Home Blog Page 229

ಮಾವನನ್ನು ವೃದ್ಧಶ್ರಾಮಕ್ಕೆ ಸೇರಿಸಲು ಸೊಸೆಯಂದಿರು ಮಾಡಿದ ಈ ಮಾಸ್ಟರ್ ಪ್ಲಾನ್ ಏನು ಅಂತ ಗೊತ್ತಾದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.

 

ಸೊಸೆಯಂದಿರೇ ಮಾವನನ್ನು ವೃದ್ಧಾಶ್ರಮ ಸೇರಿಸಲು ಯೋಚಿಸುತ್ತಿದ್ದೀರಾ.! ಈ ರೀತಿಯ ಪ್ಲಾನ್ ಗೆ ಇಲ್ಲೊಬ್ಬ ಮಾವ ಮಾಡಿದ್ದೇನು ಗೊತ್ತಾ.? ತಮಿಳುನಾಡಿನ ಸುಂದರ್ ಎಂಬುವವರ ಸಂಸಾರದ ಕಥೆ ಇದು. ಸುಂದರ ಹಾಗೂ ಮೀನ ದಂಪತಿಗಳು ಅಂಗಡಿಯನ್ನು ನಡೆಸುತ್ತಾ ಹಗಲು ಇರುಳು ಶ್ರಮಿಸಿ ಸ್ವಂತ ಮನೆಯನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಸುಂದರವರಿಗೆ ಇಬ್ಬರು ಗಂಡು ಮಕ್ಕಳು ಅವರಿಬ್ಬರಿಗೂ ಮದುವೆಯಾಗಿ ಮಕ್ಕಳಾಗಿದ್ದಾರೆ. ಎಲ್ಲರೂ ಗಟ್ಟಿ ಇರುವಾಗ ಸಂಸಾರವು ಚಂದವಾಗಿ ನಡೆಯುತ್ತಿತ್ತು.

ಮೊಮ್ಮಕ್ಕಳನ್ನು ಎತ್ತಾಡಿಸಿದ್ದ ಅಜ್ಜ ಅಜ್ಜಿಗೆ ಅದಾಗಲೇ ವಯಸ್ಸಾಗಿತ್ತು. ಹೀಗಿರುವಾಗ ಒಂದು ದಿನ ಸುಂದರ್ ಅವರ ಪತ್ನಿ ಮೀನಾ ಹೃದಯಾಘಾತದಿಂದ ಮೃ-ತ-ಪಟ್ಟರು. ಪತ್ನಿಯ ಸಾ-ವಿನ ಬಳಿಕ ಸುಂದರ್ ಮಾನಸಿಕವಾಗಿ ನೋವನ್ನು ಅನುಭವಿಸುತ್ತಾ ಕುಗ್ಗಿ ಹೋದರು. ವಯೋ ಸಹಜ ಶಕ್ತಿ ಕುಂದುವಿಕೆಯಿಂದ ಸುಂದರವರಿಗೆ ಅಂಗಡಿಗೆ ಹೋಗಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಅಂಗಡಿಯನ್ನು ಅವರ ಮಕ್ಕಳೇ ನೋಡಿಕೊಳ್ಳುತ್ತಿದ್ದರು. ಸುಮಾರು ಆರು ತಿಂಗಳುಗಳ ಕಾಲ ಹೀಗೆ ಕಳೆಯಿತು.

ಗಂಡು ಮಕ್ಕಳಿಬ್ಬರು ಅಂಗಡಿಗೆ ಹೋದ ಸಮಯದಲ್ಲಿ ಸೊಸೆಯಂದಿರು ಒಂದು ರೂಮಿನ ಒಳ ಹೊಕ್ಕು ಗುಸು ಗುಸು ಎಂದು ಮಾತನಾಡಲು ಪ್ರಾರಂಭಿಸಿದರು. ಸುಂದರ್ ಆ ರೂಮಿನ ಬಾಗಿಲ ಬಳಿ ನಿಂತು ಅವರು ಏನು ಮಾತನಾಡುತ್ತಿದ್ದಾರೆ ಎಂದು ಕೇಳಿಸಿಕೊಂಡರು. ಚಿಕ್ಕ ಸೊಸೆ ದೊಡ್ಡ ಸೊಸೆಯ ಬಳಿಯಲ್ಲಿ, ‘ ಅಕ್ಕಾ, ಅತ್ತೆ ತೀರಿ ಹೋದಾಗಿನಿಂದ ಅಂದರೆ ಆರು ತಿಂಗಳಿನಿಂದ ಮಾವ ಅತ್ತೆಯ ನೆನಪಿನಲ್ಲಿಯೇ ಇದ್ದಾರೆ. ಅಂಗಡಿಗೂ ಸಹ ಹೋಗುತ್ತಿಲ್ಲ. ನಮ್ಮ ಗಂಡಂದಿರು ಇದೀಗ ಅಂಗಡಿಯ ಕೆಲಸವನ್ನು ಚೆನ್ನಾಗಿಯೇ ಕಲಿತು ಒಳ್ಳೆಯ ಲಾಭವನ್ನು ಪಡೆಯುತ್ತಿದ್ದಾರೆ.

ಅತ್ತೆ ಇದ್ದಾಗ ಮಾವನನ್ನು ಅವರೆ ನೋಡಿಕೊಳ್ಳುತ್ತಿದ್ದರು. ಆದರೆ ಈಗ ಮಾವನನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆ ಇದೆ. ಮಾವನನ್ನು ನೋಡಿಕೊಂಡು ಮಕ್ಕಳನ್ನು ನೋಡಿಕೊಂಡು ಹೋಗುವುದು ಸುಲಭದ ಮಾತಲ್ಲ. ಹಾಗಾಗಿ ಮಾವ ಸುಂದರ್ ಅವರನ್ನು ವೃದ್ದಾಶ್ರಮಕ್ಕೆ ಸೇರಿಸೋಣ. ಈ ಮನೆಯಲ್ಲಿ ನಾವಷ್ಟೇ ಆರಾಮವಾಗಿ ಇರಬಹುದು. ಮನೆಯ ಮೇಲ್ಭಾಗವನ್ನು ಬಾಡಿಗೆಗೆ ನೀಡಿದ್ದಾರಲ್ಲ; ಅಲ್ಲಿ ಒಂದು ಜೋಡಿ ಹಾಗೂ ಈ ಭಾಗದಲ್ಲಿ ಒಂದು ಜೋಡಿ ಉಳಿದುಕೊಳ್ಳಬಹುದು.

ನಾವು ನಮ್ಮ ಸ್ವಂತ ಮನೆಯಲ್ಲಿ ಉಳಿದು ಉಳಿತಾಯ ಮಾಡಿ ಮಕ್ಕಳನ್ನು ಚೆನ್ನಾಗಿ ಓದಿಸಬಹುದು’ ಎಂದಳು. ತಂಗಿಯ ಮಾತಿಗೆ ಹೌದೆಂದು ತಲೆ ಅಲ್ಲಾಡಿಸಿದ ಅಕ್ಕ, ‘ನಮ್ಮ ಗಂಡಂದಿರನ್ನು ಈ ವಿಚಾರವಾಗಿ ಒಪ್ಪಿಸಬೇಕು’ ಎಂದಳು. ಇವೆಲ್ಲವನ್ನು ಸುಂದರ್ ಕೇಳಿಸಿಕೊಂಡು ಒಂದೆರಡು ವಾರಗಳು ಕಳೆದ ಮೇಲೆ ಗಂಡು ಮಕ್ಕಳಿದ್ದರೂ ಸಪ್ಪೆ ಮುಖವನ್ನು ಹೊತ್ತುಕೊಂಡು ಬಂದು ಸುಂದರ್ ಅವರ ಎದುರಲ್ಲಿ ನಿಂತರು.

ತನ್ನ ಮಕ್ಕಳಿಬ್ಬರು ಮುಂದೆ ಏನು ಹೇಳುತ್ತಾರೆ ಎಂದು ಊಹಿಸಿದ್ದ ಸುಂದರ್, ‘ನೋಡ್ರಪ್ಪ ನನಗೂ ವಯಸ್ಸಾಗಿದೆ. ಅಂಗಡಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ನೀವು ಹೇಗಂದರೂ ಅಂಗಡಿಯಲ್ಲಿ ಕೆಲಸ ಮಾಡಿ ಅನುಭವವನ್ನು ಪಡೆದು ಒಳ್ಳೆಯ ಲಾಭವನ್ನು ಗಳಿಸುತ್ತಿದ್ದೀರಾ. ಹಾಗಾಗಿ ನೀವು ನಿಮ್ಮ ಮಡದಿ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ಇದ್ದು ಕೊಂಡು ಕೆಲಸವನ್ನು ನಿರ್ವಹಿಸಬಹುದು’ ಎಂದು ನೇರವಾಗಿ ಹೇಳಿಯೇ ಬಿಟ್ಟರು.

ಮಾವನನ್ನು ಮನೆಯಿಂದ ಹೊರಹಾಕಿ ವೃದ್ದಾಶ್ರಮವನ್ನು ಸೇರಿಸಬೇಕು ಎಂದು ಉಪಾಯ ಹೂಡಿದ ಸೊಸೆಯಂದಿರು ಇಬ್ಬರೂ, ‘ಮಾವ ಹೀಗೆ ಹೇಳಿಬಿಟ್ಟರಲ್ಲ’ ಎಂದು ತಲೆಯ ಮೇಲೆ ಕೈ ಹೊತ್ತು ಕೂತರು. ಅಪ್ಪನ ನೇರ ಹಾಗೂ ಕಾರ ನುಡಿಯನ್ನು ಕೇಳಿದ ಗಂಡು ಮಕ್ಕಳಿಬ್ಬರು ಬೆಚ್ಚಾದರು. ಸಾಕಿ, ಸಲಹಿ, ಕೈಲಾದಷ್ಟು ವಿದ್ಯಾಭ್ಯಾಸವನ್ನು ಕೊಡಿಸಿ, ಮಕ್ಕಳ ನಗುವಿನಲ್ಲಿ ತಮ್ಮ ಆನಂದವನ್ನು ಕಾಣುವ ತಂದೆ ತಾಯಿಗೆ ವಯಸ್ಸಾದಾಗ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳದೇ..

ಮೇಕಪ್ ನಿಂದ ವಿರೂಪಗೊಂಡ ಮುಖ ಸಂಭ್ರಮದಿಂದ ನಡೆಯಬೇಕಿದ್ದ ವಿವಾಹ ನಿಂತು ಹೋಯ್ತು. ಬ್ಯೂಟಿ ಪಾರ್ಲರ್ ಗೆ ಹೋಗೋ ಮಹಿಳೆಯರೇ ಎಚ್ಚರ.!!

 

ಮನೆಯಲ್ಲಿ ನಡೆಯುವ ಯಾವುದೇ ಶುಭ ಕಾರ್ಯಕ್ಕೆ ಬಂದಿರುವವರ ಎದುರಲ್ಲಿ ತಾನು ಕೂಡ ಅಂದವಾಗಿ ಕಾಣಬೇಕು ಎಂಬುದು ಎಲ್ಲಾ ಮಹಿಳೆಯರ ಆಸೆ ಆಗಿರುತ್ತದೆ. ಹಸೆ ಮಣೆ ಏರುವ ದಿನದಂದು ಆಕರ್ಷಣೀಯವಾಗಿ ಕಾಣುವ ಹಂಬಲದಿಂದ ಮುಖವನ್ನು ಅಂದಗೊಳಿಸಿಕೊಳ್ಳಲು ಪಾರ್ಲರ್ ಗೆ ಹೋಗಿದ್ದ ಯುವತಿಯ ಮುಖ ವಿರೂಪವಾಗಿದೆ. ವರನ ಕೈ ಹಿಡಿಯಬೇಕಾಗಿದ್ದ ವಧು ದುರ್ಗತಿ ಎಂಬಾಕೆ ಮೇಕಪ್ ಮಾಡಿಸಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾಳೆ. ಹಾಸನದ ಅರಸೀಕೆರೆ ಗ್ರಾಮವು ಇಂತಹದೊಂದು ಘಟನೆಗೆ ಸಾಕ್ಷಿ ಆಗಿದೆ.

ಇತ್ತೀಚಿನ ಮದುವೆ ಮನೆಗಳಲ್ಲಿ, ಮಾಂಗಲ್ಯ ಧಾರಣಾಮಂಟಪ ಮತ್ತು ಅತಿಥಿಗಳು ಆಸೀನರಾಗುವ ಸ್ಥಳದ ಅಲಂಕಾರಕ್ಕೆ, ಹುಡುಗ ಹುಡುಗಿಯರ ವಿಭಿನ್ನ ರೀತಿಯ ಉಡುಗೆಗೆ ಮತ್ತು ಅಂದ ಚಂದಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಹರೆಯದ ವಯಸ್ಸು ಪ್ರಾರಂಭ ಆದಾಗಿನಿಂದಲೂ ಹುಡುಗ ಅಥವಾ ಹುಡುಗಿಯರ ಮನಸ್ಸಿನಲ್ಲಿ ತಮ್ಮ ಮದುವೆಯ ಸಂಭ್ರಮದ ಕನಸು ಚಿಗುರುತ್ತದೆ. ಮದುವೆಯ ದಿನ ಎಲ್ಲರ ಕಣ್ಣನೋಟವು ವಧು-ವರರ ಮೇಲೆ ಕೇಂದ್ರೀಕೃತವಾಗಿರುತ್ತದೆ. ಅದಕ್ಕಾಗಿ ಮದುಮಗ ಮತ್ತು ಮದುಮಗಳು ತಾವು ತೆಳ್ಳಗೆ ಬೆಳ್ಳಗೆ ಕಾಣಬೇಕೆಂದು ಎಲ್ಲರೂ ಮೆಚ್ಚಿ ಹೊಗಳಬೇಕೆಂದು ಪ್ರಯತ್ನಗಳನ್ನು ಮಾಡುತ್ತಾ ಇರುತ್ತಾರೆ.

ಫೋಟೋ ವಿಡಿಯೋಗಳಿಲ್ಲದ ಮದುವೆಯೇ ಇಲ್ಲ. ನವ ಜೀವನದ ಆರಂಭಿಕ ದಿನದ ನೆನಪನ್ನು ಮುಂದೊಂದು ದಿನ ಮೇಲುಕು ಹಾಕುವಾಗ ತಾವು ಸುಂದರವಾಗಿಯೇ ಕಾಣಬೇಕೆಂದು ಎಲ್ಲರೂ ಬಯಸುತ್ತಾರೆ. ಮದುವೆಯ ದಿನ ಹತ್ತಿರ ಬಂದಂತೆ ಮಿತವಾಗಿ ಆಹಾರವನ್ನು ತೆಗೆದುಕೊಳ್ಳುತ್ತಾ ಡಯಟ್ಗಳನ್ನು ಪ್ರಾರಂಭಿಸುತ್ತಾರೆ. ವ್ಯಾಯಾಮ, ಯೋಗಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಕೈ ಕಾಲು ಮುಖದ ಮೇಲಿನ ಬೇಡದ ಕೂದಲುಗಳ ತೆಗೆಸಿಕೊಳ್ಳುವುದು, ಫೇಶಿಯಲ್ ಮಾಡಿಸಿಕೊಳ್ಳುವುದು, ಫೇಸ್ ಮಾಸ್ಕ್ ಬಳಸುವುದು, ಹೀಗೆ ಸೌಂದರ್ಯ ವರ್ಧಕಗಳ ಬಳಕೆಯು ಹೆಚ್ಚಾಗುತ್ತದೆ. ಯಾವುದೇ ಹೊಸ ವಸ್ತುಗಳನ್ನು ಅಥವಾ ಕಾಸ್ಮೆಟಿಕ್ ಗಳನ್ನು ಬಳಸುವಾಗ ಅದು ವ್ಯಕ್ತಿಯ ದೇಹಕ್ಕೆ ಸರಿ ಹೋಗುವುದೇ ಎಂಬುದರ ಕುರಿತಾಗಿಯೂ ಯೋಚಿಸಿಕೊಳ್ಳಬೇಕು. ಯಾಕೆಂದರೆ ಬಳಸಿರುವ ರಾಸಾಯನಿಕಗಳು ಕೆಲವರ ದೇಹಕ್ಕೆ ಬಗ್ಗದೆ ಅಲರ್ಜಿಗಳನ್ನು ಉಂಟು ಮಾಡಬಹುದು. ತಮ್ಮ ದೇಹವು ಬಳಸುತ್ತಿರುವ ಸೌಂದರ್ಯ ವರ್ಗಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದೆ ಎಂಬುದನ್ನು ಸ್ವಲ್ಪವೇ ಬಳಸಿ ತಿಳಿದುಕೊಳ್ಳಬೇಕು.
ಇಲ್ಲದಿದ್ದಲ್ಲಿ ಹಾನಿಯಾಗುವುದು ಖಂಡಿತ.


ಹಾಸನದ ಅರಸೀಕೆರೆಯಲ್ಲಿ ಮದುವೆಯಾಗಬೇಕಿದ್ದ ಮದುಮಗಳು ಬ್ಯೂಟಿ ಪಾರ್ಲರ್ಗೆ ಹೋಗಿ ತನ್ನ ವದನವನ್ನು ಹೆಚ್ಚು ಚಂದವಾಗಿಸಿಕೊಳ್ಳಲು ಹಂಬಲಿಸಿದ್ದಾಳೆ. ಬ್ಯೂಟಿ ಪಾರ್ಲರ್ ಗೆ ತೆರಳಿದ್ದಾಗ ಬ್ಯುಟಿಷಿಯನ್ನ ಸಲಹೆಯಂತೆ ಮೇಕಪ್ ಮಾಡುವ ಮೊದಲು ಸ್ಟೀಮ್ ಅನ್ನು ತೆಗೆದುಕೊಳ್ಳಲು ಹೋಗಿ ಮುಖವೇ ಊದಿಕೊಂಡಿದೆ. ಜೊತೆಯಲ್ಲಿ ಇಡೀ ಮುಖವು ಕಪ್ಪಗಾಗಿ ಸುಟ್ಟಿದೆಯಂತೆ. ವಿಷಯ ತಿಳಿದ ಮದುಮಗ ಹಾಗೂ ಆತನ ಕುಟುಂಬವು ಈ ರೀತಿಯಾಗಿ ಮೇಕಪ್ ನಿಂದ ಅವಾಂತರಕ್ಕೆ ಸಿಲುಕಿಕೊಂಡ ಹುಡುಗಿಯೊಂದಿಗೆ ವಿವಾಹವನ್ನೇ ನಿರಾಕರಿಸಿದ್ದಾರಂತೆ. ಈ ನಿರ್ಧಾರಕ್ಕೆ ವಧುವಿನ ಮನೆಯವರು ಕೂಡ ಕಂಗಾಲಾಗಿದ್ದಾರಂತೆ.

ಅಂದಿನ ದಿನ ದಾಂಪತ್ಯ ಜೀವನಕ್ಕೆ ಕಾಲಿಡಬೇಕಾಗಿದ್ದ ದುರ್ಗತಿಯು ತನ್ನ ಮುಖವನ್ನು ತಾನು ನೋಡಿಕೊಂಡಾಗ ಬೆಚ್ಚಾಗಿದ್ದು, ಮನನೊಂದು ತನ್ನ ಕುಟುಂಬಸ್ಥರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಬ್ಯೂಟಿಷಿಯನ್ ವಿರುದ್ಧ ದೂರನ್ನು ದಾಖಲಿಸಿದ್ದಾಳೆ. ಬ್ಯೂಟಿ ಪಾರ್ಲರ್ ನ ಮಾಲೀಕರಾದ ಗಂಗಾ ವಿರುದ್ಧ ಹೇಳಲು ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಅರಸಿಕೆರೆ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಷಯವನ್ನು ತಿಳಿದ ಕೂಡಲೇ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರಂತೆ. ಅತಿಯಾದ ಅಥವಾ ಅನವಶ್ಯಕವಾಗಿ ಸೌಂದರ್ಯವರ್ಧಕಗಳನ್ನು ಬಳಸುವುದಕ್ಕಿಂತ ನೈಜತೆಯನ್ನು ಒಪ್ಪಿಕೊಂಡು ಮುನ್ನಡೆಯುವುದು ಒಳಿತು.

ಈ ಸಂಸ್ಥೆಯಲ್ಲಿ ಓದುವ ಮಕ್ಕಳಿಗೆ ಸರ್ಕಾರಿ ಕೆಲಸ ಪಕ್ಕಾ.! ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಒಮ್ಮೆ ಈ ವಿಚಾರ ನೋಡಿ.

 

ಮಕ್ಕಳಿಗೆ ಉತ್ತಮ ಕೆಲಸ ಹಿಡಿಸುವ ಉದ್ದೇಶದಿಂದ ವಳ್ಳೆಯ ಶಿಕ್ಷಣವನ್ನು ಕೊಡಿಸಲು ಪಾಲಕರು ಹುಡುಕಾಡುತ್ತಿರುತ್ತಾರೆ. ಹೆಚ್ಚು ಅಂಕವನ್ನು ಗಳಿಸುವ ಭರದಲ್ಲಿ ಮಕ್ಕಳು ನೀತಿ ಶಿಕ್ಷಣವನ್ನು ಕಲಿಯುವುದು ಮರೆತಿರುತ್ತಾರೆ. ಇನ್ನು ಹೆಸರಾಂತ ಸಂಸ್ಥೆಗಳು ಕೂಡ ಈ ನಿಟ್ಟಿನಲ್ಲಿ ವತ್ತು ಕೊಡುವುದಿಲ್ಲ. ಮಕ್ಕಳು ಬೆಳೆಯುವ ವಯಸ್ಸಿನಲ್ಲಿ ಮಾನವೀಯ ಮೌಲ್ಯಗಳನ್ನು ತಿಳಿಸುವುದು ಅವಶ್ಯಕ. ಇಲ್ಲೊಂದು ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಉದ್ಯೋಗದೊಂದಿಗೆ ವ್ಯಕ್ತಿತ್ವವನ್ನು ನೀಡುವುದಾಗಿ ಭರವಸೆ ನೀಡಿದೆ.

ಇದೆ ಹೊಸಬೆಳಕು ಸಂಸ್ಥೆ. ಈ ಸಂಸ್ಥೆಯ ಉದ್ದೇಶವು ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಜೊತೆಗೆ ಸಮಾಜಕ್ಕೆ ಉತ್ತಮ ಪ್ರಜೆಯನ್ನು ನೀಡುವುದು. ಇಲ್ಲಿ ಡಿಗ್ರಿಯ ಜೊತೆಗೆ ಐಎಎಸ್, ಕೆಎಸ್ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುತ್ತದಂತೆ. ಮಕ್ಕಳು ಕಲಿಯುವ ಸ್ಥಳದಲ್ಲಿಯೇ ಉಳಿದು ದಿನದ ಸಂಪೂರ್ಣ ಸಮಯವನ್ನು ಉಪಯೋಗಿಸಿಕೊಳ್ಳುತ್ತಾರೆ. ಹಿಂದಿನ ಕಾಲದ ಗುರುಕುಲ ಪದ್ಧತಿಯ ಮಾದರಿಯಲ್ಲಿ ನಡೆಸಲಾಗುತ್ತಿದೆ ಸಾತ್ವಿಕ ಆಹಾರವನ್ನು ನೀಡಲಾಗುತ್ತದಂತೆ.

ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆಯಂತೆ. ಹೊಸಬೆಳಕು ಸಂಸ್ಥೆಯಲ್ಲಿ ಈಗಾಗಲೇ ಅನೇಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮಕ್ಕಳು ಈ ಸಂಸ್ಥೆಯ ಬಗ್ಗೆ ಹೇಳುವುದೇನೆಂದರೆ ‘ನಮಗೆ ಇಲ್ಲಿಯ ಉದ್ದೇಶವು ತುಂಬಾ ಇಷ್ಟವಾಯಿತು. ಯೋಗ, ಧ್ಯಾನ, ಮೌನ, ಅಧ್ಯಯನ ಮತ್ತು ಸಾತ್ವಿಕ ಆಹಾರ ಎಂಬ ಐದು ಚಕ್ರದ ಮೇಲೆ ನಡಿಯುತ್ತಿದೆ. ಪ್ರತಿದಿನವು ಪ್ರಾರಂಭಗೊಳ್ಳುವುದು ಪ್ರತಿಜ್ಞಾ ವಿಧಿಯ ಮೂಲಕ. ಹಗಲಿರುಳು ಪ್ರಾಮಾಣಿಕವಾಗಿ ಐಎಎಸ್ ಪಾಸ್ ಆಗಲು ಶ್ರಮಿಸುತ್ತೇವೆ ಮತ್ತು ಆತ್ಮ ಶುದ್ಧಿಯಿಂದ ಮನವೀಯ ಮೌಲ್ಯಗಳನ್ನು ಕಲಿತು ರಾಮರಾಜ್ಯದ ಕನಸನ್ನು ನನಸು ಮಾಡುತ್ತೇವೆ ಎಂಬುದೆ ಪ್ರತಿಜ್ಷೆಯಾಗಿದೆ.

ಇಂತಹ ಒಳ್ಳೆಯ ಅವಕಾಶ ಕಳೆದುಕೊಂಡರೆ ಮತ್ತೊಮ್ಮೆ ಸಿಗುವುದಿಲ್ಲ. ಮೊದಲಿಗೆ ಕಷ್ಟ ಅನಿಸುತ್ತಿತ್ತು. ಆದರೆ ಬರುಬರುತ್ತಾ ನಮ್ಮ ಡಿಗ್ರೀ ಜೊತೆಗೆ ಐಎಎಸ್ ಪರೀಕ್ಷಾ ತಯಾರಿಯನ್ನು ಮಾಡಿಕೊಳ್ಳುವುದು ರೂಢಿಯಾಯಿತು’ ಎನ್ನುತ್ತಾರೆ. ವಿಜ್ಞಾನ ವಿಭಾಗದಿಂದ ಬಂದಿದ್ದರು ಸಮಾಜವನ್ನು ಓದುವುದು ಕಷ್ಟವೆನಿಸಲಿಲ್ಲಾ. ತುಂಬಾ ಮೊಬೈಲ್ ಬಳಸುತಿದ್ದ ನನಗೆ ಇಲ್ಲಿ ಓದುವ ಹವ್ಯಾಸವು ಬೆಳೆದು ಪುಸ್ತಕಗಳನ್ನು ಇಷ್ಟ ಪಡುವಂತಾಗಿದೆ ನಾನು ಇಲ್ಲಿಯ ಅನುಕರಣೆಗೆ ಹೊಂದಿಕೊಳ್ಳುತ್ತೇನೊ ಇಲ್ಲವೊ ಎಂಬ ಭಯ ಪಾಲಕರಲ್ಲಿ ಇತ್ತು. ಮುನ್ನೂರಾ ಐವತ್ತಕ್ಕು ಜಾಸ್ತಿ ದೂರವಿದೆ ನಮ್ಮನೆ.

ಲಂಚ ತೆಗೆದುಕೊಳ್ಳದೆ ಎಲ್ಲರಿಗೂ ಸಹಾಯಮಾಡುವಂತೆ ನಿಮ್ಮ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ನಮ್ಮದು ಎಂದು ಶಿಕ್ಷಕರೊಬ್ಬರು ಹೇಳಿದರು. ಆ ಮಾತಿಗೆ ನನ್ನ ಪೋಷಕರು ಮೆಚ್ಚಿ ಇಲ್ಲಿ ಓದಿಸಲು ಮುಂದಾದರು’ ಎನ್ನುತ್ತಾಳೆ ಇನ್ನೊಂದು ಹುಡುಗಿ. ಹೆಣ್ಣು ಮಕ್ಕಳ ವಸತಿ ಸೌಲಭ್ಯಗಳು ಚೆನ್ನಾಗಿಯೆ ಇವೆಯಂತೆ. ಒಮ್ಮೆ ಬಂದು ನೋಡಿದರೆ ಸಾಕು ಮಕ್ಕಳನ್ನು ಇಲ್ಲಿಯೇ ಓದಿಸಬೇಕು ಅನಿಸುತ್ತದೆ ಎಂಬುದು ಪಾಲಕರ ಅಭಿಪ್ರಾಯ.

ವಿದ್ಯಾವಂತರೂ ಕೂಡ ಭ್ರಷ್ಟಾಚಾರಗಳಲ್ಲಿ ಭಾಗಿಯಾಗುವುದು, ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದು ನೋಡಿದರೆ ಅರ್ಥವಾಗುವುದು ಅವರಲ್ಲಿ ವ್ಯಕ್ತಿತ್ವದ ಕೊರತೆ ಇದೆ ಎಂಬುದು. ಆದರೆ ಇಲ್ಲಿನ ಮಕ್ಕಳು ವಿದ್ಯೆಯಷ್ಟೇ ವತ್ತನ್ನು ವ್ಯಕ್ತಿತ್ವಕ್ಕೂ ನೀಡಿ ಬೆಳೆಯುತ್ತಿರುವುದು, ಎಲ್ಲರೂ ಈ ಶಿಕ್ಷಣ ಸಂಸ್ಥೆಯತ್ತ ತಿರುಗಿ ನೋಡುವಂತೆ ಮಾಡಿದೆ. ಅನೇಕ ಪಾಲಕರು ತಮ್ಮ ಮಕ್ಕಳ ದಿನಚರಿಯಲ್ಲಾದ ಬದಲಾವಣೆಯನ್ನು, ಶಿಸ್ತನ್ನು ಕಂಡು ಖುಷಿ ಪಟ್ಟಿದ್ದಾರಂತೆ.

ಇನ್ನೊಂದು ವಿಶೇಷವೆಂದರೆ ಮಕ್ಕಳು ಕೋಪವನ್ನು ನಿಯಂತ್ರಿಸಿಕೊಳ್ಳುವ ಮತ್ತು ತಾಳ್ಮೆಯಿಂದ ಕಷ್ಟಕರ ಸನ್ನಿವೇಶಗಳನ್ನು ನಿಭಾಯಿಸುವ ಮನೋಭಾವವನ್ನು ಹೊಂದುತ್ತಿದ್ದಾರಂತೆ. ನಮ್ಮನ್ನು ನಾವು ಕಂಡುಕೊಳ್ಳಲು ಉತ್ತಮ ವೇದಿಕೆ ಎಂದು ಇಲ್ಲಿನ ಮಕ್ಕಳು ಒಕ್ಕೊರಲಿನಿಂದ ಹೇಳುತ್ತಿದ್ದಾರೆ. ವಿಳಾಸ ಇಂತಿದೆ : ಹೊಸಬೆಳಕು IAS ತಪಸ್ಸು.. #9, 2nd ಕ್ರಾಸ್, ಕುರುಬರ ಹಳ್ಳಿ ಮೇನ್ ರೋಡ್, ಬೆಂಗಳೂರು.

ಪ್ರತಿದಿನ ಗರ್ಭಿಣಿ ಮಹಿಳೆಯ ಹೊಟ್ಟೆ ನೆಕ್ಕುತ್ತಿದ್ದ ನಾಯಿ. ಆಮೇಲೆ ಆಗಿದ್ದೇನು ಅಂತ ನೋಡಿದ್ರೆ ನಿಜಕ್ಕೂ ಮೈಂಡ್ ಬ್ಲಾಕ್ ಆಗುತ್ತೆ..!

ನಾಯಿಗಳು ಎಷ್ಟು ನಿಯತ್ತಿನ ಪ್ರಾಣಿಗಳು ಅಂತ ಎಲ್ಲರಿಗೂ ಗೊತ್ತೇ ಇದೆ ಮುಖ್ಯವಾಗಿ ನಾಯಿಗಳು ತಮ್ಮ ಮಾಲೀಕರ ಪ್ರಾಣವನ್ನು ಕಾಪಾಡಲು ತಮ್ಮ ಪ್ರಾಣವನ್ನು ಬೇಕಾದರೂ ಕೊಡಲು ತಯಾರಾಗಿ ಇರುತ್ತವೆ ಇಲ್ಲಿ ಒಬ್ಬ ಗರ್ಭಿಣಿ ಮಹಿಳೆಯು ಒಂದು ನಾಯಿಯನ್ನು ಸಾಕಿರುತ್ತಾಳೆ ಆ ಮಹಿಳೆ ಮತ್ತು ನಾಯಿಯ ನಡುವೆ ನಡೆದ ಒಂದು ಘಟನೆಯನ ಬಗ್ಗೆ ತಿಳಿಯೋಣ.

ನೈತಾನ್ಯಾ ದೇಶದಲ್ಲಿ ವಾಸವಾಗಿದ್ದ ಟೀನಾ ಎಂಬ ಮಹಿಳೆಯು ಕೀಮಾ ಎಂಬ ಪುಟಾಣಿ ನಾಯಿ ಮರಿಯನ್ನು ತುಂಬಾ ಪ್ರೀತಿಯಿಂದ ಸಾಕುತ್ತಿರುತ್ತಾಳೆ. ಕೆಲವು ವರ್ಷಗಳ ನಂತರ ಟೀನಾ ಒಬ್ಬ ಹುಡುಗನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಮದುವೆಯಾದ ಆರು ತಿಂಗಳ ನಂತರ ಟೀನ ಗರ್ಭಿಣಿಯಾಗಿರುತ್ತಾಳೆ. ಎಲ್ಲಾ ಗರ್ಭಿಣಿ ಮಹಿಳೆಯ ರೀತಿಯಲ್ಲಿ ಟೀನಾಳ ಹೊಟ್ಟೆಯು ದಿನೇ ದಿನೇ ದಪ್ಪ ಆಗುತ್ತಿರುತ್ತದೆ ಈ ಸಮಯದಲ್ಲಿ ಟೀನಾಳ ಹೊಟ್ಟೆಯನ್ನು ನೋಡಿ ಅವಳ ಸಾಕು ನಾಯಿ ಕಿಮ್ಮಿ ಪ್ರತಿದಿನ ಬೊಗಳುತ್ತಾ, ಕೆಲವು ವೇಳೆ ಟೀನ ಮಲಗಿರುವಾಗ ಅವಳ ಹೊಟ್ಟೆಯನ್ನು ನೆಕ್ಕುತ್ತ ವಿಚಿತ್ರವಾಗಿ ವರ್ತಿಸುತಿತ್ತು.

ದಿನೆ ದಿನೇ ಅದರ ವರ್ತನೆ ಇನ್ನು ವಿಚಿತ್ರವಾಗಿ ಇತ್ತು. ಇದನ್ನು ಗಮನಿಸಿದ ಆ ದಂಪತಿಗಳು ಕೀಮಾ ನಾಯಿಯು ನಮಗೆ ಏನನ್ನೋ ಹೇಳಲು ಪ್ರಯತ್ನಿಸುತ್ತಿದೆ ಎಂದು ಅರ್ಥ ಮಾಡಿಕೊಂಡು ಟೀನಾಳ ಗಂಡ ಯಾವುದಕ್ಕೂ ಒಂದು ಬಾರಿ ಆಸ್ಪತ್ರೆಗೆ ಹೋಗಿ ಹೊಟ್ಟೆ ಪರೀಕ್ಷೆ ಮಾಡಿಸಿಕೋ ಹೊಟ್ಟೆಯೊಳಗೆ ಇರುವ ಮಗುವಿನ ಆರೋಗ್ಯ ಹೇಗಿದೆ ಎಂದು ಪರೀಕ್ಷಿಸಿಕೋ ಎಂದು ಅವಳಿಗೆ ಹೇಳುತ್ತಾನೆ.

ಮಾರನೇ ದಿನವೇ‌ ಡಾಕ್ಟರ್ ನ ಭೇಟಿ ಮಾಡಿ ನಡೆದ ಘಟನೆಯ ಬಗ್ಗೆ ಡಾಕ್ಟರ್ ಗೆ ತಿಳಿಸುತ್ತಾಳೆ. ಆದರೆ ಎಲ್ಲಾ ರಿಪೋರ್ಟ್ ಗಳನ್ನು ಪರಿಶೀಲಿಸಿ ನಿಮ್ಮ ಆರೋಗ್ಯ ಸ್ಥಿತಿಯು ಎಲ್ಲಾ ನಾರ್ಮಲ್ ಆಗಿ ಇದೆ ನಿಮ್ಮ ನಾಯಿ ವರ್ತಿಸುತ್ತಿರುವುದಕ್ಕೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿ ಅವಳನ್ನು ಮನೆಗೆ ಕಳುಹಿಸಿರುತ್ತಾರೆ. ಡಾಕ್ಟರ್ ಮಾತನ್ನು ಕೇಳಿ ದಂಪತಿಗಳು ನಿರಳರಾಗುತ್ತಾರೆ ಆದರೆ ತಮ್ಮ ನಾಯಿಯನ್ನು ನೋಡಿ ದಂಪತಿಗಳಿಗೆ ಬೇಸರವಾಗುತ್ತದೆ.

ಏಕೆಂದರೆ ಈಗಲೂ ಕೂಡ ನಾಯಿ ಹಾಗೆ ವಿಚಿತ್ರವಾಗಿ ವರ್ತಿಸುತ್ತಾ ಇರುತ್ತದೆ ಟೀನಾ ನಾಯಿ ವರ್ತಿಸುತ್ತಿರುವುದನ್ನು ಗಮನಿಸಿ ತನಗೆ ಎಲ್ಲಿ ಏನೋ ಸಮಸ್ಯೆ ಇರಬಹುದು ಎಂದು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಘಟನೆಯನ್ನು ಹಂಚಿಕೊಂಡು ಯಾರಾದರೂ ಇದಕ್ಕೆ ಪರಿಹಾರ ತಿಳಿಸಿ ಎಂದು ಕೇಳಿರುತ್ತಾರೆ ಇದಕ್ಕೆ ಕೆಲವರು ಕೀಮಾಗೆ ಹೊಟ್ಟೆಕಿಚ್ಚು ಇರಬಹುದು ಎಂತಲೂ ಇನ್ನು ಕೆಲವರು ಕೆಲವು ವೇಳೆ ಸಾಮಾನ್ಯ ಪರೀಕ್ಷೆಗಳಲ್ಲಿ ತಿಳಿಯದಿರಬಹುದು ಅದಕ್ಕೆ ಇನ್ನು ಹೆಚ್ಚಿನ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡುತ್ತಾರೆ.

ಆಗ ಟೀನಾ ಇದರ ಬಗ್ಗೆ ಹೆಚ್ಚಾಗಿ ಯೋಚಿಸಿ ಮಾರನೇ ದಿನವೇ ದಂಪತಿಗಳಿಬ್ಬರು ದೊಡ್ಡ ಆಸ್ಪತ್ರೆಗೆ ಹೋಗಿ ಮತ್ತೊಮ್ಮೆ ಪರೀಕ್ಷಿಸಿಕೊಂಡಿದ್ದಾರೆ ಆಗ ಶಾಕಿಂಗ್ ನ್ಯೂಸ್ ಒಂದು ಹೊರಬರುತ್ತದೆ ಟೀನಾಗೆ ಸ್ಕ್ಯಾನಿಂಗ್ ಮಾಡಿಸಿದಾಗ ಅವಳು ಒಂದು ಭಯಾನಕವಾದ ಕಾಯಿಲೆಯಿಂದ ನರಳುತ್ತಿದ್ದಾಳೆ ಎಂದು ತಿಳಿಯುತ್ತದೆ. ಆ ಕಾಯಿಲೆ ಟೀನಾ ಮತ್ತು ಅವಳ ಹೊಟ್ಟೆಯಲ್ಲಿದ್ದಂತಹ ಮಗುವಿಗೆ ಸಾವು ತಂದು ಒಡ್ಡುವಂತಹ ಭಯಾನಕವಾದ ಕಾಯಿಲೆಯಾಗಿತ್ತು.

ಅಸಲಿ ವಿಷಯವೇನೆಂದರೆ ಟೀನಾ ಹೊಟ್ಟೆಯಲ್ಲಿ ಭಯಾನಕ ಕ್ಯಾನ್ಸರ್ ಗೆಡ್ಡೆ ಒಂದು ಬೆಳೆಯುತ್ತಾ ಇತ್ತು ಇದನ್ನು ನಾಯಿಯು ಮೊದಲೇ ಗ್ರಹಿಸಿದ್ದು ಅದಕ್ಕಾಗಿ ಟೀನಾ ಹೊಟ್ಟೆಯನ್ನು ನೋಡಿ ಆ ನಾಯಿಯು ಯಾವಾಗಲೂ ಬೊಗಳುತ್ತಾ ಇತ್ತು. ನಾಯಿಯ ಈ ವಿಚಿತ್ರ ವರ್ತನೆಯಿಂದ ತನಗಿರುವ ಕಾಯಿಲೆ ಬಗ್ಗೆ ತಿಳಿದು ಇದನ್ನು ಇನ್ನು ಸ್ವಲ್ಪ ದಿನ ಹಾಗೆ ಬಿಟ್ಟಿದ್ದರೆ ಸಮಸ್ಯೆ ಮತ್ತಷ್ಟು ಗಂಭೀರವಾಗಿ ಇರುತ್ತಿತ್ತು.

ಹಾಗೂ ತಾಯಿ ಜೊತೆ ಮಗುವಿನ ಪ್ರಾಣಕ್ಕೂ ಅ.ಪಾ.ಯ.ವಿರುತ್ತಿತ್ತು ಎಂದು ವೈದ್ಯರು ಹೇಳಿದಾಗ ತಕ್ಷಣ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಆ ಗೆಡ್ಡೆಯನ್ನು ತೆಗೆಸಿ ತನಗೆ ಮತ್ತೆ ಮಗುಗೆ ಏನು ತೊಂದರೆ ಆಗದಂತೆ ಎಚ್ಚರಿಕೆ ವಹಿಸುತ್ತಾರೆ. ಹೀಗೆ ಕೆಲವು ದಿನ ಟ್ರೀಟ್ಮೆಂಟ್ ತೆಗೆದುಕೊಂಡು ಟೀನಾ ಆರೋಗ್ಯವಾದ ಮಗುವಿಗೆ ಜನ್ಮ ನೀಡಿದ್ದಾಳೆ ಹಾಗೆ ಅವಳಿಗೆ ಕ್ಯಾನ್ಸರ್ ಕೂಡ ವಾಸಿಯಾಗಿದ್ದು ಮಗು ಕೂಡ ತುಂಬಾ ಆರೋಗ್ಯವಾಗಿ ಇದೆ.

ಮಗ ಚೆನ್ನಾಗಿ ಬದುಕಲಿ ಎಂಬ ಆಸೆಯಿಂದ ಆಸ್ತಿ ಮತ್ತು ಮನೆ ಕಟ್ಟಿಕೊಟ್ಟ ತಂದೆ. ಆದ್ರೆ ಕೊನೆಗೆ ಮಗ ಮಾಡಿದ್ದೇನು ಗೊತ್ತಾ.? ಪ್ರತಿಯೊಬ್ಬ ತಂದೆ ತಾಯಿ ಕೂಡ ಇದನ್ನು ನೋಡಲೇಬೇಕು.

 

ಚಿಕ್ಕಂದಿನಿಂದಲೂ ಮಗ ಬೇಕು ಎಂದಿದ್ದನ್ನು ತಂದೆ ಕೊಡಿಸುತ್ತಿದ್ದರು. ಆದರೆ ಕೊನೆಯಲ್ಲಿ ಮಗನು ತಂದೆಯ ಕೊ-ಲೆ-ಗೆ ಕೋಟಿ ರೂಪಾಯಿಗಳಷ್ಟು ಕೊಟ್ಟು ಸುಪಾರಿ ನೀಡಿದ್ದು, ತಂದೆಯ ಕಥೆಯನ್ನೇ ಮುಗಿಸಿ ಬಿಟ್ಟಿದ್ದಾನೆ. ಇಂತದ್ದೊಂದು ಘಟನೆ ನಡೆದಿರುವುದು ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ. ಈ ಕೊ-ಲೆ-ಯ ಹಿಂದೊಂದು ಬಲವಾದ ಕಾರಣವಿದೆಯಂತೆ.

ಹುಟ್ಟಿದ ಶಿಶುವಿನ ಲಾಲನೆ ಪಾಲನೆಯಿಂದ ಹಿಡಿದು ವಿದ್ಯಾಭ್ಯಾಸವನ್ನು ನೀಡಿ ಸಂಸ್ಕಾರ ಸಂಸ್ಕೃತಿಯನ್ನು ತಿಳಿಸಿಕೊಟ್ಟು ಬೆಳೆಸುವವರು ತಂದೆ ತಾಯಿ. ತಾವು ದುಡಿದ ದುಡ್ಡೆಲ್ಲವನ್ನು ಮಕ್ಕಳ ಸಂತೋಷಕ್ಕಾಗಿ ಮೀಸಲಿಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ತಾವು ಬೆಳೆದು ನಿಂತು ಉದ್ಯೋಗವನ್ನು ಹಿಡಿದು ಸಂಸಾರವನ್ನು ಪ್ರಾರಂಭಿಸಿದಾಗ ತಂದೆ ತಾಯಿಗಳನ್ನು ಮರೆಯುತ್ತಾರೆ. ಹೆತ್ತವರನ್ನು ತಮ್ಮಿಂದ ದೂರವಿಡುತ್ತಾರೆ.

ಅದಕ್ಕಾಗಿ ಆಶ್ರಮಗಳ ಸಂಖ್ಯೆಯು ಕೂಡ ಹೆಚ್ಚಾಗುತ್ತಿದೆ. ಒತ್ತಡದ ಬದುಕಿನಲ್ಲಿ ವಯಸ್ಕ ತಂದೆ-ತಾಯಿಗಳನ್ನು ನೋಡಿಕೊಳ್ಳುವುದು ಮಕ್ಕಳಿಗೆ ಹೊರೆಯಾಗಿ ಕಾಣುತ್ತಿದೆ. ತಮ್ಮ ಕರ್ತವ್ಯವನ್ನು ಇತ್ತೀಚಿನ ಹಲವಾರು ಯುವಕರು ಮರೆತಿದ್ದಾರೆ. ತಂದೆ ತಾಯಿ ಮಾಡಿರುವ ಆಸ್ತಿ, ಹಣ, ಬಂಗಾರ, ಮನೆ ಎಲ್ಲದರಲ್ಲಿಯೂ ಮಕ್ಕಳಿಗೆ ಪಾಲು ಬೇಕು. ಆದರೆ ಅವರನ್ನು ನೋಡಿಕೊಳ್ಳುವುದು ಯಾರಿಗೂ ಬೇಡ.

ಬೆಂಗಳೂರಿನ ಮಾರಾತ್ ಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರುವ ಭಾಗದಲ್ಲಿ ಮಣಿಕಂಠ ಎಂಬ ವ್ಯಕ್ತಿಯು ತನ್ನ ತಂದೆಯನ್ನೇ ಮುಗಿಸಲು ಸುಪಾರಿ ನೀಡಿದ್ದನಂತೆ. ಇವರ ತಂದೆಯ ಹೆಸರು ನಾರಾಯಣಸ್ವಾಮಿ. ಅವರು ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದರು. ಅವರು ಫೆಬ್ರುವರಿ 13 ರಂದು ಅನುಮಾನಾಸ್ಪದ ರೀತಿಯಲ್ಲಿ ಕೊ-ಲೆಯಾಗಿದ್ದರು. ಇಂದ್ರಪ್ರಸ್ಥ ಅಪಾರ್ಟ್ಮೆಂಟ್ ಬಳಿ ನಾರಾಯಣಸ್ವಾಮಿ ಅವರ ಶ-ವ-ವು ಪತ್ತೆಯಾಗಿತ್ತು.

ಈ ಘಟನೆಯು ತಿಳಿದಂತೆಲೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದರು. ತನಿಖೆ ನಡೆಸುವ ವೇಳೆ ಆರೋಪಿಗಳಾದ ನಡವತ್ತಿ ಶಿವ ಹಾಗೂ ಆದರ್ಶ ಎಂಬುವವರನ್ನು ಬಂಧಿಸಿದ್ದರು. ಈ ಆರೋಪಿಗಳನ್ನು ಸರಿಯಾದ ರೀತಿಯಲ್ಲಿ ವಿಚಾರಿಸಿದಾಗ ವಿಚಿತ್ರವಾದ ಸತ್ಯ ಒಂದು ಹೊರ ಬಿದ್ದಿತ್ತು. ಅದೇನೆಂದರೆ ನಾರಾಯಣಸ್ವಾಮಿಯವರ ಪ್ರಾ-ಣ-ವನ್ನು ತೆಗೆಯಲು ಅವರ ಸ್ವಂತ ಪುತ್ರನಾದ ಮಣಿಕಂಠನೆ ಹಣ ನೀಡಿರುವುದು.

ಈತ ತನ್ನ ತಂದೆಯನ್ನು ಯಾರಿಗೂ ತಿಳಿಯದ ಹಾಗೆ ಮುಗಿಸಿದರೆ ಆರೋಪಿಗಳಿಗೆ ಹಣದೊಂದಿಗೆ ಒಂದು ಫ್ಲಾಟ್ ಹಾಗೂ ಐಷಾರಾಮಿ ಕಾರೊಂದನ್ನು ನೀಡುವುದಾಗಿ ಹೇಳಿದ್ದನಂತೆ. ಅಡ್ವಾನ್ಸ್ ಹಣವಾಗಿ 15 ಲಕ್ಷ ರೂಪಾಯಿಗಳನ್ನು ಅದಾಗಲೇ ನೀಡಿದ್ದನಂತೆ. ಈ ವಿಷಯವು ಬೆಳಕಿಗೆ ಬರುತ್ತಿದ್ದಂತಲೇ ಪೊಲೀಸರು ನಾರಾಯಣಸ್ವಾಮಿಯವರ ಪುತ್ರ ಮಣಿಕಂಠನನ್ನು ಬಂಧಿಸಿದ್ದಾರೆ.

ಮಣಿಕಂಠನಿಗೆ ತನ್ನ ತಂದೆಯ ಯಾವ ವಿಚಾರಕ್ಕಾಗಿ ವಿರೋಧವಿತ್ತೆಂದು ಪೊಲೀಸರು ಕೇಳಿದಾಗ ಆತ ಉತ್ತರಿಸಿದ್ದಾನಂತೆ. ತಂದೆ ಸಾಕಷ್ಟು ಆಸ್ತಿಯನ್ನು ಹೊಂದಿದ್ದರಂತೆ, ಆದರೆ ಮಗನ ಹೆಸರಿನಲ್ಲಿ ಯಾವುದೇ ಆಸ್ತಿ ಇರಲಿಲ್ಲವಂತೆ. ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಗಳನ್ನು ತಮಗೆ ಇಷ್ಟ ಬಂದವರಿಗೆ ನೀಡುತ್ತಿದ್ದರಂತೆ. ಮಣಿಕಂಠನಿಗೆ ಮದುವೆಯಾಗಿದ್ದರೂ ಕೂಡ ಇನ್ನೊಂದು ಹೆಣ್ಣಿನ ಜೊತೆಗೆ ಸಂಬಂಧವಿತ್ತಂತೆ.

ಅದೇ ವಿಚಾರವಾಗಿ ಗಂಡ ಹೆಂಡತಿಯ ಮಧ್ಯೆ ಆಗಾಗ ಜಗಳವಾಗುತ್ತಿತ್ತಂತೆ. ಮಧ್ಯ ಪ್ರವೇಶಿಸಿದ ನಾರಾಯಣಸ್ವಾಮಿ ಹೆಂಡತಿಗೆ ವಿಚ್ಛೇದನ ನೀಡುವಂತೆ ತಿಳಿಸಿದರಂತೆ. ಅಷ್ಟೇ ಅಲ್ಲದೆ ವಿಚ್ಛೇದನದ ನಂತರದ ಜೀವನದಲ್ಲಿ ಕಷ್ಟಗಳು ಬರಬಾರದೆಂದು ತಮ್ಮ ಸೊಸೆಗಾಗಿ ಒಂದು ಫ್ಲಾಟ್ ಅನ್ನು ಬರೆದುಕೊಡುವುದಾಗಿ ತಿಳಿಸಿದರಂತೆ. ಈ ಎಲ್ಲಾ ಕಾರಣಕ್ಕಾಗಿ ಮಣಿಕಂಠ ತಂದೆಯನ್ನು ಸಾ-ಯಿ-ಸಲು ಸುಪಾರಿ ನೀಡಿದ್ದ ಎಂಬುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಇದೀಗ ಆತ ಪೊಲೀಸರ ಕೈವಶವಾಗಿದ್ದಾನೆ. ನೋಡಿದ್ರಲ್ಲ ತಂದೆಗೆ ಮಗ ಹೇಗೆ ಮಾಡಿದ್ದಾನೆ ಅಂತ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.

ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಅಮ್ಮನಿಗೆ ಸ್ವತಃ ತಾನೇ ಮುಂದು ನಿಂತು 2ನೇ ಮದುವೆ ಮಾಡಿಸಿದ ಮಗ..! ಆತನ ಕಾರ್ಯಕ್ಕೆ ಎಲ್ಲರಿಂದಲೂ ಸಿಕ್ಕಿದೆ ಮೆಚ್ಚುಗೆ.

 

ತಂದೆಯ ಮ-ರ-ಣದ ಬಳಿಕ ಒಂಟಿಯಾಗಿ ಜೀವನವನ್ನು ಸಾಗಿಸುತ್ತಿದ್ದ ಅಮ್ಮನಿಗೆ ಮನವೊಲಿಸಿ ಮಗನೇ ನಿಂತು ಮರು ಮದುವೆ ಮಾಡಿಸಿದ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ. ಈ ಕ್ರಾಂತಿಕಾರಿ ಮಗನ ಹೆಸರು ಯುವರಾಜ್. ‘ಅಮ್ಮನ ಹಣೆಯಲ್ಲಿ ಇಲ್ಲದ ಕುಂಕುಮ, ಬಳೆಗಳಿಲ್ಲದ ಕೈ ಇವೆಲ್ಲವನ್ನು ನೋಡಲು ತುಂಬಾ ನೋವಾಗುತ್ತಿತ್ತು. ಅದಕ್ಕಾಗಿ ಮರು ಮದುವೆ ಮಾಡಲು ನಿರ್ಧರಿಸಿದೆ’ ಎಂದು ಯುವರಾಜ್ ಹೇಳುತ್ತಾರೆ.

ಸಾಮಾನ್ಯವಾಗಿ ನಾವು ದಿನನಿತ್ಯದ ಬದುಕಿನಲ್ಲಿ ತಂದೆ-ತಾಯಿಗಳು ನಿಂತು ಮಕ್ಕಳಿಗೆ ಮದುವೆ ಮಾಡಿಸುವುದನ್ನು ನೋಡಿರುತ್ತೇವೆ. ವಧು ವರರನ್ನು ಹುಡುಕುವುದರಿಂದ ಹಿಡಿದು ಮದುವೆ ಮನೆಯ ಎಲ್ಲಾ ತಯಾರಿಗಳನ್ನು ತಂದೆ-ತಾಯಿಯೇ ವಹಿಸಿಕೊಳ್ಳುತ್ತಾರೆ. ಕಷ್ಟವಾದರೂ ಸರಿ; ನೂರಾರು ಸಂಖ್ಯೆಯಲ್ಲಿ ಸಂಬಂಧಿಗಳನ್ನು ಕರೆದು, ಊಟೋಪಚಾರ, ಅತಿಥಿ ಸತ್ಕಾರವೆಂದು ಮಾಡುತ್ತಾ, ಮದುಮಕ್ಕಳಿಗೆ ಉಡುಗೊರೆ ಬಂಗಾರವೆಂದು ಮಾಡಿಸಿ ಎಲ್ಲ ಜವಾಬ್ದಾರಿಗಳನ್ನು ತಂದೆ-ತಾಯಿಯೇ ಹೊತ್ತು ವಿವಾಹ ಕಾರ್ಯವನ್ನು ನೆರವೇರಿಸುತ್ತಾರೆ. ಆದರೆ ಮಹಾರಾಷ್ಟ್ರದ ಯುವರಾಜ್ ತಂದೆಯ ಸಾ-ವಿ-ನ ಬಳಿಕ, ಅಮ್ಮನಿಗೆ ಹೊಸ ಜೀವನವನ್ನು ನೀಡಲು ಎರಡನೇ ಮದುವೆಯನ್ನು ಮಾಡಿಸಿದ್ದಾನೆ.

ಯುವರಾಜ್ ತನ್ನ ತಂದೆ ಮತ್ತು ತಾಯಿಯೊಂದಿಗೆ ಕಾರವೀರ ತಾಲೂಕಿನ ಶಿಂಗ್ಣಾಪುರದಲ್ಲಿ ವಾಸವಾಗಿದ್ದ. ತಂದೆ ನಾರಾಯಣ ಶೆಲ್ಲಿ ಹಾಗೂ ತಾಯಿ ರತ್ನಾ ಶೆಲ್ಲಿ. ನಾರಾಯಣ ಶೈಲಿ ಅವರು ಸೆಂಟ್ರಿಂಗ್ ಕೆಲಸವನ್ನು ಮಾಡಿಕೊಂಡಿದ್ದರು. ಯುವರಾಜ್ ಖಾಸಗಿ ಬ್ಲಡ್ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಮತ್ತು ಸಂಜೆ ನೃತ್ಯ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಪುಟ್ಟ ಸಂಸಾರವು ಕಷ್ಟ ನಷ್ಟಗಳಿದ್ದರೂ ಖುಷಿಯಿಂದಲೇ ಸಾಗುತ್ತಿತ್ತು. ಆದರೆ ಅದೊಂದು ಘಟನೆ ಸುಖವನ್ನೇ ಹಾಳು ಮಾಡಿತು. 2022ರ ಜುಲೈ 26ರಂದು ಯುವರಾಜ್ ತಂದೆ ಪ್ರಯಾಣಿಸುತ್ತಿದ್ದಾಗ ವಾಹನವು ಅ.ಪ.ಘಾ.ತ.ಕ್ಕೀಡಾಯಿತು.

ಆ ಕೂಡಲೇ ಚಿಕಿತ್ಸೆಯನ್ನು ಕೊಡಿಸಿದರು ಕೂಡ ನಾರಾಯಣ್ ಬದುಕುಳಿಯಲೇ ಇಲ್ಲ. ಅಮ್ಮ ಮಗ ಇಬ್ಬರು ನಾರಾಯಣ ಶೆಲ್ಲಿ ಅವರ ಮರಣದ ನೋವಿನಿಂದ ಹೊರಬರಲು ತೊಳಲಾಡಿದರು. ಯುವರಾಜ್ ತಾಯಿ ರತ್ನಾ ಅದಾಗಲೇ ಕರೋನಾ ಸಂದರ್ಭದಲ್ಲಿ ತನ್ನ ಆರು ಜನ ಸಹೋದರ ಸಹೋದರಿಯರನ್ನು ಕಳೆದುಕೊಂಡಿದ್ದಳು. ಮಹಾಮಾರಿಯು ಮಾಡಿದ ಅವಾಂತರದಿಂದ ಹೊರಬರುವಷ್ಟರಲ್ಲಿ ತನ್ನ ಪತಿಯನ್ನು ಕಳೆದುಕೊಂಡಳು. ಇದರಿಂದಾಗಿ ಆಕೆ ಮಾನಸಿಕವಾಗಿ ತುಂಬಾ ನೋವನ್ನು ಅನುಭವಿಸಿ ಖಿನ್ನತೆಗೆ ಒಳಗಾಗಿದ್ದಳು.

ಖಿನ್ನತೆಯಿಂದಾಗಿ ದೇಹದ ರೋಗ ನಿರೋಧಕ ಶಕ್ತಿಯು ಕುಗ್ಗಿ ಕಾಯಿಲೆಗಳು ಬರಲು ಪ್ರಾರಂಭಿಸಿದವಂತೆ. ನಗುನಗುತ್ತಾ ಜೀವನ ಸಾಗಿಸುತ್ತಿದ್ದ ತಾಯಿಯ ಬದುಕಲ್ಲಿ ಇಷ್ಟೊಂದು ನೋವನ್ನು ನೋಡಿ ಯುವರಾಜ್ ಕೂಡ ಖಿನ್ನತೆಗೊಳಗಾಗಿದ್ದನಂತೆ. ಕುಂಕುಮವಿಲ್ಲದ ತಾಯಿಯ ಹಣೆ, ಬಳೆಗಳಿಲ್ಲದ ತಾಯಿಯ ಕೈ ಇವೆಲ್ಲ ಯುವರಾಜ್ಗೆ ತುಂಬಾ ನೋವು ಉಂಟು ಮಾಡಿತ್ತಂತೆ. ಹತಾಶಳಾದ ರತ್ನಾಳನ್ನು ಉಳಿಸಿಕೊಳ್ಳುವ ಭರದಲ್ಲಿ ಯುವರಾಜ್, ದೂರದ ಸಂಬಂಧಿ ಹಾಗೂ ಎರಡು ವರ್ಷದ ಹಿಂದೆಯೇ ವಿ.ಚ್ಛೇ.ದ.ನ ಪಡೆದು ಒಬ್ಬಂಟಿಯಾಗಿ ಬದುಕುತ್ತಿದ್ದ ಕರ್ನಾಟಕದ ಕರಗಜಾ ಗ್ರಾಮದ ಮಾರುತಿ ವಾಟ್ಕರ್ ಎಂಬುವವರ ಜೊತೆ ತಾಯಿಗೆ ಮರು ವಿವಾಹ ಮಾಡಲು ನಿರ್ಧರಿಸಿದನು.

ಅಂತೆಯೇ ಜನವರಿ 12ರಂದು ಗುರುವಾರ ಶಿಂಗ್ಣಾಪುರದಲ್ಲಿ ಮಾರುತಿಯವರೊಂದಿಗೆ ತಾಯಿಗೆ ಎರಡನೇ ಮದುವೆಯನ್ನು ಮಾಡಿಸಿದನು. ಮರು ಮದುವೆಯಾದರೆ ಸಮಾಜ ಏನು ಹೇಳುತ್ತದೆಯೋ ಎಂದು ನಿರಾಕರಿಸಿದ್ದ ತಾಯಿಯನ್ನು ಮರು ಮದುವೆಗೆ ಒಪ್ಪಿಸಿ ತಾನೇ ನಿಂತು ಎಲ್ಲಾ ಕಾರ್ಯಕ್ರಮವನ್ನು ಮಾಡಿಸಿರುವ ಯುವರಾಜ್ಗೆ ಎಲ್ಲೆಡೆಯಿಂದಲೂ ಹರ್ಷ ವ್ಯಕ್ತವಾಗಿದೆಯಂತೆ. ಮಹಿಳೆಯ ಭಾವನೆಗೆ, ಘನತೆಗೆ ಗೌರವವನ್ನು ನೀಡುವ ಕೆಲಸ ಮಾಡಿದ್ದಾನೆ ಎಂದು ಹೊಗಳಿದ್ದಾರಂತೆ.

ದಿನವಿಡೀ ಮೋರಿನೇ ನೋಡುತ್ತಿದ್ದ ನಾಯಿ ಅನುಮಾನದಿಂದ ಮೋರಿನ ಓಪನ್ ಮಾಡಿ ನೋಡಿದ ಅಲ್ಲಿದ್ದವರೆಲ್ಲ ನಿಜಕ್ಕೂ ಒಂದು ಕ್ಷಣ ಬಿಚ್ಚಿ ಬಿದ್ದರು..!

ಭೂಲೋಕದ ಮೇಲೆ ಮನುಷ್ಯನ ನಾಗರೀಕತೆ ಆರಂಭವಾದ ದಿನದಿಂದ ಮನುಷ್ಯರಿಗೆ ತುಂಬಾ ಹತ್ತಿರವಾದ ಪ್ರಾಣಿಗಳಲ್ಲಿ ನಾಯಿ ಕೂಡ ಒಂದು ಏಕೆಂದರೆ ನಿಯತ್ತು ಮತ್ತು ವಿಶ್ವಾಸಕ್ಕೆ ಮತ್ತೊಂದು ಹೆಸರೆಂದರೆ ಅದು ನಾಯಿ ಎಂದು ಹೇಳಬಹುದು. ನಾಯಿಗೆ ಒಂದೇ ಒಂದು ಬಿಸ್ಕೆಟ್ ಹಾಕಿದರೆ ಸಾಕು ಆ ನಾಯಿ ಜೀವನವಿಡಿ ನಮಗೆ ನಿಯತ್ತಾಗಿ ವಿಶ್ವಾಸದಿಂದ ಇರುತ್ತದೆ ನಾಯಿಗಳಿಗೆ ಇರುವ ಚಾಣಾಕ್ಷ ಬುದ್ಧಿಗಳಿಂದ ಅಪರಾಧಿಗಳನ್ನು ಹಿಡಿಯಲು ಪೊಲೀಸರು ನಾಯಿಗಳನ್ನು ಬಳಸುತ್ತಾರೆ ಹೀಗೆ ಹಲವಾರು ರೀತಿಯಲ್ಲಿ ನಾಯಿಗಳು ನಮಗೆ ಸಹಾಯ ಮಾಡುತ್ತವೆ.

ನಾಯಿಗಳನ್ನು ನೋಡಿ ಮನುಷ್ಯರು ಕಲಿಯಬೇಕಾದಂತಹ ತುಂಬಾ ವಿಷಯಗಳಿವೆ. ನಾಯಿಗಳಿಗೆ ಸಂಬಂಧಿಸಿದ ಕೆಲವು ರೋಚಕ ಕಥೆಗಳನ್ನು ಇಲ್ಲಿ ಹೇಳಲಾಗಿದೆ. ಬೋಟ್ ಒಂದರಲ್ಲಿ ಒಬ್ಬ ವ್ಯಕ್ತಿ ಜೊತೆಗೆ ನಾಯಿಯೊಂದು ಪ್ರಯಾಣಿಸುತ್ತಿರುತ್ತದೆ. ಆಗ ಇದಕ್ಕಿದ್ದ‌ ಹಾಗೆ ನಾಯಿ ನೀರಿನೊಳಗೆ ಜಿಗಿದು ಈಜಿಕೊಂಡು ಹೋಗುತ್ತದೆ ಏಕೆಂದರೆ ನೀರಿನೊಳಗೆ ಒಂದು ಉಡ ಮುಳುಗುತ್ತಿರುವುದನ್ನು ನೋಡಿ ನಾಯಿಯು ಉಡವನ್ನು ರಕ್ಷಿಸಿ ತನ್ನ ತಲೆಯ ಮೇಲೆ ಕೂರಿಸಿಕೊಂಡು ಮತ್ತೆ ಈಜಿ ಬಂದು ದಡ ತಲುಪಿಸಿದೆ.

ಹೀಗೆ ನೀರಿನಲ್ಲಿ ತಾನು ಮುಳುಗಿ ಹೋಗುವ ಸಾಧ್ಯತೆಗಳು ಇದ್ದರು ತನ್ನ ಪ್ರಾಣವನ್ನು ಲೆಕ್ಕಿಸದೆ ಉಡವನ್ನು ನಾಯಿ ಕಾಪಾಡಿತು. ಮತ್ತೊಬ್ಬ ಕಷ್ಟದಲ್ಲಿ ಇರುವ ವ್ಯಕ್ತಿಗೆ ಹೇಗೆ ಸಹಾಯ ಮಾಡಬೇಕು ಎಂದುದನ್ನು ನಾಯಿ ನೋಡಿ ಕಲಿಯಬೇಕು. ಒಂದು ನದಿಯಲ್ಲಿ ಜಿಂಕೆಮರಿ ಒಂದು ಕೊಚ್ಚಿಕೊಂಡು ಹೋಗುತ್ತಿತ್ತು ಅದನ್ನು ನುಡಿದ ನಾಯಿ ಒಂದು ಕೂಡಲೇ ನೀರಿನಲ್ಲಿ ಇಳಿದು ಜಿಂಕೆಮರಿಯನ್ನು ಬಾಯಿಂದ ಕಚ್ಚಿಕೊಂಡು ಬಂದು ಕ್ಷೇಮವಾಗಿ ತಂದು ದಡಕ್ಕೆ ಬಿಡುತ್ತದೆ. ಹೇಗೆ ನಾಯಿಗೆ ಇರುವ ಮಾನವೀಯತೆ ಮತ್ತೆ ಮನುಷ್ಯತ್ವ ಗುಣವನ್ನು ಮನುಷ್ಯರು ಕಲಿಯಬೇಕಾಗಿದೆ.

ಇನ್ನು ವಿಚಾರಕ್ಕೆ ಬರುವುದಾದರೇ ಒಂದು ನಾಯಿ ರಸ್ತೆ ಬಳಿಯಲ್ಲಿರುವ ಡ್ರೈನೇಜ್ ಚೇಂಬರ್ ನ ಪಕ್ಕ ಕೆಲ ಕಾಲ ಹಾಗೆ ಕುಳಿತಿರುತ್ತದೆ ಅಲ್ಲಿ ಓಡಾಡುತ್ತಿದ್ದ ಅಕ್ಕಪಕ್ಕದ ಜನರು ಅದನ್ನು ನೋಡುತ್ತಾ ಹೋಗುತ್ತಿದ್ದರು ಅದರಲ್ಲಿ ಒಬ್ಬಳು ಹುಡುಗಿ ನಾಯಿಯು ಏಕೆ ಅಲ್ಲಿ ಕುಳಿತಿದೆ ಎಂದು ಕುತೂಹಲದಿಂದ ನಾಯಿಯ ಬಳಿ ಹೋಗಿ ಅದಕ್ಕೆ ಹೊಟ್ಟೆ ಹಸಿದಿರಬಹುದು ಎಂದು ಭಾವಿಸಿ ಊಟ ಹಾಕುತ್ತಾಳೆ. ಆದರೆ ನಾಯಿ ಊಟವನ್ನು ಕೂಡ ಡ್ರೈನೇಜ್ ಒಳಗೆ ತಳ್ಳಿಬಿಟ್ಟು ಮೋರಿ ಕಡೆ ತಲೆ ತೋರಿಸಿ ಆ ಹುಡುಗಿಯ ಮುಂದೆ ಜೋರಾಗಿ ಬೊಗಳುತ್ತದೆ.

ಆದರೆ ಆ ಹುಡುಗಿಗೆ ಅರ್ಥವಾಗದೆ ಆಫೀಸಿಗೆ ತಡವಾಗುತ್ತದೆ ಎಂದು ಹೊರಟು ಬಿಡುತ್ತಾಳೆ. ಆದರೆ ನಾಯಿ ದಿನವಿಡಿ ಆ ಚೇಂಬರ್ ಮುಂದೆಯೆ ಕುಳಿತಿರುತ್ತದೆ ಅದೇ ಹುಡುಗಿ ಆಫೀಸ್ ಮುಗಿಸಿ ಬರುವಾಗಲು ನಾಯಿ ಡ್ರೈನೇಜ್ ಹತ್ತಿರವೇ ಇರುವುದನು ನೋಡಿ ಸಂದೇಹದಿಂದ ನಾಯಿಯ ಬಳಿ ಬಂದು ಪ್ರೀತಿಯಿಂದ ತಲೆ ಸವರುತ್ತಾಳೆ ನಾಯಿಯು ಮತ್ತೆ ಡ್ರೈನೇಜ್ ಕಡೆ ತಲೆ ತೋರಿಸಿ ಜೋರಾಗಿ ಬೊಗಳುತ್ತಿತ್ತು ಆದರೆ ಅಲ್ಲಿದ್ದವರಿಗೆಲ್ಲಾ ನಾಯಿ ಹೇಳುತ್ತಿರುವುದು ಗೊತ್ತಾಗದೆ ತಕ್ಷಣ ಅನಿಮಲ್ ರಿಸೀವ್ ಸ್ಟೇಷನ್ ಗೆ ಹುಡುಗಿ ಕರೆ ಮಾಡುತ್ತಾಳೆ.

ಅಲ್ಲಿನ ಸಿಬ್ಬಂದಿ ಬಂದು ನಾಯಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದರೂ ನಾಯಿಯು ಅಲ್ಲಿಂದ ಮೇಲೆ ಎದ್ದಲಿಲ್ಲ. ಆಗ ಸಂದೇಹದಿಂದ ಡ್ರೈನೇಜ್ ಒಳಗೆ ಏನಿದೆ ಎಂದು ತಿಳಿಯಲು ಪ್ರಯತ್ನಿಸುತ್ತಾರೆ. ಮೊದಲಿಗೆ ಅದು ತಿಳಿಯಲಿಲ್ಲ ನಂತರ ಮೋರಿ ಒಳಗೆ ಸಿಸಿ ಕ್ಯಾಮರಾ ಬಿಟ್ಟು ನೋಡಿದಾಗ ಆ ಮೋರಿಯ ಒಳಗೆ ಸುಮಾರು ನಾಲ್ಕು ಬೆಕ್ಕಿನ‌ ಮರಿಗಳು ಇದ್ದವು. ಮೋರಿಯಿಂದ ಹೊರ ಬರಲಾಗದೆ ಆ ಬೆಕ್ಕಿನ ಮರಿಗಳು ರೋದಿಸುತ್ತಿದ್ದವು ಅದನ್ನು ಗಮನಿಸಿದ ನಾಯಿಯು ಅವುಗಳನ್ನು ಕಾಪಾಡುವ ಉದ್ದೇಶದಿಂದ ಬೆಳಿಗ್ಗೆಯಿಂದಲೂ ಆ ಮೋರಿಯ ಬಳಿ ಕುಳಿತಿತ್ತು ತಕ್ಕಣ ರಿಸಿವ್ ಸಿಬ್ಬಂದಿಗಳು ಬೆಕ್ಕಿನ ಮರಿಗಳನ್ನು ಹೊರ ತೆಗೆದಿದ್ದಾರೆ ಹೊರ ಬಂದ ಬೆಕ್ಕಿನ ಮರಿಗಳನ್ನು ನೋಡಿದ ನಾಯಿ ಅಲ್ಲಿಂದ ಹೊರಟು ಹೋಗುತ್ತದೆ.

ಹೆತ್ತ ತಾಯಿಯನ್ನು ದೇವಸ್ಥಾನಕ್ಕೆ ಅಂತ ಕರೆದುಕೊಂಡ ಹೋದ ಮಗ ಆಕೆಯನ್ನು ಅಲ್ಲೆ ಬಿಟ್ಟು ಹೋಗ್ತಾನೆ. ನಂತರ ಆಗಿದ್ದೇನು ಗೊತ್ತ.? ನಿಜಕ್ಕೂ ಮೂಖ ವಿಸ್ಮಿತರಾಗುತ್ತಿರ.!

ತಾಯಿ ಪ್ರೀತಿಯನ್ನು ಮೀರಿಸುವಂತಹ ನಿಸ್ವಾರ್ಥ ಪ್ರೀತಿ ಪ್ರಪಂಚದಲ್ಲಿ ಬೇರೆ ಯಾವುದೂ ಇಲ್ಲ . ತಂದೆ ತಾಯಿಗಳು ಎಷ್ಟೋ ತ್ಯಾಗ ಮಾಡಿ ತಮ್ಮ ಮಕ್ಕಳನ್ನು ಪ್ರೀತಿಯಿಂದ ಸಾಕುತ್ತಾರೆ. ಒಂಭತ್ತು ತಿಂಗಳು ತನ್ನ ಗರ್ಭದಲ್ಲಿ ಮಗುವಿನ ಭಾರವನ್ನು ಹೊತ್ತು ಹೆತ್ತು ಸಾಕುತ್ತಾಳೆ. ಆದರೆ ಇಲ್ಲಿ ಒಬ್ಬ ಮಗನು ತನ್ನ ತಾಯಿಯನ್ನು ಗುಡಿಯ ಹತ್ತಿರ ಬಿಟ್ಟು ಹೋಗಿದ್ದಾನೆ ಮುಂದೇನಾಯಿತು ನೋಡಿ. ತಮಿಳುನಾಡಿನ ಚೆನ್ನೈನಲ್ಲಿ ಬಹಳ ಫೇಮಸ್ ಆಗಿರುವಂತಹ ಒಂದು ಮಾರಿಯಮ್ಮನ ದೇವಸ್ಥಾನವಿದೆ ಈ ದೇವಸ್ಥಾನದ ಮುಂದೆ ಇರುವಂತಹ ಮೆಟ್ಟಿಲುಗಳ ಮೇಲೆ ಬಹಳಷ್ಟು ಜನ ದೇವಸ್ಥಾನಕ್ಕೆ ಬರುವಂತಹ ಭಕ್ತರಿಂದ ಭಿಕ್ಷೆ ಬೇಡುತ್ತಿರುತ್ತಾರೆ.

ಒಂದು ದಿನ ಏಳು ವರ್ಷದ ಒಬ್ಬ ಪುಟ್ಟ ಬಾಲಕ ಅಲ್ಲಿನ ಭಿಕ್ಷುಕರೆಗೆಲ್ಲ ತಲಾ ಇಪ್ಪತ್ತೊಂದು ರೂಪಾಯಿಗಳನ್ನು ಕೊಡುತ್ತಿದ್ದ. ಆಗ ಅಲ್ಲಿದ್ದ ಒಬ್ಬ ಭಿಕ್ಷುಕ ಆ ಹುಡುಗನನ್ನು ಇಲ್ಲಿ ಇರುವ ಎಲ್ಲಾ ಭಿಕ್ಷುಕರಿಗೂ ಏಕೆ ಹಣವನ್ನು ಕೊಡುತ್ತಿದ್ದೀಯ ನಿಮ್ಮ ಮನೆಯಲ್ಲಿ ಏನಾದರೂ ವಿಶೇಷತೆ ಇದೆಯಾ ಎಂದು ಕೇಳುತ್ತಾರೆ ಅದಕ್ಕೆ ಆ ಹುಡುಗನು ನಾವು ಒಂದು ಹೊಸ ಮನೆಯನ್ನು ಖರೀದಿಸಬೇಕೆಂದು ದೇವರಲ್ಲಿ ಹರಕೆ ಮಾಡಿದ್ದೇವೆ ಅದಕ್ಕಾಗಿ ನಮ್ಮ ಹರಕೆ ನೆರವೇರುವ ಮುನ್ನ ಇಲ್ಲಿರುವ ಭಿಕ್ಷುಕರಿಗೆಲ್ಲ ಹಣ ಕೊಡು ಅಂತ ಅಪ್ಪ ಅಮ್ಮ ಹೇಳಿದ್ದರು ಎಂದು ಉತ್ತರಿಸಿ ಅಲ್ಲಿಂದ ಹೊರಡುತ್ತಾನೆ.

ನಂತರ ಕೆಲವು ದಿನಗಳ ಬಳಿಕ ಆ ಹುಡುಗನ ಕುಟುಂಬದವರು ಪ್ರಾರ್ಥನೆ ಮಾಡಿಕೊಂಡಂತೆ ಒಂದು ಹೊಸ ಮನೆಯನ್ನು ತೆಗೆದುಕೊಳ್ಳುತ್ತಾರೆ ಹಾಗೂ ಜೀವನದಲ್ಲಿ ಎಲ್ಲಾ ಖುಷಿಗಳು ಇವರಿಗೆ ಸಿಕ್ಕಿವೆ. ನಂತರ ಇಡೀ ಕುಟುಂಬವು ಮತ್ತೆ ದೇವಸ್ಥಾನಕ್ಕೆ ಹರಕೆ ತೀರಿಸಲು ಬಂದಿದ್ದು ಅಲ್ಲಿನ ಭಿಕ್ಷುಕರಿಗೆಲ್ಲ ಅನ್ನದಾನ ಮಾಡಿ, ಹಣ್ಣುಗಳನ್ನು ನೀಡಿ ತಲಾ 500 ರೂಪಾಯಿಗಳನ್ನು ನೀಡುತ್ತಾರೆ.

ಅಲ್ಲಿದ್ದಂತಹ ಭಿಕ್ಷುಕರಲ್ಲಿ ಒಬ್ಬ ಅಜ್ಜಿಯು ಒಂದು ಪತ್ರವನ್ನು ಇನ್ನೊಬ್ಬ ಭಿಕ್ಷುಕನಿಗೆ ನೀಡಿ ಆ ಹುಡುಗನು ಮತ್ತೊಮ್ಮೆ ಬಂದರೆ ಅವನ ತಂದೆಗೆ ಈ ಪತ್ರವನ್ನು ಕೊಡುವಂತೆ ತಿಳಿಸಿರುತ್ತಾಳೆ ಅದರಂತೆ ಆ ಹುಡುಗನು ಮತ್ತೊಮ್ಮೆ ತನ್ನ ಕುಟುಂಬದವರೊಂದಿಗೆ ದೇವಸ್ಥಾನಕ್ಕೆ ಬಂದಾಗ ಭಿಕ್ಷುಕ ಆ‌ ಹುಡುಗನ ಅಪ್ಪನನ್ನು ಕರೆದು ಆ ಪತ್ರವನ್ನು ತಲುಪಿಸುತ್ತಾನೆ. ಆ ಪತ್ರವನ್ನು ಓದಿದ ಆ ಹುಡುಗನ ಅಪ್ಪ ಕಣ್ಣೀರು ಹಾಕುತ್ತಾ ಗಡಗಡ ನಡುಗುತ್ತಾನೆ ಅದನ್ನು ನೋಡಿದ ಭಿಕ್ಷುಕರೆಲ್ಲ ಆ ಪತ್ರದಲ್ಲಿ ಏನಿರಬಹುದು ಎಂದು ಆಶ್ಚರ್ಯಗೊಳ್ಳುತ್ತಾರೆ.

ಆ ಪತ್ರವನ್ನು ನೀಡಿದ ಆ ಭಿಕ್ಷುಕಿ ಅಜ್ಜಿಯು ಆ ಹುಡುಗನ ಅಜ್ಜಿಯಾಗಿರುತ್ತಾಳೆ ಅಂದರೆ ಆ ಹುಡುಗನ ತಂದೆಗೆ ಸ್ವಂತ ತಾಯಿ ಆಗಿರುತ್ತಾಳೆ. ಹತ್ತು ವರ್ಷಗಳ ಹಿಂದೆ ಇದೆ ತಂದೆಯು ತನ್ನ ತಾಯಿಯನ್ನು ದೇವಸ್ಥಾನಕ್ಕೆ ಕರೆತಂದು ದೇವರ ದರ್ಶನ ಮಾಡಿ ಹೊರ ಬಂದ ಬಳಿಕ ಅಮ್ಮ ನೀವು ಇಲ್ಲಿಯೇ ಕುಳಿತಿರಿ ನನಗೆ ಸ್ವಲ್ಪ ಕೆಲಸವಿದೆ ಎಂದು ಹೇಳಿ ಹೋದವನು ತನ್ನ ತಾಯಿಯನ್ನು ಮನೆಗೆ ಕರೆದೊಯ್ಯಲು ಮತ್ತೆ ಯಾವತ್ತು ಬರಲೇ ಇಲ್ಲ. ಆದರೆ ಅಜ್ಜಿಯು ಮಗ ಬರುತ್ತಾನೆ ಎಂದು ಕಾಯುತ್ತಾ ತಿನ್ನಲು ಊಟ ಸಿಗದೆ ಉಟ್ಟ ಬಟ್ಟೆಯಲ್ಲಿಯೆ ದೇವಸ್ಥಾನದ ಬಳಿ ಬಿಕ್ಷೆ ಬೇಡಲು ಆರಂಭಿಸಿದಳು.

ಆ ಪತ್ರದಲ್ಲಿ ಬರೆದದ್ದು ಏನೆಂದರೆ ಕಳೆದ ಹತ್ತು ವರ್ಷದ ಹಿಂದೆ ನಿನ್ನ ಹೆಂಡತಿಯ ಮಾತನ್ನು ಕೇಳಿಕೊಂಡು ನನ್ನನ್ನು ಇಲ್ಲಿ ಬಿಟ್ಟು ಹೋಗಿದ್ದೆ ಆದರೆ ಈಗ ನಿನಗೂ ಒಬ್ಬ ಮಗ ಇದ್ದಾನೆ ಅವನು ಮುಂದೆ ನಿನ್ನನ್ನು ನನ್ನ ಪರಿಸ್ಥಿತಿಗೆ ತರಬಾರದೆಂದು, ತಂದರೆ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಹಾಗೂ ನಾನು ಭಿಕ್ಷೆ ಬೇಡುತ್ತಿರುವಾಗ ಅನಾರೋಗ್ಯ ಸಮಸ್ಯೆ ಎದುರಾದಾಗ ಇಲ್ಲಿನ ಭಿಕ್ಷುಕರು ನನಗೆ ಸಹಾಯ ಮಾಡಿದ್ದಾರೆ ಅವರಿಗೆ ನಾನು ಚಿರರುಣಿ. ಅಲ್ಲದೆ ನಾನು ಭಿಕ್ಷೆ ಬೇಡಿ ಒಂದು ಹೊತ್ತು ತಿಂದು ಎರಡು ಹೊತ್ತಿನ ಊಟದ ಹಣವನ್ನು ಸಂಗ್ರಹಿಸಿ ನನ್ನ ಅಂತ್ಯಕ್ರಿಯೆಗೆಂದು ಇಟ್ಟಿದ್ದೇನೆ ಆ ಹಣದಲ್ಲಿ ನೀನು ಹೊಸ ಬಟ್ಟೆ ಖರೀದಿಸಿ ಧರಿಸಿಕೊ ಎಂದು ಬರೆದಿತ್ತು. ಆ ತಂದೆಯು ತನ್ನ ತಾಯಿಯನ್ನು ನೋಡಿಕೊಳ್ಳಲಾಗದೆ ಭಿಕ್ಷುಕರಿಗಿಂತಲೂ ಕೆಳ ಮಟ್ಟದವನಾಗಿ ಬಿಟ್ಟಿದ್ದಾನೆ.

ಈ ಎರಡು ವರ್ಷದ ಮಗು ರೈಲ್ವೆ ಸ್ಟೇಷನ್ ನಲ್ಲಿ ಮಾಡಿದ ಕೆಲಸಕ್ಕೆ ಇಂದು ಇಡೀ ದೇಶವೇ ಸೆಲ್ಯೂಟ್ ಮಾಡ್ತಿದೆ.! ಅಷ್ಟಕ್ಕೂ ಆ ಮಗು ಮಾಡಿದ್ದೇನು.? ಗೊತ್ತ.!

 

ತಾಯಿ ಮಕ್ಕಳ ಬಾಂಧವ್ಯ ಎಂತದ್ದು ಎಂದು ಎಲ್ಲರಿಗೂ ಗೊತ್ತೇ ಇದೆ. ತಾಯಿ ಮತ್ತು ಮಗುವಿನ ನಡುವೆ ಇರುವ ಪ್ರೀತಿ ಪ್ರೇಮ ಬಾಂಧವ್ಯದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಒಬ್ಬ ತಾಯಿಯು ತನ್ನ ಮಗುವಿಗಾಗಿ ಏನು ಬೇಕಾದರೂ ಮಾಡಲು ಮುಂದಾಗುತ್ತಾಳೆ. ಅದೇ ರೀತಿ ತಾಯಿಯಲ್ಲಿರುವಷ್ಟು ಪ್ರೀತಿ ವಾತ್ಸಲ್ಯ ಮಕ್ಕಳಲ್ಲೂ ಇರುತ್ತದೆ ಎಂಬುದನ್ನು ನಿರೂಪಿಸುವಂತಹ ಒಂದು ಘಟನೆ ನಡೆದಿದೆ. ಅದು ಒಂದು ರೈಲು ನಿಲ್ದಾಣದಲ್ಲಿ ಜ್ಞಾನ ತಪ್ಪಿ ಬಿದ್ದಿದ್ದ ತನ್ನ ತಾಯಿಯನ್ನು ಈ ಎರಡು ವರ್ಷದ ಪುಟಾಣಿ ಮಗು ಹೇಗೆ ಕಾಪಾಡಿಕೊಂಡಿತು ಎಂದು ನೋಡಿದರೆ ಈ ಮಗುವಿಗೆ ಶಭಾಷ್ ಹೇಳಲೆಬೇಕು ಎನ್ನಿಸುತ್ತದೆ.

ಉತ್ತರಪ್ರದೇಶ ರಾಜ್ಯದ ಫರೋಕಬಾದ್ ನ ರೈಲು ನಿಲ್ದಾಣದಲ್ಲಿ ಕೆಲವು ದಿನಗಳ ಹಿಂದೆ ಒಬ್ಬ ಮಹಿಳೆಯು ತನ್ನ ಎರಡು ವರ್ಷದ ಮಗುವಿನ ಜೊತೆ ಮತ್ತೊಂದು ಆರು ತಿಂಗಳ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ರೈಲ್ವೆ ಸ್ಟೇಷನ್ ಗೆ ಬಂದಿರುತ್ತಾಳೆ. ಈ ಮಹಿಳೆಯ ಜೊತೆ ಬೇರೆ ಯಾರು ಇರುವುದಿಲ್ಲವಾದ್ದರಿಂದ ಇಬ್ಬರು ಮಕ್ಕಳನ್ನು ಮಹಿಳೆಯೆ ನೋಡಿಕೊಳ್ಳಬೇಕಾಗಿತ್ತು. ಆ ಮಹಿಳೆಯು ಹತ್ತಬೇಕಿದ್ದ ರೈಲು ಬರಲು ಇನ್ನೂ ಅರ್ಧ ಗಂಟೆಯ ಸಮಯವಿತ್ತು ಆ ಸಮಯದಲ್ಲಿ ಮಹಿಳೆಯು ಇದ್ದಕ್ಕಿದ್ದಂತಲೂ ಅಥವಾ ಆರೋಗ್ಯ ಸಮಸ್ಯೆಗಳಿಂದಲೂ ಜ್ಞಾನ ತಪ್ಪಿ‌ ಪ್ಲಾಟ್ ಫಾರಂ ಮೇಲೆ ಬೀಳುತ್ತಾಳೆ.

ಆ ಇಬ್ಬರು ಪುಟ್ಟ ಮಕ್ಕಳನ್ನು ನೋಡಿಕೊಳ್ಳಬೇಕಾಗಿದ್ದ ಈಕೆಯೇ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಆ 6 ತಿಂಗಳ ಪುಟ್ಟ ಮಗು ಕೂಡ ಅತ್ತು ಅತ್ತು ಪ್ರಜ್ಞೆ ತಪ್ಪಿದೆ. ಆ ಮಹಿಳೆಯು ತನ್ನ ಮಕ್ಕಳೊಂದಿಗೆ ಆ ಪ್ಲಾಟ್ ಫಾರ್ಮ್ ನ ಕೊನೆಯ ಮೂಲೆಯಲ್ಲಿ ಕೂತಿದ್ದರಿಂದ ಬೇರೆ ಯಾರು ಕೂಡ ಅಲ್ಲಿ ಇರಲಿಲ್ಲ‌. ಆರು ತಿಂಗಳ ತನ್ನ ತಮ್ಮ ಬಿಕ್ಕಿ ಬಿಕ್ಕಿ ಅಳುತ್ತಿದ್ದನ್ನು ಆ ಎರಡು ವರ್ಷದ ಮಗು ನಿಂತು ನೋಡುತ್ತಿತ್ತು. ನಂತರ ಯಾರೂ ಊಹಿಸಲಾಗದಂತಹ ಆಶ್ಚರ್ಯಕರ ಕೆಲಸ ಒಂದನ್ನು ಆ ಮಗು ಮಾಡಿದೆ.

ತಕ್ಷಣ ಆ ಮಗು ಮೆಲ್ಲನೆ ಹೆಜ್ಜೆಗಳನ್ನು ಹಾಕುತ್ತಾ ಪ್ಲ್ಯಾಟ್ ಫಾರ್ಮ್ ನಿಂದ ಕೆಳಗೆ ಇಳಿದು ಮುಖ್ಯದ್ವಾರದ ಬಳಿ ಬಂದ್ದು ನಿಂತು ಅಲ್ಲಿ ಓಡಾಡುತ್ತಿದ್ದ ಜನಗಳನ್ನು ನೋಡುತ್ತಾ ನಿಂತಿರುತ್ತದೆ. ಆವಾಗ ಅಲ್ಲಿ ಇದ್ದಂತಹ ಮಹಿಳಾ ಪೊಲೀಸ್ ಈ ಮಗುವನ್ನು ಗಮನಿಸಿ ಯಾರದೋ ಮಗು ಒಂಟಿಯಾಗಿ ಸ್ಟೇಷನ್ ನಲ್ಲಿ ಯಾಕೆ ಓಡಾಡುತ್ತಿದೆ ಎಂದು ಗಮನಿಸಿ ನಂತರ ಅದು ಯಾರನ್ನೋ ಹುಡುಕುತ್ತಿದೆ ಎಂದು ತಿಳಿದು ಆ ಮಗುವಿನ ಬಳಿ ಬಂದು ಏನಾಯ್ತು ಮಗು ಎಂದು ಕೇಳುತ್ತಾರೆ ಆಗ ಮಗುವು ತನ್ನ ತೊದಲು ಮಾತುಗಳಿಂದಲೆ ನಡೆದ ಘಟನೆಯನ್ನು ವಿವರಿಸುತ್ತದೆ.

ಆದರೆ ಪೊಲೀಸರಿಗೆ ಅದು ಸರಿಯಾಗಿ ಅರ್ಥವಾಗುವುದಿಲ್ಲ ನಂತರ ಆ ಮಗು ಪೊಲೀಸರ ಕೈ ಹಿಡಿದುಕೊಂಡು ವೇಗವಾಗಿ ತನ್ನ ತಾಯಿ ಮತ್ತು ತಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದ ಜಾಗದ ಬಳಿ ಕರೆದುಕೊಂಡು ಹೋಗಿ ಕಣ್ಣೀರು ಹಾಕುತ್ತಾ ಸಹಾಯ ಮಾಡುವಂತೆ ಕೋರುತ್ತದೆ. ಪ್ರಜ್ಞೆ ಇಲ್ಲದೆ ಮಲಗಿದ್ದಂತಹ ಮಹಿಳೆ ಮತ್ತು ಮಗುವನ್ನು ನೋಡಿ ಪೊಲೀಸರು ಶಾ-ಕ್ ಆಗಿ ತಕ್ಷಣ‌ ಆಂಬುಲೆನ್ಸ್ ಕರೆಸಿ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಅಸಲಿಗೆ ಆ ಮಹಿಳೆಗೆ ಸಕ್ಕರೆ ಕಾಯಿಲೆ ಇದ್ದದ್ದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಪೂರ್ತಿಯಾಗಿ ಕಡಿಮೆಯಾಗಿ ಜ್ಞಾನ ತಪ್ಪಿ ಬಿದ್ದಿದ್ದಾರೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಕ್ಕೆ ಏನು ಅಪಾಯ ಇಲ್ಲ ಎಂದು ವೈದ್ಯರು ತಿಳಿಸುತ್ತಾರೆ ಇನ್ನು ಆ ತಾಯಿಗೆ ಪ್ರಜ್ಞೆ ಬಂದಿಲ್ಲದರಿಂದ ಆ ಮಹಿಳೆ ಎಲ್ಲಿಯವರು ಎಂಬ ವಿವರ ತಿಳಿದು ಬಂದಿಲ್ಲ. ಹೀಗೆ ಎರಡು ವರ್ಷದ ಆ ಮಗು ತನ್ನ ತಾಯಿ ಮತ್ತು ತಮ್ಮನನ್ನು ಕಾಪಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

”ಅತ್ತಿಗೆಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ” ನಾನು ನಿರಪರಾಧಿ ಎಂದು ಸಾಬೀತು ಪಡಿಸಲು ಅಗ್ನಿಯನ್ನು ಪ್ರವೇಶಿಸಿದ ವ್ಯಕ್ತಿ..! ಮುಂದೇನಾಯ್ತು ನೋಡಿ.

 

ವ್ಯಕ್ತಿಯೊಬ್ಬನ ಮೇಲೆ ಅಣ್ಣನ ಹೆಂಡತಿಯೊಂದಿಗೆ ಅ.ಕ್ರ.ಮ ಸಂಬಂಧವನ್ನು ಹೊಂದಿರುವುದರ ಕುರಿತಾಗಿ ಅಪವಾದ ಬಂದಿತ್ತಂತೆ. ಆದರೆ ತಾನು ಯಾವುದೇ ರೀತಿಯ ಸಂಬಂಧವನ್ನು ಅತ್ತಿಗೆಯೊಂದಿಗೆ ಹೊಂದಿಲ್ಲ ಎಂಬುದನ್ನು ಸಾಬೀತು ಪಡಿಸಲು ಅಗ್ನಿಪರೀಕ್ಷೆಯನ್ನು ಮಾಡಿಕೊಂಡಿದ್ದಾನಂತೆ. ‘ನಾನು ನಿರಪರಾಧಿ ಎಂಬುದನ್ನು ಅಗ್ನಿ ದೇವನೇ ಎಲ್ಲರದುರು ಹೇಳಲಿ’ ಎನ್ನುತ್ತಾ ಅಗ್ನಿಪರೀಕ್ಷೆಗೆ ವ್ಯಕ್ತಿ ಒಳಗಾದನಂತೆ. ಇಂಥದ್ದೊಂದು ಘಟನೆ ನಡೆದಿರುವುದು ತೆಲಂಗಾಣದಲ್ಲಿ.

ನಾವು ಪುರಾಣ ಕಥೆಗಳಲ್ಲಿ ಕೇಳಿದ ಹಾಗೆ ಸಂಬಂಧಗಳ ಕುರಿತಾದ ಅಪಮಾನವನ್ನು ಅನುಭವಿಸಿದ ಮಹಿಳೆಯರು ತಮ್ಮ ಪಾವಿತ್ರ್ಯತೆಯನ್ನು ಎಲ್ಲರಿಗೂ ಸಾಬೀತು ಪಡಿಸಲು ಅಗ್ನಿ ಪ್ರವೇಶವನ್ನು ಮಾಡುತ್ತಿದ್ದರು. ದಾಂಪತ್ಯ ಜೀವನವು ಎಂದಿಗೂ ಅನುಮಾನವೆಂಬ ಅಡ್ಡಗೋಲಿನಿಂದ ಹಾಳಾಗದಿರಲಿ ಎಂಬ ಉದ್ದೇಶವು ಇರುತ್ತಿತ್ತು. ಅಗ್ನಿಯನ್ನು ಪ್ರವೇಶ ಮಾಡಿ ಮನಸ್ಸು ಹಾಗೂ ದೇಹ ಎರಡರಲ್ಲಿಯೂ ಸಂಬಂಧದ ಕುರಿತಾಗಿ ಶುದ್ಧವಾಗಿದ್ದೇವೆ ಎಂದು ತೋರ್ಪಡಿಸುತ್ತಿದ್ದರು. ಅಗ್ನಿ ದೇವನು ಯಾರನ್ನು ಸುಡುವುದಿಲ್ಲವೋ ಅವರು ಪವಿತ್ರವಾಗಿದ್ದಾರೆ ಎಂದು ಹೇಳಲಾಗುತ್ತಿತ್ತು.

ಇತಿಹಾಸದ ಪುಟಗಳಲ್ಲಿಯೂ ಅಗ್ನಿಪರೀಕ್ಷೆಗೆ ಒಳಗಾದ ಮಹಿಳೆಯರ ಅನೇಕ ಉದಾಹರಣೆಗಳು ಸಿಗುತ್ತವೆ. ಈಗಿನ ಕಾಲದಲ್ಲಿ ಅಗ್ನಿಪರೀಕ್ಷೆಯು ಪ್ರಚಲಿತವಿರುವ ಉದಾಹರಣೆಗಳನ್ನು ಅಷ್ಟಾಗಿ ಕೇಳಿರಲಿಲ್ಲ. ಆದರೆ ಈ ಆಚರಣೆಯು ತೆಲಂಗಾಣದಲ್ಲಿ ನಡೆದಿದೆ. ಹೌದು. ತೆಲಂಗಾಣದ ಬಂಜಾರಿಪಲ್ಲಿ ಗ್ರಾಮದಲ್ಲಿ ವ್ಯಕ್ತಿ ಒಬ್ಬ ತನ್ನ ಅಣ್ಣನ ಹೆಂಡತಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾನೆ ಎಂಬುದಾಗಿ ಆರೋಪಿಸಲಾಗಿತ್ತಂತೆ ಖುದ್ದಾಗಿ ಅಣ್ಣನೇ ಪಂಚಾಯತಿಯ ಮೆಟ್ಟಿಲು ಏರಿದ್ದನಂತೆ.

ತನ್ನ ಸಹೋದರನ ಬಗ್ಗೆ ವಿಚಾರಣೆ ಮಾಡಿ ನ್ಯಾಯ ಒದಗಿಸುವಂತೆ ಕೇಳಿದ್ದನಂತೆ. ಆಗ ಹೇಳಿ ಪಂಚಾಯತಿಯ ಮುಖಂಡರು ಆರೋಪಿತ ವ್ಯಕ್ತಿಯು ಸಂಬಂಧದ ಶುದ್ಧತೆಯನ್ನು ತಿಳಿಸಲು ಅಗ್ನಿ ಪ್ರವೇಶ ಮಾಡಬೇಕೆಂದು ಆದೇಶಿಸಿದರಂತೆ. ಆರೋಪಿತ ವ್ಯಕ್ತಿಯು ಸುಡುವ ಬಿಸಿಬಿಸಿ ಕೆಂಡಗಳ ಮಧ್ಯೆ ಇಡಲಾಗಿದ್ದ ಬಿಸಿಯಾದ ಕಬ್ಬಿಣದ ಸಲಾಕೆ ಒಂದನ್ನು ಕೈಗೆತ್ತಿಕೊಳ್ಳುವ ಮೂಲಕ, ತಾನು ಅತ್ತಿಗೆಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂಬುದನ್ನು ಸ್ಥಳೀಯರ ಎದುರಲ್ಲಿ ತೋರ್ಪಡಿಸಬೇಕಾಗಿತ್ತಂತೆ.

ಅತ್ತಿಗೆಯೊಂದಿಗೆ ಅಕ್ರಮ ಸಂಬಂಧದ ಅಪವಾದವನ್ನು ಹೊತ್ತ ವ್ಯಕ್ತಿಯು ಪಂಚಾಯತಿಯ ಮುಖಂಡರ ಹಾಗೂ ಕೆಲವು ಸ್ಥಳೀಕರಣ ಎದುರಲ್ಲಿ ಬಿಸಿಯಾದ ಕೆಂಡಗಳ ಮಧ್ಯೆ ಇಡಲಾಗಿದ್ದ ಕಬ್ಬಿಣದ ಸಲಾಕೆಯನ್ನು ಎತ್ತಲು ಒಪ್ಪಿಕೊಂಡನಂತೆ. ನಂತರ ಕೈ ಸುಡುಗಷ್ಟು ಕಾದಿದ್ದ ಸಲಾಕೆಯನ್ನು ಎತ್ತಿ ಹೊರಗಡೆ ಎಸೆದನಂತೆ. ಈ ರೀತಿಯಾಗಿ ಅಗ್ನಿ ಪರೀಕ್ಷೆಯ ಆಚರಣೆಯಿಂದ, ಯಾವುದೇ ಅಕ್ರಮ ಸಂಬಂಧವನ್ನು ಹೊಂದಿಲ್ಲ. ತಾನು ನಿರಪರಾಧಿ ಎಂಬುದನ್ನು ಸಾಬೀತು ಪಡಿಸಿದನಂತೆ.

ಆದರೆ ಇಷ್ಟಕ್ಕೂ ಒಪ್ಪದ ಪಂಚಾಯತಿಯ ಮುಖಂಡರು, ಆ ವ್ಯಕ್ತಿಯಲ್ಲಿ ಆತನ ಸಹೋದರ ಮಾಡಿದ್ದ ಆರೋಪದಂತೆ ಅತ್ತಿಗೆಯೊಂದಿಗೆ ಹೊಂದಿದ್ದ ಸಂಬಂಧವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದರಂತೆ. ಈ ವಿಷಯವು ಗ್ರಾಮದಲ್ಲಿ ಎಲ್ಲರಿಗೂ ತಿಳಿಯುತ್ತಿದ್ದಂತಲೇ ಆರೋಪವನ್ನು ಹೊತ್ತಿದ್ದ ಮಹಿಳೆಗೂ ತಲುಪಿದಂತೆ. ಬಳಿಕ ಆ ಮಹಿಳೆ ಸಂಬಂಧದ ಶುದ್ಧತೆಯನ್ನು ಅಳೆಯಲು ನಡೆಸಿದ ಅಗ್ನಿಪರೀಕ್ಷೆಯ ಆಚರಣೆಯ ಬಗ್ಗೆ ಪೊಲೀಸರಲ್ಲಿ ದೂರು ನೀಡಿದಳಂತೆ.

ಇದೀಗ ಆರೋಪಿತ ವ್ಯಕ್ತಿಯು ನಿರಪರಾಧಿ ಎಂದು ಸಾಬೀತು ಪಡಿಸಿಕೊಳ್ಳಲು ಬಿಸಿಯಾದ ಕೆಂಡಗಳ ಮಧ್ಯೆ ಇಟ್ಟ ಸಲಾಕೆಯನ್ನು ಕೈಗೆತ್ತಿಕೊಂಡು ಹೊರಗಡೆ ಎಸೆದ ವಿಡಿಯೋ ಸಖತ್ ಸದ್ದು ಮಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ರೀವ್ಸ್ ಹಾಗೂ ಲೈಕ್ಸ್ ಗಳನ್ನು ಪಡೆಯುತ್ತಾ ಎಲ್ಲೆಡೆ ಹರಡುತ್ತಿವೆ. ಬರಿ ಕೈಯಲ್ಲಿ ಸಲಾಕೆ ಎತ್ತಿದ ಭೂಪ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ. ಇದೊಂದು ಘಟನೆಯ ಬಳಿಕ ಆತ ನಾನ ಭಾಗಗಳಲ್ಲಿ ಪರಿಚಿತನಾಗಿದ್ದಾನೆ. ವೈರಲ್ ಆಗಿದ್ದಾನೆ. ಪುರಾಣ ಕಥೆಗಳಲ್ಲಿ ಕೇಳಿದ್ದ ಆಚರಣೆಯು ತೆಲಂಗಾಣದ ಬಂಜರಪಲ್ಲಿ ಗ್ರಾಮದಲ್ಲಿ ನಡೆದಿರುವುದು ಅನೇಕ ಚರ್ಚೆಗಳಿಗೂ ಕಾರಣವಾಗಿದೆ.