಕಾಶ್ ರೈ ಆಗಿ ಪರಿಚಿತರವಾಗಿರುವ ಪ್ರಕಾಶ್ ರಾಜ್ ಅವರು ಕನ್ನಡಿಗರೇ. ಆರಂಭದಲ್ಲಿ ಕನ್ನಡದ ಚಲನಚಿತ್ರಗಳು ಹಾಗೂ ಧಾರಾವಾಹಿಗಳಲ್ಲಿ ಪಾತ್ರ ಮಾಡುತ್ತಿದ್ದ ಇವರು ಎಂತಹ ಅದ್ಭುತ ಕಲಾವಿದ ಎನ್ನುವುದು ಈಗ ಇಡೀ ದೇಶಕ್ಕೆ ತಿಳಿದಿದೆ. ಕನ್ನಡದಲ್ಲಿ ಅವಕಾಶಗಳ ಕೊರತೆಯಿಂದ ಪರಭಾಷಾ ಇಂಡಸ್ಟ್ರಿಗಳ ಕಡೆ ವಲಸೆ ಹೋದ ಪ್ರಕಾಶ್ ರಾಜ್ ಪಂಚಭಾಷ ತಾರೆ ಆಗಿ ಮಿಂಚುತ್ತಿದ್ದಾರೆ.

ಈ ಮೂಲಕ ನ್ಯಾಷನಲ್ ಮಟ್ಟದಲ್ಲಿ ಹೆಸರು ಮಾಡಿರುವ ಪ್ರಕಾಶ್ ರಾಜ್ ಅವರ ಕಾಲ್ ಶೀಟ್ ಗಾಗಿ ಬಾಲಿವುಡ್ ವಲಯವೂ ಕೂಡ ಕಾಯುತ್ತಿದೆ. ಇತ್ತೀಚೆಗೆ ವಿಲನ್ ಆಗಿ, ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ಪ್ರಕಾಶ್ ರಾಜ್ ಅವರು ತಮ್ಮ ನಟನೆಯಲ್ಲಿ ಎಂತಹದೋ ಒಂದು ಶಕ್ತಿ ತುಂಬುತ್ತಾರೆ.

ಅವರ ಆ ಸಹಜ ನಟನೆ ಮತ್ತು ನಟನ ಚಾತುರ್ಯದಿಂದ ಜೊತೆಗೆ ಸೃಜನಾತ್ಮಕ ಚಿಂತನೆಯಿಂದ ಪಾತ್ರವನ್ನು ಜೀವಂತವಾಗಿಸುವ ಇವರಿಗೆ ಮಾರ್ಕೆಟ್ ಅಲ್ಲಿ ಸದಾ ಬೇಡಿಕೆ ಇರುತ್ತದೆ. ಹಂತ ಹಂತವಾಗಿ ಸಿನಿಮಾಗಳಲ್ಲಿ ತನ್ನದೇ ಆದ ಒಂದು ಘನತೆಯನ್ನು ಬೆಳೆಸಿಕೊಂಡ ಪ್ರಕಾಶ್ ರಾಜ್ ಅವರು ಇತ್ತೀಚಿಗೆ ಕೆಜಿಎಫ್ 2 ಚಿತ್ರದಲ್ಲೂ ಕೂಡ ಕಾಣಿಸಿಕೊಂಡು ತಾವು ದೇಶದ ಪ್ರಮುಖ ಸಿನಿಮಾಗಳಲ್ಲಿ ಎಷ್ಟು ಮುಖ್ಯರು ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ಹೈ ಬಜೆಟ್ ಸಿನಿಮಾಗಲಿ ಅಥವಾ ಪಾನ್ ಇಂಡಿಯಾ ಚಿತ್ರವೇ ಆಗಲಿ ಸಿನಿಮಾ ತಂಡದ ಕಡೆಯಿಂದ ಒಂದು ಕರೆ ಪ್ರಕಾಶ್ ರಾಜ್ ಅವರಿಗೆ ಖಂಡಿತವಾಗಿಯೂ ಹೋಗಿರುತ್ತದೆ. ಅಂದಿನ ಹಿರಿಯ ನಿರ್ದೇಶಕರಿಂದ ಈಗಿನ ಯುವ ನಿರ್ದೇಶಕರವರೆಗೆ ಎಲ್ಲರ ನೆಚ್ಚಿನ ನಟನಾಗಿರುವ ಪ್ರಕಾಶ್ ರಾಜ್ ಅವರು ಈವರಿಗೆ ಸಾಕಷ್ಟು ಹೆಸರಾಂತ ಮತ್ತು ಸ್ಟಾರ್ ನಿರ್ದೇಶಕರ ಅಡಿಯಲ್ಲಿ ಕೆಲಸ ಮಾಡಿದ್ದಾರೆ.

ಆದರೆ ಕನ್ನಡ ಮೂಲದವರಾ,ಗಿ ಈಗ ತೆಲುಗಿನಲ್ಲಿ ನೆಲೆ ಕಂಡಿರುವ ರಾಜಮೌಳಿ ಅವರ ನಿರ್ದೇಶನದ ಒಂದು ಸಿನಿಮಾದಲ್ಲೂ ಕೂಡ ಪ್ರಕಾಶ್ ರಾಜ್ ಅವರು ಪೂರ್ತಿ ಪ್ರಮಾಣದಲ್ಲಿ ನಟಿಸಿಲ್ಲ. ವಿಕ್ರಮಾರ್ಕುಡು ಎನ್ನುವ ಸಿನಿಮಾದಲ್ಲಿ 5 ನಿಮಿಷಗಳ ಒಂದು ಸಣ್ಣ ಪಾತ್ರದಲ್ಲಿ ಅತಿಥಿಯಾಗಿ ಬಂದು ಹೋದ ಪ್ರಕಾಶ್ ರಾಜ್ ಅವರು ಮತ್ತೆಂದೂ ರಾಜ ಮೌಳಿ ಅವರ ನಿರ್ದೇಶನದಲ್ಲಿ ಕಾಣಿಸಿಕೊಳ್ಳಲೇ ಇಲ್ಲ.

ಈ ಬಗ್ಗೆ ಈಗ ಎಲ್ಲರಿಗೂ ಅನುಮಾನ ಹುಟ್ಟಿದೆ ಇದಕ್ಕೆ ಕಾರಣ ಏನೆಂದು ತಿಳಿದುಕೊಳ್ಳಬೇಕು ಇದೇ ಪ್ರಶ್ನೆಯನ್ನು ಸಂದರ್ಶನ ಒಂದರಲ್ಲಿ ರಾಜ ಮೌಳಿ ಅವರ ಮುಂದಿಟ್ಟಾಗ ಅವರು ಕೊಟ್ಟ ಉತ್ತರ ಬೇರೆನೆ ಇತ್ತು. ಪ್ರಕಾಶ್ ರಾಜ್ ಎಂತಹ ಉತ್ತಮ ಕಲಾವಿದ ಅವರಿಗೆ ಯೂವುದೋ ಪಾತ್ರ ಕೊಟ್ಟು ಸಿನಿಮಾಗೆ ತುರುಕುವ ಅವಶ್ಯಕತೆ ಇಲ್ಲ. ನನ್ನ ನಿರ್ದೇಶನದಲ್ಲಿ ಒಂದು ಅತ್ಯುತ್ತಮ ಪಾತ್ರವನ್ನು ಅವರು ಮಾಡಬೇಕು ಎನ್ನುವ ಆಸೆ ನನಗಿದೆ ಅಷ್ಟು ತೂಕದ ಪಾತ್ರ ಇದ್ದಾಗ ಖಂಡಿತವಾಗಿ ಅವರನ್ನೇ ಕೇಳುತ್ತೇನೆ.

ಇಲ್ಲವಾದರೆ ಮುಂದೆ ಒಂದು ದಿನ ಅವರಿಗಾಗಿ ಒಂದು ಪಾತ್ರ ಸೃಷ್ಟಿಸಿ ನನ್ನ ಸಿನಿಮಾದಲ್ಲಿ ಹಾಕಿಕೊಳ್ಳುತ್ತೇನೆ ಎಂದು ರಾಜ ಮೌಳಿ ಅವರು ಉತ್ತರ ಕೊಟ್ಟಿದ್ದಾರೆ. ಪ್ರಕಾಶ್ ರಾಜ್ ಅವರು ಸಿನಿಮಾ ಕಲಾವಿದನಾಗಿ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಸಾಕಷ್ಟು ಜನರಿಗೆ ಹತ್ತಿರವಾಗಿದ್ದಾರೆ. ಕಲಾವಿದನಾಗಿ ಇವರು ವಿಲನ್ ಎನ್ನುವ ಶೇಡ್ ಅಲ್ಲಿಯೇ ಪ್ರೇಕ್ಷಕರ ಮನಸಿನಲ್ಲಿ ಕುಳಿತಿದ್ದಾರೆ. ನೀವು ಸಹ ಪ್ರಕಾಶ್ ರಾಜ್ ಅವರ ಅಭಿನಯದ ಸಿನಿಮಾಗಳನ್ನು ನೋಡಿದ್ದರೆ ಅವರ ಅಭಿನಯದ ಯಾವ ಸಿನಿಮಾದ ಯಾವ ಪಾತ್ರ ನಿಮಗೆ ಇಷ್ಟ ಆಯಿತು ಎಂದು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

ನಟಿ ಅನುಪ್ರಭಾಕರ್ ಮೊದಲ ಮದುವೆ ಮುರಿದು ಬೀಳಲು ಕಾರಣವೇನು ಗೊತ್ತ.? ಕೊನೆಗೂ ಸಂದರ್ಶನ ಒಂದರಲ್ಲಿ ಸತ್ಯ ಬಿಚ್ಚಿಟ್ಟ ನಟಿ.

 

ಅನುಪ್ರಭಾಕರ್ ಕನ್ನಡದ ಚಂದುಳ್ಳಿ ಚೆಲುವೆ, ಅಪ್ಪಟ ಕನ್ನಡತಿಯಾದ ಈಕೆ ಹಳ್ಳಿ ಸೊಗಡಿನ ಸಾಂಸಾರಿಕ ಚಿತ್ರಗಳಿಗೂ, ಲವ್ ಸ್ಟೋರಿ ಗೂ ಹೇಳಿ ಮಾಡಿಸಿದಂತಹ ನಟಿ ಅಪ್ರತಿಮ ಸುಂದರಿ, ಅಪ್ಸರೆಯಂತಹ ಕಂಗೊಳಿಸುತ್ತಿದ್ದ ಅಷ್ಟೇ ಮಟ್ಟದ ಟ್ಯಾಲೆಂಟ್ ಕೂಡ ಹೊಂದಿರುವ ನಟಿ. ಅನುಪ್ರಭಾಕರ್ ಅವರು ಇಂದಿಗೂ ಸಹ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿರುವ ನಟಿ ಆದರೆ ಅನುಪ್ರಭಾಕರ್ ವಿಷಯ ಬಂದಾಗ ಇತ್ತೀಚಿಗೆ ಅವರ ಎಲ್ಲಾ ವಿಷಯಗಳಿಗಿಂತ ಹೆಚ್ಚಾಗಿ ಅವರ ಮೊದಲ ಮದುವೆ ವಿಷಯದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ.

ಯಾಕೆಂದರೆ ಪ್ರಭಾಕರ್ ಅವರು ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ಖ್ಯಾತ ಹಿರಿಯ ನಟಿ ಆದ ಅಭಿನಯ ಶಾರದೆ ಜಯಂತಿ ಅವರ ಪುತ್ರನ ಕೈಹಿಡಿದು ಅವರ ಮನೆಗೆ ಸೊಸೆಯಾಗಿ ಹೋಗಿದ್ದರು. ನಂತರ ಆ ಮದುವೆ ಮುರಿದು ಬಿದ್ದಿತ್ತು, ಇಷ್ಟು ದಿನ ಸುಮ್ಮನಿದ್ದ ನಟಿ ಈಗ ಮೊದಲ ಮದುವೆ ಬಗ್ಗೆ ಎಂದು ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಚಿತ್ರಲೋಕ ಎನ್ನುವ ಸಂದರ್ಶನದಲ್ಲಿ ಮದುವೆಯ ಬಗ್ಗೆ ಮಾತನಾಡಿದ ನಟಿ ಧೈರ್ಯವಾಗಿ ತನ್ನ ಜೀವನದ ಕಥೆಯನ್ನು ಹೇಳಿದ್ದಾರೆ.

ನಾನು ಜಯಂತಿ ಅಮ್ಮ ಅವರ ಸೊಸೆಯಾಗಿ ಹೋಗಿ ಬಹಳ ವಿಷಯಗಳನ್ನು ಅವರಿಂದ ಕಲಿತೆ. ಒಂದು ಹೆಣ್ಣಾಗಿ ಮಾತ್ರವಲ್ಲದೆ ಒಬ್ಬ ನಟಿಯಾಗಿ ಹೇಗಿರಬೇಕು ಎನ್ನುವುದನ್ನು ನಾನು ಅವರಿಂದ ಕಲಿತೆ. ಅವರ ಜೊತೆ ನನಗೆ ಒಂದು ಉತ್ತಮ ಸಂಬಂಧ ಇತ್ತು. ಮಗಳಿಗಿಂತ ಹೆಚ್ಚಾಗಿ ಪ್ರೀತಿಯಿಂದ ಅವರು ನನ್ನನ್ನು ನೋಡಿಕೊಳ್ಳುತ್ತಿದ್ದರು. ಆದರೆ ಗಂಡ ಹೆಂಡತಿ ಎನ್ನುವ ಸಂಬಂಧ ಬಂದಾಗ ಸ್ವಲ್ಪ ಏರುಪೇರು ಆಗಿ ನಾವು ಅನಿವಾರ್ಯ ಕಾರಣಗಳಿಂದ ದೂರ ಆಗಬೇಕಾಯಿತು.

ಯಾಕೆಂದರೆ 10 ರಿಂದ 12 ವರ್ಷಗಳ ಕಾಲ ನಾನು ಅವರ ಜೊತೆಗೆ ಇದ್ದೆ ಆದರೆ ನಂತರ ಇಂತಹದೊಂದು ದಿನ ಬರುತ್ತದೆ ಎಂದು ನಾವು ಬಯಸಿರಲಿಲ್ಲ. ಜೀವನ ಎಂದರೆ ಹೀಗೆ ಅಂದುಕೊಂಡದ್ದಕ್ಕಿಂತ ಅನಿರೀಕ್ಷಿತವಾದುದ್ದೇ ಹೆಚ್ಚಾಗಿ ಆಗುವುದು. ಹಾಗೆ ನನ್ನ ಜೀವನದಲ್ಲೂ ಅಂತಹ ಕಹಿ ಘಟನೆ ಬಂತು ನಾವಿಬ್ಬರು ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎನ್ನುವ ಸಂದರ್ಭ ಬಂದಾಗ ಈ ಕಹಿ ಡಿಸಿಶನ್ ಅನ್ನು ನಾವು ತೆಗೆದುಕೊಳ್ಳಲೇ ಬೇಕಾಯಿತು.

ಒಂದು ದಿನ ನಾನು ನನ್ನ ಅಮ್ಮನ ಮನೆಗೆ ವಾಪಸ್ ಬರಬೇಕಾಯಿತು. ಆ ಸಮಯಕ್ಕೆ ನನ್ನ ತಂದೆ ಇರಲಿಲ್ಲ ಆದರೂ ನನ್ನ ಕುಟುಂಬದ ಎಲ್ಲರೂ ನನ್ನನ್ನು ಸಪೋರ್ಟ್ ಮಾಡಿ ಕುಗ್ಗಿ ಹೋಗಿದ್ದ ನನ್ನನ್ನು ಚೇತರಿಸಿಕೊಳ್ಳುವ ರೀತಿ ಮಾಡಿದರು. ಆ ಒಂದು ಕಾರಣಕ್ಕಾಗಿ ನಾನು ಇಂದು ಹೊಸ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಯಿತು ಇದೇ ಕಾರಣಕ್ಕಾಗಿ ನಾನು ಎಲ್ಲಾ ಹೆತ್ತವರನ್ನು ಕೇಳಿಕೊಳ್ಳುತ್ತೇನೆ ಒಂದು ವೇಳೆ ನಿಮ್ಮ ಮಕ್ಕಳ ಮದುವೆಗಳು ಈ ರೀತಿ ಆದಾಗ ದಯವಿಟ್ಟು ಅವರನ್ನು ಸ್ವಾಗತಿಸಿ ಅವರಿಗೆ ಸಪೋರ್ಟ್ ಮಾಡಿ ನಿಲ್ಲಿ.

ಆದರೆ ಒಂದು ರಿಲೇಶನ್ಶಿಪ್ ಅದರಲ್ಲೂ ಗಂಡ ಹೆಂಡತಿ ಮಧ್ಯೆ ಏನಾಯ್ತು ಎನ್ನುವುದನ್ನು ವಿವರವಾಗಿ ಆಚೆ ಹೇಳುವ ಅವಶ್ಯಕತೆ ಇಲ್ಲ. ಅದು ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ವಿಚಾರ. ಹಾಗಾಗಿ ಏನೋ ಸರಿ ಬರಲಿಲ್ಲ ಹಾಗಾಗಿ ದೂರವಾಗಿದ್ದೇವೆ ಅಷ್ಟೇ ಆದರೆ ಈಗ ರಘು ಅವರು ನನ್ನ ಜೀವನದಲ್ಲಿ ಮತ್ತೆ ಸಿಕ್ಕಿ ಮತ್ತೆ ಒಂದು ಹೊಸ ಜೀವನ ಸೃಷ್ಟಿ ಆಗಿದೆ ಈ ಬಗ್ಗೆ ನಾನು ಸಂತೋಷವಾಗಿದ್ದೇನೆ ಎಂದು ಹೇಳಿದ್ದಾರೆ. ಎಲ್ಲ ಹೆಣ್ಣು ಮಕ್ಕಳ ಹೆತ್ತವರು ಕೇಳಲೇಬೇಕಾದ ಮಾತು ಇದಾಗಿದ್ದು, ಅನು ಪ್ರಭಾಕರ್ ಅವರ ಪ್ರಬುದ್ಧತೆಯ ಮಾತುಗಳನ್ನು ಕೇಳಲು ಈ ವಿಡಿಯೋ ನೋಡಿ.

ಹಿಜಾಬ್ ವಿಚಾರದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಶಾಪ ತಟ್ಟಿ ಕಿರಿಕ್ ಕೀರ್ತಿ ಅವರಿಗೆ ಇಂದು ಈ ಪರಿಸ್ಥಿತಿ ಬಂದಿದ್ದ.? ಈ ಬಗ್ಗೆ ಕೀರ್ತಿ ಏನಂದ್ರು ನೋಡಿ. ಹಾಲಿನಂತಿದ ಸಂಸಾರ ಇಂದು ಬೀದಿ ಪಾಲು.

 

ಕಿರಿಕ್ ಕೀರ್ತಿ ಕಳೆದ ಎರಡು ವಾರಗಳಿಂದಲೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆ ಆಗುತ್ತಿರುವ ಹೆಸರು ಕಿರಿಕ್ ಕೀರ್ತಿಯವರು ಇದ್ದಕ್ಕಿದ್ದ ಹಾಗೆ ಹಾಕಿದ ಪೋಸ್ಟ್ ಗಳು ಇಂದು ಅವರ ಬಗ್ಗೆ ಜನ ಚರ್ಚೆ ಮಾಡುವಂತೆ ಅವರ ಸಂಸಾರದ ಗುಟ್ಟು ರಟ್ಟು ಆಗುವಂತೆ ಮಾಡಿದೆ. ಕೊನೆಗೆ ಲೈವಲ್ಲಿ ಬಂದ ಕಿರಿಕ್ ಕೀರ್ತಿಯವರು ಅದೆಲ್ಲಾ ನಮ್ಮ ಭಾವನೆಗಳು, ಗೊತ್ತಿಲ್ಲದ ವಿಚಾರಗಳ ಬಗ್ಗೆ ನೆಗೆಟಿವ್ ಆಗಿ ಬರೆಯಬೇಡಿ ಅದರಲ್ಲೂ ಸಂಸಾರದ ವಿಷಯಕ್ಕೆ ಬರಬೇಡಿ ಎಂದು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಕಲಿತಿರುವ ಕೀಬೋರ್ಡ್ ವಾರಿಯರ್ಸ್ ಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು.

ಬಳಿಕ ಸೈಕಲ್ ಗ್ಯಾಪ್ ಎನ್ನುವ ಯೌಟ್ಯೂಬ್ ಚಾನೆಲ್ ಅಲ್ಲಿ ಸಂದರ್ಶನ ನೀಡಿದ ಕೀರ್ತಿ ಅವರು ಜನ ಈಗ ಕೀರ್ತಿ ಅವರಿಗೆ ಮಾಡುತ್ತಿರುವ ಕೆಟ್ಟ ಕಮೆಂಟ್ಗಳ ಬಗ್ಗೆ ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ. ಮುಖ್ಯವಾಗಿ ಕಿರಿಕ್ ಕೀರ್ತಿ ಅವರಿಗೆ ಬಂದ ಕಮೆಂಟ್ ಗಳಲ್ಲಿ ನೀನು ಹಿಜಾಬ್ ವಿಷಯದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಆ ರೀತಿ ಮಾಡಿದ್ದು, ನಿನಗೆ ಶಾಪ ತಟ್ಟಿದೆ ಹಾಗಾಗಿ ನಿನ್ನ ಸಂಸಾರ ಹೀಗಾಗಿದೆ ಎನ್ನುವ ಮಾತು ಕೀರ್ತಿ ಅವರನ್ನು ಬಹಳ ಕಾಡಿದೆ.

ಯಾಕೆಂದರೆ ಕಿರಿಕ್ ಕೀರ್ತಿ ಅವರು ಹಿಜಾಬ್ ಗಲಾಟೆ ಸಮಯದಲ್ಲಿ ಕಳೆದ ವರ್ಷ ಕರ್ನಾಟಕದಲ್ಲಿ ಆಗಿದ್ದ ಆ ಸಂಘರ್ಷದ ಸಂದರ್ಭದಲ್ಲಿ ನ್ಯಾಯಾಲಯದ ಕೊಟ್ಟ ತೀರ್ಪನ್ನು ಎತ್ತಿ ಹಿಡಿದಿದ್ದರು. ಆದರೆ ಅದನ್ನು ಜನರಿಗೆ ತಲುಪಿಸುವ ರೀತಿ ಬೇರೆ ರೀತಿ ಆಗಿತ್ತು. ಅವರು ಮುಸ್ಲಿಂ ಹೆಣ್ಣು ಮಕ್ಕಳನ್ನು ವಿಡಂಬನೆ ಮಾಡುವ ಉದ್ದೇಶದಿಂದ ಅಲ್ಲದಿದ್ದರೂ ಪರಿಸ್ಥಿತಿ ಹೀಗಾದರೆ ಹೇಗಾಗಬಹುದು ಎನ್ನುವ ಸಂಗತಿ ಅರ್ಥ ಮಾಡಿಸುವ ಸಲುವಾಗಿ ಮುಸ್ಲಿಂ ಯುವತಿಯರು ಹಿಜಾಬ್, ಬುರ್ಖಾ ತೆಗೆಯುವುದಿಲ್ಲ.

ಆದರೆ ನನಗೆ ಹಲ್ಲು ನೋವಿಗೆ ಚಿಕಿತ್ಸೆ ಬೇಕು ಎಂದು ಡೆಂಟಿಸ್ಟ್ ಬಳಿ ಹೋದರೆ ಹೇಗೆ ಎನ್ನುವುದನ್ನು ಸ್ವಲ್ಪ ಕಿಂಡಲ್ ಆಗಿಯೇ ಹೇಳಿದ್ದರು ಈಗ ಅನೇಕರು ನೀನು ಅಂದು ಆ ಹೆಣ್ಣು ಮಕ್ಕಳಿಗೆ ಆ ರೀತಿ ಮಾಡಿದ್ದು ಈಗ ನಿನಗೆ ಶಾಪವಾಗಿ, ಕರ್ಮವಾಗಿ ಕಾಡುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರಂತೆ. ಅದರ ಬಗ್ಗೆ ಮಾತನಾಡುವ ಕೀರ್ತಿ ಅವರು ಒಬ್ಬ ಜರ್ನಲಿಸ್ಟ್ ಆಗಿ ನ್ಯಾಯಾಲಯ ಕೊಟ್ಟ ತೀರ್ಪನ್ನು ನಾನು ಜನರಿಗೆ ಹೆಚ್ಚು ಪರಿಣಾಮಕಾರಿಯಾಗಿ ಮುಟ್ಟಿಸುವ ಪ್ರಯತ್ನ ಮಾಡಿದೆ.

ಒಬ್ಬೊಬ್ಬರ ನಿರೂಪಣ ಶೈಲಿ ಒಂದೊಂದು ರೀತಿ ಇರುತ್ತದೆ, ನಾನು ನನ್ನ ವೃತ್ತಿ ಧರ್ಮ ಮಾಡಿದ್ದೇನೆ. ಜೊತೆಗೆ ನಾವು ಮಾಡಿದ ತಪ್ಪಿಗಾಗಿ ನಾವು ಶಿಕ್ಷೆ ಪಟ್ಟರೆ ಅದು ನಮ್ಮ ಪಾಪ ಯಾರೋ ಮಾಡಿದ ತಪ್ಪಿಗೆ ಅಥವಾ ಮಾಡದ ತಪ್ಪಿಗೆ ಶಿಕ್ಷೆ ಪಟ್ಟರೆ ಅದು ಖಂಡಿತ ಶಾಪವಲ್ಲ. ನನ್ನ ನಿಲುವು ಇಷ್ಟೇ, ಸೈದ್ಧಾಂತಿಕವಾಗಿ ನೀನು ಒಂದು ಪಕ್ಷ ಅಥವಾ ಒಂದು ಸಿದ್ಧಾಂತವನ್ನು ಇಷ್ಟಪಡುವುದಾದರೆ ನಾನು ಯಾಕೆ ಇಷ್ಟಪಡಬಾರದು ಅದರ ಬಗ್ಗೆ ಯಾಕೆ ಮಾತನಾಡಬಾರದು ಸೈದಾಂತಿಕವಾಗಿ ಸಾಧ್ಯವಾದರೆ ನನ್ನನ್ನು ವಿರೋಧಿಸಿ ಆದರೆ ಪರ್ಸನಲ್ ವಿಷಯಕ್ಕೆ ಬರಬೇಡಿ ಎಂದು ಈ ರೀತಿ ಸ್ಪಷ್ಟನೆ ಕೊಟ್ಟಿದ್ದಾರೆ.

ಜೊತೆಗೆ ಇದು ಕಾಲ ಆಡುತ್ತಿರುವ ಆಟ ಅಷ್ಟೇ, ಲೈಫ್ ಎನ್ನುವ ಗ್ರಾಫ್ ಅಲ್ಲಿ ಈ ಅಪ್ ಆಂಡ್ ಡೌನ್ಸ್ ಕಾಮನ್ ಅದು ಸಮಯ ತೆಗೆದುಕೊಳ್ಳುತ್ತಿದೆ ಮುಂದೆ ಏನಾಗುತ್ತದೆ ನೋಡೋಣ ಎಂದು ಹೇಳಿ ಅರ್ಪಿತ ಅವರ ಜೊತೆ ಮತ್ತೆ ಒಂದಾಗುವ ಮನಸಿರುವ ಬಗ್ಗೆ ಸುಳಿವು ನೀಡಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಆಗಿ ಕಮೆಂಟ್ ಮಾಡುವವರಿಗೆ ಮತ್ತೊಮ್ಮೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.

ಅಪ್ಪು ಹುಟ್ಟಕ್ಕೆ ಭಾವನಾತ್ಮಕ ಪತ್ರ ಬರೆದ ಶಿವಣ್ಣ. ಈ ಪತ್ರದಲ್ಲಿರುವ ಸಾಲುಗಳನ್ನು ನೋಡಿದರೆ ಎಂಥವರ ಕಣ್ಣಾಲ್ಲದರೂ ನೀರು ಬರುತ್ತೆ. ಅಷ್ಟಕ್ಕೂ ಅಪ್ಪು ಬಗ್ಗೆ ಶಿವಣ್ಣ ಬರೆದಿದ್ದೇನು ಗೊತ್ತ.?

 

ಶಿವಣ್ಣ ಇಡೀ ಕರುನಾಡಿಗೆ ಅಣ್ಣನಾಗಿ ಇದ್ದಾರೆ. ಇನ್ನು ಅವರ ಕುಟುಂಬದ ರಾಜಕುಮಾರನಾಗಿದ್ದ ಅಪ್ಪು ಪಾಲಿಗಂತೂ ಅಣ್ಣನಿಗಿಂತ ಹೆಚ್ಚು, ಸ್ನೇಹಿತನಿಗಿಂತಲೂ ಹತ್ತಿರ. ತುಂಬು ಕುಟುಂಬವಾಗಿದ್ದ ದೊಡ್ಮನೆ ಎನ್ನುವ ಜೇನು ಗೂಡಿನಲ್ಲಿ ಎಂದು ಕೂಡ ಸಂತಸದ ಕಲರವವೇ ತುಂಬಿರುತ್ತಿತ್ತು. ಇದುವರೆಗೆ ಒಂದೇ ಒಂದು ಸಣ್ಣ ಊಹಾಪೋಹ ಅಥವಾ ಗಾಸಿಪ್ ಗೂ ಎಡೆ ಮಾಡಿಕೊಡದೆ ಎಲ್ಲಾ ಸಂಬಂಧಗಳು ಗಟ್ಟಿಯಾಗಿತ್ತು.

ಆದರೆ ವಿಧಿ ಕಲ್ಲು ಎಸೆದು ಅಪ್ಪು ಎನ್ನುವ ಅಮೂಲ್ಯ ರತ್ನವನ್ನು ಹೊತ್ತೊಯ್ದಿದೆ. ರಾಜ್ ಕುಟುಂಬದಲ್ಲಿ ಪ್ರತಿಯೊಬ್ಬರ ನಡುವೆಯು ಕೂಡ ಒಂದು ಭಾವನಾತ್ಮಕ ಸಂಬಂಧ ಬೆಸೆದುಕೊಂಡಿದೆ. ಅದರಲ್ಲೂ ಅಪ್ಪು ಅವರ ಜೊತೆ ಇಡೀ ಕುಟುಂಬಕ್ಕೆ ಇಂತಹದೊಂದು ಆತ್ಮೀಯತೆ ಇತ್ತು. ಶಿವಣ್ಣನ ಪಾಲಿಗಂತೂ ಈತ ತಮ್ಮ ಎನ್ನುವುದಕ್ಕಿಂತ ಸ್ವಂತ ಮಗನಿಗಿಂತ ಹೆಚ್ಚು. ಅದೇ ನೋವಿನಲ್ಲಿ ಇಂದು ಅಪ್ಪು ಇಲ್ಲದ ಹುಟ್ಟು ಹಬ್ಬದ ದಿನದಂದು ಅಪ್ಪು ಬಗ್ಗೆ ಭಾವುಕ ಪತ್ರ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಶಿವಣ್ಣ.

AI ಪೇಂಟಿಂಗ್ ಅಲ್ಲಿ ತಮ್ಮನ ಜೊತೆಗಿರುವ ಫೋಟೋ ಪೇಂಟಿಂಗ್ ಜೊತೆಗೆ ಸಾಲು ಸಾಲು ಬರಹವನ್ನು ಅಪ್ಪು ಬಗ್ಗೆ ಬರೆದಿದ್ದಾರೆ ಶಿವಣ್ಣ. ಅಪ್ಪು ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು, ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ಪವರ್ ಸ್ಟಾರ್ ಆಗುವುದನ್ನು ಆವಾಗಲೇ ಸಾರಿ ಹೇಳುತ್ತಿತ್ತು, ನೀನು ನಕ್ಕರೆ ಎಲ್ಲರೂ ನಗುತ್ತಾ ಇದ್ದರು, ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡುತ್ತಾ ಇದ್ದರು, ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು, ಆ ಪುಟ್ಟ ಅಪ್ಪು ಮಿಂಚಿನಂತೆ ತೆರೆಯ ಮೇಲೆ ಬಂದು, ಹೆಮ್ಮರವಾಗಿ, ಕೋಟ್ಯಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ.

ನಿನ್ನನ್ನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸವನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗನಾಗಿ, ಹಬ್ಬ ಯಾವುದೇ ಇದ್ದರೂ ನಿನ್ನ ಹೆಸರಿನಲ್ಲಿ ಪಟಾಕಿ ಹಚ್ಚುವ ನಿನ್ನ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳುತ್ತಾ ಇದ್ದೀನಿ, ನೀನು ಹುಟ್ಟಿದ್ದೆ ಒಂದು ಉತ್ಸವ ನೀನು ಬೆಳೆದದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ, ನಿನ್ನ ನೆನಪುಗಳು ಎಂದಿಗೂ ಅಮರ ಹುಟ್ಟುಹಬ್ಬದ ಶುಭಾಶಯಗಳು ಅಪ್ಪು ಎಂದು ಪ್ರೀತಿಯ ತಮ್ಮನನ್ನು ನೆನೆದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ನೋಡಿದ ಕೂಡಲೇ ಅಣ್ಣನ ಮನದಲ್ಲಿರುವ ನೋವಿನ ಭಾರವನ್ನು ನೆನೆದು ಎಲ್ಲರ ಕಣ್ಣಾಲಿಗಳು ಕೂಡ ತೇವ ಆಗದೆ ಇರಲಾರದು. ಇಡೀ ಕರುನಾಡು ಇಂದಿಗೂ ಅಪ್ಪು ಹೆಸರು ಕೇಳಿದಾಗಲೆಲ್ಲ ಆ ಆರದ ಗಾಯದ ನೋವನ್ನು ಅನುಭವಿಸುತ್ತಿರುವಾಗ , ಅವರ ಜೀವನದ ಭಾಗವೇ ಆಗಿದ್ದ ತಮ್ಮನನ್ನು ಕಳೆದುಕೊಂಡ ಶಿವಣ್ಣನ ದುಃಖವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.

ರಾಘಣ್ಣ ಕೂಡ ಮಧ್ಯರಾತ್ರಿಯೇ ಅಪ್ಪು ಪುಣ್ಯ ಸ್ಮಾರಕದ ಬಳಿ ಹೋಗಿ ಅಪ್ಪು ಅಭಿಮಾನಿಗಳು ಅಪ್ಪುಗಾಗಿ ರೆಡಿ ಮಾಡಿದ್ದ ಹುಟ್ಟು ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ರಾಘಣ್ಣನ ಜೊತೆ ರಾಘಣ್ಣ ಇಡೀ ಕುಟುಂಬ ಅಪ್ಪು ಎರಡನೇ ಮಗಳು ವಂದಿತಾ ಮತ್ತು ಕುಟುಂಬದ ಇತರರು ಕೂಡ ಅಭಿಮಾನಿಗಳ ನಡುವೆ ಅಭಿಮಾನದಿಂದ ಅಪ್ಪುಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ. ಕರುನಾಡು ಕಂಡ ಈ ಶ್ರೇಷ್ಠ ಪುರುಷನಿಗೆ ನಾವು ಸಹ ಮತ್ತೊಮ್ಮೆ ಹುಟ್ಟು ಹಬ್ಬವನ್ನು ಹೇಳಿ ತಾಯಿ ಭುವನೇಶ್ವರಿ ಮಡಿಲಲ್ಲೇ ಮತ್ತೆ ಪುನೀತ್ ಹುಟ್ಟಿ ಬರುವಂತಾಗಲಿ ಎಂದು ಬಯಸೋಣ.

ಅಪ್ಪನ ಸ.ಮಾ.ಧಿ ಮುಂದೆ ನಿಂತು ಅಳುತ್ತಿದ್ದ ವಂದಿತಾ ನೋಡಿ ಇವತ್ತು ಕಣ್ಣೀರು ಹಾಕಬಾರದು ಎಂದು ವಂದಿತಾಗೆ ಧೈರ್ಯ ತುಂಬಿದ ರಾಘಣ್ಣ.

 

ಕರ್ನಾಟಕದಲ್ಲಿ ಇಂದು ಅಪ್ಪು ಹುಟ್ಟು ಹಬ್ಬದ ಸಂಭ್ರಮ. ಅಪ್ಪು ಅವರ ಅಗಲಿಕೆ ನಂತರ ಅಪ್ಪು ಅವರ ಹುಟ್ಟು ಹಬ್ಬದ ದಿನ ಮತ್ತು ಅವರ ಪುಣ್ಯ ಸ್ಮರಣೆಯ ದಿನವನ್ನು ಕರ್ನಾಟಕದಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಆದರ್ಶ ಪುರುಷ, ಸಿನಿಮಾ ಇಂಡಸ್ಟ್ರಿಯ ಮರೆಯಲಾಗದ ಮಾಣಿಕ್ಯ, ರಾಜವಂಶದ ಕೀರ್ತಿ ಕಳಶ, ಕರುನಾಡ ರಾಜಕುಮಾರನನ್ನು ಮಿಸ್ ಮಾಡಿಕೊಂಡಿರುವ ಜನ ಅವರು ಇದ್ದಾಗ ಎಷ್ಟು ಪ್ರೀತಿ ಅಭಿಮಾನ ತೋರುತ್ತಿದ್ದರು ಅದಕ್ಕಿಂತಲೂ ಮಿಗಿಲಾಗಿ ಈಗ ಇನ್ನೂ ಸಹ ವಿಜೃಂಭಣೆಯಿಂದ ಅಪ್ಪು ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ.

ಆದರೆ ಇದುವರೆಗೆ ಅಪ್ಪು ಅಭಿಮಾನಿಗಳು ಅಪ್ಪು ಅವರ ಮನೆ ಮುಂದೆ ಬಂದು ಕೇಕ್ ಕಟ್ ಮಾಡಿಸಿ ಖುಷಿಪಡುತ್ತಿದ್ದರು ಆದರೆ ಈಗ ಕಂಠೀರವ ಸ್ಟುಡಿಯೋದಲ್ಲಿ ಇರುವ ಅವರ ಪುಣ್ಯ ಸ್ಮಾರಕದ ಬಳಿ ಈ ಆಚರಣೆ ನಡೆಯುತ್ತಿದೆ. ಮಧ್ಯರಾತ್ರಿ ಇಂದಲೇ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಅಪ್ಪು ಪುಣ್ಯ ಸ್ಮಾರಕದ ಬಳಿ ಧಾವಿಸಿದ್ದಾರೆ. ದೊಡ್ಮನೆಯಿಂದ ರಾಘಣ್ಣ ಹಾಗೂ ಅವರ ಧರ್ಮಪತ್ನಿ ಮಂಗಳ ರಾಘವೇಂದ್ರ ರಾಜಕುಮಾರ್, ವಿನಯ್ ರಾಜ್ ಕುಮಾರ್, ಯುವ ರಾಜ್‍ಕುಮಾರ್, ಅಪ್ಪು ಮುದ್ದಿನ ಮಗಳು ವಂದಿತ ಹಾಗೂ ಕುಟುಂಬದ ಮತ್ತಿತ್ತರ ಸದಸ್ಯರೆಲ್ಲಾ ಬಂದು ಅಪ್ಪು ಪುಣ್ಯ ಸ್ಮಾರಕದ ಎದುರು ನಿಂತು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ವೇಳೆ ಅಭಿಮಾನಿಗಳು ಅಪ್ಪುಗಾಗಿ ರೆಡಿ ಮಾಡಿ ತಂದಿದ್ದ ಕೇಕ್ ಅನ್ನು ರಾಘಣ್ಣ ಅಪ್ಪು ಮಗಳಿಗೆ ಕಟ್ ಮಾಡಲು ಹೇಳಿದ್ದಾರೆ, ಜೊತೆಗೆ ಅಪ್ಪನನ್ನು ನೆನೆದು ಕಣ್ಣೀರು ಹಾಕಿದ ಮಗಳಿಗೆ ಸಮಾಧಾನ ಕೂಡ ಮಾಡಿದ್ದಾರೆ. ಈ ದಿನ ಅಳಬಾರದು ಮಗಳೇ ಎಂದು ಹೇಳಿ ವಂದಿತಾಳನ್ನು ಸಮಾಧಾನ ಮಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವಂದಿತಾ ಅಪ್ಪು ಅವರ ಕಿರಿಯ ಮಗಳು, ಅಪ್ಪನನ್ನು ಬಹಳ ಹಚ್ಚಿಕೊಂಡಿದ್ದರು.

ಪ್ರತಿದಿನ ಎಷ್ಟೇ ಕೆಲಸ ಇದ್ದರೂ ಸಂಜೆ ವೇಳೆ ಮಗಳನ್ನು ಕರೆದುಕೊಂಡು ಒಂದು ರೌಂಡ್ ವಾಕ್ ಮಾಡದೆ ನನ್ನ ದಿನ ಮುಗಿಯುವುದೇ ಇಲ್ಲ ಎಂದು ಕೆಲವು ಇಂಟರ್ವ್ಯೂಗಳಲ್ಲಿ ಪುನೀತ್ ಹೇಳಿಕೊಂಡಿದ್ದರು. ಇಂದು ಪಾಪ ಆ ಪುಟ್ಟ ಮನಸ್ಸಿಗೆ ಅಪ್ಪನ ಅಗಲಿಕೆ ನೋವು ಅದೆಷ್ಟು ಭಾರವಾಗುತ್ತಿದೆಯೋ ಆದರೂ ಸಹ ರಾಘವೇಂದ್ರ ರಾಜಕುಮಾರ್ ಅವರ ಮಕ್ಕಳಾದ ವಿನಯ್ ರಾಜಕುಮಾರ್ ಹಾಗೂ ಯುವರಾಜ್ ಕುಮಾರ್ ಇಬ್ಬರು ಅಣ್ಣಂದಿರು ವಂದಿತಾ ಮತ್ತು ಧೃತಿ ಅವರಿಗೆ ಅಪ್ಪ ಸ್ಥಾನದಲ್ಲಿ ಜೊತೆಗೆ ನಿಂತು ಜೋಪಾನ ಮಾಡುತ್ತಿದ್ದಾರೆ.

ರಾಘಣ್ಣ ಹಾಗೂ ಶಿವಣ್ಣ ದಂಪತಿಗಳು ಸಹ ಈ ಮಕ್ಕಳನ್ನು ಮಡಿಲಿಗೆ ಹಾಕಿಕೊಂಡು ನೋಡಿಕೊಳ್ಳುತ್ತಿದ್ದಾರೆ. ಆದರೂ ಅಪ್ಪು ಹುಟ್ಟು ಹಬ್ಬದ ದಿನ ಅಪ್ಪನ ಸ್ಮಾರಕದ ಎದುರು ನಿಂತು ವಂದಿತ ಅಳುತ್ತಿದ್ದದ್ದು ನೋಡಿದರೆ ಎಲ್ಲರ ಕರುಳು ಚುರುಕ್ ಎನ್ನುವಂತಿತ್ತು. ಇದ್ದಕ್ಕಿದ್ದಂತೆ ಮಧ್ಯರಾತ್ರಿ ಇಂದ ಬೆಂಗಳೂರಿನಲ್ಲಿ ವರ್ಣನ ಆರ್ಭಟ ಕೂಡ ನಡೆದಿದೆ. ಇದರ ನಡುವೆಯೂ ಅಲುಗಾಡದ ಅಪ್ಪು ಅಭಿಮಾನಿಗಳು ಈ ಸಾಧಕನ ಹುಟ್ಟುಹಬ್ಬವನ್ನು ಮಳೆ ನಡುವೆ ಆಚರಿಸಿದ್ದಾರೆ.

ಇದೆಲ್ಲ ನೋಡುತ್ತಿದ್ದರೆ ಆಕಾಶವೇ ಅಪ್ಪುವನ್ನು ನೋಡಿ ಎಂದು ಕಣ್ಣೀರು ಹಾಕಿದೆ ಎಂದು ಅನಿಸದೇ ಇರದು. ಅಪ್ಪು ಅವರ ಆದರ್ಶಗಳನ್ನು ಅಳವಡಿಸಿಕೊಂಡಿರುವ ಅವರ ಅಭಿಮಾನಿಗಳು ಈ ದಿನ ಅವರ ಹೆಸರಿನಲ್ಲಿ ಅನ್ನದಾನ, ರಕ್ತದಾನ ಶಿಬಿರ, ನೇತ್ರದಾನ ಶಿಬಿರ ಮುಂತಾದವುಗಳನ್ನು ನಡೆಸಿ ಅಪ್ಪು ಹೆಸರಿಗೆ ಗೌರವ ಸೂಚಿಸಲಿದ್ದಾರೆ. ಈ ರೀತಿ ಅಪ್ಪು ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲಿದ್ದಾರೆ.

ಸುದೀಪ್ ಅಭಿನಯದ “ಹುಚ್ಚ” ಸಿನಿಮಾ ನೋಡಿ ಅಂದು ವಿಷ್ಣುದಾದಾ ಸುದೀಪ್ ಅವರನ್ನು ಮನೆಗೆ ಕರೆದು ಏನೆಂದು ಹೇಳಿದ್ರು ಗೊತ್ತಾ.?

 

 

ಸಕ್ಸಸ್ ಎನ್ನುವುದ ಸರಿಯಾದ ಡೆಫ್ನೇನೇಷನ್ ಅನ್ನು ಈ ರೀತಿ ಹೇಳಬಹುದು ಎನಿಸುತ್ತದೆ. ಎಲ್ಲಿ ನಮಗೆ ಬೆಲೆ ಇರುವುದಿಲ್ಲವೋ ಅಲ್ಲಿ ಬಲವಾಗಿ ಬೆಳೆದು ಹೆಮ್ಮರವಾಗುವುದು ಎಂದು. ಈಗ ಅದಕ್ಕೆ ಅನ್ವರ್ಥವಾಗಿ ಸುದೀಪ್ ಎಂದು ಹೇಳಬಹುದು. ಯಾಕೆಂದರೆ ಸುದೀಪ್ ಅವರು ಬಾಲ್ಯದಿಂದಲೂ, ತಾನೊಬ್ಬ ಸಿನಿಮಾ ಹೀರೋ ಆಗಬೇಕು ಎಂದು ಕನಸು ಕಟ್ಟಿಕೊಂಡು ಅದಕ್ಕಾಗಿ ಮುಂಬೈ ಗೆ ಹೋಗಿ ತರಬೇತಿ ಪಡೆದುಕೊಂಡು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು.

ಆದರೆ ಆರಂಭದ ದಿನಗಳಲ್ಲಿ ಇವರನ್ನು ಆರಡಿ ಹೈಟು, ಐರನ್ ಲೆಗ್, ಎಮ್ಮೆ ತರಹ ಧ್ವನಿ ಇದೆ ಎಂದೆಲ್ಲಾ ಅವಮಾನ ಮಾಡಿ ಹೀಯಾಳಿಸಿದರು. ಆದರೆ ಇಂದು ಅದೇ ಬೇಸ್ ವಾಯ್ಸ್ ಗಾಗಿ, ಆರಡಿ ಹೀರೋಗಾಗಿ ಕನ್ನಡ ಸಿನಿಮಾ ರಂಗ ಮಾತ್ರವಲ್ಲದೆ ಭಾರತದ ಎಲ್ಲಾ ಚಿತ್ರರಂಗದವರು ಕೂಡ ಕರೆದು ಮಣೆ ಹಾಕುತ್ತಿದ್ದಾರೆ. ಅಗರ್ಭ ಶ್ರೀಮಂತನಾಗಿ ಹುಟ್ಟಿದರೂ ಕೂಡ ಸಿನಿಮಾ ಆಸೆಗಾಗಿ ಇಂಡಸ್ಟ್ರಿಗೆ ಬಂದಮೇಲೆ ಒಂದೇ ಒಂದು ಸಕ್ಸಸ್ ಆಗಿ ಸುದೀಪ್ ಅವರು ಸಾಕಷ್ಟು ಶ್ರಮ ಪಡುವುದಲ್ಲದೇ ಕಣ್ಣೀರು ಸಹಾ ಹಾಕಿದ್ದಾರೆ.

ಅಂತಹ ಟೈಮಲ್ಲಿ ಸುದೀಪ್ ಅವರ ಅದೃಷ್ಟ ಬದಲಾಯಿಸಿದ ಚಿತ್ರ ಎಂದರೆ ಅದು ಹುಚ್ಚ ಸಿನಿಮಾ. ಹುಚ್ಚ ಸಿನಿಮಾ ತಯಾರಾಗುವ ವೇಳೆ ಇಂಡಸ್ಟ್ರಿಯಲ್ಲಿ ಸುದೀಪ್ ಬಗ್ಗೆ ಒಂದು ಗಂಭೀರವಾದ ಅಭಿಪ್ರಾಯ ಶುರುವಾಗಿದ್ದು ಎಂದು ಹೇಳಬಹುದು. ಆಗ ಹುಚ್ಚ ಸಿನಿಮಾವನ್ನು ತೆರೆ ಮೇಲೆ ತರುವ ಮುನ್ನ ವಿಷ್ಣುವರ್ಧನ್ ಅವರಿಗೆ ತೋರಿಸಬೇಕು ಎನ್ನುವುದು ಸುದೀಪ್ ಆಸೆ ಆಗಿತ್ತು. ಯಾಕೆಂದರೆ ವಿಷ್ಣುವರ್ಧನ್ ಅವರು ಸುದೀಪ್ ಅವರ ಫೇವರಿಟ್ ಹೀರೋ ಮಾತ್ರ ಅಲ್ಲದೆ ಅವರ ಅನೇಕ ವಿಷಯಗಳನ್ನು ತಮ್ಮ ಜೀವನದಲ್ಲಿ ಅವರು ಆಗಿನಿಂದಲೇ ಅಳವಡಿಸಿಕೊಂಡಿದ್ದರು.

ವಿಷ್ಣುವರ್ಧನ್ ಅವರನ್ನು ಸುದೀಪ್ ಅವರು ಅಘೋಷಿತ ಗುರು ಎಂದೇ ಪರಿಗಣಿಸಿದ್ದಾರೆ. ಇಂದಿಗೂ ಸಹ ಸುದೀಪ್ ಅವರಲ್ಲಿ ವಿಷ್ಣುವರ್ಧನ್ ಅವರ ಛಾಯೆಯನ್ನು ಇಂಡಸ್ಟ್ರಿಯ ಹಲವರು ಕಾಣುತ್ತಿದ್ದಾರೆ. ಹೀಗಾಗಿ ವಿಷ್ಣುವರ್ಧನ್ ಅವರ ಅಭಿಪ್ರಾಯ ಸುದೀಪ್ ಅವರಿಗೆ ಬಹಳ ಮುಖ್ಯವಾಗಿದ್ದ ಕಾರಣ ಹುಚ್ಚ ಸಿನಿಮಾವನ್ನು ವಿಷ್ಣುವರ್ಧನ್ ಅವರಿಗೆ ತೋರಿಸಿದರು. ಆ ಸಿನಿಮಾ ನೋಡಿದ ತಕ್ಷಣವೇ ವಿಷ್ಣುವರ್ಧನ್ ಸುದೀಪ್ ಅವರನ್ನು ನೋಡಿ ಇಷ್ಟು ದಿನ ಎಲ್ಲಿದ್ದೀರಿ ಸುದೀಪ್ ಎಷ್ಟು ಚೆನ್ನಾಗಿ ನಟನೆ ಮಾಡಿದ್ದೀರಾ.

ಈ ಸಿನಿಮಾದಿಂದ ಖಂಡಿತ ನಿಮ್ಮ ಅದೃಷ್ಟ ಬದಲಾಗುತ್ತದೆ ನೋಡಿ ಎಂದು ಭವಿಷ್ಯ ಹೇಳಿದ್ದಾರಂತೆ. ಅದೇ ರೀತಿ ಸುದೀಪ್ ಅವರ ಅದೃಷ್ಟ ಬದಲಾಯಿಸಿದ ಚಿತ್ರ ಹುಚ್ಚ. ಹುಚ್ಚ ಸಿನಿಮಾದ ಬಳಿಕ ಸುದೀಪ್ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಇಂದು ಬಹು ಭಾಷೆಗಳ ಬೇಡಿಕೆ ನಟನಾಗಿ ನ್ಯಾಷನಲ್ ಸ್ಟಾರ್ ಆಗಿ ಸುದೀಪ್ ಅವರು ಬೆಳೆದಿದ್ದಾರೆ. ವಿಷ್ಣುವರ್ಧನ್ ಮತ್ತು ಸುದೀಪ್ ಅವರನ್ನು ಒಟ್ಟಿಗೆ ತೆರೆ ಮೇಲೆ ನೋಡಬೇಕು ಎನ್ನುವ ಅಭಿಲಾಷೆ ಆಗಿನಿಂದಲೂ ಅವರಿಬ್ಬರ ಅಭಿಮಾನಿಗಳಿಗೂ ಇತ್ತು.

ಆ ಸಿನಿಮಾ ಮಾತಾಡು ಮಾತಾಡು ಮಲ್ಲಿಗೆ ಸಿನಿಮಾದ ಒಂದು ಹಾಡು ಹಾಗೂ ಒಂದು ದೃಶ್ಯದ ಸನ್ನಿವೇಶದಲ್ಲಿ ಸಾಧ್ಯವಾಯಿತು. ಆದರೂ ಕೂಡ ಪೂರ್ತಿ ಪ್ರಮಾಣದ ಸಿನಿಮಾದಲ್ಲಿ ಸುದೀಪ್ ಅವರು ವಿಷ್ಣು ಮಗನಾಗಿ ಅಭಿನಯಿಸಬೇಕು ಎಂದು ಸಹ ಕಿಚ್ಚನ ಅನೇಕ ಅಭಿಮಾನಿಗಳು ಆಸೆಪಟ್ಟಿದರು. ಆದರೆ ಅದೆಲ್ಲ ಈಡೇರುವ ಮುನ್ನವೇ ಬಹಳ ಬೇಗ ಇಂಡಸ್ಟ್ರಿಯ ವಿಷ್ಣು ಎನ್ನುವ ಮಾಣಿಕ್ಯ ಮರೆಯಾಗಿ ಹೋಯಿತು.

ಯಾರು ಅಳಿಸಲಾಗದ ಅಣ್ಣಾವ್ರ ದಾಖಲೆಯನ್ನು ಮಾಲಾಶ್ರೀ ಬ್ರೇಕ್ ಮಾಡಿದ್ದರು. ಹೇಗೆ ಗೊತ್ತಾ.? ಸ್ವತಃ ಅಣ್ಣಾವ್ರೇ ಈಕೆ ಸಾಧನೆ ಮೆಚ್ಚಿದ್ರು.

 

ಕರ್ನಾಟಕ ಕಂಡ ಶ್ರೇಷ್ಠ ಕಲಾವಿದ, ಮೇರು ನಟ, ನಟಸಾರ್ವಭೌಮ, ಸಕಲಕಲವಲ್ಲಭ, ಡಾ. ರಾಜ್ ಕುಮಾರ್ ಅವರು ಅಭಿನಯದ ವಿಷಯದಲ್ಲಿ ಇವರು ಗೌರಿ ಶಂಕರ. ಬರೋಬ್ಬರಿ 250 ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಧೀಮಂತ. ಕನ್ನಡ ಚಲನಚಿತ್ರ ರಂಗ ಇಂದು ಇಂಟರ್ನ್ಯಾಷನಲ್ ಲೆವೆಲ್ ಅಲ್ಲಿ ಸದ್ದು ಮಾಡಲು ಅಡಿಪಾಯ ಹಾಕಿಕೊಂಡು ಅಂತಹ ಮಹಾನ್ ವ್ಯಕ್ತಿ. ಇಂದು ಕನ್ನಡ ಸಿನಿಮಾ ರಂಗ ಎಂದರೆ ಮೊದಲಿಗೆ ಕೇಳಿಬರುವ ಹೆಸರೇ ಡಾ. ರಾಜಕುಮಾರ್. ಸಿನಿಮಾ ವಿಷಯದಲ್ಲಿ ಈತನನ್ನು ಮೀರಿಸುವ ಇನ್ನೊಬ್ಬ ಕಲಾವಿದ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಹುಟ್ಟಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.

ಆ ರೀತಿ ತನ್ನ ಪ್ರತಿಯೊಂದು ಸಿನಿಮಾದಲ್ಲ ವಿಶೇಷತೆಯನ್ನು ಕ್ರಿಯೇಟ್ ಮಾಡಿ ದಾಖಲೆ ಮಾಡುತ್ತಿದ್ದಂತಹ ಮಹಾನ್ ಮೇಧಾವಿ. ಚಿತ್ರರಂಗದಲ್ಲಿ ರಾಜ್ ಕುಮಾರ್ ಅವರು ಮಾಡಿದ ಈ ರೀತಿ ಸಾಧನೆ ಮಾಡುವಂತಹ ಮತ್ತೊಬ್ಬ ಕಲಾವಿದ ಹುಟ್ಟಲು ಸಾಧ್ಯವೇ ಇಲ್ಲ ಎಂದು ಗಟ್ಟಿಯಾಗಿ ಹೇಳಬಹುದು. ಆದರೆ ಡಾಕ್ಟರ್ ರಾಜಕುಮಾರ್ ಅವರು ಮಾಡಿದಂತಹ ಒಂದೇ ಒಂದು ದಾಖಲೆಯನ್ನು ಮತ್ತೊಬ್ಬರು ಬ್ರೇಕ್ ಮಾಡಿದ್ದಾರೆ, ಅದು ಕೂಡ ಕನ್ನಡದ ಒಬ್ಬ ನಟಿ ಅದನ್ನು ಬ್ರೇಕ್ ಮಾಡಿದ್ದಾರೆ. ಕನ್ನಡದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದು ಕರೆಸಿಕೊಂಡಿರುವ ನಟಿ ಮಾಲಾಶ್ರೀ ಅವರು ಒಬ್ಬ ಸ್ಟಾರ್ ನಟನಿಗೆ ಸರಿಸಮವಾದ ಇಮೇಜ್ ಹೊಂದಿದಂತಹ ನಟಿ.

90ರ ದಶಕದಲ್ಲಿ ಇವರನ್ನು ನಟರಿಗೆ ಸಮಾನವಾದ ಸಂಭಾವನೆಯನ್ನು ಕೊಟ್ಟು ಸಿನಿಮಾಗಳಿಗೆ ಹಾಕಿಕೊಳ್ಳಲಾಗುತ್ತಿತ್ತು. ಈ ರೀತಿ ತನ್ನ ಸಿನಿ ಕೆರಿಯರ್ ಆರಂಭದ ದಿನಗಳಲ್ಲೇ ಇಂತಹ ಒಂದು ಛಾಪು ಮೂಡಿಸಿದ್ದ ನಟಿ ಮಾಲಾಶ್ರೀ ಅವರು ಡಾ.ರಾಜಕುಮಾರ್ ಅವರ ಒಂದು ದಾಖಲೆಯನ್ನೇ ಮುರಿದಿದ್ದರು. ಅದೇನೆಂದರೆ ಡಾ.ರಾಜಕುಮಾರ್ ಅವರು 1968ರಲ್ಲಿ ಒಂದೇ ವರ್ಷ 18 ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅದೇ ರೀತಿ ಕನಸಿನ ರಾಣಿ ನಟಿ ಮಾಲಾಶ್ರೀ ಅವರು 1992 ರಲ್ಲಿ ಒಂದೇ ವರ್ಷ 19 ಸಿನಿಮಾಗಳಲ್ಲಿ ನಟಿಸುವ ಮೂಲಕ ಅಣ್ಣಾವ್ರು ಮಾಡಿದ್ದ ಆ ದಾಖಲೆಯನ್ನು ಮುರಿದರು.

ಅಂದಿನಿಂದ ಇಂದಿನವರೆಗೂ ಯಾರು ಸಹ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ಅಲ್ಲದೆ ಸಂಸ್ಕಾರದ ವಿಷಯದಲ್ಲಿ ಅಥವಾ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ ನೋಡುಗರ ಹುಬ್ಬೇರುವಂತೆ ಅಭಿನಯಿಸುವುದರಲ್ಲಿ, ರಾಜಕುಮಾರ್ ಅವರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಪೌರಾಣಿಕ ಪಾತ್ರವಾಗಲಿ, ಐತಿಹಾಸಿಕ ಸಿನಿಮಾವಾಗಲಿ ಅಥವಾ ಸಾಮಾಜಿಕ ಚಿತ್ರಗಳೇ ಆಗಲಿ ಕಣ್ಣಿಗೆ ಕಟ್ಟಿದಂತೆ ಆ ಪಾತ್ರಕ್ಕೆ ಜೀವ ತುಂಬಿ ನೋಡುಗರ ಮನಸ್ಸಿನಲ್ಲಿ ಮುಟ್ಟಲು ಅಣ್ಣಾವ್ರ ಸಮಕ್ಕೆ ಮತ್ಯಾರಿಂದಲೂ ಸಾಧ್ಯವಿಲ್ಲ.

ಆದರೆ ಸಿನಿಮಾಗಳ ಸಂಖ್ಯೆ ವಿಚಾರವಾಗಿ ಮಾತ್ರ ಮಾಲಾಶ್ರೀ ಅವರು ಆ ದಾಖಲೆಯನ್ನು ಮುರಿಯಲು ಸಾಧ್ಯವಾಯಿತು. ಇಷ್ಟೊಂದು ಬೇಡಿಕೆಯಲ್ಲಿದ್ದ ಪ್ರತಿಭಾನ್ವಿತ ನಟಿ ಮಾಲಾಶ್ರೀ ಅವರಿಗೆ ಇತ್ತೀಚೆಗೆ ಅವಕಾಶ ಇಲ್ಲದಿರುವುದು ಅದೃಷ್ಟದ ಆಟ ಎನ್ನಬಹುದು. ಒಟ್ಟಿನಲ್ಲಿ ಈ ದಾಖಲೆಯನ್ನು ಬಹುಶಃ ಇನ್ನೂ ಮುಂದೆ ಸಹ ಯಾವ ಸ್ಟಾರ್ ನಟರಿಗೂ ಮುರಿಯಲು ಸಾಧ್ಯವಿಲ್ಲ ಎನಿಸುತ್ತದೆ. ಯಾಕೆಂದರೆ ಈಗ ಒಂದು ಸಿನಿಮಾಗಾಗಿ ಹಲವು ವರ್ಷಗಳ ಸಮಯ ತೆಗೆದುಕೊಂಡು ತಯಾರು ಮಾಡಿ ಬಿಡುಗಡೆ ಮಾಡುವ ಟ್ರೆಂಡ್ ಸೃಷ್ಟಿಯಾಗಿದೆ. ಹಾಗಾಗಿ ಮತ್ತೊಮ್ಮೆ ಈ ದಾಖಲೆ ಮುರಿಯಲು ಯಾರಿಗೂ ಸಾಧ್ಯವಿಲ್ಲ ಎಂದು ನಿಖರವಾಗಿ ಹೇಳಬಹುದು.

ತಾವೇ ಕಷ್ಟದಲ್ಲಿದ್ರೂ ಕೂಡ ಮನೆಗೆ ಬಂದ ತೆಲಗು ಸ್ಟಾರ್ ನಟ ನಾನಿಗೆ ದುಬಾರಿ ಉಡುಗೊರೆ ಕೊಟ್ಟ ರವಿಚಂದ್ರನ್. ಕನಸುಗಾರನ ದೊಡ್ಡ ಮನಸ್ಸು ಇದು ಎನ್ನುತ್ತಿರುವ ನೆಟ್ಟಿಗರು.

 

 

ಕ್ರೇಜಿಸ್ಟಾರ್ ರವಿಚಂದ್ರನ್ ಹೆಸರಿಗೆ ತಕ್ಕ ಹಾಗೆ ಸಿನಿಮಾ ಬಗ್ಗೆ ವಿಶೇಷ ಕ್ರೇಝ್ ಹೊಂದಿರುವ ಸ್ಟಾರ್. ಆ ಕಾರಣಕ್ಕಾಗಿ ಇಡೀ ಇಂಡಸ್ಟ್ರಿ ಇವರನ್ನು ಕನಸುಗಾರ ಎಂದು ಕೂಡ ಕರೆಯುತ್ತಾರೆ. ರವಿಚಂದ್ರನ್ ಒಬ್ಬ ಅದ್ಭುತ ಕಲಾವಿದ ಇವರಿಗೆ ಲವರ್ ಬಾಯ್ ಇಮೇಜ್, ಕಾಮಿಡಿ ಸೆನ್ಸ್ ಎಲ್ಲವೂ ಸಹ ಇದೆ. ಇದರೊಂದಿಗೆ ಇವರೆಂತಹ ನಿರ್ದೇಶಕ ಎನ್ನುವುದನ್ನು ಪ್ರೇಮಲೋಕ, ರಣಧೀರ ಇಂತಹ ಸಿನಿಮಾಗಳ ಕಾಲದಿಂದಲೂ ನೋಡಿದ್ದೇವೆ.

ನಿರ್ಮಾಪಕ, ಸಂಗೀತ ನಿರ್ದೇಶಕ ಹಾಗೆಯೇ ಸಿನಿಮಾ ಭವಿಷ್ಯವನ್ನು ಸಿನಿಮಾ ನೋಡಿದ ಘಳಿಗೆಯಲ್ಲೇ ಅಳೆಯಬಲ್ಲ ಅನುಭವಿ ಎಂದು ಹೇಳಬಹುದು. ಈ ರೀತಿ ಸಿನಿಮಾ ಮೇಧಾವಿ ಆಗಿರುವ ಇವರನ್ನು ಕನ್ನಡ ಇಂಡಸ್ಟ್ರಿ ಮಾತ್ರ ಅಲ್ಲದೆ ಪರಭಾಷಿಕ ನಿರ್ದೇಶಕರು ಮತ್ತು ನಟರು ಸಹ ತಮ್ಮ ಚಿತ್ರದ ಬಗ್ಗೆ ವಿಮರ್ಶೆ ಮಾಡಲು ಕೇಳಿಕೊಳ್ಳುತ್ತಾರೆ. ಇದೇ ಕಾರಣಕ್ಕಾಗಿ ತೆಲುಗು ನಟ ನಾಣಿ ಅವರು ರವಿಚಂದ್ರನ್ ಅವರ ಮನೆಗೆ ಬಂದಿದ್ದಾರೆ.

ಇಂದು ಪ್ಯಾನ್ ಇಂಡಿಯಾ ಸಿನಿಮಾ ಟ್ರೆಂಡ್ ಎಲ್ಲಾ ಶುರುವಾದ ಮೇಲೆ ಇಂಡಸ್ಟ್ರಿ ಇಂಡಸ್ಟ್ರಿಗಳ ನಡುವೆ ಇಲ್ಲ ಯಾವ ಭೇದವು ಇಲ್ಲ. ಇಡೀ ಭಾರತವೇ ಒಂದು ಇಂಡಸ್ಟ್ರಿ ಅನ್ನುವಂತೆ ಭಾಸವಾಗುತ್ತಿದೆ ಎಂದರು ತಪ್ಪಲ್ಲ. ಹೀಗಾಗಿ ಎಲ್ಲಾ ಭಾಷೆಗಳಿಗೂ ಹತ್ತಿರವಾಗಿರುವ ರವಿಚಂದ್ರನ್ ಅವರನ್ನು ತಮ್ಮ ದಸರಾ ಸಿನಿಮಾ ಪ್ರಯುಕ್ತ ನಾನಿ ಭೇಟಿ ಆಗಿದ್ದಾರೆ. ದಸರಾ ಸಿನಿಮಾ ಟಾಲಿವುಡ್ ನ ಬಹು ನಿರೀಕ್ಷಿತ ಚಿತ್ರ ಆಗಿದ್ದು, ಇದು ಸಹ ಒಂದು ರಕ್ತ ಚರಿತ್ರೆಯ ಬಗ್ಗೆ ಬೆಳಕು ಚೆಲ್ಲಲು ಬರುತ್ತಿದೆ.

ಕೀರ್ತಿ ಸುರೇಶ್, ನಾನಿ ಜೊತೆ ಕನ್ನಡದವರಾದ ನಾಗಿಣಿ ಧಾರಾವಾಹಿ ಮತ್ತು ದಿಯಾ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅವರು ಸರಿಸಾಮನಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ಕನ್ನಡಿಗರು ಖುಷಿಪಡುವ ವಿಷಯ. ಇದೇ ಮಾರ್ಚ್ 30ರಂದು ದೇಶದಾದ್ಯಂತ ದಸರಾ ಚಿತ್ರ ಬಿಡುಗಡೆ ಆಗುತ್ತಿದೆ. ಹಾಗಾಗಿ ಇಡೀ ದಸರಾ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಓಡಾಡುತ್ತಿದೆ. ನಾಯಕ ನಟ ನಾನಿ ಸಹಾ ಬೆಂಗಳೂರಿನಲ್ಲಿರುವ ರವಿಚಂದ್ರನ್ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಅವರು ರವಿಚಂದ್ರನ್ ಜೊತೆ ಕುಳಿತು ಮಾತನಾಡುತ್ತಿರುವುದು, ಕೊನೆಗೆ ರವಿಚಂದ್ರನ್ ಅವರಿಂದ ಉಡುಗೊರೆ ಪಡೆದಿರುವುದು ಈ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಸಮಯದಲ್ಲಿ ದೀಕ್ಷಿತ್ ಶೆಟ್ಟಿ ಕೂಡ ನಾನಿ ಅವರಿಗೆ ಜೊತೆಯಾಗಿದ್ದಾರೆ. ರವಿಚಂದ್ರನ್ ಅವರು ಇತ್ತೀಚೆಗೆ ತಮ್ಮ ಸ್ವಂತ ಮನೆಯನ್ನು ಮಾರಿ ಬಾಡಿಗೆ ಫ್ಲ್ಯಾಟ್ ಅಲ್ಲಿ ಇದ್ದಾರೆ ಎಲ್ಲರಿಗೂ ಗೊತ್ತಿರುವ ವಿಷಯ ಇನ್ನು ಸಹ ಆತ ಕೊಡು ಗೈ ಆಗಿಯೇ ಉಳಿದಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಆಕಾಶದ ನೋಡದ ಕೈ ಎಂದು ರವಿಮಾಮನನ್ನು ಕರೆಯಬಹುದು. ಇವರು ಹುಟ್ಟಿದ್ದು ರಾಯಲ್ ಆಗಿ, ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು ರಾಯಲ್ ಆಗಿ, ಈಗ ಬದುಕಿನ ಇಷ್ಟು ಸುಖ-ದುಃಖ ಲಾಭ-ನಷ್ಟ ಕಂಡ ಮೇಲೂ ಸಹ ಬದುಕುತ್ತಿರುವುದು ಕೂಡ ರಾಯಲ್ ಆಗಿಯೇ. ಅದೇ ಕಾರಣಕ್ಕಾಗಿ ಮನೆಗೆ ಬಂದ ಈ ವಿಶೇಷ ಅತಿಥಿಗಾಗಿ ರಾಯಲ್ ಆದ ಒಂದು ಉಡುಗೊರೆಯನ್ನು ಕೂಡ ಕೊಟ್ಟಿದ್ದಾರೆ. ಜೊತೆಗೆ ಚಿತ್ರತಂಡಕ್ಕೆ ಶುಭವಾಗಲಿ ಎಂದು ಮನಸಾರೆ ಹರಸಿ ಕಳುಹಿಸಿದ್ದಾರೆ. ನಾವು ಸಹ ದಸರಾ ಚಿತ್ರಕ್ಕೆ ಶುಭವಾಗಲಿ ಎಂದು ಹರಸೋಣ.

ಗಜ ಸಿನಿಮಾ ಬಿಡುಗಡೆ ಸಮಯದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 3 ಸ್ಟಾರ್ ಗಳ ಸಿನಿಮಾಗಳು ಪೈಪೋಟಿ ಕೊಟ್ಟು ಬಿಡುಗಡೆ ಆಗಿದ್ದವು. ಆದ್ರೆ ಕೊನೆಗೆ ಗೆದ್ದ ಸಿನಿಮಾ ಯಾವ್ದು ಗೊತ್ತ.?

ಗಜ ಎನ್ನುವ ಕನ್ನಡ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನವ್ಯನಾಯರ್ ಅವರ ಮುಖ್ಯ ಭೂಮಿಯಲ್ಲಿ 2008ರಲ್ಲಿ ಬಿಡುಗಡೆಯಾದ ರೋಮ್ಯಾಂಟಿಕ್ ಆಕ್ಷನ್ ಚಿತ್ರ. ದೇವರಾಜ್, ಶೋಭರಾಜ್, ಗೌರವ್, ಸಂಗೀತ, ಶ್ರೀನಾಥ್, ಮಾಸ್ಟರ್ ಹಿರಣ್ಣಯ್ಯ, ಕೋಮಲ್ ಇನ್ನು ಮುಂತಾದ ಅನೇಕ ದಿಗ್ಗಜರುಗಳು ಒಂದಾಗಿ ಮಾಡಿದ್ದ ಮನೆ ಮಂದಿಯಲ್ಲ ಒಟ್ಟಾಗಿ ಕುಳಿತು ನೋಡುವಂತಹ ಕೌಟುಂಬಿಕ ಚಿತ್ರ.

ಈ ಚಿತ್ರ ಬಿಡುಗಡೆಯಾಗಿ ಇಷ್ಟು ವರ್ಷಗಳಾಗಿದ್ದರೂ ಕೂಡ ಈ ಸಿನಿಮಾಗಳ ಹಾಡು ಎಂದಿಗೂ ಜನರ ನಂಬರ್ ಒನ್ ಫೇವರೆಟ್. ಸಿನಿಮಾದಲ್ಲಿದ್ದ ಪ್ರತಿ ಹಾಡು ಕೂಡ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿ ಸಿನಿಮಾವನ್ನು ಗೆಲ್ಲಿಸಿತ್ತು. ಆದರೆ ಗಜ ಸಿನಿಮಾ ರಿಲೀಸ್ ಆದ ವೇಳೆಯೇ ಕನ್ನಡದ ಇನ್ನೂ ಮೂರು ಸ್ಟಾರ್ ಹೀರೋಗಳ ಸಿನಿಮಾಗಳು ಕೂಡ ಬಿಡುಗಡೆ ಆಗಿ ಅದಕ್ಕೆ ಟಫ್ ಫೈಟ್ ನೀಡಿದ್ದವು.

ಆಗ ತಾನೇ ಕರ್ನಾಟಕದಲ್ಲಿ ಗೋಲ್ಡನ್ ಸ್ಟಾರ್ ಎಂದು ಹವಾ ಕ್ರಿಯೇಟ್ ಮಾಡಿದ್ದ ಗಣೇಶ್ ಅವರ ಗಾಳಿಪಟ ಚಿತ್ರ ರಿಲೀಸ್ ಆಗಿತ್ತು. ಗಣೇಶ್ ಮತ್ತು ಯೋಗರಾಜ್ ಭಟ್ ಅವರ ನಿರ್ದೇಶನದ ಎಲ್ಲಾ ಚಿತ್ರಗಳು ಕೂಡ ಗೆಲ್ಲುತ್ತಿದ್ದ ಕಾರಣ ಗಾಳಿಪಟ ಸಿನಿಮಾ ಮೇಲೂ ಸಹ ಭಾರಿ ನಿರೀಕ್ಷೆ ಇತ್ತು. ಸಿನಿಮಾ ಕೂಡ ಹೊಸತನ ಇದ್ದ ಕಾರಣ ಹೆಚ್ಚಿನ ಜನರಿಂದ ಆಕರ್ಷಣೆ ಪಡೆದಿತ್ತು.

ಜೊತೆಗೆ ಕಿಚ್ಚ ಸುದೀಪ್ ಮತ್ತು ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರ ಕಾಂಬಿನೇಷನ್ನ ನಾಲ್ಕನೇ ಚಿತ್ರ ಜಸ್ಟ್ ಮಾತ್ ಮಾತಲ್ಲಿ ಸಹ ಅದೇ ವೇಳೆ ರಿಲೀಸ್ ಆಗಿತ್ತು. ಸಿನಿಮಾ ಬಿಡುಗಡೆ ಮುನ್ನವೇ ಸಿನಿಮಾದ ಪ್ರಮುಖ ಆಕರ್ಷಣೆ ರಘು ದೀಕ್ಷಿತ್ ಅವರ ಸಂಗೀತಾ ನಿರ್ದೇಶನದ ಹಾಡುಗಳು ಎಲ್ಲರಿಗೂ ಮುಟ್ಟಿದ್ದವು. ಜಸ್ಟ್ ಮಾತ್ ಮಾತಲ್ಲಿ ಸಹ ಒಂದು ಪ್ರಯೋಗಾತ್ಮಕ ಚಿತ್ರ ಆಗಿದ್ದ ಕಾರಣ ಸಿನಿಮಾ ಮೇಲೆ ಜನರಿಗೆ ಬಾರಿ ನಿರೀಕ್ಷೆ ಇತ್ತು.

ಜೊತೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಿಂದಾಸ್ ಸಿನಿಮಾ ಕೂಡ ಅದೇ ಟೈಮ್ ಅಲ್ಲಿ ರಿಲೀಸ್ ಆಗಿತ್ತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಹನ್ಸಿಕಾ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದ ಅಂಡರ್ ಗ್ರೌಂಡ್ ಕಥೆಯ ಎಳೆ ಹೊಂದಿದ್ದ ಪ್ರೇಮ ಕಥೆ ಬಿಂದಾಸ್ ಸಿನಿಮಾ ಸಹ ಗಜ ಸಿನಿಮಾ ಬಿಡುಗಡೆ ಆದ ವೇಳೆಗೆ ಬಿಡುಗಡೆ ಆಗಿ ಗಜ ಚಿತ್ರಕ್ಕೆ ಸವಾಲಾಗಿತ್ತು. ಆದರೂ ಕೂಡ ಈ ಎಲ್ಲಾ ಸಿನಿಮಾಗಳ ಪೈಪೋಟಿ ನಡೆವೆ ಗಜ ಸಿನಿಮಾವೇ ಹೆಚ್ಚು ಗಳಿಕೆ ಮಾಡಿ, ಗಲ್ಲಾ ಪೆಟ್ಟಿಗೆ ಉಡೀಸ್ ಮಾಡಿತ್ತು. ಇದೇ ಕಾರಣಕ್ಕೆ ಅನಿಸುತ್ತದೆ ದರ್ಶನ್ ಅವರನ್ನು ಇಂದಿಗೂ ಬಾಕ್ಸ್ ಆಫೀಸ್ ಸುಲ್ತಾನ ಎಂದು ಕರೆಯುವುದು.

ಈ ವಿಷಯವನ್ನು ಗಜ ಚಿತ್ರದ ನಿರ್ದೇಶಕರಾದ ಕೆ.ಮಾದೇಶ್ ಅವರೇ ಒಂದು ಸಂದರ್ಶನದಲ್ಲಿ ಬಹಿರಂಗವಾಗಿ ಮಾತನಾಡಿದ್ದಾರೆ. ಇದರ ವಿಡಿಯೋ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಡಿ ಬಾಸ್ ಬಗ್ಗೆ, ಡಿ ಬಾಸ್ ಸಿನಿಮಾ ಬಗ್ಗೆ ಹೇಳಿರುವ ಈ ಮಾತುಗಳನ್ನು ಕೇಳಿ ದಚ್ಚು ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಸದಾ ದರ್ಶನ್ ಅವರಿಗೆ ಇಂತಹ ಗೆಲುವುಗಳು ಜೊತೆಯಾಗಲಿ, ಕನ್ನಡಿಗರಿಗೆ ಇನ್ನಷ್ಟು ಒಳ್ಳೆ ಒಳ್ಳೆ ಸಿನಿಮಾಗಳು ದರ್ಶನ್ ಅವರ ಕಡೆಯಿಂದ ಸಿಗುವಂತಾಗಲಿ ಎಂದು ಕನ್ನಡ ಸಿನಿಮಾ ಅಭಿಮಾನಿಗಳಾಗಿ ನಾವು ಹರಸೋಣ.

ಅಪ್ಪು & ದಚ್ಚು ಕೊನೆಯದಾಗಿ ಮಾಡಿದ ಭಭ್ರುವಾಹನ ನಾಟಕದ ಸುಂದರ ಕ್ಷಣ ಅಪ್ಪು & ದಚ್ಚು ಅಭಿಮಾನಿಗಳು ಈ ದೃಶ್ಯವನ್ನು ಒಮ್ಮೆಯಾದರೂ ನೋಡಲೇಬೇಕು.

ಒಂದು ವೇದಿಕೆಯಲ್ಲಿ ಸಿನಿಮಾ ನಟರು ಸೇರುತ್ತಾರೆ ಎಂದರೆ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಅದರಲ್ಲೂ ಸ್ಟಾರ್ ನಟರಿಬ್ಬರೂ ಒಂದೇ ವೇದಿಕೆಯಲ್ಲಿ ಜೊತೆ ಜೊತೆಗೆ ಹೆಜ್ಜೆ‌ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸಿದರೆ, ಇನ್ನೂ ಕೆಲವರು ಸ್ಟೇಜ್ ಮೇಲೆ ಡೈಲಾಗ್ ಗಳನ್ನು ಹೇಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಇದೀಗ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಹಾಗೂ sandal wood ನ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರು ಡಾ. ರಾಜ್ ಅವರು ದ್ವಿಪಾತ್ರದಲ್ಲಿ ನಟಿಸಿರುವ ಚಿತ್ರದ ಸಂಭಾಷಣೆಯೊಂದಕ್ಕೆ ವೇದಿಕೆ ಮೇಲೆ ಪಾತ್ರಧಾರಿಗಳಾಗುವ ಮೂಲಕ ಪಾತ್ರ ನಿರ್ವಹಿಸುವ ದೃಶ್ಯಾವಳಿ ವೈರಲ್ ಆಗಿ ಮೆಚ್ಚುಗೆ ಪಡೆಯುತ್ತಿದೆ.

ಹೌದು ವರನಟ ಡಾ. ರಾಜಕುಮಾರ್ ಅವರು ದ್ವಿಪಾತ್ರದಲ್ಲಿ ಅಭಿನಯಿಸಿದ ಭಬ್ರುವಾಹನ ಚಲನಚಿತ್ರದ ಕ್ಲೈಮ್ಯಾಕ್ಸ್ ಭಾಗದ ಯಾರು ಬಲ್ಲರು ನಿನ್ನ ಭುಜಬಲದ ಪರಾಕ್ರಮವ ಎಂಬ ಸನ್ನಿವೇಶವನ್ನು ವೇದಿಕೆ ಮೇಲೆ ಪ್ರದರ್ಶಿಸಿದ್ದಾರೆ. ಕನ್ನಡ ಚಿತ್ರರಂಗದ ಸುವರ್ಣ ಮಹೋತ್ಸವ ವೇದಿಕೆಯಲ್ಲಿ ದರ್ಶನ್ ಅರ್ಜುನನಾಗಿ, ಅಪ್ಪು ಬಭ್ರುವಾಹನನಾಗಿ ವೇದಿಕೆ ಏರಿದ್ದರು ಆ ಸನ್ನಿವೇಶದಲ್ಲಿ ನಟ ದರ್ಶನ ಅರ್ಜುನನ ಪಾತ್ರವನ್ನು ನಿರ್ವಹಿಸಿದರೆ.

ಅಪ್ಪು ಭಬ್ರುವಾಹನನ ಪಾತ್ರ ನಿರ್ವಹಣೆ ಮಾಡುವ ಮೂಲಕ ಒಬ್ಬರಿಗೊಬ್ಬರು ತಿರುಗೇಟು ನೀಡುವ ಮೂಲಕ ಭರ್ಜರಿ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡಿದ್ದರು ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಸ್ಯಾಂಡಲ್‌ವುಡ್‌ನ ಸೂಪರ್‌ ಸ್ಟಾರ್‌ಗಳಾದ ಪುನೀತ್ ಮತ್ತು ದರ್ಶನ್ ಜತೆಯಾಗಿ ಅಭಿನಯಿಸಿದ ಚಿತ್ರ ಒಂದೇ ಒಂದು. ಅದು ಪುನೀತ್ ಅಭಿನಯದ ‘ಅರಸು’ ಚಿತ್ರದಲ್ಲಿ ದರ್ಶನ್ ಕೆಲವೇ ನಿಮಿಷಗಳ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಟ ದರ್ಶನ್ ಹಾಗೂ ಅಪ್ಪು ಕೂಡ ಒಳ್ಳೆ ಸ್ನೇಹಿತರು. ಪುನೀತ್ ನಟನೆಯ ‘ಅರಸು’ ಚಿತ್ರದಲ್ಲಿ ಸಂಭಾವನೆ ಇಲ್ಲದೇ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

ಡಾ. ರಾಜ್‌ಕುಮಾರ್ ಫ್ಯಾಮಿಲಿಗೂ ತೂಗುದೀಪ ಶ್ರೀನಿವಾಸ್ ಫ್ಯಾಮಿಲಿಗೂ ಆತ್ಮೀಯ ಒಡನಾಟ ಇದೆ. ಅಣ್ಣಾವ್ರ ಸಿನಿಮಾಗಳಲ್ಲಿ ತೂಗುದೀಪ ಶ್ರೀನಿವಾಸ್ ಆಸ್ಥಾನ ಕಲಾವಿದರರಾಗಿದ್ದರು. 80ರ ದಶಕದ ಆರಂಭದಲ್ಲಿ ಡಾ. ರಾಜ್‌ಕುಮಾರ್ ಮಗಳು ಲಕ್ಷ್ಮಿ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ನಟ ದರ್ಶನ್ ಕೂಡ ಭಾಗಿ ಆಗಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಫೋಟೊದಲ್ಲಿ ದರ್ಶನ್, ಪುನೀತ್, ಲಕ್ಷ್ಮಿ ಅವರ ಜೊತೆಗೆ ಪುಟಾಣಿ ವಿಜಯ್ ರಾಘವೇಂದ್ರ ಅವರನ್ನು ಕೂಡ ನೋಡಬಹುದು.

ಸದ್ಯಕ್ಕೆ ಎಲ್ಲೆಡೆ ಫ್ಯಾನ್ ವಾರ್ ನಡೆಯುತ್ತಿರುವುದನ್ನು ನೀವು ಕಾಣಬಹುದಾಗಿದೆ ಆದರೆ ಇದಕ್ಕಿಂತ ಮುಂಚೆ ಅಪ್ಪು ಅವರು ಬದುಕಿದ್ದಾಗ ದರ್ಶನ್ ಅವರ ಜೊತೆ ಎಷ್ಟು ಒಡನಾಟ ಇತ್ತು ಎಂಬುವುದು ಅವರಿಗೆ ಅಷ್ಟೇ ತಿಳಿದಿತ್ತು. ಸದ್ಯಕ್ಕೆ ಅಪ್ಪು ಮತ್ತು ದರ್ಶನ್ ಅಭಿಮಾನಿಗಳಿಗಾಗಿ ಇವರಿಬ್ಬರೂ ನಟಿಸಿದಂತಹ ಬಬ್ರುವಾಹನ ಸಿನಿಮಾದ ನಾಟಕದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಇವರಿಬ್ಬರ ನಡುವೆ ಎಷ್ಟು ಅವಿನಾಭವನ ಸಂಬಂಧವಿತ್ತು ಎಂಬುದನ್ನು ಇದು ಎತ್ತಿ ತೋರಿಸುತ್ತದೆ ದಚ್ಚು ಮತ್ತು ಅಪ್ಪು ಇಬ್ಬರು ಎಷ್ಟು ಅಮೋಘವಾಗಿ ಅಭಿನಯಿಸಿದ್ದರು ಎಂಬುವುದು ತಿಳಿಯುತ್ತದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮೂಲಕ ತಿಳಿಸಿ.