Home Blog Page 219

ನಿವೇದಿತಾ ಗೌಡ ಜೊತೆ ಹೆಜ್ಜೆ ಹಾಕಿದ ನಟಿ ಶೃತಿ. ಈ ಕ್ಯೂಟ್ ವಿಡಿಯೋ ಒಮ್ಮೆ ನೋಡಿ.

 

ವೈರಲ್ ಆಗುತ್ತಿದೆ ನಿವೇದಿತಾ ಗೌಡ ಜೊತೆ ನಟಿ ಶ್ರುತಿ ಮಾಡಿದ ರೀಲ್ಸ್ ಕಿರುತೆರೆ ಕ್ವೀನ್ ನಿವೇದಿತ ಗೌಡ ಅವರು ಈಗ ಕರ್ನಾಟಕದಾದ್ಯಂತ ಪಾಪುಲರ್ ಫೇಸ್. ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಸದಾ ಒಂದಲ್ಲಾ ಒಂದು ಕಾರ್ಯಕ್ರಮದ ಮೂಲಕ ದರ್ಶನ ಕೊಡುವ ನಿವೇದಿತ ಗೌಡ ಅವರು ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯ ಗಿಚ್ಚ ಗಿಲಿ ಗಿಲಿ ಸೀಸನ್ 2 ಅಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಮನೆ ಮನೆ ಮಾತಾಗಿದ್ದ ನಿವೇದಿತಾ ಗೌಡ ಅವರು ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಮತ್ತು ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿದ್ದಾರೆ.

ಇದಾದ ಬಳಿಕ ಕಲರ್ಸ್ ಕನ್ನಡ ವಾಹಿನಿಯ ರಾಜ ರಾಣಿ ಮತ್ತು ಗಿಚ್ಚಗಿಲಿಗಿಲಿ ಸೀಸನ್ 1ರ ಕಂಟೆಸ್ಟೆಂಟ್ ಆಗಿ ತಮ್ಮ ವೇಷಭೂಷಣ, ಮಾತುಕತೆ, ಹಾಸ್ಯ ಇತ್ಯಾದಿಗಳ ಮೂಲಕ ಪ್ರೇಕ್ಷಕರ ಮನ ಗೆದ್ದು ಅವರಿಗೆ ಹತ್ತಿರವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿರುವ ಇವರು ಪ್ರತಿದಿನ ಒಂದು ಪೋಸ್ಟ್ ಅಥವಾ ವಿಡಿಯೋ ಹಾಕುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ತಮ್ಮದೇ ಒಂದು youtube ಚಾನೆಲ್ ಕೂಡ ಓಪನ್ ಮಾಡಿರುವ ಇವರು ಅಲ್ಲೂ ಸಹ ಹೊಸ ಹೊಸ ವಿಷಯಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ಜೊತೆಗೆ ಇನ್ಸ್ಟಾಗ್ರಾಮ್ ಅಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್ ಗಳನ್ನು ಹೊಂದಿರುವ ಇವರು ಸದಾ ಅವರ ಜೊತೆ ಟಚ್ ಅಲ್ಲಿ ಇರುತ್ತಾರೆ. ಇದುವರೆಗೆ ಚಂದನ್ ಶೆಟ್ಟಿ ಜೊತೆ ಮತ್ತು ತಾಯಿ ಜೊತೆ ನಿವೇದಿತಾ ಗೌಡ ಅವರು ರೀಲ್ಸ್ ಮಾಡುತ್ತಿದ್ದರು. ಹಲವಾರು ಬಾರಿ ಇವರು ಮಾಡಿರುವ ರೀಲ್ಸ್ ಗಳು ಮತ್ತು ಆಡಿರುವ ಮಾತುಗಳು ಟ್ರೋಲ್ ಕೂಡ ಆಗಿವೆ.

ಆದರೆ ಯಾವುದಕ್ಕೂ ಕೇರ್ ಮಾಡದೆ ನಟಿ ತಮ್ಮ ಬ್ಯುಸಿ ಶೂಟಿಂಗ್ ಶೆಡ್ಯೂಲ್ ನಡುವೆಯೂ ಸಹ ಕಂಟೆಸ್ಟೆಂಟ್ಗಳ ಜೊತೆ ಸೇರಿ ರೀಲ್ಸ್ ಮಾಡುವುದನ್ನು ಮುಂದುವರಿಸಿದ್ದಾರೆ. ಇತ್ತೀಚಿಗೆ ಗಿಚ್ಚ ಗಿಲಿಗಿಲಿ ಸೀಸನ್ 2 ಕಾರ್ಯಕ್ರಮದಲ್ಲಿ ನಿರೂಪಕರಾದ ನಿರಂಜನ್ ದೇಶಪಾಂಡೆ ಮತ್ತು ನಟಿ ಶ್ರುತಿ ಜೊತೆ ನಿವೇದಿತ ಗೌಡ ಅವರು ರೀಲ್ಸ್ ಮಾಡಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಿವೇದಿತ ಗೌಡ ಅವರು ಚರ್ಮ ಬಣ್ಣದ ಸ್ಕರ್ಟ್ ನಲ್ಲಿ ಹೈಸ್ಕೂಲ್ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ‌.

ಎಂದಿನಂತೆ ನಿರಂಜನ್ ದೇಶಪಾಂಡೆ ಅವರು ಸೂಟು ಬೂಟು ಹಾಕಿಕೊಂಡು ಆಂಕರ್ ಗೆಟಪ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಶಃ ಇದು ಶೂಟಿಂಗ್ ನಡುವೆ ಬ್ರೇಕ್ ಸಿಕ್ಕ ಸಮಯದಲ್ಲಿ ಮಾಡಿರುವ ರೀಲ್ಸ್ ಆಗಿರಬಹುದು. ನಟಿ ಶೃತಿ ಕೂಡ ಜೊತೆಯಾಗಿದ್ದು ಕಡು ನೀಲಿ ಬಣ್ಣದ ಉದ್ದನೆಯ ಗೌನ್ ಅಲ್ಲಿ ದೇವಲೋಕದಿಂದ ಇಳಿದು ಬಂದ ಅಪ್ಸರೆಯ ರೀತಿ ನಟಿ ಶೃತಿ ಅವರು ಮಿಂಚುತ್ತಿದ್ದಾರೆ.

ಮೂವರು ಸೇರಿ ಒಂದು ಮ್ಯೂಸಿಕ್ ಗೆ ರೀಲ್ಸ್ ಮಾಡಿದ್ದಾರೆ. ಮೊದಲಿಗೆ ನಿವೇದಿತ ಗೌಡ ಅವರು ಒಂದು ಸ್ಟೆಪ್ ಅನ್ನು ಮಾಡಿ ತೋರಿಸಿಕೊಡುತ್ತಾರೆ, ನಂತರ ಶ್ರುತಿ ಅವರು ಅದನ್ನು ಫಾಲೋ ಮಾಡುತ್ತಾರೆ, ನಿರಂಜನ್ ದೇಶಪಾಂಡೆ ಅವರು ಫಾಲೋ ಮಾಡುತ್ತಾರೆ. ಹಾಗೆ ಪ್ರತಿ ಬಾರಿ ಹಾಗೂ ನಿವೇದಿತಾ ಗೌಡ ಅವರು ಮಾಡಿ ತೋರಿಸಿದ ಸ್ಟೆಪ್ಗಳನ್ನು ಮಾಡುತ್ತಾ ಮೂರು ಜನರು ಕೂಡ ಮ್ಯೂಸಿಕ್ ತಕ್ಕ ಹಾಗೆ ಮೈಕುಣಿಸಿ ನರ್ತಿಸಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಕಮೆಂಟ್ಗಳು ಶ್ರುತಿ ಅವರ ಬಗ್ಗೆ ಹರಿದು ಬಂದಿದ್ದು ನೋಡುಗರೆಲ್ಲಾ ಈ ಸ್ಟೆಪ್ಗಳನ್ನು ಸಕ್ಕತ್ ಎಂಜಾಯ್ ಮಾಡಿದ್ದಾರೆ. ನೀವು ಸಹ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ಏನೇನೋ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

https://www.instagram.com/reel/Cqm2mOEDefU/?igshid=YmMyMTA2M2Y=

 

ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾದ್ರು ನಟಿ ಸುಕೃತ ಹುಡುಗ ಯಾರು ಗೊತ್ತ.?

 

ಸಿಡ್ನಿ ಹುಡುಗನ ಜೊತೆ ನಟಿ ಸುಕೃತ ಮದುವೆ ಫಿಕ್ಸ್, ಡಿಸೆಂಬರ್ ಅಂತ್ಯದಲ್ಲಿ ಮದುವೆ ಗ್ಯಾರಂಟಿ. ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಹಿಟ್ ಸೀರಿಯಲ್ ಆದ ಲಕ್ಷಣ ಧಾರಾವಾಹಿಯಲ್ಲಿ ಶ್ವೇತಾ ಪಾತ್ರದಲ್ಲಿ ಮಿಂಚುತ್ತಿರುವ ಸುಕೃತ ನಾಗ್ ಕಿರುತೆರೆಗೆ ಹೊಸಬರೇನಲ್ಲ. ಅಗ್ನಿಸಾಕ್ಷಿ ಎನ್ನುವ ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ ಪ್ರಸಾರವಾಗಿದ್ದ ಮೇಘಾ ಧಾರವಾಹಿಯಲ್ಲಿ ನಾಯಕ ನಟನ ತಂಗಿಯಾಗಿ ಮುಖ್ಯದೊಂದು ರೋಲ್ನಲ್ಲಿ ಮಿಂಚಿ ಹೆಸರು ಪಡೆದಿದ್ದ ಈಕೆ ಈಗ ಶ್ವೇತ ಎನ್ನುವ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಲಕ್ಷಣ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಲಕ್ಷಣ ಧಾರಾವಾಹಿಯಲ್ಲಿ ನಾಯಕ ನಟ ಭೂಪತಿ ನಕ್ಷತ್ರಗಳನ್ನು ಮದುವೆ ಆಗಿದ್ದರೂ ಕೂಡ ಭೂಪತಿಯೇ ಬೇಕು ಎಂದು ಹಠ ಹಿಡಿದಿರುವ ಶ್ವೇತ ನಿಜ ಜೀವನದಲ್ಲಿ ಸಿಡ್ನಿ ಹುಡುಗನ ಜೊತೆ ಮದುವೆಯಾಗಿ ಆಸ್ಟ್ರೇಲಿಯಕ್ಕೆ ಹಾರುವ ತರಾತುರಿಯಲಿದ್ದಾರೆ. ಈ ಬಗ್ಗೆ ಸಂಪೂರ್ಣ ವಿಷಯವನ್ನು ಅವರೇ ರಿವೀಲ್ ಮಾಡಿದ್ದಾರೆ.

ಸಿನಿಮಾ ಹೀರೋಯಿನ್ಸ್ ಹಾಗೂ ಸೀರಿಯಲ್ ನಟಿಯರಿಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೊಂದು ಅಕೌಂಟ್ ಖಂಡಿತ ಇರುತ್ತದೆ. ಅಲ್ಲಿ ಲಕ್ಷಾಂತರ ಅಭಿಮಾನಿಗಳು ಅವರನ್ನು ಫಾಲೋ ಮಾಡುತ್ತಿರುತ್ತಾರೆ. ಹಾಗೆಯೇ ಕೆಲವರು youtube ಚಾನಲ್ ಸಹ ಹೊಂದಿರುತ್ತಾರೆ. ಅದರಲ್ಲಿ ನಟಿ ಸುಕೃತ ಕೂಡ ಒಬ್ಬರು ತಮ್ಮ ದೈನಂದಿಕ ಜೀವನದ ಆಗು ಹೋಗುಗಳ ಜೊತೆ ಪ್ರಮುಖ ವಿಷಯಗಳನ್ನು ತಮ್ಮ ಸೀರಿಯಲ್ ಹಾಗೂ ಸಿನಿಮಾ ಕೆರಿಯರ್ಗೆ ಸಂಬಂಧಪಟ್ಟ ಮುಖ್ಯ ವಿಷಯಗಳನ್ನು ಅಲ್ಲಿ ತಮ್ಮ ಅಭಿಮಾನಿಗಳ ಜೊತೆ ಅವರು ಹಂಚಿಕೊಳ್ಳುತ್ತಾರೆ.

ಹೀಗೆ ಬದುಕಿನ ಭಾಗವಾಗಿರುವ ಅಭಿಮಾನಿಗಳ ಜೊತೆ ಕಷ್ಟ ಸುಖ ಎಲ್ಲವನ್ನು ಹಂಚಿಕೊಳ್ಳುವ ಅವರು ಜೀವನದ ವಿಶೇಷ ಸಂಗತಿಗಳ ಬಗ್ಗೆ ವಿಶೇಷವಾಗಿ ರೀವಿಲ್ ಮಾಡುವುದು ಮಾಮೂಲಿ. ಈಗ ಏಪ್ರಿಲ್ ಒಂದರಂದು ನಟಿ ಸುಕೃತಾ ನಾಗ್ ಯುಟ್ಯೂಬ್ ಚಾನೆಲ್ ನಲ್ಲಿ ತನ್ನ ಸ್ನೇಹಿತೆಯರಿಗೆ ಕರೆ ಮಾಡಿ ತಮ್ಮ ಮದುವೆ ನಿಗದಿ ಆಗಿರುವ ಸುದ್ದಿ ಹೇಳಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ಸುಕೃತ ನಾಗ್ ಅವರು ಏಕಾಏಕಿ ತಮ್ಮ ಸ್ನೇಹಿತೆಯರಾದ ನಕ್ಷತ್ರ ಪಾತ್ರಧಾರಿ ವಿಜಯಲಕ್ಷ್ಮಿ, ಡೆವಿಲ್ ಭಾರ್ಗವಿ ಪಾತ್ರಧಾರಿಯಾದ ಪ್ರಿಯಾ ಮುಂತಾದವರಿಗೆ ಕರೆ ಮಾಡಿ ಇದ್ದಕ್ಕಿದ್ದ ಹಾಗೆ ಮದುವೆ ಫಿಕ್ಸ್ ಆಗಿ ಹೋಯಿತು. ಅರೆಂಜ್ ಮ್ಯಾರೇಜ್ ಇದು, ಅಮ್ಮ ನೋಡಿದ ಹುಡುಗನ ಜೊತೆ ಮದುವೆ ಆಗುತ್ತಿದ್ದೇನೆ, ಆಗಲೇ ಡಿಸೆಂಬರ್ ಗೆ ಮದುವೆ ಎನ್ನುವುದು ಕೂಡ ಫಿಕ್ಸ್ ಆಗಿ ಹೋಗಿದೆ, ಹುಡುಗ ಸಿಡ್ನಿಯಲ್ಲಿ ಕೆಲಸದಲ್ಲಿದ್ದಾನೆ ಎಂದು ಹೇಳುತ್ತಾರೆ.

ಮತ್ತು ಸ್ನೇಹಿತರು ಕೂಡ ಇದಕ್ಕೆ ಶುಭ ಹಾರೈಸಿ ಇಷ್ಟು ಬೇಗ ಮದುವೆ ಆಗುತ್ತಿರುವುದು ಖುಷಿಯಾದ ವಿಷಯ ಎಂದು ಹೇಳಿ ಅವರು ಸಂತಸ ಪಟ್ಟಿದ್ದಾರೆ. ಜೊತೆಗೆ ಎಷ್ಟೆಲ್ಲಾ ಆಗಿದೆ ಈಗ ಕೊನೆ ಹಂತದಲ್ಲಿ ಹೇಳುತ್ತಿದ್ದೀಯಲ್ಲಾ, ಈಗ ಹೇಳುತ್ತಿದ್ದೀಯಲ್ಲ ಎಂದು ಕೊಂಚ ಬೇಸರ ಕೂಡ ವ್ಯಕ್ತಪಡಿಸಿದ್ದಾರೆ. ಇಷ್ಟು ಬೇಗ ಆಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಸುಮಾರು ಹೊತ್ತು ಸತಾಯಿಸಿದ ಈಕೆ ಸರಿಯಾಗಿ ಎಲ್ಲರನ್ನು ಬಕ್ರ ಮಾಡಿದ್ದಾರೆ.

ಯಾಕೆಂದರೆ ಏಪ್ರಿಲ್ 1 ರಂದು ತನ್ನ ಸ್ನೇಹಿತೆಯರನ್ನು ಬಕ್ರ ಮಾಡುವ ಕಾರಣಕ್ಕೆ ಇಂತಹದೊಂದು ಪ್ಲಾನ್ ಮಾಡಿ ಆ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನಲಲ್ಲಿ ಶೇರ್ ಮಾಡಿದ್ದಾರೆ. ನಟಿ ಸುಕೃತ ನಾಗ್ ಮೊದಲಿನಿಂದಲೂ ಇಂತಹ ಬುದ್ಧಿವಂತಿಕೆಯ ಪಾತ್ರಗಳನ್ನು ನಿಭಾಯಿಸುವುದರಲ್ಲಿ ಎತ್ತಿದ ಕೈ ಅಂಜಲಿ ಪಾತ್ರವಾಗಲಿ ಶ್ವೇತಾ ಪಾತ್ರ ವಾಗಲಿ ಪಾಸಿಟಿವ್ ನೆಗೆಟಿವ್ ಎರಡು ರೋಲಲ್ಲೂ ಮೈಂಡ್ ಗೇಮ್ ಆಡುವ ಇವರು ಈಗ ಹೊಸ ರೀತಿಯಲ್ಲಿ ಸ್ನೇಹಿತೆಯರನ್ನು ಏಪ್ರಿಲ್ ಫೂಲ್ ಕೂಡ ಮಾಡಿದ್ದಾರೆ.

 

BJP ಗೆ ಸುದೀಪ್, ಕಾಂಗ್ರೆಸ್ ಗೆ ರಮ್ಯ, ಪ್ರಾಚರ ಮಾಡ್ತಾರೆ JDS ಪರ ಯಾರಿದ್ದಾರೆ ಅಂತ ಪ್ರಶ್ನೆ ಕೇಳಿದಕ್ಕೆ ನಿಖಿಕ್ ಕೊಟ್ಟ ಏನೂ ಗೊತ್ತ.? ನಿಜಕ್ಕೂ ಶಾ-ಕ್ ಆಗ್ತೀರಾ.

 

ರಾಜ್ಯದಲ್ಲಿ ವಿಧಾನಸಭಾ ಎಲೆಕ್ಷನ್ ಸದ್ದು ಜೋರಾಗಿ ಇದೆ. ಎಲ್ಲಾ ಪಕ್ಷಗಳು ಕೂಡ ಜನರ ಮತಗಳಿಸಲು ಸಾಕಷ್ಟು ತಂತ್ರಗಳನ್ನು ಹೂಡುತ್ತಿವೆ. ಎಲೆಕ್ಷನ್ ಬಂದಾಗ ಸ್ಟಾರ್ ಪ್ರಚಾರಕರ ಮನ ಒಲಿಸಿ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಲು ಕೇಳಿಕೊಳ್ಳುವುದು ಮಾಮೂಲು. ಸದ್ಯಕ್ಕೀಗ ಮೊನ್ನೆಯಿಂದ ಸುದೀಪ್ ಅವರು ಬಸವರಾಜ್ ಬೊಮ್ಮಾಯಿ ಅವರ ಪರ ಪ್ರಚಾರ ಮಾಡುವುದಾಗಿ ಘೋಷಣೆ ಮಾಡಿರುವುದು ರಾಜ್ಯದಲ್ಲಿ ಭಾರಿ ರಾಜಕೀಯ ಸಂಚಲನ ಉಂಟು ಮಾಡಿದೆ.

ಬಿಜೆಪಿ ಪಕ್ಷವನ್ನು ಸೇರುವ ಬಗ್ಗೆ ಅವರು ಸ್ಪಷ್ಟತೆ ಕೊಡದೆ ಬಸವರಾಜ್ ಬೊಮ್ಮಾಯಿ ಅವರ ಸ್ನೇಹ ಬಾಂಧವ್ಯಕ್ಕೆ ಬೆಲೆಕೊಟ್ಟು ಅವರಿಗಾಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿರುವುದು ನಾನಾ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಚರ್ಚೆಗಳು ಜೋರಾಗಿದ್ದು ಇದರಿಂದ ಬಿಜೆಪಿ ಪಕ್ಷಕ್ಕೆ ಎಷ್ಟು ಅಡ್ವಾಂಟೇಜ್ ಮತ್ತು ಡಿಸ್ ಅಡ್ವಾನ್ಟೇಜ್ ಆಗಲಿದೆ ಎನ್ನುವ ಬಗ್ಗೆ ಡಿಸ್ಕಶನ್ ನಡೆಯುತ್ತಿದೆ.

ಕೆಲವರು ಸುದೀಪ್ ಅವರ ಈ ನಿರ್ಧಾರದಿಂದ ಎಸ್ಟಿ ಸಮುದಾಯದ ಸಾಕಷ್ಟು ಮತಗಳು ಈ ಬಾರಿ ಬಿಜೆಪಿಗೆ ಬೀಳದೆ, ಬಸವರಾಜ್ ಬೊಮ್ಮಾಯಿ ಅವರ ಪರ ಪ್ರಚಾರ ಮಾಡುವುದರಿಂದ ಅದು ಪರೋಕ್ಷವಾಗಿ ಬಿಜೆಪಿ ಪ್ರಚಾರ ಮಾಡಿದ ರೀತಿ ಆಯ್ತು ಇದರಿಂದ ಬಿಜೆಪಿಗೆ ದೊಡ್ಡ ಲಾಭ ಸಿಗಲಿದೆ ಎಂದು ಲೆಕ್ಕ ಹಾಕಿದ್ದರೆ ಇನ್ನು ಕೆಲವರು ಸಿನಿಮಾ ಲೆಕ್ಕಾಚಾರವೇ ಬೇರೆ ರಾಜಕೀಯ ಬೇರೆ ಸುದೀಪ್ ಅವರ ಪ್ರಚಾರ ಇಲ್ಲಿ ಯಾವ ಕೆಲಸವೂ ಮಾಡಲಾರದು.

ಸುದೀಪ್ ಅವರು ಕೆಲವು ಕ್ಷೇತ್ರಗಳಲ್ಲಿ ಮಾತ್ರ ಬಂದು ಪ್ರಚಾರ ಮಾಡುವುದರಿಂದ ಅಷ್ಟೇನು ದೊಡ್ಡ ಮಟ್ಟದ ಬದಲಾವಣೆ ಕಂಡುಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದೆಲ್ಲದರ ನಡುವೆ ಇದೆ ಪ್ರಶ್ನೆ ನಿಖಿಲ್ ಕುಮಾರಸ್ವಾಮಿ ಅವರಿಗೂ ಕೂಡ ಎದುರಾಗಿದೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ಆಗಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಮಾಧ್ಯಮದವರು ಈ ಪ್ರಶ್ನೆಯನ್ನು ಇಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ದೊಡ್ಡ ಫ್ಯಾನ್ಸ್ ಬಳಗ ಹೊಂದಿರುವ ಸ್ಟಾರ್ ಗಳು ಬಂದು ಪಕ್ಷಗಳ ಪರವಾಗಿ ಪ್ರಚಾರ ಮಾಡುವುದು ಸಾಮಾನ್ಯ.

ಈಗಾಗಲೇ ಸುದೀಪ್ ಅವರು ಬಿಜೆಪಿ ಪಕ್ಷ ಸೇರಿದ್ದಾರೆ ಅದರ ಬಗ್ಗೆ ಮತ್ತು ಸ್ಟಾರ್ ಪ್ರಚಾರಕರ ಪ್ರಭಾವ ರಾಜಕೀಯದಲ್ಲಿ ಎಷ್ಟು ಕೆಲಸ ಮಾಡಲಿದೆ ಎನ್ನುವುದರ ಬಗ್ಗೆ ಮತ್ತು ನೀವು ಸಹ ಈ ಬಗ್ಗೆ ತಯಾರಿ ಮಾಡಿಕೊಂಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ನಿಖಿಲ್ ಕುಮಾರಸ್ವಾಮಿ ಅವರು ಕೊಟ್ಟ ಉತ್ತರ ಈ ರೀತಿ ಇತ್ತು. ಸುದೀಪ್ ಅವರು ಎಲ್ಲಿಯೂ ಕೂಡ ತಾವು ಬಿಜೆಪಿ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿಲ್ಲ.

ಅವರು ಬಸವರಾಜ್ ಬೊಮ್ಮಾಯಿ ಅವರ ಸ್ನೇಹಕ್ಕೆ ಸಂಬಂಧಕ್ಕೆ ಆತ್ಮೀಯತೆಗೆ ಬೆಲೆಕೊಟ್ಟು ಅವರ ಪರವಾಗಿ ಪ್ರಚಾರ ಮಾಡಲಿದ್ದೇನೆ ಎಂದು ಹೇಳಿದ್ದಾರೆ. ಅದು ಅವರ ವೈಯಕ್ತಿಕ ಇದರ ಬಗ್ಗೆ ಯಾವುದೇ ಆಕ್ಷೇಪಗಳಿಲ್ಲ. ನಮ್ಮ ಪಕ್ಷದಲ್ಲಿ ಕಾರ್ಯಕರ್ತರೇ ದೊಡ್ಡ ಸ್ಟಾರ್ ಗಳು ಅವರೇ ನಮ್ಮ ಬಲ. ಮತ್ತು ಮಾಜಿ ಪ್ರಧಾನಿ ದೇವೇಗೌಡರಾದ ನಮ್ಮ ತಾತ ಅವರು ಅತಿ ದೊಡ್ಡ ಸ್ಟಾರ್ ಪ್ರಚಾರಕರು ಅವರೇ ನಮ್ಮ ಶಕ್ತಿ, ಅವರೇ ನಮ್ಮ ಪಕ್ಷದ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ನಾವು ನಮ್ಮ ಜೆಡಿಎಸ್ ಪಕ್ಷದ ಪರವಾಗಿ ಪ್ರಚಾರ ಮಾಡಲು ಯಾವ ಸ್ಟಾರ್ ಗಳ ಮನ ಒಲಿಸಿಲ್ಲ, ಆ ಪ್ರಯತ್ನವನ್ನೂ ಮಾಡಿಲ್ಲ, ಯಾರ ಜೊತೆಗೆ ಈ ಬಗ್ಗೆ ಮಾತುಕತೆ ಆಡಿಲ್ಲ ಎಂದಿದ್ದಾರೆ.

ಇಬ್ರು ಕೂಡ ಜೂಜಿನ ಜಾಹೀರಾತಿನಿಂದಲೇ ಹಣ ಮಾಡಿದವರು ಎಂದು ಸುದೀಪ್ & ಪ್ರಕಾಶ್ ರಾಜ್ ಗೆ ಟಾಂಗ್ ಕೊಟ್ಟ ನಟ ಚೇತನ್ ಅಹಿಂಸ.

 

ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಆ ದಿನಗಳು, ಬಿರುಗಾಳಿ, ಮೈನಾ ಮುಂತಾದ ಸೂಪರ್ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟವರು. NRI ಆಗಿ ಭಾರತದಲ್ಲಿ ನೆಲೆಸಿರುವ ಇವರು ಆಗಾಗ ಭಾರತದ ರಾಜಕೀಯ, ಕರ್ನಾಟಕದ ರಾಜಕೀಯ, ಇಲ್ಲಿನ ಆಗುಹೋಗುಗಳು ಮತ್ತು ಸಿನಿಮಾ, ಹಿಂದುತ್ವ ವಿಚಾರವಾಗಿ ಮಾತನಾಡಿ ವಿವಾದ ಆಗುತ್ತಿರುತ್ತಾರೆ.

ಇತ್ತೀಚಿಗಂತೂ ಇವರು ಸಿನಿಮಾ ವಿಚಾರವಾಗಿ ಸುದ್ದಿ ಆಗುವುದಕ್ಕಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿ ಆಗುತ್ತಿದ್ದರೆ ಎಂದು ಹೇಳಬಹುದು ಚೇತನ್ ಅಹಿಂಸಾ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿ ಇರುತ್ತಾರೆ. ಇಲ್ಲಿನ ಎಲ್ಲಾ ಕ್ರಿಯೆ ಹಾಗೂ ಪ್ರತಿಕ್ರಿಯೆಗಳ ಬಗ್ಗೆ ಪೋಸ್ಟ್ ಹಾಕುತ್ತಾ ಸಾಕಷ್ಟು ಜನರನ್ನು ವಿರೋಧ ಕಟ್ಟಿಕೊಳ್ಳುತ್ತಿದ್ದಾರೆ.

ಈಗ ಕಿಚ್ಚ ಸುದೀಪ್ ಅವರ ರಾಜಕೀಯ ಪ್ರವೇಶದ ಬಗ್ಗೆ ಕೂಡ ಚೇತನ್ ಅಹಿಂಸಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರು ಬಸವರಾಜ್ ಬೊಮ್ಮಾಯಿ ಅವರು ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಬಸವರಾಜ್ ಬೊಮ್ಮಾಯಿ ಅವರು ನನಗೆ ವೈಯುಕ್ತಿಕವಾಗಿ ಬಹಳ ಆಪ್ತರು ಬಹಳ ವರ್ಷಗಳ ಸ್ನೇಹ ಸಂಬಂಧ ನಮ್ಮದು.

ನನ್ನ ಕಷ್ಟಕಾಲದಲ್ಲಿ ಅವರು ನನ್ನ ಜೊತೆಗಿದ್ದರು ಹಾಗಾಗಿ ಅವರಿಗಾಗಿ ನಾನು ಈಗ ಪ್ರಚಾರ ಮಾಡುತ್ತೇನೆ, ಅವರು ಯಾರಿಗೆ ಹೇಳುತ್ತಾರೆ ಅವರಿಗಾಗಿ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ನಾನು ಟಿಕೆಟ್ ಆಕಾಂಕ್ಷಿಯಲ್ಲ ಹಾಗೆ ರಾಜಕೀಯಕ್ಕೆ ಸೇರುವ ಉದ್ದೇಶವು ಇಲ್ಲ ಎನ್ನುವುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ತಾವಾಡಿದ ಅಷ್ಟು ಮಾತಿನಲ್ಲಿ ತಾನು ಬಿಜೆಪಿ ಸೇರಿದ್ದೇನೆ ಎನ್ನುವುದನ್ನಾಗಲಿ ಅಥವಾ ಬಿಜೆಪಿ ಪರ ಇದ್ದೇನೆ ಎನ್ನುವುದನ್ನಾಗಲಿ ಸುದೀಪ್ ಅವರು ಹೇಳಿಲ್ಲ.

ಈಗ ಸುದೀಪ್ ಅವರ ನಿಲುವು ಬಸವರಾಜ ಬೊಮ್ಮಾಯಿ ಅವರ ಪರ ಎನ್ನುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ನಡೆಯುವ ಹಿಂದಿನ ದಿನವೇ ಇದರ ಸೂಚನೆ ಅರಿತಿದ್ದ ಪ್ರಕಾಶ್ ರಾಜ್ ಅವರು ನಮ್ಮ ಕಿಚ್ಚ ತಮ್ಮನ್ನು ಮಾರಿಕೊಳ್ಳುವವರಲ್ಲ ಎಂದು ಪೋಸ್ಟ್ ಹಾಕಿದ್ದರು. ಆದರೆ ಮರುದಿನ ಕಿಚ್ಚನ ನಡೆ ಕಂಡು ಬಳಿಕ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಸುದೀಪ್ ಅವರ ನಿರ್ಧಾರ ಅಚ್ಚರಿ ಮಾತ್ರ ಅಲ್ಲ ನೋವನ್ನು ಕೂಡ ಉಂಟು ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಈಗ ಇದೆಲ್ಲದರ ಬಗ್ಗೆ ನಟ ಚೇತನ್ ಅಹಿಂಸಾ ಅವರು ಸಹಾ ಬರೆದುಕೊಂಡಿದ್ದಾರೆ. ಇಬ್ಬರು ಸಹ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರುಗಳು. ಒಬ್ಬರು ಬಿಜೆಪಿ ಪರ ಮತ್ತೊಬ್ಬರು ಬಿಜೆಪಿ ವಿರೋಧ ಆದರೆ ಇಬ್ಬರು ಸಹ ಜೂಜಾಡಿ ಹಣಗಳಿಸಿದವರು ಎಂದು ಪರೋಕ್ಷವಾಗಿ ಟಾಂಗ್ ಮಾಡಿದ್ದಾರೆ. ಮತ್ತೊಂದು ಪೋಸ್ಟ್ ಅಲ್ಲಿ ಸಿನಿಮಾ ತಾರೆ ಒಬ್ಬರು ಬಿಜೆಪಿ ಸೇರಿದರೆ ಆ ನಿಲುವನ್ನು ಮಾರಾಟ ಎಂದು ಉದಾರವಾದಿಗಳು ಬಿಂಬಿಸುವುದೇಕೆ.

ಈಗಾಗಲೇ ಅವರು ಕಾಂಗ್ರೆಸ್, ಎಎಪಿ, ಜೆಡಿಎಸ್ ಅಂತಹ ವ್ಯವಸ್ಥಿತ ರಾಜಕೀಯ ಹಿಂದೂ ಶಕ್ತಿಗಳಿಗೆ ಮಾರಾಟವಾಗಿದ್ದಾರೆ ಎಂದು ಪ್ರಕಾಶ್ ರಾಜ್ ಅವರನ್ನು ಕುಕ್ಕಿದ್ದಾರೆ. ಬಿಜೆಪಿ ಮಾತ್ರ ಶತ್ರು ಎಂದು ಹೇಳುವವರು ಕೂಡ ನಮ್ಮ ಶತ್ರುಗಳು ನಾವು ಅನ್ಯಾಯದ ಮತ್ತು ಅಸಮಾನತೆಯ ಸಂಪೂರ್ಣ ವ್ಯವಸ್ಥೆಯ ವಿರುದ್ಧ ಹೋರಾಡಬೇಕು ಎಂದು ಚೇತನ್ ಮತ್ತೊಂದು ಪೋಸ್ಟ್ ಅಲ್ಲಿ ಬರೆದುಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

ಹನುಮ ಜಯಂತಿ ಪ್ರಯುಕ್ತ ಮೊದಲ ಬಾರಿಗೆ ತಮ್ಮ ಮುದ್ದು ಮಗುವಿನ ವಿಡಿಯೋ ಹಂಚಿಕೊಂಡ ನಟ ಧ್ರುವ ಸರ್ಜಾ ದಂಪತಿ. ಈ ವಿಡಿಯೋ ನೋಡಿ ಎಷ್ಟು ಕ್ಯೂಟ್ ಆಗಿದೆ.

 

ನಟ ಧ್ರುವ ಸರ್ಜಾ ಮಾತ್ರ ಅಲ್ಲದೇ ಸರ್ಜಾ ಕುಟುಂಬದ ಎಲ್ಲರೂ ಕೂಡ ಹನುಮಾನ್ ದೇವರ ಭಕ್ತರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಕುಟುಂಬಕ್ಕೆ ಮಾರುತಿ ದೇವರ ಮೇಲೆ ಭಕ್ತಿ ಎಷ್ಟಿದೆ ಅಂದರೆ ಅರ್ಜುನ್ ಸರ್ಜಾ ಅವರು ತಮಿಳುನಾಡಿನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಆಂಜನೇಯ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಚಿರಂಜೀವಿ ಸರ್ಜಾ ಅವರು ಸಹ ವಾಯುಪುತ್ರ ಎನ್ನುವ ಸಿನಿಮಾದಿಂದ ಆಂಜನೇಯನ ಹೆಸರಿನಲ್ಲಿಯೇ ಲಾಂಚ್ ಆದರು.

ಧ್ರುವ ಸರ್ಜಾ ಅವರ ಸಿನಿಮಾದ ಡೈಲಾಗ್ ಅಲ್ಲಿ ಆಗಲಿ, ಹಾಡಿನಲ್ಲಿ ಆಗಲಿ ಆಂಜನೇಯ ಬರದೇ ಇರುವುದಿಲ್ಲ. ಅರ್ಜುನ್ ಸರ್ಜಾ ಅವರು ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದ ಪ್ರೇಮ ಬರಹ ಎನ್ನುವ ಚಿತ್ರದ ಹಾಡೊಂದರಲ್ಲಿ ಅತಿಥಿಯಾಗಿ ಕಾಣಿಸಿಕೊಂಡ ದರ್ಶನ್ ಅವರ ಜೊತೆ ಸರ್ಜಾ ಕುಟುಂಬದ ಎಲ್ಲರೂ ಸಹ ಕೇಸರಿ ನಂದನನ ಹೆಸರಿನಲ್ಲಿ ಹಾಡಿ ಕುಣಿದಿದ್ದರು.

ಹೀಗೆ ಆಂಜನೇಯನನ್ನು ಬಹಳ ಆರಾಧಿಸುವ ಈ ಕುಟುಂಬದವರು ಹನುಮಾ ಜಯಂತಿ ಪ್ರಯುಕ್ತ ಮತ್ತೊಂದು ವಿಶೇಷ ಕಾರ್ಯ ಮಾಡಿದ್ದಾರೆ. ಅದೇನೆಂದರೆ ಕಳೆದ ವರ್ಷ ಅಕ್ಟೋಬರ್ 2ರಂದು ಧ್ರುವ ಸರ್ಜಾ ಮತ್ತು ಪ್ರೇರಣ ಶಂಕರ್ ದಂಪತಿಗೆ ಹೆಣ್ಣು ಮಗುವಿನ ಜನನ ಆಗಿತ್ತು. ಧ್ರುವ ಸರ್ಜಾ ಅವರು ಆಸೆ ಪಟ್ಟಂತೆ ಬಜರಂಗಬಲಿ ಕೃಪೆಯಿಂದ ಅವರಿಗೆ ಹೆಣ್ಣು ಮಗುವೇ ಆಗಿ ಅವರ ಸಂತೋಷಕ್ಕೆ ಪಾರ ಇರದಂತೆ ಆಗಿತ್ತು.

ಈವರೆಗೂ ಸರ್ಜಾ ಕುಟುಂಬದ ಎಲ್ಲಾ ಕಾರ್ಯಕ್ರಮಗಳನ್ನು ಕೂಡ ಅದ್ದೂರಿಯಾಗಿ ಆಚರಿಸಿದ್ದರೂ ಮಗು ಹುಟ್ಟಿದಾಗಲಿಂದ ಮಗು ಫೋಟೋ ಮಾತ್ರ ರಿವೀಲ್ ಮಾಡಿರಲಿಲ್ಲ. ಆದರೆ ಪತ್ನಿ ಪ್ರೇರಣ ಶಂಕರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಮಗು ಮುಖ ತೋರದೆ ಮಗುವಿನ ಫೋಟೋ ಹಂಚಿಕೊಳ್ಳುತ್ತಿದ್ದರು. ಈಗ ಹನುಮ ಜಯಂತಿ ಪ್ರಯುಕ್ತ ಮುದ್ದು ಮಗುವಿನ ಫೋಟೋ ರಿವೀಲ್ ಆಗಿದೆ.

ಹನುಮ ಜಯಂತಿಯಲ್ಲಿ ಮಗುವಿಗೆ ಹನುಮಾನ್ ಗೆಟಪ್ ಹಾಕಿಸಿ ದಂಪತಿಗಳು ಫೋಟೋ ಶೂಟ್ ಮಾಡಿಸಿದ್ದಾರೆ. ಇದರೊಂದಿಗೆ ಮಗುವಿನ ಹಳೆಯ ಫೋಟೋ ಶೂಟ್ ಸೇರಿದಂತೆ ಹಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗಿದೆ. ಧ್ರುವ ಸರ್ಜಾ ಆಗಲಿ ಅಥವಾ ಪ್ರೇರಣ ಅವರಾಗಲಿ ಇವುಗಳನ್ನು ಶೇರ್ ಮಾಡಿಕೊಂಡಿಲ್ಲ.

ಬದಲಿಗೆ ಸರ್ಜಾ ಕುಟುಂಬಕ್ಕೆ ಆಪ್ತರಾಗಿರುವ ಸಂಬಂಧಿಕರು ಆಗಿರುವ ಕನ್ನಡದ ರಾಮಚಾರಿ2.0 ಹೀರೋ ಆದ ತೇಜ್ ಅವರು ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ವೇಟಿಂಗ್ ಫಾರ್ ನೇಮಿಂಗ್ ಸೆರೆಮನಿ ಎಂದು ಬರೆದುಕೊಂಡಿದ್ದಾರೆ. ತೇಜ್ ಅವರು ದಿವಂಗತ ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾರಾಜ್ ಅವರ ಸಹೋದರ. ಈ ಫೋಟೋಗಳು ಶೇರ್ ಆಗಿರುವುದರಿಂದ ಧ್ರುವ ಸರ್ಜಾ ಅಭಿಮಾನಿಗಳು ಬಹಳ ಖುಷಿ ಆಗಿದ್ದಾರೆ. ಹಾಗೆಯೇ ಮಗುವಿಗೆ ಶುಭ ಹಾರೈಸುತ್ತಿದ್ದಾರೆ.

ಸದ್ಯಕ್ಕೆ ಧ್ರುವ ಸರ್ಜಾ ಅವರು KD ಚಿತ್ರದ ಕೆಲಸಗಳಲ್ಲಿ ಬಹಳ ಬಿಸಿಯಾಗಿದ್ದಾರೆ ಜೊತೆಗೆ ಸಂಸಾರದ ಜವಾಬ್ದಾರಿಯನ್ನು ಕೂಡ ಮೆರೆಯಬೇಕಾಗಿದೆ. ಮುದ್ದು ಮಗಳ ಅದ್ದೂರಿ ನಾಮಕರಣ ಹಾಗೂ ಒಂದೊಳ್ಳೆ ಹೆಸರು ಸೆಲೆಕ್ಟ್ ಮಾಡುವ ಹೊಣೆ ಅವರ ಹೆಗಲಿಗಿದೆ. ನೀವು ಸಹ ನಿಮ್ಮ ನೆಚ್ಚಿನ ಈ ನಟನ ಮುದ್ದು ಮಗುವಿಗೆ ಹೆಸರು ಸೂಚಿಸಬಹುದು. ನಿಮ್ಮ ಪ್ರಕಾರ ಅಂಜನಿಪುತ್ರ ನ ಆರಾಧಕರಾದ ಈ ಕುಟುಂಬದ ಕುಡಿಯ ಮಗುವಿಗೆ ಯಾವ ಹೆಸರಿನಿಂದ ಕರೆದರೆ ಚೆನ್ನಾಗಿರುತ್ತದೆ ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.

ಸೌತ್ ಸಿನಿಮಾ ಇಂಡಸ್ಟ್ರಿಯ ಈ ನಟರುಗಳು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ರೆ ನಿಮಿಷದೊಳಗೆ ಸಿಗುತ್ತದೆ ಮಿಲಿಯನ್ ಲೈಕ್ಸ್, ಈ ಲಿಸ್ಟ್ ನ ಟಾಪರ್ ಯಾರು ಗೊತ್ತಾ.?

 

ಸಾಮಾಜಿಕ ಜಾಲತಾಣ ಎನ್ನುವುದು ಈಗ ಎಲ್ಲರ ಬದುಕಿನ ಒಂದು ಭಾಗವಾಗಿ ಬಿಟ್ಟಿದೆ. ಶಾಲಾ ಮಕ್ಕಳಿಂದ, ಯುವಕರು, ವೃದ್ಧರು ಹೀಗೆ ಎಲ್ಲರೂ ಕೂಡ ಸೋಶಿಯಲ್ ಮೀಡಿಯಾ ದಾಸರುಗಳೇ ಎಂದೂ ಹೇಳಬಹುದು. ಸೋಶಿಯಲ್ ಮೀಡಿಯಾ ಈಗ ಜಗತ್ತಿನ ಎಲ್ಲರನ್ನೂ ಒಂದೇ ಎಳೆಯಲಿ ಬೆಸೆದಿರುವ ಒಂದು ಬೆಸುಗೆ ಎಂದು ಹೇಳಬಹುದು.

ಲಕ್ಷಗಟ್ಟಲೆ ಮೈಲಿ ದೂರದಲ್ಲಿರುವವರನ್ನು ಕೂಡ ಬೆರಳ ತುದಿಯ ಮೊಬೈಲ್ ಮೂಲಕ ಸಂಪರ್ಕಿಸಿ ಸಂವಹನ ಮಾಡುವುದಕ್ಕೆ ಸೋಶಿಯಲ್ ಮೀಡಿಯಾ ಆಪ್ ಗಳು ಬಹಳ ಅನುಕೂಲಕರ ಆಗಿವೆ. ಅದರಲ್ಲೂ ಫೇಸ್ಬುಕ್, ಯೂಟ್ಯೂಬ್ ಇತ್ತೀಚಿಗೆ instagram ವೇದಿಕೆಗಳಲ್ಲಿ ತಮ್ಮದೂ ಸಹ ಒಂದು ಅಕೌಂಟ್ ಕ್ರಿಯೇಟ್ ಮಾಡಿ ದಿನಕ್ಕೆ ಹತ್ತಾರು ಬಾರಿ ಇಣುಕಿ ನೋಡುವುದು ಜನಸಾಮಾನ್ಯರ ಅಭ್ಯಾಸ.

ಇನ್ನು ಸೆಲೆಬ್ರಿಟಿಗಳ ಪಾಲಿಗಂತು ತಮ್ಮ ಫ್ಯಾನ್ಗಳ ಜೊತೆಗೆ ನೇರವಾಗಿ ಸಂಪರ್ಕಿಸಲು ಇದೊಂದು ಉತ್ತಮ ವೇದಿಕೆ ಆಗಿದೆ. ಹಾಗಾಗಿ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಕೂಡ ಈ ರೀತಿ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ತಮ್ಮ ಅಕೌಂಟ್ ಕ್ರಿಯೇಟ್ ಮಾಡಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಫೋಟೋ, ವಿಡಿಯೋಗಳಿಗೆ ಬಹಳ ಬೇಡಿಕೆ ಇರುತ್ತದೆ.

ಜೊತೆಗೆ ಅವರು ಅಪ್ಲೋಡ್ ಮಾಡಿದ ಕೆಲ ಕ್ಷಣಗಳಲ್ಲಿ ದಾಖಲೆ ಗಟ್ಟಲೆ ವೀಕ್ಷಣೆ, ಲೈಕ್ಸ್ ಮತ್ತು ಶೇರ್ ಕೂಡ ಆಗಿ ವೈರಲ್ ಆಗುತ್ತದೆ. ಅವರ ಅಭಿಮಾನಿಗಳು ಸೇರಿದಂತೆ ಅನೇಕ ಮಂದಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಕೂಡ ಆಗುತ್ತದೆ. ಈ ರೀತಿ ಫಾಲೋವರ್ಸ್ ಗಳನ್ನು ಹೊಂದುವುದೇ ಒಂದು ಪ್ರತಿಷ್ಠೆ ಆದರೆ ಅವರು ಹಾಕಿರುವ ಫೋಟೋಗಳಿಗೆ ಫೋಟೋ ಹಾಕಿದ ಅತಿ ಕಡಿಮೆ ಸಮಯದಲ್ಲಿ ಯಾರು ಅತಿ ಹೆಚ್ಚು ಲೈಕ್ಸ್ ಗಳಿಸುತ್ತಾರೆ ಎನ್ನುವುದು ಕೂಡ ಒಂದು ಸ್ಪರ್ಧೆ ಆಗಿದೆ.

ಇತ್ತೀಚಿಗಷ್ಟೇ ಕಳೆದ ವಾರ ಕಾಲಿವುಡ್ ದಳಪತಿ ವಿಜಯ್ ಅವರು instagram ಪ್ರವೇಶ ಪಡೆದಿದ್ದಾರೆ. ಅವರು ಇನ್ಸ್ಟಾಗ್ರಾಮ್ ಗೆ ಬಂದ ದಿನದಿಂದಲೂ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚತ್ತಲೇ ಇದೆ. ಜೊತೆಗೆ ಅವರು ಅಪ್ಲೈ ಮಾಡಿದ ಒಂದು ಫೋಟೋ 104 ಸೆಕೆಂಡ್ ಒಳಗಡೆ ಒಂದು ಮಿಲಿಯನ್ ಲೈಕ್ಸ್ ಪಡೆಡುವ ಮೂಲಕ ದಾಖಲೆ ಬರೆದಿದೆ. ಆದರೆ ವಿಜಯ್ ಗೂ ಮುಂಚೆ ದಕ್ಷಿಣದ ಮತ್ತೊಬ್ಬ ನಟ ಈ ದಾಖಲೆ ಮಾಡಿದ್ದರು.

ಪುಷ್ಪ ಸಿನಿಮಾ ಮೂಲಕ ದೇಶದ ಎಲ್ಲಾ ಭಾಷೆಗಳಿಗೂ ಕೂಡ ಪರಿಚಿತರಾಗಿರುವ ಅಲ್ಲು ಅರ್ಜುನ್ ಅವರು ಈ ಹಿಂದೆ ಅಪ್ಲೋಡ್ ಮಾಡಿದ ಒಂದು ಫೋಟೋಗೆ 69 ನಿಮಿಷಗಳಲ್ಲೇ ಒಂದು ಮಿಲಿಯನ್ ಲೈಕ್ಸ್ ಬಂದಿತ್ತು, ಈಗ ಪುಷ್ಪ ಸಿನಿಮಾ ಆದ ಮೇಲೆ ಅವರು ಸೋಶಿಯಲ್ ಮೀಡಿಯಾದಲ್ಲಿ ಇನ್ನೂ ಹೆಚ್ಚಿಗೆ ಫೇಮಸ್ ಆಗುತ್ತಿದ್ದಾರೆ.

ಇವರೆಲ್ಲರೂ ಮೀರಿ ಸೌತ್ ಸಿನಿಮಾ ಇಂಡಸ್ಟ್ರಿಯ ಮತ್ತೊಬ್ಬ ನಟರಿದ್ದಾರೆ. ಅವರು ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್. ಈಗ ದೇಶದಾದ್ಯಂತ ರಾಕಿ ಭಾಯ್ ಎಂದು ಕರೆಸಿಕೊಳ್ಳುತ್ತಿರುವ ಈ ಪ್ಯಾನ್ ಇಂಡಿಯಾ ಸ್ಟಾರ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋದು ಬಹಳ ಕಡಿಮೆ. ಆದರೆ ಇವರು ಅಪರೂಪಕ್ಕೆ ಹಂಚಿಕೊಳ್ಳುವ ಫೋಟೋ ಮತ್ತು ವಿಡಿಯೋಗಳು ತಕ್ಷಣವೇ ವೈರಲ್ ಆಗುತ್ತವೆ. ಈ ಹಿಂದೆ ಇವರು ಹಾಕಿದ ಒಂದು ಫೋಟೋ 46 ನಿಮಿಷಗಳಲ್ಲಿ ಒಂದು ಮಿಲಿಯನ್ ಲೈಕ್ಸ್ ಗಳಿಸುವ ಮೂಲಕ ದಾಖಲೆ ಬರೆದಿತ್ತು. ಇಂದಿಗೂ ಸಹ ಈ ಲಿಸ್ಟ್ ಅಲ್ಲಿ ಯಶ್ ಅವರೇ ಟಾಪರ್ ಆಗಿದ್ದಾರೆ.

ರಸ್ತೆ ಅ.ಪ.ಘಾ.ತಕ್ಕೀಡಾದ ಯುವಕನ ಪ್ರಾಣ ಉಳಿಸಲು ಪರದಾಡಿದ ಕಿಚ್ಚ ಸುದೀಪ್. ವಿಡಿಯೋ ವೈರಲ್

 

ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪ್ ಅವರ ವಿಡಿಯೋ ಒಂದು ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಕಿಚ್ಚ ಸುದೀಪ್ ಅವರು ವ್ಯಕ್ತಿಯೊಬ್ಬನ ಪ್ರಾ.ಣ ರಕ್ಷಿಸಲು ಪರದಾಡುತ್ತಿರುವುದು ಕಾಣುತ್ತದೆ. ಈ ವಿಡಿಯೋದಲ್ಲಿ ಸುದೀಪ್ ಅವರ ಜೊತೆ ಸುದೀಪ್ ಅವರ ಬಾಡಿಗಾರ್ಡ್ ಸುತ್ತಲು ಜನ ಆವರಿಸಿರುವುದನ್ನು ಕೂಡ ಕಾಣಬಹುದು. ಎಲ್ಲರೂ ನಿಂತುಕೊಂಡು ನೋಡುತ್ತಿದ್ದರು ಕೂಡ ಸಹಾಯಕ್ಕೆ ಯಾರೂ ಬರುವುದಿಲ್ಲ ಆದರೆ ಕಿಚ್ಚ ಸುದೀಪ್ ಅವರು ಮಾತ್ರ ಆ ವ್ಯಕ್ತಿಯನ್ನು ಸುಧಾರಿಸುವ, ಸಮಾಧಾನಪಡಿಸುವ ಕೆಲಸ ಮಾಡುತ್ತಿರುತ್ತಾರೆ.

ಆ ವ್ಯಕ್ತಿ ನೀರು ಕೇಳುವಾಗ ಹತ್ತಿರದಲ್ಲಿದ್ದವರಿಗೆ ನೀರು ತಂದು ಕೊಡುವಂತೆ ಗದರುತ್ತಾರೆ. ಜೊತೆಗೆ ಉಳಿದವರಿಗೆಲ್ಲ ನಿಂತುಕೊಂಡು ನೋಡುತ್ತಿದ್ದೀರಲ್ಲ ಏನಾದರೂ ಸಹಾಯ ಮಾಡಬಾರದಾ, ಅಂಬುಲೆನ್ಸ್ ನಂಬರ್ ಗಾದರೂ ಫೋನ್ ಮಾಡಿ ಎಂದು ಹೇಳುತ್ತಿರುವುದು ಕೇಳಿಸುತ್ತದೆ. ರ.ಕ್ತಸ್ರಾ.ವ ಆಗಿ ಬಿದ್ದಿರುವ ಯುವಕ ಕೂಡ ನಾನು ನನ್ನ ಹೆಂಡತಿಗೆ ಊಟ ತೆಗೆದುಕೊಂಡು ಹೋಗುತ್ತಿದ್ದೆ. ಆಕೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾಳೆ ಎಂದು ಹೇಳುತ್ತಾ ಅಳುತ್ತಿರುವುದು ಅರ್ಥ ಆಗುತ್ತದೆ.

ಇದ್ದಕ್ಕಿದ್ದಂತೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ನಾನಾ ಅರ್ಥ ಪಡೆದುಕೊಂಡಿದೆ. ಕೆಲವರು ನೆನ್ನೆ ಅಷ್ಟೇ ಸುದೀಪ್ ಬಿಜೆಪಿ ಪರ ಮಾನ್ಯ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಪರ ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಜನರನ್ನು ಸೆಳೆಯುವ ತಂತ್ರ ಇರಬಹುದು ಎಂದು ದೂರಿದ್ದಾರೆ. ಇನ್ನೂ ಕೆಲವರು ಇಲ್ಲ ಇದು ನಿಜ ಆಗಿರಬಹುದು ಸುದೀಪ್ ಅವರು ಹೃದಯವಂತರು ಕಣ್ಣೆದುರಿಗೆ ಕಂಡ ಅಪಘಾತವನ್ನು ಹಾಗೆ ಬಿಟ್ಟು ಹೋಗುವರಲ್ಲ ಹಾಗಾಗಿ ಅವರು ನೈಜವಾಗಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಹತ್ತಿರದಲ್ಲಿದ್ದ ಯಾರೋ ರೆಕಾರ್ಡ್ ಮಾಡಿ ಹರಿಬಿಟ್ಟಿರಬಹುದು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ವಿಡಿಯೋ ನಿಜವಾದ ಅಸಲಿಯತ್ತು ಈ ರೀತಿ ಇದೆ ನೋಡಿ. ಇದು ರಸ್ತೆ ಅ.ಪ.ಘಾ.ತದ ಬಗ್ಗೆ ಎಚ್ಚರಿಸಲು ಮಾಡಿದ ಜನಜಾಗೃತಿ ಕಾರ್ಯಕ್ರಮದ ಒಂದು ವಿಡಿಯೋ ಆಗಿದೆ. ಒಂದು ಸ್ಕಿಟ್ ಮಾಡಿ ಜನರಲ್ಲಿ ರಸ್ತೆ ಅಪಘಾತದ ಬಗ್ಗೆ ಎಚ್ಚರಿಕೆ ಮೂಡಿಸುವುದು ಮತ್ತು ಸಂಚಾರಿ ನಿಯಮದ ಎಲ್ಲಾ ನ್ಯೂಸ್ ಗಳನ್ನು ತಪ್ಪದೇ ಫಾಲೋ ಮಾಡಿ ಎಂದು ಉತ್ತೇಜಿಸುವುದು.

ದ್ವಿ ಚಕ್ರವಾಹನದಾರರು ಯಾವ ರೀತಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಅದರ ಪ್ರಯೋಜನಗಳೇನೆಂದು ಮನವರಿಕೆ ಮಾಡುವುದು, ಹಾಗೆ ಒಂದು ವೇಳೆ ಅ.ನಾ.ಹು.ತಗಳಾದ ಸಂದರ್ಭದಲ್ಲಿ ಜನರು ಅದಕ್ಕೆ ಹೇಗೆ ಪ್ರತಿಕ್ರಿಯಬೇಕು, ಅಂತಹ ಸಮಯದಲ್ಲಿ ಸುತ್ತಮುತ್ತಲಿನವರ ಸಹಾಯ ಎಷ್ಟು ಮುಖ್ಯ ಆಗುತ್ತದೆ, ಅವರ ನಡವಳಿಕೆಗಳು ಯಾವ ರೀತಿ ಇರಬೇಕು ಎಂದು ಜನರಿಗೆ ಜಾಗೃತಿ ಮೂಡಿಸಲು ಮಾಡಿದ ಸ್ಕಿಟ್ ನ ವಿಡಿಯೋ ಇದಾಗಿದೆ.

ಆ ವಿಡಿಯೋ ಕ್ಲಿಪಿಂಗ್ ಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಇದರಲ್ಲಿ ಅಷ್ಟು ನೈಜವಾಗಿ ಎಲ್ಲರೂ ಕಾಣಿಸಿಕೊಂಡಿರುವುದರಿಂದ ಇದು ನಿಜವಾಗಿ ಎಲ್ಲೋ ಘಟನೆ ನಡೆದಿರುವುದು ಎಂದು ಅನಿಸುವಷ್ಟು ಜನರ ಗಮನ ಸೆಳೆದಿದೆ. ಇತ್ತೀಚೆಗೆ ರಸ್ತೆ ಅ.ಪ.ಘಾ.ತಗಳ ಸಂಖ್ಯೆ ಹೆಚ್ಚುತ್ತಾ ಇದೆ ಜೊತೆಗೆ ಯಾರದ್ದಾದರೂ ಪ್ರಾಣ ಅಪಾಯದಲ್ಲಿ ಇದ್ದರೂ ಕೂಡ ಕಂಡು ಕಾಣದಂತೆ ನಿರ್ಲಕ್ಷಿ ಹೋಗುವ ಜನರು ಇದ್ದಾರೆ. ಅವರಿಗೆಲ್ಲ ತಿಳುವಳಿಕೆ ಹೇಳುವಂತಹ ವಿಡಿಯೋ ಇದಾಗಿದೆ ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ಕಾಂತಾರ ಪಾರ್ಟ್ – 2 ಸಿನಿಮಾ ದಯವಿಟ್ಟು ಮಾಡಬೇಡಿ ಎಂದು ಬೇಡಿಕೆ ಇಟ್ಟ ಕಾರವಾಳಿ ಭಾಗದವರು. ಸಂಕಷ್ಟಕ್ಕೆ ಸಿಲುಕಿದ ನಟ ರಿಷಭ್ ಶೆಟ್ಟಿ.

 

ಈ ಬಲವಾದ ಕಾರಣಗಳಿಗಾಗಿ ರಿಷಬ್ ಶೆಟ್ಟಿ ಅವರಿಗೆ ಕಾಂತಾರ 2 ಮಾಡೋದು ಬೇಡ ಎನ್ನುತ್ತಿದ್ದಾರೆ ಕರಾವಳಿ ಭಾಗದವರು. ಕಾಂತಾರ ಕಳೆದ ವರ್ಷ ತೆರೆ ಕಂಡ ಲೋ ಬಜೆಟ್ ನ ಪ್ಯಾನ್ ಇಂಡಿಯಾ ಸಿನಿಮಾ. ಈ ಚಿತ್ರ ತಯಾರಾದಾಗ ಇದು ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತದೆ ಎನ್ನುವ ನಿರೀಕ್ಷೆ ಯಾರಲ್ಲೂ ಸಹ ಇರಲಿಲ್ಲ. ಸಿನಿಮಾ ತೆರೆ ಕಂಡ ಮೇಲೆ ಅದಕ್ಕೆ ಸಿಕ್ಕ ಪ್ರಚಾರ ಹಾಗೂ ಜನತೆಯಿಂದ ಸಿಕ್ಕ ಪ್ರತಿಕ್ರಿಯೆ ಅದನ್ನು ಪಾನ್ ಇಂಡಿಯಾ ಸಿನಿಮಾ ಆಗಿ ಎಲ್ಲ ಭಾಷೆಗೂ ಡಬ್ ಆಗುವ ರೀತಿ ಮಾಡಿತು.

ಈ ಸಿನಿಮಾದ ಸಕ್ಸಸ್ ಇಂದ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಅವರು ಡಿವೈನ್ ಸ್ಟಾರ್ ಎನ್ನುವ ಪಟ್ಟ ಕೂಡ ಗಿಟ್ಟಿಸಿಕೊಂಡಿರು. ಇದರೊಂದಿಗೆ ದೇಶದ ಅನೇಕ ಅವಾರ್ಡ್ ಗಳನ್ನು ಬಾಚಿಕೊಂಡತು ಸಿನಿಮಾ. ಕಾಂತರಾ ಸಿನಿಮಾದ ನೈಜ ನಟನೆ ಕಾರಣ ಚಿತ್ರ ಆಸ್ಕರ್ ಅವಾರ್ಡಿಗೂ ಕೂಡ ನಾಮಿನೇಟ್ ಆಗಿ ದೇಶದ ಗರಿಮೆ ಹೆಚ್ಚಿಸಿತ್ತು.

ಗಳಿಕೆಯಲ್ಲೂ ಮತ್ತು ಪ್ರಖ್ಯಾತಿಯಲ್ಲೂ ದೇಶ ವಿದೇಶಗಳೆಲ್ಲ ಹೆಸರು ಮಾಡಿದ ಕಾಂತರಾ ಸಿನಿಮಾ ಕರಾವಳಿ ಭಾಗದ ಜನರ ಜನಜೀವನ ನಂಬಿಕೆ ಆಚಾರ ವಿಚಾರ, ದೈವ, ಭೂತಕೋಲ, ದೈವ ನರ್ತನ, ಇತ್ಯಾದಿ ವಿಷಯಗಳನ್ನು ಪ್ರಪಂಚದ ಮೂಲೆ ಮೂಲೆಗೆ ತಿಳಿಸುವ ಪ್ರಯತ್ನ ಮಾಡಿತು. ಸಿನಿಮಾದ ಮೂಲ ಕಥೆ ಧರ್ಮ ಅಧರ್ಮದ ನಡುವಿನ ಹೋರಾಟವನ್ನು ತಿಳಿಸುವುದಾದರೂ ಅದನ್ನು ಪ್ರೆಸೆಂಟ್ ಮಾಡಿದ ರೀತಿ ಅದಕ್ಕೆ ಸೇರಿಸಿರುವ ಅಂಶಗಳೆಲ್ಲ ಇಂದು ಇಡೀ ಪ್ರಪಂಚ ಕರ್ನಾಟಕದ ಕರಾವಳಿಯತ್ತ ತಿರುಗಿ ನೋಡುವಂತೆ ಮಾಡಿತು.

ಇದರ ಸಕ್ಸಸ್ ಬೆನ್ನಲ್ಲೇ ಎಲ್ಲರೂ ಕಾಂತರಾ ಟು ಸಿನಿಮಾ ಶುರುವಾಗುತ್ತದೆ ಎಂದು ಹೋಪ್ ಇಟ್ಟು ಕೊಂಡಿದ್ದಾರೆ. ಚಿತ್ರತಂಡ ಕೂಡ ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು ಸ್ವತಃ ರಿಷಭ್ ಶೆಟ್ಟಿ ಅವರೇ ಕಾಂತರಾ ಟು ಸೀಕ್ವೆಲ್ ಬದಲು ಪ್ರಿಕ್ವೆಲ್ ಆಗಿ ಬರಲಿದೆ ಎನ್ನುವ ಭರವಸೆಯ ಮಾತುಗಳನ್ನು ಆಡಿದ್ದಾರೆ. ಆದರೆ ಕರಾವಳಿ ಭಾಗದ ಜನರು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಕಾಂತರಾ ಸಿನಿಮಾ ಪಾರ್ಟ್ ಟು ಬರುವುದೇ ಬೇಡ ಎಂದು ಹೇಳುತ್ತಿದ್ದಾರೆ.

ಅವರು ಹೇಳುವುದಕ್ಕೆ ಸಾಕಷ್ಟು ಕಾರಣಗಳಿದ್ದು, ಅದರಲ್ಲೊಬ್ಬರು ಟ್ವಿಟರ್ ಮೂಲಕ ಐಪಿಎಲ್ ನಲ್ಲಿ ದೈವದ ಗೆಟಪ್ ಹಾಕಿಕೊಂಡು ಆರ್‌ಸಿಬಿ ಫ್ಯಾನ್ ಒಬ್ಬ ನೃತ್ಯ ಮಾಡಿದ್ದ ವಿಡಿಯೋವನ್ನು ಹಾಕಿ ಅದಕ್ಕೆ ರಿಷಭ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಿ ಈ ರೀತಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇವರು ಈ ರೀತಿ ಆಡುತ್ತಿರುವುದು ದೈವನರ್ತಕರಿಗೆ ಮಾಡುತ್ತಿರುವ ಅವಮಾನ ಆಗಿದೆ. ದಯವಿಟ್ಟು ಪಾರ್ಟ್ 2 ಮಾಡಬೇಡಿ ಎಂದು ಕೇಳಿದ್ದಾರೆ.

ಈಗ ಟ್ವಿಟರ್ ಅಲ್ಲಿ ಇದರ ಬಗ್ಗೆ ಅಭಿಯಾನ ಕೂಡ ಶುರು ಆಗಿದ್ದು ಮತ್ತೊಬ್ಬರು ದೈವ ನರ್ತನ ಎನ್ನುವುದು ಕರಾವಳಿ ಭಾಗದವರು ನಂಬಿಕೆಗೆ ಧರ್ಮಕ್ಕೆ ಸಂಬಂಧಪಟ್ಟ ವಿಚಾರ, ನೃತ್ಯ ಪ್ರಕಾರವಲ್ಲ ಪ್ರದರ್ಶನ ಪಡಿಸುವುದಕ್ಕೆ ದಯವಿಟ್ಟು ಇದನ್ನು ಇಲ್ಲಿಗೆ ಬಿಡಿ ಎಂದು ಕೇಳಿದ್ದಾರೆ. ಮತ್ತೊಬ್ಬರು ಕಾಂತಾರ ಸಿನಿಮಾ ಈಗಾಗಲೇ ಸಾಕಷ್ಟು ಸಕ್ಸಸ್ ಕೊಟ್ಟಿದೆ, ಕರಾವಳಿ ಭಾಗದ ಜನರಿಗೆ ಇನ್ನೂ ಈ ವಿಚಾರವಾಗಿ ಬಹಳ ಭಕ್ತಿ ಇದೆ ಅದನ್ನು ಹಾಳು ಮಾಡಬೇಡಿ ನೀವು ಇಷ್ಟಕ್ಕೆ ತೃಪ್ತರಾಗಿ ಕಾಂತರಾ ಟು ಕೈ ಬಿಡಿ ಎಂದು ಹೇಳಿದ್ದಾರೆ.

ಇದೆಲ್ಲದರ ನಡುವೆ ರಿಷಭ್ ಶೆಟ್ಟಿ ಅವರ ಅಭಿಮಾನಿಗಳು ಕೂಡ ಪ್ರತಿಕ್ರಿಯೆ ಕೊಡುತ್ತಿದ್ದು ಸಾಕಷ್ಟು ಜನ ಕಾಂತರಾದ ಪ್ರೀಕ್ವೆಲ್ ನೋಡಲು ಕಾಯುತ್ತಿದ್ದೇವೆ, ಅದು ಬಂದರೆ ಸಹ ಏನು ತಪ್ಪಿಲ್ಲ ಮಾಡಿ ಎಂದು ಸಪೋರ್ಟ್ ಮಾಡುತ್ತಿದ್ದಾರೆ. ಕರಾವಳಿ ಭಾಗದ ಸಂಪ್ರದಾಯವನ್ನು ವಿಶ್ವವಿಖ್ಯಾತಿ ಮಾಡುತ್ತಿರುವ ರಿಷಭ್ ಶೆಟ್ಟಿ ಅವರ ಪ್ರಯತ್ನಕ್ಕೆ ನಾವೆಲ್ಲರೂ ಬೆಂಬಲವಾಗಿರೋಣ ಎಂದು ಮತ್ತೊಬ್ಬರು ಹೇಳುತ್ತಿದ್ದಾರೆ. ಇದೆಲ್ಲದರ ಜೊತೆ ಕಾಂತಾರ ಪ್ರೀಕ್ವೆಲ್ ಬರುವುದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಕೋಟಿ ಕೋಟಿ ಆಸ್ತಿ ಇದ್ರು ನಟ ನಾಗಾರ್ಜುನ್ ಹೆಂಡ್ತಿ ಮಾತ್ರ ಮೈ ಮೇಲೆ ಚೂರು ಬಂಗಾರ ಹಾಕಲ್ಲ ಯಾಕೆ ಗೊತ್ತಾ.?

 

ತೆಲುಗಿನ ಸ್ಟಾರ್ ಹೀರೋ ನಾಗಾರ್ಜುನ್ ಟಾಲಿವುಡ್ ನ ಎವರ್ ಗ್ರೀನ್ ಹೀರೋ. ತಮ್ಮ ಮಕ್ಕಳಾದ ನಾಗ ಚೈತನ್ಯ ಅಕ್ಕಿನೇನಿ ಮತ್ತು ಅಖಿಲ್ ಲಕ್ಕಿನೇನಿ ಕೂಡ ಸಿನಿಮಾ ರಂಗಕ್ಕೆ ಹೀರೋಗಳಾಗಿ ಲಾಂಚ್ ಆಗಿ ಮಿಂಚುತ್ತಿದ್ದರು ಇನ್ನೂ ಕೂಡ ನಾಗರ್ಜುನ್ ಅವರಿಗೆ ನಾಯಕನಾಗಿ ನಟಿಸಲು ಅಷ್ಟೇ ಬೇಡಿಕೆ ಇದೆ. ಈ ರೀತಿ ತೆಲುಗು ಪ್ರೇಕ್ಷಕರ ಮನಗೆದ್ದಿರುವ ನಾಗಾರ್ಜುನ್ ಅವರಿಗೆ ಇನ್ನೂ ಅನೇಕ ವರ್ಷ ಇಂತಹದೇ ಬೇಡಿಕೆ ಇರುವುದರಲ್ಲಿ ಯಾವುದೇ ಅನುಮಾನ ಇಲ್ಲ.

ನಾಗಾರ್ಜುನ ಮಕ್ಕಳಾದ ನಾಗಚೈತನ್ಯ ಮತ್ತು ಅಖಿಲ್ ಅವರು ನಾಗಾರ್ಜುನ ಅವರ ಬೇರೆ ಬೇರೆ ಪತ್ನಿಯರ ಮಕ್ಕಳು. ರಾಮ ನಾಯ್ಡು ಅವರ ಮಗಳಾದ ಲಕ್ಷ್ಮಿ ಪುತ್ರ ನಾಗಚೈತನ್ಯ. ನಾಗಚೈತನ್ಯ ಹುಟ್ಟಿದ ಕೆಲವೇ ದಿನಗಳಿಂದ ವೈಯಕ್ತಿಕ ಕಾರಣಗಳಿಂದ ಪತಿ ಪತ್ನಿ ವಿಚ್ಛೇದನ ಪಡೆದಿದ್ದರು ಆ ಸಮಯದಲ್ಲಿ ಮೂಲತಃ ಬೆಂಗಾಳಿ ನಟಿಯಾದ ಅಮಲ ನಾಗಾರ್ಜುನ್ ಅವರ ಲೈಫ್ ಗೆ ಎಂಟ್ರಿ ಕೊಡುತ್ತಾರೆ.

ಅಮಲಾ ಅವರು ಮೊದಲು ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡು ಬಹುತೇಕ ಎಲ್ಲಾ ತಮಿಳು ಸೂಪರ್ ಸ್ಟಾರ್ಗಳ ಜೊತೆ ಅಭಿನಯಿಸುತ್ತಾರೆ ನಂತರ ತೆಲುಗು ಇಂಡಸ್ಟ್ರಿ ಕಡೆ ಬಂದ ಇವರು ನಾಗಾರ್ಜುನ ಜೊತೆ ಶಿವ ಎನ್ನುವ ಸಿನಿಮಾದಲ್ಲಿ ನಟಿಸುತ್ತಾರೆ. ಆ ಸಿನಿಮಾ ಶೂಟಿಂಗ್ ವೇಳೆಯಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿರುತ್ತದೆ. ನಂತರ ಅದನ್ನು ಮದುವೆ ಹಂತಕ್ಕೂ ತೆಗೆದುಕೊಂಡ ಹೋದ ಈ ದಂಪತಿಗಳಿಗೆ ಅಖಿಲ್ ಅಕ್ಕಿನೇನಿ ಮಗನಾಗಿದ್ದಾರೆ.

ಅಮಲ ಅವರು ಸಿನಿಮಾ ರಂಗದಲ್ಲಿ ಬಹಳ ಬೇಡಿಕೆ ಇದ್ದಾಗಲೇ ಚಿತ್ರರಂಗದಿಂದ ದೂರ ಉಳಿದು ಕುಟುಂಬದ ಕಡೆ ಗಮನಕೊಟ್ಟರು. ಪ್ರಾಣಿಗಳ ಬಗ್ಗೆ ವಿಶೇಷ ಒಲವು ಹೊಂದಿರುವ ಇವರು ಅವುಗಳಿಗಾಗಿ ಒಂದು ಟ್ರಸ್ಟ್ ಸ್ಥಾಪಿಸಿ ಸಮಾಜ ಸೇವೆಯತ್ತ ತಮ್ಮ ಆಸಕ್ತಿ ಬೆಳೆಸಿಕೊಂಡಿದ್ದಾರೆ.

ಈ ರೀತಿ ಸಮಾಜ ಸೇವೆ ಮಾಡುವವರನ್ನು ನಾವು ಬೇರೆ ದೃಷ್ಟಿಕೋನದಿಂದ ನೋಡುತ್ತೇವೆ. ಯಾಕೆಂದರೆ ಅವರ ಜೀವನವು ಬಹಳ ಸರಳವಾಗಿರುತ್ತದೆ. ಉದಾಹರಣೆಯಾಗಿ ನಮ್ಮ ಕನ್ನಡದ ಹೆಮ್ಮೆಯ ಲೇಖಕಿ ಮತ್ತು ಇನ್ಫೋಸಿಸ್ ಒಡತಿ ಸುಧಾ ಮೂರ್ತಿ ಅವರನ್ನು ಹೆಸರಿಸಬಹುದು. ಸುಧಾ ಮೂರ್ತಿ ಅವರನ್ನು ಕಂಡಾಗಲಿಲ್ಲ ಕೋಟಿ ಕೋಟಿ ಒಡತಿ ಆಗಿದ್ದರೂ ಎಷ್ಟು ಸರಳವಾಗಿದ್ದರೆ ಜೊತೆಗೆ ಸಮಾಜದ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದಾರೆ ಎನ್ನುವುದು ಅರಿವಿಗೆ ಬರುತ್ತದೆ.

ಇದೇ ರೀತಿ ದಾರಿಯನ್ನು ಅಮಲಾ ಅವರು ಹಿಡಿದಿದ್ದಾರೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಕೋಟಿ ಕೋಟಿ ಆಸ್ತಿಗೆ ಯಜಮಾನಿ ಆಗಿದ್ದರೂ ಕೂಡ ಅಮಲ ಅವರು ಎಂದು ಕೂಡ ಶೋ ಆಫ್ ಮಾಡಿದವರಲ್ಲ. ಚೂರು ಬಂಗಾರ ಕೂಡ ಧರಿಸಲು ಅವರು ಇಚ್ಛೆಪಡುವುದಿಲ್ಲ. ಇತ್ತೀಚಿಗಿನ ಅವರ ಯಾವ ಫೋಟೋ ನೋಡಿದರು ಕೂಡ ಅವರು ಬಹಳ ಸಿಂಪಲ್ ಆಗಿ ಇರುತ್ತಾರೆ. ಆದರೆ ಹಲವರು ಇದಕ್ಕೆ ಅವರಿಗೆ ಸ್ಕಿನ್ ಅಲರ್ಜಿ ಇರುವುದೇ ಕಾರಣ ಎಂದು ಹೇಳುತ್ತಿದ್ದಾರೆ.

ಚಿನ್ನ ಹಾಕಿದರೆ ರಾಶಸ್ ಆಗುತ್ತದೆ ಎನ್ನುವ ಕಾರಣಕ್ಕಾಗಿ ಅವರು ಚಿನ್ನ ಧರಿಸುತ್ತಿಲ್ಲ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಅವರು ತಮ್ಮ ಬದುಕನ್ನು ಆದರ್ಶಮಯವಾಗಿ ಕಟ್ಟಿಕೊಂಡಿದ್ದಾರೆ. ಸಮಾಜಮುಖಿಯಾಗಿ ಸಮಾಜಸೇವೆಯಲ್ಲಿ ತೊಡಗಿತಕೊಂಡ ಮೇಲೆ ಈ ರೀತಿ ಸರಳವಾಗಿ ಬದುಕುವುದನ್ನು ಅವರು ಅಳವಡಿಸಿಕೊಂಡಿರುವ ಕಾರಣ ಇದರ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

ದಿಢೀರ್ ಎಂದು ಭಾಗ್ಯಲಕ್ಷ್ಮಿ ಸೀರಿಯಲ್ ಬಿಟ್ಟು ಹೋರ ನಡೆದ ನಟಿ ಗೌತಮಿ ಇದ್ದಕ್ಕಿದ್ದಂತೆ ಈ ರೀತಿ ನಿರ್ಧಾರ ಕೈಗೊಳ್ಳಲು ಕಾರಣವೇನು ಗೊತ್ತ.?

 

ಕಿರುತೆರೆ ಪ್ರಪಂಚದಲ್ಲಿ ಹೊಸ ರೀತಿಯ ಪ್ರಯೋಗವನ್ನು ಭಾಗ್ಯಲಕ್ಷ್ಮಿ ಧಾರಾವಾಹಿ ಮತ್ತು ಲಕ್ಷ್ಮಿ ಬಾರಮ್ಮ ಧಾರವಾಹಿಗಳು ಮಾಡುತ್ತಿವೆ. ಅಕ್ಕ-ತಂಗಿಯರ ಕಥೆಗಳು ಅಕ್ಕಪಕ್ಕದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 7ರಿಂದ 7:30 ಹಾಗು 7.30 ರಿಂದ 8.00 ರವರೆಗೆ ಪ್ರಸಾರ ಆಗುತ್ತಿವೆ. ಭಾಗ್ಯ ಹಾಗೂ ಲಕ್ಷ್ಮೀ ಎನ್ನುವ ಈ ಕಸಿನ್ಸ್ ಗಳ ಕಥೆಗೆ ಕನ್ನಡಿಗರು ಮನಸೋತಿದ್ದಾರೆ. ಎಲ್ಲಾ ಪಾತ್ರಗಳ ಘನತೆ, ನಿರ್ವಹಣೆ ಆಗುವ ಆಯ್ಕೆ ಅಚ್ಚುಕಟ್ಟಾಗಿದ್ದು ಪ್ರತಿಯೊಂದು ಅಂಶವು ಕೂಡ ಧಾರಾವಾಹಿಗಳ ಗೆಲುವಿಗೆ ಕಾರಣವಾಗಿದೆ.

ಧಾರಾವಾಹಿ ಶುರುವಾದ ಕೆಲವೇ ತಿಂಗಳಲ್ಲಿ ಮುಖ್ಯಪಾತ್ರ ಬದಲಾವಣೆ ಆಗಿರುವುದು ನೋಡುಗರಿಗೆ ಬೇಸರ ತರಿಸಿದೆ. ಈ ಧಾರಾವಾಹಿಯಲ್ಲಿ ನಾಯಕನಟ ತಾಂಡವ್ ಸೂರ್ಯವಂಶಿ ಅವರ ಗರ್ಲ್ ಫ್ರೆಂಡ್ ಆಗಿ ಶ್ರೇಷ್ಠ ಎನ್ನುವ ಪಾತ್ರದಲ್ಲಿ ಕಿರುತೆರೆಯ ಫೇಮಸ್ ಫೇಸ್ ಗೌತಮಿ ಗೌಡ ಅವರು ಕಾಣಿಸಿಕೊಂಡಿದ್ದರು. ಈಗ ಆ ಪಾತ್ರದಲ್ಲಿ ಬೇರೆಯವರು ಕಾಣಿಸಿಕೊಳ್ಳುತ್ತಿದ್ದಾರೆ.

ಗೌತಮಿ ಗೌಡ ಅವರು ಕಲರ್ಸ್ ಕನ್ನಡಕ್ಕೆ ಹೊಸಬರೇನಲ್ಲ. ಈ ಹಿಂದೆ ಅಮ್ಮ ನಿನಗಾಗಿ ಎನ್ನುವ ಸೂಪರ್ ಹಿಟ್ ಧಾರವಾಹಿಯಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದ ಗೌತಮಿ ಬಿಗ್ ಬಾಸ್ ಸೀಸನ್ 3 ರಲ್ಲೂ ಕೂಡ ವೈರ್ಲ್ಡ್ ಕಾರ್ಡ್ ಸ್ಪರ್ಧಿ ಆಗಿ ಮನೆಗೆ ಎಂಟ್ರಿಕೊಟ್ಟು ಸಖತ್ ಕಾಂಪಿಟೇಶನ್ ಕೊಟ್ಟಿದ್ದರು. ಕಿರುತೆರೆಯಲ್ಲಿ ಗೌತಮಿ ಗೌಡ ನಿರೂಪಕಿಯಾಗಿ ರಿಯಾಲಿಟಿ ಶೋಗಳ ಕಂಟೆಸ್ಟೆಂಟ್ ಆಗಿ ಮತ್ತು ಫೇಮಸ್ ಧಾರಾವಾಹಿಗಳಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡು ಪ್ರಖ್ಯಾತರಾಗಿದ್ದಾರೆ.

ಚಿ.ಸೌ ಸಾವಿತ್ರಿ ಎನ್ನುವ ಧಾರಾವಾಹಿಯು ಇವರಿಗೆ ಕಿರುತೆರೆಯಲ್ಲಿ ಪ್ರಮುಖ ಮೈಲುಗಲ್ಲು ಆಯಿತು ಎಂದೇ ಹೇಳಬಹುದು. ನಟಿ ಗೌತಮಿ ಗೌಡ ಅವರು ಹಿರಿತರೆಯಲ್ಲೂ ಕೂಡ ತಮ್ಮ ಅದೃಷ್ಟ ಪರೀಕ್ಷಿಸಿಕೊಂಡಿದ್ದಾರೆ. ನಾಯಕನಟಿಯಾಗಿ ಅಲ್ಲದಿದ್ದರೂ ಕೂಡ ಸಹಪಾತ್ರಧಾರಿಯಾಗಿ ಗುರು, ಜೆಸ್ಸಿ, ಅಂಬಿ ನಿಂಗೆ ವಯಸ್ಸಾಯ್ತು ಇನ್ನು ಮುಂತಾದ ಸಿನಿಮಾಗಳಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದಾರೆ.

ವರ್ಷಗಳ ಹಿಂದೆ ಮದುವೆ ಆಗಿರುವ ಗೌತಮಿ ಗೌಡ ಅವರು ತಮ್ಮ ಬಹುಕಾಲದ ಗೆಳೆಯ ಕ್ರಿಸ್ಟಿ ಅವರನ್ನು ಕೈ ಹಿಡಿದು ಮಲೇಷಿಯಾಗೆ ಹಾರಿದ್ದರು. ಅವರು ಅಲ್ಲೇ ನೆಲೆಸುತ್ತಾರೆ ಎಂದು ಬಹುತೇಕರು ಊಹಿಸಿದ್ದರೂ ಕೂಡ ಕನ್ನಡದ ಕಿರುತೆರೆ ನಂಟು ಅವರನ್ನು ಮತ್ತೊಮ್ಮೆ ಬರಮಾಡಿಕೊಂಡಿದೆ. ಈಗ ಬಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ನೆಗೆಟಿವ್ ರೋಲಲ್ಲಿ ಮಿಂಚುತ್ತಿರುವ ಶ್ರೇಷ್ಠ ಇದೇ ಮೊದಲ ಬಾರಿಗೆ ಈ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಆದರೂ ಕೂಡ ಈಕೆಯ ನಟನೆಗೆ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ದಿಢೀರ್ ಎಂದು ನಟಿ ದಾರಾವಾಹಿ ಬಿಟ್ಟಿದ್ದಾರೆ ಎನ್ನುವ ಶಾ’ಕ್ ಸುದ್ದಿ ಎಲ್ಲರಿಗೂ ಬೇಸರ ತರಿಸಿದೆ. ಎಪಿಸೋಡ್ ಒಂದರಲ್ಲಿ ಕರೆ ಬಂತು ಈಗಲೇ ಹೊರಡುತ್ತೇನೆ ಎಂದು ಹೋದವರು ಮತ್ತೆ ಯಾವ ಸೀನ್ ಗಳಲ್ಲೂ ಕೂಡ ಕಾಣಿಸಿಕೊಳ್ಳುವುದಿಲ್ಲ ಎನ್ನುವುದನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

ನಟಿ ಸೀರಿಯಲ್ ಬಿಟ್ಟಿದ್ದರ ಬಗ್ಗೆ ಅನೇಕ ಊಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿತ್ತು. ಆದರೆ ಇದಕ್ಕೆಲ್ಲ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಉತ್ತರಿಸುವ ಮೂಲಕ ಗೌತಮಿ ಸ್ಪಷ್ಟನೆ ನೀಡಿದ್ದಾರೆ. ನಾನು ನೆಗೆಟಿವ್ ರೋಲ್ ಮಾಡಿದ್ದರೂ ಕೂಡ ನನಗೆ ಬಹಳ ಮೆಚ್ಚುಗೆ ಹಾಗು ಪ್ರೀತಿ ಕೊಟ್ಟಿದ್ದೀರಿ ಅದಕ್ಕೆ ನಾನು ಆಭಾರಿ. ಆದರೆ ಅನಿವಾರ್ಯ ಕಾರಣಗಳಿಂದ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು, ಮತ್ತೊಂದು ಸಿಹಿ ಸುದ್ದಿಯೊಂದಿಗೆ ಮತ್ತೆ ಸಿಗುತ್ತೇನೆ. ನಗು ನಗುತ್ತಲೇ ನಾನು ಧಾರಾವಾಹಿಯಿಂದ ಹೊರ ಬಂದಿದ್ದೇನೆ ಎಂದು ನಟಿ ಬರೆದು ಕೊಂಡಿದ್ದಾರೆ.

https://www.instagram.com/p/Cqk9qsstzqX/?igshid=YmMyMTA2M2Y=