Home Blog Page 217

ಮಗನ ಮದುವೆ ಸತ್ಯ ಒಪ್ಪಿಕೊಂಡಂತೆ ನಿಮ್ಮ ಪತಿ ಇವರೇ ಎಂಬ ಸತ್ಯವನ್ನು ಒಪ್ಪಿಕೊಳ್ಳಿ ಎಂದು ಹೇಳಿದಕ್ಕೆ ಲೀಲಾವತಿಗೆ & ವಿನೋದ್ ರಾಜ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತ.?

 

ಹಿರಿಯ ನಟಿ ಲೀಲಾವತಿಯವರ ವೈಯಕ್ತಿಕ ಜೀವನದ ವಿಚಾರವಾಗಿ ಊಹಾಪೋಹಗಳು, ಕಥೆಗಳು ಆಗಾಗ ಚರ್ಚೆಗೆ ಬರುತ್ತಲೇ ಇರುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಲೀಲಾವತಿ ಹಾಗೂ ಆಕೆಯ ಕುಟುಂಬದವರು ಬದುಕಿನ ಸತ್ಯಾಸತ್ಯತೆಗಳ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳದೇ ಇರುವುದು. ಲೀಲಾವತಿಯವರ ವೈವಾಹಿಕ ಜೀವನದ ಹತ್ತಾರು ವಿಷಯಗಳು ಇಂದಿಗೂ ನಿಗೂಢತೆ ಕಾಯ್ದುಕೊಂಡಿದೆ. ಗೌಪ್ಯತೆಗಳೇ ವಿವಾದಗಳಿಗೆ ಎಡೆ ಮಾಡಿಕೊಟ್ಟಿವೆ ಎಂದರೆ ತಪ್ಪಾಗಲಾರದು.

ಇದೀಗ ಹಳೆಯ ವಿಚಾರಗಳು ಮತ್ತೊಮ್ಮೆ ಕೆದಕಿ ಚರ್ಚೆಗೆ ಬರಲು ಕಾರಣವೆಂದರೆ, ಪ್ರಕಾಶ್ ರಾಜ್ ಮೆಹೂ ಎಂಬುವವರ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್. ಹೌದು. ಪ್ರಕಾಶ್ ರಾಜ್ ಅವರು ಕನ್ನಡ ಚಲನಚಿತ್ರರಂಗದ ಪ್ರಖ್ಯಾತ ನಿರ್ದೇಶಕರು. ಇವರು ಪೋಸ್ಟ್ ಒಂದನ್ನು ಬರೆದು ಹಂಚಿಕೊಂಡಿದ್ದರು. ಅದರಲ್ಲಿ ತಾನು ಲೀಲಾವತಿ ಕುಟುಂಬದ ಬಗ್ಗೆ ಎರಡು ರಹಸ್ಯದ ಸತ್ಯವನ್ನು ಬಹಿರಂಗಪಡಿಸಲಿದ್ದೇನೆ ಎಂದಿದ್ದರು.

ಒಂದನೆಯದು ಲೀಲಾವತಿಯವರ ಪತಿಯ ಹೆಸರು ಮಹಾಲಿಂಗ ಭಾಗವತ್ ಎಂಬುದು, ಎರಡನೆಯ ಸತ್ಯವೆಂದರೆ ಲೀಲಾವತಿಯವರ ಪುತ್ರ ವಿನೋದ್ ರಾಜ್ ಅವರಿಗೆ ವಿವಾಹವಾಗಿದೆ ಎಂಬುದು… ಎಂದು ಬರೆದುಕೊಂಡಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ, ಲೀಲಾವತಿಯವರ ಗಂಡ ಮಹಾಲಿಂಗ ಭಾಗವತ್ ಎಂದು ಉಲ್ಲೇಖವಾಗಿರುವ ತಮಿಳುನಾಡಿನ ಆಸ್ತಿ ಪತ್ರ ಒಂದನ್ನು ಪ್ರಕಟಿಸಿದ್ದರು. ವಿನೋದ್ ರಾಜ್ ಅವರಿಗೆ ವಿವಾಹವಾಗಿದೆ ಎಂಬುದನ್ನು ಬಹಿರಂಗಪಡಿಸಲು ಸಾಕ್ಷಿಯಾಗಿ ಯುವರಾಜ್ ಎಂಬ ಹುಡುಗನ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಪ್ರಕಟಿಸಿದ್ದರು.

ಅಲ್ಲದೆ ವಿನೋದ್ ರಾಜ್ ಅವರು ಯುವರಾಜ್ ಎಂಬ ಹುಡುಗನ ಮತ್ತು ಆತನ ತಾಯಿಯೊಂದಿಗೆ ಕುಳಿತು ತೆಗೆಸಿಕೊಂಡಿರುವ ಫೋಟೋವನ್ನು ಪ್ರಕಟಿಸಿ ಫೋಟೋದಲ್ಲಿ ಕಾಣುವ ಯುವತಿ ಲೀಲಾವತಿ ಮನೆಯ ಕೆಲಸದಾಕೆಯಲ್ಲ; ವಿನೋದ್ ರಾಜ್ ಅವರ ಮಡದಿ ಎಂದು ಹೇಳಿದ್ದರು. ಇಷ್ಟೆಲ್ಲಾ ಆದ ನಂತರ ಲೀಲಾವತಿಯವರು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಸಂದರ್ಶನವನ್ನು ನೀಡಿದ್ದು ಅದರಲ್ಲಿ ತನ್ನ ಮಗನಿಗೆ ವಿವಾಹವಾಗಿದೆ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದರು.

ಅದನ್ನು ಗೌಪ್ಯವಾಗಿ ಇಟ್ಟಿರಲು ಕಾರಣವನ್ನು ಸಹ ಹೇಳಿಕೊಂಡಿದ್ದರು. ” ನನ್ನ ಮಗನಿಗೆ ಮದುವೆ ಮಾಡಿದ್ದೇನೆ… ಆದರೆ ಯಾಕೆ ಹೇಳಿಲ್ಲ ಅಂದರೆ ನಟ ನಟಿಯರು ತಮ್ಮ ಮಕ್ಕಳ ಮದುವೆಯನ್ನು ಎಂತೆಂತಹದೋ ಸ್ಥಳಗಳಲ್ಲಿ ಮಾಡುತ್ತಾರೆ. ಪ್ಯಾಲೆಸ್ ಗಳಲ್ಲಿ ಮಾಡಿದ್ದಾರೆ. ಆದರೆ ನನಗೆ ಆ ಚೈತನ್ಯವಿರಲಿಲ್ಲ. ಅದಕ್ಕಾಗಿ ಮದುವೆಯ ವಿಚಾರವನ್ನು ರಹಸ್ಯವಾಗಿ ಇಡುವುದೇ ಒಳ್ಳೆಯದು ಎನಿಸಿತು” ಎಂದಿದ್ದಾರೆ. ಅಷ್ಟೇ ಅಲ್ಲದೆ, “ನನ್ನ ವಯಕ್ತಿಕ ವಿಚಾರವನ್ನು ಕೆದಕಿದರೆ ನರಕಕ್ಕೆ ಹೋಗುತ್ತೀರಾ” ಎಂದಿದ್ದರು.

ಇದಕ್ಕೆ ತಿರುಗುಬಾಣವೆಂಬಂತೆ ಪ್ರಕಾಶ್ ರಾಜ್ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ; ” ಒಂದು ಸತ್ಯವನ್ನು ಒಪ್ಪಿಕೊಂಡಿರುವುದಕ್ಕೆ ಅಮ್ಮ ಮಗನಿಗೆ ಧನ್ಯವಾದಗಳು. ಹೀಗೆ ಇನ್ನೊಂದು ಸತ್ಯವನ್ನು ಒಪ್ಪಿಕೊಂಡು ಬಿಡಿ. ಬಳಿಕ ಧರ್ಮರಾಯನಂತೆ ಸ್ವರ್ಗಕ್ಕೆ ನೇರವಾಗಿ ನಡೆದುಕೊಂಡೆ ಹೊರಟುಬಿಡಿ. ಆ ಮಹಾಲಿಂಗ ಭಾಗವತರ್ ಅವರ ಆತ್ಮಕ್ಕೆ ಶಾಂತಿಯಾದರೂ ಸಿಗಲಿ. ನಿಮ್ಮನ್ನು ಪ್ರಶ್ನಿಸಿದ ನನ್ನಂತ ಪಾಪಿಗೆ ನರಕ ಪ್ರಾಪ್ತಿಯಾದರೂ ಚಿಂತೆ ಇಲ್ಲ… ‘ಯುವರಾಜ್’ಗೆ ಹುಟ್ಟು ಹಬ್ಬದ ಶುಭಾಶಯಗಳು” ಎಂದು ಬರೆದು ಹಂಚಿಕೊಂಡಿದ್ದಾರೆ.

ಇದರಿಂದಾಗಿ ಲೀಲಾವತಿಯವರ ವೈಯಕ್ತಿಕ ಜೀವನದ ವಿಚಾರವೂ ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಪ್ರಕಾಶ್ ರಾಜ್ ಅವರು ಲೀಲಾವತಿಯವರಿಗೆ, ಮಗನಿಗೆ ವಿವಾಹವಾದ ಸತ್ಯವನ್ನು ಒಪ್ಪಿಕೊಂಡಂತೆ ನಿಮ್ಮ ಗಂಡ ಮಹಾಲಿಂಗ ಭಾಗವತರ್ ಎಂಬ ಸತ್ಯವನ್ನು ಕೂಡ ಒಪ್ಪಿಕೊಂಡು ಬಿಡಿ ಎಂದು ಟಾಂಗ್ ನೀಡಿದ್ದಾರೆ. ನೆಟ್ಟಿಗರು ಇವೆಲ್ಲವನ್ನು ಓದಿ ಮುಂದೆ ಯಾವ ರೀತಿಯ ಹೇಳಿಕೆಗಳು ಬರಲಿವೆ ಎಂಬುದನ್ನು ಕಾಯುತ್ತಾ ಕುಳಿತಿದ್ದಾರಂತೆ.

ಅಣ್ಣಾವ್ರಿಗೆ ಹೇಳಿದೆ ಇದು ಮಾಸ್ ಸಿನಿಮಾ ಈ ತರ ಕ್ಯಾರೆಕ್ಟರ್ ನಿಮಗೆ ವರ್ಕ್ ಔಟ್ ಆಗಲ್ಲ ಅಂತ. ಕೊನೆಗೆ ಏನಾಯ್ತು ಅಂದ್ರೆ.!

 

ರಾಜೇಂದ್ರ ಸಿಂಗ್ ಬಾಬು ಕನ್ನಡಕ್ಕೆ ಮುತ್ತಿನ ಹಾರ, ಬಂಧನ, ಹಿಮಪಾತ, ಅಂತ, ನಾಗರಹೊಳೆ ಇನ್ನು ಮುಂತಾದ ಸಾಕಷ್ಟು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟವರು. ನಿರ್ದೇಶಕನಾಗಿ ರಾಜೇಂದ್ರ ಸಿಂಗ್ ಬಾಬು ಅವರು ಕನ್ನಡದಲ್ಲಿ ಮಾಡುವ ಪ್ರಯೋಗಗಳನ್ನು ಮತ್ತೊಬ್ಬರು ಮಾಡುತ್ತಾರೆ ಎಂದು ಊಹಿಸುವುದು ಸಾಧ್ಯ. ಯಾಕೆಂದರೆ ಅಷ್ಟೊಂದು ಪ್ರಯೋಗಾತ್ಮಕ ಪ್ರಯತ್ನಗಳನ್ನು ಕನ್ನಡಕ್ಕೆ ಮಾಡಿದ ಇವರ ನಿರ್ದೇಶನದ ಮೂಲ ಏನಿತ್ತು ಎನ್ನುವುದರ ಬಗ್ಗೆ ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಅವರು ಹೇಳಿಕೊಂಡಿದ್ದಾರೆ.

ಈಗೀಗ ಎಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಎಂದು ಹೇಳುತ್ತಿದ್ದಾರೆ ನಮ್ಮ ನಾಗರಹೊಳೆ ಸಿನಿಮಾ 80ರ ದಶಕದಲ್ಲಿಯೇ 12 ಸಿನಿಮಾಗಳಿಗೆ ಡಬ್ಬ ಆಗಿತ್ತು. ರಷ್ಯಾ, ಪ್ಯಾರಿಸ್ ಅವರೆಲ್ಲ ಬಂದು ಇವರೆಲ್ಲ ಬಂದು ಸಿನಿಮಾ ತೆಗೆದುಕೊಂಡು ಹೋಗಿದ್ದರು. ಯಾವಾಗಲೂ ಕಥೆ ಪಾನ್ ಇಂಡಿಯಾ ಆಗಬೇಕು ಕನ್ನಡದಲ್ಲಿ ಮಾಡುತ್ತೇವೆ ಎಂದರೆ ಇಲ್ಲಿನ ಆಚಾರ ವಿಚಾರ, ಜನಜೀವನ, ಪಾತ್ರ ಎಲ್ಲರಿಗೂ ಮುಟ್ಟಿ ಅವರನ್ನು ಇಲ್ಲಿಗೆ ಎಳೆತರಬೇಕು.

ಅದನ್ನು ಬಿಟ್ಟು ಸಿನಿಮಾ ಪ್ಯಾನ್ ಇಂಡಿಯಾ ಮುಟ್ಟಿಸುವ ಸಲುವಾಗಿ ಯಾರದ್ದೋ ಸ್ಟೋರಿ ಮಾಡಿದರೆ ಅಷ್ಟು ಸಮಂಜಸವಲ್ಲ ಎಂದಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿ ಒಳ್ಳೆ ಕಥೆಗಳು ಬರುತ್ತಿಲ್ಲಾ ಮೊದಲಿನಂತ ಸ್ಟೋರಿ ಸಿನಿಮಾಗಳು ಇಲ್ಲ ಎಂದು ಕೆಲವೇ ಪ್ರೇಕ್ಷಕ ವರ್ಗ ಹೇಳುವುದನ್ನು ಕೇಳಿದ್ದೇವೆ ನಮ್ಮ ಚಿತ್ರಗಳ ಯಶಸ್ಸಿನ ಗುಟ್ಟು ಕೂಡ ಕಥೆ ಆಗಿರುತ್ತಿತ್ತು, ಕಥೆ ಬರೆದವರನ್ನು ನಾವು ಕೇಳಿದರೆ ನಿರ್ದೇಶಕರ ತಲೆಯಲ್ಲಿ ಈಗಾಗಲೇ ಒಂದು ಏನೋ ಇರುತ್ತದೆ ನೀವು ಒಂದೆಳೆಯನ್ನು ಹೇಳಿ ಆಮೇಲೆ ಅದಕ್ಕೆ ತಕ್ಕ ಹಾಗೆ ಬೇಕಾದ್ರೆ ಕಥೆ ಬರೆಯೋಣ ಎನ್ನುತ್ತಿದ್ದರು.

ಕಥೆಯೇ ಸಿನಿಮಾಗಬೇಕು ಎಂದಿಲ್ಲ ಅದರಲ್ಲಿರುವ ಒಂದು ಪ್ಯಾರಾ ಅಥವಾ ಒಂದು ಎಳೆ ಅಥವಾ ಒಂದು ಹಾಡು ಕೂಡ ಕಥೆಗೆ ಸ್ಪೂರ್ತಿ ಆಗಬಹುದು ಅಲ್ಲಿಂದ ಕಥೆ ಸೃಷ್ಟಿಯಾಗಬಹುದು. ನಾಗರಹೊಳೆ ಎನ್ನುವ ಸಿನಿಮಾ ಮಾಡಿದಾಗ ಮೈಸೂರಿನಲ್ಲಿ ನಾನು ಒಂದು ಪುಸ್ತಕ ಓದಿದೆ. ಮಕ್ಕಳ ಕಥೆ ಬರೆಯುತ್ತಿದ್ದ ಅನಿದ್ ಬ್ಲೈಟನ್ ಸಿನಿಮಾದ ಒಂದು ಪ್ಯಾರಾ ಅದಕ್ಕೆ ಸ್ಪೂರ್ತಿಯಾಗಿತ್ತು. ಮೊದಲಿಗೆ ಐದು ಮಕ್ಕಳನ್ನು ಕಾಡಿನಲ್ಲಿ ಬಿಡುವ ಬಗ್ಗೆ ಯೋಚನೆ ಮಾಡೋಣ ಮುಂದಿನದು ಆಮೇಲೆ ಸೃಷ್ಟಿ ಮಾಡೋಣ ಅಂದುಕೊಂಡು ಶುರು ಮಾಡಿದವು ಅದು ಎಂತ ಹಿಟ್ಟಾಯ್ತು ಎಲ್ಲರಿಗೂ ಗೊತ್ತೇ ಇದೆ.

ಹೊಂಬಿಸಿಲು, ಎಡಕಲ್ಲು ಗುಡ್ಡದ ಮೇಲೆ ಇದೆಲ್ಲ ಸುಧಾ ಪತ್ರಿಕೆಯಲ್ಲಿ ಬರುತ್ತಿದ್ದ ಕಥೆಗಳು, ಅನೇಕ ಸಿನಿಮಾಗಳು ಸುಧಾಪತ್ರಿಕೆಯಿಂದಲೇ. ಮೊದಲಿಗೆ ಈಗಿನ ನಿರ್ದೇಶಕರುಗಳು ವಾರಕ್ಕೆರಡು ಪುಸ್ತಕ ಓದುವುದನ್ನು ರೂಢಿ ಮಾಡಿಕೊಂಡರೆ ಇದೆಲ್ಲಾ ಸಾಧ್ಯವಾಗುತ್ತದೆ ಎಂದರು. ಅಂತ ಸಿನಿಮಾ ಮಾಡಿದಾಗ ಅದನ್ನು ನಿರ್ಮಾಪಕರಾದ ದೊರೈ ಭಗವಾನ್ ಅವರು ಅಣ್ಣಾವ್ರಿಗೆ ಎಂದು ಕೇಳಿದ್ದರು. ಆಗಲೇ ವಿಷ್ಣುವರ್ಧನ್ ನನಗೆ ಬಹಳ ಆತ್ಮೀಯ ಸ್ನೇಹಿತನಾಗಿದ್ದ, ನಾನು ವಿಷ್ಣುಗೂ ಕೂಡ ಅಂತ ಸಿನಿಮಾ ಬೇಡ ಎಂದು ಹೇಳಿದ್ದೆ.

ಜೊತೆಗೆ ಅಣ್ಣಾವ್ರನ್ನು ಭೇಟಿಯಾಗಿ ಅತ ಮಾಸ್ ಸಿನಿಮಾ ಈಗಾಗಲೇ ಇಷ್ಟು ದೊಡ್ಡ ಹೆಸರು ಮಾಡಿದ್ದೀರಾ, ಈ ಸಿನಿಮಾದಲ್ಲಿ ಬರುವ ಕೆಲ ಸನ್ನಿವೇಶಗಳು ನಿಮಗೆ ಸೂಟ್ ಆಗುವುದಿಲ್ಲ. ಉದಾಹರಣೆಗೆ, ಸಿನಿಮಾದಲ್ಲಿ ಹೀರೋ ಅನ್ನು ಕಟ್ಟಿ ಹಾಕಿ ಅವನೆದುರೆ ಹೆಂಡತಿಗೆ ಹೊಡೆಯುತ್ತಾರೆ. ಜನರೂ ನೋಡುವಾಗ ಹೀರೋ ಎಲ್ಲವನ್ನು ಕಿತ್ತೆಸೆದು ಅವರಿಗಳೆಲ್ಲ ಹೊಡೆಯುತ್ತಾನೆ ಎಂದು ನಿರೀಕ್ಷೆ ಇಟ್ಟು ಕೊಂಡಿರುತ್ತಾರೆ ಹಾಗಾಗಿ ಇದು ನಿಮಗೆ ಸೂಟ್ ಆಗಲ್ಲ ಮುಂದೆ ಯಾವುದಾದರೂ ಕಥೆಯನ್ನು ನಿಮಗಾಗಿಯೇ ಮಾಡಿ ನಿರ್ದೇಶನ ಮಾಡುತ್ತೇನೆ ಎಂದು ಹೇಳಿದ್ದೆ.

ಆ ಸಮಯದಲ್ಲಿ ಅಂಬರೀಷ್ ಗೆ ಇನ್ನು ಯಾವುದೇ ಬ್ಯಾಗ್ರೌಂಡ್ ಇರಲಿಲ್ಲ. ಜನ ಈ ಪಾತ್ರದಲ್ಲಿ ಅಂಬರೀಷ್ ನ ಒಪ್ಪಿಕೊಂಡರು. ಅಂಬಿ ಅಲ್ಲದೇ ಅಂತ ಸಿನಿಮಾವನ್ನು ಬೇರೆ ಯಾರಿಂದಲೂ ಕೂಡ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಉದಾಹರಣೆ ಕೊಡುತ್ತಾ ಕಥೆಗೆ ಹೀರೋ ಮುಖ್ಯ ಅಲ್ಲ ಕಥೆಗೆ ಸೂಟ್ ಆಗುವ ಹೀರೋ ಇರಬೇಕು ಎನ್ನುವ ಅವರ ಅಭಿಪ್ರಾಯವನ್ನು ತಿಳಿಸಿದರು.

ಕನ್ನಡ ಇಂಟಸ್ಟ್ರಿಗೆ ಬರದೆ, ತಮಿಳುನಾಡಿನಲ್ಲಿಯೇ ಇದ್ದಿದ್ರೆ ಇಷ್ಟೊತ್ತಿಗೆ ಬ್ಯಾಂಕ್ ಬ್ಯಾಲೆನ್ಸ್ ಎಲ್ಲೋ ಇರುತ್ತಿತ್ತು ಗೊತ್ತ ಎಂದ ರಮೇಶ್ ಅರವಿಂದ್.

 

ಕನ್ನಡದ ಚಿರ ಯುವಕ ಎಂದೇ ಕರೆಯಬಹುದಾದಂತಹ ರಮೇಶ್ ಅರವಿಂದ್ ಅವರು ಸದ್ದಿಲ್ಲದ 100 ಸಿನಿಮಾಗಳನ್ನು ಮುಗಿಸಿದ್ದಾರೆ. ಕನ್ನಡದಲ್ಲಿ ಅಂಬರೀಶ್, ವಿಷ್ಣುವರ್ಧನ್, ರವಿಚಂದ್ರನ್ ಅವರ ಕಾಲದಿಂದ ಹಿಡಿದು ಶಿವಣ್ಣ, ಉಪೇಂದ್ರ ಅವರ ಸಮಯದಲ್ಲೂ ಮತ್ತು ಈಗ ದರ್ಶನ್, ಸುದೀಪ್, ಯಶ್ ಅವರ ಸಮಯದಲ್ಲೂ ನಾಯಕ ನಟನಾಗಿ ಮಿಂಚುತ್ತಿರುವ ಈ ಎವರ್ಗ್ರೀನ್ ಹೀರೋ ಈಗ ಹೊಸ ಸಿನಿಮಾದ ರಿಲೀಸ್ ಖುಷಿಯಲ್ಲಿದ್ದಾರೆ.

ಸದಾ ಕನ್ನಡದಲ್ಲಿ ಒಂದಲ್ಲ ಒಂದು ಪ್ರಯೋಗಾತ್ಮಕ ಸಿನಿಮಾಗಳ ಪಾತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಮೇಶ್ ಅರವಿಂದ್ ಅವರ ವೃತ್ತಿ ಬದುಕಿನಲ್ಲಿ ಮತ್ತೊಂದು ಗ್ರೇಟ್ ರೋಲ್ ಎಂದರೆ ಅದು ಶಿವಾಜಿ ಸೂರತ್ಕಲ್. ಈಗ ಶಿವಾಜಿ ಸೂರತ್ಕಲ್ ಸಿನಿಮಾದ ಸೀಕ್ವೆಲ್ ರಿಲೀಸ್ ಆಗುತ್ತಿದೆ. ಈ ಸಮಯದಲ್ಲಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟ ಅವರು ತಮಿಳು ಸಿನಿಮಾ ಇಂಡಸ್ಟ್ರಿಯಲ್ ಇದ್ದ ಸಮಯದ ಬಗ್ಗೆ ಮಾತನಾಡಿದ್ದಾರೆ.

ರಮೇಶ್ ಅರವಿಂದ್ ಅವರು ಮೂಲತಃ ತಮಿಳುನಾಡಿರವರು, ಆದರೆ ಅವರು ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿಯೇ. ಆದರೆ ಇವರು ಆರಂಭದ ದಿನಗಳಲ್ಲಿಯೇ ತಮಿಳು ಇಂಡಸ್ಟ್ರಿಗೆ ಹೋಗಿ ತಮ್ಮ ಛಾಪು ಮೂಡಿಸಿ ಬಂದಿದ್ದವರು. ತೆಲುಗು ಇಂಡಸ್ಟ್ರಿಯಲ್ಲೂ ಕೂಡ ಕಾಣಿಸಿಕೊಂಡಿದ್ದ ಇವರಿಗೆ ತಮಿಳು ಚಿತ್ರರಂಗ ಮಣೆ ಹಾಕಿತ್ತು. ಕನ್ನಡದಿಂದ ಹೋದ ಅನೇಕ ಜನ ಅಲ್ಲಿ ನೆಲೆ ಕಟ್ಟಿಕೊಂಡು ಇಂದು ಅಲ್ಲಿ ಸ್ಟಾರ್ ಹೀರೋಗಳಾಗಿ ಮೆರೆದಿದ್ದಾರೆ

ಈ ಸಾರಿನಲ್ಲಿ ರಜನಿಕಾಂತ್, ಜಯಲಲಿತ, ಅರ್ಜುನ್ ಸರ್ಜಾ, ಪ್ರಕಾಶ್ ರಾಜ್ ಇನ್ನು ಮುಂತಾದವರನ್ನು ಹೆಸರಿಸಬಹುದು. ಅದೇ ಕಾಲಘಟ್ಟದಲ್ಲಿ ಅಲ್ಲಿಗೆ ಹೋಗಿದ್ದ ರಮೇಶ್ ಅರವಿಂದ್ ಅವರು ಮರಳಿ ಕನ್ನಡಕ್ಕೆ ಬಂದರು. ಮತ್ತೆ ಹಿಂತುರುಗಿ ಆಕಡೆ ನೋಡಿದವರೇ ಅಲ್ಲ. ಈ ವಿಷಯದ ಬಗ್ಗೆ ಅವರನ್ನು ಪ್ರಶ್ನೆ ಕೇಳಿದಾಗ ಅವರು ಕೊಟ್ಟ ಉತ್ತರ ಈ ರೀತಿ ಇತ್ತು.

ನಾನು ಆರಂಭದ ದಿನಗಳಲ್ಲಿ ಅವಕಾಶಗಳಿಗಾಗಿ ಹುಡುಕುತ್ತಿದ್ದೆ. ಆಗ ತಮಿಳಿನಲ್ಲಿ ನನಗೆ ಚಾನ್ಸ್ ಸಿಗುತ್ತಿತ್ತು. ನಾನು ತಮಿಳು ಸಿನಿಮಾ ರಂಗ ಬಿಟ್ಟು ಬಂದಾಗ ಎರಡು ಸೂಪರ್ ಹಿಟ್ ಸಿನಿಮಾಗಳು ಸಿಕ್ಕಿತ್ತು . ಸತ್ಯಲೀಲಾವತಿ ಮತ್ತು ಡೂ ಇಟ್ ಎರಡು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ನನಗೆ ಸಾಲು ಸಾಲು ಅವಕಾಶಗಳು ಕೂಡ ಬರುತ್ತಿತ್ತು ಒಂದು ವೇಳೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬರದೆ ಅಲ್ಲೇ ಉಳಿದುಕೊಂಡಿದ್ದರೆ ನನ್ನ ಬ್ಯಾಂಕ್ ಬ್ಯಾಲೆನ್ಸ್ ಎಲ್ಲೋ ಇರುತ್ತಿತ್ತು.

ಮಾನಿಟರ್ ಆಗಿ ನಾನು ಬೇರೆ ರೀತಿ ಇರುತ್ತಿದ್ದೆ, ಅದು ಬೇರೆ ವಿಷಯ ಆದರೆ ನಾನು ಇಲ್ಲಿ ಬಂದದ್ದಕ್ಕಾಗಿ ನನಗೆ ಲಾಸ್ ಏನು ಆಗಿಲ್ಲ. ನಾನು ಮರಳಿ ಮನೆಗೆ ಬಂದ ಖುಷಿ ಸಿಕ್ಕಿತು. ಆ ಖುಷಿ ಮುಂದೆ ಬೇರೆ ಯಾವುದು ಏನು ಅಲ್ಲ. ಕನ್ನಡಿಗರ ಜೊತೆ ನನಗೆ ಬೆರೆತು ಹೋದ ನೆನಪು ಬಹಳ ಸಿಹಿಯಾಗಿತ್ತು ಅದಕ್ಕೆ ನಾನು ಮರಳಿ ಆ ಕಡೆ ಹೋಗುವ ಮನಸ್ಸು ಮಾಡಲಿಲ್ಲ.

ನನ್ನ ಮನೆ ಇದು, ನನ್ನ ನೆಲ ಎನ್ನುವ ಫೀಲ್ ಕೊಡುತ್ತದೆ ಇಲ್ಲಿ ಸಿಗುವ ಪ್ರೀತಿ ವಿಶ್ವಾಸ ಮತ್ತೆಲ್ಲೂ ಸಿಗುವುದಿಲ್ಲ, ಹಾಗಾಗಿ ಇಲ್ಲೇ ಉಳಿದುಕೊಂಡೆ. ಅದೇ ಸಮಯಕ್ಕೆ ಇಲ್ಲಿ ನನ್ನ 9 ಸಿನಿಮಾಗಳು ಒಟ್ಟಿಗೆ ಹಿಟ್ ಆದವು. ಆಗಾಗ ಕಮಲ್ ಹಾಸನ್ ಅವರ ಸ್ನೇಹಕ್ಕಾಗಿ ಅವರ ಜೊತೆ ಒಂದೊಂದು ಸಿನಿಮಾದಲ್ಲಿ ನಟಿಸುತ್ತಿದ್ದೆ ಹೊರತು ಫುಲ್ ಟೈಮ್ ನಾನು ತಮಿಳು ಸಿನಿಮಾದಲ್ಲಿ ನಟಿಸಲು ಹೋಗಲೇ ಇಲ್ಲ. ಇಲ್ಲೇ ನಾನು ಉಳಿದುಕೊಂಡು ನೆಲೆ ಕಂಡುಕೊಂಡಿದ್ದಕ್ಕಾಗಿ ನನಗೆ ಬಹಳ ತೃಪ್ತಿ ಇದೆ ಎಂದು ಹೇಳಿಕೊಂಡಿದ್ದಾರೆ.

ಹೌದು ನನ್ನ ಮಗ ಮದುವೆಯಾಗಿದ್ದಾನೆ ಏನಿವಾಗ.? ಅವನೇನು ಕದ್ದು ಬಸುರಿ ಮಾಡಿ ಮದ್ವೆ ಆಗಿಲ್ಲ ಎಂದ ಲೀಲಾವತಿ ಈ ವಿಡಿಯೋ ನೋಡಿ ಒಮ್ಮೆ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ.!

ಕಳೆದ ವಾರ ಕನ್ನಡ ಚಿತ್ರರಂಗದ ಮೇರು ನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಅವರ ವೈಯಕ್ತಿಕ ಜೀವನದ ಕುರಿತಂತೆ ಒಂದು ಸುದ್ದಿ ಹೊರ ಬಿದ್ದಿತ್ತು. ರಾಜಕುಮಾರ್ ಕುಟುಂಬಕ್ಕೆ ಬಹಳ ಆಪ್ತರಾದ, ನಿರ್ದೇಶಕ, ಬರಹಗಾರ, ಪತ್ರಕರ್ತ ಪ್ರಕಾಶ್ ರಾಜ್ ಮೆಹು ಅವರು ಮೂರು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಲೀಲಾವತಿ ಅವರು ಮಹಾಲಿಂಗ ಭಾಗವತರ್ ಅವರ ಪತ್ನಿ ತಮಿಳುನಾಡಿನ ಚೆನ್ನೈ ಆಸ್ತಿ ಫೋಟೋ ಇದು, ಅದೇ ಇದರ ವಿವರ ನೀಡುತ್ತದೆ ನೋಡಿ ಎಂದು ತೋರಿಸಿದ್ದಾರೆ.

ಅಲ್ಲಿ ಮಹಾಲಿಂಗ ಭಾಗವತಾರ್ ಪತ್ನಿ ಲೀಲಾವತಿ ಅಮ್ಮರ್ ಎಂದು ಇದೆ. ಜೊತೆಗೆ ವಿನೋದ್ ರಾಜ್ ಮದುವೆ ಆಗದೆ ತಾಯಿ ಸೇವೆಯಲ್ಲಿ ನಿರತರಾಗಿದ್ದಾರೆ ಎಂದು ಸುಳ್ಳು ಹೇಳಿಕೊಂಡು ಬಂದಿದ್ದಾರೆ ಎಂದು ಹೇಳಿ ಮತ್ತೊಂದು ಫೋಟೋದಲ್ಲಿ ವಿನೋದ್ ರಾಜ್ ಪತ್ನಿ ಮಗ ಮತ್ತು ಲೀಲಾವತಿ ಅವರು ಒಟ್ಟಿಗೆ ಕುಳಿತಿರುವ ಫೋಟೋ ಮತ್ತು ವಿನೋದ್ ರಾಜ್ ಮಗನ ಮಾರ್ಕ್ಸ್ ಕಾರ್ಡ್ ಫೋಟೋ ಶೇರ್ ಮಾಡಿದ್ದಾರೆ. ಮಾರ್ಕ್ಸ್ ಕಾರ್ಡ್ ಅಲ್ಲಿ ತಂದೆ ಹೆಸರು ಎನ್ನುವ ಜಾಗದಲ್ಲಿ ವಿನೋದ್ ರಾಜ್ ಎಂದು ಇತ್ತು.

ಈ ಬಗ್ಗೆ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಲೀಲಾವತಿಯವರು ಮಾತನಾಡಿ ಇದಕ್ಕೆಲ್ಲ ಸ್ಪಷ್ಟನೆ ಕೊಟ್ಟಿದ್ದಾರೆ. ಮಗನ ಮದುವೆ ಆಗಿರುವ ವಿಷಯವನ್ನು ಯಾಕೆ ಇಷ್ಟು ದಿನ ಮುಚ್ಚಿಟ್ಟಿದ್ದೀರಿ ಅಂತ ಕೇಳಿದ ಪ್ರಶ್ನೆಗೆ ಎಲ್ಲಾ ನೀಟಾಗಿ ಇದೆ ಅಲ್ವಾ, ಸೊಟ್ಟ ಪಟ್ಟ ಇಲ್ದೆ ಅಂಕುಡೊಂಕು ಇಲ್ಲದೆ ಕಳ್ಳರ ಸುಳ್ಳರ ಹಾಗೆ ಇರದೆ ನೀಟಾಗಿ ನೆಮ್ಮದಿಯಾಗಿ ಇದೆ. ಯಾಕೆ ಹೇಳಿಲ್ಲ ಅಂದರೆ ಎಂತೆಂಥವರ ಮದುವೆ ಎಲ್ಲೆಲ್ಲೋ ನಡೆದಿದೆ, ಪ್ಯಾಲೆಸ್ ಅಲ್ಲಿ ಮಾಡಿದ್ದಾರೆ, ನನಗೆ ಆ ಶಕ್ತಿ ಇರಲಿಲ್ಲ.

ಅದಕ್ಕೆ ಅದನ್ನು ರಹಸ್ಯವಾಗಿಡುವುದೇ ಒಳ್ಳೆಯದು ಎನಿಸಿತು. ಅವನೇನು ಹೆಣ್ಣು ಹುಡುಗಿ ಅಲ್ಲ ಅವನ ಕದ್ದು ಬಸುರಾಗಿರುವುದಕ್ಕೆ ಈ ಮದುವೆ ಮಾಡಿಸಿಲ್ಲ, ಒಳ್ಳೆ ಮಗವಾಗಿ ಇದ್ದಾನೆ. ನಾನೇ ಇಷ್ಟಪಟ್ಟು ಮದುವೆ ಮಾಡಿಸಿದೆ ತಿರುಪತಿ ಬೆಟ್ಟದಲ್ಲಿ ನನ್ನ ಮಗನ ಮದುವೆಯನ್ನು ಸರಳವಾಗಿ ಮಾಡಿದೆ. ಅದೇ ಶ್ರೇಷ್ಠ ಜಾಗ ಎನಿಸಿತು.

ಎಲ್ಲರಿಗೂ ಗೊತ್ತಾಗಿ ಮದುವೆ ಬಗ್ಗೆ ಅಂಕುಡೊಂಕು ಮಾತು ಕೇಳುವ ಬದಲು ಅಲ್ಲಿ ಮಾಡುವುದು ಒಳ್ಳೆಯದು ಎನಿಸಿತು. ಏಳು ಜನ ಕನ್ನಡಿಗರು ಈ ಮದುವೆಗೆ ಬಂದಿದ್ದರು ಏನು ಲೀಲಾವತಿ ಅವರೇ ನಿಮ್ಮ ಮಗನ ಮದುವೆಗೆ ಜನ ಸಿಗಲ್ವಾ ಎಂದು ಮಾತನಾಡಿದರು. ಅದಕ್ಕೂ ನಾನು ತಲೆಕೆಡಿಸಿಕೊಳ್ಳಲಿಲ್ಲ, ನನ್ನ ಬಡತನದ ಬಗ್ಗೆ ಹೇಳಿಕೊಳ್ಳಲು ನನಗೆ ನಾಚಿಕೆ ಆಗುತ್ತದೆ. ಮೊಮ್ಮಗ ಮತ್ತು ಸೊಸೆ ಚೆನ್ನಾಗಿದ್ದಾರೆ ಅವರಿಗೆ ಏನು ಕೊರತೆ ಮಾಡಿಲ್ಲ ಬೆರಳು ತೋರಿಸುವ ಹಾಗೆ ನಾನು ಇಟ್ಟಿಲ್ಲ ಅವರು ಬಂಗಲೆಯಲ್ಲಿ ಆರಾಮಾಗಿದ್ದಾರೆ.

600 ಸಿನಿಮಾಗಳನ್ನು ಮಾಡಿದ ನಟಿ ನಾನು ಆದರೂ ಕೂಡ ನನ್ನ ಮಗನ ಮದುವೆಯನ್ನು ವಿಜೃಂಭಣೆಯಿಂದ ಮಾಡಲಾಗಲಿಲ್ಲವಲ್ಲ ಎನ್ನುವ ನೋವಿದೆ. ಅದರ ನಡುವೆ ಈ ರೀತಿ ಬಂದು ನಮ್ಮ ಅಂತರಗದ ವಿಷಯವನ್ನು ಪ್ರಶ್ನೆ ಮಾಡಿದಾಗ ಇನ್ನು ನೋವಾಗುತ್ತದೆ ಎಂದೆಲ್ಲಾ ಮಾತನಾಡಿದ್ದಾರೆ. ವಿನೋದ್ ರಾಜ್ ಅವರು ಮಾತನಾಡಿ ಅಮ್ಮ ನೆಮ್ಮದಿಯಾಗಿ ಇದ್ದಾರೆ, ಇರಲಿ ಬಿಡಿ ಅವರು ಕರ್ನಾಟಕದ ಆಸ್ತಿ ಎಂದಿದ್ದಾರೆ.

ಕನ್ನಡಿಗರಿಗೆ ವಿನೋದ್ ರಾಜ್ ಅವರ ಮದುವೆ ಸರಳವಾಗಿ ನಡೆದಿರುವುದು ಬೇಸರವಿಲ್ಲ. ಮದುವೆ ಆಗಿದ್ದರೂ ಕೂಡ ಎಲ್ಲೂ ಹೇಳಿಕೊಟ್ಟಿಲಿಲ್ಲ ಬೇಕೆಂದೇ ವಿಷಯವನ್ನು ಮುಚ್ಚಿಟ್ಟಿದ್ದರು ಎನ್ನುವ ಬೇಸರ ಅಷ್ಟೇ. ಈ ವಿಷದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಕೆಲಸ ಬಿಟ್ಟು ಬಿಡಿ ವರ್ಷಕ್ಕೆ 5 ಸಿನಿಮಾ ಕೊಡ್ತೀನಿ ಅಂತ S.ನಾರಯಣ್ ಹೇಳಿದ್ರು ಆದ್ರೆ ಮುಂದೆ ಆಗಿದ್ದೆ ಬೇರೆ. ಸೂರ್ಯವಂಶ ಸಿನಿಮಾ ಚಿತ್ರೀಕರಣದಲ್ಲಿ ಆದ ಅನುಭವ ಬಿಚ್ಚಿಟ್ಟ ನಟ ಸುರೇಶ್

 

ಎಂ.ಎನ್ ಸುರೇಶ್ ಎನ್ನುವ ಕನ್ನಡ ಚಿತ್ರರಂಗದ ಕಲಾವಿದ ಎಂದರೆ ತಿಳಿಯದೆ ಹೋಗಬಹುದು ಆದರೆ ಮೂಗು ಸುರೇಶ್ ಎಂದು ಇವರ ಹೆಸರು ಹೇಳಿದ ತಕ್ಷಣ ಇವರ ಉದ್ದನೆಯ ಮೂಗಿನ ಮುಖ ನೆನಪಾಗುತ್ತದೆ. ಮೂಗು ಸುರೇಶ್ ಎಂದೇ ಕನ್ನಡ ಚಲನಚಿತ್ರದಲ್ಲಿ ಹೆಸರು ಮಾಡಿರುವ ಇವರು ಪೋಷಕ ಪಾತ್ರಧಾರಿಯಾಗಿ, ಹಾಸ್ಯ ಕಲಾವಿದನಾಗಿ, ಕಿರುತೆರೆ ಧಾರಾವಾಹಿಗಳ ಪಾತ್ರದಾರಿಯಾಗಿ ಕನ್ನಡಿಗರ ಮನೆ ಮಾತಾಗಿದ್ದಾರೆ.

ಇವರು ಹಾಗೂ ದೊಡ್ಡಣ್ಣ ಅವರ ಕಾಂಬಿನೇಷನ್ನ ಸೂರ್ಯವಂಶ ಚಿತ್ರದ ಸೀನ್ ಗಳನ್ನು ಕನ್ನಡಿಗರು ಎಂದು ಸಹ ಮರೆಯಲು ಸಾಧ್ಯವಿಲ್ಲ. ಪದ್ದು ಇದು ಮೇಕೆ ಮ್ಯಾ ಎನ್ನುತ್ತದೆ ಡೈಲಾಗ್ ಕೇಳಿದ ತಕ್ಷಣ ಹೊಟ್ಟೆ ಹಿಡಿದು ನಗುವ ಮಂದಿ ಇವರನ್ನು ಇನ್ನು ಹಲವು ಸಿನಿಮಾಗಳಲ್ಲಿ ದೊಡ್ಡಣ್ಣ ಅವರ ಜೊತೆ ಕಂಡಿದ್ದಾರೆ. ಹೇಗೆ ಸಾಧು ಹಾಗೂ ಬುಲೆಟ್ ಅವರು ಕಾಂಬಿನೇಷನ್ ಆಗಿದ್ದರು ಹಾಗೆ ದೊಡ್ಡಣ್ಣ ಮತ್ತು ಸುರೇಶ್ ಅವರಿಬ್ಬರದು ಇನ್ನೊಂದು ಕಾಂಬಿನೇಷನ್ ಎಂದು ಹೇಳಬಹುದು. ಅಷ್ಟರ ಮಟ್ಟಿಗೆ ಇವರಿಬ್ಬರ ಹಾಸ್ಯ ಪಂಚ್ ಆಗುತ್ತಿತ್ತು.

ರಂಗಭೂಮಿ ಕಲಾವಿದರಾದ ಮೂಗು ಸುರೇಶ್ ಅವರು ಸಿನಿಮಾ ರಂಗಕ್ಕೆ ಬಹಳ ತಯಾರಿ ನಂತರ ತಡವಾಗಿ ಕಾಲಿಟ್ಟವರು ಎಂದು ಹೇಳಬಹುದು. ರಂಗಭೂಮಿಯಲ್ಲಿ ಹವ್ಯಾಸಿ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದ ಇವರ ನಟನ ಚಾತುರ್ಯ ಅವರಿಗೆ ಸಿನಿಮಾದಲ್ಲಿ ಅವಕಾಶ ಗಿಟ್ಟುವಂತೆ ಮಾಡಿತು. ಅದರಲ್ಲೂ ಸೂರ್ಯವಂಶ ಸಿನಿಮಾ ಸಮಯದಲ್ಲಂತೂ ಎಸ್ ನಾರಾಯಣ್ ಅವರೇ ಅವರನ್ನು ಕರೆದು ನೀವು ಮಾಡುತ್ತಿರುವ ಕೆಲಸ ಬಿಟ್ಟು ಬಿಡಿ ನಿಮಗೆ ವರ್ಷಕ್ಕೆ ಐದು ಸಿನಿಮಾ ಕೊಡುತ್ತೇನೆ ಎಂದು ಹೇಳಿದ್ದರಂತೆ.

ಆ ಸಮಯದಲ್ಲಿ ಮೂಗು ಸುರೇಶ್ ಅವರಿಗೆ ನಾರಾಯಣ್ ಅವರ ಮೇಲೆ ನಂಬಿಕೆ ಇದ್ದರೂ ಮನದಲ್ಲಿ ಬಂದ ಗೊಂದಲ ಹಾಗೂ ಕುಟುಂಬದವರ ಒತ್ತಡ ಅವರನ್ನು ಕೆಲಸ ಬಿಡದಂತೆ ಮಾಡಿತ್ತು. ಕುಟುಂಬದವರ ನಿರ್ಧಾರದಂತೆ ಕೆಲಸ ಬಿಡದೆ ಅವರು ಅವಕಾಶ ಆದಾಗಲೆಲ್ಲ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಎಸ್ ನಾರಾಯಣ್ ಅವರು ವರ್ಷಕ್ಕೆ ಐದು ಸಿನಿಮಾ ನೀಡುವ ಜವಾಬ್ದಾರಿ ನನ್ನದು ಎನ್ನುವ ಭರವಸೆ ನೀಡಿದಾಗಲೂ ಕೂಡ ಅವರು ಕೆಲಸ ತೊರೆದವರಲ್ಲ.

ಹೇಳಿದ ಮಾತಿನಂತೆ ಎಸ್ ನಾರಾಯಣ್ ಅವರ ತಮ್ಮ ನಟನೆ ನಿರ್ದೇಶನದ ನನ್ನವಳು ನನ್ನವಳು, ಭಾಮ ಸತ್ಯಭಾಮ ಮುಂತಾದ ಸಿನಿಮಾಗಳಲ್ಲಿ ಅವಕಾಶ ಕೊಟ್ಟಿದ್ದರು. ಇದಾದ ಮೇಲು ಕೋಟಿಗೊಬ್ಬ, ರಕ್ತ ಕಣ್ಣೀರು ಮುಂತಾದ ಸಿನಿಮಾಗಳಲ್ಲಿ ಕನ್ನಡಿಗರು ಎಂದು ಮರೆಯದ ಪಾತ್ರಗಳಲ್ಲಿ ಕಾಣಿಸಿಕೊಡಿವರು ಮೂಗು ಸುರೇಶ್ ಅವರು. ಇತ್ತೀಚೆಗೆ ಒಂದು ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಸೂರ್ಯವಂಶ ಸಿನಿಮಾದಲ್ಲಿ ತೆಗೆದುಕೊಂಡ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ.

ಸೂರ್ಯವಂಶ ಪಾತ್ರ ನನಗೆ ಬಹಳ ಜನಪ್ರಿಯತೆ ತಂದುಕೊಟ್ಟಿತ್ತು. ಆದರೆ ಸೂರ್ಯವಂಶ ಸಿನಿಮಾಗೆ ನಾನು 27 ದಿನಗಳ ತನಕ ಕೆಲಸ ಮಾಡಿದ್ದೆ ನನಗೆ ಸಿಕ್ಕದ್ದು ಮಾತ್ರ 4,000 ಅಷ್ಟೇ. ನಿರ್ಮಾಪಕರು ಹೆಚ್ಚಾಗಿ ಕೊಟ್ಟಿದ್ದರೂ ಕೊಡುವವರು ಹಿಡಿದುಕೊಂಡು ನನಗೆ ಮುಂದಿನ ದಿನದಲ್ಲಿ ಕೊಡ್ತೀನಿ ಎಂದು ಹೇಳಿ 4000 ಮಾತ್ರ ಕೊಟ್ಟಿದ್ದರು. ನಾನು ಅವರನ್ನು ಎಸ್ ನಾರಾಯಣ್ ಅವರ ಮುಂದೆ ಹೇಳಿಬಿಟ್ಟೆ ಎಸ್ ನಾರಾಯಣ್ ಅವರು ಅವರನ್ನು ಕರೆಸಿ ಕುಮಾರಸ್ವಾಮಿ ಅವರ ಮುಂದೆಯೇ ಬೈದು ಅಂದೇ ಕೆಲಸದಿಂದ ಕಿತ್ತು ಹಾಕಿದ್ದರು.

ಯಾರು ನಂಬೋದಿಲ್ಲ 27 ದಿನದ ಕೆಲಸಕ್ಕೆ ನಾನು 4,000 ಅಷ್ಟೇ ತೆಗೆದುಕೊಂಡೆ ಎನ್ನುವುದನ್ನು ಎಂದು ಹೇಳಿಕೊಂಡಿದ್ದಾರೆ. ಅಂದು ನಾನು ಕೆಲಸ ಬಿಡದೆ ಇದ್ದಿದ್ದೇ ಒಳ್ಳೆಯದಾಯಿತು. ಅಂದು ನಾನು ಕೆಲಸ ಬಿಟ್ಟಿದ್ದರೆ ನಾನು ಮನೆ ಕಟ್ಟಲು ಆಗುತ್ತಿರಲ್ಲ, ಕಾರು ಕೊಳ್ಳಲು ಆಗುತ್ತಿರಲಿಲ್ಲ. ಈಗ ಎಲ್ಲೆಲ್ಲೋ ಅಲೆಯಬೇಕಾಗುತ್ತಿತ್ತು ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

 

ಸುಧಾರಾಣಿ ಶಿವಣ್ಣನ ಜೊತೆ ಮೊದಲ ಸಿನಿಮಾದಲ್ಲಿ ನಟನೆ ಮಾಡೋಕೆ ಅಂದು ಪಡೆದ ಸಂಭಾವನೆ ಎಷ್ಟು ಗೊತ್ತ.? ನಿಜಕ್ಕೂ ಆಶ್ಚರ್ಯ ಪಡ್ತಿರಾ

.

ಸುಧಾರಾಣಿ ತಮ್ಮ ಮುಗ್ಧ ಮುಖ, ಅಮೋಘ ಅಭಿನಯದ ಕಾರಣದಿಂದ ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ. ವಜ್ರೇಶ್ವರಿ ಕಂಬೈನ್ಡ್ಸ್ ಮೂಲಕ ಪಾರ್ವತಮ್ಮ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಳುವಳಿಯಾಗಿ ಕೊಟ್ಟ ನಾಯಕಿಯರ ಪಟ್ಟಿಯಲ್ಲಿ ಸುಧಾರಾಣಿ ಅವರು ಕೂಡ ಇದ್ದಾರೆ.

ಆನಂದ್ ಎನ್ನುವ ಸಿನಿಮಾದ ಮೂಲಕ ಶಿವಣ್ಣ ಅವರಿಗೆ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಂಡ ಸುಧಾರಾಣಿಯವರು ಶಿವಣ್ಣನ ಜೊತೆ ಯಶಸ್ವಿ ಜೋಡಿ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಂತರದ ದಿನಗಳಲ್ಲಿ ಅಂಬರೀಶ್, ರವಿಚಂದ್ರನ್, ರಮೇಶ್ ಅರವಿಂದ್ ಮುಂತಾದ ನಟರೊಡನೆ ಅಭಿನಯಿಸಿ ಇಂದಿಗೂ ಕೂಡ ಪೋಷಕ ಪಾತ್ರಗಳಿಗೆ ಹಾಗೂ ಕಿರುತೆರೆ ಧಾರಾವಾಹಿಗಳ ಕಥೆಗಳ ಮುಖ್ಯ ಪಾತ್ರಕ್ಕೆ ಬೇಡಿಕೆಯಲ್ಲಿರುವ ನಟಿ.

ಸಿನಿಮಾ ರಂಗದಲ್ಲಿ ನಾಯಕ ನಟಿಯಾಗಿ ತನ್ನ ಜರ್ನಿ ಶುರು ಮಾಡಿದವರು ಈಗ ಕಿರುತೆರೆಯಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ಇದುವರೆಗೆ ಕಾವ್ಯ, ರಥಸಪ್ತಮಿ, ಜೊತೆ ಜೊತೆಯಲಿ ಇನ್ನು ಮುಂತಾದ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಸುಧಾರಾಣಿಯವರು ಈಗ ಸದ್ಯಕ್ಕೇ ಜೀ ಕನ್ನಡ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಎನ್ನುವ ಧಾರಾವಾಹಿಯಲ್ಲಿ ತುಳಸಿ ಪಾತ್ರ ಮಾಡುತ್ತಿದ್ದಾರೆ.

ಈ ಧಾರಾವಾಹಿಯನ್ನು ತುಳಸಿ ಹಾಗೂ ಮಾಧವ ಎನ್ನುವ ಪಾತ್ರದ ಸುತ್ತ ಕಟ್ಟಲಾಗಿದೆ. ಇವುಗಳ ಜೊತೆ ಉಳಿದ ಪಾತ್ರಗಳು ಕೂಡ ವಿಭಿನ್ನವಾಗಿ ನಿರ್ಮಾಣವಾಗಿದ್ದರು. ಈ ಧಾರಾವಾಹಿಯಲ್ಲಿ ಅಮ್ಮನಂತಿರುವ ಅತ್ತೆಯಾಗಿ, ತಾಯಿಯಂತಿರುವ ಸ್ನೇಹಿತೆಯಾಗಿ, ಮಗಳಂತಿರುವ ಸೊಸೆಯಾಗಿ ಉಳಿದ ಎಲ್ಲರಿಗಿಂತಲೂ ತುಳಸಿ ಪಾತ್ರದ ಸುಧಾರಣೆಯವರು ಎಲ್ಲರ ಗಮನ ಸೆಳೆದಿದ್ದಾರೆ.

ಸದ್ಯಕ್ಕೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳ ಜನಪ್ರಿಯತೆ ಪೈಕಿ ಈ ಧಾರಾವಾಹಿ ಶುರುವಾದ ದಿನದಿಂದಲೂ ಕೂಡ ಅಗ್ರಗಣ್ಯ ಸ್ಥಾನದಲ್ಲಿದೆ. ಸುಧಾರಾಣಿಯವರು ಒಂದಲ್ಲ ಒಂದು ಕಾರಣಕ್ಕಾಗಿ ಜನರಿಗೆ ಹತ್ತಿರವಾಗಿಯೇ ಇರುತ್ತಾರೆ. ಹಿಂದೆ ಸಿನಿಮಾಗಳಲ್ಲಿ ರಂಜಿಸಿದರು, ಈಗ ಒಂದು ಹೆಚ್ಚು ಮುಂದೆ ಹೋಗಿ ಪ್ರತಿದಿನ ಕೂಡ ಟಿವಿ ಪರದೆ ಮೂಲಕ ಪ್ರೇಕ್ಷಕರನ್ನು ಭೇಟಿಯಾಗುತ್ತಿದ್ದಾರೆ.

ಕನ್ನಡ ಸಿನಿಮಾ ಇಂಡಸ್ಟ್ರಿಗೆ ಆಗಲಿ, ಕಿರುತೆರೆ ಇಂಡಸ್ಟ್ರೀಗೆ ಆಗಲಿ ಹೊಸ ಪ್ರತಿಭೆಗಳಿಗೇನು ಕಡಿಮೆ ಇಲ್ಲ. ವರ್ಷಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಹೊಸಬರು ಬರುತ್ತಲೇ ಇರುತ್ತಾರೆ. ಮೊದಲ ಅವಕಾಶ ಸಿಕ್ಕರೆ ಸಾಕು ಸಂಭಾವನೆಯೇ ಬೇಡ ಎಂದು ಕ್ಯೂ ನಿಲ್ಲುವ ಜನರು ಇದ್ದಾರೆ. ಇದೆಲ್ಲದರಲ್ಲೂ ಗೆದ್ದು ಇಂದಿಗೂ ಸಹ ತನ್ನ ಮಾರ್ಕೆಟನ್ನು ಹಾಗೆ ಉಳಿಸಿಕೊಂಡಿರುವ ಸುಧಾರಾಣಿಯವರು ತಮ್ಮ ಧಾರಾವಾಹಿಗಳಿಗೂ ಸಹ ಯಾವುದೇ ಸಿನಿಮಾಗೂ ಕಡಿಮೆ ಇಲ್ಲದಂತೆ ಸಂಭಾವನೆ ತೆಗೆದುಕೊಳ್ಳುತ್ತಾರೆ ಎನ್ನುವ ಮಾತುಗಳು ಇವೆ.

ಇದೇ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಸುಧಾರಾಣಿಯವರು ಸಿನಿಮಾದಲ್ಲಿ ನಾಯಕನಟಿಯಾಗಿದ್ದ ಸಮಯದಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಆಗ ಅವರು ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಿದ್ದರು ಎಂದು ಜನ ಕುತೂಹಲ ತೋರುತ್ತಿದ್ದಾರೆ.

ಈ ವಿಷಯದ ಬಗ್ಗೆ ಹೇಳುವುದಾದರೆ ಮೊಟ್ಟಮೊದಲಿಗೆ ನಾಯಕನಟಿಯಾಗಿ ಕಾಣಿಸಿಕೊಂಡ ಆನಂದ್ ಚಿತ್ರಕ್ಕೆ ಅವರು ಬರೋಬ್ಬರಿ 30,000 ರೂಗಳ ಚೆಕ್ಕನ್ನು ಶಿವಣ್ಣ ಅವರ ಕೈಯಿಂದಲೇ ತೆಗೆದುಕೊಂಡಿದ್ದರು. ಆ ಫೋಟೋ ಇನ್ನು ಸಹ ಹಾಗೆ ಇಟ್ಟುಕೊಂಡಿದ್ದಾರೆ. ಅದನ್ನು ಹಿಂದೊಮ್ಮೆ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲೂ ಕೂಡ ಹಂಚಿಕೊಂಡಿದ್ದರು.

ಆ ಸಮಯದಲ್ಲಿ ಮೊದಲ ಸಿನಿಮಾಗೆ ಅಷ್ಟು ಸಂಭಾವನೆ ತೆಗೆದುಕೊಳ್ಳುವುದು ಬಹಳ ದೊಡ್ಡ ವಿಚಾರವಾಗಿತ್ತು, ಆ ದಿನಕ್ಕೆ ಅದು ದೊಡ್ಡ ಮೊತ್ತವಾಗಿತ್ತು. ಸುಧಾರಾಣಿ ಅವರು ಆಗಿನಿಂದ ಈವರಿಗೆ ಅನೇಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಯಾವ ಸಿನಿಮಾದ ಪಾತ್ರ ನಿಮಗೆ ಅಚ್ಚುಮೆಚ್ಚು ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.

ಮತ್ತೊಮ್ಮೆ ಮೋಸ ಹೋದ ನಟ ಅನಿರುದ್ಧ್, ಅಭಿಮಾನಿಗಳಿಗೆ ಕಹಿಸುದ್ದಿ ಇದ್ದೊಂದು ಅವಕಾಶವನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ.

 

ನಟ ಅನಿರುದ್ಧ್ ಅವರು ಚೆಲ್ಲಾಟ, ಚಿತ್ರ ಮುಂತಾದ ಯುವಜನತೆಗೆ ಇಷ್ಟ ಆಗುವ ಹೊಸ ರೀತಿಯ ಸಿನಿಮಾ ಮೂಲಕವೇ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು. ಅವರು ಮತ್ತು ರಕ್ಷಿತಾ ಅವರ ಕಾಂಬಿನೇಷನ್ ನ ನೀನೆಲ್ಲೋ ನಾನಲ್ಲೆ ಸಿನಿಮಾ ಬಗ್ಗೆ ಇಂದಿಗೂ ಜನ ಮಾತನಾಡುತ್ತಾರೆ. ಒಬ್ಬ ಹೀರೋ ಆಗಲು ಅಷ್ಟು ಅರ್ಹತೆಗಳನ್ನು ಹೊಂದಿದ್ದ ಜೊತೆಗೆ ನಿರ್ದೇಶಕನಾಗಿ ಬರಹಗಾರನಾಗಿ ಸ್ಕ್ರಿಪ್ ರೈಟರ್ ಆಗಿ ತೆರೆ ಹಿಂದಿನ ಕೆಲಸ ಬಲ್ಲವರಾಗಿದ್ದ.

ಈ ಹೀರೋ ಅದ್ಯಾಕೋ ಬೆಳ್ಳಿ ತೆರೆಯಲ್ಲಿ ಹೊಳೆಯಲೇ ಇಲ್ಲ. ನಂತರ ಅವರ ವೃತಿ ಜೀವನಕ್ಕೆ ಬ್ರೇಕ್ ಕೊಟ್ಟಿದ್ದು ಕಿರುತೆರೆಯ ಜೊತೆ ಜೊತೆಯಲಿ ಎನ್ನುವ ಧಾರಾವಾಹಿ. ಆರ್ಯವರ್ಧನ್ ಎನ್ನುವ ಪಾತ್ರವನ್ನು ಮಾಡುವುದರೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಅನಿರುದ್ಧ್ ನಟನೆಗೆ ಕಿರುತೆರೆಯ ಪ್ರೇಕ್ಷಕರು ಫಿದಾ ಆಗಿ ಹೋದರು. ಜೊತೆ ಜೊತೆಯಲಿ ಧಾರಾವಾಹಿ ಜನಪ್ರಿಯತೆಗೆ ಒಂದು ರೀತಿಯಲ್ಲಿ ಆರ್ಯವರ್ಧನ್ ಪಾತ್ರ ಮಾಡಿದ ಅನಿರುದ್ಧ್ ಅವರೇ ಕಾರಣ ಎಂದು ಹೇಳಬಹುದು.

ಅಷ್ಟರ ಮಟ್ಟಿಗೆ ಆ ಪಾತ್ರ ಅನಿರುದ್ಧ್ ಅವರಿಗೆ ಹೊಂದಾಣಿಕೆಯಾಗಿತ್ತು ಹಲವು ವರ್ಷಗಳವರೆಗೆ ಕಿರುತೆರೆ ಲೋಕದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಅತಿ ಹೆಚ್ಚು TRPಯನ್ನು ಕೂಡ ಪಡೆದು ಎಲ್ಲ ವರ್ಗದವರ ಮನಸೆಳೆದಿದ್ದ ಈ ಧಾರವಾಹಿ ತಂಡದಿಂದ ದಿಢೀರ್ ಎಂದು ಪ್ರೇಕ್ಷಕರಿಗೆ ಶಾ’ಕಿಂ’ಗ್ ಸುದ್ದಿ ಎದುರಾಗಿತ್ತು. ಅನಿರುದ್ಧ್ ಅವರು ಮಾಡುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಮತ್ತೊಬ್ಬರು ನಿರ್ಧಾರ ಆಗುವ ಮುನ್ನವೇ ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ಹೊರ ಹಾಕಲಾಗಿತ್ತು.

ಇದರ ವಿರುದ್ಧ ವಿಷ್ಣುವರ್ಧನ್ ಅವರ ಅಭಿಮಾನಿಗಳು ಕೂಡ ಇದೊಂದು ಸಂಚು ಎಂದು ಆಕ್ರೋಶ ಹೊರ ಹಾಕಿದ್ದರು. ಅನಿರುದ್ಧ್ ಅವರಿಲ್ಲದೆ ಆ ಧಾರಾವಾಹಿ ಹಿಂದಿನ ಜನಬೆಂಬಲ ಕಳೆದುಕೊಳ್ಳುತ್ತದೆ ಎನ್ನುವುದನ್ನು ಅರಿತಿದ್ದರು ಕೂಡ ನಿರ್ದೇಶಕ ಆರೂರು ಜಗದೀಶ್ ಅವರು ಅನಿರುದ್ಧ್ ಅವರ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿ ನನ್ನ ಧಾರಾವಾಹಿ ನಿಂತು ಹೋದರು ಪರವಾಗಿಲ್ಲ ಅವರು ಮಾತ್ರ ಧಾರಾವಾಹಿಯಲ್ಲಿ ಮುಂದುವರಿಯೋದು ಬೇಡ ಎಂದು ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡರು.

ಈಗ ಹರೀಶ್ ರಾಜ್ ಅವರು ಆ ಪಾತ್ರದಲ್ಲಿ ಮುಂದುವರೆಯುತ್ತಿದ್ದಾರೆ ಮತ್ತು ಆರ್ಯವರ್ತಕನ ಪಾತ್ರಕ್ಕೆ ಸಾಕಷ್ಟು ಜೀವಂತಿಕೆ ತುಂಬಿಸಲು ತನ್ನಿಂದಾದ ಪ್ರಯತ್ನ ಮಾಡುತ್ತಿದ್ದಾರೆ. ಆದರೂ ಧಾರಾವಾಹಿ ಹಿಂದಿನಂತಿಲ್ಲ ಅಷ್ಟೇ ನಿಜ. ಇದೆಲ್ಲ ಆದಮೇಲೆ ಜಗದೀಶ್ ಅವರು ನಿರ್ದೇಶಕರ ಸಂಘಕ್ಕೆ ದೂರು ಸಹ ಕೊಟ್ಟಿದ್ದರು. ಅನಿರುದ್ಧ್ ಅವರನ್ನು ಎರಡು ವರ್ಷಗಳವರೆಗೆ ಕಿರುತೆರೆ ಮಾಧ್ಯಮದಿಂದ ಬ್ಯಾನ್ ಮಾಡಬೇಕು ಎಂದು ಸಹ ಅವರು ಕೇಳಿಕೊಂಡಿದ್ದರು.

ಆದರೆ ಅಷ್ಟಕ್ಕೆ ಎಲ್ಲವನ್ನು ಕೈ ಬಿಡಲಾಯಿತು. ಅನಿರುದ್ಧ್ ಅವರು ಜೊತೆ ಜೊತೆಯಲಿ ಧಾರಾವಾಹಿ ಇಂದ ಹೊರಬಂದ ಕೆಲವೇ ದಿನಗಳಲ್ಲಿ ವಿಷ್ಣುವರ್ಧನ್ ಅವರ ಸ್ನೇಹಿತರಾದ ಎಸ್ ನಾರಾಯಣ್ ಅವರು ಅನಿರುದ್ಧ್ ಅವರ ಕೈ ಹಿಡಿದಿದ್ದರು. ಸೂರ್ಯವಂಶ ಎನ್ನುವ ಹೆಸರಿನಲ್ಲಿ ಹೊಸ ಧಾರವಾಹಿಯನ್ನು ನಿರ್ದೇಶಿಸಿ ಅನಿರುದ್ಧ ಅವರನ್ನು ಮುಖ್ಯ ಪಾತ್ರಕ್ಕೆ ಹಾಕಿಕೊಳ್ಳುವುದಾಗಿ ಹೇಳಿಕೊಂಡಿದ್ದರು.

ಅನಿರುದ್ಧ್ ಮತ್ತು ಎಸ್ ನಾರಾಯಣ್ ಅವರು ಒಟ್ಟಿಗೆ ಈ ವಿಷಯವನ್ನು ಮಾಧ್ಯಮಗಳ ಮುಂದೆ ಕೂಡ ಸುದ್ದಿಗೋಷ್ಠಿ ನಡೆಸಿ ಹಂಚಿಕೊಂಡಿದ್ದರು. ಈ ಹೊಸ ಧಾರಾವಾಹಿಯು ಉದಯ ಟಿವಿಯಲ್ಲಿ ಕೆಲವೇ ದಿನಗಳಲ್ಲಿ ಪ್ರಸಾರವಾಗಲಿದೆ ಎನ್ನುವ ಸುದ್ದಿಯು ಹಬ್ಬಿತ್ತು. ಆದರೆ ಈ ಧಾರಾವಾಹಿಗಾಗಿ ಕಾಯುತ್ತಿದ್ದ ಅನಿರುದ್ಧ್ ಅಭಿಮಾನಿಗಳಿಗೆ ಈಗ ಕಹಿ ಸುದ್ದಿ ಸಿಕ್ಕಿದೆ.

ಅದೇನೆಂದರೆ ಸೂರ್ಯವಂಶ ಧಾರಾವಾಹಿ 20 ಸಂಚಿಕೆಗಳ ಚಿತ್ರೀಕರಣ ನಡೆದು ನಿಂತು ಹೋಗಿದೆಯಂತೆ. ಎಸ್ ನಾರಾಯಣ್ ಅವರು ಈಗಾಗಲೇ ಧಾರಾವಾಹಿಯಿಂದ ಹೊರ ಬಂದಿದ್ದಾರಂತೆ. ಜೊತೆ ಜೊತೆಯಲಿ ಧಾರಾವಾಹಿ ಇಲ್ಲವಾದರೂ ಸೂರ್ಯವಂಶ ಧಾರಾವಾಹಿಯಲ್ಲಾದರೂ ಅನಿರುದ್ಧ್ ಅವರನ್ನು ತೆರೆ ಮೇಲೆ ನೋಡಬಹುದು ಎಂದುಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಇದರಿಂದ ಭಾರಿ ನಿರಾಸೆಯಾಗಿದೆ.

ದರ್ಶನ್ ಒಂದು ಜಾಹೀರಾತಿನಲ್ಲಿ ನಟನೆ ಮಾಡೋಕೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ.?

 

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎನ್ನಬಹುದು. ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಬ್ಬ ನಾಯಕನಟನಾಗಿದ್ದರೂ ಕೂಡ ಇಂದು ಜನರಿಂದ ಅವರಿಗೆ ಸಿಗುತ್ತಿರುವ ಪ್ರೀತಿ ಯಾವ ಜನನಾಯಕನಿಗಿಂತಲೂ ಕಡಿಮೆ ಇಲ್ಲ. ಕನ್ನಡ ಕಲಾದೇವಿ ಆರಾಧಕನಾಗಿ ಅಭಿನಯವನ್ನೇ ವೃತ್ತಿಯಾಗಿಸಿಕೊಂಡಿರುವ ದರ್ಶನ್ ಅವರಿಗೆ ಬೇರೆ ಎಲ್ಲಾ ಸ್ಟಾರ್ ಗಳಿಗೂ ಹೋಲಿಸಿದರೆ ಅತಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಕರ್ನಾಟಕದಲ್ಲಿದ್ದಾರೆ.

ದರ್ಶನ್ ಮತ್ತು ಅವರ ಅಭಿಮಾನಿಗಳ ನಂಟು ಎಷ್ಟು ಗಟ್ಟಿಯಾಗಿದೆ ಎಂದರೆ ದರ್ಶನ್ ಅವರು ಅಭಿಮಾನಿಗಳನ್ನೇ ಸೆಲೆಬ್ರಿಟಿಗಳು ಎಂದು ಕರೆದು ಅವರ ಹೆಸರನ್ನು ತಮ್ಮ ಎದೆ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಯಾರಿಗೂ ಕಡಿಮೆ ಇಲ್ಲ ದರ್ಶನ್ ಅವರ ವೈಯಕ್ತಿಕ ಬದುಕಿನ ಬಗ್ಗೆ ವಿವಾದಗಳಿದ್ದರೂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅವರು ಕಡೆ ತನಕ ತಾವು ಡಿ ಬಾಸ್ ಗೆ ಮಾತ್ರ ಅಭಿಮಾನಿಗಳು ಎನ್ನುತ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಸಿನಿಮಾಗಳ ಜಾಹಿರಾತುಗಳಲ್ಲೂ ಕೂಡ ನೋಡಿರುತ್ತಾರೆ. ಇತ್ತೀಚೆಗೆ ಅವರನ್ನು ರಾಮರಾಜ್ ಬಟ್ಟೆಗಳ ಜಾಹೀರಾತುಗಳಲ್ಲಿ ನೋಡಿದ್ದೇವೆ. ಒಬ್ಬ ಹೀರೋಗೆ ಈ ಮಟ್ಟದ ಅಭಿಮಾನಿಗಳು ಇದ್ದಾಗ ಅವರನ್ನು ಹಲವು ಕಂಪನಿಗಳು ತಮ್ಮ ಕಂಪನಿ ಪ್ರಾಡಕ್ಟನ್ನು ಪ್ರಚಾರ ಮಾಡಿಕೊಡಿ ಎಂದು ಕೇಳಿಕೊಳ್ಳುವುದು ಮಾಮೂಲು. ಈಗಾಗಲೇ ಕರ್ನಾಟಕದಲ್ಲಿ ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್, ಉಪೇಂದ್ರ, ಶಿವಣ್ಣ ಮತ್ತು ಯಶ್ ಮುಂತಾದ ನಾಯಕರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅದೇ ರೀತಿ ದರ್ಶನ್ ಅವರನ್ನು ಸಹ ಒಂದಲ್ಲ ಒಂದು ಕಂಪನಿಗಳು ಅಪ್ರೋಚ್ ಮಾಡುತ್ತಲೇ ಇರುತ್ತವೆ. ಹಲವಾರು ಕಂಪನಿಗಳು ತಮ್ಮ ಬ್ರಾಂಡಿಗೆ ಅಂಬಾಸಿಡರ್ ಆಗುವಂತೆ ಕೂಡ ಆಮಿಷ ಒಡ್ಡುತ್ತಿವೆ. ಆದರೆ ಈ ವಿಚಾರದಲ್ಲಿ ಎಲ್ಲರಿಗಿಂತ ದಚ್ಚು ಸ್ವಲ್ಪ ಡಿಫ್ರೆಂಟ್ ಎಂದೇ ಹೇಳಬಹುದು. ದರ್ಶನ್ ಅವರು ಜಾಹೀರಾತುಗಳ ವಿಷಯ ಬಂದಾಗ ಎಲ್ಲವನ್ನು ಒಪ್ಪಿಕೊಂಡು ಬಿಡುವುದಿಲ್ಲ. ಇದುವರೆಗೆ 55 ಸಿನಿಮಾಗಳನ್ನು ಮಾಡಿ ಅಭಿಮಾನಿಗಳ ಅಭಿಮಾನ ಗಿಟ್ಟಿಸಿಕೊಂಡಿರುವ ಇವರು ಸುಖಾ ಸುಮ್ಮನೆ ಯಾವುದನ್ನೂ ಪ್ರಚಾರ ಮಾಡಿ ಅಭಿಮಾನಿಗಳ ದಿಕ್ಕು ತಪ್ಪಿಸುವುದಿಲ್ಲ.

ಅಳೆದು ತೂಗಿ ಜಾಹಿರಾತುಗಳನ್ನು ಆಯ್ದುಕೊಳ್ಳುತ್ತಾರೆ. ಹಾಗಾಗಿ ಇದುವರೆಗೆ ನಾವು ಅವರನ್ನು ರಾಮರಾಜ್ ಬಟ್ಟೆ ಜಾಹಿರಾತುಗಳಲ್ಲಿ ಮಾತ್ರ ನೋಡಿದ್ದೇವೆ. ಪರ್ಸನಾಲಿಟಿ ಮತ್ತು ಲುಕ್ ಅಲ್ಲಿ ಅವರು ಯಾವುದೇ ಮಾಡೆಲ್ ಗಿಂತಲೂ ಕಡಿಮೆ ಇಲ್ಲ. ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಅವರು ಜಾಹಿರಾತುಗಳಲ್ಲೂ ಅಭಿನಯಿಸಿದ್ದಾರೆ ಮತ್ತು ಕಿರುತೆರೆ ಕಲಾವಿದನಾಗಿಯೂ ಕೂಡ ಕಾಣಿಸಿಕೊಂಡಿದ್ದಾರೆ. ಈಗ ಇಷ್ಟು ದೊಡ್ಡ ಮಟ್ಟದ ಹೆಸರು ಪಡೆದ ಮೇಲೆ ಅವರು ಯಾವುದನ್ನು ಪ್ರಮೋಟ್ ಮಾಡುತ್ತಾರೆ ಎನ್ನುವುದು ದೊಡ್ಡ ಪರಿಣಾಮವನ್ನು ಬೀರುತ್ತದೆ ಆ ಕಾರಣಕ್ಕಾಗಿ ಅವರು ಈ ವಿಚಾರದಲ್ಲಿ ಬಹಳ ಚೂಸಿ ಆಗಿದ್ದಾರೆ.

ಇದರೊಡನೆ ಅವರು ಜಾಹಿರಾತುಗಳಿಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟಿರಬಹುದು ಎನ್ನುವ ಚರ್ಚೆ ಜೋರಾಗಿದೆ. ಒಂದು ಮಾಹಿತಿಯ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 3-4 ಕೋಟಿಗಳನ್ನು ಒಂದು ಜಾಹಿರಾತಿನಲ್ಲಿ ಕಾಣಿಸಿಕೊಳ್ಳಲು ತೆಗೆದುಕೊಳ್ಳುತ್ತಾರೆ ಎನ್ನುವ ಅಂಶವು ಕೂಡ ಹೊರಬಿದ್ದಿದೆ. ಇದರ ಸತ್ಯಾನುಸತ್ಯತೆ ಎಷ್ಟು ಎನ್ನುವುದು ಮಾತ್ರ ತಿಳಿದಿಲ್ಲ. ಆದರೆ ಇಂತಹದೊಂದು ಸುದ್ದಿ ಹರಿದಾಡುತ್ತಿರುವುದಂತೂ ನಿಜ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಳುವ ಪ್ರತಿಯೊಂದು ಮಾತಿಗೂ ಕೂಡ ಒಂದು ತೂಕ ಇರುತ್ತದೆ. ಇನ್ನು ಅವರ ಕಾಣಿಸಿಕೊಂಡಿರುವ ಜಾಹೀರಾತಿನ ವ್ಯಾಪಾರ ಕುಲಾಯಿಸುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ತಾತನ ಥರಾನೇ ಖಡಕ್ ಡೈಲಾಗ್ ಹೊಡೆದ ವಜ್ರಮುನಿ ಮೊಮ್ಮಗ. ಈ ವಿಡಿಯೋ ನೋಡಿ ನಿಜಕ್ಕೂ ಬೆರಗಾಗಿ ಹೋಗ್ತಿರಾ.

ಚಂದನವನ ಈವರೆಗೆ ಅನೇಕ ನಾಯಕ ನಟರುಗಳನ್ನು ಕಂಡಿದೆ. ಆದರೆ ನಾಯಕ ನಟರಿಗೆ ಸರಿಸಮಾನವಾಗಿ ಸೆಡ್ಡು ಹೊಡೆದು ನಿಲ್ಲುತ್ತಿದ್ದ ಖಳನಾಯಕನ ಪಾತ್ರದಲ್ಲಿ ಖ್ಯಾತಿ ಪಡೆದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇಂಥವರ ಸಾಲಿನಲ್ಲಿ ಚಂದನವನ ಎಂದು ಮರೆಯದ ಕಲಾವಿದ ಎಂದರೆ ನಟಭೈರವ ನಟಭಯಂಕರ ವಜ್ರಮುನಿ ಅವರು. ವಜ್ರಮುನಿ ಅವರ ನಿಜವಾದ ಹೆಸರು ಸದಾನಂದ ಸಾಗರ್.

ಆದರೆ ತೆರೆ ಮೇಲೆ ಅವರು ಅಬ್ಬರಿಸುತ್ತಿದ್ದ ರೀತಿ ನೋಡಿ ಸಿನಿಮಾ ರಂಗಕ್ಕೆ ಬಂದ ಮೇಲೆ ಅವರ ಹೆಸರನ್ನು ವಜ್ರಮುನಿ ಎಂದು ಬದಲಾಯಿಸಲಾಯಿತು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಂಬರ್ ಒನ್ ಗಳ ನಾಯಕ ಎಂದರೆ ಇಂದಿಗೂ ಕೂಡ ಅವರೇ ಅವರ ಕೆರಳಿದ ಮುಖ, ಕೆಂಪು ಕಣ್ಣುಗಳು, ಕಂಚಿನ ಕಂಠ, ಡೈಲಾಗ್ ಹೊಡೆಯುತ್ತಿದ್ದ ಆ ಪರಿ ವಿಲನ್ ಪಾತ್ರಕ್ಕೆ ಹೇಳಿ ಮಾಡಿಸಿದ ರೀತಿ ಇತ್ತು.

ಅಣ್ಣಾವ್ರ ಜೊತೆಗೆ ಸರಿ ಸಮಾನವಾಗಿ ನಿಂತು ಪೈಪೋಟಿ ಕೊಡುತ್ತಿದ್ದ ಖಳನಾಯಕಎಂದರೆ ವಜ್ರಮುನಿ ಅವರು ವಜ್ರಮುನಿ ಮತ್ತು ಅಣ್ಣಾವ್ರ ಕಾಂಬಿನೇಷನ್ನಲ್ಲಿ ಅದೆಷ್ಟೋ ಚಿತ್ರಗಳು ಸೂಪರ್ ಹಿಟ್ ಆಗಿವೆ. ಒಂದು ಕಾಲದಲ್ಲಿ ಸಿನಿಮಾಗೆ ಖಳನಾಯಕ ಎಂದರೆ ವಜ್ರಮುನಿ ಅವರು ಒಬ್ಬರೇ ಎನ್ನುವಷ್ಟರ ಮಟ್ಟಿಗೆ ಅವರ ಖ್ಯಾತಿ ಬೆಳಗಿತ್ತು.

ವಜ್ರಮುನಿ ಇಲ್ಲದೆ ಕನ್ನಡ ಸಿನಿಮಾಗಳಲ್ಲಿ ನೆಗೆಟಿವ್  ಶೇಡ್ ಅನ್ನು ಅಷ್ಟು ನ್ಯಾಯಬದ್ಧವಾಗಿ ತೋರಿಸಲು ಆಗೋದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಆ ಖಳನಾಯಕನ ಪಾತ್ರಕ್ಕೆ ಅವರು ಹಾಸುಹೊಕ್ಕಾಗಿದ್ದರು. ಆದರೆ ನಿಜ ಜೀವನದ ಅವರ ವ್ಯಕ್ತಿತ್ವ ಇದಕ್ಕೆ ತದ್ವಿರುದ್ಧವಾಗಿತ್ತು. ಅವರ ಮೂಲ ಹೆಸರಾದ ಸದಾನಂದ ಸಾಗರ್ ಎನ್ನುವ ಹೆಸರಿಗೆ ತಕ್ಕ ಹಾಗೆ ಸದಾ ಸರಳತೆ ಕರುಣೆ ಸಹೃದಯ ಹೊಂದಿದ್ದ ಇವರು ಅತಿ ಕಡಿಮೆ ವಯಸ್ಸಿಗೆ ಅನಾರೋಗ್ಯ ಕಾರಣಕ್ಕಾಗಿ ಮರಣಕ್ಕೀಡಾದರು.

ಇದ್ದಷ್ಟು ದಿನ ತಮ್ಮ ಜೀವಮಾನದ ಅತಿ ಹೆಚ್ಚು ಸಮಯವನ್ನು ಕನ್ನಡ ಸಿನಿಮಾ ಇಂಡಸ್ಟ್ರಿ ಕಟ್ಟಲು ತೇದಿದ್ದಾರೆ ಎಂದೂ ಹೇಳಬಹುದು. ಮೂರು ದಶಕಗಳವರೆಗೆ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ವಜ್ರಮುನಿ ಅವರ ಪ್ರತಿಯೊಂದು ಸಿನಿಮಾದ ಆಕ್ಟಿಂಗ್ ಕೂಡ ಅವಿಸ್ಮರಣೆಯ. ಆದರೆ ಅವರಂತೆ ಅವರ ಯಾವ ಮಕ್ಕಳನ್ನು ಕೂಡ ಅವರು ಇಂಡಸ್ಟ್ರಿಗೆ ಕರೆತರಲಿಲ್ಲ.

ಆದರೆ ಈಗ ಅವರ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದೆ. ವಜ್ರಮುನಿ ಅವರ ಮೂರನೇ ಮಗನಾದ ಜಗದೀಶ್ ಅವರ ಪುತ್ರ ಆಕರ್ಷ್ ಸಂಜು ವಜ್ರ ಎನ್ನುವವರು ಬಾಲ ಕಲಾವಿದನಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯ ದಾರಿ ಹಿಡಿದಿದ್ದಾರೆ. ಬಹು ವರ್ಷಗಳ ಕಾಲ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಬ್ರೇಕ್ ತೆಗೆದುಕೊಂಡು ಕಮ್ ಬ್ಯಾಕ್ ಆಗಿರುವ ನಟ ಕೋಮಲ್ ಅವರು ನಟಿಸುತ್ತಿರುವ ಎಲಾ ಕುನ್ನಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಆಕರ್ಷ್ ಸಂಜು ವಜ್ರು ಕೂಡ ಅಭಿನಯಿಸಲಿದ್ದಾರಂತೆ.

ಎಲಾ ಕುನ್ನಿ ಚಿತ್ರಕ್ಕೆ ಅಡಿ ಬರಹದಲ್ಲಿ ಮೆರಾ ನಾಮ್ ವಜ್ರುಮುನಿ ಎಂದು ಬರೆಯಲಾಗಿದೆಯಂತೆ. ಎಲಾ ಕುನ್ನಿ ಎನ್ನುವುದು ಅವರ ಫೇಮಸ್ ಡೈಲಾಗ್ ಈಗ ಇದೇ ಟೈಟಲಲ್ಲಿ ಚಿತ್ರ ತಯಾರಾಗುತ್ತಿದ್ದು ಕೋಮಲ್ ಅವರೊಂದಿಗೆ ಜಗ್ಗೇಶ್ ಪುತ್ರ ಯತಿರಾಜ್ ಕೂಡ ಮುಖ್ಯ ಭೂಮಿಯಲ್ಲಿ ಇರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಇತ್ತೀಚೆಗೆ ಬೆಂಗಳೂರಿನ ಪ್ರಸನ್ನ ಗಣಪತಿ ದೇವಾಲಯದಲ್ಲಿ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಿತು. ಆ ಸಮಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಜ್ರುಮುನಿ ಮೊಮ್ಮಗ ಆಕಾಶ್ ತಾತ ವಜ್ರುಮುನಿ ಅವರ ಪ್ರಚಂಡ ರಾವಣನ ಡೈಲಾಗ್ ಹೊಡೆದು ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಡಿಯೋವನ್ನು ನೋಡಿ ವಜ್ರಮುನಿ ಮೊಮ್ಮಗನ ನಟನೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು  ಕಾಮೆಂಟ್ ಮಾಡಿ ತಿಳಿಸಿ.

ಸಿನಿಮಾದವರಿಗೆ ಹೆಣ್ಣು ಕೊಡಲ್ಲ ಅಂದಿದ್ದಕ್ಕೆ ಸಿಡಿದೆದ್ದ ನಟ ಡಾಲಿ. ನಿಜ ಜೀವನದಲ್ಲಿ ಹೆಣ್ಣು ಕೊಡದಿದ್ರೆ ಏನಂತೆ ತೆರೆ ಮೇಲೆ ಹತ್ತು ಮದುವೆ ಆಗ್ತೀನಿ ಎಂದು ಬ್ರೋಕರ್ ಮೇಲೆ ಗರಂ ಆದ ಧನಂಜಯ್.

 

ನಟ ರಾಕ್ಷಸ ಡಾಲಿ ಧನಂಜಯ್ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯ ಹೀರೋ ಎನ್ನಬೇಕೋ ವಿಲ್ಲನ್ ಎನ್ನಬೇಕೋ ಗೊತ್ತಿಲ್ಲ. ನಾನು ವಿಲನ್ ನೇ ಎಂದು ಹೇಳಿಕೊಳ್ಳುವ ಇವರು ವರ್ಷಕ್ಕೆ ಅತಿ ಹೆಚ್ಚು ಸಿನಿಮಾಗಳನ್ನು ಮಾಡುವ ಹೀರೋ ಎನ್ನುವ ಖ್ಯಾತಿಗೂ ಒಳಗಾಗಿದ್ದಾರೆ. ಸಿನಿಮಾ ತೆರೆ ಮೇಲೆ ಲವರ್ ಬಾಯ್ ಆಗಿ, ಪತಿಯಾಗಿ ಪಾತ್ರ ಮಾಡಿರುವ ಇವರು ನಿಜ ಜೀವನದಲ್ಲಿ ಇನ್ನೂ ಸಿಂಗಲ್ ಅನ್ನುವುದೇ ಎಲ್ಲರಿಗೂ ಆಶ್ಚರ್ಯ.

ಈ ಕಾರಣಕ್ಕಾಗಿ ಇವರು ಯಾವುದೇ ಇಂಟರ್ವ್ಯೂಗೂ ಹೋದರು, ಎಲ್ಲೇ ಮಾಧ್ಯಮದವರಿಗೆ ಕಾಣಿಸಿಕೊಂಡರು ಕೂಡ ಮೀಡಿಯಾ ಸೋಶಿಯಲ್ ಮೀಡಿಯಾದಲೆಲ್ಲ ಇವರ ಮದುವೆ ಬಗ್ಗೆ ಪ್ರಶ್ನೆಗಳು ಎದುರಾಗುತ್ತವೆ. ಇದುವರೆಗೆ ಅವರು ಮದುವೆಯಾಗಲು ಹೆಣ್ಣೇ ಸಿಗುತ್ತಿಲ್ಲ ಎಂದು ಕಾಗೆ ಹಾರಿಸಿಕೊಂಡೆ ಬಂದಿದ್ದಾರೆ. ಇತ್ತೀಚಿಗೆ ಮಂಡ್ಯದಿಂದ ಮದುವೆ ವಯಸ್ಸು ಮೀರಿದರು ಮದುವೆಯಾಗದಿರುವ ಗಂಡು ಹೈಕಳೆಲ್ಲಾ ಮಾದಪ್ಪನ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗಿದ್ದಾಗ ಅವರ ಮುಂದಾಳತ್ವವನ್ನು ಕೂಡ ಧನಂಜಯ್ ಅವರೇ ಹೊತ್ತಿದ್ದರು.

ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಬ್ರೋಕರ್ ಅನ್ನು ಅವರು ಬಯ್ಯುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಸಿನಿಮಾದವರಿಗೆ ಹೆಣ್ಣು ಕೊಡದಿದ್ದರೆ ಏನಯ್ಯ ತೆರೆ ಮೇಲೆ ಹತ್ತು ಮದುವೆ ಆಗ್ತೀನಿ ಬಿಡು ಎಂದು ಅವರ ಮೇಲೆ ರೇಗಿದ್ದಾರೆ ಡಾಲಿ. ಅಷ್ಟಕ್ಕೂ ಹೀಗಾಗಲು ಕಾರಣ ಏನು ಎಂದರೆ ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಹಾಡು ಎಂದೇ ಹೇಳಬಹುದು.

ಎತ್ತಣ ರಾಘವೇಂದ್ರ ಸ್ಟೋರ್ಸ್ ಎತ್ತಣ್ಣ ಡಾಲಿ ಧನಂಜಯ್ ಇವರಿಬ್ಬರಿಗೂ ಏನು ಸಂಬಂಧ ಎಂದು ಹಲವರಿಗೆ ಕನ್ಫ್ಯೂಸ್ ಆಗಬಹುದು. ಅದಕ್ಕೆಲ್ಲಾ ಕ್ಲಾರಿಟಿ ಇಲ್ಲಿದೆ ನೋಡಿ. ವರ್ಷದ ಹಿಂದೆಯೇ ಸಣ್ಣ ಟೀಸರ್ ರೆಡಿ ಮಾಡಿ ಕನ್ನಡಿಗರಿಗೆ ಕುತೂಹಲ ಹೆಚ್ಚಿಸಿರುವ ಚಿತ್ರ ರಾಘವೇಂದ್ರ ಸ್ಟೋರ್ಸ್. ಹಾಸ್ಯ ದಿಗ್ಗಜ ನವರಸ ನಾಯಕ ಜಗ್ಗೇಶ್ ಅವರ ಬಹು ನಿರೀಕ್ಷಿತ ಚಿತ್ರವಾದ ರಾಘವೇಂದ್ರ ಸ್ಟೋರ್ಸ್ ಅವರ ಶಿಷ್ಯನೇ ಆದ ಸಂತೋಷ್ ಆನಂದ ರಾಮ್ ಅವರು ನಿರ್ದೇಶನ ಮಾಡಿದ್ದಾರೆ.

ಇದೀಗ ಆ ಸಿನಿಮಾ ರಿಲೀಸ್ ಹಂತಕ್ಕೆ ತಲುಪಿದ್ದು ಸಿನಿಮಾದ ಮೊದಲ ಹಾಡನ್ನು ವಿಶೇಷವಾಗಿ ರಿಲೀಸ್ ಮಾಡುವ ಸಲುವಾಗಿ ಇಷ್ಟೆಲ್ಲ ಸಾಹಸ ಮಾಡಲಾಗಿದೆ. ಸಿನಿಮಾದ ಮೊದಲ ಹಾಡಾಗಿ ಬ್ರಹ್ಮಚಾರಿ ಬಾರ್ಡರ್ ಅಲ್ಲಿದ್ದೀಯ ಬ್ಯಾಡ ಶೋಭಾನ ಎನ್ನುವ ಹಾಡನ್ನು ಎಲ್ಲಾ ಸಿಂಗಲ್ಸ್ ಗಾಗೆ ಮಾಡಲಾಗಿದ್ದು ಈ ಹಾಡನ್ನು ಕನ್ನಡದ ಸಿಂಗಲ್ ಇಂದ ಬಿಡುಗಡೆ ಮಾಡಿಸುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.

ವೀಡಿಯೋದಲ್ಲಿ ಹಾಡಿಗೆ ಸಂಗೀತ ನೀಡಿರುವ ಅಜನೀಶ್ ಲೋಕೇಶ್ ಮತ್ತು ಸಿನಿಮಾ ನಟ ನಾಗಶೇಖರ್ ಹಾಗೂ ಡಾಲಿ ಧನಂಜಯ್ ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಂದ ಈ ವಿಷಯ ಮುಟ್ಟಿಸುವ ಸಲುವಾಗಿ ಈ ರೀತಿಯಾಗಿ ವಿಶೇಷ ಪ್ರಯತ್ನ ಮಾಡಲಾಗಿದೆ. ವೀಡಿಯೋದಲ್ಲಿ ಸಿಂಗಲ್ಸ್ ಗಳ ಬಗ್ಗೆ ಮಾತುಕತೆ ಜೋರಾಗಿದ್ದು ಕೊನೆಗೆ ಕನ್ನಡದಲ್ಲಿ ಸಿಂಗಲ್ ಗಳಿಗೆ ಆಗಿ ರೆಡಿ ಆಗಿರುವ ಸಿಂಗಲ್ ಹಾಡನ್ನು ಏಪ್ರಿಲ್ 12ರಂದು ಹೊಂಬಾಳೆ ಫಿಲಂಸ್ ಯುಟ್ಯೂಬ್ ಚಾನೆಲ್ ರಿಲೀಸ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ವಿಡಿಯೋ ಕೊನೆಯಲ್ಲಿ ಡಾಲಿ ಧನಂಜಯ್ ಅವರು ನಾನು ಒಬ್ಬನೇನಾ ಸಿಂಗಲ್ಸ್ ಇರುವುದು ರಕ್ಷಿತ್ ಶೆಟ್ಟಿ ಕೂಡ ಸಿಂಗಲ್ ಅವರ ಕೈಯಲ್ಲಿ ರಿಲೀಸ್ ಮಾಡಿಸಿ ಎಂದಿದ್ದಾರೆ. ಅಂದ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಈ ಸಿಂಗಲ್ಸ್ ಹಾಡನ್ನು ಏಪ್ರಿಲ್ 12 ರಂದು ಸಂಜೆ 5:00 ಕ್ಕೆ ರಕ್ಷಿತ್ ಶೆಟ್ಟಿ ಅವರೇ ರಿಲೀಸ್ ಮಾಡಲಿದ್ದಾರೆ. ವಿಜಯ್ ಪ್ರಕಾಶ್ ಮತ್ತು ನವೀನ್ ಸಜ್ಜು ಅವರೇ ಈ ಸಿಂಗಲ್ಸ್ ಹಾಡಿಗೆ ದನಿಯಾಗಿದ್ದಾರೆ.