Home Blog Page 215

ಅಜ್ಜನ ಆಸ್ತಿಯ ಮೇಲೆ ಮೊಮ್ಮಗ ಅಥವಾ ಮೊಮ್ಮಗಳಿಗೆ ಎಷ್ಟು ಹಕ್ಕಿದೆ.? ಪೂರ್ವಿಕರ ಆಸ್ತಿ ಎಂದರೇನು.? ನಿನಗೆ ಸಿಗುವ ಆಸ್ತಿ ಪಾಲು ಎಷ್ಟು.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

 

ಪೂರ್ವಿಕರ ಆಸ್ತಿ ಅಥವಾ ಪಿತ್ರಾರ್ಜಿತ ಆಸ್ತಿ ಎಂದರೆ ನಾಲ್ಕು ತಲೆಮಾರುಗಳಿಂದ ನಿರಂತರವಾಗಿ ವರ್ಗಾವಣೆ ಆಗಿ ಬಂದಿರುವ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಅಥವಾ ಪೂರ್ವಿಕರ ಆಸ್ತಿ ಎನ್ನುತ್ತಾರೆ. ಉದಾಹರಣೆಗೆ ಒಬ್ಬ ತಂದೆಯ ತಾತನ ಅಥವಾ ಮುತ್ತಾತನ ಆಸ್ತಿಯು ಅವರ ಹೆಸರಿಗೆ ಬಂದಿದ್ದರೆ ಅದು ಅವರ ಪಿತ್ರಾರ್ಜಿತ ಆಸ್ತಿ ಆಗಿರುತ್ತದೆ. ಸದ್ಯಕ್ಕೆ ನಮ್ಮ ದೇಶದ ಕಾನೂನಿನ ಚೌಕಟ್ಟಿನ ಒಳಗೆ ಪಿತ್ರಾರ್ಜಿತ ಆಸ್ತಿಯನ್ನು ವಿಭಜನೆ ಮಾಡುವುದೇ ದೊಡ್ಡ ಸಂಕ್ಲಿಷ್ಟಕರ ಸಮಸ್ಯೆ ಆಗಿದೆ.

ಯಾಕೆಂದರೆ ಇಂದು ನ್ಯಾಯಾಲಯಗಳಲ್ಲಿ ಹೂಡಿರುವ ಧಾವೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಗಳು ಕೌಟುಂಬಿಕವಾಗಿ ಈ ರೀತಿ ಮಾಸ್ತಿ ವಿಭಜನೆಗೆ ಆಸ್ತಿ ಕಲಹಕ್ಕೆ ಸಂಬಂಧಪಟ್ಟದ್ದೇ ಆಗಿರುತ್ತದೆ. ಇವುಗಳನ್ನು ಅವರಿಗೆ ಅರ್ಥ ಮಾಡಿಸಿ ವಿಭಜನೆ ಮಾಡುವುದು ಸುಲಭದ ಮಾತಲ್ಲ ಅಥವಾ ಅದು ನಿಧಾನ ಆದಷ್ಟು ಎರಡು ಕಡೆಯ ಪರಿಸ್ಥಿತಿ ಹದಗೆಡುತ್ತಿರುವುದು ಕೂಡ ಮತ್ತೊಂದು ರೀತಿಯ ಆತಂಕಕ್ಕೆ ಎಡೆ ಮಾಡಿಕೊಡುತ್ತಿದೆ.

ಇಂದು ಪ್ರತಿಯೊಬ್ಬರೂ ಕೂಡ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ತಮ್ಮ ಹಕ್ಕು ಏನಿರುತ್ತದೆ, ಪೂರ್ವಿಕರ ಆಸ್ತಿ ಎಂದರೆ ಏನು ಜೊತೆಗೆ ಆತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಎಷ್ಟು ಪಾಲು ಇರುತ್ತದೆ ಎಂಬ ವಿಷಯದ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡಿರಬೇಕು. ಈ ಅಂಕಣದಲ್ಲೂ ಸಹ ಅದರ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.

ಉದಾಹರಣೆಗೆ ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಇರುವ ಹಕ್ಕನ್ನು ನೋಡುವುದಾದರೆ ಅದು ಪಿತ್ರಾರ್ಜಿತ ಆಸ್ತಿಯೇ ಅಥವಾ ಅವರೇ ಸಂಪಾದನೆ ಮಾಡಿದ ಸ್ವಯಾರ್ಜಿತ ಆಸ್ತಿಯೇ ಎಂದು ವಿಭಾಗ ಮಾಡಿ ಇದನ್ನು ವಿವರಿಸಬಹುದು. ಒಂದು ವೇಳೆ ತಾತನಿಗೆ ಅದು ಪಿತ್ರಾರ್ಜಿತ ಆಸ್ತಿ ಆಗಿ ಬಂದಿದ್ದರೆ ಅದು ಮತ್ತೊಂದು ಪೀಳಿಗೆಗೆ ವರ್ಗಾವಣೆ ಆಗುವಾಗ ಮತ್ತಷ್ಟು ವಿಭಜನೆ ಆಗುತ್ತದೆ. ಉದಾಹರಣೆಗೆ ನಿಮ್ಮ ತಾತನಿಗೆ ನಿಮ್ಮ ತಂದೆಯನ್ನು ಸೇರಿಸಿ ನಾಲ್ಕು ಜನ ಮಕ್ಕಳಿದ್ದಾರೆ, 8 ಎಕರೆ ಆಸ್ತಿ ಇದೆ ಎಂದು ಭಾವಿಸೋಣ.

ಪ್ರತಿ ಮಕ್ಕಳಿಗೂ ಕೂಡ ಎರಡು ಎಕರೆ ಆಸ್ತಿ ವಿಭಾಗ ಆಗಿರುತ್ತದೆ ಜೊತೆಗೆ ನಿಮ್ಮ ತಂದೆಗೆ ಇಬ್ಬರು ಮಕ್ಕಳಿದ್ದಾರೆ ನೀವು ಮತ್ತು ನಿಮ್ಮ ಸಹೋದರಿ ಎಂದು ನೋಡುವುದಾದರೆ ನಿಮ್ಮ ತಂದೆಯ ಎರಡು ಎಕರೆ ಆಸ್ತಿಯಲ್ಲಿ ತಲ ಇಬ್ಬರಿಗೂ ಒಂದೊಂದು ಎಕರೆ ಆಸ್ತಿ ಸಿಗುತ್ತದೆ. ತಾತನ ಪಿತ್ರಾರ್ಜಿತವಾಗಿ ಬಂದ ಆಸ್ತಿ ವಿಭಜನೆ ಆದಾಗ ಮೊಮ್ಮಗ ಹಾಗೂ ಮೊಮ್ಮಗಳಿಗೆ ಸಮಾನ ಹಕ್ಕು ಸಿಗುತ್ತದೆ. ಒಂದು ವೇಳೆ ನಿಮ್ಮ ತಾತ ಅದನ್ನು ಸ್ವಯಾರ್ಜಿತವಾಗಿ ಸಂಪಾದನೆ ಮಾಡಿದ್ದಾಗಿದ್ದರೆ ಅದರಲ್ಲಿ ನೀವು ಹಕ್ಕು ಹುಡುಕುವ ಸಾಧ್ಯತೆ ಇಲ್ಲವೇ ಇಲ್ಲ.

ಯಾಕೆಂದರೆ ಅದು ಅವರ ಸ್ವ ಸಾಮರ್ಥ್ಯದಿಂದ ಸಂಪಾದಿಸ ಆಸ್ತಿ ಆಗಿರುತ್ತದೆ. ಅದರ ಸಂಪೂರ್ಣ ಹಕ್ಕುದಾರರು ಅವರೇ ಆಗಿರುತ್ತಾರೆ. ಅವರು ಇಚ್ಛೆ ಪಟ್ಟಲ್ಲಿ ಅವರ ಯಾವುದೇ ಮಕ್ಕಳಿಗೆ ಆಗಲಿ, ಮೊಮ್ಮಕ್ಕಳಿಗೆ ಆಗಲಿ ಅದನ್ನು ಕಾನೂನು ನಿಯಮಗಳ ಮೂಲಕವಾಗಿ ಮಾಡಿ ಕೊಡಬಹುದು. ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ಮಾತ್ರ ಎಲ್ಲಾ ಮಕ್ಕಳಿಗೂ ಸಮಾನವಾದ ಹಕ್ಕಿರುವುದು. ಒಬ್ಬ ಮಗುವಿಗೆ ಆಸ್ತಿ ಹಕ್ಕು ಹಕ್ಕು ಹುಟ್ಟಿನಿಂದಲೇ ಬರುತ್ತದೆ. ಮಗು ಜನಿಸಿದ ತಕ್ಷಣವೇ ತಂದೆಯ ಮತ್ತು ತಾತನ ಪಿತ್ರಾರ್ಜಿತ ಆಸ್ತಿಯಲ್ಲಿ ಮಗು ಹಕ್ಕು ಹೊಂದಿರುತ್ತದೆ. ಆದರೆ ಸ್ವಯಾರ್ಜಿತ ಆಸ್ತಿಯಲ್ಲಿ ಆ ರೀತಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.

ರೈತರಿಗೆ ಉಚಿತ ಬೋರ್ವೆಲ್ ಯೋಜನೆ ಕೂಡಲೇ ಅರ್ಜಿ ಸಲ್ಲಿಸಿ ನಿಮ್ಮ ಜಮೀನಿಗೆ ಬೋರ್ವೆಲ್ ಹಾಕಿಸಿಕೊಳ್ಳಿ.

 

ಕೈಯಲ್ಲಿ ಹಣವಿಲ್ಲ; ನೀರಿನ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳುವುದು ಎಂದು ದಾರಿ ಹುಡುಕುತ್ತಿದ್ದೀರಾ? ಹಾಗಾದರೆ ಗಂಗಾ ಕಲ್ಯಾಣ ಯೋಜನೆಯ ಈ ಉಪಯುಕ್ತ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು…! ಸರ್ಕಾರದ 10 ಹಲವು ಯೋಜನೆಗಳು ನೀರಿನ ಸಮಸ್ಯೆಯನ್ನು ಬಗೆಹರಿಸಲೆಂದೇ ಇವೆ. ಅದರಲ್ಲಿ ಗಂಗಾ ಕಲ್ಯಾಣ ಯೋಜನೆಯು ಒಂದು. ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಉಚಿತ ಬೋರ್ವೆಲ್ ಕೊರೆಸುವ ಕಾರ್ಯವನ್ನು ಮಾಡುತ್ತಿದೆ.

ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಲು ತಿಳಿಸಿದೆ. ಉಚಿತ ಬೋರ್ವೆಲ್ ವ್ಯವಸ್ಥೆಗಾಗಿ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಹಾಗೂ ಯಾವ ಮುಖಾಂತರ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯು ಈ ಲೇಖನದಲ್ಲಿ ಇದೆ. ಬೆಳೆಗಳನ್ನು ಬೆಳೆಯುವುದಕ್ಕಾಗಿ, ಕಾರ್ಖಾನೆಗಳನ್ನು ನಡೆಸುವುದಕ್ಕಾಗಿ, ಕುಡಿಯಲು, ಮನೆ ಕಟ್ಟಲು ಹೀಗೆ ಅಧಿಕ ಪ್ರಮಾಣದ ನೀರು ಹಲವಾರು ಕಡೆ ಬೇಕೇ ಬೇಕು. ಆದರೆ ಅಂತರ್ಜಲ ಮಟ್ಟ ಕುಸಿಯುತ್ತಾ ಇರುವುದರಿಂದ ಎಲ್ಲೆಡೆ ನೀರಿನ ಸಮಸ್ಯೆ ಹೆಚ್ಚಾಗಿದೆ.

ಬಾವಿ ತೋಡಿಸಲು ಬೋರ್ವೆಲ್ ತೆಗೆಸಲು ಅಥವಾ ದೊಡ್ಡದಾದ ಕೆರೆ ಅಥವಾ ಗುಂಡಿಯ ನಿರ್ಮಾಣಕ್ಕೂ ಕೂಡ ಹಣದ ಅವಶ್ಯಕತೆ ಇದೆ. ಇದರಿಂದಾಗಿ ಮಧ್ಯಮ ವರ್ಗದ ಜನರು ಕಂಗಾಲಾಗಿ ತಲೆ ಮೇಲೆ ಕೈ ಇಟ್ಟು ಕೂರುವಂತೆ ಆಗಿದೆ. ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು : ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ್, ಸಣ್ಣ ಅಥವಾ ಅತಿ ಸಣ್ಣ ರೈತರ ಎಂಬ ಪ್ರಮಾಣ ಪತ್ರ, ರೇಷನ್ ಕಾರ್ಡ್, ಉತಾರ ಅಥವಾ ಪಹಣಿ ಪತ್ರದ ಅವಶ್ಯಕತೆ ಇರುತ್ತದೆ. ಇವೆಲ್ಲ ದಾಖಲಾತಿಗಳನ್ನು ಜೆಪಿಜೆ ಅಥವಾ ಪಿಡಿಎಫ್ ಫಾರ್ಮಟದಲ್ಲಿ ಸ್ಕ್ಯಾನ್ ಮಾಡಿ ಇಟ್ಟುಕೊಂಡಿರಬೇಕು.

ಉಪ್ಪಾರ ಅಭಿವೃದ್ಧಿ ನಿಗಮ, ಮಡಿವಾಳ ಮತ್ತು ಸವಿತಾ ಕಲ್ಯಾಣ ಅಭಿವೃದ್ಧಿ ನಿಗಮಗಳು ಅರ್ಜಿಯನ್ನು ಕರೆದಿವೆ. ಇನ್ನು ಯಾವುದೇ ಕರ್ನಾಟಕದ ಅಭಿವೃದ್ಧಿ ನಿಗಮಗಳು ಯೋಜನೆಯ ಉಪಯೋಗವನ್ನು ಪಡೆಯಲು ಅರ್ಜಿ ಕರೆದರೆ ಅರ್ಜಿ ಸಲ್ಲಿಸುವ ವಿಧಾನವು ಅಥವಾ ಪ್ರಕ್ರಿಯೆಯು ಒಂದೇ ತರನಾಗಿ ಇರುತ್ತದೆ.

ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಉಚಿತ ಬೋರ್ವೆಲ್ ವ್ಯವಸ್ಥೆಯನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನ :
ಮೊದಲಿಗೆ ಸೇವಾ ಸಿಂಧೂರಿನಲ್ಲಿ ಲಾಗಿನ್ ಆಗಿ ತೆರೆದುಕೊಂಡ ಪುಟದ ಬಲ ಮೇಲ್ಭಾಗದಲ್ಲಿ ಇರುವ ಸರ್ಚ್ ನಲ್ಲಿ ಗಂಗಾ ಕಲ್ಯಾಣ ಎಂದು ಟೈಪ್ ಮಾಡಿದ ನಂತರ ಗಂಗಾ ಕಲ್ಯಾಣ ಯೋಜನೆ/ ಜೀವಜಲ ಯೋಜನೆ/ ಜಿಜಾವು ಜಲ ಭಾಗ್ಯ ಯೋಜನೆ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ನಂತರ ಅಭಿವೃದ್ಧಿ ನಿಗಮವನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಆಧಾರ್ ಕಾರ್ಡನ್ನು ದೃಢೀಕರಿಸಬೇಕು. ಓಟಿಪಿ ಮುಖಾಂತರ ದೃಢೀಕರಿಸಿ, ವಿವರಗಳನ್ನು ಪಡೆಯಿರಿ. ಅರ್ಜಿ ಸಲ್ಲಿಸಲು ಪಿಎಂ ಕಿಸಾನ್ ಕಾರ್ಡ್ ನ ಬಳಕೆಯಲ್ಲಿ ಸಿಗುವ ಫ್ರೂಟ್ಸ್ ಡಿಪಾರ್ಟ್ಮೆಂಟ್ ನೀಡಿದ ಫಾರ್ಮರ್ ಐಡಿಯನ್ನು ಸಮೀಪದ ರೈತ ಸಂಪರ್ಕ ಕೇಂದ್ರಗಳಿಂದ ಅಥವಾ ಫ್ರೂಟ್ಸ್ ವೆಬ್ಸೈಟ್ ನಿಂದ ಪಡೆದಿಟ್ಟುಕೊಳ್ಳಬೇಕು.
ಬಳಿಕ ಪಹಣಿ ಸಂಖ್ಯೆ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ವಿವರಗಳು, ವಾಸ ಸ್ಥಳದ ವಿವರಗಳು ಸೇರಿದಂತೆ ಅವರು ಕೇಳಿದ ಎಲ್ಲಾ ಅವಶ್ಯಕ ಮಾಹಿತಿಯನ್ನು ಭರ್ತಿ ಮಾಡಬೇಕು.

ಮೇಲೆ ತಿಳಿಸಿದಂತೆ ಸ್ಕ್ಯಾನ್ ಮಾಡಿರುವ ಎಲ್ಲಾ ದಾಖಲಾತಿ ಪತ್ರಗಳನ್ನು ಬ್ರೌಸ್ ಮಾಡಿ ಅಪ್ಲೋಡ್ ಮಾಡಬೇಕು. ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಿದ ಬಳಿಕ ತುಂಬಿದ ಅರ್ಜಿ ಪತ್ರವನ್ನು ಪ್ರಿಂಟ್ ಮಾಡಿ ನಿಮ್ಮ ಬಳಿ ಇರಿಸಿಕೊಳ್ಳಿ. ನೀವು ಅರ್ಜಿ ಸಲ್ಲಿಸಿದ ಅಭಿವೃದ್ಧಿ ನಿಗಮಕ್ಕೆ ಈ ಎಲ್ಲಾ ನಿಖರ ಮಾಹಿತಿಯನ್ನು ಹಾಗೂ ದಾಖಲಾತಿ ಪತ್ರಗಳನ್ನು ನೀಡುವ ಮೂಲಕ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಉಚಿತ ಬೋರ್ವೆಲ್ ವ್ಯವಸ್ಥೆಯನ್ನು ಪಡೆಯಬಹುದು.

ಕಡಿಮೆ ಬೆಲೆಯಲ್ಲಿ ಒಳ್ಳೆ ಕಂಡಿಷನ್ ನಲ್ಲಿ ಇರುವ ಸೆಕೆಂಡ್ ಹ್ಯಾಂಡ್ ಟ್ರ್ಯಾಕ್ಟರ್ ಖರೀದಿಸಬೇಕು ಅನ್ಕೊಂಡಿದ್ರೆ ಇಲ್ಲಿದೆ ನೋಡಿ ಉತ್ತಮ ಹಾಗೂ ಕಡಿಮೆ ಬೆಲೆ ಟ್ರಾಕ್ಟರ್

 

ಕೃಷಿ ಕೂಡ ಇಂದು ಆಧುನಿಕರಣವಾಗುತ್ತಿದೆ. ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಕೆಲಸವನ್ನು ಸರಳ ಮಾಡುವ ಪ್ರಯತ್ನಗಳು ಜೋರಾಗಿವೆ. ಕೃಷಿ ಚಟುವಟಿಕೆಗೆ ಅನೇಕ ಸಾಧನಗಳು ಬೇಕು ಎನ್ನುವುದು ಎಲ್ಲರಿಗೂ ಗೊತ್ತು. ಈಗ ಟ್ಯಾಕ್ಟರ್ ಗಳು ಟಿಲ್ಲರ್ ಗಳು ಬಂದು ನೇಗಿಲು, ನೋಗ, ಕುಂಟೆ, ಗುಂಡುಗಳು ಮಾಡುತ್ತಿದ್ದ ಕೆಲಸವನ್ನು ಅದಕ್ಕಿಂತ ವೇಗವಾಗಿ ಮತ್ತು ಸರಳವಾಗಿ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿವೆ.

ಆದ್ದರಿಂದ ಇತ್ತೀಚೆಗೆ ಟ್ರ್ಯಾಕ್ಟರ್ ಕೂಡ ಕೃಷಿಯ ಒಂದು ಪ್ರಮುಖ ಭಾಗ ಎಂದೇ ಹೇಳಬಹುದು. ಉಳುಮೆ ಕೆಲಸದಿಂದ ಹಿಡಿದು ಬೆಳೆದ ಪದಾರ್ಥವನ್ನು ಮನೆಗೆ ಸಾಗಿಸುವ ಎತ್ತಿನಗಾಡಿ ಮಾಡುತ್ತಿದ್ದ ಕೆಲಸದ ತನಕವೂ ಕೂಡ ಟ್ಯಾಕ್ಟರ್ ಅನುಕೂಲತೆ ಸಾಕಷ್ಟು ಇದೆ. ಹೀಗಾಗಿ ಕೃಷಿ ಮಾಡುವ ಪ್ರತಿಯೊಬ್ಬ ರೈತನು ತಾನೊಂದು ಟ್ರ್ಯಾಕ್ಟರ್ ಖರೀದಿಸಬೇಕು ಎಂದು ಆಸೆ ಪಡುತ್ತಾನೆ.

ಆದರೆ ಒಳ್ಳೆಯ ಕಂಪನಿಯ ದುಬಾರಿ ಬೆಳೆಯ ಟ್ರ್ಯಾಕ್ಟರ್ ಖರೀದಿಸಲು ಎಲ್ಲ ರೈತರಿಂದಲೂ ಕೂಡ ಸಾಧ್ಯವಿಲ್ಲ. ಸರ್ಕಾರವು ಕೂಡ ಟ್ರಾಕ್ಟರ್ ಕೊಳ್ಳುವ ರೈತರಿಗೆ ಸಬ್ಸಿಡಿ ಸಾಲ, ಕಡಿಮೆ ಬಡ್ಡಿ ಸಾಲ ಇಂತಹ ಸಹಾಯ ಮಾಡುತ್ತಿದ್ದರು ಇನ್ನು ಅನೇಕರಿಗೆ ಇದು ಕೈಗೆಟುಕದ ಕುಸುಮವಾಗಿದೆ. ಆದ್ದರಿಂದ ಜನ ಸೆಕೆಂಡ್ ಹ್ಯಾಂಡಲ್ ಆದರೂ ಖರೀದಿಸೋಣ ಒಳ್ಳೆ ಕಂಡಿಷನಲ್ಲಿ ಇದ್ದರೆ ಸಾಕು ಎಂದು ಎದುರು ನೋಡುತ್ತಿರುತ್ತಾರೆ ಅಂತವರಿಗೆಲ್ಲ ಈ ಮಾಹಿತಿ ಅನುಕೂಲ ನೀಡಲಿದೆ.

ಕರ್ನಾಟಕದ ದಾವಣಗೆರೆ ಜಿಲ್ಲೆಯ ಉಚ್ಚಂಗಿದುರ್ಗ ಎನ್ನುವಲ್ಲಿ ಇರುವ ಸೆಕೆಂಡ್ ಹ್ಯಾಂಡಲ್ ಟ್ಯಾಕ್ಟರ್ ಶೋ ರೂಮ್ ಗೆ ನೀವು ತಕ್ಷಣವೇ ಭೇಟಿ ಕೊಡುವುದರಿಂದ ಒಳ್ಳೆಯ ಕಂಡೀಷನಲ್ಲಿ ಇರುವ ಟ್ಯಾಕ್ಟರ್ ಗಳನ್ನು ಖರೀದಿಸಬಹುದು. ಸದ್ಯಕ್ಕೆ ಈಗ ಅಲ್ಲಿ ಕೆಲ ಟ್ರಾಕ್ಟರ್ಗಳು ಸೆಕೆಂಡ್ ಹ್ಯಾಂಡಲ್ ಅಲ್ಲಿ ಮಾರಾಟಕ್ಕಿದ್ದು ಅವುಗಳ ವಿವರವನ್ನು ಈ ಅಂಕಣದಲ್ಲಿ ನೀಡಲಾಗಿದೆ.

ಸೋನಾಲಿಕ RX 42 ಟ್ರ್ಯಾಕ್ಟರ್ ಮಾರಾಟಕ್ಕಿದ್ದು, ಇದು 2018ರ ಮಾಡೆಲ್ ಆಗಿದೆ. ಇಂಜಿನ್, ಗೇರ್ ಬಾಕ್ಸ್, ಟೈರ್ ಗಳು ಸುಸ್ಥಿತಿಯಲ್ಲಿದ್ದು ದಾಖಲೆ ಕೂಡ ಸರಿಯಾಗಿದೆ. ಇದಕ್ಕೆ ಬೆಲೆಯನ್ನು 3,60,000ರೂ. ಎಂದು ನಿಗದಿ ಮಾಡಲಾಗಿದೆ. ಸೋನಾಲಿಕ RX35 ಟ್ರಾಕ್ಟರ್ ಕೂಡ ಮಾರಾಟಕ್ಕಿದ್ದು, ಇದು 2019ರ ಮಾಡೆಲ್ ಆಗಿದೆ. ಇದರ ಇಂಜಿನ್, ಗೇರ್ ಬಾಕ್ಸ್ ಸುಸ್ಥಿತಿಯಲ್ಲಿದ್ದು ದಾಖಲೆ ಕೂಡ ಸರಿಯಾಗಿದೆ. ಮುಂದಿನ ಟೈಯರ್ ಗಳು ಶೇಕಡ 50%ರಷ್ಟು ಹಿಂದಿನ ಟೈಯರ್ ಗಳ 100% ಬಟನ್ಸ್ ಹೊಂದಿದೆ.

ಇದಕ್ಕೂ ಸಹ 3,60,000 ರೂಗಳನ್ನು ನಿಗದಿ ಮಾಡಲಾಗಿದೆ. ಮಹಿಂದ್ರ 415, 2019ರ ಮಾಡಲಿನ ಟ್ರ್ಯಾಕ್ಟರ್ ಕೂಡ ಸೆಕೆಂಡ್ ಹ್ಯಾಂಡಲ್ ನಲ್ಲಿ ಮಾರಾಟಕ್ಕಿದ್ದು, ಇದರ ಗೇರ್ ಬಾಕ್ಸ್ ಇಂಜಿನ್ ಸಹ ಸ್ಥಿತಿಯಲ್ಲಿದೆ, ದಾಖಲೆಗಳು ಸರಿಯಾಗಿದೆ. ಮುಂದಿನ ಟೈಯರ್ ಗಳು ಶೇಕಡ 90% ಹಿಂದಿ ಟೈಯರ್ಗಳು 100% ಬಟನ್ಸ್ ಹೊಂದಿವೆ. ಇದಕ್ಕೆ ಬೆಲೆಯನ್ನು ನಾಲ್ಕು ಲಕ್ಷ ರೂ ಎಂದು ನಿಗದಿಪಡಿಸಲಾಗಿದೆ.

ಸ್ವರಾಜ್ 742 ಎನ್ನುವ ಟ್ಯಾಕ್ಟರ್ ಕೂಡ ಸೇಲ್ ಗೆ ಇದ್ದು, ಇದು ಸಹ 2019ರ ಮಾಡೆಲ್ ಆಗಿದೆ. ದಾಖಲೆಗಳು ಕೂಡ ಸರಿಯಾಗಿದ್ದು ಮುಂದಿನ ಮತ್ತು ಹಿನ್ನಲೆ ಟೈಯರ್ ಗಳು ಶೇಕಡ 30% ಬಟನ್ಸ್ ಗಳನ್ನು ಹೊಂದಿವೆ. ಈ ಟಾಕ್ಟರಿಗೂ ಕೂಡ ನಾಲ್ಕು ಲಕ್ಷ ರೂಗಳನ್ನು ನಿಗದಿಪಡಿಸಲಾಗಿದೆ. ಇದರಂತೆ ಸುಸ್ಥಿತಿಯಲ್ಲಿ ಇರುವ ದಾಖಲೆಗಳು ಸರಿ ಇರುವ ಸ್ವರಾಜ್ 742 ,2018ರ ಮಾಡೆಲ್ ಸೋನಾಲಿಕ ಆರ್ ಎಕ್ಸ್ 2019 ರ ಮಾಡಲ್ ಟ್ಯಾಕ್ಟರ್ಗಳು ಕೂಡ ಈ ಶೋರೂಮ್ ಅಲ್ಲಿ ಮಾರಾಟಕ್ಕೆ ಇದೆ. ಇವುಗಳ ಬೆಲೆಯನ್ನು ಕಡಿಮೆ ಮಾಡುವ ಸಾಧ್ಯತೆಗಳು ಕೂಡ ಇವೆ. ಹೆಚ್ಚಿನ ಮಾಹಿತಿಗಾಗಿ ಶೋರೂಮ್ ಅನ್ನು ಸಂಪರ್ಕಿಸಿ.

ಬಿಜೆಪಿ ಪರ ಪ್ರಚಾರಕ್ಕೆ ಕಣಕ್ಕಿಳಿದ ಮರುಗಳಿಗಯಲ್ಲೆ ಚರ್ಚೆ ಆಗುತ್ತಿದೆ ಸುದೀಪ್ ಆಸ್ತಿ ಮೌಲ್ಯ ಎಷ್ಟು ಕೋಟಿ ಒಡೆಯರು ಗೊತ್ತ ಸುದೀಪ್.?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇದುವರೆಗೆ ಕನ್ನಡದಲ್ಲಿ 45 ಸಿನಿಮಾಗಳನ್ನು ಕೊಟ್ಟಿದ್ದಾರೆ. ಈ ಪಟ್ಟಿಯಲ್ಲಿ ಸೂಪರ್ ಹಿಟ್ ಆದ ಹಿಟ್ ಚಿತ್ರಗಳ ಹೆಸರೇ ಹೆಚ್ಚಿದೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲೂ ಕೂಡ ತನ್ನ ಹೆಜ್ಜೆಗುರುತು ಮೂಡಿಸಿ ಬಂದಿರುವ ಕಿಚ್ಚ ಸುದೀಪ್ ಅವರು ಕರುನಾಡಿನ ರನ್ನ ಎಂದು ಕರೆಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಅವರು ಕಳೆದ ವಾರವಷ್ಟೇ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ತಾವು ಬಸವರಾಜ್ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸುವುದಾಗಿ ಮತ್ತು ಅವರಿಗಾಗಿ ಪ್ರಚಾರ ಕಾರ್ಯ ಮಾಡುವುದಾಗಿ ಅವರು ಹೇಳಿದ ವ್ಯಕ್ತಿ ಪರವಾಗಿ ಕೂಡ ಪ್ರಚಾರ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ.

ಇದೇ ಬೆನ್ನಲ್ಲೇ ಈ ವಿಷಯದ ಬಗ್ಗೆ ಸಾಕಷ್ಟು ಪರ ಹಾಗೂ ವಿರೋಧ ಚರ್ಚೆಗಳು ಏರ್ಪಟ್ಟಿದ್ದು ಕೆಲವರು ಇದು ಸುದೀಪ್ ಹಣದ ಆಸೆಗಾಗಿ ಪ್ರಚಾರದಲ್ಲಿ ಭಾಗಿಯಾಗಿರಬಹುದು, ಬಿಜೆಪಿ ಪಕ್ಷ ಅವರಿಗೆ ದೊಡ್ಡ ಮೊತ್ತದ ಹಣ ಕೊಟ್ಟು ತನ್ನ ತೆಕ್ಕೆಗೆ ಬೀಳಿಸಿಕೊಂಡಿದೆ ಎನ್ನುವ ಅರೋಪವನ್ನು ಮಾಡುತ್ತಿದ್ದಾರೆ. ಇದಕ್ಕೆಲ್ಲ ಆ ಸುದ್ದಿಗೋಷ್ಠಿಯಲ್ಲಿ ಅವರು ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದರು.

ನಾನು ಹಣಕ್ಕಾಗಿ ಅಥವಾ ಮತ್ಯಾವುದೋ ಆಸೆಗಾಗಿ ಅಥವಾ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ, ರಾಜಕೀಯ ಭವಿಷ್ಯ ಕಂಡುಕೊಳ್ಳಲು ಈ ರೀತಿ ಪ್ರಚಾರ ಮಾಡುತ್ತಿಲ್ಲ ಬಸವರಾಜ್ ಬೊಮ್ಮಾಯಿ ಅವರು ನನಗೆ ಬಹಳ ಆತ್ಮೀಯರು ಅವರ ಮೇಲಿನ ಪ್ರೀತಿ ವಿಶ್ವಾಸ ಹಾಗೂ ಸ್ನೇಹಕ್ಕಾಗಿ ನಾನು ಅವರ ಪರ ಪ್ರಚಾರ ಮಾಡುತ್ತಿದ್ದೇನೆ ಎಂದು ಸ್ಪಷ್ಟತೆ ಕೊಟ್ಟಿದ್ದರು.

ಇದಾದ ಮೇಲೆ ಅವರ ಆಸ್ತಿ ಮೌಲ್ಯದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಕಿಚ್ಚ ಸುದೀಪ್ ಅವರು ಅಗರಾಭ ಶ್ರೀಮಂತ. ಹುಟ್ಟುವಾಗಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರು ಎಂದು ಹೇಳಬಹುದು. ಆ ರೀತಿ ಬಡತನದ ಬವಣನೆಯನ್ನೇ ಕಾಣದ ರೀತಿ ಇವರು ಬೆಳೆದಿದ್ದಾರೆ.

ಸಿನಿಮಾ ನಾಯಕ ಆಗಬೇಕು ಎನ್ನುವ ಒಂದೇ ಒಂದು ಕಾರಣಕ್ಕಾಗಿ ಅವರು ಅವರ ಜೀವನದಲ್ಲಿ ಸಾಕಷ್ಟು ನೋವು, ಅವಮಾನ, ದುಃಖ ಪಟ್ಟಿದ್ದಾರೆ ಹೊರತುಪಡಿಸಿ ಅವರ ಜೀವನದಲ್ಲಿ ಬೇರೆ ಯಾವ ವಿಷಯಕ್ಕೂ ಕಿಂಚಿತ್ತು ಕೊರತೆ ಇರಲಿಲ್ಲ. ಸುದೀಪ್ ಅವರ ತಂದೆ ಸಂಜೀವ್ ಅವರು ಹೋಟೆಲ್ ಉದ್ಯಮಿ ಸರೋವರದಂತಹ ಫೈವ್ ಸ್ಟಾರ್ ಹೋಟೆಲ್ ಮಾಲಿಕರಾಗಿದ್ದ ಇವರು ಸಿನಿಮಾ ನಿರ್ಮಾಪಕರು ಆಗಿದ್ದರು.

ನಾಯಕ ನಟನಾಗಿ ಇಂಡಸ್ಟ್ರಿಗೆ ಕಾಲಿಟ್ಟ ಸುದೀಪ್ ಕೂಡ ಈಗ ಹಲವು ಆದಾಯದ ಮೂಲಕ ಕಂಡುಕೊಂಡಿದ್ದಾರೆ. ಕಿರುತೆರೆ ಧಾರಾವಾಹಿಗಳ ನಿರ್ಮಾಪಕನಾಗಿ ಮತ್ತು ಜಾಹೀರಾತುಗಳ ಬ್ರಾಂಡ್ ಅಂಬಾಸಿಡರ್ ಆಗಿ, ಪ್ಯಾನ್ ಇಂಡಿಯಾ ಸಿನಿಮಾಗಳ ಸ್ಟಾರ್ ಹೀರೋ ಆಗಿ, ಜನಪ್ರಿಯ ಕಾರ್ಯಕ್ರಮಗಳ ನಿರೂಪಕನಾಗಿ ಮಿಂಚುತ್ತಿರುವ ಇವರು ಒಂದು ಸಿನಿಮಾಗೆ ಎಂಟರಿಂದ ಹತ್ತು ಕೋಟಿ ಸಂಭಾವನೆ ಪಡೆಯುತ್ತಾರಂತೆ.

ಇದುವರೆಗೆ ಸುದೀಪ್ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಎನ್ನುವುದರ ಬಗ್ಗೆ ಸ್ಪಷ್ಟತೆ ಇರದೇ ಇದ್ದರೂ ಅವರ ಬಳಿ ಇರುವ ದುಬಾರಿ ವಾಹನ ಗಣತಿ ಇದೆ. ಜಾಗ್ವಾರ್, ರೇಂಜ್ ರೋವರ್, ರೇಂಜ್ ರೋವರ್ ವೋಗ್ಯ 3.0, ರಾಂಗ್ಲರ್ ಜೀಪ್, ವೋಲ್ವೋ XC90 ಇನ್ನು ಮುಂತಾದ ಕೋಟಿಗಿಂತಲೂ ಬೆಲೆಬಾಳುವ ಐಷಾರಾಮಿ ಕಾರುಗಳಿವೆ ಹಾಗೂ ದುಬಾರಿ ಬೆಲೆಯ ಬೈಕಗಳು ಇವೆ. ಜೆಪಿ ನಗರದಲ್ಲಿ ಅರಮನೆಂತಹ ಭವ್ಯ ಬಂಗಳೆ ಕೂಡ ಇದೆ. ಮತ್ತು ಏಳುಕೋಟಿ ಕನ್ನಡಿಗರ ಪ್ರೀತಿ ಕಿಚ್ಚ ಸುದೀಪ್ ಅವರ ಮೇಲೆ ಇರುವುದು ಅತ್ಯಂತ ಬೆಲೆ ಬಾಳುವ ಆಸ್ತಿ ಎಂದೂ ಹೇಳಬಹುದು.

ಮೀನುಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ, ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ. ಸಂಬಳ 53 ಸಾವಿರ.

 

ರಾಜ್ಯದ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಮೀನುಗಾರಿಕೆ ಇಲಾಖೆ ಅಂದರೆ ನ್ಯಾಷನಲ್ ಫಿಶ್ ಡೆವಲಪ್ಮೆಂಟ್ ಬೋರ್ಡ್ (NFDB) ಹೊಸ ನೇಮಕಾತಿ ನಡೆಸುತ್ತಿದೆ. ಇದಕ್ಕಾಗಿ ಅಧಿಸೂಚನೆಯನ್ನು ಕೂಡ ಪ್ರಕಟ ಮಾಡಿದ್ದು ಹುದ್ದೆಗಳ ಕುರಿತಾದ ಸಂಪೂರ್ಣ ವಿವರಗಳನ್ನು ತಿಳಿಸಿದೆ. ಈ ಹುದ್ದೆಗಳಿಗೆ ಅರ್ಹತೆ ಇರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸೂಚನೆಯಲ್ಲಿರುವ ನಿಯಮಗಳ ಪ್ರಕಾರವಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಈ ಅಂಕಣದಲ್ಲಿ ಅಧಿಸೂಚನೆಯಲ್ಲಿರುವ ಪ್ರಮುಖ ಅಂಶಗಳಾದ ಹುದ್ದೆಗಳ ಸಂಖ್ಯೆ, ಹುದ್ದೆಗಳ ವಿವರ, ಅರ್ಜಿ ಶುಲ್ಕ, ಶೈಕ್ಷಣಿಕ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ವಯೋಮಾನ ಸಡಿಲಿಕೆ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇನ್ನು ಮುಂತಾದ ವಿಷಯಗಳನ್ನು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಇಲಾಖೆಯ ಅಧಿಕೃತ ಭೇಟಿ ಕೊಟ್ಟು ತಿಳಿದುಕೊಳ್ಳಬಹುದು.

ಇಲಾಖೆ:- ಮೀನುಗಾರಿಕೆ ಇಲಾಖೆ
ಉದ್ಯೋಗ ಸಂಸ್ಥೆ:- ನ್ಯಾಷನಲ್ ಫಿಶ್ ಡೆವಲಪ್ಮೆಂಟ್ ಬೋರ್ಡ್ NFDB
ಹುದ್ದೆಗಳ ಸಂಖ್ಯೆ:- 04

ಹುದ್ದೆಗಳ ವಿವರ:-
● ತಾಂತ್ರಿಕ ಸಲಹೆಗಾರ – 01
● ಮೂಲಸೌಕರ್ಯ ಸಲಹೆಗಾರ – 01
● ಹಿಂದಿ ಸಲಹೆಗಾರ – 01
● ಐಟಿ ಸಲಹೆಗಾರ – 01

ವೇತನ ಶ್ರೇಣಿ:- ಮಾಸಿಕವಾಗಿ…
● ತಾಂತ್ರಿಕ ಸಲಹೆಗಾರ – 53,000ರೂ.
● ಮೂಲಸೌಕರ್ಯ ಸಲಹೆಗಾರ – 32,000ರೂ.
● ಹಿಂದಿ ಸಲಹೆಗಾರ – 53,000ರೂ.
● ಐಟಿ ಸಲಹೆಗಾರ – 53,000ರೂ.

ವೇತನ ಶ್ರೇಣಿ:-
● ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಸಂಬಂಧ ಪಟ್ಟ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.
● ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷ ಕೆಲಸ ಮಾಡಿರುವ ಅನುಭವ ಹೊಂದಿರಬೇಕು.

ವಯೋಮಿತಿ:-
NFDB ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 21 ವರ್ಷ ಪೂರೈಸಬೇಕು ಗರಿಷ್ಠ 30 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:-
● SC&ST ಅಭ್ಯರ್ಥಿಗಳಿಗೆ 5 ವರ್ಷಗಳು
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು.

ಅರ್ಜಿ ಶುಲ್ಕ:- ಯಾವುದೇ ಅರ್ಜಿ ಶುಲ್ಕ ವಿಧಿಸಿರುವುದಿಲ್ಲ.
ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ಸಂದರ್ಶನ
● ದಾಖಲೆಗಳ ಪರಿಶೀಲನೆ

ಅರ್ಜಿ ಸಲ್ಲಿಸುವ ವಿಧಾನ:-
● ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಹೋಗಿ ನೇಮಕಾತಿ ಅಧಿಸೂಚನೆ ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಬೇಕು.
● ನಂತರ ಅರ್ಜಿ ಫಾರಂ ಭರ್ತಿ ಮಾಡಿ ಸಂಬಂಧ ಪಟ್ಟ ಎಲ್ಲಾ ಪುರಾವೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಅರ್ಜಿ ಪ್ರಕ್ರಿಯ ಪೂರ್ಣಗೊಂಡ ಬಳಿಕ ಅರ್ಜಿ ಸಂಖ್ಯೆ ಮತ್ತು ವಿನಂತಿ ಸಂಖ್ಯೆಗಳನ್ನು ದಾಖಲಿಸಿ ಇಟ್ಟುಕೊಳ್ಳಬೇಕು. ಅಥವಾ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:-
● ಇತ್ತೀಚಿನ ಭಾವಚಿತ್ರ ಮತ್ತು ಸಹಿ
● ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
● ಆಧಾರ್ ಕಾರ್ಡ್
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಇನ್ನಿತ್ಯಾದಿ ದಾಖಲೆಗಳು

ವೆಬ್ಸೈಟ್ ವಿಳಾಸ:- https://hfdb.gov.in.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 11.04.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 10.05.2023

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಅಕೌಂಟ್ ಅನ್ನು ಹೊಂದಿದ್ದೀರಾ.? ಹಾಗಾದ್ರೆ ತಪ್ಪದೇ ಈ ಸುದ್ದಿ ನೋಡಿ.

ಹಣಕಾಸಿನ ವಿಚಾರವಾಗಿ ಯಾರು ಮೋಸ ಹೋಗದಂತೆ ಮತ್ತು ಮೋಸ ಮಾಡಿದಂತೆ ತಡೆಯಲು ಕೇಂದ್ರ ಸರ್ಕಾರವು ಹೊಸ ಹೊಸ ಯೋಜನೆಯನ್ನು ಹೊತ್ತು ತರುತ್ತಿದೆ. ಇತ್ತೀಚೆಗಷ್ಟೇ ಹೊಸ ಯೋಜನೆಯೊಂದನ್ನು ಸರ್ಕಾರವು ಜಾರಿಗೊಳಿಸಿತ್ತು. ಅದೇನೆಂದರೆ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡಿಸಿಕೊಳ್ಳಬೇಕು ಎಂಬುದಾಗಿತ್ತು. ದೇಶದಲ್ಲಿ ಸಾಕಷ್ಟು ಜನರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಒಂದಕ್ಕೊಂದು ಲಿಂಕ್ ಆಗದಲೇ ಉಳಿದಿತ್ತು.

ವಿಷಯ ತಿಳಿಯುತ್ತಲೇ ಅನೇಕ ಜನರು ತಮ್ಮ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಒಂದಕ್ಕೊಂದು ಲಿಂಕ್ ಮಾಡಿಸಲು ಮುಗಿ ಬಿದ್ದರು. ಮಾರ್ಚ್ 31.2023ರಂದು ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಿಸಲು ಕೊನೆಯ ದಿನವೆಂದು ಸರ್ಕಾರವು ಘೋಷಣೆ ಮಾಡಿತು ಆದರೂ ಅನೇಕ ಜನರಿಗೆ ಈ ವಿಷಯವು ಕೊನೆಯ ದಿನ ಸಮೀಪಿಸಿದರೂ ತಲುಪಿರಲಿಲ್ಲ. ಲಿಂಕ್ ಮಾಡಿಸಲು ನೀಡಿದ ಅವಧಿಯು ಮುಗಿಯುತ್ತಾ ಬಂದಂತೆ ಹೆಚ್ಚು ಹೆಚ್ಚು ಜನರು ಎಚ್ಚೆತ್ತುಕೊಂಡು ಲಿಂಕ್ ಮಾಡಿಸಲು ಮುಂದಾದರು.

ಒಂದೇ ಬಾರಿ ಎಲ್ಲರ ಆಧಾರ್ ಹಾಗೂ ಪಾನ್ ಲಿಂಕನ್ನು ಮಾಡಿಸಲು ಹೊರಟರೆ ಸರ್ವಾರ್ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತವೆ ಎಂದು ಅರಿತ ಸರ್ಕಾರವು ಲಿಂಕ್ ಮಾಡಲು ನೀಡಿದ ಅವಧಿಯನ್ನು ವಿಸ್ತರಿಸಿತು. ಇದರಿಂದ ವಿಷಯವನ್ನೇ ಅರಿತಿರದ ಅನೇಕ ಗ್ರಾಮೀಣ ಭಾಗದ ಜನರಿಗೆ ಸಹಾಯವಾಗಿದೆ.

ಪಾನ್ ಜೊತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಎಲ್ಲರಿಗೂ ಅನ್ವಯವಾಗುವಂತೆ, ಕಡ್ಡಾಯವಾಗಿ ಜಾರಿಗೊಳಿಸಿದ ನಿಯಮವಾಗಿದ್ದು, ಒಂದು ವೇಳೆ ಲಿಂಕ್ ಮಾಡಿಸದಿದ್ದಲ್ಲಿ ಅಂತವರ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಎಂದು ಸರ್ಕಾರವು ಘೋಷಿಸಿದೆ. ಇದೀಗ ಕೇಂದ್ರ ಸರ್ಕಾರವು ಹೊಸದೊಂದು ನಿಯಮವನ್ನು ಜಾರಿಗೊಳಿಸುತ್ತಿದ್ದು ಇದರಿಂದ ಒಂದಕ್ಕಿಂತ ಹೆಚ್ಚು ಬ್ಯಾಂಕಿನಲ್ಲಿ ಅಕೌಂಟ್ ಗಳನ್ನು ಅಥವಾ ಖಾತೆಯನ್ನು ಹೊಂದಿದವರಿಗೆ ಸಮಸ್ಯೆ ಆಗಲಿದೆಯೇ? ಎಂಬುದನ್ನು ಈ ಲೇಖನದ ಮುಖಾಂತರ ತಿಳಿಸಲಿದ್ದೇವೆ.

ಈಗಾಗಲೇ ಸರ್ಕಾರವು ಆಧಾರ್ ಹಾಗೂ ಪಾನ್ ಲಿಂಕ್ ಮಾಡಲು ಸಮಯವನ್ನು ವಿಸ್ತರಿಸಿದ್ದು ಜೂನ್ 30ರವರೆಗೂ ಅವಕಾಶವಿದೆ. ಈ ನಿಯಮದ ಜಾರಿಗೊಳಿಸುವಿಕೆಯಿಂದ ಎಲ್ಲ ಜನರು ಆಧಾರ್ ಹಾಗೂ ಪಾನ್ ಲಿಂಕ್ ಮಾಡಿಸುತ್ತಾರೆ. ಇದರಿಂದ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಗಳಲ್ಲಿ ಖಾತೆಯನ್ನು ಹೊಂದಿದ್ದರೂ ಕೂಡ ಎಲ್ಲಾ ಖಾತೆಗಳ ಖಚಿತ ಮಾಹಿತಿಯನ್ನು ಆಧಾರ್ ಹಾಗೂ ಪಾನ್ ಲಿಂಕ್ ಮೂಲಕ ತಿಳಿಯಬಹುದು. ಖಚಿತ ಮಾಹಿತಿಯು ದೊರೆಯುವುದರಿಂದ ಸಾಲವನ್ನು ಮರುಪಾವತಿಸಲು ಸಹಕಾರಿಯಾಗಲಿದೆ.

ಏಪ್ರಿಲ್ ತಿಂಗಳ ನಂತರ ಕನಿಷ್ಠ ಶುಲ್ಕ ಮತ್ತು ಎಟಿಎಂ ಶುಲ್ಕಗಳು ಹೆಚ್ಚಾಗಲಿದ್ದು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ಗಳಲ್ಲಿ ಖಾತೆಯನ್ನು ಹೊಂದಿದವರಿಗೆ ಅಂದರೆ ಕೆಲವು ಬ್ಯಾಂಕ್ ಖಾತೆಗಳನ್ನು ಬಳಸದೆ ಇರುವವರಿಗೆ ಸಮಸ್ಯೆ ಆಗಲಿದೆ ಎನ್ನಲಾಗುತ್ತದೆ. ಹಲವಾರು ಖಾತೆಗಳನ್ನು ಹೊಂದಿದ್ದು ಅದನ್ನು ಸರಿಯಾಗಿ ನಿಭಾಯಿಸದೆ ಇದ್ದಲ್ಲಿ ಸಮಸ್ಯೆ ಎದುರಾಗುವುದು ಖಂಡಿತ. ಸಾಲವನ್ನು ಮರುಪಾವತಿ ಮಾಡದೇ ಇದ್ದಲ್ಲಿ, ಬ್ಯಾಂಕ್ ಬ್ಯಾಲೆನ್ಸ್ ಸರಿಯಾಗಿ ಮೆಂಟೇನ್ ಮಾಡದಿದ್ದಲ್ಲಿ ಮುಂದಿನ ಸಾಲವನ್ನು ಪಡೆಯುವುದು ಕಷ್ಟವಾಗಬಹುದು.

ಪ್ರತಿಯೊಂದು ಖಾತೆಗಳಿಗೂ ಸ್ವಲ್ಪ ಪ್ರಮಾಣದ ಶುಲ್ಕವನ್ನು ನೀಡಲೇ ಬೇಕಿದೆ. ಅಂತೆಯೇ ಹಲವಾರು ಖಾತೆಗಳನ್ನು ಹೊಂದಿದ್ದರೆ ಅಲ್ಪ ಪ್ರಮಾಣದ ಶುಲ್ಕವೇ ಕೂಡಿ ದೊಡ್ಡ ಮೊತ್ತವಾಗಿ ಹೊರೆಯಾಗುವ ಸಾಧ್ಯತೆಗಳು ಇವೆ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಮೇಲಿನ ಎಲ್ಲಾ ವಿಷಯಗಳನ್ನು ಅರಿತು ನಿಮ್ಮ ಹಣಕಾಸಿಗೆ ಸಂಬಂಧಪಟ್ಟ ಹಾಗೆ ಸಮಸ್ಯೆಯಾಗಲಿದೆಯೇ? ಇಲ್ಲವೇ? ಎಂಬುದನ್ನು ಖಚಿತಪಡಿಸಿಕೊಳ್ಳಿ. ಆದ್ದರಿಂದ ಪ್ರತಿಯೊಬ್ಬರೂ ಹಣಕಾಸಿನ ವಿಚಾರವಾಗಿ ಸಾಕಷ್ಟು ಯೋಚಿಸಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಒಳಿತು.

ಇನ್ಮುಂದೆ ಆಧಾರ್ ಕಾರ್ಡ್ ಇದ್ರೆ ಸಾಕು ರೇಷನ್ ಪಡೆಯಬಹುದು, ಆದ್ರೆ ತಪ್ಪದೇ ಈ ಕೆಲಸ ಮಾಡಿರಲೇಬೇಕು.!

 

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ದೇಶದಾದ್ಯಂತ ಎಲ್ಲಾ ನಾಗರಿಕರಿಗೂ ಕೂಡ ಉಚಿತ ಆಹಾರ ವ್ಯವಸ್ಥೆ ಕಲ್ಪಿಸುವ ಕಾರಣಕ್ಕಾಗಿ ನಾನು ಯೋಜನೆಗಳನ್ನು ಜಾರಿಗೆ ತಂದಿವೆ. ಇದಕ್ಕಾಗಿ ಪಡಿತರ ಚೀಟಿಯನ್ನು ಒಂದು ಮುಖ್ಯ ಗುರುತಿನ ಚೀಟಿ ಹಾಕಿ ಪರಿಗಣಿಸಿ ಆ ಪ್ರಕಾರವಾಗಿ ಬಡತನ ರೇಖೆಗಿಂತ ಕಡಿಮೆ ಇರುವವರಿಗೆ ಈ ರೀತಿ ಉಚಿತ ರೇಷನ್ ಕೊಡುವ ವ್ಯವಸ್ಥೆ ಮಾಡುತ್ತಿವೆ.

ಕರ್ನಾಟಕದಲ್ಲಿ BPL ಮತ್ತು AAY ಕಾರ್ಡುಗಳನ್ನು ಹೊಂದಿರುವಂತಹ ಪಡಿತರ ಚೀಟಿದಾರರು ಅನ್ನ ಭಾಗ್ಯ ಯೋಜನೆ ಅಡಿ ಉಚಿತವಾಗಿ ಅಕ್ಕಿ, ಗೋಧಿ, ರಾಗಿ ಮುಂತಾದ ಧಾನ್ಯಗಳನ್ನು ಪಡೆಯುತ್ತಿದ್ದಾರೆ. ಹಸಿರು ಮುಕ್ತ ಕರ್ನಾಟಕ ಕನಸು ಹೊಂದಿರುವ ಸರ್ಕಾರವು ಈ ರೀತಿ ಪಡಿತರ ಚೀಟಿ ಉಚಿತ ಪಡಿತರದ ಮೂಲಕ ನಾಗರಿಕರನ್ನು ಹಸಿವು ಮುಕ್ತವಾಗಿ ಬದುಕುವಂತೆ ಮಾಡಿದೆ.

ಅದರಲ್ಲೂ ಒನ್ ನೇಷನ್ ಒನ್ ರೇಷನ್ ಯೋಜನೆ ಜಾರಿಗೆ ತಂದ ಮೇಲಂತೂ ಸಾಕಷ್ಟು ಜನರಿಗೆ ಇದರಿಂದ ಉಪಯೋಗವೇ ಆಯಿತು. ನಂತರದಲ್ಲಿ ಕರ್ನಾಟಕ ರಾಜ್ಯವು ಕೂಡ ಈ ಯೋಜನೆಗೆ ಸೇರ್ಪಡೆಯಾದ ಮೇಲಂತೂ ಕನ್ನಡಿಗರ ಪಾಲಿಕೆದು ದೊಡ್ಡವರದಾನವೇ ಆಯಿತು. ಯಾಕೆಂದರೆ ಉದ್ಯೋಗದ ಕಾರಣಕ್ಕೆ ಅಥವಾ ವಲಸೆ ಹೋದ ಕಾರಣ ಅಥವಾ ಮತ್ತೆ ಯಾವುದೇ ಕಾರಣಕ್ಕೂ ತಮ್ಮ ಮೂಲ ಸ್ಥಳವನ್ನು ಬಿಟ್ಟು ಬೇರೆ ಕಡೆ ಬಂದಿದ್ದ ಜನತೆಗೆ ಹಿಂದೆಲ್ಲಾ ಪಡಿತರ ಪಡೆಯುವುದು ಸಮಸ್ಯೆಯಾಗಿತ್ತು.

ಆದರೆ ಒನ್ ನೇಶನ್ ಒನ್ ರೇಷನ್ ಯೋಜನೆಯಿಂದ ರಾಜ್ಯದ ಯಾವುದೇ ಮೂಲೆಯಲ್ಲಿ ಬೇಕಾದರೂ ಪಡಿತರ ಚೀಟಿ ಮೂಲಕ ತಮ್ಮ ಪಾಲಿನ ಪಡಿತರವನ್ನು ಮಾಮೂಲಿನಂತೆ ಉಚಿತ ಪಡಿತರ ಯೋಜನೆಯಡಿ ಪಡೆದು ಬದುಕಬಹುದು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಪಡಿತರ ಚೀಟಿ ಪಡಿತರ ವ್ಯವಸ್ಥೆಯಲ್ಲಿ ಮತ್ತೊಂದು ಮಹತ್ತರವಾದ ಬದಲಾವಣೆಯನ್ನು ತರಲಾಗಿದೆ.

ಅದೇನೆಂದರೆ ಇನ್ನು ಮುಂದೆ ಆಧಾರ್ ಕಾರ್ಡ್ ಮೂಲಕವೇ ಪಡಿತರ ಕೊಡಬೇಕು ಎಂದು ಸರ್ಕಾರ ಚಿಂತಿಸುತ್ತಿದೆ ಅದಕ್ಕಾಗಿ ಹೊಸ ಯೋಜನೆ ಯನ್ನು ಜಾರಿಗೆ ತಂದಿದೆ. ಒನ್ನೆ ರೇಷನ್ ಒನ್ ಆಧಾರ್ ಎನ್ನುವ ಸಹಕಾರ ಯೋಜನೆ ಹಾಕಿಕೊಂಡಿರುವ ಸರ್ಕಾರವು ಆಧಾರ್ ಕಾರ್ಡ್ ಮೂಲಕವೇ ಎಲ್ಲಾ ಕಾರ್ಯಗಳು ನಡೆಯಬೇಕು ಎನ್ನುವ ಧ್ಯೇಯ ಹೊಂದಿದೆ. ಆಧಾರ್ ಒಂದು ಯೂನಿಕ್ ನಂಬರ್ ಆಗಿರುವುದರಿಂದ ಆಧಾರ್ ಸಂಖ್ಯೆಯಿಂದ ಅನೇಕ ಅವ್ಯವಹಾರಗಳನ್ನು ತಪ್ಪಿಸಲು ಸುಲಭವಾಗುತ್ತದೆ ಎಂದು ಇಂತಹ ಒಂದು ನಿರ್ಧಾರಕ್ಕೆ ಬಂದಿದೆ. ಸರ್ಕಾರ

ಜನತೆಗೆ ಆಧಾರ್ ಕಾರ್ಡ್ ನೀಡಿದ ಸಂಸ್ಥೆಯಾದ UIDAI ಇಂಥದೊಂದು ಘೋಷಣೆಯನ್ನು ಮಾಡಿ ಇನ್ನು ಮುಂದೆ ರೇಷನ್ ಪಡೆದುಕೊಳ್ಳುವುದಕ್ಕೆ ಚಿಂತಿಸಬೇಕಿಲ್ಲ ಎನ್ನುವ ಭರವಸೆ ನೀಡಿದೆ. ಆದರೆ ಈ ರೀತಿ ಆದಾಯ ಕಾರ್ಡಿಂದ ರೇಷನ್ ಪಡೆದುಕೊಳ್ಳಬೇಕು ಎಂದರೆ ಅವರು ಅವರ ಆಧಾರ್ ನವೀಕರಿಸಬೇಕಾಗಿರುವುದು ಅನಿವಾರ್ಯ.

ಆಧಾರ್ ಕೇಂದ್ರಗಳಿಗೆ ಹೋಗಿ ಆಧಾರ್ ಕಾರ್ಡ್ ನವೀಕರಿಸಬೇಕು ಅಥವಾ ಆಧಾರ್ ಅಧಿಕೃತ ವೆಬ್ಸೈಟ್ ಆದ ಭುವನ್ – ಆಧಾರ್ ಸೇವಾ ಕೇಂದ್ರಕ್ಕೆ ಭೇಟಿಕೊಟ್ಟು ಆ ಮೂಲಕ ಕೂಡ ಅಪ್ಡೇಟ್ ಮಾಡಿಸಬಹುದು. ಈ ರೀತಿ ಆದಲ್ಲಿ ನೀವು ರೇಷನ್ ಕಾರ್ಡ್ ಬದಲು ಆಧಾರ್ ಕಾರ್ಡ್ ಇಂದಲೇ ಸರ್ಕಾರ ನೀಡುವ ಉಚಿತ ಪಡಿತರ ಪಡೆದುಕೊಳ್ಳಬಹುದು. ಸರ್ಕಾರದ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಕಿರುತೆರೆ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ರವಿಚಂದ್ರನ್ ಪ್ರತಿ ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

 

ಕ್ರೇಜಿಸ್ಟಾರ್, ಕನ್ನಡ ಚಲನಚಿತ್ರರಂಗದ ಕನಸುಗಾರ, ಕಲಾವಿದ, ಪುಟ್ನಂಜ, ರಸಿಕ, ಮಲ್ಲ ಹೀಗೆ ನಾನಾ ಟೈಟಲ್ ಗಳನ್ನು ಪಡೆದಿರುವ ಎಲ್ಲರ ಪ್ರೀತಿಯ ರವಿಮಾಮ ರವಿಚಂದ್ರನ್ ಅವರು ಕನ್ನಡ ಚಲನಚಿತ್ರರಂಗದ ಬೆಲೆ ಕಟ್ಟಲಾಗದ ಆಸ್ತಿ. ಹಲವು ದಶಕಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಗೀತ ನಿರ್ದೇಶಕನಾಗಿ ಈಗ ಪೋಷಕ ಪಾತ್ರಧಾರಿಯಾಗಿ ಸಿನಿಮಾವನ್ನೇ ತನ್ನ ಜೀವನ ಮಾಡಿಕೊಂಡು ಬದುಕುತ್ತಿರುವ ಅಪ್ಪಟ ಸಿನಿಮಾ ಪ್ರೇಮಿ.

ರವಿಚಂದ್ರನ್ ಅವರಷ್ಟು ಸಿನಿಮಾ ಕ್ರೇಝ್ ಅನ್ನು ಮತ್ತೊಬ್ಬರಲ್ಲಿ ಕಾಣದ ಅಸಾಧ್ಯ. ಸಿನಿಮಾಗಾಗಿ ಹುಟ್ಟಿದವರ ರೀತಿ ಬದುಕಿರುವ ಇವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಇತಿಹಾಸವನ್ನೆ ಬದಲಾಯಿಸಿದವರು. ಪ್ರೇಮಲೋಕ ಸಿನಿಮಾ ಮೂಲಕ ಚಂದನವನಕ್ಕೆ ಹೊಸತನದ ಕನಸನ್ನು ಕಾಣಲು ಕಲಿಸಿಕೊಟ್ಟವರು. ಪ್ರೀತಿ ಪ್ರೇಮ ಪ್ರಣಯದ ಕಥೆಗಳನ್ನು ತೆರೆ ಮೇಲೆ ಸುಂದರವಾಗಿ ತೋರಿಸಿದವರು.

ರವಿಚಂದ್ರನ್ ಅವರ ನಿರ್ಮಾಣ ಸಂಸ್ಥೆಯಾದ ಈಶ್ವರಿ ಪಿಚ್ಚರ್ಸ್ ಅಲ್ಲಿ ದುಡಿಯದವರಿಲ್ಲ ಎಂದೇ ಹೇಳಬಹುದು. ಅಷ್ಟರಮಟ್ಟಿಗೆ ಕನ್ನಡ ಸಿನಿಮಾ ರಂಗದ ಅನೇಕರನ್ನು ಸಾಕಿ ಸಲುಹಿದ ಆ ಸಂಸ್ಥೆಯ ಒಡೆಯ ವೀರ ಸ್ವಾಮಿ ಅವರ ಪ್ರೀತಿಯ ಪುತ್ರ ರವಿಚಂದ್ರನ್ ಅವರು ಸಿನಿಮಾ ಗೆ ಕಾಲಿಟ್ಟ ಸಮಯದಲ್ಲಿ ಗಜಕೇಸರಿ ಯೋಗ ಪಡೆದಿದ್ದವರು. ಮುಟ್ಟಿದ್ದೆಲ್ಲ ಚಿನ್ನ ಆಗುವಂತೆ ಪ್ರತಿ ಸಿನಿಮಾದಲ್ಲೂ ಕೂಡ ಸಕ್ಸಸ್ ಕಾಣುತ್ತಿದ್ದ ಇವರು ಕನ್ನಡದಲ್ಲಿ ಅನೇಕ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿದ್ದಾರೆ.

ಹೈ ಬಜೆಟ್ ಸಿನಿಮಾಗಳು, ಹಾಡುಗಳಲ್ಲಿ ಹೆಚ್ಚು ಪ್ರಾಪರ್ಟಿ ಬಳಕೆ ಮತ್ತು ಪರಭಾಷೆ ನಟಿಯರನ್ನು ಕನ್ನಡಕ್ಕೆ ಹೆಚ್ಚಾಗಿ ತಂದಿದ್ದು ಈ ಎಲ್ಲಾ ಖ್ಯಾತಿಯೂ ಕೂಡ ಇವರಿಗೆ ಸಲ್ಲುತ್ತದೆ. ಆದರೆ ನಿಧಾನವಾಗಿ ಸಿನಿಮಾ ಪ್ರಪಂಚದಲ್ಲಿ ಅವರ ಶುಕ್ರ ದೆಶೆ ಮುಗಿಯುತ್ತೇನೋ ಎನ್ನುವ ಅನುಮಾನ ಕಾಡುತ್ತಿದೆ. ಇತ್ತೀಚಿಗೆ ಅವರು ಮಾಡುತ್ತಿರುವ ಯಾವ ಸಿನಿಮಾಗಳು ಕೂಡ ಪ್ರೇಕ್ಷಕರ ನಿರೀಕ್ಷೆ ಅಂತಿಲ್ಲ ಹಾಗಾಗಿ ಸಾಲು ಸಾಲು ಸಿನಿಮಾಗಳು ಸೋಲುತ್ತಿವೆ.

ಅನಿವಾರ್ಯವಾಗಿ ಪೋಷಕ ಪಾತ್ರಗಳನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾರೆ ರವಿಚಂದ್ರನ್ ಅವರು. ಆದರೆ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು ಇವರ ಪಾತ್ರಕ್ಕೆ ಹೆಚ್ಚು ಒತ್ತು ಇರುವಂತೆ ಇವರಿಗಾಗಿ ಕಥೆ ಎಣೆಯಲಾಗುತ್ತಿದೆ ಎಂದರು ತಪ್ಪಾಗಲ್ಲ. ಇವುಗಳ ಜೊತೆ ಕಿರುತೆರೆಯಲ್ಲೂ ಕೂಡ ಕಾಣಿಸಿಕೊಂಡು ಕಿರುತೆರೆ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ ರವಿಚಂದ್ರನ್ ಅವರು ಬೆಳ್ಳಿತೆರೆಗಿಂತ ಕಿರುತೆರೆ ಪ್ರೇಕ್ಷಕರಿಗೆ ಬಹಳ ಹತ್ತಿರವಾದದ್ದು ಪ್ರತಿದಿನ ಅಥವಾ ಪ್ರತಿವಾರಂತ್ಯ ರಿಯಾಲಿಟಿ ಶೋಗಳ ಮೂಲಕ ಪ್ರೇಕ್ಷಕರ ಮನೆ ಟಿವಿ ಪರದೆ ಮೇಲೆ ಬಂದರೆ ಅವರು ಅವರ ಕುಟುಂಬದವರಂತೆ ಇವರನ್ನು ಹಚ್ಚಿಕೊಂಡು ಬಿಡುತ್ತಾರೆ.

ಹಾಗಾಗಿ ಎಂತಹ ಸೂಪರ್ ಸ್ಟಾರ್ಗಳ ಆದರೂ ಕೂಡ ಕಿರುತರೆ ಕೈಬೀಸಿ ಕರೆದರೆ ಹೋಗದೆ ಇರುವುದಿಲ್ಲ. ರವಿಚಂದ್ರನ್ ಅವರು ಸಹ ಕಿರುತೆರೆ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದೆ ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಸ್ಟಾರ್ ಎನ್ನುವ ಡ್ಯಾನ್ಸಿಂಗ್ ರಿಯಾಲಿಟಿ ಶೋ ತೀರ್ಪುಗಾರರಾಗಿದ್ದ ಇವರು ಈಗ ಝೀ ಕನ್ನಡ ವಾಹಿನಿ ಪ್ರಸಾರವಾಗುತ್ತಿರುವ ಡ್ರಾಮಾ ಜೂನಿಯರ್ಸ್ ಎನ್ನುವ ಮಕ್ಕಳ ಪ್ರತಿಭೆ ಹೊರ ತರುವ ರಿಯಾಲಿಟಿ ಶೋ ಅಲ್ಲಿ ತೀರ್ಪುಗಾರರಾಗಿದ್ದಾರೆ.

ಸಿನಿಮಾ ರಂಗದಲ್ಲಿ ಕೋಟಿ ಕೋಟಿ ಬಂಡವಾಳ ಹೂಡಿ ಬಂಗಾರವನ್ನು ತೆಗೆಯುತ್ತಿದ್ದ ಈ ಸಿಪಾಯಿ ಕಿರುತೆರೆಯಲ್ಲಿ ಎಪಿಸೋಡ್ ಗೆ ಎಷ್ಟು ಸಂಭವನ ಪಡೆಯುತ್ತಿರಬಹುದು ಎನ್ನುವುದು ಎಲ್ಲರ ಕುತೂಹಲ. ಕೆಲ ಮಾಹಿತಿಗಳ ಪ್ರಕಾರ ರವಿಚಂದ್ರನ್ ಅವರು ಒಂದು ಎಪಿಸೋಡ್ ಗೆ 5 ರಿಂದ 6 ಲಕ್ಷಗಳ ಸಂಭಾವನೆಯನ್ನು ಡಿಮ್ಯಾಂಡ್ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಜೊತೆಗೆ ಕೆಲ ಕಿರುತೆರೆ ಶೋಗಳಿಗೆ ಅತಿಥಿಯಾಗಿಯೂ ಸಹ ಇವರು ಕಾಣಿಸಿಕೊಳ್ಳುತ್ತಾರೆ.

ದೊಡ್ಮನೆ ಕೊಡುತ್ತಿದ್ದ ಸಂಭಾವನೆ ಬಗ್ಗೆ ಸತ್ಯ ಬಿಚ್ಚಿಟ್ಟ ನಟ ದರ್ಶನ್ ತಾಯಿ.

 

ಎಲ್ಲರಿಗೂ ಗೊತ್ತಿರುವಂತೆ ದರ್ಶನ್ ಅವರ ತಂದೆ ತೂಗುದೀಪ್ ಶ್ರೀನಿವಾಸ್ ಅವರು ಕನ್ನಡ ಚಲನಚಿತ್ರರಂಗದ ಖ್ಯಾತ ಖಳನಾಯಕ. ಅಣ್ಣಾವ್ರ ಅನೇಕ ಸಿನಿಮಾಗಳಲ್ಲಿ ಅವರಿಗೆ ಎದುರಿಗೆ ಖಡಕ್ ವಿಲನ್ ಪಾತ್ರದಲ್ಲಿ ತೂಗುದೀಪ್ ಶ್ರೀನಿವಾಸ್ ಅವರನ್ನು ನೋಡಬಹುದು. ಆದರೆ ತಂದೆ ಅಷ್ಟು ದೊಡ್ಡ ಹೆಸರು ಮಾಡಿದ್ದರೂ ಕೂಡ ದರ್ಶನ್ ಗೆ ಸಿನಿಮಾ ಇಂಡಸ್ಟ್ರಿ ದಾರಿ ಹೂವಿನದ್ದಾಗಿರಲಿಲ್ಲ. ಇಂದು ದರ್ಶನ್ ಕಟ್ಟಿಕೊಂಡಿರುವ ಈ ಸಾಮ್ರಾಜ್ಯ ಅವರ ಸ್ವಂತ, ಪರಿಶ್ರಮ, ದುಡಿಮೆ ಹಾಗೂ ಹಠದಿಂದ ಎಂದೇ ಹೇಳಬಹುದು.

ಅದೇ ಕಾರಣಕ್ಕಾಗಿ ಇವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದು ಕರೆಯುವುದು. ದರ್ಶನ್ ಬಗ್ಗೆ ಇದುವರೆಗೆ ಸಾಕಷ್ಟು ವಿವಾದಗಳು ಆಗಿದ್ದರು ಕೂಡ ಕರ್ನಾಟಕದಲ್ಲಿ ದರ್ಶನ್ ಕ್ರೇಝ್ ಎಂದೂ ಕಡಿಮೆ ಆಗುವುದಿಲ್ಲ. ಡಿ ಬಾಸ್ ಗೆ ಕೋಟ್ಯಾಂತರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಆದರೆ ಅಭಿಮಾನಿಗಳು ಎಂದು ಹೆಸರು ಹೇಳಿಕೊಂಡು ಕೆಲಕಿಡಿಗೇಡಿಗಳು ದರ್ಶನ್ ಮತ್ತು ಬೇರೆ ಸ್ಟಾರ್ ನಟರ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾರೆ.

ಎರಡು ಪಕ್ಷದವರು ಪರಸ್ಪರ ಅಭಿಮಾನಿಗಳು ಎಂದು ಹೇಳಿಕೊಂಡು ತಮ್ಮ ಹೀರೋ ಹೆಚ್ಚು ತಮ್ಮ ಹೀರೋ ಹೆಚ್ಚು ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಇನ್ನು ಮುಂದುವರೆದು ಈ ನಟರ ಕಾರ್ಯಕ್ರಮ ನಡೆಯುವಾಗಲೂ ಕೂಡ ರಂಪಾಟ ನಡೆಸಿ ತೊಂದರೆ ಕೊಡುತ್ತಾರೆ. ಇತ್ತೀಚೆಗೆ ದರ್ಶನ್ ಅವರ ಹೊಸಪೇಟೆಯಲ್ಲಿ ಆದ ಇನ್ಸಿಡೆಂಟ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅಲ್ಲೀತನಕ ಬೂದಿ ಮೆಚ್ಚಿದ ಕೆಂಡದಂತಿದ್ದ ಪರಿಸ್ಥಿತಿ ಸ್ಪೋ.ಟವಾಗಿ ಈಗ ಸ್ಟಾರ್ ವಾರ್ ಬಗ್ಗೆ ಎದುರಿಗೆ ಎಲ್ಲರೂ ಮಾತನಾಡುವಂತ ಪರಿಸ್ಥಿತಿಯನ್ನು ಆ ಘಟನೆ ತಂದಿದೆ.

ಇದೆಲ್ಲದರ ನಂತರ ನೇರವಾಗಿ ದೊಡ್ಮನೆ ಕುಟುಂಬ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಮೇಲೆ ಈ ಆರೋಪವನ್ನು ಹೊರಿಸಲಾಯಿತು. ಆದರೆ ದೊಡ್ಮನೆ ಇಂತಹ ಘಟನೆಗಳಿಗೆ ಪ್ರೇರಣೆ ಕೊಡುವುದಿಲ್ಲ ಎಂದೆ ಕನ್ನಡದ ಮಂದಿ ಬಲವಾಗಿ ನಂಬಿದರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹುತೇಕರ ಅಭಿಪ್ರಾಯ ಇದೇ ರೀತಿ ಇತ್ತು. ಇಂತಹ ಸಂದರ್ಭದಲ್ಲಿ ದರ್ಶನ್ ಅವರ ತಾಯಿ ದೊಡ್ಡಮನೆ ಬಗ್ಗೆ ಮಾತನಾಡಿದ ಒಂದು ಆಡಿಯೋ ಕ್ಲಿಪ್ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು, ಅಷ್ಟಕ್ಕೂ ಆ ವಿಡಿಯೋದಲ್ಲಿ ತೂಗುದೀಪ್ ಶ್ರೀನಿವಾಸ್ ಪತ್ನಿ ಅವರು ದೊಡ್ಮನೆ ಬಗ್ಗೆ ಏನು ಹೇಳಿದರು ಗೊತ್ತಾ.

ಅನೇಕ ಕಲಾವಿದರಿಗೆ ತವರು ಮನೆಯೆಂತೆ ಇದ್ದ ಮನೆ ಅದು, ಎಷ್ಟೋ ಜನ ದೊಡ್ಮನೆ ಪ್ರೊಡಕ್ಷನ್ ಇಂದ ಅನ್ನ ತಿಂದಿದ್ದಾರೆ. ನಮ್ಮ ಯಜಮಾನರಿಗೂ ಸಹ ಸಾಕಷ್ಟು ಅವಕಾಶಗಳು ದೊಡ್ಡ ಮನೆಯಿಂದ ದೊರಕಿವೆ. ಸ್ವತಃ ಡಾಕ್ಟರ್ ರಾಜಕುಮಾರ್ ಅವರೇ ಕೇಳಿ ನಾಲ್ಕೈದು ಸಿನಿಮಾಗಳಲ್ಲಿ ಇವರನ್ನು ಹಾಕಿಸಿಕೊಳ್ಳುತ್ತಿದ್ದರು. ತೂಗುದೀಪ್ ಶ್ರೀನಿವಾಸ್ ತಮ್ಮ ಸಿನಿಮಾದಲ್ಲಿ ಇರಲೇಬೇಕು ಎಂದೇ ರಾಜ್ ಕುಮಾರ್ ಹಠ ಹಿಡಿಯುತ್ತಿದ್ದರು.

ಅದರಿಂದ ವರ್ಷಕ್ಕೆ ನಾಲ್ಕೈದು ಸಿನಿಮಾ ಆದರೂ ಅವರ ಬ್ಯಾನರ್ ನ ಸಿನಿಮಾಗಳು ಸಿಕ್ಕುತ್ತಿದ್ದವು. ಆ ಕಾಲದಲ್ಲಿ ಕಡಿಮೆ ಎಂದರೂ ಒಂದು ಲಕ್ಷವಾದರೂ ಒಂದು ವರ್ಷಕ್ಕೆ ಸಂಭಾವನೆ ಆಗುವಂತ ಅವಕಾಶಗಳು ದೊಡ್ಮನೆಯಿಂದಲೇ ಬರುತ್ತಿತ್ತು ಎಂದಿದ್ದಾರೆ. ಇಂತಹ ಮಾತುಗಳನ್ನು ಆಡಿರುವ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ. ರಾಜ್ ಕುಟುಂಬದ ಮೇಲೆ ಕನ್ನಡಿಗರಿಗೆ ಅಪಾರವಾದ ಅಭಿಮಾನ ಇದೆ ತಾವು ಬೆಳೆದು ತಮ್ಮವರನ್ನು ಬೆಳೆಸುವ ಗುಣ ಹೊಂದಿರುವ ಈ ಕುಟುಂಬವನ್ನು ಬಗ್ಗೆ ಜನ ರಾಜವಂಶ ಎಂದೇ ಕರೆಯುತ್ತಾರೆ. ಕರ್ನಾಟಕದ ಈ ಹೆಸರಾಂತ ಮನೆತನದ ಬಗ್ಗೆ ಮತ್ತು ಅವರ ದೊಡ್ಡ ಗುಣದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಒಂದು ಕೊಟ್ಟು ಒಂದು ಕಿತ್ತುಕೊಂಡ ದೇವರು. ನಾನು ನಗುತ್ತಿರುವುದೇ ಮಗ ರಾಯನ್ ಗಾಗಿ ಎಂದು ಕಣ್ಣಿರಿಟ್ಟ ನಟಿ ಮೇಘನಾ ರಾಜ್.

 

ಮೇಘನಾ ರಾಜ್ ಕನ್ನಡ ಚಲನಚಿತ್ರ ರಂಗ ಕಂಡ ಪ್ರತಿಭಾನ್ವಿತ ನಟಿ. ಮೂಲತಃ ಕಲಾವಿದರ ಕುಟುಂಬದಿಂದ ಬಂದ ಈಕೆ ಆರಿಸಿಕೊಂಡಿದ್ದು ಕೂಡ ಇದೇ ವೃತ್ತಿಯನ್ನೇ. ಪ್ರತಿಭೆ ಜೊತೆ ನಟಿ ಆಗಲು ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿದ್ದ ಇವರು ಸಲೀಸಾಗಿ ನಾಯಕಿ ಪಟ್ಟ ಏರಿದರು. ಕನ್ನಡ ಮಾತ್ರವಲ್ಲದೆ ಮಲಯಾಳಂ ಚಿತ್ರರಂಗದಲ್ಲಿ ಕೂಡ ಬಹಳ ಬೇಡಿಕೆಯಲ್ಲಿರುವ ನಟಿ ದಕ್ಷಿಣ ಭಾರತದ ತಾರೆಯಾಗಿದ್ದಾರೆ.

ಸಿನಿಮಾ ರಂಗವನ್ನು ಹೊರತುಪಡಿಸಿ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೂ ಕೂಡ ಈಕೆ ಸ್ಟ್ರಾಂಗ್ ಮೈಂಡೆಡ್. ಮಹಿಳೆಯಾಗಿ ತನ್ನ ಬದುಕಿನ ದುರಂತವನ್ನು ಸಹಿಸಿಕೊಂಡು ನಗು ಮುಖದಿಂದ ಬಾಳುತ್ತಿರುವ ಇವರು ತನ್ನ ಬಾಳಿನಲ್ಲಿ ವಿಧಿ ಆಡಿದ ಆಟಕ್ಕೆ ಸೆಡ್ಡು ಹೊಡೆದು ಮತ್ತೆ ಮುಗುಳ್ನಗುವ ಚಾಲೆಂಜ್ ತೆಗೆದುಕೊಂಡಿದ್ದಾರೆ.

ಎಲ್ಲರಿಗೂ ಗೊತ್ತಿರುವಂತೆ ಪ್ರೀತಿಸಿ ಕೈ ಹಿಡಿದಿದ್ದ ಚಿರಂಜೀವಿ ಸರ್ಜಾ ಅವರನ್ನು ತಾವು ಗರ್ಭಿಣಿಯಾಗಿದ್ದಾಗ ಕಳೆದುಕೊಳ್ಳಬೇಕಾದ ದುರ್ಗತಿ ಮೇಘನಾರಾಜ್ ಅವರಿಗೆ ಬಂತು. ಅಂದು ಅವರ ಪರಿಸ್ಥಿತಿ ಎಷ್ಟು ಕರುಣಾಜನಕವಾಗಿತ್ತು ಎಂದರೆ ಯಾರು ಸಹ ತಮ್ಮ ಶತ್ರುವಿಗೂ ಅಂತ ಸ್ಥಿತಿ ಬಯಸುವುದಿಲ್ಲ. ಚಿರಂಜೀವಿಯದು ಸಾ.ವಾಗಿದ್ದರೆ ಮೇಘನಾದು ಜೀವಂತ ಸಾ.ವಿನ ಪರಿಸ್ಥಿತಿ.

ಆದರೆ ಕುಟುಂಬದ ಪ್ರೀತಿಯ ಆರೈಕೆಯಿಂದ ಕರುಳ ಕುಡಿಗಾಗಿ ಎಲ್ಲವನ್ನು ಸಹಿಸಿಕೊಂಡು ತನ್ನ ನೋವು ಬಚ್ಚಿಟ್ಟುಕೊಂಡು ನಾರ್ಮಲ್ ಆಗಿರುವಂತೆ ತೋರಿಕೊಂಡೇ ಬದುಕುತ್ತಿದ್ದಾರೆ ಈಕೆ. ಮಗು ಆದ ಮೇಲೂ ಕೂಡ ಮಗುವಿನ ಲಾಲನೆ ಪಾಲನೆ ಪೋಷಣೆ ನೆಪಕ್ಕಾಗಿ ಸಿನಿಮಾ ರಂಗದಿಂದ ದೂರ ಉಳಿದಿದ್ದ ಈಕೆ ಈಗ ಮತ್ತೆ ಕಮ್ ಬ್ಯಾಕ್ ಮಾಡಲು ನಿರ್ಧರಿಸಿದ್ದಾರೆ.

ಒಂದೊಳ್ಳೆ ಸಬ್ಜೆಕ್ಟ್ ಇರುವ ಸಿನಿಮಾ ಜೊತೆ ಗೆಳೆಯರೊಂದಿಗೆ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ ಮೇಘನಾ ರಾಜ್ ಮೇಘನಾ ರಾಜ್ ಮತ್ತು ಚಿರಂಜೀವಿ ಅವರ ಗೆಳೆಯರದ್ದು ಒಂದು ಗುಂಪು ಇತ್ತು. ಅಲ್ಲಿ ಪನ್ನಗ, ಪ್ರಜ್ವಲ್, ರಾಗಿಣಿ ಹೀಗೆ ಸಾಕಷ್ಟು ಮಂದಿ ಇದ್ದರು. ಈಗ ಇವರೆಲ್ಲ ಸೇರಿ ಸಿನಿಮಾ ಒಂದನ್ನು ತರುತ್ತಿದ್ದಾರೆ. ತತ್ಸಮ ತದ್ಭವ ಎನ್ನುವ ಹೆಸರಿನ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.

ಭುಜಂಗ ಸಿನಿಮಾದಲ್ಲಿ ಕೂಡ ಇವರಿಬ್ಬರು ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ತತ್ಸಮ ತದ್ಭವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ನಾಗಭರಣ ಅವರ ಪುತ್ರ ಪನ್ನಗಾಭರಣ. ಈ ಸಿನಿಮಾ ಕುರಿತು ಸಂದರ್ಶನದಲ್ಲಿ ಕಾಣಿಸಿಕೊಂಡ ಮೇಘನಾ ರಾಜ್ ಅವರ ತಮ್ಮ ಮಗನ ಕುರಿತು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನನ್ನ ಮಗ ಒಬ್ಬನನ್ನು ನೋಡಿಕೊಳ್ಳುವ ಜವಾಬ್ದಾರಿ ಇಲ್ಲ ಎಂದರೆ ನೂರು ಸಿನಿಮಾಗಳನ್ನು ಮಾಡಬಹುದು, ಆದರೆ ತಾಯಿಯಾಗುವುದು ಬಹಳ ದೊಡ್ಡ ಜವಾಬ್ದಾರಿ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎನ್ನುವುದು ನನ್ನ ಆಸೆ. ನನ್ನ ಬದುಕಲಿ ಎಲ್ಲಾ ಪರ್ಫೆಕ್ಟ್ ಆಗುತ್ತಿದೆ ಎನ್ನುವಾಗ ವಿಧಿ ಒಂದನ್ನು ಕಿತ್ತುಕೊಂಡು ಮತ್ತೊಂದು ಕೊಟ್ಟಿದ್ದಾನೆ. ನನ್ನ ತಂದೆ ತಾಯಿಗೂ ಕಷ್ಟ ಇತ್ತು ಆದರೂ ಅವರು ನನ್ನ ಮುಂದೆ ತೋರಿಸಿಕೊಳ್ಳದೇ ಸಾಕಿದರು.

ಅದನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡು ನನ್ನ ಮಗನಿಗಾಗಿ ನಗುವ ಪ್ರಯತ್ನ ಮಾಡುತ್ತಿದ್ದೇನೆ. ಮಗ ರಾಯನ್ ಸಿನಿಮಾಲೋಕಕ್ಕೆ ಬರುತ್ತಾನಾ ಎಂದು ಈಗಲೇ ಎಲ್ಲರೂ ಕೇಳುತ್ತಿದ್ದಾರೆ. ಅವನ ಬ್ಲಡ್ ಅಲ್ಲಿಯೇ ಕಲೆ ಎನ್ನುವುದು ಇದೆ. ಅದಕ್ಕೂ ಮೊದಲು ಅವನು ಎಬಿಸಿಡಿ ಕಲಿಯಲಿ ಅವನಿಗೆ ಡೈಲಾಗ್ ಹೇಳುವ ರೀತಿ ಆಗಲಿ ಮುಂದೆ ಅವನ ಇಚ್ಛೆ ಎಂದಿದ್ದಾರೆ. ಇದರ ಜೊತೆ ಮಗ ಮಾಡುವ ತುಂಟಾಟಗಳ ಬಗ್ಗೆ ಕೂಡ ಮಾತನಾಡಿದ್ದಾರೆ.