Home Blog Page 218

ಮೈಸೂರಿನಲ್ಲಿ ಕಾಟೇರ ಶೂಟಿಂಗ್, ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು.

 

ದರ್ಶನ್ ಅವರ 56ನೇ ಚಿತ್ರ ಕಾಟೇರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾ ಆಗಿದೆ. ಯಾಕೆಂದರೆ ಕುರುಕ್ಷೇತ್ರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಬಿಟ್ಟರೆ ಆನಂತರ ದಚ್ಚು ಹೆಚ್ಚಾಗಿ ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರ ಮುಂದಿನ ಸಿನಿಮಾ ಕಾಟೇರ ಕಥೆ ಸ್ವಲ್ಪ ವಿಭಿನ್ನವಾಗಿದೆ. 70ರ ದಶಕದ ಕಥಾಂದರ ಹೊಂದಿರುವ ನೈಜ ಘಟನೆ ಆಧಾರಿತ ಚಿತ್ರ ಇದಾಗಿದ್ದು ದರ್ಶನ್ ಮತ್ತು ತರುಣ್ ಸುಧೀರ್ ಅವರ ಕಾಂಬಿನೇಷನ್ ಮತ್ತೊಂದು ಚಿತ್ರವಾಗಿದೆ.

ಸಿನಿಮಾ ತಂಡ ಫಸ್ಟ್ ಲುಕ್ ಮೋಶನ್ ಪೋಸ್ಟರ್ ರಿಲೀಸ್ ಮಾಡಿದ ದಿನದಿಂದಲೂ ಕೂಡ ದರ್ಶನ್ ಅವರ ಲುಕ್ ಬಗ್ಗೆ ಜನ ಸಕ್ಕತ್ ಇಂಪ್ರೆಸ್ ಆಗಿದ್ದಾರೆ, ಮೊದಲ ಬಾರಿಗೆ ರೆಟ್ರೋ ಸ್ಟೈಲಲ್ಲಿ ದಾಸ ನಟಿಸುತ್ತಿದ್ದಾರೆ. ಪೋಸ್ಟರಲ್ಲಿರುವ ಕೆಂಪು ಬಣ್ಣದ ಅಂಗಿ ಹಾಗೂ ಕಂದು ಬಣ್ಣದ ಲುಂಗಿ ದರ್ಶನ್ ಅವರಿಗೆ ಸಕ್ಕತ್ತಾಗಿ ಸೂಟ್ ಆಗಿ ಸಿನಿಮಾ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ. ಸಿನಿಮಾ ಬಗೆಗಿನ ಮತ್ತಷ್ಟು ಅಪ್ಡೇಟ್ಸ್ ಎಂದರೆ ಮಾಲಾಶ್ರೀ ಪುತ್ರಿ ರಾಧನರಾಮ್ ಅವರು ನಾಯಕಿಯಾಗಿ ಲಾಂಚ್ ಆಗುತ್ತಿರುವ ಸಿನಿಮಾ ಇದು.

ಹಾಗೆ ಖಡಕ್ ವಿಲನ್ ಪಾತ್ರದಲ್ಲಿ ತೆಲುಗು ಹೀರೋ ಜಗಪತಿ ಬಾಬು ಅವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಕ್ಲೈನ್ ವೆಂಕಟೇಶ್ ಅವರು ಬಜೆಟ್ ಹೂಡುತ್ತಿರುವ ಈ ಸಿನಿಮಾಗೆ ಬಹುತೇಕ ರಾಬರ್ಟ್ ಚಿತ್ರತಂಡದಲ್ಲಿದ್ದ ಎಲ್ಲಾ ತಾಂತ್ರಿಕ ವರ್ಗವು ಕೂಡ ಕೆಲಸ ಮಾಡುತ್ತಿದೆ. ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದ ದಿನದಂದು ಕನಕಪುರ ಬಳಿ ಇರುವ ಶ್ರೀ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಚಿತ್ರದ ಮುಹೂರ್ತ ಕಾರ್ಯ ನಡೆದಿತ್ತು. ನಂತರ ಕ್ರಾಂತಿ ಸಿನಿಮಾದ ಪ್ರಚಾರಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಡಿ.56 ಸಿನಿಮ ಕುರಿತ ಅಪ್ಡೇಟ್ ಅನ್ನು ಬಿಟ್ಟುಕೊಟ್ಟಿರಲಿಲ್ಲ.

ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾಗೆ ಕಾಟೇರ ಎಂದು ಟೈಟಲ್ ಫಿಕ್ಸ್ ಕೂಡ ಮಾಡಲಾಯಿತು.ಅಂದಿನಿಂದ ಚಿತ್ರಿಕರಣ ಬರದಲ್ಲಿ ಸಾಗುತ್ತಿದೆ. ಈಗಾಗಲೇ ಸಿನಿಮಾದ 40% ಶೂಟಿಂಗ್ ಮುಗಿದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.ಅಸಹಾಯಕರ ಮತ್ತು ಶೋಷಿತರ ವಿರುದ್ಧ ಬಂಡಾಯ ಏಳುವ ನಾಯಕನಾಗಿ ದರ್ಶನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಕನಕಪುರದ ಸುತ್ತಮುತ್ತ 15 ದಿನಗಳ ಶೂಟಿಂಗ್ ಅನ್ನು ಚಿತ್ರತಂಡ ಮಾಡಿತ್ತು.

ಈಗ ಮೈಸೂರಿನ ಬಳಿ ಇರುವ ಸುತ್ತೂರಿನ ತೋಟವೊಂದರಲ್ಲಿ ಪೋಸ್ಟರ್ ಅಲ್ಲಿ ಕಾಣಿಸಿಕೊಂಡಿದ್ದ ಲುಕ್ ನಲ್ಲಿ ದರ್ಶನ್ ದರ್ಶನವಾಗಿದೆ. ಅಂದರೆ ಕಥೆಯ ಮುಖ್ಯ ಭಾಗದ ಶೂಟಿಂಗ್ ಈಗ ಅಲ್ಲಿ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕಾಟೇರ ಚಿತ್ರೀಕರಣದ ಸಮಯದಲ್ಲಿ ಅಭಿಮಾನಿಗಳು ದರ್ಶನ್ ಅವರನ್ನು ನೋಡಲು ಮುಗಿಬಿದ್ದಿರುವ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿವೆ.

ಹಲವರು ದರ್ಶನ್ ಅವರ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕ್ಯಾರಾವನ್ ಇಳಿದು ದರ್ಶನ್ ಅವರು ಕಾಟೇರ ಗೆಟಪ್ ಅಲ್ಲಿ ಹೋಗುತ್ತಿರುವುದು ಜೊತೆಗೆ ಶಾಟ್ ಮುಗಿಸಿ ಬರುತ್ತಿರುವುದು, ಅಭಿಮಾನಿಗಳು ಡಿ ಬಾಸ್ ಎಂದು ಕೂಗಿದಾಗ ಅವರ ಕಡೆ ಕೈ ಬೀಸಿ ಪ್ರೀತಿ ತೋರುತ್ತಿರುವುದು ಕಂಡು ಬಂದಿದೆ. ನಾನಾ ಕಾರಣಗಳಿಂದ ಕಾಟೇರ ಸಿನಿಮಾ ಕುರಿತ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದ್ದು.

ಚಿತ್ರತಂಡ ಕೂಡ ಡಿಸೆಂಬರ್ ವೇಳೆಗೆ ಸಿನಿಮಾ ರಿಲೀಸ್ ಮಾಡುವುದಾಗಿ ಭರವಸೆ ಕೊಟ್ಟಿದೆ. ಹೀಗಾಗಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಸೆಲೆಬ್ರಿಟಿಗಳ ಸೆಲೆಬ್ರಿಟಿ ದರ್ಶನ್ ಅವರ ಈ ಕಾಟೇರ ಲುಕ್ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

https://www.instagram.com/reel/CqvfrvbMoLG/?igshid=YmMyMTA2M2Y=

ರಚಿತಾ ರಾಮ್ ಒಂದು ಸಿನಿಮಾ ಮಾಡೋಕೆ ತೆಗೆದುಕೊಳ್ಳುವ ದುಬಾರಿ ಸಂಭಾವನೆ ಎಷ್ಟು ಗೊತ್ತ.? .

 

ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆ ಇರುವ ನಟಿ. ದರ್ಶನ್, ಸುದೀಪ್, ಉಪೇಂದ್ರ, ಗಣೇಶ್, ಶಿವಣ್ಣ, ಪುನೀತ್ ಹೀಗೆ ಸ್ಟಾರ್ ನಟರ ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ಪ್ರಜ್ವಲ್, ನೀನಾಸಂ ಸತೀಶ್, ನಿಖಿಲ್, ಅಜಯ್ ರಾವ್, ಮುರಳಿ ಅಂತಹ ಟ್ಯಾಲೆಂಟೆಡ್ ಆಕ್ಟರ್ಗಳ ಕಂಟೆಂಟ್ ಓರಿಯಂಟ್ ಸಿನಿಮಾಗಳ ಭಾಗವಾಗುವುದರಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಚಿತಾ ರಾಮ್ ಅವರಿಗೆ ಬಹಳ ಬೇಡಿಕೆ ಇದೆ.

ಹಿಂದೊಮ್ಮೆ ಇವರ ಸಣ್ಣ ಕಲಾವಿದನ ಸಿನಿಮಾಗೆ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಕ್ಕೆ ವಿವಾದ ಆಗಿದ್ದು ಇದೆ. ಆದರೆ ನಟಿ ಹೇಳುವುದು ನನಗೆ ಸಿನಿಮಾ ಕಂಟೆಂಟ್ ಮುಖ್ಯ, ನನ್ನ ಪಾತ್ರ ಮುಖ್ಯ ಹೀಗಿದ್ದಾಗ ನಾನು ಯಾರಿಗೆ ಬೇಕಾದರೂ ನಟಿ ಆಗುತ್ತೇನೆ ಎಂದು ಹೇಳಿಕೊಳ್ಳುವ ಇವರು ವರ್ಷಪೂರ ಸಿನಿಮಾಗಳಲ್ಲಿ ಬಿಜಿ ಇರುತ್ತಾರೆ. ಅವರ ಸಂಭಾವ್ಯ ಸಿನಿಮಾಗಳ ಹೆಸರುಗಳನ್ನು ನೋಡಿದರಾದರೆ ದೊಡ್ಡಪಟ್ಟಿಯ ಇರುತ್ತದೆ.

ಸದ್ಯಕ್ಕಿಗ ಕ್ರಾಂತಿ ಸಿನಿಮಾ ನಂತರ ಅವರ ವೀರಂ ಸಿನಿಮಾ ರಿಲೀಸ್ ಗೆ ರೆಡಿ ಆಗಿದೆ. ರಚಿತರಾಮ್ ಅವರು ಬೆಳ್ಳಿತರೆ ಮಾತವಲ್ಲದೆ ಕಿರುತೆರೆಯಲ್ಲೂ ಕೂಡ ಹೆಸರು ಮಾಡಿದವರು. ಇವರು ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದು ಕಿರುತೆರೆ ಧಾರಾವಾಹಿಯ ಮೂಲಕ ಅರಸಿ ಎನ್ನುವ ಧಾರವಾಹಿಯಲ್ಲಿ ನೆಗೆಟಿವ್ ಮಾಡುತ್ತಿದ್ದಾಗ ಬುಲ್ ಬುಲ್ ಸಿನಿಮಾ ತಂಡದ ಕಣ್ಣಿಗೆ ಬಿದ್ದ ಇವರು ಬುಲ್ ಬುಲ್ ಸಿನಿಮಾ ಆದ ನಂತರ ಅತಿ ದೊಡ್ಡ ಬ್ರೇಕ್ ಪಡೆದುಕೊಂಡರು.

ಇಂದು ಕನ್ನಡದಲ್ಲಿ ನಂಬರ್ ಒನ್ ನಟಿ ಆಗುವ ಹತ್ತಿರಕ್ಕೆ ಬೆಳೆಯುತ್ತಿರುವ ಇವರು ಈಗಲೂ ಸಹ ಕಿರುತೆರೆ ನಂಟು ಕಳೆದುಕೊಂಡಿಲ್ಲ. ಇಷ್ಟು ಬ್ಯುಸಿ ಶೆಡ್ಯೂಲ್ ನಡುವೆ ಹಿಂದಿನಿಂದಲೂ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡು ಕಿರುತೆರೆ ಪ್ರೇಕ್ಷಕರಿಗೂ ಹತ್ತಿರವಾಗಿರುವ ಇವರ ಸಂಭಾವನೆ ಎಷ್ಟಿರಬಹುದು ಎಂದು ಎಲ್ಲರ ಕುತೂಹಲ.

ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈ ರೀತಿ ಸಂಭಾವನೆ ವಿಚಾರವಾಗಿ ನಾಯಕನಟರುಗಳು ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಜೊತೆಗೆ ಅವರಿಗೆ ಗೊತ್ತಿಲ್ಲದಂತೆ ಈ ವಿಚಾರವಾಗಿ ಒಂದು ರೇಸ್ ಆರಂಭವಾಗಿದೆ ಎಂದರು ಅದು ಸುಳ್ಳಲ್ಲ. ಆದರೆ ನಟಿ ಮಣಿಯರು ತೆಗೆದುಕೊಳ್ಳುವ ಸಂಭಾವನೆ ಬಗ್ಗೆ ಚರ್ಚೆ ಆಗುವುದು ಕಡಿಮೆ ಆದರೆ ರಚಿತಾ ರಾಮ್ ಅವರು ಇಷ್ಟೆಲ್ಲಾ ಬಿಸಿ ಇರುವ ಕಾರಣಕ್ಕಾಗಿ ಅವರು ಎಷ್ಟು ಸಂಪಾದನೆ ಮಾಡುತ್ತಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಯುವ ಜನತೆಗೆ.

ರಚಿತಾ ರಾಮ್ ಅವರು ಅಂದದ ಜೊತೆ ಅದೃಷ್ಟವನ್ನು ಹೊಂದಿರುವ ಪ್ರತಿಭಾನ್ವಿತ ನಟಿ. ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಕನ್ನಡ ಸಿನಿಮಾಗಳಲ್ಲಿ ಸಾಂಪ್ರದಾಯಿಕ ಹುಡುಗಿ ಪಾತ್ರ, ಗ್ಲಾಮರ್ ಡಾಲ್ ಲುಕ್ , ಅಥವಾ ಬೋಲ್ಡ್ ಪಾತ್ರಗಳಿಗೂ ತನ್ನನ್ನು ತಾನು ಒಗ್ಗಿಸಿಕೊಂಡು ನಟಿಸುವಂತಹ ಡೆಡಿಕೇಟೆಡ್ ಹೀರೋಯಿನ್.

ಹೀಗಾಗಿ ಇವರನ್ನು ನಿರ್ದೇಶಕರ ನಟಿ ಎಂದು ಕರೆಯುತ್ತಾರೆ ಇನ್ನು ಸಂಭಾವನೆ ವಿಚಾರ ಕೇಳಿದರೆ ಇವರು ನಿರ್ಮಾಪಕರ ನಟಿ ಎಂದು ಸಹ ನೀವು ಒಪ್ಪಬಹುದು. ಯಾಕೆಂದರೆ ಇಷ್ಟೆಲ್ಲ ಶ್ರಮ ಹಾಕಿ ಎಲ್ಲದಕ್ಕೂ ಸಮಯ ತೂಗಿಸಿಕೊಂಡು ಸಿನಿಮಾ ಮಾಡುವ ಇವರು ಒಂದು ಸಿನಿಮಾಗಾಗಿ ತೆಗೆದುಕೊಳ್ಳುವುದು 40 ರಿಂದ 60 ಲಕ್ಷ ಮಾತ್ರ.

ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾ ಗೆ ಈ ಹಣದ ಮೊತ್ತ ಸ್ವಲ್ಪ ಹೆಚ್ಚು ಕಮ್ಮಿ ಆಗಬಹುದು. ಆದರೆ ಇದುವರೆಗೆ ಅವರು ತೆಗೆದುಕೊಂಡಿರುವ ಸಿನಿಮಾ ಪ್ರಾಜೆಕ್ಟ್ ಗೆ ಸಂಬಂಧಿತ ಸಂಭಾವನೆ 60 ಲಕ್ಷಕ್ಕಿಂತ ಮೀರಿಲ್ಲ ಎನ್ನುತ್ತದೆ ಮೂಲಗಳು. ನಿಮ್ಮ ಪ್ರಕಾರ ರಚಿತರಾಮ್ ಅವರಿಗೆ ಎಷ್ಟು ಸಂಭಾವನೆ ಸಿಗಬೇಕು ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.

ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ನಟ ಯಾರು ಗೊತ್ತ.? ಸಮೀಕ್ಷೆ ವರದಿ ನೋಡಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯ ಆಗಬಹುದು.

 

ಕನ್ನಡ ಚಲನಚಿತ್ರರಂಗ ಡಾ. ರಾಜಕುಮಾರ್ ಅವರ ಕಾಲದಿಂದ ಹಿಡಿದು ಈಗಿನ ರಾಕಿಂಗ್ ಸ್ಟಾರ್ ಯಶ್ ಅವರವರಿಗೆ ಹಲವು ನಾಯಕರನ್ನು ಕಂಡಿದೆ ಇಂಥವರಲ್ಲಿ ಅಣ್ಣಾವ್ರು, ವಿಷ್ಣುವರ್ಧನ್, ಶಂಕರ್ ನಾಗ್, ಸುನಿಲ್, ದರ್ಶನ್, ಸುದೀಪ್, ಉಪೇಂದ್ರ, ಗಣೇಶ್, ಯಶ್, ರಕ್ಷಿತ್ ಮುಂತಾದವರು ಅಗ್ರಸ್ಥಾನದಲ್ಲಿ ಉಳಿಯುತ್ತಾರೆ. ಈ ಎಲ್ಲರ ಹೆಸರಿನಲ್ಲಿ ಒಂದಲ್ಲ ಒಂದು ಕಾರಣಕ್ಕಾಗಿ ದಾಖಲೆಗಳು ಆಗಿರುತ್ತವೆ.

ಉದಾಹರಣೆಗೆ ಡಾ. ರಾಜಕುಮಾರ್ ಅವರು ಕರ್ನಾಟಕದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ಜನಪ್ರಿಯ ನಾಯಕ ನಟ ಮತ್ತು ಡಾಕ್ಟರ್ ವಿಷ್ಣುವರ್ಧನ್ ಅವರು ಅತಿ ಹೆಚ್ಚು ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಸ್ಟಾರ್ ನಟ. ನಟ ದರ್ಶನ್ ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟ ಹೀಗೆ ಈ ಪಟ್ಟಿಯಲ್ಲಿ ಅತಿ ಹೆಚ್ಚು ಮಹಿಳಾ ಅಭಿಮಾನಿಗಳು ಹೊಂದಿರುವ ನಟ ಯಾರು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ.

ಅದಕ್ಕಾಗಿ ಈ ಅಂಕಣದಲ್ಲಿ ಅದರ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಕಿಚ್ಚ ಸುದೀಪ್ ಎಂದರೆ ಕನ್ನಡಿಗರಿಗೆ ಮಾತ್ರವಲ್ಲದೆ ಇಡಿ ಭಾರತ ದೇಶಕ್ಕೆ ಗೊತ್ತು. ಕನ್ನಡ ಚಿತ್ರರಂಗ ಮಾರ್ತವಲ್ಲದೆ ತಮಿಳು ತೆಲುಗು ಹಿಂದಿ ಹೀಗೆ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ದೇಶದಾದ್ಯಂತ ಹೆಸರು ಪಡೆದಿರುವ ಕಿಚ್ಚ ಸುದೀಪ್ ಅವರಿಗೆ ಕರ್ನಾಟಕದಲ್ಲಿ ಅತಿ ಹೆಚ್ಚು ಮಹಿಳಾ ಅಭಿಮಾನಿಗಳು ಇದ್ದಾರೆ.

ಹಿಂದೊಮ್ಮೆ ಅವರು ಬರಿ ಕಾಲ್ನಡಿಗೆಯಲ್ಲಿ ಬಂದು ಸುದೀಪ್ ಅವರ ಮನೆ ಸೇರಿದ ಉದಾಹರಣೆಗಳು ಇವೆ. ಸದ್ಯಕ್ಕೆ ಈಗ ಟಾಪ್ ಒನ್ ನಂಬರಲ್ಲಿ ಸುದೀಪ್ ಅವರು ಇದ್ದಾರೆ. ಇವರ ನಂತರ ರಾಕಿಂಗ್ ಸ್ಟಾರ್ ಯಶ್ ಅವರು ಬರುತ್ತಾರೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ಸಹ ಕರ್ನಾಟಕದಲ್ಲಿ ಅತಿ ಹೆಚ್ಚು ಮಹಿಳಾ ಅಭಿಮಾನಿಗಳು ಇಷ್ಟಪಡುತ್ತಾರಂತೆ.

ಅವರ ಮೊಗ್ಗಿನ ಮನಸ್ಸು, ರಾಜಾಹುಲಿ, ಗೂಗ್ಲಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಕೆಜಿಎಫ್ ಸರಣಿಗಳು ಇಂತಹ ಸಿನಿಮಾಗಳು ಅವರ ಮಹಿಳಾ ಅಭಿಮಾನಿಗಳ ಸಂಖ್ಯೆಗಳನ್ನು ಹೆಚ್ಚಿಸಿದೆ ಎಂದೇ ಹೇಳಬಹುದು. ಇವರ ನಂತರ ಈ ಲಿಸ್ಟಲ್ಲಿ ಬರುವ ಮತ್ತೊಂದು ಹೆಸರು ಯಾರದ್ದು ಎಂದರೆ ಕರ್ನಾಟಕದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎನಿಸಿಕೊಂಡಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ರಕ್ಷಿತ್ ಶೆಟ್ಟಿ ಅವರು ತಮ್ಮದೇ ಆದ ವಿಭಿನ್ನ ರೀತಿಯ ಪ್ರಯೋಗಾತ್ಮಕ ಸಿನಿಮಾಗಳ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

ನಿರ್ದೇಶಕನಾಗಿ ನಾಯಕ ನಟನಾಗಿ ಕೂಡ ಕನ್ನಡಿಗರಿಗೆ ಹತ್ತಿರವಾಗಿರುವ ಇವರು ಸುದೀಪ್ ಯಶ್ ನಂತರ ಮೂರನೇ ಸ್ಥಾನದಲ್ಲಿ ಬರುತ್ತಾರೆ. ಇನ್ನು ಮುಂದೆ ಈ ಲಿಸ್ಟ್ ಅಲ್ಲಿ ದರ್ಶನ್ ಅವರ ಹೆಸರು ಎಲ್ಲರ ಹೆಸರನ್ನು ಹಿಂದೆ ಹಾಕಿ ಮೇಲೆ ತಲುಪುವ ಸಾಧ್ಯತೆ ಇದೆ. ಯಾಕೆಂದರೆ ಇತ್ತೀಚೆಗೆ ನಡೆದ ದರ್ಶನ್ ಅವರ ಹುಟ್ಟು ಹಬ್ಬದಂದು ಮಹಿಳಾ ಅಭಿಮಾನಿಗಳ ದಂಡೋಪ ದಂಡಲ್ಲಿ ಅವರ ಮನೆಯೆತ್ತ ಬಂದಿದ್ದರು.

ಹಾಗಾಗಿ ಇತ್ತೀಚಿಗೆ ದರ್ಶನ್ ಅವರಿಗೆ ಹೆಚ್ಚು ಸಂಖ್ಯೆಯಲ್ಲಿ ಮಹಿಳಾ ಅಭಿಮಾನಿಗಳು ಇದ್ದಾರೆ ಎನ್ನುವುದು ನಿರೂಪಿಸಿದಂತಾಗತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ನಿಮ್ಮ ನೆಚ್ಚಿನ ನಟ ಯಾರು ಮತ್ತು ಯಾವ ಕಾರಣಕ್ಕಾಗಿ ಎನ್ನುವ ಅನಿಸಿಕೆಯನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

ಈ ಕಾರಣಕ್ಕಾಗಿ ವಿನೋದ್ ರಾಜ್ ತಾವು ಮದುವೆ ಆಗಿರೋ ವಿಚಾರವನ್ನು ರಹಸ್ಯವಾಗಿಟ್ಟಿದ್ದರಂತೆ.!

 

 

ವಿನೋದ್ ರಾಜ್ ಮದುವೆಯಾಗಿ ಮಗನಿರುವ ವಿಚಾರ ಇಷ್ಟು ದಿನ ಮುಚ್ಚಿಡೋಕೆ ನಿಜವಾದ ಕಾರಣವೇನು ಗೊತ್ತ.? ಕನ್ನಡ ಚಲನಚಿತ್ರರಂಗದ ಹೆಸರಾಂತ ಹಿರಿಯ ನಟಿ ಲೀಲಾವತಿಯವರು ಕನ್ನಡಿಗರಿಗೆಲ್ಲ ಚಿರಪರಿಚಿತರು. ಕನ್ನಡ ಚಿತ್ರರಂಗದಲ್ಲಿ ಕಪ್ಪು ಬಿಳುಪು ಸಿನಿಮಾ ತಯಾರಾಗುತ್ತಿದ್ದ ಕಾಲದಿಂದ ಹಿಡಿದು ಇತ್ತೀಚಿನ ದಿನಗಳವರೆಗೂ ಕೂಡ ನಾಯಕನಟಿಯಾಗಿ, ಪೋಷಕ ಪಾತ್ರಧಾರಿಯಾಗಿ ಕನ್ನಡ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದ ಲೀಲಾವತಿಯವರು ಇತ್ತೀಚಿಗೆ ವಯೋ ಸಹಜ ಕಾಯಿಲೆ ಸಮಸ್ಯೆಯಿಂದ ಚಿತ್ತರಂಗದಿಂದ ದೂರವಾಗಿದ್ದಾರೆ.

ಜೊತೆಗೆ ಇವರ ಮಗನಾದ ವಿನೋದ್ ಕೂಡ ಡ್ಯಾನ್ಸಿಂಗ್ ಸ್ಟಾರ್ ಎಂದು ಕರ್ನಾಟಕದಲ್ಲಿ ಹೆಸರು ಪಡೆದು ಕೆಲವು ಸಿನಿಮಾಗಳಲ್ಲಿ ನಾಯಕ ನಟನಾಗಿ ಕೂಡ ಕಾಣಿಸಿಕೊಂಡಿದ್ದವರು. ಡಾ. ರಾಜ್ ಕುಮಾರ್ ಅವರ ವಿಚಾರವಾಗಿ ಲೀಲಾವತಿ ಮತ್ತು ವಿನೋದ್ ರಾಜ್ ಅವರ ಹೆಸರು ತಗಲು ಹಾಕಿಕೊಂಡಿದೆ. ಆದರೆ ಈ ವಿವಾದದ ಬಗೆಗಿನ ಸತ್ಯಾನುಸತ್ಯತೆ ಬಗ್ಗೆ ಇನ್ನೂ ಎಲ್ಲೂ ಸ್ಪಷ್ಟತೆ ಇಲ್ಲ.

ಆದರೆ ಅವರ ಕುಟುಂಬಕ್ಕೆ ಸಂಬಂಧಪಟ್ಟ ಹಾಗೆ ಇತ್ತೀಚೆಗೆ ಹೊಸ ಶಾ’ಕಿಂ’ಗ್ ಸುದ್ದಿಯೊಂದು ಹೊರ ಬಿದ್ದಿದೆ. ಡಾ. ರಾಜ್ ಅವರ ಆತ್ಮೀಯ, ಕನ್ನಡ ಚಲನಚಿತ್ರ ರಂಗದ ನಿರ್ದೇಶಕ, ಪತ್ರಕರ್ತ, ಬರಹಗಾರ ಪ್ರಕಾಶ್ ರಾಜ್ ಮೆಹು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಏಪ್ರಿಲ್ 8ರಂದು ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯದ ಬಗ್ಗೆ ಬಾರಿ ಚರ್ಚೆ ಏರ್ಪಟ್ಟಿದೆ.

ಮೂರು ಫೋಟೋಗಳ ಸಮೇತ ಲೀಲಾವತಿ ಮತ್ತು ವಿನೋದ್ ರಾಜ್ ಅವರಿಗೆ ಸಂಬಂಧಪಟ್ಟ ಹಾಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಪ್ರಕಾಶ್ ರಾಜ್ ಮೆಹು ಅವರು ಚೆನ್ನೈಯಲ್ಲಿರುವ ಲೀಲಾವತಿ ಅವರ ಆಸ್ತಿ ವಿವರದ ಫೋಟೋ ಹಾಕಿ ಅಲ್ಲಿ ಮಹಾಲಿಂಗ ಭಾಗವತ್ ಪತ್ನಿ ಲೀಲಾವತಿ ಅಮ್ಮರ್ ಎಂದರೆ ಲೀಲಾವತಿ ಎನ್ನುವುದು ಸ್ಪಷ್ಟವಾಗಿದೆ ಇದರಿಂದ ಅವರು ಯಾರ ಪತ್ನಿ ಎನ್ನುವುದು ಸ್ಪಷ್ಟವಾಗಿದೆ.

ಜೊತೆಗೆ ವಿನೋದ್ ರಾಜ್ ಅವರಿಗೆ ಮದುವೆ ಆಗಿಲ್ಲ ಅವರು ತಾಯಿಯ ಹಾರೈಕೆಯಲ್ಲಿಯೇ ಜೀವನ ಕಳೆದಿದ್ದಾರೆ ಎನ್ನುವುದು ಸುಳ್ಳು ಅವರಿಗೂ ಮದುವೆಯಾಗಿ ಓದುವ ಮಗನಿದ್ದಾನೆ ಎಂದು ಹೇಳಿ ಆ ಹುಡುಗನ ಮಾರ್ಕ್ಸ್ ಕಾರ್ಡ್ ಫೋಟೋ ಮತ್ತು ವಿನೋದ್ ರಾಜ್ ಅವರ ಪತ್ನಿ, ಪುತ್ರ ಹಾಗೂ ಲೀಲಾವತಿ ಅವರು ಒಟ್ಟಿಗೆ ತೆಗೆಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ.

ಇದಾದ ಬಳಿಕ ಎಲ್ಲಾ ಕಡೆ ಈ ವಿಷಯ ಚರ್ಚೆಯಾಗಿ ಹಲವರು ಸೋಶಿಯಲ್ ಮೀಡಿಯಾದಲ್ಲಿ ಇದೆಲ್ಲಾ ನಿಜ ಎಂದೇ ಹೇಳುತ್ತಿದ್ದಾರೆ. ಹಾಗಿದ್ದರೆ ವಿನೋದ್ ರಾಜಕುಮಾರ್ ಅವರು ಯಾಕೆ ಇಷ್ಟು ವರ್ಷ ಮದುವೆ ಆಗಿರೋ ವಿಚಾರವನ್ನು ಮುಚ್ಚಿಟ್ಟಿದ್ದರು ಎನ್ನುವ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ. ಇದಕ್ಕೆ ಉತ್ತರವನ್ನು ಕೂಡ ಪ್ರಕಾಶ್ ರಾಜ್ ಮೆಹು ಅವರು ನೀಡಿದ್ದಾರೆ. 1998ರಲ್ಲಿ ತಮ್ಮ ಮನೆಯ ಕೆಲಸದಾಕೆಯಾದ ಅನು ಎನ್ನುವ ಮಹಿಳೆಯನ್ನೇ ವಿನೋದ್ ರಾಜ್ ಮದುವೆ ಆಗಿದ್ದಾರೆ.

ಅವರಿಗೆ ಯುವರಾಜ್ ಎನ್ನುವ 20 ವರ್ಷದ ಆಸು ಪಾಸಿನ ಮಗನಿದ್ದಾನೆ. ಅವರ ಮನೆ ಕೆಲಸದಾಕೆಯನ್ನು ಮದುವೆ ಆಗಿದ್ದಾರೆ ಎಂದು ಹೇಳಿಕೊಂಡಿದ್ದರೆ ಎಲ್ಲರೂ ಅದನ್ನು ಪ್ರಶಂಶಿಸುತ್ತಿದ್ದರು, ಒಬ್ಬ ಮಹಿಳೆಗೆ ಉತ್ತಮ ಜೀವನ ಕೊಟ್ಟಿದ್ದಾರೆ ಎಂದು ಕೊಳ್ಳುತ್ತಿದ್ದರು. ಯಾಕೆ ಅವರು ಈ ವಿಚಾರವನ್ನು ಮುಚ್ಚಿದ್ದರು ಎನ್ನುವುದರ ಬಗ್ಗೆ ಅವರೇ ಹೇಳಬೇಕು ಎಂದು ಹೇಳಿದ್ದಾರೆ.

ಈ ವಿಚಾರಗಳ ಪ್ರಸ್ತಾಪವಾಗಿ ಎರಡು ಮೂರು ದಿನ ಕಳೆಯುತ್ತಿದ್ದರು ಕೂಡ ವಿನೋದ್ ರಾಜ್ ಕುಮಾರ್ ಅವರು ಈ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ಕೊಟ್ಟಿಲ್ಲ, ಸುದ್ದಿಗೋಷ್ಠಿಯನ್ನು ಕೂಡ ನಡೆಸಿ ಮಾತನಾಡಿಲ್ಲ ಆದರೆ ಈ ವಿಚಾರವಾಗಿ ಬರುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಹೆಚ್ಚಿನ ಜನ ಇವರು ಮದುವೆಯಾಗಿರುವುದು ಸತ್ಯ ಎಂದೇ ಹೇಳುತ್ತಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಕರ್ನಾಟಕಕ್ಕೆ ಇರೋದು ಒಬ್ರೇ ಒಬ್ರು ಬಾಸ್ ಎಂದ ಕ್ರಿಸ್ ಗೇಲ್. ಆ ಬಾಸ್ ಯಾರು ಗೊತ್ತ.?

 

ಯುಗಾದಿ ಹಬ್ಬ ಕಳೆದು ಏಪ್ರಿಲ್ ಗಳು ಬಂತೆಂದರೆ ಭಾರತದಲ್ಲಿ ಮತ್ತೊಂದು ಹಬ್ಬ ಶುರುವಾಗುತ್ತದೆ. ಅದು ಒಂದೆರಡು ದಿನಗಳ ಅಲ್ಲ ಸುಧೀರ್ಘವಾಗಿ ನಡೆಯುವ ಹಬ್ಬ. ಈ ಹಬ್ಬ ಯುವಕರ ಪಾಲಿಗಂತೂ ಹುಚ್ಚು ಎಂದೇ ಹೇಳಬಹುದು. IPL ಹಬ್ಬ ಎಂದೇ ಕರೆಯಬಹುದಾದ ಈ ಹಬ್ಬವನ್ನು ವರ್ಷಕೊಮ್ಮೆ ಬರಮಾಡಿಕೊಳ್ಳುವ ಸಡಗರ ಸಂಭ್ರಮವೇ ಸುಂದರ.

ಸದ್ಯಕ್ಕೆ ಈಗ ರಾಜ್ಯದಲ್ಲೂ ಕೂಡ ರಾಜ್ಯದ ತಂಡವಾದ ಆರ್‌ಸಿಬಿ ಅನ್ನು ಬೆಂಬಲಿಸುತ್ತಾ ಈ ಸಲವಾದರೂ ಕಪ್ ನಮ್ಮದೇ ಆಗಲಿ ಎಂದು ಕನ್ನಡಿಗರು ಬೇಡಿಕೊಳ್ಳುತ್ತಿದ್ದಾರೆ. ದೇಶದ ಎಲ್ಲಾ IPL ಟೂರ್ನಿ ತಂಡಗಳು ಕೂಡ ಗೆಲುವಿನ ಹೋರಾಟದಲ್ಲಿ ಸಾಕಷ್ಟು ಕಸರತ್ತುಗಳನ್ನು ನಡೆಸುತ್ತಿವೆ. ಇನ್ನೊಂದೆಡೆ ಜೊತೆ ಮಾಜಿ ಆಟಗಾರರ ಇಂಟರ್ವ್ಯೂಗಳು ಕೂಡ ನಡೆಯುತ್ತಿದೆ.

ಡ್ಯಾನ್ ಸೇಠ್ ನಡೆಸಿಕೊಡುವ ಕಾರ್ಯಕ್ರಮ ಒಂದರಲ್ಲಿ RCB ಮಾಜಿ ಆಟಗಾರ ಕ್ರಿಸ್ ಗೇಲ್ ಅವರು ಭಾಗಿಯಾಗಿದ್ದಾರೆ. ಈ ವೇಳೆ ಅವರು ಕರ್ನಾಟಕದ ಬಗ್ಗೆ ಮತ್ತು ಕರ್ನಾಟಕದ ಜನರ ಆರಾಧ್ಯ ದೈವ ಪುನೀತ್ ರಾಜಕುಮಾರ್ ಅವರ ಬಗ್ಗೆ ಮತ್ತು ಕಲಬುರ್ಗಿ ಊರು ಹಾಗೂ ರೊಟ್ಟಿ ಚಟ್ನಿ ಬಗ್ಗೆ ಕೂಡ ಮಾತನಾಡಿದ್ದಾರೆ. ನಿರೂಪಕರು ಮಾತಿನ ನಡುವೆ ಕೇಳಿದ ಪ್ರಶ್ನೆಗೆ ಕರ್ನಾಟಕಕ್ಕೆ ಇಬ್ಬರೇ ಬಾಸ್ ಗಳು ಎಂದು ಮಾತು ಶುರು ಮಾಡಿದ ಕ್ರಿಸ್ ಗೇಲ್ ಅವರು ಒಬ್ಬರು ಯೂನಿವರ್ಸಲ್ ಬಾಸ್ ಅಪ್ಪು ಬಾಸ್ ಮತ್ತೊಬ್ಬರು ರಿಯಲ್ ಅಪ್ಪು ಬಾಸ್ ಅಷ್ಟೇ ಎಂದು ಹೇಳಿದ್ದಾರೆ.

ಈ ಮೂಲಕ ಅವರ ಪ್ರಕಾರ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ಯೂನಿವರ್ಸಿಗೆ ಅಪ್ಪು ಮಾತ್ರ ಎನ್ನುವ ಮನದಾಳದ ಮಾತನ್ನು ಹೊರ ಹಾಕಿದ್ದಾರೆ. ಮುಂದುವರೆದ ಕ್ರಿಸ್ ಗೇಲ್ ಅವರಿಗೆ ಕಲ್ಬುರ್ಗಿಯಲ್ಲಿ ಯಾವ ಮ್ಯೂಸಿಕ್ ಪ್ಲೇ ಮಾಡುತ್ತೀರಾ ಎಂದು ಕೇಳಿದಾಗ ಕಲಬುರ್ಗಿ ಕರ್ನಾಟಕದಲ್ಲಿ ನನಗೆ ಇಷ್ಟವಾದ ಒಂದು ಪ್ಲೇಸ್, ಇಲ್ಲಿಯ ರೊಟ್ಟಿ ಹಾಗೂ ಶೇಂಗಾ ಚಟ್ನಿ ನನಗೆ ಬಹಳ ಇಷ್ಟ ಎಂದು ಹೇಳಿ ನಂತರ ಪುನೀತ್ ರಾಜಕುಮಾರ್ ಅವರ ದೊಡ್ಮನೆ ಸಿನಿಮಾದ ತ್ರಾಸ್ ಆಗ್ತೈತಿ ಹಾಡನ್ನು ಹಾಡಿದ್ದಾರೆ.

ಈ ಹಿಂದಿನಿಂದಲೂ ಕೂಡ ಕ್ರಿಕೆಟ್ ಆಟಗಾರರಿಗೂ ಮತ್ತು ಸಿನಿಮಾ ತಾರೆಗಳಿಗೂ ಅಭಿನಾಭಾವ ಸಂಬಂಧವಿದೆ ಕರ್ನಾಟಕದಲ್ಲಿ ಕೂಡ ಕ್ರಿಕೆಟರ್ಸ್ ಜೊತೆಗೆ ಸೆಲೆಬ್ರಿಟಿಗಳಿಗೆ ಒಂದು ಒಡನಾಟ ಇದೆ. IPL ಟೂರ್ನಿಗಳು ಶುರುವಾದ ಸಮಯದಲ್ಲಿ ಕರ್ನಾಟಕದ RCB ತಂಡವನ್ನು ಪುನೀತ್ ರಾಜಕುಮಾರ್ ರಮ್ಯಾ ಮತ್ತು ದೀಪಿಕಾ ಪಡುಕೋಣೆ ಅವರು ಬ್ರಾಂಡ್ ಅಂಬಾಸಿಡರ್ ಗಳು ಆಗಿ ಬೆಂಬಲಿಸಿದ್ದರು.

ಕ್ರಿಕೆಟ್ ಆಟದ ದಂತ ಕಥೆ IPLನ RCB ತಂಡದ ಬಲವಾಗಿರುವ ಎಬಿಡಿ ಕೂಡ ಡಾ. ರಾಜಕುಮಾರ್ ಅವರ ಬಗ್ಗೆ ಸಂದರ್ಶನದಲ್ದಿ ಮಾತನಾಡಿದರು. ಕಳೆದ ವರ್ಷ ಐಪಿಎಲ್ ಟೂರ್ನಿ ಆದಮೇಲೆ RCB ತಂಡದ ಎಲ್ಲಾ ಆಟಗಾರರು ಒಟ್ಟಿಗೆ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಟು ಸಿನಿಮಾ ವನ್ನು ಕೂಡ ನೋಡಿದ್ದರು ಇನ್ನು IPL ಮ್ಯಾಚ್ ಗಳು ಶುರುವಾದ ಮೇಲೆ.

ಕರ್ನಾಟಕದ ಎಲ್ಲಾ ತಾರೆಯರು ನಿರ್ಮಾಪಕರು ನಿರ್ದೇಶಕರು ಕೂಡ ಆರ್‌ಸಿಬಿಗೆ ತಮ್ಮ ನೈತಿಕ ಬೆಂಬಲವನ್ನು ವ್ಯಕ್ತಪಡಿಸುತ್ತಾರೆ. ಆರ್ಸಿಬಿ ಎಂದರೆ ಕರ್ನಾಟಕ ಕರ್ನಾಟಕ ಎಂದರೆ RCB ತಂಡ ಎನ್ನುವಷ್ಟರ ಮಟ್ಟಿಗೆ RCB ಯನ್ನು ಕನ್ನಡ ಸಿನಿಮಾ ಇಂಡಸ್ಟ್ರಿ ಮತ್ತು ಕನ್ನಡದ ಜನತೆ ಇಷ್ಟಪಡುತ್ತಿದ್ದಾರೆ. ಎಲ್ಲರ ಇಚ್ಛೆಯಂತೆ ಈ ಬಾರಿ ಆದರೆ ಕಪ್ ನಮ್ಮದಾಗಲಿ ಎಂದು ಹಾರೈಸೋಣ.

ರಿಯಲ್ ಸ್ಟಾರ್ ಉಪ್ರೇಂದ್ರ ಅಭಿನಯದ ಬುದ್ಧಿವಂತ 2 ಸಿನಿಮಾ ಅರ್ಧಕ್ಕೆ ನಿಂತಿದ್ಯಾಕೆ ಗೊತ್ತ.?

 

ಬುದ್ಧಿವಂತ ಉಪೇಂದ್ರ ಅವರ ಈ ಸಿನಿಮಾವನ್ನು ಎಷ್ಟೇ ವರ್ಷಗಳಾದರೂ ಕೂಡ ಜನ ಮರೆಯಲು ಸಾಧ್ಯವಿಲ್ಲ. ಪಂಚಾಮೃತ ಎನ್ನುವ ಹೆಸರಿನಲ್ಲಿ ವೈಟ್ ಅಂಡ್ ವೈಟ್ ಗೆಟಪ್ ಅಲ್ಲಿ ಕೋರ್ಟ್ ಅಲ್ಲಿ ಜಡ್ಜ್ ಎದುರು ನಿಂತು ಜಡ್ಜಮ್ಮ ಎಂದು ಡೈಲಾಗ್ ಹೊಡೆಯುತ್ತಿದ್ದ ಉಪ್ಪಿ ಅವರ ಆ ಮಾತುಗಳು ಇನ್ನು ಕಿವಿಯಲ್ಲಿ ಗುನುಗುತ್ತಿವೆ. ಸಿನಿಮಾದಲ್ಲಿನ ಹಾಡುಗಳು ಕೂಡ ಮೋಡಿ ಮಾಡಿ ಜನಮನ ಗೆದ್ದ ಒಂದು ಸೂಪರ್ಹಿಟ್ ಸಸ್ಪೆನ್ಸ್ ಸಿನಿಮಾ ಬುದ್ಧಿವಂತ.

ಈ ಬುದ್ಧಿವಂತ ಸಿನಿಮಾ ರಿಲೀಸ್ ಆಗಿ ಹಿಟ್ ಆದಾ ಮೇಲೆ ಬುದ್ಧಿವಂತ 2 ಸಿನಿಮಾ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆ ಇತ್ತು. 2019ರಲ್ಲಿ ಬುದ್ದಿವಂತ 2 ಗೆ ಉಪೇಂದ್ರ ಅವರು ಕೂಡ ಒಪ್ಪಿದ್ದರು ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ಅಡಿ ಸಿನಿಮಾ ಬರಬೇಕಿತ್ತು. ಆದರೆ ಸಿನಿಮಾ ಬಗ್ಗೆ ಅಪ್ಡೇಟ್ಸ್ ಇಲ್ಲ ಇದರ ಕುರಿತು ನಿರ್ಮಾಪಕರು ಹೇಳಿದ್ದೇನು ಗೊತ್ತಾ?

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್, ಕೆ. ಎನ್ ಸ್ಟುಡಿಯೋ ಬ್ಯಾನರ್ ಅಡಿ ಕನ್ನಡಕ್ಕೆ ಸಾಕಷ್ಟು ಸಿನಿಮಾಗಳು ಸಿಕ್ಕಿವೆ. ಚಮಕ್, ಅಯೋಗ್ಯ ಇನ್ನು ಮುಂತಾದ ಅನೇಕ ಹಾಸ್ಯಾತ್ಮಕ ಸಿನಿಮಾಗಳನ್ನು ಕೊಟ್ಟ ಈ ನಿರ್ಮಾಪಕರು ಇದೀಗ ಹಾಸ್ಯ ಚಕ್ರವರ್ತಿ ಕೋಮಲ್ ಅವರ ಕಂಬ್ಯಾಕ್ ಸಿನಿಮಾವಾದ ಉಂಡೆನಾಮ ವನ್ನು ಕೂಡ ನಿರ್ಮಾಣ ಮಾಡಿದ್ದಾರೆ. ಏಪ್ರಿಲ್ 14ರಂದು ಕೋಮಲ್ ಅವರ ಬಹು ನಿರೀಕ್ಷಿತ ಚಿತ್ರ ಉಂಡೆನಾಮ ರಿಲೀಸ್ ಆಗುತ್ತಿದೆ.

ಇದಕ್ಕೆ ಸಂಬಂಧಪಟ್ಟ ಹಾಗೆ ಇಡೀ ತಂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದರ ನಿರ್ಮಾಪಕರಾದ ಕೆ ಎಲ್ ನಂದಕಿಶೋರ್ ಅವರನ್ನು ಸಂದರ್ಶನ ಮಾಡುವ ಸಮಯದಲ್ಲಿ ನಿರೂಪಕರೊಬ್ಬರು ಬುದ್ಧಿವಂತ2 ಸಿನಿಮಾ ಬಗ್ಗೆ ಪ್ರಶ್ನಿಸಿದ್ದಾರೆ. ಬುದ್ಧಿವಂತ 2 ಸಿನಿಮಾ ಏನಾಯಿತು, ಸಿನಿಮಾ ಬಗ್ಗೆ ಅಪ್ಡೇಟ್ ಕೂಡ ಇಲ್ಲ, ಸಿನಿಮಾ ನಿಂತು ಹೋಯ್ತಾ ಜನ ಈ ಸಿನಿಮಾ ಬರುವುದಿಲ್ಲ ಶೂಟಿಂಗ್ ನಿಂತು ಹೋಗಿದೆ ಎಂದೆಲ್ಲ ಮಾತನಾಡುತ್ತಿದ್ದಾರೆ.

ಈ ಸಿನಿಮಾ ರಿಲೀಸ್ ಆಗುವುದಿಲ್ಲವೇ, ಸಿನಿಮಾ ಬಗ್ಗೆ ಏನಾಗಿದೆ ಎಂದು ಕೇಳಿದಾಗ ನಾವು ಸಿನಿಮಾ ಮುಹೂರ್ತವನ್ನು ಕೋವಿಡ್ ಸಮಯ ಶುರುವಾಗುವಾಗ ಮಾಡಿದ್ದೆವು. ಆದರೆ ಮುಹೂರ್ತ ಆದ ಒಂದು ತಿಂಗಳ ನಂತರ ಲಾಕ್ ಡೌನ್ ಆಗಿ ಹೋಯಿತು. ಸಿನಿಮಾ ಬಾರಿ ಬಜೆಟ್ ಅಲ್ಲಿ ತಯಾರಾಗಿದೆ, ಅದಕ್ಕಾಗಿ ಅದ್ದೂರಿ ಸೆಟ್ಗಳು ಕೂಡ ಹಾಕಬೇಕು. ಪರ್ಮಿಷನ್ ಸಿಕ್ಕಾಗ ನಾವು ಪ್ರಯತ್ನ ಮಾಡಿದರು ಮತ್ತೆ ಲಾಕ್ ಡೌನ್ ಆದ ಕಾರಣ ಮತ್ತೆ ಅದನ್ನೆಲ್ಲ ಮುಚ್ಚುವ ಪರಿಸ್ಥಿತಿ ಬಂತು.

ಅದಕ್ಕೆ ಸರಿಯಾಗಿ ಪ್ಲಾನ್ ಮಾಡಿಕೊಂಡು ಈಗ ಎಲ್ಲಾ ಪರ್ಮೀಷನ್ ಸಿಕ್ಕ ನಂತರ ಸಿನಿಮಾ ಪೂರ್ತಿ ಗೊಳಿಸಿದ್ದೇವೆ. ಸಿನಿಮಾ ಪೂರ್ತಿಯಾಗಿ ಈಗ ತಯಾರಾಗಿದೆ. ಆದರೆ ಕಬ್ಜಾ ಸಿನಿಮಾ ಆದ ಮೇಲೆ ಈ ಸಿನಿಮಾ ರಿಲೀಸ್ ಮಾಡಬೇಕು ಎಂದು ಮೊದಲೇ ನಾವು ಒಪ್ಪಂದ ಮಾಡಿಕೊಂಡಿದ್ದೆವು. ಹಾಗಾಗಿ ಜುಲೈ ತಿಂಗಳಷ್ಟರಲ್ಲಿ ಬುದ್ದಿವಂತ2 ಸಿನಿಮಾ ನೋಡುಗರಿಗೆ ಸಿಗುತ್ತದೆ.

ಉಪೇಂದ್ರ ಅವರ ಬಹು ನಿರೀಕ್ಷಿತ ಚಿತ್ರ ಇದು ಕರ್ನಾಟಕದಲ್ಲಿ ಈ ಸಿನಿಮಾಗೆ ಸಾಕಷ್ಟು ಅಭಿಮಾನಿಗಳಿದ್ದಾರೆ, ಖಂಡಿತ ಈ ಸಿನಿಮಾ ನಿಲ್ಲುವ ಮಾತೇ ಇಲ್ಲ. ಈ ತಿಂಗಳಿಂದಲೇ ನಾವು ಬುದ್ಧಿವಂತ2 ಸಿನಿಮಾ ಕುರಿತ ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೇವೆ ಎಂದು ಉತ್ತರಿಸಿದ್ದಾರೆ.

ಅಕ್ಕನಂತೆ ಪ್ರೀತಿಯಲ್ಲಿ ಮೋಸ ಹೋದ ಅನುಪಮ ಗೌಡ ತಂಗಿ, ನಟಿಯಾಗಿ ಹೆಸರು ಮಾಡುವ ಸಮಯದಲ್ಲಿ ಬ್ರೇಕ್ ಅಪ್ ಮಾಡಿಕೊಂಡು ಕಣ್ಣೀರಿಡುತ್ತಿರುವ ತೇಜಸ್ವಿನಿ.

 

ಕನ್ನಡದಲ್ಲಿ ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎನ್ನುವ ಗಾದೆ ಮಾತೊಂದು ಇದೆ. ಗಾದೆ ಹಳೆಯದಾಗಿದ್ದರೂ ಕೂಡ ಅದು ಸಾರ್ವಕಾಲಿಕವಾಗಿ ಅನ್ವಯವಾಗುವಂಥದ್ದು. ಅದಕ್ಕೆ ಉದಾಹರಣೆಯಾಗಿ ಸದ್ಯಕ್ಕಿಗ ನಾವು ಕಿರುತೆರೆ ಕಲಾವಿದೆ ಅನುಪಮಾ ಗೌಡ ಅವರನ್ನು ಹೆಸರಿಸಬಹುದು. ಕಿರುತೆರೆ ಕಲಾವಿದೆ ಅನುಪಮ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ, ಸಣ್ಣದೊಂದು ರಿಯಾಲಿಟಿ ಶೋ ಮೂಲಕ ಕ್ಯಾಮೆರಾ ಎದುರಿಸಿದ ಈಕೆ ಇಂದು ಚಿ.ಸೌ ಚಾವಿತ್ರಿ, ಅಣ್ಣ ತಂಗಿ, ಅಕ್ಕ ಮುಂತಾದ ಸೂಪರ್ ಹಿಟ್ ಸೀರಿಯಲ್ಗಳ ಕಥಾ ನಾಯಕಿ.

ಕನ್ನಡದ ಕೋಗಿಲೆ, ಮಹಾಭಾರತ ಮುಂತಾದ ಯಶಸ್ವಿ ರಿಯಾಲಿಟಿ ಶೋಗಳ ನಿರೂಪಕಿ. ಬಿಗ್ ಬಾಸ್ ಬಿಗ್ಮನೆಯ ಕಾರ್ಯಕ್ರಮದಲ್ಲಿ ಎರಡೆರಡು ಬಾರಿ ಕಡೆತನಕ ಇದ್ದು ಬಂದವರು. ಜೊತೆಗೆ ಬೆಳ್ಳಿ ತೆರೆ ಮೇಲೂ ಕೂಡ ಪ್ರಯೋಗಾತ್ಮಕ ಸಿನಿಮಾಗಳ ಮೂಲಕ ಅದೃಷ್ಟ ಪರೀಕ್ಷೆಗಿಳಿದು ಭದ್ರತೆ ಸೃಷ್ಟಿಸಿಕೊಂಡಿರುವ ಗಟ್ಟಿಗಿತ್ತಿ.

ಅನುಪಮ ಗೌಡ ಎಂದರೆ ಅಪ್ಪಟ ಕನ್ನಡದ ಪ್ರತಿಭೆ. ಈಕೆಯ ಮುಖದಲ್ಲಿ ಸೌಂದರ್ಯಕ್ಕಿಂತ ಗಾಂಭೀರ್ಯ ಎದ್ದು ಕಾಣುತ್ತದೆ. ಯಾಕೆಂದರೆ ಇವರ ಹಿಂದಿನ ಬದುಕು ಅಷ್ಟು ಕಠಿಣವಾಗಿತ್ತು. ಬಹಳ ಕಷ್ಟದ ಜೀವನ ಕಳೆದಿರುವ ಕಡು ಬಡತನದ ಬೇಗೆಯಲ್ಲಿ ಬೆಂದು ಬಂದಿರುವ ಅನುಪಮ ಗೌಡ ಇಂದು ಕರ್ನಾಟಕದ ಅನೇಕ ಯುವತಿಯರ ಪಾಲಿಗೆ ಸ್ಪೂರ್ತಿ ಆಗುವಂತಹ ಬದುಕು ಕಟ್ಟಿಕೊಂಡಿದ್ದಾರೆ.

ಕೆರಿಯರ್ ಅಲ್ಲಿ ಆಕೆ ಉತ್ತುಂಗದಲ್ಲಿ ಇದ್ದರೂ ಕೂಡ ಪರ್ಸನಲ್ ಲೈಫಲ್ಲಿ ಕುಸಿದು ಹೋಗಿದ್ದಾರೆ ಎನ್ನುವುದು ಸುಳ್ಳಲ್ಲ. ಇಷ್ಟೊಂದು ಅಂದ, ಚೆಂದ, ಹೆಸರು, ಅದೃಷ್ಟ ಎಲ್ಲ ಇದ್ದರೂ ಸಿಂಗಲ್ ಆಗಿರುವುದು ಅದನ್ನೆಲ್ಲ ನಿರೂಪಿಸುತ್ತದೆ. ಇದಕ್ಕೆಲ್ಲ ಆಕೆ ಕೊಡುವ ಕಾರಣ ಜಗನ್ ಜೊತೆಗಾದ ಬ್ರೇಕ್ ಅಪ್. ಸದ್ಯಕ್ಕೆ ಲಕ್ಷಣ ಧಾರವಾಹಿಯಲ್ಲಿ ಭೂಪತಿ ಪಾತ್ರದಲ್ಲಿ ಮಿಂಚುತ್ತಿರುವ ಜಗನ್ ಅವರು ಈ ಹಿಂದೆ ಕನ್ನಡ ಕಿರುತೆರೆಯಲ್ಲಿ ಹಲವಾರು ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಅನುಪಮ ಗೌಡ ಅವರ ಜೊತೆ ಪ್ರೀತಿಯಲ್ಲಿದ್ದ ಇವರು ಹಲವು ವರ್ಷಗಳಾದ ಬಳಿಕ ಅದನ್ನು ಮುರಿದುಕೊಂಡು ಬೇರೆ ಮದುವೆಯಾಗುತ್ತಾರೆ. ಆದರೆ ಅನುಪಮಾ ಅವರು ಮಾತ್ರ ಇನ್ನು ಮದುವೆ ಆಗದೆ ಭಗ್ನಪ್ರೇಮಿಯಾಗಿ ಉಳಿದಿದ್ದಾರೆ. ಈಗ ಇದೇ ಪರಿಸ್ಥಿತಿ ಆಕೆ ತಂಗಿಗೂ ಎದುರಾಗಿದೆ. ಅನುಪಮಾ ಅವರ ತಂಗಿ ತೇಜಸ್ವಿನಿ ಸೋಶಿಯಲ್ ಮೀಡಿಯಾ ಸ್ಟಾರ್. ಏಕೆಂದರೆ ಹಿಂದೆ ಟಿಕ್ ಟಾಕ್ ಇದ್ದಾಗಲೂ ಈಗ ಇನ್ಸ್ಟಾಗ್ರಾಮ್ ರೀಲ್ಸ್ ಅಲ್ಲೂ ಕೂಡ ಇವರು ಮತ್ತು ಇವರ ಜೋಡಿ ದರ್ಶ್ ಶಿವ ಅವರ ವಿಡಿಯೋಗಳು ಟ್ರೆಂಡಿಂಗ್.

ಈಗೀಗ ಸ್ಕ್ರೀನ್ ಮೇಲೆ ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾಠ ಮಾಡುತ್ತಾ ಕಾಣಿಸಿಕೊಳ್ಳುತ್ತಿರುವ ಇವರು ಈಗಾಗಲೇ ತೆಲುಗು ಭಾಷೆಯ ಕಿರುತೆರೆಗೂ ಕಾಲಿಟ್ಟಿದ್ದಾರೆ. ಟಿಕ್ ಟಾಕ್ ಇದ್ದಾಗಲಿಂದಲೂ ತೇಜಸ್ವಿನಿ ಅವರು ಶಿವ ದರ್ಶ್ ಅವರ ಜೊತೆ ವಿಡಿಯೋ ಮಾಡುತ್ತ ಫೇಮಸ್ ಆಗಿದ್ದವರು. ಇವರು ಆರಿಸಿಕೊಳ್ಳುತ್ತಿದ್ದ ಹಾಡುಗಳು ಹಾಗೂ ಹಾಕುತ್ತಿದ್ದ ಕ್ಯಾಪ್ಷನ್ ಗಳು ಇವರಿಬ್ಬರ ಪ್ರೇಮಿಗಳು ಎನ್ನುವುದನ್ನು ಸಾರಿ ಹೇಳುತ್ತಿತ್ತು. ಆದರೆ ಈಗ ಬಹಳ ದಿನಗಳಿಂದ ಇವರಿಬ್ಬರು ಒಟ್ಟಿಗೆ ಯಾವುದೇ ರೀಲ್ಸ್ ಮಾಡಿಲ್ಲ.

ಹಲವು ವರ್ಷಗಳಿಂದ ಜೋಡಿ ಹಕ್ಕಿಗಳ ಹಾಗೆ ವಿಡಿಯೋ ಮಾಡುತಿದ್ದ ಇವರು ಈವರೆಗೆ ಒಟ್ಟಿಗೆ ಮಾಡಿದ್ದ ಎಲ್ಲಾ ವಿಡಿಯೋಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ. ತೇಜಸ್ವಿನಿ ಅವರು ಇತ್ತೀಚೆಗೆ ಮಾಡುತ್ತಿರುವ ರೀಲ್ಸ್ ಗಳೆಲ್ಲಾ ಫೀಲಿಂಗ್ ಹಾಡುಗಳದ್ದೇ ಆಗಿರುವುದರಿಂದ ಜೊತೆಗೆ ಅಭಿಮಾನಿಗಳಿಂದ ಬರುತ್ತಿರುವ ಕಾಮೆಂಟ್ಗಳನ್ನು ಗಮನಿಸುವುದರಿಂದ ಅಕ್ಕ ಅನುಪಮರಂತೆ ಇವರಿಗೂ ಲವ್ ಫೈಲುರ್ ಆಗಿದೆ ಎಂದು ಊಹಿಸಬಹುದು.

ತೇಜಸ್ವಿನಿ ಇನ್ನು ಚಿಕ್ಕವರು ಜೊತೆಗೆ ಬಂಗಾರದಂತಹ ಬದುಕು ಮುಂದಿದೆ. ಸದ್ಯಕ್ಕೆ ಇದರಿಂದ ಆಚೆ ಬಂದು ಆಕೆ ತನ್ನ ಕನಸಿನತ್ತ ಹೆಜ್ಜೆ ಇಟ್ಟರೆ ಅಕ್ಕನಿಗಿಂತ ಹೆಚ್ಚು ಹೆಸರು ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

https://www.instagram.com/reel/Cquj2GOgf_a/?igshid=YmMyMTA2M2Y=

ವಿನೋದ್ ಗೆ ಮದ್ವೆ ಆಗಿದೆ ಮಗ ಕೂಡ ಇದಾನೆ ಇಷ್ಟು ದಿನ ನಮ್ಮೆಲ್ಲರ ಕಣ್ಣಿಗೆ ಮಣ್ಣು ಎರಚಿದ್ರು ಎಂದು ಸಾಕ್ಷಿ & ಫೋಟೋ ರಿವೀಲ್ ಮಾಡಿದ ನಿರ್ಮಾಪಕ ಪ್ರಕಾಶ್ ರಾಜ್ ಮೇಹು.

 

ನಿರ್ದೇಶಕ ಹಾಗೂ ಬರಹಗಾರ ಪ್ರಕಾಶ್ ಮೇಹು ಅವರು ಅಣ್ಣಾವ್ರ ಕುಟುಂಬಕ್ಕೆ ಭಾರೀ ಆತ್ಮೀಯರು. ಅಣ್ಣಾವ್ರ ಅತಿ ದೊಡ್ಡ ಅಭಿಮಾನಿಯೂ ಕೂಡ ಆಗಿರುವ ಇವರು ಅಣ್ಣಾವ್ರ ಬಗ್ಗೆ ಅಂತರಂಗದಲ್ಲಿ ಅಣ್ಣ ಎನ್ನುವ ಪುಸ್ತಕವನ್ನು ಬರೆದು ಅಣ್ಣಾವ್ರ ಜೀವದಲ್ಲಿ ಕಪ್ಪು ಚುಕ್ಕೆ ಹಾಕಿದ್ದ ಲೀಲಾವತಿ ಹಾಗೂ ವಿನೋದ್ ರಾಜಕುಮಾರ್ ಅವರೊಂದಿಗೆ. ಅಣ್ಣಾವ್ರಿಗೆ ಇರುವ ಸಂಬಂಧದ ಗಾಸಿಪ್ ಬಗ್ಗೆ ಅಣ್ಣಾವ್ರು ಹೇಳಿದ ಸತ್ಯಾಂಶವನ್ನು ಬರೆದಿದ್ದರು.

ಲೀಲಾವತಿ ಅವರ ಗಂಡ ಮಹಾಲಿಂಗ ಭಾಗವತರ್ ಮತ್ತು ವಿನೋದ್ ರಾಜಕುಮಾರ್ ಅವರು ಡಾ. ರಾಜಕುಮಾರ್ ಅವರ ಮಗ ಅಲ್ಲ ಎಂದು ಹಲವು ವರ್ಷಗಳಿಂದ ಹೇಳಿಕೊಂಡು ಬಂದಿದ್ದ ಇವರು ಈಗ ಅದನ್ನು ಸಾಕ್ಷಿ ಸಮೇತ ಸಾಬೀತು ಮಾಡಿದ್ದಾರೆ. ಜೊತೆಗೆ ವಿನೋದ್ ರಾಜಕುಮಾರ್ ಅವರು ಸಹ ಮದುವೆ ಆಗಿರುವ ವಿಷಯದ ಬಗ್ಗೆ ಅವರ ಪತ್ನಿ ಹಾಗೂ ಪುತ್ರನ ಫೋಟೋ ರಿವಿಲ್ ಮಾಡುವುದರ ಜೊತೆಗೆ ಹಂಚಿಕೊಂಡಿದ್ದಾರೆ.

ತಮ್ಮ ಫೇಸ್‌ಬುಕ್ ಪೇಜ್ ಅಲ್ಲಿ ಮೂರು ಫೋಟೋಗಳನ್ನು ಹಂಚಿಕೊಂಡಿರುವ ಅವರು ಸುದೀರ್ಘವಾದ ಬರಹವನ್ನು ಬರೆದಿದ್ದಾರೆ. ನಾನು ಎಷ್ಟೋ ದಿನಗಳಿಂದ ಹೇಳುತ್ತಲೇ ಇದ್ದೆ, ಆದರೆ ಯಾರು ನಂಬುತ್ತಿರಲಿಲ್ಲ ಅದಕ್ಕೆ ಈ ಬಾರಿ ಸಾಕ್ಷಿ ಸಮೇತ ತಂದಿದ್ದೇನೆ. ಈ ವಿಷಯ ನನಗೆ ಗೊತ್ತಾಗಿ ಆರು ತಿಂಗಳ ಮೇಲಾಯಿತು ಆದರೆ ಆಗಲೇ ಹೇಳಿದರೆ ಯಾರು ನಂಬುತ್ತಿರಲಿಲ್ಲ, ಅನೇಕರು ಯಾರೋ ಅಭಿಮಾನಿಗಳು ಇರಬೇಕು ಎಂದು ಮುಚ್ಚಿ ಬಿಡುತ್ತಿದ್ದರು.

ಇದೇ ಕಾರಣಕ್ಕಾಗಿ ಸಾಕ್ಷಿ ಬೇಕು ಎಂದು ಇಷ್ಟು ದಿನ ಕಾಯುತ್ತಿದ್ದೆ. ಈಗ ನನ್ನ ಸ್ನೇಹಿತರು ಏಪ್ರಿಲ್ 7ರಂದು ನನಗೆ ವಿನೋದ್ ರಾಜ್ ಮಗನ ಮಾರ್ಕ್ಸ್ ಕಾರ್ಡ್ ಮತ್ತು ಲೀಲಾವತಿ ಅವರ ಚೆನ್ನೈನ ಆಸ್ತಿಯ ಮಾಹಿತಿ ಬಗ್ಗೆ ಕಳುಹಿಸಿಕೊಟ್ಟರು. ಆದಕಾರಣ ಅಣ್ಣಾವ್ರ ಅತಿ ದೊಡ್ಡ ಅಭಿಮಾನಿಯಾಗಿ ಅವರ ಮೇಲಿರುವ ಆರೋಪ ಸುಳ್ಳು ಎಂದು ನಿರೂಪಿಸುವ ಸಲುವಾಗಿ ನಾನು ಈ ಕೆಲಸ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಮೊದಲಿಗೆ ಲೀಲಾವತಿ ಅವರು ಮಹಾಲಿಂಗ ಭಾಗವತ ಅವರ ಪತ್ನಿ ಇದಕ್ಕೆ ಸಾಕ್ಷಿ ಚೆನೈನಲ್ಲಿರುವ ಅವರ ಆಸ್ತಿಯ ವಿವರ. ಚೆನ್ನೈಯಲ್ಲಿರುವ ಅವರ ಆಸ್ತಿಯಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾರ್ ಎಂದರೆ ಲೀಲಾವತಿ ಅಮ್ಮ ಎಂಬುದಾಗಿ ಇದೆ. ಜೊತೆಗೆ ಅಣ್ಣಾವ್ರು ಸಹ ಹಿಂದೆ ನನ್ನೊಂದಿಗೆ ಹೇಳಿಕೊಂಡಿದ್ದರು ಲೀಲಾವತಿ ಅವರಿಗೆ ಮದುವೆ ಆಗಿ ಮಗ ಇದ್ದಾನೆ ಅವರನ್ನು ಚೆನೈ ನಲ್ಲಿ ಇಟ್ಟಿದ್ದಾರೆ ಎಂದು. ಇದಕ್ಕೆ ಈ ಆಸ್ತಿಯ ವಿವರದ ಫೋಟೋ ಸಾಕ್ಷಿಯಾಗಿದೆ.

ಇನ್ನು ವಿನೋದ್ ರಾಜ್ ಅವರು ಮದುವೆಯಾಗದೆ ತಮ್ಮ ತಾಯಿಯ ಸೇವೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎನ್ನುವುದು ಸುಳ್ಳು ಸುದ್ದಿ. ಅವರ ಹಂಚಿಕೊಂಡಿರುವ ಮತ್ತೊಂದು ಫೋಟೋದಲ್ಲಿ ಲೀಲಾವತಿ ಮತ್ತು ವಿನೋದ್ ರಾಜ್ ಅವರ ಜೊತೆ ಒಬ್ಬ ಹುಡುಗ ಮತ್ತು ಒಬ್ಬ ಮಹಿಳೆ ಇದ್ದಾರೆ, ಪ್ರಕಾಶ್ ರಾಜ್ ಮೆಹು ಇದು ವಿನೋದ್ ರಾಜ್ ಅವರ ಕುಟುಂಬದ ಫೋಟೋ ಎಂದಿದ್ದಾರೆ.

ಫೋಟೋದಲ್ಲಿರುವ ಹುಡುಗನ ಹೆಸರು ಯುವರಾಜ್ ಇವರು ಚೆನೈ ನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ. ಇವರು ವಿನೋದ್ ರಾಜ್ ಮಗ ಎನ್ನುವುದಕ್ಕೆ ಸಾಕ್ಷಿ ಹುಡುಗನ ಮಾರ್ಕ್ಸ್ ಕಾರ್ಡ್ ಅಲ್ಲಿ ತಂದೆಯ ಹೆಸರು ವಿನೋದ್ ರಾಜ್ ಎಂದು ಇರುವುದು ಎಂದು ಹೇಳಿ ಹುಡುಗನ ಮಾರ್ಕ್ಸ್ ಕಾರ್ಡ್ ಫೋಟೋ ಶೇರ್ ಮಾಡಿದ್ದಾರೆ. ವಿನೋದ್ ರಾಜ್ ಅವರು ತಮ್ಮ ಮನೆ ಕೆಲಸದವರನ್ನೇ ಮದುವೆಯಾದ ಕಾರಣ ಆ ವಿಷಯವನ್ನು ಎಲ್ಲೂ ಹೇಳಿಕೊಂಡಿಲ್ಲ ಹೇಳಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಪ್ರಚಾರ ಬಯಸದೆ ಅವರು ಹೇಳಿಕೊಳ್ಳದೆ ಇರಬಹುದು. ಎಂದು ಹೇಳಿದ್ದಾರೆ ಇಷ್ಟೆಲ್ಲ. ಬೆಳವಣಿಗಳು ಆಗಿದ್ದರು ವಿನೋದ್ ರಾಜ್ ಅವರು ಇದರ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

ನಾಗರಹಾವು ಸಿನಿಮಾ ನಂತರ ಪುಟ್ಟಣ್ಣ ಕಣಗಾಲ್ ಮತ್ತು ವಿಷ್ಣುವರ್ಧನ್ ಒಟ್ಟಿಗೆ ಸಿನಿಮಾ ಮಾಡಲೇ ಇಲ್ಲ ಯಾಕೆ ಗೊತ್ತಾ.?

 

ಪುಟ್ಟಣ್ಣ ಕಣಗಾಲ್ ಈ ನಾಡು ಕಂಡ ಶ್ರೇಷ್ಠ ನಿರ್ದೇಶಕ. ಅವರು ಇಲ್ಲವಾಗಿ ಇಷ್ಟು ದಶಕಗಳು ಕಳೆದರೂ ಕೂಡ ಇನ್ನೂ ಸಹ ಜನ ಅವರ ನಿರ್ದೇಶನದ ಬಗ್ಗೆ ಮಾತನಾಡುತ್ತಾರೆ ಎಂದರೆ ಅದು ಅವರ ನಿರ್ದೇಶನಕ್ಕಿದ್ದ ಶಕ್ತಿ. ಕನ್ನಡ ಚಲನಚಿತ್ರ ರಂಗಕ್ಕೆ ನಾಗರಹಾವು, ಶರಪಂಜರ, ಶುಭ ಮಂಗಳ ಮುಂತಾದ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ಇವರು ಅನೇಕ ಹೀರೋಗಳ ತಯಾರಕರು ಹೌದು.

ಪುಟ್ಟಣ್ಣ ಕಣಗಾಲ್ ಎನ್ನುವ ಇಂತಹ ಪ್ರತಿಭಾನ್ವಿತ ನಿರ್ದೇಶಕರಿಂದ ಕರ್ನಾಟಕಕ್ಕೆ ವಿಷ್ಣುವರ್ಧನ್, ಅಂಬರೀಶ್, ಆರತಿ ಮುಂತಾದ ಅನೇಕ ಪ್ರತಿಭೆಗಳು ದೊರಕಿದ್ದು. ಸಂಪತ್ ಕುಮಾರ್ ಆಗಿದ್ದ ವಿಷ್ಣುವರ್ಧನ್ ಅವರನ್ನು ನಾಗರಹಾವು ಸಿನಿಮಾ ರಾಮಾಚಾರಿ ಯಂಗ್ ಆಂಗ್ರಿ ಮ್ಯಾನ್ ಲುಕ್ ಗೆ ಬದಲಾಯಿಸಿ ಇಂದು ಕನ್ನಡಕ್ಕೆ ವಿಷ್ಣು ದಾದಾ ಎನ್ನುವ ಆಸ್ತಿಯನ್ನಾಗಿ ಮಾಡಿಕೊಟ್ಟಿದ್ದು ಪುಟ್ಟ ಕಣಗಾಲ್ ಅವರೇ.

ಪುಟ್ಟಣ್ಣ ಕಣಗಾಲ್ ಅವರು ನಾಗರಹಾವು ಸಿನಿಮಾದ ನಿರ್ದೇಶಕರಾಗಿ ಹೊಸ ಇತಿಹಾಸವನ್ನೇ ಬರೆದರು. ವಿಷ್ಣುವರ್ಧನ್ ಅವರನ್ನು ಚಿಗುರು ಮೀಸೆಯ ಯುವಕನಾಗಿ ತೋರಿಸಿ ಅವರ ಬದುಕಿಗೆ ಬಹುದೊಡ್ಡ ಬ್ರೇಕ್ ಕೊಟ್ಟರು. ಅಂದಿನಿಂದ ವಿಷ್ಣುವರ್ಧನ್ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಮುಟ್ಟಿದ್ದೆಲ್ಲ ಚಿನ್ನ ಆಗುವ ರೀತಿ ವರ್ಷಕ್ಕಿಂತ ವರ್ಷಕ್ಕೆ ಅವರ ಖ್ಯಾತಿ ಹೆಚ್ಚುತ್ತಲೆ ಹೋಯಿತು.

ಸಾಮಾನ್ಯವಾಗಿ ಯಾವುದಾದರೂ ಒಂದು ಗುಡ್ ಕಾಂಬಿನೇಷನ್ ವರ್ಕ್ ಆದರೆ ಆ ಕಾಂಬಿನೇಷನ್ ನಲ್ಲಿ ಮತ್ತಷ್ಟು ಸಿನಿಮಾಗಳು ಬರುವುದು ಗ್ಯಾರಂಟಿ. ಆದರೆ ಪುಟ್ಟಣ್ಣ ಕಣಗಾಲ್ ಮತ್ತು ವಿಷ್ಣುವರ್ಧನ್ ಅವರು ನಾಗರಹಾವು ಸಿನಿಮಾ ಆದ ಬಳಿಕ ಯಾವ ಸಿನಿಮಾಗಳಲ್ಲೂ ಕೂಡ ಒಟ್ಟಿಗೆ ಕೆಲಸ ಮಾಡಲೇ ಇಲ್ಲ. ಇದಕ್ಕೆ ಕಾರಣ ತಿಳಿದುಕೊಳ್ಳುವ ಕುತೂಹಲ ಕನ್ನಡಿಗರಿಗೆ ಇನ್ನೂ ಇದೆ.

 

ಇವರ ನಡುವೆ ಮನಸ್ತಾಪ ಏನಾದ್ರೂ ಮೂಡಿ ಬಂದಿತ್ತಾ ಅಥವಾ ಇನ್ನೇನಾದರೂ ಕಾರಣ ಇತ್ತಾ ಎಂದು ಹಲವರು ತಮಗೆ ತಾವೇ ಉತ್ತರ ಕಂಡುಕೊಳ್ಳಲು ಅನುಮಾನ ವ್ಯಕ್ತಪಡಿಸಿದ್ದು ಇದೇ. ಆದರೆ ಆ ರೀತಿ ಏನು ಇಲ್ಲ ಕಡೆವರೆಗೂ ಕೂಡ ಇವರು ಉತ್ತಮ ಸ್ನೇಹಿತರಾಗಿಯೇ ಇದ್ದರು. ಆದರೆ ನಾಗರಹಾವು ಸಿನಿಮಾದ ಬಳಿಕ ವಿಷ್ಣುವರ್ಧನ್ ಅವರು ಬಹಳಷ್ಟು ಬಿಸಿ ಆದರು.

ನಂತರದಲ್ಲಿ ಶುಭಮಂಗಳ ಮುಂತಾದ ಚಿತ್ರಗಳಿಗೆ ವಿಷ್ಣುವರ್ಧನ್ ಅವರನ್ನು ನಾಯಕನಾಗಿ ಮಾಡುವ ಪ್ರಯತ್ನ ಮಾಡಿದರು ಡೇಟ್ಸ್ ಗಳು ಹೊಂದಾಣಿಕೆ ಆಗುತ್ತಿರಲಿಲ್ಲವಂತೆ. ಒಂದು ವೇಳೆ ವಿಷ್ಣುವರ್ಧನ್ ಅವರ ಡೇಟ್ ಸಿಕ್ಕಾಗ ಅದಕ್ಕೆ ಹೊಂದುವ ಕಥೆ ಅಥವಾ ಹಣ ಕೊಡುವ ನಿರ್ಮಾಪಕರು ಸಿಗುತ್ತಿರಲಿಲ್ಲವಂತೆ, ಈ ಕಾರಣಗಳಿಂದಾಗಿ ಮತ್ತೊಮ್ಮೆ ವಿಷ್ಣುವರ್ಧನ್ ಮತ್ತು ಪುಟ್ಟಣ್ಣ ಕಣಗಾಲ್ ಅವರ ಕಾಂಬಿನೇಷನ್ ನಲ್ಲಿ ಸಿನಿಮಾ ನೋಡುವ ಅದೃಷ್ಟ ಕನ್ನಡಿಗರಿಗೆ ತಪ್ಪಿ ಹೋಯಿತು.

ಆದರೂ ನಾಗರಹಾವು ಅಂತಹ ಒಂದು ದಂತ ಕಥೆ ಆಗುವಂತಹ ಸಿನಿಮಾವನ್ನು ಕನ್ನಡಿಗರಿಗಾಗಿ ಮಾಡಿಕೊಟ್ಟು ಆ ಫೀಲ್ ಹಾಗೆ ಉಳಿಸಿ ಹೋಗಿದ್ದಾರೆ. ಇಂದು ಈ ಇಬ್ಬರು ಕನ್ನಡ ಚಲನಚಿತ್ರರಂಗದ ದಿಗ್ಗಜರು ನಮ್ಮೊಂದಿಗೆ ಇಲ್ಲದೆ ಹೋದರು ಈ ಸಿನಿಮಾದ ಹಾಡುಗಳು ಪಾತ್ರಗಳು ಮತ್ತು ಕಥೆ ಸೂರ್ಯ ಚಂದ್ರ ಇರುವ ತನಕ ಮಾತನಾಡುವಂತಹ ಇತಿಹಾಸ ಸೃಷ್ಟಿಸಿರುವುದು ಸುಳ್ಳಲ್ಲ.

ಇಂದಿಗೂ ಸಿನಿಮಾ ಇಂಡಸ್ಟ್ರಿಗೆ ಕಾಲಿಡುವ ಅನೇಕ ಯುವ ನಿರ್ದೇಶಕರಿಗೆ ಪುಟ್ಟಣ್ಣ ಕಣಗಾಲ್ ಅವರೇ ಸ್ಪೂರ್ತಿ ಮತ್ತು ಯುವ ನಾಯಕರಿಗೆ ಆಂಗ್ರಿ ಯಂಗ್ ಮನ್ ರಾಮಾಚಾರಿಯೇ ಸ್ಪೂರ್ತಿ. ಇವರಿಬ್ಬರ ಕಾಂಬಿನೇಷನ್ ಬಗ್ಗೆ ಹಾಗೂ ನಾಗರಹಾವು ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಮಗಳಿಗೆ ಶಮಿಕಾ ಎಂದು ಹೆಸರಿಡಲು ಕಾರಣ ಏನೂ ಎನ್ನುವ ಸತ್ಯಾಂಶ ಬಿಚ್ಚಿಟ್ಟ ನಟಿ ರಾಧಿಕಾ ಕುಮಾರಸ್ವಾಮಿ.

 

ರಾಧಿಕಾ ಕುಮಾರಸ್ವಾಮಿ ಕನ್ನಡದ ಸ್ಟಾರ್ ಹೀರೋಯಿನ್ ಆಗಿ ಮೆರೆದವರು. 20ರ ದಶಕದ ಆರಂಭದಲ್ಲಿ ಹೀರೋಗಳಿಗೆ ಸಮವಾಗಿ ಬೇಡಿಕೆಯಲ್ಲಿದ್ದ ನಟಿ. ಸಾಂಸಾರಿಕ ಚಿತ್ರಗಳ ಕಥೆಗಳಿಗೆ ಆಗಲಿ ಲವ್ ಸ್ಟೋರಿಗಳಿಗೆ ಆಗಲಿ ಇವರೇ ಬೇಕಾಗಿತ್ತು. ಮನೆಮಗಳು, ತಾಯಿ ಇಲ್ಲದ ತಬ್ಬಲಿ, ಅಣ್ಣ ತಂಗಿ, ತವರಿಗೆ ಬಾ ತಂಗಿ ಇಂತಹ ಕಣ್ಣೀರಿನ ಕಥೆಗಳ ಸಿನಿಮಾಗಳಿಂದ ಹಿಡಿದು ರೋಮಿಯೋ ಜೂಲಿಯೆಟ್, ಪ್ರೇಮ ಖೈದಿ, ನಿನಗಾಗಿ, ಮಣಿ ಇಂತಹ ಪ್ರೇಮ ಕಥೆಗಳಲ್ಲೂ ನಟಿಸಿ ಟ್ರೆಡಿಷನಲ್ ಹಾಗೂ ಗ್ಲಾಮರ್ ಲುಕ್ ಅಲ್ಲಿ ಕನ್ನಡದಲ್ಲಿ ಕಂಗೊಳಿಸುತ್ತಿದ್ದ ನಟಿ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು.

ಈಕೆ ಲೇಡಿ ಸೂಪರ್ ಸ್ಟಾರ್ ಆಗುವ ಎಲ್ಲಾ ಲಕ್ಷಣಗಳು ಇತ್ತು. ಆದರೆ ದಿಢೀರ್ ಎಂದು ಇವರು ನಿಗೂಢವಾಗಿ ಮದುವೆಯಾಗಿ ಚಿತ್ರರಂಗದಿಂದ ಕಳೆದು ಹೋದರು ಎಂದೇ ಹೇಳಬಹುದು. ಬಹಳ ವರ್ಷಗಳ ಬಳಿಕ ನಿರ್ಮಾಪಕಿಯಾಗಿ ಮತ್ತು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕಂ ಬ್ಯಾಕ್ ಮಾಡಿದ ಈಕೆ ಕಿರುತೆರೆ ಕಾರ್ಯಕ್ರಮಗಳಲ್ಲೂ ಕೂಡ ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಾರೆ.

ರಾಧಿಕಾ ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ವಿವಾಹವಾಗಿರುವ ವಿಚಾರ ಈಗ ಕರ್ನಾಟಕದಲ್ಲಿ ಎಲ್ಲರಿಗೂ ತಿಳಿದಿದೆ. ಜೊತೆಗೆ ಈ ಜೋಡಿಗಳಿಗೆ ಶಮಿಕ ಎನ್ನುವ ಮಗಳು ಕೂಡ ಇದ್ದಾರೆ ಎನ್ನುವುದು ಜಗಜ್ಡಾಹಿರಾಗಿದೆ. ಇತ್ತೀಚಿಗೆ ಕಿರುತೆರೆಯ ಕಾರ್ಯಕ್ರಮದ ವೇದಿಕೆ ಒಂದರಲ್ಲಿ ರಾಧಿಕಾ ಅವರಿಗೆ ಮಗಳ ಕುರಿತಾಗಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಶಮಿಕಾ ಅವರ ಜೊತೆಗಿನ ಫೋಟೋಗಳನ್ನು ಹಲವು ಬಾರಿ ರಾಧಿಕಾ ಕುಮಾರಸ್ವಾಮಿ ಅವರು ಹಂಚಿಕೊಂಡಿದ್ದಾರೆ.

ಈ ಬಾರಿ ವೇದಿಕೆಯಲ್ಲಿ ಶಮಿಕ ಬಗ್ಗೆ ಹಲವು ವಿಷಯಗಳನ್ನು ಕೂಡ ಹೇಳಿಕೊಂಡಿದ್ದಾರೆ. ನೀವು ಪರ್ಫೆಕ್ಟ್ ಅಮ್ಮ ಆಗಿದ್ದೀರಾ ಎಂದು ನಿಮಗೆ ಅನಿಸುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ನನಗೆ ಹಾಗೆ ಅನಿಸುವುದಿಲ್ಲ ನನಗೆ ಇರುವುದು ಒಬ್ಬಳೇ ಮಗಳಾದರೂ ನನ್ನ ಸಹೋದರ ಮಕ್ಕಳನ್ನು ಸೇರಿಸಿ ಎಲ್ಲರಿಗೂ ನಾನು ಅಮ್ಮ ಆಗಿದ್ದೇನೆ. ಎಲ್ಲರನ್ನೂ ಒಂದೇ ರೀತಿಯಾಗಿ ಕಾಣುತ್ತೇನೆ ಹಾಗಾಗಿ ಹಾಗನಿಸುವುದಿಲ್ಲ ಎಂದಿದ್ದಾರೆ. ಜೊತೆಗೆ ಮಗಳಿಗೆ ಶಮಿಕ ಎಂದು ಹೆಸರಿಡಲು ಏನು ಕಾರಣ ಎಂದು ಕೇಳಿದಾಗ ಎಲ್ಲರಂತೆ ನಾವು ಪುರೋಹಿತರ ಬಳಿ ಹೆಸರಿಗಾಗಿ ಕೇಳಿದಾಗ ಶ ಅಕ್ಷರ ಸೂಚಿಸಿದ್ದರು.

ನನ್ನ ಹೆಸರು ರಾಧಿಕಾ ನನ್ನ ತಾಯಿ ಹೆಸರು ಸುರೇಖ ಹೀಗಾಗಿ ಮಗಳಿಗೂ ಕ ಕೊನೆಗೊಳ್ಳುವ ಹೆಸರನ್ನು ಇಡಬೇಕು ಎಂದು ಹುಡುಕಿ ಶಮಿಕ ಎಂದು ಹೆಸರಿಡಲು ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ. ಮಗಳ ಜೊತೆಗಿರುವ ಭಾಂದವ್ಯದ ಬಗ್ಗೆ ಮಗಳ ಪ್ರೀತಿಯ ಬಗ್ಗೆ ಸಾಕಷ್ಟು ಮಾತನಾಡಿದ ರಾಧಿಕಾ ಕುಮಾರಸ್ವಾಮಿ ಅವರು ಈ ಪ್ರಪಂಚದಲ್ಲಿ ನಾನು ಎಲ್ಲರಿಗಿಂತ ಅತಿ ಹೆಚ್ಚು ಪ್ರೀತಿಸುವ ವ್ಯಕ್ತಿ ಅಂದರೆ ಅದು ನನ್ನ ಮಗಳು.

ಅವಳನ್ನು ನಾನು ಎಂದಿಗೂ ಕೂಡ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅವಳೇ ನನ್ನ ಸರ್ವಸ್ವ ಎಂದು ಭಾವುಕವಾಗಿ ಮಾತನಾಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರು ಈಗಲೂ ಸಹ ಸ್ಟಾರ್ ಹೀರೋಗಳ ಜೊತೆ ನಟಿಯಾಗಿ ನಟಿಸಬಲ್ಲ ಎಲ್ಲ ಅರ್ಹತೆಗಳನ್ನು ಹೊಂದಿದ್ದಾರೆ. ಜೊತೆಗೆ ಅಭಿಮಾನಿಗಳ ವಲಯದಿಂದಲೂ ಕೂಡ ಈ ಬಗ್ಗೆ ಕೋರಿಕೆ ಇದ್ದೇ ಇದೆ. ಶೀಘ್ರದಲ್ಲಿ ಅವರನ್ನು ತೆರೆ ಮೇಲೆ ಮತ್ತೊಮ್ಮೆ ಯಶಸ್ವಿ ನಾಯಕಿಯಾಗಿ ನೋಡುವ ಹಾಗಾಗಲಿ ಎಂದು ನಾವು ಹಾರೈಸೋಣ.