Home Blog Page 230

ವೃದ್ಧಾಶ್ರಮದಲ್ಲೊಂದು ಲವ್ ಸ್ಟೋರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 75 ವರ್ಷದ ವರ ಹಾಗೂ 70 ವರ್ಷದ ವಧು.

ಪ್ರೀತಿ ಹುಟ್ಟುವುದಕ್ಕೆ ವಯಸ್ಸು ಒಂದು ಲೆಕ್ಕವೇ ಅಲ್ಲ. ಆಡುವ ವಯಸಲಿ ಪ್ರೀತಿ ಮಾಡಿ ಅದನ್ನು ಕಡೆತನಕ ಉಳಿಸಿಕೊಂಡವರು ಇದ್ದಾರೆ. ಹಾಗೆ ಬದುಕಿನ ಎಲ್ಲಾ ಆಯಾಮಗಳನ್ನು ಕಂಡು ಜೀವನವೇ ಮುಗಿದು ಹೋಗಿದೆ ಎಂದುಕೊಂಡವರು ಕೂಡ ಜೋಡಿಯಾಗಿ ಹೊಸ ಜೀವನ ಕಂಡ ಉದಾಹರಣೆಯು ಇದೆ. ಇಂತಹದೇ ಒಂದು ಮತ್ತೊಂದು ಉದಾಹರಣೆ ಸೃಷ್ಟಿಸಿದ್ದಾರೆ ಮಹಾರಾಷ್ಟ್ರದ ಈ ಜೋಡಿ. ಇದುವರೆಗೂ ಸಾಕಷ್ಟು ರೀತಿಯ ಮದುವೆಗಳ ಬಗ್ಗೆ ಕೇಳಿದ್ದೇವೆ. ಆದರೆ ಈ ಮದುವೆ ಇಷ್ಟು ದಿನ ಕೇಳಿದ ಎಲ್ಲಾ ಮದುವೆಗಳಿಗಿಂತಲೂ ಕೂಡ ಬಹಳ ವಿಶೇಷ ಎನಿಸಿದೆ. ಯಾಕೆಂದರೆ ಇದು ವೃದ್ಧಾಶ್ರಮದಲ್ಲಿ ನಡೆದ ಮದುವೆ ಆಗಿದೆ.

ಮಹಾರಾಷ್ಟ್ರದ ವೃದ್ಧಾಶ್ರಮ ಒಂದರಲ್ಲಿ 75ರ ವರನ ಜೊತೆ 70 ವರ್ಷದ ವಧು ಮದುವೆ ಆಗಿದ್ದಾರೆ. ಈ ಮದುವೆಗೆ ಸಂಬಂಧಪಟ್ಟ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಈಗ ದೇಶದಾದ್ಯಂತ ಇದೇ ಸುದ್ದಿ. ಪ್ರೀತಿ ಹುಟ್ಟುವುದಕ್ಕೆ ಎರಡು ಶುದ್ಧ ಮನಸ್ಸುಗಳು ಸಾಕು, ಇನ್ಯಾವುದರ ಹಂಗೇ ಇಲ್ಲ. ಪ್ರೀತಿ ಬಯಸುವುದು ಕೇವಲ ಸಾನಿಧ್ಯ ಮತ್ತು ಪ್ರಾಮಾಣಿಕ ಭಾವನೆ ಅಷ್ಟೇ. ಇಷ್ಟು ಇದ್ದರೆ ಅದು ಯಾವ ವಯಸ್ಸಿನಲ್ಲಿ ಆಗಲಿ, ಯಾವ ಪರಿಸ್ಥಿತಿಯಲ್ಲಿ ಆಗಲಿ ಖಂಡಿತವಾಗಿಯೂ ಪ್ರೀತಿ ಮೂಡುತ್ತದೆ.

ಈಗ ವೃದ್ದಾಶ್ರಮದಲ್ಲಿ ಅಂತಹ ಪ್ರೀತಿ ಇಬ್ಬರು ವೃದ್ಧರ ನಡುವೆ ಮೂಡಿದ. 75 ವರ್ಷದ ಒಬ್ಬ ವೃದ್ಧ ಮತ್ತು 70 ವೃದ್ಧೆ ಇಬ್ಬರು ಕೂಡ ಬಹಳ ದಿನಗಳಿಂದ ಬದುಕಿನ ಸುಖ ದುಃಖ ಎಲ್ಲವನ್ನು ಹಂಚಿಕೊಳ್ಳುತ್ತಾ ಆತ್ಮೀಯರಾಗಿದ್ದರು. ನಂತರ ಅದು ಸ್ನೇಹವಾಗಿ ಈಗ ಸ್ನೇಹ ಪ್ರೀತಿಯಾಗಿ ಬದಲಾಗಿದ್ದು ಮಾತ್ರ ಅಲ್ಲದೆ ದಾಂಪತ್ಯಕ್ಕೆ ಕೂಡ ಕಾಲಿಟ್ಟು ಒಟ್ಟಿಗೆ ಬದುಕುವ ನಿರ್ಧಾರ ತನಕ ತಂದಿದೆ ಮೊದಲಿಗೆ ತಮ್ಮ ಇಚ್ಛೆಯನ್ನು ವೃದ್ದಾಶ್ರಮದಲ್ಲಿ ಇವರ ಜೊತೆ ಇದ್ದ ಇತರರಿಗೂ ಸಹ ತಿಳಿಸಿದ್ದಾರೆ.

ಅವರೆಲ್ಲರೂ ಇವರಿಬ್ಬರ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ ಮತ್ತು ವೃದ್ದಾಶ್ರಮ ನಡೆಸುವಂತಹ ಸಿಬ್ಬಂದಿ ಕೂಡ ಇದಕ್ಕೆ ಕೈಜೋಡಿಸಿದ್ದು ಸಕಲ ಸಿದ್ಧತೆ ಜೊತೆ ಇಬ್ಬರಿಗೂ ಖುಷಿ ಆಗುವ ರೀತಿ ಅಚ್ಚುಕಟ್ಟಾಗಿ ಮದುವೆ ಕಾರ್ಯ ಮಾಡಿ ಮುಗಿಸಿದ್ದಾರೆ. ಇನ್ನು ಮುಂದೆ ಒಬ್ಬರಿಗೊಬ್ಬರು ಕೈ ಹಿಡಿದು ಇರುವ ಕೆಲವೇ ದಿನಗಳನ್ನು ಸಂತೋಷವಾಗಿ ಕಳೆಯಲಿ ಎಂದು ಇವರ ಆಸೆಗೆ ನೀರಿರೆದಿದ್ದಾರೆ. ಒಂದು ರೀತಿಯಲ್ಲಿ ಇದು ನಾವೆಲ್ಲಾ ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಆಡಿದ್ದ ಮಕ್ಕಳ ಮದುವೆ ಆಟವನ್ನು ನೆನಪಿಸಿದರೂ ಕೂಡ ಒಂದು ರೀತಿಯಲ್ಲಿ ಈ ವಿಷಯ ಗ್ರೇಟ್ ಎನಿಸುತ್ತದೆ.

ಇನ್ನು ಅವರಿಗೆ ಉಳಿದಿರುವುದು ಬೆರಳೆಣಿಕೆ ಅಷ್ಟು ದಿನಗಳು ಮಾತ್ರ. ಈಗಾಗಲೇ ಒಂದು ಬೃಹತ್ ಬದುಕಿನ ಘಟ್ಟವನ್ನು ಅವರು ಮೀರಿದ್ದಾರೆ, ಇನ್ನೇನು ಸಾವಿನೂರ ಪ್ರಯಾಣದಲ್ಲಿ ಸಮೀಪಕ್ಕೆ ಇರುವ ಇವರು ಈ ನಿರ್ಧಾರಕ್ಕೆ ಬಂದಿರುವುದರಿಂದ ಯಾರಿಗೂ ಹೆಚ್ಚಿನ ಆಕ್ಷೇಪವಿಲ್ಲ. ಈ ವಿಷಯ ವೈರಲ್ ಆಗಿರುವುದು ಒಂದು ರೀತಿ ಒಳ್ಳೆಯ ಸುದ್ದಿ ಆಗಿದೆ. ಯಾಕೆಂದರೆ ಇವರನ್ನು ನೋಡಿ ಇನ್ನಷ್ಟು ಜನ ಬುದ್ಧಿ ಕಲಿಯಬೇಕಾಗಿದೆ.

ಯಾವುದೋ ಒಂದು ಕ್ಷುಲ್ಲಕ ನೆಪ ಇಟ್ಟುಕೊಂಡು ಪ್ರೀತಿಯನ್ನು ಮರಿದುಕೊಳ್ಳುವವರು, ದೂರ ಮಾಡಿಕೊಳ್ಳುವರು ಬದುಕಿನಲ್ಲಿ ಎಲ್ಲಕ್ಕಿಂತ ಹೆಚ್ಚಿಗೆ ಭರವಸೆ ಕೊಡುವುದು ಪ್ರೀತಿ ಎನ್ನುವುದನ್ನು ಅರ್ಥೈಸುವುದಕ್ಕೆ ಈ ಮದುವೆ ಉದಾಹರಣೆ ಆಗಿದೆ ಎಂದೇ ಹೇಳಬಹುದು. ಇಷ್ಟೆಲ್ಲಾ ತಿಳಿದ ಮೇಲೆ ಈ ಮದುವೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಜ್ವರ ಬಂದಿದೆ ಅಮ್ಮ ಮಲಗಿದ್ದಾಳೆ ಎಂದು ಶ-ವ-ದ ಜೊತೆ 2 ದಿನ ಕಳೆದ ಮಗ. ಕೊನೆಗೆ ಅಮ್ಮ ಸ-ತ್ತಿ-ದ್ದಾ-ಳೆ ಎಂದು ತಿಳಿದಾಗ ಮಗನ ರೋದನೆ ಮುಗಿಲು ಮುಟ್ಟಿತು.

 

ಬೆಂಗಳೂರಲ್ಲಿ ಇಂತಹದೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ಇಡೀ ಮನುಕುಲವೇ ಈ ಘಟನೆ ಬಗ್ಗೆ ಕೇಳಿದರೆ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ಅಷ್ಟಕ್ಕೂ ಅಂತ ಏನಾಯ್ತು ಎಂದರೆ ಬೆಂಗಳೂರಿನಲ್ಲಿ ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರುವ ಗಂಗಾ ನಗರದ ಐದನೇ ಕ್ರಾಸ್ ಅಲ್ಲಿ ಇಂದು ಜನಸಂದಣಿ, ಅಲ್ಲದೆ ಬಂದಿದ್ದವರೆಲ್ಲ ಇವರ ಅಕ್ಕ ಪಕ್ಕ ಮನೆಯವರಾದರೂ ಎಲ್ಲರ ಕಣ್ಣು ಕಣ್ಣೀರಿನಿಂದ ಒದ್ದೆ ಆಗಿತ್ತು.

ಆದರೆ ಆ ಕಣ್ಣೀರು ಅಲ್ಲಿ ಸ.ತ್ತು ಮಲಗಿದ್ದ ಆ ತಾಯಿಯ ನೋಡಿಯೋ ಅಥವಾ ತಾಯಿ ಸ.ತ್ತಿ.ದ್ದಾ.ಳೆ ಎಂದು ಗೊತ್ತಿಲ್ಲದೆ ಎರಡು ದಿನ ತಾಯಿ ಶ.ವ.ದ ಜೊತೆ ಕಾಲ ಕಳೆದ ಮಗನ ಮುಗ್ಧತೆ ನೋಡಿಯೋ ಗೊತ್ತಿಲ್ಲ. ಒಟ್ಟಿನಲ್ಲಿ ಇಡಿ ಏರಿಯಾಗೆ ಏರಿಯಾವೇ ಇಂದು ಈ ಘಟನೆಯಿಂದ ಮಹಾ ಮೌನವಾಗಿದೆ. ಈ ಬದುಕು ಅನ್ನೋದು ಹೀಗೆ ಇಲ್ಲಿ ಎಲ್ಲವೂ ಇದ್ದರೆ ಮಾತ್ರ ಚೆನ್ನ. ಆದರೂ ಒಂದು ಪಕ್ಷ ಕಡು ಕಷ್ಟ ಇದ್ದರೂ ಕೂಡು ಕುಟುಂಬ ತುಂಬಿಕೊಂಡಂತೆ, ಎಲ್ಲರೂ ಕೈಗೂಡಿಸಿದರೆ ಎಂತಹ ಕಷ್ಟದಲ್ಲೂ ಕಷ್ಟ ಹಂಚಿಕೊಂಡು ನೆಮ್ಮದಿಯಿಂದ ಬದುಕಬಹುದು.

ಆದರೆ ಕುಟುಂಬವೇ ಇಲ್ಲ ಎಂದರೆ ಅದರಲ್ಲೂ ಹೆತ್ತ ತಂದೆ ತಾಯಿಯನ್ನು ಕಳೆದುಕೊಂಡರೆ ಆ ಬಡಮಕ್ಕಳ ಬದುಕು ನರಕವೇ ಸರಿ. ಮೊದಲೇ ಈ ಕಾಲದಲ್ಲಿ ಕಷ್ಟದಲ್ಲಿರುವವರನ್ನು ಕಂಡರೆ ಯಾರು ಕರಗುವುದಿಲ್ಲ, ಬಡವರಾಗಿ ಬಿಟ್ಟಳಂತೂ ಬಂಧುಗಳು ಹತ್ತಿರ ಸುಳಿಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡು ಬಿಟ್ಟರೆ ಯಾರು ಸೇರಿ ಬದುಕಬೇಕು, ಯಾರು ಅವರಿಗೆ ಹಿತವರು.

ಈ ದುಃಖಕ್ಕೋ ಅಥವಾ ಭಯಕ್ಕೋ ಇಲ್ಲೊಬ್ಬ ಮಗ ತಾಯಿ ಸತ್ತಿರುವ ಸುದ್ದಿಯನ್ನು ಎರಡು ದಿನಗಳವರೆಗೆ ಯಾರಿಗೂ ಹೇಳಿಲ್ಲ. ಬೆಂಗಳೂರಿನ ಗಂಗಾನಗರದ ನಿವಾಸಿ ಅಣ್ಣಮ್ಮ ಎನ್ನುವವರು ಇಳಂಗೋವನ್ ಎನ್ನುವವರನ್ನು ಮದುವೆಯಾಗಿ ಹೆಂಗೋ ಇದ್ದಷ್ಟಕ್ಕೆ ಚಂದವಾಗಿ ಬೆಂಗಳೂರಿನಲ್ಲಿ ಸಣ್ಣದೊಂದು ಶೀಟ್ ಮನೆಯಲ್ಲಿ ವಾಸಿಸುತ್ತಿದ್ದರು. ಇವರಿಗೆ 14 ವರ್ಷದ ಸೂರ್ಯ ಎನ್ನುವ ಹೆಸರಿನ ಮಗ ಕೂಡ ಇದ್ದ ಇದ್ದಕ್ಕಿದ್ದಂತೆ ಎಂಟು ತಿಂಗಳ ಹಿಂದೆ ಇಳಂಗೋವನ್ ಅವರು ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಮೃ.ತ ಪಟ್ಟಿದ್ದಾನೆ.

ಅದಾದ ಬಳಿಕ ತಾಯಿ ಹಾಗೂ ಮಗ ಹೇಗೋ ಒಬ್ಬರಿಗೊಬ್ಬರ ಜೊತೆಯಾಗಿ ಬದುಕುವ ನಿರ್ಧಾರ ಮಾಡಿದ್ದರು. ಮತ್ತೆ ವಿಧಿ ಅವರ ಬಾಳಲ್ಲಿ ಆಟ ಆಡಿದ್ದು ದೊಡ್ಡ ಬಿರುಗಾಳಿಯನ್ನು ಎಬ್ಬಿಸಿತ್ತು. ಅದೇನೆಂದರೆ, ದುಡಿದು ಹಾಕುತ್ತಿದ್ದ ತಾಯಿಗೂ ಕೂಡ ಸ್ಟ್ರೋಕ್ ಅಟ್ಯಾಕ್ ಆಗಿ ಮಾತನಾಡಲಾಗದ ಪರಿಸ್ಥಿತಿ ಉಂಟಾಯಿತು. ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದ ಅಣ್ಣಮ್ಮ ಅವರಿಗೆ ಮಗ ಸೂರ್ಯನೇ ಅಡುಗೆ ಮಾಡಿ ಬಡಿಸುತ್ತಿದ್ದ. ಹೇಗೋ ತಂದೆ ಸ್ನೇಹಿತರು, ಅಕ್ಕಪಕ್ಕದವರ ನೆರವೇರಿನಿಂದ ಇಂದಲ್ಲಾ ನಾಳೆ ತಾಯಿ ಹುಷಾರಾಗುತ್ತಾರೆ ಎಂದು ನಂಬಿಕೆಯಿಂದ ಸೂರ್ಯ ಬದುಕುತ್ತಿದ್ದ.

ಆದರೆ ಫೆಬ್ರವರಿ 26ರಂದು ತಾಯಿಯು ಸಹ ಮಲಗಿದ್ದ ಜಾಗದಲ್ಲೇ ಮೃ.ತ ಪಟ್ಟಿದ್ದಾರೆ. ಆದರೆ ಮಗನಿಗೆ ಮಾತ್ರ ಆ ವಿಷಯ ಎರಡು ದಿನಗಳ ಬಳಿಕ ಅರಿವಾಗಿದೆ. ಅಮ್ಮನಿಗೆ ಹುಷಾರಿಲ್ಲ ಅದಕ್ಕೆ ಮಲಗಿದ್ದಾಳೆ ಎಂದುಕೊಂಡೇ ಕಾಲ ಕಳೆದ ಮಗ ಎರಡು ದಿನ ಆದರೂ ಅಮ್ಮ ಅಲುಗಾಡದೆ ಇದ್ದದ್ದು ಸದ್ದು ಮಾಡದೆ ಇದ್ದದ್ದು ಕಂಡು ವಾಸನೆ ಬರುತ್ತಿದೆ ಎಂದು ಅಕ್ಕ ಪಕ್ಕದವರಿಗೆ ವಿಷಯ ತಿಳಿಸಿದ್ದಾನೆ. ತಂದೆ ಸ್ನೇಹಿತರಿಗೂ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾನೆ. ಆನಂತರ ಅಣ್ಣಮ್ಮ ಅವರು ಮೃ.ತ ಪಟ್ಟಿರುವುದು ಬೆಳಕಿಗೆ ಬಂದಿದೆ. ಇಲ್ಲಿ ಸೂರ್ಯ ಅಮ್ಮ ಹುಷಾರಾಗುತ್ತಾಳೆ ಎಂದು ನಂಬಿಕೆಯಿಂದ ಎರಡು ದಿನ ಶ.ವ.ದ ಜೊತೆ ಕಳೆದ ಮನಸ್ಥಿತಿ ಕಂಡು ಎಲ್ಲರೂ ಕಣ್ಣೀರಾಕಿದ್ದಾರೆ.

ಎತ್ತಿನ ಗಾಡಿಗೆ 1000 ರೂಪಾಯಿಗಳ ದಂಡ ಹಾಕಿದ ದುರಹಂಕಾರಿ ಪೋಲೀಸ್ ಆಫೀಸರ್ ಗೆ ಈ ರೈತ ಹೇಗೆ ಬುದ್ಧಿ ಕಲಿಸಿದಾ ಅಂತ ನೋಡಿದ್ರೆ ನೀವು ಕೂಡ ಶಬಾಷ್ ಅಂತಿರಾ.!

 

ಪ್ರತಿದಿನ ನಾವು ರಸ್ತೆಯಲ್ಲಿ ಗಾಡಿಗಳಲ್ಲಿ ಓಡಾಡುವಾಗ ಟ್ರಾಫಿಕ್ ಪೋಲೀಸರು ಹಲವಾರು ಗಾಡಿಗಳನ್ನು ಹಿಡಿಯುವುದು ದಂಡ ಕಟ್ಟಿಸುವುದು ನೂರು ಇನ್ನೂರು ರೂಪಾಯಿಗಳ ಲಂಚ ಪಡೆಯುವುದನ್ನು ನಾವು ನೋಡಿದ್ದೇವೆ. ಕೆಲವು ಬಾರಿ ನಾವು ಎಲ್ಮೆಟ್ ಧರಿಸದಿದ್ದಾಗ ಗಾಡಿಯನ್ನು ಇಡಿದು ಡಾಕ್ಯುಮೆಂಟ್ ಪರಿಶೀಲಿಸಿ ನಮಗೂ ದಂಡ ವಿಧಿಸಿರುತ್ತಾರೆ. ಆದರೆ ಇಲ್ಲಿ ಒಂದು ಎತ್ತಿನಗಾಡಿಗೆ ಒಬ್ಬ ಪೋಲೀಸ್ ಆಫೀಸರ್ ಸಾವಿರ ರೂಪಾಯಿ ದಂಡ ಹಾಕಿದ್ದಾನೆ. ಅದು ಯಾಕೆ ? ಅದಕ್ಕೆ ರೈತ ಪೊಲೀಸ್ ಆಫೀಸರ್ ಗೆ ಹೇಗೆ ಬುದ್ದಿ ಕಲಿಸಿದ್ದಾನೆ ಎಂಬುದನ್ನು ತಿಳಿಯೋಣ.

ನಮ್ಮ ದೇಶದಲ್ಲಿ ಕಳೆದ 2 – 3 ವರ್ಷಗಳಲ್ಲಿ ದಂಡ ವಿಧಿಸುವುದು ತುಂಬಾ ಕಡಿಮೆ ಇತ್ತು.‌ ಆದರೆ ಮೋದಿ ಸರ್ಕಾರವು ಬಂದಾಗ ಅವರು ಜಾರಿಗೊಳಿಸಿದ ಕೆಲವು ಹೊಸ ಕಾನೂನುಗಳಿಂದ 5 ರಿಂದ 10 ಪಟ್ಟರಷ್ಟು ಹೆಚ್ಚು ದಂಡ ವಿಧಿಸಲಾಗುತ್ತಿದ್ದು, ಇದನ್ನೇ ಬಂಡವಾಳವಾಗಿ ಇಟ್ಟುಕೊಂಡು ಹಲವು ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ಬದಲು ಲಂಚ ತೆಗೆದುಕೊಳ್ಳುತ್ತಿರುವುದು ತಿಳಿದ ಸಂಗತಿ ಆಗಿದೆ. ಆದರೆ ಇಲ್ಲಿ ಒಬ್ಬ ದುರಹಂಕಾರಿ ಪೋಲೀಸ್ ಆಫೀಸರ್ ಎತ್ತಿನ ಗಾಡಿಗೆ ದಂಡ ವಿಧಿಸಿದ್ದಾನೆ.

ಇದು ಉತ್ತರಖಾಂಡ ರಾಜ್ಯದ ದೆಹರಾದೂನ್‌ ನಲ್ಲಿ ನಡೆದ ಒಂದು ಘಟನೆ. ಇಲ್ಲಿನ ಸುದೀರ್ ಪಾಂಡೆ ಎಂಬ ರೈತ ತನ್ನ ಜಮೀನಿನಲ್ಲಿ ಬೆಳೆದ ತರಕಾರಿಗಳನ್ನು ಮಾರಲು ಮಾರುಕಟ್ಟೆಗೆ ಹೋಗಿದ್ದ ಆ ಸಮಯದಲ್ಲಿ ತನ್ನ ಗಾಡಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಅಲ್ಲಿಗೆ ಬಂದ ಟ್ರಾಫಿಕ್ ಪೋಲೀಸರು ಎತ್ತುಗಳನ್ನು ನೋಡಿದ ಮತ್ತು ಟ್ರಾಫಿಕ್ ಜಾಮ್ ಆಗಿರುವುದನ್ನು ನೋಡಿ ಇನ್ಸ್ಪೆಕ್ಟರ್ ಪಂಕಜ್ ಅವರು ಸಾವಿರಾರು ರೂಪಾಯಿ ದಂಡ ವಿಧಿಸಿ ಚಲನ್ ಅನ್ನು ಹಾಕಿದರು.

ಅಲ್ಲಿಗೆ ಬಂದ ಆ ರೈತನಿಗೆ ಪೊಲೀಸರು ದಂಡ ಕಟ್ಟಿ ನಿನ್ನ ಎತ್ತಿನಗಾಡಿಯನ್ನು ಬಿಡಿಸಿಕೊಂಡು ಹೋಗು ಎಂದು ಗದರಿಸುತ್ತಾರೆ. ಆಗ ಬುದ್ದಿವಂತಿಕೆ ಇಂದ ಉತ್ತರಿಸಿ‌ ಸರ್ ನಾನು ಈ ದಂಡವನ್ನು ಕಟ್ಟುತ್ತೇನೆ ಆದರೆ ಈ ದಂಡವನ್ನು ಯಾವ ಕಾನೂನಿನ ಅಡಿಯಲ್ಲಿ ಮತ್ತು ಯಾವ ತಪ್ಪಿಗಾಗಿ ವಿಧಿಸಿದ್ದೀರಿ ಎಂದು ತಿಳಿಸುತ್ತೀರಾ ಎಂದು ಕೇಳಿದ. ಆಗ ಪೋಲೀಸ್ ಆಫೀಸರ್ ಸೆಕ್ಷನ್ 81 ಮೋಟರ್ ವಾಹನ ಕಾಯ್ದೆಯ ಅಡಿ ಮತ್ತು No Parking ಗಾಗಿ ದಂಡ ಹಾಕಿದ್ದೇನೆ ಎಂದು ಹೇಳುತ್ತಾರೆ.

ಆಗ ರೈತ ಬಿಲ್ ನಲ್ಲಿ ಗಾಡಿ ನಂಬರ್ ಏನಂತ ಹಾಕಿದ್ದೀರಿ ಸರ್ ಎಂದ, ಅದಕ್ಕೆ ಪೋಲೀಸರು ಗಾಡಿ ನಂಬರ್ ಯಾಕೆ ಬೇಕು? ದಂಡ ಕಟ್ಟಿ ಹೋಗು ಎಂದು ಗದರಿಸಿದರು. ಆಗ ರೈತ ಗಾಡಿ ನಂಬರ್ ಹಾಕದೆ ದಂಡ ಹೇಗೆ ಹಾಕುತ್ತೀರಾ ಸರ್, ನನ್ನದು ಎತ್ತಿನಗಾಡಿ ಯಾವುದೇ ನೋಂದಣಿ ಮಾಡಿಸಿರುವುದಿಲ್ಲ. ಅಲ್ಲದೆ ಅವು ಪ್ರಾಣಿಗಳು ಗಾಡಿ ಅಲ್ಲ, ಮೋಟಾರ್ ವಾಹನಗಳ ಕಾಯ್ದೆ ಕೇವಲ ಮೋಟಾರ್ ಗಾಡಿಗಳಿಗೆ ಮಾತ್ರ ಸರ್ ಎಂದು ಬುದ್ಧಿವಂತಿಕೆ ಇಂದ ಹೇಳಿದ.

ಇದನ್ನು ಕೇಳಿದ ಟ್ರಾಫಿಕ್ ಪೋಲೀಸ್ ಏನನ್ನು ಮಾತನಾಡದೇ ದಂಗಾಗಿ ಹೋದ ಮತ್ತು ಎತ್ತಿನಗಾಡಿಯನ್ನು ಬಿಟ್ಟು ಕಳುಹಿಸಿದ. ಇದನ್ನು ನೋಡಿದ ಅಲ್ಲಿ ನೆರೆದಿದ್ದ ದಾರಿ ಹೊಕ್ಕನೊಬ್ಬ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಇದನ್ನು ವೀಕ್ಷಿಸಿದ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ವಿಚಾರವನ್ನು ಇನ್ನಷ್ಟು ಜನರಿಗೆ ತಲುಪಿಸಿ ಇಂತಹ ಅಧಿಕಾರಿಗಳು ಇನ್ನದರೂ ಬುದ್ದಿ ಕಲಿಯಲಿ.

ಸಾಕು ನಾಯಿ ನಂಬಿ ಮಗುನ ಮನೆಯಲ್ಲಿ ಬಿಟ್ಟು ಹೊರಗೆ ಹೋದ ದಂಪತಿಗಳು ಮನೆಗೆ ವಾಪಸ್ ಬಂದು ನೋಡಿ ಬೆಚ್ಚಿ ಬಿದ್ದರು.! ನಾಯಿ ಮಗುಗೆ ಮಾಡಿದ್ದೇನು ಗೊತ್ತಾ.?

 

ಮಹಾರಾಷ್ಟ್ರ ರಾಜ್ಯದ ಒಂದು ಸಣ್ಣ ಹಳ್ಳಿಯಲ್ಲಿ ಆಶಾ ಮತ್ತು ಅನಿಲ್ ಎಂಬ ದಂಪತಿಗಳು ವಾಸಿಸುತ್ತಿದ್ದರು. ಇವರಿಬ್ಬರು ತುಂಬಾ ವರ್ಷಗಳ ಕಾಲ ಪ್ರೀತಿಸಿ ಆನಂತರ ಮದುವೆ ಮಾಡಿಕೊಂಡಿದ್ದರು. ದುರಾದೃಷ್ಟ ಎಂಬಂತೆ ಆಶಾ ಮತ್ತು ಅನಿಲ್ ಮದುವೆಯಾಗಿ 5 ವರ್ಷಗಳಾದರೂ ಮಕ್ಕಳಾಗಿರಲಿಲ್ಲ ಅದಕ್ಕಾಗಿ ತುಂಬಾ ದುಃಖಿತರಾಗಿ ಇವರುಗಳು ಹಲವಾರು ಆಸ್ಪತ್ರೆಗಳಿಗೆ ಹೋಗಿದ್ದು ಪರೀಕ್ಷೆ ಮಾಡಿಸದ ಡಾಕ್ಟರ್ ಗಳು ಇಲ್ಲ. ಎಷ್ಟೇ ಪ್ರಯತ್ನ ಪಟ್ಟರು ಮಗು ಆಗದಿದ್ದಾಗ ಕೊನೆಯದಾಗಿ ಯಾವುದಾದರೂ ಸಾಕು ಪ್ರಾಣಿಯನ್ನಾದರೂ ಮಗುವಿನ ರೂಪದಲ್ಲಿ ಸಾಕೋಣ ಎಂದು ನಿರ್ಧರಿಸಿ ಒಂದು ನಾಯಿ ಮರಿಯನ್ನು ತಮ್ಮ ಮನೆಗೆ ತಂದು ಸಾಕಲು ಪ್ರಾರಂಭಿಸಿದರು.

ಇವರಿಬ್ಬರು ಈ ನಾಯಿಮರಿಯನ್ನು ಮಗುವಂತೆ‌ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಈ ನಾಯಿ ಮರಿಯೂ ಕೂಡ ಆಶಾ ಮತ್ತು ಅನಿಲ್ ದಂಪತಿಗಳನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದು ಒಂದು ಕ್ಷಣವೂ ಅವರಿಬ್ಬರನ್ನು ಬಿಟ್ಟು ಇರುತ್ತಿರಲಿಲ್ಲ ಹೀಗೆ ದಿನಗಳು ಕಳೆದು ಏಳು ವರ್ಷಗಳು ಕಳೆದು ಸಣ್ಣ ನಾಯಿಮರಿಯೂ ದೈತ್ಯ ನಾಯಿಯಾಗಿ ಬೆಳೆದಿತ್ತು. ನಂತರ 12 ವರ್ಷಗಳ ಬಳಿಕ ದೇವರ ದಯೆಯಿಂದ ಆಶಾ ಗರ್ಭಿಣಿಯಾಗಿ ಒಂದು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ.

12 ವರ್ಷಗಳ ನಂತರ ತಾನು ತಂದೆಯಾದೆ ಇಂದು ಅನಿಲ್ ಬಹಳ ಸಂತೋಷ ಪಡುತ್ತಾನೆ ತಮಗೆ ಗಂಡು ಮಗು ಜನಿಸಿದ್ದರಿಂದ ಆಶಾ ಮತ್ತು ಅನಿಲ್ ಗೆ ನಾಯಿ ಮೇಲೆ ಇದ್ದ ಪ್ರೀತಿ ಮತ್ತು ವಿಶ್ವಾಸ ದಿನೇ ದಿನೇ ಕಡಿಮೆಯಾಗುತ್ತಾ ಹೋಗುತ್ತದೆ ಇದನ್ನು ನೋಡಿದ ನಾಯಿಗೆ ಸ್ವಲ್ಪ ಹಸುಯೆ ಉಂಟಾಗುತ್ತದೆ ಗಂಡು ಮಗು ಹುಟ್ಟುವ ಮೊದಲು ಈ ದಂಪತಿಗಳು ಯಾವಾಗಲೂ ನಾಯಿಯ ಜೊತೆ ಕಾಲ‌ ಕಳೆಯುತ್ತಾ ಇರುತ್ತಿದ್ದರು ಊಟ ಮಾಡುತ್ತಿದ್ದರು.

ಆದರೆ ಮಗು ಜನಿಸಿದ ನಂತರ ನಾಯಿಯನ್ನು ದೂರ ಮಾಡಿಬಿಟ್ಟರು ಇದು ನಾಯಿಗೆ ತುಂಬಾ ಬೇಸರ ತರಿಸಿತು. ಎಷ್ಟೇ ಬೇಜಾರು ಕೋಪ ಇದ್ದರೂ ಕೂಡ ಈ ನಾಯಿಯು ಆಶಾ ಮತ್ತು ಅನಿಲ್ ಮೇಲೆ ಇಟ್ಟಿದಂತಹ ಪ್ರೀತಿ ಮತ್ತು ವಿಶ್ವಾಸ ಸ್ವಲ್ಪವೂ ಕಡಿಮೆ ಆಗಿರಲಿಲ್ಲ. ಮನೆಗೆ ಯಾರಾದರೂ ಕಳ್ಳರು ಬಂದರೆ ಅವರನ್ನು ಬೊಗಳಿ ಕಚ್ಚಿ ಓಡಿಸಿ ದಂಪತಿಗಳನ್ನು ಕಾಪಾಡುತ್ತಿತ್ತು ಅಲ್ಲದೆ ಅಪರಿಚಿತರನ್ನು ಮನೆಯೊಳಗೆ ಹೋಗಲು ಬಿಡುತ್ತಿರಲಿಲ್ಲ ಹೀಗೆ ದಿನಗಳು ಕಳೆಯಿತು.

ಒಂದು ದಿನ ತಮ್ಮ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಆ ದಂಪತಿಗಳು ಮಹಡಿ ಮೇಲೆ ಹೋಗಿ ವಾಕ್ ಮಾಡುತ್ತಾ ಮಾತನಾಡುತ್ತಿದ್ದರು ಒಂದು ಗಂಟೆಯ ನಂತರ ಮನೆ ಒಳಗೆ ಇದ್ದ ನಾಯಿಯು ವಿಚಿತ್ರವಾಗಿ ಜೋರಾಗಿ ಬೊಗಳಲು ಪ್ರಾರಂಭಿಸುತ್ತದೆ ಅದನ್ನು ಗಮನಿಸಿದ ದಂಪತಿಗಳು ಇದು ಯಾವಾಗಲೂ ಹೀಗೆ ಎಂದು ನೆಗ್ಲೆಟ್ ಮಾಡುತ್ತಾರೆ ಅದಾದ ಸ್ವಲ್ಪ ಹೊತ್ತಿನ ಬಳಿಕ ತಮ್ಮ ಮಗು ಅಳುವ ಶಬ್ದ ಕೇಳುತ್ತದೆ ಅದನ್ನು ಗಮನಿಸಿ ಮಹಡಿ ಮೇಲಿಂದ ಬಂದ ದಂಪತಿಗಳು ಬಾಗಿಲ ಬಳಿ ನಿಂತಿದ್ದ ನಾಯಿಯನ್ನು ನೋಡಿದರು.

ನಾಯಿಯ ಬಾಯಿಯಿಂದ ರಕ್ತ ಸುರಿಯುತ್ತಿತ್ತು ಇದನ್ನು ನೋಡಿದ ದಂಪತಿಗಳು ಈ ನಾಯಿಯು ನಮ್ಮ ಮಗುವನ್ನು ವಿಚಿತ್ರವಾಗಿ ಕಚ್ಚಿ ಸಾ.ಯಿ.ಸಿ ಬಿಟ್ಟಿದೆ ಎಂದು ಭಾವಿಸಿ ಯೋಚಿಸದೆ ಅಲ್ಲೆ ಇದಂತಹ ಗನ್ ಎತ್ತಿಕೊಂಡು ಅನಿಲ್ ನಾಯಿಯನ್ನು ಶೂಟ್ ಮಾಡಿ ಸಾ.ಯಿ.ಸಿ ಬಿಡುತ್ತಾನೆ. ನಂತರ ಮನೆ ಒಳಗೆ ಹೋಗಿ ನೋಡಿದಾಗ ಅಚ್ಚರಿಗೊಂಡರು ಮಗುವನ್ನು ತೊಟ್ಟಿಲಿನಲ್ಲಿ ಹಾಕಿ ದಂಪತಿಗಳು ಮಹಡಿ ಮೇಲೆ ಇದ್ದಾಗ ದೈತ್ಯ ನಾಗರಹಾವೊಂದು ಮಗುವಿನ ತೊಟ್ಟಿಲ ಬಳಿ ಹೋಗುತ್ತಿದ್ದನ್ನು ನೋಡಿದ ನಾಯಿಯು ಹಾವು ಮಗುವನ್ನು ಕಚ್ಚಬಹುದು ಎಂದು ತಿಳಿದು ಅದನ್ನು ಕಚ್ಚಿ ಸಾಯಿಸುತ್ತದೆ. ಹಾವಿನ ರಕ್ತವು ನಾಯಿಯ ಬಾಯಿಗೆ ಹಂಟಿಕೊಂಡಿತ್ತು. ಹಾವು ಸತ್ತು ತೊಟ್ಟಿಲ ಬಳಿ ಬಿದ್ದಿತ್ತು. ಈ ಸತ್ಯವನ್ನು ಹರಿಯದ ದಂಪತಿಗಳು ದುಡುಕಿ ನಾಯಿಯನ್ನು ಸಾಯಿಸಿ ಬಿಡುತ್ತಾರೆ.

ಈಕೆ ಸ-ತ್ತು ಹೋಗಿದ್ದಾಳೆ ಅಂತ ಹೇಳಿದ ಡಾಕ್ಟರ್ ದುಃಖದಲ್ಲಿಯೇ ಅಂತ್ಯಕ್ರಿಯೆ ಮಾಡಲು ಸಿದ್ಧರಾದ ಕುಟುಂಬಸ್ಥರು ಕೊನೆ ಕ್ಷಣದಲ್ಲಿ ಅಲ್ಲಾಡಿದ ದೇಹ ಮುಂದೆ ಏನಾಯಿತು ನೋಡಿ.!

 

ಆಂಧ್ರಪ್ರದೇಶದ ಕೊತ್ತೂರು ಜಿಲ್ಲೆಯ ಬೆಂಜರ್ಲಾ ಎಂಬ ಗ್ರಾಮದ ನಿವಾಸಿ ಮಾಜಿ ಮಂಡಲ ಪಂಚಾಯಿತಿ ಸದಸ್ಯ ಜಯಶ್ರೀ ಎಂಬವರು ಬಹಳ ವರ್ಷಗಳಿಂದ ಅನಾರೋಗ್ಯದಿಂದ ನರಳುತ್ತಿದ್ದರು. ಐದು ದಿನಗಳ ಹಿಂದೆ ಜಯಶ್ರೀ ಅವರ ಆರೋಗ್ಯ ಸ್ಥಿತಿ ಗಂ.ಭೀ.ರ.ವಾಗಿ ಕುಟುಂಬಸ್ಥರು‌ ಹೈದರಾಬಾದ್ ನಲ್ಲಿ ಇರುವ ಒಂದು ಪ್ರೈವೇಟ್ ಆಸ್ಪತ್ರೆಗೆ ಜಯಶ್ರೀ ಅವರನ್ನು ಅಡ್ಮಿಟ್ ಮಾಡುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಆಕೆಯನ್ನು ಪರೀಕ್ಷಿಸಿದ ಡಾಕ್ಟರ್ ಗಳು ಈಕೆಯು ಸ.ತ್ತು ಹೋಗಿದ್ದಾಳೆ ಎಂದು ರಿಪೋರ್ಟ್ ಕೊಟ್ಟು ದೇಹವನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ಕುಟುಂಬಸ್ಥರಿಗೆ‌ ಹೇಳಿದ್ದಾರೆ.

ಜಯಶ್ರೀ ಅವರ ಮೃ.ತ ದೇಹವನ್ನು ಆಂಬುಲೆನ್ಸ್ ಮೂಲಕ ಮನೆಗೆ ತೆಗೆದುಕೊಂಡು ಬಂದು ಕೆಳಗಡೆ ಇಳಿಸಿ ಅಂತ್ಯ ಕ್ರಿಯೆಗೆ ಸಿದ್ಧ ಮಾಡಿಕೊಂಡಿರುತ್ತಾರೆ. ಆ ಸಮಯದಲ್ಲಿ ಜಯಶ್ರೀ ಅವರ ತುಟಿಗಳು ಅಲ್ಲಾಡುತ್ತವೆ ಇದನ್ನು ಮನೆಯ ಕುಟುಂಬಸ್ಥರು ನೋಡಿ ಆಶ್ಚರ್ಯಗೊಂಡು ಜಯಶ್ರೀಯನ್ನು ಮನೆ ಒಳಗೆ ಕರೆದುಕೊಂಡು ಹೋಗಿ ಕೊನೆಯ ಬಾರಿ ಬಾಯಿಗೆ ಹಾಲು ಬಿಟ್ಟಿದ್ದು ಜಯಶ್ರೀ ಅವರು ಬದುಕುತ್ತಾರೆ. ಜಯಶ್ರೀ ಅವರ ಪ್ರಾಣ ಇನ್ನು ಹೋಗಿರುವುದಿಲ್ಲ ಇದು ಗೊತ್ತಿಲ್ಲದೆ ಕುಟುಂಬಸ್ಥರು ಅವರ ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆಗಳನ್ನು ತಯಾರು ಮಾಡುತ್ತಿದ್ದರು.

ಅಲ್ಲದೆ ಜಯಶ್ರೀ ಅಂತಿಮ ದರ್ಶನ ಪಡೆಯಲು ಸ್ನೇಹಿತರು ಮತ್ತು ಕುಟುಂಬಸ್ಥರು, ರಾಜಕೀಯ ವ್ಯಕ್ತಿಗಳು, ಜನ ಪ್ರತಿನಿಧಿಗಳು ಎಲ್ಲರೂ ಅವರ ಮನೆಗೆ ಬಂದಿದ್ದರು. ಜಯಶ್ರೀ ಅವರು ಇನ್ನು ಸತ್ತಿಲ್ಲ ಬದುಕಿದ್ದಾರೆ ಎಂದು ತಿಳಿದಾಗ ಅಂತ್ಯಕ್ರಿಯೆ ಎಲ್ಲ ಸಿದ್ಧತೆಗಳನ್ನು ನಿಲ್ಲಿಸಿ, ಅಂತಿಮ ದರ್ಶನಕ್ಕೆ ಬಂದಿದ್ದ ಎಲ್ಲರೂ ಆಶ್ಚರ್ಯಗೊಂಡು ಅವರವರ ಮನೆಗೆ ತೆರಳುತ್ತಾರೆ. ಜಯಶ್ರೀ ಅವರು ಬದುಕಿರುವ ವಿಷಯ ಕೇಳಿ ಡಾಕ್ಟರ್ ಗಳಿಗೂ ಆಶ್ಚರ್ಯವಾಗಿದೆ. ಈಗ ಜಯಶ್ರೀ ಅವರು ಎಲ್ಲರಂತೆ ಜೀವನ ನಡೆಸುತ್ತಿದ್ದಾರೆ.

ಲಕ್ನೋವಾ ನಗರಕ್ಕೆ ಸೇರಿದ ಮೊಹಮದ್ ಪಲ್ಕನ್ ಎಂಬ 20 ವರ್ಷದ ಯುವಕನಿಗೆ ಜೂನ್ 21ನೇ, 2022ರಂದು ಭಯಾನಕ ರಸ್ತೆ ಅ.ಪ.ಘಾ.ತ ಸಂಭವಿಸಿ ಗಂಭೀರ ಗಾಯಗಳಾಗಿರುತ್ತದೆ ಅದಕ್ಕಾಗಿ ಆತನನ್ನು ಆಸ್ಪತ್ರೆಗೆ ದಾಖಲು‌ ಮಾಡುತ್ತಾರೆ. ಆಸ್ಪತ್ರೆಯಲ್ಲಿ ಮೊಹಮದ್ ಗೆ ಡಾಕ್ಟರ್ ಗಳು ಚಿಕಿತ್ಸೆ ಪ್ರಾರಂಭಿಸಿರುತ್ತಾರೆ. ಸುಮಾರು 10 ಲಕ್ಷ ಹಣ ಖರ್ಚು ಮಾಡಿ ಚಿಕಿತ್ಸೆ ನೀಡಿದರೂ ಮೊಹಮ್ಮದ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಲಕ್ಷಣಗಳು ಕಂಡು ಬಂದಿರುವುದಿಲ್ಲ ಆದರೂ ಇನ್ನು ಚಿಕಿತ್ಸೆ ನೀಡಲು ಹೆಚ್ಚು ಹಣಬೇಕು ಎಂದು ಆಸ್ಪತ್ರೆಯ ಅಧಿಕಾರಿಗಳು ಕುಟುಂಬಸ್ಥರನ್ನು ಡಿಮ್ಯಾಂಡ್ ಮಾಡಿದ್ದಾರೆ.

ಆದರೆ ನಮ್ಮ ಹತ್ತಿರ ಇನ್ನು ಒಂದು ರೂಪಾಯಿ ಕೂಡ ಇಲ್ಲ ಎಂದು ಮೊಹಮದ್ ಕುಟುಂಬಸ್ಥರು ಹೇಳುತ್ತಾರೆ. ನಂತರ ಸೋಮವಾರ ದಿನದಂದು ಮೊಹಮ್ಮದ್ ಸುತ್ತು ಹೋಗಿದ್ದಾನೆ ಎಂದು ಡಾಕ್ಟರ್ ಗಳು ಹೇಳಿತ್ತಾರೆ ನಂತರ ಆಸ್ಪತ್ರೆಯ ಫಾರ್ಮಾಲಿಟಿಸ್ ಗಳನ್ನು ಎಲ್ಲ ಪೂರ್ತಿ ಮಾಡಿ ಮೊಹಮದ್ ಮೃ.ತ ದೇಹವನ್ನು ಕುಟುಂಬಸ್ಥರು ಮನೆಗೆ ತಂದು ಅಂತ್ಯಕ್ರಿಯೆಗೆ ಸಕಲ ತಯಾರಿಗಳನ್ನು ಮಾಡುತ್ತಿರುತ್ತಾರೆ. ಆಗ ಮೊಹಮ್ಮದ್ ದೇಹದ ಅಂಗಗಳು ಅಲುಗಾಡುತ್ತಿರುವುದನ್ನು ಕುಟುಂಬಸ್ಥರು ಗಮನಿಸಿದ್ದಾರೆ ಆಗ ಪರೀಕ್ಷಿಸಿ ನೋಡಿದಾಗ ಮೊಹಮ್ಮದ್ ಇನ್ನೂ ಬದುಕಿದ್ದಾನೆ ಎಂಬ ವಿಷಯ ಗೊತ್ತಾಗಿದೆ.

ಕೂಡಲೇ ಬೇರೆ ಆಸ್ಪತ್ರೆಗೆ ಮೊಹಮದ್ ಅನ್ನು ದಾಖಲು ಮಾಡಿದ್ದಾರೆ ನಂತರ ಮೊಹಮ್ಮದನ್ನು ಪರೀಕ್ಷೆ ಮಾಡಿದ ಡಾಕ್ಟರ್ ಗಳು ವೆಂಟಿಲೇಟರ್ ನ ಮೂಲಕ ಚಿಕಿತ್ಸೆ ನೀಡುತ್ತಾರೆ. ಮೊಹಮದ್ ನ ಸ್ಥಿತಿ ಗಂಭೀರವಾಗಿದ್ದರೂ ಕೂಡ ಈತನ ಬ್ರೈನ್ ಡೆಡ್ ಆಗಿಲ್ಲ ಎಂದು ಡಾಕ್ಟರ್ ಹೇಳಿದ್ದಾರೆ. ಮೊಹಮ್ಮದ್ ಬದುಕಿದ್ದರು ಈತ ಸ.ತ್ತು ಹೋಗಿದ್ದಾನೆ ಎಂದು ಹೇಳಿದ ಪ್ರೈವೇಟ್ ಆಸ್ಪತ್ರೆಯ ಡಾಕ್ಟರ್ ಮತ್ತು ಅಧಿಕಾರಿಗಳ ವಿರುದ್ಧ ಮೊಹಮದ್ ಕುಟುಂಬಸ್ಥರು ದೂರು ದಾಖಲು ಮಾಡಿದ್ದಾರೆ. ಇದೇ ರೀತಿ ಸಾಕಷ್ಟು ಘಟನೆಗಳು ನಮ್ಮ ಸುತ್ತ ಮುತ್ತಲು ನೆಡೆದಿದೆ ವೈದ್ಯರ ನಿರ್ಲಕ್ಷ್ಯವೋ ಅಥವಾ ರೋಗಿಗಳೋ ಅದೃಷ್ಟವೋ ಏನೋ ತಿಳಿಯದು.

ವಯಸ್ಸಾದ ತನ್ನ ತಂದೆಯನ್ನ ರಾತ್ರಿ ಊಟಕ್ಕಾಗಿ ರೆಸ್ಟೋರೆಂಟ್‌ ಗೆ ಕರೆದೊಯ್ದ ಮಗ..! ಮಗ ಎಲ್ಲರ ಮುಂದೆ ತಂದೆಗೆ ಮಾಡಿದ್ದೇನು ಗೊತ್ತ.!

ಸಾಮಾನ್ಯವಾಗಿ ಹಲವರು ಮಕ್ಕಳು ತಮ್ಮ ವಯಸ್ಸಾದ ಹೆತ್ತವರನ್ನು ತಮ್ಮೊಂದಿಗೆ ಹೊರಗೆ ಊಟಕ್ಕಾಗಿ, ಬೇರೆ ಬೇರೆ ಸ್ಥಳಗಳಿಗೆ ಪ್ರವಾಸಕ್ಕೆ, ಯಾವುದಾದರೂ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಲು ಇಷ್ಟಪಡುವುದಿಲ್ಲ. ಆ ಸಮಯದಲ್ಲಿ ಮಕ್ಕಳು ತಮ್ಮ ವೃದ್ಧರಾದ ಪೋಷಕರಿಗೆ – ನೀವು ಅಲ್ಲಿಗೆ ಬಂದು ಏನು ಮಾಡುತ್ತೀರಿ? ನಿಮಗೆ ಅಷ್ಟು ದೂರ ಬರಲು ಶಕ್ತಿಯಿಲ್ಲ, ಬಂದರೂ ಸರಿಯಾಗಿ ತಿನ್ನುವುದಿಲ್ಲ. ಸರಿಯಾಗಿ ಓಡಾಡಲು ಆಗುವುದಿಲ್ಲ, ನಿಮಗೆ ಆಯಾಸವಾಗುತ್ತದೆ ನೀವು ಮನೆಯಲ್ಲೇ ಇರಿ, ಅದು ನಿಮಗೇ ಒಳ್ಳೆಯದು ಎಂದೆಲ್ಲಾ ಹೇಳುತ್ತಾರೆ.

ಆದರೆ ಇಲ್ಲಿ ಒಬ್ಬ ಮಗ ತನ್ನ ವಯಸ್ಸಾದ ಮುಗ್ಧ ತಂದೆಯನ್ನು ಊಟಕ್ಕೆಂದು ಒಂದು ದೊಡ್ಡ ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗುತ್ತಾನೆ ಅಲ್ಲಿ ಆ ಮಗ ತಂದೆಗೆ ಏನು ಮಾಡುತ್ತಾನೆ ಎಂದು ನೋಡೋಣ. ಒಬ್ಬ ಮಗನು ತನ್ನ ವಯಸ್ಸಾದಂತಹ ತಂದೆಯನ್ನು ರಾತ್ರಿ ಊಟಕ್ಕಾಗಿ ಒಂದು ಉತ್ತಮವಾದ ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಆ ವಯಸ್ಸಾದ ಅಪ್ಪ ನಡುಗುವ ತನ್ನ ಕೈಯಿಂದ ಊಟ ಮಾಡುವಾಗ ಬಟ್ಟೆಗಳ ಮೇಲೆ ಹಲವಾರು ಬಾರಿ ಆಹಾರವನ್ನು ಚೆಲ್ಲಿಕೊಂಡು, ಬಾಯಿ, ಗಲ್ಲ , ಕುತ್ತಿಗೆ ಮೇಲೆಲ್ಲಾ ಆಹಾರದ ತುಣುಕುಗಳನ್ನು ಬೀಳಿಸಿಕೊಂಡು ಊಟ ಮಾಡುತ್ತಾ ಇರುತ್ತಾರೆ.

ಆಗ ರೆಸ್ಟೋರೆಂಟ್‌ನಲ್ಲಿ ಊಟ ಮಾಡಲು ಕುಳಿತಿದ್ದ ಇತರೆ ಜನರು ಆ ವೃದ್ಧನನ್ನು ಅಸಹ್ಯದಿಂದ ನೋಡುತ್ತಿರುತ್ತಾರೆ. ಆದರೆ ಅವರ ಮಗನು ಶಾಂತವಾಗಿ ತಾಳ್ಮೆಯಿಂದ ಕುಳಿತು ಅಪ್ಪನೊಡನೆ ತಾನು ಊಟ ಮಾಡುತ್ತಾನೆ. ಊಟವಾದ ನಂತರ ಮಗ ಯಾವುದೇ ಮುಜುಗರ, ನಾಚಿಕೆಯಿಲ್ಲದೆ ತನ್ನ ತಂದೆಯನ್ನು ವಾಶ್ ರೂಂಗೆ ಕರೆದುಕೊಂಡು ಹೋಗಿ ಅವರ ಬಾಯಿ ಮುಖ ಕುತ್ತಿಗೆ ಭಾಗಗಳಿಂದ ಆಹಾರದ ತುಣುಕುಗಳನ್ನು ಒರಸಿ ತೆಗೆದು ಅವರ ಬಟ್ಟೆಗಳನ್ನು ತನ್ನ ಕರವಸ್ತ್ರಕ್ಕೆ ನೀರು ಹಾಕಿಕೊಂಡು ಚೆನ್ನಾಗಿ ಸ್ವಚ್ಛಗೊಳಿಸಿ, ನಂತರ ತಂದೆಯ ತಲೆಗೂದಲನ್ನು ಬಾಚಿ ಕನ್ನಡಕದ ಗಾಜುಗಳನ್ನು ತೊಳೆದು ಬಟ್ಟೆಯಿಂದ ಒರಸಿ ಮತ್ತೆ ಹಾಕಿ ನಂತರ ಅವರನ್ನು ಹೊರಗೆ ಕರೆತರುತ್ತಾನೆ.

ಆಗ ರೆಸ್ಟೋರೆಂಟ್‌ನಲ್ಲಿ ಎಲ್ಲರೂ ಮೌನವಾಗಿ ಅವನತ್ತಲೇ ನೋಡುತ್ತಿದ್ದರು ಅನಂತರ ಅವನು ಬಿಲ್ ಪಾವತಿಸಿ ಅಪ್ಪನೊಂದಿಗೆ ಹೊರಗೆ ಹೊರಡುವಾಗ ಅಲ್ಲಿ ಊಟ ಮಾಡುತ್ತಿದ್ದ ಮತ್ತೊಬ್ಬ ವೃದ್ಧರು ಅವನನ್ನು ಕರೆದು ನೀನು ಇಲ್ಲಿ ಏನನ್ನಾದರೂ ಬಿಟ್ಟು ಹೋಗುತ್ತಿರುವೆ ಎಂದು ನಿನಗೆ ಅನ್ನಿಸುತ್ತಿಲ್ಲವೇ? ಎಂದು ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಮಗನು – ಇಲ್ಲ ಸರ್, ನಾನು ಏನನ್ನೂ ಬಿಟ್ಟಿಲ್ಲ ಎಲ್ಲವನ್ನೂ ತೆಗೆದುಕೊಂಡಿದ್ದೇನೆ ಎಂದು ಹೇಳುತ್ತಾನೆ. ಆಗ ಆ ವೃದ್ಧರು ಹೇಳುತ್ತಾರೆ – ಮಗೂ , ನೀನು ಈ ರೆಸ್ಟೋರೆಂಟ್ ನಲ್ಲಿ ಪ್ರತಿಯೊಬ್ಬ ಮಗನಿಗೂ ಒಂದು ಶಿಕ್ಷಣವನ್ನು ಮತ್ತು ಪ್ರತಿಯೊಬ್ಬ ತಂದೆಗೂ ಒಂದು ಭರವಸೆಯನ್ನು ಬಿಟ್ಟು ಹೋಗುತ್ತಿರುವೆ ಎಂದು ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ.

ನಾವು ಚಿಕ್ಕವರಿದ್ದಾಗ ನಮ್ಮ ಅಪ್ಪ ನಮ್ಮನ್ನು ತಮ್ಮ ಹೆಗಲು ಮೇಲೆ ಹೊತ್ತು ತಮ್ಮ ತೋಳುಗಳಲ್ಲಿ ಅವಚಿಕೊಂಡು ಕರೆದುಕೊಂಡು ಹೋಗುತ್ತಿದ್ದರು ಎಂಬುದನ್ನು ಮಕ್ಕಳು ಮರೆತು ಬಿಡುತ್ತಾರೆ. ಮಗುವಾಗಿದ್ದಾಗ ನಮಗೆ ಸರಿಯಾಗಿ ತಿನ್ನಲು ಸಾಧ್ಯವಾಗದಿದ್ದಾಗ, ತಂದೆ ತಾಯಿ ಅವರ ಕೈಯಿಂದ ನಮಗೆ ಆಹಾರವನ್ನು ತಿನ್ನಿಸುತ್ತಿದ್ದರು ಮತ್ತು ನಮ್ಮ ಬಾಯಿಂದ ಆಹಾರವು ಮೈ ಮೇಲೆ ಬಟ್ಟೆಗಳ ಮೇಲೆ ಬಿದ್ದಾಗ, ಅವರು ನಮ್ಮನ್ನು ಬೈಯ್ಯದೆ ಪ್ರೀತಿಯಿಂದ ಸ್ವಚ್ಛ ಮಾಡುತ್ತಿದ್ದರು. ಆದರೆ ಅದೇ ಹೆತ್ತವರು ವೃದ್ಧಾಪ್ಯದಲ್ಲಿ ಮಕ್ಕಳಿಗೆ ಹೊರೆಯಾಗುವುದು ಏಕೆ.? ಎಲ್ಲರೂ ಪೋಷಕರನ್ನು ಗೌರವಿಸಿ, ಸೇವೆ ಮಾಡಿ, ಮತ್ತು ಪ್ರೀತಿಯನ್ನು ನೀಡಿ. ನಮಗೂ ವಯಸ್ಸಾಗುತ್ತದೆ. ನಾವೂ ವೃದ್ಧರಾಗುತ್ತೇವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಈ ಉತ್ತಮ ಸಂದೇಶವನ್ನು ಮತ್ತಷ್ಟು ಜನರಿಗೆ ತಲುಪಿಸಿ.

ಟೀ ಮಾರುತ್ತಿದ್ದ ಸಾಮಾನ್ಯ ಹುಡುಗ ರಾತ್ರೋ ರಾತ್ರಿ ಕೋಟ್ಯಾಧೀಶ್ವರ ಆದ.! ಹಣ ಸಂಪಾದನೆ ಮಾಡಲು ಈತ ಮಾಡಿದ ಉಪಾಯ ನೋಡಿ ಪೊಲೀಸರು ಬೆರಗಾಗಿದ್ದಾರೆ.!

 

ಮಧ್ಯಪ್ರದೇಶದ ಉಜೈನಿ ನಗರ ಎಲ್ಲರಿಗೂ ಗೊತ್ತೇ ಇದೆ ಉಜೈನಿ ನಗರವು ಭಾರತದ ದೇಶದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲಿಯೇ ಪ್ರಖ್ಯಾತಿ ಪಡೆದಿದೆ. ಉಜ್ಜೈನಾ ಪರಮಾತ್ಮ ಮಹಾಕಾಲೇಶ್ವರವು ಶಿವನ ನಗರ ಎಂದೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ಇತ್ತೀಚಿಗೆ ಒಂದು ಅಚ್ಚರಿಯ ಘಟನೆ ನಡೆದಿದೆ. ಆ ಘಟನೆ ಒಬ್ಬ ಟೀ ಮಾರುವ ಹುಡುಗನದ್ದು. ಈತ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಆ ಹುಡುಗ ಯಾರು? ಹಾಗೂ ಹೇಗೆ ಕೋಟ್ಯಾಧಿಪತಿಯಾದ ಎಂಬುದನ್ನು ವಿವರವಾಗಿ ತಿಳಿಯೋಣ.

ಉಜೈನಿಯಲ್ಲಿ 20 ವರ್ಷದ ಹುಡುಗ ವಾಸವಾಗಿದ್ದು, ಈತ ತುಂಬಾ ಬಡ ಕುಟುಂಬದಲ್ಲಿ ಜನಿಸಿದ ಬಡ ಹುಡುಗ. ಈತ ತನ್ನ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದ. ಜೀವನ ಸಾಗಿಸಲು ಟೀ ಮಾರುತ್ತಿದ್ದು ಅವನ ತಾಯಿ ಡಾಬಾ ಒಂದರಲ್ಲಿ ಕೆಲಸ ಮಾಡುತ್ತಾ ಕಷ್ಟ ಪಟ್ಟು ಜೀವನ ನಡೆಸುತ್ತಾ ನಗರದ ಒಂದು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾ ಇದ್ದಾರು. ರಾಹುಲ್ ಟೀ ಮಾರುತ್ತಾ ಇರುವಾಗ ಸೌರಬ್ ಎಂಬ ಯುವಕ ರಾಹುಲ್ ಗೆ ಪರಿಚಯವಾಗುತ್ತಾನೆ.

ನಂತರ ರಾಹುಲ್ ನ ಜೀವನದಲ್ಲಿ ತಿರುವು ಉಂಟಾಗಿದೆ. ಸೌರಬ್ ತಾನು ಇಂಡೋರ್ ನಗರದವನು ಎಂದು ರಾಹುಲ್ ಬಳಿ ಪರಿಚಯ ಮಾಡಿಕೊಂಡು ಹಣ ಸಂಪಾದನೆ ಮಾಡಲು ರಾಹುಲ್ ಗೆ ಒಂದು ಆಫರ್ ನೀಡುತ್ತಾನೆ. ನಾನು ನಿನಗೆ ಹೆಚ್ಚು ಹಣ ಸಂಪಾದಿಸುವ ಕೆಲಸ ಹೇಳಿ ಕೊಡುತ್ತೇನೆ. ಇನ್ಸ್ಟಾಗ್ರಾಂ ನಲ್ಲಿ ಕೇವಲ ರೀಲ್ಸ್ ಮಾಡಿದರೆ ಸಾಕು ಇದಕ್ಕೆ ಪ್ರತಿ ತಿಂಗಳು ರೂಪಾಯಿ 25 ಸಾವಿರಗಳನ್ನು ನೀಡುತ್ತೇನೆ ಎಂದು ಸೌರಬ್ ಹೇಳುತ್ತೇನೆ.‌

ರಾಹುಲ್ ಟೀ ಅಂಗಡಿಯಲ್ಲಿ ಹೆಚ್ಚಿನ ಸಂಪಾದನೆ ಆಗದಿರುವ ಕಾರಣ ಹೆಚ್ಚಿನ ಹಣ ಸಂಪಾದನೆ ಮಾಡಬೇಕೆಂಬ ಆಸೆಯಿಂದ ರಾಹುಲ್ ಒಪ್ಪಿಕೊಳ್ಳುತ್ತಾನೆ. ನಂತರ ಟ್ರೈನಿಂಗ್ ನೀಡುತ್ತೇನೆ ಎಂದು ಸೌರಬ್ ರಾಹುಲ್ ಅನ್ನು ಇಂಡೋರ್ ಗೆ ಕರೆಸಿಕೊಂಡು ಏಳು ದಿನಗಳ ಕಾಲ ಒಂದು ಹೋಟೆಲ್ ನಲ್ಲಿ ಇಟ್ಟು ಅವನ ಕೈಯಲ್ಲಿ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಹೊಸ ಹೊಸ ಖಾತೆಗಳಲ್ಲಿ ತೆರೆಸಿದರು.

ನಂತರ ರಾಹುಲ್ ತನ್ನ ಉಜೈನಿ‌ ಮನೆಗೆ ತೆರಳುತ್ತಾನೆ. ಕೆಲವು ದಿನಗಳು ಕಳೆದ ನಂತರ ರಾಹುಲ್ ನ ಅಕೌಂಟ್ ಗೆ ಪ್ರತಿದಿನ ಲಕ್ಷಗಟ್ಟಲೆ ಹಣ ಡೆಪಾಸಿಟ್ ಆಗುತ್ತಿತ್ತು ಸರಿ ಸುಮಾರು 90 ಲಕ್ಷ ಹಣ ಡೆಪಾಸಿಟ್ ಆಗಿದೆ. ಹೀಗೆ ಪ್ರತಿದಿನ ತನ್ನ ಖಾತೆಗೆ ಹಣ ಬಂದು ಬೀಳುತ್ತಿದ್ದನ್ನು ನೋಡಿ ತನಗೆ ಟ್ರೈನಿಂಗ್ ಕೊಟ್ಟ ಸೌರಬ್ ಮತ್ತು ಅವನ ಸ್ನೇಹಿತರಿಗೆ ಕರೆ ಮಾಡಿ ಕೇಳುತ್ತಾನೆ ನನ್ನ ಖಾತೆಗೆ ಇಷ್ಟು ಹಣ ಏಕೆ ಬರುತ್ತಿದೆ‌? ನೀವು ನನ್ನಿಂದ ಓಪನ್ ಮಾಡಿದ ಖಾತೆಗಳಿಗೆ ಇಷ್ಟೊಂದು ಹಣ ಎಲ್ಲಿಂದ‌ ಬರುತ್ತಿದೆ ಎಂದು ಕೇಳುತ್ತಾನೆ.

ಆಗ ಸೌರಬ್ ಮತ್ತು ಸ್ನೇಹಿತರು ಈಗ ಹೇಗೆ ನಡೆಯುತ್ತಿದೆ ಹಾಗೆ ನಡೆಯಲಿ ನೀನು ತಲೆ ಕೆಡಿಸಿಕೊಳ್ಳಬೇಡ ನಿನಗೆ ಎಷ್ಟು ಹಣ ಬೇಕು ಅಷ್ಟು ತೆಗೆದುಕೊ ಎಂದು ಹೇಳುತ್ತಾರೆ. ಆಗ ರಾಹುಲ್ 18 ಲಕ್ಷಗಳನ್ನು ತೆಗೆದುಕೊಂಡು ವಾಸಿಸಲು ಒಂದು ಸ್ವಂತ ಮನೆ ಖರೀದಿ ಮಾಡಿಕೊಳ್ಳುತ್ತಾನೆ. ನಂತರ ಅವನ ಖಾತೆಗೆ ಲಕ್ಷಗಟ್ಟಲೆ ಹಣಗಳು ಜಮೆ ಆಗುತ್ತಿದ್ದನು ಗಮನಿಸಿ ಭಯಗೊಂಡ ರಾಹುಲ್ ಸೌರಬ್ ಮತ್ತು ಸ್ನೇಹಿತರು ಏನಾದರೂ ಕೆಟ್ಟ ಕೆಲಸ ಮಾಡುತ್ತಿರಬಹುದು ಆದ್ದರಿಂದ ಇಷ್ಟು ಹಣ ಜಮೆಯಾಗುತ್ತಿದೆ ಎಂದು ತಿಳಿದು ಪೊಲೀಸರಿಗೆ ತಿಳಿಸಲು ಮುಂದಾಗುತ್ತಾನೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋನ ಸಂಪೂರ್ಣವಾಗಿ ವೀಕ್ಷಿಸಿ

ಪುನೀತ್ ರಾಜ್ ಕುಮಾರ್ ಪುತ್ಥಳಿ ಮುಂದೆ ಅಪ್ಪು ಮಾಲೆ ಧರಿಸಿದ ಅಭಿಮಾನಿಗಳು. ವಿಡಿಯೋ ನೋಡಿ.

ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಂದ ಅಪ್ಪು ಮಾಲಾಧಾರಣೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈ ಭೂಮಿಯ ನಂಟನ್ನು ಕಳೆದುಕೊಂಡು ಒಂದೂವರೆ ವರ್ಷ ಕಳೆದರೂ ಅಭಿಮಾನಿಗಳ ಮನಸಿನಲ್ಲಿ ಮಾತ್ರ ಅವರ ಸ್ಥಾನ ಕಿಂಚಿತ್ತು ಕಡಿಮೆ ಆಗಿಲ್ಲ ಪುನೀತ್ ರಾಜಕುಮಾರ್ ಅವರು ಹುಟ್ಟಿದ ಹಬ್ಬದ ದಿನದಂದು, ಅವರ ಪುಣ್ಯ ಸ್ಮರಣೆ ಎಂದು ಮತ್ತು ಅವರಿಗೆ ಸಂಬಂಧಪಟ್ಟ ಸಿನಿಮಾಗಳು ಬಿಡುಗಡೆ ಆದ ದಿನ ಇಡೀ ಕರ್ನಾಟಕಕ್ಕೆ ಹಬ್ಬ.

ಅಕ್ಷರಶಃ ಕರ್ನಾಟಕದ ಜನತೆ ಅಪ್ಪು ಅವರನ್ನು ದೇವರಂತೆ ಕಾಣುತ್ತಿದ್ದಾರೆ. ದೇವಮಾನವನೊಬ್ಬ ಭೂಮಿ ಮೇಲೆ ಹುಟ್ಟಿ ಬದುಕಿದರೆ ಹೀಗೆ ಬದುಕಬೇಕು ಎನ್ನುವುದನ್ನು ಕಲಿಸಿ ಹೋದ ಹಿಂದೆ ನಂಬಿದ್ದಾರೆ. ಇದುವರೆಗೂ ಅಪ್ಪು ದೇವರು ಎಂದು ಕರೆಯುತ್ತಿದ್ದ ಮಂದಿ ಮನೆಯ ದೇವರ ಕೋಣೆಯಲ್ಲಿ ಅಪ್ಪು ಫೋಟೋ ಇಟ್ಟುಕೊಂಡು ಪೂಜೆ ಮಾಡುತ್ತಿದ್ದರು ಮತ್ತು ಜಾತ್ರಾ ಮಹೋತ್ಸವಗಳಲ್ಲಿ ಅಪ್ಪು ಫೋಟೋ ಮೆರವಣಿಗೆ ಮಾಡುತ್ತಿದ್ದರು. ಇದೀಗ ಅಪ್ಪು ದೇವರ ಮಾಲೆಯನ್ನು ಸಹ ಧರಿಸಲು ಮುಂದಾಗಿದ್ದಾರೆ.

ವಾರದ ಹಿಂದೆಯೇ ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 1ರಿಂದ 17ನೇ ತಾರೀಖಿನವರೆಗೆ ಅಪ್ಪು ಮಾಲೆ ಧರಿಸಲಾಗುತ್ತದೆ ಎನ್ನುವ ಕುರಿತಾದ ಒಂದು ವರದಿ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡಿತ್ತು. ನಂತರ ಇದನ್ನು ಅನೇಕರು ಖಂಡಿಸಿದರೆ, ಕೆಲವರು ಇದು ಗಾಳಿ ಸುದ್ದಿ ಅಷ್ಟೇ ಎಂದು ಸುಮ್ಮನಾಗಿದ್ದರು. ಅಪ್ಪು ದೇವರ ಮಾಲೆ ಧರಿಸುವ ವಿಧಿ ವಿಧಾನಕ್ಕೆ ಸಂಬಂಧಪಟ್ಟ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಈಗ ಮಾರ್ಚ್ 1ನೇ ತಾರೀಕಿನಂದು ಹೊಸಪೇಟೆ ಅಪ್ಪು ಅಭಿಮಾನಿಗಳು ನಿಜವಾಗಿಯೂ ಅಪ್ಪು ಮಾಲೆ ಧರಿಸಿದ್ದಾರೆ. ಶ್ರೀ ಸಿದ್ದಲಿಂಗಯ್ಯ ಸ್ವಾಮಿಗಳೇ ಅಪ್ಪು ಅಭಿಮಾನಿಗಳಿಗೆ ಪುನೀತ್ ಮಾಲೆಯನ್ನು ಹಾಕಿದ್ದು ಗಹ್ಯವಾಗಿ ಕಿವಿಯಲ್ಲಿ ಏನೋ ಹೇಳಿದ್ದಾರೆ. ಈ ವಿಡಿಯೋಗಳು ಬಾರಿ ಸಂಚಲನವನ್ನೇ ಸೃಷ್ಟಿಸುತ್ತಿವೆ. ಕೇಸರಿ ಬಣ್ಣದ ಪಂಚೆ ಹಾಗೂ ಟವಲ್ ಧರಿಸಿದ ಸಾಕಷ್ಟು ಪುನೀತ್ ಅಭಿಮಾನಿಗಳು ಹೊಸಪೇಟೆ ಅಲ್ಲಿರುವ ಪುನೀತ್ ಅವರ ಪುತ್ತಳಿ ಮುಂದೆ ಈ ರೀತಿ ಮಾಲೆ ಹಾಕಿಸಿಕೊಂಡಿದ್ದಾರೆ.

ಅವರ ವಿಧಿ ವಿಧಾನದ ಪ್ರಕಾರ ಇದ್ದ ನಿಯಮಗಳಂತೆ ಅವರು ನಡೆದುಕೊಳ್ಳುತ್ತಾರೆ ಎನ್ನಲಾಗಿದೆ. ಮಾರ್ಚ್ 17ರ ನಂತರ ಬೆಂಗಳೂರಿನಲ್ಲಿರುವ ಪುನೀತ್ ಅವರ ಪುಣ್ಯ ಭೂಮಿಗೆ ಬೇಟಿಕೊಟ್ಟು ನಂತರ ಮಾಲೆಯನ್ನು ತೆಗೆಯಬೇಕು ಎನ್ನುವ ನಿಯಮ ಇದೆ. ಅವರ ವಿಧಿ ವಿಧಾನದ ಪ್ರಕಾರ ಅಪ್ಪು ಮಾಲೆ ಧರಿಸಿರುವ ಯಾವುದೇ ಅಭಿಮಾನಿಗಳು ಅದನ್ನು ತೆಗೆಯುವ ದಿನಗಳವರೆಗೆ ಯಾವುದೇ ದುಶ್ಚಟ ಇದ್ದರು ತ್ಯಜಿಸಬೇಕು. ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ನಂತರ ತಪ್ಪದೆ ಸ್ನಾನ ಮಾಡಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು.

ಅಪ್ಪು ಮಾಲಾಧಾರಿಗಳು ಮೂರು ಸಮಯ ಕೂಡ ಟಿಫನ್ ಅನ್ನೇ ಉಪಹಾರವನ್ನು ಸೇವಿಸಬೇಕು. ಮಾಂಸಹಾರ ನಿಷೇಧಿಸಲಾಗಿತ್ತು. ಇದು ಪಾಲಿಸಲು ಆಗದೆ ಇರುವವರು ಐದು ದಿನಗಳು ಅಥವಾ ಏಳು ದಿನಗಳು ಬೇಕಾದರೂ ಮಾಲೆ ಹಾಕಬಹುದು ಎಂದು ನಿಯಮದಲ್ಲಿ ಬರೆದಿತ್ತು. ಹೊಸಪೇಟೆ ಭಾಗದಲ್ಲಿ ಶುರುವಾಗಿರುವ ಈ ಅಪ್ಪು ಮಾಲೆ ಹಾಕುವ ಕಾರ್ಯಕ್ರಮ ಈ ಸುದ್ದಿ ವೈರಲಾಗುತ್ತಿದ್ದಂತೆ ನಾಡ ಪೂರ್ತಿ ಹಬ್ಬುವ ಸಾಧ್ಯತೆಗಳು ಇದೆ.

ಯಾಕೆಂದರೆ ಈಗಾಗಲೇ ಕರ್ನಾಟಕದ ಮೂಲೆ ಮೂಲೆಯಲ್ಲೂ, ಹಳ್ಳಿ ಹಳ್ಳಿಗಳಲ್ಲೂ ಪುನೀತ್ ಅವರಿಗೆ ಅಭಿಮಾನಿಗಳು ಇದ್ದಾರೆ. ಅವರೆಲ್ಲರೂ ಸಹ ಇದರಿಂದ ಸ್ಫೂರ್ತಿ ಪಡೆದುಕೊಂಡು ಇದನ್ನು ಅನುಸರಿಸುವ ಸಾಧ್ಯತೆಗಳು ಇವೆ. ಆದರೆ ಒಂದು ವಲಯ ಮಾತ್ರ ಇದನ್ನು ಬಾರಿ ಖಂಡಿನೆ ಮಾಡುತ್ತಿದೆ. ಅಯ್ಯಪ್ಪಸ್ವಾಮಿ ಮಾಲೆಗೆ ಇದ್ದ ಘನತೆ ಹಾಗೂ ಮೌಲ್ಯ ಹೋಗುತ್ತದೆ. ಇದು ದಕ್ಷಿಣ ಭಾರತದ ಭಾಗದ ಜನರ ನಂಬಿಕೆಯ ಹಾಗೂ ಧರ್ಮದ ವಿಚಾರ ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ನಾನು ಮಾಡಿದ ತಮಿಳು ಸಿನಿಮಾಗೆ ಥಿಯೇಟರ್ ನೇ ಕೊಡ್ಲಿಲ್ಲ ಆದ್ರೆ ನಾವು ಮಾತ್ರ ತಮಿಳರ ಎಲ್ಲಾ ಸಿನಿಮಾಗೂ ಥಿಯೇಟರ್‌ ಕೊಡ್ತಿವಿ ಎಂದು ಬೇಸರ ವ್ಯಕ್ತ ಪಡಿಸಿದ ಕಿಟ್ಟಿ

 

ಶ್ರೀನಗರ ಕಿಟ್ಟಿ (Shreenagara Kitti) ಅವರು ಇದೇ ಮೊದಲ ಬಾರಿಗೆ ಸಿನಿಮಾ ರಂಗದಿಂದ ಬಹಳ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದಾರೆ. ಕಳೆದ ಮೂರರಿಂದ ನಾಲ್ಕು ವರ್ಷದ ಪ್ರಯತ್ನವನ್ನೆಲ್ಲಾ ಗೌಳಿ (Gowli) ಎನ್ನುವ ಸಿನಿಮಾದಲ್ಲಿ ಹಾಕಿ ಅದನ್ನು ರಿಲೀಸ್ ಹಂತಕ್ಕೆ ತಂದಿದ್ದಾರೆ. ಇದೇ ಫೆಬ್ರವರಿ 24ರಂದು ಕರ್ನಾಟಕದಾದ್ಯಂತ ಗೌಳಿ ಎನ್ನುವ ಚಂದನವನದ ಬಹುನಿರೀಕ್ಷಿತ ಚಿತ್ರ ರಿಲೀಸ್ ಆಗುತ್ತಿದೆ. ಈಗಾಗಲೇ ತಂಡ ಇದರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ,

ಅದರ ಅಂಗವಾಗಿ ಸಂದರ್ಶನಕ್ಕೆ ಬಂದ ಶ್ರೀನಗರ ಕಿಟ್ಟಿ ಅವರು ಸಿನಿಮಾದ ಕಥೆ ಯಾವ ರೀತಿ ಇದೆ ಮತ್ತು ಅದನ್ನು ಚಿತ್ರೀಕರಣ ಮಾಡಲಾದ ಆ ಜಾಗದ ಕುರಿತು ಹಾಗೂ ಅದರ ಹಿಂದಿನ ಸಿನಿಮಾಗಳು ಮತ್ತು ಅವರ ಅನುಭವಗಳ ಕುರಿತು ಒಂದಿಷ್ಟು ಮಾತುಗಳನ್ನು ಯೂಟ್ಯೂಬ್ ಚಾನೆಲ್ ನ ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ .

ಮೊದಲಿಗೆ ಗೌಳಿ ಚಿತ್ರದ ಬಗ್ಗೆ ಮಾತನಾಡಿದ ಅವರು ಜೋಡಿ ಕಟ್ಟ ಎನ್ನುವ ಊರಿನಲ್ಲಿ ಸಿನಿಮಾ ಚಿತ್ರೀಕರಣ ಮಾಡಿದೆವು. ಆ ಊರು ಹೇಗಿದೆ ಎಂದರೆ ಬರೀ 20 ರಿಂದ 30 ಮನೆಗಳು ಇರಬೇಕು ಅಷ್ಟೇ, ಆ ಊರು ಮಾತ್ರವಲ್ಲದೆ ಊರಿನ ಸುತ್ತಮುತ್ತ ಅನೇಕ ಹಳ್ಳಿಗಳು ಇದೇ ರೀತಿ ಇವೆ. ಇನ್ನು ಆ ಹಳ್ಳಿಯಲ್ಲಿ ಯಾರ ಮನೆಯಲ್ಲೂ ಟಿವಿ ಆಗಲಿ ಮೊಬೈಲ್ ಆಗಲಿ ಇಲ್ಲ.

ಅಷ್ಟೂ ಮನೆಗಳಲ್ಲಿ ಯಾವುದೋ ಒಂದು ಮನೆಯಲ್ಲಿ ಹಳೆ ವೈಟ್ ಅಂಡ್ ಬ್ಲಾಕ್ ಟಿವಿ ಸಿಗಬಹುದು ಇನ್ನು ಕೂಡ ಕೇಬಲ್ ಅಲ್ಲ ಆಂಟಿನಾ ಇಟ್ಟುಕೊಂಡು ನೋಡುತ್ತಿದ್ದಾರೆ. ಆದರೆ ಅಲ್ಲಿನ ಜನರೆಲ್ಲರೂ ಬಹಳ ಆರೋಗ್ಯವಾಗಿದ್ದರೆ ಅದೇ ಖುಷಿಯಾಗುತ್ತದೆ. 80, 85 ವರ್ಷದ ವೃದ್ಧರು ಕೂಡ ಹಸುಗಳನ್ನು ಮೇಯಿಸಿಕೊಂಡು ಆನಂದದಿಂದ ಇದ್ದಾರೆ. ಆದರೆ ಒಳ್ಳೆ ರಸ್ತೆ ಸಂಪರ್ಕ ಇತ್ಯಾದಿ ಸೌಲಭ್ಯಗಳನ್ನು ಪಡೆದು ಹಳ್ಳಿ ಬೆಳವಣಿಗೆ ಆಗಿದೆ.

ಆ ಭಾಗದಲ್ಲಿ ಆ ಹಳ್ಳಿಯ ಜನರ ರೀತಿಯಲ್ಲಿ ಇದ್ದ ಒಬ್ಬ ವ್ಯಕ್ತಿಯನ್ನಾಗಿ ಗೌಳಿ ಸಿನಿಮಾದಲ್ಲಿ ನನ್ನನ್ನು ಕಾಣಲಿದ್ದೀರಿ. ಒಂದು ಸುಖೀ ಕುಟುಂಬ ಅಪ್ಪ-ಮಗಳ ಸಂಬಂಧ, ಗಂಡ ಹೆಂಡತಿ ಸಂಬಂಧ, ಹಾಗೂ ಕುಟುಂಬದವರ ಸಂಬಂಧದ ಬೆಲೆಗಳನ್ನು ಮತ್ತು ಸಂಬಂಧಗಳ ನಡುವಿನ ತುಮುಲವನ್ನು ಸಿನಿಮಾದಲ್ಲಿ ಬಿಚ್ಚಿಟ್ಟಿದ್ದೇವೆ. ತನ್ನ ಪ್ರೀತಿಯ ಗೂಡಿಗೆ ಹೊರಗಡೆಯಿಂದ ತೊಂದರೆ ಆಗುತ್ತಿದ್ದಾಗ ಅದರ ವಿರುದ್ಧ ಹೀರೋ ಹೇಗೆ ನಿಲ್ಲುತ್ತಾರೆ ಅದರ ಪರಿಣಾಮ ಏನು ಎನ್ನುವುದೇ ಸಿನಿಮಾದ ಆತ್ಮ.

ಆದರೆ ಈಗಿನ ಕಾಲದ ಟ್ರೆಂಡ್ ಗೆ ತಕ್ಕ ಹಾಗೆ ಅದನ್ನು ವಿಷುವಲ್ ಟ್ರೀಟ್ ಮುಖಾಂತರ ಅದ್ದೂರಿಯಾಗಿ ತೆಗೆದಿದ್ದೇವೆ, ಖಂಡಿತ ಜನರೆಲ್ಲ ಮೆಚ್ಚಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. ಹೇಗೆ ಇಂತಿ ನಿನ್ನ ಪ್ರೀತಿಯ, ಸವಾರಿ,.ಸಂಜು ಮತ್ತು ಗೀತಾ, ಹುಡುಗರು ಇವೆಲ್ಲ ನನ್ನ ಸಿನಿಮಾ ಜರ್ನಿಯಲ್ಲಿ ಒಂದೊಳ್ಳೆ ಮಾರ್ಕ್ ಹಾಗೆ ಈ ಸಿನಿಮಾ ಕೂಡ ಆಗಲಿದೆ. ಅಷ್ಟೆಂದ ಮಾತ್ರಕ್ಕೆ ಇನ್ನುಳಿದ ಸಿನಿಮಾಗಳು ಸೋಲುತ್ತವೆ ಎಂದು ಅಲ್ಲ , ಯಾವ ಸಿನಿಮಾದಲ್ಲೂ ಕೂಡ ನಿರ್ಮಾಪಕರ ಶ್ರಮಕ್ಕೆ ಬಂಡವಾಳಕ್ಕೆ ಮೋಸ ಆಗಿಲ್ಲ.

ಆದರೆ ನಾವು ಅಂದುಕೊಂಡ ಮಟ್ಟಕ್ಕೆ ರೀಚ್ ಆಗಲಿಲ್ಲ ಎನ್ನುವ ಬೇಸರ ಇದೆ ಮತ್ತೆ ಮುಂಗಾರು (Mathe Mungaru) ಎಂದಿಗೂ ಙನನ್ನ ಫೇವರೆಟ್ ಸಿನಿಮಾ ಅಂತ ಒಳ್ಳೆ ಸಿನಿಮಾಗೆ ಥಿಯೇಟರ್ (theatre problem) ಸಿಗಲಿಲ್ಲ ಎನ್ನುವ ಬೇಸರ ಇಂದಿಗೂ ಕಾಡುತ್ತಿದೆ. ನಮ್ಮವರು ತಮಿಳಿಗರಿಗೆ ಮಣೆ ಹಾಕುತ್ತಾರೆ, ಆದರೆ ನಾವು ಅಲ್ಲಿ ಹೋದರೆ ನಮ್ಮನ್ನು ಅವರು ಆ ರೀತಿ ಟ್ರೀಟ್ ಮಾಡುವುದಿಲ್ಲ ಎಂದು, ಹೇಗೆ ಒಳ್ಳೆ ಸಿನಿಮಾಗಳು ಥಿಯೇಟರ್ ಕೊರತೆಯಿಂದ ತನ್ನ ಗೆಲುವನ್ನು ಕಳೆದುಕೊಳ್ಳುತ್ತವೆ ಎನ್ನುವುದನ್ನು ಈ ಉದಾಹರಣೆಯೊಂದಿಗೆ ಹೇಳಿಕೊಂಡಿದ್ದಾರೆ.

ಈ ಅಜ್ಜಿಯನ್ನು ಬಿಕ್ಷುಕಿ ಎಂದುಕೊಂಡು ಅರೆಸ್ಟ್ ಮಾಡಲು ಹೋದ ಪೋಲೀಸರು.! ಅಜ್ಜಿಯ ಕೈ ಚೀಲ ನೋಡಿ ಬೆರಗಾದರೂ.!

 

ನವದೆಹಲಿಯ ಸರ್ಕಾರವು ಒಂದು ದೊಡ್ಡ ಕಾರ್ಯವನ್ನು ಕೈಗೊಂಡಿದೆ ಅದು ಏನೆಂದರೆ ನಗರದಲ್ಲಿ ಯಾರೆಲ್ಲರು ಬಿಕ್ಷೆ ಬೇಡುತ್ತಾರೋ ಅವರನ್ನು ವಶಕ್ಕೆ ತೆಗೆದುಕೊಂಡು ಅದರಲ್ಲಿ ವಯಸ್ಸಾದವರನ್ನು ವೃದ್ಧಾಶ್ರಮಗಳಿಗೆ, ಮಕ್ಕಳನ್ನು ಅನಾಥಾಶ್ರಮಗಳಿಗೆ, ಕೈ ಕಾಲು ಗಟ್ಟಿಯಿದ್ದು ದುಡಿಯಲು ಸಮರ್ಥರಾಗಿ ಇರುವವರನ್ನು ವಿವಿಧ ಚಿಕ್ಕ ಪುಟ್ಟ ಕೆಲಸಗಳಿಗೆ ಸೇರಿಸುವಂತಹ ಮಹತ್ತರವಾದ ನಿರ್ಧಾರವನ್ನು ದೆಹಲಿಯ ಕ್ರೇಜಿ ವಾಲ್ ಸರ್ಕಾರವು ಕೈಗೆತ್ತಿಕೊಂಡಿದೆ.

ಅದಕ್ಕಾಗಿ ಪೋಲೀಸರು ದೆಹಲಿ ರಾಜ್ಯದ ಎಲ್ಲೆಡೆ ಶೋಧಿಸಿ ಭಿಕ್ಷೆ ಬೇಡುತ್ತಿರುವವರನ್ನು ಹುಡುಕಿ ವಶ ಪಡಿಸಿಕೊಳ್ಳಲು ಹೋದರು. ಆ ಸಂದರ್ಭದಲ್ಲಿ ಭಿಕ್ಷೆ ಬೇಡುತ್ತಿರುವ 82 ವರ್ಷ ವಯಸ್ಸಾಗಿರುವ ಒಬ್ಬ ಅಜ್ಜಿಯನ್ನು ವಶ ಪಡಿಸಿಕೊಳ್ಳಲು ಹೋಗುತ್ತಾರೆ. ಆ ಅಜ್ಜಿ ಬಳಿ ಹೋದಾಗ ಅವರ ಕೈಯಲ್ಲಿ ಇದ್ದ ಕೈಚೀಲವನ್ನು ನೋಡಿ ಅದರಲ್ಲಿ ಏನಿದೆ? ಅದನ್ನು ತೆಗೆದು ತೋರಿಸು ಎಂದು ಬಲವಂತ ಮಾಡುತ್ತಾರೆ ಆದರೆ ಅಜ್ಜಿ ಅದನ್ನು ತೆಗೆಯುವುದಿಲ್ಲ.

ನಂತರ ಅದನ್ನು ಪೋಲೀಸರೇ ತೆಗೆದು ನೋಡಿದಾಗ ಅದರಲ್ಲಿ ಸರಿ ಸುಮಾರು 2 ಲಕ್ಷ ರೂಪಾಯಿಗಳ ವರೆಗೆ ಹಣವಿರುತ್ತದೆ. ಅದನ್ನು ನೋಡಿದ ಪೋಲೀಸರು ಈ ಹಣ, ಇಷ್ಟೊಂದು ಹಣ ಎಲ್ಲಿಂದ ಬಂತ್ತು‌, ಎಲ್ಲಿ ಕಳ್ಳತನ ಮಾಡಿರುತ್ತಾರೋ ಎಂದು ಕೊಂಡು ಅಜ್ಜಿ ವಿಚಾರಿಸುತ್ತಾರೆ. ಆಗ ಅಜ್ಜಿ ಅದರ ಸತ್ಯಾಂಶವನ್ನು ಪೋಲೀಸರಿಗೆ ಹೇಳುತ್ತಾರೆ ಅದು ಏನೆಂದರೆ ಈ ಅಜ್ಜಿಗೆ ಇಬ್ಬರು ಗಂಡು ಮಕ್ಕಳು ಇದ್ದು, ಉತ್ತರಪ್ರದೇಶದ ಒಂದು ಹಳ್ಳಿಯಲ್ಲಿ ಸುಮಾರು 10 ಎಕರೆಗಳಷ್ಟು ಸ್ವಂತ ಜಮೀನು ಕೂಡ ಇರುತ್ತದೆ.

13 ವರ್ಷಗಳ ಹಿಂದೆ ಅಜ್ಜಿಯ ಗಂಡ ಮ.ರ.ಣ ಹೊಂದಿರುತ್ತಾರೆ. ಆ ಸಂದರ್ಭದಲ್ಲಿ ಆ ಅಜ್ಜಿಯ ಇಬ್ಬರು ಮಕ್ಕಳು ಇರುವಂತಹ ಜಮೀನು ಆಸ್ತಿ ಪಾಸ್ತಿ ಎಲ್ಲವನ್ನು ಎರಡು ಪಾಲು ಮಾಡಿಕೊಂಡು ಅಜ್ಜಿಯನ್ನು ಹೊರ ಹಾಕಿರುತ್ತಾರೆ. ಆ ಸಮಯದಲ್ಲಿ ಅಜ್ಜಿಗೆ ಏನು ಮಾಡಬೇಕು, ಹೇಗೆ ಬದುಕಬೇಕು ಎಂದು ತಿಳಿಯದೆ ರೈಲು ಹತ್ತಿ ಬಂದು ದೆಹಲಿಯಲ್ಲಿ ಬಂದು ಇಳಿದರು. ಅಲ್ಲಿ ಭಿಕ್ಷೆ ಬೇಡಲು ಪ್ರಾರಂಭಿಸಿ ಅಂದಿನಿಂದ 13 ವರ್ಷಗಳ ಕಾಲ ಭಿಕ್ಷೆ ಬೇಡಿ ಬಂದ ಹಣವನ್ನು ಚೀಲದಲ್ಲಿ ತುಂಬಿಟ್ಟಿದ್ದರು.

ಈ ವಿಷಯವನ್ನು ಅರಿತ ಪೋಲೀಸರು ಆ ಅಜ್ಜಿಯ ಮಕ್ಕಳಿಗೆ ತಿಳಿಸಿದಾಗ ಆ ಮಕ್ಕಳು ದಯವಿಟ್ಟು ಅವರನ್ನು ಇಲ್ಲಿಗೆ ಕರೆತರಬೇಡಿ ಅಲ್ಲಿಯೆ ಯಾವುದಾದರೂ ವೃದ್ಧಾಶ್ರಮಕ್ಕೆ ಸೇರಿಸಿ ಬಿಡಿ ಎಂದು ಹೇಳಿ ಬಿಡುತ್ತಾರೆ. ಇಷ್ಟೆಲ್ಲಾ ಆದರೂ ಆ ಅಜ್ಜಿಯು ತಾನು ಭಿಕ್ಷೆ ಬೇಡಿ ಕೂಡಿ ಇಟ್ಟಿದ್ದ ಹಣವನ್ನು ತನ್ನ ಮೊಮಕ್ಕಳಿಗೆ ಹಂಚಿಬಿಡಿ ಎಂದು ಹೇಳುತ್ತಾರೆ. ಹೀಗೆ ಹೇಳಿದ ಅಜ್ಜಿ ತನ್ನ ತಾಯ್ತನವನ್ನು ಮೆರೆದಿದ್ದಾರೆ.

ಒಬ್ಬ ತಾಯಿಯು ತನಗೆ ಎಷ್ಟೇ ಕಷ್ಟ ಬಂದರು ತನ್ನ ಹೊಟ್ಟಗೆ ಬಟ್ಟೆ ಕಟ್ಟಿಕೊಂಡು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಊಟ, ಬಟ್ಟೆ ಎಲ್ಲ ಕೋಟ್ಟು ಅವರ ಜೀವನವನ್ನೆ ಮಕ್ಕಳಿಗಾಗಿ ಮುಡಿಪಾಗಿ ಇಟ್ಟಿರುತ್ತಾರೆ. ಆದರೆ ಮಕ್ಕಳು ಬೆಳೆದು ದೊಡ್ಡವರಾದ ಬಳಿಕ ತಂದೆ ತಾಯಿಯರನ್ನು ನೋಡಿಕೊಳ್ಳದೆ ವೃದ್ಧಾಶ್ರಮಕ್ಕೆ ಸೇರಿಸಿ‌ಬಿಡುತ್ತಾರೆ. ಒಬ್ಬ ತಾಯಿಯುವು ತ್ಯಾಗಮಯಿ, ಕರುಣಮಯಿ ಅವಳಿಗೆ ನಮ್ಮದೊಂದು ನಮಸ್ಕಾರಗಳು.