Home Blog Page 216

ದಿನಕ್ಕೆ 300 ರೂಪಾಯಿ ಭತ್ಯೆ ಸಹಿತ ಉಚಿತ ಮೀನುಗಾರಿಕೆ ತರಬೇತಿ ನೀಡುತ್ತಿದ್ದಾರೆ. ಆಸಕ್ತರು ಅರ್ಜಿ ಸಲ್ಲಿಸಿ ಮೀನು ಕೃಷಿ ಕಲಿಯುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ.?

 

ಎಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಜನಸಂಖ್ಯಾ ಸ್ಪೋಟ ತೀವ್ರವಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರದ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರಕ್ಕಿದೆ. ಆದರೆ ಕೃಷಿ ಒಂದೇ ಚಟುವಟಿಕೆಯಿಂದ ದೇಶದ ಎಲ್ಲರ ಹೊಟ್ಟೆಯನ್ನು ತುಂಬಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಕೂಡ ಎಲ್ಲರಿಗೂ ಗೊತ್ತಿರುವ ಸತ್ಯ. ಹಾಗಾಗಿ ಪ್ರಾಣಿಜನ್ಯ ಸಸಾರಜನಕ ಯುಕ್ತ ಆಹಾರದ ಮೊರೆ ಹೋಗಲೇಬೇಕು.

ಹೀಗಾಗಿ ಪಶುಸಂಗೋಪನೆ, ಮೀನು ಕೃಷಿ, ಜೇನು ಸಾಕಾಣಿಕೆ, ಕುರಿ ಕೋಳಿ ಸಾಕಾಣಿಕೆಗೆ ಸರ್ಕಾರಗಳು ಪ್ರೋತ್ಸಾಹ ನೀಡಿ ಹೆಚ್ಚಿನ ಸಹಾಯವನ್ನು ಮಾಡುತ್ತಿವೆ. ಅದರಲ್ಲೂ ಮೀನು ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮೀನು ಪಾಲನೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಮತ್ಸ್ಯೋದ್ಯಮವನ್ನು ಉತ್ತೇಜಿಸುತ್ತಿರುವ ಸರ್ಕಾರವು ಮೀನು ಕೃಷಿ ಮಾಡಲು ಆಸಕ್ತಿ ತೋರುವಂತಹ ಯುವ ಜನತೆಗೆ ಉಚಿತ ತರಬೇತಿ ಮತ್ತು ಸ್ವಂತ ಉದ್ಯಮಿ ಆರಂಭಿಸುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಇನ್ನು ಮುಂತಾದ ಅನುಕೂಲತೆಗಳನ್ನು ಮಾಡಿಕೊಡುತ್ತಿದೆ.

ಈ ಮೂಲಕ ದೇಶದ ನಿರುದ್ಯೋಗಿ ಯುವಕರನ್ನು ಮೀನು ಸಾಕಾಣಿಕೆಗೆ ಆಕರ್ಷಿಸುವುದು ಸರ್ಕಾರದ ಧ್ಯೇಯ. ಕರ್ನಾಟಕದಲ್ಲಿ ನಾಲ್ಕು ಕಡೆಗಳಲ್ಲಿ ಮೀನುಗಾರಿಕೆ ಇಲಾಖೆಯು ಉಚಿತ ಮೀನು ತರಬೇತಿ ಕೇಂದ್ರಗಳನ್ನು ತೆರೆದಿದೆ. ಪ್ರತಿ ಬ್ಯಾಚ್ ಅಲ್ಲೂ 25 ರಿಂದ 40 ಜನರಿಗೆ ಪ್ರತಿದಿನ 300ರೂ ಗಳಂತೆ ವೇತನ ಭತ್ಯೆ ಕೊಟ್ಟು ತರಬೇತಿ ನೀಡುತ್ತಿದೆ. ಕಡಿಮೆ ಸ್ಥಳ ಮತ್ತು ಕಡಿಮೆ ನೀರನ್ನು ಬಳಸಿಕೊಂಡು ಹೆಚ್ಚು ಇಳುವರಿ ಪಡೆಯುವಂತಹ ವಿಧಾನ ಅನುಸರಿಸಲು ತಂತ್ರಜ್ಞಾನಗಳ ಅವಶ್ಯಕತೆ ಇದೆ.

ಹಾಗಾಗಿ ತಂತ್ರಜ್ಞಾನ ಬಳಸಿಕೊಂಡು ಹೇಗೆ ಹೆಚ್ಚಿನ ಮೀನು ಇಳುವರಿ ಪಡೆದು ಲಾಭ ಗಳಿಸಬಹುದು ಎನ್ನುವ ಕಲೆಯನ್ನು ಮೀನುಗಾರಿಕೆ ತರಬೇತಿ ಕೇಂದ್ರಕ್ಕೆ ಸೇರುವ ಆಸಕ್ತ ಅಭ್ಯರ್ಥಿಗಳಿಗೆ ನುರಿತ ತರಬೇತುದಾರ ಕಡೆಯಿಂದ ಕೊಡಿಸಲಾಗುತ್ತದೆ. ಇಲ್ಲಿ ತರಬೇತಿ ಪಡೆದು ಪ್ರಮಾಣ ಪತ್ರ ಪಡೆದ ಮೇಲೆ ಆ ಪ್ರಮಾಣ ಪತ್ರ ಉಪಯೋಗಿಸಿಕೊಂಡು ಸರ್ಕಾರದಲ್ಲಿ ಸಿಗುವ ಸಬ್ಸಿಡಿ ಮತ್ತು ಕಡಿಮೆ ಬಡ್ಡಿ ಸಾಲ ಸೌಲಭ್ಯಗಳನ್ನು ಪಡೆದು ಸ್ವಂತ ಉದ್ಯಮೆ ಶುರು ಮಾಡಿ ಲಾಭ ಗಳಿಸಿ ಸ್ವಾವಲಂಬನೆಯಿಂದ ಜೀವನ ಕಟ್ಟುಕೊಳ್ಳಬಹುದು.

ಕರ್ನಾಟಕದ ನಾಲ್ಕು ಕೇಂದ್ರಗಳಿದ್ದು, ಹತ್ತಿರದಲ್ಲಿರುವ ಯಾವುದೇ ಕೇಂದ್ರಕ್ಕೆ ನೀವು ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಒಂದು ಬ್ಯಾಚ್ ಪೂರ್ತಿಗೊಂಡರೆ ನಿಮ್ಮ ನೋಂದಣಿಯನ್ನು ಮುಂದಿನ ಬ್ಯಾಚ್ ಗೆ ಮಾಡಿಕೊಳ್ಳುತ್ತಾರೆ. ಈ ಅಂಕಣದಲ್ಲಿ ಮೀನು ಸಾಕಾಣಿಕೆ ಬಗ್ಗೆ ಆಸಕ್ತಿ ಹೊಂದಿರುವ ಯುವಕರಿಗೆ ಸಹಾಯ ಮಾಡುವ ಸಲುವಾಗಿ ಕರ್ನಾಟಕದಲ್ಲಿ ಮೀನುಗಾರಿಕೆ ಇಲಾಖೆ ಅಡಿಯಲ್ಲಿ ಬರುವ ಉಚಿತ ಮೀನು ಸಾಕಾಣಿಕೆ ತರಬೇತಿ ಕೇಂದ್ರಗಳ ವಿಳಾಸವನ್ನು ನೀಡಲಾಗಿದೆ.

● ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ತರಬೇತಿ ಕೇಂದ್ರ,
ಬಿ ಆರ್ ಪ್ರಾಜೆಕ್ಟ್, ಭದ್ರಾವತಿ ತಾಲೂಕು,
ಶಿವಮೊಗ್ಗ ಜಿಲ್ಲೆ.
ದೂ.ಸಂಖ್ಯೆ: 08282 – 256252,
ಮೊ: 9945604264, 9448580818, 9449103663

● ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ತರಬೇತಿ ಕೇಂದ್ರ,
ಕೆ ಆರ್ ಸಾಗರ, ಶ್ರೀರಂಗಪಟ್ಟಣ ತಾಲೂಕು,
ಮಂಡ್ಯ ಜಿಲ್ಲೆ.
ದೂ.ಸಂಖ್ಯೆ: 08236 – 567259
ಮೊ: 9535373793

● ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ತರಬೇತಿ ಕೇಂದ್ರ,
ಕಬಿನಿ, ಎಚ್ ಡಿ ಕೋಟೆ ತಾಲೂಕು,
ಮೈಸೂರು ಜಿಲ್ಲೆ.
ದೂ.ಸಂಖ್ಯೆ: 08228 – 268310,
ಮೊ: 9986755434, 9731771235.

● ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ತರಬೇತಿ ಕೇಂದ್ರ,
ಬೇತಮಂಗಲ ತಾಲೂಕು, ಕೋಲಾರ ಜಿಲ್ಲೆ.
ದೂ.ಸಂಖ್ಯೆ: 08153 – 277718,
ಮೊ: 9108651184, 9535022860.

ಈ ಸಲ ಕಪ್ ನಮ್ದೆ ಎನ್ನುತ್ತಿದ್ದಾರೆ ನಟಿ ಅಮೂಲ್ಯ ಅವಳಿ ಮಕ್ಕಳು, ಪುಟಾಣಿ RCB ಫ್ಯಾನ್ಸ್ ಗೆ ಫಿದಾ ಆದ ಕನ್ನಡಿಗರು. ಈ ಕ್ಯೂಟ್ ವಿಡಿಯೋ ನೋಡಿ.

 

ಏಪ್ರಿಲ್ ಬಂದರೆ ನಾನಾ ಕಾರಣಗಳಿಗಾಗಿ ಇಷ್ಟ ಆಗುತ್ತದೆ. ಶಾಲಾ ಕಾಲೇಜು ಹೋಗುವವರಿಗೆ ರಜೆಯ ಸಂಭ್ರಮವಾದರೆ, ಕ್ರಿಕೆಟ್ ಪ್ರಿಯರಿಗೆ ಇದು IPL ಹಬ್ಬ. ಸದ್ಯಕ್ಕೀಗ ಭಾರತದಲ್ಲಿ ಐಪಿಎಲ್ ಹಬ್ಬ ಜೋರಾಗಿ ನಡೆಯುತ್ತಿತ್ತು ಎಲ್ಲರೂ ತಮ್ಮ ತಮ್ಮ ತಂಡವನ್ನು ಬೆಂಬಲಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ತಮ್ಮ ನೆಚ್ಚಿನ ತಂಡಗಳ ಪರ ಪ್ರಚಾರ, ವಿರೋಧಿ ತಂಡಗಳ ವಿರುದ್ಧ ಟ್ರೊಲ್ ಹಾವಳಿ ಹರಿದು ಬರುತ್ತಿದೆ.

IPL ತಂಡಗಳಲ್ಲಿ ಅತಿ ಹೆಚ್ಚಿನ ಪ್ರಾಮಾಣಿಕ ಅಭಿಮಾನಿಗಳು ಹೊಂದಿರುವ ತಂಡವಾದ ಕರ್ನಾಟಕದ ತಂಡವಾದ ಬೆಂಗಳೂರು ರಾಯಲ್ ಚಾಲೆಂಜರ್ಸ್, ನಮ್ಮ ಹೆಮ್ಮೆಯ RCB ಬಗ್ಗೆ ಹೇಳುವುದೇ ಬೇಡ. ಪ್ರತಿ ಸಲವೂ ಕೂಡ ಸೋತರೂ ಗೆದ್ದರೂ ಕೊನೆವರೆಗೂ ಆರ್ಸಿಬಿ ಫ್ಯಾನ್ಸ್ ಎಂದು ಹೇಳಿಕೊಳ್ಳುವ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂದು ಜಯಘೋಷ ಭಾರಿಸುತ್ತಾ ಬೆಂಬಲಿಸುತ್ತಾರೆ.

ಕ್ರಿಕೆಟ್ ಸ್ಟೇಡಿಯಂಗಳನ್ನು RCB ಮ್ಯಾಚ್ ಇದ್ದಾಗ ನೋಡುವುದೇ ಒಂದು ಆನಂದ. ತಂಡೋಪ ತಂಡವಾಗಿ ಸ್ನೇಹಿತರೊಟ್ಟಿಗೆ ಬರುವ ಆರ್ಸಿಬಿ ಅಭಿಮಾನಿಗಳು ಭಾವುಕರಾಗುವ ಆ ಕ್ಷಣಗಳು ಆಟಗಾರರ ಮನಸ್ಸನ್ನು ಮುಟ್ಟದೇ ಇರಲಾರದು. ಇದರೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ RCB ಬಳಗಕ್ಕೆ ದೊಡ್ಡ ಬೆಂಬಲವೇ ಇದೆ.

ಪ್ರತಿಯೊಬ್ಬರ ವಾಟ್ಸಪ್ ಸ್ಟೇಟಸ್ ಗಳಿಂದ ಹಿಡಿದು, ಇನ್ಸ್ಟಾಗ್ರಾಮ್ ಸ್ಟೋರಿ ತನಕ ಪ್ರಮುಖ ಸಾಮಾಜಿಕ ಜಾಲತಾಣಗಳೆಲ್ಲದರಲ್ಲೂ ಕೂಡ RCB ಯದ್ದೇ ವಿಡಿಯೋಗಳು ಫೋಟೋಗಳು ಪೋಸ್ಟ್ಗಳು. ಎಲ್ಲರೂ ಕೂಡ ವಿಭಿನ್ನ ಬಗೆಯಲ್ಲಿ ತಮ್ಮ ತಂಡವನ್ನು ಬೆಂಬಲಿಸುತ್ತಾ ಆ ಫೋಟೋಗಳನ್ನು ಶೇರ್ ಮಾಡುತ್ತಾರೆ. ಸದ್ಯಕ್ಕಿಗ ಸ್ಯಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ಅಮೂಲ್ಯ ಅವರ ಅವಳಿ ಮಕ್ಕಳು ಸಹ ಈ ಸಲ ಕಪ್ ನಮ್ದೆ ಎಂದು ಹೇಳುತ್ತಿದ್ದಾರೆ.

ಅವರು ಹೇಳುವ ರೀತಿ ವಿಶೇಷವಾಗಿದ್ದು, ನೆಟ್ಟಿಗರು ನೋಡಿ ಫಿದಾ ಆಗಿದ್ದಾರೆ. ಅಮೂಲ್ಯ ಹಾಗೂ ಜಗದೀಶ್ ದಂಪತಿ ತಮ್ಮ ಅವಳಿ ಮಕ್ಕಳಾದ ಅಥರ್ವ ಮತ್ತು ಅಧವ್ ಆರ್‌ಸಿಬಿ ಜೆರ್ಸಿ ತೊಡಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಈಗ IPL ಸಂಭ್ರಮದ ಕಾಲ ಆಗಿರುವ ಕಾರಣ ಇದೇ ಥೀಮ್ ಅಲ್ಲಿ ಫೋಟೋಶೂಟ್ ಮಾಡಿಸಿ, ಸೋಶಿಯಲ್ ಮೀಡಿಯಾದಲ್ಲಿ ಈ ಸಲ ಕಪ್ ನಮ್ದೆ ಎಂದು ಬರೆದು ಹಂಚಿಕೊಂಡಿದ್ದಾರೆ.

ಮುದ್ದು ಮಕ್ಕಳು ಕೆಂಪು ಬಣ್ಣದ ಜರ್ಸಿ ಜೊತೆ ಕಪ್ ಕೈಲಿ ಹಿಡಿದುಕೊಂಡು, ಕಪ್ ಮುಂದೆ ಕುಳಿತು, ಬ್ಯಾಟ್ ಬಾಲ್ ಹಿಡಿದು ಪೋಸ್ ಕೊಟ್ಟಿರುವುದು ಆರ್‌ಸಿಬಿ ಅಭಿಮಾನಿಗಳಿಗೆ ಬಹಳ ಸಂತಸ ತಂದಿದೆ. ಪುಟ್ಟ RCB ಅಭಿಮಾನಿಗಳ ಅಭಿಮಾನದಿಂದಾದರೂ ಈ ಸಲ ಕಪ್ ನಮಗೆ ಬರಲಿ ಎಂದು ಕೆಲವರು ಕೇಳಿಕೊಳ್ಳುತ್ತಿದ್ದಾರೆ. ಪ್ರತಿ ವಿಶೇಷಕ್ಕೂ ಕೂಡ ಅಮೂಲ್ಯ ದಂಪತಿಗಳು ಈ ರೀತಿ ತಮ್ಮ ಮುದ್ದು ಅವಳಿ ಮಕ್ಕಳ ಫೋಟೋ ಶೂಟ್ ಮಾಡಿಸುತ್ತಾರೆ.

ಸಂಕ್ರಾಂತಿ, ಯುಗಾದಿ, ಹೊಸ ವರ್ಷ, ಕ್ರಿಸ್ಮಸ್, ಮಕ್ಕಳ ಹುಟ್ಟು ಹಬ್ಬ ಹೀಗೆ ಆಯಾ ಮಾಸದ ವಿಶೇಷಕ್ಕೆ ಅನುಗುಣವಾಗಿ ಮಕ್ಕಳಿಬ್ಬರಿಗೂ ಒಂದೇ ತರದ ಬಟ್ಟೆ ತೊಟ್ಟು ಅದಕ್ಕೆ ಒಪ್ಪುವ ಹಾಗೆ ದಂಪತಿಗಳು ಕಾಶ್ಚ್ಯೂಮ್ ತೊಟ್ಟು ಫೋಟೋಶೂಟ್ ಮಾಡಿಸಿ ಅದನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಈ ಬಾರಿ ಮಾಡಿಸಿರುವ RCB ಫೋಟೋಶೂಟ್ ಎಂದಿನಂತೆ ಬಾರಿ ಸಂಖ್ಯೆಯ ಲೈಕ್ಸ್, ಕಮೆಂಟ್ ಮತ್ತು ಶೇರ್ ಪಡೆಯುತ್ತಿದೆ.

 

ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ ಲವ್ ಅಫೇರ್ ಬಗ್ಗೆ ಓಪನ್ ಸ್ಟೇಟ್ಮೆಂಟ್ ಕೊಟ್ಟ ನಟಿ ಪ್ರೇಮ. ಇವರ ಮಾತು ಕೇಳಿ ಶಾ-ಕ್ ಆದ ಫ್ಯಾನ್ಸ್

 

ಸಹಜ ನಟಿ, ಮೋಹಕ ತಾರೆ ಪ್ರೇಮ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಸಿನಿಮಾ ಲೋಕದಲ್ಲಿ ಗಟ್ಟಿಯಾಗಿ ನಿಂತ ನಟಿ. ಕೊಡಗಿನ ಕುವರಿಯಾದ ಈಕೆ ಸ್ಯಾಂಡಲ್ವುಡ್ ಅಂಗಳದಲ್ಲಿ ಬೆಳೆದು ಇಂದು ಕರ್ನಾಟಕದ ಪ್ರತಿ ಮನೆಗಳಲ್ಲೂ ಮನೆ ಮಗಳಂತ ಪ್ರೀತಿ ಪಡೆದುಕೊಳ್ಳುತ್ತಿದ್ದಾರೆ. ನಟಿ ಪ್ರೇಮ ಎಂದರೆ ಕನ್ನಡಿಗರಿಗೆ ಅದೇನೋ ಒಂದು ರೀತಿಯ ವಿಶೇಷ ಪ್ರೀತಿ, ಈಕೆ ಮುಖದಲ್ಲಿರುವ ಮುಗ್ಧತೆಯೇ ಅದಕ್ಕೆ ಕಾರಣ ಆಗಿದ್ದರೂ ಇರಬಹುದು.

ನಟಿ ಪ್ರೇಮ ಅವರು ಕಡಿಮೆ ಅವಧಿಯಲ್ಲಿ ಹೆಚ್ಚು ಸಿನಿಮಾದಲ್ಲಿ ಕಾಣಿಸಿಕೊಂಡು ಕನ್ನಡ ಚಲನಚಿತ್ರ ರಂಗದಲ್ಲಿ ಅಚ್ಚಳಿದ ಹೆಚ್ಚುಗುರುತು ಮೂಡಿಸಿರುವಂತಹ ಪ್ರತಿಭಾನ್ವಿತ ನಟಿ. ಪ್ರೇಮ ಅವರು ಅವರ ಸಮಕಾಲೀನ ಎಲ್ಲ ಸೂಪರ್ ಸ್ಟಾರ್ ಹೀರೋಗಳ ಜೊತೆ ಕೂಡ ತೆರೆ ಹಂಚಿಕೊಂಡಿದ್ದಾರೆ. ಶಿವಣ್ಣ, ರಮೇಶ್ ಅರವಿಂದ್, ರವಿಚಂದ್ರನ್, ವಿಷ್ಣುವರ್ಧನ್ ಅವರೊಂದಿಗೆ ಅತಿಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಇವರು ಇವರೆಲ್ಲರಿಗೂ ಯಶಸ್ವಿ ಜೋಡಿಯಾಗಿದ್ದರು.

ಜೊತೆಗೆ ಇವರ ಮತ್ತು ಉಪೇಂದ್ರ ಅವರ ಕಾಂಬಿನೇಷನ್ ಬಗ್ಗೆ ಹೇಳುವ ಹಾಗೆ ಇಲ್ಲ. ಸವ್ಯಸಾಚಿ ಎನ್ನುವ ಸಿನಿಮಾ ಮೂಲಕ ಶಿವರಾಜಕುಮಾರ್ ಅವರಿಗೆ ಜೋಡಿಯಾಗಿ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಪ್ರೇಮ ಅವರು ಉಪೇಂದ್ರ ಅವರ ನಿರ್ದೇಶನದ, ಶಿವಣ್ಣ ಅವರ ಅಭಿನಯದ ಓಂ ಸಿನಿಮಾ ಮೂಲಕ ದೊಡ್ಡ ಬ್ರೇಕ್ ಪಡೆದುಕೊಂಡರು. ಇಂದಿಗೂ ಸಹ ಹೆಚ್ಚಿನ ಜನರು ಓಂ ಚಿತ್ರವೇ ಇವರ ಮೊದಲ ಚಿತ್ರ ಎಂದು ಭಾವಿಸಿದ್ದಾರೆ.

ಆ ಸಿನಿಮಾದಿಂದಲೇ ಉಪೇಂದ್ರ ಮತ್ತೆ ಪ್ರೇಮ ಅವರ ಸ್ನೇಹ ಶುರುವಾಗಿತ್ತು ಎಂದು ಹೇಳಬಹುದು. ನಂತರ ಉಪೇಂದ್ರ ಅವರ ನಿರ್ದೇಶನದ ಮತ್ತು ನಟನೆಯ ಅನೇಕ ಸಿನಿಮಾಗಳಲ್ಲಿ ಪ್ರೇಮ ಅವರು ಕಾಣಿಸಿಕೊಂಡರು. ಉಪೇಂದ್ರ ಅವರ ಉಪೇಂದ್ರ ಸಿನಿಮಾದಲ್ಲೂ ಕೂಡ ಉಪೇಂದ್ರ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇವರಿಬ್ಬರ ಕಾಂಬಿನೇಷನ್ನು ಉಪೇಂದ್ರ ಸಿನಿಮಾದ ಏನಿಲ್ಲ ಏನಿಲ್ಲ ಹಾಡು ಕೊನೆವರೆಗೂ ಕನ್ನಡಿಗರ ಫೆವರೇಟ್.

ಹೀಗೆ ಉಪೇಂದ್ರ ನಿರ್ದೇಶನದಲ್ಲಿ ಮತ್ತು ತೆರೆ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರೇಮ ಮತ್ತು ಉಪೇಂದ್ರ ಅವರ ಬಗ್ಗೆ ಸಿನಿಮಾ ಇಂಡಸ್ಟ್ರಿಯವರು ಬೇರೆ ಕಥೆ ಕಟ್ಟಿ ಮಾತನಾಡಲು ಶುರು ಮಾಡಿದ್ದರು. ಅವರಿಬ್ಬರ ನಡುವೆ ಸ್ನೇಹಕ್ಕಿಂತ ಮೇಲಾದ ಒಂದು ಸಂಬಂಧ ಇದೆ ಸುದ್ದಿ ಹಬ್ಬಿಸಿದ್ದರು. ಇದು ಕನ್ನಡ ಚಿತ್ರರಂಗ ಮಾತ್ರವಲ್ಲದೆ ಟಾಲಿವುಡ್ ಅಂಗಳದಲ್ಲಿ ಕೂಡ ಮುಟ್ಟಿತ್ತು.

ಎಲ್ಲರೂ ಇದರ ಬಗ್ಗೆ ಮಾತನಾಡಿದ್ದರೂ ಕೂಡ ಎದುರು ನಿಂತು ಪ್ರಶ್ನೆ ಮಾಡಿದವರು ಯಾರು ಇರಲಿಲ್ಲ. ಆದರೂ ಮೊದಲ ಬಾರಿಗೆ ಯೌಟ್ಯೂಬ್ ಚಾನೆಲ್ ಒಂದರಲ್ಲಿ ಉಪೇಂದ್ರ ಅವರ ಪ್ರಶ್ನೆ ಬಂದಾಗ ನಟಿ ಪ್ರೇಮ ಅವರೇ ಇದರ ಬಗ್ಗೆ ಮಾತನಾಡಿ ಆ ವಿಷಯಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಯಾವುದಾದರೂ ಒಂದು ಕಾಂಬಿನೇಷನ್ ಚೆನ್ನಾಗಿ ವರ್ಕ್ ಆದಾಗ ಅಥವಾ ಸತತವಾಗಿ ಅದೇ ನಿರ್ದೇಶಕರ ಅಥವಾ ನಟನ ಜೊತೆ ಕಾಣಿಸಿಕೊಂಡಾಗ ಇಂಥದೊಂದು ಗಾಸಿಪ್ ಹಬ್ಬುವುದು ಸರ್ವೇಸಾಮಾನ್ಯ.

ಅದು ನಮ್ಮ ಇಂಡಸ್ಟ್ರಿಯಲ್ಲಿ ಎಲ್ಲಾ ಇಂಡಸ್ಟ್ರಿಯಲ್ಲಿ ಹೀಗಾಗುತ್ತದೆ. ಆದರೆ ಆ ಸಮಯದಲ್ಲಿ ಆ ರೀತಿ ಎಷ್ಟೇ ಸುದ್ದಿಗಳು ಹಬ್ಬಿದರೂ ಕೂಡ ನಾನಾಗಲಿ ಉಪೇಂದ್ರ ಅವರಾಗಲಿ ಎಂದು ಇದರ ಬಗ್ಗೆ ತಲೆಕೂಡಿಸಿಕೊಳ್ಳಲಿಲ್ಲ, ಮಾತು ಕೂಡ ಆಡಲಿಲ್ಲ. ನಮ್ಮ ವಿರುದ್ಧ ಈ ರೀತಿ ಮಾತನಾಡಿಕೊಂಡವರು ಸಹ ನಮ್ಮ ಎದುರಿಗೆ ಬಂದು ಕೇಳಲಿಲ್ಲ. ಉಪೇಂದ್ರ ಅವರು ಬೆಸ್ಟ್ ಡೈರೆಕ್ಟರ್ ಅವರ ಅಂದುಕೊಂಡಿದ್ದ ಸೀನ್ ಬರುವವರೆಗೂ ಅವರು ಬಿಡದೆ ನಮ್ಮಿಂದ ಅದನ್ನು ತೆಗೆಯುತ್ತಾರೆ. ಅವರಿಂದ ನಾನು ಅಭಿನಯದಲ್ಲಿ ಸಾಕಷ್ಟು ಕಳೆದಿದ್ದೇನೆ ನಟನಾಗಿ ನಿರ್ದೇಶಕನಾಗಿ ಕೂಡ ಉಪೇಂದ್ರ ಬೆಸ್ಟ್ ಅವರ ಸಿನಿಮಾಗಳಲ್ಲಿ ಲಿಂಗ ಬೇಧವಿರುವದಿಲ್ಲ ಅವರ ಸಿನಿಮಾಗಳಲ್ಲಿ ಅಭಿನಯಿಸಿದೆ ಒಂದು ಖುಷಿ ಎಂದು ಹೇಳಿದ್ದಾರೆ.

ಮದುವೆ ಮುರಿದು ಬೀಳಲು ಕಾರಣ ಏನು ಎಂಬ ಸಬಿಚ್ಚಿಟ್ಟ ನಟಿ ರಿಷಿಕಾ ಸಿಂಗ್

 

ನಟಿ ರಿಷಿಕ ಸಿಂಗ್ ಚಂದನ ವನದಲ್ಲಿ ಚಿಗುರುತ್ತಿದ್ದ ಪ್ರತಿಭೆ. ರಿಯಾಲಿಟಿ ಶೋಗಳು ಸಿನಿಮಾ ಮೂಲಕ ಕರ್ನಾಟಕದಾದ್ಯಂತ ಮನೆಮಾತಿದ್ದ ಈಕೆ ಲಾಕ್ ಡೆನ್ ಅವಧಿಯಲ್ಲಿ ಭೀಕರ ಅ.ಪ.ಘಾ.ತ.ಕ್ಕೆ ಈಡಾದರು. ಬೆನ್ನುಮೂಳೆ ಮುರಿದುಕೊಂಡ ಕಾರಣ ಎರಡು ವರ್ಷ ಬೆಡ್ ರೆಸ್ಟ್ ಅಲ್ಲಿ ಇರಬೇಕಾಯಿತು. ನಿಧಾನವಾಗಿ ಈಗ ಮೊದಲಿನಂತೆ ಆಗುತ್ತಿರುವ ಇವರು ಎರಡು ವರ್ಷ ತಾವು ಅನುಭವಿಸಿದ ಮಾನಸಿಕ ಹಾಗು ದೈಹಿಕ ನೋವಿನ ಬಗ್ಗೆ ಒಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ ಹಂಚಿಕೊಂಡಿದ್ದರು.

ಅದಾದ ಬಳಿಕ ಸುದ್ದಿ ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾ ಚಾನಲ್ಗಳು ನಿರಂತರವಾಗಿ ಅವರ ಸಂದರ್ಶನ ಮಾಡುತ್ತಿವೆ. ಇದೇ ರೀತಿ ಖಾಸಗಿ ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟ ನಟಿ ಮದುವೆ ಮು’ರಿ’ದುಬಿದ್ದ ಕಥೆಯನ್ನು ಹೇಳಿಕೊಂಡಿದ್ದಾರೆ. ನನಗೆ 2021ರಲ್ಲಿ ನನ್ನ ಅಣ್ಣನ ಸ್ನೇಹಿತನಾದ ಸಂದೀಪ್ ಎನ್ನುವವರ ಜೊತೆ ಮದುವೆ ಫಿಕ್ಸ್ ಆಗಿತ್ತು.

ಸಂದೀಪ್ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ. ನಾನು ಇಂಡಸ್ಟ್ರಿಯಲ್ ಇರುವುದು ಅವನಿಗೆ ಸಮಸ್ಯೆ ಆಗಿರಲಿಲ್ಲ. ನನ್ನ ಶೂಟಿಂಗ್ ಸ್ಪಾಟ್ ಗೆಲ್ಲಾ ಬರುತ್ತಿದ್ದ. ಎರಡು ಮನೆಯ ಒಪ್ಪಿಗೆ ಮೇರೆಗೆ ಮದುವೆ ತಯಾರಿ ನಡೆದಿತ್ತು. ಆದರೆ ಅದು ಯಾಕೋ ನನಗೆ ಇದ್ದಕ್ಕಿದ್ದಂತೆ ಈ ಮದುವೆ ಬೇಡ ಎನಿಸಿತು. ಪತ್ರಿಕೆ ಎಲ್ಲಾ ರೆಡಿಯಾಗಿತ್ತು ಮನೆಯವರು ಬಹಳ ಸಂಭ್ರಮದಲ್ಲಿದ್ದರು. ನನ್ನ ಈ ನಿರ್ಧಾರದಿಂದ ನಮ್ಮ ಮನೆಯಲ್ಲಿ ಎಲ್ಲರಿಗೂ ಕೋಪ ಬಂತು ಆದರೆ ಆಕೆಯ ತಾಯಿ ನನ್ನನ್ನು ಅರ್ಥ ಮಾಡಿಕೊಂಡರು.

ಯಾಕೆಂದರೆ ಆಗ ನನಗೆ ಬರಿ 21 ವಯಸ್ಸು, ಮೆಚುರಿಟಿ ಇಲ್ಲದೆ ಹೀಗೆ ಮಾಡಿದ್ದಾಳೆ ಅಂತ ಹೇಳಿ ಮದುವೆ ಕ್ಯಾ’ನ್ಸ’ಲ್ ಕೂಡ ಮಾಡಿದರು. ಸಂದೀಪ್ ಮತ್ತು ನನ್ನ ನಡುವೆ ಒಳ್ಳೆಯ ಭಾಂದವ್ಯವಿತ್ತು. ಮದುವೆ ಕ್ಯಾ’ನ್ಸ’ಲ್ ಆದ ದಿನ ಕೂಡ ಒಟ್ಟಿಗೆ ಇದ್ದೆವು, ಅದಾದ ಮೇಲೆ ಎರಡು ದಿನ ನಾವು ಒಟ್ಟಿಗೆ ಇದ್ದೆವು. ಆ ಘಟನೆಯಿಂದ ನನ್ನ ಅಣ್ಣ ಬೇಜಾರು ಮಾಡಿಕೊಂಡು ನನ್ನ ಜೊತೆ ಮಾತು ಕೂಡ ಬಿಟ್ಟಿದ್ದ, ನನ್ನ ನಿರ್ಧಾರ ಎಲ್ಲರಿಗೂ ಕೂಡ ಶಾ’ಕ್ ಆಗಿತ್ತು.

ಆದರೆ ಆ ರೀತಿಯ ನಿರ್ಧಾರ ಮಾಡಲೇಬೇಕಾಯಿತು. ಆಗ ಮದುವೆ ಆಗಿದ್ದರೆ ಇಬ್ಬರು ಮಕ್ಕಳು ಇರುತ್ತಿದ್ದರು ಆದರೆ ದೇವರು ನಮಗೆ ಏನಾದರೂ ಟ್ಯಾಲೆಂಟ್ ಕೊಟ್ಟಿರುತ್ತಾನೆ, ಅದು ಉಪಯೋಗವಾಗುವಂತೆ ಬದುಕಬೇಕು. ಹಾಗಾಗಿ ನಾನು ಈಗಲೇ ಮದುವೆ ಬೇಡ ಇಂಡಸ್ಟ್ರಿಯಲ್ಲಿ ಮುಂದುವರಿಯಬೇಕು ಎನ್ನುವ ನಿರ್ಧಾರಕ್ಕೆ ಬಂದೆ. ಎಲ್ಲರೂ ಏನೇನೋ ಹೇಳುತ್ತಿದ್ದರು ಆಗ ನನಗೆ ಕಿವಿ ಮತ್ತು ಮೆದುಳಿನ ನಡುವಿನ ನರವನ್ನು ಕಟ್ ಮಾಡಬೇಕು ಅನಿಸುತ್ತಿತ್ತು.

ನನ್ನನ್ನು ಕ್ರಾಕ್ ಎನ್ನುತ್ತಿದ್ದರು ಅದು ಕೂಡ ನಿಜ ಪ್ರೀತಿ ಮಾಡುವವರೆಲ್ಲ ಕ್ರಾಕ್ ಗಳೇ ಆಗಿರುತ್ತಾರೆ. ನಮ್ಮಿಬ್ಬರ ಹೊಂದಾಣಿಕೆ ನೋಡಿ ಎಲ್ಲರೂ ಖುಷಿ ಪಟ್ಟಿದ್ದರು. ನಾವಿಬ್ಬರು ಒಟ್ಟಿಗೆ ಶಾಪಿಂಗ್ ಮಾಡುತ್ತಿದ್ವಿ, ಹೋಟೆಲ್ಗೆ ಹೋದರೆ ಬಿಲ್ ನಾನೆ ಪೇ ಮಾಡುತ್ತಿದ್ದೆ ಅಥವಾ ಶೇರ್ ಮಾಡಿಕೊಳ್ಳುತ್ತಿದ್ದೆವು. ಇಷ್ಟೆಲ್ಲ ಚೆನ್ನಾಗಿದ್ದು ಒಮ್ಮೆಲೇ ಮದುವೆ ಕ್ಯಾ’ನ್ಸ’ಲ್ ಮಾಡಬೇಕು ಅಂದಾಗ ಬಹಳ ನೋವಾಯ್ತು.

ಆ ವಿಷಯ ಮನೆಯಲ್ಲಿ ಹೇಳಲು ಹೋದಾಗ ಅವರು ಲಗ್ನ ಪತ್ರಿಕೆಗೆ ಅರಿಶಿಣ ಕುಂಕುಮ ಹಚ್ಚುತ್ತಿದ್ದರು. ಜೀವನದಲ್ಲಿ ಯಾವುದು ನಿರೀಕ್ಷಿತವಲ್ಲ ನನಗೆ ಆಕ್ಸಿಡೆಂಟ್ ಆಗುತ್ತದೆ ಎಂದು ಕೂಡ ನಾನು ನಿರೀಕ್ಷಿಸಿರಲಿಲ್ಲ. ಹೀಗೆ ಎಲ್ಲವೂ ಕೂಡ ಎಂದು ತಮ್ಮ ಮದುವೆ ಮು’ರಿ’ದು’ಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತು ಆ ಸಮಯದಲ್ಲಿ ಅದರಿಂದ ಎಲ್ಲಾ ಆಚೆ ಬರಲು ಬಿಗ್ ಬಾಸ್ ಗೆ ಹೋಗಬೇಕೆಂದು ನಿರ್ಧಾರ ಮಾಡಿದ ವಿಷಯವನ್ನು ಹೇಳಿಕೊಂಡಿದ್ದಾರೆ.

ಮದುವೆ ಮುರಿದು ಬೀಳಲು ಕಾರಣ ಏನು ಎಂಬ ಸತ್ಯ ಬಿಚ್ಚಿಟ್ಟ ನಟಿ ರಿಷಿಕಾ ಸಿಂಗ್

 

ನಟಿ ರಿಷಿಕ ಸಿಂಗ್ ಚಂದನ ವನದಲ್ಲಿ ಚಿಗುರುತ್ತಿದ್ದ ಪ್ರತಿಭೆ. ರಿಯಾಲಿಟಿ ಶೋಗಳು ಸಿನಿಮಾ ಮೂಲಕ ಕರ್ನಾಟಕದಾದ್ಯಂತ ಮನೆಮಾತಿದ್ದ ಈಕೆ ಲಾಕ್ ಡೆನ್ ಅವಧಿಯಲ್ಲಿ ಭೀಕರ ಅ.ಪ.ಘಾ.ತ.ಕ್ಕೆ ಈಡಾದರು. ಬೆನ್ನುಮೂಳೆ ಮುರಿದುಕೊಂಡ ಕಾರಣ ಎರಡು ವರ್ಷ ಬೆಡ್ ರೆಸ್ಟ್ ಅಲ್ಲಿ ಇರಬೇಕಾಯಿತು. ನಿಧಾನವಾಗಿ ಈಗ ಮೊದಲಿನಂತೆ ಆಗುತ್ತಿರುವ ಇವರು ಎರಡು ವರ್ಷ ತಾವು ಅನುಭವಿಸಿದ ಮಾನಸಿಕ ಹಾಗು ದೈಹಿಕ ನೋವಿನ ಬಗ್ಗೆ ಒಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ ಹಂಚಿಕೊಂಡಿದ್ದರು.

ಅದಾದ ಬಳಿಕ ಸುದ್ದಿ ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾ ಚಾನಲ್ಗಳು ನಿರಂತರವಾಗಿ ಅವರ ಸಂದರ್ಶನ ಮಾಡುತ್ತಿವೆ. ಇದೇ ರೀತಿ ಖಾಸಗಿ ಯುಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟ ನಟಿ ಮದುವೆ ಮು’ರಿ’ದುಬಿದ್ದ ಕಥೆಯನ್ನು ಹೇಳಿಕೊಂಡಿದ್ದಾರೆ. ನನಗೆ 2021ರಲ್ಲಿ ನನ್ನ ಅಣ್ಣನ ಸ್ನೇಹಿತನಾದ ಸಂದೀಪ್ ಎನ್ನುವವರ ಜೊತೆ ಮದುವೆ ಫಿಕ್ಸ್ ಆಗಿತ್ತು.

ಸಂದೀಪ್ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ. ನಾನು ಇಂಡಸ್ಟ್ರಿಯಲ್ ಇರುವುದು ಅವನಿಗೆ ಸಮಸ್ಯೆ ಆಗಿರಲಿಲ್ಲ. ನನ್ನ ಶೂಟಿಂಗ್ ಸ್ಪಾಟ್ ಗೆಲ್ಲಾ ಬರುತ್ತಿದ್ದ. ಎರಡು ಮನೆಯ ಒಪ್ಪಿಗೆ ಮೇರೆಗೆ ಮದುವೆ ತಯಾರಿ ನಡೆದಿತ್ತು. ಆದರೆ ಅದು ಯಾಕೋ ನನಗೆ ಇದ್ದಕ್ಕಿದ್ದಂತೆ ಈ ಮದುವೆ ಬೇಡ ಎನಿಸಿತು. ಪತ್ರಿಕೆ ಎಲ್ಲಾ ರೆಡಿಯಾಗಿತ್ತು ಮನೆಯವರು ಬಹಳ ಸಂಭ್ರಮದಲ್ಲಿದ್ದರು. ನನ್ನ ಈ ನಿರ್ಧಾರದಿಂದ ನಮ್ಮ ಮನೆಯಲ್ಲಿ ಎಲ್ಲರಿಗೂ ಕೋಪ ಬಂತು ಆದರೆ ಆಕೆಯ ತಾಯಿ ನನ್ನನ್ನು ಅರ್ಥ ಮಾಡಿಕೊಂಡರು.

ಯಾಕೆಂದರೆ ಆಗ ನನಗೆ ಬರಿ 21 ವಯಸ್ಸು, ಮೆಚುರಿಟಿ ಇಲ್ಲದೆ ಹೀಗೆ ಮಾಡಿದ್ದಾಳೆ ಅಂತ ಹೇಳಿ ಮದುವೆ ಕ್ಯಾ’ನ್ಸ’ಲ್ ಕೂಡ ಮಾಡಿದರು. ಸಂದೀಪ್ ಮತ್ತು ನನ್ನ ನಡುವೆ ಒಳ್ಳೆಯ ಭಾಂದವ್ಯವಿತ್ತು. ಮದುವೆ ಕ್ಯಾ’ನ್ಸ’ಲ್ ಆದ ದಿನ ಕೂಡ ಒಟ್ಟಿಗೆ ಇದ್ದೆವು, ಅದಾದ ಮೇಲೆ ಎರಡು ದಿನ ನಾವು ಒಟ್ಟಿಗೆ ಇದ್ದೆವು. ಆ ಘಟನೆಯಿಂದ ನನ್ನ ಅಣ್ಣ ಬೇಜಾರು ಮಾಡಿಕೊಂಡು ನನ್ನ ಜೊತೆ ಮಾತು ಕೂಡ ಬಿಟ್ಟಿದ್ದ, ನನ್ನ ನಿರ್ಧಾರ ಎಲ್ಲರಿಗೂ ಕೂಡ ಶಾ’ಕ್ ಆಗಿತ್ತು.

ಆದರೆ ಆ ರೀತಿಯ ನಿರ್ಧಾರ ಮಾಡಲೇಬೇಕಾಯಿತು. ಆಗ ಮದುವೆ ಆಗಿದ್ದರೆ ಇಬ್ಬರು ಮಕ್ಕಳು ಇರುತ್ತಿದ್ದರು ಆದರೆ ದೇವರು ನಮಗೆ ಏನಾದರೂ ಟ್ಯಾಲೆಂಟ್ ಕೊಟ್ಟಿರುತ್ತಾನೆ, ಅದು ಉಪಯೋಗವಾಗುವಂತೆ ಬದುಕಬೇಕು. ಹಾಗಾಗಿ ನಾನು ಈಗಲೇ ಮದುವೆ ಬೇಡ ಇಂಡಸ್ಟ್ರಿಯಲ್ಲಿ ಮುಂದುವರಿಯಬೇಕು ಎನ್ನುವ ನಿರ್ಧಾರಕ್ಕೆ ಬಂದೆ. ಎಲ್ಲರೂ ಏನೇನೋ ಹೇಳುತ್ತಿದ್ದರು ಆಗ ನನಗೆ ಕಿವಿ ಮತ್ತು ಮೆದುಳಿನ ನಡುವಿನ ನರವನ್ನು ಕಟ್ ಮಾಡಬೇಕು ಅನಿಸುತ್ತಿತ್ತು.

ನನ್ನನ್ನು ಕ್ರಾಕ್ ಎನ್ನುತ್ತಿದ್ದರು ಅದು ಕೂಡ ನಿಜ ಪ್ರೀತಿ ಮಾಡುವವರೆಲ್ಲ ಕ್ರಾಕ್ ಗಳೇ ಆಗಿರುತ್ತಾರೆ. ನಮ್ಮಿಬ್ಬರ ಹೊಂದಾಣಿಕೆ ನೋಡಿ ಎಲ್ಲರೂ ಖುಷಿ ಪಟ್ಟಿದ್ದರು. ನಾವಿಬ್ಬರು ಒಟ್ಟಿಗೆ ಶಾಪಿಂಗ್ ಮಾಡುತ್ತಿದ್ವಿ, ಹೋಟೆಲ್ಗೆ ಹೋದರೆ ಬಿಲ್ ನಾನೆ ಪೇ ಮಾಡುತ್ತಿದ್ದೆ ಅಥವಾ ಶೇರ್ ಮಾಡಿಕೊಳ್ಳುತ್ತಿದ್ದೆವು. ಇಷ್ಟೆಲ್ಲ ಚೆನ್ನಾಗಿದ್ದು ಒಮ್ಮೆಲೇ ಮದುವೆ ಕ್ಯಾ’ನ್ಸ’ಲ್ ಮಾಡಬೇಕು ಅಂದಾಗ ಬಹಳ ನೋವಾಯ್ತು.

ಆ ವಿಷಯ ಮನೆಯಲ್ಲಿ ಹೇಳಲು ಹೋದಾಗ ಅವರು ಲಗ್ನ ಪತ್ರಿಕೆಗೆ ಅರಿಶಿಣ ಕುಂಕುಮ ಹಚ್ಚುತ್ತಿದ್ದರು. ಜೀವನದಲ್ಲಿ ಯಾವುದು ನಿರೀಕ್ಷಿತವಲ್ಲ ನನಗೆ ಆಕ್ಸಿಡೆಂಟ್ ಆಗುತ್ತದೆ ಎಂದು ಕೂಡ ನಾನು ನಿರೀಕ್ಷಿಸಿರಲಿಲ್ಲ. ಹೀಗೆ ಎಲ್ಲವೂ ಕೂಡ ಎಂದು ತಮ್ಮ ಮದುವೆ ಮು’ರಿ’ದು’ಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತು ಆ ಸಮಯದಲ್ಲಿ ಅದರಿಂದ ಎಲ್ಲಾ ಆಚೆ ಬರಲು ಬಿಗ್ ಬಾಸ್ ಗೆ ಹೋಗಬೇಕೆಂದು ನಿರ್ಧಾರ ಮಾಡಿದ ವಿಷಯವನ್ನು ಹೇಳಿಕೊಂಡಿದ್ದಾರೆ.

 

ಡಾಲಿ ಹೆಸರನ್ನು ನಟಿ ಸಪ್ತಮಿ ಗೌಡ ತಮ್ಮ ಫೋನ್ ನಲ್ಲಿ ಏನೆಂದು ಸೇವ್ ಮಾಡಿದ್ದಾರಂತೆ ಗೊತ್ತಾ.?

 

ಕಾಂತಾರದ ಲೀಲಾ ನಟಿ ಸಪ್ತಮಿ ಗೌಡ ಈಗ ಪಾನ್ ಇಂಡಿಯಾ ತಾರೆ. ಕಾಂತರಾ ಸಿನಿಮಾದ ಸಕ್ಸಸ್ ಆಕೆಯನ್ನು ಬಾಲಿವುಡ್ ಅಂಗಳದಕ್ಕೂ ಕರೆದೊಯ್ದಿದೆ. ಕಾಂತರಾ ಸಿನಿಮಾ ಆದಮೇಲೆ ವಿಶ್ವದಾದ್ಯಂತ ಎಲ್ಲರೂ ಕೂಡ ಸಪ್ತಮಿ ಗೌಡ ಅವರನ್ನು ಗುರುತಿಸುತ್ತಿದ್ದಾರೆ. ಆದರೆ ಕಾಂತರಾ ಸಿನಿಮಾ ಮಾಡುವ ಮುಂಚೆ ಸಪ್ತಮಿ ಗೌಡ ಕಮರ್ಷಿಯಲ್ ಸಿನಿಮಾ ಒಂದರಲ್ಲಿ ಭಜಾರಿ ಹೆಂಡ್ತಿ ಪಾತ್ರ ಮಾಡಿದ್ದರು ಎನ್ನುವುದು ಹೆಚ್ಚಿನ ಜನರಿಗೆ ಗೊತ್ತಿಲ್ಲ.

ಡಾಲಿಗೆ ಎರಡನೇ ಬಾರಿ ಬ್ರೇಕ್ ಕೊಟ್ಟ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಮಂಕಿ ಸೀನನ ಹೆಂಡತಿ ಗಿರಿಜಾ ಪಾತ್ರವನ್ನು ಸಪ್ತಮಿ ಗೌಡ ಮಾಡಿ ಫೇಮಸ್ ಆಗಿದ್ದರು. ಬೀಪ್ ಸೌಂಡ್ ಬೈಗುಳಗಳನ್ನು ಮನಸಾರೆ ಬಯ್ಯುತ್ತಾ ಪಡ್ಡೆ ಹೈಕಳಿಗೆಲ್ಲ ಸಿಕ್ಕರೆ ಇಂಥ ಹೆಂಡ್ತಿ ಸಿಗಲಿ ಎಂದು ಆಸೆ ಆಗುವಂತೆ ಮಾಡಿದ್ದರು.

ಆ ಸಿನಿಮಾದಿಂದಲೂ ಕೂಡ ಸಪ್ತಮಿ ಗೌಡ ಹಾಗೂ ಡಾಲಿ ಧನಂಜಯ್ ಅವರಿಗೆ ಸ್ನೇಹವಿದೆ. ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಡಾಲಿ ಧನಂಜಯ್ ಅವರ ಬದುಕಿನ ಭಾಗವಾದ ಹಲವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಧನಂಜಯ್ ಅವರ ಕುಟುಂಬಸ್ಥರುಗಳು, ಸ್ನೇಹಿತರು, ಚಿತ್ರರಂಗದ ಸ್ನೇಹಿತರು ಎಲ್ಲರೂ ಆಗಮಿಸಿದ್ದರು.

ಸಪ್ತಮಿ ಗೌಡ ಕೂಡ ಬಂದಿದ್ದು ಸ್ವತಃ ಡಾಲಿಗೆ ಆಶ್ಚರ್ಯವಾಗಿತ್ತು ಮೊದಲಿಗೆ ಸಪ್ತಮಿ ಗೌಡ ಅವರು ಡಾಲಿ ಅವರ ಗುಣಗಳ ಬಗ್ಗೆ ಗುಣಗಾನ ಮಾಡಿ ಅವರ ಕುರಿತಂತೆ ಅನೇಕ ವಿಷಯಗಳನ್ನು ಹೇಳಿಕೊಂಡು ಕೊನೆಗೆ ಅವರ ಹೆಸರನ್ನು ತಮ್ಮ ಮೊಬೈಲ್ ಫೋನ್ ನಲ್ಲಿ ಏನೆಂದು ಸೇವ್ ಮಾಡಿಕೊಂಡಿದ್ದಾರೆ ಎನ್ನುವುದನ್ನು ಕೂಡ ತಿಳಿಸಿದ್ದಾರೆ. ಸಪ್ತಮಿ ಗೌಡ ಅವರು ತುಂಬಾ ಸ್ಪೆಷಲ್ ಆದ ಹೆಸರನ್ನೇ ಇಟ್ಟಿದ್ದಾರೆ ಡಾಲಿಗೆ.

ನಾನು ನನ್ನ ಫೋನ್ ನಲ್ಲಿ ದಕ್ಷಿಣ ಪಥೇಶ್ವರ್ ಎಂದು ಧನಂಜಯ್ ಹೆಸರನ್ನು ಸೇವ್ ಮಾಡಿಕೊಂಡಿದ್ದೇನೆ. ಇದಕ್ಕೆ ಕಾರಣ ಇತ್ತೀಚಿಗೆ ಅವರು ದಕ್ಷಿಣ ಭಾರತದ ಎಲ್ಲಾ ಸಿನಿಮಾ ಇಂಡಸ್ಟ್ರಿಯನ್ನು ಆಳಲು ಹೆಜ್ಜೆ ಇಡುತ್ತಿದ್ದಾರೆ ಎನ್ನುವುದು ಎಂದು ಅದಕ್ಕೆ ಕಾರಣವನ್ನು ರಿವೀಲ್ ಮಾಡಿದ್ದಾರೆ. ಇದರೊಂದಿಗೆ ಧನಂಜಯ್ ಅವರ ಕುರಿತ ಅಪರೂಪದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಧನಂಜಯ್ ಅವರು ಬಹಳ ಮುಗ್ಧ ನೋಡಲು ಅಮಾಯಕ ಎಂದು ಎಲ್ಲರೂ ಹೇಳುತ್ತಾರೆ ಆದರೆ ಅವರು ಬಹಳ ಪೋಲಿ. ನಾನು ಅವರ ಜೋಕ್ ಗಳನ್ನು ಕೇಳಿದ್ದೇನೆ, ಅವರ ಸುತ್ತ ಇರುವವರು ಯಾವಾಗಲು ನಗುತ್ತಲೆ ಇರುತ್ತಾರೆ ಆ ರೀತಿ ನೋಡಿಕೊಳ್ಳುತ್ತಾರೆ ಧನಂಜಯ್ ಎಂದು ಹೇಳಿದ್ದಾರೆ. ಅವರ ಇನ್ನೊಂದು ಗುಣ ನಮ್ಮೆಲ್ಲರಿಗೂ ಬಹಳ ಇಷ್ಟ. ಏನೆಂದರೆ, ತಮ್ಮ ಸಿನಿಮಾ ತಂಡವನ್ನು ಕುಟುಂಬದಂತೆ ನೋಡುತ್ತಾರೆ ಇವರು, ಒಂದು ಇನ್ಸಿಡೆಂಟ್ ಬಗ್ಗೆ ಹೇಳಬೇಕು ಎಂದರೆ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ ರಿಲೀಸ್ ಆದಾಗ ನಾನು ಯಾರಿಗೂ ಪರಿಚಯ ಇರಲಿಲ್ಲ.

ಸಿನಿಮಾ ನೋಡಲು ಬಂದವರು ಅವರ ಇಂಟರ್ವ್ಯೂ ಮಾಡ್ತಿದ್ದರು ಅವರ ಜೊತೆ ಫೋಟೋ ತೆಗೆದುಕೊಳ್ಳುತ್ತಿದ್ದರು ಆದರೂ ಅವರೇ ನನ್ನನ್ನು ಕರೆದು ಎಲ್ಲರಿಗೂ ಪರಿಚಯಿಸಿದರು. ಅವರ ಡಾಲಿ ಪಿಕ್ಚರ್ಸ್ ಧ್ಯೇಯ ಕೂಡ ಇದೇ ಇದೆ. ತಾವು ಬೆಳೆದು ಜೊತೆಗಿರೋರನ್ನು ಕೂಡ ಬೆಳೆಸುವ ದೊಡ್ಡ ಗುಣ ಅವರದು ಎಂದು ಹೇಳಿದ್ದಾರೆ. ಡಾಲಿ ಅವರು ಸಹ ಸಪ್ತಮಿ ಗೌಡ ಅವರ ಬಗ್ಗೆ ತಮ್ಮ ನೆನಪುಗಳಲ್ಲಿ ಇರುವುದನ್ನು ಹೇಳಿ ಕೊಂಡಿದ್ದಾರೆ.

ಸರಗಿಮಪ ಸೀಸನ್ 19 ರ ವಿನ್ನರ್ ಪ್ರಗತಿ ಬಡಿಗೇರ್ ಗೆ ಸಿಕ್ಕ ಬಹುಮಾನವೇನು ಗೊತ್ತ.?

 

ಸ್ವರ ಸಮರದಲಿ ಗೆದ್ದ ಪ್ರಗತಿ ಹಾಗೂ ಶಿವಾನಿಗೆ ಸಿಕ್ಕ ಬಹುಮಾನ ಎಷ್ಟು ಗೊತ್ತಾ.? ಕನ್ನಡದ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಪ್ರತಿ ವಾರಾಂತ್ಯ ಪ್ರಸಾರವಾಗುತ್ತಿದ್ದ ಜನ ಮೆಚ್ಚಿದ ಸಂಗೀತದ ಕಾರ್ಯಕ್ರಮ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಮುಕ್ತಾಯಗೊಂಡಿದೆ. ಅಕ್ಟೋಬರ್ 29, 2012 ರಲ್ಲಿ ಆರಂಭಗೊಂಡ ಈ ಕಾರ್ಯಕ್ರಮ ಸುಧೀರ್ಘವಾಗಿ ಆರು ತಿಂಗಳುಗಳ ಕಾಲ ನಡೆದುಕೊಂಡು ಬಂದಿದೆ. ಇದುವರೆಗೆ 47 ಎಪಿಸೋಡ್ಗಳು ಪ್ರಸಾರವಾಗಿ ಪ್ರತಿ ಎಪಿಸೋಡ್‌ಗಳಲ್ಲೂ ನೋಡುಗರಿಗೆ ಭರಪೂರ ಮನರಂಜನೆಯನ್ನು ಕೊಡುವಲ್ಲಿ ಗೆದ್ದಿವೆ.

ಕೊಪ್ಪಳದಲ್ಲಿ ಗ್ರಾಂಡ್ ಫಿನಾಲೆ ಕೂಡ ನಡೆದಿದ್ದು, ಈ ಕಾರ್ಯಕ್ರಮದ ವಿನ್ನರ್ ಹಾಗೂ ರನ್ನರ್ ಹೆಸರು ಘೋಷಣೆ ಆಗಿದೆ ಕೊಪ್ಪಳದಲ್ಲಿ ನಡೆದ ಈ ಸಂಗೀತ ಸಮರದ ಎಪಿಸೋಡ್ಗಳು ಈ ವಾರಾಂತ್ಯದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಅಂತಿಮವಾಗಿ ಜನರು ಊಹಿಸಿದ ಸ್ಪರ್ಧಿಗಳೇ ಗೆದ್ದಿರುವುದು ಎಲ್ಲರಿಗೂ ಖುಷಿ ತಂದಿದೆ. ಸರಿಗಮಪ ಸೀಸನ್ 19 ರಲ್ಲಿ ಒಟ್ಟು 16 ಸ್ಪರ್ಧಿಗಳು ಭಾಗವಹಿಸಿದ್ದರು. ಅಂತಿಮವಾಗಿ ಗ್ರಾಂಡ್ ಫಿನಾಲೆ ಗೆ ಬಂದವರು ಪ್ರಗತಿ ಬಡಿಗೇರ್, ಶಿವಾನಿ, ತನುಶ್ರೀ, ಕುಷಿಕ್, ರೇವಣಸಿದ್ಧ ಮತ್ತು ಗುರುಪ್ರಸಾದ್ ಎನ್ನುವ ಸ್ಪರ್ಧಿಗಳು.

ಅಂತಿಮ ಹಂತದ ಸ್ಪರ್ಧೆ ಬಹಳ ಕುತೂಕಲದಿಂದ ಕೂಡಿತ್ತು. ಫಿನಾಲೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳು ಕೂಡ ಅತ್ಯುತ್ತಮ ಪ್ರತಿಭೆಗಳೇ, ಯಾರ ಕೊರಳಿಗೆ ಗೆಲುವಿನ ಹಾರ ಹೋಗುತ್ತದೆ ಎಂದು ಪ್ರೇಕ್ಷಕರೆಲ್ಲ ತುದಿಗಾಲಲ್ಲಿ ಕಾಯುತ್ತಾ ನೋಡುತ್ತಿದ್ದರು. ಕೊನೆಗೆ ತೀರ್ಪುಗಾರರ ಹಾಗೂ ಜನರ ಅಭಿಪ್ರಾಯ ಒಂದೇ ರೀತಿಯಾಗಿದ್ದು ಎಲ್ಲರೂ ಮೆಚ್ಚಿದ ಹಳ್ಳಿ ಪ್ರತಿಭೆ ಪ್ರಗತಿ ಬಡಿಗೇರ್ ಅವರೇ ಈ ಕಾರ್ಯಕ್ರಮದ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಮತ್ತು ಮೊದಲ ರನ್ನರ್ ಅಪ್ ಸರಿಗಮಪದ ರಾಕ್ ಸ್ಟಾರ್ ಎಂದೇ ಹೆಸರು ಪಡೆದ ಶಿವಾನಿ ಹಾಗೂ ಎರಡನೇ ರನ್ನರ್ ತನುಶ್ರೀ ಅವರು ಆಗಿದ್ದಾರೆ.

ಪ್ರಗತಿ ಬಡಿಗೇರ್ ಕುಶಾಲನಗರದ ಪ್ರತಿಭೆ. ಬಡ ಕುಟುಂಬದ ಕೋಗಿಲೆಯಾದ ಈಕೆ ಸರಿಗಮಪ ಸೀಸನ್ 19 ಪ್ರಾರಂಭವಾದ ದಿನದಿಂದಲೂ ಕೂಡ ಪ್ರೇಕ್ಷಕರಿಗೆ ಮನೆ ಮಗಳು ಎನಿಸಿದ್ದರು. ಈಕೆ ಮಾತ್ರವಲ್ಲದೆ ಇಡೀ ಕುಟುಂಬ ಕೂಡ ಹಾಡುಗಾರಿಕೆಯಲ್ಲಿ ಮುಂದಿತ್ತು. ಜನ ಇವರ ಕುಟುಂಬವನ್ನು ಮತ್ತು ಪ್ರಗತಿಬಡಿಗೇರ್ ಅವರ ಹಾಡುಗಾರಿಕೆಯನ್ನು ಮೆಚ್ಚಿದ್ದರು. ಈಗ ಈಕೆ ವಿನ್ನರ್ ಆಗಿರುವುದು ಎಲ್ಲರ ಪಾಲಿಗೂ ಗೆಲುವಿನ ಸಂಭ್ರಮ ತಂದಿದೆ.

ಇವರಿಗೆ ಬೆಂಗಳೂರಿನ ನೆಲಮಂಗಲ ಸಮೀಪ 20 ಲಕ್ಷ ಬೆಳೆಬಾಳುವ 30:20 ಸೈಟ್ ಸಿಕ್ಕಿದೆ ಜೊತೆಗೆ ನಾಲ್ಕು ಲಕ್ಷ ಕ್ಯಾಶ್ ಪ್ರೈಸ್ ಕೂಡ ಸಿಕ್ಕಿದೆ, ಪ್ರತಿ ಬಡಿಗೇರ್ ಅವರಿಗೆ ಮೆಂಟರಿಂಗನ್ನು ಲಕ್ಷ್ಮಿ ನಾಗರಾಜ್ ಅವರು ಮಾಡುತ್ತಿದ್ದರು. ಗಾಯಕ ಹೇಮಂತ್ ಅವರ ಗರಣಿಯಲ್ಲಿ ಪಳಗುತ್ತಿದ್ದ ಮೊದಲನೇ ರನ್ನರ್ ಅಪ್ ಶಿವಾನಿ ಅವರಿಗೆ 20 ಲಕ್ಷ ಕ್ಯಾಶ್ ಪ್ರೈಸ್ ಸಿಕ್ಕಿದೆ ಮತ್ತು ಎರಡನೇ ರನ್ನರ್ ಅಪ್ ಆದ ತನುಶ್ರೀ ಅವರಿಗೆ 5 ಲಕ್ಷ ಸಿಕ್ಕಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದ ಪ್ರೀತಿ ಈ ಪ್ರತಿಭೆಗಳಿಗೆ ಸಿಕ್ಕಿದೆ.

ಜಿ ಕನ್ನಡ ವಾಹಿನಿಯ ಇಂತಹ ಕಾರ್ಯಕ್ರಮಗಳು ಮರೆಯಲಿದ್ದ ಪ್ರತಿಭೆಗಳಿಗೆ ವೇದಿಕೆ ಆಗಿರುವುದು ಮಕ್ಕಳ ಪಾಲಿಗೆ ಬಹುದೊಡ್ಡ ವರದಾನವಾಗಿದೆ. ಈ ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಗಳಾಗಿದ್ದ ಅನೇಕ ಮಕ್ಕಳ ಬದುಕು ಬದಲಾಗಿದ್ದು ಈಗಾಗಲೇ ಇದರಲ್ಲಿ ಹಲವರು ಸಿನಿಮಾಗಳಲ್ಲಿ ಹಾಡಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸರಿಗಮಪ ಕಾರ್ಯಕ್ರಮದ ಬಗ್ಗೆ ಮತ್ತು ವಿನ್ನರ್ ಆಗಿರುವ ಕಂಟೆಸ್ಟೆಂಟ್ಗಳ ಪರ್ಫಾರ್ಮೆನ್ಸ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ

ನನ್ನ ಮೊದಲ ಲವ್ ಬ್ರೇಕ್ ಅಪ್ ಗೆ ಗಣೇಶ್ ಕಾರಣ ಎಂದ ಡಾರ್ಲಿಂಗ್ ಕೃಷ್ಣ.

 

ಕನ್ನಡಿಗರಿಂದ ಡಾರ್ಲಿಂಗ್ ಕೃಷ್ಣ ಎಂದೇ ಕರೆಸಿಕೊಂಡಿರುವ ಲವರ್ ಬಾಯ್ ಇಮೇಜ್ ಗೆ ಹೇಳಿ ಮಾಡಿಸಿದ ರೀತಿ ಇರುವ ಡಾರ್ಲಿಂಗ್ ಕೃಷ್ಣ ಅವರು ಸದ್ಯಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ದಿಲ್ಲದೆ ಕಾರುಬಾರು ಶುರು ಮಾಡಿದ್ದಾರೆ. ನಿರ್ಮಾಪಕನಾಗಿ ಮತ್ತು ನಾಯಕ ನಟನಾಗಿ ಕೂಡ ಹಿಟ್ ಆಗುತ್ತಿರುವ ಡಾರ್ಲಿಂಗ್ ಕೃಷ್ಣ ಅವರ ಸಿನಿಮಾಗಳು ಕನ್ನಡಿಗಕ್ಕೆ ರುಚಿಸುತ್ತಿವೆ. ಅದರಲ್ಲೂ ತಮ್ಮ ರಿಯಲ್ ಲೈಫ್ ಪಾರ್ಟ್ನರ್ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳುವ ಸಿನಿಮಾಗಳಂತೂ ತಪ್ಪದೇ ಹಿಟ್ ಆಗುತ್ತದೆ. ಲವ್ ಮಾಕ್ಟೇಲ್ ಸಿನಿಮಾ ಇಂದಲೂ ಕೂಡ ಇದು ಮುಂದುವರೆದಿದ್ದು ಇವರಿಬ್ಬರ ಕೆಮಿಸ್ಟ್ರಿ ತೆರೆ ಮೇಲೆ ವರ್ಕ್ ಹಾಕುವುದರಿಂದ ಜನಕ್ಕೆ ಇವರಿಬ್ಬರು ಪಕ್ಕದ ಮನೆಯ ಜೋಡಿಗಳಂತೆ ಭಾಸವಾಗುತ್ತಾರೆ.

ಇದೀಗ ಇವರಿಬ್ಬರ ಕಾಂಬಿನೇಷನ್ ಮತ್ತೊಂದು ಚಿತ್ರ ಲವ್ ಬರ್ಡ್ಸ್ ರಿಲೀಸ್ ಹಂತಕ್ಕೆ ಬಂದಾಗ ಬಿಡುಗಡೆ ಮಾಡಿದ್ದ ಟ್ರೈಲರ್ ಎಲ್ಲರನ್ನು ಆಶ್ಚರ್ಯಗೊಳಿಸಿತು. ಕಡಿಮೆ ಸಮಯದಲ್ಲಿ ಸಿನಿಮಾ ತಯಾರಾಗಿ ಬಹಳ ಬೇಗ ಜನರಿಗೆ ನೋಡಲು ಸಿಕ್ಕಿದ್ದು ಅಲ್ಲದೆ ಯಾರು ಊಹಿಸದ ರೀತಿ ಮತ್ತೊಮ್ಮೆ ಇವರಿಬ್ಬರೇ ತೆರೆ ಮೇಲೆ ಜೋಡಿಗಳಾಗಿ ಕಾಣಿಸಿಕೊಂಡಿದ್ದು ಕನ್ನಡಿಗರಿಗೆ ಖುಷಿಗೆ ಕಾರಣವಾಯಿತು. ಸಿನಿಮಾ ರಿಲೀಸ್ ಗಾಗಿ ನಿರ್ಮಾಪಕರಾದ ಮತ್ತು ನಾಯಕ ನಾಯಕಿಯಾದ ಡಾರ್ಲಿಂಗ್ ಕೃಷ್ಣ ದಂಪತಿಗಳು ಪ್ರಚಾರ ಕಾರ್ಯಕ್ರಮ ಏರ್ಪಡಿಸಿದ್ದರು. ಸಿನಿಮಾಗೆ ಬೆಂಬಲಿಡುವ ಸಲುವಾಗಿ ಗಣೇಶ್ ಅವರು ಮತ್ತು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿ ಬೆಂಬಲ ತೋರಿದ ಗಣೇಶ್ ಮತ್ತು ಅಶ್ವಿನಿ ಅವರನ್ನು ಕುರಿತು ಮಾತನಾಡುವಾಗ ಡಾರ್ಲಿಂಗ್ ಕೃಷ್ಣ ಅವರು ಗಣೇಶ್ ರಿಂದ ತಮ್ಮ ಜೀವನದಲ್ಲಾದ ಒಂದು ಘಟನೆ ಬಗ್ಗೆ ಹೇಳಿಕೊಂಡರು

ನಾನು ಎಲ್ಲರನ್ನೂ ನೋಡುವುದಕ್ಕಿಂತ ಗಣೇಶ್ ಅವರನ್ನು ಸ್ವಲ್ಪ ಡಿಫ್ರೆಂಟ್ ಆಗಿ ನೋಡುತ್ತೇನೆ. ಆದರೆ ಅವರಿಗೆ ಅದು ಗೊತ್ತಿಲ್ಲ ಅನ್ಸುತ್ತೆ ಅದಕ್ಕೆ ಕಾರಣ ಇದೆ. ಯಾಕೆಂದರೆ ಗಣೇಶ್ ಅವರಿಂದ ನನ್ನ ಲವ್ ಬ್ರೇಕ್ ಅಪ್ ನೆನಪು ಜಾಸ್ತಿ ಆಗುತ್ತದೆ ಎಂದಾಗ ಗಣೇಶ್ ಅವರು ಮಧ್ಯೆ ಮಾತನಾಡಿ ಕ್ಲಾರಿಟಿ ಕೊಡಪ್ಪ ಜನ ತಪ್ಪು ತಿಳಿದುಕೊಳ್ಳುತ್ತಾರೆ ಎಂದಿದ್ದಾರೆ. ಆಗ ಡಾರ್ಲಿಂಗ್ ಕೃಷ್ಣ ಅವರು ನನ್ನ ಮೊದಲ ಲವ್ ಬ್ರೇಕ್ ಅಪ್ ಆದ ಸಮಯಕ್ಕೆ ಸರಿಯಾಗಿ ಮುಂಗಾರು ಮಳೆ ಸಿನಿಮಾ ರಿಲೀಸ್ ಆಯ್ತು. ನಾನು ಸಿನಿಮಾ ನೋಡಿದಾಗ ಒಂದು ಕಡೆ ಪೂಜಾ ಗಾಂಧಿ ಅವರು ಗಣೇಶ್ ಅವರನ್ನು ಬಿಟ್ಟು ಹೋಗುತ್ತಿದ್ದರು, ಮತ್ತೊಂದೆಡೆ ಅದೇ ಸಮಯದಲ್ಲಿ ನನ್ನ ಹುಡುಗಿ ನನ್ನನ್ನು ಬಿಟ್ಟು ಹೋಗಿದ್ದಳು. ಇದೆರಡು ಮಿಕ್ಸ್ ಆಗಿ ಆ ನೆನಪುಗಳು ಅಚ್ಚಳಿಯದೆ ಗಣೇಶ್ ಅವರ ಮುಂಗಾರು ಮಳೆ ಸಿನಿಮಾ ಜೊತೆ ಸೇರಿ ನನ್ನ ಮನಸ್ಸಿನಲ್ಲಿ ಕೂತಿಬಿಟ್ಟಿದೆ. ಹೀಗಾಗಿ ಅವರನ್ನು ನೋಡಿದಾಗಲೆಲ್ಲ ಅದೆಲ್ಲ ನೆನಪಾಗುತ್ತದೆ ಎಂದು ಹೇಳಿ ಸ್ಪಷ್ಟನೆ ಕೊಟ್ಟಿದ್ದಾರೆ.

ಪುನೀತ್ ರಾಜಕುಮಾರ್ ಅವರ ಬಗ್ಗೆ ಕೂಡ ಮಾತನಾಡಿ ನಾನು ಸಿನಿಮಾ ಜರ್ನಿ ಶುರು ಮಾಡಿದ್ದೇ ಜಾಕಿ ಚಿತ್ರದಿಂದ. ಅಲ್ಲಿಂದ ನಾನು ಅವರ ಬದುಕಿನ ಭಾಗವಾದೆ ಎನ್ನುವುದು ಖುಷಿ. ಅವರ ಮಾನ್ಯರಿಸಂ, ಬಾಡಿ ಲ್ಯಾಂಗ್ವೇಜ್ ಎಲ್ಲರನ್ನು ಅಬ್ಸರ್ವ್ ಮಾಡುತ್ತಿದ್ದೆ ಧಾರಾವಾಹಿ ದಿನಗಳಲ್ಲೂ ನಾನು ಅವರನ್ನೇ ಅನ್ವಯಿಸುವುದಕ್ಕೆ ಪ್ರಯತ್ನಪಡುತ್ತಿದ್ದೆ, ಅವರು ಮಾಡಿದ್ದರೆ ಹೇಗಿರುತ್ತಿತ್ತು ಎಂದು ಊಹಿಸಿಕೊಂಡು ಮಾಡುತ್ತಿದ್ದೆ. ಇಂದು ಅವರಿಲ್ಲ ಎನ್ನುವುದು ತುಂಬಾ ನೋವಾಗುತ್ತಿದೆ, ಆದರೂ 16 ವರ್ಷಗಳ ಕಾಲ ಅವರ ಜೊತೆ ನನಗೆ ಸ್ನೇಹವಿತ್ತು, ಸಮಯ ಕಳೆಯುವ ಅವಕಾಶ ಸಿಕ್ಕಿತ್ತು ಎನ್ನುವುದೇ ಸಮಾಧಾನ ಇಂದು ಆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಣ್ಣಾವ್ರ ಅದೊಂದು ಹಾಡಿನ ಪ್ರಭಾವದಿಂದ ಕರ್ನಾಟಕದಲ್ಲಿ ಎಷ್ಟೋ ಕಡೆ ಕೋಮುಗಲಭೆ ನಿಂತಿತ್ತು, ಅಷ್ಟು ಪ್ರಭಾವ ಬೀರಿದ ಸಿನಿಮಾ ಯಾವುದು ಗೊತ್ತಾ.?

ಕನ್ನಡ ಚಲನಚಿತ್ರದ ಕವಿರತ್ನ, ಸಾವಿರಾರು ಚಿತ್ರಗೀತೆಗಳ ಭಕ್ತಿಗೀತೆಗಳ ರಚನೆಕಾರ, ಸಿನಿಮಾ ನಿರ್ದೇಶಕ, ಕಲಾವಿದ ಎಲ್ಲವೂ ಆಗಿರುವ ವಿ.ನಾಗೇಂದ್ರ ಪ್ರಸಾದ್ ಅವರು ಇತ್ತೀಚೆಗೆ ಯೂಟ್ಯೂಬ್ ವಾಹಿನಿ ಚಾನೆಲ್ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಕನ್ನಡ ಚಲನಚಿತ್ರರಂಗದ ಚಿತ್ರಗೀತೆ ಪರಂಪರೆ ಬಗ್ಗೆ ಮಾತನಾಡಿದ್ದಾರೆ. ಚಲನಚಿತ್ರಗಳು, ಚಿತ್ರಗೀತೆಗಳು ಮತ್ತು ನಾಯಕನಟರುಗಳು ಜನಸಾಮಾನ್ಯರ ಬದುಕಿನ ಮೇಲೆ ಹೇಗೆ ಪ್ರಭಾವ ಬೀರುತ್ತಾರೆ ಎನ್ನುವುದನ್ನು ಉದಾಹರಣೆ ಸಮೇತ ಹೇಳಿದ್ದಾರೆ.

ಮೊದಲಿಗೆ ಚಲನಚಿತ್ರ ಗೀತೆಗಳ ಪ್ರಭಾವಗಳ ಬಗ್ಗೆ ಮಾತನಾಡಿದ ಅವರು ಚಲನಚಿತ್ರ ಗೀತೆಗಳು ಎಲ್ಲರನ್ನೂ ತಲುಪುತ ಮಾಧ್ಯಮ, ಹಿಂದೆ ಜನಪದ ಗೀತೆಗಳು ಜನರನ್ನು ಮುಟ್ಟುತ್ತಿದ್ದವು ಅವುಗಳನ್ನು ಬಿಟ್ಟು ಮಧ್ಯದಲ್ಲಿ ಕಥೆ, ಕಾದಂಬರಿ, ಕವನ, ಭಾವಗೀತೆ ಇವು ತಯಾರದವು ಆದರೆ ಚಿತ್ರಗೀತೆಗಳಷ್ಟು ಅವು .ಜನರನ್ನು ತಲುಪುವುದರಲ್ಲಿ ಯಾವಾಗಲೂ ಒಂದೆಜ್ಜೆ ಹಿಂದೆ ಇರುತ್ತವೆ.

ಚಿತ್ರಗೀತೆಗಳು ನಾಡಿನಾದ್ಯಂತ ದೇಶದಾದ್ಯಂತ ಅತಿ ಬೇಗ ಎಲ್ಲರನ್ನು ತಲುಪುವಂತಹ ಒಂದು ಮಾಧ್ಯಮ ಆದ್ದರಿಂದ ಇವುಗಳಲ್ಲಿ ಏನು ಸೇರಿಸುತ್ತೇವೆ ಎನ್ನುವುದು ಬಹಳ ಮುಖ್ಯ ಆಗುತ್ತದೆ. ಯಾಕೆಂದರೆ ಸಿನಿಮಾ ನಾಯಕನನ್ನು ತೆರೆ ಮೇಲೆ ಮಾತ್ರವಲ್ಲದೆ ವೈಯಕ್ತಿಕವಾಗಿ ಕೂಡ ಅವರ ಅಭಿಮಾನಿಗಳು ಅನುಸರಿಸುತ್ತಾರೆ. ಆ ಉದಾಹರಣೆಗಳನ್ನು ಕೇಳಿದ್ದೇವೆ, ನೋಡಿದ್ದೇವೆ.

ಹೀಗಾಗಿ ಜನ ಹೀರೋ ಎಂದು ಒಪ್ಪಿಕೊಂಡವರ ನಡೆನುಡಿ, ಸಿನಿಮಾ ಕಥೆ, ಸಾರಾಂಶ ಮತ್ತು ಚಿತ್ರಗೀತೆಗಳಲ್ಲಿ ಸೇರಿಸುವ ಸಾಲುಗಳು ಎಲ್ಲವೂ ಒಂದು ಜವಾಬ್ದಾರಿ. ಎಲ್ಲಾ ಸಿನಿಮಾಗಳು ಜನರನ್ನು ಮುಟ್ಟದೇ ಹೋದರೂ ಎಲ್ಲ ಹಾಡುಗಳು ಖಂಡಿತವಾಗಿ ಜನರನ್ನು ಮುಟ್ಟುತ್ತವೆ.

ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತನ್ನ ನೆಚ್ಚಿನ ಹಾಡು ಎನ್ನುವುದು ಇರುತ್ತದೆ ಯಾವ ಹಾಡನ್ನು ಆತ ಹೆಚ್ಚು ಕೇಳುತ್ತಾನೋ ಅದು ಆತನ ಜೀವನದ ಅಂಶಕ್ಕೆ ಸಂಬಂಧಪಟ್ಟದಾಗಿರುತ್ತದ. ಈ ಕುರಿತು ಸಮಾಲೋಚನೆ ಮಾಡಿದಾಗ ಇದರಲ್ಲಿರುವ ಸೂಕ್ಷ್ಮ ನಮಗೆ ಅರ್ಥವಾಗುತ್ತದೆ. ಹಾಗೆಯೆ ಹಿಂದೊಮ್ಮೆ ಡಾ.ರಾಜಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ರಿಲೀಸ್ ಆದಾಗ ಆ ಸಿನಿಮಾ ನೋಡಿದ ಅದೆಷ್ಟೋ ಕೃಷಿ ಬಿಟ್ಟು ಪಟ್ಟಣ ಸೇರಿದ್ದ ಯುವಕರು ಮತ್ತೆ ಮಣ್ಣಿನ ಕಡೆ ಮರಳಿ ವ್ಯವಸಾಯ ಆರಂಭಿಸಿ ಹಳ್ಳಿಯಲ್ಲಿ ಜೀವನ ಕಳೆದ ಉದಾಹರಣೆ ನೋಡಿದ್ದೇವೆ.

ಈ ಸಿನಿಮಾದ ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ ಈ ಹಾಡಿನ ಪ್ರಭಾವು ಕೂಡ ಅಷ್ಟೇ ಮಟ್ಟಗಿದೆ. ಇದು ಎಲ್ಲಾ ಕಾಲದಲ್ಲಿಯೂ ಎಲ್ಲರಿಗೂ ಸ್ಪೂರ್ತಿ ತುಂಬುವಂತಹ ಹಾಡು. ಇದರಂತೆಯೇ ಇನ್ನೂ ಕೆಲವು ಹಾಡುಗಳು ಅದಕ್ಕಿಂತಲೂ ಹೆಚ್ಚಿನ ಪ್ರಭಾವವನ್ನು ಕೂಡ ಬೀರಿವೆ.

ನಾನೇ ಬರೆದ ಮುಕುಂದ ಮುರಾರಿ ಸಿನಿಮಾದ ಟೈಟಲ್ ಹಾಡು ಇಡೀ ಕರ್ನಾಟಕದ ಎಲ್ಲರ ಮನಸ್ಸನ್ನು ಕೂಡ ತಟ್ಟಿತು. ನನಗೂ ಮುಂಚೆ 1950ರ ಸಮಯದಲ್ಲಿ ಅಣ್ಣಾವ್ರು ನಟಿಸಿದ ಸಂತ ಕಬೀರ ಸಿನಿಮಾ ಕೂಡ ಇದೇ ರೀತಿ ಪ್ರಭಾವ ಬೀರಿತ್ತು ಈ ಸಿನಿಮಾದಲ್ಲಿ 13 ಹಾಡುಗಳು ಇದ್ದವು. ಕರ್ನಾಟಕದ ಹೈಕೋರ್ಟ್ ಆ ಸಮಯದಲ್ಲಿಯೇ ಡಾ.ರಾಜ್ ಕುಮಾರ್ ಅವರ ಈ ಒಂದು ಸಿನಿಮಾ ಹಾಗೂ ಹಾಡುಗಳ ಪ್ರಭಾವದಿಂದ ಕರ್ನಾಟಕದಲ್ಲಿ ಹಲವು ಕಡೆ ಕೋಮು ಗಲಭೆ ಆಗುವುದು ತಪ್ಪಿದೆ ಎಂದು ಅವರ ಜಡ್ಜ್ಮೆಂಟ್ ಕಾಪಿಯಲ್ಲಿ ಬರೆದಿದ್ದಾರೆ.

ಕನ್ನಡ ಚಲನಚಿತ್ರ ಗೀತೆಗಳು ಎಷ್ಟು ಪ್ರಭಾವ ಬೀರುತ್ತವೆ ಎನ್ನುವುದಕ್ಕೆ ಇದಕ್ಕಿಂತಲೂ ಹೆಚ್ಚಿನ ಸಾಕ್ಷಿ ಬೇಕೆ ಎಂದು ಹೇಳಿದ್ದಾರೆ. ಇವುಗಳ ಬಗ್ಗೆ ವಿವರವನ್ನು ಅವರಿಂದಲೇ ಕೇಳಲು ಈ ವಿಡಿಯೋವನ್ನು ತಪ್ಪದೆ ಪೂರ್ತಿಯಾಗಿ ನೋಡಿ.

ದರ್ಶನ್ ಕೈ ಹಿಡಿಯಬೇಕಾಗಿದ್ದ ರಕ್ಷಿತಾ ಡೈರೆಕ್ಟರ್ ಪ್ರೇಮ್ ಅವರನ್ನು ಮದುವೆ ಆಗಿದ್ದು ಯಾಕೆ ಗೊತ್ತಾ.?

 

ರಕ್ಷಿತಾ ಪ್ರೇಮ್ ಈ ಹೆಸರು ಕೇಳಿದ ತಕ್ಷಣ ಎಲ್ಲರ ಮುಖದಲ್ಲೂ ಕೂಡ ಒಂದು ಮುಗುಳುನಗೆ ಮೂಡುತ್ತದೆ. ಇದಕ್ಕೆ ಕಾರಣ ರಕ್ಷಿತಾ ಅವರ ನಗುಮುಖ. ಇದ್ದಲೆಲ್ಲಾ ಲವಲವಿಕೆಯಿಂದ ಕಾಣಿಸಿಕೊಂಡು ನಗುನಗುತ್ತ ಎಲ್ಲರ ಜೊತೆ ತಮಾಷೆ ಮಾಡಿಕೊಂಡು ಆಕ್ಟಿವ್ ಆಗಿರುವ ಇವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ. 2002 ರಲ್ಲಿ ಅಪ್ಪು ಸಿನಿಮಾ ಮೂಲಕ ಶ್ವೇತಾ ಆಗಿದ್ದ ಇವರು ರಕ್ಷಿತ ಎನ್ನುವ ಮರುನಾಮಕರಣವನ್ನು ಪಾರ್ವತಮ್ಮ ರಾಜಕುಮಾರ್ ಅವರಿಂದ ಮಾಡಿಸಿಕೊಂಡು ಸಿನಿಮಾ ರಂಗಕ್ಕೆ ಕಾಲಿಡುತ್ತಾರೆ.

2007 ರಲ್ಲಿ ನಿರ್ದೇಶಕ ಪ್ರೇಮ್ ಅವರ ಕೈಹಿಡಿದ ರಕ್ಷಿತಾ ಪ್ರೇಮ್ ಅವರು ಸ್ವ ಇಚ್ಛೆಯಿಂದ ಇನ್ನೂ ಸಿನಿಮಾಗಳನ್ನು ಮಾಡುವುದಿಲ್ಲ ಎಂದು ಹೇಳಿ ಸಿನಿಮಾ ರಂಗದಿಂದ ದೂರ ಆಗುತ್ತಾರೆ. ಆದರೆ ಐದಾರು ವರ್ಷಗಳು ಮಾತ್ರ ಸಿನಿಮಾರಂಗದಲ್ಲಿ ಇದ್ದರೂ ಇವರು ಎಲ್ಲಾ ಸಿನಿಮಾಗಳು ಹಾಗೂ ಎಲ್ಲಾ ಪಾತ್ರಗಳು ಕೂಡ ಸೂಪರ್ ಹಿಟ್.

ಕಡಿಮೆ ಸಮಯದಲ್ಲಿ ಬಹುತೇಕ ಎಲ್ಲಾ ನಾಯಕನಟರುಗಳ ಜೊತೆಗೆ ಅವರು ತೆರೆ ಹಂಚಿಕೊಂಡಿದ್ದರು. ಉಪೇಂದ್ರ, ದರ್ಶನ್, ಸುದೀಪ್, ಪುನೀತ್, ಮುರಳಿ, ವಿಜಯ ರಾಘವೇಂದ್ರ, ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್ ಹೀಗೆ ಎಲ್ಲರೊಂದಿಗೂ ಕೂಡ ಅಭಿನಯಿಸಿದ್ದ ಈಕೆ ದರ್ಶನ್ ಜೊತೆ ಯಶಸ್ವಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ದರ್ಶನ್ ಮತ್ತು ರಕ್ಷಿತಾ ಅವರ ಕೆಮಿಸ್ಟ್ರಿ ತೆರೆ ಮೇಲೆ ಸಕ್ಕತ್ತಾಗಿ ವರ್ಕೌಟ್ ಆಗುತ್ತಿತ್ತು.

ದರ್ಶನ್ ಮತ್ತು ರಕ್ಷಿತಾ ಇವರಿಬ್ಬರ ನಡುವೆ ಮೊದಲೇ ಸ್ನೇಹವಿದ್ದ ಕಾರಣ ಈ ಹೊಂದಾಣಿಕೆ ಸಾಧ್ಯವಾಗಿತ್ತು ಎಂದು ಹೇಳಬಹುದು. ಯಾಕೆಂದರೆ ರಕ್ಷಿತಾ ಅವರು ಕನ್ನಡದ ಫೇಮಸ್ ಸಿನಿಮಾಟೋಗ್ರಾಫರ್ ಗೌರಿಶಂಕರ್ ಅವರ ಪುತ್ರಿ, ಗೌರಿಶಂಕರ್ ಅವರ ಪ್ರೀತಿಯ ಶಿಷ್ಯ ದರ್ಶನ್ ಹಾಗಾಗಿ ಇವರಿಬ್ಬರ ನಡುವೆ ಉತ್ತಮ ಸ್ನೇಹವಿತ್ತು.

ರಕ್ಷಿತಾ ಪ್ರೇಮ್ ಅವರು ಬಾಲ್ಯದಿಂದಲೂ ಕೂಡ ಅನೇಕ ನೋವನ್ನು ಅನುಭವಿಸಿಕೊಂಡು ಬಂದಿದ್ದಾರೆ. ಅವರು ಚಿಕ್ಕವರಿದ್ದಾಗಲೇ ತಂದೆ ತಾಯಿ ಬೇರೆಯಾದ ಕಾರಣ ಮಮತಾ ರಾವ್ ಜೊತೆಗೆ ಬೆಳೆದ ಇವರು ತಂದೆ ಮೇಲೆ ಬಹಳ ಪ್ರೀತಿ ಇಟ್ಟು ಕೊಂಡಿದ್ದರು. ರಕ್ಷಿತಾ ಅವರ ತಂದೆಗೆ ತನ್ನ ಮಗಳು ಹೀರೋಯಿನ್ ಆಗದಿದ್ದರೂ ಪರವಾಗಿಲ್ಲ ಒಂದೊಳ್ಳೆ ಕುಟುಂಬ ಸೇರಿ ಚೆನ್ನಾಗಿ ಬದುಕಬೇಕು ಎನ್ನುವ ಆಸೆ ಇತ್ತು. ಹೀಗಾಗಿ ಸ್ವತಃ ಅವರೇ ದರ್ಶನ್ ಜೊತೆಗೆ ರಕ್ಷಿತಾ ಅವರ ಮದುವೆ ಆಗಬೇಕು ಎಂದು ಆಸೆ ಪಟ್ಟಿದ್ದರು.

ಇದರ ಬಗ್ಗೆ ರಕ್ಷಿತಾ ಅವರ ಜೊತೆಗೂ ಕೂಡ ವಿಷಯ ಪ್ರಸ್ತಾಪ ಮಾಡಿದ್ದರು. ಆಗ ತಾನೇ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳಗುತ್ತಿದ್ದ ರಕ್ಷಿತಾ ಅಷ್ಟು ಬೇಗ ಮದುವೆಗೆ ಒಪ್ಪಲಿಲ್ಲ ಜೊತೆಗೆ ದರ್ಶನ್ ಜೊತೆ ಅವರಿಗಿದ್ದಿದ್ದು ಶುದ್ಧ ಸ್ನೇಹವಾಗಿತ್ತು. ಆ ಕಾರಣಕ್ಕಾಗಿ ಅವರು ದರ್ಶನ ಅವರನ್ನು ಮದುವೆಯಾಗಲು ಒಪ್ಪಿಕೊಳ್ಳಲಿಲ್ಲ ಅವರಿಬ್ಬರ ಸ್ನೇಹ ಇಂದಿಗೂ ಕೂಡ ಅಷ್ಟೇ ಪರಿಶುದ್ಧವಾಗಿದೆ. ಜೊತೆಗೆ ಆ ಸಮಯಕ್ಕೆ ದರ್ಶನ್ ಅವರು ವಿಜಯಲಕ್ಷ್ಮಿ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು.

ರಕ್ಷಿತಾ ಮತ್ತು ಪ್ರೇಮ್ ಮದುವೆ ಮುಂಚೆಯೇ ಅವರಿಬ್ಬರಿಗೂ ಮದುವೆ ಕೂಡ ಆಗಿತ್ತು. ನಂತರ ರಕ್ಷಿತಾ ಅವರು ನಿರ್ದೇಶಕ ಪ್ರೇಮ್ ಅವರನ್ನು ಪ್ರೀತಿಸಿ ಅವರೇ ಪ್ರಪೋಸ್ ಮಾಡಿ ಪ್ರೇಮ್ ಅವರನ್ನು ವಿವಾಹವಾದರು. ವಿವಾಹವಾದ ಬಳಿಕ ಈಗ ಗೌಡರ ಮನೆ ಸೊಸೆಯಾಗಿ ಅಚ್ಚುಕಟ್ಟಾಗಿ ಬದುಕು ನಡೆಸಿಕೊಂಡು ಹೋಗುತ್ತಿದ್ದಾರೆ. ನಟಿಯಾಗಿ ಅಲ್ಲದಿದ್ದರೂ ಕೂಡ ನಿರ್ಮಾಪಕಿಯಾಗಿ ಸಿನಿಮಾರಂಗದ ನಂಟನ್ನು ಉಳಿಸಿಕೊಂಡಿದ್ದಾರೆ. ದರ್ಶನ್ ಮತ್ತು ರಕ್ಷಿತಾ ಅವರ ಸ್ನೇಹದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.